Summer Food Tips: ಬೇಸಿಗೆಯಲ್ಲಿ ಈ 8 ಆಹಾರಗಳಿಂದ ದೂರ ಇರಿ! - Vistara News

ಆರೋಗ್ಯ

Summer Food Tips: ಬೇಸಿಗೆಯಲ್ಲಿ ಈ 8 ಆಹಾರಗಳಿಂದ ದೂರ ಇರಿ!

ಕೆಲವು ಆಹಾರಗಳು ಹೆಚ್ಚಿನ ಉಷ್ಣತೆಯನ್ನು “(Summer Food Tips) ದೇಹದಲ್ಲಿ ಉತ್ಪತ್ತಿ ಮಾಡುತ್ತವೆ ಅಥವಾ ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಇದರಿಂದ ದೇಹ ತಂಪಾಗಿಡುವುದು ಕಷ್ಟಸಾಧ್ಯ. ಯಾವ ಆಹಾರಗಳವು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Summer Food Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಿಗೆಯ ತಾಪಮಾನ 40 ಡಿ.ಸೆ. ದಾಟುತ್ತಿದೆ ಬಹಳಷ್ಟು ಕಡೆಗಳಲ್ಲಿ. ಕಂಡು ಕೇಳರಿಯದ ಈ ಬೆಂಕಿಯಂಥ ಬೇಸಿಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಎಲ್ಲರೂ ಒದ್ದಾಡುತ್ತಿದ್ದಾರೆ. ದೇಹವನ್ನು ತಂಪು ಮಾಡುವ ಭರದಲ್ಲಿ ಕೆಲವೊಮ್ಮೆ ತದ್ವಿರುದ್ಧ ಕೆಲಸವನ್ನೇ ಮಾಡಿರುತ್ತೇವೆ. ಅದರಲ್ಲೂ ಕೆಲವು ಆಹಾರಗಳು ಹೆಚ್ಚಿನ ಉಷ್ಣತೆಯನ್ನು ದೇಹದಲ್ಲಿ ಉತ್ಪತ್ತಿ ಮಾಡುತ್ತವೆ ಅಥವಾ ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಇದರಿಂದ ದೇಹ ತಂಪಾಗಿಡುವುದು ಕಷ್ಟಸಾಧ್ಯ. ಯಾವ (Summer Food Tips) ಆಹಾರಗಳವು?

Coffee and Caffeinated Beverages Healthy Foods That Are Harmful To Consume At Night

ಕಾಫಿ

ಹೀಗೆನ್ನುತ್ತಿದ್ದಂತೆ ಕಾಫಿ ಪ್ರಿಯರು ಸಿಟ್ಟಿಗೇಳಬಹುದು. ಆದರೆ ಕೇವಲ ಕಾಫಿ ಅಂತಲೇ ಅಲ್ಲ, ಕೆಫೇನ್‌ ಹೆಚ್ಚಿರುವ ಯಾವುದೇ ಪಾನೀಯಗಳು ಬೇಸಿಗೆಗೆ ಹೇಳಿಸಿದ್ದಲ್ಲ. ಚಹಾ ಸೇವನೆ ಹೆಚ್ಚಾದರೂ ಬೇಸಿಗೆಯಲ್ಲಿ ತೊಂದರೆಗೆ ಆಹ್ವಾನ ನೀಡಿದಂತೆ. ಹಾಗಾಗಿ ಈ ಬಿರು ಬೇಸಿಗೆಯಲ್ಲಿ ಬೇರೆ ಆರೋಗ್ಯಕರ ಪಾನೀಯಗಳ ಮೊರೆ ಹೋಗುವುದು ಸೂಕ್ತ.

Kerala Inji Curry Ginger Pickle Most Famous Indian Pickles And Their Origin Place

ಉಪ್ಪಿನಕಾಯಿ

ಕೆಲವರಿಗೆ ಊಟಕ್ಕೆ ಮುಂಚೆ ಇದೇ ಬೇಕಾಗುತ್ತದೆ; ಆದರೆ ಬೇಸಿಗೆಯಲ್ಲಿ ಸರಿಯಲ್ಲ. ಇವುಗಳಲ್ಲಿ ಉಪ್ಪಿನಂಶ ಹೆಚ್ಚಿರುವುದರಿಂದ, ದೇಹದಲ್ಲಿನ ನೀರಿನಂಶ ಕಡಿಮೆಯಾಗುವಂತೆ ಮಾಡುತ್ತವೆ. ಹಾಗಾಗಿ ಹೆಚ್ಚು ಉಪ್ಪಿರುವ ಯಾವುದೇ ಆಹಾರಗಳನ್ನೂ ಬಿರು ಬೇಸಿಗೆಯಲ್ಲಿ ಸೇವಿಸದೆ ಇರುವುದು ಜಾಣತನ.

Soda Effects Of Drinks

ಸೋಡಾ

ಇದರಲ್ಲಿ ಕೆಫೇನ್‌ ಮತ್ತು ಸಕ್ಕರೆ ಎರಡೂ ಸೇರಿದ್ದರಿಂದ, ಬೇಸಿಗೆಯ ದಾಹ ತಣಿಸಿಕೊಳ್ಳಲು ಹೇಳಿಸಿದ್ದಲ್ಲ ಈ ಪೇಯ. ಒಮ್ಮೆ ಕುಡಿದರೆ ಮತ್ತೆ ಕುಡಿಯಬೇಕೆನಿಸುವ ಸೋಡಾಗಳು, ದಾಹ ತಣಿಸುವುದಕ್ಕಿಂತ, ದೇಹವನ್ನು ನಿರ್ಜಲೀಕರಣದತ್ತ ದೂಡುತ್ತವೆ. ಅನಗತ್ಯ ಸಕ್ಕರೆಯಂಶವನ್ನು ದೇಹಕ್ಕೆ ತುರುಕಿ, ತೂಕವನ್ನೂ ಹೆಚ್ಚಿಸುತ್ತವೆ.

Image Of Dry Fruits For Hair Fall

ಒಣ ಹಣ್ಣುಗಳು

ಖರ್ಜೂರ, ಉತ್ತುತ್ತೆ, ಅಂಜೂರ ಮುಂತಾದ ಒಣ ಹಣ್ಣುಗಳು ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಹಾಗಾಗಿ ಹೆಚ್ಚು ಶಾಖವನ್ನು ಉತ್ಪತ್ತಿ ಮಾಡುತ್ತವೆ. ಇವುಗಳ ಬದಲಿಗೆ ಬೇಸಿಗೆಯ ತಾಜಾ ರಸಭರಿತ ಹಣ್ಣುಗಳನ್ನು ಸೇವಿಸುವುದು ಸೂಕ್ತ. ಒಣದ್ರಾಕ್ಷಿಯ ಬದಲಿಗೆ ಹಸಿ ದ್ರಾಕ್ಷಿಯನ್ನು ಸೇವಿಸಬಾರದೇಕೆ?

