Mattress Buying Guide: ಹಾಸಿಗೆಗಳಲ್ಲಿ ಎಷ್ಟೊಂದು ವಿಧ? ಯಾವುದು ಸೂಕ್ತ ಆಯ್ಕೆ ಮಾಡಿಕೊಳ್ಳಿ - Vistara News

ಲೈಫ್‌ಸ್ಟೈಲ್

Mattress Buying Guide: ಹಾಸಿಗೆಗಳಲ್ಲಿ ಎಷ್ಟೊಂದು ವಿಧ? ಯಾವುದು ಸೂಕ್ತ ಆಯ್ಕೆ ಮಾಡಿಕೊಳ್ಳಿ

Mattress Buying Guide: ಹಲವು ರೀತಿಯ ಹಾಸಿಗೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಯಾವುದನ್ನು ಕೊಳ್ಳಬೇಕು, ಯಾವುದು ನಮಗೆ ಸೂಕ್ತ ಎಂಬುದೇ ತಿಳಿಯುತ್ತಿಲ್ಲ ಎನ್ನುವುದು ಹಲವರ ಗೊಂದಲ. ಹಾಸಿಗೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಓದಿ, ನಿರ್ಧರಿಸಿ; ಸರಿಯಾದ್ದನ್ನು ಖರೀದಿಸಿ, ಕಣ್ತುಂಬಾ ನಿದ್ರಿಸಿ!

VISTARANEWS.COM


on

Mattress Buying Guide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಹಾಸಿಗೆ ತೀರಾ ಚಿಕ್ಕದಾದರೆ ಹೊಸದು ಖರೀದಿಸಬೇಕು. ಆದರೆ ಯಾವ ರೀತಿಯ ಹಾಸಿಗೆ ಬೇಕು? ಖರೀದಿಗೆಂದು ಅಂಗಡಿಗೆ ಹೋದರೆ ತಲೆ ಕದಡಿಹೋಗುವಷ್ಟು ಆಯ್ಕೆಗಳಿರುತ್ತವೆ. ಆಲ್‌ಲೈನ್‌ ಮಳಿಗೆಗಳನ್ನು ತೆರೆದು ಕೂತರೆ ಗೊಂದಲ ಇನ್ನಷ್ಟು ಹೆಚ್ಚುತ್ತದೆ. ಪ್ರತಿಯೊಬ್ಬರ ಆದ್ಯತೆಗಳೂ ಭಿನ್ನ. ಕೆಲವರಿಗೆ ಬೆಳಗ್ಗೆ ಏಳುತ್ತಿದ್ದಂತೆ ಕುತ್ತಿಗೆ ಹಿಡಿದಂತೆ ಭಾಸವಾಗಿ, ಸರಿಯಾದ ದಿಂಬು ಅಗತ್ಯವಿರಬಹುದು. ಇನ್ನು ಕೆಲವರಿಗೆ ಬೆನ್ನೆಲ್ಲಾ ನೋವಾದಂತಿರಬಹುದು. ಅಂತೂ ಮೈ-ಕೈ ನೋವೆಲ್ಲ ಕಾಡದೆ, ರಾತ್ರಿ ಕಣ್ತುಂಬ ನಿದ್ದೆ ತರುವಂಥ ಹಾಸಿಗೆ ಬೇಕು. ಸ್ಪ್ರಿಂಗ್‌ ಹಾಸಿಗೆ, ಫೋಮ್‌ ಹಾಸಿಗೆ, ಹಳೆಯ ಕಾಲದ ಹತ್ತಿ ಹಾಸಿಗೆ… ಯಾವುದು (Mattress Buying Guide) ಸೂಕ್ತ?

Beautiful woman shopping for orthopedic mattress and bed

ಹಾಸಿಗೆಗಳ ಬಗ್ಗೆ ಗೊತ್ತೇ?

ಮೊದಲೆಲ್ಲ ಹಾಸಿಗೆ ಎಂದರೆ ಹತ್ತಿಯದ್ದು ಮಾತ್ರ. ಅದಿಲ್ಲದಿದ್ದರೆ ಚಾಪೆ! ಆದರೆ ಈಗ ಹಾಗಲ್ಲ. ಸ್ಪ್ರಿಂಗ್‌, ಫೋಮ್‌, ಲೇಟೆಕ್ಸ್‌, ಹೈಬ್ರಿಡ್‌ ರೀತಿಯ ಹಾಸಿಗೆಗಳು ಪ್ರಧಾನವಾಗಿ ದೊರೆಯುತ್ತವೆ. ಅವುಗಳ ಗುಣಾವಗುಣಗಳನ್ನು ಅರಿತರೆ, ನಮ್ಮ ಆದ್ಯತೆಗೆ ಯಾವುದು ಸೂಕ್ತ ಎಂಬುದರನ್ನು ನಿರ್ಧರಿಸುವುದಕ್ಕೆ ಸುಲಭ. ಬೆಳಗ್ಗೆ ಏಳುತ್ತಿದ್ದಂತೆ ಬಿಗಿದ ಬೆನ್ನು, ಹಿಡಿದ ಕುತ್ತಿಗೆಯೊಂದಿಗೆ ದಿನ ಕಳೆಯುವ ಅವಸ್ಥೆ ಬರುವುದಿಲ್ಲ ಆಗ.

ಹತ್ತಿಯ ಹಾಸಿಗೆ

ಪರಂಪರಾಗತವಾದ ಹತ್ತಿಯ ಹಾಸಿಗೆ ಈಗಲೂ ಜನಪ್ರಿಯವಾದ ಆಯ್ಕೆ. ಸುಲಭಕ್ಕೆ, ಕಡಿಮೆ ಖರ್ಚಿನಲ್ಲಿ ಖರೀದಿಸಲೂಬಹುದು. ಜನ ಸಿಕ್ಕರೆ ಬೇಕಾದಂತೆ ಮಾಡಿಸಿಕೊಳ್ಳಲೂ ಬಹುದು. ಆದರೆ ಆರೆಂಟು ವರ್ಷಗಳಲ್ಲಿ ಅವುಗಳನ್ನು ಬದಲಾಯಿಸಬೇಕಾಗುತ್ತದೆ. ಅದಿಲ್ಲದಿದ್ದರೆ ಹಾಸಿಗೆಯೆಲ್ಲ ಗಂಟಾಗಿ, ಮೈ-ಕೈಯೆಲ್ಲ ನೋವಾಗಿ, ನಿದ್ದೆ ದೂರವಾಗುತ್ತದೆ.

