Munnar Tour: ಮುನ್ನಾರ್‌ನ ಈ 5 ರಮಣೀಯ ಸ್ಥಳಗಳನ್ನು ನೋಡಲೇಬೇಕು! - Vistara News

ಲೈಫ್‌ಸ್ಟೈಲ್

Munnar Tour: ಮುನ್ನಾರ್‌ನ ಈ 5 ರಮಣೀಯ ಸ್ಥಳಗಳನ್ನು ನೋಡಲೇಬೇಕು!

Munnar Tour: ವಾರಾಂತ್ಯದಲ್ಲಿ ಮನೆಯಲ್ಲಿಯೇ ಕುಳಿತುಕೊಳ್ಳುವ ಬದಲು ಎಲ್ಲಿಗಾದರೂ ಕಿರು ಪ್ರವಾಸ ಮಾಡಿ. ಇದರಿಂದ ಮನಸ್ಸು ಖುಷಿಯಾಗುತ್ತದೆ. ಜೊತೆಗೆ ಹೊಸ ಹುರುಪು ನಿಮ್ಮನ್ನು ಇನ್ನಷ್ಟು ಕೆಲಸ ಮಾಡುವತ್ತ ಪ್ರೇರೇಪಿಸುತ್ತದೆ. ಹಾಗಾದ್ರೆ ತಡಯಾಕೆ…? ಮುನಾರ್‌ನ ಈ ಸ್ಥಳಗಳಿಗೆ ಒಮ್ಮೆ ಭೇಟಿ ಕೊಟ್ಟು ನೋಡಿ.

VISTARANEWS.COM


on

Munnar Tour
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರವಾಸವೆಂದರೆ ಎಲ್ಲರಿಗೂ ಇಷ್ಟ. ಕುಟುಂಬದ ಜೊತೆ ಹಾಡುತ್ತಾ, ಕುಣಿಯುತ್ತಾ ಪ್ರವಾಸ ಮಾಡುವ ಆನಂದವೇ ಬೇರೆ. ಹಾಗೇ ಅಲ್ಲಿನ ಸ್ಥಳಗಳ ಪ್ರಕೃತಿ ಸೌಂದರ್ಯ ಕೂಡ ನಮ್ಮ ಮನಸ್ಸಿಗೆ ನೆಮ್ಮದಿ ನೀಡುವಂತಿರಬೇಕು ಹಾಗೂ ಆ ಸ್ಥಳ ನಮ್ಮ ನೆನಪಿನಲ್ಲಿ ಚಿರಕಾಲ ಉಳಿಯುವಂತಿರಬೇಕು. ಅಂತಹ ಸ್ಥಳಗಳಿಗೆ ಭೇಟಿ ನೀಡಲು ಜನರು ಇಷ್ಟಪಡುತ್ತಾರೆ. ಅದಕ್ಕೆ ಮುನ್ನಾರ್ (Munnar Tour) ಹೇಳಿಮಾಡಿಸಿದ ಸ್ಥಳವಾಗಿದೆ.

ದಕ್ಷಿಣ ಭಾರತದ ಜನಪ್ರಿಯ ಗಿರಿಧಾಮಗಳಲ್ಲಿ ಮುನ್ನಾರ್ ಕೂಡ ಒಂದು. ಇದರ ಸುತ್ತಲೂ ಇರುವ ಪ್ರಕೃತಿಯ ಸೌಂದರ್ಯ ಕಣ್ಣಿಗೆ ಹಬ್ಬದೂಟವನ್ನುಂಟು ಮಾಡುತ್ತದೆ. ಮುನ್ನಾರ್ ಗೆ ಬರುವ ಪ್ರವಾಸಿಗರು ಪ್ರವಾಸದ ಆನಂದವನ್ನು ಅನುಭವಿಸುತ್ತಾರೆ. ಹಾಗಾಗಿ ವಾರಂತ್ಯದ ವೇಳೆ ಪ್ರವಾಸಕ್ಕೆ ಪ್ಲ್ಯಾನ್ ಮಾಡುವವರು ಇಲ್ಲಿಗೆ ಭೇಟಿ ನೀಡಿ.

Munnar Tour

1. ಮರಯೂರ್

ಮುನ್ನಾರ್ ನಿಂದ ಕೆಲವು ಕಿಮಿಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್ ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸ ಪೂರ್ವದ ಡಾಲ್ಮೆನ್ ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಭೇಟಿ ನೀಡುವವರು ತಮ್ಮ ಸಮಯ ಕಳೆಯಲು ಕಬ್ಬಿನ ಗದ್ದೆಗಳ ಉದ್ದಕ್ಕೂ ವಾಕಿಂಗ್ ಮಾಡುತ್ತಾರೆ. ಹಾಗೇ ಹತ್ತಿರದಲ್ಲೇ ಇರುವಂತಹ ತೂವನಂ ಜಲಪಾತಗಳಿಗೆ ಭೇಟಿ ನೀಡುತ್ತಾರೆ. ಯಾಕೆಂದರೆ ಇಲ್ಲಿ ಅದ್ಭುತವಾದ ಪ್ರಕೃತಿ ಸೌಂದರ್ಯವಿದೆ.

Munnar Tour

2. ದೇವಿಕುಲಂ

ಮುನ್ನಾರ್ ನಿಂದ 7 ಕಿ.ಮೀ ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ ಆಗಿದೆ. ಇದು ಹಚ್ಚಹಸಿರಿನ ಕಣಿವೆಗಳು ಮತ್ತು ಪ್ರಶಾಂತವಾಗಿರುವ ಸರೋವರಗಳೊಂದಿಗೆ ಸುಂದರವಾದ ಬೆಟ್ಟಗಳನ್ನು ಹೊಂದಿದೆ. ದೇವಿಕುಲಂ ಸರೋವರದಲ್ಲಿ ದೋಣಿ ವಿಹಾರ ಆನಂದಿಸಬಹುದು. ಹಾಗೇ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಸೀತಾದೇವಿ ಸರೋವರದಲ್ಲಿ ಸಮೃದ್ಧ ಖನಿಜಾಂಶಗಳಿರುವ ಕಾರಣ ಅದು ಔಷಧೀಯ ಗುಣವನ್ನು ಹೊಂದಿದೆ ಎನ್ನಲಾಗಿದೆ. ಈ ಸ್ಥಳದಲ್ಲಿ ಪ್ರವಾಸಿಗರು ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು.

