Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು! - Vistara News

ಆರೋಗ್ಯ

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

Natural Mosquito Repellents: ಸೊಳ್ಳೆಗಳಿಂದಾಗಿ ಬರುವ ರೋಗಗಳು ಒಂದಾ ಎರಡಾ? ಮಲೇರಿಯಾದಿಂದ ಹಿಡಿದು ಡೆಂಗ್ಯೂವರೆಗೆ ಸೊಳ್ಳೆಗಳ ಕಾಣಿಕೆ ಬಹಳಷ್ಟಿವೆ. ಸಣ್ಣ ಜೀವಿಗಳೆಂದು ನಿರ್ಲಕ್ಷ್ಯ ಮಾಡಲಾಗದ ಮಾಡಬಾರದ ಇವನ್ನು ಮಟ್ಟ ಹಾಕಲು ಮನುಷ್ಯ ನೂರಾರು ವಿಧಾನಗಳನ್ನು ಕಂಡು ಹಿಡಿದಿದ್ದರೂ, ಬಹಳ ಸಾರಿ ಇದರಿಂದ ಅಡ್ಡ ಪರಿಣಾಮಗಳೂ ಆಗುವುದುಂಟು. ಪ್ರಕೃತಿಯೇ ನಮಗೆ ವರದಂತೆ ಸಾಕಷ್ಟು ಉಪಾಯಗಳನ್ನು ಕೊಟ್ಟಿರುವಾಗ, ನೈಸರ್ಗಿಕ ವಿಧಾನಗಳನ್ನು ನಾವು ಯಾಕೆ ಮರೆಯಬೇಕು?

VISTARANEWS.COM


on

Mosquito Repellents
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೊಳ್ಳೆ ಎಂಬ ಪುಟಾಣಿ ಜೀವಿ ನಮ್ಮ ಬದುಕನ್ನು ಕೆಲವೊಮ್ಮೆ ಅಲ್ಲೋಲಕಲ್ಲೋಲ ಮಾಡುವುದಂತೂ ನಿಜ. ಮಳೆಗಾಲ ಬಂದ ತಕ್ಷಣ ಅದೆಲ್ಲಿಂದಲೋ ಉದ್ಭವಗೊಂಡು ಮನೆಯೊಳಗೆ ನುಸುಳಿಕೊಂಡು ನಮ್ಮ ಜೀವ ಹಿಂಡಿ ಬಿಡುತ್ತವೆ. ಸೊಳ್ಳೆಗಳಿಂದಾಗಿ ಬರುವ ರೋಗಗಳು ಒಂದಾ ಎರಡಾ? ಮಲೇರಿಯಾದಿಂದ ಹಿಡಿದು ಡೆಂಗ್ಯೂವರೆಗೆ ಸೊಳ್ಳೆಗಳ ಕಾಣಿಕೆ ಬಹಳಷ್ಟಿವೆ. ಸಣ್ಣ ಜೀವಿಗಳೆಂದು ನಿರ್ಲಕ್ಷ್ಯ ಮಾಡಲಾಗದ ಮಾಡಬಾರದ ಇವನ್ನು ಮಟ್ಟ ಹಾಕಲು ಮನುಷ್ಯ ನೂರಾರು ವಿಧಾನಗಳನ್ನು ಕಂಡು ಹಿಡಿದಿದ್ದರೂ, ಬಹಳ ಸಾರಿ ಇದರಿಂದ ಅಡ್ಡ ಪರಿಣಾಮಗಳೂ ಆಗುವುದುಂಟು. ಪ್ರಕೃತಿಯೇ ನಮಗೆ ವರದಂತೆ ಸಾಕಷ್ಟು ಉಪಾಯಗಳನ್ನು ಕೊಟ್ಟಿರುವಾಗ, ನೈಸರ್ಗಿಕ ವಿಧಾನಗಳನ್ನು ನಾವು ಯಾಕೆ ಮರೆಯಬೇಕು ಹೇಳಿ! ಬನ್ನಿ, ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ಸುರಕ್ಷಿತವಾದ Natural (Mosquito Repellents) ಉಪಾಯಗಳು.

Weight Loss with Lemongrass

ಲೆಮೆನ್‌ಗ್ರಾಸ್‌(ಮಜ್ಜಿಗೆಹುಲ್ಲು)

ನಿಂಬೆ ಘಮದ ಹುಲ್ಲೊಂದನ್ನು ನೀವು ನಿಮ್ಮ ಮನೆಗಳಲ್ಲಿ ಬೆಳೆಸಿರಬಹುದು. ಅಂಗಳದ ಮೂಲೆಯಲ್ಲೆಲ್ಲೋ ಬೆಳೆಸಿದ ಈ ಹುಲ್ಲಿನ ನಿಜವಾದ ಲಾಭವನ್ನು ನೀವು ಬಳಸಿಕೊಂಡಿದ್ದೀರಾ? ಇಲ್ಲವೆಂದಾದರೆ, ಬಳಸಿ. ಸೊಳ್ಳೆಗಳ ಕಾಲಕ್ಕೆ ಮಾರುಕಟ್ಟೆಯ ರಾಸಾಯನಿಕಯುಕ್ತ ಸೊಳ್ಳೆ ಬತ್ತಿಗಳ ಮೊರೆ ಯಾಕೆ ಹೋಗುವಿರಿ? ನಿಮ್ಮ ಮನೆಯಂಗಳದ ಈ ಲೆಮೆನ್‌ ಗ್ರಾಸ್‌ನ ಎಲೆಯನ್ನು ಸ್ವಲ್ಪ ಕೈಯಲ್ಲಿ ಕಿವುಚಿಕೊಂಡು ಅದನ್ನು ಮೈಮೇಲೆ ಸವರಿ. ಅಥವಾ ಇದರ ಎಣ್ಣೆಯನ್ನು ಮಾಡಿ ಅಥವಾ ಕೊಂಡುಕೊಂಡು ಮೈಮೇಲೆ ಹಚ್ಚಿ. ಯಾವ ಸೊಳ್ಳೆಯೂ ನಿಮ್ಮ ಹತ್ತಿರ ಏಳೆಂಟು ಗಂಟೆಗಳ ಕಾಲ ಸುಳಿಯದು.

