Himachal Tour: ರೋಮಾಂಚನ ಉಂಟುಮಾಡುವ ಹಿಮಾಚಲ ಪ್ರದೇಶದ ಡಾಲ್ ಹೌಸಿ ಗಿರಿಧಾಮ! - Vistara News

ಲೈಫ್‌ಸ್ಟೈಲ್

Himachal Tour: ರೋಮಾಂಚನ ಉಂಟುಮಾಡುವ ಹಿಮಾಚಲ ಪ್ರದೇಶದ ಡಾಲ್ ಹೌಸಿ ಗಿರಿಧಾಮ!

Himachal tour: ಡಾಲ್ ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಈ ಗಿರಿಧಾಮವನ್ನು 1850ರಲ್ಲಿ ಲಾರ್ಡ್ ಡಾಲ್ ಹೌಸಿ ಅಭಿವೃದ್ಧಿ ಪಡಿಸಿದ ಕಾರಣ ಈ ಗಿರಿಧಾಮಕ್ಕೆ ಆತನ ಹೆಸರನ್ನೇ ಇಡಲಾಗಿದೆ.

VISTARANEWS.COM


on

Himachal tour
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೆಹಲಿ: ಒಬ್ಬರೇ ಪ್ರವಾಸಕ್ಕೆ ಹೋಗುವುದಕ್ಕಿಂತ ಕೆಲವರಿಗೆ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವುದೆಂದರೆ ಬಹಳ ಇಷ್ಟ. ಇದು ನಿಮಗೆ ಹೆಚ್ಚಿನ ಮನೋರಂಜನೆಯನ್ನು ನೀಡುತ್ತದೆ. ಮತ್ತು ಸ್ಥಳದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಬಹುದು. ಹಾಗೇ ಮೋಜು, ಮಸ್ತಿ ಮಾಡಲು, ಅಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತದೆ. ಹಾಗಾಗಿ ಕುಟುಂಬದ ಜೊತೆ ಪ್ರವಾಸ ಮಾಡಲು ಹಿಮಾಚಲ ಪ್ರದೇಶದ (Himachal Tour)ಡಾಲ್ ಹೌಸಿಗೆ ಭೇಟಿ ನೀಡಿ.

ಡಾಲ್ ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಈ ಗಿರಿಧಾಮವನ್ನು 1850ರಲ್ಲಿ ಲಾರ್ಡ್ ಡಾಲ್ ಹೌಸಿ ಅಭಿವೃದ್ಧಿ ಪಡಿಸಿದ ಕಾರಣ ಈ ಗಿರಿಧಾಮಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಈ ಸ್ಥಳ ಹಚ್ಚಹಸಿರಾದ ಸಸ್ಯಗಳಿಂದ ಆವೃತ್ತವಾಗಿದೆ. ಇಲ್ಲಿ ಕಣಿವೆಗಳು, ಜಲಪಾತಗಳು ಮುಂತಾದವುಗಳನ್ನು ನೋಡಬಹುದು. ಹಾಗಾಗಿ ನಿಮ್ಮ ಕುಟುಂಬದ ಜೊತೆ ಈ ಸ್ಥಳಕ್ಕೆ ಬನ್ನಿ.

Himachal tour

ಖಜ್ಜಿಯಾರ್

“ಮಿನಿ ಸ್ವಿಟ್ಜರ್‌ಲ್ಯಾಂಡ್” ಎಂದು ಕರೆಯಲ್ಪಡುವ ಈ ಸ್ಥಳದಲ್ಲಿ ದಟ್ಟವಾದ ಕಾಡುಗಳು, ಹುಲ್ಲುಗಾವಲು ಮತ್ತು ಪ್ರಶಾಂತವಾದ ಸರೋವರವಿದೆ. ಈ ಸ್ಥಳವು ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಕುದುರೆ ಸವಾರಿ ಮಾಡಬಹುದು, ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ವಾಕಿಂಗ್ ಮಾಡಬಹುದು ಮತ್ತು ಕುಟುಂಬದವರ ಜೊತೆ ಕುಳಿತು ಹಚ್ಚ ಹಸಿರಿನ ನಡುವೆ ಊಟ ಮಾಡಲು ಅವಕಾಶವಿದೆ.

ಡೈನ್ಕುಂಡ್ ಶಿಖರ

ಇದು ಹಿಮಾಚಲ ಪ್ರದೇಶದ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ. ಕಣಿವೆಯ ನೋಟ ಮತ್ತು ಹಿಮದಿಂದ ಆವೃತವಾದ ಹಿಮಾಲಯ ಶಿಖರಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹಚ್ಚಹಸಿರಾದ ಪ್ರಕೃತಿಯ ಸೌಂದರ್ಯವನ್ನು ನೋಡಬಹುದು. ಟ್ರೆಕ್ಕಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಇದು ಅತ್ಯುತ್ತಮ ಸ್ಥಳವಾಗಿದೆ

Himachal tour

ಪಂಚಪುಲ

ಪಂಚಪುಲ ಎಂದರೆ ಐದು ಸೇತುವೆಗಳು ಎಂದರ್ಥ. ಇಲ್ಲಿ ಬಂಡೆಗಳ ಮೇಲೆ ಬೀಳುವ ಆಕರ್ಷಕ ಜಲಪಾತಗಳನ್ನು ಕಾಣಬಹುದು. ಇದು ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಹೊಳೆಗಳಲ್ಲಿ ನಿಧಾನವಾಗಿ ನಡೆಯಬಹುದು. ಇಲ್ಲಿ ತಿನ್ನಲು ಆಹಾರಗಳು ಕೂಡ ದೊರೆಯುತ್ತದೆ.

ಸತ್ಧಾರ ಜಲಪಾತ

ಹಚ್ಚಹಸುರಿನ ಕಾಡುಗಳಿಂದ ಸುತ್ತುವರಿದಿರುವ ಏಳು ಬುಗ್ಗೆಗಳಲ್ಲಿ ಚಿಮ್ಮುವ ಸತ್ಧಾರ ಜಲಪಾತ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ನೀವು ಇಲ್ಲಿಗೆ ಕುಟುಂಬದ ಜೊತೆ ಆಗಮಿಸಿದರೆ ಜಲಪಾತದ ಸೊಬಗನ್ನು ನೋಡಬಹುದು. ಇಲ್ಲಿ ಸ್ಟ್ರೀಮ್ ಸೈಡ್ ನಲ್ಲಿ ಪಿಕ್ನಿಕ್ ಗಳನ್ನು ಮಾಡಬಹುದು ಅಥವಾ ಪ್ರಕೃತಿಯ ಸೌಂದರ್ಯವನ್ನು ಪ್ರಶಾಂತವಾಗಿ ಸವಿಯಬಹುದು.

