Health Scheme : ಮನೆ ಮನೆಯತ್ತ ಡಾಕ್ಟರ್‌ - ಔಷಧ ಕಿಟ್;‌ ಜಾರಿಯಾಗಲಿದೆ ಗೃಹ ಆರೋಗ್ಯ ಯೋಜನೆ - Vistara News

ಆರೋಗ್ಯ

Health Scheme : ಮನೆ ಮನೆಯತ್ತ ಡಾಕ್ಟರ್‌ – ಔಷಧ ಕಿಟ್;‌ ಜಾರಿಯಾಗಲಿದೆ ಗೃಹ ಆರೋಗ್ಯ ಯೋಜನೆ

Health Scheme : ಕರ್ನಾಟಕದಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಗೃಹ ಆರೋಗ್ಯ ಯೋಜನೆಯ ಲಾಭ ಸಿಗಲಿದೆ. ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಮತ್ತು ಪರೀಕ್ಷೆ ನಡೆಸಿ ಅಗತ್ಯವಿದ್ದವರಿಗೆ ಔಷಧ ಕಿಟ್‌ಗಳನ್ನು ನೀಡಲಾಗುತ್ತದೆ. ಈ ಯೋಜನೆ ಈಗ ಅನುಮೋದನೆ ಹಂತದಲ್ಲಿದ್ದು, ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Gruha Arogya Scheme in Karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈಗಾಗಲೇ ಪೂರ್ಣ ಬಹುಮತಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರವು ನಾಲ್ಕು ಗ್ಯಾರಂಟಿ ಯೋಜನೆಯನ್ನು (Congress Guarantee Scheme) ಜಾರಿಗೊಳಿಸಿದೆ. ಐದನೇ ಗ್ಯಾರಂಟಿಯಾಗಿರುವ ಯುವ ನಿಧಿಯನ್ನು ಡಿಸೆಂಬರ್‌ನಲ್ಲಿ ಜಾರಿಗೊಳಿಸುವುದಾಗಿ ಹೇಳಿದೆ. ಈ ಮೂಲಕ ಜನಮನ್ನಣೆ ಪಡೆಯುತ್ತಿರುವ ಸರ್ಕಾರವು ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯದಲ್ಲಿ ಮತ್ತೊಂದು ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯನ್ನು (Health Scheme) ಜಾರಿಗೆ ತರಲು ಮುಂದಾಗಿದೆ. ಗೃಹ ಆರೋಗ್ಯ ಯೋಜನೆ (Gruha Arogya Scheme) ಮೂಲಕ ಮನೆ ಮನೆಗೆ ತೆರಳಿ ಆರೋಗ್ಯ ಭಾಗ್ಯವನ್ನು ನೀಡಲು ಚಿಂತನೆ ನಡೆಸಲಾಗಿದೆ.

ಕರ್ನಾಟಕದಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಸಾಂಕ್ರಾಮಿಕವಲ್ಲದ ರೋಗಗಳ (Non communicable diseases) ತಪಾಸಣೆ ಮತ್ತು ಪರೀಕ್ಷೆ ನಡೆಸಿ ಅಗತ್ಯವಿದ್ದವರಿಗೆ ಔಷಧ ಕಿಟ್‌ಗಳನ್ನು (Medicine kit) ನೀಡಲಾಗುತ್ತದೆ. ಈ ಯೋಜನೆ ಈಗ ಅನುಮೋದನೆ ಹಂತದಲ್ಲಿದ್ದು, ಸಚಿವ ಸಂಪುಟದಲ್ಲಿ (Cabinet meeting) ಒಪ್ಪಿಗೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Karnataka Drought : 15 ದಿನದೊಳಗೆ ಫ್ರೂಟ್ಸ್‌ನಲ್ಲಿ ಮಾಹಿತಿ ನೀಡದಿದ್ದರೆ ರೈತರಿಗಿಲ್ಲ ಬರ ಪರಿಹಾರ!

9 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ

ಈ ಗೃಹ ಆರೋಗ್ಯ ಯೋಜನೆಯನ್ನು ಪ್ರಾಥಮಿಕ ಹಂತದಲ್ಲಿ ನಾಲ್ಕು ವಿಭಾಗಗಳಲ್ಲಿ 9 ಜಿಲ್ಲೆಗಳಲ್ಲಿ ಜಾರಿ ಮಾಡಲುನಿರ್ಧಾರ ಮಾಡಲಾಗಿದೆ. ತುಮಕೂರು, ರಾಮನಗರ, ಗದಗ, ಬೆಳಗಾವಿ, ಬಳ್ಳಾರಿ, ಕಲಬುರಗಿ, ಯಾದಗಿರಿ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳ್ಳಲಿದೆ. ಇಲ್ಲಿನ ಯಶಸ್ಸಿನ ಬಳಿಕ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

2024ರ ಜನವರಿ ವೇಳೆಗೆ ಮೊದಲ ಹಂತದ ತಪಾಸಣೆ ಕಾರ್ಯವನ್ನು ಆರೋಗ್ಯ ಅಧಿಕಾರಿಗಳ ತಂಡ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಜತೆಗೆ ಔಷಧ ಖರೀದಿ ಪ್ರಕ್ರಿಯೆಯನ್ನು ಆರಂಭಿಸುವ ನಿರೀಕ್ಷೆ ಇದೆ.

ತಂಡದಲ್ಲಿ ಯಾರು ಇರಲಿದ್ದಾರೆ?

ಸಮುದಾಯ ಆರೋಗ್ಯ ಅಧಿಕಾರಿ (CHO), ಆಶಾ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಅಧಿಕಾರಿಗಳನ್ನು ಒಳಗೊಂಡಂತೆ ಎರಡರಿಂದ ನಾಲ್ಕು ಜನರ ತಂಡವು ಇದರಡಿ ಕಾರ್ಯನಿರ್ವಹಣೆ ಮಾಡಲಿವೆ. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿ ಈ ಯೋಜನೆಯು ಜಾರಿಗೆ ಬರುತ್ತಲಿದೆ.

ಎಷ್ಟು ಅನುದಾನ ಮೀಸಲು?

