Use Salt For Cleaning: ಉಪ್ಪು ಕೇವಲ ಅಡುಗೆಗಷ್ಟೇ ಅಲ್ಲ, ನಿಮ್ಮ ಕಿಚನ್‌ನ ಸ್ವಚ್ಛತೆಗೂ ಬಳಸಿ! - Vistara News

ಲೈಫ್‌ಸ್ಟೈಲ್

Use Salt For Cleaning: ಉಪ್ಪು ಕೇವಲ ಅಡುಗೆಗಷ್ಟೇ ಅಲ್ಲ, ನಿಮ್ಮ ಕಿಚನ್‌ನ ಸ್ವಚ್ಛತೆಗೂ ಬಳಸಿ!

Use Salt For Cleaning: ಉಪ್ಪಿಲ್ಲದ ಊಟ ಉಣ್ಣುವುದು ಬಲು ಕಷ್ಟ. ಇಂತಹ ಉಪ್ಪು ಜೀವನದಲ್ಲಿ ಎಷ್ಟು ಬೇಕೋ ಅಷ್ಟಿದ್ದರೆ ಹೊಟ್ಟೆಗೂ ದೇಹಕ್ಕೂ ಹಿತ. ಇಂತಹ ಉಪ್ಪಿನಿಂತ ಕೇವಲ ಅಡುಗೆಗಷ್ಟೇ ಲಾಭ ಎಂದು ನೀವಂದುಕೊಂಡರೆ ತಪ್ಪಾದೀತು. ಅಡುಗೆಮನೆಯ ವಸ್ತುಗಳಿಂದ ಕೇವಲ ಅಡುಗೆಯಷ್ಟೇ ಅಲ್ಲ. ಹಲವು ಕೆಲಸಗಳನ್ನು ಮಾಡಬಹುದು ಎಂಬುದನ್ನು ನಾವು ಅರಿತುಕೊಂಡರೆ, ಆಪತ್ಕಾಲಕ್ಕೆ ಇವೆಲ್ಲವೂ ಸಹಾಯಕ್ಕೆ ಬರುತ್ತವೆ. ಹಾಗಾಗಿ, ಇಪ್ಪಿನ ಉಪಯೋಗವನ್ನೂ ನಾವು ಅರಿತುಕೊಳ್ಳುವ ಅಗತ್ಯವಿದೆ. ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

Use Salt For Cleaning
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದು ಗಾದೆಯೇ ಹೇಳುವಂತೆ, ಉಪ್ಪಿಲ್ಲದೆ ರುಚಿಯಾಗಿ ತಿನ್ನುವುದು ಸಾಧ್ಯವಿಲ್ಲ. ಉಪ್ಪಿಲ್ಲದ ಊಟ ಉಣ್ಣುವುದು ಬಲು ಕಷ್ಟ. ಇಂತಹ ಉಪ್ಪು ಜೀವನದಲ್ಲಿ ಎಷ್ಟು ಬೇಕೋ ಅಷ್ಟಿದ್ದರೆ ಹೊಟ್ಟೆಗೂ ದೇಹಕ್ಕೂ ಹಿತ. ಇಂತಹ ಉಪ್ಪಿನಿಂತ ಕೇವಲ ಅಡುಗೆಗಷ್ಟೇ ಲಾಭ ಎಂದು ನೀವಂದುಕೊಂಡರೆ ತಪ್ಪಾದೀತು. ಅಡುಗೆಮನೆಯ ವಸ್ತುಗಳಿಂದ ಕೇವಲ ಅಡುಗೆಯಷ್ಟೇ ಅಲ್ಲ. ಹಲವು ಕೆಲಸಗಳನ್ನು ಮಾಡಬಹುದು ಎಂಬುದನ್ನು ನಾವು ಅರಿತುಕೊಂಡರೆ, ಆಪತ್ಕಾಲಕ್ಕೆ ಇವೆಲ್ಲವೂ ಸಹಾಯಕ್ಕೆ ಬರುತ್ತವೆ. ಹಾಗಾಗಿ, ಇಪ್ಪಿನ ಉಪಯೋಗವನ್ನೂ ನಾವು ಅರಿತುಕೊಳ್ಳುವ ಅಗತ್ಯವಿದೆ. ಉಪ್ಪು ಕೇವಲ ಅಡುಗೆಗಷ್ಟೇ ಅಲ್ಲ. ಕ್ಲೀನ್‌ ಮಾಡಲು ಅತ್ಯಂತ ಸುಲಭದ ಹಾಗೆಯೇ ಪರಿಣಾಮಕಾರಿ ಉಪಾಯ. ಇದು ಹಲವೆಡೆ ಯಾವುದೇ ಕ್ಲೀನಿಂಗ್‌ ಏಜೆಂಟ್‌ ಲಿಕ್ವಿಡ್‌ ಮಾಡದ ಮ್ಯಾಜಿಕ್‌ ಅನ್ನು ಮಾಡಿ ಬಿಡುತ್ತದೆ. ಬನ್ನಿ, ಯಾವೆಲ್ಲ ಕ್ಲೀನಿಂಗ್‌ಗಾಗಿ ಉಪ್ಪನ್ನು ಬಳಸುವುದರಿಂದ (Use Salt For Cleaning) ಲಾಭವಿದೆ ನೋಡೋಣ.

