Health Tips Kannada: ಕೂತಲ್ಲೇ ತೂಕಡಿಸುತ್ತೀರಾ? ಇದು ಒಳ್ಳೆಯದು! - Vistara News

ಆರೋಗ್ಯ

Health Tips Kannada: ಕೂತಲ್ಲೇ ತೂಕಡಿಸುತ್ತೀರಾ? ಇದು ಒಳ್ಳೆಯದು!

ಇದ್ದಲ್ಲೇ ನಿದ್ದೆ ಮಾಡುವವರಿಗೆ (Health Tips Kannada) ಸುಖ ಹೆಚ್ಚು, ಚಿಂತೆ ಇಲ್ಲ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಹೀಗೆ ಕೋಳಿಗಳಂತೆ ಕೂತಲ್ಲೇ ಚುಟುಕು ನಿದ್ದೆ ಮಾಡುವುದು ಒಳ್ಳೆಯದು ಎಂಬುದು ಗೊತ್ತೇ? ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆʼ ಎಂದೆಲ್ಲಾ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಇಲ್ಲಿದೆ ವಿವರ.

VISTARANEWS.COM


on

Health Tips Kannada sleepy is good
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೂತಲ್ಲೇ (Health Tips Kannada) ತೂಕಡಿಸುವವರು, ಬಸ್ಸಲ್ಲಿ, ರೈಲಲ್ಲಿ ಓಡಾಡುವಾಗ ಗೊರಕೆ ಹೊಡೆಯುವವರು, ಕಾರಲ್ಲಿ ಹಿಂದೆ ಕೂತಾಗ ನಿದ್ದೆ ಮಾಡುವವರು…ಹೀಗೆ ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆʼ ಎಂದೆಲ್ಲಾ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಹಾಗೆ ಹಗಲಿನಲ್ಲಿ ನಿದ್ದೆ ಮಾಡಿದರೆ ರಾತ್ರಿಯ ನಿದ್ದೆಗೆ ತೊಂದರೆ ಆಗುವುದಿಲ್ಲವೇ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚುಟುಕು ನಿದ್ದೆ

ಈ ಹೆಸರಿನಲ್ಲೇ ಸಾಮಾನ್ಯವಾಗಿ ಕರೆಸಿಕೊಳ್ಳುವ ಹಗಲಿನ ನಿದ್ದೆ ದೀರ್ಘವಾದರೆ ʻಪವರ್‌ ನ್ಯಾಪ್‌ʼ ಎನಿಸಿಕೊಳ್ಳುವುದಿಲ್ಲ. ತೀರಾ ಆಯಾಸವಾದಾಗ 20 ನಿಮಿಷ ನಿದ್ದೆ ಮಾಡಿದರೆ, ಎಚ್ಚರಾದಮೇಲೆ ದೇಹದ ಚೈತನ್ಯ ಹೆಚ್ಚಿದಂತೆ ಭಾಸವಾಗುತ್ತದೆ. ಇದು ಹೌದೇ ಎಂಬುದನ್ನು ತಿಳಿಯಲು ಯೂನಿವರ್ಸಿಟಿ ಕಾಲೇಜ್‌ ಲಂಡನ್‌ನ ವಿಜ್ಞಾನಿಗಳು ಅಧ್ಯಯನವೊಂದನ್ನು ನಡೆಸಿದ್ದರು. ಇದಕ್ಕಾಗಿ 40ರಿಂದ 69 ವರ್ಷ ವಯಸ್ಸಿನ ನಡುವಿನ ಸುಮಾರು ೩೫ ಸಾವಿರ ಮಂದಿಯನ್ನ್ ಅ‍ಧ್ಯಯನಕ್ಕೆ ಒಳಪಡಿಸಿದ್ದರು. ಇದರಲ್ಲಿ ಗಮನಿಸಿದಾಗ, ನಿಯಮಿತವಾಗಿ ಹಗಲಿಗೆ ಚುಟುಕು ನಿದ್ದೆ ಮಾಡುವವರ ಮೆದುಳು, ಪವರ್‌ ನ್ಯಾಪ್‌ ಮಾಡದವರ ಮೆದುಳಿಗಿಂತ ದೊಡ್ಡದಾಗಿತ್ತು. ಏನಿದರರ್ಥ?
ಮೆದುಳಿನ ಗಾತ್ರ ಕಿರಿದಾಗುವುದಕ್ಕೂ ಮೆದುಳಿಗೆ ವಯಸ್ಸಾಗುವುದಕ್ಕೂ ಸಂಬಂಧವಿದೆ. ಹಾಗಾಗಿ ನಿಯಮಿತವಾಗಿ ಚುಟುಕು ನಿದ್ದೆ ಮಾಡುವವರಲ್ಲಿ ಮೆದುಳು ಕುಗ್ಗಿಲ್ಲ ಎಂದರೆ, ಮೆದುಳಿಗೆ ಬೇಗ ವಯಸ್ಸಾಗುವುದನ್ನು ಪವರ್‌ ನ್ಯಾಪ್‌ ಮುಂದೂಡುತ್ತದೆ ಎನ್ನುತ್ತಾರೆ ಅಧ್ಯಯನಕಾರರು. ಅಂದರೆ, ಅಲ್‌ಜೈಮರ್ಸ್‌ನಂಥ ಮೆದುಳು ಸಂಬಂಧಿ ರೋಗಗಳು, ಹೃದಯದ ತೊಂದರೆಗಳನ್ನು ಮುಂತಾದವು ಬರುವುದನ್ನು ಮುಂದೂಡಲು ಸಾಧ್ಯವಾಗಬಹುದು ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ಕೋಳಿ ನಿದ್ದೆಯ ಮ್ಯಾಜಿಕ್!

ಇಷ್ಟು ಮಾತ್ರವಲ್ಲ, 5ರಿಂದ 20 ನಿಮಿಷಗಳವರೆಗಿನ ಕೋಳಿ ನಿದ್ದೆಯಿಂದ ತಕ್ಷಣಕ್ಕೆ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಹುದು. ತೀರಾ ಆಯಾಸವಾಗಿ ಕೆಲಸ ಮಾಡಲೇ ಆಗುತ್ತಿಲ್ಲ, ಓದಿದರೆ ತಲೆಗೇ ಹೋಗುತ್ತಿಲ್ಲ ಎಂಬಂಥ ಸಂದರ್ಭದಲ್ಲಿ, ಹತ್ತಿಪ್ಪತ್ತು ನಿಮಿಷಗಳ ಕೋಳಿ ನಿದ್ದೆ ನಿಜಕ್ಕೂ ಮ್ಯಾಜಿಕ್‌ ಮಾಡಬಲ್ಲದು. ನಿದ್ದೆ ಮುಗಿಸಿ ಎದ್ದ ಸುಮಾರು ಮೂರು ತಾಸುಗಳವರೆಗೆ ದೇಹ-ಮನಸ್ಸುಗಳು ಚೈತನ್ಯಪೂರ್ಣವಾಗಿ ಇರುತ್ತವೆ ಎಂಬುದು ಖಚಿತವಾಗಿದೆ. ಕ್ರೀಡಾಳುಗಳ ಸಹ ತಮ್ಮ ತರಬೇತಿಯ ನಡುವಿನಲ್ಲಿ ಚುಟುಕು ನಿದ್ದೆಗಾಗಿಯೇ ಸಮಯ ನಿಗದಿ ಮಾಡಿಕೊಂಡಿದ್ದರೆ, ದೇಹ ಬಳಲುವುದನ್ನು ತಪ್ಪಿಸಬಹುದು. ಹಲವು ಅಥ್ಲೀಟ್‌ಗಳು ಇದನ್ನು ತಮ್ಮ ಕ್ರೀಡಾ ಜೀವನದ ಭಾಗವೆಂದೇ ಭಾವಿಸುತ್ತಾರೆ.