Vinegar

ವಿನೆಗರ್‌

ಮೂರು ಕಪ್‌ ನೀರಿಗೆ ಒಂದು ಕಪ್‌ ವಿನೆಗರ್‌ ಅನ್ನು ಸೇರಿಸಿ ಒಂದು ಸ್ಪ್ರೇ ಮಾಡುವ ಬಾಟಲಿಯಲ್ಲಿ ಹಾಕಿಡಿ. ಮನೆಯಲ್ಲಿ ಬೇಕಾದ ಜಾಗದಲ್ಲಿ ಸ್ಪ್ರೇ ಮಾಡಬಹುದು. ಅಥವಾ ನಿಮ್ಮ ಮೈಮೇಲೂ ಸ್ಪ್ರೇ ಮಾಡಬಹುದು.

Lavender oil
Coffee powder

ಲ್ಯಾವೆಂಡರ್‌ ಎಣ್ಣೆ

ಸೊಳ್ಳೆಗಳಿಗೆ ಪರಿಮಳ/ವಾಸನೆ ಎಂದರೆ ಆಗದು. ಹಾಗಾಗಿ ಅವುಗಳನ್ನು ದೂರ ಓಡಿಸಲು ಲ್ಯಾವೆಂಡರ್‌ ಎಣ್ಣೆ ಸೂಕ್ತ. ಲ್ಯಾವೆಂಡರ್‌ ಎಣ್ಣೆಯನ್ನು ನಿಮ್ಮ ಮೈಮೇಲೆ ಹಚ್ಚುವ ಮೂಲಕ ಅಥವಾ ಸ್ಪ್ರೇ ಮಾಡುವ ಮೂಲಕ ಸೊಳ್ಳೆಯಿಂದ ಮುಕ್ತಿ ಪಡೆಯುವಿರಿ.

Tulsi Plant

ತುಳಸಿ

ಮೇಲೆ ಹೇಳಿರುವುದೆಲ್ಲವುಗಳು ಸಿಗುತ್ತಿಲ್ಲವಾದರೆ ತುಳಸಿಯನ್ನು ಬಳಸಿ. ತುಳಸಿ ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ಸಸ್ಯ. ತುಳಸಿಯ ಎಣ್ಣೆಯನ್ನು ಮೈಮೇಲೆ ಹಚ್ಚುವುದರಿಂದ ಸೊಳ್ಳೆ ನಿಮ್ಮ ಹತ್ತಿರ ಸುಳಿಯದು. ಎಣ್ಣೆ ಮಾಡಲಾಗದಿದ್ದರೆ, ತುಳಸಿ ಎಲೆಯನ್ನು ಕಿವುಚಿಕೊಂಡು ಚರ್ಮದ ಮೇಲೆ ಹಚ್ಚಿಕೊಳ್ಳಿ.

Coffee powder

ಕರ್ಪೂರ

ಕರ್ಪೂರವಂತೂ ಎಲ್ಲರ ಮನೆಗಳಲ್ಲಿ ದೇವರ ಕೋನೆಯಲ್ಲಿ ಇದ್ದೇ ಇರುತ್ತದೆ. ಸ್ವಲ್ಪ ನೀರಿನಲ್ಲಿ ಕರ್ಪೂರವನ್ನು ಕರಗಿಸಿಕೊಂಡು ಅದನ್ನು ನಿಮ್ಮ ಮನೆಯೊಳಗೆ ಹಾಗೂ ಸೊಳ್ಳೆ ಬರುವ ಜಾಗಗಳಿಗೆ ಸ್ಪ್ರೇ ಮಾಡಿ. ಜೊತೆಗೆ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ, ೨೦ ನಿಮಿಷಗಳ ಕಾಲ ಕರ್ಪೂರವನ್ನು ಮನೆಯೊಳಗೆ ಹೊತ್ತಿಸಿಟ್ಟು ನೀವು ಹೊರಗಿರಿ. ಸೊಳ್ಳೆಗಳೆಲ್ಲ ಓಡುತ್ತವೆ.

Coconut oil and bitter neem oil

ತೆಂಗಿನೆಣ್ಣೆ ಹಾಗೂ ಕಹಿ ಬೇವಿನೆಣ್ಣೆ

ಈ ಎರಡೂ ಎಣ್ನೆಗಳನ್ನು ಮಿಕ್ಸ್‌ ಮಾಡಿ ನೀರನ್ನೂ ಸ್ವಲ್ಪ ಸೇರಿಸಿ, ನಿಮ್ಮ ಮೈಮೇಲೆ ಸಿಂಪಡಿಸಿಕೊಳ್ಳಬಹುದು. ಸುಮಾರು ನಾಲ್ಕೈದು ಗಂಟಗಳ ಕಾಲ ಸೊಳ್ಲೆಗಳಿಂದ ನಿಮಗೆ ರಕ್ಷಣೆ ದೊರೆಯುತ್ತದೆ.

Coffee powder

ಕಾಫಿ

ಕಾಫಿ ಪುಡಿಯನ್ನು ಒಂದು ಟ್ರೇಯಲ್ಲಿಟ್ಟು ಬೆಂಕಿ ಕೊಡಿ. ಇದನ್ನು ಉರಿಸುವುದರಿಂದ ಸೊಳ್ಳೆಗಳು ಓಡಿಹೋಗುತ್ತವೆ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಚೆಕ್ಕೆ ಎಣ್ಣೆ

ಚೆಕ್ಕೆಯನ್ನು ಕೇವಲ ಪಲಾವಿಗೆ ಮಾತ್ರ ಬಳಸುತ್ತೀರಾ? ಇದನ್ನು ಸೊಳ್ಳೆಯ ವಿರುದ್ಧವೂ ಬಳಸಿ ನೋಡಿ. ಚೆಕ್ಕೆಯ ಎಣ್ಣೆಯಲ್ಲಿ ಸೊಳ್ಳೆಯ ಮೊಟ್ಟೆಗಳೆಲ್ಲ ಸಾಯುತ್ತವಂತೆ. ದೊಡ್ಡ ಸೊಳ್ಳೆಗಳು ಚೆಕ್ಕೆ ಎಣ್ಣೆಗೆ ಹೆದರಿ ಓಡುತ್ತವಂತೆ. ಮೈಮೇಲೆ ಸ್ವಲ್ಪ ಹಚ್ಚಿಕೊಂಡರೂ ಸಾಕು, ಸೊಳ್ಳೆ ನಿಮ್ಮನ್ನು ಮೂಸುವ ಧೈರ್ಯವನ್ನೂ ಮಾಡಲಾರದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