ಸಚಿವ ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ದೊರೆತರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 69.15 ಕೋಟಿ ರೂಪಾಯಿ ಅನುದಾನ ಮತ್ತು 15ನೇ ಹಣಕಾಸು ಆಯೋಗದಿಂದ 13.27 ಕೋಟಿ ರೂಪಾಯಿ ಅನುದಾನ ದೊರೆಯಲಿದೆ. ಈ ಅನುದಾನದಿಂದ ಅಗತ್ಯ ಔಷಧ ಮತ್ತು ಪರೀಕ್ಷಾ ಸಾಧನಗಳ ಖರೀದಿ ಹಾಗೂ ಸಿಬ್ಬಂದಿಯ ಓಡಾಟ ವೆಚ್ಚ ಸೇರಿದಂತೆ ಇತರ ಖರ್ಚನ್ನು ನೋಡಿಕೊಳ್ಳಲಾಗುತ್ತದೆ.

ಕಾರ್ಯನಿರ್ವಹಣೆ ಹೇಗೆ?

ಪ್ರತಿ ಆರೋಗ್ಯ ಮತ್ತು ಕಲ್ಯಾಣ ಕೇಂದ್ರದ (HWC) ತಂಡಗಳು ಕಾರ್ಯನಿರ್ವಹಣೆ ಮಾಡಲಿದೆ. 16 ವಾರಗಳ ಕಾಲ ಕಾರ್ಯನಿರ್ವಹಣೆ ಮಾಡಲಿದ್ದು, ಸೋಮವಾರ, ಬುಧವಾರ ಮತ್ತು ಶುಕ್ರವಾರ ಮನೆ ಮನೆಗೆ ಭೇಟಿ ಸಮಯವನ್ನು ನಿಗದಿ ಮಾಡಲಾಗಿದೆ. ಈ ತಂಡಗಳು ತಲಾ 20 ಮನೆಗಳಿಗೆ ಭೇಟಿ ನೀಡಲಿವೆ. ಪ್ರತಿ ಆರೋಗ್ಯ ಮತ್ತು ಕಲ್ಯಾಣ ಕೇಂದ್ರದ ವತಿಯಿಂದ 1,000 ಮನೆಗಳನ್ನು ಒಳಗೊಂಡಿದೆ.

ಈ ವೇಳೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ 30 ವರ್ಷ ಮೇಲ್ಪಟ್ಟವರ ರೋಗ ಲಕ್ಷಣ ಗುರುತಿಸಿ ಅಗತ್ಯಬಿದ್ದರೆ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ ಮತ್ತು ಗರ್ಭಕಂಠ, ಸ್ತನ ಮತ್ತು ಬಾಯಿಯ ಕ್ಯಾನ್ಸರ್‌ಗಳಂತಹ ರೋಗಗಳು ದೃಢಪಟ್ಟರೆ ಮೂರು ತಿಂಗಳವರೆಗಿನ ಔಷಧ ಕಿಟ್‌ ಅನ್ನು ನೀಡಲಾಗುತ್ತದೆ.

ರೋಗಿಗಳ ದತ್ತಾಂಶ ಸಂಗ್ರಹ

ಸಮುದಾಯ ಆರೋಗ್ಯ ಕೇಂದ್ರಗಳ ಆರೋಗ್ಯಾಧಿಕಾರಿಗಳು NCD (ಸಾಂಕ್ರಾಮಿಕವಲ್ಲದ ರೋಗಗಳು) ಪೋರ್ಟಲ್‌ನಲ್ಲಿ ತಮ್ಮ ಭೇಟಿ ವೇಳೆ ಕಂಡು ಬಂದ ಪಾಸಿಟಿವ್‌ ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮಗೆ ಕೊಡಲಾದ ABHA ID ಸಹಾಯದಿಂದ ಅಪ್ಲೋಡ್‌ ಮಾಡುತ್ತಾರೆ. ಇದು ರೋಗಿಗಳ ಸ್ಥಿತಿಗತಿಯನ್ನು ಸೂಚಿಸುವುದಲ್ಲದೆ, ಅವರಿಗೆ ಇರುವ ಔಷಧ ಪೂರೈಕೆಯ ಅಗತ್ಯತೆಯನ್ನು ಮನಗಾಣಲು ಸಹಾಯವಾಗುತ್ತದೆ. ಇನ್ನು ಅಂಥವರ ಮನೆಯ ಗೋಡೆಗಳಿಗೆ ಗೃಹ ಆರೋಗ್ಯ ಸ್ಟಿಕ್ಕರ್‌ಗಳನ್ನು ಸಹ ಅಂಟಿಸಲಾಗುತ್ತದೆ.

ಇದನ್ನೂ ಓದಿ : NPS Cancellation : ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ರದ್ದು? ಆರ್ಥಿಕ ಇಲಾಖೆ ಜತೆ ಶೀಘ್ರ ಸಿದ್ದರಾಮಯ್ಯ ಸಭೆ

ಆರೋಗ್ಯ ಅಧಿಕಾರಿಗಳಿಗೆ ತರಬೇತಿ

ಗೃಹ ಆರೋಗ್ಯ ಯೋಜನೆಯಡಿ ಕಾರ್ಯನಿರ್ವಹಣೆ ಮಾಡಲು ಎಲ್ಲ ಆರೋಗ್ಯ ಅಧಿಕಾರಿಗಳಿಗೆ ಹಂತ ಹಂತವಾಗಿ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ. ಡಿಸೆಂಬರ್‌ನಲ್ಲಿ ರಾಜ್ಯ ಮಟ್ಟದ ತರಬೇತಿಯನ್ನು ಪ್ರಾರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

Seeds For Men Sexual power: ಒಳ್ಳೆಯ ಆಹಾರ ಸೇವನೆ ಮಾಡುತ್ತಾ, ನಿಯಮಿತ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನ ನಡೆಸುವುದು ವಯಸ್ಸಿನ ಹಂಗಿಲ್ಲದೆ ಬಹಳ ಮುಖ್ಯವಾಗುತ್ತದೆ. ಹೀಗೆ ಪುರುಷರ ಆರೋಗ್ಯಕ್ಕೆ ಪೂರಕವಾಗಿರುವ ಅತ್ಯಂತ ಒಳ್ಳೆಯದನ್ನೇ ಮಾಡುವ ಆಹಾರಗಳ ಪೈಕಿ ಒಣಹಣ್ಣುಗಳು ಹಾಗೂ ಬೀಜಗಳ ಪಾತ್ರವೂ ದೊಡ್ಡದು. ಅದರಲ್ಲೂ, ಸಿಹಿಕುಂಬಳದ ಬೀಜ ಪುರುಷನ ಆರೋಗ್ಯದ ಬಹುದೊಡ್ಡ ಮಿತ್ರ. ಯಾವ ಮಿತ್ರನನ್ನು ಮರೆತರೂ,ಈ ಸಿಹಿಕುಂಬಳದ ಬೀಜಗಳನ್ನು ಮಾತ್ರ ಮರೆಯಬೇಡಿ! ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Seeds For Men Sexual Power
Koo

