ನಾನು ಅವನಲ್ಲ ಅವಳು ಎಂದ ಎಲಾನ್ ಮಸ್ಕ್‌ ಕುಡಿ! ಲಿಂಗ ಪರಿವರ್ತನೆಗೆ ಮುಂದಾಗಿರೋದೇಕೆ? - Vistara News

ಲೈಫ್‌ಸ್ಟೈಲ್

ನಾನು ಅವನಲ್ಲ ಅವಳು ಎಂದ ಎಲಾನ್ ಮಸ್ಕ್‌ ಕುಡಿ! ಲಿಂಗ ಪರಿವರ್ತನೆಗೆ ಮುಂದಾಗಿರೋದೇಕೆ?

ಉದ್ಯಮಿ ಎಲಾನ್ ಮಸ್ಕ್ ಮಗ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ಗಂಡಾಗಿ ಹುಟ್ಟಿ, ಇದೀಗ ಹೆಣ್ಣಾಗಿ ತನ್ನ ಲಿಂಗ ಬದಲಾವಣೆ ಪ್ರಕ್ರಿಯೆಯನ್ನು ಪುರಷ್ಕರಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

VISTARANEWS.COM


on

ಎಲಾನ್‌ ಮಸ್ಕ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್: ಎಲಾನ್‌ ಮಸ್ಕ್‌ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಸ್ಪೇಸ್‌ ಎಕ್ಸ್‌, ಟೆಸ್ಲಾ ಸಂಸ್ಥೆಗಳ ಸಂಸ್ಥಾಪಕ, ಇತ್ತೀಚೆಗಷ್ಟೇ ಟ್ವಿಟರ್‌ ಖರೀದಿಯನ್ನೂ ಮಾಡಿರುವ ಜಗತ್ತಿನ ಹೆಸರಾಂತ ಉದ್ಯಮಿ ಸದಾ ಏನಾದರೊಂದು ಮಾಡುತ್ತ ಸುದ್ದಿಯಲ್ಲಿರುವವರು.

ಆದ್ರೆ ಇದೀಗ ಎಲಾನ್‌ ಮಸ್ಕ್‌ ಪುತ್ರ ಸುದ್ದಿಯಲ್ಲಿದ್ದಾರೆ. ಎಲಾನ್‌ ಮಗ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್‌ ತನ್ನ ಹೆಸರನ್ನು ಬದಲಾಯಿಸುವಂತೆ ಮತ್ತು ಲಿಂಗ ಬದಲಾವಣೆಯನ್ನು ಘೋಷಿಸುವಂತೆ ಕೋರಿದ್ದಾರೆ ಎನ್ನಲಾಗುತ್ತಿದೆ.

ಎಲಾನ್‌ ಮಸ್ಕ್‌ಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ಕ್ಸೇವಿಯರ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ 18 ವರ್ಷ ತುಂಬಿದ ನಂತರ ಕ್ಸೇವಿಯರ್, ಲಾಸ್ ಏಂಜಲೀಸ್‌ನ ನ್ಯಾಯಾಲದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಹೆಸರನ್ನು “ವಿವಿಯನ್ ಜೆನ್ನಾ ವಿಲ್ಸನ್” ಎಂದು ಬದಲಾಯಿಸಲು ನ್ಯಾಯಾಲಯವನ್ನು ಕೋರಿದ್ದಾರೆ ಮತ್ತು ತಮ್ಮ ಲಿಂಗವನ್ನು ಸ್ತ್ರೀ ಎಂದು ಗುರುತಿಸಲು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.
ಕ್ಸೇವಿಯರ್ ಮಸ್ಕ್ ಸಲ್ಲಿಸಿದ ದಾಖಲೆಗಳಲ್ಲಿ “ನಾನು ಇನ್ನು ಮುಂದೆ ನನ್ನ ಜೈವಿಕ ತಂದೆಯೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಿಕೊಳ್ಳಲು ಹಾಗೂ ವಾಸಿಸಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ. ಇದರೊಂದಿಗೆ ಎಲಾನ್‌ ಜತೆಗಿನ ಸಂಬಂಧವನ್ನು ಕಡಿದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಎಲಾನ್‌ ಮಸ್ಕ್‌ 2002ರಲ್ಲಿ ಕೆನಡಾದ ಲೇಖಕಿ ಜಸ್ಟಿನ್‌ ವಿಲ್ಸನ್‌ ಅವರನ್ನು ಮದುವೆ ಆಗಿದ್ದರು. ಅವರಿಗೆ ಅವಳಿ ಮಕ್ಕಳಾಗಿ ಕ್ಸೇವಿಯರ್ ಅಲೆಕ್ಸಾಂಡರ್ ಮತ್ತು ಗ್ರಿಫಿನ್‌ ಜನಿಸಿದ್ದರು. 2008ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡರು. ಸದ್ಯ ಕ್ಸೇವಿಯರ್‌ ಲಿಂಗ ಪರಿವರ್ತನಾ ಪ್ರಕ್ರಿಯೆಗೆ ಒಳಗಾಗುವುದರ ಜತೆಗೆ ತಂದೆಯೊಂದಿಗಿನ ಸಂಬಂಧವನ್ನೂ ಕಡಿದುಕೊಳ್ಳುವ ಹಂತದಲ್ಲಿದ್ದಾರೆ. ಸದ್ಯ ನ್ಯಾಯಾಲಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿ ಮಾಡಿದೆ.‌ ‌

ದನ್ನೂ ಓದಿ: ಎಲಾನ್ ಮಸ್ಕ್‌ಗೆ ಮಾರಾಟಕ್ಕೆ ಸಂಬಂಧಿಸಿ ಷೇರುದಾರರ ಮತದಾನಕ್ಕೆ ಟ್ವಿಟರ್‌ ನಿರ್ಧಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Mental Health Awareness Month: ಮಾನಸಿಕ ಆರೋಗ್ಯ ಜಾಗೃತಿ ಮಾಸ; ಮತ್ತೆ ಮಗುವಿನಂತಾಗಲು ಪ್ರಯತ್ನಿಸಿ!