Spicy foods Foods To Avoid Eating With Tea

ಖಾರದ ತಿನಿಸುಗಳು

ಬಾಯಿಗೆ ರುಚಿಕಟ್ಟೆನಿಸುವ ಖಾರದ ತಿನಿಸುಗಳು ಬೇಸಿಗೆಯಲ್ಲಿ ಸೂಕ್ತವಲ್ಲ. ಜೀರ್ಣಾಂಗಗಳ ಕಿರಿಕಿರಿ, ಅಜೀರ್ಣಕ್ಕೆ ಕಾರಣವಾಗಿ, ದೇಹದ ಉಷ್ಣತೆಯನ್ನು ಅಧಿಕ ಮಾಡುತ್ತವೆ. ಜೊತೆಗೆ ಎಷ್ಟು ನೀರು ಕುಡಿದರೂ ಮುಗಿಯದ ನೀರಡಿಕೆಯನ್ನು ತಂದಿಕ್ಕುತ್ತವೆ. ಹಾಗಾಗಿ ಖಾರ ಪ್ರಿಯರು ನೀವಾಗಿದ್ದರೆ, ಬೇಸಿಗೆಯಲ್ಲಿ ಸ್ವಲ್ಪ ಖಾರ ಕಡಿಮೆ ಮಾಡುವುದು ಒಳ್ಳೆಯದು.

Assorted fried snacks Inflammation

ಕರಿದ ತಿಂಡಿಗಳು

ಇದರಲ್ಲೂ ಸೋಡಿಯಂ ಅಂಶ ಹೆಚ್ಚಿರುವುದರಿಂದ, ಕುಡಿದಷ್ಟಕ್ಕೂ ದಾಹ ತೀರುವುದೇ ಇಲ್ಲ ಎನ್ನುವಂತಾಗುತ್ತದೆ. ಜೊತೆಗೆ ಹೆಚ್ಚು ಕೊಬ್ಬಿರುವ ಆಹಾರಗಳು ಜೀರ್ಣಾಂಗಗಳಿಗೆ ಸಿಕ್ಕಾಪಟ್ಟೆ ಕೆಲಸ ನೀಡುತ್ತವೆ. ಇದನ್ನು ಚೂರ್ಣಿಸುವಲ್ಲಿ ದೇಹದ ಶಾಖವೂ ಏರುತ್ತದೆ. ಹಾಗಾಗಿ ಕರಿದ ತಿಂಡಿಗಳು ಸಹ ಬೇಸಿಗೆಗೆ ಸೂಕ್ತವಾದದ್ದಲ್ಲ.

ಮೊಟ್ಟೆ, ಚಿಕನ್

ಕೊಬ್ಬು ಮತ್ತು ಪ್ರೊಟೀನ್‌ ಸಾಂದ್ರವಾದ ಆಹಾರವಿದು. ಜೊತೆಗೆ ಹಲವು ರೀತಿಯ ಖನಿಜಗಳೂ ದೇಹಕ್ಕೆ ದೊರೆಯುತ್ತವೆ. ಆದರೆ ಇದನ್ನು ಪಚನ ಮಾಡುವುದಕ್ಕೆ ದೇಹದಲ್ಲಿ ಬಹಳಷ್ಟು ಶಾಖ‌ ಉತ್ಪತ್ತಿಯಾಗುತ್ತದೆ. ಸದಾ ಕಾಲ ಸೆಕೆಯ ಅನುಭವ ಆಗಬಹುದು ಕೆಲವರಿಗೆ. ಹಾಗಾಗಿ ಬೇಸಿಗೆಯಲ್ಲಿ ಈ ಆಹಾರಗಳ ಸೇವನೆಯನ್ನು ಮಿತಗೊಳಿಸಿದರೆ ಒಳ್ಳೆಯದು.

Remember that alcohol also triggers diabetes Simple Steps to Preventing Diabetes

ಆಲ್ಕೊಹಾಲ್

ಯಾವುದೇ ರೀತಿಯ ಆಲ್ಕೋಹಾಲ್‌ ಸೇವನೆಯು ದೇಹವನ್ನು ನಿರ್ಜಲೀಕರಣದತ್ತ ದೂಡುತ್ತದೆ. ಇದರಿಂದ ಬಾಯಿ ಒಣಗುವುದು, ತಲೆನೋವು ಮುಂತಾದ ಲಕ್ಷಣಗಳು ಕಾಣಬಹುದು. ಜೊತೆಗೆ ಅತಿಯಾದ ಮೂತ್ರ ಮತ್ತು ಬೆವರು ಉತ್ಪತ್ತಿ ಮಾಡಿ, ದೇಹವನ್ನು ಸಂಕಷ್ಟಕ್ಕೆ ದೂಡುತ್ತದೆ. ಹಾಗಾಗಿ ಬೇಸಿಗೆಗೆ ಹೇಳಿಸಿದ್ದಲ್ಲ ಇದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

ಕೆಲವೊಮ್ಮೆ ತಿನ್ನುವ ಕಡು ಬಯಕೆಯನ್ನು ನಿಯಂತ್ರಿಸುವುದು ಕಷ್ಟ. ಈ ಸಂದರ್ಭದಲ್ಲಿ ಪರ್ಯಾಯವಾಗಿ ಬಳಸಬಹುದಾದ ಕೆಲವು ಆಹಾರ ಪದಾರ್ಥಗಳಿವೆ. ಈ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾರ್ಗಸೂಚಿಯನ್ನು (ICMR Dietary Guidelines) ಬಿಡುಗಡೆ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿಸ್ತೃತ ಮತ್ತು ಉಪಯುಕ್ತ ಮಾಹಿತಿ.

VISTARANEWS.COM


on

By

ICMR Dietary Guidelines
Koo

ಬೆಳಗ್ಗೆ ಉಪಾಹಾರ (breakfast) ಚೆನ್ನಾಗಿಯೇ ಆಗಿದೆ. ಆದರೂ ಊಟಕ್ಕಿಂತ (lunch) ಮೊದಲು ಏನಾದರೂ ತಿನ್ನಬೇಕು ಎನ್ನುವ ಕಡು ಬಯಕೆ ಉಂಟಾಗುವುದು ಸಾಮಾನ್ಯ. ಆದರೆ ಎಲ್ಲರಿಗೂ ಇದನ್ನು ನಿಯಂತ್ರಿಸಲಾಗದು. ಹೀಗಾಗಿ ಕರಿದ ತಿಂಡಿಗಳು, ಕುರುಕಲು ತಿಂಡಿಗಳು (snaks), ಸಾಫ್ಟ್ ಡ್ರಿಂಕ್ಸ್ (soft drinks), ಜ್ಯೂಸ್‌ (juice) ಮೊದಲಾದವುಗಳ ಮೊರೆ ಹೋಗುತ್ತೇವೆ. ಆದರೆ ಇದು ಆರೋಗ್ಯಕರವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರ ಆಹಾರ ಕ್ರಮ ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು (ICMR Dietary Guidelines) ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯ ಬಳಕೆ ಮಾಡಬಹುದಾದ ಪದಾರ್ಥಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯಾವುದು ಆರೋಗ್ಯಕರ?

