Drug Samples Quality Test: ಪ್ಯಾರಸಿಟಮಾಲ್ ಸೇರಿ 50 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್‌! ಇಲ್ಲಿದೆ ಫುಲ್‌ ಲಿಸ್ಟ್‌ - Vistara News

ಆರೋಗ್ಯ

Drug Samples Quality Test: ಪ್ಯಾರಸಿಟಮಾಲ್ ಸೇರಿ 50 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್‌! ಇಲ್ಲಿದೆ ಫುಲ್‌ ಲಿಸ್ಟ್‌

ಭಾರತದ ಔಷಧ ನಿಯಂತ್ರಣ ಸಂಸ್ಥೆಯಾದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ 51 ಔಷಧ ಮಾದರಿಗಳ ಗುಣಮಟ್ಟದ (Drug Samples Quality Test) ಕುರಿತು ಕಳವಳ ವ್ಯಕ್ತಪಡಿಸಿದೆ. ಗುಣಮಟ್ಟವಿಲ್ಲದ 22 ಔಷಧಗಳನ್ನು ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗಿದೆ. ಇತರ ಮಾದರಿಗಳನ್ನು ಜೈಪುರ, ಹೈದರಾಬಾದ್, ವಘೋಡಿಯಾ, ವಡೋದರಾ, ಆಂಧ್ರಪ್ರದೇಶ ಮತ್ತು ಇಂದೋರ್‌ನಲ್ಲಿ ತಯಾರಿಸಲಾಗಿದೆ.

VISTARANEWS.COM


on

Drug Samples Quality Test
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ದೇಶಾದ್ಯಂತ ಹೆಚ್ಚಾಗಿ ಬಳಕೆಯಲ್ಲಿರುವ ಪ್ಯಾರಸಿಟಮಾಲ್ (paracetamol), ಪ್ಯಾಂಟೊಪ್ರಜೋಲ್ (pantoprazole) ಔಷಧಗಳು ಸೇರಿ ಬ್ಯಾಕ್ಟೀರಿಯಾ ಸೋಂಕಿಗೆ ( bacterial infections) ಚಿಕಿತ್ಸೆ ನೀಡಲು ಬಳಸುವ ವಿವಿಧ 51 ಔಷಧ ಮಾದರಿಗಳ ಗುಣಮಟ್ಟದ (Drug Samples Quality Test) ಕುರಿತು ಭಾರತದ (india) ಔಷಧ ನಿಯಂತ್ರಣ ಸಂಸ್ಥೆಯಾದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ವರದಿ ಬಿಡುಗಡೆ ಮಾಡಿದೆ.

ಗುಣಮಟ್ಟವಿಲ್ಲದ 22 ಔಷಧಗಳನ್ನು ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗಿದೆ ಎಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಹೇಳಿದೆ. ಇತರ ಮಾದರಿಗಳನ್ನು ಜೈಪುರ, ಹೈದರಾಬಾದ್, ವಘೋಡಿಯಾ, ವಡೋದರಾ, ಆಂಧ್ರಪ್ರದೇಶ ಮತ್ತು ಇಂದೋರ್‌ ನಲ್ಲಿ ತಯಾರಿಸಲಾಗಿದೆ.

ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳು

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಕೆಳಗಿನ 51 ಔಷಧ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದೆ. ಅವುಗಳ ವಿವರ ಹೀಗಿದೆ:

