How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು! - Vistara News

ಲೈಫ್‌ಸ್ಟೈಲ್

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

ಬಟ್ಟೆಯ ಮೇಲಿನ ಚಹಾದ ಹಠಮಾರಿ ಕಲೆಗೆ (how to remove tea stains from clothes) ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಯಾಕಿಲ್ಲ ಹೇಳಿ! ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುವಂತೆ ಚಹಾ ಕಲೆಗೂ ಖಂಡಿತ ಪರಿಹಾರ ಇದ್ದೇ ಇದೆ. ಅವೇನು ಗೊತ್ತೇ, ಇಲ್ಲಿವೆ ಟಿಪ್ಸ್‌.

VISTARANEWS.COM


on

How To Remove Tea Stains From Clothes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೀವು ಚಹಾ ಪ್ರಿಯರಾಗಿದ್ದರೆ, ಒಂದು ಕಪ್‌ ಚಹಾಕ್ಕೆ ನೀವು ಯಾವತ್ತೂ, ಬೇಡ ಎನ್ನಲಾರಿರಿ. ಚಹಾ ಪ್ರೀತಿಯೇ ಅಂಥದ್ದು., ಒಂದು ಕಪ್‌ ಚಹಾ ಜೊತೆಗೆ ಕುಡಿಯೋಣ ಎಂದು ಯಾರಾದರೂ ಪ್ರೀತಿಯಿಂದ ಆಹ್ವಾನಿಸಿದರೆ, ನೀವು ಇಲ್ಲ ಎನ್ನಲಾರಿರಿ. ಅದು ದಿನದ ಯಾವುದೇ ಸಮಯ ಇರಲಿ, ಚಹಾಕ್ಕೆ ಸಮಯ ಎಂಬುದಿಲ್ಲ. ಇಂಥ ಸಂದರ್ಭ ಒಮ್ಮೆಯಾದರೂ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಚಹಾ ಕಪ್‌ ಕೈ ಜಾರಿ ನಿಮ್ಮ ಮೈಮೇಲೆ ಚೆಲ್ಲಿಕೊಂಡಿರುತ್ತೀರಿ. ಅಥವಾ ಕಚೇರಿಗೆ ಧರಿಸುವ ಬೆಳ್ಳನೆಯ ಶರ್ಟ್‌ ಮೇಲೆ ಬೀಳಿಸಿಕೊಂಡಿರುತ್ತೀರಿ. ಅವತ್ತಷ್ಟೇ ಮೊದಲ ಬಾರಿಗೆ ಉಟ್ಟುಕೊಂಡ ಹೊಸ ಸೀರೆಯ ಮೇಲೋ ಅಥವಾ ಹೊಸ ತಿಳಿ ಬಣ್ಣದ ಟಿ ಶರ್ಟ್‌ ಮೇಲೆ ಇಷ್ಟೇ ಇಷ್ಟು ಚಹಾ ಚೆಲ್ಲಿಬಿಟ್ಟಿರಲೂಬಹುದು. ಚಹಾದ ಮೇಲೆ ಪ್ರೀತಿಯಿದ್ದರೂ ಆ ಕ್ಷಣಕ್ಕೆ ಖಂಡಿತಾ ನಿಮಗೆ ಚಹಾದ ಮೇಲೆ ಒಂದು ಸಣ್ಣ ಸಾತ್ವಿಕ ಸಿಟ್ಟು ಬಂದಿರುತ್ತದೆ. ಸಹಜ ಕೂಡಾ. ಯಾಕೆಂದರೆ, ಚಹಾದ ಕಲೆ ಅಷ್ಟು ಸುಲಭವಾಗಿ ಹೋಗದು. ಅದರಲ್ಲೂ, ತಿಳಿ ಬಣ್ಣದ ಬಟ್ಟೆಗಳ ಮೇಲೆ ಬಿದ್ದರಂತೂ ಚಹಾದ ಸಣ್ಣದೊಂದು ಕಲೆ ಬಹಳ ಕಾಲ ಹಾಗೆಯೇ ಇದ್ದು, ಬಟ್ಟೆಯ ಸೌಂದರ್ಯವನ್ನೇ ಹಾಳು ಮಾಡಿಬಿಟ್ಟಿರುತ್ತದೆ. ಇಂತಹ ಹಠಮಾರಿ ಕಲೆಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಯಾಕಿಲ್ಲ ಹೇಳಿ! ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುವಂತೆ ಚಹಾ ಕಲೆಗೂ ಖಂಡಿತ ಪರಿಹಾರ (how to remove tea stains from clothes) ಇದ್ದೇ ಇದೆ. ಅವೇನು ಗೊತ್ತೇ, ಇಲ್ಲಿವೆ ಟಿಪ್ಸ್‌.

Displeased Man in Dirty Clothes on Light Background

ತಕ್ಷಣ ತೊಳೆಯಿರಿ

ಚಹಾ ಚೆಲ್ಲಿಕೊಂಡ ತಕ್ಷಣ ತಣ್ಣೀರಿನಿಂದ ಆ ಭಾಗವನ್ನು ತೊಳೆಯಿರಿ. ಹೆಚ್ಚು ತಡ ಮಾಡಬಾರದು. ಸಹಾ ನೀರಿನಲ್ಲಿ ಕರಗುವ ಕಾರಣ ತಕ್ಷಣ ತೊಳೆದರೆ, ಸುಲಭವಾಗಿ ಹೋಗುತ್ತದೆ. ಒಣಗಿ ಈ ಕಲೆ ಅಂಟಿಕೊಂಡರೆ ಹೋಗಿಸುವುದು ಕಷ್ಟ. ನಳ್ಳಿಯ ನೀರಿಗೆ ಒಡ್ಡಿಕೊಂಡು ಕೂಡಲೇ ಆ ಜಾಗವನ್ನು ನೀರಿನಿಂದ ತಿಕ್ಕಿ ತೊಳೆಯಿರಿ.

ಹೀಗೆ ಮಾಡಿ

ಕಲೆ ಕೇವಲ ನೀರಿನಿಂದ ಹೋಗುತ್ತಿಲ್ಲ ಅನಿಸಿದರೆ, ನೀವು ನಿತ್ಯವೂ ಬಳಸುವ ಅಥವಾ ಯಾವುದಾದರೂ ಲಿಕ್ವಿಡ್‌ ಡಿಟರ್ಜೆಂಟ್‌ ಮೂಲಕ ತೊಳೆಯಿರಿ. ಬಟ್ಟೆಯಲ್ಲಿ ಅರ್ಧ ಕಾಲ ಡಿಟರ್ಜೆಂಟ್‌ ನೀರಿನಲ್ಲಿ ಅದ್ದಿಡಿ. ಬಟ್ಟೆ ಸರಿಯಾಗಿ ನೆನೆದ ಮೇಲೆ ಆ ಜಾಗಕ್ಕೆ ಡಿಟರ್ಜೆಂಟ್‌ ಹಾಕಿ ಕೈಯಲ್ಲೇ ತಿಕ್ಕಿ ತೊಳೆಯಿರಿ. ಮತ್ತೆ ನೀರಿನಲ್ಲಿ ತೊಳೆದು ನೋಡಿ. ಕಲೆ ಸಂಪೂರ್ಣವಾಗಿ ಹೋಗಿದ್ದರೆ ಹೀಗೆ ಮಾಡುವುದನ್ನು ಬಿಡಿ.