ಇನ್ನಷ್ಟು ಲಾಭಗಳು

ದೇಹ-ಮನಸ್ಸು ಚೈತನ್ಯಪೂರ್ಣ ಆಗುವುದು ಮಾತ್ರವೇ ಅಲ್ಲದೆ ಹೆಚ್ಚಿನ ಲಾಭಗಳಿವೆ ಇದರಿಂದ. ಮೂಡ್‌ ಸುಧಾರಿಸಿ, ಮನಸ್ಸಿನ ಉಲ್ಲಾಸ ಹೆಚ್ಚಿಸುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ, ಸೃಜನಶೀಲತೆ ವರ್ಧಿಸುತ್ತದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವಾಗ ಇಂಥ ನಿದ್ದೆಗಳು ದೇಹದ ದುರಸ್ತಿಗೆ ಗಣನೀಯ ಕೊಡುಗೆ ನೀಡುತ್ತವೆ.

ರಾತ್ರಿ ನಿದ್ದೆಗೆ ಬದಲಲ್ಲ

ಇದಕ್ಕಾಗಿ ರಾತ್ರಿಯೆಲ್ಲ ನಿದ್ದೆಗೆಟ್ಟು ಮೊಬೈಲು ಗೀರುತ್ತಾ, ಸಿನೆಮ ನೋಡುತ್ತಾ ಕೂತು, ಹಗಲಿಗೆ ನಿದ್ದೆ ಮಾಡಿ, ಮೆದುಳನ್ನು ಚುರುಕಾಗಿ ಇಟ್ಟುಕೊಳ್ಳುತ್ತೇವೆ ಎಂದು ಬೀಗುವುದಲ್ಲ. ಮಾತ್ರವಲ್ಲ, ಹಗಲಿನ ನಿದ್ದೆ ಚುಟುಕಾಗದೆ ತೀರಾ ದೀರ್ಘವಾದರೆ, ರಾತ್ರಿಯ ಪಾಲಿಗೆ ಕುಟುಕು ನಿದ್ದೆಯಾಗಬಹುದು. ಹಾಗಾಗಿ ಹಗಲಿಗೆ ಮಾಡುವ ನಿದ್ದೆಯಿಂದ ರಾತ್ರಿಯ ನಿದ್ದೆಯ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿದೆ ಎಂದಾದರೆ, ಹಗಲಿನ ನಿದ್ದೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ರಾತ್ರಿಯ ನಿದ್ರಾಹೀನತೆಗೆ ಚುಟುಕು ನಿದ್ದೆ ಮದ್ದೂ ಅಲ್ಲ. ರಾತ್ರಿಗೆ 7-8 ತಾಸಿನ ನಿದ್ದೆಯ ಅವಧಿಯಲ್ಲಿ ತೊಂದರೆಯಾದರೆ, ಅದನ್ನು ಪ್ರತ್ಯೇಕವಾಗಿಯೇ ಸರಿ ಪಡಿಸಿಕೊಳ್ಳುವುದು ಸೂಕ್ತ. ಹಗಲಿನ ಸುಸ್ತು, ಒತ್ತಡ, ಆಯಾಸಗಳ ನಡುವೆ ಕೆಲಸ ಮಾಡುವುದಕ್ಕೆ ತೊಂದರೆಯಾಗದಂತೆ ಮಾತ್ರವೇ ಕೋಳಿ ನಿದ್ದೆಯನ್ನು ಉಪಯೋಗಿಸಿಕೊಳ್ಳುವುದು ಜಾಣತನ.

ಎಷ್ಟು ಹೊತ್ತು?

ಮಧ್ಯಾಹ್ನದ 1 ಗಂಟೆಯಿಂದ 4 ಗಂಟೆಯ ನಡುವೆ, 20 ನಿಮಿಷಕ್ಕಿಂತ ಕಡಿಮೆ ಸಮಯದ ನಿದ್ದೆ ಎಲ್ಲ ರೀತಿಯಲ್ಲೂ ಒಳ್ಳೆಯ ಪರಿಣಾಮವನ್ನು ನೀಡುತ್ತದೆ. ಇನ್ನೂ ದೀರ್ಘ ಕಾಲ ನಿದ್ದೆ ಮಾಡಿದರೆ, ಎದ್ದಾಗ ಮಂಕು ಕವಿದಂತೆ, ದೇಹವೆಲ್ಲ ಜಡವಾದಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ, ಗಾಢ ನಿದ್ದೆಯ ಆವರ್ತನವನ್ನು ದೇಹ ಪ್ರವೇಶಿಸುವುದು. ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಗಳಿಂದ ದೇಹಕ್ಕೆ ತೀವ್ರ ಆಯಾಸವಾದಾಗಲೂ ನಿದ್ದೆಯ ಅವಧಿ 30 ನಿಮಿಷ ಮೀರದಿದ್ದರೆ ಒಳ್ಳೆಯದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Monsoon Healthy Cooking Tips: ಎಲ್ಲೆಲ್ಲೂ ವೈರಲ್‌ ಜ್ವರಗಳು, ಇನ್‌ಫೆಕ್ಷನ್‌ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು.