Cyra Tablets, Rabeprazole Sodium Tablets IP
Rabedin tablet Tablets, Rabeprazole Sodium GastroResistant Tablets IP
Moxtas Distab 250 Tablets, Amoxycillin trihydrate dispersible tablets IP
Tolcenta-P Tablets, Tolperisone Hydrochloride and Paracetamol tablets
Nagris Pakeezah Art Henna
Oxifer-XT Tablets, Ferrous ascorbate elemental iron, Folic acid and Zinc sulphate Tablets
Levolets- M Kid Syrups, Montelukast Sodium & Levocetirizine Dihydrochloride syrup
Meazon Plus injection Parentaral Preparations, Mecobalamine, Folic acid & Niacianamideinj 1 ml
Xeronac-SP Tablets, Aceclofenac, Paracetamol and Serratiopeptidas e Tablets
Pedxim-200 Tablets, Cefpodoximepro xetil Tablets 200 mg
DofloxOZT Tablets, Ofloxacin&Ornid azole Tablets
Disinfectants, Surgical Spirit BP
Sif Alben Suspension, Albendazole Oral Suspension 2.5% w/v (Vet)
Terbutaline Sulfate,Bromhexin e Hydrochloride with Guaiphenesin Syrup
Metoprolol Succinate Extended Release Tablets IP
Cuftin Cough Linctus
CefuroximeAxetil Tablets IP
LevosalbutamolSul phate,AmbroxolHC L,Guaiphenesin Syrup
Acetylsalicylic Acid Tablets 75 mg
LactuloseSolution U.S.P.
Terbutaline Sulphate, Bromhexine Hydrochloride, Guaiphenesinand Menthol Syrup
Prednisolone Tablets IP10mg
Mecobalamin, AlphaLipoicAcid, Pyridoxine Hydrochlorideand Folic Acid Soft Gelatin Capsules
Telmisartan Andamlodipine Tablets IP
Cefoperazone& Sulbactam for Injection
Cefotaxime InjectionIP500mg
Dexamethasone SodiumPhosphate Injection I.P
Amoxycillin&Potas sium Clavulanate InjectionIP1.2gm
Telmisartan and Metoprolol Succinate (Extended Release) Tablets
Pantoprazole Tablets IP.
Ambroxol HCl, Levosalbutamoland Guaiphenesin Syrup
Dexamethasone Sodium Phosphate Injection I.P. (8mg/2ml)
Dexamethasone Sodiumphosphate Injection IP
Paracetamol 500 mg. Tablets
Ofloxacin Ornidazole Tablets IP
Vildagliptinand Metformin Hydrochloride Tablets IP 50mg/1000mg
Amoxycillin and Potassium Clavulanate Tablets I.P.
Clonazepam TabletsI.P.0.5mg
Metronidazole Extended Release Tablets USP 600 MG
Diclofenac Sodium and Paracetamol Tablets IP
Atropine Sulphate Injection IP
Montelukast Sodium and Levocetirizine Hydrochloride Tablets
Fluconazole Tablets IP (150 mg)
Ceftriaxone Injection IP
Ramipril and Hydrochlorthiazide Tablets IP
Glipizideand Metformin Tablets IP
Ceftriaxone for InjectionI.P.1gm
Gentamicin Sulphate Injection I.P. 2ml
Calcium 500 mg with Vitamin D3250 IU Tablets IP
Cefixime and Ofloxacin Tablets
Ceftriaxone Injection IP

ಕಂಪನಿಗಳಿಗೆ ನೊಟೀಸ್

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಈ ಔಷಧಿಗಳನ್ನು ತಯಾರಿಸುವ ಔಷಧೀಯ ಕಂಪೆನಿಗಳಿಗೆ ನೊಟೀಸ್ ಜಾರಿ ನೋಟಿಸ್ ನೀಡಿದೆ. ವಿಫಲವಾದ ಮಾದರಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ: Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್‌ ಪಡೆಯಿರಿ!

ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 51 ಔಷಧಿಗಳ ಪಟ್ಟಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆಯಾಗಿದೆ. ಕಳೆದ ವರ್ಷದಲ್ಲಿ ಒಟ್ಟು 120 ಔಷಧ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಈ ಬಾರಿ ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾದ ಹೆಚ್ಚಿನ ಔಷಧ ಮಾದರಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿರುವುದು ಗಮನಾರ್ಹ ಅಂಶವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ದೇಶಾದ್ಯಂತ ಇಂದು ಮೆಡಿಕಲ್‌ ಸ್ಟೋರ್‌ ಬಂದ್‌

