Phone Addiction: ಕುಡಿತ, ಸ್ಮೋಕಿಂಗ್‌ನಂತೆ ಮೊಬೈಲ್‌ ಕೂಡ ಅಪಾಯಕಾರಿ ಚಟ; ಹುಷಾರು! - Vistara News

ಲೈಫ್‌ಸ್ಟೈಲ್

Phone Addiction: ಕುಡಿತ, ಸ್ಮೋಕಿಂಗ್‌ನಂತೆ ಮೊಬೈಲ್‌ ಕೂಡ ಅಪಾಯಕಾರಿ ಚಟ; ಹುಷಾರು!

ಸ್ಮಾರ್ಟ್‌ ಫೋನ್‌ ಹೇಗೆ ಚಟವಾಗಿದೆ (smart phone addiction) ತಮಗೆ ಎಂಬುದನ್ನು ತುಂಬಿದ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಜನ! ʻನಮ್ಮ ಅಸಿಸ್ಟಿಂಟ್ʼ ಎಂಬ ಹಣೆಪಟ್ಟಿಯೊಂದಿಗೆ ಬರುವ ಈ ಗೆಜೆಟ್‌ಗಳಿಗೆ ಈಗ ನಾವೇ ಗುಲಾಮರಾಗಿದ್ದೇವಲ್ಲ!

VISTARANEWS.COM


on

children's mobile addiction
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವ್ಯಸನಗಳ ಬಗ್ಗೆ ಗುಟ್ಟಾಗಿ ಮಾತಾಡುತ್ತಿದ್ದ ಕಾಲವೊಂದಿತ್ತು. ಕುಡಿತ, ಜೂಜು, ಸಹವಾಸ ಮುಂತಾದ ಯಾವುದೇ ಚಟಗಳಿದ್ದರೂ ಅದು ಕಿವಿಯಿಂವ ಕಿವಿಗೆ ಪಿಸು ಮಾತಿನಲ್ಲಿ ಹರಡುತ್ತಿತ್ತು. ಆದರೀಗ ವ್ಯಸನಗಳ ಬಗ್ಗೆಯೂ ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಯುವ ಜನರ ಬಾಯಿ ತೆರೆಸಿದರೆ, ಸ್ಮಾರ್ಟ್‌ ಫೋನ್‌ ಹೇಗೆ ಚಟವಾಗಿದೆ (smart phone addiction) ತಮಗೆ ಎಂಬುದನ್ನು ತುಂಬಿದ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ! ʻನಮ್ಮ ಅಸಿಸ್ಟೆಂಟ್ʼ ಎಂಬ ಹಣೆಪಟ್ಟಿಯೊಂದಿಗೆ ಬರುವ ಈ ಗೆಜೆಟ್‌ಗಳಿಗೆ ಈಗ ನಾವೇ ಗುಲಾಮರಾಗಿದ್ದೇವಲ್ಲ ಎಂಬ ಹಳಹಳಿಕೆ ಹಲವರ ಬಾಯಲ್ಲಿ ಬರುತ್ತಿದೆ. ಹಾಗಾದರೆ ಸ್ಮಾರ್ಟ್‌ಫೋನ್‌ ವ್ಯಸನ ಎನ್ನುವುದು ನಿಜವೇ? ಯಾರೆಲ್ಲಾ ಬಲಿಯಾಗುತ್ತಿದ್ದಾರೆ? ಉಳಿದೆಲ್ಲಾ ಚಟಗಳನ್ನು ಬಿಡಿಸಿದಂತೆ ಇದನ್ನೂ ಬಿಡಿಸಬಹುದೇ?

ವ್ಯಸನ ಎಂದರೇನು?

ಇದನ್ನು ಮೊದಲು ಅರಿಯೋಣ. ನಿಯಂತ್ರಣ, ಒತ್ತಡ ಮತ್ತು ಪರಿಣಾಮಗಳ ಬಗ್ಗೆ ಯೋಚಿಸದೆಯೇ ಮಾಡುವ ಕೆಲಸಗಳನ್ನು ವ್ಯಸನ ಎನ್ನಬಹುದು. ಸ್ಮಾರ್ಟ್‌ಫೋನ್‌ ಉದಾಹರಣೆಯನ್ನೇ ತೆಗೆದುಕೊಂಡರೆ, ನಮ್ಮ ನಿಯಂತ್ರಣ ಮೀರಿ ಮತ್ತೆ ಮತ್ತೆ ಸ್ಮಾರ್ಟ್‌ಫೋನ್‌ ಬಳಸುವುದು; ಆಗಾಗ ಫೋನಿನ ಮೇಲೆ ಅಥವಾ ನೋಟಿಫಿಕೇಷನ್‌ಗಳ ಮೇಲೆ ಕೈಯಾಡಿಸಲೇಬೇಕೆಂಬ ಒತ್ತಡ; ಪರಿಣಾಮವಾಗಿ ದಿನದ ಕೆಲಸ, ಮನಸ್ಸಿನ ನೆಮ್ಮದಿ, ಬದುಕಿನ ಸೌಂದರ್ಯವೆಲ್ಲಾ ಹಾಳಾದರೂ ಲೆಕ್ಕಕ್ಕಿಲ್ಲ ಎನ್ನುವ ಹಾಗಾದರೆ ಅದು ಖಂಡಿತಕ್ಕೂ ವ್ಯಸನ. ಮೆಸೇಜ್‌ಗಳನ್ನು ಪದೇಪದೆ ನೋಡುವುದು, ಟಿಕ್‌ಟಾಕ್‌, ಇಸ್ಟಾಗ್ರಾಂ ಮುಂತಾದೆಡೆಯಲ್ಲಿ ಯಾರೇನೆಂದರು ಎಂಬ ಕುತೂಹಲ, ಏನಿಲ್ಲದಿದ್ದರೂ ಫೇಸ್‌ಬುಕ್‌ಗಾಗಿ ಫೋನಿನ ಪರದೆ ಗೀರುತ್ತಿರುವುದು- ಇಂಥವೆಲ್ಲಾ ನಮ್ಮದೇ ನಡತೆಯಲ್ಲಿ ಕಂಡುಬಂದರೆ ಅಚ್ಚರಿಯಿಲ್ಲ.