Munnar Tour

3. ಚಿನ್ನಕನಾಲ್‌

ಮುನ್ನಾರ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಚಿನ್ನಕನಾಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಇಲ್ಲಿ ಜುಳುಜುಳು ಹರಿಯುವ ಜಲಪಾತಗಳು, ಸಾಂಬಾರು ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವನ್ನು ನೋಡಬಹುದು. ಮನಸ್ಸಿಗೆ ಶಾಂತಿ ಬಯಸುವವರಿಗೆ ಇದು ಸ್ವರ್ಗದಂತೆ ಕಾಣುತ್ತದೆ. ಇಲ್ಲಿ ಒಂದು ಆಕರ್ಷಕವಾದ ಅಟ್ಟುಕಲ್ ಜಲಪಾತಗಳಿವೆ. ಇದು ನೋಡಲು ಬಹಳ ವಿಸ್ಮಯವಾಗಿದೆ ಮತ್ತು ಇಲ್ಲಿ ಸ್ನಾನ ಮಾಡಬಹುದು.

Munnar Tour

4. ಅನಾಮುಡಿ ಶಿಖರ

ತಮ್ಮ ಜೀವನದಲ್ಲಿ ರೋಮಾಂಚನಕಾರಿ ಸಾಹಸಗಳನ್ನು ಬಯಸುವವರು ಅನಾಮುಡಿ ಶಿಖರವನ್ನು ಏರಬಹುದು. ಈ ಶಿಖರ ದಕ್ಷಿಣ ಭಾರತದ ಅತ್ಯುನ್ನತ ಶಿಖರ ಎಂಬ ಬಿರುದು ಪಡೆದಿದೆಯಂತೆ. ಹಾಗಾಗಿ ಹೃದಯ ಗಟ್ಟಿ ಇರುವವರು ಮಾತ್ರ ಇಲ್ಲಿ ಚಾರಣ ಮಾಡಲು ಸಾಧ್ಯವಂತೆ. ಈ ಶಿಖರವನ್ನು ಏರಿದಾಗ ನಿಮಗಾಗುವ ಖುಷಿಯೇ ಬೇರೆಯಂತೆ. ಹಾಗಾಗಿ ಶಿಖರವನ್ನು ಏರುವಾಗ ದಾರಿಯುದ್ದಕ್ಕೂ ಸುಂದರ ದೃಶ್ಯಗಳನ್ನು , ಸಸ್ಯಗಳನ್ನು , ಪ್ರಾಣಿಗಳನ್ನು ನೋಡಬಹುದು.

5. ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಮೀ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್ ಆಗಿದೆ. ಇದು ಸಮುದ್ರ ಮಟ್ಟದಿಂದ ಸರಿಸುಮಾರು 1700 ಮೀಟರ್ ಎತ್ತರದಲ್ಲಿದೆ. ಈ ಸ್ಥಳ ಪ್ರಕೃತಿ ಪ್ರಿಯರಿಗೆ ಹಾಗೂ ಪೋಟೊಗ್ರಾಪರ್ ಗೆ ಬಹಳ ಇಷ್ಟವಾಗುತ್ತದೆ. ಇದು ಮುನ್ನಾರ್-ಕೊಡೈಕೆನಾಲ್ ರಸ್ತೆಯಲ್ಲಿರುವ ಅತ್ಯಂತ ಎತ್ತರದ ಬಿಂದುವಾಗಿದೆ. ಇಲ್ಲಿಂದ ನೆರೆಯ ರಾಜ್ಯ ತಮಿಳು ನಾಡಿನ ಸುಂದರವಾದ ನೋಟವನ್ನು ಸವಿಯಬಹುದು.

ಇದನ್ನೂ ಓದಿ: Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

ವಾರಾಂತ್ಯದಲ್ಲಿ ಪ್ರವಾಸಕ್ಕೆ ಹೋಗಲು ಬಯಸುವವರು ಒಮ್ಮೆ ಮುನ್ನಾರ್‌ನ ಈ ವಿಸ್ಮಯವಾದ ಸ್ಥಳಗಳಿಗೆ ಭೇಟಿ ನೀಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಆನಂದದಿಂದ ಕಳೆಯಿರಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Sabja Seeds Benefits: ಸಬ್ಜಾ, ಚಿಯಾ, ಕುಂಬಳಕಾಯಿ ಬೀಜಗಳಂತಹ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದ ಬೀಜಗಳ ಸೇವನೆ ಮಾಡಿರಬಹುದು. ಇವೆಲ್ಲವೂ ನೈಸರ್ಗಿಕವಾಗಿ ಲಭ್ಯವಿರುವ ಪೋಷಕಾಂಶಗಳ ಪವರ್‌ಹೌಸ್‌ಗಳು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ನಿಮಿಷಗಳ ಕಾಲ ನೆನೆಸಿಟ್ಟು ನಂತರ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಕಡಿಮೆ ಕ್ಯಾಲರಿಯಿರುವ ಇವುಗಳನ್ನು ತೂಕ ಇಳಿಸುವ ಪಯಣದಲ್ಲಿರುವ ಪ್ರತಿಯೊಬ್ಬರೂ ಈ ಸಬ್ಜಾ ಹಾಗೂ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಿರಬಹುದು. ಆದರೆ, ಇವನ್ನು ನೆನೆ ಹಾಕಿಯೇ ಬಳಸಬೇಕು ಯಾಕೆ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಇದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

