Coronavirus News: 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ; ರಾಜ್ಯ ಸರ್ಕಾರ ಸಲಹೆ - Vistara News

ಆರೋಗ್ಯ

Coronavirus News: 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ; ರಾಜ್ಯ ಸರ್ಕಾರ ಸಲಹೆ

Coronavirus News: ವೈದ್ಯಕೀಯ ಇಲಾಖಾ ಅಧಿಕಾರಿಗಳ ಜತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ಸೂಕ್ತ ಕ್ರಮಗಳ ಬಗ್ಗೆ ಚರ್ಚೆಗಳು ನಡೆದಿವೆ. ಬಳಿಕ ಮಾತನಾಡಿದ ಸಚಿವರು, ರೂಪಾಂತರ ಜೆ.ಎನ್ -1 ಸೋಂಕಿನ ಬಗ್ಗೆ ಆತಂಕ ಬೇಡ ಎಂದಿದ್ದಾರೆ. ಅಲ್ಲದೆ, 60 ವರ್ಷ ಮೇಲ್ಪಟ್ಟವರು ದೀರ್ಘವ್ಯಾದಿಯಿಂದ ಬಳಲುತ್ತಿರುವವರು ಕೋವಿಡ್ ಲಸಿಕೆ ಪಡೆಯುವಂತೆ ಸಲಹೆ ನೀಡಿದ್ದಾರೆ.

VISTARANEWS.COM


on

Covid vaccine
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕೊರೊನಾ (Coronavirus News) ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಆತಂಕಗೊಳ್ಳುವುದು ಬೇಡ. ಈ ಸಂಬಂಧ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, 60 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘವ್ಯಾದಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ (Medical Education Minister Dr Sharan Prakash Patil) ಸಲಹೆ ನೀಡಿದ್ದಾರೆ.

ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಒಳಪಡುವ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜತೆ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ಪಡೆದುಕೊಂಡರು.

ರೂಪಾಂತರ ಜೆ.ಎನ್-1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ, ಹಾಗೂ ತಜ್ಞರೇ ಹೇಳಿದ್ದಾರೆ. ಆದರೂ ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಪ್ರಸ್ತುತ ಕೇಂದ್ರ ಸರ್ಕಾರ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ ಬಂದಿದೆ. ಇದರ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.

ಹೊಸ ಲಸಿಕೆ ಬಗ್ಗೆ ನಿರ್ದೇಶನ ಬಂದಿಲ್ಲ

ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ 60 ವರ್ಷ ಹಾಗೂ ದೀರ್ಘವ್ಯಾದಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಒಂದು ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ಯಾವ ಲಸಿಕೆಯನ್ನು ನೀಡಲಾಗಿತ್ತೋ ಅದೇ ಲಸಿಕೆಯನ್ನು ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಜೆಎನ್-1 ರೂಪಾಂತರ ಸೋಂಕು ಬಹುಬೇಗನೆ ಹರಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹರಡಬಹುದೆಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಹಬ್ಬಿದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಎಂಬ ಮಾಹಿತಿ ಇದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬಾರದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮನವಿ ಮಾಡಿದರು.

Covid vaccine

ಮಾಸ್ಕ್‌ ಕಡ್ಡಾಯ ಎಂಬ ಆದೇಶ ಇಲ್ಲ

ಜನದಟ್ಟಣೆ ಮತ್ತಿತರ ಕಡೆ ಅಗತ್ಯ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ಗಳನ್ನು ಧರಿಸುವುದು ಉತ್ತಮ. ಆದರೆ, ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಲೇಬೇಕೆಂಬ ಆದೇಶವನ್ನು ಹೊರಡಿಸುವುದಿಲ್ಲ. ಹಾಗಂತ ಜನರು ಮೈ ಮರೆಬಾರದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ಮಾಡಿದರು.

ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧಗಳು, ಸೇರಿದಂತೆ ಲಭ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ, ಉಪಕರಣಗಳ ಖರೀದಿಸುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೋವಿಡ್ ಸಂಬಂಧ ಔಷಧಗಳನ್ನು ಖರೀದಿಸಲು ಹಣಕಾಸಿನ ಕೊರತೆ ಇಲ್ಲ ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಇತ್ತೀಚೆಗೆ 10 ಮಂದಿ ಮೃತಪಟ್ಟಿದ್ದರು. ಇದು ಕೋವಿಡ್ ಕಾರಣದಿಂದಾಗಿ ಮೃತಪಟ್ಟಿಲ್ಲ .ಅವರು ವಿವಿಧ ವ್ಯಾದಿಗಳಿಂದ ಬಳಲುತ್ತಿದ್ದರು. ಹೀಗಾಗಿ ಮೃತಪಟ್ಟಿದ್ದಾರೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು. ಮೃತಪಟ್ಟ 10 ಮಂದಿಯಲ್ಲಿ 9 ಮಂದಿ ಬೇರೆ ಬೇರೆ ಅಂದರೆ ಹೃದಯ ಸಂಬಂಧಿ, ಕಿಡ್ನಿ ಹೀಗೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು. ಇವರ ಸಾವಿಗೂ ಕೋವಿಡ್‍ಗೂ ಸಂಬಂಧವೇ ಇಲ್ಲ ಎಂದು ಹೇಳಿದರು.
ಅವರಿಗೆ ಸೋಂಕಿನ ಜತೆಗೆ ಇತರ ಬೇರೆ ಬೇರೆ ಆರೋಗ್ಯದ ಸಮಸ್ಯೆಗಳಿದ್ದವು. ಮೃತಪಟ್ಟವರಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡಿರಲಿಲ್ಲ. ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರು ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್‌ ಸಿದ್ಧತೆ ಹೇಗಿದೆ?

  • ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಬೆಡ್‍ಗಳನ್ನು ಮೀಸಲಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
  • ವೈದ್ಯಕೀಯ ಕಾಲೇಜಿನಲ್ಲಿ 18,141 ಹಾಸಿಗೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಆಸ್ಪತ್ರೆಗಳಲ್ಲಿ 11,500 ಹಾಸಿಗೆಗಳು ಇವೆ.
  • ಕೇರಳದಲ್ಲಿ ಕಾಣಿಸಿಕೊಂಡ ರೂಪಾಂತರ ಜೆಎನ್-1 ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲೂ ಒಂದು ವೇಳೆ ಹಬ್ಬಿದರೆ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಳ್ಳಲಾಗಿದೆ.
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಿದ್ದಾರೆ. ಅದರಂತೆ ಇಲಾಖೆಯಲ್ಲಿರುವ ಕೋವಿಡ್ ವಾರಿಯರ್ಸ್‍ಗಳು ಫ್ಲೂ ಲಸಿಕೆಯನ್ನು ಪಡೆಯಬೇಕು.
  • ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಜತೆಗೆ ಆರೋಗ್ಯ ಸೌಲಭ್ಯಗಳ ಕಾರ್ಯ ಸಿದ್ಧತೆ ನಡೆಸಲಾಗಿದೆ.
  • ಸಭೆಯಲ್ಲಿ 99 ಮೆಡಿಕಲ್ ಕಾಲೇಜುಗಳು, 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರ ಜತೆ ಚರ್ಚೆ ನಡೆಸಲಾಗಿದೆ.
  • ಎಲ್ಲ ಸರ್ಕಾರಿ ಕಾಲೇಜುಗಳಲ್ಲೂ ಪ್ರತ್ಯೇಕವಾದ ಆಕ್ಸಿಜನ್ ಬೆಡ್ ಮತ್ತು ಐಸಿಯು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮಾನವ ಸಂಪನ್ಮೂಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
  • 30 ಸಾವಿರ ಲಸಿಕೆಗಳು ಲಭ್ಯವಿದ್ದು, ಈವರೆಗೂ ಲಸಿಕೆ ಪಡೆಯದೇ ಇದ್ದವರೂ ಮತ್ತು ಮುಂಜಾಗ್ರತಾ ಲಸಿಕೆಯನ್ನಾಗಿ ತೆಗೆದುಕೊಳ್ಳುವವರು ಈ ಸೌಲಭ್ಯ ಪಡೆದುಕೊಳ್ಳಬಹುದು.

ಇದನ್ನೂ ಓದಿ: Ram Janmabhoomi: ರಾಮ ಭಕ್ತರ ಟಾರ್ಗೆಟ್‌; ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ , ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್ , ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಳ್ಳಾರಿ

Bellary VIMS Hospital : ಲೇಡಿ ಡಾಕ್ಟರ್‌ ಜುಟ್ಟು ಹಿಡಿದು ಎಳೆದಾಡಿ ಹೊಡೆದ; ವಿಮ್ಸ್‌ ಆಸ್ಪತ್ರೆಯಲ್ಲಿ ದಿಢೀರ್‌ ಪ್ರತಿಭಟನೆ

VIMS Hospital : ತಂದೆ ಸಾವಿನಿಂದ ಸಿಟ್ಟಾದ ವ್ಯಕ್ತಿಯೊಬ್ಬ ವಿಮ್ಸ್‌ ಆಸ್ಪತ್ರೆಯ ವೈದ್ಯೆಗೆ ಹಲ್ಲೆ ನಡೆಸಿದ್ದಾನೆ. ಮಹಿಳಾ ವೈದ್ಯೆಯ ಜುಟ್ಟು ಹಿಡಿದು ಎಳೆದಾಡಿ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದು, ಇದನ್ನೂ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು (Bellary VIMS Hospital) ಪ್ರತಿಭಟಿಸಿದ್ದಾರೆ.

VISTARANEWS.COM


on

By

Bellary VIMS Hospital
Koo

ಬಳ್ಳಾರಿ: ವಿಮ್ಸ್‌ ಆಸ್ಪತ್ರೆಯಲ್ಲಿ (Bellary VIMS Hospital) ಚಿಕಿತ್ಸೆ ಪಡೆಯುತ್ತಿದ್ದ ತಂದೆ ವೈದ್ಯರ ನಿರ್ಲಕ್ಷ್ಯದಿಂದಲೇ (Medical Negligence) ಸಾವನ್ನಪ್ಪಿದ್ದಾರೆ ಎಂದು ಸಿಟ್ಟಾದ ಮಗನೊಬ್ಬ ವಿಮ್ಸ್‌ನ ಮಹಿಳಾ (VIMS Hospital ) ವೈದ್ಯೆ ಮೇಲೆ ಹಲ್ಲೆ (Assault Case) ನಡೆಸಿದ್ದಾನೆ. ವೈದ್ಯೆಯ ತಲೆ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೈದ್ಯೆ ಮೇಲಿನ ಹಲ್ಲೆ ಖಂಡಿಸಿ ಬಳ್ಳಾರಿಯ ವಿಮ್ಸ್ ತುರ್ತು ಚಿಕಿತ್ಸಾ ಘಟಕದ ಮುಂದೆ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟಿಸಿದರು. ವೈದ್ಯರ ರಕ್ಷಣೆ ಕೋರಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಗೂಡಾರ್‌ನಗರ ನಾಗೇಶ್ ಎಂಬಾತ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ನಾಗೇಶ್‌ನ ತಂದೆ ಅನಾರೋಗ್ಯದಿಂದ ವಿಮ್ಸ್‌ಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ನಾಗೇಶ್‌ ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಸೆಕ್ಯುರಿಟಿ ಸಮಸ್ಯೆಯಿಂದಲೇ ಹೀಗೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ವಿಮ್ಸ್‌ನಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರ‌ಗೌಡ್ ಹಾಗೂ ಕೌಲ್‌ಬಜಾರ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಹಲ್ಲೆ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು. ಜತೆಗೆ ವಿಮ್ಸ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರೀತಿಯ ಭದ್ರತೆಯನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ದಿಢೀರ್‌ ಕೈಗೊಂಡ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಇದನ್ನೂ ಓದಿ: Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್‌ ಕಿರಿಕ್‌; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್‌

ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

ಉಡುಪಿ/ ಆನೇಕಲ್‌: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ (Electric shock) ಲೈನ್‌ಮ್ಯಾನ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಅವಘಡ ನಡೆದಿದೆ.

ಲೈನ್ ಮ್ಯಾನ್ ಸಲೀಂ (38) ಮೃತ ದುರ್ದೈವಿ. ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವಾಗ ಶಾಕ್‌ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿರುವ ಸಲೀಂ, ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೈಂದೂರಿನಲ್ಲಿ ಸಲೀಂ ಜನಸ್ನೇಹಿ ಲೈನ್‌ಮ್ಯಾನ್ ಆಗಿದ್ದರು.

