Tips For Parents: ಮಗುವಿಗೆ ಕನ್ನಡಕ ಬೇಕೆಂಬುದು ಪಾಲಕರಿಗೆ ತಿಳಿಯುವುದು ಹೇಗೆ? - Vistara News

ಲೈಫ್‌ಸ್ಟೈಲ್

Tips For Parents: ಮಗುವಿಗೆ ಕನ್ನಡಕ ಬೇಕೆಂಬುದು ಪಾಲಕರಿಗೆ ತಿಳಿಯುವುದು ಹೇಗೆ?

Tips for Parents: ಮಕ್ಕಳಿಗೆ ದೃಷ್ಟಿ ಸಮಸ್ಯೆಯಿದೆ, ಕನ್ನಡದ ಅಗತ್ಯವಿದೆ ಎನ್ನುವುದೇ ಕೆಲವೊಮ್ಮೆ ಪಾಲಕರಿಗೆ ತಿಳಿಯುವುದಿಲ್ಲ. ತಮಗೇನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಕ್ಕಳಿಗೆ ಆಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿನ ಕಣ್ಣಿನ ತೊಂದರೆಯು ಪಾಲಕರ ಗಮನಕ್ಕೆ ಬರುವುದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕ ಮಕ್ಕಳ ಮುಖದ ಮೇಲೆ (Tips for Parents) ಕನ್ನಡಕ ಕಾಣುವುದು ಆಧುನಿಕ ಕಾಲದ ಸಾಮಾನ್ಯ ವಿಷಯಗಳಲ್ಲಿ ಒಂದು. ಅಗತ್ಯಕ್ಕಿಂತ ಎಷ್ಟೋಪಟ್ಟು ಅಧಿಕವಾಗಿ ಪರದೆಗೆ ಕಣ್ಣು ಕೀಲಿಸಿಕೊಂಡಿರುವುದಕ್ಕೆ ಮಕ್ಕಳ ಮುಗ್ಧ ಮುಖಕ್ಕೆ ʻಸುಲೋಚನʼ ಬರುವುದು ಮಾಮೂಲಿ ಎಂಬಂತಾಗಿದೆ. ಆದರೆ ಎಷ್ಟೋ ಬಾರಿ ಮಕ್ಕಳಿಗೆ ಕನ್ನಡದ ಅಗತ್ಯವಿದೆ, ದೃಷ್ಟಿ ಸಮಸ್ಯೆಯಿದೆ ಎನ್ನುವುದೇ ಪಾಲಕರಿಗೆ ತಿಳಿಯುವುದಿಲ್ಲ. ತಮಗೇನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಕ್ಕಳಿಗೆ ಆಗುವುದಿಲ್ಲ. ಹಾಗಾಗಿ ಅವರ ವರ್ತನೆಯಲ್ಲಿ ಹಠ, ಅಳು, ಕಿರಿಕಿರಿಯಂಥವು ಕಾಣಬಹುದು. ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕೆ ತಿಳಿಯದ ಚಿಣ್ಣರು, ತಮಗೆ ತೋಚಿದಂತೆ ಅದನ್ನು ವ್ಯಕ್ತಪಡಿಸುತ್ತಾರಷ್ಟೆ. ಬೆಳೆಯುವ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ತೊಂದರೆಯನ್ನು ಶೀಘ್ರ ಚಿಕಿತ್ಸೆಗೆ ಒಳಪಡಿಸಿದರೆ, ಮಗುವಿಗೇ ಅನುಕೂಲ ತಾನೆ? ಆದರೆ ನಿತ್ಯದ ಬದುಕಿನಲ್ಲಿ ವ್ಯತ್ಯಾಸವಾಗುವಷ್ಟು ಢಾಳಾಗಿ ದೃಷ್ಟಿದೋಷಗಳು ಇರದಿದ್ದರೆ, ಅಲ್ಪಸ್ವಲ್ಪ ಕಣ್ಣಿನ ತೊಂದರೆಯು ಪಾಲಕರ ಗಮನಕ್ಕೆ ಬರುವುದು ಹೇಗೆ? ಇಂಥ ಕೆಲವು ಸೂಚನೆಗಳು ಮಕ್ಕಳಲ್ಲಿ ಕಾಣುವುದೇ ಎಂಬುದನ್ನು ಹೆತ್ತವರು, ಶಿಕ್ಷಕರು, ಪಾಲಕರು ಗಮನಿಸುವುದು ಅಗತ್ಯ.

Child at eye sight test. Kid at optitian. Eyewear for kids.

ಏಕಾಗ್ರತೆಯ ಕೊರತೆ

ಮಕ್ಕಳಲ್ಲಿ ಏಕಾಗ್ರತೆ ಇದ್ದರೆ ಅದೇ ದೊಡ್ಡ ವಿಷಯ! ಮರ್ಕಟನಂಥ ಮನಸ್ಸಿಗೆ ನೂರೆಂಟು ಕಡೆ ಹಾರುವ ಉತ್ಸಾಹ ಇರುವಾಗ, ಅದನ್ನು ಒಂದೆಡೆ ನಿಲ್ಲಿಸುವುದು ಕಷ್ಟವೇ. ಆದಾಗ್ಯೂ, ಆಯಾ ಮಕ್ಕಳ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಏಕಾಗ್ರತೆ ಇದ್ದರೆ, ಅದು ಸರಿಯಾಗಿ ಗೋಚರಿಸುತ್ತಿಲ್ಲ ಎನ್ನುವ ಕಾರಣಕ್ಕೂ ಇರಬಹುದು. ಹಾಗಾಗಿ ಅದರ ದೃಷ್ಟಿಯನ್ನೊಮ್ಮೆ ಪರಿಶೀಲಿಸಿ.

ಪಠ್ಯ ಚಟುವಟಿಕೆಯಲ್ಲಿ ತೊಂದರೆ

ಈವರೆಗಿನ ಶಾಲಾ ಚಟುವಟಿಕೆಗಳಿಗಿಂತ ಈಗೀಗಿನದ್ದು ಕಡಿಮೆಯಾಗಿದ್ದರೆ, ಮಗು ಪುಸ್ತಕದಲ್ಲಿ ಬರೆಯುವಾಗ ತಪ್ಪು ಮಾಡುವುದು ಹೆಚ್ಚಾದರೆ, ಶಾಲೆಯಲ್ಲಿ ಶಿಕ್ಷಕರು ಬೋರ್ಡ್‌ ಮೇಲೆ ಬರೆದಿದ್ದನ್ನು ಕಾಪಿ ಮಾಡಿಕೊಳ್ಳುವಾಗಲೂ ಮಗು ತಪ್ಪು ಮಾಡುತ್ತಿದ್ದರೆ, ಬೋರ್ಡಿನಲ್ಲಿದ್ದಿದ್ದನ್ನು ಅಳಿಸಬಾರದೆಂದು ಪದೇಪದೆ ಶಿಕ್ಷಕರನ್ನು ಒತ್ತಾಯಿಸುತ್ತಿದ್ದರೆ, ನೇತ್ರ ತಜ್ಞರಲ್ಲಿ ಮಗುವನ್ನು ಕರೆದೊಯ್ಯುವುದು ಸೂಕ್ತ.

kids headache

ತಲೆನೋವು

ಬೇರಾವುದೇ ಸಮಸ್ಯೆ ಇಲ್ಲದೆಯೂ ಆಗಾಗ ತಲೆನೋವಿನ ಬಾಧೆ ಇದ್ದರೆ, ಆಗಾಗ ಕಣ್ಣುಜ್ಜುತ್ತಿದ್ದರೆ, ಓದುವಾಗ ಮೆಳ್ಳೆಗಣ್ಣು ಅಥವಾ ಸಣ್ಣ ಕಣ್ಣು ಮಾಡುತ್ತಿದ್ದರೆ- ಇವೆಲ್ಲವೂ ದೃಷ್ಟಿ ದೋಷದ ಸಂಕೇತ ಆಗಿರಬಹುದು. ಹಾಗಾಗಿ ಇಂಥ ಲಕ್ಷಣಗಳನ್ನೂ ಗಮನಿಸಿ, ದೃಷ್ಟಿ ತಪಾಸಣೆಯನ್ನು ಮಾಡಿಸುವುದು ಒಳ್ಳೆಯದು.