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಆರೋಗ್ಯಕರ ಪದಾರ್ಥಗಳನ್ನು ಉಲ್ಲೇಖಿಸಿದೆ. ಇದರಲ್ಲಿ ಪಿಜ್ಜಾ, ಡೊನಟ್ಸ್ ಮತ್ತು ಹಾಟ್‌ಡಾಗ್‌ಗಳ ಬದಲಿಗೆ ಸಲಾಡ್‌ ಮತ್ತು ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸಬಹುದು. ಆಳವಾದ ಕರಿದ ತಿಂಡಿಗಳ ಬದಲಿಗೆ ಬೀಜಗಳು ಮತ್ತು ತರಕಾರಿ ಬೀಜಗಳನ್ನು ತಿನ್ನಬಹುದು.

ಹಣ್ಣಿನ ರಸವನ್ನು ಸೇವಿಸುವ ಬದಲು ಸಂಪೂರ್ಣ ಹಣ್ಣುಗಳನ್ನು ಸೇವಿಸಬೇಕು. ಜಾಮ್ ಮತ್ತು ಸಾಸ್‌ಗಳ ಬದಲಿಗೆ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಚಟ್ನಿ ಮತ್ತು ಡಿಪ್‌ಗಳನ್ನು ಬಳಸಬಹುದು.


ಇದನ್ನೂ ಓದಿ: ICMR Dietary Guidelines: ಬೊಜ್ಜು ತಡೆಯಲು ಏನು ಮಾಡಬೇಕು? ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಶೋಧನಾ ಸಂಸ್ಥೆ

ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ಫ್ಯಾಟ್, ಸಕ್ಕರೆ, ಉಪ್ಪು, ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿದಷ್ಟು ಹೆಚ್ಚು ಕಾಲ ನಾವು ಆರೋಗ್ಯವಾಗಿ ಜೀವಿಸಬಹುದು.


ಕುಡಿಯಲು ಏನಿರಬೇಕು?

ರೆಡಿಮೇಡ್ ಸಾಫ್ಟ್ ಡ್ರಿಂಕ್ಸ್ ,ಜ್ಯೂಸುಗಳ ಬದಲಿಗೆ ಎಳನೀರು, ಮಜ್ಜಿಗೆ, ಲಿಂಬೆ ಹಣ್ಣುಮ್ ಚಿಯಾ ಬೀಜ, ಕಿತ್ತಳೆ, ಕಲ್ಲಂಗಡಿ, ಮಾವಿನ ಹಣ್ಣು, ಫೈನಾಪಲ್, ದಾಳಿಂಬೆ ಹಣ್ಣಿನ ರಸವನ್ನು ಕುಡಿಯಬಹುದು.

ಟೀ, ಕಾಫಿಯನ್ನು ಬರಿ ಹೊಟ್ಟೆಯಲ್ಲಿ ಊಟಕ್ಕಿಂತ ಅರ್ಧ ಗಂಟೆ ಮೊದಲು ಅಥವಾ ಅನಂತರ ಸೇವಿಸುವುದು ಒಳ್ಳೆಯದಲ್ಲ. ಇದರ ಬದಲು ಗ್ರೀನ್ ಟೀ, ಬ್ಲಾಕ್ ಟೀ ಕುಡಿಯಬಹುದು. ಆಲ್ಕೋಹಾಲ್ ಸೇವನೆಯು ಆರೋಗ್ಯಕರವಲ್ಲ. ಇದರ ಬದಲಿಗೆ ಫ್ರೆಶ್ ಹಣ್ಣಿನ ರಸವನ್ನು ಸೇವನೆ ಮಾಡಬಹುದು.

ತಿನ್ನಲು ಯಾವುದಿರಬೇಕು?

  1. 1. ಪಿಜ್ಜಾ, ಡೋನಟ್ ಬದಲಿಗೆ ಸಲಾಡ್, ತರಕಾರಿ ಬೀಜಗಳನ್ನು ಸೇವಿಸಬಹುದು.

2. ಡೀಪ್ ಫ್ರೈಡ್ ತಿಂಡಿಗಳ ಬದಲು ಬೀಜ, ಧಾನ್ಯಗಳನ್ನು ಸೇವಿಸಿ.

3. ಕೇಕ್, ಚಾಕಲೇಟ್, ಸ್ವೀಟ್ಸ್ ಬದಲಿಗೆ ಮನೆಯಲ್ಲೇ ಮಾಡಿರುವ ವಿವಿಧ ಧಾನ್ಯಗಳ ಉಂಡೆಗಳು, ಚಿಕ್ಕಿ, ಹುರಿದ ಕಾಳು, ಬೀಜಗಳನ್ನು ತಿನ್ನಬಹುದು.

4. ಜಾಮ್, ಸಾಸ್ ಬದಲಿಗೆ ಮನೆಯಲ್ಲೇ ಮಾಡಿರುವ ಚಟ್ನಿ, ಡಿಪ್ ಗಳನ್ನು ಸೇವಿಸಬಹುದು.

Continue Reading

ಆರೋಗ್ಯ

Sleeping Tips: ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಮಲಗುವ ಮುನ್ನ ಈ ಪೇಯಗಳನ್ನು ಕುಡಿಯಿರಿ!

ಅರೆಬರೆ ನಿದ್ದೆಯಂಥ ಭಾವ ಅಥವಾ ನಿದ್ದೆ ಬರಲು ಹೆಚ್ಚು ಸಮಯ ಹಿಡಿಯುವುದು ಇತ್ಯಾದಿ ಸಮಸ್ಯೆಗಳು ನಿಮ್ಮದಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಇತ್ತೀಚೆಗಿನ ದಿನಗಳಲ್ಲಿ ಈ ಸಮಸ್ಯೆ ಬಹಳ ಮಂದಿಯನ್ನು ಕಾಡುತ್ತಿದೆ. ಅತಿಯಾದ ಕೆಲಸ, ನಿದ್ದೆಯ ಸಮಯದ ಏರಿಳಿತ, ಕಚೇರಿಯ ಒತ್ತಡ, ತಡರಾತ್ರಿಯವರೆಗೆ ಮೊಬೈಲ್‌ ವೀಕ್ಷಣೆ, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಮಿತಿ ಮೀರಿ ಸಿನಿಮಾ ನೋಡುವುದು ಇತ್ಯಾದಿಗಳಿಂದಾಗಿ ನಿದ್ದೆಯ ಸಮಯ ಅಲ್ಲೋಲಕಲ್ಲೋಲವಾಗಿದೆ. ಇದಕ್ಕೇನು ಪರಿಹಾರ? ಇಲ್ಲಿದೆ (Sleeping Tips) ಸಲಹೆ.