ನಮ್ಮೊಳಗಿನ ಮಗು ಅಥವಾ ಇನ್ನರ್‌ ಚೈಲ್ಡ್‌ (Mental Health Awareness Month) ಎಂದರೇನು? ಅದರೊಂದಿಗೆ ನಂಟು ಬೆಸೆಯಲು ಸಾಧ್ಯವೇ? ಎಂದೋ ಕಳೆದ ಬಾಲ್ಯ ಈಗ ಯಾಕೆ ಬರಬೇಕು… ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಮೇ ತಿಂಗಳನ್ನು ಮಾನಸಿಕ ಆರೋಗ್ಯ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಈ ಕುರಿತ ಸಲಹೆಗಳು ಇಲ್ಲಿವೆ.

VISTARANEWS.COM


on

Mental Health Awareness Month
Koo

ಮತ್ತೆ ಮಗುವಿನಂತಾಗಲು (Mental Health Awareness Month) ಸಾಧ್ಯವೇ? ಪ್ರಶ್ನೆಯೇ ಬಾಲಿಶ ಎನಿಸಬಹುದು. ಆದರೆ ನಮ್ಮ ಒಳಗಿನ ಮಗುವಿನೊಂದಿಗೆ ಮತ್ತೆ ನಂಟು ಬೆಸೆಯಲು ಸಾಧ್ಯವಾದರೆ ಮಾನಸಿಕ ಸ್ವಾಸ್ಥ್ಯ ಸಾಧಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದಂತಾಗುತ್ತದೆ ಎನ್ನುವುದು ಸ್ವಾಸ್ಥ್ಯ ತಜ್ಞರ ಮಾತು. ನಮ್ಮೊಳಗಿನ ಮಗು ಅಥವಾ ಇನ್ನರ್‌ ಚೈಲ್ಡ್‌ ಎಂದರೇನು? ಅದರೊಂದಿಗೆ ನಂಟು ಬೆಸೆಯಲು ಸಾಧ್ಯವೇ? ಎಂದೋ ಕಳೆದ ಬಾಲ್ಯ ಈಗ ಯಾಕೆ ಬರಬೇಕು… ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಮೇ ತಿಂಗಳನ್ನು ಮಾನಸಿಕ ಆರೋಗ್ಯ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ.

Mental health image. Various emotion and maind.

ಬಾಲ್ಯದ ನಂಟೇಕೆ?

ನಮ್ಮೆಲ್ಲರ ಬಾಲ್ಯದ ಅನುಭವಗಳೇ ನಮ್ಮನ್ನು ಭವಿಷ್ಯದಲ್ಲಿ ರೂಪಿಸುವಂಥವು. ಬಾಲ್ಯ ಸಿಹಿಯಾಗಿದ್ದರೆ ಮುಂದಿನ ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚಿರುವಂತೆಯೇ, ಕಹಿ ಬಾಲ್ಯಗಳು ಭವಿಷ್ಯವನ್ನು ದಿಕ್ಕೆಡಿಸಬಹುದು ಎಂಬುದೂ ನಿಜ. ಹಾಗಾಗಿ ಎಳೆತನದ ದಿನಗಳೊಂದಿಗೆ ಮತ್ತೆ ನಂಟು ಬೆಸೆಯುವ ಅಗತ್ಯವನ್ನು ಮಾನಸಿಕ ಸ್ವಾಸ್ಥ್ಯದ ತಜ್ಞರು ಪುನರುಚ್ಚರಿಸುತ್ತಾರೆ. ಒಳ್ಳೆಯ ಅನುಭವಗಳು ಮರುಕಳಿಸಿದರೆ ಬದುಕಿನ ಸೊಗಸು ಮತ್ತೆ ಬಂದಂತೆ. ಒಂದೊಮ್ಮೆ ಅನುಭವಗಳು ಕಹಿಯಾಗಿದ್ದರೆ, ಆ ನೆನಪುಗಳನ್ನು ತೊಡೆಯುವುದು ಸಹ ʻಹೀಲಿಂಗ್‌ʼ ಎನ್ನುವ ಪ್ರಕ್ರಿಯೆಯ ಭಾಗ. ಅದಲ್ಲದೆ ಇನ್ನೇನು ಪ್ರಯೋಜನ?

Woman Meditating in the Workplace Sitting in Front of a Laptop Practicing Stress Relief Exercises Diabetes Control

ಒತ್ತಡ ನಿವಾರಣೆ

ಇಂದಿನ ಪ್ರೆಷರ್‌ ಕುಕ್ಕರ್‌ನಂಥ ಬದುಕಿನಲ್ಲಿ ಬೇಡದ್ದನ್ನೇ ತಲೆಯಲ್ಲಿ ತುಂಬಿಸಿಕೊಳ್ಳುವುದು, ಬದುಕಿನ ಹೊರೆಯನ್ನು ಹೆಚ್ಚಿಸುತ್ತದೆ. ಇದರಿಂದ ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್‌ಗಳ ಸ್ರವಿಸುವಿಕೆ ಹೆಚ್ಚುತ್ತದೆ. ಈ ಕಾರ್ಟಿಸೋಲ್‌ ಪ್ರಮಾಣವನ್ನು ಕಡಿಮೆ ಮಾಡದಿದ್ದರೆ, ಅದರ ಅಡ್ಡ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತದೆ. ಬದಲಿಗೆ, ಮನಸ್ಸನ್ನು ಉಲ್ಲಸಿತವಾಗಿ ಇರಿಸಲು ಯತ್ನಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿದೆ.,ಕೆಲವೊಮ್ಮೆ ಉದ್ಯೋಗದ ಒತ್ತಡಗಳು ಮುಂದೆ ಯೋಚಿಸಲೇ ಆಗದಷ್ಟು ತಲೆಯನ್ನು ಖಾಲಿ ಮಾಡಿಬಿಡುತ್ತವೆ. ಇಂಥ ಸಂದರ್ಭದಲ್ಲಿ ಮನಸ್ಸಿಗೆ ಮುದ ನೀಡುವ ವಿಷಯಗಳ ಬಗ್ಗೆ ಯೋಚಿಸುವುದು ಮತ್ತು ಎಳೆತನದ ಹುಡುಗಾಟಿಕೆಗಳೊಂದಿಗೆ ಬೆಸೆಯುವುದು, ಹೊಸ ಆಲೋಚನೆಗಳಿಗೆ ದಾರಿ ಮಾಡುತ್ತವೆ. ಮಕ್ಕಳು ಎಂದಿಗೂ ಬದುಕುವುದು ವರ್ತಮಾನದಲ್ಲಿ. ನಿನ್ನೆಯದ್ದು ಅವುಗಳಿಗೆ ನೆನಪಿರುವುದಿಲ್ಲ, ನಾಳೆಯದ್ದು ಗೊತ್ತಿರುವುದಿಲ್ಲ. ಹಾಗಾಗಿ ತಾವಿದ್ದಂತೆಯೇ ತಮ್ಮನ್ನು ಖುಷಿಯಿಂದ ಒಪ್ಪಿಕೊಂಡೂ ಬಿಡುತ್ತವೆ ಆ ಮಕ್ಕಳು. ತಾನು ಅವರಂತೆ ಇಲ್ಲ, ಇವರಲ್ಲಿ ಇರುವಂಥದ್ದು ತನಗಿಲ್ಲ ಎಂದೆಲ್ಲ ಕೊರಗುವುದಿಲ್ಲ. ಇದನ್ನೇ ಮರಳಿ ಕಲಿಯಬೇಕು ನಾವು.