Laundry Detergent on Stained T-Shirt, Closeup

ಬೇಕಿಂಗ್ ಸೋಡಾ

ಸಾಮಾನ್ಯ ಡಿಟರ್ಜೆಂಟ್‌ನಲ್ಲೂ ಕಲೆ ಹೋಗದು ಎಂದಾದರೆ, ಬೇಕಿಂಗ್‌ ಸೋಡಾ ಸಹಾಯಕ್ಕೆ ಬರುತ್ತದೆ. ಯಾವುದೇ ಹಠಮಾರಿ ಕಲೆಯನ್ನು ತೆಗೆಯುವ ತಾಕತ್ತು ಇದಕ್ಕಿದೆ. ಕಲೆಯಾದ ಜಾಗವನ್ನು ಒದ್ದೆ ಮಾಡಿ, ಅದರ ಮೇಲೆ ಬೇಕಿಂಗ್‌ ಸೋಡಾ ಪುಡಿಯನ್ನು ಚಿಮುಕಿಸಿ ಒಂದು ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ಎದ್ದ ಮೇಲೆ ಆ ಜಾಗವನ್ನು ಉಜ್ಜಿ ತೊಳೆಯಿರಿ.

ವಿನೆಗರ್ ಹಾಕಿ

ವಿನೆಗರ್‌ ಮೂಲಕವೂ ಹಠಮಾರಿ ಕಲೆಯನ್ನು ಇಲ್ಲವಾಗಿಸಬಹುದು. ಕಲೆಯಾದ ಬಟ್ಟೆಯನ್ನು ನೀರಿನಲ್ಲಿ ನೆನೆ ಹಾಕಿ, ಅದಕ್ಕೆ ಒಂದೆರಡು ಚಮಚದಷ್ಟು ವಿನೆಗರ್‌ ಹಾಕಿ. ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಬಟ್ಟೆಯನ್ನು ತೊಳೆಯಿರಿ. ಕಲೆ ಮಾಯವಾಗುತ್ತದೆ.

ನಿಂಬೆ ಹಣ್ಣು ಬಳಸಿ

ನಿಂಬೆಹಣ್ಣಿನ ಮೂಲಕವೂ ಕಲೆಯನ್ನು ತೆಗೆಯಬಹುದು. ಕಲೆಯಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿಟ್ಟು ಅದಕ್ಕೆ ಒಂದಿಡೀ ನಿಂಬೆಹಣ್ಣನ್ನು ಹಿಂಡಿ. ನಂತರ ಸ್ವಲ್ಪ ಗಂಟೆ ಬಿಟ್ಟು ಬಟ್ಟೆಯನ್ನು ತೊಳೆದು ನೋಡಿ. ಕಲೆ ಹೋಗುತ್ತದೆ. ಬಟ್ಟೆ ಹೊಸದರಂತೆ ಕಂಗೊಳಿಸುತ್ತದೆ.

ಇದನ್ನೂ ಓದಿ: Lifestyle Tips: ನಲ್ವತ್ತರ ನಂತರವೂ ಕಳೆಕಳೆಯಾಗಿ ಕಂಗೊಳಿಸಬೇಕಾದರೆ ಈ 8 ಸೂತ್ರಗಳು ನೆನಪಿರಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Food Hacks: ಕರಿದ ತಿನಿಸುಗಳನ್ನು ಹೆಚ್ಚು ಹೊತ್ತು ಗರಿಗರಿಯಾಗಿರಿಸಬೇಕೇ? ಇಲ್ಲಿವೆ ಪಂಚಸೂತ್ರಗಳು!

ಆಹಾರಗಳನ್ನು ತಾಜಾ ಆಗಿ ಉಳಿಯುವಂತೆ ಹೆಚ್ಚು ಕಾಲ ಗರಿಗರಿಯಾಗಿ ಉಳಿಯುವಂತೆ, ತನ್ನ ಕ್ರಿಸ್ಪೀ ಗುಣವನ್ನು ಕಳೆದುಕೊಳ್ಳದಂತೆ ಇಡಲು ಕೆಲವು ಸ್ಮಾರ್ಟ್‌ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಬನ್ನಿ, ಆ ಸ್ಮಾರ್ಟ್‌ ಉಪಾಯಗಳೇನು (food hacks) ಎಂಬುದನ್ನು ನೋಡೋಣ.

VISTARANEWS.COM


on

Food Hacks
Koo

ಕೆಲವು ತಿನಿಸುಗಳನ್ನು ಗರಿಗರಿಯಾಗಿದ್ದಾಗ ತಿಂದರೇನೆ ರುಚಿ. ಮಾಡಿದ ಕೂಡಲೇ ತಾಜಾ ಆಗಿ ತಿಂದರೆ ರುಚಿ ಹೆಚ್ಚು. ಹೆಚ್ಚು ಹೊತ್ತು ಇಟ್ಟರೆ ಅದು ತನ್ನ ತಾಜಾತನವನ್ನು ಕಳೆದುಕೊಂಡು ಮೆತ್ತಗಾಗಿಬಿಡುತ್ತದೆ. ಗರಿಗರಿಯಾಗಿ ಮಾಡಿದ ಫ್ರೆಂಚ್‌ಫ್ರೈಸ್‌, ಪೊಟೇಟೋ ವೆಜಸ್‌, ಅಥವಾ ಇನ್ಯಾವುದೋ ಪಕೋಡಾ ಹೊರತೆಗೆದ ನಿಮಿಷದಲ್ಲಿ ಮೆತ್ತಗಾಗಿ, ನೀರಸವೆನಿಸಿಬಿಡುತ್ತದೆ. ಎಷ್ಟೇ ರುಚಿಯಾದ ತಿನಿಸೂ ಸ್ವಲ್ಪ ಹೊತ್ತಿನಲ್ಲಿ ತನ್ನ ಮೊದಲ ರುಚಿಯನ್ನು ಕಳೆದುಕೊಳ್ಳುತ್ತದೆ. ಆದರೆ, ಕೆಲವೊಮ್ಮೆ, ಮಾಡಿದ ತಕ್ಷಣ ತಿನ್ನಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಹೊತ್ತಾದರೂ ಇಡಲೇಬೇಕಾಗುತ್ತದೆ. ಹಾಗಾದರೆ, ಅಂತಹ ಆಹಾರಗಳನ್ನು ತಾಜಾ ಆಗಿ ಉಳಿಯುವಂತೆ ಹೆಚ್ಚು ಕಾಲ ಗರಿಗರಿಯಾಗಿ ಉಳಿಯುವಂತೆ, ತನ್ನ ಕ್ರಿಸ್ಪೀ ಗುಣವನ್ನು ಕಳೆದುಕೊಳ್ಳದಂತೆ ಇಡಲು ಕೆಲವು ಸ್ಮಾರ್ಟ್‌ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಬನ್ನಿ, ಆ ಸ್ಮಾರ್ಟ್‌ ಉಪಾಯಗಳೇನು (food hacks) ಎಂಬುದನ್ನು ನೋಡೋಣ.