ಇದನ್ನೂ ಓದಿ: Child death : ಅಯ್ಯೋ ದೇವ್ರೆ! ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ತಗುಲಿ 8 ತಿಂಗಳ ಮಗು ಸಾವು

Phone Addiction

ಇನ್ನೂ ಮುಂದುವರಿದು, ಫೋನಿನ ಬ್ಯಾಟರಿ ಖರ್ಚಾಗಿಬಿಟ್ಟರೆ, ಸ್ಮಾರ್ಟ್‌ಫೋನನ್ನೆಲ್ಲೋ ಬಿಟ್ಟು ಬಂದರೆ, ಬೆಳಗ್ಗೆ ಎದ್ದಾಗ ದಿಂಬಿನಡಿ ಫೋನ್‌ ಕಾಣದಿದ್ದರೆ- ಹೀಗೆ ಫೋನ್‌ ಕೈಯಲ್ಲಿಲ್ಲ ಎಂಬಂಥ ಯಾವುದೇ ಸಂದರ್ಭದಲ್ಲಿ ವ್ಯಕ್ತಿ ಅತಿಯಾಗಿ ಒತ್ತಡಕ್ಕೊಳಗಾಗುವುದನ್ನು ನೋಡುತ್ತೇವೆ. ಕೋಪ-ತಾಪ, ಹತಾಶೆ, ಸುತ್ತಲಿನವರ ಮೇಲೆ ಅನಗತ್ಯವಾಗಿ ರೇಗಾಡುವುದು, ಕಿರಿಕಿರಿ, ದಣಿವು ಮುಂತಾದವೆಲ್ಲಾ ಸ್ಮಾರ್ಟ್‌ಫೋನ್‌ ವ್ಯಸನದ ಲಕ್ಷಣಗಳು ಎನ್ನಬಹುದು. ಇನ್ನೂ ಸೂಕ್ಷ್ಮವಾಗಿ ಹೇಳಬೇಕೆಂದರೆ-

ಸ್ಮಾರ್ಟ್‌ಫೋನ್‌ಗಾಗಿ ಮಕ್ಕಳು ಸುಳ್ಳು ಹೇಳುವುದು, ಹೋಂವರ್ಕ್‌ ಅಥವಾ ದಿನದ ಕೆಲಸಗಳನ್ನು ಮುಗಿಸಲು ಹಿಂದೆ ಬೀಳುವುದು, ಆಪ್ತರಿಂದ ದೂರವಾಗುವುದು, ಸ್ಮಾರ್ಟ್‌ಫೋನ್‌ ಬಳಕೆ ದಿನದಿಂದ ದಿನಕ್ಕೆ ಹೆಚ್ಚುವುದು, ಕುಟುಂಬದೊಂದಿಗೆ ಸಮಯ ಕಳೆಯಲು ಮನಸ್ಸು ಮಾಡದಿರುವುದು, ಫೋನ್‌ ದೊರೆಯದಿದ್ದರೆ ಸಿಟ್ಟು- ಕಿರಿಕಿರಿ, ಬೋರಾಗುತ್ತಿದೆ ಎಂಬ ಕಾರಣಕ್ಕೆ ಫೋನ್‌ ಹಿಡಿಯುವುದು, ಯಾರ ಮನೆಗೆ ಹೋಗುವುದಿಲ್ಲ ಅಥವಾ ಯಾರು ಮನೆಗೆ ಬಂದರೂ ಲಕ್ಷ್ಯಕ್ಕಿಲ್ಲದಿರುವುದು, ಫೋನ್‌ ರಿಂಗಾಗದಿದ್ದರೂ ಆದಂತೆ ಕೇಳುವುದು- ಇಂಥವೆಲ್ಲವೂ ಸ್ಮಾರ್ಟ್‌ಫೋನ್‌ ವ್ಯಸನವನ್ನೇ ಸೂಚಿಸುತ್ತವೆ.

ಏನಾಗುತ್ತದೆ?

ಸ್ಮಾರ್ಟ್‌ಫೋನ್‌ ಚಟ ಇದ್ದರೇನೀಗ, ಕುಡಿತದಂತೆ ಆರೋಗ್ಯ ಹಾಳಾಗುವುದಿಲ್ಲವಲ್ಲ ಎಂಬುದು ಪ್ರಶ್ನೆ. ಜೂಜಿನಲ್ಲಿ ತೊಡಗಿಕೊಂಡು ಮನೆ ಮುಳುಗಿಸಿಕೊಂಡವರಿಲ್ಲವೇ? ಅವರದ್ದೂ ಆರೋಗ್ಯ ಹಾಳಾಗದಿರಬಹುದು- ಆದರೆ ಇಡೀ ಬದುಕಿನ ಮೇಲೆ ಘೋರ ಪರಿಣಾಮ ಉಂಟಾಗಿದ್ದು ಹೌದಲ್ಲ. ಹಾಗಾಗಿ ಎಲ್ಲಾ ಚಟಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಲ್ಲ. ಒಂದೊಂದಕ್ಕೂ ಭಿನ್ನವಾದ ಕೆಟ್ಟ ಪರಿಣಾಮಗಳಿರುತ್ತವೆ. ಸ್ಮಾರ್ಟ್‌ಫೋನ್‌ ವ್ಯಸನ ಮೊದಲಿಗೆ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಸ್ವಾಸ್ಥ್ಯವನ್ನು ಕದಡುತ್ತದೆ.

ಅಂದರೆ, ಪದೇಪದೆ ಫೋನ್‌ ಗೀರುವ ಚಟದಿಂದ ರಾತ್ರಿ ನಿದ್ದೆ ಬರುವುದಿಲ್ಲ ಅಥವಾ ಬಂದರೂ ಆಗಾಗ ಎಚ್ಚರವಾಗುತ್ತದೆ. ಏಕಾಗ್ರತೆ ಸಾಧಿಸಲು ಆಗದೆ, ಸೃಜನಶೀಲತೆಯೇ ಕುಂಠಿತವಾಗುತ್ತದೆ. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂಬಂತೆ ವಿದ್ಯಾರ್ಥಿಗಳ ವ್ಯಾಸಂಗ ಹಿಂದಾಗುತ್ತದೆ. ಒತ್ತಡ, ಕಿರಿಕಿರಿ, ಸಿಟ್ಟು, ರೇಗಾಟಗಳು ವ್ಯಕ್ತಿಯ ಮನಃಶಾಂತಿಯನ್ನು ನಾಶ ಮಾಡುತ್ತವೆ. ಎಲ್ಲರ ನಡುವೆ ಇದ್ದೂ ಒಂಟಿ ಎನಿಸುವುದು, ಆಪ್ತರೊಂದಿಗಿನ ಸಂಬಂಧ ಹಾಳಾಗುವುದು, ಅಭದ್ರತೆಯ ಭಾವನೆ, ಖಿನ್ನತೆಯಂಥ ನಾನಾ ಮಾನಸಿಕ ಸಮಸ್ಯೆಗಳಿಗೆ ಮೂಲವಾಗುತ್ತದೆ. ಇವೆಲ್ಲದರ ಫಲ ದೇಹದ ಮೇಲೂ ಕಾಣಲಾರಂಭಿಸುತ್ತದೆ.

Phone Addiction

ಗೆಲುವು ನಿಮ್ಮದು!