Himachal tour

ಚಮೇರಾ ಸರೋವರ

ಡಾಲ್ ಹೌಸಿ ಪಟ್ಟಣದಿಂದ ಸುಮಾರು 25ಕಿಮೀ ದೂರದಲ್ಲಿರುವ ಚಮೇರಾ ಸರೋವರವು ಕುಟುಂಬದ ಜೊತೆಗಿನ ವಿಹಾರಕ್ಕೆ ಬಹಳ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನೀವು ಕುಟುಂಬದ ಜೊತೆ ದೋಣಿ ವಿಹಾರ ಮಾಡಬಹುದು. ಹಾಗೇ ಮೀನುಗಾರಿಕೆ, ಛಾಯಗ್ರಹಣ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ಸೇಂಟ್ ಜಾನ್ ಚರ್ಚ್

ಇದು ಈ ಪಟ್ಟಣದಲ್ಲಿರುವ ಹಳೆಯ ಚರ್ಚ್ ಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮಕ ಮತ್ತು ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಲ್ಲಿ ನೀವು ಅದರ ವಾಸ್ತುಶಿಲ್ಪಗಳನ್ನು ನೋಡಬಹುದು. ಇಲ್ಲಿ ಪ್ರಾರ್ಥನೆಗೂ ಹಾಜರಾಗಬಹುದು.

ಗಂಜಿ ಪಹಾರಿ

ಡಾಲ್ ಹೌಸ್ ನಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಗಂಜಿ ಪಹಾರಿ ಬೆಟ್ಟಗಳಲ್ಲಿ ಒಂದಾಗಿದೆ. ಇಲ್ಲಿ ಸುತ್ತಮುತ್ತಲಿನ ಕಣಿವೆಗಳ ವ್ಯಾಪಕ ನೋಟಗಳ ಜೊತೆಗೆ ಕೆಲವು ರೋಮಾಂಚಕಾರಿ ಚಾರಣಗಳನ್ನು ಮಾಡಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು.

ಸುಭಾಷ್ ಬಾವೊಲಿ

ಇದಕ್ಕೆ ಭಾರತದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ನೀವು ನೈಸರ್ಗಿಕ ಚಿಲುಮೆಗಳು ಮತ್ತು ಪ್ರಶಾಂತವಾದ ವಾತಾವರಣವನ್ನು ಕಾಣಬಹುದು. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಸ್ವಾತಂತ್ರ್ಯ ಹೋರಾಟಗಾರನ ಅನಾರೋಗ್ಯವನ್ನು ಗುಣಪಡಿಸಿದೆ ಎಂದು ನಂಬಲಾಗಿದೆ. ಹಾಗಾಗಿ ಹಚ್ಚ ಹಸಿರಾದ ಪ್ರಕೃತಿ ಸೌಂದರ್ಯದ ಜೊತೆ ಸಮಯ ಕಳೆಯಲು ನಿಮ್ಮ ಕುಟುಂಬದ ಜೊತೆ ಇಲ್ಲಿಗೆ ಬನ್ನಿ.

Himachal tour

ಡಾಲ್ ಹೌಸಿ ಮಾಲ್ ರಸ್ತೆ

ಡಾಲ್ ಹೌಸಿ ಪಟ್ಟಣವು ತನ್ನದೇ ಆದ ಮಾಲ್ ರಸ್ತೆಗಳನ್ನು ಹೊಂದಿದೆ. ಇಲ್ಲಿ ಶಾಪಿಂಗ್ ಮಾಲ್ ಮತ್ತು ರೆಸ್ಟೋರೆಂಟ್ ಗಳಿವೆ. ಜೊತೆಗೆ ಇಲ್ಲಿ ಪ್ರಪಂಚದಾದ್ಯಂತ ಅನೇಕ ರೀತಿಯ ಭಕ್ಷ್ಯಗಳು ಸಿಗುತ್ತವೆ. ಹಾಗೇ ಸ್ಮಾರಕಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Viral News: ರೈಲಿನಲ್ಲಿ ಜನಿಸಿದ ತಮ್ಮ ಮಗುವಿಗೆ ʼಮಹಾಲಕ್ಷ್ಮಿʼ ಎಂದು ಹೆಸರಿಟ್ಟಿದ್ದೇಕೆ ಮುಸ್ಲಿಂ ದಂಪತಿ?

ಕಲಾಟಾಪ್ ವನ್ಯಜೀವಿ ಅಭಯಾರಣ್ಯ

ಈ ಸುಂದರವಾದ ಅಭಯಾರಣ್ಯವು ಡಾಲ್ ಹೌಸಿ ಮತ್ತು ಖಜ್ಜಿಯಾರ್ ನಡುವೆ ಇದೆ. ಇಲ್ಲಿ ಜಿಂಕೆಗಳು , ಕಪ್ಪು ಕರಡಿಗಳು, ನರಿ, ಚಿರತೆ, ಕಾಡು ಬೆಕ್ಕುಗಳು ಇತರ ಜಾತಿಯ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ನೋಡಬಹುದು. ಇಲ್ಲಿ ನೀವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನೋಡಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Ambani Wedding Fashion: ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳನ್ನು ಧರಿಸಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಹಾಗಾದಲ್ಲಿ, ಅವರ ಮದುವೆಯ ದಿನದ ಡಿಸೈನರ್‌ವೇರ್ಸ್ & ಆಭರಣಗಳು ಹೇಗಿದ್ದವು? ಇಲ್ಲಿದೆ ವರದಿ.

VISTARANEWS.COM


on

Ambani Wedding Fashion
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆಯ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಜ್ರ-ವೈಢೂರ್ಯದಲ್ಲೆ ಮಿಂದೆದ್ದಿರುವ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌, ಇಂಡಿಯನ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ (Ambani Wedding Fashion) ಹೊಸ ಭಾಷ್ಯ ಬರೆದಿದ್ದಾರೆ. ಹೌದು, ಜನರ ಕಣ್ಣು ಕುಕ್ಕುವಂತಹ ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್ಸ್, ದುಬಾರಿ ಜ್ಯುವೆಲರಿಗಳನ್ನು ಧರಿಸಿ ಲಕ್ಷುರಿಯಾಗಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ , ಬಿಗ್‌ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗಾದಲ್ಲಿ, ಮದುವೆಯ ದಿನ ಅವರು ಧರಿಸಿದ್ದ ವಿಶೇಷವಾದ ಡಿಸೈನರ್‌ವೇರ್ಸ್ ಹಾಗೂ ಆಭರಣಗಳು ಹೇಗಿದ್ದವು?ಎಷ್ಟು ಕೋಟಿ ರೂ. ಬೆಲೆಬಾಳುತ್ತಿದ್ದವು. ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

Ambani Wedding Fashion

ವಜ್ರ- ವೈಢೂರ್ಯ ಬಂಗಾರದಲ್ಲೆ ಮಿಂದೆದ್ದ ಜೋಡಿ

ಮದುವೆಯ ದಿನದಂದು ಅಡಿಯಿಂದ ಮುಡಿಯವರೆಗೂ ಕೋಟಿಗಟ್ಟಲೇ ಬೆಲೆ ಬಾಳುವ ವಜ್ರ ವೈಡೂರ್ಯಗಳಿಂದಲೇ ಅಲಂಕೃತಗೊಂಡಿದ್ದ ಅನಂತ್‌-ರಾಧಿಕಾ ಅಂಬಾನಿಯವರ ಸೆಲೆಬ್ರೇಷನ್‌, ವೆಡ್ಡಿಂಗ್‌ ಇಂಡಸ್ಟ್ರೀಯಲ್ಲಿ ಭಾರಿ ಸಂಚಲನ ಮೂಡಿಸಿರುವುದರೊಂದಿಗೆ ಬಿಗ್‌ ಫ್ಯಾಟ್‌ ವೆಡ್ಡಿಂಗ್‌ ಪ್ರಿಯರನ್ನು ಉತ್ತೇಜಿಸಿದೆ. ಡಿಸೈನಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದೆ.