Curry Leaves: ಕರಿಬೇವನ್ನು ಒಗ್ಗರಣೆಗೆ ಬಳಸಿ ಬಿಸಾಡುತ್ತೇವೆ. ಆದರೆ ಈ ಕರಿಬೇವಿನಲ್ಲಿರುವ ಅಂಶಗಳು ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.ಇನ್ಮುಂದೆ ಊಟದಲ್ಲಿ ತಟ್ಟೆಯಲ್ಲಿ ಸಿಕ್ಕ ಕರಿಬೇವನ್ನು ಬಿಸಾಡುವ ಮೊದಲು ಯೋಚಿಸಿ.

VISTARANEWS.COM


on

Curry Leaves
Koo


ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಹೆಚ್ಚು ಬಳಸುತ್ತಾರೆ. ಕಾರಣ, ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲದೆ ಇದು ಪೋಷಕಾಂಶಗಳ ನಿಧಿಯಾಗಿದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಬಳಸುವ ಮೂಲದ ಇಲ್ಲವಾದರೆ ಹಸಿಯಾಗಿ ಜಗಿಯುವುದು ಅಥವಾ ಅವುಗಳ ರಸವನ್ನು ಕುಡಿಯುವುದರಿಂದ ಕೂಡ ನಮ್ಮ ಆರೋಗ್ಯವನ್ನು(Curry Leaves) ವೃದ್ಧಿಸಿಕೊಳ್ಳಬಹುದು.

Curry Leaves
Curry Leaves

ಕೂದಲಿನ ಬೆಳವಣಿಗೆಗೆ ಸಹಾಯಕಾರಿ

ಕರಿಬೇವಿನ ಎಲೆಗಳನ್ನು ಜಗಿಯುವುದು ಅಥವಾ ಅವುಗಳ ರಸವನ್ನು ಕುಡಿಯುವುದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

Curry Leaves
Curry Leaves

ಚರ್ಮಕ್ಕೆ ವರದಾನ

ಕರಿಬೇವಿನ ಎಲೆಗಳು ಚರ್ಮಕ್ಕೆ ವರದಾನವಾಗಿದ್ದು, ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ, ಮೊಡವೆಗಳು, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

Curry Leaves
Curry Leaves

ತೂಕ ಕಡಿಮೆ ಮಾಡುವಲ್ಲಿ ಸಹಾಯಕ

ಬೆಳಗ್ಗೆ ಕರಿಬೇವಿನ ಎಲೆಗಳು ಅಥವಾ ಅವುಗಳ ರಸವನ್ನು ಸೇವಿಸುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ನಿರ್ವಿಷಗೊಳ್ಳುತ್ತದೆ ಮತ್ತು ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ರಕ್ತಹೀನತೆ ನಿವಾರಣೆ

ಕರಿಬೇವಿನಲ್ಲಿ ಕಬ್ಬಿಣದ ಸತ್ವಗಳು ಸಮೃದ್ಧವಾಗಿದೆ. ಕರಿಬೇವಿನ ಎಲೆಗಳು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ರಕ್ತಹೀನತೆ ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ.

Curry Leaves
Curry Leaves

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಕರಿಬೇವಿನ ಎಲೆಯ ರಸವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಕಡಿಮೆ ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಇರುವ ವ್ಯಕ್ತಿಗಳು ಕರಿಬೇವಿನ ಎಲೆಯ ರಸವನ್ನು ಸೇವಿಸುವುದನ್ನು ತಪ್ಪಿಸಬೇಕು.

Curry Leaves
Curry Leaves

ಒತ್ತಡ, ಆತಂಕ ನಿವಾರಣೆ

ಇದಲ್ಲದೇ ಕರಿಬೇವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ಪ್ರತಿದಿನ ಬೆಳಗ್ಗೆ 5-6 ತಾಜಾ ಕರಿಬೇವಿನ ಎಲೆಗಳನ್ನು ಜಗಿಯಿರಿ. ಅಥವಾ ಕರಿಬೇವಿನ ಎಲೆಯ ರಸ 1 ಚಮಚದಷ್ಟು ನೀರಿನೊಂದಿಗೆ ಬೆರೆಸಿ ಕುಡಿಯಿರಿ. ನಿಮ್ಮ ಊಟಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿ.

ಇದನ್ನೂ ಓದಿ: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

ಆದರೆ ನೀವು ನಿಮ್ಮ ಆಹಾರದಲ್ಲಿ ಕರಿಬೇವನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಯಾಕೆಂದರೆ ಕೆಲವೊಂದು ಆರೋಗ್ಯಕರ ವಸ್ತುಗಳು ದೇಹಕ್ಕೆ ಅನುಕೂಲಕರವಾಗಿದ್ದರೂ ಕೆಲವೊಮ್ಮೆ ಅಡ್ಡಪರಿಣಾಮಗಳನ್ನುಂಟುಮಾಡುವ ಸಂಭವವಿದೆ. ಹಾಗಾಗಿ ವೈದ್ಯರ ಸಲಹೆಯಂತೆ ಸೇವಿಸಿ.

Continue Reading

ಆರೋಗ್ಯ

Health Tips: ಗ್ಯಾಸ್ಟ್ರಿಕ್‌, ಅಜೀರ್ಣ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಪರಿಣಾಮಕಾರಿ ಮದ್ದು!

ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಫೈಬರ್ ಭರಿತ ಆಹಾರಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲದೆ ಕೆಲವು ಸಾಮಾನ್ಯ ಅಡುಗೆ ಪದಾರ್ಥಗಳಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ (Health Tips) ಮುಕ್ತಿ ಪಡೆಯಬಹುದು. ನಮ್ಮನ್ನು ಹೆಚ್ಚಾಗಿ ಕಾಡುವ ಹಲವು ಸಮಸ್ಯೆಗಳಿಗೆ ಇರುವ ಮನೆಮದ್ದಿನ ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಎದೆಯುರಿ (heartburn), ಅಜೀರ್ಣ (indigestion) ಮತ್ತು ಗ್ಯಾಸ್ಟ್ರಿಕ್ (gastric) ಮೊದಲಾದ ಆರೋಗ್ಯ (Health Tips) ಸಮಸ್ಯೆಗಳು ನಾವು ಸಾಮಾನ್ಯ ಎಂದುಕೊಂಡಿರುತ್ತೇವೆ. ಆದರೆ ಇದನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು. ಜೀರ್ಣಕಾರಿ ಸಮಸ್ಯೆಗಳು (Digestive issues) ಅನೇಕ ಜನರಿಗೆ ಸಾಮಾನ್ಯ ಸಮಸ್ಯೆಗಳಾಗಿವೆ. ದುರ್ಬಲ ಜೀರ್ಣಾಂಗ ವ್ಯವಸ್ಥೆಯಿಂದಾಗಿ ಇದು ಉಂಟಾಗುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು, ಹೊಟ್ಟೆ ಭಾರ ಮತ್ತು ಊಟದ ಅನಂತರ ಎದೆಯುರಿ ಮೊದಲಾದವುಗಳು ಕಾಣಿಸಿಕೊಳ್ಳುತ್ತವೆ.

ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳಲು ಸಾಧ್ಯವಾಗದಿದ್ದರೆ ಪೋಷಕಾಂಶಗಳ ಕೊರತೆಗೆ ಕಾರಣವಾಗುವುದರಿಂದ ಈ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯವಾಗಿದೆ. ಫೈಬರ್ ಭರಿತ ಆಹಾರಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ಕೆಲವು ಸಾಮಾನ್ಯ ಅಡುಗೆ ಪದಾರ್ಥಗಳಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಜೀರ್ಣಕಾರಿ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುವ ನಾಲ್ಕು ಪರಿಹಾರಗಳು ಇಲ್ಲಿವೆ.

Health Tips
Health Tips


ಸೋಂಪು ಕಾಳು

ಸೋಂಪು ಕಾಳುಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಾಂಪ್ರದಾಯಿಕ ಪರಿಹಾರವಾಗಿದೆ. ಊಟದ ಅನಂತರ ಉಬ್ಬುವುದು ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಅವುಗಳನ್ನು ಶತಮಾನಗಳಿಂದ ಬಳಸಲಾಗುತ್ತದೆ. ಊಟದ ಅನಂತರ ಸೋಂಪು ಕಾಳುಗಳನ್ನು ಅಗಿಯುವುದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಬಳಸುವುದು ಹೇಗೆ ?

ಊಟದ ಅನಂತರ ಒಂದು ಟೀಚಮಚ ಸೋಂಪು ಕಾಳನ್ನು ಜಗಿದು ತಿನ್ನಿ. ಅಥವಾ ಒಂದು ಲೋಟ ನೀರಿನಲ್ಲಿ ಒಂದು ಟೀಚಮಚ ಸೋಂಪು ಕಾಳುಗಳನ್ನು ಕುದಿಸಿ, ಸೋಸಿಕೊಂಡು ಬೆಚ್ಚಗೆ ಕುಡಿಯಬಹುದು.

Health Tips
Health Tips


ಅಜ್ವೈನ್

ಅಜ್ವೈನ್ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣ ಹೊಂದಿದೆ. ಆಮ್ಲೀಯತೆ, ಉಬ್ಬುವುದು ಮತ್ತು ಹೊಟ್ಟೆ ನೋವಿಗೆ ಇದು ಪರಿಹಾರವನ್ನು ನೀಡಬಹುದು. ಅಜ್ವೈನ್ ಗ್ಯಾಸ್ಟ್ರಿಕ್ ಜ್ಯೂಸ್ ಸ್ರವಿಸುವಿಕೆಯಲ್ಲಿ ಸಹಾಯ ಮಾಡುತ್ತದೆ, ಹೀಗಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಬಳಸುವುದು ಹೇಗೆ?

ಅಜ್ವೈನ್ ನ ಕೆಲವು ಬೀಜಗಳನ್ನು ಊಟದ ಅನಂತರ ಜಗಿಯಬಹುದು ಅಥವಾ ಒಂದು ಟೀ ಚಮಚ ಅಜ್ವೈನ್ ಬೀಜಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಮತ್ತು ಅದನ್ನು ಕುಡಿಯಬಹುದು.

Health Tips
Health Tips


ಏಲಕ್ಕಿ

ಏಲಕ್ಕಿಯನ್ನು ಸಾಮಾನ್ಯವಾಗಿ ಖಾರ ಮತ್ತು ಸಿಹಿ ತಿನಿಸುಗಳಲ್ಲಿ ಬಳಸಲಾಗುತ್ತದೆ. ಇದು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಏಲಕ್ಕಿಯು ಗ್ಯಾಸ್ ಮತ್ತು ಅಜೀರ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯುಬ್ಬರಕ್ಕೆ ಪರಿಹಾರವನ್ನು ನೀಡುತ್ತದೆ.

ಬಳಸುವುದು ಹೇಗೆ?

ಊಟದ ಅನಂತರ ಏಲಕ್ಕಿಯನ್ನು ಅಗಿಯಿರಿ. ಇದು ರುಚಿಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Health Tips
Health Tips


ಇಂಗು

ಇಂಗು ಕಟುವಾದ ಪರಿಮಳ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಇದು ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಗು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕಾರಿ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.

ಬಳಸುವುದು ಹೇಗೆ?

ಒಂದು ಚಿಟಿಕೆ ಇಂಗನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿ ಮತ್ತು ಊಟದ ಅನಂತರ ಕುಡಿಯಿರಿ ಅಥವಾ ಉತ್ತಮ ಜೀರ್ಣಕ್ರಿಯೆಗಾಗಿ ಇದನ್ನು ಒಗ್ಗರಣೆಯಲ್ಲಿ ಸೇರಿಸಬಹುದು.