VISTARANEWS.COM


on

Monsoon Healthy Cooking Tips
Koo

ಮಳೆಗಾಲ (Monsoon) ಜೋರಾಗಿದೆ. ಹಾಗಾಗಿ ವೈರಸ್‌, ಬ್ಯಾಕ್ಟೀರಿಯಾಗಳ ಸದ್ದೂ ಜೋರಾಗಿದೆ. ಎಲ್ಲೆಲ್ಲೂ ವೈರಲ್‌ ಜ್ವರಗಳು, ಇನ್‌ಫೆಕ್ಷನ್‌ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು. ಸೊಪ್ಪಿನ ಅಡುಗೆ ಮಾಡುವ ಮುನ್ನ ಮಳೆಗಾಲದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹಾಗಂತ ಮಳೆಗಾಲದಲ್ಲಿ ಇವನ್ನು ತಿನ್ನಲೇಬಾರದು ಎಂದಲ್ಲ. ಎಚ್ಚರಿಕೆ ಖಂಡಿತ ಬೇಕು. ಮಳೆಗಾಲದಲ್ಲಿ ಸೊಪ್ಪಿನ ಮೇಲೆ ಸಾಕಷ್ಟು ಬ್ಯಾಕ್ಟೀರಿಯಾ, ವೈರಸ್‌ ದಾಳಿಯಾಗಿರುತ್ತದೆ. ಹುಳು ಹುಪ್ಪಟೆಗಳೂ ಸಾಮಾನ್ಯ. ಆದ್ದರಿಂದ ಇವುಗಳು ನಮ್ಮ ದೇಹಕ್ಕೆ ಪ್ರವೇಶಿಸುವ ಮಾರ್ಗ ಸುಲಭವಾಗಿ ಬಿಡುತ್ತದೆ. ನಾವು ಅವುಗಳನ್ನು ಸರಿಯಾಗಿ ತೊಳೆದು ಬಳಸದಿದ್ದರೆ ಹೊಟ್ಟೆ ಕೆಡುವ ಸಮಸ್ಯೆ, ಬೇದಿ, ವಾಂತಿ ಇತ್ಯಾದಿಗಳೂ ಬರಬಹುದು. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪು ಸದೆಗಳನ್ನು ಅಡುಗೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ ಎನ್ನುತ್ತಾರೆ ತಜ್ಞರು. ಬನ್ನಿ, ಸೊಪ್ಪು ಸೇವಿಸುವ ಮುನ್ನ ಯಾವ ಎಚ್ಚರಿಕೆಗಳು (Monsoon Healthy Cooking Tips) ಮುಖ್ಯ ಎಂಬುದನ್ನು ನೋಡೋಣ. ಮಳೆಗಾಲದಲ್ಲಿ, ಸಹಜವಾಗಿ ಕೆಲವು ಸೊಪ್ಪುಗಳು ತರಕಾರಿ ಮಾರುಕಟ್ಟೆಯಲ್ಲಿ ಕಾಣೆಯಾಗುತ್ತದೆ. ಬಹಳ ಸೂಕ್ಷ್ಮವಾಗಿರುವ ಪಾಲಕ್‌ನಂತಹ ಸೊಪ್ಪುಗಳು ಮಳೆಗಾಲದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಹರಿದು ಛಿದ್ರವಾಗುವುದರಿಂದ ಮಾರುಕಟ್ಟೆಗೆ ಬರುವುದೇ ಇಲ್ಲ. ಮೆಂತ್ಯ ಸೊಪ್ಪೂ ಕೂಡಾ ಅಷ್ಟೇ, ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿರುವುದಿಲ್ಲ. ಕೆಲವು ಸೊಪ್ಪುಗಳು ಮಳೆಗಾಲಕ್ಕೆ ಸರಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಆದರೆ, ಮಳೆಗಾಲವಾದ್ದರಿಂದ ಸೊಪ್ಪು ಹರದಿರುವುದು, ಬೇರುಗಳೆಲ್ಲ ಕೆಸರಾಗಿರುವುದು, ಹುಳು ಹುಪ್ಪಟೆಗಳು ಎಲೆಯನ್ನು ಕಚ್ಚಿ ಹರಿದಿರುವುದು, ಎಲೆಯ ಅಡುಭಾಗದಲ್ಲಿ ಹುಳಗಳು ಹರಿದುಹೋಗಿರುವ ಗುರುತು ಇವೆಲ್ಲವೂ ಸಾಮಾನ್ಯವಾಗಿರುತ್ತದೆ. ಹಾಗಾಗಿಯೇ ಸೊಪ್ಪಿನ ಅಡುಗೆ ಮಾಡುವಾಗ ಎಚ್ಚರಿಕೆ ಬಹಳ ಅಗತ್ಯ.

Healthy Cooking Tips

ಸೊಪ್ಪಿನ ಅಡುಗೆ ಮಳೆಗಾಲದಲ್ಲಿ ಮಾಡುವ ಮೊದಲು ಸೊಪ್ಪನ್ನು ಮೊದಲು ಬಿಡಿಸಿ. ನೀರಲ್ಲಿ ಹಾಕಿಟ್ಟು ತೊಳೆಯಿರಿ. ಹುಳ ಹುಪ್ಪಟೆಗಳಿರುವ ಎಲೆಗಳನ್ನು ಬಳಸದಿರಿ. ಸರಿಯಾಗಿರುವ, ಆರೋಗ್ಯವಾಗಿ ಕಾಣುವ ಎಲೆಗಳನ್ನು ಆರಿಸಿಕೊಂಡು ಪ್ರತ್ಯೇಕವಾಗಿಟ್ಟು, ಉಳಿದವನ್ನು ಎಸೆಯಿರಿ. ಪ್ರತಿಯೊಂದು ಎಲೆಯನ್ನೂ ಸೂಕ್ಷ್ಮವಾಗಿ ಗಮನಿಸಿ. ಸರಿಯಾಗಿರುವ ಎಲೆಯನ್ನು ಮಾತ್ರ ಚೆನ್ನಾಗಿ ಎರಡೆರಡು ಬಾರಿ ತೊಳೆದುಕೊಂಡು ಅದರ ಕಾಂಡಗಳನ್ನು ಕತ್ತರಿಸಿ ಎಸೆಯಿರಿ.

ಹರಿಯುವ ನೀರಿಗೆ ಹಿಡಿದು ತೊಳೆಯಿರಿ. ಮಾರುಕಟ್ಟೆಯಿಂದ ತಂದ ಕೃತಕ ತೊಳೆಯುವ ಲಿಕ್ವಿಡ್‌ಗಳಲ್ಲಿ ಹಾಕಿಟ್ಟು ತೊಳೆಯುವುದರಿಂದ ಎಲೆ ಮತ್ತಷ್ಟು ಹಾಳಾಗಬಹುದು. ಅದಕ್ಕಾಗಿ, ನಳ್ಳಿಯ ಅಡಿಯಲ್ಲಿ ಹಿಡಿದು ಹರಿಯುವ ನೀರಿನಲ್ಲಿ ತೊಳೆಯಿರಿ.

Hand Washing Leafy Greens

ತೊಳೆದ ಎಲೆಗಳನ್ನು ಆರಲು ಬಿಡುವುದು ಬಹಳ ಮುಖ್ಯ. ಒಣ ಟವೆಲ್‌ ಮೇಲೆ ತೊಳೆದ ಎಲೆಗಳನ್ನು ಹರವಿಟ್ಟು ಮೃದುವಾಗಿ ಒರೆಸಬಹುದು. ಅಥವಾ ಹಾಗೆಯೇ ಸ್ವಲ್ಪ ಹೊತ್ತು ಬಿಟ್ಟು ಹೆಚ್ಚಿನ ನೀರಿನಂಶ ಆರಲು ಬಿಡಬಹುದು.

ಎಲೆಗಳನ್ನು ತೊಳೆದುಕೊಂಡ ಮೇಳೆ ಒಂದೆರಡು ನಿಮಿಷಗಳ ಕಾಲ ಐಸ್‌ ನೀರಿನಲ್ಲಿ ಹಾಕಿಟ್ಟುಕೊಂಡು ನಂತರ ತೆಗೆಯಬಹುದು. ಹೀಗೆ ಮಾಡುವುದರಿಂದ ಎಲೆಯ ತಾಜಾತನ ಹಾಗೆಯೇ ಉಳಿದುಕೊಳ್ಳುತ್ತದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಹಸಿ ಎಲೆಗಳಿಂದ ಮಾಡುವ ಅಡುಗೆಯನ್ನು ಮಳೆಗಾಲದಲ್ಲಿ ಮಾಡಬೇಡಿ. ಬಾಣಲೆಯಲ್ಲಿ ಎಲೆಯನ್ನು ಬಾಡಿಸಿಕೊಂಡು, ಬಿಸಿ ಮಾಡುವ ಮೂಲಕ ಮಾಡುವ ಅಡುಗೆಯನ್ನೇ ಮಾಡಿ. ಮಳೆಗಾಲದಲ್ಲಿ ಹಸಿ ಸೊಪ್ಪು ತರಕಾರಿಗಳನ್ನು ಹಾಗೆಯೇ ಹಸಿಯಾಗಿ ಬಳಸಬೇಡಿ.