Sabja Seeds Benefits
Koo

ನಿಮಗೆ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ, ಖಂಡಿತಾ ಸಬ್ಜಾ, ಚಿಯಾ, ಕುಂಬಳಕಾಯಿ ಬೀಜಗಳಂತಹ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದ ಬೀಜಗಳ ಸೇವನೆ ಮಾಡಿರಬಹುದು. ಇವೆಲ್ಲವೂ ನೈಸರ್ಗಿಕವಾಗಿ ಲಭ್ಯವಿರುವ ಪೋಷಕಾಂಶಗಳ ಪವರ್‌ಹೌಸ್‌ಗಳು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ನಿಮಿಷಗಳ ಕಾಲ ನೆನೆಸಿಟ್ಟು ನಂತರ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಕಡಿಮೆ ಕ್ಯಾಲರಿಯಿರುವ ಇವುಗಳನ್ನು ತೂಕ ಇಳಿಸುವ ಪಯಣದಲ್ಲಿರುವ ಪ್ರತಿಯೊಬ್ಬರೂ ಈ ಸಬ್ಜಾ ಹಾಗೂ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಿರಬಹುದು. ಆದರೆ, ಇವನ್ನು ನೆನೆ ಹಾಕಿಯೇ ಬಳಸಬೇಕು ಯಾಕೆ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಅಂತಹ ಗೊಂದಲವಿದ್ದರೆ (Sabja Seeds Benefits) ಅದಕ್ಕೆ ಉತ್ತರ ಇಲ್ಲಿದೆ. ಸಬ್ಜಾ ಬೀಜಗಳನ್ನು ಹಾಗೆಯೇ ಹಸಿಯಾಗಿ ನೆನೆಸದೆ ಯಾಕೆ ತಿನ್ನಬಾರದು ಎಂಬುದಕ್ಕೆ ಮೊದಲು ಸಬ್ಜಾ ಹಾಗೂ ಚಿಯಾ ಬೀಜಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳೋಣ.ಬಹಳಷ್ಟು ಮಂದಿ ಚಿಯಾ ಬೀಜಗಳು ಹಾಗೂ ಸಬ್ಜಾ ಬೀಜಗಳ ನಡುವೆ ಗೊಂದಲಕ್ಕೆ ಬೀಳುವುದುಂಟು. ಎರಡನ್ನೂ ಒಂದೇ ಎಂದು ತಿಳಿದುಕೊಳ್ಳುವುದುಂಟು. ಆದರೆ, ಇವೆರಡೂ ಬೇರೆ ಬೇರೆ. ಇವೆರಡನ್ನೂ ಸರಿಯಾಗಿ ಗಮನಿಸಿ ನೋಡಿದರೆ ಬೇರೆ ಬೇರೆ ಎಂದು ತಿಳಿಯುತ್ತದೆ. ಸಬ್ಜಾ ಬೀಜ ಕಡು ಕಪ್ಪಗಿದ್ದರೆ, ಚಿಯಾ ಬೀಜ ಕಪ್ಪು, ಬೂದು, ಬಿಳಿ ಹಾಗೂ ಕಂದು ಬಣ್ಣಗಳಿಂದ ಮಿಶ್ರಿತವಾಗಿರುತ್ತದೆ. ಸಬ್ಜಾಕ್ಕೆ ಅದರದ್ದೇ ಆದ ರುಚಿಯಿದ್ದರೆ, ಚಿಯಾ ಬೀಜಕ್ಕೆ ಹೇಳಿಕೊಳ್ಳುವ ರುಚಿಯೇನೂ ಇಲ್ಲ. ಆದರೆ, ಇವೆರಡೂ ಬೀಜಗಳನ್ನು ಸಲಾಡ್‌ ಹಾಗೂ ಇತರ ಆಹಾರಗಳ ಜೊತೆ ಸೇರಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸೇರ್ಪಡೆಯಾಗುವ ಪೋಷಕಾಂಶಗಳ ಪ್ರಮಾಣ ಹೆಚ್ಚು.

Sabja Seeds

ಸಬ್ಜಾ ಬೀಜಗಳನ್ನು ಯಾಕೆ ನೀರಿನಲ್ಲಿ ನೆನೆಸದೆ ತಿನ್ನಬೇಕು ಗೊತ್ತೇ? ಸಬ್ಜಾ ಬೀಜಗಳು ತೀರಾ ಚಿಕ್ಕದಾದ ಕಪ್ಪಗಿನ ಬೀಜಗಳಾಗಿದ್ದು, ನೀರಿನಲ್ಲಿ ಅಥವಾ ಯಾವುದೇ ದ್ರವದಲ್ಲಿ ಹಾಕಿದ ಕೂಡಲೇ ಊದಿಕೊಳ್ಳುತ್ತವೆ. ಆದರೆ ಊದಿಕೊಳ್ಳುವ ಮೊದಲೇ ಹಾಗೆಯೇ ಹಸಿಯಾಗಿಯೇ ತಿಂದರೆ ಇದು ದೇಹ ಪ್ರವೇಶಿಸಿದ ಮೇಲೆ ಎಲ್ಲಿ ಬೇಕಾದರೂ ಹೀಗೆ ಊದಿಕೊಂಡು ಕೆಲವೊಮ್ಮೆ ಸಿಕ್ಕಿಹಾಕಿಕೊಂಡ ಅನುಭವ ಕೊಡಬಹುದು.ಹೀಗಾಗಿ ಇದನ್ನು ಯಾವಾಗಲೂ ನೀರಿನಲ್ಲಿ ನೆನೆ ಹಾಕಿಯೇ ತಿನ್ನಬೇಕು. ಒಂದು ಚಮಚ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಊಟದ ನಂತರ ಸೇವಿಸುವುದು ಒಳ್ಳೆಯದು. ಸಬ್ಜಾ ಬೀಜಗಳಿಂದ ಹಲವಾರು ಆರೋಗ್ಯಕರ ಲಾಭಗಳಿವೆ. ಅದಕ್ಕಾಗಿಯೇ ಇತ್ತೀಚೆಗಿನ ದಿನಗಳಲ್ಲಿ ಹಲವರು ಇದನ್ನು ತಮ್ಮ ನಿತ್ಯ ಆಹಾರದಲ್ಲಿ ಇದನ್ನು ಸೇರಿಸಿಕೊಂಡಿದ್ದಾರೆ.

Soaking sabja seeds
  • ನಿಮ್ಮ ದೇಹ ಉಷ್ಣ ಪ್ರಕೃತಿಯದಾಗಿದ್ದರೆ, ಸಬ್ಜಾ ಬೀಜ ಬಹಳ ಒಳ್ಳೆಯದು. ಇದು ದೇಹವನ್ನು ತಂಪು ಮಾಡುವ ಗುಣವನ್ನು ಹೊಂದಿದೆ.
  • ಮದುಮೇಹಿಗಳಿಗೆ ಸಬ್ಜಾ ಬೀಜ ಒಳ್ಳೆಯದು. ದೇಹದ ಸಕ್ಕರೆಯ ಮಟ್ಟವನ್ನು ಇದು ಸಮತೋಲನದಲ್ಲಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
  • ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೂ ಸಬ್ಜಾ ಬೀಜಗಳು ಅತ್ಯುತ್ತಮ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಬೆಳಗ್ಗೆ ಸರಿಯಾಗಿ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
  • ತೂಕ ಇಳಿಸುವ ಮಂದಿಗೂ ಸಬ್ಜಾ ಬೀಜ ಅತ್ಯುತ್ತಮ. ಎರಡು ಚಮಚ ಸಬ್ಜಾ ಬೀಜವನ್ನು ಒಂದು ಲೋಟ ನೀರಿನಲ್ಲಿ ಮೊದಲೇ ನೆನೆಸಿಟ್ಟು ಸೇವಿಸಿದರೆ, ಇದು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗಿ ತೂಕ ಇಳಿಕೆಗೆ ಸಹಾಯವಾಗುತ್ತದೆ. ಸಬ್ಜಾ ಬೀಜಕ್ಕೆ ತನ್ನದೇ ಆದ ರುಚಿ ಇಲ್ಲದೇ ಇರುವುದರಿಂದ ಅನೇಕ ತಿನಿಸುಗಳಿಗೆ ಹಾಗೂ ಪೇಯಗಳಿಗೆ ಬಳಸುವ ಮೂಲಕ ನಿತಯವೂ ನಿಮ್ಮ ಹೊಟ್ಟೆ ಸೇರುವಂತೆ ಮಾಡಬಹುದು. ಮಿಲ್ಕ್‌ ಶೇಕ್‌ಗಳಲಲಿ, ಸ್ಮೂದಿಗಳಲ್ಲಿ, ಲೆಮನೇಡ್‌ಗಳಲ್ಲಿ, ಸಲಾಡ್‌ ಹಾಗೂ ಡೆಸರ್ಟ್‌ಗಳಲ್ಲೂ ಇದನ್ನು ಬಳಸಬಹುದು.

ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

Continue Reading

ಕರ್ನಾಟಕ

Shawarma: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌; ಶೀಘ್ರದಲ್ಲೇ ರಾಜ್ಯದಲ್ಲಿ ಶವರ್ಮಾ ಬ್ಯಾನ್ ?

Shawarma: ಗೋಬಿ ಮಂಚೂರಿ ಹಾಗೂ ಕಬಾಬ್ ಬಳಿಕ ಇದೀಗ ರಾಜ್ಯದಲ್ಲಿ ಶವರ್ಮಾ ಬ್ಯಾನ್‌ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಚಿಕನ್‌ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇರಳದಲ್ಲಿ ಈಗಾಗಲೇ ಶವರ್ಮಾ ತಿಂದು ಸಾಕಷ್ಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ‌ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

VISTARANEWS.COM


on

Shawarma
Koo

ಬೆಂಗಳೂರು: ಗೋಬಿ ಮಂಚೂರಿ ಹಾಗೂ ಕಬಾಬ್ ಬಳಿಕ ಇದೀಗ ರಾಜ್ಯದಲ್ಲಿ ಶವರ್ಮಾ (Shawarma) ಬ್ಯಾನ್‌ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಚಿಕನ್‌ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇರಳದಲ್ಲಿ ಈಗಾಗಲೇ ಶವರ್ಮಾ ತಿಂದು ಸಾಕಷ್ಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ‌ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಬೆಂಗಳೂರಿನಲ್ಲಿ ಶವರ್ಮಾ ಗುಣಮಟ್ಟ ಪರಿಶೀಲನೆ ನಡೆಸಿದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಬೆಚ್ಚಿ ಬೀಳಿಸುವ ಅಂಶ ಕಂಡು ಬಂದು ಬಂದಿದೆ. ಶವರ್ಮಾಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ, ಈಸ್ಟ್ ಪತ್ತೆಯಾಗಿದೆ. ಬೆಂಗಳೂರು ಮಾತ್ರವಲ್ಲ ಹುಬ್ಬಳ್ಳಿ, ಮೈಸೂರು, ತುಮಕೂರು, ಮಂಗಳೂರು, ಬಳ್ಳಾರಿ ಸೇರಿದಂತೆ ಹಲವೆಡೆ ಪರೀಕ್ಷೆ ನಡೆಸಲಾಗಿದೆ.

ಶವರ್ಮಾ ತಯಾರಿಕೆಯಲ್ಲಿ ನೈಮರ್ಲ್ಯದ ಕೊರತೆ ಕಂಡು ಬರುತ್ತಿದೆ. ಅಲ್ಲದೆ ಧೀರ್ಘ ಕಾಲದವರೆಗೂ ಶೇಖರಣೆ ಮಾಡುವುದರಿಂದ ಇದರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಈಸ್ಟ್ ಉತ್ಪತ್ತಿಯಾಗಿ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಶವರ್ಮಾ ತಿನ್ನುವುದರಿಂದ ಆರೋಗ್ಯದಲ್ಲಿ ಭಾರೀ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೇಳಿದ್ದೇನು?

ಮಾಧ್ಯಮಗಳಲ್ಲಿ ಶವರ್ಮಾ ಸೇವಿಸಿ ಫುಡ್‌ ಪಾಯ್ಸನ್‌ ಆಗಿರುವ ಕುರಿತು ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಧಾರವಾಡ, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಕಾರ್ಪೋರೇಷನ್‌ ವ್ಯಾಪ್ತಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಶವರ್ಮಾದ ಆಹಾರ ಮಾದರಿಗಳನ್ನ್ ವಿಶ್ಲೇಷಣೆಗೊಳಪಡಿಸಲಾಗಿದೆ. ಒಟ್ಟು 17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತವಾಗಿದ್ದರೆ 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ ಕಂಡು ಬಂದಿರುವುದರಿಂದ ಅಸುರಕ್ಷಿತ ಎಂದು ನಿರ್ಧರಿಸಲಾಗಿದೆ. ಅಸುರಕ್ಷಿತ ಎಂದು ವರದಿಯಾಗಿರುವ ಆಹಾರ ಮಾದರಿಗಳ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಎಲ್ಲ ಶವರ್ಮಾ ತಯಾರಕರು ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಸಂಪೂರ್ಣ ನೈರ್ಮಲ್ಯತೆ ಮತ್ತು ಗುಣಮಟ್ಟವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ 2006ರ ಶೆಡ್ಯೂಲ್‌ 4ರ ಅನುಸಾರ ಕಾಪಾಡಲು ಸೂಚಿಸಲಾಗಿದೆ. ಜತೆಗೆ ಶವರ್ಮಾವನ್ನು ಪ್ರತಿ ದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಅಲ್ಲದೆ ಎಲ್ಲ ಶವರ್ಮಾ ಆಹಾರ ತಯಾರಕರು ತಮ್ಮ ಉದ್ದಿಮೆಗೆ ಎಫ್‌ಎಸ್‌ಎಸ್‌ಎಐ ನೋಂದಣಿ / ಪರವಾನಿಗೆಯನ್ನು ಪಡೆದುಕೊಳ್ಳುವುದಲ್ಲದೇ ಅದನ್ನು ತಮ್ಮ ವ್ಯಾಪಾರದ ಸ್ಥಳದಲ್ಲಿ ಪ್ರದರ್ಶಿಸಲು ಸೂಚಿಸಿದೆ.