ತಲೆ ಸೊಟ್ಟ ಮಾಡುವುದು

ಇಂಥ ಕೆಲವು ದೈಹಿಕ ಸ್ವರೂಪದ ಬದಲಾವಣೆಗಳು ಮಕ್ಕಳಲ್ಲಿ ಕಂಡರೆ ಹೆತ್ತವರು ಜಾಗ್ರತೆ ಮಾಡುವುದು ಕ್ಷೇಮ. ಓದುವಾಗ, ಬರೆಯುವಾಗ ಯಾವುದೋ ಒಂದು ಕೋನದಲ್ಲಿ, ಉಳಿದ ಕಡೆಗಿಂತ ದೃಷ್ಟಿ ಚೆನ್ನಾಗಿ ಗೋಚರಿಸುತ್ತದೆ ಎಂದಾದರೆ- ಅದಕ್ಕೆ ಪೂರಕವಾಗಿ ತಲೆ ಸೊಟ್ಟ ಮಾಡುವುದು, ಅದರಲ್ಲೂ ದೂರದ ವಸ್ತುಗಳನ್ನು ನೋಡುವುದಾಗ, ಅಂಗಡಿಗಳ ಫಲಕ ಓದುವಾಗ ಅವರು ಪಡುವ ಕಷ್ಟವು, ಅವರ ದೃಷ್ಟಿ ಸಮಸ್ಯೆಯತ್ತಲೇ ಬೆರಳು ಮಾಡುತ್ತದೆ.

kids eye pain

ಕಣ್ಣು ನೋವು

ಇದಂತೂ ನೇರವಾಗಿ ಕಣ್ಣಿನ ಸಮಸ್ಯೆಯನ್ನೇ ಪ್ರತಿನಿಧಿಸುತ್ತದೆ. ಇದರ ಜೊತೆಗೆ ತಲೆನೋವೂ ಇರಬಹುದು, ಹೊಟ್ಟೆ ತೊಳೆಸುವುದು, ವಾಂತಿಯಂಥ ಲಕ್ಷಣಗಳು ಕಂಡರೆ ವೈದ್ಯರ ದರ್ಶನ ಅಗತ್ಯ. ಸರಿಯಾಗಿ ಗೋಚರಿಸದೆ ಇದ್ದಾಗ, ಕಣ್ಣುಗಳ ಮೇಲೆ ಬೀಳುವ ಅಧಿಕ ಒತ್ತಡದಿಂದ ಉಂಟಾಗುವಂಥ ಸಮಸ್ಯೆಗಳು ಇವೆಲ್ಲ.

ಹತ್ತಿರ ಹಿಡಿಯುವುದು

ಪುಸ್ತಕವನ್ನು ಹತ್ತಿರಕ್ಕೆ ಹಿಡಿದು ಓದುವುದು, ಮೊಬೈಲ್‌ ಅಥವಾ ಟ್ಯಾಬ್‌ಗಳನ್ನು ಮುಖದ ಸಮೀಪಕ್ಕೆ ತಂದುಕೊಳ್ಳುವುದು ಇಲ್ಲವೇ ಅವುಗಳಲ್ಲಿನ ಅಕ್ಷರಗಳನ್ನು ಹಿಗ್ಗಿಸಿ ದೊಡ್ಡದು ಮಾಡಿಕೊಳ್ಳುವುದು, ಟಿವಿ ನೋಡುವಾಗ ಮುಂದೆ ಹೋಗಿ ನಿಂತುಕೊಳ್ಳುವುದು- ಇವೆಲ್ಲವೂ ಕಣ್ಣಿನ ತೊಂದರೆ ಇರಬಹುದೆಂಬ ಸೂಚನೆಗಳು. ಇಂಥವನ್ನು ತಮಗರಿವಿಲ್ಲದಂತೆಯೇ ಮಕ್ಕಳು ಮಾಡುತ್ತಿರುತ್ತಾರೆ.

ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

ವರ್ತನೆಯಲ್ಲಿನ ಬದಲಾವಣೆ

ಇದ್ದಕ್ಕಿದ್ದಂತೆ ಅಳು, ಹಠ, ಕಿರಿಕಿರಿ, ಕೋಪ ಮಾಡಿಕೊಳ್ಳುವುದು, ಶಾಲೆಯ ಬಗ್ಗೆ ಮುನಿಸು, ಓದುವ ವಿಷಯದಲ್ಲಿ ಅಸಹನೆ- ಇಂಥವೆಲ್ಲ ದೃಷ್ಟಿ ಸರಿಯಾಗಿರದ ಕಾರಣ ತೋರುವ ಹತಾಶೆ ವರ್ತನೆಗಳಿರಬಹುದು. ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಳು/ನು ಹೀಗೇಕೆ ಮಾಡುತ್ತಿದ್ದಾರೆಂಬುದನ್ನು ತಿಳಿಯಿರಿ. ಸರಿಯಾಗಿ ಕಾಣಿಸುತ್ತಿಲ್ಲ ಎಂದಾದರೆ ನೇತ್ರ ತಜ್ಞರಲ್ಲಿ ಕರೆದೊಯ್ಯಿರಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Monsoon Fashion Do’s & Don’ts: ಹುಡುಗಿಯರ ಮಾನ್ಸೂನ್‌ ಡ್ರೆಸ್‌ ಹೇಗಿರಬೇಕು? ಹೇಗಿರಬಾರದು?