ಇದನ್ನೂ ಓದಿ: Road Accident : ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂಕಜೀವಿ ಬಲಿ

ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಚನಹಳ್ಳಿಯಲ್ಲಿ ವಿದ್ಯುತ್ ಶಾಕ್‌ನಿಂದ ಹಸುವೊಂದು ದಾರುಣವಾಗಿ ಮೃತಪಟ್ಟಿದೆ. ಕರೆಂಟ್ ಶಾಕ್‌ನಿಂದ ಹಸು ಮೃತಪಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರಗಪ್ಪ ಎಂಬುವವರು ಹಸುಗಳನ್ನ ಮೇಯಿಸಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ಬಳಿ ಕರೆಂಟ್ ಗ್ರೌಂಡಿಂಗ್ ಆಗಿ ಹಸು ಮೃತಪಟ್ಟಿದೆ. ಇದೇ ರೀತಿ ನಾಲ್ಕೈದು ಹಸುಗಳಿಗೆ ಅದೇ ಜಾಗದಲ್ಲಿ ಗ್ರೌಂಡಿಂಗ್‌ನಿಂದ ಶಾಕ್ ಆಗಿದೆ.

ರೈತನ ಜೀವನಾಧಾರೆಯಾಗಿದ್ದ ಹಸು ಮೃತಪಟ್ಟಿದ್ದಕ್ಕೆ ಜಿಗಣಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಒಂದು ಲಕ್ಷಕ್ಕೂ ಬೆಲೆಬಾಳುವ ಹಸುವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಬೆಸ್ಕಾಂ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಕರಗಪ್ಪ ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

ಬೇಸಿಗೆಯ ಧಗೆಗೆ ಲಿಚಿ ಹಣ್ಣು ನೀಡುವ ತಂಪಾದ ಅನುಭೂತಿ ನೀಡುವ ಹಣ್ಣುಗಳಲ್ಲಿ ಒಂದು. ಹೊರಮೈ ಒರಟಾದರೂ, ಸಿಪ್ಪೆ ಸುಲಿದರೆ ಮೆದುವಾದ ರಸಭರಿತ ರುಚಿಯಾದ ಹಣ್ಣು ನಮ್ಮನ್ನು ಸ್ವಾಗತಿಸುತ್ತದೆ. ಕೇವಲ ರುಚಿಯಲ್ಲಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವುದಕ್ಕೂ ಕಡಿಮೆಯಿಲ್ಲ. ಈ ಹಣ್ಣುಗಳ ಸೇವನೆಯಿಂದ ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳೇನು? ಇಲ್ಲಿದೆ (benefits of litchi) ಮಾಹಿತಿ.

VISTARANEWS.COM


on

Benefits Of Litchi
Koo

ಈಗ ಲಿಚಿ ಹಣ್ಣಿನ ಕಾಲ. ರಸ್ತೆಬದಿಯ ಗಾಡಿಗಳಲ್ಲಿ, ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಮಾವಿನಹಣ್ಣಿನ ಜೊತೆ ಲಿಚಿಯದ್ದೇ ಕಾರುಬಾರು. ಬೇಸಿಗೆಯ ಧಗೆಗೆ ಲಿಚಿ ಹಣ್ಣು ನೀಡುವ ತಂಪಾದ ಅನುಭೂತಿ ನೀಡುವ ಹಣ್ಣುಗಳಲ್ಲಿ ಒಂದು. ಹೊರಮೈ ಒರಟಾದರೂ, ಸಿಪ್ಪೆ ಸುಲಿದರೆ ಮೆದುವಾದ ರಸಭರಿತ ರುಚಿಯಾದ ಹಣ್ಣು ನಮ್ಮನ್ನು ಸ್ವಾಗತಿಸುತ್ತದೆ. ಕೇವಲ ರುಚಿಯಲ್ಲಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವುದಕ್ಕೂ ಕಡಿಮೆಯಿಲ್ಲ.
ವಿಟಮಿನ್‌ ಸಿ, ವಿಟಮಿನ್‌ ಡಿ, ಮೆಗ್ನೀಶಿಯಂ, ರೈಬೋ ಫ್ಲೇವಿನ್‌, ತಾಮ್ರ, ಪಾಸ್ಪರಸ್‌, ಹಾಗೂ ಭರಪೂರ ನೀರಿನಂಶವನ್ನು ಹೊಂದಿರುವ ಈ ಹಣ್ಣು ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣು. ಬನ್ನಿ, ಲಿಚಿ ಮಾರುಕಟ್ಟೆಯಿಂದ ಮರೆಯಾಗುವ ಮೊದಲು ಅದರ ಲಾಭಗಳನ್ನು (benefits of litchi) ತಿಳಿದು ಸೇವಿಸೋಣ.

Litchi Monsoon Fruits

ಸಾಕಷ್ಟು ನಾರಿನಂಶ

ಲಿಚಿಯಲ್ಲಿ ಸಾಕಷ್ಟು ನಾರಿನಂಶವಿದೆ. ಈ ನಾರಿನಂಶವಿರುವುದರಿಂದ ಬಹಳ ಹೊತ್ತು ಹೊಟ್ಟೆ ತುಂಬಿದ ಅನುಭವವಿರುತ್ತದೆ. ಸಂತೃಪ್ತಿಯ ಭಾವನೆ ಇರುವುದರಿಂದ ಆಗಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುವುದಿಲ್ಲ. ಇದರಲ್ಲಿ ಅತಿಯಾದ ನೀರಿನಂಶವಿರುವುದರಿಂದ ತೂಕ ಇಳಿಸಲೂ ಕೂಡಾ ಇದು ನೆರವಾಗುತ್ತದೆ. ದಿನದ ಯಾವುಧೇ ಹೊತ್ತಿನಲ್ಲಿ ಈ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು.

Beauty Skin Care Woman Why Do Our Bodies Need Minerals

ಸೌಂದರ್ಯ ವರ್ಧಕ

ಸೌಂದರ್ಯಕ್ಕೂ ಈ ಹಣ್ಣಿನಿಂದ ಅತ್ಯುತ್ತಮ ಲಾಭವಿದೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿ ಇರುವುದರಿಂದ ಚರ್ಮದ ಆರೋಗ್ಯಕ್ಕೆ ಇದು ಒಳ್ಳೆಯದು. ಚರ್ಮ ಸುಕ್ಕಾಗುವುದನ್ನೂ ಇದು ತಡೆಯುತ್ತದೆ. ನಿರಿಗೆಗಳಾಗದಂತೆ ನೋಡಿಕೊಳ್ಳುವ ಇದು ಆಂಟಿ ಏಜಿಂಗ್‌ ಗುಣಗಳನ್ನು ಹೊಂದಿದೆ. ಹೇರಳವಾಗಿ ಆಂಟಿ ಆಕ್ಸಿಡೆಂಟ್‌ ಇದರಲ್ಲಿ ಇರುವುದರಿಂದ ಆಕ್ಸಿಡೇಟಿವ್‌ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.

