Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ - Vistara News

ಆರೋಗ್ಯ

Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

Benefits Of Onion Hair Oil: ತಲೆಕೂದಲಿಗೆ ಈರುಳ್ಳಿ ಎಣ್ಣೆ ಎನ್ನುತ್ತಿದ್ದಂತೆ ಮುಖ ಕಿವುಚಬೇಡಿ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ಜೊತೆಗೆ, ಇದರ ಬ್ಯಾಕ್ಟೀರಿಯ ವಿರೋಧಿ ಅಂಶಗಳು ತಲೆಯ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಇನ್ನೂ ಏನೆಲ್ಲ ಸದ್ಗುಣಗಳು ಈರುಳ್ಳಿ ತೈಲದಲ್ಲಿವೆ? ಇಲ್ಲಿದೆ ಮಾಹಿತಿ.

VISTARANEWS.COM


on

Benefits Of Onion Hair Oil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈರುಳ್ಳಿಯ ಭಕ್ತರು ಇದ್ದಷ್ಟೇ ಸಂಖ್ಯೆಯಲ್ಲಿ ವಿರೋಧಿಗಳೂ ಇದ್ದಾರೆ. ರುಚಿಗಾಗಲಿ, ಮದ್ದಿಗಾಗಲಿ ಈರುಳ್ಳಿಗೆ ಸಮನಾದದ್ದಿಲ್ಲ ಎಂದು ಹೊಗಳುವವರು ಒಂದೆಡೆಯಾದರೆ, ಬೆಳಗ್ಗೆ ತಿಂದರೆ ಸಂಜೆಯವರೆಗೂ ಬಾಯೆಲ್ಲ ವಾಸನೆ ಎಂದು ಮುಖ ಕಿವುಚುವವರಿದ್ದಾರೆ. ಇದೀಗ ತಿನ್ನುವ ವಿಷಯವಲ್ಲ, ತಲೆಕೂದಲಿಗೆ ಈರುಳ್ಳಿ ಉಪಯೋಗಿಸಿದರೆ? ʻತಲೆಯೆಲ್ಲ ಒಗ್ಗರಣೆ ವಾಸನೆʼ ಎಂದು ಬೊಬ್ಬೆ ಹೊಡೆಯುವವರಿದ್ದಾರೆ. ಆದರೆ ಕೂದಲಿನ ಸಮಸ್ಯೆಗಳಿಗೆ ಈರುಳ್ಳಿ ಎಣ್ಣೆ ಅತ್ತ್ಯುತ್ತಮ ಮದ್ದಿನಂತೆ ಕೆಲಸ ಮಾಡಬಲ್ಲದು (Benefits Of Onion Hair Oil) ಎಂಬುದು ತಿಳಿದಿದೆಯೇ?
ಹೇರಳವಾಗಿ ಸಲ್ಫರ್‌ ಅಂಶವನ್ನು ಹೊಂದಿರುವ ಈರುಳ್ಳಿಯು ಕೂದಲಿನ ಪೋಷಣೆಯನ್ನು ಹಲವು ರೀತಿಯಲ್ಲಿ ಮಾಡುತ್ತದೆ. ಕೂದಲ ಕೋಶಗಳ ಪೋಷಣೆ ಮಾಡಿ, ಕೂದಲು ಉದುರುವುದನ್ನು ಕಡಿಮೆ ಮಾಡಿ, ತುಂಡಾಗುವ ತೊಂದರೆಯನ್ನೂ ಪರಿಹಾರ ಮಾಡುತ್ತದೆ. ಸಲ್ಫರ್‌ ಅಥವಾ ಗಂಧಕದ ಅಂಶವು ಹೆಚ್ಚಿನ ಪ್ರಮಾಣದ ಕೊಲಾಜಿನ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ. ಕೂದಲ ಬೆಳವಣಿಗೆಯಲ್ಲಿ ಕೊಲಾಜಿನ್‌ ಮಹತ್ವ ಅಧಿಕವಾಗಿದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ಜೊತೆಗೆ, ಇದರ ಬ್ಯಾಕ್ಟೀರಿಯ ವಿರೋಧಿ ಅಂಶಗಳು ತಲೆಯ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

Onion Hair Oil
Dandruff

ಮಾಡುವುದು ಹೇಗೆ?

ಈರುಳ್ಳಿ ತೈಲವನ್ನು ಮಾಡುವ ಕ್ರಮವನ್ನೂ ಈಗ ತಿಳಿಯೋಣ. ಈರುಳ್ಳಿಯ ಸಿಪ್ಪೆಗಳನ್ನು ಬಿಡಿಸಿ, ಹೆಚ್ಚಿ ರಸ ತೆಗೆದು ಇರಿಸಿ. ಇದರ ರಸ ತೆಗೆಯುವುದಕ್ಕೆಂದು ಮಿಕ್ಸಿ ಮಾಡುವಾಗ ಜೊತೆಗೆ ಎರಡು ಚಮಚ ಮೆಂತೆ ಬೀಜಗಳನ್ನೂ ಸೇರಿಸಿಕೊಳ್ಳಬಹುದು. ಈ ರಸಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಿ. ಈರುಳ್ಳಿಯ ಹಸಿ ವಾಸನೆಯೆಲ್ಲ ಹೋಗಿ, ತಿಳಿಯಾದ ಘಮ ವ್ಯಾಪಿಸುತ್ತದೆ. ಈರುಳ್ಳಿ ಮತ್ತು ಮೆಂತೆಯ ಅಂಶಗಳೆಲ್ಲ ತಮ್ಮ ಸತ್ವವನ್ನು ಬಿಟ್ಟು ಎಣ್ಣೆಯ ಮೇಲೆ ತೇಲತೊಡಗುತ್ತವೆ. ಇದೀಗ ಈರುಳ್ಳಿ ಎಣ್ಣೆ ಸಿದ್ಧವಾಗಂತೆ. ಇದನ್ನು ತೆಳುವಾದ ಬಟ್ಟೆಯಲ್ಲಿ ಶೋಧಿಸಿ, ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಂಡು ಉಪಯೋಗಿಸಿಕೊಳ್ಳಿ.

ಹೊಳಪಿನ ಕೇಶರಾಶಿ

ಕೂದಲಿನ ಹೊಳಪು ಹೆಚ್ಚಿಸುವಲ್ಲಿ ಈರುಳ್ಳಿ ಎಣ್ಣೆ ಒಳ್ಳೆಯ ಕೆಲಸ ಮಾಡುತ್ತದೆ. ಇದನ್ನು ಕೂದಲ ಬುಡಕ್ಕೆ ಮಾತ್ರವಲ್ಲ, ತುದಿಯವರೆಗೂ ಹಚ್ಚಿ ಒಂದರಡು ತಾಸಿನ ನಂತರ ತಲೆ ಸ್ನಾನ ಮಾಡಿ. ಇಷ್ಟೇ ಅಲ್ಲ, ಘಾಟು ಸಹಿಸಿಕೊಳ್ಳಬಹುದು ಎನಿಸಿದರೆ ಹಸಿ ಈರುಳ್ಳಿ ಪೇಸ್ಟ್‌ ಮಾಡಿ, ನೇರವಾಗಿ ತಲೆಗೂದಲಿಗೆ ಲೇಪಿಸಿಕೊಳ್ಳಿ. ಒಂದೆರಡು ತಾಸುಗಳ ನಂತರ ತಲೆಸ್ನಾನ ಮಾಡಿ. ಹೀಗೆ ಮಾಡುವುದರಿಂದ ನೈಸರ್ಗಿಕ ಕಂಡೀಶನರ್‌ ರೀತಿಯಲ್ಲಿ ಇದು ಕೆಲಸ ಮಾಡಿ, ಕೂದಲಿನ ಹೊಳಪು ಹೆಚ್ಚಿಸುತ್ತದೆ.

Onion Hair Oil Benefits
Dandruff

ಕೂದಲು ಉದುರುತ್ತಿದ್ದರೆ

ನಿಯಮಿತವಾಗಿ ಈರುಳ್ಳಿ ಎಣ್ಣೆಯ ಬಳಕೆಯಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಇದರಲ್ಲಿರುವ ಸಲ್ಫರ್‌ ಅಂಶವು ಹೆಚ್ಚಿನ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ತೈಲವನ್ನು ಕೂದಲಿನ ಬುಡಕ್ಕೆ ಮಸಾಜ್‌ ಮಾಡುವುದರಿಂದ, ಕೂದಲಿನ ಬೇರುಗಳು ಸದೃಢವಾಗಿ, ಉದುರುವುದು ಕಡಿಮೆಯಾಗಿ, ಕೇಶರಾಶಿ ದಟ್ಟವಾಗಿ ಬೆಳೆಯುತ್ತದೆ.

