World Hearing Day 2024: ಇಂದು ವಿಶ್ವ ಶ್ರವಣ ದಿನ: ಈ ಜಗತ್ತಿನ 150 ಕೋಟಿ ಜನರಿಗೆ ಕಿವುಡತನ ಸಮಸ್ಯೆ! - Vistara News

ಲೈಫ್‌ಸ್ಟೈಲ್

World Hearing Day 2024: ಇಂದು ವಿಶ್ವ ಶ್ರವಣ ದಿನ: ಈ ಜಗತ್ತಿನ 150 ಕೋಟಿ ಜನರಿಗೆ ಕಿವುಡತನ ಸಮಸ್ಯೆ!

ವಿಶ್ವ ಶ್ರವಣ ದಿನಾಚರಣೆಯ ಈ ಸಂದರ್ಭದಲ್ಲಿ ರಿಹ್ಯಾಬಿಲಿಟೇಷನ್ ಟ್ರಸ್ಟ್ ಸಹಯೋಗದೊಂದಿಗೆ “ನಾಯಕ್ – ವಾಕ್-ಶ್ರವಣ ಸಂಸ್ಥೆ” ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರವನ್ನು ಆರಂಭಿಸಲಿದೆ.

VISTARANEWS.COM


on

World Hearing Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರವಣ ದೋಷದ ಸಮಸ್ಯೆ ವಿಶ್ವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಆಧ್ಯಯನ ವರದಿಯ ಪ್ರಕಾರ ಜಗತ್ತಿನಲ್ಲಿ 150 ಕೋಟಿ ಮಂದಿ ಕಿವುಡುತನ ಸಹಿತ ನಾನಾ ರೀತಿಯ ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2050ರಲ್ಲಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ 250 ಕೋಟಿಗೆ ತಲುಪಲಿದೆ.
ಮಾರ್ಚ್ 3 ರಂದು ಪ್ರಪಂಚದಾದ್ಯಂತ ವಿಶ್ವ ಶ್ರವಣ ದಿನವನ್ನು (World Hearing Day 2024) ಆಚರಿಸಲಾಗುತ್ತದೆ. ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟಲು ಮತ್ತು ಕಿವಿ ಹಾಗೂ ಶ್ರವಣ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯಸಂಸ್ಥೆ ವಿಶ್ವ ಶ್ರವಣ ದಿನವನ್ನು ಆಚರಿಸುತ್ತದೆ.

2024ರ ವಿಷಯ “ಮನಸ್ಥಿತಿಗಳನ್ನು ಬದಲಾಯಿಸಿ: ಸರ್ವರಿಗೂ ಕಿವಿ ಮತ್ತು ಶ್ರವಣ ಆರೈಕೆಯನ್ನು ನಿಜವಾಗಿಸೋಣʼ.
ಈ ವರ್ಷ ವಿಶ್ವ ಶ್ರವಣ ದಿನ ಸಾರ್ವಜನಿಕರು ಮತ್ತು ವೈದ್ಯಕೀಯ ಸೇವೆ ಒದಗಿಸುವವರಲ್ಲಿ ಅರಿವು ಮೂಡಿಸುವುದು ಹಾಗೂ ಮಾಹಿತಿ ಹಂಚುವ ಮೂಲಕ ಸಮಾಜದ ತಪ್ಪುಗ್ರಹಿಕೆಗಳು ಮತ್ತು ಕಳಂಕಿತ ಮನಸ್ಥಿತಿಗಳಿಂದ ಎದುರಾಗುವ ಸವಾಲುಗಳನ್ನು ನಿವಾರಿಸುವ ಪ್ರಮುಖ ಉದ್ದೇಶವಾಗಿದೆ.

ಜಾಗತಿಕವಾಗಿ ಕಿವಿ ಮತ್ತು ಶ್ರವಣ ಆರೈಕೆಯ ಅಗತ್ಯವಿರುವ ಶೇ.80ರಷ್ಟು ಜನ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿಲ್ಲ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ನ್ಯೂನ್ಯತೆಯ ಬಗ್ಗೆ ಸಾಮಾಜಿಕ ತಪ್ಪುಗ್ರಹಿಕೆಗಳು ಮತ್ತು ಕಳಂಕಿತ ಮನಸ್ಥಿತಿಗಳು ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟುವ ಮತ್ತು ಪರಿಹರಿಸುವ ಪ್ರಯತ್ನಗಳಿಗೆ ಅಡ್ಡಿಯಾಗುವ ಅಂಶಗಳಾಗಿವೆ. ಹೀಗಾಗಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸಾರ್ವಜನಿಕರಲ್ಲಿ ಸರಿಯಾದ ಗ್ರಹಿಕೆಗಳನ್ನು ಮರುರೂಪಿಸಲು ಸತ್ಯಾಧಾರಿತ ಮಾಹಿತಿಗಳನ್ನು ಹಂಚುವುದು ಕಿವಿ ಮತ್ತು ಶ್ರವಣ ಆರೈಕೆಗೆ ಅಗತ್ಯವಿರುವ ಎಲ್ಲರಿಗೂ ಅತ್ಯಗತ್ಯವಾದ ಆರೋಗ್ಯ ಸೇವೆ ಪಡೆಯುವಂತಾಗಲು ಅವಕಾಶ ದೊರಕಿಸಿಕೊಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ | Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

ಶ್ರವಣ ನ್ಯೂನ್ಯತೆಯು ವ್ಯಕ್ತಿಯ ಮಾತು – ಭಾಷೆ, ಕಲಿಕೆ, ಶೈಕ್ಷಣಿಕ, ಮಾನಸಿಕ, ಆರ್ಥಿಕ ಅಂಶಗಳ ಮೇಲೆ ಮತ್ತು ರಾಷ್ಟ್ರೀಯ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶ್ರವಣದೋಷವಿರುವ ಮಕ್ಕಳು ಪಠ್ಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ, ಹೆಚ್ಚಿನ ವಯಸ್ಕರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಾರೆ. ನ್ಯೂನ್ಯತೆಯು ಖಿನ್ನತೆ ಮತ್ತು ಆತಂಕ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಗಮನಿಸಬೇಕಾದ ಸಂಗತಿಗಳು

ಶ್ರವಣ ದೋಷವು ವಿಶ್ವಾದ್ಯಂತ ಹೆಚ್ಚಾಗುತ್ತಿದೆ. ಪ್ರಸ್ತುತ ವಿಶ್ವಾದ್ಯಂತ 150 ಕೋಟಿ ಜನ ಒಂದಲ್ಲ ಒಂದು ಬಗೆಯ ಶ್ರವಣ ದೋಷ ಹೊಂದಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಾಗುವ ಸಂಭವವಿದೆ; ಆಗ ಶ್ರವಣ ನ್ಯೂನ್ಯತೆ ಹೊಂದುವವರ ಸಂಖ್ಯೆ 250 ಕೋಟಿಗೂ ಹೆಚ್ಚಾಗುತ್ತದೆ. 2050ರಲ್ಲಿ ನಾಲ್ಕು ಜನರಲ್ಲಿ ಒಬ್ಬರು ಶ್ರವಣ ದೋಷ ಪಡೆದರೆ, 10 ಜನರಲ್ಲಿ ಒಬ್ಬರಿಗೆ ತೀವ್ರ ಪ್ರಮಾಣದ ಶ್ರವಣ ನ್ಯೂನ್ಯತೆ ಹೊಂದುವ ಅಪಾಯವಿದೆ.