Antioxidants in it keep immunity strong Benefits Of Mandakki

ರೋಗ ನಿರೋಧಕ ಶಕ್ತಿ

ಲಿಚಿ ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ರೋಗ ನಿರೋಧಕತೆಗೆ ಅತ್ಯಂತ ಅಗತ್ಯವಾದ ಪೋಷಕಾಂಶ.

Blood Pressure

ರಕ್ತದೊತ್ತಡ ಸಮತೋಲನ

ಲಿಚಿಯಲ್ಲಿ ಪೊಟಾಶಿಯಂ ಅಂಶ ಇರುವುದರಿಂದ ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ರಕ್ತದೊತ್ತಡ ಕಡಿಮೆ ಮಾಡಿ ಸಮತೋಲನಕ್ಕೆ ತರಲು ಇದು ಒಳ್ಳೆಯದು.

healthy internal organs of human digestive system

ಜೀರ್ಣಕ್ರಿಯೆಗೂ ಒಳ್ಳೆಯದು

ಲಿಚಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಮಲಬದ್ಧತೆಯಂತ ಸಮಸ್ಯೆ ಇರುವ ಮಂದಿಗೆ ಲಿಚಿ ಒಳ್ಳೆಯದು. ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗಿ ಬೇಡದ ಅಂಶಗಳು ಸುಲಭವಾಗಿ ದೇಹದಿಂದ ಹೊರಹೋಗಲು ಇದು ಸಹಾಯ ಮಾಡುತ್ತದೆ.
ಆದರೆ, ಲಿಚಿಯ ಬಗ್ಗೆ ಸಾಕಷ್ಟ ತಪ್ಪುತಿಳುವಳಿಕೆಗಳೂ ಇವೆ. ಲಿಚಿ ಸಿಹಿಯಾಗಿರುವುದರಿಂದ ಇದನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಎಂಬ ಭಾವನೆಯೂ ಇದೆ. ಆದರೆ, ಈ ಜ್ಯೂಸಿಯಾದ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಇರುವುದಾದರೂ, ಇದನ್ನು ಬೇಡವೇ ಬೇಡ ಎಂಬಷ್ಟು ದೂರ ತಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ, ಇದರಿಂದ ಸಿಗುವ ಅಪರೂಪದ ಪೋ಼ಷಕಾಂಶಗಳಿಗೆ ಇದನ್ನು ಹಿತಮಿತವಾಗಿಯಾದರೂ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಲಿಚಿಯಲ್ಲಿರುವ ವಿಶೇಷ ಗುಣ

ಲಿಚಿಯಲ್ಲಿರುವ ಎಪಿಕ್ಯಾಟೆಚಿನ್‌ ಎಂಬ ಅಂಶವು ಸಾಕಷ್ಟು ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕ್ಯಾನ್ಸರ್‌ ಹಾಗೂ ಮಧುಮೇಹವನ್ನು ಮೊದಲೇ ನಿಯಂತ್ರಿಸುವ ಗುಣವನ್ನೂ ಹೊಂದಿದೆ. ಅಷ್ಟೇ ಅಲ್ಲ, ಲಿಚಿಯಲ್ಲಿ ಆಲಿಗೋನಲ್‌ ಎಂಬ ವಿಶೇಷವಾದ ಪೋಷಕಾಂಶವಿದ್ದು ಇದು ನೈಟ್ರಿಕ್‌ ಆಕ್ಸೈಡ್‌ನ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ದೇಹದಲ್ಲಿ ನೈಟ್ರಿಕ್‌ ಆಕ್ಸೈಡ್‌ ರಕ್ತನಾಳವನನು ಅಗಲವಾಗಿಸುವ ಗುಣ ಹೊಂದಿದ್ದು ಇದರಂದ ರಕ್ತ ಸಹಜವಾಗಿ ಹರಿಯುತ್ತದೆ. ಲಿಚಿಯಲ್ಲಿ ತಾಮ್ರವೂ ಇರುವುದರಿಂದ ಕೂದಲ ಆರೋಗ್ಯಕ್ಕೆ ಇದು ತನ್ನದೇ ಆ ಕಾಣಿಕೆ ಸಲ್ಲಿಸುತ್ತದೆ. ಕೂದಲ ಬೆಳವಣಿಗೆಗೆ ಇದು ಅತ್ಯಂತ ಒಳ್ಳೆಯದು. ಲಿಚಿಯಲ್ಲಿ ಬಯೋ ಫ್ಲೇವನಾಯ್ಡ್‌ಗಳಾದ ರುಟೀನ್‌ ಎಂಬ ಪಾಲಿ ಫಿನಾಲ್‌ ಇದೆ. ಇದು ರಕ್ತನಾಳವನ್ನು ಗಟ್ಟಿಗೊಳಿಸುತ್ತದೆ. ಈ ಎಲ್ಲ ಕಾರಣಕ್ಕಾಗಿಯಾದರೂ, ಈ ಕಾಲದಲ್ಲಿ ಕೆಲವೇ ಸಮಯ ದೊರೆಯುವ ಲಿಚಿ ಹಣ್ಣನ್ನು ಮರೆಯದೆ ತಿನ್ನಿ.

Continue Reading

ಆರೋಗ್ಯ

Home Remedies For Mosquito Bite: ಸೊಳ್ಳೆ ಕಚ್ಚಿದ ಜಾಗದಲ್ಲಿ ವಿಪರೀತ ಉರಿಯೇ? ಈ ಸರಳ ಮನೆಮದ್ದುಗಳನ್ನು ಬಳಸಿ

ಸಂಜೆಯಾದ ಕೂಡಲೇ ತೆರೆದ ಕಿಟಕಿ ಬಾಗಿಲುಗಳಿಂದ, ಸಂದಿಗೊಂದಿಗಳಿಂದ ನುಸುಳಿ ಸೊಳ್ಳೆಗಳು ಮನೆಯೊಳಗೆ ಬಂದೇ ಬರುತ್ತವೆ. ಬಹಳಷ್ಟು ಸಾರಿ ಸೊಳ್ಳೆ ಕಚ್ಚಿದರೂ ಅಂಥದ್ದೇನೂ ಸಮಸ್ಯೆ ಆಗಲಾರದಾದರೂ, ಕೆಲವೊಮ್ಮೆ ಸೊಳ್ಳೆಯದ ಕಡಿತದಿಂದ ಹಲವು ರೋಗಗಳೂ ಬರುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ, ಸೊಳ್ಳೆ ಕಡಿತದಿಂದ ದೂರವಿರುವುದು ಒಳ್ಳೆಯದು. ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯ ಸೇರಿದಂತೆ ಹಲವು ಬಗೆಯ, ನಮೂನೆಯ ಜ್ವರಗಳು ಸೊಳ್ಳೆ ಕಡಿತದಿಂದಲೇ ಬರುವುದರಿಂದ ಈ ವಿಚಾರದಲ್ಲಿ ಜಾಗರೂಕತೆ (home remedies for mosquito bite) ಅತ್ಯಂತ ಅಗತ್ಯ.