ಆರೋಗ್ಯದ ವಿಚಾರ ಬಂದಾಗ ಮಹಿಳೆಯರಷ್ಟೇ ಪುರುಷರೂ ಆರೋಗ್ಯದ ಕಾಳಜಿ ವಹಿಸಲೇಬೇಕು. ಏನೇನೂ ಕಾಳಜಿ ವಹಿಸದೆ, ನಮಗೇನಾಗಿದೆ, ನಾವು ಆರಾಮವಾಗಿದ್ದೇವೆ, 50 ವರ್ಷ ದಾಟಿದ ಮೇಲೆ ನೋಡಿಕೊಂಡರಾಯಿತು ಎಂದುಕೊಂಡರೆ, ಅದು ಖಂಡಿತ ನಿಮ್ಮ ಮೂರ್ಖತನ. ಒಳ್ಳೆಯ ಆಹಾರ ಸೇವನೆ ಮಾಡುತ್ತಾ, ನಿಯಮಿತ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನ ನಡೆಸುವುದು ವಯಸ್ಸಿನ ಹಂಗಿಲ್ಲದೆ ಬಹಳ ಮುಖ್ಯವಾಗುತ್ತದೆ. ಹೀಗೆ ಪುರುಷರ ಆರೋಗ್ಯಕ್ಕೆ ಪೂರಕವಾಗಿರುವ ಅತ್ಯಂತ ಒಳ್ಳೆಯದನ್ನೇ ಮಾಡುವ ಆಹಾರಗಳ ಪೈಕಿ ಒಣಹಣ್ಣುಗಳು ಹಾಗೂ ಬೀಜಗಳ ಪಾತ್ರವೂ ದೊಡ್ಡದು. ಅದರಲ್ಲೂ, ಸಿಹಿಕುಂಬಳದ ಬೀಜ ಪುರುಷನ ಆರೋಗ್ಯದ ಬಹುದೊಡ್ಡ ಮಿತ್ರ. ಯಾವ ಮಿತ್ರನನ್ನು ಮರೆತರೂ,ಈ ಸಿಹಿಕುಂಬಳದ ಬೀಜಗಳನ್ನು ಮಾತ್ರ ಮರೆಯಬೇಡಿ! ಬನ್ನಿ, ಈ ಬೀಜಗಳಿಂದ ಪುರುಷರ ಆರೋಕ್ಕಾಗುವ (Seeds For Men Sexual power) ಲಾಭಗಳನ್ನು ತಿಳಿಯೋಣ.

Sweet Couple During Sunset

ಪುರುಷರ ಲೈಂಗಿಕ ಆರೋಗ್ಯ ವೃದ್ಧಿ

ಪುರುಷರ ಲೈಂಗಿಕ ಆರೋಗ್ಯ ಹೆಚ್ಚಿಸುವಲ್ಲಿ ಈ ಬೀಜಗಳು ಮುಖ್ಯ ಕೊಡುಗೆ ನೀಡುತ್ತವೆ. ವಯಸ್ಸಾದಂತೆ ಕೆಲವರಿಗೆ ಆಗುವ ವೃಷಣದ ಹಿಗ್ಗುವುಕೆಯಿಂದಾಗಿ, ಮೂತ್ರವಿಸರ್ಜನೆಯ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ವೃಷಣಗಳಿಗೆ ಶಕ್ತಿ ನೀಡಿ, ಲೈಂಗಿಕ ಹಾರ್ಮೋನಿನ ಉತ್ಪತ್ತಿಯನ್ನು ಸಮತೋಲನೆಗೊಳಿಸುತ್ತದೆ.

ವೀರ್ಯವೃದ್ಧಿ

ಸಿಹಿ ಕುಂಬಳದ ಬೀಜದಲ್ಲಿ ಝಿಂಕ್‌ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಇದು ವೀರ್ಯವೃದ್ಧಿಗೆ ಸಹಾಯ ಮಾಡುತ್ತದೆ. ವೀರ್ಯದ ಸಂಖ್ಯೆಯಲ್ಲಿ ಕೊರತೆ ಕಾಣವು ಮಂದಿಗೆ ಇದು ಅತ್ಯಂತ ಒಳ್ಳೆಯ ಆಹಾರ. ವೀರ್ಯದ ಗುಣಮಟ್ಟವನ್ನೂ ಹೆಚ್ಚಿಸಿ, ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಲೈಂಗಿಕ ಹಾರ್ಮೋನು ಟೆಸ್ಟೋಸ್ಟೀರಾನ್‌ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

ಪ್ರೊಟೀನ್‌ ಮೂಲ

ನಾವು ಸೇವಿಸುವ ಪೋಷಕಾಂಶಗಳ ಜೊತೆಯಲ್ಲಿ ಪ್ರೊಟೀನ್‌ನ ಅಂಶ ಇರುವುದು ಅತ್ಯಂತ ಮುಖ್ಯ. ಪ್ರತಿ 100 ಗ್ರಾಂ ಬೀಜಗಳಲ್ಲಿ 23.3 ಗ್ರಾಂನಷ್ಟು ಪ್ರೊಟೀನ್‌ ಇದ್ದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಕೆ ಮಾಡುತ್ತದೆ. ಹಾಗಾಗಿ, ಪ್ರೊಟೀನ್‌ ಮೂಲಗಳನ್ನು ನೀವು ಹುಡುಕುತ್ತಿದ್ದರೆ, ಇದೂ ಉತ್ತಮ ಆಯ್ಕೆ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

ಉತ್ತಮ ಕೊಬ್ಬು

ನೈಸರ್ಗಿಕ ಎಣ್ಣೆಯಂಶ ಹೊಂದರುವ ಉತ್ತಮ ಕೊಬ್ಬಿನ ಮೂಲ ಈ ಬೀಜಗಳು. ಅತಿಯಾದ ಸೇವನೆ ತೂಕ ಹೆಚ್ಚಿಸುವ ಸಾಧ್ಯತೆ ಇದ್ದರೂ, ನಿತ್ಯವೂ ಸ್ವಲ್ಪ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಲಾಭಗಳನ್ನು ಪಡೆಯಬಹುದು.