ಇದಕ್ಕಾಗಿ ಏನು ಮಾಡಬೇಕು?

ಹ್ಯಾಪಿ ಹಾರ್ಮೋನುಗಳು ಬಿಡುಗಡೆಯಾಗುವ ದಾರಿಗಳನ್ನು ಹುಡುಕಿ. ಎಳೆತನದ ಆಟಗಳನ್ನು ನೆನಪಿಸಿಕೊಳ್ಳಿ. ಚನ್ನೆಮಣೆ, ಚೌಕಾಬಾರ ಆಡಿ ಗೊತ್ತಿದ್ದರೆ ಸರಿ. ಅದಿಲ್ಲದಿದ್ದರೆ ಮನೆಯ ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ, ಅದಲುಬದಲು ಮುಂತಾದ ಹುಡುಗಾಟದ ಆಟಗಳು ಮನಸ್ಸಿನ ಉಲ್ಲಾಸ ಹೆಚ್ಚಿಸಬಲ್ಲವು. ಸಾಧ್ಯವಾದಷ್ಟು ಹೊತ್ತು ಹಿಂದಿನ-ಮುಂದಿನ ಕ್ಷಣಗಳನ್ನು ಮರೆತು ಬದುಕಲು ಪ್ರಯತ್ನಿಸಿ. ಇದರಿಂದ ಒತ್ತಡ ಕಡಿಮೆ ಮಾಡಲು ನಿಶ್ಚಿತವಾಗಿ ಸಾಧ್ಯವಿದೆ.

ಕಲಿಯಿರಿ

ಎಂದೋ ಏನೋ ಕಲಿಯುವ ಆಸೆ ಮನದಲ್ಲಿ ಇನ್ನೂ ಸುಪ್ತವಾಗಿ ಕುಳಿತಿದೆಯೇ? ಗಿಟಾರ್‌, ಡ್ರಮ್‌, ಪೇಟಿಂಗ್‌ ಅಥವಾ ಏನಾದರೂ ಸರಿ, ಕಲಿಯಬೇಕೆಂಬ ಬಯಕೆ ಇದ್ದರೆ ಅದಕ್ಕೆ ವಯಸ್ಸಿನ ಹಂಗನ್ನು ಅಂಟಿಸಬೇಡಿ. ಆವತ್ತು ಆಗದಿದ್ದರೇನು, ಇವತ್ತಾದರೂ ಸಾಧ್ಯವಾಗುತ್ತಿದೆ ಎಂಬ ಬಗ್ಗೆ ಖುಷಿ, ಹೆಮ್ಮೆ- ಎರಡೂ ಇರಲಿ.

Mental health issues concept.

ನಿಸರ್ಗದ ಸಾಂಗತ್ಯ

ಅದಕ್ಕಾಗಿ ಹಿಮಾಲಯಕ್ಕೇ ಚಾರಣ ಹೋಗಬೇಕೆಂದಿಲ್ಲ. ಯಾವುದಾದರೂ ಬೀಚಿನ ಮರಳಿನಲ್ಲಿ ಮನೆ ಕಟ್ಟುವುದು, ಬೀಚ್‌ನಲ್ಲಿ ಚೆಂಡು ಆಡುವುದು, ರಾತ್ರಿ ಮಹಡಿ ಮೇಲೆ ಮಲಗಿ ನಕ್ಷತ್ರ ಎಣಿಸುವುದು, ಪಾಟಿನಲ್ಲಿ ಒಂದಿಷ್ಟು ಬೀಜ ಬಿತ್ತಿ ದಿನಾ ಅದು ಮೊಳೆಯುವುದನ್ನು ಗಮನಿಸುವುದು- ಇಂಥ ಸರಳ ಚಟುವಟಿಕೆಗಳು ಮನಸ್ಸನ್ನು ಆರೋಗ್ಯಪೂರ್ಣವಾಗಿ ಇರಿಸುತ್ತವೆ.
ನೆನಪಿಡಿ, ಈ ಯಾವುವೂ ನಮ್ಮ ಗುರಿಯಲ್ಲ, ಗುರಿ ತಲುಪುವ ದಾರಿ. ನಮ್ಮ ಗುರಿ ಮನಸ್ಸಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದು, ಈ ಮೂಲಕ ಬದುಕಿನ ಸ್ವಾಸ್ಥ್ಯವನ್ನು ವೃದ್ಧಿಸಿಕೊಳ್ಳುವುದು. ಇದು ಜಾಗೃತಿ ಮಾಸದಲ್ಲಿ ಮಾತ್ರವಲ್ಲ, ಜೀವನದುದ್ದಕ್ಕೂ ನಡೆಸಿಕೊಂಡು ಬರಬೇಕಾದ ಪ್ರಕ್ರಿಯೆ.

Continue Reading

ವಿದೇಶ

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Pig Kidney: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ. ಆದರೆ ಅವರ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

VISTARANEWS.COM


on

Pig Kidney
Koo

ಬೋಸ್ಟನ್: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ (Pig Kidney) ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ (Rick Slayman) ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ರಿಕ್ ಸ್ಲೇಮನ್ ಅವರಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ʼʼಹಂದಿ ಮೂತ್ರಪಿಂಡವು ಕನಿಷ್ಠ ಎರಡು ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ನಂಬಿದ್ದೆವು. ಆದರೆ ರಿಕ್ ಸ್ಲೇಮನ್ ಅವರ ಹಠಾತ್‌ ನಿಧನ ಆಘಾತ ತಂದಿದೆʼʼ ಎಂದು ವೈದ್ಯರು ತಿಳಿಸಿದ್ದಾರೆ.