ಅನಂತ್‌ ಅಂಬಾನಿಯ 214 ಕೋಟಿ ರೂ. ಗಳ ಶೆರ್ವಾನಿ

ಅಬ್ಬಬ್ಬಾ., ಮದುವೆಯ ದಿನ ಅನಂತ್‌ ಅಂಬಾನಿ ಧರಿಸಿದ್ದ ವಜ್ರ ಹಾಗೂ ಬಂಗಾರ ಮಿಶ್ರಿತ ಡಿಸೈನ್‌ನ ಶೆರ್ವಾನಿ ಬೆಲೆ 214 ಕೋಟಿ ರೂ. ಗಳು. ಅದರೊಂದಿಗೆ ಧರಿಸಿದ್ದ, ಆನೆಯ ಆಕಾರದ ಬ್ರೋಚ್‌ 14 ಕೋಟಿ ರೂ. ಎಂದರೇ ನೀವು ನಂಬಲೇಬೇಕು. ದೇಸಿ ಕಲಾಕಾರರಿಂದ ಸಿದ್ಧಗೊಂಡ ಶೆರ್ವಾನಿಗೆ ಎಥ್ನಿಕ್‌ ಜೂತಿ ಧರಿಸುವ ಬದಲು, ಬಂಗಾರದ ಪಾಲಿಶ್‌ ಪ್ರಿಂಟ್ಸ್ ಇರುವಂತಹ ಕಸ್ಟಮೈಸ್ಡ್ ಸ್ಪೋರ್ಟ್ಸ್ ಶೂ ಧರಿಸಿದ್ದು, ಹೊಸ ಟ್ರೆಂಡ್‌ಗೆ ಗ್ರೀನ್‌ ಸಿಗ್ನಲ್‌ ನೀಡಿತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌.

ಮಹಾರಾಣಿಯಂತೆ ಬಿಂಬಿಸಿದ ರಾಧಿಕಾ ಮರ್ಚೆಂಟ್‌ ಬ್ರೈಡಲ್‌ ಲುಕ್‌

ಇನ್ನು, ಮದುವೆಯ ದಿನ ಗುಜರಾತಿ ಸಂಪ್ರದಾಯದಂತೆ ವಿಶೇಷ ಲೆಹೆಂಗಾ ಹಾಗೂ ಗಾಗ್ರದಲ್ಲಿ ಕಾಣಿಸಿಕೊಂಡ ರಾಧಿಕಾ ಧರಿಸಿದ್ದ, ಡಿಸೈನರ್‌ವೇರ್‌ಗಳು ಕೂಡ ಅಷ್ಟೇ, ಶುದ್ಧ ಬಂಗಾರ ಹಾಗೂ ವಜ್ರದಿಂದಲೇ ಸಿಂಗಾರಗೊಂಡಿದ್ದವು. ತವರು ಮನೆಯಿಂದ ಹೊರಡುವ ಲುಕ್‌, ರಾತ್ರಿ ಮಹೂರ್ತದ ಲುಕ್‌, ವಿದಾಯಿ ಲುಕ್‌ ಹೀಗೆ ನಾನಾ ಟ್ರೆಡಿಷನಲ್‌ ಲುಕ್‌ಗಳಲ್ಲಿ ರಾಧಿಕಾ ಧರೆಗಿಳಿದ ಅಪ್ಸರೆಯಂತೆ ಕಾಣಿಸಿಕೊಂಡರು. ಅಗ್ನಿಸಾಕ್ಷಿ ಸಂದರ್ಭದಲ್ಲಿ, ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಅವರ ಡಿಸೈನ್‌ನ ವೈಟ್‌ ಹಾಗೂ ರೆಡ್‌ ಕಾಂಬಿನೇಷನ್‌ನ ಬಂಗಾರದ ವಿನ್ಯಾಸದ ಗಾಗ್ರದಲ್ಲಿ ಮಿನುಗಿದರು. ವಿಶೇಷವೆಂದರೇ, ಸಹೋದರಿಯ ನೂರಾರು ಕೋಟಿ. ರೂ ಬೆಲೆಬಾಳುವ ಜ್ಯುವೆಲರಿ ಸೆಟ್‌ ಧರಿಸಿ, ಸಸ್ಟೈನಬಲ್‌ ಜ್ಯುವೆಲರಿ ಫ್ಯಾಷನ್‌ಗೂ ಸೈ ಎಂದರು. ಅಂದಹಾಗೆ, ಈ ಅಂಬಾನಿ ಜೋಡಿಯ ಈ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ಸಾಕಷ್ಟು ಡಿಸೈನರ್‌ಗಳಿಗೆ ವೇದಿಕೆಯನ್ನು ಸೃಷ್ಟಿಸಿತು ಎನ್ನಬಹುದು ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

Ambani wedding Fashion: ಇಂದ್ರಲೋಕವನ್ನೇ ಧರೆಗಿಳಿಸಿದ ಅಂಬಾನಿ ಫ್ಯಾಮಿಲಿ!ಇದನ್ನೂ ಓದಿ:

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

Early Symptoms Of Menopause: ಬದಲಾವಣೆ ಯಾರಿಗೂ ತಪ್ಪಿದ್ದಲ್ಲ. ಆದರೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಒಟ್ಟಿಗೆ ಎದುರಾದರೆ, ಅವುಗಳನ್ನು ಎದುರಿಸುವುದು ಕಷ್ಟ. ಮಹಿಳೆಯರ ಫಲವಂತಿಕೆಯ ದಿನಗಳು ಮುಗಿಯುವ ಸೂಚನೆಯಾಗಿ ಎದುರಾಗುವ ರಜೋನಿವೃತ್ತಿಯ ದಿನಗಳ ಬಗೆಗೂ ಇದನ್ನು ಅನ್ವಯಿಸಬಹುದು. ಈ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ, ಇದನ್ನು ನಿಭಾಯಿಸುವಲ್ಲಿನ ತೊಡಕು ಕಡಿಮೆಯಾಗುತ್ತದೆ. ಇಲ್ಲಿದೆ ಮಾಹಿತಿ.