Monsoon Fashion do’s & don’ts: ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರು ಧರಿಸುವ ಸ್ಟೈಲಿಶ್‌ ಡ್ರೆಸ್‌ಗಳು ಹೇಗಿರಬೇಕು? ಹೇಗಿರಬಾರದು ? ಎಂಬುದನ್ನು ತಿಳಿಸಿರುವ ಫ್ಯಾಷನಿಸ್ಟಾಗಳು ಈ ಕುರಿತಂತೆ ಹುಡುಗಿಯರಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Fashion Do’s & Don’ts
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಹುಡುಗಿಯರು ಧರಿಸುವ (Monsoon Fashion do’s & don’ts) ಉಡುಪುಗಳು ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು, ಧರಿಸಿದಾಗ ಕಂಫರ್ಟಬಲ್‌ ಆಗಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ಗೆ ತಕ್ಕಂತಿರಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ಹುಡುಗಿಯರು ಸ್ಟೈಲಿಶ್‌ ಆಗಿ ಕಾಣಿಸಲು ಮಾನ್ಸೂನ್‌ನಲ್ಲೂ ಸಮ್ಮರ್‌ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತಾರಂತೆ. ಇನ್ನು, ಕೆಲವು ಯುವತಿಯರು ಮಾನ್ಸೂನ್‌ ಸೀಸನ್‌ನಲ್ಲಿ ಹೊದ್ದುಕೊಂಡಂತಿರುವ ಉಡುಪುಗಳನ್ನು ಧರಿಸುತ್ತಾರಂತೆ. ಆದರೆ, ಫ್ಯಾಷನಿಸ್ಟ್‌ಗಳ ಪ್ರಕಾರ, ಆಯಾ ವರ್ಗದ ಅನುಗುಣವಾಗಿ ಹುಡುಗಿಯರು ಧರಿಸುವ ಉಡುಪುಗಳು ಬದಲಾಗುತ್ತವಂತೆ. ಅದರಲ್ಲೂ, ಜೆನ್‌ ಜಿ ಹುಡುಗಿಯರು, ಯಾವುದೇ ಸೀಸನ್‌ ಟ್ರೆಂಡ್‌ ಫಾಲೋ ಮಾಡುವುದಿಲ್ಲ, ಬದಲಾಗಿ ತಮ್ಮದೇ ಆದ ಸ್ಟೈಲಿಶ್‌ ಮಾರ್ಗವನ್ನು ಹಿಡಿಯುತ್ತಾರಂತೆ. ಅಂದ ಹಾಗೆ, ಇದೆಲ್ಲಾ ಓಕೆ, ಹಾಗೆಂದು ಸೀಸನ್‌ಗೆ ವಿರುದ್ಧವಾಗಿ ಕಾಣಿಸುವುದು ದಿನಚರಿಯಾಗಬಾರದು! ಇದು ಆರೋಗ್ಯಕ್ಕೂ ಮಾರಕ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾದಲ್ಲಿ, ಈ ಸೀಸನ್‌ನಲ್ಲಿ ಯಾವ ರೀತಿಯ ಡ್ರೆಸ್‌ಗಳು ಬೆಸ್ಟ್? ಯಾವುದು ನಾಟ್‌ ಓಕೆ ! ಎಂಬುದನ್ನು ಫ್ಯಾಷನಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

Monsoon Fashion

ಮಾನ್ಸೂನ್‌ ಡ್ರೆಸ್‌ಗಳು

ಮಳೆಗಾಲದಲ್ಲಿ ಟ್ರೆಂಡಿಯಾಗುವ ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌-ಫ್ರಾಕ್ಸ್, ಸ್ಕೆಟರ್‌ ಡ್ರೆಸ್, ಮಿಡಿ ಡ್ರೆಸ್‌, ಹೈ ವೇಸ್ಟ್ ಶಾಟ್ಸ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆಗೆ ಟ್ರೆಂಡಿಯಾಗಿಯೂ ಬಿಂಬಿಸುತ್ತವೆ.

Monsoon Fashion

ಗಿಡ್ಡ ಪ್ಯಾಂಟ್‌ಗೆ ಓಕೆ ಹೇಳಿ

ಆಂಕೆಲ್‌ ಲೆಂಥ್‌, ಕ್ರಾಪ್ಡ್ ಪ್ಯಾಂಟ್‌, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪುಶ್‌ ಬ್ಯಾಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಪಲ್ಹಾಜೋ, ಪ್ಯಾರಲಲ್‌, ಬೂಟ್‌ ಕಟ್‌, ಶರರಾ, ಘರಾರದಂತಹ ಅಗಲವಾದ ನೆಲಹಾಸುವಂತಹ ಪ್ಯಾಂಟ್‌ಗಳನ್ನು ಧರಿಸಬೇಡಿ.

Monsoon Fashion

ನೆಲ ಮುಟ್ಟುವ ಗೌನ್‌ಗಳನ್ನು ದೂರವಿಡಿ

ನಡೆಯುವಾಗ ನೆಲವನ್ನು ಮುಟ್ಟುವಂತಹ ಉದ್ದುದ್ದ ಮ್ಯಾಕ್ಸಿ, ಗೌನ್‌ಗಳಿಗೆ ಸದ್ಯಕ್ಕೆ ಬೈ ಹೇಳಿ. ಇವು ನೋಡಲು ಮಾತ್ರ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ನಿರ್ವಹಣೆ ಮಾಡುವುದು ಕಷ್ಟ.

Monsoon Fashion

ಭಾರವಿಲ್ಲದ ಲೈಟ್‌ವೈಟ್‌ ಉಡುಗೆ ಧರಿಸಿ

ಲೇಯರಿಂಗ್‌ ಹೆಸರಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳು ಉಸಿರುಕಟ್ಟಿಸಬಹುದು. ಮಳೆಯಲ್ಲಿ ಒದ್ದೆಯಾದರಂತೂ ಕಿರಿಕಿರಿ ಎನಿಸಬಹುದು. ಇದನ್ನು ಅವಾಯ್ಡ್ ಮಾಡಲು, ಬೇಗನೇ ಒಣಗುವ ಲೈಟ್‌ವೈಟ್‌ ಡ್ರೆಸ್‌ಗಳಿಗೆ ಸೈ ಎನ್ನಿ.

ಇದನ್ನೂ ಓದಿ: Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

ಹೆವಿ ಎಥ್ನಿಕ್‌ ಡಿಸೈನರ್‌ವೇರ್‌ ಅವಾಯ್ಡ್ ಮಾಡಿ

ಹೆವಿ ಎಥ್ನಿಕ್‌ವೇರ್‌ಗಳನ್ನು ಆವಾಯ್ಡ್ ಮಾಡಿ. ಎಥ್ನಿಕ್‌ವೇರ್‌ ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ಆಂಕೆಲ್‌ ಲೆಂಥ್‌ ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ. ಶಾರ್ಟ್ ಕುರ್ತಾ, ಆಂಕೆಲ್‌ ಲೆಂಥ್‌ ಚೂಡಿದಾರ್‌, ಸಲ್ವಾರ್‌ಗಳನ್ನು ಧರಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Foods For Weight Loss: ಈ ಆಹಾರಗಳನ್ನು ಸೇವಿಸಿ; ಸಲೀಸಾಗಿ ತೂಕ ಇಳಿಸಿ!