ಸ್ಪ್ರಿಂಗ್‌ ಹಾಸಿಗೆ

ಇದೂ ಸಹ ಹಳೆಯ ಕಾಲದ ಹಾಸಿಗೆಯೇ. ಲೋಹದ ಸ್ಪ್ರಿಂಗ್‌ನಂಥ ಸುರುಳಿಗಳನ್ನು ಒಳಗಿರಿಸಿ, ಅದರ ಮೇಲೆ ಹತ್ತಿ, ಫೋಮ್‌ ಮುಂತಾದ ಹಲವು ವಸ್ತುಗಳ ಮಿಶ್ರಣವನ್ನು ತುಂಬಿಸಿ, ಹಾಸಿಗೆಯನ್ನಾಗಿ ಭರ್ತಿ ಮಾಡಲಾಗುತ್ತದೆ. ಇದರಲ್ಲೂ ಒಪೆನ್‌ ಕಾಯಿಲ್‌ ಮತ್ತು ಪಾಕೆಟ್‌ ಸ್ಪ್ರಿಂಗ್‌ ಎಂಬ ಎರಡು ಬಗೆಗಳಿವೆ. ಇವುಗಳ ಪೈಕಿ ಪಾಕೆಟ್‌ ಸ್ಪ್ರಿಂಗ್‌ ಮಾದರಿಯವು ಹೆಚ್ಚು ಆರಾಮ ನೀಡುವಂಥವು. ಇವುಗಳಲ್ಲಿ ಒಳಗಿನ ಕಾಯಿಲ್‌ಗಳ ಸಂಖ್ಯೆ ಹೆಚ್ಚಿದ್ದಷ್ಟೂ ದೇಹಕ್ಕೆ ಹೆಚ್ಚಿನ ಆಧಾರವನ್ನು ಹಾಸಿಗೆ ನೀಡುತ್ತದೆ. ಮಲಗಿದವರು ಮೇಲೆ ಪುಟಿಯುವಂತೆ ಮಾಡುವ ಈ ಮೋಜಿನ ಹಾಸಿಗೆಗಳು, ಹಳೆಯದಾದಂತೆ ಶಬ್ದ ಮಾಡುತ್ತವೆ. ಆಗ ಬದಲಾಯಿಸುವುದು ಅಗತ್ಯವಾಗಬಹುದು.

Morning of Beautiful Young Woman Lying on Bed with Soft Mattress

ಮೆಮೊರಿ ಫೋಮ್

ಹಾಸಿಗೆಯ ಮೇಲೆ ಮೈ ಚೆಲ್ಲುತ್ತಿದ್ದಂತೆ ಒಳಗೆ ಇಳಿಯುವಂಥ ಅನುಭವ ಬೇಕೆ? ಇಂಥ ಹಾಸಿಗೆಗಳಲ್ಲಿ ಹಾಗಾಗುತ್ತದೆ. ಹಲವು ಪದರಗಳಲ್ಲಿ ಫೋಮ್‌ಗಳನ್ನು ಹೊಂದಿರುವ ಇವು, ಅಡಿಗೆ ಹೋಗುತ್ತಿದ್ದಂತೆ ಹೆಚ್ಚು ದೃಢವಾದ ಫೋಮ್‌ಗಳನ್ನು ಹೊಂದಿರುತ್ತವೆ. ಆದರೆ ಮೇಲ್ಮೈ ಮಾತ್ರ ಮೃದುವಾಗಿ, ದೇಹಕ್ಕೆ ಆಕಾರಕ್ಕೆ ತಕ್ಕಂತೆ ಒಳಗೆ ಹೋಗುತ್ತವೆ. ಬೆನ್ನು, ಭುಜಗಳಲ್ಲಿ ನೋವಿದ್ದವರು ಇಂಥವುಗಳಿಂದ ಹೆಚ್ಚಿನ ಆರಾಮ ಪಡೆಯಬಹುದು. ಅದರಲ್ಲೂ, ಹೆಚ್ಚು ಮಗ್ಗುಲಾಗಿ ಮಲಗುವವರಿಗೆ ಹೇಳಿ ಮಾಡಿಸಿದ ಹಾಸಿಗೆಯಿದು.

ಲೇಟೆಕ್ಸ್‌ ಹಾಸಿಗೆ

ನೈಸರ್ಗಿಕವಾದ ರಬ್ಬರ್‌ನಂಥ ವಸ್ತುವಿನಿಂದ ಇದನ್ನು ತಯಾರಿಸಲಾಗುತ್ತದೆ. ಹಾಗಾಗಿ ಪರಿಸರ ಸ್ನೇಹಿ ಆಯ್ಕೆಯೂ ಹೌದು. ಮೆಮರಿ ಫೋಮ್‌ನಂತೆ ಇದು ಕೈಯಿಟ್ಟರೆ ಕೆಳಗೆ ಇಳಿಯುವಂಥ ಮೇಲ್ಮೈ ಹೊಂದಿರುವುದಿಲ್ಲ. ಕೀಲುಗಳಲ್ಲಿ ನೋವಿರುವವರಿಗೆ ಇದು ಹೆಚ್ಚು ಆರಾಮ ನೀಡಬಹುದು. ಇವುಗಳಲ್ಲೂ ನಾನಾ ಬಗೆಗಳಿದ್ದು, ಕೆಲವು ಹೆಚ್ಚು ಸಾಂದ್ರವಾಗಿರುತ್ತವೆ. ಹಾಸಿಗೆಯ ಧೂಳಿಗೆ ಅಲರ್ಜಿಯಾಗಿ ಒದ್ದಾಡುವವರಿಗೆ ಇದು ಹೆಚ್ಚಿನ ಸಮಾಧಾನ ನೀಡಬಹುದು.

ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಹೈಬ್ರಿಡ್‌

ಇದರಲ್ಲಿ ಸ್ಪ್ರಿಂಗ್‌ ಮತ್ತು ಫೋಮ್‌ ಪದರಗಳನ್ನು ಮಿಶ್ರ ಮಾಡಲಾಗುತ್ತದೆ. ಹಾಗಾಗಿ ಹೆಚ್ಚಿನ ಆಧಾರ ಮತ್ತು ಆರಾಮ- ಎರಡೂ ದೊರೆಯುತ್ತದೆ. ಪುಟಿದೇಳುವ ಮತ್ತು ಒಳಗಿಳಿಯುವ- ಎರಡೂ ಅನುಭವವನ್ನು ನೀಡುವ ಹಿನ್ನೆಲೆಯಲ್ಲಿ ಕಿಸೆಯನ್ನೂ ಹದವಾಗಿಯೇ ಕತ್ತರಿಸುತ್ತವೆ ಇವು. ಯಾವುದೇ ರೀತಿಯ ನೋವಿಗೆ, ಆದ್ಯತೆಗಳಿಗೆ ಹೊಂದುವಂಥ ಹಾಸಿಗೆಗಳಿವು. ಮಗ್ಗುಲಾಗಿ, ಹೊಟ್ಟೆಯ ಮೇಲೆ, ಬೆನ್ನಿನ ಮೇಲೆ- ಹೇಗೆ ಮಲಗುವವರಿಗೂ ಇದು ಹೊಂದಿಕೆಯಾದೀತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

ಮಲೇರಿಯಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಹೆಣ್ಣು ಸೊಳ್ಳೆಗಳು (Mosquitoes Bite) ಸಂತಾನೋತ್ಪತ್ತಿಗಾಗಿ ಮಾನವರನ್ನು ಕಚ್ಚುತ್ತವೆ. ಅದರಲ್ಲೂ ಕೆಲವರನ್ನು ಹೆಚ್ಚಾಗಿ ಕಚ್ಚುತ್ತವೆ. ಇದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಇದರಲ್ಲಿ ರಕ್ತದ ಪ್ರಕಾರವೂ ಒಂದು ಪ್ರಮುಖ ಕಾರಣ ಎಂಬುದು ಗೊತ್ತಿದೆಯೇ? ಅದು ಹೇಗೆ, ಬೇರೆ ಯಾರಿಗೆಲ್ಲ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Mosquitoes Bite
Koo

ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇದ್ದರೂ ಸಾಮಾನ್ಯವಾಗಿ ಕೆಲವರಿಗೆ ಮಾತ್ರ ಸೊಳ್ಳೆಗಳು (Mosquitoes Bite) ಹೆಚ್ಚಾಗಿ ಕಡಿಯುವುದನ್ನು ಕಾಣುತ್ತೇವೆ. ಆದರೆ ಯಾಕೆ ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ. ಹೆಣ್ಣು ಸೊಳ್ಳೆಗಳು (female Mosquitoes) ಮಾತ್ರ ರಕ್ತದಿಂದ (blood) ಪ್ರೊಟೀನ್ ಗಳನ್ನು (proteins) ಪಡೆಯಲು ಮನುಷ್ಯರನ್ನು ಕಚ್ಚುತ್ತವೆ ಮತ್ತು ಬಳಿಕ ಮೊಟ್ಟೆಗಳನ್ನು ಇಡುತ್ತದೆ. ಅದರಲ್ಲೂ ಕೆಲವರಿಗೆ ಮಾತ್ರ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ.

ಕೆಲವರು ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗಿರಲು ಹಲವು ಕಾರಣಗಳೂ ಇವೆ. ಬೆವರು, ಲ್ಯಾಕ್ಟಿಕ್ ಆಮ್ಲ, ಅಮೋನಿಯಾ ಮತ್ತು ಇತರ ಸಂಯುಕ್ತಗಳಿಂದ ಸೊಳ್ಳೆಗಳು ಕೆಲವರಿಗೆ ಹೆಚ್ಚಾಗಿ ಕಚ್ಚುತ್ತದೆ.

ಸೊಳ್ಳೆಗಳು ಮಲೇರಿಯಾ, ಝಿಕಾ ಮತ್ತು ಡೆಂಗ್ಯೂ ಜ್ವರದಂತಹ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಕಾರಣ ಸೊಳ್ಳೆ ಕಡಿತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಸೂಳ್ಳೆಗಳು ಕೆಲವು ಜನರನ್ನು ಮಾತ್ರ ಹೆಚ್ಚಾಗಿ ಕಡಿಯಲು ಕಾರಣಗಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಇದಕ್ಕಾಗಿ ವಿವಿಧ ಅಂಶಗಳ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಅದರಲ್ಲಿ ರಕ್ತದ ಪ್ರಕಾರವೂ ಒಂದು ಕಾರಣವಾಗಿದೆ.

Mosquitoes Bite


ರಕ್ತದ ಪ್ರಕಾರ ಹೇಗೆ ಕಾರಣ?

ಒಂದು ರಕ್ತದ ಪ್ರಕಾರವನ್ನು ಹೊಂದಿರುವ ಜನರು ಇತರರಿಗಿಂತ ಹೆಚ್ಚು ಸೊಳ್ಳೆ ಕಡಿತಕ್ಕೆ ಒಳಗಾಗುತ್ತಾರೆ. ಪೋಷಕರಿಂದ ಪಡೆದಿರುವ ವಿಭಿನ್ನ ರಕ್ತ ಪ್ರಕಾರಗಳನ್ನು ಹೊಂದಿರುವ ಜನರು ತಮ್ಮ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ನಿರ್ದಿಷ್ಟ ಪ್ರೋಟೀನ್‌ಗಳ (ಪ್ರತಿಜನಕ) ವಿಭಿನ್ನ ಸೆಟ್‌ಗಳನ್ನು ಹೊಂದಿರುತ್ತಾರೆ.

ಎ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಪ್ರತಿಜನಕ ಮಾತ್ರ ಇರುತ್ತದೆ. ಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಬಿ ಪ್ರತಿಜನಕ ಮಾತ್ರ, ಎಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಮತ್ತು ಬಿ ಪ್ರತಿಜನಕ, ಒ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಅಥವಾ ಬಿ ಪ್ರತಿಜನಕವಿರುವುದಿಲ್ಲ.