ವಿಶ್ವಾದ್ಯಂತ 3.4 ಕೋಟಿ ಮಕ್ಕಳೂ ಸೇರಿ 43 ಕೋಟಿ ಜನ ತೀವ್ರವಾದ ಶ್ರವಣ ನ್ಯೂನ್ಯತೆಯಿಂದ ಬಳಲುತಿದ್ದಾರೆ. 13 ರಿಂದ 35 ವರ್ಷ ವಯಸ್ಸಿನ 100 ಕೋಟಿ ಯುವಕರು ತಪ್ಪಿಸಬಹುದಾದ ಶ್ರವಣ ದೋಷ ಹೊಂದುವ ಅಪಾಯದಲ್ಲಿದ್ದಾರೆ, ಮಕ್ಕಳೂ ಸೇರಿ 20 ಕೋಟಿ ಜನ ತಪ್ಪಿಸಬಹುದಾದ ಕಿವಿ ನ್ಯೂನ್ಯತೆ ಪಡೆದಿರುತ್ತಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ.25 ಕ್ಕಿಂತ ಹೆಚ್ಚು ಜನರು ಶ್ರವಣ ನ್ಯೂನ್ಯತೆ ಪಡೆದಿದ್ದಾರೆ.

ಭಾರತದಲ್ಲಿ 6.3 ಕೋಟಿ ಜನರು ಶ್ರವಣ ನ್ಯೂನ್ಯತೆ ಹೊಂದಿದ್ದಾರೆ. 2001ರ ಸಮೀಕ್ಷೆ ಪ್ರಕಾರ ಒಂದು ಲಕ್ಷ ಜನಸಂಖ್ಯೆಯಲ್ಲಿ 291 ವ್ಯಕ್ತಿಗಳು (ಹೆಚ್ಚಿನವರು 0 ರಿಂದ 14 ವಯೋಮಾನದ ಮಕ್ಕಳು) ತೀವ್ರವಾದ ನ್ಯೂನ್ಯತೆ ಹೊಂದಿದ್ದಾರೆ. ಕರ್ನಾಟಕದಲ್ಲಿ 6 ವರ್ಷದೊಳಗಿನ 20839 ಮಕ್ಕಳು ಸೇರಿದಂತೆ ಸುಮಾರು 40 ಲಕ್ಷ ಜನ ಶ್ರವಣ ನ್ಯೂನ್ಯತೆ ಪಡೆದಿದ್ದಾರೆ. ಅರ್ಧದಷ್ಟು ಪ್ರಕರಣಗಳನ್ನು ತಡೆಗಟ್ಟಬಹುದಾದರೂ ಸರಿಪಡಿಸದ ಶ್ರವಣ ನ್ಯೂನ್ಯತೆ ಶೈಕ್ಷಣಿಕ – ಸಾಮಾಜಿಕ ಬೆಂಬಲ ಮತ್ತು ಕಳೆದುಕೊಂಡ ಉತ್ಪಾದಕತೆಯ ಪರಿಣಾಮದಿಂದ ಜಾಗತೀಕವಾಗಿ ಸುಮಾರು US$ 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿಯಷ್ಟು ವಾರ್ಷಿಕ ವೆಚ್ಚವನ್ನು ಉಂಟು ಮಾಡುತ್ತದೆ).

2030 ರ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು, ಶ್ರವಣ ಆರೈಕೆ ಸೇರಿ ಎಲ್ಲಾ ಜನರು ಆರ್ಥಿಕ ಸಂಕಷ್ಠವನ್ನು ಎದುರಿಸದೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹೊಂದಿರಬೇಕು. ಹೀಗಾಗಿ ಮುಂದಿನ 10 ವರ್ಷಗಳಲ್ಲಿ (ವಿಶ್ವ ಸಂಸ್ಥೆಯ ಮದ್ಯಸ್ಥಿಕೆಗಳ ಮೂಲಕ) ಶ್ರವಣ ಆರೈಕೆ ಒದಗಿಸಲು ತಲಾ US$ 1.33 ಮಿಲಿಯನ್ ಡಾಲರ್ ಹೆಚ್ಚುವರಿ ವಾರ್ಷಿಕ ಹೂಡಿಕೆಯ ಅಗತ್ಯವಿರುತ್ತದೆ.

ಭಾರತಕ್ಕೆ ಬರೋಬ್ಬರಿ 7000 ಕೋಟಿಗೂ ಹೆಚ್ಚಿನ ವಾರ್ಷಿಕ ಹೂಡಿಕೆಯ ವೆಚ್ಚ ತಗುಲುತ್ತದೆ. ಕಿವಿ ಮತ್ತು ಶ್ರವಣ ಆರೈಕೆಯಲ್ಲಿ ಹೂಡಿಕೆ ವೆಚ್ಚ ಫಲಪ್ರದವಾಗಿರುತ್ತದೆ. ಹೂಡಿಕೆ ಮಾಡಿದ ಪ್ರತಿ ಒಂದು ಡಾಲರ್‌ಗೆ ಸುಮಾರು 16 ಪಟ್ಟು ಅಂತಾರಾಷ್ಟ್ರೀಯ ಡಾಲರ್‌ಗಳ ಆರೋಗ್ಯ ಲಾಭವನ್ನು ನೋಡಬಹುದು. ಶ್ರವಣ ದೋಷವನ್ನು ಹೊಂದಿರುವ ಶೇ. 80 ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿದ್ದಾರೆ.

ನಮ್ಮ ದೇಶದಲ್ಲಿ ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ N.P.P.C.D. (National Programme for Prevention and Control of Deafness) ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು 2007ರಲ್ಲಿ ಪ್ರಾರಂಭಿಸಲಾಗಿದೆ. ದೇಶಾದ್ಯಂತ 797 ಜಿಲ್ಲೆಗಳ ಪೈಕಿ 558 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಬಲಪಡಿಸಿ ಇಡೀ ದೇಶಕ್ಕೆ ವಿಸ್ತರಿಸಬೇಕು.

ನಾಯಕ್ – ವಾಕ್-ಶ್ರವಣ ಸಂಸ್ಥೆಯಿಂದ ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರ

ವಿಶ್ವ ಶ್ರವಣ ದಿನಾಚರಣೆಯ ಈ ಸಂದರ್ಭದಲ್ಲಿ ರಿಹ್ಯಾಬಿಲಿಟೇಷನ್ ಟ್ರಸ್ಟ್ ಸಹಯೋಗದೊಂದಿಗೆ “ನಾಯಕ್ – ವಾಕ್-ಶ್ರವಣ ಸಂಸ್ಥೆ” ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರವನ್ನು ಆರಂಭಿಸಲಿದೆ. ಈ ಸೌಲಭ್ಯದಿಂದ ಶೈಶಾವಸ್ಥೆಯಲ್ಲಿಯೇ ಕಿವುಡುತನ ಹೊಂದಿರುವ ಮಕ್ಕಳ ನ್ಯೂನ್ಯತೆಯನ್ನು ಗುರುತಿಸಿ ಹಸ್ತಕ್ಷೇಪ ಒದಗಿಸುವ ಮೂಲಕ ಸಾಮಾನ್ಯವಾಗಿ ಕಿವಿಕೇಳುವ ಮಕ್ಕಳಂತೆ ಕಿವಿ ಕೇಳದ ಮಕ್ಕಳೂ ಸಹ ಸ್ವಾಭಾವಿಕ ವಾಕ್ ಕೌಶಲ್ಯ ಕಲಿಯಲು ಸಹಾಯವಾಗಲಿದೆ.

ಪೋಷಕರಿಗೆ ತಮ್ಮ ಶಿಶುಗಳಿಗೆ ಕಿವಿ ಕೇಳುತ್ತಿಲ್ಲ ಎಂದು ಅನಿಸಿದಲ್ಲಿ ಅಥವಾ ಮಕ್ಕಳ ವಾಕ್ ಶ್ರವಣ ಬೆಳವಣಿಗೆಯ ಹಂತಗಳು ತಡವಾದಲ್ಲಿ ಈ ಕೇಂದ್ರದಲ್ಲಿ ಕಿವಿ ಪರೀಕ್ಷಿಸಿಕೊಳ್ಳಬಹುದು. ಇದೇ ಮಾರ್ಚ್ 3ರ ಭಾನುವಾರದಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಅವರು ಉಚಿತ ಶ್ರವಣ ತಪಾಸಣೆ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ | Raja Marga Column : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ವಿಜ್ಞಾನಿ ಗಟಗಟ ಕುಡಿದಿದ್ದರು!