Foods For Weight Loss: ತೂಕ ಇಳಿಸುವುದು ಕೆಲವೊಮ್ಮ ಎಂಥವರನ್ನೂ ಮರೀಚಿಕೆಯಾಗಿ ಕಾಡಬಲ್ಲದು. ದುರದೃಷ್ಟ ಬೆನ್ನು ಹಿಡಿದರೆ 100 ಗ್ರಾಂ ತೂಕವೂ ಭೂಮಿ ತೂಕ ಎನಿಸುವುದನ್ನು ಕಂಡು ಕಣ್ಣೀರಿಟ್ಟಿದ್ದೇವೆ ನಾವು. ಹಾಗೆಂದು ನಮ್ಮಂಥ ಸಾಮಾನ್ಯರು ತೂಕ ನಿಯಂತ್ರಿಸುವ ಶ್ರಮವನ್ನು ಬಿಡುವಂತಿಲ್ಲವಲ್ಲ. ಇದಕ್ಕೆ ನೆರವಾಗುವ ಆಹಾರಗಳ ಪೈಕಿ ಕೆಲವೊಂದನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Weight Loss Tips kannada
Koo

ತೂಕ ಇಳಿಕೆಯ ಬಗ್ಗೆ ಸಾಕಷ್ಟು (Foods for Weight Loss) ಕಂಡು ಕೇಳಿದ್ದಾಗಿದೆ. ದುರದೃಷ್ಟ ಬೆನ್ನು ಹಿಡಿದರೆ 100 ಗ್ರಾಂ ತೂಕವೂ ಭೂಮಿ ತೂಕ ಎನಿಸುವುದನ್ನು ಕಂಡು ಕಣ್ಣೀರಿಟ್ಟಿದ್ದೂ ಆಗಿದೆ. ಫಿಟ್‌ನೆಸ್‌ ಮಾರ್ಗದಲ್ಲಿ ಇಡೀ ಬದುಕನ್ನೇ ಸವೆಸಿದವರಿಗೆ ತೂಕ ಇಳಿಸುವುದು ಇಷ್ಟು ತೊಂದರೆ ನೀಡಿದರೆ, ನಮ್ಮಂಥ ಸಾಮಾನ್ಯರ ಪಾಡೇನು ಎಂಬ ಭಾವ ಬಂದರೆ ಅಚ್ಚರಿಯಿಲ್ಲ. ಹಾಗೆಂದು ನಮ್ಮ ತೂಕ ನಿಯಂತ್ರಿಸುವ ಶ್ರಮವನ್ನು ನಾವು ಬಿಡುವಂತಿಲ್ಲವಲ್ಲ. ತರಹೇವಾರಿ ರೋಗಗಳಿಂದ ತಪ್ಪಿಸಿಕೊಳ್ಳುವುದಕ್ಕೆ ತೂಕವನ್ನು ನಿಯಂತ್ರಣದಲ್ಲಿ ಇರಿಸುವುದು ಮಹತ್ವದ್ದು. ಇದಕ್ಕೆ ಪೂರಕವಾದಂಥ ಆಹಾರಗಳು ಯಾವುವು?

Oatmeal Abdominal Obesity

ಓಟ್‌ಮೀಲ್‌

ಬಹಳಷ್ಟು ಸತ್ವಗಳಿರುವ ಈ ಧಾನ್ಯದಲ್ಲಿ ಕ್ಯಾಲರಿ ಕಡಿಮೆ. ಇದರಲ್ಲಿರುವ ನಾರು ಮತ್ತು ಪ್ರೊಟೀನ್‌ ಅಂಶಗಳು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ ಹಾಗೂ ದೇಹಕ್ಕೆ ದಣಿವಾಗದಂತೆ ಶಕ್ತಿಯನ್ನು ಪೂರೈಸುತ್ತವೆ. ಅರ್ಧ ಕಪ್‌ನಷ್ಟು ಬೇಯಿಸಿದ ಓಟ್ಸ್‌ನಲ್ಲಿ ಕೇವಲ 150 ಗ್ರಾಂ ಕ್ಯಾಲರಿ ದೊರೆಯುತ್ತದೆ. 4 ಗ್ರಾಂನಷ್ಟು ನಾರು ಲಭಿಸುತ್ತದೆ. ಬೆಳಗಿನ ತಿಂಡಿಗೆ ಇದನ್ನು ಸೇವಿಸುವುದರಿಂದ ಕಾರಣವಿಲ್ಲದೆ ಕಾಡುವ ಹಸಿವನ್ನು ದೂರ ಮಾಡಿ, ಮಧ್ಯಾಹ್ನದವರೆಗೆ ಶಕ್ತಿ ಕುಸಿಯದೆ, ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು.

ಬ್ಲ್ಯಾಕ್‌ ಬೀನ್‌

ರಾಜ್ಮಾದಂಥ ಕಂದು/ಕಪ್ಪು ಬಣ್ಣದ ಯಾವುದೇ ಕಾಳುಗಳನ್ನು ಈ ಸಾಲಿಗೆ ಸೇರಿಸಬಹುದು. ನಾರು ಮತ್ತು ಪ್ರೊಟೀನ್‌ ಭರಪೂರ ಇರುತ್ತವೆ ಈ ಕಾಳುಗಳಲ್ಲಿ. ಇಂಥ ಒಂದು ಕಪ್‌ ಕಾಳುಗಳಲ್ಲಿ ಸುಮಾರು 17 ಗ್ರಾಂ ನಾರು ಮತ್ತು 14 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಇಷ್ಟೊಂದು ಪ್ರಮಾಣದ ಕಾಳುಗಳನ್ನು ಒಬ್ಬ ವ್ಯಕ್ತಿಗೆ ತಿನ್ನಲಾಗದು ಎನ್ನುವುದು ಹೌದಾದರೂ, ಇದರದ್ದೇ ಪಲ್ಯ, ಭಾಜಿಗಳನ್ನು ಮಾಡುವುದು ಕುಟುಂಬದ ಆರೋಗ್ಯಕ್ಕೆ ಸೂಕ್ತ.

Walnuts Dry Fruits For Hair Fall

ವಾಲ್‌ನಟ್‌

ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ನಾರಿನಂಶ ಹೊಂದಿರುವ ಈ ನಟ್‌ಗಳು ಆರೋಗ್ಯಕ್ಕೆ ಬಹಳಷ್ಟು ರೀತಿಯ ಲಾಭಗಳನ್ನು ಒದಗಿಸಬಲ್ಲವು. ತನ್ನಲ್ಲಿರುವ ಒಮೇಗಾ 3 ಕೊಬ್ಬಿನಾಮ್ಲದಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯದ ಆರೋಗ್ಯ ಸುಧಾರಿಸುವುದರಿಂದ ಹಿಡಿದು, ತೂಕ ಇಳಿಸುವವರೆಗೆ ಹಲವಾರು ರೀತಿಯಲ್ಲಿ ಸ್ವಾಸ್ಥ್ಯ ರಕ್ಷಣೆಗೆ ನೆರವಾಗುತ್ತದೆ ಇದು.

ನಿಂಬೆ ನೀರು

ಬೆಳಗಿನ ಹೊತ್ತು ನಿಂಬೆ ನೀರಿನ ಸೇವನೆಯ ಬಗ್ಗೆ ಬಹಳಷ್ಟು ಪರ-ವಿರೋಧದ ಚರ್ಚೆಗಳು ಚಾಲ್ತಿಯಲ್ಲಿವೆ. ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ತೊಡಗಿ, ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಪೂರೈಸುವವರೆಗೆ ಹಲವು ರೀತಿಯಲ್ಲಿ ಇದು ನಮಗೆ ಉಪಕಾರ ಮಾಡಬಲ್ಲದು. ದೇಹದ ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಇಳಿಕೆಗೂ ಇದು ನೆರವಾಗುತ್ತದೆ. ಆದರೆ ಆಸಿಡಿಟಿಯಂಥ ಸಮಸ್ಯೆ ಇರುವವರಿಗೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆರಸದ ನೀರು ಕುಡಿಯುವುದು ಸಮಸ್ಯೆಗಳನ್ನು ತರಬಲ್ಲದು.