Continue Reading

ಆರೋಗ್ಯ

Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

Nonstick Pans: ಟೆಫ್ಲಾನ್‌ ಫ್ಲೂ (Teflon flu) ಯಾವುದೇ ರೋಗಾಣುವಿನಿಂದ ಹರಡುವ ಸೋಂಕಲ್ಲ. ಬದಲಿಗೆ ನಾನ್‌ಸ್ಟಿಕ್‌ ಪಾತ್ರೆಗಳಿಂದ ಬಿಡುಗಡೆಯಾಗುವ ವಿಷಯುಕ್ತ ಹೊಗೆಯಿಂದ, ಫ್ಲೂ ಮಾದರಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಲೆನೋವು, ಮೈಕೈ ನೋವು, ಜ್ವರ, ನಡುಕ ಮುಂತಾದ ಶೀತ-ಜ್ವರದ ರೀತಿಯಲ್ಲೇ ಅನಾರೋಗ್ಯ ಉಂಟಾಗುತ್ತದೆ. ಹೆಚ್ಚಿನ ವಿವರಗಳು ಈ ಲೇಖನದಲ್ಲಿವೆ.

VISTARANEWS.COM


on

Nonstick Pans
Koo

ಟೆಫ್ಲಾನ್‌ ಫ್ಲೂ ಎಂಬ ಹೆಸರನ್ನು ಕೇಳಿದ್ದೀರಾ? ಜಗತ್ತಿನೆಲ್ಲೆಡೆ ಹರಡುತ್ತಿರುವ ಲೆಕ್ಕವಿಲ್ಲದಷ್ಟು ರೋಗಗಳ ಪೈಕಿ ಇದೂ ಒಂದು; ಯಾವುದೋ ಹೆಸರು ಕೇಳದ ಹೊಸ ವೈರಸ್‌ನಿಂದ ಬಂದಿದ್ದು ಎಂದು ಭಾವಿಸಬೇಡಿ. ಇದು ಯಾವುದೇ ರೋಗಾಣುವಿನಿಂದ ಬರುತ್ತಿರುವ ಫ್ಲೂ ಅಲ್ಲ, ನಾನ್‌ಸ್ಟಿಕ್‌ ಪಾತ್ರೆಗಳಿಂದ ಹೊಮ್ಮುತ್ತಿರುವ ವಿಷಯುಕ್ತ ಹೊಗೆಯಿಂದ ಬರುತ್ತಿರುವ ಆರೋಗ್ಯ ಸಮಸ್ಯೆಯಿದು. ಅಮೆರಿಕದಾದ್ಯಂತ ನೂರಾರು ಜನ ಈಗಾಗಲೇ ಈ ವಿಚಿತ್ರ ಸಮಸ್ಯೆಗೆ ತುತ್ತಾಗಿದ್ದಾರೆ. ಏನಿದು ಎನ್ನುವ ವಿವರಗಳು ಇಲ್ಲಿವೆ. ಟೆಫ್ಲಾನ್‌ ಫ್ಲೂ (Teflon flu) ಎನ್ನಲಾಗುವ ಈ ಸಮಸ್ಯೆಯನ್ನು ಪಾಲಿಮರ್‌ ಹೊಗೆಯ ಜ್ವರ (polymer fume fever) ಎಂದೂ ಕರೆಯಲಾಗುತ್ತದೆ. ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಿಸಿ ಮಾಡಿದಾಗ, ಆ ಶಾಖಕ್ಕೆ ಆ ಪಾತ್ರೆಗಳಿಂದ ಬಿಡುಗಡೆಯಾಗುವ ಹೊಗೆಗೆ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಯಿದು. ಟೆಫ್ಲಾನ್‌ ಎಂಬುದು ಯಾವುದೇ ರಾಸಾಯನಿಕವಲ್ಲ, ಬದಲಿಗೆ ಪಾಲಿಟೆಟ್ರಾಫ್ಲೂರೊಈಥೈಲೀನ್‌ ಎಂಬ ರಾಸಾಯನಿಕ ಸಂಯುಕ್ತದ ಬ್ರಾಂಡ್‌ ಹೆಸರು. ಸಾಮಾನ್ಯವಾಗಿ ಟೆಫ್ಲಾನ್‌ ಮೇಲ್ಮೈ ಹೊಂದಿರುವ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸುರಕ್ಷಿತ ಎಂದೇ ಭಾವಿಸಲಾಗುತ್ತದೆ. ಆದರೆ ಅದರಲ್ಲೂ ಸಮಸ್ಯೆಗಳಿವೆ ಎಂಬುದಕ್ಕೆ ಈಗ (Nonstick Pans) ಕಾಣುತ್ತಿರುವ ಟೆಫ್ಲಾನ್‌ ಫ್ಲೂ ಉದಾಹರಣೆ.

Nonstick Frying Pan with Handle
Nonstick Frying Pan with Handle

ಲಕ್ಷಣಗಳೇನು?

ಈ ಹೊಸ ಬಗೆಯ ರೋಗದಲ್ಲಿ ಯಾವುದೇ ರೋಗಾಣುವಿನಿಂದ ಸೋಂಕು ಹರಡುವುದಿಲ್ಲ. ಬದಲಿಗೆ ವಿಷಯುಕ್ತ ಹೊಗೆಯಿಂದ ಫ್ಲೂ ಮಾದರಿಯಲ್ಲೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಲೆನೋವು, ಮೈಕೈ ನೋವು, ಜ್ವರ, ನಡುಕ ಮುಂತಾದ ಶೀತ-ಜ್ವರದ ಮಾದರಿಯಲ್ಲೇ ಅನಾರೋಗ್ಯ ಉಂಟಾಗುತ್ತದೆ. ಕಳೆದೊಂದು ವರ್ಷದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಅಮೆರಿಕನ್ನರು ಇದೇ ಲಕ್ಷಣಗಳನ್ನು ಹೊತ್ತು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಕಾರಣವೇನು?

ಇದು ಸಾಮಾನ್ಯವಾಗಿ ಬಳಕೆಗೆ ಸುರಕ್ಷಿತವಾಗ ರಾಸಾಯನಿಕ ಎಂದೇ ಹೇಳಲಾಗುತ್ತದೆ. ಆದರೆ ಈ ಹೊದಿಕೆಯನ್ನು ಹೊಂದಿದ ಪಾತ್ರೆಗಳನ್ನು ಬಳಸುವಾಗ ಕೆಲವು ಜಾಗ್ರತೆಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಇವುಗಳನ್ನು ಕೆರೆದು ಗೆರೆಯಾದರೆ, ಹೊದಿಕೆ ಕಿತ್ತು ಹೋದರೆ, ಅಲ್ಲಿಂದ ರಾಸಾಯನಿಕಗಳು ಹೊರಗೆ ಸೋರುತ್ತವೆ. ಈ ಪಾತ್ರೆಗಳನ್ನು ಅತಿಯಾಗಿ ಬಿಸಿ ಮಾಡಿದಾಗ ಸೋರಿ ಹೊರಬಂದ ರಾಸಾಯನಿಕಗಳು ಆವಿಯಾಗಿ ಸುತ್ತಲಿನ ವಾತಾವರಣ ಸೇರುತ್ತವೆ. ಇದನ್ನು ಉಸಿರಾಡಿದಾಗ ಹೀಗೆ ಫ್ಲೂ ಮಾದರಿಯ ಜ್ವರ ಕಾಣಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಸುರಕ್ಷತಾ ಕ್ರಮಗಳೇನು?