VISTARANEWS.COM


on

Sleeping tips
Koo

ಪ್ರತಿದಿನ ನಿದ್ದೆ ಮಾಡುವುದು ಹೇಗೆ ಎಂದು ಹೆಣಗಾಡುತ್ತಿದ್ದೀರಾ? ಬೇಗ ನಿದ್ದೆ ಮಾಡಬೇಕು ಎಂದು ಹೊರಟು ನಿದ್ದೆ ಬರದೆ, ಬಂದ ನಿದ್ದೆಯಲ್ಲೂ ಏನೇನೋ ಕನಸುಗಳು, ಅರೆಬರೆ ನಿದ್ದೆಯಂಥ ಭಾವ ಅಥವಾ ನಿದ್ದೆ ಬರಲು ಹೆಚ್ಚು ಸಮಯ ಹಿಡಿಯುವುದು ಇತ್ಯಾದಿ ಸಮಸ್ಯೆಗಳು ನಿಮ್ಮದಾಗಿದ್ದರೆ ಅದರ ಬಗ್ಗೆ ನೀವು ಮೊದಲೇ ಎಚ್ಚೆತ್ತುಕೊಳ್ಳಬೇಕು. ಇತ್ತೀಚೆಗಿನ ದಿನಗಳಲ್ಲಿ ಈ ಸಮಸ್ಯೆ ಬಹಳ ಮಂದಿಯನ್ನು ಕಾಡುತ್ತಿದೆ. ಕಾರಣ ಗೊತ್ತೇ ಇದೆ. ಅತಿಯಾದ ಕೆಲಸ, ನಿದ್ದೆಯ ಸಮಯದ ಏರಿಳಿತ, ಕಚೇರಿಯ ಒತ್ತಡ, ತಡರಾತ್ರಿಯವರೆಗೆ ಮೊಬೈಲ್‌ ವೀಕ್ಷಣೆ, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಸಿನಿಮಾ ನೋಡುವುದು ಇತ್ಯಾದಿಗಳಿಂದಾಗಿ ನಿದ್ದೆಯ ಸಮಯವಿದು ಅಲ್ಲೋಲಕಲ್ಲೋಲವಾಗಿದೆ. ಹೀಗಾಗಿ, ಕೆಲವೊಮ್ಮೆ ಬೇಕೆಂದರೂ ನಿದ್ದೆ ಬರುವುದಿಲ್ಲ. ನಿದ್ದೆಯ ಈ ಸಮಸ್ಯೆಯಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾದರೆ, ಇಂಥ ಸಮಸ್ಯೆ ಇರುವ ಮಂದಿ ಇದು ವಿಕೋಪಕ್ಕೆ ಹೋಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ನಿದ್ದೆಗೆ ಸಹಕಾರಿಯಾಗುವ ಆಹಾರವೂ ಸೇರಿದಂತೆ ನಿದ್ದೆಗೆ ಒಂದೆರಡು ಗಂಟೆಯ ಮೊದಲೇ ಮೊಬೈಲನ್ನು ದೂರವಿಡುವುದು, ಸಿನಿಮಾ ವೀಕ್ಷಣೆ ನಿಲ್ಲಿಸುವುದು ಇತ್ಯಾದಿ ಮುಂಜಾಗರೂಕತೆ ವಹಿಸಿಕೊಂಡರೆ, ಮತ್ತೆ ನಿಮ್ಮ ನಿದ್ರಾದೇವಿ ನಿಮ್ಮ ಬಳಿಗೆ ಬರುತ್ತಾಳೆ. ಸರಿಯಾದ ಆಹಾರಕ್ರಮದ ಜೊತೆಗೆ ಈ ಕೆಳಗಿನ ಕೆಲವು ಡ್ರಿಂಕ್‌ಗಳನ್ನು ರಾತ್ರಿ ಸೇವಿಸಿ ಮಲಗುವುದರಿಂದ ನಿಮಗೆ ನಿದ್ದೆ (Sleeping Tips) ಸುಲಭವಾಗುತ್ತದೆ.

Milk and Other Forest Products Foods Consumed By Lord Rama During His 14 Year Exile

ಮಲಗುವ ಮೊದಲು ಹಾಲು ಕುಡಿಯಿರಿ

ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿಯಾದ ಹಾಲು ಕುಡಿಯುವುದರಿಂದ ಸೊಂಪಾದ ನಿದ್ರೆ ಬರುತ್ತದೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ದೇಹಕ್ಕೆ ಬೇಕಾದ ಕ್ಯಾಲ್ಶಿಯಂ ಕೂಡಾ ಹಾಲಿನಲ್ಲಿ ದೊರೆಯುವ ಜೊತೆಗೆ, ಈ ಕ್ಯಾಲ್ಶಿಯಂನಿಂದ ನಿದ್ರಾಹೀನತೆಯ ಸಮಸ್ಯೆಯೂ ಪರಿಹಾರವಾಗುತ್ತದೆ. ಹಾಲಿನಲ್ಲಿರುವ ಸೆರೆಟೋನಿನ್‌ ಎಂಬ ಅಂಶವು ನಮ್ಮನ್ನು ರಿಲ್ಯಾಕ್ಸ್‌ ಮಾಡಿಸುತ್ತದೆ.

Coconut water Foods For Fight Against Dengue Fever

ಎಳನೀರು ಕುಡಿಯಿರಿ

ಮೆಗ್ನೀಶಿಯಂನ ಕೊರತೆ ಕೂಡ ಖಿನ್ನತೆ ಹಾಗೂ ಉದ್ವೇಗದಂತಹ ಸಮಸ್ಯೆಯನ್ನು ತರುತ್ತದೆ. ಇದರಿಂದಾಗಿ ನಿದ್ರಾಹೀನತೆಯೂ ಕೂಡಾ ಬರುತ್ತದೆ. ಹಾಗಾಗಿ ಹೆಚ್ಚು ಮೆಗ್ನೀಶಿಯಂ ಇರುವ ಎಳನೀರನ್ನು ಕುಡಿಯುವುದರಿಂದಲೂ ಈ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಮನಸ್ಸನ್ನೂ ಇದು ಶಾಂತಿಯುತವಾಗಿ ಇರಿಸುತ್ತದೆ.

Banana shake

ಬಾಳೆಹಣ್ಣಿನ ಶೇಕ್‌

ಬಾಳೆಹಣ್ಣಿನಲ್ಲಿ ಮೆಗ್ನೀಶಿಯಂ ಹಾಗೂ ಪೊಟಾಶಿಯಂ ಹೇರಳವಾಗಿ ಇರುವುದರಿಂದ ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಶೇಕ್‌ ಮಾಡಿಯೂ ಕುಡಿಯಬಹುದು. ಮಧುಮೇಹ ಹಾಗೂ ಇತರ ಸಮಸ್ಯೆಗಳಿಲ್ಲದವರು ಹೀಗೆ ಮಾಡುವ ಮೂಲಕ ರಾತ್ರಿ ಸೊಂಪಾದ ನಿದ್ದೆಯನ್ನು ಮಾಡಬಹುದು.

ಇದನ್ನೂ ಓದಿ: Cotton Candy: ಕಾಟನ್‌ ಕ್ಯಾಂಡಿ ಯಾಕೆ ಎಷ್ಟೊಂದು ಅಪಾಯಕಾರಿ ಗೊತ್ತೆ?