Greens vegetables

ಸೊಪ್ಪುಗಳು

ಪಾಲಕ್‌, ಮೆಂತೆ, ಸಬ್ಬಸಿಗೆ, ನುಗ್ಗೆ, ದಂಟು, ಹೊನಗನ್ನೆ, ಚಕ್ಕೋತ, ಕೀರೆ, ಬಸಳೆ ಮುಂತಾದ ಲೆಕ್ಕವಿಲ್ಲದಷ್ಟು ಸೊಪ್ಪುಗಳು ನಮ್ಮ ನಾಡಿನ ಉದ್ದಗಲಕ್ಕೆ ಲಭ್ಯವಿವೆ. ಸ್ಥಳೀಯವಾಗಿ ಬಳಸುವ ಸೊಪ್ಪುಗಳು ಇನ್ನೂ ಬಹಳಷ್ಟು ಇರಬಹುದು. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಪೂರಕವಾದಂಥವು. ಕಡಿಮೆ ಕ್ಯಾಲರಿಯಲ್ಲಿ ದಂಡಿಯಾಗಿ ವಿಟಮಿನ್‌ ಮತ್ತು ಖನಿಜಗಳನ್ನು ಪೂರೈಸಬಲ್ಲವು. ನಾರು ಮತ್ತು ನೀರನ್ನು ನೀಡಬಲ್ಲವು. ಈ ಮೂಲಕ ತೂಕ ಇಳಿಕೆಗೆ ನೆರವಾಗಬಲ್ಲವು.

ಇದನ್ನೂ ಓದಿ: Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

ಮೊಟ್ಟೆ

ದೇಹದಲ್ಲಿ ಅಧಿಕ ಸ್ನಾಯುಗಳು ಇದ್ದಷ್ಟೂ ಕ್ಯಾಲರಿ ಕರಗುವುದು ಹೆಚ್ಚು. ಸ್ನಾಯುಗಳನ್ನು ಹುರಿಗಟ್ಟಿಸಲು ಮೊಟ್ಟೆಯಂಥ ಆಹಾರಗಳು ನೆರವಾಗುತ್ತವೆ. ಒಮ್ಮೆ ಹೊಟ್ಟೆ ತುಂಬಿದರೆ ದೀರ್ಘ ಕಾಲದವರೆಗೆ ಶಕ್ತಿಯನ್ನು ಒದಗಿಸುತ್ತಾ, ಹಸಿವೆ ಕಾಡದಂತೆ ಕಾಪಾಡುತ್ತವೆ. ಜೊತೆಗೆ ಅಗತ್ಯವಾದ ಕೊಬ್ಬು ಮತ್ತು ಖನಿಜಗಳನ್ನೂ ದೇಹಕ್ಕೆ ಪೂರೈಸುತ್ತವೆ.

Continue Reading

ಫ್ಯಾಷನ್

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ವೈವಿಧ್ಯಮಯ ಬಾರ್ಡರ್‌ ಸೀರೆಗಳು

Varamahalakshmi Festival 2024: ಈ ಸಾಲಿನ ವರಮಹಾಲಕ್ಷ್ಮಿ ಹಬ್ಬಕ್ಕೆ ವೈವಿಧ್ಯಮಯ ಬಾರ್ಡರ್‌ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ರೇಷ್ಮೆ ಮಾತ್ರವಲ್ಲ, ನಾನಾ ಬಗೆಯ ಬಾರ್ಡರ್‌ ಹೊಂದಿದ ಸೀರೆಗಳು ಟ್ರೆಂಡಿಯಾಗಿವೆ. ಇದಕ್ಕೆ ಕಾರಣವೇನು? ಸದ್ಯ ಚಾಲ್ತಿಯಲ್ಲಿರುವ ಬಾರ್ಡರ್ ಸೀರೆಗಳ್ಯಾವುವು? ಇಲ್ಲಿದೆ ವರದಿ.

VISTARANEWS.COM


on

Varamahalakshmi Festival 2024
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ವರಮಹಾಲಕ್ಷ್ಮಿ (Varamahalakshmi Festival 2024) ಹಬ್ಬದ ಸಂಭ್ರಮ ಹೆಚ್ಚಿಸಲು ಈ ಬಾರಿ ನಾನಾ ಬಗೆಯ ಬಾರ್ಡರ್ ಸೀರೆಗಳು ಫೆಸ್ಟಿವ್‌ ಸೀಸನ್‌ಗೆ ಲಗ್ಗೆ ಇಟ್ಟಿವೆ.

Varamahalakshmi Festival 2024

ಹಬ್ಬಕ್ಕೆ ವೈವಿಧ್ಯಮಯ ಬಾರ್ಡರ್ ಸೀರೆಗಳು

ಸಡಗರ ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ನೆಚ್ಚಿನ ಹಬ್ಬ. ಈ ಹಬ್ಬಕ್ಕೆ ದೇವಿ ಲಕ್ಷ್ಮಿಗೆ ಸೀರೆ ಉಡಿಸಿ ಸಿಂಗರಿಸುವುದು ಮಾತ್ರವಲ್ಲ, ತಾವು ಕೂಡ ಸೀರೆಗಳನ್ನು ಉಟ್ಟು ಸಂತಸ ಪಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ, ಮಾನಿನಿಯರ ಬೇಡಿಕೆಗೆ ತಕ್ಕಂತೆ, ಸೀರೆ ಲೋಕವು ಲೆಕ್ಕವಿಲ್ಲದಷ್ಟು ಸೀರೆಗಳನ್ನು ಬಿಡುಗಡೆಗೊಳಿಸಿದೆ. ಅವುಗಳಲ್ಲಿ ರೇಷ್ಮೆ ಸೀರೆಗಳು ಮಾತ್ರವಲ್ಲ, ನಾನಾ ಬಗೆಯ ವೈವಿಧ್ಯಮಯ ಸೀರೆಗಳು ಸೇರಿವೆ. ಇದಕ್ಕೆ ಪೂರಕ ಎಂಬಂತೆ, ಈ ಬಾರಿ ಅತಿ ಹೆಚ್ಚು ಬಾರ್ಡರ್‌ ಸೀರೆಗಳು, ಅತಿ ಹೆಚ್ಚು ಕಾಂಬಿನೇಷನ್‌ ಹಾಗೂ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯ ವೈವಿಧ್ಯಮಯ ಫ್ಯಾಬ್ರಿಕ್‌ನಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಡಿಸೈನರ್ಸ್ ಜಾನಕಿ ಹಾಗೂ ದೀಪ್‌ವೀರ್‌.