Woman Cleaning Kitchen Counter

ಕಿಚನ್‌ ಕ್ಲೀನ್‌ ಆಗಿ ನೀವು ಇಟ್ಟುಕೊಂಡಿರಬಹುದು. ಆದರೆ ನಿಮ್ಮ ಕಟ್ಟಿಂಗ್‌ ಬೋರ್ಡನ್ನು ಯಾವಾಗ ಕ್ಲೀನ್‌ ಮಾಡಿದ್ದೀರಿ? ನೀವು ನಿಮ್ಮ ಪಾತ್ರೆಯನ್ನು ತೊಳೆದಂತೆ, ತರಕಾರಿ ಕತ್ತರಿಸಲು ಬಳಸುವ ಕಟ್ಟಿಂಗ್‌ ಬೋರ್ಡ್‌ ಅನ್ನೂ ಆಗಾಗ ಚೆನ್ನಾಗಿ ಸ್ವಚ್ಛಗೊಳಿಸುತ್ತಲೇ ಇರಬೇಕು. ಇದನ್ನು ಸ್ವಚ್ಛಗೊಳಿಸುವ ವಿಧಾನ ಬಹಳ ಸಿಂಪಲ್‌. ಸ್ವಲ್ಪ ಉಪ್ಪನ್ನು ಕಟ್ಟಿಂಗ್‌ ಬೋರ್ಡ್‌ ಮೇಲೆ ಸಿಂಪಡಿಸಿ. ಅರ್ಧ ನಿಂಬೆಹಣ್ಣನ್ನು ತೆಗೆದುಕೊಂಡು ಇಡೀ ಕಟ್ಟಿಂಗ್‌ ಬೋರ್ಡನ್ನು ಚೆನ್ನಾಗಿ ತಿಕ್ಕಿ ನೀರಿನಿಂದ ಆಮೇಲೆ ಸ್ವಚ್ಛಗೊಳಿಸಿ. ಉಪ್ಪು ಹಾಗೂ ನಿಂಬೆಹಣ್ಣಿ ಇವೆರಡೂ ಪರಸ್ಪರ ವರ್ತಿಸಿ ಕಟ್ಟಿಂಗ್‌ ಬೋರ್ಡ್‌ ಮೇಲಿರುವ ಹಠಮಾರಿ ಕಲೆಗಳನ್ನೂ ಓಡಿಸಿ ನಿಮ್ಮ ಕಟ್ಟಿಂಗ್‌ ಬೋರ್ಡ್‌ ಹೊಸದರಂತೆ ಫಳಫಳನೆ ಹೊಳೆಯುವಂತೆ ಮಾಡುತ್ತದೆ. ಇದರಿಂದ ಕಟ್ಟಿಂಗ್‌ ಬೋರ್ಡ್‌ನ ಮೇಲಿರುವ ಹಳೆ ಕಲೆಗಳು, ಬ್ಯಾಕ್ಟೀರಿಯಾಗಳು ಎಲ್ಲವೂ ನಿಂಬೆ ಹಾಗೂ ಉಪ್ಪಿನ ಶಕ್ತಿಯಿಂದ ಮಾಯವಾಗುತ್ತದೆ.

ಭಾರತೀಯರಾದ ನಮ್ಮ ಅಡುಗೆಮನೆಯಲ್ಲಿ ನಾವು ಬಹಳಷ್ಟು ಬಾರಿ ತುಪ್ಪ ಎಣ್ಣೆಯನ್ನು ಧಾರಾಳವಾಗಿ ಬಳಸುತ್ತೇವೆ. ಇಂತಹ ಸಂದರ್ಭ ನಮ್ಮ ಬಾಣಲೆಗಳು, ತವಾಗಳು ಎಣ್ಣೆಯುಕ್ತವಾಗುವುದುಂಟು. ಈ ಹಠಮಾರಿ ಎಣ್ಣೆಯನ್ನು ತೊಳೆಯಲು ಕೆಲವೊಮ್ಮೆ ಏನೆಲ್ಲ ಸರ್ಕಸ್‌ ಮಾಡಬೇಕಾಗುತ್ತದೆ. ಇಂತಹ ಸಂದರ್ಭ ಉಪ್ಪು ನೆರವಿಗೆ ಬರುತ್ತದೆ. ಬಾಣಲೆ ಅಥವಾ ತವಾ ಬಿಸಿ ಇರುವಾಗಲೇ ಉಪ್ಪನ್ನು ಚೆನ್ನಾಗಿ ಎಲ್ಲ ಭಾಗಗಳಿಗೂ ಚಿಮುಕಿಸಿ. ಹತ್ತು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ಪಾತ್ರೆ ತೊಳೆಯುವ ಸ್ಕ್ರಬ್‌ನಲ್ಲಿ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆಯಿರಿ. ಉಪ್ಪು ಎಲ್ಲ ಗ್ರೀಸ್‌ ಅನ್ನೂ ಹೀರಿಕೊಂಡು ಅದನ್ನು ಬುಡದಿಂದಲೇ ತೊಲಗಿಸುವ ಕಾರ್ಯ ಮಾಡುತ್ತದೆ.

Kitchen sink

ನಿಮ್ಮ ಕಿಚನ್‌ ಸಿಂಕ್‌ ಆಗಾಗ ಕಸಕಟ್ಟಿದಂತಾಗಿ ಬ್ಲಾಕ್‌ ಆಗುತ್ತದೆಯೇ? ಹಾಗಾದರೆ ಅದಕ್ಕೂ ಉಪ್ಪಿನಲ್ಲಿ ಉತ್ತರವಿದೆ. ಅರ್ಧ ಕಪ್‌ ಆಗುವಷ್ಟು ಉಪ್ಪನ್ನು ಸಿಂಕ್‌ಗೆ ಹಾಗೆಯೇ ಸುರಿಯಿರಿ. ನಂತರ ಬಿಸಿ ಬಿಸಿ ಕುದಿಯುವ ನೀರನ್ನು ಸಿಂಕ್‌ಗೆ ಹಾಕಿ. ಸಿಂಕ್‌ನ ಒಳಗೆ ಅಂಟಿಕೊಂಡ ಎಲ್ಲ ಕೊಳೆಯೂ ಕೊಚ್ಚಿಕೊಂಡು ಹೋಗಿ, ಸಿಂಕ್‌ನ ಹರಿದುಹೋಗುವ ದ್ವಾರ ಕ್ಲೀನ್‌ ಆಗುತ್ತದೆ. ನೀರು ಸರಾಗವಾಗಿ ಹರಿದು ಹೋಗುತ್ತದೆ.