Wavy Chips in a Bowl

ನೀವು ಏರ್‌ ಫ್ರೈ ಅಥವಾ ಸಾಂಪ್ರದಾಯಿಕ ಮಾದರಿಯಲ್ಲಿ ಎಣ್ಣೆಯಲ್ಲಿ ಕರಿದು ಮಾಡಿರುವ ತಿನಿಸು ಹೆಚ್ಚು ಹೊತ್ತು ಹಾಗೆಯೇ ಗರಿಗರಿಯಾಗಿ ಉಳಿಯಬೇಕೆಂದರೆ ವೈರ್‌ ರ್ಯಾಕ್‌ ಬಳಸಿ. ಎಲ್ಲ ಬದಿಗಳಲ್ಲೂ ಗಾಳಿಯಾಡುವ ಅವಕಾಶ ಇದರಲ್ಲಿ ಸಿಗುತ್ತದೆ. ಅಥವಾ ತೂತುಗಳಿರುವ ಮೆಶ್‌ನಂಥ ಡಬ್ಬ ಇದ್ದರೆ ಅದರಲ್ಲಿ ಹಾಕಿಡಿ. ಆಗ ಕರಿದ ತುಂಡಿತ ಹಬೆ ಮತ್ತೆ ಅದರ ಮೇಲೆ ಕೂರುವುದಿಲ್ಲ. ಎಲ್ಲ ಬದಿಯಿಂದಲೂ ಗಾಳಿ ತಾಗುವ ಕಾರಣ, ತಣ್ಣಗಾದರೂ ಹೆಚ್ಚು ಹೊತ್ತು ಹಾಗೆಯೇ ಗರಿಯಾಗಿಯೇ ಇರುತ್ತದೆ.

ಏರ್‌ಫ್ರೈ ಮಾಡಿದ ಅಥವಾ ಎಣ್ಣೆಯಲ್ಲಿ ಕರಿದ ತಿನಿಸು ಸ್ವಲ್ಪ ಹೊತ್ತಿನಲ್ಲಿ ಮೆತ್ತಗಾಗುತ್ತದೆ ಹಾಗೂ ತನ್ನ ತಾಜಾತನವನ್ನು ಕಳೆದುಕೊಳ್ಳುತ್ತದೆ. ಹೀಗಾಗದಂತೆ ತಡೆಯಲು ಓವನ್‌ನಲ್ಲಿ ವೈರ್‌ ರ್ಯಾಕ್‌ನ ಮೇಲೆ 15 ನಿಮಿಷಗಳ ಕಾಲ ಹಾಗೆಯೇ ಇಡಿ. ಆಗ ಬಹುಬೇಗನೆ ಮೆತ್ತಗಾಗದು.

Microwave Oven

ಮೈಕ್ರೋವೇವ್‌ ಓವನ್‌ನಲ್ಲಿ ಮಾಡಿದ ತಿಂಡಿಯನ್ನು ಮತ್ತೆ ಬಿಸಿ ಮಾಡಬೇಡಿ. ಇದು ಆ ಆಹಾರ ವಸ್ತುವಿನಲ್ಲಿ ಇನ್ನಷ್ಟು ಹೆಚ್ಚು ತೇವಾಂಶ ಸೇರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಮತ್ತೆ ಬಹುಬೇಗನೆ ಮೆತ್ತಗಾಗಿಬಿಡುತ್ತದೆ.

ಸಾಸ್‌ ಅಥವಾ ಕೆಚಪ್‌ಗಳನ್ನು ನಿಮ್ಮ ಕ್ರಿಸ್ಟೀ ತಿನಿಸುಗಳನ್ನು ಮಾಡುವಾಗ ಹಾಕಬೇಡಿ. ಇದರಿಂದ ಇದು ಇನ್ನೂ ಬೇಗ ಮೆತ್ತಗಾಗಿಬಿಡುತ್ತದೆ. ಆದರೆ, ಕೆಲವು ಬಗೆಯಲ್ಲಿ ಹಾಕಲೇಬೇಕಾಗಿದ್ದರೆ, ಕೊನೆಯ ಕ್ಷಣದಲ್ಲಿ ಮಾಡು, ಅವಾಗಲೇ ತಿನ್ನಿ. ಹೆಚ್ಚು ಹೊತ್ತು ಇಡಲು ಹೋಗಬೇಡಿ. ಫಟಾಫಟ್‌ ತಿನಿಸಿನ ಸಂದರ್ಭ ಮಾತ್ರ ಇವು ಉಪಯೋಗಕ್ಕೆ ಬರುತ್ತವೆ.

ನೀವು ಇಂತಹ ಕರಿದ ತಿನಿಸುಗಳನ್ನು ಆಫೀಸಿಗೆ ಅಥವಾ ಹೊರಗೆ ಹೋಗುವಾಗ ಡಬ್ಬದಲ್ಲಿ ಪ್ಯಾಕ್‌ ಮಾಡಿ ತೆಗೆದುಕೊಂಡು ಹೋಗಬೇಕಾದ ಸಂದರ್ಭ ಬಂದರೆ ತಿನಿಸನ್ನು ಪೇಪರ್‌ ಟವಲ್‌ನಲ್ಲಿ ರ್ಯಾಪ್‌ ಮಾಡಿ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚು ತೆಗೆದುಕೊಂಡು ಹೋಗಿ. ಆದ ಹೆಚ್ಚಿನ ತೇವಾಂಶ ಪೇಪರ್‌ ರ್ಯಾಪರ್ ಹೀರಿಕೊಳ್ಳುವುದರಿಂದ ಹೆಚ್ಚು ಮೆತ್ತಗಾಗದು.

