International Epilepsy Day: ಮಕ್ಕಳಲ್ಲಿ ಅಪಸ್ಮಾರ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ಪಡೆಯುವುದು ಹೇಗೆ? - Vistara News

ಆರೋಗ್ಯ

International Epilepsy Day: ಮಕ್ಕಳಲ್ಲಿ ಅಪಸ್ಮಾರ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ಪಡೆಯುವುದು ಹೇಗೆ?

International Epilepsy Day: ಅನೇಕ ಬಾರಿ ಮಕ್ಕಳಲ್ಲಿ ಅಪಸ್ಮಾರವನ್ನು ಗುರುತಿಸಲು ಸಾಧ್ಯವಾಗದೇ ರೋಗ ಉಲ್ಪಣಗೊಳ್ಳಲು ಕಾರಣವಾಗುತ್ತದೆ. ಹಾಗಾಗಿ, ಆರಂಭದಲ್ಲಿ ಅಪಸ್ಮಾರವನ್ನು ಗುರುತಿಸಿ ಚಿಕಿತ್ಸೆ ನೀಡುವುದು ಪರಿಹಾರ ಮಾರ್ಗವಾಗಿದೆ.

VISTARANEWS.COM


on

International Epilepsy Day: How to recognize the symptoms of epilepsy in children and get treatment?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಅಂತಾರಾಷ್ಟ್ರೀಯ ಅಪಸ್ಮಾರ ದಿನ (International Epilepsy Day). ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಸೋಮವಾರವನ್ನು ಈ ರೋಗದ ಕುರಿತ ಜಾಗೃತಿ ಮತ್ತು ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಈ ವರ್ಷದ ಧ್ಯೇಯ ಈ ರೋಗದ ಬಗೆಗಿನ ಕಳಂಕವನ್ನು ತೊಲಗಿಸುವುದು. ಅಪಸ್ಮಾರವನ್ನು ನಿಭಾಯಿಸುವುದಕ್ಕಿಂತ ದೊಡ್ಡ ಸವಾಲು ಈ ರೋಗದ ಮತ್ತು ರೋಗಿಗಳ ಬಗೆಗೆ ಸಮಾಜದಲ್ಲಿರುವ ಕಳಂಕವನ್ನು ನಿರ್ವಹಿಸುವುದು. ಈ ನರರೋಗದ ಬಗ್ಗೆ ಸರಿಯಾದ ಮಾಹಿತಿ ಮತ್ತು ಚಿಕಿತ್ಸೆ ಇದ್ದಲ್ಲಿ, ಅಪಸ್ಮಾರ ರೋಗಿಗಳು ಸಾಮಾನ್ಯರಂತೆ ಬದುಕು ಸಾಗಿಸಬಹುದು.

ಹೆಚ್ಚಿನ ಬಾರಿ ಮಕ್ಕಳಲ್ಲಿ ಈ ರೋಗ ಸೂಕ್ತ ಹಂತದಲ್ಲಿ ಗುರುತಿಸಲ್ಪಡದೆ, ಚಿಕಿತ್ಸೆ ವಿಳಂಬವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಮೆದುಳಿನ ಬೆಳವಣಿಗೆಯ ಮಹತ್ವದ ಹಂತಗಳು ಕಳೆದು ಹೋಗಿ, ಜೀವನವಿಡೀ ನರಳುವಂತಾಗುತ್ತದೆ. ಯಾವುದೇ ಸಾಮಾಜಿಕ ಕಳಂಕಗಳ ಬಗ್ಗೆ ಅಂಜದೆ, ಮಕ್ಕಳಿಗೆ ಅಥವಾ ಹದಿವಯಸ್ಸಿನವರಿಗೆ ರೋಗ ಪತ್ತೆಯಾದ ಕೂಡಲೆ ಚಿಕಿತ್ಸೆ ಕೊಡಿಸುವುದು ಮಹತ್ವದ್ದು. ಕೆಲವೊಮ್ಮೆ ಮಕ್ಕಳಲ್ಲಿ ಕಾಣುವ ಅಪಸ್ಮಾರ ವಯಸ್ಕರಲ್ಲಿ ಇರುವಂತೆ ಕಾಣದಿರಬಹುದು. ರೋಗ ಲಕ್ಷಣಗಳು ಗೊಂದಲ ಮೂಡಿಸುವ ಇಂಥ ಸಂದರ್ಭಗಳಲ್ಲಿ ಸಮಸ್ಯೆ ಗುರುತಿಸುವಲ್ಲೇ ವಿಳಂಬವಾಗುತ್ತದೆ.

ಅಪಸ್ಮಾರ ಲಕ್ಷಣಗಳು ಹೇಗಿರಬಹುದು?

ಒಂದೇ ಸಮ ಶೂನ್ಯವನ್ನು ದಿಟ್ಟಿಸುವುದು, ಪ್ರತಿಕ್ರಿಯಿಸದಂತೆ ಕಣ್ಣು ಮಿಟುಕಿಸುತ್ತಲೇ ಇರುವುದು, ಉಸಿರಾಟದ ತೊಂದರೆ, ಇದ್ದಕ್ಕಿದ್ದಂತೆ ಬೆಚ್ಚಿಬೀಳುವುದು, ಇದ್ದಲ್ಲೇ ಕುಸಿದು ಬೀಳುವುದು, ಕಳೆದು ಹೋದಂತೆ ಅಥವಾ ಗೊಂದಲದಲ್ಲಿದ್ದಂತೆ ವರ್ತಿಸುವುದು- ಇಂಥ ಲಕ್ಷಣಗಳು ಮಕ್ಕಳಲ್ಲಿ ಗೋಚರಿಸಿದರೆ ನರರೋಗ ತಜ್ಞರನ್ನು ಕಾಣುವುದು ಒಳಿತು. ವಯಸ್ಕರಲ್ಲಿ ಕಾಣುವಂತೆ, ಎಚ್ಚರ ತಪ್ಪುವುದು, ಬಾಯಲ್ಲಿ ನೊರೆ ಬರುವುದೇ ಮುಂತಾದ ಲಕ್ಷಣಗಳು ಮಕ್ಕಳಲ್ಲಿ ಕಾಣದೆ ಇರಬಹುದು.

ಮೆದುಳು ಬೆಳವಣಿಗೆಯ ಹಂತದಲ್ಲಿರುವಾಗ ಇಂಥ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದು ಆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಮುಖವಾದದ್ದು. ಮುಂದೆ ದೈಹಿಕ ಮತ್ತು ಮಾನಸಿಕ ವೈಕಲ್ಯಗಳಿಗೆ ಮಕ್ಕಳು ತುತ್ತಾಗುವುದನ್ನು ತಪ್ಪಿಸಲು ಈ ಮೂಲಕ ಸಾಧ್ಯವಿದೆ. ಖಿನ್ನತೆಗೆ ಒಳಗಾಗುವುದರಿಂದ, ಸಾಮಾಜಿಕ ಕಳಂಕಕ್ಕೆ ಈಡಾಗುವುದರಿಂದ ಪಾರಾಗಬಹುದು. ಒಮ್ಮೆ ಚಿಕಿತ್ಸೆ ಪ್ರಾರಂಭವಾದ ಮೇಲೆ, ಎಲ್ಲವೂ ನಿಯಂತ್ರಣಕ್ಕೆ ಬರಲು ಸಮಯ ಬೇಕು. ಮಕ್ಕಳ ಆರೋಗ್ಯ ಸುಧಾರಿಸಿದ ಕೂಡಲೇ ಔಷಧಿಯನ್ನು ನಿಲ್ಲಿಸುವುದು ಸಲ್ಲದು. ನರರೋಗ ತಜ್ಞರ ಸಲಹೆ ಇಲ್ಲದೆ ಅಪಸ್ಮಾರದ ಔಷಧಿಯನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಖಂಡಿತಾ ಸರಿಯಲ್ಲ.