ಯಕಃಶ್ಚಿತ್‌ ನಿರ್ಜೀವ ಗೆಜೆಟ್ಟೊಂದು ನಿಮ್ಮ ಮೇಲೆ ನಿಯಂತ್ರಣ ಸಾಧಿಸುವುದು ನಿಜಕ್ಕೂ ನಾಚಿಕೆಗೇಡು! ಹಾಗಾಗಿ ಈ ಚಟದಿಂದ ಮುಕ್ತರಾಗಬೇಕೆಂಬ ಸಂಕಲ್ಪವನ್ನು ಮೊದಲು ಮಾಡಿ. ಮೊದಲಿಗೆ ದಿನಕ್ಕೆ ಇಷ್ಟೇ ಹೊತ್ತು ಫೋನ್‌ ಮುಟ್ಟಬಹುದು ಎಂದು ಗೆರೆ ಹಾಕಿಕೊಳ್ಳಿ. ಸ್ಕ್ರೀನ್‌ ಟೈಮ್‌ ಆನ್‌ ಮಾಡಿಕೊಂಡು, ಎಷ್ಟೊತ್ತು ಫೋನ್‌ ಹಿಡಿದಿದ್ದೀರಿ ಎಂಬುದನ್ನು ದಿನದ ಅಂತ್ಯಕ್ಕೆ ಪರೀಕ್ಷಿಸಿ. ಅನಗತ್ಯವಾದ ಎಲ್ಲಾ ಗ್ರೂಪುಗಳಿಂದ ಹೊರಬನ್ನಿ, ಸಾಮಾಜಿಕ ಮಾಧ್ಯಮಗಳಿಂದ ಡಿಟಾಕ್ಸ್‌ ಮಾಡಿಕೊಳ್ಳಿ. ಕ್ರಮೇಣ ವಾರಕ್ಕೊಮ್ಮೆ ಸ್ಮಾರ್ಟ್‌ಫೋನ್‌ ಉಪವಾಸ ಕೈಗೊಳ್ಳಿ- ಅಂದರೆ ವಾರಕ್ಕೊಮ್ಮೆ ಫೋನ್‌ಗೂ ರಜೆ!

ಇದನ್ನೂ ಓದಿ: HP Dragonfly G4: ಹೈಬ್ರಿಡ್ ಕೆಲಸಕ್ಕೆ ಎಚ್‌ಪಿಯಿಂದ ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್ ಟಾಪ್ ಬಿಡುಗಡೆ

ನಿಮ್ಮಿಷ್ಟದ ಹವ್ಯಾಸ, ಓದು, ಸಂಗೀತ ಮುಂತಾದ ಧನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಫೇಸ್‌ಬುಕ್‌ನಲ್ಲಿ ಯಾರೊಂದಿಗೋ ಮಾತಾಡುವ ಬದಲು, ಹಳೆಯ ಮಿತ್ರರನ್ನು ಎದುರಾಎದುರು ಭೇಟಿ ಮಾಡಿ ಬೈಟೂ ಚಹಾ ಹೀರಿ. ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಪ್ರವಾಸ ಹೋಗುವಾಗ ಫೋನ್‌ ನೆಟ್‌ವರ್ಕ್‌ ಇಲ್ಲದ ಸ್ಥಳಗಳನ್ನು ಹುಡುಕಿ. ನಿಮ್ಮ ಅಗತ್ಯಕ್ಕೆ ಗೆಜೆಟ್‌ಗಳು ಒದಗಿಬರಬೇಕೇ ಹೊರತು, ನಿಮ್ಮ ಜುಟ್ಟು ಹಿಡಿಯುವುದಲ್ಲ ಅವು. ಈ ವ್ಯಸನದಿಂದ ಮುಕ್ತರಾಗಲು ಸಾಧ್ಯವಿದೆ, ಪ್ರಾಮಾಣಿಕವಾಗಿ ಪ್ರಯತ್ನಿಸಿದಲ್ಲಿ ಗೆಲುವು ನಿಮ್ಮದು!‌

Phone Addiction

ಫೋನ್‌ ಕಾಣದಿದ್ದರೆ ತಲೆ ಕೆಟ್ಟಂತಾಗುತ್ತದೆ! ಏನು ಮಾಡಲಿ?

ಒಳ್ಳೆಯದು! ದಿನದಲ್ಲಿ ಹೆಚ್ಚೆಚ್ಚು ಹೊತ್ತು ಫೋನ್‌ನಿಂದ ದೂರ ಇರುವುದಕ್ಕೆ ಪ್ರಯತ್ನಿಸಿ. ಎಲ್ಲಾ ನೋಟಿಫೀಕೇಶನ್‌ ತೆಗೆದುಹಾಕಿ. ನಿಮ್ಮಿಷ್ಟದ ಏನಾದರೊಂದು ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಇದನ್ನೀಗ ತಲೆ ಕೆಡುವುದಕ್ಕಲ್ಲ, ಸರಿ ಮಾಡುವುದಕ್ಕೆ ಮಾಡಲೇಬೇಕಾದ್ದು.

ಮಗುವಿನ ಕೈಯಿಂದ ಫೋನ್‌ ಬಿಡಿಸಲೇ ಆಗುತ್ತಿಲ್ಲ. ಏನು ಮಾಡುವುದು?

ಮಗುವಿನ ಕೈಗೆ ಫೋನ್‌ ಕೊಡಬೇಡಿ. ಅದರ ಕೈಗೆಟುಕುವಂತೆ ಫೋನ್‌ ಇರಿಸಬೇಡಿ. ಫೋನಿಗಾಗಿ ಅತ್ತು ರಂಪ ಮಾಡಿದರೆ ಖಂಡಿತಾ ಕೊಡಬೇಡಿ. ಅತ್ತಷ್ಟೂ ಫೋನ್‌ ದೂರ ಆಗುತ್ತದೆ ಎಂಬುದನ್ನು ಎಳೆಯ ಮನಕ್ಕೆ ಅರ್ಥ ಮಾಡಿಸಿ. ಬದಲಿಗೆ, ಆಟೋಟಗಳಲ್ಲಿ ಅದನ್ನು ತೊಡಗಿಸಿ. ಅದರೊಂದಿಗೆ ನೀವೂ ಕುಳಿತು ಹಾಡಿ, ಚಿತ್ರ ಬರೆಯಿರಿ, ಕಥೆ ಹೇಳಿ, ಬೇರೆ ಏನಾದರೂ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Canne Film Festival 2024: ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ತಾರೆಯರ ಫ್ಯಾಷನ್ ಕಲರವ!