ನಾನ್‌ಸ್ಟಿಕ್‌ ಪಾತ್ರೆಗಳನ್ನು 500 ಡಿ. ಫ್ಯಾ. ಅಥವಾ 260 ಡಿ. ಸೆ. ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಬಿಸಿ ಮಾಡಿದಾಗ ಇಂಥ ಪರಿಣಾಮಗಳು ಆಗುವ ಸಾಧ್ಯತೆ ಹೆಚ್ಚು. ಐಸಿಎಂಆರ್‌ ಪ್ರಕಾರ, ನಾನ್‌ಸ್ಟಿಕ್‌ ಪಾತ್ರೆಗಳನ್ನು 170 ಡಿ. ಸೆ.ಗಿಂತ ಹೆಚ್ಚು ಬಿಸಿ ಮಾಡಬಾರದು. ಅದಲ್ಲದೆ, ಟೆಫ್ಲಾನ್‌ ಫ್ಯಾನ್‌ಗಳನ್ನು ಒವನ್‌ನಲ್ಲಿ ಪ್ರೀಹೀಟ್‌ ಮಾಡಬೇಡಿ. ಉರಿಯಲ್ಲಿ ದೀರ್ಘಕಾಲ ಖಾಲಿ ಬಿಡಬೇಡಿ. ಇದರಿಂದ ಹೊಗೆಯೇಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೇಲ್ಮೈ ಗೆರೆಯಾದ ಮತ್ತು ಕಿತ್ತುಹೋದ ಟೆಫ್ಲಾನ್‌ ಪಾತ್ರೆಗಳನ್ನು ಬಿಸಾಡಿ, ಬಳಸಬೇಡಿ. ನಾನ್‌ಸ್ಟಿಕ್‌ ಹೊದಿಕೆಯನ್ನು ʻಫಾರ್‌ಎವರ್‌ ಕೆಮಿಕಲ್ಸ್‌ʼ ಅಥವಾ ʻಎಂದೂ ಕರಗದ ರಾಸಾಯನಿಕʼಗಳೆಂದು ಕರೆಯುವ ಪಿಎಫ್‌ಎಎಸ್‌ಗಳಿಂದ ತಯಾರಿಸಲಾಗುತ್ತದೆ. per- and polyfluoroalkyl substances ಎನ್ನುವ ರಾಸಾಯನಿಕಗಳಿವು. ಸುಮಾರು 15000ರಷ್ಟು ಸಂಖ್ಯೆಯಲ್ಲಿರುವ ಈ ಸಂಕೀರ್ಣ ಸಿಂಥೆಟಿಕ್‌ ವಸ್ತುಗಳು, ವಾತಾವರಣದಲ್ಲೂ, ದೇಹದಲ್ಲೂ ಒಮ್ಮೆ ಸೇರಿದರೆ ದೀರ್ಘ ಕಾಲದವರೆಗೆ ಅವುಗಳನ್ನು ಅಲ್ಲಿಂದ ತೆಗೆಯುವುದಕ್ಕಾಗದು. ದೇಹದಲ್ಲಿಯೂ ಹೆಚ್ಚು ಸಮಯ ಇರಿಸಿಕೊಂಡರೆ, ಶರೀರವನ್ನು ವಿಷಮಯವಾಗಿಸುತ್ತವೆ ಇವು. 1950ರಿಂದಲೇ ಈ ರಾಸಾಯನಿಕಗಳು ಬಳಕೆಯಲ್ಲಿವೆ. ನೀರು, ತೈಲ, ಬಿಸಿ, ಕಲೆ ಮುಂತಾದವನ್ನು ತಡೆದುಕೊಳ್ಳಬಲ್ಲ ಮೇಲ್ಮೈ ನಿರ್ಮಾಣಕ್ಕೆ ಇದೇ ಗುಂಪಿನ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ನಾನ್‌ಸ್ಟಿಕ್‌ ಪಾತ್ರೆಗಳಲ್ಲಿ ಮಾತ್ರವಲ್ಲ, ಬಟ್ಟೆ, ಪೀಠೋಪಕರಣಗಳು, ಅಂಟು, ಆಹಾರದ ಪ್ಯಾಕಿಂಗ್‌ ವಸ್ತುಗಳು, ಸೆಲ್‌ಫೋನು, ಐರನ್‌ ಬಾಕ್ಸ್‌, ಎಲೆಕ್ಟ್ರಿಕ್‌ ವಯರ್‌ಗಳ ಇನ್‌ಸುಲೇಶನ್…‌ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.

Continue Reading

ಆರೋಗ್ಯ

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

ಭಾರತದಲ್ಲಿ ಹದ್ದುಗಳ ಅವನತಿಯಿಂದ (Decline of Vultures) 2000 ಮತ್ತು 2005 ರ ನಡುವೆ ಜನರ ಸಾವಿನ ಪ್ರಮಾಣ 5,00,000 ಗಳಿಗೆ ಏರಿಕೆಯಾಗಿರುವುದಾಗಿ ಅಮೆರಿಕದ ಸಂಶೋಧಕರು ತಿಳಿಸಿದ್ದಾರೆ. ರಣಹದ್ದುಗಳು ಪ್ರಕೃತಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತದೆ. ಅದು ನಮ್ಮ ಪರಿಸರದಿಂದ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳನ್ನು ಒಳಗೊಂಡಿರುವ ಸತ್ತ ಪ್ರಾಣಿಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅವುಗಳಿಲ್ಲದೆ ರೋಗವು ಹರಡುವುದು ಹೆಚ್ಚಾಗುತ್ತದೆ ಎನ್ನುತ್ತಾರೆ ಸಂಶೋಧನಾಕಾರರು.

VISTARANEWS.COM


on

By

Decline of Vultures
Koo

ಬೆಂಗಳೂರು: ನೋಡಲು ಭೀಕರವಾಗಿರುವ ಹಾಗೂ ಸತ್ತ ಪ್ರಾಣಿಗಳ ಮಾಂಸವನ್ನು ಕಿತ್ತು ತಿನ್ನುವ ರಣ ಹದ್ದುಗಳು ಮಾನವನ ಜೀವ ರಕ್ಷಕ ಎಂದರೆ ನಂಬುವಿರಾ? ನಂಬಲೇಬೇಕು. ಯಾಕೆಂದರೆ ಈ ಮಾತು ಸತ್ಯ ಎಂಬುದನ್ನು ಅಮೆರಿಕದ ಅಧ್ಯಯನವೊಂದು ಹೇಳಿದೆ. ಅಲ್ಲದೆ, ಭಾರತದಲ್ಲಿ ರಣ ಹದ್ದುಗಳು (Indian Vultures ) ಸಂಖ್ಯೆ ಗಣನೀಯವಾಗಿ ಕುಸಿದ ಕಾರಣ 2000 ಮತ್ತು 2005ರ ನಡುವೆ ಸುಮಾರು 5,00,000 ಮಂದಿಯ ಪ್ರಾಣ ಹಾನಿಯಾಗಿದೆ ಎಂಬುದನ್ನು ಸಂಶೋಧನೆ ಮೂಲಕ ಪತ್ತೆ ಹಚ್ಚಿದೆ. ಅಮೆರಿಕನ್ ಎಕನಾಮಿಕ್ ರಿವ್ಯೂನ (American Economic Association) ಅಧ್ಯಯನ ನಡೆಸಿದ್ದು ರಣ ಹದ್ದುಗಳು ಹೇಗೆ ಮನುಷ್ಯನ ಪ್ರಾಣ ಕಾಪಾಡಬಲ್ಲುದು ಎಂಬುದನ್ನು ತಿಳಿಸಿದೆ.