VISTARANEWS.COM


on

Home Remedies For Mosquito Bite
Koo

ಬೇಸಿಗೆಯ ವಿಪರೀತ ಸೆಖೆ ಎಂದು ತಲೆಕೆಡಿಸಿಕೊಳ್ಳುವ ಮೊದಲೇ ಮಳೆಗಾಲ ಬಂದೇ ಬಿಟ್ಟಿದೆ. ಮಳೆಗಾಲ ಬರುವ ಸಂದರ್ಭ ಸೊಳ್ಳೆಗಳ ಹಾವಳಿ ವಿಪರೀತ. ಈಗಾಗಲೇ ಸಂಜೆಯಾದ ಕೂಡಲೇ ತೆರೆದ ಕಿಟಕಿ ಬಾಗಿಲುಗಳಿಂದ, ಸಂದಿಗೊಂದಿಗಳಿಂದ ನುಸುಳಿ ಸೊಳ್ಳೆಗಳು ಮನೆಯೊಳಗೆ ಬಂದೇ ಬರುತ್ತವೆ. ಬಹಳಷ್ಟು ಸಾರಿ ಸೊಳ್ಳೆ ಕಚ್ಚಿದರೂ ಅಂಥದ್ದೇನೂ ಸಮಸ್ಯೆ ಆಗಲಾರದಾದರೂ, ಕೆಲವೊಮ್ಮೆ ಸೊಳ್ಳೆಯದ ಕಡಿತದಿಂದ ಹಲವು ರೋಗಗಳೂ ಬರುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ, ಸೊಳ್ಳೆ ಕಡಿತದಿಂದ ದೂರವಿರುವುದು ಒಳ್ಳೆಯದು. ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯ ಸೇರಿದಂತೆ ಹಲವು ಬಗೆಯ, ನಮೂನೆಯ ಜ್ವರಗಳು ಸೊಳ್ಳೆ ಕಡಿತದಿಂದಲೇ ಬರುವುದರಿಂದ ಈ ವಿಚಾರದಲ್ಲಿ ಜಾಗರೂಕತೆ ಅತ್ಯಂತ ಅಗತ್ಯ. ಇನ್ನೂ ಕೆಲವರಿಗೆ ಸಾಮಾನ್ಯ ಸೊಳ್ಳೆ ಕಚ್ಚಿದರೂ, ಉರಿ, ಕಜ್ಜಿ, ಕೆಂಪು ಗುಳ್ಳೆಗಳಾಗುತ್ತದೆ. ಅಲ್ಲಿ ತುರಿಕೆ, ನೋವು ಇತ್ಯಾದಿಗಳೂ ಆಗುತ್ತವೆ. ಹಾಗಾಗಿ, ಸೊಳ್ಳೆ ಕಡಿತವಾದ ಮೇಲೆ ಆಗುವ ಇಂಥ ಪರಿಣಾಮಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದುಕೊಂಡರೆ, ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವು ಉಪಾಯಗಳಿವೆ. ಬನ್ನಿ ಸೊಳ್ಳೆ ಕಚ್ಚಿದ ಉರಿ, ಕೆಂಪುಗುಳ್ಳೆಯ ಶಮನಕ್ಕೆ ಏನು ಪರಿಹಾರಗಳಿವೆ (home remedies for mosquito bite) ಎಂಬುದನ್ ನೋಡೋಣ.

Ice cube

ಐಸ್‌ ಕ್ಯೂಬ್‌

ಐಸ್‌ ಕ್ಯೂಬ್‌ ಯಾವಾಗಲೂ ಚರ್ಮದ ಮೇಲೆ ಆಗುವ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ತುರಿಕೆಯಾಗುತ್ತಿದ್ದರೆ, ಅಲ್ಲಿ ಉರಿಯಾಗುತ್ತಿದ್ದರೆ, ಐಸ್‌ ಕ್ಯೂಬ್‌ ಇಡುವುದರಿಂದ ಈ ನೋವು ಶಮನವಾಗುತ್ತದೆ. ಉರಿಯ ತೀವ್ರತೆ ಹತೋಟಿಗೆ ಬರುತ್ತದೆ.

Aloe vera leaf and aloevera gel on wood table

ಆಲೋವೆರಾ

ಚರ್ಮದ ಏನೇ ಸಮಸ್ಯೆಗಳಿದ್ದರೂ ಆಲೋವೆರಾದಲ್ಲಿ ಉತ್ತರವಿದೆ. ಸೂರ್ಯನ ಬಿಸಿಲಿಗೆ ಸುಟ್ಟ ಚರ್ಮವಿರಬಹುದು, ಸೊಳ್ಳೆ ಕಚ್ಚಿದ ಗುಳ್ಳೆಗಳಿರಬಹುದು, ಅಥವಾ ಮೊಡವೆ, ಕಪ್ಪು ಕಲೆಗಳಿರಬಹುದು, ಅಲೋವೆರಾ ಇಂತಹ ಸಮಸ್ಯೆಗಳಿಗೆಲ್ಲ ರಾಮಬಾಣವೇ. ಸೊಳ್ಳೆ ಕಚ್ಚಿದ ಜಾಗಕ್ಕೆ ಅಲೋವೆರಾ ಜೆಲ್‌ ಲೇಪಿಸಿ. ತಂಪಾದ ಅನುಭವವಾಗುತ್ತದೆ. ಅಷ್ಟೇ ಅಲ್ಲ, ಒಡನೆಯೇ ಉರಿ, ನೋವು ಹತೋಟಿಗೆ ಬರುತ್ತದೆ. ಮಕ್ಕಳಿಗೂ ಸಲಭವಾಗಿ ಮಾಡಬಹುದಾದ ಉಪಾಯ ಇದು.

honey

ಜೇನುತುಪ್ಪ

ಚರ್ಮಕ್ಕೆ ಒಳ್ಳೆಯದು ಮಾಡುವ ಗುಣ ಜೇನುತುಪ್ಪದಲ್ಲಿದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದ ಇದೂ ಕೂಡಾ ಸೊಳ್ಳೆ ಕಚ್ಚಿದ ಗಾಯಕ್ಕೆ ಒಳ್ಳೆಯ ಮನೆಮದ್ದು. ಸೊಳ್ಳೆ ಕಚ್ಚಿದ ಜಾಗದಲ್ಲಿ ಎದ್ದ ದದ್ದಿನ ಮೇಲೆ ಜೇನುತುಪ್ಪ ಹಚ್ಚಿ ನೋಡಿ. ಉರಿ ಹಾಗೂ ದದ್ದು ಎರಡೂ ಕಡಿಮೆಯಾಗುತ್ತದೆ.