ನಿಮ್ಮ ಬಳಿ ಇರುವ ಹಿತ್ತಾಳೆ, ತಾಮ್ರದ ಪಾತ್ರೆಗಳೆಲ್ಲ ಕಪ್ಪುಕಪ್ಪಾಗಿಬಿಡುತ್ತದೆಯೋ? ಹಾಗಿದ್ದರೆ ಅದನ್ನು ತೊಳೆಯಲು ನಿಮ್ಮ ಡಿಶ್‌ ವಾಶರ್‌ ಲಿಕ್ವಿಡ್‌ ಹಾಕಿ ಉಜ್ಜಿ ಉಜ್ಜಿ ಕೈ ನೋಯುತ್ತಿದೆಯೋ? ಹಾಗಿದ್ದರೆ ಅದಕ್ಕೆ ಅದಕ್ಕೂ ಉಪ್ಪಿನಲ್ಲಿ ಉತ್ತರವಿದೆ. ಉಪ್ಪು, ಮೈದಾ ಹಾಗೂ ವಿನೆಗರ್‌ ಇವು ಮೂರನ್ನೂ ಒಂದೇ ಪ್ರಮಾಣದಲ್ಲಿ ಬೆರೆಸಿ ಹಿಟ್ಟಿನಂತೆ ಮಾಡಿ. ಅದನ್ನು ಪಾತ್ರೆಯ ಮೇಲ್ಮೈಗೆ ಹಚ್ಚಿ. ನಂತರ ಚೆನ್ನಾಗಿ ತಿಕ್ಕಿ ತೊಳೆಯಿರಿ. ನಿಮ್ಮ ಕಪ್ಪಾದ ಪಾತ್ರೆಗಳೆಲ್ಲ ಫಳಫಳ ಹೊಳೆಯುತ್ತದೆ. ದೇವರಿಗೆ ಹಚ್ಚುವ ದೀಪವನ್ನು ತೋಳೆಯಲೂ ಈ ಉಪಾಯವನ್ನು ಮಾಡಬಹುದು.

ಇದನ್ನೂ ಓದಿ: Mattress Buying Guide: ಹಾಸಿಗೆಗಳಲ್ಲಿ ಎಷ್ಟೊಂದು ವಿಧ? ಯಾವುದು ಸೂಕ್ತ ಆಯ್ಕೆ ಮಾಡಿಕೊಳ್ಳಿ

ಕಾಫಿ ಹಾಗೂ ಚಹಾದ ಪಾತ್ರೆಗಳ್ಲಲಿಯೂ ಕೆಲವೊಮ್ಮೆ ಹಠಮಾರಿ ಕಂದು ಕಲೆಗಳು ಅಂಟಿಕೊಂಡು ಬಿಟ್ಟಿರುವುದನ್ನು ನೀವು ಗಮನಿಸಿರಬಹುದು. ಇದನ್ನು ತೊಳೆಯಲು ಕೂಡಾ ಉಪ್ಪನ್ನು ಬಳಸಬಹುದು. ಉಪ್ಪನ್ನು ಸ್ಕ್ರಬ್‌ ಮಾಡಿ ತೊಳೆದರೆ ಎಂಥ ಕಲೆಗಳೂ ಮಂಗಮಾಯ. ಒಮ್ಮೆ ಪ್ರಯತ್ನಿಸಿ ನೋಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Monsoon Ethnicwear: ಮಾನ್ಸೂನ್‌ಗೆ ಕಾಲಿಟ್ಟ ಮೆನ್ಸ್ ಜಾಕೆಟ್‌ ಸ್ಟೈಲ್‌ ಎಥ್ನಿಕ್‌ ವೇರ್ಸ್

Monsoon Ethnicwear: ಮಾನ್ಸೂನ್‌ ಸೀಸನ್‌ಗೆ ಹೊಂದುವಂತಹ ನಾನಾ ವಿನ್ಯಾಸದಲ್ಲಿ ಮೆನ್ಸ್ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ. ಅವು ಯಾವುವು? ಆಯ್ಕೆ ಹೇಗೆ? ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

By

Monsoon Ethnicwear
Koo
ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜಾಕೆಟ್‌ ಹಾಗೂ ಕೋಟ್‌ (Jacket and coat style) ಸ್ಟೈಲ್‌ನ ಮೆನ್ಸ್ ಎಥ್ನಿಕ್‌ವೇರ್ಸ್ (Monsoon Ethnicwear) ಈ ಮಾನ್ಸೂನ್‌ ಸೀಸನ್‌ನಲ್ಲಿ (Monsoon season trend) ಟ್ರೆಂಡಿಯಾಗಿವೆ. ಹೌದು, ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ವಿನ್ಯಾಸಗೊಂಡಿರುವ ಈ ಮೆನ್ಸ್ ಎಥ್ನಿಕ್‌ವೇರ್ಸ್ ನೋಡಲು ಮಾತ್ರವಲ್ಲ, ಲೇಯರ್‌ ಲುಕ್‌ ನೀಡುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ಮಳೆಗಾಲಕ್ಕೆ ಲಗ್ಗೆ ಇಟ್ಟ ಲೇಯರ್ಡ್ ಎಥ್ನಿಕ್‌ವೇರ್ಸ್

“ತುಂತುರು ಮಳೆಯಲ್ಲಿ ನಡೆಯುವ ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಹೊಂದುವಂತೆ ದೇಹವನ್ನು ಬೆಚ್ಚಗಿಡುವ ನಾನಾ ಶೈಲಿಯ ಜಾಕೆಟ್‌/ಕೋಟ್‌ ಸ್ಟೈಲ್‌ನ ಎಥ್ನಿಕ್‌ವೇರ್ಸ್ಗಳು, ಪುರುಷರನ್ನು ಅಲಂಕರಿಸುತ್ತಿದ್ದು, ನೋಡಲು ರಾಯಲ್‌ ಲುಕ್‌ ನೀಡುವುದರೊಂದಿಗೆ ಸೀಸನ್‌ಗೆ ತಕ್ಕಂತೆ ವಿನ್ಯಾಸಗೊಂಡಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಜಾಕೆಟ್‌ ಹಾಗೂ ಕೋಟ್‌ ಸ್ಟೈಲ್‌ನಂತಹ ಲೇಯರ್‌ ಲುಕ್‌ ನೀಡುವ ನಾನಾ ಬಗೆಯ ಎಥ್ನಿಕ್‌ವೇರ್‌ಗಳು ಮಿಕ್ಸ್ ಮ್ಯಾಚ್‌ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ ಎನ್ನುತ್ತಾರೆ.