“ರಿಕ್ ಸ್ಲೇಮನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ. ಸ್ಲೇಮನ್ ಅವರನ್ನು ವಿಶ್ವಾದ್ಯಂತದ ಕಿಡ್ನಿ ಸಮಸ್ಯೆ ಇರುವವರ ಭರವಸೆ ಎಂದೇ ಪರಿಗಣಿಸಲಾಗುತ್ತದೆ. ಸ್ಲೇಮನ್ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತಿದ್ದೇವೆʼʼ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಸ್ಲೇಮನ್ ಅವರಿಗೆ ಮಾರ್ಚ್ 16ರಂದು ಶಸ್ತ್ರಚಿಕಿತ್ಸೆ ನಡೆಸಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಟೈಪ್ 2 ಮಧುಮೇಹಿಯಾಗಿದ್ದ ಅವರು ಈ ಹಿಂದೆ 2018ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದಾಗ್ಯೂ ಐದು ವರ್ಷಗಳ ನಂತರ ಕಸಿ ಮಾಡಿಸಿಕೊಂಡಿದ್ದ ಮೂತ್ರಪಿಂಡ ವಿಫಲವಾಗಲು ಪ್ರಾರಂಭಿಸಿತು ಮತ್ತು ಅಂದಿನಿಂದ ಅವರು ಡಯಾಲಿಸಿಸ್‌ನಲ್ಲಿದ್ದರು.

ಕೊನೆಗೆ ಅವರು ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದ್ದರು. ಈ ವೇಳೆ ಅವರು ಇದು ತಾನು ಎದುರಿಸುವಂತಹ ಸಮಸ್ಯೆ ಇರುವವರಿಗೆ ಭರವಸೆಯ ಬೆಳಕನ್ನು ಒದಗಿಸಲಿದೆ ಎಂದು ಹೇಳಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವೈದ್ಯರ ಪ್ರಯೋಗ ಯಶಸ್ವಿಯಾಗಿತ್ತು. ಆ ಮೂಲಕ ರಿಕ್ ಸ್ಲೇಮನ್ ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಬಳಿಕ ಮನೆಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ʼʼಸ್ಲೇಮನ್‌ಗೆ ಕಸಿ ಮಾಡಲಾದ ಹಂದಿಯ ಮೂತ್ರಪಿಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದು ಹಾಕುತ್ತಿದ್ದು, ಮೂತ್ರವನ್ನು ಉತ್ಪಾದಿಸುತ್ತದೆ. ದೇಹದ ದ್ರವಗಳನ್ನು ಸಮತೋಲನಗೊಳಿಸುತ್ತದೆʼʼ ಎಂದು ಅಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಇದರಿಂದ ಮುಂಬರುವ ದಿನಗಳಲ್ಲಿ ಮಾನವನ ಮೇಲೆ ಪ್ರಾಣಿಗಳ ಅಂಗಾಂಗ ಕಸಿಯ ಪ್ರಯೋಗದ ಹೊಸ ಯುಗವೊಂದು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಈ ಹಿಂದೆ ಹಂದಿಯ ಹೃದಯವನ್ನು ಕಸಿ ಮಾಡಿದ ಕೆಲವೇ ವಾರಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಈ ಪ್ರಯೋಗ ಭರವಸೆ ಮೂಡಿತ್ತು.

ಇದನ್ನೂ ಓದಿ: Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Continue Reading

ಮಹಿಳೆ

Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

ಎಲ್ಲರ ಬದುಕಿನಲ್ಲಿ ತಾಯಿಯಾಗಿ ಒಬ್ಬಳು ಇದ್ದೇ ಇರುತ್ತಾಳೆ. ಅದು ಹೆಂಡತಿಯಾಗಿರಬಹುದು, ಸಹೋದರಿಯಾಗಿರಬಹುದು ಅಥವಾ ಜನ್ಮವಿತ್ತ, ಸಾಕಿ ಸಲಹಿದ ತಾಯಿಯಾಗಿರಬಹುದು. ಇಲ್ಲಿ ಅವರ ಸ್ಥಾನಕ್ಕಿಂತ ಅವರು ಮಾಡುವ ಕರ್ತವ್ಯಕ್ಕೆ ಗೌರವ ಕೊಡಲೇಬೇಕು. ಇದಕ್ಕಾಗಿ ವರ್ಷದಲ್ಲೊಮ್ಮೆ ತಾಯಂದಿರ ದಿನವನ್ನು (Mother’s Day) ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಇಂದು ಈ ದಿನ ವಿಶೇಷವಾಗಿದೆ.

VISTARANEWS.COM


on

By

Mother's Day
Koo

ತಾಳ್ಮೆ, ಸಹನೆ, ಶಾಂತಿ, ಪರಸ್ಪರ ಹೊಂದಾಣಿಕೆ ಇವನ್ನೆಲ್ಲ ಹೆಣ್ಣು (girl) ಮಕ್ಕಳಿಗೆ (child) ಯಾರೂ ಕಲಿಸಬೇಕಾಗಿಲ್ಲ. ಅದು ಅವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಎಂತಹ ಕಠಿಣ ಪರಿಸ್ಥಿತಿಯಾಗಿರಲಿ ತಾಯಿ (Mother’s Day) ಅದನ್ನು ಎದುರಿಸಲು ಕ್ಷಣ ಮಾತ್ರದಲ್ಲಿ ಸಜ್ಜಾಗುತ್ತಾಳೆ. ತಮ್ಮ ಮಕ್ಕಳ ವಿಚಾರಕ್ಕೆ ಬಂದರೆ ಆಕೆ ಯಾವುದೇ ತ್ಯಾಗಕ್ಕೂ ಸಜ್ಜಾಗುತ್ತಾಳೆ, ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಸರಿ ಮಕ್ಕಳನ್ನು ಎಲ್ಲ ರೀತಿಯ ಸಂಕಷ್ಟದಿಂದ ಪಾರು ಮಾಡುತ್ತಾಳೆ.

