ದಾಖಲೆ ಬರೆದ ಬಾಳೆ ಹಣ್ಣು ಮೇಳ, ಜೋಡಿಸಲಿಕ್ಕೇ 3 ದಿನ ಬೇಕಾಯ್ತಂತೆ! - Vistara News

ಆರೋಗ್ಯ

ದಾಖಲೆ ಬರೆದ ಬಾಳೆ ಹಣ್ಣು ಮೇಳ, ಜೋಡಿಸಲಿಕ್ಕೇ 3 ದಿನ ಬೇಕಾಯ್ತಂತೆ!

ಷಿಕಾಗೋದಲ್ಲಿ ನಡೆದಿರುವ ಒಂದು ಬೃಹತ್‌ ಬಾಳೆ ಹಣ್ಣು ಮೇಳ ಗಿನ್ನೆಸ್‌ ಪುಸ್ತಕದಲ್ಲಿ ದಾಖಲೆಯಾಗಿ ಸೇರಿದೆ. ಈ ಬೃಹತ್‌ ಮೇಳದಲ್ಲಿ ಇಟ್ಟಿದ್ದ ಬಾಳೆ ಹಣ್ಣುಗಳ ಒಟ್ಟು ತೂಕವೇ 31,700 ಕೆಜಿ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೃಹತ್‌ ಗಾತ್ರದ ಬಾಳೆ ಹಣ್ಣಿನ ವಿಷಯದಲ್ಲಿ ದಾಖಲೆ ಇರಬಹುದು, ಅತಿ ದೊಡ್ಡ ಗೊನೆ ಎಂಬ ಲೆಕ್ಕದಲ್ಲೂ ದಾಖಲೆ ಇರಬಹುದು, ಒಂದು ಗೊನೆ ಎಷ್ಟು ಕೆಜಿ ಇದೆ ಎನ್ನುವುದರ ಆಧಾರದಲ್ಲೂ ದಾಖಲೆಗಳಿರಬಹುದು. ಆದರೆ, ಇಲ್ಲೊಂದು ವಿಶೇಷವಾದ ದಾಖಲೆ ನಿರ್ಮಾಣವಾಗಿದೆ. ಅದೇನೆಂದರೆ, ಒಂದು ಬೃಹತ್‌ ಬಾಳೆ ಹಣ್ಣು ಮೇಳ ದಲ್ಲಿ ಎಷ್ಟು ಕೆಜಿ ಬಾಳೆ ಹಣ್ಣಿತ್ತು ಎನ್ನುವುದೇ ಈ ದಾಖಲೆ.

ವಿಶ್ವದ ಅತಿ ದೊಡ್ಡ ಫಲ ಪ್ರದರ್ಶನ ಏರ್ಪಡಿಸುವ ಮೂಲಕ ಅಮೆರಿಕದ ದಿನಸಿ ಅಂಗಡಿಯೊಂದು ಗಿನ್ನೆಸ್‌ ದಾಖಲೆ ಸೇರಿದೆ. ಶಿಕಾಗೋದ ವೆಸ್ಟ್‌ಮಾಂಟ್‌ನಲ್ಲಿ ಏರ್ಪಡಿಸಿರುವ ʻಬನಾನಾ ಬೊನಾನ್ಜʼ ಹೆಸರಿನ ಈ ಪ್ರದರ್ಶನದಲ್ಲಿ ಸುಮಾರು 31,700 ಕೆ.ಜಿ. ಬಾಳೆಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಫ್ರೆಶ್‌ ಡೆಲ್‌ಮಾಂಟ್‌ ಮತ್ತು ಜೆವೆಲ್-ಆಸ್ಕೋ ಸೂಪರ್‌ ಮಾರ್ಕೆಟ್‌ ಸರಣಿ ಜಂಟಿಯಾಗಿ ಈ ಪ್ರದರ್ಶನವನ್ನು ಏರ್ಪಡಿಸಿದ್ದವು.

ಬೃಹತ್‌ ಪ್ರಮಾಣದಲ್ಲಿ ಇರಿಸಲಾಗಿದ್ದ ಈ ಹಣ್ಣುಗಳನ್ನು ಜೋಡಿಸಲು ಸುಮಾರು ಮೂರು ದಿನಗಳ ಕಾಲ ಇಲ್ಲಿನ ಸಿಬ್ಬಂದಿ ಶ್ರಮಿಸಿದ್ದಾರೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಗಿನ್ನೆಸ್‌ ಬುಕ್‌ ಅಧಿಕಾರಿಗಳು, ವಿಶ್ವದ ಅತಿದೊಡ್ಡ ಫಲ ಪ್ರದರ್ಶನವೆಂಬ ಮಾನ್ಯತೆಯನ್ನು ನೀಡಿದ್ದಾರೆ. ಈ ಪ್ರದರ್ಶನದ ನಂತರ, ಅಲ್ಲಿ ನೆರೆದಿದ್ದ ಜನರಿಗೆ ಬಾಳೆಹಣ್ಣನ್ನು ವಿತರಿಸಲಾಯಿತು. ಹಂಚಿ ಉಳಿದ ಹಣ್ಣನ್ನು ಆ ಪ್ರದೇಶದ ಆಹಾರ ಬ್ಯಾಂಕ್‌ಗೆ ದಾನ ಮಾಡಲಾಯಿತು ಎಂದು ವರದಿಯೊಂದು ಹೇಳಿದೆ.

ಇದಕ್ಕಿಂತ ಹಿಂದಿನ ದಾಖಲೆ 2016ರಲ್ಲಿ ಬ್ರೆಜಿಲ್‌ನಲ್ಲಿ ನಿರ್ಮಾಣವಾಗಿತ್ತು. ಇದರಲ್ಲಿ ಅನಾನಸು, ಕಿತ್ತಳೆ, ಸೇಬು, ಸ್ಟ್ರಾಬೆರಿ ಸೇರಿದಂತೆ 19 ನಾನಾ ರೀತಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸುಮಾರು 18,800 ಕೆ.ಜಿ. ತೂಗುತ್ತಿದ್ದ ಈ ಹಣ್ಣುಗಳನ್ನು ಪ್ರದರ್ಶನದ ನಂತರ ಜನರಿಗೆ ವಿತರಿಸಲಾಗಿತ್ತು.