ಪ್ರತಿ ಮಂಗಳವಾರ ಈ ಕೇಂದ್ರದಲ್ಲಿ 3 ವರ್ಷದೊಳಗಿನ ಪುಟಾಣಿಗಳಿಗೆ ಉಚಿತವಾಗಿ ಶ್ರವಣ ತಪಾಸಣೆ ನಡೆಸಲಾಗುವುದು ಹೆಚ್ಚಿನ ಮಾಹಿತಿಗೆ 080-42075691 ದೂರವಾಣಿಗೆ ಸಂಪರ್ಕಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

ಚಿತ್ರ-ವಿಚಿತ್ರ ವಿನ್ಯಾಸದ ಹೇರ್‌ ಸ್ಟೈಲ್ಸ್‌, (Hairstyle Craze) ಕಲಾತ್ಮಕವಾಗಿ ಮಾಡಿದ ಹೇರ್‌ ಡಿಸೈನಿಂಗ್‌ ಫೋಟೋಗಳು ಇಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿವೆ.

VISTARANEWS.COM


on

HairStyle Craze
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಕಲಾತ್ಮಕವಾಗಿ ಮಾಡಿದ ಹೇರ್‌ಸ್ಟೈಲ್‌ (Hairstyle Craze) ಫೋಟೋಗಳು ಸೋಷಿಯಲ್‌ ಮೀಡಿಯಾದ ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಆನ್‌ಲೈನ್‌ ಪ್ರೇಮಿಗಳನ್ನು ಆಕರ್ಷಿಸಿವೆ. ಪ್ರಯೋಗಾತ್ಮಕವಾಗಿ ಮಾಡಿದ ನಾನಾ ಶೈಲಿಯ ಈ ಕೂದಲಿನ ವಿನ್ಯಾಸಗಳಿಗೆ ಸೋಷಿಯಲ್‌ ಮೀಡಿಯಾ ವೇದಿಕೆ ಕಲ್ಪಿಸಿದ್ದು, ಹೇರ್‌ ಸ್ಟೈಲಿಂಗ್‌ ಪ್ರಿಯರಲ್ಲಿ ಈ ಕ್ರೇಜ್ ಹುಟ್ಟು ಹಾಕಿದೆ.

Online Craze

ಚಿತ್ರ-ವಿಚಿತ್ರ ಹೇರ್‌ ಸ್ಟೈಲಿಂಗ್‌

ಹೇರ್‌ ಸ್ಟೈಲಿಸ್ಟ್‌ ರಿಚರ್ಡ್ ಹೇಳುವಂತೆ, ತಲೆಗೂದಲನ್ನು ವಿಭಿನ್ನ ಕಾನ್ಸೆಪ್ಟ್‌ಗಳಲ್ಲಿ ಬಾಚುವುದು, ಕೂದಲನ್ನು ಪ್ರಯೋಗಾತ್ಮಕವಾಗಿ ಸಿಂಗರಿಸಿ ಇಲ್ಲವೇ ಅಲಂಕರಿಸುವುದು. ಅವರವರ ಆಯ್ಕೆಗೆ ತಕ್ಕಂತೆ ಥೀಮ್‌ಗೆ ತಕ್ಕಂತೆ ಕೂದಲನ್ನು ಆರ್ಟ್‌ನ ಒಂದು ಭಾಗವಾಗಿಸುವುದು. ಇವೆಲ್ಲಾ ಇಂದು ಸೋಷಿಯಲ್ ಮೀಡಿಯಾದ ಬ್ಯೂಟಿ ಪ್ರಿಯರ ಬ್ಲಾಗ್‌ ಹಾಗೂ ವ್ಲಾಗ್‌ಗಲ್ಲಿ ಕಂಡು ಬರುತ್ತಿವೆ. ಇನ್ನು ಬ್ಯೂಟಿ ಎಕ್ಸ್‌ಪರ್ಟ್ ತನ್ಯಾ ಪ್ರಕಾರ, ವಿಭಿನ್ನ, ವೈವಿದ್ಯಮಯ ಊಹೆಗೂ ಮೀರಿದ ಕೂದಲಿನ ವಿನ್ಯಾಸದಲ್ಲಿ ಕೆಲವು ಆಕರ್ಷಕ ಹೇರ್‌ ಸ್ಟೈಲಿಂಗ್‌ ಲಿಸ್ಟ್‌ಗೆ ಸೇರಿದರೇ ಇನ್ನು ಕೆಲವು ವಿಯರ್ಡ್‌ ಬ್ಯೂಟಿ ಹೇರ್‌ ಸ್ಟೈಲಿಂಗ್‌ ವಿಭಾಗಕ್ಕೆ ಸೇರುತ್ತವಂತೆ.

Online Craze

ಇನ್ನು ಹೇರ್‌ ಡಿಸೈನಿಂಗ್‌ ಅಥವಾ ಆರ್ಟಿಸ್ಟಿಕ್‌ ಹೇರ್‌ಸ್ಟೈಲ್‌ ಮಾಡಲು ಬಯಸುವವರು ಮೊದಲು ಒಂದಿಷ್ಟು ಬ್ಯೂಟಿ ಬ್ಲಾಗ್‌ಗಳಲ್ಲಿ ಈ ಕುರಿತಂತೆ ಸಮೀಕ್ಷೆ ಮಾಡಿ ನಂತರ ತಮ್ಮ ಕೂದಲಿನ ಟೆಕ್ಷ್ಚರ್‌ಗೆ ಹೊಂದುವಂತೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತ ಮೊದಲು ಕೂದಲು ಆರೋಗ್ಯವಾಗಿರಬೇಕು. ವಾಲ್ಯೂಮ್‌ ಹೊಂದಿರಬೇಕು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ ಸ್ವಪ್ನಾ ಭವ್ನಾನಿ.

Online Craze

ಹೇರ್‌ ಸ್ಟೈಲಿಂಗ್‌ ಮಾಡುವ ಮುನ್ನ

ಸೋಷಿಯಲ್‌ ಮೀಡಿಯಾದಲ್ಲಿನ ಹೇರ್‌ ಸ್ಟೈಲಿಂಗ್‌ ಕ್ರೇಜ್‌ಗೆ ನೀವು ಸಾಥ್‌ ನೀಡುವುದಾದಲ್ಲಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಹೇರ್‌ ಎಕ್ಸ್‌ಪರ್ಟ್ ಬಳಿ ನಿಮ್ಮ ಥೀಮ್‌ ಬಗ್ಗೆ ಮೊದಲು ಚರ್ಚಿಸಿ.
  • ಹೇರ್‌ ಡಿಸೈನಿಂಗ್‌ಗೆ ಬೇಕಾಗುವ ಪರಿಕರ ಹಾಗೂ ವಸ್ತುಗಳನ್ನು ತೆಗೆದಿರಿಸಿ.
  • ಮೇಕಪ್‌ ಮುಗಿದ ನಂತರ ಹೇರ್ ಡಿಸೈನಿಂಗ್‌ ಮಾಡುವುದು/ಮಾಡಿಸುವುದು ಒಳಿತು.
  • ಸೋಷಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡುವಾಗ ಹ್ಯಾಶ್‌ಟ್ಯಾಗ್‌ ಬಳಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Continue Reading

ಆರೋಗ್ಯ

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಮೌತ್‌ವಾಷ್‌ಗಳನ್ನು (Mouthwashes) ಬಳಸದವರ ಸಂಖ್ಯೆ ವಿರಳ. ಕೆಲವರು ನಿಯಮಿತವಾಗಿ ಬಳಸಿದರೆ, ಹಲವರು ಅಪರೂಪಕ್ಕಾದರೂ ಬಳಸುತ್ತಾರೆ. ವ್ಯಾಪಕವಾಗಿ ಬಳಕೆಯಲ್ಲಿರುವ ಈ ಮೌತ್‌ವಾಷ್‌ನ ಇತಿ-ಮಿತಿಗಳೇನು? ಇದನ್ನು ಬಳಸಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು? ಇಲ್ಲಿದೆ ವಿವರ.