ಭಾರತದಲ್ಲಿ ರಣಹದ್ದುಗಳ ಸಾವು ಆತಂಕಕಾರಿಯಾಗಿದೆ. 1990ರ ದಶಕದ ಮಧ್ಯಭಾಗದಿಂದ ಈ ಪಕ್ಷಿಗಳ ಸಂಖ್ಯೆಯಲ್ಲಿ ಕುಸಿತ ಕಂಡು ಆರಂಭಗೊಂಡಿದೆ. ಬಳಿಕ ಇದು ಸಂರಕ್ಷಣಾಕಾರರು ಸೇರಿದಂತೆ ಅನೇಕರು ಕಾಳಜಿ ವ್ಯಕ್ತಪಡಿಸಿದ್ದರು. ಹಾಗಾದರೆ ರಣ ಹದ್ದುಗಳು ಸಾಯುವುದಕ್ಕೆ ಕಾರಣವೇನು ಎಂಬುದನ್ನು ನೋಡೋಣ.

ರಣಹದ್ದುಗಳ ಸಾವಿಗೆ ಕಾರಣ?

ಜಾನುವಾರುಗಳ ಚಿಕಿತ್ಸೆಗೆ ಬಳಸುವ ಪಶುವೈದ್ಯಕೀಯ ನೋವು ನಿವಾರಕ ಔಷಧ ಡಿಕ್ಲೋಫೆನಾಕ್ ಈ ಪಕ್ಷಿಗಳಿಗೆ ಮಾರಕವಾಗಿದೆ ಎಂಬುದೇ ಅಧ್ಯಯನ ಪತ್ತೆ. 1994ರಲ್ಲಿ ಈ ಔಷಧವನ್ನು ಕಂಡುಹಿಡಿದ ಬಳಿಕ ರಣಹದ್ದುಗಳ ಅವನತಿಯ ಅಂಚಿಗೆ ಹೊರಟಿತು ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಈ ಔಷಧವು ಪಕ್ಷಿಗಳಿಗೆ ಮೂತ್ರಪಿಂಡದ ಹಾನಿ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ರಣಹದ್ದುಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ವರದಿಯಲ್ಲಿದೆ.

ಕೇವಲ ಒಂದು ದಶಕದಲ್ಲಿ ರಣಹದ್ದುಗಳ ಸಂಖ್ಯೆಯು 5 ಕೋಟಿಯಿಂದ ಕೆಲವೇ ಸಾವಿರಕ್ಕೆ ಇಳಿದಿದೆ. ಅತಿ ಹೆಚ್ಚು ಹಾನಿಗೊಳಗಾದ ಜಾತಿಯ ಬಿಳಿ ರಂಪ್ಡ್ ರಣಹದ್ದು ಪ್ರಮಾಣ 1992 ಮತ್ತು 2007 ರ ನಡುವೆ ಶೇ. 99.9ರಷ್ಟು ಕುಸಿದಿದೆ. ಅಂತಿಮವಾಗಿ ಭಾರತದಲ್ಲಿ 2006 ರಲ್ಲಿ ಡಿಕ್ಲೋಫೆನಾಕ್ ಅನ್ನು ನಿಷೇಧಿಸಲಾಗಿದೆ.

ಕೆಲವು ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆ ವೃದ್ಧಿಗೆ ಕ್ರಮ ಕೈಗೊಂಡರೂ ಈ ಔಷಧದ ಪರಿಣಾಮ ರಣಹದ್ದುಗಳ ಸಂಖ್ಯೆ ಹೆಚ್ಚಳದ ಮೇಲೆ ದೀರ್ಘಾವಧಿಯ ಬೀರಿದೆ. ಮುಖ್ಯವಾಗಿ ಮೂರು ರಣಹದ್ದುಗಳ ಜಾತಿಗಳು ತಮ್ಮ ಪ್ರಮಾಣದಲ್ಲಿ ಶೇ. 91 ರಿಂದ 98 ರಷ್ಟನ್ನು ನಷ್ಟ ಮಾಡಿಕೊಂಡಿದೆ ಎಂದು ಇತ್ತೀಚಿನ ಸ್ಟೇಟ್ ಆಫ್ ಇಂಡಿಯಾದ ಪಕ್ಷಿಗಳ ವರದಿ ತಿಳಿಸಿದೆ.

ಮಾನವರ ಸಾವಿಗೆ ಹೇಗೆ ಕಾರಣ?

ಹದ್ದುಗಳ ಅವನತಿಯಿಂದ 2000 ಮತ್ತು 2005ರ ನಡುವೆ 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂಬುದೇ ಅಚ್ಚರಿಯ ವಿಷಯ ಎಂಬುದಾಗಿ ಅಧ್ಯಯನದ ಸಹ-ಲೇಖಕರಾದ ಐಯಲ್ ಫ್ರಾಂಕ್ ಅವರು ತಿಳಿಸಿದ್ದಾರೆ.

ಚಿಕಾಗೋ ವಿಶ್ವವಿದ್ಯಾಲಯದ ಹ್ಯಾರಿಸ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು, ರಣಹದ್ದುಗಳು ಪ್ರಕೃತಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತವೆ. ಅದು ನಮ್ಮ ಪರಿಸರದಿಂದ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳನ್ನು ಒಳಗೊಂಡಿರುವ ಸತ್ತ ಪ್ರಾಣಿಗಳನ್ನು ಶುಚಿಗೊಳಿಸುತ್ತವೆ. ಅವುಗಳಿಲ್ಲದ ಕಾರಣ ರೋಗವು ಮನುಷ್ಯನಿಗೆ ಹರಡುವುದು ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾನವನ ಆರೋಗ್ಯದಲ್ಲಿ ರಣಹದ್ದುಗಳು ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಬಹುಮುಖ್ಯ. ಇದು ವನ್ಯಜೀವಿಗಳನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ವನ್ಯಜೀವಿಗಳು ಪರಿಸರ ಸಂರಕ್ಷಣೆಯ ಕೆಲಸವನ್ನು ನಿರ್ವಹಿಸುತ್ತದೆ. ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಯಾಕೆ ರೋಗ ಹರಡುವಿಕೆ ಹೆಚ್ಚಳವಾಯಿತು?

ಹದ್ದುಗಳ ಸಂಖ್ಯೆಯಲ್ಲಿ ಕುಸಿತ ಭಾರತದಲ್ಲಿ ಮಾನವನ ಸಾವಿನ ಹೆಚ್ಚಳಕ್ಕೆ ಕಾರಣವಾಯಿತು ಎನ್ನುವ ಐಯಲ್ ಫ್ರಾಂಕ್ ಮತ್ತು ಅವರ ಸಹ-ಲೇಖಕ ಅನಂತ್ ಸುದರ್ಶನ್ ಅವರು ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.

ಸತ್ತ ಜೀವಿಗಳನ್ನು ಇಲಿ, ನಾಯಿಗಳು ತಿನ್ನಲು ಪ್ರಾರಂಭಿಸಿದ್ದರಿಂದ ದೇಶದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಪ್ರಕರಣ ಹೆಚ್ಚಳವಾಗಿದೆ. ದೇಶಾದ್ಯಂತ ರೇಬೀಸ್ ಲಸಿಕೆ ಮಾರಾಟವೂ ಹೆಚ್ಚಳವಾಗಿದೆ. ರೇಬೀಸ್ ಸೋಂಕಿತ ನಾಯಿಗಳು ಮಾನವರನ್ನು ಕಚ್ಚುತ್ತಿರುವುದರಿಂದ ಹಲವು ಸಾವು ಸಂಭವಿಸಿದೆ ಎಂಬುದಾಗಿ ಅಧ್ಯಯನದಲ್ಲಿ ಹೇಳಲಾಗಿದೆ.