Tulsi Leaves

ತುಳಸಿ

ಪ್ರತಿಮನೆಯಲ್ಲೂ ಇರುವ ತುಳಸಿಯಿಂದ ಮಳೆಗಾಲದಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಶೀತ, ನೆಗಡಿ, ಕೆಮ್ಮುಗಳ ಜೊತೆಗೆ, ಇಂಥ ಕಜ್ಜಿ, ತುರಿಕೆ ಗಾಯಗಳಿಗೂ ತುಳಸಿಯಲ್ಲಿ ಉತ್ತರವಿದೆ. ಸೊಳ್ಳೆ ಕಚ್ಚಿದ ಜಾಗಕ್ಕೆ ತುಳಸಿ ರಸ ಹಚ್ಚಿದರೆ ಸಾಕು, ಉರಿಯೂತ ಕಡಿಮೆಯಾಗುತ್ತದೆ.

Onion Benefits

ಈರುಳ್ಳಿ

ಪ್ರತಿ ಮನೆಯ ಅಡುಗೆ ಕೋಣೆಯಲ್ಲಿ ಸುಲಭವಾಗಿ ಯಾವಾಗಲೂ ಇರುವ ಈರುಳ್ಳಿಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಆಹಾರದಲ್ಲಿ ನಿತ್ಯವೂ ಬಳಕೆಯಾಗುವ ಈರುಳ್ಳಿಯನ್ನು ಹೀಗೂ ಬಳಸುವ ಬಗ್ಗೆ ನಿಮಗೆ ಗೊತ್ರಲಿಕ್ಕಿಲ್ಲ. ಆದರೆ, ಸೊಳ್ಳೆ ಕಚ್ಚಿದ ಜಾಗಕ್ಕೆ ಈರುಳ್ಳಿಯನ್ನು ವೃತ್ತಾಕಾರಕ್ಕೆ ಕತ್ತರಿಸಿ ಅದರಿಂದ ಒಸರುವ ರಸವನ್ನು ಹಚ್ಚಿ. ಸ್ವಲ್ಪ ಹೊತ್ತಿನ ನಂತರ ಅದನ್ನು ತೊಳೆಯಬಹುದು. ಉರಿ, ದದ್ದು ಎರಡೂ ಕಡಿಮೆಯಾಗುತ್ತದೆ

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Continue Reading

ಆರೋಗ್ಯ

Benefits Of Walk After Meal: ಊಟದ ಬಳಿಕ ಲಘುವಾದ ವಾಕಿಂಗ್‌ ಮಾಡಿ, ಆರೋಗ್ಯದಲ್ಲಿನ ಬದಲಾವಣೆ ನೋಡಿ!

ಮಧ್ಯಾಹ್ನವಿರಬಹುದು, ರಾತ್ರಿಯೇ ಇರಬಹುದು, ಊಟದ ನಂತರ ಒಂದ್ಹತ್ತು ನಿಮಿಷ ಸುಮ್ಮನೆ ಕೂತು ನಂತರ ಒಂದ್ಹತ್ತು ನಿಮಿಷದ ಲಘುವಾದ ನಡಿಗೆಯ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತವೆ ಅಧ್ಯಯನಗಳು. ಊಟವಾದ ತಕ್ಷಣ ನಡೆಯುವುದರಿಂದ ಸಿಗುವ ಅತ್ಯುತ್ತಮ ಲಾಭವೆಂದರೆ ಸರಿಯಾದ ಜೀರ್ಣಕ್ರಿಯೆಗೆ ಪ್ರಚೋದನೆ ಸಿಗುವುದು. ಹೌದು. ಕರುಳು, ಜಠರ ಮತ್ತಿತರ ಜೀರ್ಣಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಂಗಾಂಗಗಳ ಮಾಂಸಖಂಡಗಳಿಗೆ ನಡಿಗೆಯಿಂದ ಚುರುಕು ಮುಟ್ಟಿದಂತಾಗಿ, ಪಚನಕ್ರಿಯೆ ವೇಗವಾಗಿ ಆಗುತ್ತದೆ. ಊಟದ ನಂತರದ ಹಗುರವಾದ ನಡಿಗೆಯಿಂದ ಇನ್ನೂ ಏನೇನು ಲಾಭಗಳಿವೆ ಎಂಬುದರ (Benefits Of Walk After Meal ) ವಿವರ ಇಲ್ಲಿದೆ.