ಇದನ್ನೂ ಓದಿ| ದೈತ್ಯಾಕಾರದ ಜೆರ್ಸಿ, ಗಿನ್ನಿಸ್ ದಾಖಲೆ ಬರೆದ ಐಪಿಎಲ್‌-2022

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Jackfruit Benefits: ಈ ಬೇಸಿಗೆಯಲ್ಲಿ ಹಲಸಿನಹಣ್ಣನ್ನು ಯಾಕೆ ತಿನ್ನಲೇಬೇಕು ಗೊತ್ತೆ? ಇಲ್ಲಿವೆ 10 ಕಾರಣಗಳು!

ಬೇರೆ ಹಣ್ಣುಗಳಿಗೆ ಹೋಲಿಸಿದರೆ, ಹಲಸಿನ ಹಣ್ಣಿನ ಬಗ್ಗೆ ಕೊಂಚ ತಾತ್ಸಾರ ಇದ್ದರೂ, ಬೇಕಾಬಿಟ್ಟಿ ಇದು ದೊರೆಯುವುದರಿಂದಲೋ ಏನೋ, ಇದು ಮೂಲೆಗುಂಪಾಗುವುದು ಹೆಚ್ಚು. ಆದರೆ, ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ನೀವು ಹಲಸನ್ನು ಕಡೆಗಣಿಸಲಾರಿರಿ. ಈ ಕುರಿತ (Jackfruit Benefits) ಉಪಯುಕ್ತ ಮಾಹಿತಿ ಇಲ್ಲಿದೆ. ಈ ಬೇಸಿಗೆಯಲ್ಲಿ ಹಲಸಿನ ಹಣ್ಣನ್ನು ಮಿಸ್ ಮಾಡಿಕೊಳ್ಳಬೇಡಿ.

VISTARANEWS.COM


on

Jackfruit benefits
Koo

ಬೇಸಿಗೆ ಬಂತೆಂದರೆ ಮಾವು ಹಲಸುಗಳ ಸಂಭ್ರಮ. ಸೆಖೆಯಲ್ಲಿ ಮೈ ಬೇಯುತ್ತಿದ್ದರೂ, ಹಲಸಿನ ಹಣ್ಣಿನ (Jackfruit) ಬಗೆಬಗೆಯ ಖಾದ್ಯಗಳನ್ನು ಮಾಡಿ ಬಾಯಿ ಚಪ್ಪರಿಸುವ ಸುಖ ಬಹುತೇಕ ಎಲ್ಲರದ್ದು. ಬೇರೆ ಹಣ್ಣುಗಳಿಗೆ ಹೋಲಿಸಿದರೆ, ಹಲಸಿನ ಹಣ್ಣಿನ ಬಗ್ಗೆ ಕೊಂಚ ತಾತ್ಸಾರ ಇದ್ದರೂ, ಬೇಕಾಬಿಟ್ಟಿ ಇದು ದೊರೆಯುವುದರಿಂದಲೋ ಏನೋ, ಇದು ಮೂಲೆಗುಂಪಾಗುವುದು ಹೆಚ್ಚು. ಆದರೆ, ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ನೀವು ಹಲಸನ್ನು ಕಡೆಗಣಿಸಲಾರಿರಿ. ಈ ರುಚಿಯಾದ ಹಣ್ಣನ್ನು ಈ ಬೇಸಿಗೆಯಲ್ಲಿ ನೀವು ಯಾಕೆ ತಿನ್ನಬೇಕು (Jackfruit Benefits) ಎಂಬುದಕ್ಕೆ 10 ಕಾರಣಗಳು ಇಲ್ಲಿವೆ.

Immunity Against Diseases Lemon Water Benefits

ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ

ಕಡಿಮೆ ಕ್ಯಾಲರಿಯ ಈ ಹಣ್ಣು (Jackfruit) ಪೋಷಕಾಂಶಗಳ ವಿಚಾರದಲ್ಲಿಯೂ ಶ್ರೀಮಂತಿಕೆಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸದಾ ಮುಂದಿರುವ ಸೇಬು, ಆಪ್ರಿಕಾಟ್‌, ಅವಕಾಡೋ, ಬಾಳೆಹಣ್ಣು ಮತ್ತಿತರ ಹಣ್ಣುಗಳಿಗೆ ಹೋಲಿಸಿದರೆ ಹಲಸಿನ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳಿವೆ. ಹಲಸಿನಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ದೇಹಕ್ಕೆ ಯಾವುದೇ ಇನ್‌ಫೆಕ್ಷನ್‌ ಅಥವಾ ವೈರಸ್‌ನ ಪ್ರವೇಶವಾದಾಗ ಅವುಗಳ ವಿರುದ್ಧ ಹೋರಾಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಹಲಸಿನ ಹಣ್ಣಿನ ಬೀಜ ಹಾಗೂ ತೊಳೆಯಲ್ಲಿ ಉತ್ತಮ ಮಟ್ಟದಲ್ಲಿ ಕ್ಯಾಲ್ಶಿಯಂ ಹಾಗೂ ಕಬ್ಬಿಣಾಂಶವಿದ್ದು, ವಿಟಮಿನ್‌ ಬಿ1 ಬಿ3, ಬಿ6 ಹಾಘೂ ಫೋಲೇಟ್‌ ಅನ್ನೂ ಹೊಂದಿದೆ.

images of Jackfruit Benefits

ಉತ್ತಮ ಶಕ್ತಿವರ್ಧಕ

100 ಗ್ರಾಂಗಳಷ್ಟು ಹಲಸಿನ ಹಣ್ಣಿನಲ್ಲಿ 94 ಕ್ಯಾಲರಿಗಳಿದ್ದು ಇದು ಸಾಕಷ್ಟು ಕಾರ್ಬೋಹೈಡ್ರೇಟನ್ನು ಹೊಂದಿದೆ. ಹಾಗಾಗಿ, ಹೆಚ್ಚು ಹಸಿವಾದಾಗ, ಬಹುಬೇಗನೆ ಹಸಿವನ್ನು ತಣಿಸಿ ಶಕ್ತಿಯನ್ನು ನೀಡುತ್ತದೆ.ಹಲಸಿನ ಹಣ್ಣಿನಲ್ಲಿರುವ ಸಕ್ಕರೆಯು ದೇಹದಲ್ಲಿ ಸುಲಭವಾಗಿ ಕರಗಬಲ್ಲದ್ದಾಗಿದೆ. ಹಾಗೂ, ಇದು ಆರೋಗ್ಯಕರವೂ ಕೂಡಾ.