ಕಾನ್‌ ಫಿಲ್ಮ್ ಫೆಸ್ಟಿವಲ್‌ನ 3ನೇ ದಿನದಂದು (Canne Film Festival 2024) ಬಾಲಿವುಡ್ ನಟಿ ಅಥಿಯಾ ಶೆಟ್ಟಿಯ ಶಿಮ್ಮರ್ ಜಂಪ್‌ಸೂಟ್‌ನಲ್ಲಿ ಶೋಭಿತಾ ಕಾಣಿಸಿಕೊಂಡರೆ; ಊರ್ವಶಿ ರೌತೆಲಾ ಆಕರ್ಷಕ ರೆಡ್ ಗೌನ್‌ನಲ್ಲಿ ಕಣ್ಮನ ಸೆಳೆದರು. ಇನ್ನುಳಿದವರು ಹೇಗೆಲ್ಲಾ ಕಂಡರು? ಇದಕ್ಕಾಗಿ ಹೇಗೆಲ್ಲಾ ಸಿದ್ಧಗೊಂಡಿರುತ್ತಾರೆ ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Canne Film Festival 2024
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾನ್‌ ಫಿಲ್ಮ್ ಫೆಸ್ಟಿವಲ್ 2024ರ ರೆಡ್‌ ಕಾರ್ಪೆಟ್‌ (Canne Film Festival 2024) ಮೇಲೆ ಒಂದೊಂದು ದಿನವೂ ಒಂದೊಂದು ಬಗೆಯ ವಿಶೇಷವಾದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿಯರು ಹಾಗೂ ಸೆಲೆಬ್ರೆಟಿಗಳು 3ನೇ ದಿನವೂ ಕೂಡ ಆಫ್ ಶೋಲ್ಡರ್ ಡಿಸೈನರ್‌ವೇರ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದರು. ಅಂದಹಾಗೆ, ಬಾಲಿವುಡ್ ನಟಿ ಶೋಭಿತಾ, ಕಳೆದ ಬಾರಿ ನಟಿ ಅಥಿಯಾ ಶೆಟ್ಟಿ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ನಮ್ರತಾ ವಿನ್ಯಾಸಗೊಳಿಸಿ, ಧರಿಸಿದ್ದ ಶಿಮ್ಮರ್ ಪರ್ಪಲ್ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡರು. ಹಳೆಯ ಡಿಸೈನ್ ಮತ್ತೊಮ್ಮೆ ರಿಪೀಟ್ ಮಾಡಿದರು.

ಊರ್ವಶಿ ರೌತೆಲಾ ಆಕರ್ಷಕ ರೆಡ್ ಗೌನ್: ಇನ್ನು ಬಾಲಿವುಡ್ ನಟಿ ಊರ್ವಶಿ ರೌತೆಲಾ, ತುನೇಸಿಯನ್ ಡಿಸೈನರ್‌ನ ಆಫ್ ಶೋಲ್ಡರ್ ಕೇಪ್ ಶೈಲಿಯ ಬಲೂನ್ ಸ್ಲೀವ್‌ನ ಆಕರ್ಷಕ ರೆಡ್ ಗೌನ್‌ನಲ್ಲಿ ಯೂರೋಪಿಯನ್ ಕ್ವೀನ್ ಲುಕ್‌ ಮೂಲಕ ಕಣ್ಮನ ಸೆಳೆದರು.

ಇದನ್ನೂ ಓದಿ: Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

ದೀಪ್ತಿ – ನಮಿತಾ ತಾಪರ್ ಡಿಸೈನರ್‌ವೇರ್ಸ್: ಇನ್ನು, ದೀಪ್ತಿ ಯೆಲ್ಲೋ & ಗೋಲ್ಡ್ ಫಿಶ್ಟೇಲ್ ರಫಲ್ ಗೌನ್‌ನಲ್ಲಿ ಕಾಣಿಸಿಕೊಂಡರೆ, ನಮಿತಾ ರಾಯಲ್ ಬ್ಲ್ಯೂ ಸ್ಯಾಟೀನ್ ಗೌನ್‌ನಲ್ಲಿ ಪೋಸ್ ನೀಡಿದರು.

ಸೆಲೆಬ್ರೆಟಿಗಳ ರೆಡ್‌ಕಾರ್ಪೆಟ್‌ ಸ್ಟೈಲಿಂಗ್ ಬದಲಾವಣೆ: ಮೊದಲ ದಿನ ಬಹುತೇಕ ಸೆಲೆಬ್ರೆಟಿಗಳು ತಮ್ಮ ಡಿಸೈನರ್‌ವೇರ್‌ಗಳು ಎಕ್ಸ್ಕ್ಲೂಸಿವ್ ಡಿಸೈನ್ ಹೊಂದಿವೆ ಎಂದು ಭಾವಿಸಿಯೇ ರೆಡ್ ಕಾರ್ಪೆಟ್‌ ಮೇಲೆ ವಾಕ್ ಮಾಡಿದರೆ, ತದನಂತರ ಕೊಂಚ ಜಾಗರೂಕರಾಗಿ ಸ್ಟೈಲಿಂಗ್‌ನಲ್ಲಿ ಬದಲಾವಣೆ ತಂದಿರುವುದು ಕಂಡು ಬಂದಿತು.

ಡಿಸೈನರ್‌ವೇರ್‌ ಬದಲಿಸಲಾಗದು!

ಹಾಗೆಂದು ಇದ್ದಕ್ಕಿದ್ದಂತೆ ಯಾವ ಸೆಲೆಬ್ರೆಟಿಗೂ ಕೂಡ ಡಿಸೈನರ್ವೇರ್ ಮತ್ತೊಬ್ಬರ ದಿರಸಿನಂತೆ ಇದೆ ಎಂದು ಅರಿವಾದಾಕ್ಷಣ ಬದಲಿಸಲು ಆಗುವುದಿಲ್ಲ! ಯಾಕೆಂದರೇ, ಅವರು ಧರಿಸುವ ಒಂದೊಂದು ಉಡುಪು ಲಕ್ಷಗಟ್ಟಲೆ ರೂ. ಬೆಲೆ ಬಾಳುತ್ತವೆ. ಅಲ್ಲದೇ, ತಿಂಗಳಾನುಗಟ್ಟಲೇ ಮೊದಲೇ ಯಾವುದನ್ನು ಧರಿಸಬೇಕೆಂಬುದು ನಿರ್ಧರಿತವಾಗಿರುತ್ತದೆ. ಇದಕ್ಕಾಗಿ ಸ್ಟಾರ್ಗಳ ಡಿಸೈನರ್‌ಗಳು ಕೂಡ ತಿಂಗಳಾನುಗಟ್ಟಲೇ ಹೋಮ್‌ ವರ್ಕ್‌ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ವಿಶೇಷ ದಿರಸನ್ನು ಸಿದ್ಧಪಡಿಸಲು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಕೆಲವು ಯಾರೂ ಧರಿಸದ ಹೊಸ ಡಿಸೈನರ್‌ಗಳಾಗಿ ಹಿಟ್ ಲಿಸ್ಟ್‌ಗೆ ಸೇರಿದರೇ, ಮತ್ತೆ ಕೆಲವು ಸೇಮ್ ಟು ಸೇಮ್ ಅಥವಾ ಕಾಪಿಕ್ಯಾಟ್ ಆಗಿ ನಗೆಪಾಟಲೀಗಿಡಾಗುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಕ್.

(ಲೇಖಕಿ ಫ್ಯಾಷನ್ ಪತ್ರಕರ್ತೆ)

Continue Reading

ಆರೋಗ್ಯ

Health Tips Kannada: ಕೂತಲ್ಲೇ ತೂಕಡಿಸುತ್ತೀರಾ? ಇದು ಒಳ್ಳೆಯದು!

ಇದ್ದಲ್ಲೇ ನಿದ್ದೆ ಮಾಡುವವರಿಗೆ (Health Tips Kannada) ಸುಖ ಹೆಚ್ಚು, ಚಿಂತೆ ಇಲ್ಲ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಹೀಗೆ ಕೋಳಿಗಳಂತೆ ಕೂತಲ್ಲೇ ಚುಟುಕು ನಿದ್ದೆ ಮಾಡುವುದು ಒಳ್ಳೆಯದು ಎಂಬುದು ಗೊತ್ತೇ? ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆʼ ಎಂದೆಲ್ಲಾ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಇಲ್ಲಿದೆ ವಿವರ.