ಬಿಳಿಕೂದಲಿಗೆ

ಇದಕ್ಕೂ ಸಹ ಹಸಿ ಈರುಳ್ಳಿ ಪೇಸ್ಟ್‌ ಪರಿಣಾಮಕಾರಿ. ಒಂದೊಮ್ಮೆ ಆ ಘಾಟನ್ನು ಸಹಿಸಲು ಸಾಧ್ಯವಿಲ್ಲ ಎನಿಸಿದರೆ, ರಾತ್ರಿಯೇ ತಲೆಯ ಚರ್ಮಕ್ಕೆ ಈರುಳ್ಳಿ ಎಣ್ಣೆಯಿಂದ ಲಘುವಾಗಿ ಮಸಾಜ್‌ ಮಾಡಿ. ಬೆಳಗಿನವರೆಗೆ ತೈಲ ಕೂದಲಿನಲ್ಲಿ ಉಳಿಯಲಿ. ನಂತರ ತಲೆಸ್ನಾನ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ತಲೆಗೂದಲು ಬಿಳಿಯಾಗುವುದನ್ನು ಮುಂದೂಡಬಹುದು.

Dandruff

ತಲೆಹೊಟ್ಟು ದೂರ

ಈ ಘಾಟುಮದ್ದಿಗೆ ಬ್ಯಾಕ್ಟೀರಿಯದೊಂದಿಗೆ ಹೋರಾಡುವ ಗುಣವಿದೆ. ಜೊತೆಗೆ ಫಂಗಸ್‌ ವಿರೋಧಿ ಸಾಮರ್ಥ್ಯವೂ ಉಂಟು. ಹಾಗಾಗಿ ತಲೆಯ ಚರ್ಮಕ್ಕೆ ಅಂಟುವಂಥ ಸೋಂಕುಗಳನ್ನು ದೂರ ಇರಿಸುವ ಕ್ಷಮತೆ ಈರುಳ್ಳಿ ಎಣ್ಣೆಗಿದೆ. ಯಾವುದೇ ಕಾರಣಕ್ಕೆ ತಲೆಯಲ್ಲಿ ಹೊಟ್ಟಾಗಿದ್ದರೂ, ಅದನ್ನು ನಿವಾರಿಸಿ, ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ: How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

ಉತ್ಕರ್ಷಣ ನಿರೋಧಕಗಳು

ಈರುಳ್ಳಿಯಲ್ಲಿ ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲ, ತುರಿಕೆಯಂಥ ಸಮಸ್ಯೆಗಳು ದೂರವಾಗುತ್ತದೆ. ಕೂದಲಿಗೆ ಕಡುಕಪ್ಪಾದ ನೈಸರ್ಗಿಕ ಬಣ್ಣ ಹಿಂದಿರುಗುತ್ತದೆ. ಶುಷ್ಕತೆಯೆಲ್ಲ ದೂರವಾಗಿ, ಕೂದಲು ನಯವಾಗಿ ನಳನಳಿಸುತ್ತದೆ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಲಘುವಾಗಿ ಮಸಾಜ್‌ ಮಾಡುವುದರಿಂದ, ಆ ಭಾಗದಲ್ಲಿ ರಕ್ತ ಸಂಚಾರವೂ ಹೆಚ್ಚುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Health Tips: ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ಇವು ದೇಹಕ್ಕೆ ವಿಷವಾಗಬಹುದು ಎಚ್ಚರ!

ಆಹಾರವನ್ನು ತಾಜಾವಾಗಿ ಸೇವಿಸಿದರೆ ಮಾತ್ರ ಒಳ್ಳೆಯ ಪರಿಣಾಮ (Health Tips) ಬೀರುತ್ತದೆ. ಆದರೆ ಹೆಚ್ಚಿನವರು ಆಹಾರವನ್ನು ಅನೇಕ ಬಾರಿ ಬಿಸಿ ಮಾಡಿ ಸೇವಿಸುತ್ತಾರೆ. ಇದು ಒಳ್ಳೆಯದಲ್ಲ. ಕೆಲವು ಆಹಾರಗಳನ್ನು ಪದೇಪದೇ ಬಿಸಿ ಮಾಡುವುದು ಅದರಲ್ಲೂ ಮುಖ್ಯವಾಗಿ ಚಹಾ, ಪಾಲಕ್, ಅಕ್ಕಿ, ಅಣಬೆ, ಅಡುಗೆ ಎಣ್ಣೆಯನ್ನು ಬಿಸಿ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ಅಭ್ಯಾಸಗಳು ಯಾಕೆ ಒಳ್ಳೆಯದಲ್ಲ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಬೆಳಗ್ಗೆ ಮಾಡಿರುವ ಅನ್ನ, ಸಾಂಬಾರ್ ಬಿಸಿಬಿಸಿಯಾಗಿರಬೇಕು ಎಂದು ಹಲವಾರು ಮನೆಗಳಲ್ಲಿ ಪದೇಪದೇ ಬಿಸಿ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ರಾತ್ರಿ ಉಳಿದ ಅಡುಗೆಯನ್ನು (food) ಬಿಸಿ ಮಾಡಿ (reheat) ಮರುದಿನ ಸೇವಿಸುತ್ತಾರೆ. ಹೀಗೆ ಆಹಾರ ಬಿಸಿ ಮಾಡಿ ತಿನ್ನುವುದು ಅದರಲ್ಲೂ ವಿಶೇಷವಾಗಿ ಕೆಲವೊಂದು ಆಹಾರಗಳನ್ನು ಎರಡನೇ ಬಾರಿ ಬಿಸಿ ಮಾಡುವುದು ಆರೋಗ್ಯಕ್ಕೆ (Health Tips) ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಕೆಲವು ಆಹಾರವನ್ನು ಬಿಸಿ ಮಾಡಿದಾಗ ಅದು ವಿಷವಾಗಬಹುದು. ಇನ್ನು ಕೆಲವು ಆಹಾರಗಳಲ್ಲಿರುವ ಪೌಷ್ಟಿಕಾಂಶ ನಷ್ಟವಾಗಬಹುದು ಎನ್ನುತ್ತಾರೆ ಆಹಾರ ಪರಿಣತರು. ಕೆಲವು ಆಹಾರ ಪದಾರ್ಥಗಳನ್ನು ಎರಡನೇ ಬಾರಿ ಬಿಸಿ ಮಾಡಲೇಬಾರದು. ಅವು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Health Tips
Health Tips


ಚಹಾ

ಚಹಾದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಸೂಕ್ಷ್ಮ ಸಂಯುಕ್ತಗಳಿರುತ್ತವೆ. ಇದು ಚಹಾಕ್ಕೆ ಸುವಾಸನೆ ಮತ್ತು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ಚಹಾವನ್ನು ಆರಂಭದಲ್ಲಿ ತಯಾರಿಸಿದಾಗ ಇದು ಟ್ಯಾನಿನ್‌ ಮತ್ತು ಕ್ಯಾಟೆಚಿನ್‌ಗಳನ್ನು ಒಳಗೊಂಡಂತೆ ವಿವಿಧ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಈ ಸಂಯುಕ್ತಗಳು ನಷ್ಟವಾಗುತ್ತದೆ. ಇದರಿಂದ ಚಹಾ ಸುವಾಸನೆಯನ್ನು ಕಳೆದುಕೊಳ್ಳುತ್ತದೆ ಮತ್ತು ಅದರಲ್ಲಿರುವ ಒಳ್ಳೆಯ ಅಂಶಗಳು ನಷ್ಟವಾಗುತ್ತದೆ.

ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಇದನ್ನು ಪುನಃ ಬಿಸಿ ಮಾಡುವುದರಿಂದ ಇದು ಹೆಚ್ಚಾಗಿ ಜಿಗುಪ್ಸೆ, ನಿದ್ರಾಹೀನತೆಯಂತಹ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡಿ ಸೇವಿಸುವುದು ಆಮ್ಲೀಯತೆಯನ್ನು ಹೆಚ್ಚಿಸಬಹುದು.