VISTARANEWS.COM


on

Early Symptoms Of Menopause
Koo

ಬದಲಾವಣೆಗಳಿಗೆ ಹೊಂದಿಕೊಳ್ಳುವುದು (Early Symptoms Of Menopause) ಸುಲಭ ಎಂದು ಭಾವಿಸುವಂತಿಲ್ಲ. ಧನಾತ್ಮಕ ಬದಲಾವಣೆ ಆಗಿದ್ದರೆ ಬೇಗ ಹೊಂದಿಕೊಳ್ಳುತ್ತೇವೆ. ನಮಗಿಷ್ಟವಿಲ್ಲದ ಬದಲಾವಣೆಯಾದರೆ ಕಡ್ಡಿಯೂ ಗುಡ್ಡದಂತೆ ಕಾಣುತ್ತದೆ. ಮಹಿಳೆಯರ ಫಲವಂತಿಕೆಯ ದಿನಗಳು ಮುಗಿಯುವ ಸೂಚನೆಯಾಗಿ ಎದುರಾಗುವ ರಜೋನಿವೃತ್ತಿಯ ದಿನಗಳ ಬಗೆಗೂ ಇದನ್ನು ಅನ್ವಯಿಸಬಹುದು. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಒಟ್ಟಿಗೆ ಎದುರಾದರೆ, ಅವುಗಳನ್ನು ಎದುರಿಸುವುದು ಕಷ್ಟ ಎನಿಸಬಹುದು. ಆದರೆ ಅರಿವೇ ಗುರು ಎಂಬಂತೆ, ಈ ಬದಲಾವಣೆಗಳ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ, ಇದನ್ನು ನಿಭಾಯಿಸುವಲ್ಲಿನ ತೊಡಕು ಕಡಿಮೆಯಾಗಬಹುದು. ಹಾಗಾಗಿ ಋತುಬಂಧದ ದಿನಗಳ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ.

Foods are also responsible for relieving stress and increasing cheerfulness Foods That Lift Your Mood

ಮೂಡ್‌ ಬದಲಾವಣೆ

ಸಾಮಾನ್ಯವಾಗಿ 40ರಿಂದ 50ರ ನಡುವೆ ಯಾವಾಗಲಾದರೂ ಈ ಲಕ್ಷಣಗಳು ಪ್ರಾರಂಭವಾಗಬಹುದು. ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟಿರಾನ್‌ ಚೋದಕಗಳ ಮಟ್ಟದಲ್ಲಿ ಆಗುವ ಏರಿಳಿತದಿಂದಾಗಿ ಮಾನಸಿನ ತುಮುಲಗಳು, ಮೂಡ್‌ ಬದಲಾವಣೆ, ಕೋಪ, ಆತಂಕ, ಖಿನ್ನತೆಯಂಥ ಭಾವನೆಗಳು ಆವರಿಸುತ್ತವೆ. ಹಾರ್ಮೋನುಗಳ ಬದಲಾವಣೆ ಎನ್ನುವುದು ದೇಹದ ಮೇಲೆ ಬಹಳಷ್ಟು ರೀತಿಯಲ್ಲಿ ಪರಿಣಾಮ ಬೀರಬಲ್ಲದು.

ಅನಿಯಮಿತ ಋತುಸ್ರಾವ

ಮಾಸಿನ ಸ್ರಾವದ ಮೇಲೆ ಇದು ನಿಶ್ಚಿತವಾಗಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅತಿಯಾದ ಸ್ರಾವದಿಂದ ಹೈರಾಣಾದರೆ ಕೆಲವೊಮ್ಮೆ ಅತ್ಯಲ್ಪವೇ ಆಗಬಹುದು. ಅಂತೂ ಈ ದಿನಗಳು ಅದಷ್ಟೂ ವರ್ಷಗಳು ಇದ್ದಂತೆ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಒಂದು ತಿಂಗಳು ತಪ್ಪಿತು ಎಂದಾದರೆ ಅದು ಋತುಬಂಧದ ಕಾರಣಕ್ಕೇ ಎಂಬ ತೀರ್ಮಾನಕ್ಕೆ ಬರುವುದಲ್ಲ. ಗರ್ಭಾವಸ್ಥೆಗೂ ಇರಬಹುದು. ಹಾಗಾಗಿ ವೈದ್ಯರನ್ನು ನೋಡುವುದು ಸೂಕ್ತ.

Sweating Sickness

ಬೆವರುವುದು

ಮೈಮೇಲೆಲ್ಲ ಬಿಸಿನೀರು ಚೆಲ್ಲಿದ್ದಂತೆ, ಇದ್ದಕ್ಕಿದ್ದ ಹಾಗೆ ಮುಖ-ಮೈಯೆಲ್ಲ ಕೆಂಪಾಗಿ ಬಿಸಿಯಾದ ಅನುಭವ. ಬೆವರಿಳಿದು ತೊಟ್ಟ ವಸ್ತ್ರಗಳೂ ಒದ್ದೆಯಾಗಬಹುದು. ಇವೆಲ್ಲ ಪ್ರಾರಂಭವಾದರೆ ಋತುಬಂಧ ಹತ್ತಿರವಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಕೆಲವೇ ಸೆಂಕೆಂಡುಗಳಿಂದ ಹಿಡಿದು ಕೆಲವು ನಿಮಿಷಗಳವರೆಗೂ ಈ ಬಿಸಿ-ಬೆವರಿನ ಅನುಭವ ಇರಬಹುದು.

Sleeping tips

ನಿದ್ದೆ ವ್ಯತ್ಯಾಸ

ದೇಹದ ಕೆಲವು ಕ್ರಿಯೆಗಳಲ್ಲಿ ವ್ಯತ್ಯಾಸ ಆಗಬಹುದು. ಹಾರ್ಮೋನುಗಳ ಕೆಲಸ ಸುಸೂತ್ರವಾಗಿದ್ದರೆ ಇಡೀ ದೇಹ ಕ್ಷೇಮವಾಗಿ ಇರಬಲ್ಲದು. ಹೀಗೆ ಏರುಪೇರಾಗುವ ಅಂಶಗಳಲ್ಲಿ ನಿದ್ದೆಯೂ ಒಂದು. ಮೈಯೆಲ್ಲ ಬಿಸಿಯಾಗಿ ಬೆವರುತ್ತಿದ್ದರಂತೂ ಎಂಥಾ ಚಳಿಗಾಲವೂ ಲೆಕ್ಕಕ್ಕೆ ಸಿಗುವುದಿಲ್ಲ. ರಾತ್ರಿ ಮಲಗಿದರೆ ನಿದ್ದೆಯೂ ಮಾಯವಾಗಿ, ಹಗಲಿನ ಸುಸ್ತು, ಆಯಾಸ ಹೆಚ್ಚಿಸುತ್ತದೆ.

ಶುಷ್ಕತೆ

ಈಸ್ಟ್ರೋಜೆನ್‌ ಇಳಿಮುಖವಾದಂತೆ ಎಲ್ಲೆಡೆ ಶುಷ್ಕತೆ ಹೆಚ್ಚುತ್ತದೆ. ಚಳಿಗಾಲ ಇಲ್ಲದಿದ್ದರೂ ಮೈ-ಮುಖವೆಲ್ಲ ಒಣಗಿ ಬಿರಿದಂತಾಗಬಹುದು. ಮೂತ್ರನಾಳದ ಸೋಂಕಿನ ಸಾಧ್ಯತೆಗಳು ಹೆಚ್ಚಬಹುದು. ಈ ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಸಲಹೆಯನ್ನು ಪಡೆಯುವುದು ಅನಿವಾರ್ಯ. ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಈ ಲಕ್ಷಣಗಳ ನಿಯಂತ್ರಣಕ್ಕೆ ನೆರವಾಗುತ್ತದೆ.