VISTARANEWS.COM


on

Mouthwashes
Koo

ಜಾಹೀರಾತುಗಳನ್ನು ನೋಡಿ ಮರುಳಾಗುವುದು, ಅದನ್ನೇ ಅನುಸರಿಸುವುದು ಹೊಸದೇನಲ್ಲ. ಉದಾಹರಣೆಗೆ ಹೇಳುವುದಾದರೆ, ಯಾವುದೋ ಟೂತ್‌ಪೇಸ್ಟ್‌ ಉಪಯೋಗಿಸಿದರೆ ಹಲ್ಲುಗಳೆಲ್ಲ ಫಳಫಳಿಸಿ, ಉಸಿರು ತಾಜಾ ಆಗುತ್ತದೆ ಎಂದಿದ್ದರೆ, ಅದು ಸತ್ಯ ಎಂದು ಭಾವಿಸಿಯೇ ನಾವು ಉಪಯೋಗಿಸುತ್ತೇವೆ. ಮೌತ್‌ವಾಷ್‌ ಸಹ ಅದೇ ಸಾಲಿಗೆ ಸೇರುವಂಥದ್ದು. ಯಾವುದೇ ಮನೆಯ ಬಾತ್‌ರೂಂಗಳಲ್ಲಿ ಅದೀಗ ಖಾಯಂ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬಣ್ಣದ ಬಾಟಲಿಗಳ ಮೇಲಿನ ಮೋಹವನ್ನೋ ಅಥವಾ ಜಾಹೀರಾತುಗಳ ಭರವಸೆಯನ್ನೋ ಒಂದೆಡೆ ಇಟ್ಟು, ಮೌತ್‌ವಾಷ್‌ (Mouthwashes) ಬಳಕೆ ಇತಿ-ಮಿತಿಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

Mouthwashes

ದುರ್ಗಂಧ ದೂರ

ಬಾಯಿಯ ದುರ್ಗಂಧ ಎಷ್ಟೋ ಸಂದರ್ಭಗಳಲ್ಲಿ ಮುಜುಗರ ತರುವಂತಹದ್ದು. ಸಾಮಾಜಿಕ, ವೈಯಕ್ತಿಕ ಅಥವಾ ವೃತ್ತಿಯ ಸಂದರ್ಭಗಗಳಲ್ಲಿ ಇದನ್ನು ನಿಭಾಯಿಸುವುದು ಕಷ್ಟವಾಗಬಹುದು. ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು, ಜೀರ್ಣಾಂಗಗಳ ಆರೋಗ್ಯ ನಿಭಾಯಿಸುವುದು, ಆಗಾಗ ನೀರು ಕುಡಿಯುವುದು- ಇಂಥವೆಲ್ಲ ಬಾಯಿಯ ದುರ್ಗಂಧ ನಿವಾರಣೆಯಲ್ಲಿ ಮುಖ್ಯವಾದವು. ಜೊತೆಗೆ ಮೌತ್‌ವಾಷ್‌ ಬಳಕೆ ಸಹ ಈ ಸಮಸ್ಯೆಗೆ ಸಮರ್ಥ ಪರಿಹಾರವನ್ನು ಒದಗಿಸಬಲ್ಲದು.

ಒಸಡಿನ ಸಮಸ್ಯೆ ದೂರ

ಕೆಲವು ಮೌತ್‌ವಾಷ್‌ಗಳು ಬ್ಯಾಕ್ಟೀರಿಯ ವಿರೋಧಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥವುಗಳ ನಿಯಮಿತ ಬಳಕೆಯಿಂದ ಒಸಡಿನ ಸೋಂಕುಗಳನ್ನು ಮಟ್ಟ ಹಾಕಬಹುದು. ಪ್ಲೇಕ್‌ಗಳು ನಿರ್ಮಾಣವಾಗಿ ಒಸಡಿನ ಆರೋಗ್ಯಕ್ಕೆ ಸವಾಲೊಡ್ಡುವ ಸಾಧ್ಯತೆ ಇರುತ್ತದೆ. ಇವುಗಳಿಗೂ ಕೆಲವು ಮೌತ್‌ವಾಷ್‌ಗಳು ಪರಿಹಾರ ಒದಗಿಸಬಲ್ಲವು.

Woman using mouthwash after brushing

ಉಪಯೋಗ ಸುಲಭ

ಮನೆಯಲ್ಲಿದ್ದರೂ, ಪ್ರಯಾಣದಲ್ಲಿದ್ದರೂ ಇವುಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದು ಸುಲಭ. ಫ್ಲೋಸಿಂಗ್‌ನಂಥ ಕ್ರಮಗಳು ಸಮಯ ಬೇಡುತ್ತವೆ. ಮಾತ್ರವಲ್ಲ, ವಿಮಾನದಲ್ಲಿ, ಟ್ರೇನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಮಾಡಲೂ ಸಾಧ್ಯವಿಲ್ಲ. ಆದರೆ ಮೌತ್‌ವಾಷ್‌ ಬಳಕೆಗೆ ಅಂಥ ಯಾವುದೇ ಅಡೆ-ತಡೆಗಳಿಲ್ಲ; ಇದರ ಬಳಕೆ ಅತಿ ಸುಲಭ.

ಹೆಚ್ಚುವರಿ ರಕ್ಷಣೆ

ಫ್ಲೂರೈಡ್‌ ಹೊಂದಿರುವ ಮೌತ್‌ವಾಷ್‌ಗಳು ಬಾಯಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ದಂತಗಳ ಎನಾಮಲ್‌ ರಕ್ಷಣೆ ಮಾಡಿ, ಒಡಸುಗಳನ್ನು ಸುರಕ್ಷಿತವಾಗಿ ಇರಿಸಿ, ಹಲ್ಲುಗಳ ಬೇರನ್ನು ಭದ್ರ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಹಲ್ಲುಗಳು ಹುಳುಕಾಗಿ, ಕುಳಿಯಾಗದಂತೆ ರಕ್ಷಣೆ ನೀಡುತ್ತವೆ. ಒಟ್ಟಾರೆಯಾಗಿ ಬಾಯಿಯ ಆರೋಗ್ಯಕ್ಕೆ ಇದೊಂದು ಒಳ್ಳೆಯ ಆಯ್ಕೆ.

Woman with mouthwash

ಮಿತಿಗಳಿಲ್ಲವೇ?

ಹಾಗೆಂದು ಮೌತ್‌ವಾಷ್‌ ಬಳಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲವೇ? ಅದನ್ನು ಬಳಸಿದಾಗ ಆಗುವುದೆಲ್ಲ ಒಳ್ಳೆಯದು ಎಂದು ತೀರ್ಮಾನಿಸಲು ಸಾಧ್ಯವೇ? ಎಂದು ಕೇಳಿದರೆ, ಹಾಗೇನಿಲ್ಲ. ಅದರಲ್ಲೂ ಸಮಸ್ಯೆಗಳು ಇಲ್ಲದಿಲ್ಲ. ಬಾಯಿಯ ಸರ್ವರೋಗಗಳಿಗೆ ಇದೊಂದೇ ಮದ್ದು ಎಂದು ಖಂಡಿತಕ್ಕೂ ಭಾವಿಸುವಂತಿಲ್ಲ. ಹಾಗಾದರೆ ಮೌತ್‌ವಾಷ್‌ ಬಳಸುವುದರಲ್ಲಿ ಇರುವಂಥ ಸಮಸ್ಯೆಗಳೇನು? ಯಾವುದರ ಬಗ್ಗೆ ಗಮನ ನೀಡಬೇಕು ಇದನ್ನು ಬಳಸುವಾಗ?