ಎಲ್ಲರಿಗೂ ತಮ್ಮ ತಾಯಿಯ ಬಗ್ಗೆ ಹೇಳಬೇಕಾದ ಸಾವಿರಾರು ವಿಷಯಗಳಿರುತ್ತವೆ. ಇದಕ್ಕೆ ತಾಯಂದಿರ ದಿನಕ್ಕಿಂತ ಉತ್ತಮ ದಿನ ಬೇರೆ ಯಾವುದಿದೆ. ಹೆಣ್ಣು ತಾಯಿಯಾಗಿ, ಅಕ್ಕನಾಗಿ, ಅಜ್ಜಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಹೀಗಾಗಿಯೇ ತಾಯಂದಿರ ದಿನದ ಈ ಶುಭ ಸಂದರ್ಭದಲ್ಲಿ ಆಕೆಗೊಂದು ಶುಭ ಸಂದೇಶ ಕಳುಹಿಸಲು ಮರೆಯದಿರಿ.

ಸಿಹಿ ಶುಭಾಶಯಗಳೊಂದಿಗೆ ಆಕೆಯನ್ನು ಗೌರವಿಸುವ ಜೊತೆಗೆ ಸುಂದರವಾದ ಹೂಗೊಂಚಲು, ಅರ್ಥಪೂರ್ಣವಾದ ಉಡುಗೊರೆ ಅಥವಾ ಅವಳೊಂದಿಗೆ ಸಮಯ ಕಳೆಯುವ ಮೂಲಕ ಮೆಚ್ಚುಗೆಯನ್ನು ತೋರಿಸಿ. ಇದು ಯಾವಾಗಲೂ ಆಕೆಯನ್ನು ಸಂತೋಷದಲ್ಲಿ ಇರುವಂತೆ ಮಾಡುತ್ತದೆ ಮತ್ತು ಸದಾ ಆಕೆಯ ನೆನಪಿನಲ್ಲಿ ಇರುವಂತೆ ಮಾಡುತ್ತದೆ.

ತಾಯಂದಿರ ದಿನದ ವಿಶೇಷವಾಗಿ ತಾಯಿಗೆ ವಿಶೇಷ ಅಡುಗೆ ಮಾಡಿ ಬಡಿಸಿ, ಇಲ್ಲವಾದರೆ ಅವರ ನೆಚ್ಚಿನ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಿಸಿ. ಇದರಿಂದ ಸಾಕಷ್ಟು ಸಮಯವನ್ನು ಆಕೆಗೆ ನೀವು ಕೊಟ್ಟಂತಾಗುತ್ತದೆ.


ತಾಯಂದಿರ ದಿನ ಯಾವಾಗ?

ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ರಜಾ ದಿನದಲ್ಲಿ ಇದು ಬರುವುದರಿಂದ ಈ ದಿನವನ್ನು ಹೆಚ್ಚು ವಿಶೇಷವಾಗಿ ಆಚರಿಸಬಹುದಾಗಿದೆ.

ತಾಯಿಯಂದಿರ ದಿನವು ಈ ಬಾರಿ ಮೇ 12ರಂದು ಭಾನುವಾರ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಈ ದಿನವನ್ನು ಬೇರೆಬೇರೆ ದಿನಗಳಂದು ಆಚರಿಸಲಾಗುತ್ತಿದೆ.

ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಇಟಲಿ, ಫಿನ್‌ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ಟರ್ಕಿ ಯಲ್ಲಿ ಈ ಬಾರಿ ಮೇ 12ರಂದು ಅಮ್ಮಂದಿರನ್ನು ಗೌರವಿಸಲಾಗುತ್ತಿದೆ. ಯುಕೆಯಲ್ಲಿ ಮಾರ್ಚ್‌ನಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಮೆಕ್ಸಿಕೋ ಈ ವರ್ಷ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಲಾಗಿದೆ. ಥೈಲ್ಯಾಂಡ್ ಆಗಸ್ಟ್ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಯಾಕೆಂದರೆ ಈ ದಿನ ಇಲ್ಲಿ ರಾಣಿ ಸಿರಿಕಿಟ್ ಅವರ ಜನ್ಮದಿನವಾಗಿದೆ.

ಯಾಕೆ ಆಚರಣೆ ?

ತಾಯಂದಿರ ದಿನದ ಆಚರಣೆಯು 1800 ರ ದಶಕದ ಅಂತ್ಯದಲ್ಲಿ ಪ್ರಾರಂಭಿಸಲಾಯಿತು. ಹಲವಾರು ವಿಭಿನ್ನ ಘಟನೆಗಳ ಸಂಯೋಜನೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಸಮುದಾಯ ಸಂಘಟಕಿ ಅನ್ನಾ ಮಾರಿಯಾ ರೀವ್ಸ್ ಜಾರ್ವಿಸ್ ಅವರು ಮೊದಲ ಬಾರಿಗೆ ತಾಯಂದಿರ ದಿನದ ಪ್ರಸ್ತಾಪವನ್ನು ಮುಂದಿಟ್ಟರು.

ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಮಹಿಳಾ ಕ್ಲಬ್‌ಗಳ ಸ್ಥಾಪಕರಾದ ಜಾರ್ವಿಸ್ ಅವರು 1868 ರಲ್ಲಿ ತಾಯಂದಿರ ಸ್ನೇಹ ದಿನವನ್ನು ಆಯೋಜಿಸಿದರು, ಇದು ಅಂತರ್ಯುದ್ಧದ ಅನಂತರ ಒಕ್ಕೂಟ ಮತ್ತು ಒಕ್ಕೂಟದ ಸೈನಿಕರ ತಾಯಂದಿರನ್ನು ಸಾಮರಸ್ಯದಿಂದ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿತ್ತು.

ಬಳಿಕ ಎರಡು ವರ್ಷಗಳ ಅನಂತರ 1870 ರಲ್ಲಿ ಜೂಲಿಯಾ ವಾರ್ಡ್ ಹೋವ್ ಅವರು ವಿಶ್ವ ಶಾಂತಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತಾಯಿಯ ದಿನದ ಘೋಷಣೆಯನ್ನು ಮಾಡಿ ಜೂನ್‌ನಲ್ಲಿ ತಾಯಿಯ ದಿನವನ್ನು ಆಚರಿಸಲು ಒತ್ತಾಯಿಸಿದರು. ಆ ಸಮಯದಲ್ಲಿಯೇ ತಾಯಂದಿರನ್ನು ಗೌರವಿಸಲು ಕೆಲವು ರೀತಿಯ ಕಲ್ಪನೆಯನ್ನು ಅವರು ಮಂಡಿಸಿದ್ದರು. ಆದರೆ ಅದು ಸುಮಾರು 35 ವರ್ಷಗಳವರೆಗೆ ಸಾಧ್ಯವಾಗಲಿಲ್ಲ.