ಇದನ್ನೂ ಓದಿ: SenSight : ಪಾರ್ಕಿನ್ಸನ್ ಕಾಯಿಲೆ ಚಿಕಿತ್ಸೆಗೆ ಸೆನ್‌ಸೈಟ್ ಡೈರೆಕ್ಷನಲ್ ಲೆಡ್ ಸಿಸ್ಟಮ್ ಲಾಂಚ್

ಅಪಸ್ಮಾರಕ್ಕೆ ಚಿಕಿತ್ಸೆ ಹೇಗೆ?

ಹೆಣ್ಣು ಮಕ್ಕಳಲ್ಲಿ ಈ ರೋಗ ಕಂಡರೆ, ಅದಕ್ಕೆ ಚಿಕಿತ್ಸೆ ಕೊಡಿಸುವುದಕ್ಕೆ ಹಿಂದೇಟು ಹಾಕುವ ಪ್ರಕರಣಗಳು ಬಹಳಷ್ಟಿವೆ. ಈ ವಿಷಯ ಎಲ್ಲೆಡೆ ಪ್ರಚಾರವಾಗಿ, ಮುಂದೆ ಆಕೆಯ ವೈವಾಹಿಕ ಭವಿಷ್ಯಕ್ಕೆ ಕುತ್ತಾಗಬಹುದು ಎಂಬಂಥ ಅಪ್ರಯೋಜಕ ಭೀತಿಯೇ ಇದಕ್ಕೆ ಕಾರಣ. ಆದರೆ ಈ ರೋಗಕ್ಕೆ ಚಿಕಿತ್ಸೆ ಇಲ್ಲದಿದ್ದರೆ ಆಕೆಯ ಭವಿಷ್ಯ ಎಷ್ಟು ದುರ್ಬರವಾಗಬಹುದು ಎಂಬ ಕಲ್ಪನೆ ಇದ್ದರೆ, ಸಮಾಜದ ಮನಸ್ಥಿತಿ ಸುಧಾರಿಸುತ್ತದೆ. ಒಂದೊಮ್ಮೆ ಆಕೆ ಅಪಸ್ಮಾರದ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಅದರ ಮಾಹಿತಿಯನ್ನು ಮದುವೆಯ ಸಂದರ್ಭದಲ್ಲಿ ವರನ ಕಡೆಯವರಿಗೆ ನೀಡಿ, ಅವರಿಗೆ ತಿಳುವಳಿಕೆ ನೀಡುವುದು ಮುಖ್ಯ. ಇದರಿಂದ ಆಕೆಗೆ ಅನಗತ್ಯ ಒತ್ತಡ, ಕಳಂಕ ಎದುರಾಗದೆ, ಆರೋಗ್ಯ ಮತ್ತು ಆತ್ಮವಿಶ್ವಾಸದಿಂದ ಬದುಕು ನಡೆಸಲು ಸಾಧ್ಯವಾಗುತ್ತದೆ. ರೋಗ ಪತ್ತೆಯಾಗುತ್ತಿದ್ದಂತೆ ಸಮಯ ವ್ಯರ್ಥ ಮಾಡದೆ ಚಿಕಿತ್ಸೆ ಕೊಡಿಸುವುದು ಮಹತ್ವದ್ದು. ಇದರಿಂದ ರೋಗಿಗಳು ಎಲ್ಲರಂತೆ ಬದುಕಲು ಸಾಧ್ಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Heart Attack Sign: ಹೃದಯಾಘಾತ ಆಗುವುದಿದ್ದರೆ ನಮ್ಮ ದೇಹ ಮೊದಲೇ ಈ ಸೂಚನೆಗಳನ್ನು ನೀಡುತ್ತದೆ!

Heart Attack Sign: ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಳ್ಳುವುದು ಜಾಣತನ. ಹೃದಯಾಘಾತ ಆಗುವ ವಾರಗಳ, ಕೆಲವೊಮ್ಮೆ ತಿಂಗಳ, ಮೊದಲಿಂದೇ ದೇಹ ಸೂಕ್ಷ್ಮವಾಗಿ ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಆದರೆ ಅದನ್ನು ತಿಳಿದುಕೊಳ್ಳುವುದಕ್ಕೆ ನಮಗೆ ಮಾಹಿತಿ ಇರಬೇಕು. ಎಂಥಾ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಬೇಕೆಂಬ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

Heart Attack Sign
Koo

ಬದುಕು ನೀರ ಮೇಲಿನ ಗುಳ್ಳೆ ಎಂಬುದು ಮತ್ತೆ ಮತ್ತೆ ಅರ್ಥವಾಗುವುದು ಹೃದಯಾಘಾತದ ಸಂದರ್ಭದಲ್ಲಿ. ಇವೆಲ್ಲ ಗೊತ್ತಾಗುವುದರೊಳಗೇ ಹೀಗಾಗಿ ಹೋಯ್ತು ಎಂದು ಶೋಕಿಸುವಂತಾಗುತ್ತದೆ. ಹೃದಯಾಘಾತದ ಸೂಚನೆಗಳನ್ನು ದೇಹ ನೀಡಿದರೂ ಹೆಚ್ಚಿನ ಬಾರಿ ಗುರುತಿಸುವಲ್ಲಿ ವಿಫಲರಾಗುತ್ತೇವೆ. ಕಾರಣ, ಅಂಥ ಸೂಚನೆಗಳು ಯಾವುವು ಎಂಬುದೇ ನಮಗೆ ತಿಳಿದಿರುವುದಿಲ್ಲ. ಎದೆನೋವು ಮತ್ತು ಉಸಿರಾಡಲು ಕಷ್ಟವಾಗುವಂಥ ಸೂಚನೆಗಳು ಕಂಡಾಗಲೇ ನಮಗೆ ಹೃದಯದ ತೊಂದರೆ ಇರಬಹುದೆಂಬುದು ಅರಿವಾಗುತ್ತದೆ. ಆದರೆ ಇತರ ಕೆಲವು ಸೂಚನೆಗಳು ಆಸಿಡಿಟಿ, ಎದೆಯುರಿ, ಸುಸ್ತು ಮುಂತಾದ ಬೇರೆ ಸಮಸ್ಯೆಗಳ ಲಕ್ಷಣಗಳೂ ಆಗಿರಬಹುದಾದ್ದರಿಂದ ಮುಂಬರುವ ಅನಾಹುತವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಮುಂದಾಗಿ ಈ ಬಗ್ಗೆ ಕಾಳಜಿ ತೆಗೆದುಕೊಂಡಲ್ಲಿ ಆಗುವಂಥ ಅನಾಹುತವನ್ನು ತಪ್ಪಿಸಲು ಸಾಧ್ಯವಿದೆ. ಹೃದಯಾಘಾತವಾಗುವ ಹಲವಾರು ದಿನಗಳ ಮೊದಲಿನಿಂದಲೇ ಈ ಸೂಚನೆಗಳನ್ನು ದೇಹ ತೋರಿಸುತ್ತದೆ. ಕೆಲವೊಮ್ಮೆ ಒಂದು ತಿಂಗಳ ಮುನ್ನವೂ (Heart Attack Sign) ಇವು ಕಾಣಬಹುದು.