ಆಲ್ಕೋಹಾಲ್‌ ಕಿರಿಕಿರಿ

ಬಹಳಷ್ಟು ಮೌತ್‌ವಾಷ್‌ಗಳು ಆಲ್ಕೋಹಾಲ್‌ ಅಂಶವನ್ನು ಹೊಂದಿರುತ್ತವೆ. ಇದು ಬಾಯಿ ಒಣಗಿದಂತೆ ಮಾಡಿ, ಕಿರಿಕಿರಿ ಉಂಟುಮಾಡಬಹುದು. ದೀರ್ಘಕಾಲ ಇಂಥ ಮೌತ್‌ವಾಷ್‌ ಬಳಸುವುದರಿಂದ, ಈ ಸಮಸ್ಯೆಗಳು ಹೆಚ್ಚುತ್ತವೆ. ಹಾಗಾಗಿ ಸೂಕ್ಷ್ಮ ಒಸಡುಗಳು ಇರುವವರಿಗೆ ಮತ್ತು ಗರ್ಭಿಣಿಯರಿಗೆ ಆಲ್ಕೋಹಾಲ್‌ ಇಲ್ಲದಂಥ ಮೌತ್‌ವಾಷ್‌ ಬಳಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

Female with mouthwash

ಸಮಸ್ಯೆ ತಿಳಿಯದು

ಬಾಯಿಯ ದುರ್ಗಂಧದ ಸಮಸ್ಯೆಗಳನ್ನು ಮೌತ್‌ವಾಷ್‌ಗಳು ತಡೆಯುವುದು ಹೌದಾದರೂ ಅದು ತಾತ್ಕಾಲಿಕ. ಬಾಯಿಯ ದುರ್ಗಂಧಕ್ಕೆ ಮೂಲ ಕಾರಣವೇನು ಎಂಬುದನ್ನು ಹುಡುಕಿ, ಅದನ್ನು ಪರಿಹರಿಸಿಕೊಳ್ಳುವುದು ಮುಖ್ಯ. ಹಲ್ಲುಗಳು ಹುಳುಕಾಗಿವೆಯೇ ಅಥವಾ ಜೀರ್ಣಾಂಗಗಳ ಸಮಸ್ಯೆಯಿಂದ ಹೀಗಾಗುತ್ತಿದೆಯೇ- ಅಂತೂ ಕಾರಣವೇನು ಎಂಬುದನ್ನು ಪತ್ತೆ ಮಾಡುವುದು ಅಗತ್ಯ. ಹಾಗಾಗಿ ಸಮಸ್ಯೆಗಳನ್ನು ಮೌತ್‌ವಾಷ್‌ ತಾತ್ಕಾಲಿಕವಾಗಿ ಮಾತ್ರವೇ ನಿವಾರಣೆ ಮಾಡಬಲ್ಲದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಬಿಡುವಂತಿಲ್ಲ

ಮೌತ್‌ವಾಷ್‌ಗಳ ಬಳಕೆಯ ನೆವದಿಂದ ನಿತ್ಯದ ಸ್ವಚ್ಛತೆಯ ಅಭ್ಯಾಸಗಳನ್ನು ಬಿಡುವಂತಿಲ್ಲ. ಅಂದರೆ ನಿಯಮಿತವಾಗಿ ಬ್ರಷ್‌ ಮಾಡುವುದು, ಫ್ಲೋಸ್‌ ಮಾಡುವುದು, ಊಟ-ತಿಂಡಿಯ ನಂತರ ಬಾಯಿಗೆ ನೀರು ಹಾಕಿ ಮುಕ್ಕಳಿಸುವುದು- ಇವೆಲ್ಲ ಅಗತ್ಯ ಅಭ್ಯಾಸಗಳು. ಎಂದೋ ಪ್ರಯಾಣದ ಸಂದರ್ಭದಲ್ಲಿ ಬ್ರಷ್‌ ಮಾಡುವುದಕ್ಕೆ ಅನುಕೂಲವಿಲ್ಲ ಎನ್ನುವಾಗ ಮಾತ್ರವೇ ಮೌತ್‌ವಾಷ್‌ ಬಳಕೆಯನ್ನು ಪರ್ಯಾಯ ಆಗಿಸಿಕೊಳ್ಳಬಹುದೇ ಹೊರತು, ಸದಾ ಅಲ್ಲ.

Continue Reading

ಲೈಫ್‌ಸ್ಟೈಲ್

Clay Pot Cooking: ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ ಇವಿಷ್ಟು ಸಂಗತಿ ನೆನಪಿರಲಿ!

ತಲೆತಲಾಂತರದಿಂದ ಬಳಕೆಯಲ್ಲಿದ್ದ ವಸ್ತುಗಳೂ ಹೊಸ ರೂಪ ತಳೆದು ಮತ್ತೆ ಅಡುಗೆ ಮನೆಯಲ್ಲಿ ಸ್ಥಾನ ಪಡೆಯುತ್ತಿವೆ. ಅಂಥ ಹಳೆಯ ವಸ್ತುಗಳ ಪೈಕಿ ಈಗಲೂ ಬೇಡಿಕೆಯಿರುವ ಅಡುಗೆಮನೆಯ ವಸ್ತುಗಳ ಪೈಕಿ ಮಣ್ಣಿನ ಮಡಕೆಗೆ ಮಹತ್ವದ ಸ್ಥಾನವಿದೆ. ಮಣ್ಣಿನ ಮಡಕೆಗಳು, ಪಾತ್ರೆಗಳಲ್ಲಿ ಅಡುಗೆ ಮಾಡುವ ಪದ್ಧತಿ ಮತ್ತೆ ಜಾಲ್ತಿಯಲ್ಲಿ ಬರುತ್ತಿವೆ. ಟ್ರೆಂಡ್‌ ಆಗುತ್ತಿವೆ. ಬನ್ನಿ, ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಮಂದಿ, ಇಂಡಿಯಲ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರೀಸರ್ಚ್‌ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಮಣ್ಣಿನ ಪಾತ್ರೆಗಳ ಬಗೆಗಿನ ಆರೋಗ್ಯ ಸೂಚಿಗಳನ್ನು (clay pot cooking) ಗಮನಿಸಿ.