Blood Sugar Control Guava Benefits

ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ

ಹಲಸಿನ ಹಣ್ಣಿನಲ್ಲಿ ಕಡಿಮೆ ಮಟ್ಟದ ಗ್ಲಿಸೆಮಿಕ್ಸ್‌ ಇಂಡೆಕ್ಸ್‌ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಬಹುಬೇಗನೆ ಉದ್ದೀಪನೆ ಮಾಡುವುದಿಲ್ಲ. ಹೀಗಾಗಿ.ಸಕ್ಕರೆಯ ಮಟ್ಟ ದಿಢೀರ್‌ ಏರಿಕೆಯಾಗದು. ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿದ ಅನುಭವ ಇದು ನೀಡುವುದರಿಂದ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ರಕ್ತದೊತ್ತಡ ಸಮತೋಲನಗೊಳಿಸುತ್ತದೆ

ಹಲಸಿನಹಣ್ಣಿನಲ್ಲಿ ಪೊಟಾಶಿಯಂ ಸರಿಯಾದ ಪ್ರಮಾಣದಲ್ಲಿ ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಜತನದಿಂದ ಕಾಪಾಡುತ್ತದೆ.

Close-up human eye, lens, cornea and brown iris.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ವಿಟಮಿನ್‌ ಎ ಯಿಂದ ಹಲಸಿನ ಹಣ್ಣು ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಇದು ಕಣ್ಣನ್ನು ಬ್ಯಾಕ್ಟೀರಿಯಾ ಹಾಗೂ ವೈರಲ್‌ ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತದೆ. ದೃಷ್ಟಿದೋಷವಿರುವ ಮಂದಿಗೆ ಇದು ಒಳ್ಳೆಯದು. ಕಣ್ಣನ್ನು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಿಸಲೂ ಇವು ಸಹಾಯ ಮಾಡುತ್ತವೆ.

ಮುಪ್ಪನ್ನು ತಡೆಯುತ್ತದೆ

ನೀವು ಯೌವನದಿಂದ ಕಂಗೊಳಿಸಬೇಕಿದ್ದರೆ ನಿಮ್ಮ ಚರ್ಮ ಲಕಲಕ ಹೊಳೆಯಬೇಕಿದ್ದರೆ ನೀವು ಖುಷಿಯಿಂದ ಹಲಸಿನಹಣ್ಣು ತಿನ್ನಬಹುದು. ಹಲಸಿನ ಹಣ್ಣು ಚರ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

Promotes Bone Health Fish Benefits

ಎಲುಬನ್ನು ಗಟ್ಟಿಯಾಗಿಸುತ್ತದೆ

ಹಲಸಿನಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶೀಯಂ ಇರುವುದರಿಂದ ಇದು ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸುವಲ್ಲಿ ನೆರವಾಗುತ್ತದೆ.

ಥೈರಾಯ್ಡ್‌ ಸಮಸ್ಯೆಗೆ ಒಳ್ಳೆಯದು

ಹಲಸಿನ ಹಣ್ಣಿನಲ್ಲಿ ತಾಮ್ರವೂ ಇರುವುದರಿಂದ ಇದು ಥೈರಾಯ್ಡ್‌ನಲ್ಲಿ ಹಾರ್ಮೋನಿನ ಉತ್ಪಾದನೆ ಹಾಗೂ ಹೀರುವಿಕೆಗೆ ನೆರವಾಗುತ್ತದೆ. ಆ ಮೂಲಕ ಥೈರಾಯ್ಡ್‌ನ ಆರೋಗ್ಯವನ್ನು ಕಾಪಾಡುತ್ತದೆ.

Reduces Risk of Asthma in Children Fish Benefits

ಅಸ್ತಮಾಕ್ಕೆ ಒಳ್ಳೆಯದು

ಮಾಲಿನ್ಯದಿಂದ ಉಂಟಾಗುವ ಅಸ್ತಮಾದಂತಹ ತೊಂದರೆಗಳಿಗೆ ಹಲಸಿನಹಣ್ಣು ಬಹಳ ಒಳ್ಳೆಯದು. ಹಾಗಾಗಿ ಅಸ್ತಮಾ ಇರುವ ಮಂದಿ ಹಲಸಿನ ಹಣ್ಣು ತಿನ್ನಲು ಭಯಪಡಬೇಕಾಗಿಲ್ಲ.

Viral news

ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಹಲಸಿನಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ಫೈಟೋನ್ಯೂಟ್ರಿಯೆಂಟ್‌ಗಳೂ, ಫ್ಲೇವನಾಯ್ಡ್‌ಗಳೂ ಇರುವುದರಿಂದ ದೇಹದಲ್ಲಿರುವ ವಿಷಕಾರಕ, ಕಲ್ಮಶ, ಹಾಗೂ ಫ್ರೀರ್ಯಾಡಿಕಲ್‌ಗಳನ್ನು ಹೊರಕ್ಕೆ ಕಳಿಸುವಲ್ಲಿ ಇದು ನೆರವಾಗುತ್ತದೆ. ಕಲ್ಮಶಗಳೂ, ಫ್ರೀ ರ್ಯಾಡಿಕಲ್ಸ್‌ಗಳೂ ಕೂಡಾ ಕ್ಯಾನ್ಸರ್‌ ಕಾರಕಗಳಾಗಿರುವುದರಿಂದ ಹಲಸಿನ ಹಣ್ಣು ನಮಗೆ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

Continue Reading

ಆರೋಗ್ಯ

Solution For Pimples: ಈ ಆಹಾರಗಳ ಸಹವಾಸ ಬಿಡಿ; ಮೊಡವೆಯನ್ನು ದೂರವಿಡಿ!