ಜತೆಗೆ ಸಾರ್ವಜನಿಕರು ನೋಂದಣಿ / ಪರವಾನಿಗೆಯನ್ನು ಪಡೆದುಕೊಂಡ ಮಾರಾಟಗಾರರಿಂದಲೇ ಶವರ್ಮಾವನ್ನು ಖದೀದಿಸಲು ಸೂಚಿಸಲಾಗಿದೆ. ಮುಂದಿನ ಪರಿಶೀಲನೆ ವೇಳೆ ಆಹಾರ ತಯಾರಕರು ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Chemicals in Food: ಗೋಬಿ- ಕಬಾಬ್‌ ಆಯ್ತು‌, ಈಗ ಪಾನಿಪುರಿಯಲ್ಲೂ ಕ್ಯಾನ್ಸರ್‌ಕಾರಿ ವಿಷ ಪತ್ತೆ; ಸದ್ಯದಲ್ಲೇ ಬ್ಯಾನ್?

Continue Reading

ಆರೋಗ್ಯ

Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

swim benefits: ಫಿಟ್‌ನೆಸ್‌ನ ಭಾಗವಾಗಿ ಈಜುತ್ತಿದ್ದರೆ ಅದೂ ಕೂಡಾ ಒಳ್ಳೆಯದೇ. ಇತ್ತೀಚೆಗಿನ ದಿನಗಳಲ್ಲಿ ಈಜು ಮಕ್ಕಳಾದಿಯಾಗಿ ಹಿರಿಯರೂ ಕೂಡಾ ಕಲಿತು ತಮ್ಮ ಫಿಟ್‌ನೆಸ್‌ನ ಭಾಗವಾಗಿ ರೂಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ, ಈಜುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ಕಾರ್ಡಿಯೋ ವ್ಯಾಯಾಮ. ಬನ್ನಿ, ಈಜುವುದರಿಂದ ನಮ್ಮ ಆರೋಗ್ಯಕ್ಕೆ, ಫಿಟ್‌ನೆಸ್‌ಗೆ ಯಾವೆಲ್ಲ ಉಪಯೋಗಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

swim benefits
Koo

ಹಳ್ಳಿಗಳಲ್ಲಿ ಬೆಳೆದ ನಮ್ಮ ಬಾಲ್ಯಗಳನ್ನು ನೆನೆಪಿಸಿಕೊಂಡರೆ ಅನೇಕರಿಗೆ ಬೇಸಿಗೆ ಬಂದೊಡನೆ ಅಜ್ಜಿಮನೆಯ ಕೆರೆ ಕೊಳ್ಳ, ಹೊಳೆಗಳಲ್ಲೆಲ್ಲ ಈಜಾಡಿಕೊಂಡು ಮಜವಾಗಿ ಕಾಲ ಕಳೆದದ್ದು ನೆನಪಿಗೆ ಬರಬಹುದು. ಆಗೆಲ್ಲ, ಈಜುವ ತರಗತಿ ಹೋಗದೆ, ಹಳ್ಳಿಗಳಲ್ಲೇ ಬಹುತೇಕರು ಬಾಲ್ಯದ ಭಾಗವಾಗಿ ಈಜು ಕಲಿತುಕೊಳ್ಳುತ್ತಿದ್ದರು. ಈಗ ನಗರಗಳಲ್ಲಿ ಎಲ್ಲರಿಗೂ ಈಜು ಬೇಕಾದ ಸಮಯಕ್ಕೆ ಕಲಿತುಕೊಳ್ಳಬಹುದು. ಈಜು ಗೊತ್ತಿದ್ದವರು ಈಜುಕೊಳಗಳಲ್ಲಿ ದುಡ್ಡುಕೊಟ್ಟು ನಿತ್ಯವೂ ಈಜಿ ಬರಬಹುದು. ಈಜಲು ತಿಳಿದಿದ್ದರೆ ಅದು ಒಳಳೆಯದು. ಫಿಟ್‌ನೆಸ್‌ನ ಭಾಗವಾಗಿ ಈಜುತ್ತಿದ್ದರೆ ಅದೂ ಕೂಡಾ ಒಳ್ಳೆಯದೇ. ಇತ್ತೀಚೆಗಿನ ದಿನಗಳಲ್ಲಿ ಈಜು ಮಕ್ಕಳಾದಿಯಾಗಿ ಹಿರಿಯರೂ ಕೂಡಾ ಕಲಿತು ತಮ್ಮ ಫಿಟ್‌ನೆಸ್‌ನ ಭಾಗವಾಗಿ ರೂಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ, ಈಜುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ಕಾರ್ಡಿಯೋ ವ್ಯಾಯಾಮ. ಬನ್ನಿ, ಈಜುವುದರಿಂದ ನಮ್ಮ ಆರೋಗ್ಯಕ್ಕೆ, ಫಿಟ್‌ನೆಸ್‌ಗೆ ಯಾವೆಲ್ಲ ಉಪಯೋಗಗಳಿವೆ ಎಂಬುದನ್ನು (swim benefits) ನೋಡೋಣ.