ಬದಲಾವಣೆ

ಸ್ತನಗಳ ಗಾತ್ರದಲ್ಲಿ ಬದಲಾವಣೆ ಕಾಣಬಹುದು. ಈಸ್ಟ್ರೋಜೆನ್‌ ಕಡಿಮೆ ಆಗುತ್ತಿದ್ದಂತೆ, ಫಲವಂತಿಕೆಯ ದಿನಗಳ ಕ್ಷೀಣಿಸುತ್ತಿವೆ ಎಂಬುದನ್ನು ದೇಹ ಸ್ವಾಭಾವಿಕವಾಗಿಯೇ ಗ್ರಹಿಸುತ್ತದೆ. ಸ್ತನಗಳ ಬದಲಾವಣೆಗಳೆಲ್ಲ ದೇಹದ ಈ ತಿಳಿವಳಿಕೆಯ ಭಾಗವಾಗಿಯೇ ಆಗುವಂಥವು. ಸ್ತನಗಳಲ್ಲಿ ನೋವು ಕಂಡರೂ ಅಚ್ಚರಿಯಿಲ್ಲ. ಆದರೆ ಈ ದಿನಗಳಲ್ಲಿ ಆಗುವ ಯಾವುದೇ ಬದಲಾವಣೆಯನ್ನು ʻಸಹಜʼ ಎಂದು ಉಪೇಕ್ಷೆ ಮಾಡದೆ, ಸ್ತ್ರೀರೋಗ ತಜ್ಞರಲ್ಲಿ ಸಲಹೆ ಪಡೆಯುವುದು ಅಗತ್ಯ.

Black Woman, Stomach Pain and Digestion with

ನೋವುಗಳು

ಕೈ, ಕಾಲು, ಕೀಲುಗಳಲ್ಲೆಲ್ಲ ನೋವು ಕಾಡಬಹುದು. ಮೈಗ್ರೇನ್‌ನಿಂದ ನರಳುವವರ ಸಂಖ್ಯೆಯೂ ಅಧಿಕವೇ. ಹಾರ್ಮೋನುಗಳ ಕುಸಿತದಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುವುದರಿಂದ ದೇಹದಲ್ಲಿ ಎಲ್ಲೆಂದರಲ್ಲಿ ನೋವು ಸತಾಯಿಸುತ್ತದೆ. ಇದರಿಂದಾಗಿ ಸುಸ್ತು, ಆಯಾಸ ಇನ್ನಷ್ಟು ತೀವ್ರವಾಗಬಹುದು.

ಇದನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ನಿಭಾಯಿಸುವುದು ಹೇಗೆ?

ಋತುಬಂಧ ಸಮೀಪಿಸಿದೆಯೇ ಎಂಬುದನ್ನು ತಿಳಿಯುವುದಕ್ಕೆ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಕೆಲವೊಮ್ಮೆ ಈ ಲಕ್ಷಣಗಳು ಒಂದೆರಡು ವರ್ಷಗಳಲ್ಲಿ ಮುಗಿಯದೆ ದೀರ್ಘಕಾಲ ತೆಗೆದುಕೊಳ್ಳಬಹುದು. ಆಗ ನಿಯಮಿತವಾಗಿ ತಪಾಸಣೆ ಅಗತ್ಯ. ಉಳಿದಂತೆ, ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಆವಶ್ಯಕ. ಮನಸ್ಸಿಗೆ ಅನಿಸಿದ್ದನ್ನು ಯಾರೊಂದಿಗಾದರೂ ಹೇಳಿಕೊಳ್ಳಿ. ಹೇಳಲಾಗದಿದ್ದರೆ ನಿಯಮಿತವಾಗಿ ಡೈರಿ ಬರೆಯಿರಿ. ಸತ್ವಯುತ ಆಹಾರ ಮತ್ತು ವ್ಯಾಯಾಮಗಳನ್ನು ಎಂದಿಗೂ ತಪ್ಪಿಸಬೇಡಿ.

Continue Reading

ಆರೋಗ್ಯ

Hair Growth Tips: ಕೂದಲಿನ ಆರೈಕೆಯಲ್ಲಿ ಮೆಂತೆಯ ಜಾದೂ ಕಂಡಿದ್ದೀರಾ?

Hair Growth Tips: ಅಡುಗೆ ಮನೆಯ ಘಮ ಹೆಚ್ಚಿಸುವ ಮೆಂತೆ ಬೀಜಗಳು ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ. ಜೊತೆಗೆ ಕೂದಲಿನ ಆರೈಕೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಈ ಬೀಜಗಳು ತಲೆಯ ಚರ್ಮಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಬುಡಕ್ಕೆ ಆಮ್ಲಜನಕದ ಸರಬರಾಜನ್ನು ಅಧಿಕಗೊಳಿಸುತ್ತವೆ. ಇದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ.