ಮೊಡವೆಗಳಿಗೆ ಪರಿಹಾರವೇ ಇಲ್ಲವೇ (Solution For Pimples) ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.

VISTARANEWS.COM


on

Solution For Pimple
Koo

ಮೊಡವೆ ಮತ್ತು ಮೊಡವೆಗಳ ಕಲೆಗಳಿಂದ ಬೇಸತ್ತ ಮಂದಿ ಏನೆಲ್ಲ ಸರ್ಕಸ್‌ ಮಾಡಿದರೂ ಮೊಡವೆಯಿಂದ ಮುಕ್ತಿ ಸಿಗುವುದಿಲ್ಲ ಎಂದು ಬೇಸರ ಪಡಬಹುದು. ನೂರೆಂಟು ಮಂದಿ ನೂರಾರು ಸಲಹೆ ಕೊಡಬಹುದಾದರೂ, ಎಲ್ಲರಿಗೂ ಎಲ್ಲ ಸಲಹೆಗಳೂ ಹೊಂದಲಾರದು. ಕಾರಣ, ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ (Solution For Pimples) ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.

Warm milk

ಹಾಲು

ಹಾಲಿನಿಂದ ಮೊಡವೆಗಳುಂಟಾಗಬಹುದು. ಆಶ್ಚರ್ಯವಾದರೂ ಸತ್ಯವೇ. ಹಸುವಿನ ಹಾಲಿನಲ್ಲಿ ಬೆಳವಣಿಗೆಯ ಹಾರ್ಮೋನ್‌ ಐಜಿಎಫ್‌-1 ಹಾಗೂ ಬೊವಿನ್‌ ಇರುವುದರಿಂದ ಇವು ನಮ್ಮ ದೇಹಕ್ಕೆ ಸೇರುವುದರಿಂದ ಇವು ಚರ್ಮದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಮುಖದಲ್ಲಿ ಕೂದಲ ಬೆಳವಣಿಗೆ ಹಾಗೂ ಮೊಡವೆಗಳೂ ಉಂಟಾಗುತ್ತದೆ.

ಅಯೋಡಿನ್

ಮೊಡವೆಗಳಿಗೂ ಅಯೋಡಿನ್‌ಗೂ ಅವಿನಾಭಾವ ಸಂಬಂಧವಿದೆ. ಅಂದರೆ, ಉಪ್ಪು ಹೆಚ್ಚಿರುವ ತಿನಿಸುಗಳನ್ನು, ಆಗಾಗ ತಿನ್ನುವ ಆಹಾರಗಳಲ್ಲಿರುವ ಉಪ್ಪಿನ ಪ್ರಮಾಣ ಎಲ್ಲವೂ ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಪೂರ್ತಿಯಾಗಿ ಉಪ್ಪನ್ನು ಬಿಡಬೇಡಿ. ಅಯೋಡಿನ್‌ ಕೊರತೆ ದೇಹಕ್ಕೆ ಆಗಬಾರದು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡು ಕೊಂಚ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಚರ್ಮದ ಮೇಲೆ ಮ್ಯಾಜಿಕ್‌ ಮಾಡಬಹುದು.

Index foods

ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳು

ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳ ಸೇವನೆ ನಿಮ್ಮ ಮೊಡವೆಗಳ ಸಮಸ್ಯೆಯನ್ನೇ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎನ್ನಲಾಗುತ್ತದೆ. ಕಾರ್ನ್‌ ಸಿರಪ್‌, ಮೈದಾ, ಸಕ್ಕರೆ, ರಿಫೈನ್ಡ್‌ ಧಾನ್ಯಗಳು, ಸಾಸ್‌ ಹಾಗೂ ಕೆಚಪ್‌ಗಳು, ಸ್ಪೋರ್ಟ್ಸ್‌ ಡ್ರಿಂಕ್‌ಗಳು ಸಂಸ್ಕರಿಸಿದ ಮಾಂಸ ಹಾಗೂ ಇತರ ಆಹಾರಗಳು, ಇತರ ಆಹಾರಗಳ ಮೂಲಕ ಗೊತ್ತೇ ಆಗದಂತೆ ದೇಹದೊಳಕ್ಕೆ ಸೇರುವ ಸಕ್ಕರೆ ಎಲ್ಲವೂ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿವೆ. ಆದಷ್ಟೂ ನೈಸರ್ಗಿಕ ಆಹಾರಗಳು, ಒಣಬೀಜಗಳು, ಹಣ್ಣುಗಳು ಇತ್ಯಾದಿಗಳನ್ನೇ ತಿನ್ನಿ.
ಹಾಗಾದರೆ ಏನು ತಿಂದರೆ ಮೊಡವೆಗಳು ಬರದಂತೆ ತಡೆಯಬಹುದು, ಚರ್ಮವನ್ನು ನುಣುಪಾಗಿ ಇರಿಸಬಹುದು ಎನ್ನುತ್ತೀರಾ? ಝಿಂಕ್‌ ಹೆಚ್ಚಿರುವ ಆಹಾರಗಳು ಮೊಡವೆ ಸಮಸ್ಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಓಡಿಸುತ್ತವೆ. ಕಿಡ್ನಿ ಬೀನ್ಸ್‌, ಓಯ್ಸ್ಟರ್‌, ಕೆಂಪು ಮಾಂಸ ಹಾಗೂ ಸಿಹಿಕುಂಬಳದ ಬೀಜ ಇವುಗಳಲ್ಲಿ ಹೆಚ್ಚು ಝಿಂಕ್‌ ಇವೆ.
ಅಷ್ಟೇ ಅಲ್ಲ, ಒಮೆಗಾ 3 ಇರುವ ಆಹಾರಗಳನ್ನು ಹೆಚ್ಚಿಸಿ ಒಮೆಗಾ ಇರುವ ಆಹಾರಗಳಾದ ಸಂಸ್ಕರಿಸಿದ ಎಣ್ಣೆಗಳು, ಬೇಕ್ಡ್‌ ಆಹಾರಗಳು ಇತ್ಯಾದಿಗಳನ್ನು ಕಡಿಮೆ ಮಾಡಿ. ನದಿಯ ಮೀನನ್ನು ವಾರಕ್ಕೆರಡು ಬಾರಿ ತಿನ್ನಿ. ಚಿಯಾ ಬೀಜಗಳು, ಅಗಸೆ ಬೀಜಗಳನ್ನು ನಿತ್ಯವೂ ಸೇವಿಸಿ. ಆಹಾರ ಸೇವನೆಯ ಪ್ರಮಾಣದ ಮೇಲೆ ಹಿಡಿತವಿರಲಿ. ನೈಸರ್ಗಿಕ ಆಹಾರಗಳನ್ನೇ ಹೆಚ್ಚು ಸೇವಿಸಿ. ಎಲ್ಲ ಪೋಷಕಾಂಶಗಳನ್ನೊಳಗೊಂಡ ಸಂಪೂರ್ಣ ಆಹಾರದೆಡೆಗೆ ಗಮನ ಇರಲಿ. ಇಷ್ಟು ಮಾಡಿದರೆ ಖಂಡಿತವಾಗಿಯೂ ನಿಮ್ಮ ಚರ್ಮವೂ ಆರೋಗ್ಯಕರವಾಗಿ ಫಲಫಳಿಸುತ್ತದೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ಆರೋಗ್ಯ