VISTARANEWS.COM


on

ಇ-ಫಾರ್ಮಸಿ ಹಾಗೂ ಆನ್‌ಲೈನ್‌ ಮೂಲಕ ಔಷಧ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು ಮೆಡಿಕಲ್‌ ಸ್ಟೋರ್‌ಗಳು ಬಂದ್‌ ಆಗಿವೆ. ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆ ಮೇರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮೆಡಿಕಲ್‌ ಸ್ಟೋರ್‌ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಆನ್‌ಲೈನ್‌ ಔಷಧ ವ್ಯಾಪಾರಕ್ಕೆ ಕಟ್ಟುನಿಟ್ಟಾದ ನಿಯಮ ಜಾರಿಗೊಳಿಸಬೇಕು, ಕಾರ್ಪೊರೇಟ್‌ ಸಂಸ್ಥೆಗಳ ಭಾರಿ ರಿಯಾಯಿತಿ ದರ ಸಮರಕ್ಕೆ ಬ್ರೇಕ್‌ ಹಾಕಬೇಕು ಹಾಗೂ ಎಲ್ಲಾ ವ್ಯಾಪಾರಿಗಳಿಗೆ ಸಮಾನ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಅಖಿಲ ಭಾರತ ಕೆಮಿಸ್ಟ್‌ ಮತ್ತು ಡ್ರಗ್ಗಿಸ್ಟ್‌ ಸಂಘ ಮುಂದಿಟ್ಟಿದೆ.

ಈ ಬಂದ್‌ನಿಂದ ಅನೇಕ ಕಡೆಗಳಲ್ಲಿ ಔಷಧ ಖರೀದಿಗೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ತುರ್ತು ಸೇವೆಗಳಿಗಾಗಿ ಕೆಲವು ಮೆಡಿಕಲ್‌ ಸ್ಟೋರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

Continue Reading

Latest

ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್‌ ಬಂದ್‌

VISTARANEWS.COM


on

ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ವಿರೋಧಿಸಿ ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್‌ಗಳ ಬಂದ್‌ಗೆ ಕರೆ ನೀಡಲಾಗಿದೆ. ದೇಶದಾದ್ಯಂತ ಸುಮಾರು 9 ಲಕ್ಷ ಔಷಧ ಅಂಗಡಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಕರ್ನಾಟಕದಲ್ಲೂ ಸುಮಾರು 26 ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗುವ ಸಾಧ್ಯತೆ ಇದ್ದು, ಗ್ರಾಹಕರು ಅಗತ್ಯ ಔಷಧಿಗಳನ್ನು ಮುಂಚಿತವಾಗಿ ಖರೀದಿಸಿಕೊಳ್ಳುವಂತೆ ಸಂಘಟನೆಗಳು ಮನವಿ ಮಾಡಿವೆ.

ಇ-ಫಾರ್ಮಸಿ ವೇದಿಕೆಗಳ ಮೂಲಕ ಭಾರಿ ರಿಯಾಯಿತಿಯಲ್ಲಿ ಔಷಧ ಮಾರಾಟವಾಗುತ್ತಿರುವುದು ಸಣ್ಣ ಹಾಗೂ ಮಧ್ಯಮ ಮಟ್ಟದ ಮೆಡಿಕಲ್ ಅಂಗಡಿಗಳಿಗೆ ಹೊಡೆತ ನೀಡುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಜೊತೆಗೆ ಆನ್‌ಲೈನ್ ಮೂಲಕ ನಿಯಂತ್ರಣವಿಲ್ಲದೆ ಔಷಧ ವಿತರಣೆ ನಡೆಯುತ್ತಿರುವುದರಿಂದ ರೋಗಿಗಳ ಆರೋಗ್ಯಕ್ಕೂ ಅಪಾಯ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.
ಆನ್‌ಲೈನ್ ಮೂಲಕ ಔಷಧ ಖರೀದಿ ವ್ಯವಸ್ಥೆಯನ್ನು ನಿಯಂತ್ರಿಸುವುದು ಹಾಗೂ ಇ-ಫಾರ್ಮಸಿ ಕಂಪನಿಗಳ ವಿರುದ್ಧ ಕಠಿಣ ನಿಯಮ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ.