Decline of Vultures
Decline of Vultures


ರೋಗಕಾರಕ ವ್ಯಕ್ತಿಯ ಶವಗಳನ್ನು ತಿನ್ನುವ ರಣಹದ್ದುಗಳು ಉಳಿದ ಪ್ರಾಣಿಗಳಲ್ಲಿ ಸೋಂಕು ಹರಡುವುದನ್ನು ಕಡಿಮೆ ಮಾಡುತ್ತದೆ. ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತದಿಂದ ರೈತರು ತಮ್ಮ ಜಾನುವಾರುಗಳ ಶವಗಳನ್ನು ನದಿಗಳಿಗೆ ಹಾಕುತ್ತಿದ್ದಾರೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಈ ನೀರು ಜನರ ಆರೋಗ್ಯ ಹದಗೆಡಿಸುತ್ತಿದೆ.

ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ರಾಸಾಯನಿಕಗಳನ್ನು ಬಳಸುವಂತೆ ಭಾರತ ಸರ್ಕಾರವು ಹೇಳಿದೆ. ಇದರಿಂದಲೂ ಜಲಮಾರ್ಗಗಳನ್ನು ಕಲುಷಿತಗೊಳ್ಳುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಭಾರತದ 600 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ. ಕಸ ಸುರಿಯುವುದು, ಶವದ ರಾಶಿಗಳು ಹೆಚ್ಚಾಗಿರುವ ನಗರ ಪ್ರದೇಶಗಳಲ್ಲಿ 2000 ಮತ್ತು 2005 ರ ನಡುವಿನ ರಣಹದ್ದುಗಳ ನಷ್ಟವು ವಾರ್ಷಿಕವಾಗಿ ಸುಮಾರು 1,00,000 ಹೆಚ್ಚುವರಿ ಮಾನವ ಸಾವುಗಳಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ 70 ಶತಕೋಟಿ ಡಾಲರ್ ಗಿಂತ ಹೆಚ್ಚು ನಷ್ಟವಾಗಿದೆ. ರಣಹದ್ದುಗಳ ಸಂಖ್ಯೆಯು ಕ್ಷೀಣಿಸಿದ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ಶೇ. 4ಕ್ಕಿಂತ ಹೆಚ್ಚಾಗಿದೆ ಎನ್ನುತ್ತಾರೆ ಸಂಶೋಧಕರು.

Continue Reading

ಆರೋಗ್ಯ

Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

Sugar Vs Jaggery In Tea: ಸಕ್ಕರೆ ಬಳಸುವ ಬದಲು ಬೆಲ್ಲವನ್ನು ಬಳಸುವ ಮೂಲಕ ನಮ್ಮ ದೇಹಕ್ಕೆ ಒಳ್ಳೆಯದನ್ನೇ ಮಾಡುತ್ತಿದ್ದೇವೆ ಎಂದು ನಾವಂದುಕೊಳ್ಳುತ್ತೇವೆ. ಇದು ಆರೋಗ್ಯಕರ ಎಂಬುದು ನಮ್ಮ ವಾದ. ಸಕ್ಕರೆ ಬಿಡುವುದು ಎಂದರೆ, ಬೆಲ್ಲವನ್ನು ತಿನ್ನಬಹುದು ಎಂದು ನಾವಂದುಕೊಂಡರೆ ಇದರಿಂದ ನಿಜಕ್ಕೂ ಲಾಭ ಪಡೆಯುತ್ತಿದ್ದೇವೆಯೇ ಎಂಬುದನ್ನು ನಾವಿಂದು ಯೋಚಿಸಬೇಕಾಗಿದೆ.

VISTARANEWS.COM


on

Sugar Vs Jaggery In Tea
Koo

ಇಂದು ಜಗತ್ತಿನಲಿ ಆಹಾರದ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಂಸ್ಕರಿಸಿದ ಆಹಾರಗಳು, ಜಂಕ್‌ ಆಹಾರಗಳು ಮಾರುಕಟ್ಟೆಯನ್ನು ಆವರಿಸುವ ಜೊತೆಗೆ ಜನರ ನಿತ್ಯಜೀವನವನ್ನೂ ಆಕ್ರಮಿಸಿವೆ. ಇಂದಿನ ಧಾವಂತದ ಯುಗದಲ್ಲಿ ಎಲ್ಲರೂ ಬಹುಬೇಗನೆ ಆಗುವಂಥದ್ದರ ಮೊರೆ ಹೋಗುವುದು ಸಹಜ. ಆದರೆ, ಇದರ ಜೊತೆಜೊತೆಗೇ ಜನರಲ್ಲಿ ಆರೋಗ್ಯದ ಕಾಳಜಿಯೂ ಹೆಚ್ಚುತ್ತಿದೆ. ಹಳೆಯ ಪದ್ಧತಿಗಳಿಗೆ, ಹಳೆಯ ಆಹಾರಕ್ರಮಗಳಿಗೆ ಮತೆ ಮರಳುತ್ತಿದ್ದಾರೆ. ಅವುಗಳ ಪೈಕಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಕ್ರಮ ಎಂದರೆ, ಬೆಲ್ಲ ಹಾಕಿ ಚಹಾ ಮಾಡುವುದು.
ಸಕ್ಕರೆ ಬಳಸುವ ಬದಲು ಬೆಲ್ಲವನ್ನು (Sugar Vs Jaggery In Tea) ಬಳಸುವ ಮೂಲಕ ನಮ್ಮ ದೇಹಕ್ಕೆ ಒಳ್ಳೆಯದನ್ನೇ ಮಾಡುತ್ತಿದ್ದೇವೆ ಎಂದು ನಾವಂದುಕೊಳ್ಳುತ್ತೇವೆ. ಇದು ಆರೋಗ್ಯಕರ ಎಂಬುದು ನಮ್ಮ ವಾದ. ಸಕ್ಕರೆ ಬಿಡುವುದು ಎಂದರೆ, ಬೆಲ್ಲವನ್ನು ತಿನ್ನಬಹುದು ಎಂದು ನಾವಂದುಕೊಂಡರೆ ಇದರಿಂದ ನಿಜಕ್ಕೂ ಲಾಭ ಪಡೆಯುತ್ತಿದ್ದೇವೆಯೇ ಎಂಬುದನ್ನು ನಾವಿಂದು ಯೋಚಿಸಬೇಕಾಗಿದೆ. ಬೆಲ್ಲ ಎಂದರೆ ಸಕ್ಕರೆಯಾಗಿ ಸಂಸ್ಕರಿಸುವ ಮೊದಲ ರೂಪ. ಸಕ್ಕರೆ ಹಾಗೂ ಬೆಲ್ಲ, ಇವೆರಡರ ಮೂಲವೂ ಒಂದೇ, ಅದು ಕಬ್ಬು. ಹಾಗಾಗಿ ಮೂಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ಆರೋಗ್ಯದ ವಿಚಾರಕ್ಕೆ ಬಂದರೆ ಬೆಲ್ಲದಲ್ಲಿ ಸಾಕಷ್ಟು ಖನಿಜಾಂಶಗಳಿವೆ. ಪೋಷಕಾಂಶಗಳಿವೆ. ಹಾಗಾಗಿ ಆರೋಗ್ಯಕ್ಕೆ ಇದರಲ್ಲಿ ಸಕ್ಕರೆಗಿಂತ ಹೆಚ್ಚಿನ ಲಾಭಗಳಿವೆ. ಸಕ್ಕರೆಯಲ್ಲಿ ಅಂತಹ ಲಾಭಗಳೇನೂ ಇಲ್ಲ. ಸಕ್ಕರೆಯಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ, ಸಕ್ಕರೆಯನ್ನು ಬಿಟ್ಟು ಬೆಲ್ಲವನ್ನು ಬಳಸುವ ಮಂದಿ ಈಚೆಗೆ ಹೆಚ್ಚಾಗುತ್ತಿದ್ದಾರೆ.