ಇದಲ್ಲದೇ ಚಹಾವನ್ನು ಕುದಿಸಿದ ಬಳಿಕ ದೀರ್ಘಕಾಲದವರೆಗೆ ಇಡುವುದು ಕೂಡ ಒಳ್ಳೆಯದಲ್ಲ. ಚಹಾವನ್ನು ಮಾಡಿ ಹತ್ತು ನಿಮಿಷಗಳ ಒಳಗೆ ಸೇವಿಸಬೇಕು. ಇಲ್ಲವಾದರೆ ಅದು ಹೆಚ್ಚು ಆಮ್ಲೀಯವಾಗಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.


ಪಾಲಕ್

ಪಾಲಕ್ ಸೊಪ್ಪು ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ಇದನ್ನು ಮತ್ತೆ ಬಿಸಿ ಮಾಡಿದಾಗ ನೈಟ್ರೈಟ್‌ಗಳಾಗಿ ಪರಿವರ್ತನೆಯಾಗುತ್ತದೆ. ನೈಟ್ರೈಟ್‌ಗಳು ಅನಂತರ ಅಮೈನೋ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ನೈಟ್ರೊಸಮೈನ್‌ ಗಳಾಗುತ್ತವೆ. ಅವುಗಳು ಕ್ಯಾನ್ಸರ್ ಜನಕಗಳಾಗಿವೆ. ಪಾಲಕ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ವಿಟಮಿನ್ ಸಿ ಮತ್ತು ಬಿ ವಿಟಮಿನ್‌ಗಳು ನಷ್ಟವಾಗುತ್ತದೆ. ಅದರ ಪೌಷ್ಟಿಕಾಂಶದ ಮೌಲ್ಯ ಕುಗ್ಗುತ್ತದೆ.

ಪಾಲಕ್ ಕಬ್ಬಿಣದ ಸಮೃದ್ಧ ಮೂಲವಾಗಿದೆ. ಪಾಲಕ್ ಸೊಪ್ಪನ್ನು ಬೇಯಿಸಿ ಮತ್ತೆ ಬಿಸಿ ಮಾಡಿದಾಗ ಕಬ್ಬಿಣವು ಗಾಳಿಯಲ್ಲಿ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆಯು ಸಂಭವಿಸಿ ಕಬ್ಬಿಣದ ಆಕ್ಸೈಡ್‌ಗಳ ರಚನೆಗೆ ಕಾರಣವಾಗಬಹುದು. ಇದು ಪಾಲಕ್ ನ ಬಣ್ಣ ಮತ್ತು ರುಚಿಯನ್ನು ಬದಲಾಯಿಸುತ್ತದೆ.

ಪಾಲಕ್ ನಲ್ಲಿರುವ ಕಬ್ಬಿನಾಂಶದ ಆಕ್ಸಿಡೀಕರಣವು ಅದರ ಪೌಷ್ಟಿಕಾಂಶದ ಮೌಲ್ಯದ ಮೇಲೆ ಪರಿಣಾಮ ಬೀರಬಹುದು. ಆಕ್ಸಿಡೀಕೃತ ಕಬ್ಬಿಣವು ದೇಹದಲ್ಲಿ ಸುಲಭವಾಗಿ ಹೀರಲ್ಪಡುವುದಿಲ್ಲ. ಮತ್ತೆ ಮತ್ತೆ ಪಾಲಕ್ ಅನ್ನು ಬಿಸಿ ಮಾಡುವುದು ಲೋಳೆಯ ರಚನೆ ಮತ್ತು ಕಹಿ ರುಚಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಪಾಲಕ್‌ನಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಅದನ್ನು ತಾಜಾ ಆಗಿ ಸೇವಿಸುವುದು ಉತ್ತಮ.


ಅಡುಗೆ ಎಣ್ಣೆ

ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ ಅದರ ಗುಣಮಟ್ಟ ಮತ್ತು ಸುರಕ್ಷತೆ ಕೆಡಿಸುವ ರಾಸಾಯನಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಇದು ಟ್ರಾನ್ಸ್ ಕೊಬ್ಬುಗಳು ಮತ್ತು ಅಲ್ಡಿಹೈಡ್‌ಗಳಂತಹ ಹಾನಿಕಾರಕ ಸಂಯುಕ್ತಗಳ ರಚನೆಗೆ ಕಾರಣವಾಗಬಹುದು. ಇದು ಉರಿಯೂತ ಮತ್ತು ಹೃದಯರಕ್ತನಾಳದ ಕಾಯಿಲೆಯನ್ನು ಉಂಟು ಮಾಡುತ್ತದೆ. ಅಡುಗೆ ಎಣ್ಣೆಯ ಸಮಗ್ರ ಪ್ರಯೋಜನ ಪಡೆಯಲು ಪ್ರತಿ ಬಾರಿಯೂ ತಾಜಾ ಎಣ್ಣೆಯನ್ನು ಬಳಸುವುದು ಮತ್ತು ತೈಲವನ್ನು ಅನೇಕ ಬಾರಿ ಬಿಸಿ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.


ಅಣಬೆ

ಅಣಬೆಗಳು ಮತ್ತೆ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಹಾರದಿಂದ ಹರಡುವ ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಅಣಬೆಗಳು ಪಾಲಿಸ್ಯಾಕರೈಡ್‌ಗಳಂತಹ ಕೆಲವು ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಮತ್ತೆ ಬಿಸಿ ಮಾಡಿದಾಗ ಕಿಣ್ವಕ ಪ್ರತಿಕ್ರಿಯೆಗಳಿಗೆ ಒಳಗಾಗಬಹುದು. ಅವುಗಳ ರುಚಿ ಮತ್ತು ವಿನ್ಯಾಸವನ್ನು ಬದಲಾಯಿಸುತ್ತದೆ.

ಮತ್ತೆ ಬಿಸಿ ಮಾಡಿದ ಅಣಬೆಗಳನ್ನು ಸೇವಿಸುವುದರಿಂದ ತಾಜಾತನ ಮತ್ತು ರುಚಿಯನ್ನು ಕಳೆದುಕೊಳ್ಳಬಹುದು. ಅಣಬೆಗಳು ಕಿಣ್ವ, ರಚನಾತ್ಮಕ ಪ್ರೋಟೀನ್‌ಗಳನ್ನು ಒಳಗೊಂಡಂತೆ ವಿವಿಧ ಪ್ರೋಟೀನ್‌ಗಳನ್ನು ಹೊಂದಿರುತ್ತವೆ. ಇದು ಅವುಗಳ ವಿನ್ಯಾಸ ಮತ್ತು ಪೌಷ್ಟಿಕಾಂಶದ ಪ್ರೊಫೈಲ್‌ಗೆ ಕೊಡುಗೆ ನೀಡುತ್ತದೆ. ಅಣಬೆಗಳನ್ನು ಬೇಯಿಸಿದಾಗ, ಈ ಪ್ರೋಟೀನ್ ಗಳು ಡಿನಾಟರೇಶನ್ ಎಂಬ ಪ್ರಕ್ರಿಯೆಯ ಮೂಲಕ ರಚನಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತವೆ. ಅಣಬೆಗಳನ್ನು ಮತ್ತೆ ಬಿಸಿ ಮಾಡಿದ ಅನಂತರ ಪ್ರೋಟೀನ್ ಸಂಯೋಜನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ.

ಇದು ಅಣಬೆಗಳ ವಿನ್ಯಾಸ, ಸುವಾಸನೆ ಮತ್ತು ಪೌಷ್ಟಿಕಾಂಶದ ಗುಣಲಕ್ಷಣಗಳಲ್ಲಿ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಅಣಬೆಗಳನ್ನು ಮತ್ತೆ ಬಿಸಿ ಮಾಡುವುದರಿಂದ ಜಲವಿಚ್ಛೇದನೆಯಂತಹ ಪ್ರಕ್ರಿಯೆಗಳ ಮೂಲಕ ಸಣ್ಣ ಪೆಪ್ಟೈಡ್‌ಗಳು ಮತ್ತು ಅಮೈನೋ ಆಮ್ಲಗಳಾಗಿ ಕೆಲವು ಪ್ರೋಟೀನ್ ಅಣುಗಳ ವಿಭಜನೆಗೆ ಕಾರಣವಾಗಬಹುದು. ಇದು ಅಣಬೆಗಳ ಒಟ್ಟಾರೆ ಪ್ರೋಟೀನ್ ಅಂಶ ಮತ್ತು ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವುಗಳ ರುಚಿ ಮತ್ತು ಜೀರ್ಣಸಾಧ್ಯತೆಯ ಮೇಲೆ ಪರಿಣಾಮ ಬಿರುವುದು. ಅಣಬೆಗಳ ಗುಣಮಟ್ಟವನ್ನು ಕಾಪಾಡಲು, ಅವುಗಳನ್ನು ದೀರ್ಘಕಾಲದವರೆಗೆ ಬಿಸಿ ಮಾಡದೇ ಇರುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು.