Cardiac Arrest

ಎದೆಯಲ್ಲಿ ಬಿಗಿ, ಒತ್ತಡ

ಎದೆಯಲ್ಲಿ ಒತ್ತಡದ ಅನುಭವ, ಏನೋ ಹಿಂಡಿದಂತೆ, ಬಿಗಿದಂತೆ ಭಾಸವಾಗುವುದು, ನೋವು ಮುಂತಾದವೆಲ್ಲ ಆರಂಭದಲ್ಲಿ ಕಾಣುತ್ತವೆ. ಇಂಥವು ಏನೇ ಕಂಡರೂ ಹೃದಯ ತಜ್ಞರಲ್ಲೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ಬಗ್ಗೆ ಉದಾಸೀನ ಸಲ್ಲದು.

Woman having headache. stressed, Migraine, World Brain Tumor day

ತಲೆ ಸುತ್ತುವುದು

ನೀರು, ಆಹಾರ ಎಲ್ಲರೂ ಕಾಲಕಾಲಕ್ಕೆ ಹೊಟ್ಟೆ ಸೇರುತ್ತಿದ್ದರೂ ನಿಲ್ಲದ ಸುಸ್ತು, ಆಯಾಸ, ಉಸಿರು ಕಟ್ಟುವುದು, ತಲೆ ಸುತ್ತುವುದು ಮುಂತಾದ ಲಕ್ಷಣಗಳು ಪದೇಪದೆ ಕಾಣುತ್ತಿವೆ ಎಂದರೆ ಇದು ನಿರ್ಲಕ್ಷ್ಯ ಮಾಡುವ ವಿಷಯವಲ್ಲ. ಹೃದಯಕ್ಕೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾದರೆ, ದೊರೆಯುವ ಆಮ್ಲಜನಕದಲ್ಲಿ ಕೊರತೆಯಾದರೆ ಇಂಥ ಸೂಚನೆಗಳು ಕಾಣುತ್ತವೆ.

It has been traditionally used for gastric lavage and vomiting Benefits Of Cardamom

ಅಜೀರ್ಣ, ವಾಂತಿ

ಹೀಗೆನ್ನುತ್ತಿದ್ದಂತೆ ನಿನ್ನೆ ತಿಂದದ್ದು ಯಾವುದೋ ಸರಿಯಾಗಲಿಲ್ಲ ಎಂದೇ ಭಾವಿಸಿ, ಅದಕ್ಕೆ ಔಷಧಿ ಮಾಡುತ್ತೇವೆ. ಅದಿಲ್ಲದಿದ್ದರೆ, ಆಸಿಡಿಟಿ ತೊಂದರೆಯಿದ್ದರೆ ಸಹ ಇಂಥದ್ದೇ ಲಕ್ಷಣಗಳು ಕಾಣಬಹುದು. ಆದರೆ ಇವೆಲ್ಲ ಹುಳಿತೇಗು, ಎದೆಯುರಿಯ ಪ್ರಕೋಪಗಳು ಎಂದು ಸುಮ್ಮನಿರಬೇಡಿ. ರಕ್ತಸಂಚಾರ ಕಡಿಮೆ ಆದಾಗಲೂ ಇಂಥ ಸೂಚನೆಗಳು ಕಾಣುತ್ತವೆ.

Sweating Sickness

ಬೆವರು

ಸೆಕೆಯಲ್ಲಿ ಬೆವರುವುದು ಸಹಜ. ಮಹಿಳೆಯರಿಗೆ ಋತುಬಂಧದ ಕಾಲದಲ್ಲಿ ವಿಪರೀತ ಬೆವರುವುದೂ ಸ್ವಾಭಾವಿಕ. ಆದರೆ ಕಾಲ ಯಾವುದೇ ಆದರೂ ಬೆವರುತ್ತಿದ್ದೀರಿ ಎಂದಾದರೆ ವೈದ್ಯರಲ್ಲಿಗೆ ಹೋಗಬೇಕು ಎಂದೇ ಅರ್ಥ. ದೇಹಕ್ಕೆ ಅಪಾಯವಾದಾಗ ಫ್ಲೈಟ್‌-ಫೈಟ್‌ ಹಂತಕ್ಕೆ ದೇಹ ತನ್ನನ್ನು ತಾನು ದೂಡಿಕೊಳ್ಳುವ ಸೂಚನೆಯಾಗಿ ಈ ಅತಿಯಾದ ಬೆವರು ಕಾಣುತ್ತದೆ.

ಉಸಿರುಗಟ್ಟುವುದು

ಸಣ್ಣ-ಪುಟ್ಟ ಕೆಲಸ ಮಾಡುವಾಗ, ಮೆಟ್ಟುಲು ಹತ್ತುವಾಗ, ಎಷ್ಟೋ ವರ್ಷಗಳಿಂದ ಮಾಡುತ್ತಿರುವ ಮಾಮೂಲಿ ವಾಕಿಂಗ್‌ನಲ್ಲೂ ಮೇಲುಸಿರು ಬರುತ್ತಿದೆ ಎಂದಾದರೆ ಮುಂಬರುವ ಅಪಾಯದ ಸೂಚನೆಯಿದು. ಅಂದರೆ ಹೃದಯಾಘಾತ ಆಗಿಯೇ ಬಿಡುತ್ತದೆ ಎಂದಲ್ಲ, ಆದರೆ ಹೃದಯದ ಆರೋಗ್ಯ ಚೆನ್ನಾಗಿಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ: Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

ನೋವು

ಹೀಗೆನ್ನುತ್ತಿದ್ದಂತೆ ಎದೆನೋವೇ ಬರಬೇಕೆಂದಿಲ್ಲ. ಬೆನ್ನು, ಭುಜ, ತೋಳು, ಕುತ್ತಿಗೆ, ದವಡೆಯಲ್ಲೂ ನೋವು ಕಾಣುತ್ತಿದೆ ಎಂದಾದರೆ ಖಂಡಿತಕ್ಕೂ ಏನೋ ಸರಿಯಿಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ಸಾರಿ ರಕ್ತನಾಳಗಳಲ್ಲಿ ಜಮೆಯಾಗಿರುವ ಕೊಬ್ಬಿನಿಂದಾಗಿ ಪರಿಚಲನೆಯಲ್ಲಿ ತೊಂದರೆಯಾಗಿ ಬರುವಂಥ ತೊಂದರೆಗಳಿವು. ವೇಗಸ್‌ ನರವು ಹೃದಯದಿಂದ ಮೆದುಳು, ಎದೆ, ಕುತ್ತಿಗೆ, ಕಿಬ್ಬೊಟ್ಟೆ ಮುಂತಾದ ಹಲವೆಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಹೃದಯದಲ್ಲಿ ಆಗುವಂಥ ತೊಂದರೆಗಳನ್ನು ಇತರ ಭಾಗಗಳಿಗೆ ನೋವಿನ ಮೂಲಕ ಸೂಚನೆ ನೀಡುತ್ತದೆ.

Continue Reading

ಆರೋಗ್ಯ

Monsoon Health Tips: ಮಳೆಗಾಲದ ರೋಗಗಳಿಂದ ಪಾರಾಗುವುದು ಹೇಗೆ?