VISTARANEWS.COM


on

Hair Growth Tips
Koo

ಸಾವಿಲ್ಲದವರ ಮನೆಯ (Hair Growth Tips) ಸಾಸಿವೆ ತರುವುದು ಬುದ್ಧನ ಕಾಲದಲ್ಲಾಯಿತು. ಈಗಿನ ಕಾಲದಲ್ಲಿ ಕೂದಲು ಉದುರದವರ ಮನೆಯ ಸಾಸಿವೆ ತರುವುದಕ್ಕೆ ಹೇಳಬಹುದು. ಅಂದರೆ, ಅಷ್ಟು ಸರ್ವವ್ಯಾಪಿಯಾಗಿದೆ ಕೂದಲಿನ ಸಮಸ್ಯೆ. ಕೂದಲು ಉದುರುವುದಕ್ಕೆ ಚಳಿಗಾಲ, ಬೇಸಿಗೆ ಎಂಬ ಭೇದವಿಲ್ಲ; ಮಳೆಗಾಲ ಬಂದರೂ ತಡೆಯಿಲ್ಲ. ವಾತಾವರಣದಲ್ಲಿ ತೇವ ಹೆಚ್ಚಾದ ನೆವಕ್ಕೆ ಕೆಲವು ಸೋಂಕುಗಳು ಕೂದಲಿನ ಬುಡವನ್ನು ಮತ್ತು ತಲೆಯ ಚರ್ಮವನ್ನು ಬಾಧಿಸಬಹುದು. ಇದರಿಂದಲೂ ಕೂದಲು ಉದುರುತ್ತದೆ. ಕೂದಲಿನ ಸಮಸ್ಯೆಗಳಿಗೆ ಮೆಂತೆ ಬೀಜಗಳಿಂದ ಪರಿಹಾರ ದೊರೆಯಬಲ್ಲದೇ? ಅಡುಗೆಮನೆಯ ಘಮ ಹೆಚ್ಚಿಸುವ ಈ ಮೆಂತೆಯು ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹಿಗಳಿಗೆ, ತೂಕ ಇಳಿಸುವವರಿಗೆ ಇದು ನೆಚ್ಚಿನ ಸಂಗಾತಿ. ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದಕ್ಕೆ ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೂ ಇದು ಬಳಕೆಯಲ್ಲಿದೆ. ಇವೆಲ್ಲವುಗಳ ಜೊತೆಗೆ ಕೂದಲಿನ ಆರೈಕೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಈ ಬೀಜಗಳು ತಲೆಯ ಚರ್ಮಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಬುಡಕ್ಕೆ ಆಮ್ಲಜನಕದ ಸರಬರಾಜನ್ನು ಅಧಿಕಗೊಳಿಸುತ್ತವೆ. ಇದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ. ಮೆಂತೆಯಲ್ಲಿ ನಾರು ಮತ್ತು ಪ್ರೊಟೀನ್‌ ಅಂಶ ಅಧಿಕವಾಗಿದೆ. ಇವುಗಳಿಂದ ಕೂದಲು ಸದೃಢವಾಗಿ ತುಂಡಾಗುವುದು ನಿಲ್ಲುತ್ತದೆ. ನೂರು ಗ್ರಾಂ ಮೆಂತೆ ಬೀಜಗಳಲ್ಲಿ ಸುಮಾರು 23 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಇದಲ್ಲದೆ, ಮೆಂತೆಯಲ್ಲಿರುವ ಲೆಸಿಥಿನ್‌ ಎಂಬ ಅಂಶವು ಕೂದಲಿನ ಬಲವರ್ಧನೆಗೆ ಸಹಾಯಕ. ಮಾತ್ರವಲ್ಲ, ತಲೆಯ ಚರ್ಮವು ಉತ್ಪಾದಿಸುವ ತೈಲದಂಶವನ್ನು ಕಡಿಮೆ ಮಾಡಿ, ಪಿಎಚ್‌ ಸರಿದೂಗಿಸಲು ಮಾಡಲು ಇದರಿಂದ ಸಾಧ್ಯ. ಹಾಗಾಗಿ ತಲೆಹೊಟ್ಟನ್ನು ಕೂದಲುದುರುವುದನ್ನು ಕಡಿಮೆ ಮಾಡುತ್ತದೆ, ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ.

Fenugreek Seeds

ಬಳಸುವುದು ಹೇಗೆ?

ಹೆಚ್ಚಿನವರು ಬಳಸುವ ವಿಧಾನವೆಂದರೆ ಮೆಂತೆಯ ಪೇಸ್ಟ್‌ ಕೂದಲಿಗೆ ಹಚ್ಚುವುದು. ರಾತ್ರಿ ಮಲಗುವಾಗ ಎರಡು ದೊಡ್ಡ ಚಮಚ ಮೆಂತೆಯನ್ನು ನೀರಿಗೆ ಹಾಕಿ. ಬೆಳಗಿನವರೆಗೆ ಅದು ಚೆನ್ನಾಗಿ ನೆನೆದು, ಉಬ್ಬಿರುತ್ತದೆ. ಅದನ್ನು ಮೊಸರಿನೊಂದಿಗೆ ರುಬ್ಬಿ ಕೂದಲಿಗ ಬುಡ ಸೇರಿದಂತೆ ಎಲ್ಲೆಡೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ಒಳ್ಳೆಯ ಕಂಡೀಶನರ್‌ ದೊರೆತು, ಹೊಟ್ಟು ತೊಲಗಿ, ಕೂದಲು ನಳನಳಿಸುತ್ತದೆ.

Fenugreek

ಮೆಂತೆಯ ಎಣ್ಣೆ

ಅರ್ಧ ಕಪ್‌ ತೆಂಗಿನ ಎಣ್ಣೆಗೆ 2 ದೊಡ್ಡ ಚಮಚ ಮೆಂತೆಯ ಬೀಜಗಳನ್ನು ಹಾಕಿ, ಕುದಿಸಿ. ಈ ಎಣ್ಣೆ ಆರಿ ತಣ್ಣಗಾದ ಮೇಲೆ ಗಾಜಿನ ಬಾಟಲಿಗೆ ತುಂಬಿಸಿಡಿ. ಈ ಎಣ್ಣೆಯನ್ನು ರಾತ್ರಿ ಮಲಗುವ ಒಂದು ತಾಸಿ ಮೊದಲು ತಲೆಗೆ ಹಾಕಿ ಲಘುವಾಗಿ ಮಸಾಜ್‌ ಮಾಡಿ. ಬೆಳಗ್ಗೆ ತಲೆಸ್ನಾನ ಮಾಡಿ. ಇದರಿಂದ ಇಡೀ ರಾತ್ರಿ ಈ ಎಣ್ಣೆಯಲ್ಲಿ ನೆನೆದ ತಲೆಯ ಚರ್ಮ ಮತ್ತು ಕೂದಲ ಬುಡಗಳು ಸೊಂಪಾಗಿ ಸತ್ವಗಳನ್ನು ಹೀರಿಕೊಳ್ಳುತ್ತವೆ.

Fenugreek water

ಮೆಂತೆಯ ನೀರು

2 ಚಮಚ ಮೆಂತೆಯನ್ನು (ಬೀಜ/ಪುಡಿ ಯಾವುದಾದರೂ ಸರಿ) ದೊಡ್ಡ ಗ್ಲಾಸ್‌ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನೀರು ಮುಕ್ಕಾಲು ಗ್ಲಾಸಿನಷ್ಟು ಆಗುವವರೆಗೆ ಕುದಿಸಿ. ಇದು ಬೆಚ್ಚಗಿರುವಾಗಲೇ ತಲೆಯೆಲ್ಲ ನೆನೆಯುವಂತೆ ಹಚ್ಚಿಕೊಳ್ಳಿ. ಅರ್ಧ ತಾಸಿನ ನಂತರ ತಲೆಸ್ನಾನ ಮಾಡಿ. ಇದು ಸಹ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ನೀಡಿ, ಹೊಳಪು ಹೆಚ್ಚಿಸುತ್ತದೆ. ಕೂದಲು ಉದುರುವುದನ್ನು ತಡೆ, ಬೆಳವಣಿಗೆಗೆ ನೆರವಾಗುತ್ತದೆ.

ಇದನ್ನೂ ಓದಿ: Coriander Benefits For Beauty: ನಿಮ್ಮೆಲ್ಲ ಸೌಂದರ್ಯ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪಿನಲ್ಲಿದೆ ಸರಳ ಪರಿಹಾರ!

ಮೆಂತೆ-ಲೋಳೆಸರದ ಜೆಲ್‌

2 ಚಮಚ ಮೆಂತೆಯ ಪುಡಿಯನ್ನು ಅಲೊವೇರಾ ಜೆಲ್‌ ಜೊತೆಗೆ ಮಿಶ್ರ ಮಾಡಿ. ಇದನ್ನು ತಲೆಗೆಲ್ಲ ಲೇಪಿಸಿ. ಅರ್ಧ ತಾಸಿನ ನಂತರ ತಲೆಸ್ನಾನ ಮಾಡಿ. ಇದರಿಂದ ತಲೆಯ ಚರ್ಮದ ನವೆ, ಕಿರಿಕಿರಿಯನ್ನು ಹೋಗಲಾಡಿಸಿ, ಕೂದಲಿಗೆ ಹೊಳಪು ನೀಡಬಹುದು.