ಇದನ್ನೂ ಓದಿ: Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ


ಅಕ್ಕಿ

ಅಕ್ಕಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಂ ಅಡುಗೆ ಪ್ರಕ್ರಿಯೆಯಲ್ಲಿ ಬದುಕುಳಿಯುತ್ತದೆ. ಅನ್ನ ಮಾಡಿ ಅದನ್ನು ದೀರ್ಘಕಾಲದವರೆಗೆ ಇಟ್ಟರೆ ಅದು ದ್ವಿಗುಣವಾಗುತ್ತಾ ಹೋಗುತ್ತದೆ. ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಯಾವಾಗಲೂ ಬ್ಯಾಕ್ಟೀರಿಯಾ ಮತ್ತು ಅವುಗಳ ವಿಷಕಾರಿ ಅಂಶಗಳು ಹೋಗುವುದಿಲ್ಲ. ಇದು ಆಹಾರವನ್ನು ವಿಷವಾಗಿಸುತ್ತದೆ. ಬಿಸಿ ಮಾಡಿದ ಅನ್ನ ತೇವಾಂಶ, ಪೌಷ್ಟಿಕಾಂಶ ಕಳೆದುಕೊಳ್ಳುತ್ತದೆ. ಆಹಾರದಿಂದ ಹರಡುವ ಅನಾರೋಗ್ಯವನ್ನು ತಡೆಗಟ್ಟಲು ಬೇಯಿಸಿದ ಅನ್ನವನ್ನು ರೆಫ್ರಿಜರೇಟರ್ ನಲ್ಲಿ ಸರಿಯಾಗಿ ಸಂಗ್ರಹಿಸುವುದು ಮತ್ತು ಒಂದೆರಡು ದಿನಗಳಲ್ಲಿ ಅದನ್ನು ಸೇವಿಸುವುದು ಮುಖ್ಯವಾಗಿದೆ.

Continue Reading

ಆರೋಗ್ಯ

How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

How safe are apples to eat: ಪಳಪಳ ಹೊಳೆವ ಸೇಬನ್ನು ಆಹಾ ಎಂದು ಬಾಯಿಗಿಡುವ ಮುನ್ನ ಇವು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸಿ. ಯಾಕೆಂದರೆ, ಹೆಚ್ಚು ಕೀಟನಾಶಕಗಳನ್ನು ತನ್ನ ಮೈಮೇಲೆ ಹೊದ್ದು ಪಳಪಳಿಸಿ ಮಾರುಕಟ್ಟೆಗೆ ಕಾಲಿಡುವ ಈ ಸೇಬನ್ನು ನಾವು ಸಿಪ್ಪೆ ಸುಲಿಯದೆ ತಿಂದರೆ ಅಪಾಯ ಖಚಿತ! ಈ ಕುರಿತ ಎಚ್ಚರಿಕೆಯ ಮಾಹಿತಿ ಇಲ್ಲಿದೆ.

VISTARANEWS.COM


on

apple eating
Koo

ಸೇಬುಹಣ್ಣು ಅಥವಾ ಆಪಲ್‌ ಎಂದರೆ ನಿಮಗೆ ಇಷ್ಟವೇ? ನಿತ್ಯವೂ ಸೇಬು ಹಣ್ಣು ಸೇವಿಸುತ್ತೀರಾ? (How safe are apples to eat) ದಿನಕ್ಕೊಂದು ಸೇಬು ತಿನ್ನುವ ಮೂಲಕ ವೈದ್ಯರಿಂದ ದೂರವಿರಬಹುದು ಎಂಬ ವಿಶ್ವಾಸದಿಂದ ದಿನಾ ಒಂದೊಂದು ಸೇಬು ತಿನ್ನುತ್ತೀರಾ? ಹಾಗಿದ್ದರೆ ಕೊಂಚ ಯೋಚಿಸಿ. ಪಳಪಳ ಹೊಳೆವ ಸೇಬನ್ನು ಆಹಾ ಎಂದು ಬಾಯಿಗಿಡುವ ಮುನ್ನ ಇವು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸಿ. ಯಾಕೆಂದರೆ, ಹೆಚ್ಚು ಕೀಟನಾಶಕಗಳನ್ನು ತನ್ನ ಮೈಮೇಲೆ ಹೊದ್ದು ಪಳಪಳಿಸಿ ಮಾರುಕಟ್ಟೆಗೆ ಕಾಲಿಡುವ ಈ ಸೇಬನ್ನು ನಾವು ಸಿಪ್ಪೆ ಸುಲಿಯದೆ ತಿಂದರೆ ಹಲವು ವೈದ್ಯರಿಂದ ದೂರವಿರುವ ಮಾತೇಕೆ, ವೈದ್ಯರ ಹತ್ತಿರ ಹೋಗಬೇಕಾಗಬಹುದು ಎಚ್ಚರ! ಹೌದು. ಹೊಸ ಸಂಶೋಧನೆಯೊಂದರ ಪ್ರಕಾರ, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತೊಳೆಯುತ್ತಿರುವ ಶೈಲಿಯಿಂದ ಎಲ್ಲ ಬಗೆಯ ಕೀಟನಾಶಕಗಳೂ ತೊಳೆದು ಹೋಗುತ್ತಿಲ್ಲ. ಬದಲಾಗಿ ನಾವು ತಿನ್ನುತ್ತಿರುವ ಹಣ್ಣುಗಳಲ್ಲಿ ಇನ್ನೂ ಅಂಟಿಕೊಂಡೇ ಇರುತ್ತವೆಯಂತೆ. ಅಮೆರಿಕನ್‌ ಕೆಮಿಕಲ್‌ ಸೊಸೈಟಿ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿಯ ಪ್ರಕಾರ, ಹಣ್ಣುಗಳನ್ನು ಹೀಗೆ ತಿನ್ನುವ ಕಾರಣದಿಂದ ನಾವು ಅನೇಕ ಬಗೆಯ ಆರೋಗ್ಯದ ಪರಿಣಾಮಗಳನ್ನೂ ಮುಂದೆ ಅನುಭವಿಸಬೇಕಾಗುತ್ತದೆ ಎಂದಿದೆ. ಕೊಳೆ ತೊಳೆಯುವ ಪ್ರಕ್ರಿಯೆ ನೀರಿನಿಂದ ತೊಳೆಯುವಾಗ ತೊಳೆದುಹೋಗುತ್ತದೆಯೇ ವಿನಃ ಎಲ್ಲ ಬಗೆಯ ರಾಸಾಯನಿಕಗಳೂ ಹಣ್ಣುಗಳ ಮೇಲ್ಮೈನಿಂದ ತೊಳೆದು ಹೋಗದು. ಬದಲಾಗಿ ಅವು ಹಣ್ಣಿನ ಮೇಲ್ಮೈ ಮೇಲೆ ಅಂಟಿಕೊಂಡೇ ಇರುತ್ತವೆ. ಜೊತೆಗೆ ಕತ್ತರಿಸಿ ತಿನ್ನುವಾಗ ನಮ್ಮ ದೇಹಕ್ಕೆ ಸೇರುತ್ತವೆ ಎಂದಿದೆ. ಮುಖ್ಯವಾಗಿ ಸೇಬುಹಣ್ಣನ್ನು ತೊಳೆಯುವ ಬಗೆಯನ್ನು ಪರೀಕ್ಷಿಸಿರುವ ಈ ಸಂಶೋಧನೆಯಲ್ಲಿ, ಸೇಬು ಹಣ್ಣನ್ನು ನಾವು ಬಹಳ ಅವೈಜ್ಞಾನಿಕವಾಗಿ ತೊಳೆಯುತ್ತೇವೆ. ಅದರ ಸಿಪ್ಪೆಯ ಮೇಲಷ್ಟೇ ಅಲ್ಲ, ಅದರ ಒಳಗಿನ ಹಣ್ಣಿನ ಭಾಗದವರೆಗೂ ರಾಸಾಯನಿಕಗಳ ಪ್ರಭಾವ ಹೋಗಿರುತ್ತವೆ. ಹೀಗಾಗಿ, ಸುಮ್ಮನೆ ನೀರಿನಲ್ಲಿ ತೊಳೆಯುವುದರಿಂದ ಯಾವ ರಾಸಾಯನಿಕಗಳೂ ಹೋಗಿರುವುದಿಲ್ಲ. ಹಾಗಾಗಿ, ಸೇಬು ಹಣ್ಣನ್ನು ತಿನ್ನುವ ಸಂದರ್ಭ ಅದರ ಸಿಪ್ಪೆಯನ್ನು ತೆಗೆದು ತಿನ್ನುವುದೇ ಒಳ್ಳೆಯದು ಎಂದು ವರದಿ ಸಲಹೆ ಮಾಡಿದೆ. ಇದರಿಂದ ಒಂದಿಷ್ಟು ಪ್ರಮಾಣದಲ್ಲಿ ರಾಸಾಯನಿಕ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು ಎಂದಿದೆ.