ಕೆಲವು ಜನರು ಲಾಲಾರಸ ಅಥವಾ ಕಣ್ಣೀರಿನಂತಹ ದೇಹದ ದ್ರವಗಳಲ್ಲಿ ಈ ಪ್ರತಿಜನಕಗಳನ್ನು ಹೊಂದಿರುತ್ತಾರೆ. ಎ ರಕ್ತದ ಪ್ರಕಾರವನ್ನು ಹೊಂದಿರುವವರು ಎ ಪ್ರಕಾರದ ಪ್ರತಿಜನಕವನ್ನು ಸ್ರವಿಸುತ್ತಾರೆ. ಒ ರಕ್ತದ ಗುಂಪು ಹೊಂದಿರುವವರು ಹೆಚ್ ಪ್ರತಿಜನಕವನ್ನು ಸ್ರವಿಸುತ್ತಾರೆ. ಅಧ್ಯಯನಗಳ ಪ್ರಕಾರ ಸೊಳ್ಳೆಗಳು ಇತರ ರಕ್ತ ಪ್ರಕಾರಗಳಿಗಿಂತ ಒ ರಕ್ತದ ಗುಂಪಿನ ಜನರಿಗೆ ಹೆಚ್ಚು ಆಕರ್ಷಿತವಾಗುತ್ತವೆ. ಇದಕ್ಕೆ ರಕ್ತದ ಪ್ರಕಾರ ಮತ್ತು ಸ್ರವಿಸುವ ಸ್ಥಿತಿ ಮುಖ್ಯ ಕಾರಣವಾಗಿದೆ.

ಸೊಳ್ಳೆಗಳು ಎ, ಬಿ ಪ್ರತಿಜನಕಕ್ಕಿಂತ ಹೆಚ್ ಪ್ರತಿಜನಕವನ್ನು ಹೊಂದಿರುವ ಜನರತ್ತ ಹೆಚ್ಚು ಆಕರ್ಷಿತವಾಗುತ್ತವೆ. ಯಾಕೆಂದರೆ ಇದು ಲಾಲಾರಸ ಮತ್ತು ಕಣ್ಣೀರಿನಲ್ಲಿ ಕಂಡುಬರುವುದರಿಂದ ಸೊಳ್ಳೆಗಳು ಒಬ್ಬ ವ್ಯಕ್ತಿಯನ್ನು ಸಮೀಪಿಸಿದಾಗ ಈ ಪ್ರತಿಜನಕಗಳನ್ನು ಬಹುಬೇಗನೆ ಗ್ರಹಿಸುತ್ತದೆ ಎನ್ನಲಾಗುತ್ತದೆ.

ಇನ್ನು ಹಲವು ಕಾರಣಗಳು

ಸೊಳ್ಳೆಗಳು ನಮ್ಮತ್ತ ಹೆಚ್ಚು ಆಕರ್ಷಿತವಾಗಲು ಇನ್ನು ಹಲವು ಕಾರಣಗಳಿವೆ.

ಇಂಗಾಲದ ಡೈಆಕ್ಸೈಡ್

ಉಸಿರಾಡುವಾಗ ಇಂಗಾಲದ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದರೆ ಸೊಳ್ಳೆಯು ಇವರತ್ತ ಬಹುಬೇಗನೆ ಆಕರ್ಷಿತಗೊಳ್ಳುತ್ತದೆ. ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್‌ನ ಹೆಚ್ಚಳವು ಹತ್ತಿರದಲ್ಲಿರುವ ಸೊಳ್ಳೆಯನ್ನು ಎಚ್ಚರಿಸುತ್ತದೆ.

ದೇಹದ ವಾಸನೆ

ದೇಹದ ವಾಸನೆಯು ಇತರ ಜನರಿಗಿಂತ ಸೊಳ್ಳೆಗಳು ನಿಮ್ಮತ್ತ ಆಕರ್ಷಿತರಾಗಲು ಇನ್ನೊಂದು ಪ್ರಮುಖ ಕಾರಣ. ಯಾಕೆಂದರೆ ವಾಸನೆಯನ್ನು ಬಹುಬೇಗನೆ ಸೊಳ್ಳೆಗಳು ಗ್ರಹಿಸುತ್ತವೆ.
ಚರ್ಮದ ಮೇಲಿನ ಸಂಯುಕ್ತಗಳಲ್ಲಿ ಅಮೋನಿಯಾ ಮತ್ತು ಲ್ಯಾಕ್ಟಿಕ್ ಆಮ್ಲ ಸೊಳ್ಳೆಗಳನ್ನು ಬಹುಬೇಗನೆ ಆಕರ್ಷಿಸುತ್ತವೆ. ಚರ್ಮದ ಮೇಲೀನಾ ಬ್ಯಾಕ್ಟೀರಿಯಾಗಳು ಕೂಡ ದೇಹದ ವಾಸನೆಗೆ ಕಾರಣವಾಗಿರುತ್ತದೆ.

Mosquitoes Bite


ದೇಹದ ತಾಪಮಾನ

ದೇಹದ ತಾಪಮಾನವು ಸೊಳ್ಳೆಗಳನ್ನು ಆಕರ್ಷಿಸಲು ಕಾರಣವಾಗಿರುತ್ತದೆ. ದೇಹದ ತಾಪವು ಹೆಚ್ಚು ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಲು, ಕಾರಣವಾಗಿರುತ್ತದೆ.

ಬಣ್ಣ

ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಸೊಳ್ಳೆಗಳು ಕಪ್ಪು ವಸ್ತುಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ ಎಂಬುದನ್ನು ಅಧ್ಯಯನವೊಂದು ಹೇಳಿದೆ. ನೀವು ಗಾಢ ಬಣ್ಣಗಳನ್ನು ಧರಿಸಿದರೆ ನೀವು ಹೆಚ್ಚು ಸೊಳ್ಳೆ ಕಡಿತವನ್ನು ಪಡೆಯುತ್ತೀರಿ ಎನ್ನಬಹುದು.