Varamahalakshmi Festival 2024

ಟ್ರೆಂಡಿ ಬಾರ್ಡರ್‌ ಸೀರೆಗಳು

ರೇಷ್ಮೆ ಬಾರ್ಡರ್ ಸೀರೆಗಳಲ್ಲಿ ಇದೀಗ ಸಿಂಗಲ್‌, ಡಬ್ಬಲ್‌, ಬಿಗ್‌ ಬಾರ್ಡರ್‌ನವು ಮೊದಲಿನಿಂದಲೂ ಎವರ್‌ಗ್ರೀನ್‌ ಟ್ರೆಂಡ್‌ ಲಿಸ್ಟ್‌ನಲ್ಲಿವೆ. ಇನ್ನು, ಇತರೇ ಫ್ಯಾಬ್ರಿಕ್‌ನ ಸೀರೆಗಳಲ್ಲಿ ಇದೀಗ ಗೋಲ್ಡ್‌ ಜರಿ ಬಾರ್ಡರ್‌, ಕಾಂಟ್ರಾಸ್ಟ್ ಬಾರ್ಡರ್‌, ಸಿಲ್ವರ್‌ ವರ್ಕ್‌ ಬಾರ್ಡರ್‌, ಎಂಬ್ರಾಯ್ಡರಿ ಡಿಸೈನ್‌ ಬಾರ್ಡರ್‌, ಲೇಸ್‌ ಡಿಸೈನ್‌ ಬಾರ್ಡರ್‌, ಫ್ಲೋರಲ್‌ ಬಾರ್ಡರ್‌, ಬುಟ್ಟಾ ವರ್ಕ್‌, ಟೆಂಪಲ್‌ ಡಿಸೈನ್‌ ಬಾರ್ಡರ್‌ನವು ಟ್ರೆಂಡಿಯಾಗಿವೆ. ಇನ್ನು, ಪ್ಯಾಚ್‌ ಬಾರ್ಡರ್‌, ಟ್ಯಾಸೆಲ್ಸ್ , ಮಿರರ್‌ ವರ್ಕ್‌, ಕಟ್‌ ವರ್ಕ್ ಬಾರ್ಡರ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಬಾರ್ಡರ್‌ ಸೀರೆಗಳು ಊಹೆಗೂ ಮೀರಿದ ಡಿಫರೆಂಟ್‌ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಕೆಲವಂತೂ ಯೂನಿಕ್‌ ಡಿಸೈನ್‌ ಇರುವಂತಹ ಡಿಸೈನರ್‌ ಬಾರ್ಡರ್‌ ಸೀರೆಗಳು, ಬೆರಳೆಣಿಕೆ ಲೆಕ್ಕದಲ್ಲಿ ಲಭ್ಯ. ಹಾಗಾಗಿ ಅವುಗಳ ಡಿಸೈನ್‌ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಸೀರೆ ಶಾಪ್‌ವೊಂದರ ಸೇಲ್ಸ್ ಮ್ಯಾನೇಜರ್‌ ವರದರಾಜು.

ಬಾರ್ಡರ್‌ ಸೀರೆ ಟ್ರೆಂಡಿಯಾಗಿರುವುದು ಯಾಕೆ?

ಅಂದಹಾಗೆ, ಹಬ್ಬಗಳ ಸೀಸನ್‌ನಲ್ಲಿ ಅತಿ ಹೆಚ್ಚು ವಿನ್ಯಾಸದ ಬಾರ್ಡರ್‌ ಸೀರೆಗಳು ಟ್ರೆಂಡಿಯಾಗುತ್ತವೆ. ಇದಕ್ಕೆ ಕಾರಣವೂ ಇದೆ. ರೇಷ್ಮೆ ಸೀರೆಯಾಗಲಿ ಅಥವಾ ಯಾವುದೇ ಸೀರೆಯಾಗಲಿ ಬಾರ್ಡರ್‌ ಇದ್ದಾಗ ಅವು ಟ್ರೆಡಿಷನಲ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ ರಾಮಕೃಷ್ಣ.

  • ಸೀರೆಯು ಫ್ಯಾಬ್ರಿಕ್‌ಗೆ ತಕ್ಕಂತೆ ಬಾರ್ಡರ್ ಡಿಸೈನ್‌ ಅನ್ನು ಒಳಗೊಂಡಿರುತ್ತವೆ.
  • ರೇಷ್ಮೆಯ ಬಾರ್ಡರ್ ಸೀರೆ ಕೊಳ್ಳುವಾಗ ಸಿಲ್ಕ್ ಮಾರ್ಕ್‌ ಗಮನಿಸಿ.
  • ಕಂಟೆಂಪರರಿ ಬಾರ್ಡರ್‌ ಡಿಸೈನ್‌ನವು ಟ್ರೆಂಡ್‌ನಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

Continue Reading

ಆರೋಗ್ಯ

Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ ರೇಡಿಯೊ ಕಿರಣಗಳಿಂದ ಕ್ಯಾನ್ಸರ್‌?

Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ಗಳ ಬಗೆಗಿನ ಪ್ರಮುಖ ಆತಂಕವೆಂದರೆ ಅವು ಸೂಸುವ ಕಿರಣಗಳು ನಮ್ಮ ಆರೋಗ್ಯಕ್ಕೆ ಎನಾದರೂ ತೊಂದರೆ ಮಾಡುತ್ತವೆಯೇ ಎಂಬುದು. ಅದರಲ್ಲೂ ವಿಶ್ವದೆಲ್ಲೆಡೆ ಕ್ಯಾನ್ಸರ್‌ ಪ್ರಕರಣಗಳು ರಾಕೆಟ್‌ನಂತೆ ಮೇಲೇರಿರುವ ಹಿನ್ನೆಲೆಯಲ್ಲಿ, ಬ್ಲೂಟೂತ್‌ ಕಿರಣಗಳಿಂದ ಈ ಅಪಾಯ ಹೆಚ್ಚುತ್ತದೆಯೇ? ಇಲ್ಲಿದೆ ಉತ್ತರ.

VISTARANEWS.COM


on

Bluetooth Side Effects
Koo

ಯಾವುದೇ ಸಾರ್ವಜನಿಕ ಸ್ಥಳದಲ್ಲಿ (Bluetooth Side Effects) ಓಡಾಡುತ್ತಿರುವವರನ್ನು ಗಮನಿಸಿದರೂ ಕೈಯಲ್ಲೊಂದು ಮೊಬೈಲ್‌ ಹಿಡಿದು, ಕಿವಿಗೊಂದು ಬ್ಲೂಟೂತ್‌ ಇಯರ್‌ಫೋನ್‌ ಸಿಕ್ಕಿಸಿಕೊಂಡು ಇರುವವರೇ ಕಾಣುತ್ತಾರೆ. ಬಸ್ಸಲ್ಲಿ, ರೈಲಲ್ಲಿ, ಕ್ಯಾಬ್‌ನಲ್ಲಿ, ನಡೆದು ಹೋಗುವವರು- ಯಾರೇ ಆದರೂ ಕಿವಿಗಳನ್ನು ಬ್ಲೂಟೂತ್‌ ಇಯರ್‌ಪ್ಲಗ್‌ಗಳಲ್ಲಿ ಮುಚ್ಚುಕೊಂಡಿರುವವರೇ. ವಯಸ್ಸು, ಲಿಂಗ, ಜಾತಿ-ಮತಗಳ ಭೇದವಿಲ್ಲದ ಜಾತ್ಯತೀತ ಪ್ರಪಂಚವಿದು. ಆದರೆ ಹೀಗೆ ದಿನದ ಎಷ್ಟೋ ಹೊತ್ತು ಕಿವಿಗಳಿಗೆ ಬ್ಲೂಟೂತ್‌ ಸ್ಪೀಕರ್‌ಗಳನ್ನು ಬಳಸುವುದು ಕ್ಷೇಮವೇ? ಈ ಉಪಕರಣಗಳು ಹೊರಹೊಮ್ಮಿಸುವ ವಿಕಿರಣದಿಂದ ಕ್ಯಾನ್ಸರ್‌ ಬರುತ್ತದೆಂಬ ಮಾತುಗಳಿವೆಯಲ್ಲ?