ಬಾದಾಮಿ ಹಾಲು

ಬಿಸಿಬಿಸಿಯಾದ ಬಾದಾಮಿ ಹಾಲನ್ನು ಕುಡಿಯುವುದರಿಂದಲೂ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಬಾದಾಮಿ ಹಾಲು ಮಾಡಿಕೊಂಡು, ಅದಕ್ಕೆ ಕೇಸರಿ ದಳಗಳನ್ನು ಹಾಕಿ ಕುಡಿಯುವುದು ಬಹಳ ಒಳ್ಳೆಯದು. ಇದು ನರ ಸಂಬಂಧೀ ಸಮಸ್ಯೆಗಳನ್ನು ಪರಿಹಾರ ಮಾಡಿ ಸೊಂಪಾದ ನಿದ್ರೆಯನ್ನು ಕರುಣಿಸುತ್ತದೆ.

Chamomile tea

ಕ್ಯಾಮೋಮೈಲ್‌ ಚಹಾ

ಕ್ಯಾಮೋಮೈಲ್‌ ಚಹಾ ಕುಡಿಯುವುದರಿಂದಲೂ ಪರಿಹಾರ ಸಿಗುತ್ತದೆ. ಇದರಲ್ಲಿ ಫ್ಲೇವನಾಯ್ಡ್‌ಗಳು ಇರುವುದರಿಂದ ಇದು ನಿದ್ದೆಗೆ ಸಹಾಯ ಮಾಡುತ್ತದೆ. ಆದಷ್ಟೂ ಸಂಜೆಯಾದ ಮೇಲೆ ಕೆಫೀನ್‌ ಇರುವ ಡ್ರಿಂಕ್‌ಗಳನ್ನು ಸೇವಿಸದಿರಿ. ರಾತ್ರಿಯೂಟ ಆದಷ್ಟೂ ಸರಳವಾಗಿರಲಿ. ಹಿತಮಿತವಾಗಿರಲಿ. ಮಲಗುವುದಕ್ಕೂ ಮೊದಲು ಮೂರು ಗಂಟೆಗಳ ಮೊದಲೇ ಊಟ ಮುಗಿಸಿಕೊಳ್ಳಿ. ಚುರುಕಾಗಿರಿ. ಮೊಬೈಲನ್ನು ದೂರವಿಟ್ಟು, ಮನೆಯವರೊಂದಿಗೆ ಖುಷಿಯಿಂದ ಸಮಯ ಕಳೆದು ನಿದ್ದೆಗೆ ಜಾರಿ. ಈ ಶಿಸ್ತುಬದ್ಧ ಜೀವನ ಅಳವಡಿಸಿಕೊಂಡರೆ ನಿದ್ದೆ ಸಮಸ್ಯೆಯಾಗದು. ಆರೋಗ್ಯವೂ ವೃದ್ಧಿಯಾಗುತ್ತದೆ.

Continue Reading

ಆರೋಗ್ಯ

Cotton Candy: ಕಾಟನ್‌ ಕ್ಯಾಂಡಿ ಯಾಕೆ ಎಷ್ಟೊಂದು ಅಪಾಯಕಾರಿ ಗೊತ್ತೆ?

ಬಣ್ಣ ನೋಡಿ ಮರುಳಾಗುವ ಅಭ್ಯಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಕಾಟನ್‌ ಕ್ಯಾಂಡಿ ಸಾಕ್ಷಿ. ರಂಗುರಂಗಿನ ಸಕ್ಕರೆ ಮಿಠಾಯಿಯ ಹಿಂದಿರುವ ಕಪ್ಪನ್ನು ಅರ್ಥ ಮಾಡಿಕೊಂಡು ಜಾಗೃತರಾಗುವುದು ಗ್ರಾಹಕರ ಕರ್ತವ್ಯ. ಈ ಸಿಹಿ ಕ್ಯಾಂಡಿಯಿಂದ (Cotton Candy) ಆರೋಗ್ಯಕ್ಕಾಗುವ ಹಾನಿಯೇನು? ಇದನ್ನು ಯಾಕೆ ನಾವು ತಿನ್ನಬಾರದು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Cotton Candy
Koo

ಬಣ್ಣಬಣ್ಣದ ಹತ್ತಿಯ ಉಂಡೆಯಂಥ ಕಾಟನ್‌ ಕ್ಯಾಂಡಿ ಇತ್ತೀಚೆಗೆ ಸುದ್ದಿಯಾಗಿದೆ. ಕಡು ಗುಲಾಬಿ ಬಣ್ಣದಲ್ಲಿ ಸಾಮಾನ್ಯವಾಗಿ ಕಂಡು ಬರುತಿದ್ದ ಕಾಟನ್‌ ಕ್ಯಾಂಡಿಗಳು ಇತ್ತೀಚೆಗೆ ವರ್ಣಾಂತರ ಹೊಂದಿ, ಹಸಿರು, ನೇರಳೆಯಂಥ ಕಣ್ಣು ಕೋರೈಸುವ ಬಣ್ಣಗಳಿಂದ ಶೋಭಿಸಿ, ಚಿಣ್ಣರ ಬಾಯಲ್ಲಿ ನೀರೂರಿಸುತ್ತಿದ್ದವು. ಆದರೆ ಆರೋಗ್ಯಾಧಿಕಾರಿಗಳು ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ, ಇಂಥ ವರ್ಣರಂಜಿತ ಕಾಟನ್‌ಕ್ಯಾಂಡಿಗಳ ಹಿಂದಿನ ಬಣ್ಣ ಬಯಲು ಮಾಡಿದ್ದಾರೆ. ಏನಿತ್ತು ಈ ಬಣ್ಣದ ಹತ್ತಿಯುಂಡೆಯಂಥ ಕ್ಯಾಂಡಿಗಳಲ್ಲಿ? ಅವು ಆರೋಗ್ಯಕ್ಕೆ (Cotton Candy) ಹಾಳು ಎಂದೇಕೆ ಹೇಳಲಾಗುತ್ತಿದೆ? ಜವಳಿ ಉದ್ದಿಮೆಗಳಲ್ಲಿ ಬಳಸಲಾಗುವ ರೋಡಮೈನ್‌ ಬಿ (Harmful Effects of ‘Rhodamine B’) ಎನ್ನುವ ಡೈ ಈ ತಿನ್ನುವ ವಸ್ತುಗಳಲ್ಲಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಈ ಬಗೆಗಿನ ವಿವರಗಳಿಲ್ಲಿವೆ. ರೋಡಮೈನ್‌ ಬಿ ಎನ್ನುವುದು ಸಿಂಥೆಟಿಕ್‌ ಡೈ. ಇದನ್ನು ಯಾವುದೇ ತಿನ್ನುವ ವಸ್ತುಗಳಲ್ಲಿ ಬಳಸುವಂತಿಲ್ಲ. ಆದರೆ ಕಾಟನ್‌ ಕ್ಯಾಂಡಿಗೆ ಕಡು ಗುಲಾಬಿಯಿಂದ ಹಿಡಿದು ತರಹೇವಾರಿ ಬಣ್ಣಗಳನ್ನು ನೀಡುವಲ್ಲಿ ಇಂಥ ಸಿಂಥೆಟಿಕ್‌ ಬಣ್ಣಗಳು ಪ್ರಧಾನವಾಗಿ ಬಳಕೆಯಲ್ಲಿವೆ. ಆರೋಗ್ಯವನ್ನು ಕಡೆಗಣಿಸಿ, ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ, ಕ್ಯಾಂಡಿ ತಯಾರಕರು ಇಂಥ ಹಾನಿಕಾರಕ ಬಣ್ಣಗಳನ್ನು ಬಳಸುತ್ತಿರುವುದು ಆಘಾತಕಾರಿ. ಏನು ಇಂಥ ಬಣ್ಣಗಳು ಉಂಟುಮಾಡುವ ಕೆಟ್ಟ ಪರಿಣಾಮಗಳು?