Benefits Of Spinach Juice: ದಟ್ಟ ಕೂದಲು ಬೇಕೆ? ಪಾಲಕ್‌ ಜ್ಯೂಸ್‌ ಕುಡಿಯಿರಿ

ಬೆಳಗಿನ ಹೊತ್ತು ಹಸಿರು ಜ್ಯೂಸ್‌ಗಳನ್ನು ಕುಡಿಯುವುದು ಎಷ್ಟು ಜನಪ್ರಿಯವೋ ಆರೋಗ್ಯಕ್ಕೂ ಅಷ್ಟೇ ಹಿತ. ಪಾಲಕ್‌ ಸೊಪ್ಪಿನ ರಸವನ್ನು ಕುಡಿಯುವುದರಲ್ಲಿ ಏನೇನು ಲಾಭಗಳು ಅಡಗಿವೆ? ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಶಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ (Benefits Of Spinach Juice) ನಾರು ಸಹ ಹೇರಳವಾಗಿದೆ.

VISTARANEWS.COM


on

Benefits of Spinach Juice
Koo

ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್‌ಗಳನ್ನು ಕುಡಿಯುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ತಾಜಾ ಸೊಪ್ಪುಗಳು ದೊರೆತರೆ, ಅವುಗಳ ರಸ ಕುಡಿಯುವುದು ಆರೋಗ್ಯಕ್ಕೆ ಒಳಿತು ಮಾಡುವುದು ಸುಳ್ಳೇನಲ್ಲ. ಅಂಥದ್ದೇ ಹಸಿರು ಜ್ಯೂಸ್‌ಗಳ ಪೈಕಿ ಒಂದು ಪಾಲಕ್‌ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್‌ಗಳು ಬಾಯಿಗೂ ರುಚಿ, ದೇಹಕ್ಕೂ ಹಿತ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಶಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ. ಇನ್ನೂ ಏನೇನು ಲಾಭಗಳಿವೆ ಪಾಲಕ್‌ ಸೊಪ್ಪಿನ ರಸ (Benefits Of Spinach Juice) ಕುಡಿಯುವುದರಲ್ಲಿ?
ಸ್ಥೂಲವಾಗಿ ಹೇಳುವುದಾದರೆ, ಇದರ ಸಮೃದ್ಧ ಕಬ್ಬಿಣದಂಶವು ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಹಲವಾರು ಜೀವಸತ್ವಗಳು ಕೂದಲನ್ನು ಸೊಂಪಾಗಿ, ಸಮೃದ್ಧವಾಗಿಸುತ್ತವೆ. ಜೊತೆಗೆ, ತ್ವಚೆ ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಮತ್ತು ಪ್ರತಿರೋಧಕ ಶಕ್ತಿಯನ್ನು ಪ್ರಚೋದಿಸಲು ಸಾಧ್ಯವಾಗುತ್ತದೆ. ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸಿ, ತೂಕ ಇಳಿಕೆಗೂ ನೆರವಾಗಬಹುದಾದ ಪೇಯವಿದು.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತವನ್ನು ಶಮನ ಮಾಡುತ್ತವೆ. ಅದರಲ್ಲೂ ಪಾಲಕ್‌ನಲ್ಲಿರುವ ಫಾಲಿಕ್‌ ಆಮ್ಲವು ಗರ್ಭಿಣಿಯರಿಗೆ ಪೂರಕವಾದಂಥ ಪೌಷ್ಟಿಕಾಂಶ. ಭ್ರೂಣದ ಬೆನ್ನುಹುರಿ ಮತ್ತು ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ಇದು ಒದಗಿಸುತ್ತದೆ. ಬಾಣಂತಿಯರಿಗೆ ಈ ಸೊಪ್ಪನ್ನು ನೀಡುವುದರಿಂದ ಮಗುವಿಗೆ ದೊರೆಯುವ ಹಾಲಿನ ಪ್ರಮಾಣ ವೃದ್ಧಿಯಾಗುತ್ತದೆ. ಇದರಿಂದ ಶಿಶುವಿನ ಬೆಳವಣಿಗೆಯೂ ಚೆನ್ನಾಗಿ ಆಗುವುದಲ್ಲದೆ, ತಾಯಿಯ ದೇಹದ ಅನಗತ್ಯ ಕೊಬ್ಬೂ ಕರಗಲು ಸಹಾಯವಾಗುತ್ತದೆ.

Asian Woman with a Beautiful Face and Fresh Smooth Skin Is Dres Sesame Benefits

ತ್ವಚೆಯ ಆರೋಗ್ಯ ವೃದ್ಧಿ

ವಿಟಮಿನ್‌ ಎ ಸಮೃದ್ಧವಾಗಿರುವ ಈ ಸೊಪ್ಪಿನ ಸೇವನೆಯಿಂದ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯ. ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಗಟ್ಟಿ, ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಮೊಡವೆ ಮೂಡುವುದನ್ನು ಒಳಗಿನಿಂದ ತಡೆದು, ಶುಭ್ರ ಕಾಂತಿಯನ್ನು ನೀಡಿ, ತಾರುಣ್ಯಭರಿತ ಚರ್ಮವನ್ನು ಹೊಂದಲು ನೆರವಾಗುತ್ತದೆ.