Image Of Headphones Side Effects

ಬ್ಲೂಟೂತ್‌ ಪ್ರವರ

2.4 ಗಿಗಾ ಹರ್ಟ್ಸ್‌ ತರಂಗಾಂತರದ ರೇಡಿಯೊ ಕಿರಣಗಳನ್ನು ಉಪಯೋಗಿಸಿ ಕೆಲಸ ಮಾಡುವ ತಂತ್ರಜ್ಞಾನವಿದು. ಇದನ್ನು ವೈಫೈ ರೂಟರ್‌, ಕಾರಿನ ಸ್ಪೀಕರ್‌, ಪ್ರಿಂಟರ್‌, ಮೈಕ್ರೋವೇವ್‌ಗಳಿಂದ ಹಿಡಿದು ಹಲವು ಉಪಕರಣಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ, ಒಂದು ಫೋನ್‌ನಿಂದ ಇನ್ನೊಂದಕ್ಕೆ, ಹೆಡ್‌ಫೋನ್‌, ಸ್ಪೀಕರ್‌ಗಳ ಜೊತೆಗೆಲ್ಲ ಈ ತಂತ್ರಜ್ಞಾನದಿಂದ ಸುಲಭಕ್ಕೆ ಸಂಪರ್ಕ ಸಾಧಿಸಬಹುದು. ಕಡಿಮೆ ದೂರದಲ್ಲಿ ನಿಸ್ತಂತು ಆಗಿ ಸಂಪರ್ಕ ಸಾಧಿಸುವಂಥ ಸಮರ್ಥ ವಿಧಾನವಿದು. ಆದರೆ ಇದು ಸುರಕ್ಷಿತ ವಿಧಾನವೇ ಎಂಬುದೀಗ ಪ್ರಶ್ನೆ.
ಬ್ಲೂಟೂತ್‌ ಹೆಡ್‌ಫೋನ್‌ಗಳ ಬಗೆಗಿನ ಪ್ರಮುಖ ಆತಂಕವೆಂದರೆ, ಅವು ಸೂಸುವ ಕಿರಣಗಳು ನಮ್ಮ ಆರೋಗ್ಯಕ್ಕೆ ಎನಾದರೂ ತೊಂದರೆ ಮಾಡುತ್ತವೆಯೇ ಎಂಬುದು. ಅದರಲ್ಲೂ ವಿಶ್ವದೆಲ್ಲೆಡೆ ಕ್ಯಾನ್ಸರ್‌ ಪ್ರಕರಣಗಳು ರಾಕೆಟ್‌ನಂತೆ ಮೇಲೇರಿರುವ ಹಿನ್ನೆಲೆಯಲ್ಲಿ, ಬ್ಲೂಟೂತ್‌ ಕಿರಣಗಳಿಂದ ಈ ಅಪಾಯ ಹೆಚ್ಚುತ್ತದೆಯೇ? ಎಂಥಾ ವಿಕಿರಣಗಳನ್ನು ಬ್ಲೂಟೂತ್‌ ಸೂಸುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಅಯಾನೀಕರಿಸದ (non-ionizing radiation) ಕಿರಣಗಳನ್ನು ಮಾತ್ರವೇ ಬ್ಲೂಟೂತ್‌ ಉಪಕರಣಗಳು ಹೊರಸೂಸುತ್ತವೆ. ಇದಕ್ಕಿರುವ ಶಕ್ತಿಯ ಪ್ರಮಾಣ ಅತಿ ಕಡಿಮೆ. ಒಂದು ಹಂತದವರೆಗೆ ಮಾನವರಿಗೆ ಇದರಿಂದ ಯಾವುದೇ ಅಪಾಯವಿಲ್ಲ, ಇವು ಕ್ಯಾನ್ಸರ್‌ಕಾರಕ ಅಲ್ಲ ಎಂದೇ ಪರಿಣತರು ಪ್ರತಿಪಾದಿಸುತ್ತಾರೆ. ಅಯಾನೀಕರಿಸಿದ (ionizing radiation) ವಿಕಿರಣಗಳಾದರೆ, ಅಂದರೆ ಎಕ್ಸ್‌-ರೇ ಯಂಥವಾದರೆ ಕೊಂಚ ಯಾಮಾರಿದರೂ ಅಪಾಯ ಆಗುವ ಸಾಧ್ಯತೆಯಿದೆ.
ಈ ರೀತಿಯ ಅಯಾನೀಕರಿಸದ ಕಿರಣಗಳು ರೇಡಿಯೊ ತರಂಗಾಂತರದ ಸ್ಪೆಕ್ಟ್ರಮ್‌ನಲ್ಲಿ ಬರುತ್ತವೆ. ಇಂಥ ಕಿರಣಗಳನ್ನು ಬಹಳಷ್ಟು ಎಲೆಕ್ಟ್ರಾನಿಕ್‌ ಉಪಕರಣಗಳು ಸೂಸುತ್ತವೆ, ಬ್ಲೂಟೂತ್‌ ಮಾತ್ರವಲ್ಲ. ಹಾಗೆ ನೋಡಿದರೆ, ಮೊಬೈಲ್‌ ದೂರವಾಣಿಗಳಿಗಿಂತ ಕಡಿಮೆ ಶಕ್ತಿಯ ಕಿರಣಗಳನ್ನು ಬ್ಲೂಟೂತ್‌ ಉಪಕರಣಗಳು ಸೂಸುತ್ತವೆ. ಅದೂ ಅಲ್ಲದೆ, ಮಾನವರಿಗೆ ಸುರಕ್ಷಿತ ಎನಿಸುವ ಕಿರಣಗಳ ಮಿತಿಯ ಒಳಗೇ ಬ್ಲೂಟೂತ್‌ ಕಿರಣಗಳೂ ಇವೆ ಎನ್ನುವುದು ತಜ್ಞರ ಮಾತು. ಆದಾಗ್ಯೂ ಈ ಕುರಿತಾದ ಅಧ್ಯಯನಗಳು ಪೂರ್ಣ ಪ್ರಮಾಣದ ಮತ್ತು ದೀರ್ಘಕಾಲೀನ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡಿವೆಯೇ ಎನ್ನುವುದು ಪ್ರಶ್ನಾರ್ಹವಾಗಿದೆ.

ಹಾಗಾದರೆ ಸುರಕ್ಷಿತವೇ?