May aid heart health Peach Benefits

ಹೃದಯದ ಆರೋಗ್ಯಕ್ಕೆ

ಈ ಬೀಜಗಳಲ್ಲಿ ಪಾಸ್ಪರಸ್‌ ಹೆಚ್ಚಿರುವುದರಿಂದ ಪಚನಕ್ರಿಯೆಗೂ ಇದು ಒಳ್ಳೆಯದು. ಮೆಗ್ನೀಶಿಯಂ ಕೂಡಾ ಉತ್ತಮ ಪ್ರಮಾಣದಲ್ಲಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಒಳ್ಳೆಯದು. ಹೃದಯಕ್ಕೆ ರಕ್ತ ಪಂಪ್‌ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ರಕ್ತನಾಳಗಳ ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

Image Of Mental Health

ಮಾನಸಿಕ ಆರೋಗ್ಯಕ್ಕೆ

ಮಾನಸಿಕ ಆರೋಗ್ಯಕ್ಕೂ ಇದು ಅತ್ಯಂತ ಒಳ್ಳೆಯದು. ಇದರಲ್ಲಿ ಟ್ರಿಪ್ಟೋಫನ್‌ ಹೆಚ್ಚಿರುವುದರಿಂದ ಖಿನ್ನತೆಗೂ ಇದು ಒಳ್ಳೆಯದು.

Continue Reading

ಆರೋಗ್ಯ

Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

Monsoon Hair care: ಮಳೆಯಲ್ಲಿ ಒದ್ದೆಯಾದ ಕೂದಲನ್ನು ಒಣಗಿಸಿಕೊಳ್ಳುವುದಕ್ಕೆಂದು ತಾರಾಮಾರಿ ಉಜ್ಜಬೇಡಿ. ಒದ್ದೆಯಾಗಿರುವ ಚರ್ಮದಿಂದ ಕೂದಲು ಕಿತ್ತು ಬರುವುದಕ್ಕೆ ಇಷ್ಟು ಕಾರಣ ಸಾಕಾಗುತ್ತದೆ. ಇದಲ್ಲದೆ, ಮಳೆಗಾಲದಲ್ಲಿ ಕೂದಲ ಆರೈಕೆಗೆ ಇನ್ನೂ ಏನೇನು ಮಾಡಬೇಕು? ವಿವರ ಇಲ್ಲಿದೆ.

VISTARANEWS.COM


on

Monsoon Hair care
Koo

ಮಳೆಗಾಲವೆಂದರೆ ಕೇವಲ ಶೀತ-ನೆಗಡಿಗಳ ಕಾಲ ಮಾತ್ರವಲ್ಲ, ಚರ್ಮ-ಕೂದಲುಗಳಿಗೂ ಮೋಡ ಮುಸುಕಬಲ್ಲದು. ಚಳಿಗಾಲದಲ್ಲಿ ಮಾತ್ರವೇ ಕೂದಲು ಉದುರುತ್ತದೆ ಎಂದು ಭಾವಿಸಿದರೆ, ಹಾಗೇನಿಲ್ಲ. ಮಳೆಗಾಲವೂ ಕೂದಲು ಉದುರುವುದಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಬಲ್ಲದು. ಮಳೆಗಾಲ ಮಾತ್ರವೇ ಅಲ್ಲ, ಅದರೊಂದಿಗೆ ಆಹಾರದಲ್ಲಿನ ಅಪೌಷ್ಟಿಕತೆ, ಕೂದಲಿಗೆ ಬಳಸುವ ರಾಸಾಯನಿಕಗಳು ಮತ್ತು ಕೃತಕ ಬಣ್ಣಗಳು, ಹಾರ್ಮೋನಿನ ವ್ಯತ್ಯಾಸಗಳೆಲ್ಲ ಕೂದಲು ಉದುರುವುದಕ್ಕೆ ಕಾರಣವಾಗುತ್ತವೆ. ವಾತಾವರಣದಲ್ಲಿರುವ ತೇವಾಂಶವು ತಲೆಯ ಚರ್ಮದ ಮೇಲೂ ಪರಿಣಾಮ ಬೀರಿ, ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಂಟಾಗುವ ಕೂದಲಿನ ತೊಂದರೆಗಳ ಬಗ್ಗೆ (Monsoon Hair care) ಇಲ್ಲಿದೆ ಮಾಹಿತಿ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಂತೆ ಬೆವರುವುದು ಹೆಚ್ಚು. ಇದರಿಂದಾಗಿ ತಲೆಯ ಚರ್ಮಕ್ಕೆ ಉಸಿರಾಡಲಾಗದಂತೆ ಕಟ್ಟಿಕೊಳ್ಳುತ್ತದೆ. ಒಮ್ಮೆ ಈ ಸೂಕ್ಷ್ಮ ಗ್ರಂಥಿಗಳು ಕಟ್ಟಿಕೊಂಡರೆ, ಕೂದಲಿನ ಬುಡವೆಲ್ಲ ಸಡಿಲವಾಗಿ ಉದುರುವುದಕ್ಕೆ ಪ್ರಾರಂಭವಾಗುತ್ತದೆ. ಜೊತೆಗೆ ಮಳೆಯಲ್ಲಿ ತಲೆಗೂದಲು ನೆನೆದರೂ ಸಂಕಟ ತಪ್ಪಿದ್ದಲ್ಲ. ಈ ಎಲ್ಲವುಗಳ ಫಲವಾಗಿ ತಲೆಯ ಚರ್ಮದಲ್ಲಿರುವ ನೈಸರ್ಗಿಕ ತೈಲದಂಶ ಹೊರಟುಹೋಗಿ, ಕೂದಲು ಉದುರುವುದು, ತುಂಡಾಗುವುದು ಸಾಮಾನ್ಯವಾಗುತ್ತದೆ. ಹೀಗಾಗದಂತೆ ತಡೆಯುವುದು ಹೇಗೆ? ಇಲ್ಲಿವೆ ಸಲಹೆಗಳು.