Cotton Candy

ಕ್ಯಾನ್ಸರ್‌ಕಾರಕ

ರೋಡಮೈನ್‌ ಬಿ ಮನುಷ್ಯರಲ್ಲಿ ಕ್ಯಾನ್ಸರ್‌ ಉಂಟುಮಾಡುವ, ಅದರಲ್ಲೂ ಪ್ರಧಾನವಾಗಿ ಮೂತ್ರಜನಕಾಂಗಗಳ ಕ್ಯಾನ್ಸರ್‌ ತರುವ ಸಾಧ್ಯತೆಯಿದೆ ಎನ್ನುತ್ತದೆ ಕ್ಯಾನ್ಸರ್‌ ಸಂಶೋಧನೆ ಕುರಿತಾದ ಅಂತಾರಾಷ್ಟ್ರೀಯ ಸಂಸ್ಥೆ (ಐಎಆರ್‌ಸಿ). ಈ ಬಗ್ಗೆ ವಿಶ್ವ ಮಟ್ಟದಲ್ಲಿ ನಡೆದಿರುವ ಕೆಲವು ಅ‍ಧ್ಯಯನಗಳು ಸಹ ಈ ವಿಷಯವನ್ನು ದೃಢಪಡಿಸಿವೆ.

ಅಲರ್ಜಿ

ಈ ರಾಸಾಯನಿಕ ಹಲವು ರೀತಿಯಲ್ಲಿ ಅಲರ್ಜಿಗಳನ್ನು ತರಬಲ್ಲದು. ಸೂಕ್ಷ್ಮ ಚರ್ಮದವರಿಗೆ ತುರಿಕೆಯಾಗಿ ಚರ್ಮ ಕೆಂಪಾಗಿ ಉರಿಯೇಳುವ ಸಾಧ್ಯತೆಯಿದೆ. ಕಣ್ಣಿಗೇನಾದರೂ ಹೋದರೆ ಕಣ್ಣುರಿ, ಕೆಂಪಾಗುವುದು, ನೀರು ಸುರಿಯುವುದು, ಕಿರಿಕಿರಿಯಂಥ ಸಮಸ್ಯೆಗಳು ಎದುರಾಗಬಹುದು. ಶ್ವಾಸಕೋಶದಲ್ಲಿ ಉರಿಯೂತ ಕಾಣಿಸಿಕೊಂಡು ಅಸ್ತಮಾ, ಉಸಿರಾಟದ ತೊಂದರೆ, ಕೆಮ್ಮಿನಂಥ ಆರೋಗ್ಯ ತೊಂದರೆಗಳು ಕಾಣಬಹುದು. ಇವೆಲ್ಲ ಸೂಕ್ಷ್ಮ ಇರುವವರಿಗೆ ಮಾತ್ರವೇ ಅಲ್ಲ, ಯಾರಲ್ಲಿಯೂ ಅಲರ್ಜಿ ಸಮಸ್ಯೆಗಳನ್ನು ಹುಟ್ಟುಹಾಕಬಹುದು.

ealthy internal organs of human digestive system / highlighted blue organs

ಜೀರ್ಣಾಂಗದ ತೊಂದರೆಗಳು

ರೋಡಮೈನ್‌ ಹೊಟ್ಟೆಗೆ ಹೋಗುವುದರಿಂದ ಜೀರ್ಣಾಂಗಗಳಲ್ಲಿ ಹಲವು ರೀತಿಯ ವೈಪರಿತ್ಯಗಳು ಕಂಡುಬಂದೀತು. ಹೊಟ್ಟೆ ತೊಳೆಸುವುದು, ಹೊಟ್ಟೆ ನೋವು, ವಾಂತಿ, ಡಯರಿಯದಂಥ ಸಮಸ್ಯೆಗಳು ಸಾಮಾನ್ಯ. ಕೆಲವು ಅಪರೂಪದ ಪ್ರಕರಣಗಳಲ್ಲಿ ಜೀರ್ಣಾಂಗಗಳಲ್ಲಿ ರಕ್ತಸ್ರಾವವೂ ಆಗಬಹುದು.

ಭ್ರೂಣಕ್ಕೆ ತೊಂದರೆ

ಗರ್ಭಿಣಿಯರು ಈ ರಾಸಾಯನಿಕವನ್ನು ಸೇವಿಸಿದಲ್ಲಿ ಹೊಟ್ಟೆಯಲ್ಲಿರುವ ಶಿಶುವಿಗೆ ತೊಂದರೆ ಸಂಭವಿಸಬಹುದು. ಮಗುವಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯನ್ನು ಅಧ್ಯಯನಗಳು ಸೂಚಿಸುತ್ತವೆ. ಈ ರಾಸಾಯನಿಕಕ್ಕೆ ಅತಿಯಾಗಿ ತೆರೆದುಕೊಂಡಲ್ಲಿ ಫಲವಂತಿಕೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು.

ಇದನ್ನೂ ಓದಿ: Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

ಪರಿಸರದ ಮೇಲಿನ ಪರಿಣಾಮ

ಮಣ್ಣಿನಲ್ಲಿ ಸುಲಭವಾಗಿ ಕರಗದಿರುವಂಥ ರಾಸಾಯನಿಕವಿದು. ವಾತಾವರಣದಲ್ಲಿ ದೀರ್ಘಕಾಲದವರೆಗೆ ಅಳಿಯದೇ ಉಳಿಯುವಂಥ ಈ ವಸ್ತುವು, ಮಣ್ಣು, ನೀರು, ಗಾಳಿಯನ್ನೆಲ್ಲ ಮಲಿನ ಮಾಡಬಲ್ಲದು. ಜಲಚರಗಳ ಆರೋಗ್ಯಕ್ಕೆ ಹಾನಿ ಮಾಡಬಲ್ಲದು. ಎಲ್ಲಾ ನಿಸರ್ಗ ಮೂಲಗಳ ಮೂಲಕ ಮತ್ತೆ ನಮ್ಮದೇ ದೇಹವನ್ನು ಪ್ರವೇಶಿಸಿ, ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಲ್ಲದು.

Continue Reading

ಆರೋಗ್ಯ

Vitamin Side Effects: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?

ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ದೇಹಕ್ಕೆ ಪೂರಕ ಎನ್ನುವ ಉದ್ದೇಶದಿಂದ ಅತಿಯಾಗಿ ವಿಟಮಿನ್‌ ಪೂರಕಗಳನ್ನು ಸೇವಿಸುವುದು ನಿಶ್ಚಿತವಾಗಿ ಸಮಸ್ಯೆಗಳನ್ನು ತರಬಲ್ಲದು. ಜೀವಸತ್ವಗಳ ಪ್ರಮಾಣ ಹೆಚ್ಚಾದರೆ (Vitamin Side Effects) ಅದರ ಅಡ್ಡ ಪರಿಣಾಮಗಳೇನು ಎಂಬುದರ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Vitamin Side Effects
Koo

ವಿಟಮಿನ್‌ಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳು. ಶರೀರ ಆರೋಗ್ಯವಾಗಿರಲು ಮಾತ್ರವಲ್ಲ, ತನ್ನ ಕೆಲಸವನ್ನು ಮಾಡಿಕೊಳ್ಳಲು ಸಹ ಜೀವಸತ್ವಗಳ ಅಗತ್ಯವಿದೆ. ಆಹಾರದ ಮೂಲಕ ದೊರೆಯುವ ಈ ಸತ್ವಗಳು ಸಾಕಾಗದು ಎನಿಸಿದ ಬಹಳಷ್ಟು ಮಂದಿ ವಿಟಮಿನ್‌ ಪೂರಕಗಳನ್ನು ಸೇವಿಸುತ್ತಾರೆ. ಇದಕ್ಕೆ ವೈದ್ಯರ ಸಲಹೆ ಅಗತ್ಯ. ಪೂರಕಗಳನ್ನು ತಮ್ಮಷ್ಟಕ್ಕೆ ಇಷ್ಟ ಬಂದಂತೆ ಸೇವಿಸಿದರೆ ಸಮಸ್ಯೆಗಳಾಗಬಹುದು. ಕಾರಣ, ವಿಟಮಿನ್‌ ಅತಿಯಾದರೆ (Vitamin Side Effects) ಅದಕ್ಕೂ ಅಡ್ಡಪರಿಣಾಮಗಳಿಗೆ. ಏನದು? ಜೀವಸತ್ವಗಳಲ್ಲಿ ಕೆಲವು ನೀರಿನಲ್ಲಿ ಕರಗಬಲ್ಲಂಥವು, ಕೆಲವು ಕೊಬ್ಬಿನಲ್ಲಿ ಕರಗಬಲ್ಲವು. ನೀರಲ್ಲಿ ಕರಗಬಲ್ಲ ಸಿ ವಿಟಮಿನ್‌ನಂಥವು ಕೊಂಚ ಹೆಚ್ಚಾದರೆ ಅತಿಯಾದ ದುಷ್ಪರಿಣಾಮಗಳೇನು ಆಗುವುದಿಲ್ಲ. ಕಾರಣ, ಇವು ಹೆಚ್ಚಾದಷ್ಟು ಮೂತ್ರದಲ್ಲಿ ಹೊರಗೆ ಹೋಗಿಬಿಡುತ್ತದೆ. ಆದರೆ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್‌ ಎ, ಡಿ, ಇ ಮತ್ತು ಕೆ-ನಂಥವು ಸಮಸ್ಯೆಗಳು ತರಬಲ್ಲವು. ಏಕೆಂದರೆ, ದೇಹದ ಕೊಬ್ಬಿನ ಕೋಶಗಳಲ್ಲಿ ಉಳಿಯುವ ಇವನ್ನು ದೇಹದಿಂದ ವರ್ಜಿಸುವುದು ಕಷ್ಟವಾಗಿಬಿಡಬಹುದು. ಯಾವ ವಿಟಮಿನ್‌ ಅತಿಯಾದರೆ ಆರೋಗ್ಯದ ಮೇಲಿನ ಪರಿಣಾಮವೇನು ಎಂಬುದನ್ನು ಗಮನಿಸೋಣ.

Vitamin A

ವಿಟಮಿನ್‌ ಎ

ಯಾವುದೇ ಜೀವಸತ್ವಗಳು ಆಹಾರದ ಮೂಲಕ ದೇಹ ಸೇರಿದರೆ ಹೆಚ್ಚು ಸುರಕ್ಷಿತ. ಹಾಗಲ್ಲದೆ ಪೂರಕಗಳನ್ನು ಸೇವಿಸುವಾಗ ಮಾತ್ರ ಎಚ್ಚರ ಬೇಕು. ಎ ಜೀವಸತ್ವ ಹೆಚ್ಚಾದರೆ ತಲೆನೋವು, ತಲೆಸುತ್ತು, ಹೊಟ್ಟೆ ತೊಳೆಸುವುದು, ಚರ್ಮದ ಕಿರಿಕಿರಿ, ಮೂಳೆ ಮತ್ತು ಕೀಲುಗಳಲ್ಲಿ ನೋವುಗಳು ಸಾಮಾನ್ಯವಾಗಿ ಕಂಡುಬರುವಂಥ ಅಡ್ಡ ಪರಿಣಾಮಗಳು. ಆದರೆ ವಿಪರೀತ ಹೆಚ್ಚಾದ ಪ್ರಕರಣಗಳಲ್ಲಿ, ದೃಷ್ಟಿದೋಷ, ಮೂಳೆಗಳಲ್ಲಿ ಉರಿಯೂತ, ಕೂದಲು ಉದುರುವುದು, ಚರ್ಮ ಒಣಗುವುದು, ಯಕೃತ್‌ಗೆ ಹಾನಿಯಾಗುವಂಥದ್ದು ಕಂಡು ಬರಬಹುದು.

Vitamin D

ವಿಟಮಿನ್‌ ಡಿ

ಆಹಾರದ ಮೂಲಕ ಅಥವಾ ಸೂರ್ಯನ ಬೆಳಕಿನ ಮೂಲಕ ನಮ್ಮ ದೇಹ ಸೇರುವ ರೀತಿಯೇ ಸೂಕ್ತವಾದದ್ದು. ಆದರೆ ವಿಟಮಿನ್‌ ಡಿ ಕೊರತೆಯಾದ ಸಂದರ್ಭಗಳಲ್ಲಿ ವೈದ್ಯರ ಸೂಚನೆಯ ಮೇರೆಗೆ ಪೂರಕ ಮಾತ್ರೆಗಳನ್ನು ಸೇವಿಸಬೇಕು. ಅದಿಲ್ಲದಿದ್ದರೆ, ಹೊಟ್ಟೆ ತೊಳೆಸುವುದು, ವಾಂತಿ, ಅಶಕ್ತತೆ ಕಾಡಬಹುದು. ತೀವ್ರವಾದ ಪ್ರಕರಣಗಳಲ್ಲಿ ರಕ್ತದಲ್ಲಿ ಕ್ಯಾಲ್ಶಿಯಂ ಮಟ್ಟ ಏರುವುದು ಅಥವಾ ಕಿಡ್ನಿ ತೊಂದರೆಗಳು ಬಾಧಿಸಬಹುದು.