Monsoon Health Tips: ವಾತಾವರಣದಲ್ಲಿ ತೇವ ಹೆಚ್ಚಾದಷ್ಟೂ ಮುಗ್ಗಲು ಸಮಸ್ಯೆ ಕಾಡುತ್ತದೆ. ಮನೆಯ ಗೋಡೆ, ಕಪಾಟು, ಬಟ್ಟೆಗಳು ಎಲ್ಲವೂ ಒಂಥರಾ ಹಸಿ ವಾಸನೆ ಸೂಸುತ್ತವೆ. ಇಂಥ ಸಂದರ್ಭದಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಇರಬೇಕು. ಮುಗ್ಗಲಿನಿಂದಾಗಿಯೇ ಶ್ವಾಸಕೋಶದ ಅಲರ್ಜಿ ಹೆಚ್ಚಬಹುದು. ಶೀತ-ಕೆಮ್ಮಿನಿಂದ ಪಾರಾಗುವುದಕ್ಕೆ ದೇಹವನ್ನು ಬೆಚ್ಚಗಿರಿಸಿಕೊಳ್ಳಿ.

VISTARANEWS.COM


on

Monsoon Health Tips
Koo

ಮಳೆಗಾಲ ಆರಂಭವಾಗುತ್ತಿದ್ದಂತೆ ಸೆಕೆಯಲ್ಲಿ ಬೇಯುತ್ತಿದ್ದವರೆಲ್ಲ ನೆಮ್ಮದಿಯ ಉಸಿರು ಬಿಡುವುದು ಸಹಜ. ಆದರೆ ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ ಹಲವು ಆರೋಗ್ಯ ಸಮಸ್ಯೆಗಳೂ ರಂಗಪ್ರವೇಶ ಮಾಡುತ್ತವೆ. ಅದರಲ್ಲೂ ಶ್ವಾಸಕೋಶ ಸಂಬಂಧಿ ತೊಂದರೆಗಳದ್ದೇ ಮೇಲುಗೈ. ಒದ್ದೆ ವಾತಾವರಣದಲ್ಲಿ ಬ್ಯಾಕ್ಟೀರಿಯ, ಫಂಗಸ್‌ ಮತ್ತು ವೈರಸ್‌ಗಳು ಸೊಂಪಾಗಿ ದ್ವಿಗುಣಗೊಂಡು, ದಾಳಿ ಮಾಡುತ್ತವೆ. ಈಗಾಗಲೇ ಅಲರ್ಜಿ ಸಮಸ್ಯೆ ಇರುವವರಿಗೆ ಮೋಡ, ಮಳೆ ಮತ್ತು ಶೀತದ ಹವಾಮಾನದಿಂದಾಗಿ ಉಸಿರಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಪುಪ್ಪುಸಗಳ ಆರೋಗ್ಯ ಕಾಪಾಡಿಕೊಂಡು, ಈ ಮಳೆಯಲ್ಲಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಮುಂತಾದ ಹಲವು ಬಗೆಯ ತೊಂದರೆಗಳಿಂದ ದೂರ ಇರುವುದು ನಮ್ಮ ಆದ್ಯತೆಯಾಗಿರಲಿ. ಇದಕ್ಕೆ ಬೇಕಾದ (Monsoon Health Tips) ಸಲಹೆಗಳು ಇಲ್ಲಿವೆ.

Body cleanliness is all important. Portrait of a smiling you

ಸ್ವಚ್ಛತೆ

ಮಳೆ ಹೆಚ್ಚಾಗಿ ಬೀಳುವ ಪ್ರದೇಶಗಳಲ್ಲಿ ಇಡೀ ಲೋಕವೇ ದೊಡ್ಡದೊಂದು ಜಲಪಾತದಡಿ ನಿಂತ ಅನುಭವ. ತೊಡುವ ಬಟ್ಟೆಗಳೂ ಒಣಗುವುದಕ್ಕೆ ನಾಲ್ಕೈದು ದಿನಗಳು ತೆಗೆದುಕೊಂಡು, ಮನೆಯೆಲ್ಲಾ ರಾಡಿಯೆದ್ದು, ಮನೆಗೊಳಗೆ ಪ್ರಾಣಸಂಕಟ, ಹೊರಬಿದ್ದರೆ ಜೀವಸಂಕಟ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ತೇವ ಹೆಚ್ಚಾದಷ್ಟೂ ಮುಗ್ಗಲು ಸಮಸ್ಯೆ ಕಾಡುತ್ತದೆ. ಮನೆಯ ಗೋಡೆ, ಕಪಾಟು, ಬಟ್ಟೆಗಳು ಎಲ್ಲವೂ ಒಂಥರಾ ಹಸಿ ವಾಸನೆ ಸೂಸುತ್ತವೆ. ಇಂಥ ಸಂದರ್ಭದಲ್ಲಿ ಸ್ವಚ್ಛತೆಯ ಬಗ್ಗೆ ಅತಿ ಹೆಚ್ಚಿನ ಗಮನ ಇರಬೇಕು. ಮುಗ್ಗಲಿನಿಂದಾಗಿಯೇ ಶ್ವಾಸಕೋಶದ ಅಲರ್ಜಿ ಹೆಚ್ಚಬಹುದು. ಶೀತ-ಕೆಮ್ಮಿನಿಂದ ಪಾರಾಗುವುದಕ್ಕೆ ದೇಹವನ್ನು ಬೆಚ್ಚಗಿರಿಸಿಕೊಳ್ಳಿ.

ಪ್ರತಿರೋಧಕತೆ

ಜೋರು ಮಳೆಯ ದಿನಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿ ಎಷ್ಟಿದ್ದರೂ ಬೇಕು. ಹಾಗಾಗಿ ಮಳೆಗಾಲದ ಹಣ್ಣುಗಳನ್ನು ತಿನ್ನಿ. ಆಹಾರ ತಾಜಾ ಮತ್ತು ಬಿಸಿಯಾಗಿರುವಾಗಲೇ ಊಟ ಮಾಡಿ. ಆರಿದ ಆಹಾರದಲ್ಲಿ ಬ್ಯಾಕ್ಟೀರಿಯಗಳ ಹಾವಳಿ ಹೆಚ್ಚು. ಬಿಸಿ ನೀರು, ಕಷಾಯ, ಸೂಪ್‌, ಕಟ್ಟಿನ ಸಾರುಗಳು ದೇಹವನ್ನು ಬೆಚ್ಚಗಿರಿಸಿ, ಶೀತದಿಂದ ರಕ್ಷಿಸುತ್ತವೆ. ಈ ದಿನಗಳಲ್ಲಿ ಕುದಿಸಿದ ನೀರು ಕುಡಿಯುವುದು ಎಲ್ಲ ದೃಷ್ಟಿಯಿಂದಲೂ ಕ್ಷೇಮ. ಇಡೀ ಧಾನ್ಯಗಳು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ, ಈ ಮೂಲಕ ಪ್ರತಿರೋಧತೆ ತಗ್ಗದಂತೆ ನೋಡಿಕೊಳ್ಳುತ್ತವೆ. ಜನಜಂಗುಳಿಯಿಂದ ದೂರವಿದ್ದರೆ, ಗಾಳಿಯಿಂದ ಹರಡುವ ವೈರಸ್‌ ಸೋಂಕುಗಳು ಬರುವುದು ಕಡಿಮೆ.