VISTARANEWS.COM


on

Clay Pot Cooking
Koo

ಅಡುಗೆ ಮನೆ ಇಂದು ಪ್ರತಿ ಮನೆಯ ಅತ್ಯಂತ ಮುಖ್ಯವಾದ ಕೋಣೆ. ಒಂದು ಕುಟುಂಬಕ್ಕೆ ಅನ್ನ ನೀಡುವ ಕುಟುಂಬ ಕಣ್ಣು ಇದು. ಅಡುಗೆ ಮನೆಯೆಂದರೆ, ಕಪ್ಪಾಗಿ ಮಸಿ ಹಿಡಿದ, ಎಣ್ಣೆಯುಕ್ತ ಕಿಟಕಿ ಬಾಗಿಲುಗಳೆಂಬ, ಬೆಳಕೇ ಇಲ್ಲದ ಕತ್ತಲ ಕೋಣೆಗಳಂತೆ ಕಾಣುವ, ಕೇವಲ ಮನೆಯೊಡತಿ ಮಾತ್ರ ಗಂಟೆಗಟ್ಟಲೆ ಇರುವ ಕೋಣೆಯಾಗಿ ಉಳಿದಿಲ್ಲ. ಸಕಲ ಸೌಲಭ್ಯಗಳಿಂದ, ಹೊಸ ಹೊಸ ತಂತ್ರಜ್ಞಾನಗಳಿಂದ ವಿನ್ಯಾಸಗಳಿಂದ ಮನ ಸೆಳೆಯುತ್ತದೆ. ಸಾಕಷ್ಟು ಗಾಳಿ ಬೆಳಕುಗಳಿರುವ, ಮನೆಯ ಎಲ್ಲರೂ ಸಂತೋಷವಾಗಿ ಜೊತೆಗೇ ಕಾಲ ಕಳೆಯಬಲ್ಲ ಕೋಣೆಯಾಗಿ ಬದಲಾಗುತ್ತಿದೆ. ಹೊಸ ಹೊಸ ಉತ್ಪನ್ನಗಳು ಬರುವ ಜೊತೆಗೇ, ತಲೆತಲಾಂತರದಿಂದ ಬಳಕೆಯಲ್ಲಿದ್ದ ವಸ್ತುಗಳೂ ಹೊಸ ರೂಪ ತಳೆದು ಮತ್ತೆ ಅಡುಗೆ ಮನೆಯಲ್ಲಿ ಸ್ಥಾನ ಪಡೆಯುತ್ತಿವೆ. ಅಂಥ ಹಳೆಯ ವಸ್ತುಗಳ ಪೈಕಿ ಈಗಲೂ ಬೇಡಿಕೆಯಿರುವ ಅಡುಗೆಮನೆಯ ವಸ್ತುಗಳ ಪೈಕಿ ಮಣ್ಣಿನ ಮಡಕೆಗೆ ಮಹತ್ವದ ಸ್ಥಾನವಿದೆ. ಮಣ್ಣಿನ ಮಡಕೆಗಳು, ಪಾತ್ರೆಗಳಲ್ಲಿ ಅಡುಗೆ ಮಾಡುವ ಪದ್ಧತಿ ಮತ್ತೆ ಜಾಲ್ತಿಯಲ್ಲಿ ಬರುತ್ತಿವೆ. ಟ್ರೆಂಡ್‌ ಆಗುತ್ತಿವೆ. ಬನ್ನಿ, ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಮಂದಿ, ಇಂಡಿಯಲ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರೀಸರ್ಚ್‌ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಮಣ್ಣಿನ ಪಾತ್ರೆಗಳ ಬಗೆಗಿನ ಆರೋಗ್ಯ ಸೂಚಿಗಳನ್ನು (clay pot cooking) ಗಮನಿಸಿ.

Clay pot for cooking
  • ಮಣ್ಣಿನ ಪಾತ್ರೆಗಳನ್ನು ಬೇರೆ ಪಾತ್ರೆಗಳ ಜತೆಗೆ ಇಡಬೇಡಿ. ಮಣ್ಣಿನ ಪಾತ್ರೆಗಳಿಗೇ ಪ್ರತ್ಯೇಕ ಜಾಗವನ್ನು ಮಾಡಿ. ಯಾಕೆಂದರೆ ಮಣ್ಣಿನ ಮಡಿಕೆಗಳು ಬೇರೆ ಪಾತ್ರೆಗಳಿಗೆ ತಾಕಿ ಒಡೆಯಲೂಬಹುದು. ಅವುಗಳನ್ನು ಮೇಲಿಂದ ಮೇಲೆಯೂ ಇಡಬೇಡಿ. ಬಹಳ ಜಾಗರೂಕತೆಯಿಂದ ಬಳಸಬೇಕಾದವು ಇವು. ಸಣ್ಣ ಬಿರುಕು ಬಂದರೂ ಪಾತ್ರೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದು.
  • ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಸಂದರ್ಭ ಲೋಹದ ಸೌಟುಗಳನ್ನು ಬಳಸಬೇಡಿ. ಮರದ ಸೌಟನ್ನೇ ಬಳಸಿ. ಸ್ಟೀಲ್‌ ಅಥವಾ ಬೇರೆ ಲೋಹದ ಸೌಟು ಮಣ್ಣಿನ ಮಡಕೆಯನ್ನು ಹಾಳು ಮಾಡುವ ಅಪಾಯವಿದೆ. ಹೀಗಾಗಿ ಮರದ ಸೌಟನ್ನೇ ಬಳಸಿ.
  • ಮಡಕೆಗಳನ್ನು ಸ್ವಚ್ಛಗೊಳಿಸಲು ನೀವು ಬೇರೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನಿತ್ಯವೂ ಬಳಸುವ ರಾಸಾಯನಿಕಯುಕ್ತ ಡಿಟರ್ಜೆಂಟ್‌ ಅನ್ನು ಬಳಸಬೇಡಿ. ಲೋಹದ ಸ್ಕ್ರಬರ್‌ ಅನ್ನೂ ಬಳಸಬೇಡಿ. ತೆಂಗಿನಕಾಯಿಯ ಜುಟ್ಟಿನಿಂದ ಮಾಡಿದ ನೈಸರ್ಗಿಕ ಸ್ಕ್ರಬರ್‌ ಅನ್ನು ಬಳಸಬಹುದು. ಅಥವಾ ಬೇಕಿಂಗ್‌ ಸೋಡಾ ಹಾಗೂ ಉಪ್ಪನ್ನು ಹಾಕಿ ಪಾತ್ರೆಯನ್ನು ಕ್ಲೀನ್‌ ಮಾಡಬಹುದು.
  • ಮಡಕೆಗಳನ್ನು ಸದಾ ತೊಳೆದ ಮೇಳೆ ಆರಲು ಬಿಟ್ಟು ಒಣಗಿದ ಮೇಲೆಯೇ ಒಳಗಿಡಿ. ಒದ್ದೆಯಾಗಿ ಬಿಡಬೇಡಿ. ಅಡುಗೆ ಮಾಡುವಾಗಲೂ ಒಣಗಿದ ಮಡಕೆಗಳನ್ನೇ ಬಳಸಿ. ಇದರಿಂದ ಮಡಕೆ ಹಾಳಾಗುವ ಅಪಾಯವಿದೆ.
  • ಮಣ್ಣಿನ ಮಡಕೆಗಳಲ್ಲಿ ಸಿಟ್ರಿಕ್‌ ಆಸಿಡ್‌ ಇರುವ ವಸ್ತುಗಳನ್ನು, ಆಹಾರಗಳನ್ನು ಇಡಬೇಡಿ. ನಿಂಬೆಹಣ್ಣಿನ ಜ್ಯೂಸ್‌, ನಿಂಬೆಹಣ್ಣು ಹಾಕಿ ಮಾಡಿದ ಆಹಾರಗಳು, ಅಥವಾ ಸಿಟ್ರಸ್‌ ಹಣ್ಣುಗಳ ಜ್ಯೂಸ್‌ ಇತ್ಯಾದಿಗಳಿಗೆ ಮಣ್ಣಿನ ಮಡಕೆ ಬಳಸಬೇಡಿ. ಅಂಥವುಗಳಿಗೆ ಗಾಜು, ಅಥವಾ ಸ್ಟೀಲ್‌ ಪಾತ್ರೆಗಳು ಉತ್ತಮ. ಇವುಗಳಲ್ಲಿರು ಆಮ್ಲೀಯತೆ ಮಣ್ಣಿನ ಜೊತೆಗೆ ವರ್ತಿಸುವ ಅಪಾಯವಿರುವುದರಿಂದ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ.

ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

Continue Reading

ಲೈಫ್‌ಸ್ಟೈಲ್

Toothpaste For Cleaning: ಅಡುಗೆ ಮನೆ ಕೊಳೆಯಾಗಿದೆಯೇ? ಸ್ವಚ್ಛತೆಗೆ ಟೂತ್‌ಪೇಸ್ಟ್‌ ಬಳಸಿ!