Improved Digestion Tea Benefits

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ನಾರಿನಂಶ ವಿಫುಲವಾಗಿರುವ ಈ ಸೊಪ್ಪಿನ ರಸ ಕುಡಿಯುವುದರಿಂದ ಜೀರ್ಣಾಂಗಗಳ ತೊಂದರೆಗಳನ್ನು ದೂರ ಮಾಡಬಹುದು. ಅಜೀರ್ಣ, ಹೊಟ್ಟೆಯುಬ್ಬರಗಳನ್ನು ನಿವಾರಿಸಿ, ಮಲಬದ್ಧತೆಯನ್ನು ನಿಯಂತ್ರಣಕ್ಕೆ ತರುವುದಕ್ಕೆ ಇದರಿಂದ ಸಾಧ್ಯ. ಇದನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದಲೂ ಈ ಲಾಭಗಳನ್ನು ಪಡೆಯಬಹುದು.

Promotes Hair Health Curry Leaves Benefits

ದಟ್ಟ ಕೂದಲು

ಕಪ್ಪಾದ ದಟ್ಟ ಕೇಶರಾಶಿ ಎಲ್ಲರಿಗೂ ಪ್ರಿಯವೇ. ಆದರೆ ಹಾಗಿರುವವರು ಅಪರೂಪ. ಹಲವು ವಿಟಮಿನ್‌ ಬಿಗಳು ಸಮೃದ್ಧವಾಗಿರುವ ಪಾಲಕ್‌ ಸೊಪ್ಪು, ಕೂದಲಿನ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲದು. ತಲೆಯ ಚರ್ಮದ ಆರೋಗ್ಯ ಕಾಪಾಡಿ, ಕೂದಲುಗಳ ಬುಡವನ್ನು ಸಶಕ್ತವಾಗಿಸಬಲ್ಲದು. ಕೂದಲು ನಿರ್ಜೀವವಾಗಿ ತುಂಡಾಗುವುದನ್ನು ತಡೆದು, ಕೇಶಗಳ ಬೆಳವಣಿಗೆಯನ್ನೂ ಪ್ರೋತ್ಸಾಹಿಸಬಲ್ಲದು.

There is a vaccine for seasonal diseases like flu get it Monsoon Allergies

ರೋಗಗಳು ದೂರ

ವಿಟಮಿನ್‌ ಸಿ, ಫ್ಲೆವನಾಯ್ಡ್‌ಗಳು, ಲೂಟೆನ್, ಕ್ಲೊರೊಫಿಲ್‌ನಂಥ ಉತ್ಕರ್ಷಣ ನಿರೋಧಕಗಳು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ರೋಗಗಳೊಂದಿಗೆ ಹೋರಾಡುವ ಸಾಮರ್ಥ್ಯವೂ ವೃದ್ಧಿಸುತ್ತದೆ. ಜೊತೆಗೆ, ಮಧುಮೇಹ, ಕ್ಯಾನ್ಸರ್‌ನಂಥ ರೋಗಗಳನ್ನು ತಡೆಯಲು ನೆರವು ನೀಡುತ್ತದೆ.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

Continue Reading

ಆರೋಗ್ಯ

Sweet Potatoes: ಗೆಣಸಿಗೆ ಮಧುಮೇಹ ನಿಯಂತ್ರಿಸುವ, ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ!

ಗೆಣಸನ್ನು ವೈವಿಧ್ಯಮಯ ಅಡುಗೆಗಳಲ್ಲಿ ಉಪಯೋಗಿಸಬಹುದು. ಸುಮ್ಮನೆ ಬೇಯಿಸಿ, ಸುಲಿದು ತಿನ್ನುವುದರಿಂದ ಹಿಡಿದು, ಹೋಳಿಗೆ, ಪಾಯಸ, ಸಾಂಬಾರ್‌, ಪಲ್ಯ, ಅವಿಯಲ್‌, ಬಾಜಿ, ಕೂಟು, ರಾಯ್ತ, ಚಿಪ್ಸ್‌, ಕಟ್ಲೆಟ್‌, ಹಪ್ಪಳ ಮುಂತಾದ ಯಾವುದೇ ಬಗೆಯ ಅಡುಗೆಗೆ ಇದು ಸೈ. ಆದರೆ ಆರೋಗ್ಯಕ್ಕೇನು ಲಾಭ (Nutritional benefits of Sweet Potatoes) ಇದನ್ನು ತಿನ್ನುವುದರಿಂದ? ಇಲ್ಲಿದೆ ಮಾಹಿತಿ.