1905 ರಲ್ಲಿ ಜಾರ್ವಿಸ್ ಅವರ ಮರಣದ ಅನಂತರ ಅವರ ಮಗಳು ಅನ್ನಾ ಪತ್ರ ಬರೆಯುವ ಅಭಿಯಾನವನ್ನು ಪ್ರಾರಂಭಿಸಿದರು. ತನ್ನ ತಾಯಿಯ ಕೆಲಸವನ್ನು ಮಾತ್ರವಲ್ಲದೆ ಎಲ್ಲಾ ತಾಯಂದಿರಿಗೆ ಮತ್ತು ಅವರ ಮಕ್ಕಳ ಪರವಾಗಿ ಅವರು ಮಾಡುವ ತ್ಯಾಗವನ್ನು ಗೌರವಿಸಲು ತಾಯಂದಿರ ದಿನಾಚರಣೆಗೆ ಕರೆ ನೀಡಿದರು.

ತಾಯಂದಿರ ದಣಿವರಿಯದ ಕೆಲಸವನ್ನು ಗೌರವಿಸುವ ಸಲುವಾಗಿ ಅಧ್ಯಕ್ಷ ವುಡ್ರೊ ವಿಲ್ಸನ್ ಅವರು 1914 ರಲ್ಲಿ ಘೋಷಣೆಗೆ ಸಹಿ ಹಾಕಿ ಅಧಿಕೃತವಾಗಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಘೋಷಿಸಿದರು.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ಪ್ರಾರಂಭದಲ್ಲಿ ತಾಯಂದಿರ ದಿನಚರಣೆಯ ಉದ್ದೇಶವೇ ಬೇರೆಯಾಗಿತ್ತು. ಆದರೆ ಇವತ್ತು ವ್ಯಾಪಾರೀಕರಣವಾಗಿದೆ. ಹೀಗಾಗಿ ರಜಾ ದಿನದಂದೇ ಎಲ್ಲರೂ ತಮ್ಮ ತಾಯೊಂದಿಗೆ ಸ್ವಲ್ಪ ಸಮಯ ಕಳೆಯಲಿ ಎನ್ನುವ ಉದ್ದೇಶದಿಂದ ಎಲ್ಲರೂ ಮೇ ತಿಂಗಳ ಎರಡನೇ ಭಾನುವಾರ ಈ ದಿನಾಚರಣೆಗೆ ಇಷ್ಟಪಡುತ್ತಾರೆ. ಹೀಗಾಗಿ ಇಂದು ವಿಶ್ವದಾದ್ಯಂತ ತಾಯಂದಿರ ದಿನ ಆಚರಿಸಲಾಗುತ್ತಿದೆ.

ನಿತ್ಯದ ಕೆಲಸದ ಜಂಜಾಟದಲ್ಲಿರುವ ಎಲ್ಲರಿಗೂ ಇವತ್ತು ತಾಯಂದಿರ ದಿನ ಆಚರಿಸುವುದು ಅನಿವಾರ್ಯವಾಗಿರುವುದರಿಂದ ಈ ದಿನ ಅಮೂಲ್ಯವಾದ ದಿನವಾಗಿ ಉಳಿದಿದೆ. ಹೀಗಾಗಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಎಲ್ಲ ತಾಯಂದಿರಿಗೂ ಶುಭ ಹಾರೈಸೋಣ.

Continue Reading

ಲೈಫ್‌ಸ್ಟೈಲ್

Morning Tips: ಬೆಳಗ್ಗೆ 7 ಗಂಟೆಯೊಳಗೆ ನೀವು ಈ 7 ಕೆಲಸಗಳನ್ನು ಮಾಡುತ್ತೀರಾ?

ಕೆಲಸದ ಒತ್ತಡ, ರಾತ್ರಿ ತಡವಾಗಿ ಮಲಗುವ ಅಭ್ಯಾಸ, ಆಹಾರ ಕ್ರಮ, ಈಗಿನ ಆಧುನಿಕ ಜೀವನಕ್ರಮದ ಪರಿಣಾಮಗಳಿಂದಾಗಿ ಬೆಳಗ್ಗೆ ಬೇಗ ಏಳುವ ಕಷ್ಟವನ್ನು ಬಹುತೇಕರು ತೆಗೆದುಕೊಳ್ಳುವುದಿಲ್ಲ. ಅನೇಕರು ತಮ್ಮ ಅನಿವಾರ್ಯ ಕಾರಣಗಳಿಂದ ಬೆಳಗ್ಗೆ (Morning Tips) ಬೇಗ ಎದ್ದರೂ, ಬೇಗ ಏಳುವುದೇ ಒಂದು ಸುಖ ಎಂದು ಭ್ರಮಿಸುವ ಮಂದಿ ವಿರಳಾತಿವಿರಳ.