VISTARANEWS.COM


on

Benefits Of Walk After Meal
Koo

ಮಧ್ಯಾಹ್ನ ಊಟವಾದ ಮೇಲೆ ಸಣ್ಣದೊಂದು ನಿದ್ದೆ ಹೊಡೆಯುವುದು ಮನೆಯಲ್ಲಿರುವ ಎಲ್ಲ ಮಂದಿಗೂ ಒಂದು ಸಹಜವಾದ ಅಷ್ಟೇ ಖುಷಿಕೊಡುವ ಒಂದು ಅಭ್ಯಾಸ. ಮಧ್ಯಾಹ್ನದ ನಿದ್ದೆ ಒಳ್ಳೆಯದಲ್ಲ ಎಂದು ಗೊತ್ತಿದ್ದೂ ಗೊತ್ತಿದ್ದೂ ಇದು ಅಭ್ಯಾಸವಾಗಿಬಿಟ್ಟಿರುತ್ತದೆ. ಇನ್ನು ಕಚೇರಿಯಲ್ಲಿ ಕೆಲಸ ಮಾಡುವ ಮಂದಿಗೆ ಈ ಸೌಲಭ್ಯ ಸಿಗುವುದಿಲ್ಲವಾದ್ದರಿಂದ ರಾತ್ರಿ ಮನೆಗೆ ಬಂದ ಮೇಲೆ, ಊಟದ ನಂತರ ಸುಸ್ತಾಗಿ ಮಲಗಿಬಿಡುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಒಂದು ಚಂದನೆಯ ಊಟ, ಜೊತೆಗೊಂದು ನಿದ್ದೆ ಎಂಬುದನ್ನು ಯೋಚನೆಯೇ ಎಲ್ಲರಿಗೂ ಖುಷಿಯನ್ನು ಕೊಡುವಂಥದ್ದು. ಆದರೆ, ಹಾಗೆ ನೋಡಿದರೆ, ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಭ್ಯಾಸ ಖಂಡಿತ ಅಲ್ಲ. ಮಧ್ಯಾಹ್ನವಿರಬಹುದು, ರಾತ್ರಿಯೇ ಇರಬಹುದು, ಊಟದ ನಂತರ ಒಂದ್ಹತ್ತು ನಿಮಿಷ ಸುಮ್ಮನೆ ಕೂತು ನಂತರ ಒಂದ್ಹತ್ತು ನಿಮಿಷದ ಲಘುವಾದ ನಡಿಗೆಯ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತವೆ ಅಧ್ಯಯನಗಳು. ಹಾಗಾದರೆ ಬನ್ನಿ, ಊಟದ ನಂತರದ ಹಗುರವಾದ (Benefits Of Walk After Meal ) ನಡಿಗೆಯಿಂದಾಗುವ ಲಾಭಗಳೇನು ಎಂಬುದನ್ನು ತಿಳಿಯೋಣ.

healthy internal organs of human digestive system

ಜೀರ್ಣಕ್ರಿಯೆಗೆ ಪ್ರಚೋದನೆ

ಊಟವಾದ ತಕ್ಷಣ ನಡೆಯುವುದರಿಂದ ಸಿಗುವ ಅತ್ಯುತ್ತಮ ಲಾಭವೆಂದರೆ ಸರಿಯಾದ ಜೀರ್ಣಕ್ರಿಯೆಗೆ ಪ್ರಚೋದನೆ ಸಿಗುವುದು. ಹೌದು. ಕರುಳು, ಜಠರ ಮತ್ತಿತರ ಜೀರ್ಣಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಂಗಾಂಗಗಳ ಮಾಂಸಖಂಡಗಳಿಗೆ ನಡಿಗೆಯಿಂದ ಚುರುಕು ಮುಟ್ಟಿದಂತಾಗಿ, ಪಚನಕ್ರಿಯೆ ವೇಗವಾಗಿ ಆಗುತ್ತದೆ. ಈ ಅಂಗಾಂಶಗಳು ಜಡತ್ವದಿಂದ ಮೇಲೆದ್ದು ತಮ್ಮ ಕೆಲಸವನ್ನು ಚುರುಕಾಗಿ ಮಾಡುತ್ತವೆ. ಊಟವಾದ ಮೇಲಿನ ಹಗುರವಾದ ನಡಿಗೆಯೂ ಸಾಕು, ಓಡುವುದು, ಜಾಗಿಂಗ್‌ ಮಾಡುವುದು ಇತ್ಯಾದಿಗಳ ಅಗತ್ಯವಿಲ್ಲ. ನಿಧಾನವಾದ, ನಿಮ್ಮ ಸಹಜವಾದ ೧೫ ನಿಮಿಷಗಳ ನಡಿಗೆಯೂ ಸಾಕು. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಿ ಹೊಟ್ಟೆಯುಬ್ಬರ, ಮಲಬದ್ಧತೆ, ಅಸಿಡಿಟಿ, ಹೊಟ್ಟೆಯ ಸಮಸ್ಯೆ ಇರುವ ಮಂದಿಗೂ ಸಾಕಷ್ಟು ಲಾಭವಾಗುತ್ತದೆ.

heart attack and Diabetes control

ಮಧುಮೇಹಕ್ಕೆ ಮದ್ದು

ಮಧುಮೇಹ ಇರುವ ಮಂದಿಗೆ ಊಟದ ನಂತರದ ವಾಕಿಂಗ್‌ ಬಹಳ ಒಳ್ಳೆಯದು. ಯಾಕೆಂದರೆ, ಈ ಸಂದರ್ಭದ ನಡಿಗೆಯಿಂದ ಮದುಮೇಹಿಗಳ ದೇಹಕ್ಕೆ ಕೂಡಲೇ ಸಕ್ಕರೆ ಏರುವ ಪರಿಣಾಮ ಕೊಂಚ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವ ಮೂಲಕ ಸಕ್ಕರೆಯ ಪ್ರಮಾಣ ದೇಹಕ್ಕೆ ರಕ್ತಕ್ಕೆ ಒಡನೆಯೇ ಸೇರದು. ಇದರಿಂದ ಸಕ್ಕರೆಯ ಮಟ್ಟದ ದಿಢೀರ್‌ ಏರಿಕೆಯ ಸಮಸ್ಯೆ ಬಾರದು.

weight loss

ತೂಕ ಇಳಿಸಲು ಸಹಕಾರಿ

ತೂಕ ಇಳಿಸುವ ಮಂದಿಗೆ ಈ ಅಭ್ಯಾಸ ಬಹಳ ಒಳ್ಳೆಯದು. ಕ್ಯಾಲರಿ ಬರ್ನ್‌ ಮಾಡಲು, ಊಟವಾದ ತಕ್ಷಣ ನಡೆಯುವುದರಿಂದ ಸಾಕಷ್ಟು ಲಾಭವಿದೆ. ಕೇವಲ ತೂಕವಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಅಷ್ಟೇ ಅಲ್ಲ, ಮಾನಸಿಕ ಆರೋಗ್ಯ, ಹೃದಯದ ಆರೋಗ್ಯವೂ ಇದರಿಂದ ವೃದ್ಧಿಯಾಗುತ್ತದೆ. ಮಾಂಸಖಂಡಗಳ ಹಾಗೂ ಎಲುಬಿನ ಆರೋಗ್ಯ ವೃದ್ಧಿಸುತ್ತದೆ.

Blood pressure management

ಬಿಪಿ ನಿಯಂತ್ರಣಕ್ಕೆ ಸಹಕಾರಿ

ರಕ್ತದೊತ್ತಡದ ಸಮಸ್ಯೆ ಇರುವ ಮಂದಿಗೂ ಊಟದ ನಂತರದ ನಡಿಗೆ ಒಳ್ಳೆಯದು. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ.