VISTARANEWS.COM


on

Health Tips Kannada sleepy is good
Koo

ಕೂತಲ್ಲೇ (Health Tips Kannada) ತೂಕಡಿಸುವವರು, ಬಸ್ಸಲ್ಲಿ, ರೈಲಲ್ಲಿ ಓಡಾಡುವಾಗ ಗೊರಕೆ ಹೊಡೆಯುವವರು, ಕಾರಲ್ಲಿ ಹಿಂದೆ ಕೂತಾಗ ನಿದ್ದೆ ಮಾಡುವವರು…ಹೀಗೆ ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆʼ ಎಂದೆಲ್ಲಾ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಹಾಗೆ ಹಗಲಿನಲ್ಲಿ ನಿದ್ದೆ ಮಾಡಿದರೆ ರಾತ್ರಿಯ ನಿದ್ದೆಗೆ ತೊಂದರೆ ಆಗುವುದಿಲ್ಲವೇ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚುಟುಕು ನಿದ್ದೆ

ಈ ಹೆಸರಿನಲ್ಲೇ ಸಾಮಾನ್ಯವಾಗಿ ಕರೆಸಿಕೊಳ್ಳುವ ಹಗಲಿನ ನಿದ್ದೆ ದೀರ್ಘವಾದರೆ ʻಪವರ್‌ ನ್ಯಾಪ್‌ʼ ಎನಿಸಿಕೊಳ್ಳುವುದಿಲ್ಲ. ತೀರಾ ಆಯಾಸವಾದಾಗ 20 ನಿಮಿಷ ನಿದ್ದೆ ಮಾಡಿದರೆ, ಎಚ್ಚರಾದಮೇಲೆ ದೇಹದ ಚೈತನ್ಯ ಹೆಚ್ಚಿದಂತೆ ಭಾಸವಾಗುತ್ತದೆ. ಇದು ಹೌದೇ ಎಂಬುದನ್ನು ತಿಳಿಯಲು ಯೂನಿವರ್ಸಿಟಿ ಕಾಲೇಜ್‌ ಲಂಡನ್‌ನ ವಿಜ್ಞಾನಿಗಳು ಅಧ್ಯಯನವೊಂದನ್ನು ನಡೆಸಿದ್ದರು. ಇದಕ್ಕಾಗಿ 40ರಿಂದ 69 ವರ್ಷ ವಯಸ್ಸಿನ ನಡುವಿನ ಸುಮಾರು ೩೫ ಸಾವಿರ ಮಂದಿಯನ್ನ್ ಅ‍ಧ್ಯಯನಕ್ಕೆ ಒಳಪಡಿಸಿದ್ದರು. ಇದರಲ್ಲಿ ಗಮನಿಸಿದಾಗ, ನಿಯಮಿತವಾಗಿ ಹಗಲಿಗೆ ಚುಟುಕು ನಿದ್ದೆ ಮಾಡುವವರ ಮೆದುಳು, ಪವರ್‌ ನ್ಯಾಪ್‌ ಮಾಡದವರ ಮೆದುಳಿಗಿಂತ ದೊಡ್ಡದಾಗಿತ್ತು. ಏನಿದರರ್ಥ?
ಮೆದುಳಿನ ಗಾತ್ರ ಕಿರಿದಾಗುವುದಕ್ಕೂ ಮೆದುಳಿಗೆ ವಯಸ್ಸಾಗುವುದಕ್ಕೂ ಸಂಬಂಧವಿದೆ. ಹಾಗಾಗಿ ನಿಯಮಿತವಾಗಿ ಚುಟುಕು ನಿದ್ದೆ ಮಾಡುವವರಲ್ಲಿ ಮೆದುಳು ಕುಗ್ಗಿಲ್ಲ ಎಂದರೆ, ಮೆದುಳಿಗೆ ಬೇಗ ವಯಸ್ಸಾಗುವುದನ್ನು ಪವರ್‌ ನ್ಯಾಪ್‌ ಮುಂದೂಡುತ್ತದೆ ಎನ್ನುತ್ತಾರೆ ಅಧ್ಯಯನಕಾರರು. ಅಂದರೆ, ಅಲ್‌ಜೈಮರ್ಸ್‌ನಂಥ ಮೆದುಳು ಸಂಬಂಧಿ ರೋಗಗಳು, ಹೃದಯದ ತೊಂದರೆಗಳನ್ನು ಮುಂತಾದವು ಬರುವುದನ್ನು ಮುಂದೂಡಲು ಸಾಧ್ಯವಾಗಬಹುದು ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ಕೋಳಿ ನಿದ್ದೆಯ ಮ್ಯಾಜಿಕ್!

ಇಷ್ಟು ಮಾತ್ರವಲ್ಲ, 5ರಿಂದ 20 ನಿಮಿಷಗಳವರೆಗಿನ ಕೋಳಿ ನಿದ್ದೆಯಿಂದ ತಕ್ಷಣಕ್ಕೆ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಹುದು. ತೀರಾ ಆಯಾಸವಾಗಿ ಕೆಲಸ ಮಾಡಲೇ ಆಗುತ್ತಿಲ್ಲ, ಓದಿದರೆ ತಲೆಗೇ ಹೋಗುತ್ತಿಲ್ಲ ಎಂಬಂಥ ಸಂದರ್ಭದಲ್ಲಿ, ಹತ್ತಿಪ್ಪತ್ತು ನಿಮಿಷಗಳ ಕೋಳಿ ನಿದ್ದೆ ನಿಜಕ್ಕೂ ಮ್ಯಾಜಿಕ್‌ ಮಾಡಬಲ್ಲದು. ನಿದ್ದೆ ಮುಗಿಸಿ ಎದ್ದ ಸುಮಾರು ಮೂರು ತಾಸುಗಳವರೆಗೆ ದೇಹ-ಮನಸ್ಸುಗಳು ಚೈತನ್ಯಪೂರ್ಣವಾಗಿ ಇರುತ್ತವೆ ಎಂಬುದು ಖಚಿತವಾಗಿದೆ. ಕ್ರೀಡಾಳುಗಳ ಸಹ ತಮ್ಮ ತರಬೇತಿಯ ನಡುವಿನಲ್ಲಿ ಚುಟುಕು ನಿದ್ದೆಗಾಗಿಯೇ ಸಮಯ ನಿಗದಿ ಮಾಡಿಕೊಂಡಿದ್ದರೆ, ದೇಹ ಬಳಲುವುದನ್ನು ತಪ್ಪಿಸಬಹುದು. ಹಲವು ಅಥ್ಲೀಟ್‌ಗಳು ಇದನ್ನು ತಮ್ಮ ಕ್ರೀಡಾ ಜೀವನದ ಭಾಗವೆಂದೇ ಭಾವಿಸುತ್ತಾರೆ.