Continue Reading

ಆರೋಗ್ಯ

Makeup Side Effect: ನೀವು ಮೇಕಪ್‌ ಮಾಡಿಕೊಳ್ಳುತ್ತೀರಾ? ಈ ಸಂಗತಿಯ ಕುರಿತು ಎಚ್ಚರ ಇರಲಿ

ಸದಾ ಮೇಕಪ್‌ ಮಾಡುವುದರಿಂದ ಚರ್ಮ ಬೇಗ ಸುಕ್ಕಾಗುತ್ತದೆಯೇ? ಬೇಗ ವಯಸ್ಸಾದಂತೆ ಕಾಣುವುದೇ? ಈ ಪ್ರಶ್ನೆಗಳು ಬಹಳಷ್ಟು ಜನರನ್ನು ಕಾಡಬಹುದು. ಇದಕ್ಕೆ ಉತ್ತರ ಸರಳವಾದ ಒಂದಕ್ಷರದ್ದಲ್ಲ. ಈ ಬಗ್ಗೆ ಉಪಯುಕ್ತ (Makeup Side Effect) ವಿವರಗಳು ಇಲ್ಲಿವೆ.

VISTARANEWS.COM


on

remove makeup
Koo

ಮೇಕಪ್‌ ಮಾಡುವುದು ಬಹಳಷ್ಟು ಜನರ ದೈನಂದಿನ ಕಾರ್ಯಗಳಲ್ಲಿ ಒಂದು. ನಗರಗಳು ದೊಡ್ಡದಾಗುತ್ತಾ ಹೋದಷ್ಟೂ ಸಾವಿಲ್ಲದ ಮನೆಯ ಸಾಸಿವೆ ಹುಡುಕುವುದೂ ಮೇಕಪ್‌ ಇಲ್ಲದ ಮುಖ ಹುಡುಕುವುದೂ ಒಂದೇ ಎಂಬಂತಾಗುತ್ತದೆ. ಕೆಲವರಿಗೆ ಇದು ಸೌಂದರ್ಯದ ಪ್ರತೀಕವಾದರೆ, ಹಲವರಿಗೆ ಇದು ಆತ್ಮವಿಶ್ವಾಸ ತುಂಬುವ ವಿಷಯ. ಮುಖಕ್ಕೆ ಮೇಕಪ್‌ ಮಾಡುವುದಕ್ಕೆ ಕಾರಣಗಳು ಏನೇ ಇರಲಿ, ಅಂತೂ ಪ್ರಸಾದನಗಳು ಬೇಕಾಗುತ್ತವೆ. ಇವುಗಳ ಬೆನ್ನಿಗೇ ಪ್ರಶ್ನೆಯೊಂದು ಎದುರಾಗುತ್ತದೆ. ಮುಖಕ್ಕೆ ಸದಾ ಮೇಕಪ್‌ ಮಾಡುತ್ತಿದ್ದರೆ ಚರ್ಮಕ್ಕೆ ಬೇಗ (Makeup Side Effect) ವಯಸ್ಸಾಗುತ್ತದೆಯೇ? ತ್ವಚೆ ಸುಕ್ಕಾಗುತ್ತದೆಯೇ?
ಈ ಪ್ರಶ್ನೆಗೆ ಉತ್ತರ ಸರಳವಿಲ್ಲ. ದಿನಕ್ಕೊಂದೊಂದು ಅಧ್ಯಯನಗಳು ಹೊರಬಂದು, ಸ್ಪಷ್ಟ ಉತ್ತರ ಹುಡುಕುವುದೂ ಸುಲಭವಲ್ಲ ಎಂಬಂತಾಗಿದೆ. ಕಾರಣ, ಪ್ರಸಾದನಗಳು ಮತ್ತು ಸ್ಕಿನ್‌ಕೇರ್‌ ಹೆಸರಿನಲ್ಲಿ ಮಾರುಕಟ್ಟೆಗೆ ಬರುವ ವಸ್ತುಗಳು ಉಪಯೋಗಿಸುವ ತರಹೇವಾರಿ ರಾಸಾಯನಿಕಗಳು. ಇವುಗಳಲ್ಲಿ ಯಾವುದರ ಲಾಭ-ನಷ್ಟಗಳು ಎಂಥ ಚರ್ಮದ ಮೇಲೆ ಹೇಗಾಗುತ್ತದೆ; ದೀರ್ಘಕಾಲದ ಬಳಕೆಯಿಂದ ಅಡ್ಡ ಪರಿಣಾಮಗಳುಂಟೇ ಮುಂತಾದ ಯಾವುದೇ ಪ್ರಶ್ನೆಗಳಿಗೆ ಉತ್ತರ ನಿಖರವಾಗಿಲ್ಲ.
ಆದರೆ ತಜ್ಞರ ಪ್ರಕಾರ, ಉತ್ತಮ ಗುಣಮಟ್ಟದ ಪ್ರಸಾದನಗಳನ್ನು ಬಳಸುತ್ತಿದ್ದರೆ ಮತ್ತು ಅದಕ್ಕೆ ಸೂಕ್ತವಾದ ಕಾಳಜಿಯನ್ನು ತ್ವಚೆಗೆ ತೋರಿಸುತ್ತಿದ್ದರೆ, ಮೇಕಪ್‌ನಿಂದ ನೇರವಾಗಿ ಸಮಸ್ಯೆ ಬರುವುದು ಅನುಮಾನ. ಆಯಾ ಚರ್ಮಕ್ಕೆ ಹೊಂದುವಂಥ ವಸ್ತುಗಳನ್ನು ಒಳಗೊಂಡ ಪ್ರಸಾದನಗಳ ಬಗ್ಗೆ ಗಮನ ನೀಡಬೇಕು. ಉದಾ, ಎಣ್ಣೆ ತ್ವಚೆ ಇರುವವರು ತೈಲಾಧಾರಿತ ಮೇಕಪ್‌ ಬಳಸುತ್ತಿದ್ದರೆ ಸಮಸ್ಯೆ ಆಗಬಹುದು. ಒಣ ತ್ವಚೆಯವರಿಗೆ ಡ್ರೈ ಮೇಕಪ್‌ ಸೂಕ್ತವಲ್ಲ ಇತ್ಯಾದಿ. ಅದಲ್ಲದೆ, ಇನ್ನೂ ಕೆಲವು ಮೇಕಪ್‌ ಅಭ್ಯಾಸಗಳು ಚರ್ಮದ ಆರೋಗ್ಯವನ್ನು ಹಾಳು ಮಾಡಬಹುದು. ಸುಕ್ಕಾಗಿಸಿ, ಕಳೆಗುಂದಿಸಬಹುದು. ಏನವು?