Continue Reading

ಪ್ರಮುಖ ಸುದ್ದಿ

ಹಡಗಿನಲ್ಲಿ ಹ್ಯಾಂಟವೈರಸ್‌ ದಾಂಗುಡಿ, ಕೊರೋನಾವನ್ನೂ ಮೀರಿಸುತ್ತಾ ಈ ಪಿಡುಗು?

VISTARANEWS.COM


on

ನವದೆಹಲಿ: ಜಗತ್ತು ಈಗ ಮತ್ತೊಂದು ಮಾರಕ ರೋಗದ ಆತಂಕದಲ್ಲಿದೆ. ಈ ಆತಂಕಕ್ಕೆ ಕಾರಣವಾಗಿದ್ದು ಹ್ಯಾಂಟವೈರಸ್‌. ಇದನ್ನು ಕೊರೋನಾ ವೈರಸ್‌ ಸಹೋದರಿ ಎಂದೇ ಹೇಳಲಾಗುತ್ತಿದೆ.
ಡಚ್‌ ಪ್ರವಾಸಿ ಹಡಗು ಎಂವಿ ಹೊಂಡಿಯಸ್‌ನಲ್ಲಿ ಹ್ಯಾಂಟವೈರಸ್‌ ಹರಡಿರುವ ಸುದ್ದಿ ಜಗತ್ತನ್ನೇ ಆತಂಕಕ್ಕೆ ದೂಡಿದೆ. ೧೪೯ ಜನರಿದ್ದ ಈ ಹಡಗಿನಲ್ಲಿ ಮೂವರು ಹ್ಯಾಂಟವೈರಸ್‌ಗೆ ಬಲಿಯಾಗಿದ್ದಾರೆ. ಈ ಹಡಗಿನಲ್ಲಿ ಇಬ್ಬರು ಭಾರತೀಯರೂ ಪ್ರವಾಸ ಮಾಡುತಿದ್ದರು ಎಂದು ಕೆಲವು ವರದಿಗಳು ಹೇಳಿವೆ. ಸದ್ಯ ಈ ಹಡಗು ಆಫ್ರಿಕಾದ ಬಂದರಿನಲ್ಲಿ ಲಂಗರು ಹಾಕಿದೆ. ಅಸ್ವಸ್ಥ ಪ್ರಯಾಣಿರನ್ನು ಚಿಕಿತ್ಸೆಗೆ ರವಾನಿಸಲಾಗಿದೆ.
ಹ್ಯಾಂಟವೈರಸ್ ಅಂದರೇನು?
ಹ್ಯಾಂಟವೈರಸ್ ಒಂದು ಅಪರೂಪದ ಆದರೆ ಅಪಾಯಕಾರಿ ವೈರಸ್. ಇದು ಇಲಿಗಳ ಮೂತ್ರ, ಜೊಲ್ಲು ಅಥವಾ ಮಲದ ಮೂಲಕ ಹರಡುತ್ತದೆ. ಹ್ಯಾಂಟ ವೈರಸ್ ಗಾಳಿಯಲ್ಲಿ ಹರಡೋದಿಲ್ಲ. ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಾಮಿಕವೂ ಇದಲ್ಲ. ಇಲಿ ಹಾಗೂ ಹೆಗ್ಗಣದ ಜಾತಿಯ ‘ದಂಶಕ’ಗಳಲ್ಲಿ ಈ ವೈರಸ್‌ ಕಾಣಿಸಿಕೊಳ್ಳುತ್ತೆ. ಈ ದಂಶಕಗಳ ಮಲ, ಮೂತ್ರ ಅಥವಾ ಜೊಲ್ಲು ರಸ ಮಾನವನ ಸಂಪರ್ಕಕ್ಕೆ ಬಂದಾಗ ಮಾನವನಿಗೂ ಹ್ಯಾಂಟ ವೈರಸ್ ಹರಡುತ್ತೆ. ಜ್ವರ, ತಲೆನೋವು, ಹೊಟ್ಟೆ ನೋವು, ಮೈ-ಕೈ ನೋವು, ವಾಂತಿ, ಭೇದಿ ಇತ್ಯಾದಿ ಈ ರೋಗದ ಲಕ್ಷಣಗಳು.