Continue Reading

ಆರೋಗ್ಯ

Anchor Aparna: ಅಪರ್ಣಾ ಸಿಗರೇಟ್‌ ಸೇದುವವರಲ್ಲ, ಆದರೂ ಏಕೆ ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾದರು?

Anchor Aparna: ಧೂಮಪಾನಿಗಳಿಗೆ ಮತ್ತು ತಂಬಾಕು ಚಟವಿರುವವರಿಗೆ ಮಾತ್ರವೇ ಶ್ವಾಸಕೋಶದ ಕ್ಯಾನ್ಸರ್‌ ಬರುವಂಥದ್ದು, ಜೀವನಶೈಲಿ ಚೆನ್ನಾಗಿದ್ದರೆ ಇಂಥವೆಲ್ಲ ಹತ್ತಿರ ಸುಳಿಯುವುದಿಲ್ಲ ಎಂಬ ವಿಶ್ವಾಸದ ಮೇಲೆ ಅಪರ್ಣಾ ಅವರ ನಿರ್ಗಮನ ದೊಡ್ಡ ಬರೆ ಹಾಕಿದೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಸಾವನ್ನಪ್ಪುತ್ತಿರುವವರಲ್ಲಿ ಬಹುಪಾಲು ಜನ ಸಿಗರೇಟ್‌ ಸೇದುವವರೇ ಅಲ್ಲ, ತಂಬಾಕಿನ ಯಾವ ಚಟವೂ ಇಲ್ಲದವರು! ಹೀಗೇಕೆ? ಎಲ್ಲೋ ಏನೋ ತಪ್ಪುತ್ತಿದೆಯಲ್ಲವೇ?

VISTARANEWS.COM


on

Anchor Aparna
Koo

ಖ್ಯಾತ ನಿರೂಪಕಿ, ನಟಿ ಅಪರ್ಣಾ (Anchor Aparna) ಅವರ ಸಾವು ಬಹಳಷ್ಟು ತಲ್ಲಣಗಳನ್ನು ಹುಟ್ಟುಹಾಕಿದೆ. ಧೂಮಪಾನಿಗಳಿಗೆ ಮತ್ತು ತಂಬಾಕು ಚಟವಿರುವವರಿಗೆ ಮಾತ್ರವೇ ಶ್ವಾಸಕೋಶದ ಕ್ಯಾನ್ಸರ್‌ ಬರುವಂಥದ್ದು, ಜೀವನಶೈಲಿ ಚೆನ್ನಾಗಿದ್ದರೆ ಇಂಥವೆಲ್ಲ ಹತ್ತಿರ ಸುಳಿಯುವುದಿಲ್ಲ ಎಂಬ ವಿಶ್ವಾಸದ ಮೇಲೆ ಅಪರ್ಣಾ ಅವರ ನಿರ್ಗಮನ ದೊಡ್ಡ ಬರೆ ಹಾಕಿದೆ. ದೇಶದೆಲ್ಲೆಡೆ ಶ್ವಾಸಕೋಶದ ಕ್ಯಾನ್ಸರ್‌ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿರುವುದು ಅತ್ಯಂತ ಆತಂಕದ ಸಂಗತಿ. ಇತ್ತೀಚಿನ ಕೆಲವು ಅ‍ಧ್ಯಯನಗಳು ಇನ್ನೂ ವಿಚಿತ್ರ ಸಂಗತಿಗಳನ್ನು ಹೊರಗೆಡವುತ್ತಿವೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಸಾವನ್ನಪ್ಪುತ್ತಿರುವವರಲ್ಲಿ ಬಹುಪಾಲು ಜನ ಸಿಗರೇಟ್‌ ಸೇದುವವರೇ ಅಲ್ಲ, ತಂಬಾಕಿನ ಯಾವ ಚಟವೂ ಇಲ್ಲದವರು! ಹೀಗೇಕೆ? ಎಲ್ಲೋ ಏನೋ ತೀವ್ರವಾಗಿ ತಪ್ಪುತ್ತಿದೆಯಲ್ಲವೇ?
ಜಗತ್ತಿನ ಉಳಿದೆಲ್ಲ ಕಡೆಗಳಿಗಿಂತ 10 ವರ್ಷ ಮುಂಚಿತವಾಗಿ ಪುಪ್ಪುಸದ ಕ್ಯಾನ್ಸರ್‌ ಭಾರತದಲ್ಲಿ ದಾಳಿ ಮಾಡುತ್ತಿದೆ. ಅಂದರೆ, ಪಶ್ಚಿಮ ದೇಶಗಳಲ್ಲಿ 55 ವರ್ಷಗಳ ನಂತರ ಈ ರೋಗ ಕಂಡುಬಂದರೆ, ನಮ್ಮಲ್ಲಿ ಇನ್ನೂ 10 ವರ್ಷ ಮೊದಲು. ಇಂಥ ಎಲ್ಲ ನತದೃಷ್ಟರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಮುಗಿಲು ಮುಟ್ಟಿರುವ ವಾಯು ಮಾಲಿನ್ಯ. ವಿಶ್ವ ವಾಯು ಗುಣಮಟ್ಟದ ವರದಿಯನ್ನು ಆಧರಿಸಿ ಹೇಳುವುದಾದರೆ, ವಿಶ್ವದ ೪೦ ಭಯಂಕರ ಮಲಿನ ನಗರಗಳಲ್ಲಿ 37 ನಗರಗಳು ಇರುವುದು ದಕ್ಷಿಣ ಏಷ್ಯಾದಲ್ಲಿ. ಈ ಪೈಕಿ ನಾಲ್ಕು ಅತ್ಯಂತ ಮಲಿನ ನಗರಗಳು ಭಾರತದಲ್ಲೇ ಇವೆ. ಹಾಗಾಗಿ ಬೀಡಿ, ಸಿಗರೇಟು ಸೇದದಿದ್ದರೂ ಇತರರು ಸ್ಮೋಕಿಂಗ್‌ ಮಾಡಿದ ಹೊಗೆ ನಮಗರಿವಿಲ್ಲದೆ ನಮ್ಮ ಉಸಿರಿನೊಳಗೆ ಬಂದರೂ ಅಥವಾ ಸಂಚಾರ ದಟ್ಟಣೆಯಲ್ಲಿ ಮಾಲಿನ್ಯಕಾರಕ ಹೊಗೆ ಸೇವಿಸಿದರೂ ಶ್ವಾಸಕೋಶದ ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ. ಚೀನಾ, ಭಾರತ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌ ಮತ್ತು ಥಾಯ್ಲೆಂಡ್‌ ದೇಶಗಳು 2020ರಲ್ಲಿ ಅತಿ ಪ್ರಮಾಣದ ಶ್ವಾಸಕೋಶದ ಕ್ಯಾನ್ಸರ್‌ ದಾಖಲಿಸಿವೆ. ಸಾರ್ವಜನಿಕ ಆರೋಗ್ಯ ಕ್ಷೇತ್ರ ಈಗಾಗಲೇ ಸಿಕ್ಕಾಪಟ್ಟೆ ಒತ್ತಡದಲ್ಲಿದ್ದು, ಇವೆಲ್ಲವುಗಳ ಜೊತೆಗೆ ವಾಯು ಮಾಲಿನ್ಯದಿಂದ ಆಗುತ್ತಿರುವ ಸಮಸ್ಯೆಗಳು ಆರೋಗ್ಯವನ್ನು ಪಾತಾಳಕ್ಕೆ ದೂಡುತ್ತಿವೆ. ಭಾರತದಲ್ಲಿ, 1990ರಲ್ಲಿ ಪುಪ್ಪುಸ ಕ್ಯಾನ್ಸರ್‌ನ ಪ್ರಮಾಣ 6.2 %ರಷ್ಟಿತ್ತು. 2019ರಲ್ಲಿ ಈ ಪ್ರಮಾಣ 7.7%ಕ್ಕೇರಿದೆ. 2025ರ ವೇಳೆಗೆ ನಗರ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚುವ ಆತಂಕವಿದೆ. ಆನುವಂಶಿ ಕಾರಣಗಳು ಸಹ ಇದಕ್ಕೆ ದೊಡ್ಡ ಮಟ್ಟದಲ್ಲಿ ಕೊಡಗೆಯನ್ನು ನೀಡುತ್ತಿವೆ.