Increases blood circulation and provides nutrients to all the organs of the face benefits of facial yoga

ಸ್ವಚ್ಛತೆ

ಪಾರ್ಟಿ ಮುಗಿಸಿ ಬರುತ್ತೀರಿ. ರಾತ್ರಿ ಸುಸ್ತಾಗಿದೆ. ಮೇಕಪ್‌ ತೆಗೆಯುವ ವ್ಯವಧಾನವಿಲ್ಲದೆ ಹಾಸಿಗೆಯಲ್ಲಿ ಉರುಳುವ ಮನಸ್ಸಾಗುತ್ತದೆ. ಖಂಡಿತ ಇದನ್ನು ಮಾಡಬೇಡಿ! ರಾತ್ರಿ ಮಲಗುವ ಮುನ್ನ ಮುಖದಲ್ಲಿರುವ ಪ್ರಸಾದನವನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಬೇಕು. ಚರ್ಮ ಸ್ವಚ್ಛವಾಗಿ ಉಸಿರಾಡುವಂತಿರಬೇಕು. ಇದಕ್ಕಾಗಿ ಕಠೋರವಾಗ ಕ್ಲೆನ್ಸರ್‌ಗಳಲ್ಲಿ ಬಳಸಬೇಡಿ. ಲಘುವಾದವು ಸಾಕಾಗುತ್ತದೆ. ನಂತರ ಸಾಮಾನ್ಯವಾಗಿ ಬಳಸುವ ಹೀಲಿಂಗ್‌ ಕ್ರೀಮ್‌ ಅಥವಾ ಮಾಯಿಶ್ಚರೈಸರ್‌ ಸಾಕಾಗುತ್ತದೆ.

Asian Woman with a Beautiful Face and Fresh Smooth Skin Is Dres Sesame Benefits

ಸೂಕ್ಷ್ಮರಂಧ್ರಗಳ ಕಾಳಜಿ

ಸಿಕ್ಕಾಪಟ್ಟೆ ಎಣ್ಣೆಭರಿತ ಪ್ರಸಾದನಗಳು ಕೆಲವೊಮ್ಮೆ ಚರ್ಮದ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಹಾಕುತ್ತವೆ. ಇಂಥವುಗಳ ಸ್ವಚ್ಛತೆಗೆ ಲಘುವಾದ ಕ್ಲೆನ್ಸರ್‌ಗಳು ಸಾಕಾಗದೆ ಹೋಗಬಹುದು. ಕಠೋರ ಕ್ಲೆನ್ಸರ್‌ಗಳು ಚರ್ಮದ ನೈಸರ್ಗಿಕ ತೈಲದಂಶವನ್ನೂ ತೆಗೆದು ಹಾಕುತ್ತವೆ. ಜೊತೆಗೆ, ಚರ್ಮದ ಮೇಲೆ ಕಪ್ಪು ಕಲೆಗಳು, ಮೊಡವೆಯಂಥ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹಾಗಾಗಿ ತೈಲಾಧಾರಿತ ಮೇಕಪ್‌ ಬಳಸುವಾಗ ಲಘುವಾದ್ದನ್ನೇ ಬಳಸಿದರೆ ಉತ್ತಮ

ಒಣ ಚರ್ಮ

ಕೆಲವು ಪ್ರಸಾದನಗಳು ಚರ್ಮವನ್ನು ಒಣಗಿಸಿಬಿಡುತ್ತವೆ. ಅದರಲ್ಲೂ ಒಣ ಚರ್ಮದವರಿಗೆ ಡ್ರೈಮೇಕಪ್‌ ಒಗ್ಗದೆ ಇರಬಹುದು. ಆಗ ಚರ್ಮದ ಮೇಲೆ ಸುಕ್ಕು ಮೂಡುವುದು, ನೆರಿಗೆಗಳು ಬರುವುದು ಸಾಮಾನ್ಯ. ವಯಸ್ಸಾದಂತೆ ಕಂಡರೂ ಅಚ್ಚರಿಯಿಲ್ಲ. ಹಾಗಾಗಿ ಈ ಬಗ್ಗೆ ಎಚ್ಚರವಿರಲಿ. ತ್ವಚೆಗೆ ಹೊಂದುವಂಥ ಮೇಕಪ್‌ ಮಾತ್ರವೇ ಬಳಸಿ. ದೇಹಕ್ಕೆ ನೀರು ಕಡಿಮೆಯಾಗದಿರುವುದೂ ಅಗತ್ಯ. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ.

Skin Health Cucumber Benefits

ಉಪವಾಸ!

ಅಂದರೆ ಹೊಟ್ಟೆಗಲ್ಲ… ಚರ್ಮಕ್ಕೆ! ವಿಷಯ ಮತ್ತೇನಲ್ಲ, ಆಗಾಗ ಚರ್ಮಕ್ಕೆ ಮೇಕಪ್‌ ಉಪವಾಸ ಮಾಡಿಸಿ. ಅಲೊವೇರಾ, ಲಘುವಾದ ನೈಸರ್ಗಿಕ ಎಣ್ಣೆಗಳಂಥವನ್ನು ಮಾತ್ರವೇ ಲೇಪಿಸಿಬಿಡಿ. ಇವುಗಳ ಹೊರತಾಗಿ ಇನ್ನೇನನ್ನೂ ಚರ್ಮಕ್ಕೆ ಹಚ್ಚದೆಯೆ, ಉಪವಾಸ ಮಾಡಿಸಿ. ಇದರಿಂದ ಸಂಪೂರ್ಣ ಗುಣವಾಗಿ ಮೊದಲಿನ ಸ್ಥಿತಿಗೆ ಬರುವುದಕ್ಕೆ ಅಗತ್ಯವಾದ ಕಾಲಾವಕಾಶ ಚರ್ಮಕ್ಕೆ ದೊರೆತಂತಾಗುತ್ತದೆ.

beautiful asian young woman eating healthy food Sleep Tips

ಆಹಾರ

ಚರ್ಮದ ಕಾಂತಿ ಹೆಚ್ಚಿ, ಕೊಲಾಜಿನ್‌ ಉತ್ಪಾದನೆಗೆ ಪ್ರೋತ್ಸಾಹ ದೊರೆಯುವುದಕ್ಕೆ ಸಮತೋಲಿತವಾದ ಆಹಾರ ಸೇವನೆಯ ಅಗತ್ಯವಿದೆ. ಎ, ಸಿ ಮತ್ತು ಇ ಜೀವಸತ್ವಗಳನ್ನು ಹೊಂದಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಕರಿದ, ಎಣ್ಣೆಯ ತಿಂಡಿಗಳು ಚರ್ಮದ ತಾಜಾತನ ಕುಗ್ಗಿಸುತ್ತವೆ. ಫೇಸ್‌ಪ್ಯಾಕ್‌ಗಳನ್ನು ಮಾಡುವಾಗ ನೈಸರ್ಗಿಕ ವಸ್ತುಗಳಿಂದ ಮನೆಯಲ್ಲೇ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಿ. ಇಲ್ಲಿಯೂ ಪೇಟೆಯಲ್ಲಿ ದೊರೆಯುವ ರಾಸಾಯನಿಕಗಳನ್ನು ಅವಲಂಬಿಸಬೇಡಿ.