head bath

ಒದ್ದೆಗೂದಲು

ಎಲ್ಲಕ್ಕಿಂತ ಮೊದಲು, ಒದ್ದೆ ಕೂದಲಿನ ಕಾಳಜಿ ಮಾಡುವುದು ಹೇಗೆ ಎನ್ನುವುದನ್ನು ಅರಿಯುವುದು ಮುಖ್ಯ. ಸ್ನಾನ ಮಾಡಿದ ನಂತರ ಕೂದಲು ಒದ್ದೆಯಿರಲಿ ಅಥವಾ ಮಳೆಯಲ್ಲಿ ನೆನೆದು ಒದ್ದೆಯಾಗಿರಲಿ, ಒಣಗಿಸಿಕೊಳ್ಳುವುದಕ್ಕೆಂದು ತಾರಾಮಾರಿ ಉಜ್ಜಬೇಡಿ. ಒದ್ದೆಯಾಗಿರುವ ಚರ್ಮದಿಂದ ಕೂದಲು ಕಿತ್ತು ಬರುವುದಕ್ಕೆ ಇಷ್ಟು ಕಾರಣ ಸಾಕಾಗುತ್ತದೆ. ಅದರಲ್ಲೂ ಒದ್ದೆಗೂದಲನ್ನು ಬಾಚಲೇಬೇಡಿ. ಮೊದಲು ಸ್ವಚ್ಛ ಬಟ್ಟೆಯಲ್ಲಿ ಹಗುರವಾಗಿ ಒರೆಸಿ, ಒಣಗಿಸಿಕೊಳ್ಳಿ. ಇದಕ್ಕಾಗಿ ಸಿಕ್ಕಾಪಟ್ಟೆ ಡ್ರೈಯರ್‌ ಉಪಯೋಗಿಸಿದರೆ ಸಮಸ್ಯೆಗಳು ಹೆಚ್ಚುತ್ತವೆ. ಕೂದಲು ಸುರುಳಿಯಾಗಿ ಸಿಕ್ಕಾಗಿದೆ ಎಂದಾದರೆ, ತುದಿಯಿಂದ ಸಿಕ್ಕುಗಳನ್ನು ಬಿಡಿಸುತ್ತಾ ಬುಡದತ್ತ ಬನ್ನಿ. ಬಾಚಣಿಕೆಯಲ್ಲಿ ಬಲಪ್ರಯೋಗಿಸಿದರೆ ಕೂದಲು ಹೇಗೆಂದರೆ ಹಾಗೆ ಕಿತ್ತು ಬರುತ್ತದೆ. ಮಳೆಯಲ್ಲಿ ನೆನೆದಾಗಲೂ ಕೂದಲನ್ನು ಗಾಳಿಗೆ ಆರಿಸಿಕೊಂಡು ನಂತರವೇ ಬಾಚಿ.

ಸ್ವಚ್ಛ ಮಾಡಿ

ಬೇಸಿಗೆಯಲ್ಲಿ ಬೆವರಿ ಕೊಳೆಯಾಗುವಂತೆ, ಮಳೆಯಲ್ಲೂ ಕೂದಲು ಕೊಳೆಯಾಗುತ್ತದೆ. ಹಾಗಾಗಿ ವಾರಕ್ಕೆರಡು ಬಾರಿ ತಲೆಸ್ನಾನ ಮಾಡುವ ಅಭ್ಯಾಸವನ್ನು ಮುಂದುವರೆಸಿ; ಈವರೆಗೆ ಆ ಅಭ್ಯಾಸ ಇಲ್ಲದಿದ್ದರೆ, ಈಗ ಪ್ರಾರಂಭಿಸಿ. ಇದರಿಂದ ಕೂದಲ ಬುಡಕ್ಕೆ ಮತ್ತು ತಲೆಯ ಚರ್ಮಕ್ಕೆ ತೊಂದರೆ ಕೊಡುವ ಸೂಕ್ಷ್ಮಾಣುಗಳನ್ನು ತೆಗೆಯಬಹುದು. ವಾತಾವರಣದ ಧೂಳು, ಹೊಗೆಯಂಥ ಮಾಲಿನ್ಯವನ್ನು ದೂರ ಮಾಡಬಹುದು. ಹೆಚ್ಚುವರಿ ತೈಲವನ್ನೂ ಸ್ವಚ್ಛ ಮಾಡಿ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

ಕೇಶ ವಿನ್ಯಾಸಗಳು

ಬಿಗಿಯಾಗಿ ಕಟ್ಟಿದಂಥ ಕೇಶ ವಿನ್ಯಾಸಗಳು ಕೂದಲಿಗೆ ಹಾನಿ ಮಾಡುತ್ತವೆ. ಕೂದಲನ್ನು ತುಂಡರಿಸಿ, ಬುಡದಿಂದ ಬೇರ್ಪಡಿಸಿ, ಹೆಚ್ಚು ಸಿಕ್ಕಾಗಿಸುತ್ತವೆ. ಇವೆಲ್ಲವುಗಳ ಫಲವೆಂದರೆ ಹೆಚ್ಚೆಚ್ಚು ಕೂದಲು ಉದುರುವುದು. ಜೊತೆಗೆ, ಅತಿಯಾಗಿ ಹೀಟ್‌ಸ್ಟೈಲಿಂಗ್‌ ಮಾಡುವುದು ಸಹ ಹಾನಿಕರ. ಹೇರ್‌ ಡ್ರೈಯರ್‌ ಹೆಚ್ಚಾಗಿ ಬಳಸುವುದು, ಕೂದಲು ನೇರವಾಗಿಸಲು ಅಥವಾ ಸುರುಳಿ ಮಾಡಿಸಲು ಬಿಸಿ ಮಾಡುವುದು- ಇವೆಲ್ಲ ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ.
ಕೂದಲನ್ನು ಡೈ ಮಾಡುವಾಗಲೂ ಹೆಚ್ಚಿನ ಎಚ್ಚರಿಕೆ ಅಗತ್ಯ. ಬಣ್ಣ ಹಾಕುವುದಕ್ಕಾಗಿ ಕಠಿಣವಾದ ರಾಸಾಯನಿಕಗಳನ್ನು ಬಳಸುವುದು ತೊಂದರೆ ತರಬಹುದು. ಮಳೆಗಾಲದಲ್ಲಿ ಕೂದಲಿಗೆ ಬಣ್ಣ ಹಾಕುವುದು ಅಗತ್ಯ ಎನಿಸಿದರೆ, ಅಮೋನಿಯ ರಾಸಾಯನಿಕ ಇಲ್ಲದಂಥ ಬಣ್ಣಗಳನ್ನು ಬಳಸಿ. ಇವು ಕೂದಲಿಗೆ ಹಾನಿ ಆಗದಂತೆ ನಾಜೂಕಾಗಿ ಕೆಲಸವನ್ನು ಮಾಡುತ್ತವೆ. ಜೊತೆಗೆ ಕೇಶಾರೈಕೆಗೆ ಈವರೆಗೆ ಏನೆಲ್ಲವನ್ನೂ ಮಾಡುತ್ತಿದ್ದಿರೊ, ಅವೆಲ್ಲವನ್ನೂ ಮುಂದುವರಿಸಿ.