ಒಳಾಂಗಣದ ಗಾಳಿ

ಮನೆಯೊಳಗೆ ತೇವ ತೀರಾ ಹೆಚ್ಚಿದೆ ಎನಿಸಿದರೆ ಏರ್‌ ಪ್ಯೂರಿಫಯರ್‌ ಅಥವ ಡ್ರೈಯರ್‌ಗಳನ್ನು ಉಪಯೋಗಿಸಿ. ಧೂಳು ತೆಗೆಯುವಾಗ ಒದ್ದೆ ವಸ್ತ್ರಗಳಿಂದಲೇ ಒರೆಸಿ ಸ್ವಚ್ಛ ಮಾಡಿ. ಕೆಲವು ಒಳಾಂಗಣದ ಗಿಡಗಳು ಗಾಳಿ ಶುದ್ಧೀಕರಣಕ್ಕೆ ಸಹಾಯ ಮಾಡುತ್ತವೆ. ಅವುಗಳನ್ನು ಇರಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸಿ.

ಬೆಚ್ಚಗಿನ ವಸ್ತ್ರಗಳು

ಸಣ್ಣ ಕೆಲಸಕ್ಕೆಂದು ಮನೆಯಿಂದ ಹೊರಹೋದಾಗಲೇ ಹತ್ತು ನಿಮಿಷಗಳ ಮಳೆಯೊಂದು ಜಡಿಯುತ್ತದೆ. ಸ್ವಲ್ಪ ಸೋನೆಯೊ ತುಂತುರೊ ಬರುತ್ತದೆ. ಏನಾಗುವುದಿಲ್ಲ ಎಂದು ಒದ್ದೆ ವಸ್ತ್ರಗಳಲ್ಲೇ ಇರಬೇಡಿ. ಶೀತ ಅಂಟಿಕೊಳ್ಳುವುದಕ್ಕೆ ಕೆಲವೊಮ್ಮೆ ಇಷ್ಟೇ ಸಾಕಾಗುತ್ತದೆ. ಮಳೆ ತಡೆಯುವಂಥ ಜಾಕೆಟ್‌ ಅಥವಾ ಛತ್ರಿಗಳನ್ನು ಹಿಡಿದೇ ಹೊರಗೆ ಅಡಿಯಿಡಿ.

Female runner doing stretching exercise, preparing for morni

ವ್ಯಾಯಾಮ

ʻಅಯ್ಯೋ, ಮಳೇ!ʼ ಎನ್ನುವ ನೆವ ಹೇಳಿ ನಿತ್ಯದ ವ್ಯಾಯಾಮ ತಪ್ಪಿಸಬೇಡಿ. ಹೊರಗೆ ಹೋಗಿ ವಾಕಿಂಗ್‌ ಮಾಡಲಾಗದಿದ್ದರೆ, ಮನೆಯೊಳಗೆ ಯೋಗ ಮಾಡಿ ಅಥವಾ ಏರೋಬಿಕ್‌, ಜುಂಬಾ, ಪಿಲಾಟೆ ಮುಂತಾದ ಯಾವುದನ್ನಾದರೂ ಮಾಡಿ. ಅಂಥದ್ದಕ್ಕೆಲ್ಲ ಬೇಕಾದಷ್ಟು ಆನ್‌ಲೈನ್‌ ತರಗತಿಗಳು ಲಭ್ಯವಿವೆ. ಜಿಮ್‌ಗೆ ಹೋಗದೆಯೇ ಮನೆಯಲ್ಲಿ ಬೆಚ್ಚಗೆ ಇರುವಾಗ ಇವುಗಳನ್ನು ಮಾಡಬಹುದು.

Family Medicine and Clinic. Children's Doctor. Pediatrics. Healthcare and Prevention

ತಪಾಸಣೆಗಳು

ಆರೋಗ್ಯ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ. ಅದರಲ್ಲೂ ಅಸ್ತಮಾ ಅಥವಾ ಇನ್ನಾವುದಾದರೂ ಅಲರ್ಜಿಯ ತೊಂದರೆಗಳಿದ್ದರೆ ಕಾಲಕಾಲಕ್ಕೆ ವೈದ್ಯರು ಹೇಳಿದ ಔಷಧಿಯನ್ನು ಮರೆಯದೆ ತೆಗೆದುಕೊಳ್ಳಿ. ಪಫ್‌, ನೆಬ್ಯುಲೈಸೇಷನ್‌ ಮುಂತಾದವುಗಳ ಬಳಿಕವೂ ಉಸಿರಾಡಲು ಕಷ್ಟವಾಗುವುದು, ಕೆಮ್ಮು-ದಮ್ಮು ಕಾಡುತ್ತಿದ್ದರೆ ತಜ್ಞ ಪಲ್ಮನಾಲಜಿಸ್ಟ್‌ ಸಲಹೆ ಪಡೆಯಿರಿ.

Continue Reading

ಆರೋಗ್ಯ

Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

Early Symptoms Of Menopause: ಬದಲಾವಣೆ ಯಾರಿಗೂ ತಪ್ಪಿದ್ದಲ್ಲ. ಆದರೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಒಟ್ಟಿಗೆ ಎದುರಾದರೆ, ಅವುಗಳನ್ನು ಎದುರಿಸುವುದು ಕಷ್ಟ. ಮಹಿಳೆಯರ ಫಲವಂತಿಕೆಯ ದಿನಗಳು ಮುಗಿಯುವ ಸೂಚನೆಯಾಗಿ ಎದುರಾಗುವ ರಜೋನಿವೃತ್ತಿಯ ದಿನಗಳ ಬಗೆಗೂ ಇದನ್ನು ಅನ್ವಯಿಸಬಹುದು. ಈ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ, ಇದನ್ನು ನಿಭಾಯಿಸುವಲ್ಲಿನ ತೊಡಕು ಕಡಿಮೆಯಾಗುತ್ತದೆ. ಇಲ್ಲಿದೆ ಮಾಹಿತಿ.

VISTARANEWS.COM


on

Early Symptoms Of Menopause
Koo

ಬದಲಾವಣೆಗಳಿಗೆ ಹೊಂದಿಕೊಳ್ಳುವುದು (Early Symptoms Of Menopause) ಸುಲಭ ಎಂದು ಭಾವಿಸುವಂತಿಲ್ಲ. ಧನಾತ್ಮಕ ಬದಲಾವಣೆ ಆಗಿದ್ದರೆ ಬೇಗ ಹೊಂದಿಕೊಳ್ಳುತ್ತೇವೆ. ನಮಗಿಷ್ಟವಿಲ್ಲದ ಬದಲಾವಣೆಯಾದರೆ ಕಡ್ಡಿಯೂ ಗುಡ್ಡದಂತೆ ಕಾಣುತ್ತದೆ. ಮಹಿಳೆಯರ ಫಲವಂತಿಕೆಯ ದಿನಗಳು ಮುಗಿಯುವ ಸೂಚನೆಯಾಗಿ ಎದುರಾಗುವ ರಜೋನಿವೃತ್ತಿಯ ದಿನಗಳ ಬಗೆಗೂ ಇದನ್ನು ಅನ್ವಯಿಸಬಹುದು. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಒಟ್ಟಿಗೆ ಎದುರಾದರೆ, ಅವುಗಳನ್ನು ಎದುರಿಸುವುದು ಕಷ್ಟ ಎನಿಸಬಹುದು. ಆದರೆ ಅರಿವೇ ಗುರು ಎಂಬಂತೆ, ಈ ಬದಲಾವಣೆಗಳ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ, ಇದನ್ನು ನಿಭಾಯಿಸುವಲ್ಲಿನ ತೊಡಕು ಕಡಿಮೆಯಾಗಬಹುದು. ಹಾಗಾಗಿ ಋತುಬಂಧದ ದಿನಗಳ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ.