image of Benefits Of Swimming For Women
  • ಈಜು ಸುಲಭ ಖಂಡಿತ ಅಲ್ಲ ನಿಜ. ಆದರೆ, ಈಜಲು ಗೊತ್ತಿದ್ದರೆ, ಈಜುತ್ತಿದ್ದರೆ, ನೀವು ಬೇರೆ ವ್ಯಾಯಾಮಕ್ಕೆ ಹಾಕಿದ ಶ್ರಮವನ್ನು ಈಜಲು ಹಾಕಬೇಕಿಲ್ಲ. ಆದರೂ, ಇಡೀ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ಇದರಿಂದ ದೊರೆಯುತ್ತದೆ. ಮಂಡಿ ನೋವು, ಸಂಧಿವಾತ, ಬೊಜ್ಜು ಇತ್ಯಾದಿ ಸಮಸ್ಯೆಗಳಿರುವ ಮಂದಿಯೂ ನಿರಾಯಾಸವಾಗಿ ಈಜಿ ಇದರಿಂದ ಲಾಭ ಪಡೆಯಬಹುದು.
  • ಈಜುವುದರಿಂದ ಹೃದಯ ಗಟ್ಟಿಯಾಗಿರುತ್ತದೆ. ಇದು ಕೊಲೆಸ್ಟೆರಾಲ್‌ ಮಟ್ಟವನ್ನು ಸರಿಯಾಗಿಟ್ಟು, ಅಧಿಕ ರಕ್ತದೊತ್ತಡವನ್ನೂ ಸಮತೋಲನಕ್ಕೆ ತಂದು, ಹೃದಯ ಅಚ್ಚುಕಟ್ಟಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
  • ಶ್ವಾಸಕೋಶಕ್ಕೆ ಈಜು ಅತ್ಯಂತ ಒಳ್ಳೆಯದು. ಈಜಿನ ಜೊತೆ ಉಸಿರಾಟದ ಗಮನವೂ ಇರಬೇಕಾದ್ದರಿಂದ ಇಲ್ಲಿ ಶ್ವಾಸಕೋಶಕ್ಕೆ ಅತ್ಯಂತ ಹೆಚ್ಚು ವ್ಯಾಯಾಮ ದೊರೆಯುತ್ತದೆ. ಅಸ್ತಮಾ, ಅಥವಾ ಶ್ವಾಸಕೋಶದ ಸಮಸ್ಯೆ ಇರುವ ಮಂದಿ ತಮ್ಮ ಶ್ವಾಸಕೋಶಕ್ಕೆ ನೀಡಬಹುದಾದ ಉತ್ತಮ ವ್ಯಾಯಾಮ ಇದು.
  • ಈಜುವುದರಿಂದ ಹೆಚ್ಚು ಕ್ಯಾಲರಿ ಕರಗಿಸಬಹುದು. ಅರ್ಧ ಗಂಟೆ ಈಜುವುದರಿಂದ ೨೫೦ ಕ್ಯಾಲರಿಯಷ್ಟನ್ನು ಕರಗಿಸಬಹುದು. ಬೇರೆ ಯಾವ ವ್ಯಾಯಾಮದಲ್ಲಿಯೂ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಕ್ಯಾಲರಿ ಕರಗದು.
  • ಮಾಂಸಖಂಡಗಳ ಬಲವರ್ಧನೆಗೆ, ನಿಮ್ಮ ದೇಹದ ತೂಕ ಇಳಿಸಿ ಟೋನ್‌ ಮಾಡಲು ಈಜುವುದು ಒಳ್ಳೆಯ ವ್ಯಾಯಾಮ. ಇದರಿಂದ ಮಾಂಸಖಂಡಗಳು ದೃಢವಾಗುತ್ತದೆ.
  • ಈಜುವುದರಿಂದ ಮಿದುಳು ಚುರುಕಾಗುತ್ತದೆ. ವಯಸ್ಸಾದಂತೆ ಮಿದುಳಿಗೂ ವ್ಯಾಯಾಮ ನೀಡಲು ಈಜಬಹುದು.
  • ಆರೋಗ್ಯಕರವಾಗಿ ವಯಸ್ಸಾಗಬೇಕೆಂಬ ಆಸೆ ನಿಮಗಿದ್ದರೆ ನಿತ್ಯವೂ ಈಜಲು ಸಮಯ ಮೀಸಲಿಡಿ. ದೇಹದ ಎಲ್ಲ ಕೆಲಸವೂ ಸಮತೋಲನದಲ್ಲಿ ಇರಲು ಈಜುವುದರಿಂದ ಸಹಾಯವಾಗುತ್ತದೆ.
  • ಮೆನೋಪಾಸ್‌ ಹತ್ತಿರ ಬರುತ್ತಿದ್ದಂತೆ ಮಹಿಳೆಯರ ಎಲುಬಿನ ಸಾಂದ್ರತೆ ಕಡಿಮೆಯಾಗತೊಡಗುತ್ತದೆ. ಇಂಥ ಸಮಯದಲ್ಲಿ ಈಜುವುದರಿಂದ ಎಲುಬಿನ ಮೇಲೆ ಸಕಾರಾತ್ಮಕ ಪ್ರಭಾವ ಬೀಳುವುದರಿಂದ ಎಲುಬು ಸವೆತದಂಥ ಸಮಸ್ಯೆ ಬಹುಬೇಗನೆ ಬಾರದು.
  • ನೀವು ಈಗಷ್ಟೇ ವ್ಯಾಯಾಮದ ಬಗ್ಗೆ ಆಸಕ್ತಿ ತೋರಿಸುತ್ತಿದ್ದೀರಿ ಎಂದಾದಲ್ಲಿ, ಈಜು ನಿಮಗೆ ಅತ್ಯುತ್ತಮ ವ್ಯಾಯಾಮ. ಇಡೀ ದೇಹಕ್ಕೆ ಏಕಕಾಲದಲ್ಲಿ ವ್ಯಾಯಾಮ ದೊರೆಯುವುದು ಈಜಿನಿಂದ ಮಾತ್ರ.
  • ಕೇವಲ ಈಜಷ್ಟೇ ಅಲ್ಲ, ಈಜುಕೊಳದೊಳಗೆ ನಡೆಯುವುದರಿಂದ, ಕೈಬೀಸುವುದರಿಂದ ಹೊರಗೆ ನಡಿಗೆ ಮಾಡಿದ್ದರಿಂದ ಹೆಚ್ಚು ಫಲ ದೊರೆತುತ್ತದೆ. ಅದಕ್ಕಾಗಿಯೇ ವಾಟರ್‌ ಏರೋಬಿಕ್ಸ್‌ ಇತ್ಯಾದಿಗಳೂ ಕೂಡಾ ಈಗ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Continue Reading

ಆಹಾರ/ಅಡುಗೆ

Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Weight Loss Tips: ಕಪ್ಪು ಬಣ್ಣದ ಆಹಾರಗಳೆಂದರೆ ಸೀದು ಕಪ್ಪಾಗಿ ಕೂತವಲ್ಲ. ನೈಸರ್ಗಿಕವಾಗಿ ಕಡು ಬಣ್ಣದ, ಅದರಲ್ಲೂ ಕಪ್ಪು ಬಣ್ಣದ ಆಹಾರಗಳು. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಸತ್ವಗಳು ಅಧಿಕವಾಗಿರುತ್ತವೆ. ಇವುಗಳಿಂದ ತೂಕ ಇಳಿಸಬಹುದೇ? ಇಲ್ಲಿದೆ ಉತ್ತರ.