Child Kid Eating Apple Fruit Outdoor Autumn Fall Nature Healthy

ಸಿಪ್ಪೆ ಒಳ್ಳೆಯದು, ಅದರಲ್ಲಿ ನಾರಿನಂಶ ಹೆಚ್ಚಿದೆ ಎಂದು ವಾದಿಸುವವರೆಲ್ಲ, ಒಮ್ಮೆ ಇಂತಹ ಹಣ್ಣುಗಳಿಗೆ ಬಳಸುವ ರಾಸಾಯನಿಕಗಳನ್ನು ಗಮನಿಸಿ. ಸಿಪ್ಪೆ ಒಳ್ಳೆಯದು ಎಂದು ತಿನ್ನುವ ಮೂಲಕ ರಾಸಾಯನಿಕವನ್ನು ಬೇಕೆಂದೆ ಹೊಟ್ಟೆಗೆ ಹಾಕುತ್ತೀರಿ ಖಂಡಿತವಾಗಿಯೂ, ಸಿಪ್ಪೆ ಬಿಸಾಕುವುದರಿಂದ ಪೋಷಕಾಂಶ ನಷ್ಟವಾಗುತ್ತದೆ. ಆದರೆ, ಬೇರೆ ಉಪಾಯವಿಲ್ಲ ಎಂದೂ ಅದು ಹೇಳಿದೆ.
ಸೇಬು ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್‌ ಕೆ, ವಿಟಮಿನ್‌ ಎ, ವಿಟಮಿನ ಸಿ, ಪೊಟಾಶಿಯಂ ಇತ್ಯಾದಿಗಳು ಅಪಾರ ಪ್ರಮಾಣದಲ್ಲಿವೆ. ಹಣ್ಣಿಗಿಂತ ಈ ಪೋಷಕಾಂಶಗಳು ಅದರ ಸಿಪ್ಪೆಯಲ್ಲಿರುವುದೇ ಹೆಚ್ಚು ನಿಜವಾದರೂ, ಇಂದು ಹಣ್ಣುಗಳಿಗೆ ವ್ಯಾಪಕವಾಗಿ ಕೀಟನಾಶಕಗಳನ್ನು ಬಳಸುವ ಕಾರಣದಿಂದ ಈ ಮುಂಜಾಗರೂಕತಾ ಕ್ರಮವನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳುವುದು ಅತ್ಯವಶ್ಯಕ ಎಂದಿದೆ.
ಇಷ್ಟಾಗಿಯೂ ನೀವು ನಿಮ್ಮ ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನಬಯಸುವುರಾದರೆ, ಕನಿಷ್ಟ ತೊಳೆಯುವಾಗ ಈ ಎಚ್ಚರವಹಿಸಿ

ಬಿಸಿ ನೀರಿನಲ್ಲಿ ನೆನೆಸಿ

ಬಿಸಿನೀರಿನಲ್ಲಿ ಸೇಬು ಹಣ್ಣನ್ನು ಕೆಲ ಸೆಕೆಂಡುಗಳ ಕಾಲ ನೆನೆಸಿ. ಕೂಡಲೇ ಹೊರತೆಗೆದು ಒಂದು ಒರಟು ಟವೆಲ್‌ನಲ್ಲಿ ಉಜ್ಜಿ. ಇದು ಅದರ ವ್ಯಾಕ್ಸ್‌ ಕೋಟನ್ನು ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ರಾಸಾಯನಿಕಗಳೂ ಗಣನೀಯವಾಗಿ ಕಡಿಮೆಯಾಗುತ್ತದೆ.

Apples Fruits To Eat On Empty Stomach

ತೆಗೆದು ಒರಸಿಡಿ

ವಿನೆಗರ್‌ ಅಥವಾ ನಿಂಬೆರಸವನ್ನು ಹಾಕಿದ ನೀರಿನಲ್ಲಿ ಸೇಬುಹಣ್ಣನ್ನು ಸ್ವಲ್ಪ ಹೊತ್ತು ನೆನೆಸಿ ತೆಗೆದು ಒರಸಿಡಿ. ಬೇಕಿಂಗ್‌ ಸೋಡಾ ಹಾಗೂ ನಿಂಬೆರಸ ಮಿಶ್ರ ಮಾಡಿ ನೀರಿನಲ್ಲಿ ಹಾಕಿ ತೊಳೆದರೂ ಆದೀತು.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಸಿಪ್ಪೆ ಸುಲಿದೇ ತಿನ್ನಿ:
ಆದಷ್ಟೂ ಸಿಪ್ಪೆ ಸುಲಿದೇ ತಿನ್ನಿ. ಯಾಕೆಂದರೆ, ಈ ವರದಿ ಹೇಳುವಂತೆ, ಸಿಪ್ಪೆಯ ಸಣ್ಣ ರಂಧ್ರಗಳ ಮೂಲಕ ರಾಸಾಯನಿಕಗಳು ಹಣ್ಣಿನ ಒಳಮೈಯವರೆಗೂ ಪ್ರವೇಶ ಪಡೆದಿರುತ್ತವೆ. ಹಾಗಾಗಿ ಸಿಪ್ಪೆ ತೆಗೆದು ತಿನ್ನುವುದರಿಂದ ಹೆಚ್ಚು ಭರವಸೆ ಹೊಂದಬಹುದು.

Continue Reading

ಆರೋಗ್ಯ

Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

Multivitamins: ನಮ್ಮಿಷ್ಟಕ್ಕೆ ಬೇಕಾದಂತೆ ವಿಟಮಿನ್‌ ಪೂರಕಗಳನ್ನು ಸೇವಿಸುವ ಖಯಾಲಿ ಹೆಚ್ಚುತ್ತಿದೆ. ಆದರೆ ನಮಗೆ ಕೊರತೆ ಇದೆಯೆಂದು ತಿಳಿಯುವುದು ಹೇಗೆ? ಶರೀರವು ಇದಕ್ಕೆ ಹಲವು ರೀತಿಯಲ್ಲಿ ಸೂಚನೆಗಳನ್ನು ನೀಡುತ್ತದೆ. ಕೂದಲು ಉದುರುವುದು, ಉಗುರು ಪದೇಪದೆ ಮುರಿಯುವುದು, ಚರ್ಮದ ಹೊಳಪು ಮಾಯವಾಗುವುದು, ಆಗಾಗ ಕಾಡುವ ಸೋಂಕು, ಬಾಯಿ ಹುಣ್ಣು ಇತ್ಯಾದಿಗಳನ್ನು ಏನೆಂದು ಗ್ರಹಿಸಬೇಕು ನಾವು ಎಂಬುದು ಗೊತ್ತೇ?