ರಾಜಮಾರ್ಗ ಅಂಕಣ Anchor Aparna

ಸುರಕ್ಷಿತವಾಗಿರುವುದು ಹೇಗೆ?

ವಿಶ್ವವೆಲ್ಲ ಹೊಗೆಯಲ್ಲೇ ಮುಚ್ಚಿರುವಾಗ, ಮಾಲಿನ್ಯದಲ್ಲೇ ಹುದುಗಿರುವಾಗ ಸುರಕ್ಷಿತವಾಗಿರುವುದು ಹೇಗೆ? ಧೂಮಪಾನ ಮತ್ತು ತಂಬಾಕು ಇಂದಿಗೂ ಪುಪ್ಪುಸ ಕ್ಯಾನ್ಸರ್‌ನ ಕಾರಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಆದರೆ ಯಾವುದೇ ರೀತಿಯ ಹೊಗೆಯಿಂದ ದೂರವಾಗುವುದು ಹೇಗೆ ಎನ್ನುವುದು ಮಾತ್ರ ಯಕ್ಷಪ್ರಶ್ನೆ. ಮನೆಯೊಳಗೆ ಏರ್‌ ಪ್ಯೂರಿಫಯರ್‌ ಇರಿಸಿಕೊಳ್ಳಲು ಪ್ರಯತ್ನಿಸಿ. ನೆಲದಿಂದ ಮೇಲೇಳುವ ರೇಡಾನ್‌ ಎನ್ನುವ ರೇಡಿಯೋಆಕ್ಟಿವ್‌ ಅನಿಲದ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಇದು ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಆಸ್ಬೆಸ್ಟೋಸ್‌, ಆರ್ಸೆನಿಕ್‌, ಯುರೇನಿಯಂ, ವಾಹನಗಳ ಹೊಗೆ, ಸಿಲಿಕಾ, ಕಲ್ಲಿದ್ದಲ ಉತ್ಪನ್ನಗಳು ಮತ್ತು ಕೆಲವು ಕೈಗಾರಿಕಾ ರಾಸಾಯನಿಕಗಳು ಕ್ಯಾನ್ಸರ್‌ಕಾರಕಗಳ ಪಟ್ಟಿಯಲ್ಲಿವೆ. ಇವುಗಳಿಂದ ದೂರವಿರಿ.

ಇದನ್ನ ಓದಿ: What Is Stage 3 Breast Cancer: ಮೂರನೇ ಹಂತದ ಸ್ತನ ಕ್ಯಾನ್ಸರ್‌ ಎಂದರೇನು? ಇದರ ಲಕ್ಷಣಗಳೇನು?

ಲಕ್ಷಣಗಳೇನು?

ಈ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ಕಡಿಮೆಯೇ. ಮೂರು ವಾರಗಳಿಂದ ವಾಸಿಯಾಗದ ಕೆಮ್ಮು, ಉಸಿರಾಟ್‌ ತೊಂದರೆ, ಕೆಮ್ಮಿನಲ್ಲಿ ರಕ್ತ, ಎದೆನೋವು, ಕಾರಣವಿಲ್ಲದೆ ತೂಕ ಇಳಿಯುವುದು, ಮುಗಿಯದ ಸುಸ್ತು, ಆಯಾಸ, ಮೂಳೆ-ಕೀಲುಗಳಲ್ಲಿ ನೋವು, ತೀವ್ರ ಉರಿಯೂತ, ಮುಖದ ಪಾರ್ಶ್ವವಾಯು ಮುಂತಾದ ಯಾವುದೇ ಲಕ್ಷಣಗಳು ಇದ್ದರೂ ತುರ್ತಾಗಿ ವೈದ್ಯರಲ್ಲಿಗೆ ಧಾವಿಸಿ. ನಿತ್ಯವೂ ವ್ಯಾಯಾಮ ಮಾಡಿ. ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಢಿಸಿಕೊಳ್ಳಿ.

Continue Reading
Advertisement
radioactive material
ದೇಶ12 mins ago

Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

Ambani Wedding Fashion
ಫ್ಯಾಷನ್20 mins ago

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Bagalkot news
ಕರ್ನಾಟಕ26 mins ago

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

T20 World Cup 2024
ಕ್ರೀಡೆ35 mins ago

T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ

Anant Ambani Wedding
ಪ್ರಮುಖ ಸುದ್ದಿ56 mins ago

ಅಂಬಾನಿಯನ್ನು ಟೀಕಿಸುತ್ತಿದ್ದ ದೀದಿ, ಅಖಿಲೇಶ್‌, ಲಾಲು ಸೇರಿ ಹಲವು ರಾಜಕಾರಣಿಗಳು ಅನಂತ್‌ ಮದುವೆಯಲ್ಲಿ ಭಾಗಿ

Self Harming
ಬೆಂಗಳೂರು1 hour ago

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Shiva Rajkumar 131 cinema Look out
ಸ್ಯಾಂಡಲ್ ವುಡ್1 hour ago

Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

YouTuber Dhruv Rathee
ದೇಶ1 hour ago

YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

Kapil Dev
ಪ್ರಮುಖ ಸುದ್ದಿ1 hour ago

Kapil Dev : ಅಂಶುಮಾನ್ ಗಾಯಕ್ವಾಡ್​ಗೆ ಕ್ಯಾನ್ಸರ್​, ಬೇಸರ ವ್ಯಕ್ತಪಡಿಸಿದ ಕಪಿಲ್​ ದೇವ್​

Smriti Singh
ದೇಶ2 hours ago

Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ5 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ4 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ5 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

ಟ್ರೆಂಡಿಂಗ್‌