Monsoon Ethnicwear


ಟ್ರೆಂಡಿಯಾಗಿರುವ ಜಾಕೆಟ್‌/ಕೋಟ್‌ ಸ್ಟೈಲ್‌ ಎಥ್ನಿಕ್‌ವೇರ್ಸ್

ಸಾಮಾನ್ಯವಾಗಿ ಹುಡುಗರಿಗೆ ಶೆರ್ವಾನಿಯನ್ನು ಧರಿಸುವುದೇ ಹೆವಿ ಎಂದೆನಿಸುವಾಗ, ಇದಕ್ಕೆ ಕೋಟ್‌ ಅಥವಾ ಜಾಕೆಟ್‌ ಶೈಲಿಯ ಓವರ್‌ಕೋಟ್‌ಗಳು ಬೇಡ ಎಂದೆನಿಸುತ್ತವೆ. ಆದರೆ, ಯುವಕರಿಗೆ ಇಷ್ಟವಾಗುವಂತೆ, ಈ ಸೀಸನ್‌ನಲ್ಲಿ ತೆಳುವಾದ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶೆರ್ವಾನಿಯೊಂದಿಗೆ ಚೈನಾ ಕಾಲರ್‌ ಇರುವಂತಹ ಜಾಕೆಟ್‌ ಶೈಲಿಯ ಕೋಟ್‌ಗಳು ಜೊತೆಯಾಗಿವೆ. ಇದು ನೋಡಲು ರಾಯಲ್‌ ಲುಕ್‌ ಸಹ ನೀಡುತ್ತವೆ.

ಇನ್ನು, ಕುರ್ತಾ ಮೇಲೆ ಕೋಟ್‌ ಶೈಲಿಯ ಓವರ್‌ಕೋಟ್‌ ಧರಿಸುವುದು ಫ್ಯಾಷನ್‌ ಆಗಿದೆ. ಒಳಗಿನ ಸಾದಾ ಕುರ್ತಾ ಸೆಟ್‌ನೊಂದಿಗೆ ಅದರ ಮೇಲೆ ವೇಸ್‌ಕೋಟ್‌ ಶೈಲಿಯ ಲಾಂಗ್‌ ಕೋಟ್‌ನಂತವು ಸಾಥ್‌ ನೀಡುತ್ತಿವೆ.

ನೋಡಲು ಬಂದ್ಗಾಲದಂತೆ ಕಂಡರೂ, ಒಳಗೊಂದು ಹೊರಗೊಂದು ಎಂಬಂತೆ, ಲೇಯರ್‌ ಲುಕ್‌ ನೀಡುವ ಎಂಬ್ರಾಯ್ಡರಿ ಜಾಕೆಟ್‌, ಪ್ಯಾಚ್‌ ವರ್ಕ್‌ ಕೋಟ್‌, ಗ್ರ್ಯಾಂಡ್‌ ಡಬ್ಬಲ್‌ ಲೇಯರ್‌ ಬಂಡಿ ಸೆಟ್‌ ಹೀಗೆ ಲೆಕ್ಕವಿಲ್ಲದಷ್ಟು ಮಿಕ್ಸ್ ಮ್ಯಾಚ್‌ ವಿನ್ಯಾಸದ ಮೆನ್ಸ್ ಎಥ್ನಿಕ್‌ವೇರ್ಸ್ಗಳು ಈ ಸೀಸನ್‌ನಲ್ಲಿ ಕಾಲಿಟ್ಟಿವೆ.


ನಮ್ಮಲ್ಲಿ ಫೆಸ್ಟಿವ್‌ ಸೀಸನ್‌ ಮುಂದಿನ ತಿಂಗಳು ಇದ್ದರೂ ಈಗಾಗಲೇ ಈ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಸೆಲೆಬ್ರೆಟಿಗಳು ಇವನ್ನು ಈಗಾಗಲೇ ಧರಿಸಿ ಟ್ರೆಂಡಿಯಾಗಿರಿಸಿರುವುದು ಚಾಲ್ತಿಗೆ ಬರಲು ಕಾರಣವಾಗಿದೆ ಎನ್ನುತ್ತಾರೆ ಮೆನ್ಸ್ ಡಿಸೈನರ್‌ ಕೃಷ್ಣ ರಾಜ್‌.

ಇದನ್ನೂ ಓದಿ: Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

ಕೋಟ್‌/ಜಾಕೆಟ್‌ ಸ್ಟೈಲ್‌ ಎಥ್ನಿಕ್‌ವೇರ್ಸ್ ಆಯ್ಕೆಗೆ 3 ಟಿಪ್ಸ್

· ಲೈಟ್‌ವೈಟ್‌ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.
· ಲೈಟ್‌ ಹಾಗೂ ಪಾಸ್ಟೆಲ್‌ ಕಲರ್ಸ್ ಟ್ರೆಂಡಿಯಾಗಿದೆ.
· ಸಿಕ್ವಿನ್ಸ್ನಂತಹ ಓವರ್‌ಕೋಟ್‌ಗಳು ಚಾಲ್ತಿಯಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)
Continue Reading

ಆರೋಗ್ಯ

Food Poisoning: ಫುಡ್‌ ಪಾಯ್ಸನ್‌ ಆದಾಗ ಏನು ಮಾಡಬೇಕು?