VISTARANEWS.COM


on

Sweet potatoes have the ability to control diabetes and prevent cancer
Koo

ಬೆಂಗಳೂರು: ಬಾಯಿಗೆ ರುಚಿ ಹತ್ತಿಸುವ ಸಿಹಿಯಾದ ಗೆಣಸಿನ (Sweet Potatoes) ಕಾಲವಿದು. ಕಾಲಕ್ಕೆ ತಕ್ಕ ಆಹಾರವನ್ನು ಸೇವಿಸಬೇಕು ಎನ್ನುವುದು ಭಾರತೀಯರಲ್ಲಿ ಪ್ರಾಚೀನ ದಿನಗಳಿಂದಲೂ ಚಾಲ್ತಿಯಲ್ಲಿರುವ ತತ್ವ. ಇತ್ತೀಚಿನ ವರ್ಷಗಳಲ್ಲಿ ಹೊತ್ತುಗೊತ್ತಿಲ್ಲದೆ ಸಿಕ್ಕಿದ್ದೆಲ್ಲಾ ತಿನ್ನುವ ರೂಢಿ ಬೆಳೆದು ಬಂದಿದೆ. ಆದರೆ ಚಳಿಗಾಲದಲ್ಲಿ ಬೆಳೆಯುವ ಬೆಳೆಗಳೇ ಆ ಕಾಲಕ್ಕೆ ದೇಹವನ್ನು ಆರೋಗ್ಯಪೂರ್ಣವಾಗಿ ಇಡಬಲ್ಲವು ಎನ್ನುವುದು ನೂರು ಪ್ರತಿಶತ ಸತ್ಯ.
ಗೆಣಸನ್ನು (Sweet Potatoes) ವೈವಿಧ್ಯಮಯ ಅಡುಗೆಗಳಲ್ಲಿ ಉಪಯೋಗಿಸಬಹುದು. ಸುಮ್ಮನೆ ಬೇಯಿಸಿ, ಸುಲಿದು ತಿನ್ನುವುದರಿಂದ ಹಿಡಿದು, ಹೋಳಿಗೆ, ಪಾಯಸ, ಸಾಂಬಾರ್‌, ಪಲ್ಯ, ಅವಿಯಲ್‌, ಬಾಜಿ, ಕೂಟು, ರಾಯ್ತ, ಚಿಪ್ಸ್‌, ಕಟ್ಲೆಟ್‌, ಹಪ್ಪಳ ಮುಂತಾದ ಯಾವುದೇ ಬಗೆಯ ಅಡುಗೆಗೆ ಇದು ಸೈ. ಕೊಂಚ ಸಿಹಿ ರುಚಿ ಇದ್ದರೂ, ಖಾರ ರುಚಿಯ ಅಡುಗೆಗೆ ಸಹ ಇದು ಯೋಗ್ಯವೆನಿಸಿದೆ. ಇವೆಲ್ಲ ಬಾಯಿ ರುಚಿಯ ಮಾತಾಯಿತು. ಆರೋಗ್ಯಕ್ಕೇನು ಲಾಭ ಇದನ್ನು ತಿನ್ನುವುದರಿಂದ ಎನ್ನುವುದನ್ನು ನೋಡೋಣ.

ಮಧುಮೇಹ ನಿಯಂತ್ರಣ

ಇದರ ರುಚಿ ಸಿಹಿಯೇ ಆದರೂ ರಕ್ತದಲ್ಲಿ ಸಕ್ಕರೆಯಂಶವನ್ನು ಏರಿಳಿತ ಮಾಡಿಸುವುದಿಲ್ಲ. ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ ಇದ್ದು, ಮಧುಮೇಹಿಗಳಿಗೆ ಇದು ಸೇವಿಸಬಹುದಾದ ಆಹಾರವೆನಿಸಿದೆ. ಇದರಲ್ಲಿ ನಾರಿನಂಶ ಹೇರಳವಾಗಿದ್ದು, ನಿಧಾನವಾಗಿ ಜೀರ್ಣವಾಗಿ ರಕ್ತವನ್ನು ಸೇರುತ್ತದೆ. ಹಾಗಾಗಿ ಇದನ್ನು ತಿಂದಾಕ್ಷಣ ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರಿಕೆ ಆಗುವುದಿಲ್ಲ.

ಕ್ಯಾನ್ಸರ್‌ ತಡೆಯುವ ಸಾಮರ್ಥ್ಯ

ಇದರಲ್ಲಿರುವ ಬೀಟಾ ಕ್ಯಾರೊಟಿನ್‌ ಮತ್ತು ಆಂಥೋಸಯನಿನ್‌ಗಳು ದೇಹಕ್ಕೆ ಮಹತ್ವದ ಸತ್ವಗಳನ್ನು ನೀಡುತ್ತವೆ. ದೇಹದಲ್ಲಿ ತೇಲಾಡುವ ಮುಕ್ತ ಕಣಗಳನ್ನು ನಿರ್ಬಂಧಿಸುವ ಸಾಮರ್ಥ್ಯ ಈ ಪೋಷಕಾಂಶಗಳಿಗಿದ್ದು, ಕ್ಯಾನ್ಸರ್‌ನಂಥ ಮಾರಕ ರೋಗಗಳ ಭೀತಿಯನ್ನು ದೂರ ಮಾಡುತ್ತವೆ. ಅದಲ್ಲದೆ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವಾದ ಇಂಥ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ ಆಹಾರಗಳ ಸೇವನೆ ಅತಿ ಮುಖ್ಯ.

ಇದನ್ನೂ ಓದಿ: Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

ಪೋಷಕಾಂಶಗಳು ಹೇರಳ

ಇದರಲ್ಲಿ ದೇಹಕ್ಕೆ ಅಗತ್ಯವಾದ ನಾರಿನಂಶ ಭರಪೂರ ಇದೆ. ಇದರಿಂದ ಹೆಚ್ಚು ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗಿ, ಕಳ್ಳ ಹಸಿವೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ವಿಟಮಿನ್‌ ಸಿ, ಎ ಮತ್ತು ಹಲವು ರೀತಿಯ ಬಿ ಜೀವಸತ್ವಗಳು ಇದರಲ್ಲಿವೆ. ಪೊಟಾಶಿಯಂ, ಕಬ್ಬಿಣ, ಮೆಗ್ನೀಶಿಯಂನಂಥ ಖನಿಜಗಳು ಸಾಕಷ್ಟಿದ್ದು, ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ಇದು ನೀಡುತ್ತದೆ. ಶರೀರದಲ್ಲಿ ಎಲೆಕ್ಟ್ರೊಲೈಟ್‌ ಸಮತೋಲನಕ್ಕೂ ಇದು ನೆರವಾಗುತ್ತದೆ

ತ್ವಚೆ, ಚರ್ಮಕ್ಕೆ ಲಾಭ

ಇದರಲ್ಲಿರುವ ವಿಟಮಿನ್‌ ಅಂಶಗಳಿಂದ ದೃಷ್ಟಿಯನ್ನು ಚುರುಕಾಗಿಸಬಹುದು ಮತ್ತು ತ್ವಚೆಯನ್ನು ಕಾಂತಿಯುಕ್ತಗೊಳಿಸಬಹುದು. ಇದರಲ್ಲಿರುವ ಕೊಲಿನ್‌ ಅಂಶವು ಕಣ್ಣಿಗೆ ಅಗತ್ಯವಾದ ಸತ್ವಗಳನ್ನು ನೀಡಿ, ದೃಷ್ಟಿಯನ್ನು ಕಾಪಾಡುತ್ತದೆ.