Dieting concept. Healthy Food. Beautiful Young Asian Woman

ಆಹಾರ

ಮಳೆಯಲ್ಲಿ ಕರುಂಕುರುಂ ತಿನ್ನುವ ಬಯಕೆಯಾಗುವುದು ಸಹಜ. ಹಾಗೆಂದು ಶರೀರಕ್ಕೆ ಬೇಕಾದ ಸತ್ವಗಳನ್ನು ಬಿಟ್ಟು ಅತಿಯಾಗಿ ಜಿಡ್ಡಿನ, ಕರಿದ ತಿಂಡಿಗಳನ್ನು ತಿನ್ನುವುದು ಕೂದಲಿನ ಆರೋಗ್ಯಕ್ಕೆ ಹೇಳಿಸಿದ್ದಲ್ಲ. ಮಳೆಗಾಲದ ಋತುವಿನಲ್ಲಿ ದೊರೆಯುವ ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡಿ. ಚೆನ್ನಾಗಿ ನೀರು ಕುಡಿಯಿರಿ. ಸತ್ವಯುತ ಆಹಾರ ಸೇವಿಸಿ. ಅಹಾರದಲ್ಲಿ ವಿಟಮಿನ್‌ ಬಿ12, ಫೋಲೇಟ್‌, ಬಯೋಟಿನ್‌, ಪ್ರೊಟೀನ್‌ನಂಥವು ಹೇರಳವಾಗಿರಲಿ. ಇದರಿಂದ ಕಾಲ ಯಾವುದಾದರೂ, ಸುಂದರ ಕೂದಲು ನಿಮ್ಮದಾಗಲಿದೆ.

Continue Reading

ಲೈಫ್‌ಸ್ಟೈಲ್

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Sleep after Lunch: ಮಧ್ಯಾಹ್ನ ವಿಪರೀತ ಹಸಿವಾಗುತ್ತದೆ. ಹಸಿವು ಅಂತ ಚೆನ್ನಾಗಿ ಊಟ ಮಾಡಿದರೆ ಆಕಳಿಕೆ ಬಂದು ನಿದ್ದೆ ಆವರಿಸುತ್ತದೆ. ಹೀಗೆ ಊಟದ ನಂತರ ಕಾಲು ಚಾಚಿ ಮೈ ಚೆಲ್ಲಬೇಕೆಂಬ ಬಯಕೆ ಬಹಳಷ್ಟು ಜನರಿಗೆ ಬರುತ್ತದೆ. ಊಟದ ನಂತರ ಕಣ್ಣೆಳೆದು ನಿದ್ದೆ ಬರುವಂತಾಗುವುದೇಕೆ? ಉಂಡಿದ್ದಕ್ಕೇ ದಣಿವಾಗುವುದೇಕೆ? ಇಲ್ಲಿದೆ ಅದಕ್ಕೆ ಕಾರಣಗಳ ವಿವರ.

VISTARANEWS.COM


on

Sleep After Lunch
Koo

ಈಗಷ್ಟೇ ಮಧ್ಯಾಹ್ನದ ಊಟ ಮುಗಿಸಿ (Sleep after Lunch) ಬಂದು ಆಫೀಸ್‌ನಲ್ಲಿ ಕುಳಿತಿದ್ದೀರಿ. ಅಲ್ಲಿಯವರೆಗೆ ಇಲ್ಲದ್ದು ಇದ್ದಕ್ಕಿದ್ದಂತೆ ಗಂಟು ಬೀಳುತ್ತದೆ- ಆಕಳಿಕೆ! ಹತ್ತಿಪ್ಪತ್ತು ಸಾರಿ ಆಕಳಿಸುವಷ್ಟರಲ್ಲಿ, ಮೆಲ್ಲಗೆ ತೂಕಡಿಕೆ ಆವರಿಸುತ್ತದೆ. ಎಷ್ಟು ಪ್ರಯತ್ನಿಸಿದರೂ ಕಣ್ಣು ತೆರೆದು ಕೂರುವುದಕ್ಕೇ ಆಗುತ್ತಿಲ್ಲ. ಸಣ್ಣದೊಂದು ಕೋಳಿ ನಿದ್ದೆ ಮಾಡಿದ ಮೇಲೆಯೇ ಈ ಅವಸ್ಥೆಯಿಂದ ಬಿಡುಗಡೆ ಅನಿಸಬಹುದು. ಕೂತಲ್ಲೇ ತೂಕಡಿಸಿ ನಿದ್ದೆ ತೆಗೆಯುವ ಸಾಮರ್ಥ್ಯ ಇದ್ದರೆ ಸರಿ, ಇಲ್ಲದಿದ್ದರೆ? ಫಜೀತಿ ತಪ್ಪಿದ್ದಲ್ಲ. ಹೀಗೆ ಊಟದ ನಂತರ ಕಾಲು ಚಾಚಿ ಮೈ ಚೆಲ್ಲಬೇಕೆಂಬ ಬಯಕೆ ಬಹಳಷ್ಟು ಜನರಿಗೆ ಬರುತ್ತದೆ. ಊಟದ ನಂತರ ಕಣ್ಣೆಳೆದು ನಿದ್ದೆ ಬರುವಂತಾಗುವುದೇಕೆ? ಉಂಡಿದ್ದಕ್ಕೇ ದಣಿವಾಗುವುದೆಂದರೆ! ಇದಕ್ಕೆ ಕಾರಣಗಳು ಇಲ್ಲಿವೆ.

Asian man is sleeping snoring

ಏಕೆ ಹೀಗೆ?

ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಕಾರಣಗಳು ಇಲ್ಲದಿಲ್ಲ. ದೇಹದಲ್ಲಿ ಹೆಚ್ಚುವ ಸೆರೋಟೀನಿನ್‌ ಎಂಬ ಅಂಶವೇ ಇದಕ್ಕೆ ಕಾರಣ. ವಿವರವಾಗಿ ಹೇಳುವುದಾದರೆ, ಪಿಷ್ಟ ಮತ್ತು ಪ್ರೊಟೀನ್‌ ಅಂಶಗಳು ಹೆಚ್ಚಿರುವಂಥ ಆಹಾರಗಳು ಸಾಮಾನ್ಯವಾಗಿ ನಿದ್ದೆ ಬರಿಸುತ್ತವೆ. ಕಾರಣ ಪ್ರೊಟೀನ್‌ಭರಿತ ಆಹಾರಗಳಲ್ಲಿ ಟ್ರಿಪ್ಟೋಫ್ಯಾನ್‌ ಎಂಬ ಅಮೈನೊ ಆಮ್ಲಗಳು ಧಾರಾಳವಾಗಿ ಇರುತ್ತವೆ. ಈ ಅಮೈನೊ ಆಮ್ಲಗಳಿಂದ ಸೆರೋಟೋನಿನ್‌ ಎನ್ನುವ ಹ್ಯಾಪಿ ಹಾರ್ಮೋನು ಬಿಡುಗಡೆ ಆಗುತ್ತದೆ. ನಮ್ಮ ಮೂಡ್‌ ಬದಲಾವಣೆ, ನಿದ್ದೆ ಮುಂತಾದ ಬಹಳಷ್ಟು ವಿಷಯಗಳ ಮೇಲೆ ಇದು ಪ್ರಭಾವ ಬೀರುತ್ತದೆ. ಈ ಸೆರೋಟೋನಿನ್‌ ಹೀರಿಕೊಳ್ಳುವುದಕ್ಕೆ ಪಿಷ್ಟಭರಿತ ಆಹಾರಗಳು ಪ್ರೋತ್ಸಾಹ ನೀಡುತ್ತವೆ. ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಇಷ್ಟು ಸಾಲದೇ?

ಯಾವ ಆಹಾರಗಳು?

ಪ್ರೊಟೀನ್‌ ಹೆಚ್ಚಿರುವಂಥ ಮೊಟ್ಟೆ, ಚಿಕನ್‌, ಹಾಲು, ಮೊಸರಿನಂಥ ಡೇರಿ ಉತ್ಪನ್ನಗಳು, ಸೋಯ್‌ ಉತ್ಪನ್ನಗಳು, ಮೀನು, ಬೀಜಗಳು ಇತ್ಯಾದಿ ಆಹಾರಗಳಲ್ಲಿ ಟ್ರಿಪ್ಟೊಫ್ಯಾನ್‌ ಅಮೈನೊ ಆಮ್ಲ ಹೆಚ್ಚಾಗಿರುತ್ತದೆ. ಪಿಷ್ಟ ಹೆಚ್ಚಾಗಿರುವ ಆಹಾರಗಳೆಂದರೆ- ಅನ್ನ, ಚಪಾತಿ, ಬ್ರೆಡ್‌, ಪಾಸ್ತಾ, ಯಾವುದೇ ಸಿಹಿ ತಿಂಡಿಗಳು, ಕೇಕ್‌ನಂಥ ಬೇಕ್‌ ಮಾಡಿದ ತಿನಿಸುಗಳು, ಆಲೂಗಡ್ಡೆ ಮತ್ತು ಗೆಣಸಿನಂಥ ಗಡ್ಡೆಗಳು. ಇವುಗಳ ಮಿಶ್ರಣ ಆಹಾರದಲ್ಲಿದ್ದರೆ, ಊಟದ ನಂತರ ಕಣ್ಣೆಳೆಯುವುದು ಖಚಿತ. ಹಳೆಯ ಕಾಲದಲ್ಲಿ ಮಕ್ಕಳಿಗೆ ಮಲಗುವಾಗ ಹಾಲು ಕುಡಿಸುವ ಕ್ರಮದ ಹಿಂದೆಯೂ ಇಂಥದ್ದೇ ಕಾರಣಗಳು ಇರಬಹುದು.

ಎಷ್ಟು ತಿನ್ನುತ್ತೀರಿ?

ಆಹಾರವನ್ನು ತಿನ್ನುವ ಪ್ರಮಾಣ ಎಷ್ಟು ಎನ್ನುವುದು ಸಹ ಮುಖ್ಯವಾಗುತ್ತದೆ. ಭೂರಿ ಭೋಜನದ ನಂತರ ನಿದ್ದೆಯನ್ನು ತಪ್ಪಿಸುವುದು ಕಷ್ಟ. ಭರ್ಜರಿ ಊಟದ ನಂತರ ರಕ್ತದಲ್ಲಿನ ಸಕ್ಕರೆ ಅಂಶಗಳೂ ಏರಿಳಿತವಾಗಿ ಆಯಾಸದ ಅನುಭವ ಆಗಬಹುದು, ನಿದ್ದೆ ಬೇಕೆನಿಸಬಹುದು. ಆದರೆ ಊಟದ ಪ್ರಾರಂಭದಲ್ಲಿ ಒಂದಿಷ್ಟು ಸಲಾಡ್‌ಗಳನ್ನು ತಿನ್ನುವುದರಿಂದ, ಅತಿಯಾಗಿ ಊಟ ಮಾಡುವುದನ್ನು ತಪ್ಪಿಸಬಹುದು. ಸಲಾಡ್‌ಗಳು ಒಮ್ಮೆ ಹೊಟ್ಟೆ ತುಂಬಿದ ಅನುಭವ ನೀಡಿದರೂ, ನಂತರ ದೀರ್ಘ ಕಾಲದವರೆಗೆ ಹೊಟ್ಟೆ ಭಾರವಾದ ಅನುಭವವನ್ನು ನೀಡುವುದಿಲ್ಲ. ಅದರಿಂದಾಗಿ ಮಧ್ಯಾಹ್ನದ ತೂಕಡಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮಧ್ಯಾಹ್ನದ ಊಟ ಮಿತವಾಗಿರುವುದು ಅಗತ್ಯ.

Health Tips Kannada sleepy is good

ನಿದ್ದೆ

ರಾತ್ರಿಯ ಹೊತ್ತು ಸರಿಯಾಗಿ ನಿದ್ದೆಯಿಲ್ಲವೇ? ಮಧ್ಯಾಹ್ನ ತೂಕಡಿಕೆ ಬೆನ್ನುಹತ್ತುವುದು ನಿಶ್ಚಿತ. ಹಾಗಾಗಿ ರಾತ್ರಿ ಕಣ್ತುಂಬಾ ನಿದ್ರಿಸಲು ಆದ್ಯತೆ ನೀಡಿ. ಸಾಮಾನ್ಯವಾಗಿ 7 ತಾಸುಗಳ ರಾತ್ರಿಯ ನಿದ್ದೆಯಿಂದ ಹಗಲು ಹೊತ್ತಿನ ಆಯಾಸವನ್ನು ತಪ್ಪಿಸಲು ಸಾಧ್ಯವಿದೆ. ಇಷ್ಟಾಗಿಯೂ ನಿದ್ದೆ ತಡೆಯಲು ಆಗುತ್ತಿಲ್ಲವೆಂದರೆ, ಹತ್ತು ನಿಮಿಷಗಳಿಗೆ ಅಲರಾಂ ಇಟ್ಟು ನಿದ್ರಿಸಿ. ಈ ಕಿರು ನಿದ್ರೆ ಚೈತನ್ಯವನ್ನು ನೀಡಬಲ್ಲದು.

ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ಉಪಾಯಗಳು ಬೇರೆಯೂ ಇವೆ

ಊಟದ ನಂತರ ಹತ್ತಿಪ್ಪತ್ತು ನಿಮಿಷಗಳ ಲಘು ನಡಿಗೆ ನೆರವಾಗುತ್ತದೆ. ಕೊಂಚ ತಾಜಾ ಗಾಳಿ, ಬೆಳಕು ಮೈಸೋಕಿದಾಗಲೂ ನಿದ್ದೆಯನ್ನು ದೂರ ಓಡಿಸಬಹುದು. ಹಾಗೆಂದು ಬಿರು ಬಿಸಿಲಿನಲ್ಲಿ ವಾಕಿಂಗ್‌ ಮಾಡಿದರೆ ತೂಕಡಿಕೆ ಹೆಚ್ಚಲೂಬಹುದು, ಜಾಗ್ರತೆ! ಊಟದ ಜೊತೆಗೆ ಆಲ್ಕೊಹಾಲ್‌ ಸೇವನೆ ಬೇಡ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತದೆ. ಊಟದ ನಂತರದ ನಿದ್ದೆಯನ್ನು ತಡಯುವುದಕ್ಕೆಂದೇ, ಆ ಹೊತ್ತಿನಲ್ಲಿ ಒಂದು ಖಡಕ್‌ ಚಹಾ ಅಥವಾ ಸ್ಟ್ರಾಂಗ್‌ ಕಾಫಿ ಕುಡಿಯುವವರು ಬಹಳ ಜನರಿದ್ದಾರೆ.

Continue Reading

ಬೆಳಗಾವಿ

Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

Polluted Water: ಕನಸಗೇರಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇತ್ತ ಕೋಲಾರದಲ್ಲಿ ಕಲುಷಿತ ನೀರು ಕುಡಿದ ವೃದ್ಧರೊಬ್ಬರು (Contaminated Water) ಅಸುನೀಗಿದ್ದಾರೆ.

VISTARANEWS.COM


on

By

contaminated water
Koo

ಬೆಳಗಾವಿ: ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು (Contaminated Water) ಮೃತಪಟ್ಟಿದ್ದಾರೆ. ಹೊಳೆವ್ವಾ ಬಾಳಪ್ಪ ಧನದವರ (38) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕನಸಗೇರಿ ಗ್ರಾಮದಲ್ಲಿ ಬಾವಿಯ ನೀರು ಸೇವಿಸಿ ಸುಮಾರು ಹತ್ತು ಮಂದಿ ಅಸ್ವಸ್ಥಗೊಂಡಿದ್ದರು. ನಿನ್ನೆ ಸಂಜೆ ಭಾನುವಾರ ಹೊಳೆವ್ವಾ ಬಾಳಪ್ಪ ಅವರಿಗೆ ವಾಂತಿಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ಸ್ಥಳಕ್ಕೆ ಡಿಎಚ್ಒ ಮಹೇಶ್ ಕೋಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಪರಿಶೀಲನೆ ನಡೆಸಿ, ಇದೇ ವೇಳೆ ಅಸ್ವಸ್ಥಗೊಂಡವರ ಆರೋಗ್ಯವನ್ನು ವಿಚಾರಿಸಿದರು.

ಇದನ್ನೂ ಓದಿ: Road Accident : ಚಲಿಸುತ್ತಿದ್ದಾಗಲೇ ಆಂಬ್ಯುಲೆನ್ಸ್‌ ಟಯರ್‌ ಬ್ಲಾಸ್ಟ್‌; ಬೈಕ್‌ನಿಂದ ಸ್ಕಿಡ್ ಆಗಿ ಬಿದ್ದು ವ್ಯಕ್ತಿ ಸಾವು

ಕೋಲಾರದಲ್ಲಿ ವೃದ್ಧ ಸಾವು

ವೃದ್ಧರೊಬ್ಬರು ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವೆಂಕಟರಮಣಪ್ಪ (60) ಮೃತದುರ್ದೈವಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯಲ್ಲಿ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿದ್ದರಿಂದಲೇ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದಲ್ಲಿ 5 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪಂಚಾಯಿತಿಯಿಂದಲೇ ಮನೆ ಮನೆಗೂ ನೀರು ಬಿಡುಗಡೆ ಆಗಿದ್ದು, ಆ ನೀರು ಸೇವಿಸಿಯೇ ವೃದ್ಧ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Viral News
ಕ್ರೈಂ6 mins ago

ಜಮೀನಿನಲ್ಲಿ ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೇಲೆ ಹಲ್ಲೆ; ಖಾಸಗಿ ಅಂಗಕ್ಕೆ ಖಾರದ ಪುಡಿ ಎರಚಿ ವಿಕೃತಿ ಮೆರೆದ ಸಂಬಂಧಿಕರು

AFG vs BAN
ಕ್ರೀಡೆ8 mins ago

AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್​ ಆಟಗಾರರಿಗೆ ಸಲಹೆ ನೀಡಿದ ಕೋಚ್​; ವಿಡಿಯೊ ವೈರಲ್​

cm siddaramaiah DK Shivakumar power fight
ಪ್ರಮುಖ ಸುದ್ದಿ36 mins ago

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

Viral Video
Latest37 mins ago

Viral Video: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

LeT Associate killed
ದೇಶ44 mins ago

LeT Associate killed: ಪ್ರಚೋದನಕಾರಿ ಧರ್ಮ ಪ್ರಚಾರಕ ಖ್ವಾರಿ ಇದ್ರಿಸ್‌ ಹತ್ಯೆ; ವಿಷಪೂರಿತ ಸೂಜಿಯಿಂದ ದಾಳಿ!

Udhayanidhi Stalin
ಕರ್ನಾಟಕ1 hour ago

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

AFG vs BAN
ಕ್ರೀಡೆ1 hour ago

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

Mamata Banerjee
ದೇಶ2 hours ago

Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

physical abuse mandya
ಕ್ರೈಂ2 hours ago

Physical Abuse: ಅಪ್ರಾಪ್ತ ಮಗಳನ್ನು ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ

Paris Olympics 2024
ಕ್ರೀಡೆ2 hours ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