Vitamin E

ಇ ಜೀವಸತ್ವ

ಈ ವಿಟಮಿನ್‌ ಅಧಿಕವಾದರೆ ಆಗುವ ಅಡ್ಡ ಪರಿಣಾಮಗಳು ತೀವ್ರವಾಗುವ ಸಾಧ್ಯತೆ ಹೆಚ್ಚು. ಇದು ಕಾಡುವುದು ಆಂತರಿಕ ರಕ್ತಸ್ರಾವದ ರೂಪದಲ್ಲಿ. ನೈಸರ್ಗಿಕವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಲ್ಲಿ ಹೆಚ್ಚುವರಿ ವಿಟಮಿನ್‌ ಇ ಅಡ್ಡಗಾಲು ಹಾಕುತ್ತದೆ. ಇದರಿಂದ ಹೆಮೊರೇಜ್‌ಗಳ ಭೀತಿ ಹೆಚ್ಚಬಹುದು. ಇದಲ್ಲದೆ, ದುಷ್ಪರಿಣಾಮ ಸೌಮ್ಯ ಸ್ವರೂಪದಲ್ಲಿದ್ದರೆ, ವಾಂತಿ, ಡಯರಿಯ, ಹೊಟ್ಟೆ ನೋವು, ತಲೆನೋವು, ಅಲರ್ಜಿಯ ಸೂಚನೆಗಳು ಕಾಡಬಹುದು.

Vitamin K

ವಿಟಮಿನ್‌ ಕೆ

ಈ ಸತ್ವವು ಹೆಚ್ಚಾಗುವ ಮಟ್ಟಿಗೆ ದೇಹ ಸೇರುವ ಸಾಧ್ಯತೆ ಉಳಿದವಕ್ಕೆ ಹೋಲಿಸಿದರೆ ಕಡಿಮೆ. ಆದಾಗ್ಯೂ ಕೆ ಜೀವಸತ್ವ ಹೆಚ್ಚಾದರೆ ಕೆಂಪುರಕ್ತಕಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಯಕೃತ್‌ಗೂ ತೊಂದರೆ ನೀಡಬಹುದು. ರಕ್ತ ನೀರಾಗುವಂಥ ಔಷಧಿ ಸೇವಿಸುವವರಲ್ಲಿ, ಈ ಔಷಧಿಯ ಪರಿಣಾಮದಲ್ಲೂ ಅಡ್ಡಗಾಲು ಹಾಕುತ್ತದೆ ಕೆ ಜೀವಸತ್ವ.

Vitamin C

ವಿಟಮಿನ್‌ ಸಿ

ಈವರೆಗೆ ಹೇಳಿದ ಜೀವಸತ್ವಗಳೆಲ್ಲವೂ ಕೊಬ್ಬಿನಲ್ಲಿ ಕರಗುವಂಥವು. ಇನ್ನು ಮೇಲಿನವು ನೀರಲ್ಲಿ ಕರಗಬಲ್ಲ ಜೀವಸತ್ವಗಳು. ಆಸ್ಕಾರ್ಬಿಕ್‌ ಆಮ್ಲವೆಂದೂ ಕರೆಯಲಾಗುವ ಇದು ಹೆಚ್ಚಾದರೆ ಸಾಮಾನ್ಯವಾಗಿ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ. ಈ ಮಿತಿಯನ್ನೂ ಮೀರಿ ವಿಟಮಿನ್‌ ಸಿ ಸೇವಿಸಿದರೆ, ಜೀರ್ಣಾಂಗಗಳ ತೊಂದರೆ ಬಾಧಿಸಬಹುದು. ಇನ್ನೂ ಹೆಚ್ಚಾದರೆ ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗಬಹುದು.

Vitamin B

ವಿಟಮಿನ್‌ ಬಿ

ಇದರಲ್ಲಿ ಹಲವಾರು ವಿಟಮಿನ್‌ಗಳಿವೆ. ಒಂದೊಂದನ್ನೂ ಪ್ರತ್ಯೇಕವಾಗಿ ಹೇಳುವುದಾದರೆ- ವಿಟಮಿನ್‌ ಬಿ೩ ಹೆಚ್ಚಾದರೆ, ಚರ್ಮ ಕೆಂಪಾಗಿ ಬಿಸಿಯಾಗುವುದು, ಹೃದಯ ಬಡಿತ ಏರುವುದು, ವಾಂತಿ, ಯಕೃತ್‌ಗೆ ಹಾನಿ ಮತ್ತು ಜೀರ್ಣಾಂಗಗಳ ಸಮಸ್ಯೆ ಉಂಟಾಗಬಹುದು. ವಿಟಮಿನ್‌ ಬಿ೬ ಹೆಚ್ಚಾದರೆ, ನರಗಳಿಗೆ ಹಾನಿಯಾಗಬಹುದು, ಸ್ನಾಯುಗಳು ದುರ್ಬಲವಾಗಬಹುದು. ಫಾಲಿಕ್‌ ಆಮ್ಲ ಅಥವಾ ಬಿ9 ಜೀವಸತ್ವ ಅತಿಯಾದರೆ, ವಿಟಮಿನ್‌ ಬಿ12 ಕೊರತೆಯನ್ನು ಮರೆಮಾಚಿಬಿಡುತ್ತದೆ. ಇದರಿಂದ ನರಗಳ ಸಮಸ್ಯೆಯೂ ತಲೆದೋರಬಹುದು. ವಿಟಮಿನ್‌ ಬಿ12 ವಿಪರೀತವಾದರೆ ತಲೆನೋವು, ತಲೆಸುತ್ತು, ವಾಂತಿ, ಒತ್ತಡಗಳು ಕಾಡಬಹುದು.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

Continue Reading
Advertisement
IPL 2024
ಪ್ರಮುಖ ಸುದ್ದಿ3 hours ago

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

car catches fire
ಕ್ರೈಂ4 hours ago

Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

jay Shah
ಪ್ರಮುಖ ಸುದ್ದಿ4 hours ago

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಬೆಂಗಳೂರು4 hours ago

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

ಬೆಂಗಳೂರು5 hours ago

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

IPL 2024
ಕ್ರಿಕೆಟ್5 hours ago

IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

Devarajegowda
ಕರ್ನಾಟಕ7 hours ago

ಮಹಿಳೆಗೆ ಲೈಂಗಿಕ ದೌರ್ಜನ್ಯ ಕೇಸ್;‌ ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

Murder Case
ಕರ್ನಾಟಕ7 hours ago

Murder Case: ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ; ಬಾಲಕಿಯ ಅಪಹರಿಸಿ ಕತ್ತು ಕೊಯ್ದ ಕಿರಾತಕರು

Richard Hansen
ಕರ್ನಾಟಕ7 hours ago

Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

Legislative Council Election
ಕರ್ನಾಟಕ7 hours ago

ವಿಧಾನ ಪರಿಷತ್ ಚುನಾವಣೆ; 5 ಕ್ಷೇತ್ರ ಬಿಜೆಪಿಗೆ, 1 ಕ್ಷೇತ್ರ ಜೆಡಿಎಸ್‌ಗೆ; ಕಮಲ ಪಾಳಯದ ಪಟ್ಟಿ ಇಲ್ಲಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru News
ಬೆಂಗಳೂರು12 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ22 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ3 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

ಟ್ರೆಂಡಿಂಗ್‌