ಮದ್ಯಪಾನ

ಸೊಳ್ಳೆಗಳು ಮದ್ಯಪಾನ ಮಾಡುವ ಜನರತ್ತ ಹೆಚ್ಚು ಆಕರ್ಷಿತವಾಗಬಹುದು. ಇದರಲ್ಲಿ ವಾಸನೆ ಪ್ರಮುಖ ಅಂಶವಾಗಿದೆ ಎನ್ನಲಾಗುತ್ತದೆ. ಅಂದರೆ ಮದ್ಯಪಾನ ಮಾಡುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದಾಯಿತು!

ಇದನ್ನೂ ಓದಿ: Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

ಗರ್ಭಿಣಿಯರು

ಗರ್ಭಿಣಿಯರಲ್ಲದ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಸೊಳ್ಳೆಗಳು ಗರ್ಭಿಣಿಯರತ್ತ ಆಕರ್ಷಿತವಾಗುತ್ತದೆ. ಗರ್ಭಿಣಿಯರು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದರಿಂದ ಮತ್ತು ಹೆಚ್ಚಿನ ದೇಹದ ಉಷ್ಣತೆಯನ್ನು ಹೊಂದಿರುವುದರಿಂದ ಇವರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತರಾಗುತ್ತಾರೆ.

Continue Reading

ಆರೋಗ್ಯ

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಬಹುಮುಖ್ಯವಾಗಿದೆ. ಅದರಲ್ಲೂ ನಡಿಗೆ (Walking Benefits) ದೇಹಕ್ಕೆ ಸಂಪೂರ್ಣ ವ್ಯಯಮವನ್ನು ಒದಗಿಸುತ್ತದೆ. ದೈನಂದಿನ ದಿನಚರಿಯಲ್ಲಿ ಊಟದ ಅನಂತರ ನಡಿಗೆಯನ್ನು ಸೇರಿಸುವುದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತದೆ. ಸಾಕಷ್ಟು ಆರೋಗ್ಯ ಪ್ರಯೋಜನವನ್ನು ಒದಗಿಸುತ್ತದೆ.

VISTARANEWS.COM


on

By

Walking Benefits
Koo

ನಿತ್ಯದ ಒತ್ತಡದ ಜಂಜಾಟದಲ್ಲಿ ಈಗಿನ ಜನರಿಗೆ ನೆಮ್ಮದಿಯಾಗಿ ಕುಳಿತು ಊಟ (lunch) ಮಾಡಲು ಪುರುಸೊತ್ತಿಲ್ಲ. ಇದ್ದರೂ ಮೊಬೈಲ್ (mobile), ಟಿವಿಯಲ್ಲಿ (TV) ಮಗ್ನರಾಗಿ ಬಿಡುತ್ತಾರೆ. ಇನ್ನು ಊಟವಾದ ಬಳಿಕ ಮೊಬೈಲ್ ಕೈಯಲ್ಲಿ ಹಿಡಿದು ಕುಳಿತು ಬಿಡುತ್ತಾರೆ. ಹೀಗಾಗಿ ಊಟವಾದ ಬಳಿಕ ನಡೆಯುವ ಅಭ್ಯಾಸ (Walking Benefits) ಬಹುತೇಕ ಮಂದಿಯಲ್ಲಿ ಕಡಿಮೆಯಾಗಿದೆ.

ಊಟದ ಅನಂತರ ಕೊಂಚ ನಡೆದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಬಹುಮುಖ್ಯವಾಗಿದೆ. ಅದರಲ್ಲೂ ನಡಿಗೆ ದೇಹಕ್ಕೆ ಸಂಪೂರ್ಣ ವ್ಯಯಮವನ್ನು ಒದಗಿಸುತ್ತದೆ.
ನಡಿಗೆಯು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುವ ವ್ಯಾಯಾಮವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ, ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಊಟದ ಅನಂತರ ನಡೆಯುವುದು ವಿಶೇಷವಾಗಿ ಅನುಕೂಲಕರವಾಗಿದೆ. ಯಾಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ವಿಶ್ರಾಂತಿಗೆ ದೇಹ ಮತ್ತು ಮನಸ್ಸನ್ನು ಉತ್ತೇಜಿಸುತ್ತದೆ. ಊಟದ ಅನಂತರದ ಚಟುವಟಿಕೆಯು ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮಧುಮೇಹದಂತಹ ಚಯಾಪಚಯ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತಿಂದ ಅನಂತರ ಸಣ್ಣ ನಡಿಗೆಯನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಸ್ವಸ್ಥವಾಗಿ ಕಾಪಾಡಿಕೊಳ್ಳಬಹುದು.

Walking Benefits


ಊಟದ ಬಳಿಕ ನಡಿಗೆಯಿಂದ ಏನು ಪ್ರಯೋಜನ?

ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಕನಿಷ್ಠ ನೂರು ಹೆಜ್ಜೆ ನಡೆದರೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳಲ್ಲಿ ಮುಖ್ಯವಾಗಿ:

ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ

ಊಟದ ಅನಂತರ ಲಘು ನಡಿಗೆಯಲ್ಲಿ ತೊಡಗುವುದರಿಂದ ರಕ್ತದೊತ್ತಡ, ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಬಹುದು. ಇದು ಉತ್ತಮ ರಕ್ತಪರಿಚಲನೆ ಮತ್ತು ಹೃದಯದ ಕಾರ್ಯವನ್ನು ಉತ್ತೇಜಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ

ದೇಹದ ಸ್ವಾಭಾವಿಕ ಮೂಡ್ ಎಲಿವೇಟರ್‌ಗಳಾದ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ವಾಕಿಂಗ್ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಊಟದ ಅನಂತರದ ನಡಿಗೆಯು ದೇಹಕ್ಕೆ ವಿಶ್ರಾಂತಿಯನ್ನು ಕೊಡುತ್ತದೆ. ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಜೀವನದ ಗುಣಮಟ್ಟಕ್ಕೆ ಉತ್ತಮ ಕೊಡುಗೆ ನೀಡುತ್ತವೆ.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ

ವಾಕಿಂಗ್‌ನಂತಹ ದೈಹಿಕ ಚಟುವಟಿಕೆಯು ಸಿರ್ಕಾಡಿಯನ್ ಲಯ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ರಾತ್ರಿಯ ಊಟದ ಅನಂತರ ನಡೆಯುವುದು ನಿರ್ದಿಷ್ಟವಾಗಿ ವಿಶ್ರಾಂತಿ ಪಡೆಯಲು ಮತ್ತು ರಾತ್ರಿಯ ನಿದ್ರೆಗಾಗಿ ತಯಾರಾಗಲು ಸಹಾಯ ಮಾಡುತ್ತದೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ

ಊಟದ ಅನಂತರ ನಡೆಯುವುದರಿಂದ ದೇಹದಾದ್ಯಂತ ರಕ್ತಪರಿಚಲನೆ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುವ ಮೂಲಕ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದಾಗಿ ಹೆಚ್ಚು ಉತ್ಸಾಹದ ಅನುಭವ ಸಿಗುತ್ತದೆ. ದೈನಂದಿನ ಕೆಲಸಗಳಲ್ಲಿ ನಿರಂತರ ಶಕ್ತಿಯ ಮಟ್ಟ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಉತ್ತೇಜಿಸುತ್ತದೆ

ವಾಕಿಂಗ್‌ನಂತಹ ನಿಯಮಿತ ದೈಹಿಕ ಚಟುವಟಿಕೆಯು ಕರುಳಿನ ಸೂಕ್ಷ್ಮಜೀವಿಯ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ. ಸರಿಯಾದ ಜೀರ್ಣಕ್ರಿಯೆ, ಪ್ರತಿರಕ್ಷಣಾ ಕಾರ್ಯ, ಮತ್ತು ಮಾನಸಿಕ ಆರೋಗ್ಯಕ್ಕೂ ಆರೋಗ್ಯಕರ ಕರುಳಿನ ಸೂಕ್ಷ್ಮಾಣುಜೀವಿ ಅತ್ಯಗತ್ಯ. ವಾಕಿಂಗ್ ಕರುಳಿನ ಬ್ಯಾಕ್ಟೀರಿಯಾಗಳ ನಡುವೆ ವೈವಿಧ್ಯತೆ ಮತ್ತು ಸಮತೋಲನವನ್ನು ಉತ್ತೇಜಿಸುವ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

Walking Benefits


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ನಡಿಗೆಯು ಗ್ಯಾಸ್ಟ್ರಿಕ್ ಜ್ಯೂಸ್ ಮತ್ತು ಆಹಾರವನ್ನು ಒಡೆಯಲು ಅಗತ್ಯವಾದ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಉಬ್ಬುವುದು, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಊಟದ ಅನಂತರದ ನಡಿಗೆಯು ಇನ್ಸುಲಿನ್‌ಗೆ ದೇಹದ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಶಕ್ತಿಯ ಕುಸಿತವನ್ನು ತಡೆಯಬಹುದು ಮತ್ತು ಮಧುಮೇಹಕ್ಕೆ ಸಂಬಂಧಿಸಿದ ದೀರ್ಘಕಾಲೀನ ತೊಡಕುಗಳ ಅಪಾಯವನ್ನು ಕಡಿಮೆ ಮಾಡಬಹುದು.

ತೂಕ ನಿರ್ವಹಣೆಗೆ ಸಹಾಯ

ಊಟದ ಅನಂತರ ನಡೆಯುವುದು ಕ್ಯಾಲೊರಿಗಳನ್ನು ಸುಡುಲು ಸಹಾಯ ಮಾಡುತ್ತದೆ. ಇದು ದೇಹದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಚಟುವಟಿಕೆಯು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಿನಂತೆ ಸಂಗ್ರಹಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬೊಜ್ಜು ಸಂಬಂಧಿತ ಕಾಯಿಲೆಗಳಾದ ಹೃದ್ರೋಗ, ಪಾರ್ಶ್ವವಾಯು ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು

ನಡಿಗೆಯು ಮೆದುಳಿಗೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಇದು ಅರಿವಿನ ಕಾರ್ಯ, ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಊಟದ ಅನಂತರ ಒಂದು ಸಣ್ಣ ನಡಿಗೆಯು ಮನಸ್ಸನ್ನು ಉಲ್ಲಾಸಗೊಳಿಸಲು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮಸ್ಯೆ-ಪರಿಹರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಮಾನಸಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

Continue Reading

ಫ್ಯಾಷನ್

Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

Hand painted lehenga Fashion: ಮದುವೆಯಲ್ಲಿ ರಾಧಿಕಾ ಮರ್ಚೆಂಟ್‌ ಧರಿಸಿದ್ದ ಅತ್ಯಾಕರ್ಷಕ ಹ್ಯಾಂಡ್‌ ಪೇಂಟೆಡ್ ಲೆಹೆಂಗಾ ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ಟ್ರೆಂಡಿ ಲೆಹೆಂಗಾಗಳ ಲಿಸ್ಟ್‌ಗೆ ಸೇರಿಸಿಕೊಂಡಿದೆ. ಹಾಗಾದಲ್ಲಿ, ಈ ಲೆಹೆಂಗಾದ ವಿಶೇ‍ಷತೆಯೇನು? ಈ ಕುರಿತಂತೆ ಫ್ಯಾಷನಿಸ್ಟಾಗಳ ಅಭಿಪ್ರಾಯವೇನು ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Hand Painted lehenga Fashion
ಚಿತ್ರಗಳು: ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ಪೇಂಟ್‌ ಲೆಹೆಂಗಾ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಧಿಕಾ ಮರ್ಚೆಂಟ್‌ (Hand painted lehenga Fashion) ಧರಿಸಿದ್ಧ, ಅತ್ಯಾಕರ್ಷಕ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ, ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ಟ್ರೆಂಡಿ ಲೆಹೆಂಗಾಗಳ ಲಿಸ್ಟ್‌ಗೆ ಸೇರಿಕೊಂಡಿದೆ.

ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ಗೆ ಸೇರಿದ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ

ಹೌದು. ತಮ್ಮ ಮದುವೆಯಲ್ಲಿ ರಾಧಿಕಾ ಮರ್ಚೆಂಟ್‌ ಧರಿಸಿದ್ದ ನಾನಾ ಬಗೆಯ ಅತ್ಯಾಕರ್ಷಕ ಲೆಹೆಂಗಾಗಳಲ್ಲಿ, ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ ಕಂಪ್ಲೀಟ್‌ ವಿಭಿನ್ನವಾಗಿತ್ತು. ನಮ್ಮ ನೆಲದ ಪುರಾತನ ಕಲಾತ್ಮಕ ಹ್ಯಾಂಡ್‌ ಪೇಂಟ್‌ ಚಿತ್ತಾರಗಳು ಹಾಗೂ ಅದಕ್ಕೆ ಹೊಂದುವಂತಹ ಸೂಕ್ಷ್ಮ ಕುಸುರಿ ಕಲೆಗಳು, ಆಂಟಿಕ್‌ ಡಿಸೈನ್‌ಗಳು ಮನಮೋಹಕವಾಗಿ ಮೂಡಿಬಂದಿದ್ದವು. ಇದು ಕೇವಲ ಫ್ಯಾಷನ್‌ ಪ್ರಿಯರನ್ನು ಮಾತ್ರ ಸೆಳೆದಿಲ್ಲ,ಮುಂಬರುವ ವೆಡ್ಡಿಂಗ್‌ ಫ್ಯಾಷನ್‌ನ ಟ್ರೆಂಡಿ ಲೆಹೆಂಗಾ ಲಿಸ್ಟ್‌ಗೂ ಸೇರಿಕೊಂಡಿವೆ. ವಿಭಿನ್ನ ವಿನ್ಯಾಸದ ಲೆಹೆಂಗಾ ಲಿಸ್ಟ್‌ನಲ್ಲಿ ಇವುಗಳ ಡಿಸೈನ್‌ಗಳು ಇತರೇ ಡಿಸೈನರ್‌ಗಳನ್ನು ಆಕರ್ಷಿಸಿದ್ದು, ಈಗಾಗಲೇ ನಾನಾ ಡಿಸೈನರ್‌ಗಳು ಮದುಮಗಳ ಲೆಹೆಂಗಾಗಳಲ್ಲಿ, ಕಸ್ಟಮೈಸ್ಡ್ ಹ್ಯಾಂಡ್‌ಪೇಂಟ್‌ ವಿನ್ಯಾಸ ಮೂಡಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಡಿಸೈನರ್‌ ದಿಯಾ.

ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾದ ವಿಶೇ‍ಷತೆ

ಸೆಲೆಬ್ರೆಟಿ ಡಿಸೈನರ್‌ ಅಬು ಜಾನಿ ಸಂದೀಪ್‌ ಕೋಸ್ಲಾ ಅವರು ಕಂಟೆಂಪರರಿ ಇಂಡಿಯನ್‌ ಆರ್ಟಿಸ್ಟ್ ಹಾಗೂ ಮೂಲ ಕಲಾವಿದರ ಸಹಾಯದೊಂದಿಗೆ ಈ ಸುಂದರ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ ಡಿಸೈನ್‌ ಮಾಡಿದ್ದು, ಲೆಹೆಂಗಾದ 12 ಪ್ಯಾನೆಲನ್ನು ಇಟಾಲಿಯನ್‌ ಕ್ಯಾನ್‌ವಸ್‌ ಮೇಲೆ ಚಿತ್ರಿಸಲಾಗಿದೆ. ಜೀವನದ ಆರಂಭ ಮದುವೆಯಿಂದ ಎಂದು ಬಿಂಬಿಸುವ ಚಿತ್ತಾರಗಳು,ಮದುವೆಯ ಅನುಬಂಧ ವಿವರಿಸುವ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಚಿತ್ತಾರಗಳನ್ನು ಲೆಹೆಂಗಾ ಮೇಲೆ ಮೂಡಿಸಲಾಗಿದೆ. ಖುಷಿಯಾಗಿರುವ ದಂಪತಿಗಳ ಪ್ರತಿರೂಪಗಳನ್ನು ಇದರಲ್ಲಿ ಕಾಣಬಹುದು. ಅಲ್ಲದೇ, ಆನೆಗಳ ಕುರಿತಂತೆ ಅನಂತ್‌ ಅಂಬಾನಿಗಿರುವ ಪ್ರೇಮವನ್ನು ಲೆಹೆಂಗಾ ತುಂಬೆಲ್ಲಾ ಕಾಣಬಹುದು. ಇನ್ನು, ಸ್ಪೆಷಲ್‌ ಮಾಸ್ಟರ್‌ಗಳು, ರಿಯಲ್‌ ಗೋಲ್ಡ್ ಜರ್ದೋಸಿ ಹ್ಯಾಂಡ್‌ ವರ್ಕ್‌ ಮೂಲಕ ಈ ಲೆಹೆಂಗಾ ಡಿಸೈನ್‌ ಮಾಡಿರುವುದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ.

ಇದನ್ನೂ ಓದಿ: Nita Ambani Saree Fashion: ಮಾರುಕಟ್ಟೆಗೆ ಬಂತು ನೀತಾ ಅಂಬಾನಿಯ ಸೀರೆಗಳ ಮಾಡೆಲ್‌!

ಫ್ಯಾಷನ್‌ ವಿಶ್ಲೇಷಕರ ಅಭಿಪ್ರಾಯ

ಯಾವುದೇ ಡಿಸೈನಿಂಗ್‌ ವಿಷಯ ಓದಿಲ್ಲದ ಕ್ರಾಫ್ಟ್ ಮೆನ್‌ಗಳು ಅಂದರೇ ಆರ್ಟಿಸ್ಟ್‌ಗಳು, ಲೆಹೆಂಗಾ ಮೇಲೆ ಈ ಆಕರ್ಷಕ ಹ್ಯಾಂಡ್‌ ಪೇಂಟ್‌ ಮಾಡಿರುವುದು ನಿಜಕ್ಕೂ ಅದ್ಭುತವಾಗಿದೆ. ಇದೊಂದು ಅಪರೂಪದ ಲೆಹೆಂಗಾ! ಇನ್ಮುಂದೆ ಮದುವೆ ಫ್ಯಾಷನ್‌ನಲ್ಲಿ, ಹ್ಯಾಂಡ್‌ಪೇಂಟೆಡ್‌ ಲೆಹೆಂಗಾಗಳನ್ನು ಕಾಣಬಹುದು ಎಂಬುದಕ್ಕೆ ಇದೀಗ ಇವು ವೆಡ್ಡಿಂಗ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿರುವುದೇ ಸಾಕ್ಷಿ ಎನ್ನುತ್ತಾರೆ. ಫ್ಯಾಷನ್‌ ವಿಶ್ಲೇಷಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಕರ್ನಾಟಕ

Pralhad Joshi: ಬೇಳೆ ದರ ಇಳಿಕೆಗೆ ಕೇಂದ್ರದಿಂದ ಕ್ರಮ: ಪ್ರಲ್ಹಾದ್‌ ಜೋಶಿ

Pralhad Joshi: ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ- ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಸೂಚಿಸಿದ್ದಾರೆ.