Continue Reading

ವೈರಲ್ ನ್ಯೂಸ್

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

ಭಾರತದ ಪ್ರೀತಿಯ ಇಡ್ಲಿ, ಚನ್ನಾ ಮಸಾಲಾ, ರಾಜ್ಮಾ ಮತ್ತು ಚಿಕನ್ ಜಲ್ಫ್ರೇಜಿ (chicken jalfrezi) ಜೀವವೈವಿಧ್ಯದ (Biodiversity) ಮೇಲಿನ ದುಷ್ಪ್ರಪ್ರಭಾವದ ಪಟ್ಟಿಯಲ್ಲಿ ಟಾಪ್ 25ರಲ್ಲಿ ಇವೆಯಂತೆ.

VISTARANEWS.COM


on

Idli
Koo

ಹೊಸದಿಲ್ಲಿ: ನೀವು ಪ್ರತಿದಿನ ಇಡ್ಲಿ (Idli) ಸೇವಿಸುವವರಾಗಿದ್ದರೆ, ಅಥವಾ ರಾಜ್ಮಾ (Rajma) ಸವಿಯುವವರಾಗಿದ್ದರೆ, ನೀವು ಜೀವವೈವಿಧ್ಯತೆಗೆ (biodiversity) ಸ್ವಲ್ಪ ಹೆಚ್ಚಿನ ಹಾನಿಯನ್ನೇ ಉಂಟುಮಾಡುತ್ತಿದ್ದೀರಿ ಅಂತ ಅರ್ಥ ಮಾಡಿಕೊಳ್ಳಬೇಕು. ಇದನ್ನು ಹೇಳಿದ್ದು ನಾವಲ್ಲ, ಕೆಲವು ಜೀವವಿಜ್ಞಾನಿಗಳು.

ಹೌದು, ವಿಜ್ಞಾನಿಗಳು ಪ್ರಪಂಚದಾದ್ಯಂತದ 151 ಜನಪ್ರಿಯ ಭಕ್ಷ್ಯಗಳ ʼಜೀವವೈವಿಧ್ಯತೆಯ ಹೆಜ್ಜೆಗುರುತುʼ (biodiversity footprints) ನಿರ್ಣಯಿಸಿದ್ದಾರೆ. ಈ ಪಟ್ಟಿಯನ್ನು ನೋಡಿದರೆ ನಿಮಗೆ ಆಶ್ಚರ್ಯ ಆಗಬಹುದು. ಭಾರತದ ಪ್ರೀತಿಯ ಇಡ್ಲಿ, ಚನ್ನಾ ಮಸಾಲಾ, ರಾಜ್ಮಾ ಮತ್ತು ಚಿಕನ್ ಜಲ್ಫ್ರೇಜಿ (chicken jalfrezi) ಪರಿಸರದ ಮೇಲಿನ ದುಷ್ಪ್ರಪ್ರಭಾವದ ಪಟ್ಟಿಯಲ್ಲಿ ಟಾಪ್ 25ರಲ್ಲಿ ಇವೆಯಂತೆ.

ಸ್ಪ್ಯಾನಿಷ್ ಹುರಿದ ಭಕ್ಷ್ಯ ʼಲೆಚಾಜೊʼ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಕುರಿ ಮಾಂಸದ ಭಕ್ಷ್ಯ. ಇದರ ನಂತರ ನಾಲ್ಕು ಭಕ್ಷ್ಯಗಳು ಬ್ರೆಜಿಲಿಯನ್ ಮಾಂಸಕೇಂದ್ರಿತ ಅಡುಗೆಗಳು. ಸಂಶೋಧಕರು ಆರನೇ ಸ್ಥಾನದಲ್ಲಿ ಇಡ್ಲಿ ಮತ್ತು ಏಳನೇ ಸ್ಥಾನದಲ್ಲಿ ರಾಜ್ಮಾ ಕರಿಯನ್ನು ಇರಿಸಿದ್ದಾರೆ.

ವೈಜ್ಞಾನಿಕ ಜರ್ನಲ್ PLOS Oneನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಿಂಗಾಪುರ (Singapore) ವಿಶ್ವವಿದ್ಯಾನಿಲಯ ಪ್ರೊಫೆಸರ್‌ ಎಲಿಸ್ಸಾ ಚೆಂಗ್ ಮತ್ತು ಸಹೋದ್ಯೋಗಿಗಳು ಇದನ್ನು ಮಾಡಿದ್ದಾರೆ. ಇದು 151 ಭಕ್ಷ್ಯಗಳ ಪ್ರಭಾವವನ್ನು ವಿಶ್ಲೇಷಿಸಿದೆ. ಆಯಾಯ ದೇಶದ ಒಟ್ಟು ಉತ್ಪನ್ನದ ಆಧಾರದ ಮೇಲೆ ಅಗ್ರ 25ರ ಪಟ್ಟಿ ಮಾಡಲಾಗಿದೆ.

ಸಾಮಾನ್ಯವಾಗಿ ಸಸ್ಯಾಹಾರಿ ಅಡುಗೆಗಳು (Vegetarian dish) ಮಾಂಸದ ಅಡುಗೆಗಳಿಗಿಂತ ಕಡಿಮೆ ಜೀವವೈವಿಧ್ಯದ ಹೆಜ್ಜೆಗುರುತುಗಳನ್ನು ಹೊಂದಿವೆ. ಆದರೆ ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಕೆಲವು ಭಕ್ಷ್ಯಗಳು ಈ ಪಟ್ಟಿಯಲ್ಲಿ ಮೇಲಿರುವುದನ್ನು ಕಂಡು ಸ್ವತಃ ಸಂಶೋಧಕರು ಆಶ್ಚರ್ಯಚಕಿತರಾಗಿದ್ದಾರೆ.

ʼಜೀವವೈವಿಧ್ಯದ ಹೆಜ್ಜೆಗುರುತುʼ ಇದು ಜೀವವೈವಿಧ್ಯದ ಮೇಲೆ ನಮ್ಮ ಚಟುವಟಿಕೆಗಳ ಪ್ರಭಾವವನ್ನು ಅಳೆಯುವ ಮಾನದಂಡ. ಇಂಗಾಲದ ಹೆಜ್ಜೆಗುರುತನ್ನೂ (carbon footprints) ಹೀಗೇ ಅಳೆಯಲಾಗುತ್ತದೆ. ಇದು ಜೀವರಾಶಿಯ ಮೇಲೆ ನಮ್ಮ ಕ್ರಿಯೆಗಳ ವಿಶಾಲವಾದ ಪರಿಸರ ಪರಿಣಾಮಗಳನ್ನು ಪರಿಗಣಿಸುತ್ತದೆ.

ಇಡ್ಲಿ ಹೇಗೆ ಹಾನಿಕರ?