VISTARANEWS.COM


on

Weight Loss Tips
Koo

ಕಪ್ಪು ಬಣ್ಣ ಎಂದರೆ ಹಲವರು ಮೂಗು ಮುರಿಯುತ್ತಾರೆ. ಅದೇನೋ ಅಶುಭ, ಅಪಶಕುನ ಎಂದೆಲ್ಲಾ ಭಾವಿಸಿ ದೂರ ಸರಿಯುತ್ತಾರೆ. ಆದರೆ ತೂಕ ಇಳಿಸುವ ಉದ್ದೇಶವಿದ್ದವರಿಗೆ ಕಪ್ಪು ಬಣ್ಣ ಹೇಗೆ ಅನುಕೂಲ ಎಂಬುದು ತಿಳಿದಿದ್ದರೆ ಅನುಕೂಲ. ಅಂದರೆ ಕಪ್ಪು ಬಟ್ಟೆ ಹಾಕಿದರೆ ತೂಕ ಇಳಿಯುತ್ತದೆಂದೋ ಅಥವಾ ಕಪ್ಪು ಹರಳು ಧರಿಸಿದರೆ ತೆಳ್ಳಗಾಗುವರೆಂದೋ ಭ್ರಮಿಸಬೇಕಿಲ್ಲ. ನಾವಿಲ್ಲಿ ಹೇಳುತ್ತಿರುವುದು ಕಪ್ಪು ಬಣ್ಣದ ಆಹಾರಗಳ ಬಗ್ಗೆ. ಹೌದು, ವಿಚಿತ್ರ ಎನಿಸಿದರೂ, ಕಪ್ಪು ಬಣ್ಣದ ಆಹಾರಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಾಂದ್ರವಾಗಿದ್ದು, ಕೊಬ್ಬು ಕತ್ತರಿಸುವಲ್ಲಿ ನೆರವಾಗುತ್ತವೆ. ಇಲ್ಲಿದೆ (Weight Loss Tips) ವಿವರಗಳು.

Black foods

ಏನಿವು?

ಕಪ್ಪು ಬಣ್ಣದ ಆಹಾರಗಳೆಂದರೆ ಸೀದು ಕಪ್ಪಾಗಿ ಕೂತವಲ್ಲ. ನೈಸರ್ಗಿಕವಾಗಿ ಕಡು ಬಣ್ಣದ, ಅದರಲ್ಲೂ ಕಪ್ಪು ಬಣ್ಣದ ಆಹಾರಗಳು. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಸತ್ವಗಳು ಅಧಿಕವಾಗಿರುತ್ತವೆ. ಜೊತೆಗೆ ಬೇಗನೇ ಹೊಟ್ಟೆ ತುಂಬಿದ ಅನುಭವ ನೀಡಿ, ದೀರ್ಘ ಕಾಲದವರೆಗೆ ಹಸಿವನ್ನು ಮುಂದೂಡಿ, ದೇಹದ ಚಯಾಪಚಯವನ್ನು ಹೆಚ್ಚಿಸುತ್ತವೆ. ಅಂದರೆ ಶರೀರವನ್ನು ಬಳಲಿಸದೆಯೆ, ಶಕ್ತಿಯನ್ನು ಕುಂದಿಸದೆಯೆ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತವೆ. ಯಾವ ಆಹಾರಗಳು ಎಂಬುದನ್ನು ಈಗ ತಿಳಿಯೋಣ. ಅದಕ್ಕೂ ಮುನ್ನ, ಅವುಗಳಲ್ಲಿ ಇರುವುದೇನು ಎಂದು ನೋಡಿದರೆ- ಕಡು ಬಣ್ಣದ ಆಹಾರಗಳಲ್ಲಿ ಆಂಥೋಸಯನಿನ್‌ ಎಂಬ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಸ್ಥಿರವಾಗಿ ಇರಿಸುವುದಕ್ಕೆ ಇದು ನೆರವಾಗುತ್ತದೆ. ರಕ್ತದಲ್ಲಿನ ಸಕ್ಕರೆಯಂಶ ಸ್ಥಿರವಾಗಿ ಇದ್ದಷ್ಟೂ ತಿನ್ನಬೇಕೆಂಬ ಬಯಕೆ ಬರುವುದನ್ನು ತಡೆಯಬಹುದು. ಏರಿಳಿತ ಹೆಚ್ಚಾದರೆ ತಿನ್ನುವುದೂ ಹೆಚ್ಚಬಹುದು. ಜೊತೆಗೆ, ಈ ಕಪ್ಪು ಆಹಾರಗಳಲ್ಲಿ ನಾರಿನಂಶವೂ ಅಧಿಕ. ಹಾಗಾಗಿ ಕಳ್ಳ ಹಸಿವನ್ನು ತಡೆಯುವ ಮೂಲಕ ಇದೂ ತೂಕ ಇಳಿಕೆಗೆ ಅನುಕೂಲ ಒದಗಿಸುತ್ತದೆ.

ಯಾವುವು?

ಕಪ್ಪು ಬಣ್ಣದ ಆಹಾರಗಳೆಂದರೆ ಯಾವುದು? ಪ್ರಯತ್ನಿಸಿದರೂ ಅಂಥವು ನೆನಪಾಗುತ್ತಿಲ್ಲವೇ? ಚಿಂತೆಯಿಲ್ಲ, ಪಟ್ಟಿ ಇಲ್ಲಿದೆ-

Black beans

ಕಪ್ಪು ಬೀನ್ಸ್‌

ಕಡು ಕಪ್ಪು ಬಣ್ಣದ ಈ ಕಾಳುಗಳಲ್ಲಿ ಪ್ರೊಟೀನ್‌ ಹೇರಳವಾಗಿದೆ. ಜೊತೆಗೆ, ನಾರು ಹಾಗೂ ಉತ್ಕರ್ಷಣ ನಿರೋಧಕಗಳು ಸಹ ತುಂಬಿಕೊಂಡಿವೆ. ಸಾಮಾನ್ಯವಾಗಿ ಯಾರೆಲ್ಲ ಕಾಳುಗಳನ್ನು ಹೊಂದಿದ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೊ ಅವರಿಗೆ ಕೊಬ್ಬು ಶೇಖರವಾಗುವುದು, ಅದರಲ್ಲೂ ಹೊಟ್ಟೆ ಮತ್ತು ಸುತ್ತಲಿನ ಭಾಗಗಳಲ್ಲಿ ಕೊಬ್ಬು ಜಮೆಯಾಗುವುದು ಕಡಿಮೆ ಎನ್ನುತ್ತವೆ ಅಧ್ಯಯನಗಳು

black rice

ಕಪ್ಪು ಅಕ್ಕಿ

ಇದೂ ಸಹ ಆಂಥೋಸಯನಿನ್‌ಗಳು ವಿಫಲವಾಗಿರುವಂಥ ಆಹಾರ. ಬಿಳಿ ಅಕ್ಕಿಗೆ ಹೋಲಿಸಿದಲ್ಲಿ ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ಮಧುಮೇಹಿಗಳಿಗೆ ಬಿಳಿಯಕ್ಕಿಗಿಂತ ಇದು ಉತ್ತಮವಾದ ಆಹಾರ. ದೇಹದಲ್ಲಿ ಉರಿಯೂತವನ್ನು ಶಮನ ಮಾಡಿ, ತೂಕ ಇಳಿಸಲು ನೆರವಾಗುತ್ತದೆ ಈ ಆಹಾರ.