Food Poisoning: ಆಹಾರ ಕಲುಷಿತಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು. ಬ್ಯಾಕ್ಟೀರಿಯ, ವೈರಸ್‌ ಅಥವಾ ಇತರ ಸೂಕ್ಷ್ಮಾಣುಗಳು ಅದರಲ್ಲಿ ಇರಬಹುದು. ಟಾಕ್ಸಿನ್‌ಗಳು ಸೇರಿರಬಹುದು. ಚಿಕಿತ್ಸೆಯ ನಂತರ ಈ ಸಮಸ್ಯೆ ಪೂರ್ಣ ಗುಣವಾಗುತ್ತದೆ. ಏನು ಫುಡ್‌ ಪಾಯ್ಸನ್‌ ಎಂದರೆ? ಏನಿದರ ಲಕ್ಷಣಗಳು? ಇಲ್ಲಿದೆ ವಿವರ.

VISTARANEWS.COM


on

By

What is Food Poisoning?
Koo

ಬಾಲಿವುಡ್‌ ನಟಿ (Bollywood actress) ಜಾಹ್ನವಿ ಕಪೂರ್‌ (Janhvi Kapoor) ಫುಡ್‌ ಪಾಯ್ಸನ್‌ನಿಂದಾಗಿ (What is Food Poisoning?) ಆಸ್ಪತ್ರೆ ಸೇರಿದ ಸುದ್ದಿಯ ಬೆನ್ನಲ್ಲೇ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯುವ ಉದ್ದೇಶವಿದು. ಹೊಟ್ಟೆ ಹಾಳಾಗಿದೆ ಎಂದಾಕ್ಷಣ, ʻಫುಡ್‌ ಪಾಯ್ಸನ್‌ʼ ಆಗಿದೆ ಎಂಬ ಮಾತು ಕೇಳಿಬರುತ್ತದೆ.

ಕಲುಷಿತ ಆಹಾರದ ಸೇವನೆಯಿಂದ ಬರುವ ಸಮಸ್ಯೆಯಿದು ಎಂಬುದು ಎಲ್ಲರಿಗೂ ಗೊತ್ತು. ಹಾಗಾದರೆ ತಾರೆಯರಿಗೆ ಒಳ್ಳೆಯ ಆಹಾರ ಸೇವಿಸಬೇಕೆಂಬುದು ತಿಳಿದಿರುವುದಿಲ್ಲವೇ? ಎಲ್ಲೆಂದರಲ್ಲಿ ತಿಂದು ಹೀಗೆ ಹೊಟ್ಟೆ ಹಾಳು ಮಾಡಿಕೊಳ್ಳುತ್ತಾರೆಯೇ? ಏನು ಫುಡ್‌ ಪಾಯ್ಸನ್‌ ಎಂದರೆ? ಏನಿದರ ಲಕ್ಷಣಗಳು?

ಆಹಾರ ಕಲುಷಿತಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು. ಬ್ಯಾಕ್ಟೀರಿಯ, ವೈರಸ್‌ ಅಥವಾ ಇತರ ಸೂಕ್ಷ್ಮಾಣುಗಳು ಅದರಲ್ಲಿ ಇರಬಹುದು. ಟಾಕ್ಸಿನ್‌ಗಳು ಸೇರಿರಬಹುದು. ಚಿಕಿತ್ಸೆಯ ನಂತರ ಈ ಸಮಸ್ಯೆ ಪೂರ್ಣ ಗುಣವಾಗುತ್ತದೆ. ಆದರೆ ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಸಮಸ್ಯೆ ಹೆಚ್ಚಿನ ತೊಂದರೆಯನ್ನು ತರಬಹುದು.

ಆಹಾರದಲ್ಲಿ ಸಾಮಾನ್ಯವಾಗಿ ಬೆಳೆಯುವ ಸಾಲ್ಮೊನೆಲ್ಲ, ಇ. ಕೋಲಿ, ಲಿಸ್ಟೆರಿಯ ಮುಂತಾದ ಬ್ಯಾಕ್ಟೀರಿಯಗಳು, ನೊರೊವೈರಸ್‌, ಹೆಪಟೈಟಿಸ್‌ ಎ ಇನ್ನಿತರ ವೈರಸ್‌ಗಳು, ಟೊಕ್ಸೊಪ್ಲಾಸ್ಮದಂಥ ಸೂಕ್ಷ್ಮಾಣುಗಳು ಆರೋಗ್ಯ ಏರುಪೇರಾಗುವುದಕ್ಕೆ ಕಾರಣವಾಗುತ್ತವೆ.

ಲಕ್ಷಣಗಳೇನು?

ವಾಂತಿ, ಹೊಟ್ಟೆ ತೊಳೆಸುವುದು, ಅತಿಸಾರ, ಹೊಟ್ಟೆ ನೋವು, ಜ್ವರ, ತಲೆನೋವು, ಸುಸ್ತು, ನಿಶ್ಶಕ್ತಿ ಇತ್ಯಾದಿ. ಕಲುಷಿತ ಆಹಾರ ಸೇವಿಸಿದ ಒಂದೆರಡು ತಾಸುಗಳಲ್ಲೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಒಂದೆರಡು ದಿನವೂ ಆಗಬಹುದು. ಕೆಲವರು ಅಲ್ಪ ಕಾಲದ ಅನಾರೋಗ್ಯದ ನಂತರ ಚೇತರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಹಲವಾರು ದಿನಗಳೂ ಬೇಕಾಗಬಹುದು. ಒಂದೊಮ್ಮೆ ವಾಂತಿ-ಅತಿಸಾರದಂಥ ಲಕ್ಷಣಗಳು ಹೆಚ್ಚಾದರೆ ಆಸ್ಪತ್ರೆ ದರ್ಶನ ಮಾಡಲೇಬೇಕಾಗುತ್ತದೆ.