ಟೂತ್‌ಪೇಸ್ಟನ್ನು ಹಲ್ಲಿನ ಸ್ವಚ್ಛತೆಗೆ ಮಾತ್ರವೇ ಅಲ್ಲ, ಅಡುಗೆ ಮನೆಯ ಸ್ವಚ್ಛತೆಗೂ ಉಪಯೋಗಿಸಬಹುದು. ಅಲ್ಲಿನ ಕಲೆ, ಕೊಳೆ ಮತ್ತು ವಾಸನೆಗಳನ್ನು ತೊಲಗಿಸಬಹುದು. ಆದರೆ ಹೇಗೆ? ಇಲ್ಲಿವೆ (Toothpaste For Cleaning) ವಿವರ.

VISTARANEWS.COM


on

Toothpaste For Cleaning
Koo

ಟೂತ್‌ಪೇಸ್ಟ್‌ ಯಾವುದಕ್ಕೆಲ್ಲ ಉಪಯೋಗಿಸಬಹುದು ಎಂದು ಕೇಳಿದರೆ, ಯಾರಾದರೂ ನಕ್ಕಾರು. ಹಲ್ಲುಜ್ಜುವುದಕ್ಕೆ ಬಿಟ್ಟರೆ ಇನ್ಯಾವುದಕ್ಕೆ ಎಂದು ತಿರುಗಿ ಪ್ರಶ್ನೆಯನ್ನೂ ಕೇಳಿಯಾರು. ಆದರೆ ಟೂತ್‌ಪೇಸ್ಟ್‌ ಕೇವಲ ವೈಯಕ್ತಿಕ ಶುಚಿತ್ವಕ್ಕಷ್ಟೇ ಬಳಕೆಯಾಗುವ ದಿನಗಳು ಹೋಗಿವೆ. ಅದನ್ನು ಅಡುಗೆಮನೆ ಸ್ವಚ್ಛತೆಗೂ ಬಳಸಬಹುದು. ಇದನ್ನು ಅಡುಗೆಮನೆಯ ಕೊಳೆ ತೊಳೆಯುವುದಕ್ಕೆ ಮತ್ತು ವಾಸನೆ ತೆಗೆಯುವುದಕ್ಕೂ ಬಳಸಬಹುದು. ಸಾಮಾನ್ಯವಾಗಿ ಸ್ಟೌಗಳ ಮೇಲಿನ ಹಟಮಾರಿ ಜಿಡ್ಡು, ಅರಿಶಿನದಂಥ ಕಲೆಗಳನ್ನು ತೆಗೆಯುವುದಕ್ಕೂ ಇದು ಅನುಕೂಲ. ಆದರೆ ಇದಕ್ಕಾಗಿ ಬಿಳಿಯ ಟೂತ್‌ಪೇಸ್ಟ್‌ ಮಾತ್ರವೇ ಬಳಸಬೇಕು. ಬಣ್ಣಬಣ್ಣದ, ಫ್ಲೂರೈಡ್‌ ಸೇರಿದ ಪೇಸ್ಟ್‌ಗಳನ್ನು ಬಳಸುವುದರಿಂದ ವಸ್ತುಗಳಿಗೆ ಹಾನಿಯಾಗಬಹುದು. ಹೊಳಪು ಕಳೆಯುವುದು ಅಥವಾ ಕೋಟಿಂಗ್‌ ಕಿತ್ತು ಬರುವಂಥ ಸಮಸ್ಯೆಗಳು ತಲೆದೋರಬಹುದು. ಜೊತೆಗೆ ಈ ಹಾನಿಯನ್ನು ಸರಿಪಡಿಸಲು ಕಷ್ಟವಾಗಬಹುದು ಅಥವಾ ಆಗದೆಯೇ ಇರಬಹುದು. ಹಾಗಾಗಿ ಬಿಳಿಯ ಟೂತ್‌ಪೇಸ್ಟ್‌ ಮಾತ್ರವೇ ಸೂಕ್ತ. ಹಾಗಾದರೆ ಅಡುಗೆ ಮನೆಯಲ್ಲಿ ಯಾವುದನ್ನೆಲ್ಲ (Toothpaste For Cleaning) ಸ್ವಚ್ಛಗೊಳಿಸಬಹುದು ಟೂತ್‌ಪೇಸ್ಟ್‌ನಿಂದ?

Woman Cleaning Stainless Steel Sink

ಸ್ಟೀಲ್‌ ಸಿಂಕ್‌

ನಮ್ಮ ಪಾತ್ರೆಗಳನ್ನೆಲ್ಲ ಶುಚಿ ಮಾಡುವುದಕ್ಕೆ ನಾವು ಬಳಸುವ ಸಿಂಕ್‌ ಸಹ ಸ್ವಚ್ಛವಾಗಿರಬೇಕಲ್ಲ. ಕೊಳಕು ಜಾಗದಲ್ಲಿ ಬೇರೆ ವಸ್ತುಗಳನ್ನು ಸ್ವಚ್ಛ ಮಾಡಲಾಗದು. ಹಾಗಾಗಿ ಸಿಂಕ್‌ ಫಳಫಳ ಮಾಡುವುದಕ್ಕೆ ಟೂತ್‌ಪೇಸ್ಟ್‌ ಒಳ್ಳೆಯ ಉಪಾಯ. ಒದ್ದೆ ಬಟ್ಟೆ ಅಥವಾ ಒದ್ದೆ ಸ್ಪಾಂಜ್‌ಗೆ ಎರಡಿಂಚು ಉದ್ದದಷ್ಟು ಟೂತ್‌ಪೇಸ್ಟ್‌ ಹಾಕಿಕೊಳ್ಳಿ. ಇದನ್ನು ವೃತ್ತಾಕಾರದಲ್ಲಿ ಸಿಂಕ್‌ನ ಮೇಲೆ ಹಾಗೂ ಮೂಲೆಮೂಲೆಗಳಲ್ಲಿ ಉಜ್ಜಿ. ಕಲೆಗಳಿದ್ದರೆ ಸ್ವಲ್ಪ ಹೆಚ್ಚು ಪೇಸ್ಟ್‌ ಬೇಕಾದೀತು ಆ ಭಾಗಕ್ಕೆ. ಒಂದೆರಡು ನಿಮಿಷಗಳ ನಂತರ ಸಂಪೂರ್ಣವಾಗಿ ತೊಳೆದು ಶುಚಿ ಮಾಡಿ. ಇದರಿಂದ ಸಿಂಕ್‌ ಫಳಫಳಿಸುವಂತಾಗುತ್ತದೆ.

Cleaning Tap

ನಲ್ಲಿ ಇತ್ಯಾದಿಗಳು

ಅಡುಗೆ ಮನೆಯಲ್ಲಿ ಪದೇಪದೆ ನೀರು ಬೇಕಾಗುವುದರಿಂದ ನಲ್ಲಿ ಮತ್ತದರ ಸುತ್ತಲಿನ ಜಾಗಗಳು ಕ್ರಮೇಣ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಗಡಸು ನೀರಾದರಂತೂ ಸುತ್ತೆಲ್ಲ ಬಿಳಿಯ ಕಲೆಗಳಾಗಿರುತ್ತವೆ. ಒದ್ದೆ ಬಟ್ಟೆ ಅಥವಾ ಸ್ಪಾಂಜ್‌ ಮೇಲೆ ಟೂತ್‌ಪೇಸ್ಟ್‌ ಹಾಕಿ ಇಂಥ ಕಲೆಗಳ ಮೇಲೆ ಚೆನ್ನಾಗಿ ಉಜ್ಜುವುದರಿಂದ, ಹೊಳಪು ಮರಳಿಸಬಹುದು. ಒಂದೊಮ್ಮೆ ಸೂಕ್ಷ್ಮ ಮೂಲೆಗಳನ್ನು ತಲುಪಲು ಆಗುತ್ತಿಲ್ಲ ಎಂದಾದರೆ ಉಪಯೋಗಿಸದ ಹಲ್ಲುಜ್ಜುವ ಬ್ರಷ್‌ನೇ ಈ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬಹುದು. ನಲ್ಲಿಯನ್ನೆಲ್ಲ ತೊಳೆದು ಸ್ವಚ್ಛ ಮಾಡಿದ ಮೇಲೆ, ಒಣಗಿದ ಬಟ್ಟೆಯಿಂದ ಒರೆಸಿ ನೀರು ತೆಗೆಯುವುದು ಮುಖ್ಯ. ಇದರಿಂದ ನಲ್ಲಿಯನ್ನು ಚಮಕಾಯಿಸಬಹುದು.