Blackberry

ಬ್ಲ್ಯಾಕ್‌ಬೆರ್ರಿ

ಆಂಥೋಸಯನಿನ್‌ಗಳು ತೀರಾ ಸಾಂದ್ರವಾಗಿರುವ ಆಹಾರಗಳ ಪೈಕಿ ಇದು ಮುಂಚೂಣಿಯಲ್ಲಿದೆ. ಇದರಲ್ಲಿ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಕ್ಯಾಲರಿ ಹೆಚ್ಚಿಸದೆಯೇ ಹೊಟ್ಟೆ ತುಂಬಿಸುತ್ತದೆ. ಈ ಎಲ್ಲ ಕಾರಣಗಳಿಗಾಗಿ ಈ ಹಣ್ಣು ಅತ್ಯಂತ ಆರೋಗ್ಯಕರ ಎನಿಸಿದ್ದು, ತೂಕ ಇಳಿಸುವವರಿಗೆ ಇದು ಸಹಕಾರಿ.

Black Chia Seed

ಕಪ್ಪು ಚಿಯಾ ಬೀಜ

ಯಾವುದೇ ಬೀಜಗಳು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡಿ, ಪ್ರೊಟೀನ್‌ ಮತ್ತು ನಾರನ್ನು ಹೇರಳವಾಗಿ ಒದಗಿಸುತ್ತವೆ. ಅವುಗಳಲ್ಲಿ ಚಿಯಾ ಬೀಜವೂ ಒಂದು. ಇದರಲ್ಲಿ ಕಪ್ಪು ಬಣ್ಣದ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಇನ್ನಷ್ಟು ಅಧಿಕವಾಗಿರುತ್ತವೆ. ದೇಹಕ್ಕೆ ಬೇಕಾದ ಪೋಷಣೆಯನ್ನು ನೀಡಿ, ತೂಕ ಇಳಿಸಲು ಪೂರಕವಾಗಿವೆ.

black Sesame

ಕರಿ ಎಳ್ಳು

ಎಳ್ಳಿನಲ್ಲಿರುವ ತೈಲದಂಶ ದೇಹಕ್ಕೆ ಹಿತವಾಗುವಂಥದ್ದು. ಅದರಲ್ಲೂ ಸ್ನಾಯುಗಳನ್ನು ಬೆಳೆಸುವಂಥ ಯಾವುದೇ ಆಹಾರಗಳು ದೇಹದ ಚಯಾಪಚಯವನ್ನು ಹೆಚ್ಚಿಸುವಂಥವು. ಕರಿ ಎಳ್ಳಿನಲ್ಲಿರುವ ಕೊಬ್ಬಿನಂಶವು ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯಬಲ್ಲದು. ಈ ಮೂಲಕ ತೂಕ ಇಳಿಕೆಗೂ ಉಪಯುಕ್ತ ಆಗಬಲ್ಲದು.

ಇದನ್ನೂ ಓದಿ: Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್‌ ಪಡೆಯಿರಿ!

Continue Reading
Advertisement
Kamal Haasan on limited screen time in 'Kalki 2898 AD
ಟಾಲಿವುಡ್5 mins ago

Kamal Haasan: ನನ್ನ ಪಾತ್ರ ಚಿಕ್ಕದಿರಬಹುದು ಆದರೆ ಇದು ಆರಂಭವಷ್ಟೇ ಎಂದು ಕಲ್ಕಿ ಭಾಗ- 2ರ ಸುಳಿವು ಕೊಟ್ಟ ಕಮಲ್‌ ಹಾಸನ್‌!

T20 World Cup 2024
ಕ್ರೀಡೆ10 mins ago

T20 World Cup 2024: ʼವಿಶ್ವʼ ಗೆದ್ದ ನಾಯಕ ರೋಹಿತ್‌, ಕೋಚ್‌ ದ್ರಾವಿಡ್‌, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ

Self Harming
ಮೈಸೂರು15 mins ago

Self Harming : ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ

Jay Shah Promise
ಪ್ರಮುಖ ಸುದ್ದಿ28 mins ago

Jay Shah Promise: ಜಯ್​​ ಶಾ ಭವಿಷ್ಯ ನುಡಿದಂತೆ ಟಿ20 ವಿಶ್ವಕಪ್​ ಗೆದ್ದ ಭಾರತ; ವಿಡಿಯೊ ವೈರಲ್​

snake Bite
ಕಲಬುರಗಿ37 mins ago

Snake Bite : ಮರದಡಿ ಕುಳಿತಾಗ ಮಹಿಳೆಯ ಕಿವಿಗೆ ಕುಟುಕಿದ ಹಾವು; ವಿಷವೇರಿ ಸಾವು

T20 World Cup 2024 prize money
ಕ್ರೀಡೆ55 mins ago

T20 World Cup 2024 Prize Money:ಚಾಂಪಿಯನ್​ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Text Book
ಕರ್ನಾಟಕ55 mins ago

Text Book: ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರ ಅಸಮಾಧಾನ; ಸಿಎಂಗೆ ಪತ್ರ

Virat Kohli video calls Anushka Sharma after winning
ಬಾಲಿವುಡ್56 mins ago

Virat Kohli: ವಿಶ್ವಕಪ್ ಗೆದ್ದ ನಂತರ ಅನುಷ್ಕಾ ಶರ್ಮಾಗೆ ವಿಡಿಯೊ ಕಾಲ್‌ ಮಾಡಿ ಫ್ಲೈಯಿಂಗ್ ಕಿಸ್‌ ಕೊಟ್ಟ ವಿರಾಟ್ ಕೊಹ್ಲಿ!

Sabja Seeds Benefits
ಆರೋಗ್ಯ59 mins ago

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Physical Abuse
ಚಿಕ್ಕಬಳ್ಳಾಪುರ1 hour ago

Physical Abuse : ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ19 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