VISTARANEWS.COM


on

Multivitamins
Koo

ವಿಟಮಿನ್‌ ಮತ್ತು ಖನಿಜಗಳು (Multivitamins) ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಅಂಶಗಳು. ಅವುಗಳ ಕೊರತೆಯಾದರೆ ಅದನ್ನು ಶರೀರ ಹಲವು ಸೂಚನೆಗಳ ಮೂಲಕ ನಮಗೆ ತಿಳಿಸುತ್ತದೆ. ಆದರೆ ನಮಗದು ಅರ್ಥವಾಗಬೇಕಲ್ಲ? ಯಾಕೋ ಕೂದಲು ಉದುರುತ್ತಿದೆ ಎಂದು ಅಲವತ್ತುಕೊಳ್ಳುತ್ತೇವೆ; ಚರ್ಮಕ್ಕೆ ಹೊಳಪಿಲ್ಲ ಎಂದು ಗೊಣಗುತ್ತಾ ಏನೇನೋ ಕ್ರೀಮ್‌ ಬಳಿದುಕೊಳ್ಳುತ್ತೇವೆ; ಬಾಯಲ್ಲಿ ಹುಣ್ಣಾಗಿ ಒದ್ದಾಡುತ್ತೇವೆ; ದಿನವಿಡೀ ಶಕ್ತಿಯೇ ಇಲ್ಲದೆ ಪರದಾಡುತ್ತೇವೆ. ಇಷ್ಟಾದರೂ ನಮ್ಮ ಶರೀರ ನಮಗೇನು ಹೇಳುತ್ತಿದೆ ಎನ್ನುವುದನ್ನೇ ನಾವು ಕೇಳಿಸಿಕೊಳ್ಳುವುದಿಲ್ಲ. ನಮಗೆ ಬೇಕಾದ ಸತ್ವಗಳನ್ನು ನಾವು ಆಹಾರದ ಮೂಲಕವೇ ತೆಗೆದುಕೊಳ್ಳಬೇಕಾದ್ದು ಸರಿಯಾದ ಕ್ರಮ. ಆದರೆ ವಿಟಮಿನ್‌ಗಳು ಅಗತ್ಯವಿರುವ ಪ್ರಮಾಣಕ್ಕೂ, ಈಗ ದೊರೆಯುತ್ತಿರುವ ಪ್ರಮಾಣಕ್ಕೂ ಬಹಳ ವ್ಯತ್ಯಾಸವಿದ್ದರೆ, ಅದನ್ನು ಸರಿದೂಗಿಸಲು ಕೆಲ ದಿನಗಳ ಮಟ್ಟಿಗೆ ವೈದ್ಯರು ಮಲ್ಟಿವಿಟಮಿನ್‌ಗಳನ್ನು ಪೂರಕಗಳ ರೂಪದಲ್ಲಿ ನೀಡುವುದು ಸಾಮಾನ್ಯ. ಕೆಲವೇ ತಿಂಗಳ ಕಾಲ ಇದನ್ನು ನೀಡಿ, ನಂತರ ಆಹಾರದಲ್ಲೇ ಸತ್ವಗಳು ದೊರೆಯಬೇಕೆಂದು ಹೇಳುವುದೂ ಸಾಮಾನ್ಯ. ಆದರೆ ನಮಗೆ ಪೂರಕಗಳು ಅಗತ್ಯ ಎಂಬುದನ್ನು ನಾವು ತಿಳಿದುಕೊಳ್ಳುವುದು ಹೇಗೆ? ಇದಕ್ಕಾಗಿ ಏನನ್ನು ಗ್ರಹಿಸಬೇಕು ನಾವು?

Supplement Vitamin Multivitamin Health Herbal Alternative Antioxidant
Supplement Vitamin Multivitamin Health Herbal Alternative Antioxidant

ಈ ಸೂಚನೆಗಳನ್ನು ಗ್ರಹಿಸಿ

  • ಕೂದಲು ಬುಡದಿಂದ ಉದುರುತ್ತಿದೆ ಎಂದಾದರೆ ವಿಟಮಿನ್‌ ಬಿ3, ಬಿ7 ಗಳ ಕೊರತೆ ಇರಬಹುದು.
  • ಉಗುರು ಮತ್ತು ಕೂದಲುಗಳು ಅರ್ಧಕ್ಕೆ ತುಂಡಾಗುತ್ತಿವೆ ಎಂದಾದರೆ ಬಿ7 ಜೀವಸತ್ವ ಅಥವಾ ಬಯೋಟಿನ್‌ ಕೊರತೆಯಾಗಿರಬಹುದು
  • ಬಾಯಲ್ಲಿ ಹುಣ್ಣುಗಳಾಗುತ್ತಿದೆ ಎಂದಾದರೆ ವಿಟಮಿನ್‌ ಬಿ1, ಬಿ2, ಬಿ6 ಗಳ ಪೈಕಿ ಎಲ್ಲವೂ ಅಥವಾ ಯಾವುದಾದರೂ ಜೀವಸತ್ವಗಳು ಕಡಿಮೆ ಇರಬಹುದು
  • ಇರುಳುಗಣ್ಣಿನಿಂದ ಹಿಡಿದು ದೃಷ್ಟಿಯ ಯಾವುದೇ ದೋಷಗಳಿದ್ದರೂ ಎ ಜೀವಸತ್ವದ ಮಟ್ಟ ಕಡಿಮೆಯಾಗಿರುವ ಸೂಚನೆ
  • ಚರ್ಮದ ಮೇಲೆ ಬಿಳಿ ಅಥವಾ ಕೆಂಪು ಗುರುತುಗಳು ಕಾಣುತ್ತಿದ್ದರೆ ವಿಟಮಿನ್‌ ಎ ಮತ್ತು ಸಿ ಕೊರತೆಯಾಗಿರುವ ಸಾಧ್ಯತೆ ಇರುತ್ತದೆ.
  • ಪದೇಪದೆ ಸೋಂಕುಗಳು ಕಾಡುತ್ತಿವೆ ಎಂದಾದರೆ ವಿಟಮಿನ್‌ ಸಿ ಬೇಕಾಗಿದೆ ಎಂದರ್ಥ

ಹೀಗೆನ್ನುತ್ತಿದ್ದಂತೆ ಈ ವಿಟಮಿನ್‌ಗಳ ಪೂರಕಗಳನ್ನು ಏಕ್‌ದಂ ಖರೀದಿಸಿ ಗುಳುಂ ಮಾಡುವುದಲ್ಲ. ಕಾರಣ, ಪ್ರತಿಯೊಂದು ಸೂಕ್ಷ್ಮ ಪೋಷಕಾಂಶಗಳಿಗೂ ಅದರದ್ದೇ ಆದ ನಿಗದಿತ ಮಟ್ಟವಿದೆ. ಅದನ್ನು ಮೀರಿ, ಏನಕ್ಕೇನೋ ಪೂರಕಗಳನ್ನು ತಿನ್ನುವಂತಿಲ್ಲ. ಅದಕ್ಕೆ ಅಡ್ಡ ಪರಿಣಾಮಗಳಿದ್ದು ಹೊಟ್ಟೆ ಬುಡಮೇಲಾಗಬಹುದು; ಪಿತ್ತಕೋಶವನ್ನೂ ಸಂಕಷ್ಟಕ್ಕೆ ದೂಡಬಹುದು. ಈ ಸತ್ವಗಳ ಕೊರತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ವೈದ್ಯರು ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹೇಳಬಹುದು. ಯಾವ ಪೋಷಕಾಂಶಗಳು, ಎಷ್ಟು ಕೊರತೆಯಾಗಿದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕೆ ಇದೇ ಸರಿಯಾದ ಮಾರ್ಗ. ಉದಾ, ಕ್ಯಾಲ್ಶಿಯಂ ಹೀರಿಕೊಳ್ಳುವುದಕ್ಕೆ ಬೇಕಾಗುವ ವಿಟಮಿನ್‌ ಡಿ ಅಂಶ ದಿನಕ್ಕೆ ೧೫ ಮೈಕ್ರೋಗ್ರಾಂ ಗಳಷ್ಟು ಇದ್ದರೆ ಸಾಕಾಗುತ್ತದೆ. ಈ ಪ್ರಮಾಣ ಎಲ್ಲರಿಗೂ ಅಲ್ಲ, 19-70ರ ವಯೋಮಾನದವರಿಗೆ. 70ರ ಮೇಲ್ಪಟ್ಟವರಿಗೆ 20 ಮೈಕ್ರೋಗ್ರಾಂ ಬೇಕಾಗುತ್ತದೆ. ವಿಟಮಿನ್‌ ಸಿ ಮಾತ್ರೆಗಳನ್ನು ತೆಗೆದುಕೊಳ್ಳುವಾಗಲೂ, ಮಹಿಳೆಯರಿಗೆ ದಿನಕ್ಕೆ 75 ಮಿಲಿಗ್ರಾಂ, ಪುರುಷರಿಗೆ ದಿನಕ್ಕೆ 90 ಮಿಲಿಗ್ರಾಂ ಸಾಕು ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಆಹಾರದ ಮೂಲಕವೇ ಏಕೆ?