ಇನ್ನಷ್ಟು ಲಾಭಗಳು

ದೇಹ-ಮನಸ್ಸು ಚೈತನ್ಯಪೂರ್ಣ ಆಗುವುದು ಮಾತ್ರವೇ ಅಲ್ಲದೆ ಹೆಚ್ಚಿನ ಲಾಭಗಳಿವೆ ಇದರಿಂದ. ಮೂಡ್‌ ಸುಧಾರಿಸಿ, ಮನಸ್ಸಿನ ಉಲ್ಲಾಸ ಹೆಚ್ಚಿಸುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ, ಸೃಜನಶೀಲತೆ ವರ್ಧಿಸುತ್ತದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವಾಗ ಇಂಥ ನಿದ್ದೆಗಳು ದೇಹದ ದುರಸ್ತಿಗೆ ಗಣನೀಯ ಕೊಡುಗೆ ನೀಡುತ್ತವೆ.

ರಾತ್ರಿ ನಿದ್ದೆಗೆ ಬದಲಲ್ಲ

ಇದಕ್ಕಾಗಿ ರಾತ್ರಿಯೆಲ್ಲ ನಿದ್ದೆಗೆಟ್ಟು ಮೊಬೈಲು ಗೀರುತ್ತಾ, ಸಿನೆಮ ನೋಡುತ್ತಾ ಕೂತು, ಹಗಲಿಗೆ ನಿದ್ದೆ ಮಾಡಿ, ಮೆದುಳನ್ನು ಚುರುಕಾಗಿ ಇಟ್ಟುಕೊಳ್ಳುತ್ತೇವೆ ಎಂದು ಬೀಗುವುದಲ್ಲ. ಮಾತ್ರವಲ್ಲ, ಹಗಲಿನ ನಿದ್ದೆ ಚುಟುಕಾಗದೆ ತೀರಾ ದೀರ್ಘವಾದರೆ, ರಾತ್ರಿಯ ಪಾಲಿಗೆ ಕುಟುಕು ನಿದ್ದೆಯಾಗಬಹುದು. ಹಾಗಾಗಿ ಹಗಲಿಗೆ ಮಾಡುವ ನಿದ್ದೆಯಿಂದ ರಾತ್ರಿಯ ನಿದ್ದೆಯ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿದೆ ಎಂದಾದರೆ, ಹಗಲಿನ ನಿದ್ದೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ರಾತ್ರಿಯ ನಿದ್ರಾಹೀನತೆಗೆ ಚುಟುಕು ನಿದ್ದೆ ಮದ್ದೂ ಅಲ್ಲ. ರಾತ್ರಿಗೆ 7-8 ತಾಸಿನ ನಿದ್ದೆಯ ಅವಧಿಯಲ್ಲಿ ತೊಂದರೆಯಾದರೆ, ಅದನ್ನು ಪ್ರತ್ಯೇಕವಾಗಿಯೇ ಸರಿ ಪಡಿಸಿಕೊಳ್ಳುವುದು ಸೂಕ್ತ. ಹಗಲಿನ ಸುಸ್ತು, ಒತ್ತಡ, ಆಯಾಸಗಳ ನಡುವೆ ಕೆಲಸ ಮಾಡುವುದಕ್ಕೆ ತೊಂದರೆಯಾಗದಂತೆ ಮಾತ್ರವೇ ಕೋಳಿ ನಿದ್ದೆಯನ್ನು ಉಪಯೋಗಿಸಿಕೊಳ್ಳುವುದು ಜಾಣತನ.

ಎಷ್ಟು ಹೊತ್ತು?

ಮಧ್ಯಾಹ್ನದ 1 ಗಂಟೆಯಿಂದ 4 ಗಂಟೆಯ ನಡುವೆ, 20 ನಿಮಿಷಕ್ಕಿಂತ ಕಡಿಮೆ ಸಮಯದ ನಿದ್ದೆ ಎಲ್ಲ ರೀತಿಯಲ್ಲೂ ಒಳ್ಳೆಯ ಪರಿಣಾಮವನ್ನು ನೀಡುತ್ತದೆ. ಇನ್ನೂ ದೀರ್ಘ ಕಾಲ ನಿದ್ದೆ ಮಾಡಿದರೆ, ಎದ್ದಾಗ ಮಂಕು ಕವಿದಂತೆ, ದೇಹವೆಲ್ಲ ಜಡವಾದಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ, ಗಾಢ ನಿದ್ದೆಯ ಆವರ್ತನವನ್ನು ದೇಹ ಪ್ರವೇಶಿಸುವುದು. ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಗಳಿಂದ ದೇಹಕ್ಕೆ ತೀವ್ರ ಆಯಾಸವಾದಾಗಲೂ ನಿದ್ದೆಯ ಅವಧಿ 30 ನಿಮಿಷ ಮೀರದಿದ್ದರೆ ಒಳ್ಳೆಯದು.

Continue Reading

ಆರೋಗ್ಯ

Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

Ambulance Booking: ಈ ಸೇವೆಯನ್ನು ನೀಡವುದಕ್ಕಾಗಿ ಬಳಸಲಾದ ಆಕ್ಕೊದ ಅತ್ಯಾಧುನಿಕ ತಂತ್ರಜ್ಞಾನವು, ಜನರು ಆಂಬುಲೆನ್ಸ್‌ಅನ್ನು ಶೀಘ್ರವಾಗಿಯೂ ತಡೆರಹಿತವಾಗಿಯೂ ಪಡೆದುಕೊಳ್ಳಲು ನೆರವು ನೀಡುತ್ತದೆ. 3000 ವಾಹನಗಳ ಪ್ರಬಲ ಕಾರ್ಯಜಾಲದಿಂದ ಹತ್ತಿರದ ಆಂಬುಲೆನ್ಸ್ ಪಡೆದುಕೊಳ್ಳಲು ನೆರವಾಗುವ ಈ ಆ್ಯಪ್, ಕೇವಲ ಮೂರು ನಿಮಿಷಗಳೊಳಗೆ ಚಾಲಕರ ವಿವರಗಳನ್ನು ತಿಳಿಸುತ್ತದೆ. ಮೇಲಾಗಿ, ರಿಯಲ್ ಟೈಮ್​ ಟ್ರ್ಯಾಕಿಂಗ್​ನ ವಿಶಿಷ್ಟ ಅನುಕೂಲವನ್ನು ನೀಡಿದೆ.