ಏನು ಮಾಡಬಹುದು?

ಲಕ್ಷಣಗಳು ಸೌಮ್ಯವಾಗಿದ್ದರೆ, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಸಾಧ್ಯವಿದೆ. ವಾಂತಿ- ಅತಿಸಾರದಿಂದ ದೇಹ ಬಳಲಿದ್ದರೆ ಸಾಕಷ್ಟ ದ್ರವಾಹಾರವನ್ನು ಸೇವಿಸಿ. ಹಾಗಿಲ್ಲದಿದ್ದರೆ ನಿರ್ಜಲೀಕರಣದ ಅಪಾಯ ಎದುರಾಗಬಹುದು. ದೇಹಕ್ಕೆ ಏನೇ ಸಮಸ್ಯೆಯಾದರೂ, ಅದು ಗುಣವಾಗುವುದಕ್ಕೆ ವಿಶಾಂತಿ ಬೇಕು. ಚೆನ್ನಾಗಿ ನಿದ್ರೆ ಮಾಡಿ. ಇದಕ್ಕೆ ಏನು ಮದ್ದು ಮಾಡಬಹುದು ಎಂಬುದನ್ನು ಗೂಗಲ್‌ ಮಾಡುತ್ತಾ ಸಮಯ ಹಾಳು ಮಾಡಬೇಡಿ.

What is Food Poisoning?


ಆಹಾರ

ಬಾಳೆಹಣ್ಣು, ಅನ್ನ, ಸೇಬುಹಣ್ಣು ಮುಂತಾದ ಮೆತ್ತನೆಯ ಆಹಾರಗಳು ಈ ಹೊತ್ತಿಗೆ ಸೂಕ್ತ. ದಾಳಿಂಬೆ ಹಣ್ಣು ಅಥವಾ ರಸ ಹೊಟ್ಟೆಯ ತೊಂದರೆಗೆ ಆರಾಮ ನೀಡುತ್ತದೆ. ಹೊಟ್ಟೆಯ ಲಕ್ಷಣಗಳಿಂದ ಆಸಿಡಿಟಿ ಆಗಿದ್ದರೆ, ಎಳನೀರು ಮತ್ತು ಬೂದು ಕುಂಬಳಕಾಯಿಯ ರಸಗಳು ಆರಾಮ ನೀಡಬಲ್ಲವು.

ಶುಂಠಿಯ ಕಷಾಯ ಅಥವಾ ಚಹಾ ಸಹ ಉಪಶಮನ ನೀಡುತ್ತದೆ. ಮೊಸರು, ಮಜ್ಜಿಗೆ ಮುಂತಾದ ಪ್ರೊಬಯಾಟಿಕ್‌ ಆಹಾರಗಳು, ಪ್ರೊಬಯಾಟಿಕ್‌ ಎನ್‌ಜೈಮ್‌ಗಳು ಈ ಸಮಸ್ಯೆ ಬೇಗ ಗುಣವಾಗುವಲ್ಲಿ ಸಹಾಯ ಮಾಡುತ್ತವೆ.

ಇದನ್ನೂ ಓದಿ: Health Tips Kannada: ಚಹಾದಿಂದ ಅಸಿಡಿಟಿಯೇ? ಹಾಗಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ!


ತಡೆಯಲಾಗದೇ?

ಯಾಕಾಗದು? ಖಂಡಿತ! ಪ್ರತಿ ಬಾರಿ ಊಟ-ತಿಂಡಿಯ ಸಮಯಗಳಲ್ಲಿ ಕೈಗಳಲ್ಲಿ ಸರಿಯಾಗಿ ತೊಳೆದುಕೊಳ್ಳಿ. ಉಪಯೋಗಿಸುವ ತಟ್ಟೆ, ಚಮಚಗಳು ಸಹ ಸ್ವಚ್ಛವಾಗಿರುವುದು ಮುಖ್ಯ. ಮನೆಯಲ್ಲಿ ಉಳಿಕೆ ಆಹಾರವನ್ನು ಸಮರ್ಪಕವಾಗಿ ದಾಸ್ತಾನು ಮಾಡಿ. ಫ್ರಿಜ್‌ನಲ್ಲಿರುವ ಆಹಾರವನ್ನು ತಿನ್ನುವಾಗ, ಅವುಗಳನ್ನು ಉಗಿ ಹಾಯುವಂತೆ ಬಿಸಿ ಮಾಡಿ.

ಮೊಟ್ಟೆ, ಮೀನು ಅಥವಾ ಇನ್ನಾವುದೇ ಮಾಂಸವನ್ನು ಹಸಿಯಾಗಿ ಎಂದಿಗೂ ತಿನ್ನಬೇಡಿ. ಕುಡಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಿ. ಅನುಮಾನವಿದ್ದರೆ ಕುದಿಸಿಯೇ ಕುಡಿಯಿರಿ. ಹೊರಗೆ ಎಲ್ಲಿಯೇ ಆಹಾರ ಸೇವಿಸಿದರೂ, ಬಿಸಿಯಾಗಿದ್ದನ್ನೇ ತಿನ್ನಿ.

Continue Reading

ಬೆಂಗಳೂರು

Dengue Fever : ಡೆಂಗ್ಯೂ ಭೀತಿ- ಸೊಳ್ಳೆಗಳ ನಾಶಕ್ಕೆ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Dengue Fever : ಡೆಂಗ್ಯೂ ವಿರುದ್ಧದ ಜಾಗೃತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವತಃ ಫೀಲ್ಡಿಗಿಳಿದರು. ಇದೇ ವೇಳೆ ಬೆಂಗಳೂರಿನ ರಾಮಸ್ವಾಮಿಪಾಳ್ಯ ಕೊಳೆಗೆರೆ ಪ್ರದೇಶದಲ್ಲಿ ಫೀವರ್ ಕ್ಲಿನಿಕ್‌ಗೆ ಚಾಲನೆ ನೀಡಿ, ವಸಂತನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೀಘ್ರ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದರು.