ಇದನ್ನೂ ಓದಿ: Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

ಉತ್ತಮ ಜೀರ್ಣಕ್ರಿಯೆಗೆ ಸಲಹೆಗಳು

ಜೀರ್ಣಕ್ರಿಯೆಗೆ ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರಲು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸರಿಯಾಗಿ ಜಗಿದು ತಿನ್ನಿ.
ಜೀರ್ಣಾಂಗ ವ್ಯವಸ್ಥೆಯನ್ನು ಓವರ್‌ಲೋಡ್ ಮಾಡಬೇಡಿ. ಚಿಕ್ಕ ಪ್ರಮಾಣದಲ್ಲಿ ಆಗಾಗ್ಗೆ ಸೇವಿಸಿ.

ದೈಹಿಕ ಚಟುವಟಿಕೆಯು ಜೀರ್ಣಕಾರಿ ಪ್ರಕ್ರಿಯೆಯನ್ನು ಉತ್ತೇಜಿಸಲು ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Monsoon Healthy Cooking Tips: ಎಲ್ಲೆಲ್ಲೂ ವೈರಲ್‌ ಜ್ವರಗಳು, ಇನ್‌ಫೆಕ್ಷನ್‌ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು.

VISTARANEWS.COM


on

Monsoon Healthy Cooking Tips
Koo

ಮಳೆಗಾಲ (Monsoon) ಜೋರಾಗಿದೆ. ಹಾಗಾಗಿ ವೈರಸ್‌, ಬ್ಯಾಕ್ಟೀರಿಯಾಗಳ ಸದ್ದೂ ಜೋರಾಗಿದೆ. ಎಲ್ಲೆಲ್ಲೂ ವೈರಲ್‌ ಜ್ವರಗಳು, ಇನ್‌ಫೆಕ್ಷನ್‌ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು. ಸೊಪ್ಪಿನ ಅಡುಗೆ ಮಾಡುವ ಮುನ್ನ ಮಳೆಗಾಲದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹಾಗಂತ ಮಳೆಗಾಲದಲ್ಲಿ ಇವನ್ನು ತಿನ್ನಲೇಬಾರದು ಎಂದಲ್ಲ. ಎಚ್ಚರಿಕೆ ಖಂಡಿತ ಬೇಕು. ಮಳೆಗಾಲದಲ್ಲಿ ಸೊಪ್ಪಿನ ಮೇಲೆ ಸಾಕಷ್ಟು ಬ್ಯಾಕ್ಟೀರಿಯಾ, ವೈರಸ್‌ ದಾಳಿಯಾಗಿರುತ್ತದೆ. ಹುಳು ಹುಪ್ಪಟೆಗಳೂ ಸಾಮಾನ್ಯ. ಆದ್ದರಿಂದ ಇವುಗಳು ನಮ್ಮ ದೇಹಕ್ಕೆ ಪ್ರವೇಶಿಸುವ ಮಾರ್ಗ ಸುಲಭವಾಗಿ ಬಿಡುತ್ತದೆ. ನಾವು ಅವುಗಳನ್ನು ಸರಿಯಾಗಿ ತೊಳೆದು ಬಳಸದಿದ್ದರೆ ಹೊಟ್ಟೆ ಕೆಡುವ ಸಮಸ್ಯೆ, ಬೇದಿ, ವಾಂತಿ ಇತ್ಯಾದಿಗಳೂ ಬರಬಹುದು. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪು ಸದೆಗಳನ್ನು ಅಡುಗೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ ಎನ್ನುತ್ತಾರೆ ತಜ್ಞರು. ಬನ್ನಿ, ಸೊಪ್ಪು ಸೇವಿಸುವ ಮುನ್ನ ಯಾವ ಎಚ್ಚರಿಕೆಗಳು (Monsoon Healthy Cooking Tips) ಮುಖ್ಯ ಎಂಬುದನ್ನು ನೋಡೋಣ. ಮಳೆಗಾಲದಲ್ಲಿ, ಸಹಜವಾಗಿ ಕೆಲವು ಸೊಪ್ಪುಗಳು ತರಕಾರಿ ಮಾರುಕಟ್ಟೆಯಲ್ಲಿ ಕಾಣೆಯಾಗುತ್ತದೆ. ಬಹಳ ಸೂಕ್ಷ್ಮವಾಗಿರುವ ಪಾಲಕ್‌ನಂತಹ ಸೊಪ್ಪುಗಳು ಮಳೆಗಾಲದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಹರಿದು ಛಿದ್ರವಾಗುವುದರಿಂದ ಮಾರುಕಟ್ಟೆಗೆ ಬರುವುದೇ ಇಲ್ಲ. ಮೆಂತ್ಯ ಸೊಪ್ಪೂ ಕೂಡಾ ಅಷ್ಟೇ, ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿರುವುದಿಲ್ಲ. ಕೆಲವು ಸೊಪ್ಪುಗಳು ಮಳೆಗಾಲಕ್ಕೆ ಸರಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಆದರೆ, ಮಳೆಗಾಲವಾದ್ದರಿಂದ ಸೊಪ್ಪು ಹರದಿರುವುದು, ಬೇರುಗಳೆಲ್ಲ ಕೆಸರಾಗಿರುವುದು, ಹುಳು ಹುಪ್ಪಟೆಗಳು ಎಲೆಯನ್ನು ಕಚ್ಚಿ ಹರಿದಿರುವುದು, ಎಲೆಯ ಅಡುಭಾಗದಲ್ಲಿ ಹುಳಗಳು ಹರಿದುಹೋಗಿರುವ ಗುರುತು ಇವೆಲ್ಲವೂ ಸಾಮಾನ್ಯವಾಗಿರುತ್ತದೆ. ಹಾಗಾಗಿಯೇ ಸೊಪ್ಪಿನ ಅಡುಗೆ ಮಾಡುವಾಗ ಎಚ್ಚರಿಕೆ ಬಹಳ ಅಗತ್ಯ.