VISTARANEWS.COM


on

Action to reduce pulses price says Union Minister Pralhad Joshi
Koo

ನವದೆಹಲಿ: ಬೇಳೆ-ಕಾಳು ಬೆಲೆ ಇಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನವದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಸಚಿವರು ಈ ಬಗ್ಗೆ ತ್ವರಿತ ಕ್ರಮಕ್ಕೆ ಸಲಹೆ ನೀಡಿದ್ದಾರೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ- ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಧಾನ್ಯಗಳು ಲಭಿಸುವಂತೆ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಸಚಿವರು ಇದೇ ವೇಳೆ ಹೇಳಿದರು.

ಇದನ್ನೂ ಓದಿ: Karnataka Rain: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿ; ಕುಸಿದ ಸೇತುವೆಗಳು!

ಸಣ್ಣ ಸಣ್ಣ ವ್ಯಾಪಾರದ ಮಳಿಗೆಗಳಲ್ಲಿ ಮಾತ್ರ ತೊಗರಿ, ಉದ್ದು, ಕಡಲೆ ಬೇಳೆ ಬೆಲೆ ಇಳಿಸಲಾಗಿದೆ. ಆದರೆ, ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಬೆಲೆ ಇಳಿಸದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬೇಳೆಗಳ ಬೆಲೆಯನ್ನು ಕೂಡಲೇ ಇಳಿಸುವಂತೆ ಈ ದೊಡ್ಡ ವರ್ತಕರಿಗೂ ಸೂಚನೆ ನೀಡಲಾಗಿದೆ. ಈ ನಿರ್ದೇಶನ ಅನುಸರಿಸಲು ವಿಫಲವಾದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ

2025ಕ್ಕೆ ಜಿಡಿಪಿ ಶೇ.7ರಷ್ಟು ಬೆಳವಣಿಗೆ

ಐಎಂಎಫ್ ವರದಿ ಪರಿಷ್ಕರಿಸಿದ್ದು, 2025 ರಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ಶೇ.7 ರಷ್ಟು ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕತೆಯ ಸಾಲಿನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬುದಕ್ಕೆ ಐಎಂಎಫ್‌ನ ಈ ವರದಿಯೇ ನಿದರ್ಶನ ಎಂದು ಜೋಶಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

ಭಾರತದ ಬೆಳವಣಿಗೆಯು ಆರ್ಥಿಕ ವರ್ಷ 2025 ರಲ್ಲಿ ಶೇ.7ರಷ್ಟು ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆ ನೀಡಿದ್ದು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಬಣ್ಣಿಸಿದ್ದಾರೆ.

Continue Reading
Advertisement
Jay Shah
ಪ್ರಮುಖ ಸುದ್ದಿ15 mins ago

Jay Shah : ಜಯ್​ ಶಾ ಮುಂದಿನ ಐಸಿಸಿ ಅಧ್ಯಕ್ಷ; ಕೊಲೊಂಬೊ ಸಭೆಯಲ್ಲಿ ತೀರ್ಮಾನ ಸಾಧ್ಯತೆ

Oil Tanker Capsizes
ವಿದೇಶ22 mins ago

Oil Tanker Capsizes:ತೈಲ ತುಂಬಿದ್ದ ಹಡಗು ಮುಳುಗಡೆ; ಕಣ್ಮರೆಯಾಗಿದ್ದ 8 ಭಾರತೀಯರು ಸೇರಿ ಒಟ್ಟು 9 ನಾವಿಕರ ರಕ್ಷಣೆ

ಪ್ರಮುಖ ಸುದ್ದಿ36 mins ago

Travel Influencer : ರೀಲ್ಸ್​ ಮಾಡುತ್ತಲೇ ಜಲಪಾತದ ಕಮರಿಗೆ ಬಿದ್ದು ಪ್ರಾಣಬಿಟ್ಟ 26 ವರ್ಷದ ಯುವತಿ

Viral Video
ವೈರಲ್ ನ್ಯೂಸ್46 mins ago

Viral Video: ಹೃದಯಾಘಾತದಿಂದ ಕೆಳಗ್ಗೆ ಬಿದ್ದು ಒದ್ದಾಡುತ್ತಿದ್ದವನ ಪಾಲಿಗೆ ದೇವರಂತೆ ಬಂದ್ಳು! ಈ ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್‌

Mosquitoes Bite
ಆರೋಗ್ಯ1 hour ago

Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

Actress Hina Khan
Latest2 hours ago

Actress Hina Khan: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

Naxalites Killed
ದೇಶ2 hours ago

Naxalites Killed: 6 ಗಂಟೆ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 12 ನಕ್ಸಲರ ಎನ್‌ಕೌಂಟರ್

Walking Benefits
ಆರೋಗ್ಯ2 hours ago

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

Natasa Stankovic
ಕ್ರಿಕೆಟ್2 hours ago

Natasa Stankovic : ಹಾರ್ದಿಕ್​ ಪಾಂಡ್ಯಗೆ ಕೈಕೊಟ್ಟು ಸರ್ಬಿಯಾದಲ್ಲಿ ಜಾಲಿ ಟ್ರಿಪ್ ಹೊರಟ ನತಾಶಾ

Mattress Buying Guide
ಲೈಫ್‌ಸ್ಟೈಲ್2 hours ago

Mattress Buying Guide: ಹಾಸಿಗೆಗಳಲ್ಲಿ ಎಷ್ಟೊಂದು ವಿಧ? ಯಾವುದು ಸೂಕ್ತ ಆಯ್ಕೆ ಮಾಡಿಕೊಳ್ಳಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