Foods are also responsible for relieving stress and increasing cheerfulness Foods That Lift Your Mood

ಮೂಡ್‌ ಬದಲಾವಣೆ

ಸಾಮಾನ್ಯವಾಗಿ 40ರಿಂದ 50ರ ನಡುವೆ ಯಾವಾಗಲಾದರೂ ಈ ಲಕ್ಷಣಗಳು ಪ್ರಾರಂಭವಾಗಬಹುದು. ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟಿರಾನ್‌ ಚೋದಕಗಳ ಮಟ್ಟದಲ್ಲಿ ಆಗುವ ಏರಿಳಿತದಿಂದಾಗಿ ಮಾನಸಿನ ತುಮುಲಗಳು, ಮೂಡ್‌ ಬದಲಾವಣೆ, ಕೋಪ, ಆತಂಕ, ಖಿನ್ನತೆಯಂಥ ಭಾವನೆಗಳು ಆವರಿಸುತ್ತವೆ. ಹಾರ್ಮೋನುಗಳ ಬದಲಾವಣೆ ಎನ್ನುವುದು ದೇಹದ ಮೇಲೆ ಬಹಳಷ್ಟು ರೀತಿಯಲ್ಲಿ ಪರಿಣಾಮ ಬೀರಬಲ್ಲದು.

ಅನಿಯಮಿತ ಋತುಸ್ರಾವ

ಮಾಸಿನ ಸ್ರಾವದ ಮೇಲೆ ಇದು ನಿಶ್ಚಿತವಾಗಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅತಿಯಾದ ಸ್ರಾವದಿಂದ ಹೈರಾಣಾದರೆ ಕೆಲವೊಮ್ಮೆ ಅತ್ಯಲ್ಪವೇ ಆಗಬಹುದು. ಅಂತೂ ಈ ದಿನಗಳು ಅದಷ್ಟೂ ವರ್ಷಗಳು ಇದ್ದಂತೆ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಒಂದು ತಿಂಗಳು ತಪ್ಪಿತು ಎಂದಾದರೆ ಅದು ಋತುಬಂಧದ ಕಾರಣಕ್ಕೇ ಎಂಬ ತೀರ್ಮಾನಕ್ಕೆ ಬರುವುದಲ್ಲ. ಗರ್ಭಾವಸ್ಥೆಗೂ ಇರಬಹುದು. ಹಾಗಾಗಿ ವೈದ್ಯರನ್ನು ನೋಡುವುದು ಸೂಕ್ತ.

Sweating Sickness

ಬೆವರುವುದು

ಮೈಮೇಲೆಲ್ಲ ಬಿಸಿನೀರು ಚೆಲ್ಲಿದ್ದಂತೆ, ಇದ್ದಕ್ಕಿದ್ದ ಹಾಗೆ ಮುಖ-ಮೈಯೆಲ್ಲ ಕೆಂಪಾಗಿ ಬಿಸಿಯಾದ ಅನುಭವ. ಬೆವರಿಳಿದು ತೊಟ್ಟ ವಸ್ತ್ರಗಳೂ ಒದ್ದೆಯಾಗಬಹುದು. ಇವೆಲ್ಲ ಪ್ರಾರಂಭವಾದರೆ ಋತುಬಂಧ ಹತ್ತಿರವಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಕೆಲವೇ ಸೆಂಕೆಂಡುಗಳಿಂದ ಹಿಡಿದು ಕೆಲವು ನಿಮಿಷಗಳವರೆಗೂ ಈ ಬಿಸಿ-ಬೆವರಿನ ಅನುಭವ ಇರಬಹುದು.

Sleeping tips

ನಿದ್ದೆ ವ್ಯತ್ಯಾಸ

ದೇಹದ ಕೆಲವು ಕ್ರಿಯೆಗಳಲ್ಲಿ ವ್ಯತ್ಯಾಸ ಆಗಬಹುದು. ಹಾರ್ಮೋನುಗಳ ಕೆಲಸ ಸುಸೂತ್ರವಾಗಿದ್ದರೆ ಇಡೀ ದೇಹ ಕ್ಷೇಮವಾಗಿ ಇರಬಲ್ಲದು. ಹೀಗೆ ಏರುಪೇರಾಗುವ ಅಂಶಗಳಲ್ಲಿ ನಿದ್ದೆಯೂ ಒಂದು. ಮೈಯೆಲ್ಲ ಬಿಸಿಯಾಗಿ ಬೆವರುತ್ತಿದ್ದರಂತೂ ಎಂಥಾ ಚಳಿಗಾಲವೂ ಲೆಕ್ಕಕ್ಕೆ ಸಿಗುವುದಿಲ್ಲ. ರಾತ್ರಿ ಮಲಗಿದರೆ ನಿದ್ದೆಯೂ ಮಾಯವಾಗಿ, ಹಗಲಿನ ಸುಸ್ತು, ಆಯಾಸ ಹೆಚ್ಚಿಸುತ್ತದೆ.

ಶುಷ್ಕತೆ

ಈಸ್ಟ್ರೋಜೆನ್‌ ಇಳಿಮುಖವಾದಂತೆ ಎಲ್ಲೆಡೆ ಶುಷ್ಕತೆ ಹೆಚ್ಚುತ್ತದೆ. ಚಳಿಗಾಲ ಇಲ್ಲದಿದ್ದರೂ ಮೈ-ಮುಖವೆಲ್ಲ ಒಣಗಿ ಬಿರಿದಂತಾಗಬಹುದು. ಮೂತ್ರನಾಳದ ಸೋಂಕಿನ ಸಾಧ್ಯತೆಗಳು ಹೆಚ್ಚಬಹುದು. ಈ ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಸಲಹೆಯನ್ನು ಪಡೆಯುವುದು ಅನಿವಾರ್ಯ. ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಈ ಲಕ್ಷಣಗಳ ನಿಯಂತ್ರಣಕ್ಕೆ ನೆರವಾಗುತ್ತದೆ.

ಬದಲಾವಣೆ

ಸ್ತನಗಳ ಗಾತ್ರದಲ್ಲಿ ಬದಲಾವಣೆ ಕಾಣಬಹುದು. ಈಸ್ಟ್ರೋಜೆನ್‌ ಕಡಿಮೆ ಆಗುತ್ತಿದ್ದಂತೆ, ಫಲವಂತಿಕೆಯ ದಿನಗಳ ಕ್ಷೀಣಿಸುತ್ತಿವೆ ಎಂಬುದನ್ನು ದೇಹ ಸ್ವಾಭಾವಿಕವಾಗಿಯೇ ಗ್ರಹಿಸುತ್ತದೆ. ಸ್ತನಗಳ ಬದಲಾವಣೆಗಳೆಲ್ಲ ದೇಹದ ಈ ತಿಳಿವಳಿಕೆಯ ಭಾಗವಾಗಿಯೇ ಆಗುವಂಥವು. ಸ್ತನಗಳಲ್ಲಿ ನೋವು ಕಂಡರೂ ಅಚ್ಚರಿಯಿಲ್ಲ. ಆದರೆ ಈ ದಿನಗಳಲ್ಲಿ ಆಗುವ ಯಾವುದೇ ಬದಲಾವಣೆಯನ್ನು ʻಸಹಜʼ ಎಂದು ಉಪೇಕ್ಷೆ ಮಾಡದೆ, ಸ್ತ್ರೀರೋಗ ತಜ್ಞರಲ್ಲಿ ಸಲಹೆ ಪಡೆಯುವುದು ಅಗತ್ಯ.