ಪಚನಕಾರಿ

ನಾರಿನಂಶ ಹೆಚ್ಚಿರುವುದರಿಂದ ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಿ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಾಂಗಗಳು ಚುರುಕಾದರೆ ಶರೀರದಲ್ಲಿ ಅನಗತ್ಯ ಕೊಬ್ಬು ಜಮೆಯಾಗದಂತೆ ತಡೆಯುವುದು ಸುಲಭ. ಈ ಎಲ್ಲಾ ಕಾರಣಗಳಿಂದ ಇದು ತೂಕ ಇಳಿಸುವವರಿಗೂ ಉಪಯುಕ್ತ ತಿನಿಸು.

ರುಚಿಕರ ಖಾದ್ಯ

ಇದು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಬಳಕೆಯಲ್ಲಿರುವ ಗಡ್ಡೆ. ಐರೋಪ್ಯ ಸೂಪ ಶಾಸ್ತ್ರಗಳಲ್ಲಿ, ಪೂರ್ವ ದೇಶಗಳ ಅಡುಗೆಗಳಲ್ಲಿ ಸಹ ಇದರ ಬಳಕೆಯಿದೆ. ಕೊರೆಯುವ ಚಳಿಯಿರುವ ದೇಶಗಳಲ್ಲಿ ಹಾಗೂ ದ್ವೀಪ ರಾಷ್ಟ್ರಗಳಲ್ಲಿ ಗಡ್ಡೆ-ಗೆಣಸುಗಳ ಬಳಕೆ ವ್ಯಾಪಕವಾಗಿರುವುದರಿಂದ ರಷ್ಯಾದಿಂದ ಹಿಡಿದು ಹವಾಯ್‌ ದ್ವೀಪಗಳವರೆಗೆ ಇದು ಸರ್ವವ್ಯಾಪಿ. ಇನ್ನು ಭಾರತದ ಎಲ್ಲಾ ಭಾಗಗಳಲ್ಲೂ ಗೆಣಸಿನ ಖಾದ್ಯಗಳು ಜನಪ್ರಿಯ. ಬೇಯಿಸಿ, ಕರಿದು, ಸುಟ್ಟು, ಬೇಕ್‌ ಮಾಡಿ, ಹೆಚ್ಚಿ ಒಗ್ಗರಣೆ ಹಾಕಿ, ರುಬ್ಬಿ ಸ್ಮೂದಿ ಮಾಡಿ- ಹೀಗೆ ನಮ್ಮ ಕಲ್ಪನೆಯ ಯಾವುದೇ ರೀತಿಯಲ್ಲಿ ಇವುಗಳನ್ನು ಅಡುಗೆಯಲ್ಲಿ ಬಳಸಬಹುದು. ಚಳಿಗಾಲದಲ್ಲಿ ಇದರ ಬಳಕೆ ಹೆಚ್ಚು. ಋತುಮಾನಕ್ಕೆ ಸರಿಯಾದ ಆಹಾರವೂ ಹೌದಾಗಿರುವ ಈ ಸತ್ವಶಾಲಿ ಗಡ್ಡೆಯನ್ನು ನಿಯಮಿತವಾಗಿ ತಿನ್ನಿ, ಆರೋಗ್ಯ ವೃದ್ಧಿಸಿಕೊಳ್ಳಿ.

Continue Reading
Advertisement
Lok Sabha Election 2024
ಕರ್ನಾಟಕ2 mins ago

Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

Summer Fashion
ಫ್ಯಾಷನ್7 mins ago

Summer Fashion: ಬದಲಾಯ್ತು ಜೆನ್‌ ಜಿ ಹುಡುಗರ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

Instagram Reel
ದೇಶ19 mins ago

Instagram Reel: ಪ್ರಾಣಕ್ಕೇ ಕುತ್ತು ತಂದ ಇನ್‌ಸ್ಟಾಗ್ರಾಮ್‌ ರೀಲ್ಸ್‌; ಸಾಹಸ ಪ್ರದರ್ಶಿಸಲು ಹೋಗಿ 21 ವರ್ಷದ ಯುವಕ ಸಾವು

IPL 2024
ಕ್ರೀಡೆ33 mins ago

IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

Karnataka Weather Forecast
ಮಳೆ40 mins ago

Karnataka Weather : ವರ್ಷಾಘಾತಕ್ಕೆ ಉತ್ತರ ಕರ್ನಾಟಕ ಸುಸ್ತು; ರಾತ್ರಿಯೆಲ್ಲ ಗಾಳಿ ಸಹಿತ ಮಳೆಯಾರ್ಭಟ

lok sabha Election
ಪ್ರಮುಖ ಸುದ್ದಿ1 hour ago

Lok Sabha Election : ಕಾಂಗ್ರೆಸ್​ ಪರ ಶಾರುಖ್​ ಖಾನ್​ ಪ್ರಚಾರ; ಬಿಜೆಪಿಯಿಂದ ಆಕ್ಷೇಪ!; ವಿಡಿಯೊ ಇದೆ

Road accident between bike and Bolero near Mudgal Two dead
ಕರ್ನಾಟಕ1 hour ago

Road Accident: ಮುದ್ಗಲ್‌ ಬಳಿ ಬೈಕ್‌ – ಬುಲೇರೋ ನಡುವೆ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು

Wedding Saree Selection
ಫ್ಯಾಷನ್1 hour ago

Wedding Saree Selection: ಮದುವೆ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸೀರೆ ಎಕ್ಸ್‌ಫರ್ಟ್‌ಗಳ ಟಿಪ್ಸ್

ಶಿವಮೊಗ್ಗ1 hour ago

Book Release: ರಾಮನೇನು ದೇವನೇ? ಪುಸ್ತಕ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Wipro Q4 Results
ವಾಣಿಜ್ಯ1 hour ago

Wipro Q4 Results: ಐಟಿ ದೈತ್ಯ ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ3 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ14 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