ಮಾತ್ರೆಗಳ ರೂಪದಲ್ಲಿ ವಿಟಮಿನ್‌ ಖನಿಜಗಳೆಲ್ಲ ದೊರೆಯುವಾಗ, ಆಹಾರದಲ್ಲೇ ಕಷ್ಟಪಟ್ಟುಕೊಂಡು ಏಕೆ ಸೇವಿಸಬೇಕು? ಸುಮ್ಮನೆ ಮಾತ್ರೆ ನುಂಗಿದರೆ ಅಥವಾ ಟಾನಿಕ್‌ ಕುಡಿದರೆ ಆಗದೇ? ಈ ಮಾತ್ರೆಗಳಿಗಿಂತ ಸುಲಭವಾಗಿ ಆಹಾರದ ಮೂಲಕ ನೀಡುವುದನ್ನು ನಮ್ಮ ಶರೀರ ಹೀರಿಕೊಳ್ಳುತ್ತದೆ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ! ಅದರಲ್ಲೂ ಆಯಾ ಋತುಮಾನದಲ್ಲಿ ದೊರೆಯುವ ಹಣ್ಣು, ತರಕಾರಿಗಳೇ ಅಗತ್ಯ ಪೋಷಕಾಂಶಗಳು ಅತ್ತ್ಯುತ್ತಮ ಮೂಲ. ಕೊರತೆ ಇದ್ದಾಗ ಮಾತ್ರವೇ ಪೂರಕಗಳ ಮೊರೆ ಹೋಗಬೇಕೆ ವಿನಹ ಸದಾ ಕಾಲ ಅದನ್ನು ತಿನ್ನುವಂತಿಲ್ಲ. ಮಲ್ಟಿವಿಟಮಿನ್‌ಗಳನ್ನಾದರೂ ವೈದ್ಯರ ಸೂಚನೆ ಇಲ್ಲದೆ ಸೇವಿಸುವುದು ಸಂಕಷ್ಟಕ್ಕೆ ದಾರಿಯಾದೀತು.

Continue Reading

ಆರೋಗ್ಯ

Health Tips: ಬಿಸಿ ಕಾಫಿಗೆ ಬಾಯಿ ಸುಟ್ಟಿತೇ? ಇಲ್ಲಿದೆ ಉಪಶಮನ!

Health Tips: ಸಂಜೆ ಮಳೆ ಬರುವ ಸಮಯಕ್ಕೆ ಸುಡುವ ಕಾಫಿ ಜೊತೆಗೆ ಬಿಸಿ ಬೋಂಡಾ ತಿನ್ನುವ ಮನಸ್ಸಾದರೆ ಅಚ್ಚರಿಯಿಲ್ಲ. ಆದರೆ ಈ ಹೊತ್ತಿಗೆ ಬಾಯಿ ಸುಟ್ಟುಕೊಳ್ಳುವ ಸಾಧ್ಯತೆಗಳೂ ಹೆಚ್ಚು! ಬಾಯಿ ಸುಡುವುದಕ್ಕೆ, ಬಜ್ಜಿ-ಬೋಂಡಾ ಆಗಬೇಕೆಂದಿಲ್ಲ, ಬಿಸಿಯಾದ ಅನ್ನ-ತಿಳಿ ಸಾರಾದರೂ ಸಾಕಾಗುತ್ತದೆ. ಇವೆಲ್ಲವೂ ವಾರದೊಳಗೆ ಕಡಿಮೆ ಆಗುವುದು ಹೌದಾದರೂ, ಸುಟ್ಟ ಉರಿ ತಡೆಯುವುದಕ್ಕೆ, ನೋವಿನ ಉಪಶಮನಕ್ಕೆ ಏನನ್ನಾದರೂ ತ್ವರಿತವಾಗಿ ಮಾಡಬಹುದೇ? ಇಲ್ಲಿದೆ ಪರಿಹಾರ.

VISTARANEWS.COM


on

Tea vs Coffee
Koo

ಸಂಜೆ ಐದರ ಮಳೆಯ ಹೊತ್ತಿಗೆ (Health Tips) ಬಿಸಿಯಾಗಿ ಕಾಫಿ/ ಚಹಾ ಹೀರಬೇಕೆಂಬ ಮನಸ್ಸಾಗಿದೆ. ನಿಮಗೆ ಬೇಕೆಂದಲ್ಲ, ಮಳೆಗೆ ಬೇಕೆಂದು ಕಾಫಿ ಕುಡಿಯುವಾಗ ಬಿಸಿಯಾಗಿಲ್ಲದಿದ್ದರೆ ಹೇಗೆ? ಸುಡುವ ಕಾಫಿ ಹೀರುವಾಗ ನಾಲಿಗೆ ಕೆಲವೊಮ್ಮೆ ʻಚುರ್‌…ʼ ಆಗುತ್ತದೆ. ಅದರಲ್ಲೂ ಕೊಂಚ ಸಿಹಿ ಹೆಚ್ಚಿರುವ ಮತ್ತು ಮಂದವಾಗಿರುವ ಬಿಸಿ ಪಾನೀಯಗಳು ಮರೆಯದೇ ನಾಲಿಗೆ ಸುಡುತ್ತವೆ! ಉದಾ, ಖೀರು, ಗಂಜಿ ತಿಳಿಗಳೆಲ್ಲ ಇದೇ ಸಾಲಿಗೆ ಸೇರಿದವು. ಒಮ್ಮೆ ಇವುಗಳಿಂದ ಬಾಯಿ, ನಾಲಿಗೆ ಅಥವಾ ಗಂಟಲನ್ನು ಸುಟ್ಟುಕೊಂಡರೆ, ಸರಿಯಾಗುವುದಕ್ಕೆ ನಾಲ್ಕಾರು ದಿನಗಳು ಬೇಕು. ಅದಷ್ಟೂ ದಿನ ಬಾಯಿ ದೊರಗಾಗಿ, ಉರಿಯುವುದು ಮಾತ್ರವಲ್ಲ, ಬೊಬ್ಬೆಗಳೂ ಎದ್ದು, ತಿನ್ನುವ ಇತರ ವಸ್ತುಗಳ ರುಚಿಯೂ ತಿಳಿಯದೆ ಒದ್ದಾಡಬೇಕಾಗುತ್ತದೆ. ಇವೆಲ್ಲವೂ ವಾರದೊಳಗೆ ಕಡಿಮೆ ಆಗುವುದು ಹೌದಾದರೂ, ಸುಟ್ಟ ಉರಿ ತಡೆಯುವುದಕ್ಕೆ, ನೋವಿನ ಉಪಶಮನಕ್ಕೆ ಏನನ್ನಾದರೂ ತ್ವರಿತವಾಗಿ ಮಾಡಬಹುದೇ?

Ice Cubes Stacked Isolated
aloe vera

ಐಸ್‌ ಹಾಕಿ

ಖಂಡಿತವಾಗಿ! ಬಾಯಿ ಸುಟ್ಟ ನೋವಿನ ಉಪಶಮನಕ್ಕೆ ಹಲವು ರೀತಿಯ ಮನೆಮದ್ದುಗಳನ್ನು ಪ್ರಯೋಗಿಸಬಹುದು. ಇವು ಆ ಹೊತ್ತಿನ ನೋವನ್ನು ಕಡಿಮೆ ಮಾಡುವುದರ ಜೊತೆಗೆ, ಬೇಗನೆ ಗುಣ ಆಗುವುದಕ್ಕೂ ನೆರವಾಗುತ್ತವೆ. ಬಿಸಿ ಆಹಾರ ಬಾಯಿ ಸುಡುತ್ತಿದ್ದಂತೆಯೇ ತಕ್ಷಣವೇ ತಣ್ಣೀರಿನಿಂದ ಬಾಯಿ ಮುಕ್ಕಳಿಸಿ, ಫ್ರಿಜ್‌ನಲ್ಲಿ ಐಸ್‌ ಇದ್ದರೆ, ಅದನ್ನೂ ಬಾಯಿಗೆ ಹಾಕಿಕೊಳ್ಳಬಹುದು. ಐಸ್‌ ಹಾಕುವುದರಿಂದ ಸುಡುತ್ತಾ ಹೋಗುವುದನ್ನು ತಕ್ಷಣ ನಿಲ್ಲಿಸಬಹುದು. ಜೊತೆಗೆ, ಕೆಂಪಾಗಿ ಊತ ಬರುವುದನ್ನೂ ತಡೆಯಬಹುದು.