VISTARANEWS.COM


on

ambulance-booking
Koo

ಬೆಂಗಳೂರು: ತಂತ್ರಜ್ಞಾನ ಆಧಾರಿತ ವಿಮಾ ಸಂಸ್ಥೆಯಾದ ಆಕ್ಕೊ (ACKO), ತನ್ನ ಅನೇಕ ಕೊಡುಗೆಗಳ ಪೋರ್ಟ್‌ಫೋಲಿಯೋಗೆ ತನ್ನ ಮೊಬೈಲ್ ಆ್ಯಪ್‌ನಲ್ಲಿ ಆಂಬುಲೆನ್ಸ್ ಬುಕ್ ಮಾಡುವ ಹೊಸ ಸೇವೆಯೊಂದನ್ನು ಸೇರಿಸಿದೆ. ತನ್ನ ಸೇವೆಗಳನ್ನು ವಿಮಾ ಪರಿಹಾರಗಳಾಚೆ ವಿಸ್ತರಿಸುವ ಮೂಲಕ ಎಲ್ಲಾ ಆರೋಗ್ಯ ಸುರಕ್ಷತಾ ಅಗತ್ಯಗಳಿಗೆ ಒಂದೇ ಸೂರಿನಡಿ ಸೇವೆ ಸಲ್ಲಿಸುವ ದೂರದೃಷ್ಟಿಯನ್ನು ಹೊಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಲಭ್ಯವಿರುವ ಸೇವೆಯು ಮುಂಬರುವ ವಾರಗಳಲ್ಲಿ ಚೆನ್ನೈ, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಕೋಲ್ಕತ್ತಾದಲ್ಲೂ ಸಿಗಲಿದೆ ಎಂದು ಕಂಪನಿ ಹೇಳಿದೆ.

ದೇಶದ ಮುಂಚೂಣಿ ತುರ್ತು ಸೇವಾ ಸಂಸ್ಥೆಗಳ ಪೈಕಿ ಒಂದಾದ Red.Healthನ ಸಹಭಾಗಿತ್ವದೊಂದಿಗೆ ಈ ಸೇವೆಯನ್ನು ಆರಂಭಿಸಲಾಗಿದ್ದು ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ಎಲ್ಲರಿಗೂ ನೆರವು ಒದಗಿಸುವ ಗುರಿ ಹೊಂದಿದೆ. ಈ ಸೇವೆಯನ್ನು ನೀಡವುದಕ್ಕಾಗಿ ಬಳಸಲಾದ ಆಕ್ಕೊದ ಅತ್ಯಾಧುನಿಕ ತಂತ್ರಜ್ಞಾನವು, ಜನರು ಆಂಬುಲೆನ್ಸ್‌ಅನ್ನು ಶೀಘ್ರವಾಗಿಯೂ ತಡೆರಹಿತವಾಗಿಯೂ ಪಡೆದುಕೊಳ್ಳಲು ನೆರವು ನೀಡುತ್ತದೆ. 3000 ವಾಹನಗಳ ಪ್ರಬಲ ಕಾರ್ಯಜಾಲದಿಂದ ಹತ್ತಿರದ ಆಂಬುಲೆನ್ಸ್ ಪಡೆದುಕೊಳ್ಳಲು ನೆರವಾಗುವ ಈ ಆ್ಯಪ್, ಕೇವಲ ಮೂರು ನಿಮಿಷಗಳೊಳಗೆ ಚಾಲಕರ ವಿವರಗಳನ್ನು ತಿಳಿಸುತ್ತದೆ. ಮೇಲಾಗಿ, ರಿಯಲ್ ಟೈಮ್​ ಟ್ರ್ಯಾಕಿಂಗ್​ನ ವಿಶಿಷ್ಟ ಅನುಕೂಲವನ್ನು ನೀಡಿದೆ. ಗ್ರಾಹಕರು ಆಂಬುಲೆನ್ಸ್‌ನ ನಿಖರ ಲೊಕೇಶನ್‌ಅನ್ನು ಮ್ಯಾಪ್ ಮೇಲೆ ನೋಡಿ ಅದರ ಆಗಮನದ ಅಂದಾಜು ಸಮಯವನ್ನು ಲೆಕ್ಕ ಹಾಕಬಹುದು. ಆತಂಕದ ಸಮಯದಲ್ಲಿ ಅವರಿಗೆ ಅದು ನೆಮ್ಮದಿ ಒದಗಿಸಬಹುದು. ತಮ್ಮ ಪ್ರೀತಿಪಾತ್ರರ ಯೋಗಕ್ಷೇಮದ ಮೇಲೆ ಗಮನ ಕೇಂದ್ರೀಕರಿಸಬಹುದಾಗಿದೆ. ಈ ಆವಿಷ್ಕಾರವು ತುರ್ತುಸ್ಥಿತಿಗಳಲ್ಲಿ ತಡೆಯಿಲ್ಲದ ಮತ್ತು ತೊಂದರೆಯಿಲ್ಲದ ಅನುಭವ ಒದಗಿಸುತ್ತದೆ.

ಆಕ್ಕೊದ ಸಮಗ್ರ ವೇದಿಕೆಯ ಮೇಲಿರುವ ಆಂಬುಲೆನ್ಸ್ ಬುಕಿಂಗ್ ಆರೋಗ್ಯ ಸೇವಾ ಪರಿಹಾರಗಳನ್ನು ಒದಗಿಸುವ ಮೂಲಕ ಬಳಕೆದಾರ-ಸುರಕ್ಷತೆ ಹಾಗೂ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಈ ಕ್ರಮವು, ಹೊಸ ಯುಗದಲ್ಲಿ ತುರ್ತುಸ್ಥಿತಿ ಆರೋಗ್ಯ ಶುಶ್ರೂಷೆಯನ್ನು ಪರಿವರ್ತಿಸುವ ಗುರಿ ಹೊಂದಿದೆ.

ಆಕ್ಕೊದ ಆಂಬುಲೆನ್ಸ್ ಬುಕಿಂಗ್ ಸೇವೆಯ ವಿಶೇಷತೆಗಳು

● ವ್ಯಾಪಕ ಕಾರ್ಯಜಾಲ: ಈ ಯೋಜನೆಯಡಿ ಐದು ನಗರಗಳಾದ್ಯಂತ 3000 ಆಂಬುಲೆನ್ಸ್‌ಗಳು ಲಭ್ಯವಿರುತ್ತವೆ.
● ತಡೆರಹಿತ ಬುಕಿಂಗ್: ACKO ಆಪ್ ಮೂಲಕ ಫೋನ್‌ನಲ್ಲಿ ಕೆಲವೇ ಕ್ಲಿಕ್‌ಗಳೊಂದಿಗೆ ಆಂಬುಲೆನ್ಸ್ ಪಡೆದುಕೊಳ್ಳಬಹುದು
● ನೈಜ -ಸಮಯ ಟ್ರ್ಯಾಕಿಂಗ್: ಗಂಭೀರ ಪರಿಸ್ಥಿತಿಗಳಲ್ಲಿ ನೆಮ್ಮದಿನೀಡುವಂಥ ಆಂಬುಲೆನ್ಸ್‌ನ ಆಗಮನದ ನೈಜ ಸಮಯವನ್ನು ಟ್ರ್ಯಾಕ್ ಮಾಡಬಹುದು.
● ಬಳಕೆದಾರ-ಕೇಂದ್ರಿತ ವಿನ್ಯಾಸ: ಸುಲಭವಾಗಿ ಬಳಸುವುದಕ್ಕಾಗಿಯೇ ಆಕ್ಕೊ ಆಪ್ ವಿನ್ಯಾಸಗೊಂಡಿದೆ.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ವೈದ್ಯಕೀಯ ತುರ್ತುಸ್ಥಿತಿಗಳು ತಕ್ಷಣ ಪ್ರತಿಕ್ರಿಯೆಯನ್ನು ಬೇಡುತ್ತದೆ. ಆದರೆ ಅದು ಎಲ್ಲರಿಗೂ ಪೂರಕವಾಗಿಲ್ಲ ಎಲ್ಲಕ್ಕಿಂತ ಮಿಗಿಲಾಗಿ, ಆಂಬುಲೆನ್ಸ್ ಸೇವೆಗಳು, ನಿರ್ಲಕ್ಷಿತ ಕ್ಷೇತ್ರವಾಗಿಯೇ ಉಳಿದು ಪರಿಸ್ಥಿತಿಗಳನ್ನು ಮೀರಲು ಜನರು ಬಹಳ ಕಷ್ಟಪಡಬೇಕಾಗುತ್ತದೆ. ತುರ್ತುಸ್ಥಿತಿಗಳಲ್ಲಿ ಗಂಭೀರ ನೆರವು ಒದಗಿಸಲು ತಂತ್ರಜ್ಞಾನವನ್ನು ವರ್ಧಿಸುವ ಮೂಲಕ ಆಕ್ಕೊ, ಬಳಕೆದಾರ ಸುರಕ್ಷತೆ ಹಾಗೂ ಸಂತೃಪ್ತಿಗೆ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸಿದೆ.