Healthy Cooking Tips

ಸೊಪ್ಪಿನ ಅಡುಗೆ ಮಳೆಗಾಲದಲ್ಲಿ ಮಾಡುವ ಮೊದಲು ಸೊಪ್ಪನ್ನು ಮೊದಲು ಬಿಡಿಸಿ. ನೀರಲ್ಲಿ ಹಾಕಿಟ್ಟು ತೊಳೆಯಿರಿ. ಹುಳ ಹುಪ್ಪಟೆಗಳಿರುವ ಎಲೆಗಳನ್ನು ಬಳಸದಿರಿ. ಸರಿಯಾಗಿರುವ, ಆರೋಗ್ಯವಾಗಿ ಕಾಣುವ ಎಲೆಗಳನ್ನು ಆರಿಸಿಕೊಂಡು ಪ್ರತ್ಯೇಕವಾಗಿಟ್ಟು, ಉಳಿದವನ್ನು ಎಸೆಯಿರಿ. ಪ್ರತಿಯೊಂದು ಎಲೆಯನ್ನೂ ಸೂಕ್ಷ್ಮವಾಗಿ ಗಮನಿಸಿ. ಸರಿಯಾಗಿರುವ ಎಲೆಯನ್ನು ಮಾತ್ರ ಚೆನ್ನಾಗಿ ಎರಡೆರಡು ಬಾರಿ ತೊಳೆದುಕೊಂಡು ಅದರ ಕಾಂಡಗಳನ್ನು ಕತ್ತರಿಸಿ ಎಸೆಯಿರಿ.

ಹರಿಯುವ ನೀರಿಗೆ ಹಿಡಿದು ತೊಳೆಯಿರಿ. ಮಾರುಕಟ್ಟೆಯಿಂದ ತಂದ ಕೃತಕ ತೊಳೆಯುವ ಲಿಕ್ವಿಡ್‌ಗಳಲ್ಲಿ ಹಾಕಿಟ್ಟು ತೊಳೆಯುವುದರಿಂದ ಎಲೆ ಮತ್ತಷ್ಟು ಹಾಳಾಗಬಹುದು. ಅದಕ್ಕಾಗಿ, ನಳ್ಳಿಯ ಅಡಿಯಲ್ಲಿ ಹಿಡಿದು ಹರಿಯುವ ನೀರಿನಲ್ಲಿ ತೊಳೆಯಿರಿ.

Hand Washing Leafy Greens

ತೊಳೆದ ಎಲೆಗಳನ್ನು ಆರಲು ಬಿಡುವುದು ಬಹಳ ಮುಖ್ಯ. ಒಣ ಟವೆಲ್‌ ಮೇಲೆ ತೊಳೆದ ಎಲೆಗಳನ್ನು ಹರವಿಟ್ಟು ಮೃದುವಾಗಿ ಒರೆಸಬಹುದು. ಅಥವಾ ಹಾಗೆಯೇ ಸ್ವಲ್ಪ ಹೊತ್ತು ಬಿಟ್ಟು ಹೆಚ್ಚಿನ ನೀರಿನಂಶ ಆರಲು ಬಿಡಬಹುದು.

ಎಲೆಗಳನ್ನು ತೊಳೆದುಕೊಂಡ ಮೇಳೆ ಒಂದೆರಡು ನಿಮಿಷಗಳ ಕಾಲ ಐಸ್‌ ನೀರಿನಲ್ಲಿ ಹಾಕಿಟ್ಟುಕೊಂಡು ನಂತರ ತೆಗೆಯಬಹುದು. ಹೀಗೆ ಮಾಡುವುದರಿಂದ ಎಲೆಯ ತಾಜಾತನ ಹಾಗೆಯೇ ಉಳಿದುಕೊಳ್ಳುತ್ತದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಹಸಿ ಎಲೆಗಳಿಂದ ಮಾಡುವ ಅಡುಗೆಯನ್ನು ಮಳೆಗಾಲದಲ್ಲಿ ಮಾಡಬೇಡಿ. ಬಾಣಲೆಯಲ್ಲಿ ಎಲೆಯನ್ನು ಬಾಡಿಸಿಕೊಂಡು, ಬಿಸಿ ಮಾಡುವ ಮೂಲಕ ಮಾಡುವ ಅಡುಗೆಯನ್ನೇ ಮಾಡಿ. ಮಳೆಗಾಲದಲ್ಲಿ ಹಸಿ ಸೊಪ್ಪು ತರಕಾರಿಗಳನ್ನು ಹಾಗೆಯೇ ಹಸಿಯಾಗಿ ಬಳಸಬೇಡಿ.

Continue Reading

ಆರೋಗ್ಯ

Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

Nonstick Pans: ಟೆಫ್ಲಾನ್‌ ಫ್ಲೂ (Teflon flu) ಯಾವುದೇ ರೋಗಾಣುವಿನಿಂದ ಹರಡುವ ಸೋಂಕಲ್ಲ. ಬದಲಿಗೆ ನಾನ್‌ಸ್ಟಿಕ್‌ ಪಾತ್ರೆಗಳಿಂದ ಬಿಡುಗಡೆಯಾಗುವ ವಿಷಯುಕ್ತ ಹೊಗೆಯಿಂದ, ಫ್ಲೂ ಮಾದರಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಲೆನೋವು, ಮೈಕೈ ನೋವು, ಜ್ವರ, ನಡುಕ ಮುಂತಾದ ಶೀತ-ಜ್ವರದ ರೀತಿಯಲ್ಲೇ ಅನಾರೋಗ್ಯ ಉಂಟಾಗುತ್ತದೆ. ಹೆಚ್ಚಿನ ವಿವರಗಳು ಈ ಲೇಖನದಲ್ಲಿವೆ.