Black Woman, Stomach Pain and Digestion with

ನೋವುಗಳು

ಕೈ, ಕಾಲು, ಕೀಲುಗಳಲ್ಲೆಲ್ಲ ನೋವು ಕಾಡಬಹುದು. ಮೈಗ್ರೇನ್‌ನಿಂದ ನರಳುವವರ ಸಂಖ್ಯೆಯೂ ಅಧಿಕವೇ. ಹಾರ್ಮೋನುಗಳ ಕುಸಿತದಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುವುದರಿಂದ ದೇಹದಲ್ಲಿ ಎಲ್ಲೆಂದರಲ್ಲಿ ನೋವು ಸತಾಯಿಸುತ್ತದೆ. ಇದರಿಂದಾಗಿ ಸುಸ್ತು, ಆಯಾಸ ಇನ್ನಷ್ಟು ತೀವ್ರವಾಗಬಹುದು.

ಇದನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ನಿಭಾಯಿಸುವುದು ಹೇಗೆ?

ಋತುಬಂಧ ಸಮೀಪಿಸಿದೆಯೇ ಎಂಬುದನ್ನು ತಿಳಿಯುವುದಕ್ಕೆ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಕೆಲವೊಮ್ಮೆ ಈ ಲಕ್ಷಣಗಳು ಒಂದೆರಡು ವರ್ಷಗಳಲ್ಲಿ ಮುಗಿಯದೆ ದೀರ್ಘಕಾಲ ತೆಗೆದುಕೊಳ್ಳಬಹುದು. ಆಗ ನಿಯಮಿತವಾಗಿ ತಪಾಸಣೆ ಅಗತ್ಯ. ಉಳಿದಂತೆ, ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಆವಶ್ಯಕ. ಮನಸ್ಸಿಗೆ ಅನಿಸಿದ್ದನ್ನು ಯಾರೊಂದಿಗಾದರೂ ಹೇಳಿಕೊಳ್ಳಿ. ಹೇಳಲಾಗದಿದ್ದರೆ ನಿಯಮಿತವಾಗಿ ಡೈರಿ ಬರೆಯಿರಿ. ಸತ್ವಯುತ ಆಹಾರ ಮತ್ತು ವ್ಯಾಯಾಮಗಳನ್ನು ಎಂದಿಗೂ ತಪ್ಪಿಸಬೇಡಿ.

Continue Reading

ಆರೋಗ್ಯ

Hair Growth Tips: ಕೂದಲಿನ ಆರೈಕೆಯಲ್ಲಿ ಮೆಂತೆಯ ಜಾದೂ ಕಂಡಿದ್ದೀರಾ?

Hair Growth Tips: ಅಡುಗೆ ಮನೆಯ ಘಮ ಹೆಚ್ಚಿಸುವ ಮೆಂತೆ ಬೀಜಗಳು ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ. ಜೊತೆಗೆ ಕೂದಲಿನ ಆರೈಕೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಈ ಬೀಜಗಳು ತಲೆಯ ಚರ್ಮಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಬುಡಕ್ಕೆ ಆಮ್ಲಜನಕದ ಸರಬರಾಜನ್ನು ಅಧಿಕಗೊಳಿಸುತ್ತವೆ. ಇದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ.

VISTARANEWS.COM


on

Hair Growth Tips
Koo

ಸಾವಿಲ್ಲದವರ ಮನೆಯ (Hair Growth Tips) ಸಾಸಿವೆ ತರುವುದು ಬುದ್ಧನ ಕಾಲದಲ್ಲಾಯಿತು. ಈಗಿನ ಕಾಲದಲ್ಲಿ ಕೂದಲು ಉದುರದವರ ಮನೆಯ ಸಾಸಿವೆ ತರುವುದಕ್ಕೆ ಹೇಳಬಹುದು. ಅಂದರೆ, ಅಷ್ಟು ಸರ್ವವ್ಯಾಪಿಯಾಗಿದೆ ಕೂದಲಿನ ಸಮಸ್ಯೆ. ಕೂದಲು ಉದುರುವುದಕ್ಕೆ ಚಳಿಗಾಲ, ಬೇಸಿಗೆ ಎಂಬ ಭೇದವಿಲ್ಲ; ಮಳೆಗಾಲ ಬಂದರೂ ತಡೆಯಿಲ್ಲ. ವಾತಾವರಣದಲ್ಲಿ ತೇವ ಹೆಚ್ಚಾದ ನೆವಕ್ಕೆ ಕೆಲವು ಸೋಂಕುಗಳು ಕೂದಲಿನ ಬುಡವನ್ನು ಮತ್ತು ತಲೆಯ ಚರ್ಮವನ್ನು ಬಾಧಿಸಬಹುದು. ಇದರಿಂದಲೂ ಕೂದಲು ಉದುರುತ್ತದೆ. ಕೂದಲಿನ ಸಮಸ್ಯೆಗಳಿಗೆ ಮೆಂತೆ ಬೀಜಗಳಿಂದ ಪರಿಹಾರ ದೊರೆಯಬಲ್ಲದೇ? ಅಡುಗೆಮನೆಯ ಘಮ ಹೆಚ್ಚಿಸುವ ಈ ಮೆಂತೆಯು ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹಿಗಳಿಗೆ, ತೂಕ ಇಳಿಸುವವರಿಗೆ ಇದು ನೆಚ್ಚಿನ ಸಂಗಾತಿ. ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದಕ್ಕೆ ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೂ ಇದು ಬಳಕೆಯಲ್ಲಿದೆ. ಇವೆಲ್ಲವುಗಳ ಜೊತೆಗೆ ಕೂದಲಿನ ಆರೈಕೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಈ ಬೀಜಗಳು ತಲೆಯ ಚರ್ಮಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಬುಡಕ್ಕೆ ಆಮ್ಲಜನಕದ ಸರಬರಾಜನ್ನು ಅಧಿಕಗೊಳಿಸುತ್ತವೆ. ಇದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ. ಮೆಂತೆಯಲ್ಲಿ ನಾರು ಮತ್ತು ಪ್ರೊಟೀನ್‌ ಅಂಶ ಅಧಿಕವಾಗಿದೆ. ಇವುಗಳಿಂದ ಕೂದಲು ಸದೃಢವಾಗಿ ತುಂಡಾಗುವುದು ನಿಲ್ಲುತ್ತದೆ. ನೂರು ಗ್ರಾಂ ಮೆಂತೆ ಬೀಜಗಳಲ್ಲಿ ಸುಮಾರು 23 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಇದಲ್ಲದೆ, ಮೆಂತೆಯಲ್ಲಿರುವ ಲೆಸಿಥಿನ್‌ ಎಂಬ ಅಂಶವು ಕೂದಲಿನ ಬಲವರ್ಧನೆಗೆ ಸಹಾಯಕ. ಮಾತ್ರವಲ್ಲ, ತಲೆಯ ಚರ್ಮವು ಉತ್ಪಾದಿಸುವ ತೈಲದಂಶವನ್ನು ಕಡಿಮೆ ಮಾಡಿ, ಪಿಎಚ್‌ ಸರಿದೂಗಿಸಲು ಮಾಡಲು ಇದರಿಂದ ಸಾಧ್ಯ. ಹಾಗಾಗಿ ತಲೆಹೊಟ್ಟನ್ನು ಕೂದಲುದುರುವುದನ್ನು ಕಡಿಮೆ ಮಾಡುತ್ತದೆ, ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ.