ಕೃಷಿಯಿಂದ ಪರಿಸರದ ಮೇಲಿನ ದುಷ್ಪರಿಣಾಮವು ಇದರ ಹಿನ್ನೆಲೆಯಲ್ಲಿದೆ. ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಬಳಸಲಾಗುವ ಭೂಮಿ ಸಾಮಾನ್ಯವಾಗಿ ಐತಿಹಾಸಿಕವಾಗಿ ಜೀವವೈವಿಧ್ಯ ಪ್ರದೇಶಗಳನ್ನುಅತಿಕ್ರಮಿಸಿದೆ. ಇದಕ್ಕಾಗಿ ಮಾಡಲಾದ ಭೂ ಪರಿವರ್ತನೆಗಳು ಹೆಚ್ಚಿನ ಹೆಜ್ಜೆ ಗುರುತನ್ನು ಮೂಡಿಸಿವೆ. ಭಾರತವು ಕಡಲೆ ಮತ್ತು ಕಿಡ್ನಿ ಬೀನ್ಸ್‌ನಂತಹ ದ್ವಿದಳ ಧಾನ್ಯಗಳ ಪ್ರಮುಖ ಉತ್ಪಾದಕ. ಜೈವಿಕ ವೈವಿಧ್ಯತೆಯ ಸಮಾವೇಶದ ಪ್ರಕಾರ, ಪ್ರಪಂಚದ ಒಟ್ಟಾರೆ ದ್ವಿದಳ ಧಾನ್ಯದ ಅಂದಾಜು 7-8%ರಷ್ಟನ್ನು ಬೆಳೆಯುತ್ತದೆ.

ಆಶ್ಚರ್ಯಕರ ಸಂಗತಿ ಎಂದರೆ, ಈ ಅಧ್ಯಯನದಲ್ಲಿ ʼಫ್ರೆಂಚ್ ಫ್ರೈʼ ಕಡಿಮೆ ಜೀವವೈವಿಧ್ಯದ ಹೆಜ್ಜೆಗುರುತನ್ನು ಹೊಂದಿದೆಯಂತೆ! ಇದರ ನಂತರ ಬ್ಯಾಗೆಟ್‌ಗಳು, ಟೊಮೆಟೊ ಸಾಸ್ ಮತ್ತು ಪಾಪ್‌ಕಾರ್ನ್ ಇವೆ. ಭಾರತೀಯ ಸನ್ನಿವೇಶದಲ್ಲಿ ಆಲೂ ಪರೋಟಾ 96ನೇ, ದೋಸೆ 103ನೇ ಮತ್ತು ಬೋಂಡಾಗಳು 109ನೇ ಸ್ಥಾನದಲ್ಲಿವೆ.

ಇದನ್ನೂ ಓದಿ: Trekking Restriction: ಚಾರಣಪ್ರಿಯರಿಗೆ ಶಾಕ್‌; ಆನ್‌ಲೈನ್‌ ಬುಕಿಂಗ್‌ ಇಲ್ಲದ ಜಾಗಗಳಿಗೆ ಪ್ರವೇಶವಿಲ್ಲ

Continue Reading

ಪ್ರಮುಖ ಸುದ್ದಿ

medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

Medical Negligence: ಹುಬ್ಬಳ್ಳಿಯ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವನ್ನು ಸ್ನಾನ ಮಾಡಿಸುವ ಸಂದರ್ಭದಲ್ಲಿ ಕುದಿಯುತ್ತಿದ್ದ ನೀರಿಗೆ ಅದ್ದಿದ್ದ ಪರಿಣಾಮ ಸುಟ್ಟ ಗಾಯಗಳಾಗಿತ್ತು. ಇದನ್ನು ಮರೆಮಾಚಲು ಆಸ್ಪತ್ರೆ ವೈದ್ಯರು ಚರ್ಮ ಕಾಯಿಲೆಯ ನೆಪ ಹೇಳಿದ್ದರು. ಈ ಪ್ರಕರಣ ಸಂಬಂಧ ಗ್ರಾಹಕರ ನ್ಯಾಯಾಲಯದಿಂದ ತೀರ್ಪು ಬಂದಿದ್ದು, ಆಸ್ಪತ್ರೆಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.

VISTARANEWS.COM


on

Medical negligence Hospital fined Rs 10 lakh for drowning newborn baby in hot water
Koo

ಧಾರವಾಡ: ನವಜಾತ ಶಿಶುವನ್ನು (Newborn baby in Hubballi) ಬಿಸಿನೀರಿನಲ್ಲಿ ಮುಳುಗಿಸಿದ ಪರಿಣಾಮ ತೀವ್ರ ಸುಟ್ಟ ಗಾಯಗಳಾಗಿದ್ದು, ಅದನ್ನು ಮರೆಮಾಚಲು ಚರ್ಮ ರೋಗದ (Skin disease) ಕಥೆ ಕಟ್ಟಿದ್ದ ಹುಬ್ಬಳ್ಳಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ (Multispeciality Hospital in Hubballi) ಗ್ರಾಹಕ ನ್ಯಾಯಾಲಯವು (Consumer Court) 10 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.

ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಅಜಿತ್ ಎಸ್.ಜೋಶಿ, ಡಾ.ಪ್ರಕಾಶ್ ಮಾಡಲಗೇರಿ ಮತ್ತು ಡಾ.ವಿದ್ಯಾ ಜೋಶಿ ಅವರಿಗೆ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರವನ್ನು ಪಾವತಿಸುವಂತೆ ಫೆಬ್ರವರಿ 15 ರಂದು ನಿರ್ದೇಶನ ನೀಡಿದೆ. ಕುಟುಂಬಕ್ಕೆ 7.5 ಲಕ್ಷ ರೂ.ಗಳನ್ನು ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ.

ಆಸ್ಪತ್ರೆಯ ಸಹಾಯಕಿ ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್‌ನಲ್ಲಿ ಕೂರಿಸಿದ್ದ ಪರಿಣಾಮ ಶಿಶುವಿಗೆ ಸುಟ್ಟ ಗಾಯವಾಗಿತ್ತು. ಈ ತಪ್ಪನ್ನು ಮರೆಮಾಚಲು ಮಗುವಿಗೆ ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಎಂಬ ಚರ್ಮ ರೋಗ ಇರಬಹುದು ಎಂದು ಆಸ್ಪತ್ರೆ ವೈದ್ಯರು ತಪ್ಪು ಮಾಹಿತಿಯನ್ನು ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಶಿಶುವಿನ ಪೋಷಕರು ಆಸ್ಪತ್ರೆ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದ ಮೊರೆಹೋಗಿದ್ದರು. ಈಗ ಪ್ರಕರಣದ ತೀರ್ಪು ಬಂದಿದ್ದು 10 ಲಕ್ಷ ರೂಪಾಯಿಯನ್ನು ಪರಿಹಾರದ ರೂಪವಾಗಿ ನೀಡುವಂತೆ ಆದೇಶಿಸಿದೆ.