VISTARANEWS.COM


on

Nonstick Pans
Koo

ಟೆಫ್ಲಾನ್‌ ಫ್ಲೂ ಎಂಬ ಹೆಸರನ್ನು ಕೇಳಿದ್ದೀರಾ? ಜಗತ್ತಿನೆಲ್ಲೆಡೆ ಹರಡುತ್ತಿರುವ ಲೆಕ್ಕವಿಲ್ಲದಷ್ಟು ರೋಗಗಳ ಪೈಕಿ ಇದೂ ಒಂದು; ಯಾವುದೋ ಹೆಸರು ಕೇಳದ ಹೊಸ ವೈರಸ್‌ನಿಂದ ಬಂದಿದ್ದು ಎಂದು ಭಾವಿಸಬೇಡಿ. ಇದು ಯಾವುದೇ ರೋಗಾಣುವಿನಿಂದ ಬರುತ್ತಿರುವ ಫ್ಲೂ ಅಲ್ಲ, ನಾನ್‌ಸ್ಟಿಕ್‌ ಪಾತ್ರೆಗಳಿಂದ ಹೊಮ್ಮುತ್ತಿರುವ ವಿಷಯುಕ್ತ ಹೊಗೆಯಿಂದ ಬರುತ್ತಿರುವ ಆರೋಗ್ಯ ಸಮಸ್ಯೆಯಿದು. ಅಮೆರಿಕದಾದ್ಯಂತ ನೂರಾರು ಜನ ಈಗಾಗಲೇ ಈ ವಿಚಿತ್ರ ಸಮಸ್ಯೆಗೆ ತುತ್ತಾಗಿದ್ದಾರೆ. ಏನಿದು ಎನ್ನುವ ವಿವರಗಳು ಇಲ್ಲಿವೆ. ಟೆಫ್ಲಾನ್‌ ಫ್ಲೂ (Teflon flu) ಎನ್ನಲಾಗುವ ಈ ಸಮಸ್ಯೆಯನ್ನು ಪಾಲಿಮರ್‌ ಹೊಗೆಯ ಜ್ವರ (polymer fume fever) ಎಂದೂ ಕರೆಯಲಾಗುತ್ತದೆ. ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಿಸಿ ಮಾಡಿದಾಗ, ಆ ಶಾಖಕ್ಕೆ ಆ ಪಾತ್ರೆಗಳಿಂದ ಬಿಡುಗಡೆಯಾಗುವ ಹೊಗೆಗೆ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಯಿದು. ಟೆಫ್ಲಾನ್‌ ಎಂಬುದು ಯಾವುದೇ ರಾಸಾಯನಿಕವಲ್ಲ, ಬದಲಿಗೆ ಪಾಲಿಟೆಟ್ರಾಫ್ಲೂರೊಈಥೈಲೀನ್‌ ಎಂಬ ರಾಸಾಯನಿಕ ಸಂಯುಕ್ತದ ಬ್ರಾಂಡ್‌ ಹೆಸರು. ಸಾಮಾನ್ಯವಾಗಿ ಟೆಫ್ಲಾನ್‌ ಮೇಲ್ಮೈ ಹೊಂದಿರುವ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸುರಕ್ಷಿತ ಎಂದೇ ಭಾವಿಸಲಾಗುತ್ತದೆ. ಆದರೆ ಅದರಲ್ಲೂ ಸಮಸ್ಯೆಗಳಿವೆ ಎಂಬುದಕ್ಕೆ ಈಗ (Nonstick Pans) ಕಾಣುತ್ತಿರುವ ಟೆಫ್ಲಾನ್‌ ಫ್ಲೂ ಉದಾಹರಣೆ.

Nonstick Frying Pan with Handle
Nonstick Frying Pan with Handle

ಲಕ್ಷಣಗಳೇನು?

ಈ ಹೊಸ ಬಗೆಯ ರೋಗದಲ್ಲಿ ಯಾವುದೇ ರೋಗಾಣುವಿನಿಂದ ಸೋಂಕು ಹರಡುವುದಿಲ್ಲ. ಬದಲಿಗೆ ವಿಷಯುಕ್ತ ಹೊಗೆಯಿಂದ ಫ್ಲೂ ಮಾದರಿಯಲ್ಲೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಲೆನೋವು, ಮೈಕೈ ನೋವು, ಜ್ವರ, ನಡುಕ ಮುಂತಾದ ಶೀತ-ಜ್ವರದ ಮಾದರಿಯಲ್ಲೇ ಅನಾರೋಗ್ಯ ಉಂಟಾಗುತ್ತದೆ. ಕಳೆದೊಂದು ವರ್ಷದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಅಮೆರಿಕನ್ನರು ಇದೇ ಲಕ್ಷಣಗಳನ್ನು ಹೊತ್ತು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಕಾರಣವೇನು?

ಇದು ಸಾಮಾನ್ಯವಾಗಿ ಬಳಕೆಗೆ ಸುರಕ್ಷಿತವಾಗ ರಾಸಾಯನಿಕ ಎಂದೇ ಹೇಳಲಾಗುತ್ತದೆ. ಆದರೆ ಈ ಹೊದಿಕೆಯನ್ನು ಹೊಂದಿದ ಪಾತ್ರೆಗಳನ್ನು ಬಳಸುವಾಗ ಕೆಲವು ಜಾಗ್ರತೆಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಇವುಗಳನ್ನು ಕೆರೆದು ಗೆರೆಯಾದರೆ, ಹೊದಿಕೆ ಕಿತ್ತು ಹೋದರೆ, ಅಲ್ಲಿಂದ ರಾಸಾಯನಿಕಗಳು ಹೊರಗೆ ಸೋರುತ್ತವೆ. ಈ ಪಾತ್ರೆಗಳನ್ನು ಅತಿಯಾಗಿ ಬಿಸಿ ಮಾಡಿದಾಗ ಸೋರಿ ಹೊರಬಂದ ರಾಸಾಯನಿಕಗಳು ಆವಿಯಾಗಿ ಸುತ್ತಲಿನ ವಾತಾವರಣ ಸೇರುತ್ತವೆ. ಇದನ್ನು ಉಸಿರಾಡಿದಾಗ ಹೀಗೆ ಫ್ಲೂ ಮಾದರಿಯ ಜ್ವರ ಕಾಣಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಸುರಕ್ಷತಾ ಕ್ರಮಗಳೇನು?