ಆಂಬುಲೆನ್ಸ್-ಬುಕಿಂಗ್ ಅಂಶವು, ನಿಜಜೀವನದ ಸಮಸ್ಯೆಗಳಿಗೆ ವಾಸ್ತವ ಪರಿಹಾರ ಒದಗಿಸುತ್ತದೆ.

Continue Reading

ವಿಜಯನಗರ

Vijayanagara News: ಹೊಸಪೇಟೆಯಲ್ಲಿ ಡೆಂಗ್ಯು ಜಾಗೃತಿ ಜಾಥಾ

Vijayanagara News: ರಾಷ್ಟ್ರೀಯ ಡೆಂಗ್ಯು ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಕಚೇರಿಯ ಸಹಯೋಗದಲ್ಲಿ ‘ಸಮುದಾಯದೊಂದಿಗೆ ಸೇರಿ ಡೆಂಗ್ಯು ನಿಯಂತ್ರಿಸೋಣ’ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು. ಹೊಸಪೇಟೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಅವರಣದಲ್ಲಿ ಜಾಗೃತಿ ಜಾಥಾ ಕಾರ್ಯಾಕ್ರಮಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

VISTARANEWS.COM


on

Dengue awareness rally in Hosapete
Koo

ಹೊಸಪೇಟೆ: ರಾಷ್ಟ್ರೀಯ ಡೆಂಗ್ಯು (Dengue) ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಕಚೇರಿಯ ಸಹಯೋಗದಲ್ಲಿ ‘ಸಮುದಾಯದೊಂದಿಗೆ ಸೇರಿ ಡೆಂಗ್ಯು ನಿಯಂತ್ರಿಸೋಣ’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಜಾಥಾ ಕಾರ್ಯಕ್ರಮ (Vijayanagara News) ಜರುಗಿತು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಅವರಣದಲ್ಲಿ ಜಾಗೃತಿ ಜಾಥಾ ಕಾರ್ಯಾಕ್ರಮಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಡೆಂಗ್ಯು ಜ್ವರವನ್ನು ಜನರು ನಿರ್ಲಕ್ಷಿಸದೆ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಡೆಂಗ್ಯು ಜ್ವರದ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಮಾರಣಾಂತಿಕವಾಗಬಹುದು. ಮುಂಗಾರು ಪೂರ್ವ, ಮುಂಗಾರು ಮತ್ತು ಮುಂಗಾರಿನ ನಂತರದ ಸಮಯದಲ್ಲಿ ಡೆಂಗ್ಯು ಸೊಳ್ಳೆಗಳ ಸಂತತಿಯು ತೀವ್ರ ಪ್ರಮಾಣದಲ್ಲಿದ್ದು, ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಶಂಕರನಾಯ್ಕ ಮಾತನಾಡಿ, ರೋಗಗಳು ಬಂದ ಮೇಲೆ ಚಿಕಿತ್ಸೆ ನೀಡುವ ಬದಲಿಗೆ ಬರುವ ಮುಂಚೆ ಅದರ ಮುಂಜಾಗ್ರತೆ ವಹಿಸುವುದು ಸೂಕ್ತ. ಜನರು ಮನೆಯಲ್ಲಿ ಶೇಖರಿಸಿದ ನೀರನ್ನು ಆಗಾಗ ಬದಲಾಯಿಸುತ್ತಿರಬೇಕು. ಈ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕು ಹಾಗೂ ಡೆಂಗ್ಯು ತಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ ದೊಡ್ಡಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ, ಬೆಳಗಾವಿಯ ಡಾ. ಸಿದ್ದಲಿಂಗಯ್ಯ, ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

ಕರಪತ್ರ ವಿತರಣೆ

ಈಡೀಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಡೆಂಗ್ಯು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಮೂರಕ್ಕಿಂತ ಹೆಚ್ಚು ದಿನಗಳಿಂದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ತಕ್ಷಣವೇ ಆಶಾ, ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎನ್ನುವ ಮಾಹಿತಿಯ ಕರಪತ್ರಗಳನ್ನು ಇದೇ ವೇಳೆ ಸಾರ್ವಜನಿಕರಿಗೆ ವಿತರಿಸಲಾಯಿತು.

Continue Reading
Advertisement
AC visited Gandabommanahalli Goshala and inspected
ವಿಜಯನಗರ11 mins ago

Vijayanagara News: ಗಂಡಬೊಮ್ಮನಹಳ್ಳಿಯ ಗೋಶಾಲೆಗೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ

Application Invited for TTTI and Toyota Skill Courses from Toyota Technical Training Institute
ಕರ್ನಾಟಕ16 mins ago

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

SSLC Exam 2024
ಕರ್ನಾಟಕ21 mins ago

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಕ್ರಿಕೆಟ್28 mins ago

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Retirement Plan
ಮನಿ ಗೈಡ್35 mins ago

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

Siddharth Kak
ದೇಶ41 mins ago

Siddharth Kak: ಡಿಡಿಯ ʼಸುರಭಿʼ ಕಾರ್ಯಕ್ರಮ ನೆನಪಿದೆಯಾ? ಪ್ರತಿ ವಾರ ಎಷ್ಟು ಲಕ್ಷ ಪೋಸ್ಟ್‌ ಕಾರ್ಡ್‌ ಬರುತ್ತಿತ್ತು ಗೊತ್ತಾ?

Prajwal Revanna Case JDS calls CD Shivakumar pen drive gang
ರಾಜಕೀಯ42 mins ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Swati Maliwal
ದೇಶ48 mins ago

Swati Maliwal: ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

Irfan Pathan
ಕ್ರೀಡೆ51 mins ago

Irfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

Tatkal Tickets
ದೇಶ1 hour ago

Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ42 mins ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ15 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ16 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