ದಂಡ ಪಾವತಿಸಲು ತಪ್ಪಿದರೆ ವಾರ್ಷಿಕ ಶೇ.8ರ ಬಡ್ಡಿ

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ.ಹಿರೇಮಠ ಅವರು ಆದೇಶ ನೀಡಿದ್ದಾರೆ. ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ ಶೇ. 75 ಭಾಗ ಹಾಗೂ ಬಾಕಿ ಶೇ. 25 ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗಾಗಿ 10 ಲಕ್ಷ ಪರಿಹಾರವನ್ನು ನೀಡಬೇಕು. ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ. 8ರ ಬಡ್ಡಿಯನ್ನು ಲೆಕ್ಕಹಾಕಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ?

ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿ ಎಂಬುವವರು 2019 ಡಿಸೆಂಬರ್‌ 10ರಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಪತ್ನಿ ರೇಖಾ ಅವರನ್ನು ದಾಖಲಿಸಿದ್ದರು. ಅಂದೇ ರೇಖಾ ಅವರಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿತ್ತು.

ಡಿ.14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಬೇಕಿತ್ತು. ಆದರೆ, ಆ ವೇಳೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಬಿಸಿ ಬಿಸಿ ಕುದಿಯುವ ನೀರಿದ್ದ ಟಬ್‍ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು ಚರ್ಮ ಸುಲಿದಿತ್ತು. ಈ ವಿಷಯವನ್ನು ಮನಗಂಡ ಮಗುವಿನ ಪೋಷಕರು ಈ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಅಜಿತ್ ಜೋಶಿ, ಡಾ. ವಿದ್ಯಾ ಜೋಶಿ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ಆದರೆ, ಇದನ್ನು ಒಪ್ಪದ ಆಸ್ಪತ್ರೆಯವರು ಚರ್ಮ ರೋಗ ಎಂದು ಹೇಳಿತ್ತು. ಚರ್ಮರೋಗ ತಜ್ಞ ಡಾ. ರಂಜನ್ ಜೀವನ್ನವರ ಮಗುವನ್ನು ತಪಾಸಣೆ ಮಾಡಿ ಅದಕ್ಕೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಚರ್ಮ ರೋಗ ಇರಬಹುದು ಎಂದು ಹೇಳಿ, ಬೆಂಗಳೂರಿನ ಹ್ಯೂಮನ್‍ಜೆನಟಿಕ್ ಸೆಂಟರ್‌ನಲ್ಲಿ ಜೆನಟಿಕ್ ಪರೀಕ್ಷೆಗೆ ಒಳಪಡಿಸಲು ಸೂಚಿಸಿದರು ಎನ್ನಲಾಗಿದೆ.

ವಿನಯ ಹಂಜಿ ಅವರು ಪತ್ನಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿಸಿಕೊಂಡು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಎಸ್‌ಡಿಎಂ ಆಸ್ಪತ್ರೆಯಲ್ಲಿ ಇದು ಚರ್ಮ ರೋಗ ಅಲ್ಲ, ಸುಟ್ಟ ಗಾಯ ಎಂದು ದೃಢಪಡಿಸಿದ್ದಲ್ಲದೆ, ಮಗುವಿನ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಮಗು ಗುಣಮುಖವಾಗಿತ್ತು.

ಗ್ರಾಹಕರ ಆಯೋಗದ ಮೊರೆ ಹೋಗಿದ್ದ ವಿನಯ್

ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಸಲಹೆ ಬಗ್ಗೆ ಬೇಸರಗೊಂಡ ವಿನಯ ಹಂಜಿ, ಹುಬ್ಬಳ್ಳಿಯ ಸಿಟಿ ಕ್ಲಿನಿಕ್, ಏಳು ವೈದ್ಯರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಸ್ಪತ್ರೆಗೆ ವಿಮೆ ನೀಡಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯನ್ನು ಒಂಬತ್ತನೇ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.

ಇದನ್ನೂ ಓದಿ: BBMP Tax: ಏಪ್ರಿಲ್ 1ರಿಂದ ಬೆಂಗಳೂರಲ್ಲಿ ಹೊಸ ಆಸ್ತಿ ತೆರಿಗೆ; ಎಲ್ಲೆಲ್ಲಿ ದುಪ್ಪಟ್ಟು ಟ್ಯಾಕ್ಸ್? ಬಾಡಿಗೆದಾರರಿಗೆ ಭಾರಿ ಬರೆ!

ವಿಚಾರಣೆಯಲ್ಲಿ ಆಸ್ಪತ್ರೆ ನಿರ್ಲಕ್ಷ್ಯ ಸಾಬೀತು

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗ್ರಾಹಕರ ಆಯೋಗಕ್ಕೆ ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಚರ್ಮ ಕಾಯಿಲೆ ಇರಬಹುದು ಎಂದು ಸುಳ್ಳು ಹೇಳಿರುವುದು ಗೊತ್ತಾಗಿದೆ. “ಇದು ಆಸ್ಪತ್ರೆ ಸಿಬ್ಬಂದಿಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಸ್ಪಷ್ಟ ನಿರ್ಲಕ್ಷ್ಯ ಮತ್ತು ತಪ್ಪುಗಳ ಹೊರತಾಗಿಯೂ, ಆಸ್ಪತ್ರೆ ವೈದ್ಯರು, ಸುಟ್ಟ ಗಾಯಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಸಂತ್ರಸ್ತ ಮಗುವಿನ ಪೋಷಕರಾದ ದೂರುದಾರ, ಅವರ ಪತ್ನಿಯನ್ನು ಸಮಾಧಾನಪಡಿಸಬೇಕಾಗಿತ್ತು. ಹಾಗೆ ಮಾಡುವ ಬದಲು ಅವರು ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಚರ್ಮ ಕಾಯಿಲೆ ಎಂದು ಬಣ್ಣಿಸಲು ಪ್ರಯತ್ನಿಸಿದ್ದಾರೆ. ಇದು ಅಕ್ಷಮ್ಯವಾಗಿದೆ. ಇದರಿಂದ ಮಗುವಿನ ಪೋಷಕರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಳಲುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ 10ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Continue Reading
Advertisement
Rajya Sabha Elections Yogendra appointed as KRPP agent Reddy supports to Congress
ರಾಜಕೀಯ4 mins ago

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

Actor Darshan rally police deny permission
ಸ್ಯಾಂಡಲ್ ವುಡ್17 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು23 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ35 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ37 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ45 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ48 mins ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ1 hour ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Janardhana Reddy meets CM Siddaramaiah and DCM DK Shivakumar
ರಾಜಕೀಯ1 hour ago

Rajya Sabha Election: ಸಿಎಂ, ಡಿಸಿಎಂ ಭೇಟಿ ಮಾಡಿದ ಜನಾರ್ದನ ರೆಡ್ಡಿ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ?

Namma Metro Farmer
ಬೆಂಗಳೂರು1 hour ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಪ್ರವೇಶ ನಿರಾಕರಿಸಿದ ಮೆಟ್ರೋ; ನೆಟ್ಟಿಗರ ಆಕ್ರೋಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