Continue Reading

ಬೆಂಗಳೂರು

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

ಐದು ವರ್ಷದಿಂದ ಹೊಟ್ಟೆಯಲ್ಲೇ ಇದ್ದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ

VISTARANEWS.COM


on

Doctors at Fortis Hospital remove fish bone from man's stomach for 5 years

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Continue Reading
Advertisement
ಬಿಡದಿ ಟೌನ್‌ಶಿಪ್‌
Latest1 day ago

ಬಿಡದಿ ಟೌನ್‌ಶಿಪ್‌ ರೈತರ ವಿರೋಧ : ಜೂನ್ 22ರಂದು ‘ಭೈರಮಂಗಲ ಚಲೋ’

ಸಿಎಂ ಡಿಕೆಶಿ
Latest1 day ago

ಸರ್ಕಾರಿ ಕಚೇರಿಯಲ್ಲಿ ಲಂಚ ಕೇಳಿದ್ರೆ ಹುಷಾರ್‌: ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸೂಚನೆ

ನೀಟ್ 2026 ಪರೀಕ್ಷೆ
Latest3 days ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: NEET ಪರೀಕ್ಷೆಗೆ ಹೆಚ್ಚುವರಿ ಸಮಯ

ಜೋಸೆಫ್‌ ವಿಜಯ್‌
Latest3 days ago

ಎಂಜಿಆರ್‌, ಜಯಲಲಿತಾ ಹಾದಿಯಲ್ಲಿ ಜೋಸೆಫ್ ವಿಜಯ್‌: ಇಂದು ಕೊಲ್ಲೂರು ಮೂಕಾಂಬಿಕೆ ದರ್ಶನ

ರಾಜ್ಯಸಭೆ
Latest3 days ago

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

ನರೇಂದ್ರ ಮೋದಿ
Latest4 days ago

ಪ್ರಧಾನಿ ನರೇಂದ್ರ ಮೋದಿಗೆ ಕಿಚ್ಚನ ಸೆಲ್ಯೂಟ್‌ : 12 ವರ್ಷಗಳ ನರೇಂದ್ರ ಮೋದಿ ಐತಿಹಾಸಿಕ ಆಡಳಿತಕ್ಕೆ ಶ್ಲಾಘನೆ

ರಾಜ್ಯಸಭೆ ಟಿಕೆಟ್‌
ಪ್ರಮುಖ ಸುದ್ದಿ5 days ago

ರಾಜ್ಯಸಭೆ ಟಿಕೆಟ್‌ ವಿಚಾರಕ್ಕೆ ಹೆಚ್‌ಡಿಡಿ ಸ್ಪಷ್ಟನೆ : ಎನ್‌ಡಿಎ ಜತೆ ಬಾಂಧವ್ಯ ಮುಂದುವರಿಯಲಿದೆ

ನರೇಂದ್ರ ಮೋದಿ
Latest5 days ago

ನೆಹರೂ ದಾಖಲೆ ಮುರಿದ ನರೇಂದ್ರ ಮೋದಿ: ಭಾರತದ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊಸ ಇತಿಹಾಸ

ಆರೆಂಜ್ ಅಲರ್ಟ್‌
Latest5 days ago

ಮುಂಗಾರು ಅಬ್ಬರ ಹೆಚ್ಚಳ: ಇಂದು 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌, 2 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಮೀನಾಕ್ಷಿ ನಟರಾಜನ್
Latest5 days ago

ರಾಜ್ಯಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ : ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – ʻಕೈ‌‌‌‌ʼ ಶಾಸಕರ ರೆಸಾರ್ಟ್‌ ರಾಜಕೀಯ ಕ್ಯಾನ್ಸಲ್

galipata neetu
ಕಿರುತೆರೆ3 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