ಮೊಸರು, ಹಾಲು

ತಂಪಾದ ಹಾಲನ್ನು ಬಾಯಿಗೆ ತುಂಬಿಸಿಕೊಳ್ಳುವುದು ಒಳ್ಳೆಯ ಉಪಾಯ. ಕೊಂಚವೂ ಹುಳಿಯಿಲ್ಲದ ಮೊಸರು ಇದ್ದರೆ ಅದೂ ಸಹ ಸುಟ್ಟ ಉರಿಯನ್ನು ತಂಪಾಗಿಸುತ್ತದೆ. ಮಾತ್ರವಲ್ಲ, ಈ ಡೇರಿ ಉತ್ಪನ್ನಗಳು ಸುಟ್ಟ ಗಾಯಗ ಸುತ್ತಲೂ ರಕ್ಷಣಾ ಕವಚವೊಂದನ್ನು ನಿರ್ಮಿಸಿ, ಈ ಗಾಯ ಗುಣವಾಗುವವರೆಗೆ ಆರೈಕೆ ಮಾಡುತ್ತವೆ.

honey
aloe vera

ಜೇನುತುಪ್ಪ

ಇದರಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಸುಟ್ಟ ಜಾಗದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಪ ಪ್ರಮಾಣದ ಜೇನು ತುಪ್ಪವನ್ನು ನೇರವಾಗಿ ಬಾಯೊಳಗಿನ ಸುಟ್ಟ ಭಾಗಕ್ಕೆ ಲೇಪಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಬಹುದು. ಬ್ಯಾಕ್ಟೀರಿಯ ವಿರೋಧಿ ಗುಣಗಳೂ ಜೇನುತುಪ್ಪಕ್ಕೆ ಇರುವುದರಿಂದ, ಸುಟ್ಟ ಜಾಗಕ್ಕೆ ಸೋಂಕಾಗದಂತೆ ತಡೆಯುತ್ತದೆ.

aloe vera

ಲೋಳೆಸರ

ಇದಕ್ಕೆ ಅಂಗಡಿಯಿಂದ ತಂದ ಅಲೋವೇರಾ ಜೆಲ್‌ ಬದಲು, ನಿಜವಾದ ಲೋಳೆಸರದ ಜೆಲ್‌ ಲೇಪಿಸುವುದು ಸೂಕ್ತ. ಅಂಗಡಿಯ ಜೆಲ್‌ಗಳಲ್ಲಿ ಪ್ರಿಸರ್ವೇಟಿವ್‌ ಅಥವಾ ಇನ್ನಾವುದಾದರೂ ರಾಸಾಯನಿಕಗಳು ಸೇರಿರಬಹುದು. ಇದರಿಂದ ಸುಟ್ಟ ಗಾಯಗಳಿಗೆ ಉಪಕಾರಕ್ಕಿಂತ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಕೇವಲ ನಾಲಿಗೆ ಸುಟ್ಟಿದ್ದಕ್ಕೆಂದಲ್ಲ, ಯಾವುದೇ ಸುಟ್ಟ ಗಾಯಕ್ಕೆ ನಿಜವಾದ ಲೋಳೆಸರದ ಜೆಲ್‌ ಅನುಕೂಲವಾದೀತು. ಉರಿ ಶಮನ ಮಾಡಿ, ಬೇಗನೇ ಗುಣವಾಗಲು ನೆರವಾಗುತ್ತವೆ.

ಉಪ್ಪು ನೀರಿನ ಗಾರ್ಗಲ್‌

ಮೊದಲಿಗೆ ಹಾಲಿಗೆ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ಸುಟ್ಟ ಭಾಗಕ್ಕೆ ನೇರವಾಗಿ ಲೇಪಿಸಿ. ಉರಿ ಕಡಿಮೆಯಾದ ನಂತರ ಬೆಚ್ಚಗಿನ ನೀರಿಗೆ ಉಪ್ಪ ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸಿ ಅಥವಾ ಗಾರ್ಗಲ್‌ ಮಾಡಿ. ಇದರಿಂದ ಉರಿ ಕಡಿಮೆಯಾಗಿ, ಊತವೂ ತಗ್ಗುತ್ತದೆ. ಇದನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಮಾಡಬಹುದು.

ಇದನ್ನೂ ಓದಿ: Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ

ಇವು ಬೇಡ

ನಾಲಿಗೆ/ ಬಾಯಿ/ ಗಂಟಲು ಸುಟ್ಟ ಉರಿ ಕಡಿಮೆಯಾಗುವವರೆಗೂ ತೀಕ್ಷ್ಣವಾದ ರುಚಿಗಳನ್ನು ದೂರ ಇಡಿ. ಇಷ್ಟಾದ ಮೇಲೆ ಇನ್ನೂ ಸುಡು ಬಿಸಿಯನ್ನೇ ಸೇವಿಸುತ್ತಿದ್ದರೆ ಕಷ್ಟ! ತೀವ್ರ ಹುಳಿ ಅಥವಾ ಖಾರದ ಆಹಾರಗಳು ಸುಟ್ಟ ಭಾಗದಲ್ಲಿ ಉರಿಯನ್ನು ಬಡಿದೆಬ್ಬಿಸುತ್ತವೆ. ಈ ವಿಷಯದಲ್ಲಿ ಉಪ್ಪೇನೂ ಕಡಿಮೆಯಿಲ್ಲ, ಹಾಗಾಗಿ ನಿಮ್ಮ ಗಾಯಕ್ಕೆ ನೀವೇ ಉಪ್ಪು ಸವರಿಕೊಳ್ಳಬೇಡಿ. ಸುಟ್ಟ ಗಾಯ ಗುಣವಾಗುವುದನ್ನು ಆಲ್ಕೋಹಾಲ್‌ ಮುಂದೂಡುತ್ತದೆ. ಜೊತೆಗೆನಾಲಿಗೆಯ ಕಿರಿಕಿರಿಯನ್ನು ಹೆಚ್ಚಿಸುತ್ತದೆ.

Continue Reading
Advertisement
Bengaluru Roads
ಕರ್ನಾಟಕ4 mins ago

Bengaluru Roads: ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರಿಂದಲೇ ಮನವಿ!

Wildlife
ಪರಿಸರ4 mins ago

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

Karnataka Rain
ಮಳೆ11 mins ago

Karnataka Rain: ಗಂಗಾವತಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಭತ್ತದ ಗದ್ದೆಗಳಿಗೆ ಹಾನಿ

Gold Rate
ಪ್ರಮುಖ ಸುದ್ದಿ13 mins ago

Gold Rate : ಬೆಲೆ ಏರಿಕೆ ಪರಿಣಾಮ; ಏಪ್ರಿಲ್-ಜುಲೈನಲ್ಲಿ ಚಿನ್ನದ ಆಮದು ಶೇ.4.23ರಷ್ಟು ಇಳಿಕೆ

Viral Video
Latest18 mins ago

‌Richard Lugner: ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

Viral News
Latest25 mins ago

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Sexual Abuse
Latest33 mins ago

Sexual Abuse: ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

Paris Paralympics
ಪ್ರಮುಖ ಸುದ್ದಿ50 mins ago

Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

karnataka Weather Forecast
ಮಳೆ1 hour ago

Karnataka Weather : ಇಂದು ಧ್ವಜಾರೋಹಣ ಆಯ್ತು, ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೂ ಮಳೆ ಅಡ್ಡಿ; ಬೆಂಗಳೂರು ಸೇರಿ ಕರಾವಳಿ, ಮಲೆನಾಡಿಗೆ ಅಲರ್ಟ್‌

Electric Shock
ಕರ್ನಾಟಕ1 hour ago

Electric Shock: ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹೋಗುವಾಗ ವಿದ್ಯುತ್ ತಗುಲಿ ವಿದ್ಯಾರ್ಥಿ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