Health Benefits Of Jaggery

ಬೆಲ್ಲ ಆರೋಗ್ಯಕರ ಆಯ್ಕೆಯೇನೋ ಹೌದು. ಬೆಲ್ಲದಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ಇತರ ಖನಿಜಾಂಶಗಳು ಸ್ವಲ್ಪ ಇರುವುದು ನಿಜವಾದರೂ ಇದನ್ನು ಚಹಾಕ್ಕೆ ಬಳಸುವುದರಿಂದ ಲಾಭವಾಗುತ್ತದೆಯೋ ಎಂಬುದನ್ನು ನಾವು ತಜ್ಞರ ಮಾತಿನಲ್ಲಿ ಕೇಳಬೇಕಿದೆ. ಯಾಕೆಂದರೆ, ಚಹಾದಲ್ಲಿರುವ ಕೆಲವು ವಸ್ತುಗಳು, ನಮ್ಮ ದೇಹಕ್ಕೆ ಪೋಷಕಾಂಶಗಳು ಸೇರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ಹಾಗಾಗಿ, ಬೆಲ್ಲ ಚಹಾದ ಜೊತೆ ಸೇರಿಕೊಂಡಾಗ, ಬೆಲ್ಲದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರದೆ ಇರುವ ಸಾಧ್ಯತೆಗಳೇ ಹೆಚ್ಚು. ಯಾಕೆಂದರೆ ಅದನ್ನು ಹೀರಿಕೊಳ್ಳಲು ಚಹಾ ಬಿಡುವುದಿಲ್ಲ. ಹೀಗಾಗಿ ಬೆಲ್ಲದ ಕಬ್ಬಿಣಾಂಶ, ಕ್ಯಾಲ್ಶಿಯಂಗಳು ದೇಹಕ್ಕೆ ಸೇರದೆ ನಷ್ಟವಾಗುತ್ತವೆ.

ದೇಹದಲ್ಲಿ ಇನ್ಸುಲಿನ್‌ ದಿಢೀರ್‌ ಏರಲು ಬೆಲ್ಲ, ಸಕ್ಕರೆಯೆಂಬ ಬೇಧವಿಲ್ಲ. ಎಲ್ಲದರಲ್ಲಿಯೂ ಇರುವುದು ಗ್ಲುಕೋಸ್‌. ಹಾಗಾಗಿ, ದೇಹದಲ್ಲಿ ಇದ್ದಕ್ಕಿದ್ದಂತೆ ಗ್ಲುಕೋಸ್‌ ಮಟ್ಟ ಏರಲು ಬೆಲ್ಲೂ ಕೂಡಾ ಸಕ್ಕರೆಯ ಹಾಗೆಯೇ ಕಾರಣವಾಗುತ್ತದೆ.

sugar

ಸಕ್ಕರೆಯ ಹೊರತಾಗಿ ಯಾವುದೇ ಬಗೆಯ ಸಿಹಿಯನ್ನು ಅಂದರೆ, ಬೆಲ್ಲ, ಜೇನುತುಪ್ಪ ಇತ್ಯಾದಿಗಳನ್ನು ಚಹಾಕ್ಕೆ ಸೇರಿದರೂ ಯಾವುದೇ ಲಾಭವಾಗುವುದಿಲ್ಲ. ಅಂತಿಮವಾಗಿ ಅವು ಸಿಹಿಯಾಗಿಯೇ ದೇಹದ ಮೇಲೆ ವರ್ತಿಸುತ್ತವೆ.

ಇದನ್ನೂ ಓದಿ: Weight Lose: ಏನೇ ಸರ್ಕಸ್‌ ಮಾಡಿದರೂ ತೂಕ ಇಳಿಯದೇ? ಹಾಗಿದ್ದರೆ ಕಾರಣ ಇದಾಗಿರಬಹುದು!

ಸಕ್ಕರೆಯುಕ್ತ ಚಹಾ ಸೇವಿಸುವುದರಿಂದ ತೊಂದರೆಯೇನಿಲ್ಲ. ಆದರೆ ಯಾವ ಸಮಯಕ್ಕೆ ಸೇವಿಸಬೇಕು ಎಂಬುದನ್ನು ಪಾಲಿಸಿ. ಬೆಳಗ್ಗೆ ಎದ್ದ ಕೂಡಲೇ ಸೇವಿಸಬೇಡಿ. ಸಂಜೆ ನಾಲ್ಕರ ನಂತರ ಸೇವಿಸುವುದೂ ಕೂಡಾ ಒಳ್ಳೆಯದಲ್ಲ. ರಾತ್ರಿ ಮಲಗುವ ಕನಿಷ್ಟ ಆರು ಗಂಟೆಯ ಮೊದಲು ಸೇವಿಸಿ. ಊಟದ ಜೊತೆಗೆ ಚಹಾ ಸೇವನೆಯೂ ಒಳ್ಳೆಯದಲ್ಲ. ಇದರಿಂದ ಆಹಾರದ ಪೋಷಕಾಂಶಗಳು ದೇಹಕ್ಕೆ ಸೇರದು. ಹಿತಮಿತವಾಗಿ ಚಹಾ ಕಾಫಿ ಸೇವನೆಯಿಂದ ಸಮಸ್ಯೆಯಿಲ್ಲ.

Continue Reading
Advertisement
Road Accident jigani anekal
ಬೆಂಗಳೂರು ಗ್ರಾಮಾಂತರ7 mins ago

Road Accident: ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ

India Pakistan War
ದೇಶ18 mins ago

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

ITR Filing
ಮನಿ-ಗೈಡ್26 mins ago

ITR Filing: ಐಟಿಆರ್ ಸಲ್ಲಿಕೆ; ಜುಲೈ 31ರ ಗಡುವು ತಪ್ಪಿಸಿಕೊಂಡರೆ ಎಷ್ಟು ದಂಡ?

peenya flyover
ಪ್ರಮುಖ ಸುದ್ದಿ30 mins ago

Peenya flyover: ಇಂದಿನಿಂದ ಪೀಣ್ಯ ಮೇಲ್ಸೇತುವೆ ಎಲ್ಲ ವಾಹನಗಳಿಗೆ ಮುಕ್ತ

bbmp lorry road accident
ಬೆಂಗಳೂರು51 mins ago

Road Accident: ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ

Lakshadweep Tour
Latest56 mins ago

Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು

Monsoon Healthy Cooking Tips
ಆರೋಗ್ಯ1 hour ago

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Vastu Tips
ಧಾರ್ಮಿಕ1 hour ago

Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ

Nonstick Pans
ಆರೋಗ್ಯ2 hours ago

Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

karnataka Weather Forecast
ಮಳೆ2 hours ago

Karnataka Weather : ಒಳನಾಡಿನಲ್ಲಿ ಬ್ರೇಕ್‌ ಕೊಟ್ಟು, ಕರಾವಳಿ- ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ14 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ16 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ18 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ19 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