ಮತ್ತದೇ ಪ್ರಶ್ನೆ- ಹಾಗಾದರೆ ಬ್ಲೂಟೂತ್‌ ಹೆಡ್‌ಫೋನ್‌ಗಳು ಸುರಕ್ಷಿತವೇ? ಹೌದು ಎನ್ನಬಹುದು. ಆದರೆ ಅವುಗಳನ್ನು ಹೊಣೆ ಅರಿತು ಬಳಸುವ ಜವಾಬ್ದಾರಿ ಬಳಕೆದಾರರದ್ದು. ಕಿವಿಗಡಚಿಕ್ಕುವಂಥ ಇಯರ್‌ಪ್ಲಗ್‌ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ನಡೆಯುತ್ತಾ, ಆಚೀಚಿನ ವಾಹನಗಳಿಂದ ಅಪಾಯ ತಂದುಕೊಳ್ಳುವುದು ಮುಂದೆಂದೋ ಬರಬಹುದಾದ ರೋಗಕ್ಕಿಂತ ತೀವ್ರ ಪರಿಣಾಮವನ್ನು ಉಂಟುಮಾಡಬಲ್ಲದು. ಹಾಗಾಗಿ ಕಿವಿಗಳಿಗೆ ಅಪಾಯವಾಗದಂತೆ, ಮಿತವಾಗಿ ಯಾವುದೇ ಹೆಡ್‌ಫೋನನ್ನಾದರೂ ಬಳಸುವ ಸಂಕಲ್ಪ ಮಾಡಿಕೊಳ್ಳಿ. ಆಗ ಬ್ಲೂಟೂತ್‌ ಸೂಸುವ ಕಿರಣಗಳು ಸಹ ಬೆಚ್ಚಿ ಬೀಳಿಸುವದಿಲ್ಲ.

Poor Posture Headphones Side Effects

ವಿಕಿರಣಗಳು ಇನ್ನೆಲ್ಲಿ?

ಹಾಗಾದರೆ ಆಧುನಿಕ ಜೀವನಶೈಲಿಯಲ್ಲಿ ಇನ್ನೂ ಎಲ್ಲೆಲ್ಲಿ ನಾವು ವಿಕಿರಣಗಳಿಗೆ ಒಡ್ಡಿಕೊಳ್ಳುತ್ತಿದೇವೆ ಎಂಬ ಕುತೂಹಲ ಇರಬಹುದು. ಮೊಬೈಲ್‌ ದೂರವಾಣಿ, ಮೈಕ್ರೋವೇವ್‌ ಅವನ್‌ಗಳು, ಇಂಡಕ್ಷನ್‌ ಕುಕ್‌ಟಾಪ್‌ಗಳು- ಇಂಥವು ಕಡಿಮೆ ವಿಕಿರಣಗಳನ್ನು ಹೊಮ್ಮಿಸುವಂಥವು. ಆರೋಗ್ಯ ತಪಾಸಣೆಗಾಗಿ ಎಕ್ಸ್‌ ರೇ ಅಥವಾ ಸಿಟಿ ಸ್ಕ್ಯಾನ್‌ ಸೇರಿದಂತೆ ನಡೆಸಲಾಗುವ ನಾನಾ ರೀತಿಯ ಪರೀಕ್ಷೆಗಳು ಇವೆಲ್ಲದಕ್ಕಿಂತ ಹೆಚ್ಚಿನ ರೇಡಿಯೇಶನ್‌ ಹೊಮ್ಮಿಸುತ್ತವೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಆರೋಗ್ಯ ತಪಾಸಣೆಯಲ್ಲಿ ಬಳಸಲಾಗುವ ಹಲವು ರೀತಿಯ ವಿಕಿರಣಗಳು ಅಯಾನೀಕರಿಸಿದ ವರ್ಗಕ್ಕೆ ಬರುವಂಥವು ಮತ್ತು ದೇಹಕ್ಕೆ ಹಾನಿಯುಂಟುಮಾಡಬಲ್ಲವು. ಅದರಲ್ಲೂ, ದೇಹವನ್ನು ಒಡ್ಡಿಕೊಳ್ಳಬಹುದಾದ ಕನಿಷ್ಟ ಅಥವಾ ಗರಿಷ್ಟ ಮಟ್ಟದ ವಿಕಿರಣ ಎಂಬುದಿಲ್ಲ. ಎಲ್ಲಿ ಸಾಧ್ಯವೋ ಅಲ್ಲಿ ವಿಕಿರಣಗಳಿಂದ ದೂರವಿರುವುದು ಕ್ಷೇಮ. ಈ ನಿಟ್ಟಿನಲ್ಲಿ ಎಂಆರ್‌ಐ ಪರೀಕ್ಷೆ ಎಲ್ಲದಕ್ಕಿಂತ ಸುರಕ್ಷಿತ ಎನಿಸಿದೆ.

ಇದನ್ನೂ ಓದಿ: Chia seeds: ಚಿಯಾ ಬೀಜಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ, ಈ ಎಚ್ಚರಿಕೆ ನಿಮ್ಮಲ್ಲಿರಲಿ!

Continue Reading
Advertisement
PR Sreejesh
ಪ್ರಮುಖ ಸುದ್ದಿ28 mins ago

PR Sreejesh : ಕಂಚು ಗೆದ್ದ ತಕ್ಷಣ ಗೋಲ್​ ಕೀಪಿಂಗ್​ ಗ್ಲವ್ಸ್​ಗೆ ದೀರ್ಘದಂಡ ನಮಸ್ಕಾರ ಹಾಕಿದ ಶ್ರೀಜೇಶ್​​​

Bengaluru
ಬೆಂಗಳೂರು1 hour ago

Bengaluru: ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಕಲ್ಲು ಎತ್ತಿಹಾಕಿದ ದುಷ್ಟ; ದುರುಳನಿಗೆ ಬಿತ್ತು ಧರ್ಮದೇಟು!

Aman Sehrawat
ಪ್ರಮುಖ ಸುದ್ದಿ1 hour ago

Aman Sehrawat : ಸೆಮಿ ಫೈನಲ್​ನಲ್ಲಿ ಸೋತ ಅಮನ್​; ನಾಳೆ ಕಂಚಿನ ಪದಕಕ್ಕಾಗಿ ಹೋರಾಟ

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಕಂಚು ಗೆದ್ದ ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಪ್ರಕಟ

Best Selling Cars
ಆಟೋಮೊಬೈಲ್2 hours ago

Best Selling Cars: ಜುಲೈನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳು ಯಾವವು?

Muhammad Yunus
ದೇಶ2 hours ago

Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Bengaluru News
ಕರ್ನಾಟಕ2 hours ago

Bengaluru News: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೊಹಮ್ಮದ್‌ ಹಸನೈನ್‌ಗೆ ಚಿನ್ನದ ಪದಕ

chess player
ಕ್ರೀಡೆ2 hours ago

Chess Player : ಪ್ರತಿಸ್ಪರ್ಧಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ; ಇಲ್ಲಿದೆ ವಿಡಿಯೊ

Toyota
ಕರ್ನಾಟಕ2 hours ago

Toyota: ಗ್ರಾಮೀಣ ಯುವ ಜನತೆಗೆ ಟೊಯೊಟಾದಿಂದ ಉತ್ತಮ ತರಬೇತಿ, ಶಿಕ್ಷಣ; ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘನೆ

Channapatna News
ಕರ್ನಾಟಕ3 hours ago

Channapatna News: ಚನ್ನಪಟ್ಟಣ ಕ್ಷೇತ್ರದ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ.ಕೆ. ಶಿವಕುಮಾರ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ8 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ9 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