VISTARANEWS.COM


on

Morning Tips
Koo

ಬೆಳಗ್ಗೆ ಬೇಗ ಏಳುವುದು (Morning Tips) ಎಷ್ಟು ಜನರ ಕನಸು ಹೇಳಿ? ಆ ಕನಸನ್ನು ನಿತ್ಯವೂ ನನಸಾಗಿಸಿಕೊಂಡು ಅದನ್ನೊಂದು ಶಿಸ್ತುಬದ್ಧ ಕ್ರಮದಲ್ಲಿ ಕೊಂಡೊಯ್ಯುವ ಮಂದಿ ವಿರಳ. ಕೆಲಸದ ಒತ್ತಡ, ರಾತ್ರಿ ತಡವಾಗಿ ಮಲಗುವ ಅಭ್ಯಾಸ, ಆಹಾರ ಕ್ರಮ, ಈಗಿನ ಆಧುನಿಕ ಜೀವನಕ್ರಮದ ಪರಿಣಾಮಗಳಿಂದಾಗಿ ಬೆಳಗ್ಗೆ ಬೇಗ ಏಳುವ ಕಷ್ಟವನ್ನು ಬಹುತೇಕರು ತೆಗೆದುಕೊಳ್ಳುವುದಿಲ್ಲ. ಅನೇಕರು ತಮ್ಮ ಅನಿವಾರ್ಯ ಕಾರಣಗಳಿಂದ ಬೆಳಗ್ಗೆ ಬೇಗ ಎದ್ದರೂ, ಬೇಗ ಏಳುವುದೇ ಒಂದು ಸುಖ ಎಂದು ಭ್ರಮಿಸುವ ಮಂದಿ ವಿರಳಾತಿವಿರಳ. ಆದರೂ, ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ನಾವು ರೂಢಿಸಿಕೊಂಡರೆ, ನಮ್ಮ ಎಷ್ಟೋ ಸಮಸ್ಯೆಗಳು ಯಾವುದೇ ಸೂಚನೆಯನ್ನೂ ಕೊಡದೆ ಸುಲಭವಾಗಿ ದೂರವಾಗುತ್ತವೆ. ಇಷ್ಟು ದಿನ ಇದ್ದ ಸಮಸ್ಯೆಗಳು ಹೇಗೆ ಪರಿಹಾರವಾದವು ಎಂಬುದೂ ಕೂಡಾ ತಿಳಿಯುವುದಿಲ್ಲ. ಹಾಗಾದರೆ, ಬನ್ನಿ, ಬೆಳಗ್ಗೆ ಬೇಗ ಏಳಬೇಕೆಂದು ಬಯಸುವ ಮಂದಿ ಈ ಕೆಲವು ಕೆಲಸಗಳನ್ನಾದರೂ ಬೆಳಗ್ಗೆ ಏಳರೊಳಗಾಗಿ ಮುಗಿಸುವ ಪಣಕ್ಕೆ ಬೀಳಿ. ಆಗ, ನೀವು ಅಂದುಕೊಂಡ, ಮಾಡಲು ಬಯಸಿದ ಕೆಲಸಗಳಿಗೂ ಸಾಕಷ್ಟು ಸಮಯ ದೊರೆಯುತ್ತದೆ. ಅವು ಯಾವುವು ಎಂಬುದನ್ನು ನೋಡೋಣ.

drinking water

ನೀರು ಕುಡಿಯಿರಿ

ಬೆಳಗ್ಗೆ ಬೇಗ ಎದ್ದ ಕೂಡಲೇ ನೀವು ಮಾಡಬೇಕಾದ ಮೊದಲ ಕೆಲಸ ನೀರು ಕುಡಿಯುವುದು. ಇದರಿಂದ ಬೆಳಗು ತಾಜಾತನವನ್ನು ತರುತ್ತದೆ. ನಿದ್ದೆ ಮಾಯವಾಗುತ್ತದೆ. ದೇಹಕ್ಕೆ ಉಲ್ಲಾಸವು ಬರುತ್ತದೆ. ದೇಹದಲ್ಲಿ ಕೆಲಸಗಳನ್ನು ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಅಂಗಾಗಗಳೆಲ್ಲ ಮತ್ತೆ ನಿಧಾನವಾಗಿ ತಮ್ಮ ಕೆಲಸಕ್ಕೆ ತೊಡಗಿಕೊಳ್ಳಲು ಇದು ನೆರವಾಗುತ್ತದೆ.

no mobil use

ಫೋನ್‌ ಮುಟ್ಟಬೇಡಿ

ಎದ್ದ ಕೂಡಲೇ, ಪ್ರತಿಯೊಬ್ಬರೂ ಮಾಡುವ ಮೊದಲ ಕೆಲಸ ಎಂದರೆ ಫೋನ್‌ ಚೆಕ್‌ ಮಾಡುವುದು. ಯಾರ ಮೆಸೇಜ್‌ ಬಂದಿದೆ, ಯಾರು ತಮ್ಮ ಆಕರ್ಷಕ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ, ಯಾರದ್ದಕ್ಕೆ ಎಷ್ಟು ಲೈಕ್‌ ಬಂದಿದೆ, ಇತ್ಯಾದಿ ಇತ್ಯಾದಿಗಳ ವಿವರಣೆಯನ್ನು ಎದ್ದ ಕೂಡಲೇ ನೋಡಬೇಕಾಗಿಲ್ಲ. ಫೋನ್‌ ಮುಟ್ಟದೆ, ಫ್ರೆಶ್ಶಾಗಿ, ಬೇರೆ ಕೆಲಸಗಳತ್ತ ಗಮನ ಹರಿಸುವ ಸವಾಲನ್ನು ನೀವೇ ಸ್ವೀಕರಿಸಿ.

Female runner doing stretching exercise, preparing for morni

ವ್ಯಾಯಾಮ ಮಾಡಿ

ಕನಿಷ್ಟ 20 ನಿಮಿಷಗಳನ್ನು ನಿಮಗಾಗಿ ಇಟ್ಟುಕೊಳ್ಳಿ. ವ್ಯಾಯಾಮ ಮಾಡಿ. ಯೋಗಾಭ್ಯಾಸ ಮಾಡಿ, ಅಥವಾ ಪ್ರಕೃತಿಯ ನಡುವೆ ಒಂದು ವಾಕ್‌ ಮಾಡಿ ಬನ್ನಿ. ನೀವು ಓಡುವುದನ್ನು ಇಷ್ಟಪಡುತ್ತೀರಾದರೆ, ಓಡಿ ಬನ್ನಿ. ಸೈಕ್ಲಿಂಗ್‌ ಮಾಡಿ. ಅಥವಾ, ದೇಹಕ್ಕೆ ಕೊಂಚ ವ್ಯಾಯಾಮ ನೀಡುವ ಯಾವುದೇ ಕೆಲಸವನ್ನಾದರೂ ಮಾಡಿ.

Serene female practicing yoga sitting in lotus posture on floor at home. Wellness, healthy lifestyle

ಧ್ಯಾನ ಮಾಡಿ

ಹತ್ತು ನಿಮಿಷ ಧ್ಯಾನ ಮಾಡಿ. ದೇಹಕ್ಕೆ ವ್ಯಾಯಾಮ ದೊರೆತರೆ ಸಾಲದು. ಮನಸ್ಸಿಗೆ ಇಡೀ ದಿನ ಲವಲವಿಕೆಯಿಂದಿರಬೇಕಾದರೆ, ಧ್ಯಾನ ಅತ್ಯಗತ್ಯ. ಒಂದು ೧೦ ನಿಮಿಷವಾದರೂ ಜಂಜಡಮುಕ್ತರಾಗಿ, ಯಾವ ಬೇರೆ ಯೋಚನೆಗಳನ್ನೂ ತಲೆಯೊಳಗೆ ನುಸುಳದಂತೆ ನೋಡಿಕೊಂಡು ಮನಸ್ಸನ್ನು ರಿಲ್ಯಾಕ್ಸ್‌ ಮಾಡಲು ಧ್ಯಾನಕ್ಕೆ ಮೊರೆ ಹೋಗಿ.