Fenugreek Seeds

ಬಳಸುವುದು ಹೇಗೆ?

ಹೆಚ್ಚಿನವರು ಬಳಸುವ ವಿಧಾನವೆಂದರೆ ಮೆಂತೆಯ ಪೇಸ್ಟ್‌ ಕೂದಲಿಗೆ ಹಚ್ಚುವುದು. ರಾತ್ರಿ ಮಲಗುವಾಗ ಎರಡು ದೊಡ್ಡ ಚಮಚ ಮೆಂತೆಯನ್ನು ನೀರಿಗೆ ಹಾಕಿ. ಬೆಳಗಿನವರೆಗೆ ಅದು ಚೆನ್ನಾಗಿ ನೆನೆದು, ಉಬ್ಬಿರುತ್ತದೆ. ಅದನ್ನು ಮೊಸರಿನೊಂದಿಗೆ ರುಬ್ಬಿ ಕೂದಲಿಗ ಬುಡ ಸೇರಿದಂತೆ ಎಲ್ಲೆಡೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ಒಳ್ಳೆಯ ಕಂಡೀಶನರ್‌ ದೊರೆತು, ಹೊಟ್ಟು ತೊಲಗಿ, ಕೂದಲು ನಳನಳಿಸುತ್ತದೆ.

Fenugreek

ಮೆಂತೆಯ ಎಣ್ಣೆ

ಅರ್ಧ ಕಪ್‌ ತೆಂಗಿನ ಎಣ್ಣೆಗೆ 2 ದೊಡ್ಡ ಚಮಚ ಮೆಂತೆಯ ಬೀಜಗಳನ್ನು ಹಾಕಿ, ಕುದಿಸಿ. ಈ ಎಣ್ಣೆ ಆರಿ ತಣ್ಣಗಾದ ಮೇಲೆ ಗಾಜಿನ ಬಾಟಲಿಗೆ ತುಂಬಿಸಿಡಿ. ಈ ಎಣ್ಣೆಯನ್ನು ರಾತ್ರಿ ಮಲಗುವ ಒಂದು ತಾಸಿ ಮೊದಲು ತಲೆಗೆ ಹಾಕಿ ಲಘುವಾಗಿ ಮಸಾಜ್‌ ಮಾಡಿ. ಬೆಳಗ್ಗೆ ತಲೆಸ್ನಾನ ಮಾಡಿ. ಇದರಿಂದ ಇಡೀ ರಾತ್ರಿ ಈ ಎಣ್ಣೆಯಲ್ಲಿ ನೆನೆದ ತಲೆಯ ಚರ್ಮ ಮತ್ತು ಕೂದಲ ಬುಡಗಳು ಸೊಂಪಾಗಿ ಸತ್ವಗಳನ್ನು ಹೀರಿಕೊಳ್ಳುತ್ತವೆ.

Fenugreek water

ಮೆಂತೆಯ ನೀರು

2 ಚಮಚ ಮೆಂತೆಯನ್ನು (ಬೀಜ/ಪುಡಿ ಯಾವುದಾದರೂ ಸರಿ) ದೊಡ್ಡ ಗ್ಲಾಸ್‌ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನೀರು ಮುಕ್ಕಾಲು ಗ್ಲಾಸಿನಷ್ಟು ಆಗುವವರೆಗೆ ಕುದಿಸಿ. ಇದು ಬೆಚ್ಚಗಿರುವಾಗಲೇ ತಲೆಯೆಲ್ಲ ನೆನೆಯುವಂತೆ ಹಚ್ಚಿಕೊಳ್ಳಿ. ಅರ್ಧ ತಾಸಿನ ನಂತರ ತಲೆಸ್ನಾನ ಮಾಡಿ. ಇದು ಸಹ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ನೀಡಿ, ಹೊಳಪು ಹೆಚ್ಚಿಸುತ್ತದೆ. ಕೂದಲು ಉದುರುವುದನ್ನು ತಡೆ, ಬೆಳವಣಿಗೆಗೆ ನೆರವಾಗುತ್ತದೆ.

ಇದನ್ನೂ ಓದಿ: Coriander Benefits For Beauty: ನಿಮ್ಮೆಲ್ಲ ಸೌಂದರ್ಯ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪಿನಲ್ಲಿದೆ ಸರಳ ಪರಿಹಾರ!

ಮೆಂತೆ-ಲೋಳೆಸರದ ಜೆಲ್‌

2 ಚಮಚ ಮೆಂತೆಯ ಪುಡಿಯನ್ನು ಅಲೊವೇರಾ ಜೆಲ್‌ ಜೊತೆಗೆ ಮಿಶ್ರ ಮಾಡಿ. ಇದನ್ನು ತಲೆಗೆಲ್ಲ ಲೇಪಿಸಿ. ಅರ್ಧ ತಾಸಿನ ನಂತರ ತಲೆಸ್ನಾನ ಮಾಡಿ. ಇದರಿಂದ ತಲೆಯ ಚರ್ಮದ ನವೆ, ಕಿರಿಕಿರಿಯನ್ನು ಹೋಗಲಾಡಿಸಿ, ಕೂದಲಿಗೆ ಹೊಳಪು ನೀಡಬಹುದು.

Continue Reading
Advertisement
Ninagagi Kannada Serial entry by Pooja Gandhi
ಕಿರುತೆರೆ32 mins ago

Ninagagi Kannada Serial: ಕಿರುತೆರೆಗೆ ಎಂಟ್ರಿ ಕೊಟ್ಟ ಮಳೆ ಹುಡುಗಿ ಪೂಜಾ ಗಾಂಧಿ!

Cauvery Dispute
ರಾಜಕೀಯ33 mins ago

Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

haveri News
ಹಾವೇರಿ35 mins ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಕರ್ನಾಟಕ53 mins ago

Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Bhavana Ramanna hoovu foundation Varna Spardhe Bharathanatya Competition
ಸಿನಿಮಾ1 hour ago

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Road Accident
ಬೆಂಗಳೂರು ಗ್ರಾಮಾಂತರ1 hour ago

Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

Gold Rate Today
ಚಿನ್ನದ ದರ1 hour ago

Gold Rate Today: ಮತ್ತೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ; ಆಭರಣ ಕೊಳ್ಳುವ ಮುನ್ನ ದರ ಗಮನಿಸಿ

Chandan Shetty talk about Nivedita other marriage
ಸ್ಯಾಂಡಲ್ ವುಡ್2 hours ago

Chandan Shetty: ನಿವೇದಿತಾ ಇನ್ನೊಂದು ಮದುವೆ ಆದ್ರೆ ಓಕೆ ನಾ? ಚಂದನ್‌ ಶೆಟ್ಟಿ ಹೇಳಿದ್ದೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಮುಂದುವರೆದ ಇಡಿ ಡ್ರಿಲ್

Donald Trump Assassination Bid
ವಿದೇಶ2 hours ago

Donald Trump Assassination Bid: ಟ್ರಂಪ್ ಹತ್ಯೆಗೆ ಯತ್ನಿಸಿದವನನ್ನು ಸ್ನೈಪರ್ ರೈಫಲ್‌‌ನಿಂದ ಹೊಡೆದುರುಳಿಸಿದ ಕಮಾಂಡೊ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ19 hours ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ24 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ1 day ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ5 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ5 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ6 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

ಟ್ರೆಂಡಿಂಗ್‌