ನಾನ್‌ಸ್ಟಿಕ್‌ ಪಾತ್ರೆಗಳನ್ನು 500 ಡಿ. ಫ್ಯಾ. ಅಥವಾ 260 ಡಿ. ಸೆ. ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಬಿಸಿ ಮಾಡಿದಾಗ ಇಂಥ ಪರಿಣಾಮಗಳು ಆಗುವ ಸಾಧ್ಯತೆ ಹೆಚ್ಚು. ಐಸಿಎಂಆರ್‌ ಪ್ರಕಾರ, ನಾನ್‌ಸ್ಟಿಕ್‌ ಪಾತ್ರೆಗಳನ್ನು 170 ಡಿ. ಸೆ.ಗಿಂತ ಹೆಚ್ಚು ಬಿಸಿ ಮಾಡಬಾರದು. ಅದಲ್ಲದೆ, ಟೆಫ್ಲಾನ್‌ ಫ್ಯಾನ್‌ಗಳನ್ನು ಒವನ್‌ನಲ್ಲಿ ಪ್ರೀಹೀಟ್‌ ಮಾಡಬೇಡಿ. ಉರಿಯಲ್ಲಿ ದೀರ್ಘಕಾಲ ಖಾಲಿ ಬಿಡಬೇಡಿ. ಇದರಿಂದ ಹೊಗೆಯೇಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೇಲ್ಮೈ ಗೆರೆಯಾದ ಮತ್ತು ಕಿತ್ತುಹೋದ ಟೆಫ್ಲಾನ್‌ ಪಾತ್ರೆಗಳನ್ನು ಬಿಸಾಡಿ, ಬಳಸಬೇಡಿ. ನಾನ್‌ಸ್ಟಿಕ್‌ ಹೊದಿಕೆಯನ್ನು ʻಫಾರ್‌ಎವರ್‌ ಕೆಮಿಕಲ್ಸ್‌ʼ ಅಥವಾ ʻಎಂದೂ ಕರಗದ ರಾಸಾಯನಿಕʼಗಳೆಂದು ಕರೆಯುವ ಪಿಎಫ್‌ಎಎಸ್‌ಗಳಿಂದ ತಯಾರಿಸಲಾಗುತ್ತದೆ. per- and polyfluoroalkyl substances ಎನ್ನುವ ರಾಸಾಯನಿಕಗಳಿವು. ಸುಮಾರು 15000ರಷ್ಟು ಸಂಖ್ಯೆಯಲ್ಲಿರುವ ಈ ಸಂಕೀರ್ಣ ಸಿಂಥೆಟಿಕ್‌ ವಸ್ತುಗಳು, ವಾತಾವರಣದಲ್ಲೂ, ದೇಹದಲ್ಲೂ ಒಮ್ಮೆ ಸೇರಿದರೆ ದೀರ್ಘ ಕಾಲದವರೆಗೆ ಅವುಗಳನ್ನು ಅಲ್ಲಿಂದ ತೆಗೆಯುವುದಕ್ಕಾಗದು. ದೇಹದಲ್ಲಿಯೂ ಹೆಚ್ಚು ಸಮಯ ಇರಿಸಿಕೊಂಡರೆ, ಶರೀರವನ್ನು ವಿಷಮಯವಾಗಿಸುತ್ತವೆ ಇವು. 1950ರಿಂದಲೇ ಈ ರಾಸಾಯನಿಕಗಳು ಬಳಕೆಯಲ್ಲಿವೆ. ನೀರು, ತೈಲ, ಬಿಸಿ, ಕಲೆ ಮುಂತಾದವನ್ನು ತಡೆದುಕೊಳ್ಳಬಲ್ಲ ಮೇಲ್ಮೈ ನಿರ್ಮಾಣಕ್ಕೆ ಇದೇ ಗುಂಪಿನ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ನಾನ್‌ಸ್ಟಿಕ್‌ ಪಾತ್ರೆಗಳಲ್ಲಿ ಮಾತ್ರವಲ್ಲ, ಬಟ್ಟೆ, ಪೀಠೋಪಕರಣಗಳು, ಅಂಟು, ಆಹಾರದ ಪ್ಯಾಕಿಂಗ್‌ ವಸ್ತುಗಳು, ಸೆಲ್‌ಫೋನು, ಐರನ್‌ ಬಾಕ್ಸ್‌, ಎಲೆಕ್ಟ್ರಿಕ್‌ ವಯರ್‌ಗಳ ಇನ್‌ಸುಲೇಶನ್…‌ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.

Continue Reading
Advertisement
veterinary officer recruitment
ಪ್ರಮುಖ ಸುದ್ದಿ2 mins ago

Veterinary Officer Recruitment: 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ; ಶುಲ್ಕ, ಅರ್ಹತೆಯ ಮಾಹಿತಿ ಇಲ್ಲಿದೆ

Parisl Olympics 2024
ಪ್ರಮುಖ ಸುದ್ದಿ13 mins ago

Paris Olympics 2024 : ಮತ್ತೊಂದು ಗೆಲವು ಕಂಡ ಷಟ್ಲರ್ ಲಕ್ಷ್ಯ ಸೇನ್​

Bollywood Divorce Case
Latest19 mins ago

Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

Rahul Gandhi
ದೇಶ26 mins ago

Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

Star Shirt Saree Fashion
ಫ್ಯಾಷನ್31 mins ago

Star Shirt Saree Fashion: ಏನಿದು ಶರ್ಟ್‌ ಸೀರೆ? ಹೊಸ ಟ್ರೆಂಡ್‌ ಬಗ್ಗೆ ನಟಿ ತಾರಾ ಏನಂತಾರೆ?

Shravan 2024
Latest35 mins ago

Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು?

Fraud Case
Latest57 mins ago

Fraud Case: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

Paris Olympics 2024
ಕ್ರೀಡೆ1 hour ago

Paris Olympics 2024 : ಭಾರತಕ್ಕೆ ಶೂಟಿಂಗ್​ನಲ್ಲಿ ಕಂಚಿನ ಪದಕ ಜಸ್ಟ್​ ಮಿಸ್​!

Rajendra Nagara tragedy
ದೇಶ2 hours ago

Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Mosquito Repellents
ಆರೋಗ್ಯ2 hours ago

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ7 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