Sleeping

ಒಳ್ಳೆಯ ನಿದ್ದೆಗೆ ಪೂರಕ

ಒಳ್ಳೆಯ ನಿದ್ದೆ ಬೇಕಾ? ಹಾಗಾದರೆ, ನಿತ್ಯವೂ ಊಟದ ನಂತರ ವಾಕ್‌ ಮಾಡಿ. ಹೌದು. ಊಟವಾದ ನಂತರ ೧೫-೨೦ ನಿಮಿಷಗಳ ಹಗುರವಾದ ನಡಿಗೆಯಿಂದ, ಊಟ ಬೇಘ ಕರಗುತ್ತದೆ. ಜೊತೆಗೆ ಹೊಟ್ಟೆ ಹಗುರವಾಗುತ್ತದೆ. ಸುಖವಾದ, ಸೊಂಪಾದ ನಿದ್ದೆ ನಿಮಗೆ ಬರುತ್ತದೆ. ಇದರಿಂದ ಮಾರನೇ ದಿನ ಏಳುವಾಗ ನೀವು ಫ್ರೆಶ್ಶಾಗಿರುತ್ತೀರಿ. ತಾಜಾತನದಿಂದ ನೀವು ಮಾರನೇ ದಿನದ ಕೆಲಸವನ್ನು ಉಲ್ಲಾಸದಿಂದ ಮಾಡುವ ಶಕ್ತಿ, ಚೈತನ್ಯ ನಿಮ್ಮದಾಗುತ್ತದೆ.
ವಾಕ್‌ ಮಾಡುವಾಗ ನೀವು ಒಂದೇ ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಊಟವಾದ ತಕ್ಷಣ ನಡಿಗೆ ಆರಂಭಿಸಬೇಡಿ. ಊಟದ ನಂತರ ಹತ್ತರಿಂದ 15 ನಿಮಿಷಗಳ ಗ್ಯಾಪ್‌ ಕೊಡಿ. ನಂತರ 10-15 ನಿಮಿಷ ಸಣ್ಣದೊಂದು ವಾಕ್‌ ಮಾಡಿ. ದೂರ ಅಲ್ಲದಿದ್ದರೂ, ಮನೆಯಲ್ಲೇ, ಮನೆಯ ಅಂಗಳದಲ್ಲೇ ಸುಮ್ಮನೆ ವೃತ್ತಾಕಾರದಲ್ಲಿ ನಡೆಯಬಹುದು. ಜೊತೆಗೆ ವೇಗವಾಗಿ ನಡೆಯುವುದು ಈ ಸಂದರ್ಭ ಸಲ್ಲದು. ನಿಧಾನವಾಗಿ ನಡೆದರೆ ಈ ಎಲ್ಲ ಪ್ರಯೋಜನಗಳನ್ನು ಪಡೆಯಬಹುದು. ನಿಯಮಿತವಾಗಿ ಈ ಅಭ್ಯಾಸವನ್ನು ಇಟ್ಟುಕೊಂಡರೆ, ಲಾಭಗಳನ್ನು ಕಂಡುಕೊಳ್ಳುವಿರಿ.

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Continue Reading
Advertisement
Election Results 2024 chandrababu naidu nitish kumar
Lok Sabha Election 20243 mins ago

Election Results 2024: ನಿತೀಶ್‌ ಕುಮಾರ್‌, ಚಂದ್ರಬಾಬು ನಾಯ್ಡು ಸೆಳೆದು ಸರ್ಕಾರ ರಚಿಸಲು ಇಂಡಿ ಮೈತ್ರಿಕೂಟ ಪ್ಲಾನ್?‌

Bellary Election Result 2024
ಪ್ರಮುಖ ಸುದ್ದಿ7 mins ago

Bellary Election Result 2024: ಗಣಿ ನಾಡು ಬಳ್ಳಾರಿಗೆ ಇ. ತುಕಾರಾಮ್‌ ಧಣಿ; ಶ್ರೀರಾಮುಲುಗೆ ಗರ್ವಭಂಗ!

Hassan Election Result 2024
ಪ್ರಮುಖ ಸುದ್ದಿ8 mins ago

Hassan Election Result 2024 : ಅತ್ಯಾಚಾರ ಆರೋಪಿ ಪ್ರಜ್ವಲ್​​ಗೆ ಹಾಸನ ಮತದಾರರಿಂದ ಶಿಕ್ಷೆ; ಹೀನಾಯ ಸೋಲು!

Kani Kusruti she doesn't want to be in Bollywood, overcoming financial crunch
ಸಿನಿಮಾ12 mins ago

Kani Kusruti: ಹಿಂದಿ ಕಲಿಯುವಷ್ಟು ದೊಡ್ಡ ನಟಿ ನಾನಲ್ಲ ಎಂದ ಕಾನ್‌ ಪ್ರಶಸ್ತಿ ವಿಜೇತೆ!

Tushar Girinath
Lok Sabha Election 202419 mins ago

Tushar Girinath : ಬ್ಯಾರಿಕೇಡ್ ತೆಗೆಯದ್ದಕ್ಕೆ ತುಷಾರ್‌ ಗಿರಿನಾಥ್‌ ಗರಂ; ಕಾರಿನಿಂದ ಇಳಿದು ಪೊಲೀಸ್‌ಗೆ ʻಹುಚ್ಚ ನೀನುʼ ಎಂದು ಅವಾಜ್‌

AP Election results 2024 live
ದೇಶ25 mins ago

AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

Election Results 2024
ದೇಶ38 mins ago

Election Results 2024: 5 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್‌ ಶಾ; ಬಿಜೆಪಿಗೆ ಮೊದಲ ಗೆಲುವು

Kolar Election Result 2024
ಪ್ರಮುಖ ಸುದ್ದಿ42 mins ago

Kolar Election Result 2024 : ಕೋಲಾರದಲ್ಲಿ ಜೆಡಿಎಸ್​​, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬುಗೆ ಗೆಲುವು

gold rate today
ಕರ್ನಾಟಕ47 mins ago

Gold Rate Today: ಚಿನ್ನದ ಮಾರುಕಟ್ಟೆಗೂ ಮತ ಎಣಿಕೆ ಎಫೆಕ್ಟ್;‌ ಬಂಗಾರದ ದರ ಏರಿಕೆ

Election Results 2024.
ದೇಶ50 mins ago

Election Results 2024: ಮಹಾರಾಷ್ಟ್ರದ 27 ಕ್ಷೇತ್ರದಲ್ಲಿ ಇಂಡಿಯಾಗೆ ಮುನ್ನಡೆ, ಎನ್‌ಡಿಎಗೆ 20 ಕ್ಷೇತ್ರದಲ್ಲಿ ಹಿನ್ನಡೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ6 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ21 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ21 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