ಸಕಾರಾತ್ಮಕವಾಗಿ ಯೋಚಿಸಿ

ದೇವರಿಗೆ ನಮಸ್ಕರಿಸಿ, ಒಂದು ಸಕಾರಾತ್ಮಕ ಆಲೋಚನೆಯೊಂದಿಗೆ, ಜಗತ್ತಿಗೆ ಒಳ್ಳೆಯದು ಮಾಡು ತಂದೆ ಎಂದು ಪ್ರಾರ್ಥಿಸಿ. ಯಾವುದಾದರೂ ಪುಸ್ತಕ ಓದಲು ಒಂದೈದು ನಿಮಿಷ ನೀವು ಮೀಸಲಿಡಬಹುದು. ಅಥವಾ, ದೇವರ ಪೂಜೆ ಇತ್ಯಾದಿಗಳಿಗೂ ಈ ಐದು ನಿಮಿಷವನ್ನು ನೀವು ಬಳಸಬಹುದು.

Image Of Health Benefits Of Hot Water Bath

ಬೇಗ ಸ್ನಾನ ಮುಗಿಸಿ

ಒಂದು ಚಂದನೆಯ ಸ್ನಾನ ಮಾಡಿ ಬನ್ನಿ. ಬೆಳಗ್ಗೆ ಏಳರ ಮೊದಲೇ ಸ್ನಾನ ಮಾಡಿದರೆ ಮನಸ್ಸು, ದೇಹ ಎರಡೂ ಪ್ರಫುಲ್ಲವಾಗುತ್ತದೆ. ಖುಷಿ, ಸಕಾರಾತ್ಮಕತೆ ನಿಮ್ಮನ್ನು ಆವರಿಸುತ್ತದೆ.

ಮುಖ್ಯ ಕೆಲಸ ಗುರುತಿಸಿ

ಆ ದಿನ ಮಾಡಬೇಕಾದ್ದೇನು ಎಂಬುದನ್ನು ಯೋಚಿಸಿ. ತುಂಬ ಮುಖ್ಯವಾದುದಾದರೆ ಬರೆದಿಡಿ. ಆ ಕಡೆಗೆ ಗಮನ ಹರಿಸುವ ಜೊತೆಗೆ ಮುಂದೆ ಮಾಡಬೇಕಾದ್ದರ ಬಗ್ಗೆ ಗಮನ ಕೊಡಿ. ಅಡುಗೆ, ಮನೆಗೆಲಸ ಇತ್ಯಾದಿಗಳಿದ್ದರೆ, ಅವುಗಳ ಕಡೆಗೆ ಗಮನ ಹರಿಸಿ. ಬೆಳಗ್ಗೆ ಏಳರಳಗೆ ಈ ಏಳು ಕೆಲಸಗಳನ್ನು ನೀವು ಮಾಡಿಕೊಂಡರೆ ಸಾಕು, ಇಡೀ ದಿನ ಸಕಾರಾತ್ಮಕವಾಗಿ ಕಳೆಯಲು, ಇದೇ ಮುಂದೆ ಶೀಸ್ತುಬದ್ಧವಾಗಿ ನಿಮ್ಮ ಜೀವನಕ್ರಮವಾಗಲು ದಾರಿಯಾಗುತ್ತದೆ.

Continue Reading
Advertisement
Karnataka Weather Forecast Heavy rain in chikkmagalur
ಮಳೆ7 mins ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

felicitation programme for SSLC student Harshita D M who got 2nd place in the state
ತುಮಕೂರು17 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ 2ನೇ ಸ್ಥಾನ ಪಡೆದ ಹರ್ಷಿತಾಗೆ ಸನ್ಮಾನ

130 crore crop compensation amount paid to Vijayanagara district says DC m S Diwakar
ವಿಜಯನಗರ19 mins ago

Vijayanagara News: ವಿಜಯನಗರ ಜಿಲ್ಲೆಗೆ 130 ಕೋಟಿ ರೂ. ಬೆಳೆ ಪರಿಹಾರ: ಡಿಸಿ

Prajwal Revanna Case Naveen Gowda post against MLA A Manju
ರಾಜಕೀಯ23 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

ಕರ್ನಾಟಕ36 mins ago

MLC Election: ಪರಿಷತ್‌ ಚುನಾವಣೆಗೂ ಮುನ್ನ ಒಪಿಎಸ್‌ ಮರು ಜಾರಿಗೆ ಮುಂದಾಯ್ತಾ ಕಾಂಗ್ರೆಸ್‌ ಸರ್ಕಾರ?

Queen's Premier League start
ಕ್ರಿಕೆಟ್1 hour ago

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

Prajwal Revanna Case What was plan of advocate Devaraje Gowda Why did you leave for Delhi
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌; ವಕೀಲ ದೇವರಾಜೇಗೌಡ ಪ್ಲ್ಯಾನ್‌ ಏನಿತ್ತು? ದೆಹಲಿಗೆ ಹೊರಟಿದ್ದು ಏಕೆ?

Mental Health Awareness Month
ಆರೋಗ್ಯ1 hour ago

Mental Health Awareness Month: ಮಾನಸಿಕ ಆರೋಗ್ಯ ಜಾಗೃತಿ ಮಾಸ; ಮತ್ತೆ ಮಗುವಿನಂತಾಗಲು ಪ್ರಯತ್ನಿಸಿ!

Narendra Modi
ದೇಶ1 hour ago

Narendra Modi: ತಾಯಂದಿರ ದಿನದಂದು ಮೋದಿಗೆ ವಿಶೇಷ ಉಡುಗೊರೆ ಕೊಟ್ಟ ಫ್ಯಾನ್ಸ್; ಏನದು ನೋಡಿ!

Murder case
ಕ್ರೈಂ1 hour ago

Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast Heavy rain in chikkmagalur
ಮಳೆ7 mins ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ23 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ13 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

ಟ್ರೆಂಡಿಂಗ್‌