ಗಾಜು, ಸೆರಾಮಿಕ್‌ ಸ್ಟೌ

ಸ್ಟೀಲಿನ ಸ್ಟೌ ಅಥವಾ ಹಾಬ್‌ಗಳಾದರೆ ಉಜ್ಜಿ ಸ್ವಚ್ಛ ಮಾಡುವ ಆಯ್ಕೆ ಇರುತ್ತದೆ. ತೀರಾ ಕಲೆಯಾಗಿದ್ದರೆ ಸ್ಕ್ರಬ್ಬರ್‌ ಉಪಯೋಗಿಸಬಹುದು. ಆದರೆ ಗಾಜು ಅಥವಾ ಸೆರಾಮಿಕ್‌ ಸ್ಟೌಗಳಾದರೆ ಬಲ ಪ್ರಯೋಗ ಮಾಡದೆಯೇ, ನಾಜೂಕಾಗಿಯೇ ಉಪಯೋಗಿಸಬೇಕು. ಇದಕ್ಕೆ ಟೂತ್‌ಪೇಸ್ಟ್‌ ಒಳ್ಳೆಯ ಸ್ವಚ್ಛತೆಯನ್ನು ನೀಡುತ್ತದೆ. ಒಮ್ಮೆ ಲಘುವಾಗಿ ನೊರೆ ಬರುವಷ್ಟು ಉಜ್ಜಿದರೆ, ಸ್ಟೌ ಹೊಸದರಂತೆ ಹೊಳಪು ಪಡೆಯುತ್ತದೆ.

Coffee and tea stain

ಕಾಫಿ, ಚಹಾ ಕಲೆಗಳು

ನಿಮ್ಮಿಷ್ಟದ ಕಾಫಿ ಮಗ್‌ ಅಥವಾ ಚಹಾ ಕಪ್‌ನಲ್ಲಿ ಕೆಂಪು ಕಲೆಗಳಿವೆಯೇ? ಎಷ್ಟು ಉಜ್ಜಿದರೂ ಹೋಗುತ್ತಿಲ್ಲವೇ? ಇದಕ್ಕಾಗಿ ಕಠೋರ ರಾಸಾಯನಿಕಗಳನ್ನು ಉಪಯೋಗಿಸಿದರೆ ಪಿಂಗಾಣಿ ಕಪ್‌ಗಳು ಹೊಳಪು ಅಥವಾ ಬಣ್ಣ ಕಳೆದುಕೊಳ್ಳಬಹುದು. ಪ್ರತ್ಯೇಕ ಸ್ಕ್ರಬ್ಬರ್‌ಗೆ ಸ್ವಲ್ಪ ಪೇಸ್ಟ್‌ ಹಾಕಿಕೊಂಡು ಲಘುವಾಗಿ ಉಜ್ಜಿ. ಕೆಲವು ಕ್ಷಣಗಳ ನಂತರ ತೊಳೆದು ಶುಚಿ ಮಾಡಿದರೆ, ಕಲೆಗಳು ಮಾಯವಾಗಿರುತ್ತವೆ.

ಇದನ್ನೂ ಓದಿ: Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಕಟಿಂಗ್‌ ಬೋರ್ಡ್‌

ಮೊದಲಿನಂತೆ ಈಳಿಗೆ ಮಣೆಯ ಬಳಕೆ ಈಗಿಲ್ಲ. ಈಗ ಹೆಚ್ಚಿನವರು ಉಪಯೋಗಿಸುವುದು ಕಟಿಂಗ್‌ ಬೋರ್ಡ್‌. ಬೀಟ್‌ರೂಟ್‌ ಕತ್ತರಿಸಿದಾಗಿನ ಕಲೆಗಳು, ಟೊಮೇಟೊ ರಸದ ಹುಳಿ, ಈರುಳ್ಳಿಯ ವಾಸನೆ- ಹೀಗೆ ಎಲ್ಲವೂ ಕಟಿಂಗ್‌ ಬೋರ್ಡ್‌ನಲ್ಲಿ ಅಡಕವಾಗಿರುತ್ತದೆ. ಇವನ್ನೆಲ್ಲ ಆಗಾಗ ಸ್ವಚ್ಛ ಮಾಡದಿದ್ದರೆ ಫಂಗಸ್‌ ಬೆಳೆಯಬಹುದು. ಹಾಗಾಗಿ ಕಟಿಂಗ್‌ ಬೋರ್ಡ್‌ ಒದ್ದೆ ಮಾಡಿ, ಸ್ಕ್ರಬ್ಬರ್‌ಗೆ ಟೂತ್‌ಪೇಸ್ಟ್‌ ಹಾಕಿ ಉಜ್ಜಿ. ಚೆನ್ನಾಗಿ ನೊರೆ ಬರಲಿ. ನಂತರ ತೊಳೆದು ಒಣಗಿಸಿ. ಇದರಿಂದ ಕಟಿಂಗ್‌ ಬೋರ್ಡ್‌ ಮೇಲಿನ ಕಲೆ ಮತ್ತು ವಾಸನೆಗಳು ದೂರಾಗುತ್ತವೆ.

Continue Reading
Advertisement
Prajwal Revanna Case
ಕರ್ನಾಟಕ23 mins ago

Prajwal Revanna Case: ವಿಚಾರಣೆಗೆ ಬರುವ ಪ್ರಜ್ವಲ್‌ ನಿರ್ಧಾರ ಸ್ವಾಗತಿಸುವೆ ಎಂದ ಸಚಿವ ಪರಮೇಶ್ವರ್‌

Rahul Gandhi
ದೇಶ26 mins ago

Rahul Gandhi: ರಾಹುಲ್‌ ಗಾಂಧಿ ಜಿಂದಾಬಾದ್‌ ಎನ್ನುತ್ತಲೇ ಕುಸಿದ ವೇದಿಕೆ; ತಬ್ಬಿಬ್ಬಾದ ಕಾಂಗ್ರೆಸ್‌ ನಾಯಕ, ವಿಡಿಯೊ ಇಲ್ಲಿದೆ

Karnataka Weather Forecast
ಮಳೆ47 mins ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

HairStyle Craze
ಫ್ಯಾಷನ್55 mins ago

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Lok Sabha Election 2024
ಕರ್ನಾಟಕ1 hour ago

Lok Sabha Election 2024: ಲೋಕಸಭೆ ಚುನಾವಣೆ ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ

Prajwal Revanna Video
ಕರ್ನಾಟಕ1 hour ago

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Mouthwashes
ಆರೋಗ್ಯ1 hour ago

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

Surya Prakash Maayi director dies
ಕಾಲಿವುಡ್2 hours ago

Surya Prakash: ʻಮಾಯಿʼ ಸಿನಿಮಾ ಖ್ಯಾತಿಯ ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್ ಇನ್ನಿಲ್ಲ

Prajwal Revanna Video
ಕರ್ನಾಟಕ2 hours ago

Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

physical abuse
ಕ್ರೈಂ2 hours ago

Physical Abuse: ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಅಸ್ತ್ರ; ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಯ ಮನೆ ನೆಲಸಮ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ47 mins ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