VISTARANEWS.COM


on

By

Dengue Fever
Koo

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಾಗುತ್ತಿದೆ. ಹೀಗಾಗಿ ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರೇ ಫೀಲ್ಡಿಗಿಳಿದು ಜಾಗೃತಿ ಮೂಡಿಸಲು ಮುಂದಾದರು. ಡೆಂಗ್ಯೂ ನಿಯಂತ್ರಣಕ್ಕೆ ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ನಡೆಸುತ್ತಿರುವ ಈಡಿಸ್ ಲಾರ್ವಾ ನಾಶಪಡಿಸುವ ಅಭಿಯಾನದಲ್ಲಿ ಸಚಿವರು ಭಾಗಿಯಾದರು.

ಬೆಂಗಳೂರಿನ ವಸಂತನಗರ, ರಾಮಸ್ವಾಮಿಪಾಳ್ಯದಲ್ಲಿ ಮನೆ ಮನೆಗೆ ತೆರಳಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿ ತಾಣಗಳ ಪರಿಶೀಲನೆ ನಡೆಸಿದರು. ಲಾರ್ವಾ ನಾಶಪಡಿಸುವ ಔಷಧಿ ಸಿಂಪಡಿಸಿದ ಸಚಿವರು, ಫಾಗಿಂಗ್ ಕೂಡ ಮಾಡುವ ಮೂಲಕ ತಳ ಮಟ್ಟದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿಗಳ ಕಾರ್ಯಕ್ಕೆ ಉತ್ಸಾಹ ತುಂಬಿದರು. ಅಲ್ಲದೇ ನಿವಾಸಿಗಳಲ್ಲಿ ಡೆಂಗ್ಯೂ ವಿಚಾರವಾಗಿ ಎಚ್ಚರ ವಹಿಸಿ, ನೀರು ಶೇಖರಣೆಯಾಗದಂತೆ ಮುಂಜಾಗೃತೆ ಕ್ರಮಗಳನ್ನು ಅನುಸರಿಸಿ ಎಂದು ಕರೆ ನೀಡಿದರು.

ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಡೀಟ್(Odomos) ಕ್ರೀಮ್ ವಿತರಿಸಿದ ಆರೋಗ್ಯ ಸಚಿವರು, ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸಿದರು. ಅಲ್ಲದೆ ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ನಿಮ್ಮ ಮನೆಯಲ್ಲಿ ಪೋಷಕರು ಹಾಗೂ ಸುತ್ತಮುತ್ತಲಿನ ಮನೆಯವರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದನ್ನೂ ಓದಿ: Road Accident : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಗಂಭೀರ; ಎಎಸ್‌ಐಗೆ ಬಡಿದ ಅಪರಿಚಿತ ವಾಹನ

100 ಮೀ ಅಂತರದಲ್ಲಿ ಡೆಂಗ್ಯೂ ಹೆಚ್ಚಾದರೆ ಹಾಟ್‌ ಸ್ಪಾಟ್‌ ಎಂದು ಗುರುತು

100 ಮೀಟರ್ ವ್ಯಾಪ್ತಿಯಲ್ಲಿ 2 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಬೆಂಗಳೂರಿನ ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಫೀವರ್ ಕ್ಲಿನಿಕ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವ ಕೊಳಗೇರಿ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.

Dengue Fever

ನಗರದಲ್ಲಿ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ 2 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಬೇಕು. ಜೊತೆಗೆ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಫೀವರ್ ಪರೀಕ್ಷೆ, ಲಾರ್ವಾ ಸರ್ವೆ, ಫಾಗಿಂಗ್, ಸ್ಪ್ರೇ ಹಾಗೂ ಡೆಂಘೀ ಹರಡದಂತೆ ಮುಂಜಾಗ್ರತಾ ವಹಿಸಲು ಬಿತ್ತಿ ಪತ್ರಗಳನ್ನು ವಿತರಿಸಿ ಅರಿವು ಮೂಡಿಸಬೇಕು. ಇದಲ್ಲದೆ ಸೊಳ್ಳೆಗಳು ಕಚ್ಚದಂತೆ ಡೀಟ್(Odomos) ಕ್ರೀಮ್ ವಿತರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸುವಂತೆ ಅಧಿಕಾರಿಗಳಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ನಗರದಲ್ಲಿ ಡೆಂಗ್ಯೂ ತಡೆಗಟ್ಟಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 3161 ತಂಡಗಳಿಂದ 25 ಲಕ್ಷ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿ ಪ್ರತಿನಿತ್ಯ ಸರಾಸರಿ 130 ರಿಂದ 150 ಪ್ರಕರಣಗಳು ಕಂಡು ಬರುತ್ತಿವೆ.

ಶೀಘ್ರ ಉಚಿತ ಡಯಾಲಿಸಿಸ್ ಕೇಂದ್ರ ಆರಂಭ

ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಕೇಂದ್ರ ಶೀಘ್ರದಲ್ಲಿ ಪ್ರಾರಂಭಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿಸುವುದರಿಂದ ಇಲ್ಲಿನ ಸುತ್ತಮುತ್ತಲಿನ ಬಡವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಅದಕ್ಕಾಗಿ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಿಕೊಂಡು ತ್ವರಿತಗತಿಯಲ್ಲಿ ಕೇಂದ್ರವನ್ನು ಆರಭಿಸಬೇಕೆಂದು ತಿಳಿಸಿದರು ವಸಂತನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇದೇ ವೇಳೆ ಭೇಟಿ ನೀಡಿ ಕೇಂದ್ರದ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ವೇಳೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆಯ ಆಯುಕ್ತರಾದ ಡಿ. ರಂದೀಪ್, ಎನ್.ಎಚ್.ಎಮ್ ಎಂ.ಡಿ ಡಾ. ನವೀನ್ ಭಟ್ ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹಾಸನ

Dengue Fever: ಹಾಸನದಲ್ಲಿ ಡೆಂಗ್ಯೂಗೆ ಎಂಬಿಬಿಎಸ್‌ ವಿದ್ಯಾರ್ಥಿ ಬಲಿ; ಧಾರವಾಡದಲ್ಲಿ 5 ತಿಂಗಳ ಮಗು ಸಾವು

Dengue Fever: ಹಾಸನದಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿ ಹಾಗೂ ಧಾರವಾಡದಲ್ಲಿ 5 ತಿಂಗಳ ಮಗುವೊಂದು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Dengue Fever
Koo

ಹಾಸನ: ಹಾಸನದಲ್ಲಿ‌ ಡೆಂಗ್ಯೂಗೆ (Dengue Fever) ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಎಂಬಿಬಿಎಸ್ ವಿದ್ಯಾರ್ಥಿ ಕುಶಾಲ್ (22) ಡೆಂಗ್ಯು ಜ್ವರದಿಂದ ಮೃತಪಟ್ಟವರು. ಹಾಸನದ ಹೊಳೆನರಸೀಪುರ ‌ತಾಲೂಕಿನ ಹಳ್ಳೀ ಮೈಸೂರು ಸಮೀಪದ ಗೋಹಳ್ಳಿ ಗ್ರಾಮದ ಕುಶಾಲ್‌, ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಗುರುವಾರ ರಾತ್ರಿ ಕುಶಾಲ್‌ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಾಸನದ ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ. ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ತಾಯಿ ರೇಖಾ ಅವರು ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಯಿ ರೇಖಾ ಮತ್ತು ತಂದೆ ಮಂಜುನಾಥ್ ಮಗನ ಎಂಬಿಬಿಎಸ್ ಕನಸು ಹೊತ್ತಿದ್ದರು. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದರೆ, ಮಂಜುನಾಥ್‌ ಅವರು ಶಿಕ್ಷಕ ವೃತ್ತಿಯಲ್ಲಿದ್ದರು. ಆದರೆ ಇದೀಗ ಡೆಂಗ್ಯೂಗೆ ಮಗ ಕುಶಾಲ್‌ ಬಲಿಯಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಛಿದ್ರಗೊಂಡ ದಂಪತಿ; ಎಎಸ್‌ಐಗೆ ಬಡಿದ ಅಪರಿಚಿತ ವಾಹನ

ಧಾರವಾಡದಲ್ಲೂ ಡೆಂಗ್ಯೂಗೆ ಮಗು ಬಲಿ

ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿಯಾಗಿದೆ. ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 5 ತಿಂಗಳ ಆರಾಧ್ಯ ಲಮಾಣಿ ಡೆಂಗ್ಯೂಯಿಂದ ಮೃತಪಟ್ಟಿದೆ. ಧಾರವಾಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಗೋಪಾಲ್ ಲಮಾಣಿ ಮಗು ಆರಾಧ್ಯ ಮೃತ ದುರ್ದೈವಿ. ಕಳೆದ ಜುಲೈ 15ರಂದು ಜ್ವರದಿಂದ ಬಳಲುತಿದ್ದ ಆರಾಧ್ಯಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬರದೇ ಮಗು ಮೃತಪಟ್ಟಿದೆ.

ಡೆಂಗ್ಯೂ ಭೀತಿ; ಶಾಲೆ ಸುತ್ತಲ ಕೊಳಚೆ ನೀರು

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹೊತ್ತಿನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆದರೆ ಕೊಪ್ಪಳದ ಬೆಟಗೇರಿ ಗ್ರಾಮದಲ್ಲಿ ಶಾಲೆಯ ಸುತ್ತಲೂ ಕೊಳಚೆ ನೀರು ತುಂಬಿದ್ದು, ಮಕ್ಕಳಿಗೆ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ಶಾಲೆ ಸುತ್ತಲು ಸ್ವಚ್ಛತೆ ಕಾಪಾಡಲು ಆಗ್ರಹಿಸಿ, ಮಕ್ಕಳ ಪಾಲಕರು ಬೆಟೆಗೇರಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಬೆಟಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಲು ಕೊಳಚೆ ನೀರು ಇದೆ. ಈಗಾಗಲೇ ಕೊಳಚೆಯಿಂದಾಗಿ ನಾಲ್ಕು ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದೆ ಎಂದು ಕಿಡಿಕಾರಿದರು.

ಸಾವಿನ ಸಂಖ್ಯೆ 8ಕ್ಕೆ ಏರಿಕೆ

ರಾಜ್ಯಾದ್ಯಂತ ಡೆಂಗ್ಯೂಗೆ 8 ಮಂದಿ ಮೃತಪಟ್ಟಿದ್ದಾರೆ. ಜನವರಿಯಿಂದ ಈವರೆಗೆ (ಜು.18) 85,270 ಮಂದಿ ರಕ್ತ ಮಾದರಿಯನ್ನು ಪರೀಕ್ಷಿಸಿದ್ದು, ಇದರಲ್ಲಿ 11,451 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಇದರಲ್ಲಿ 620 ಸಕ್ರಿಯ ಪ್ರಕರಣಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Shami-Sania Mirza
ಕ್ರೀಡೆ9 seconds ago

Shami-Sania Mirza: ಸಾನಿಯಾ ಮಿರ್ಜಾ ಜತೆ ಮದುವೆ; ಮೊದಲ ಬಾರಿಗೆ ಸ್ಪಷ್ಟನೆ ಕೊಟ್ಟ ಶಮಿ

Viral Video
ವೈರಲ್ ನ್ಯೂಸ್14 mins ago

Viral Video: ನೋಡ ನೋಡ್ತಿದ್ದಂತೆ ಕುಸಿದು ಬಿತ್ತು ಕ್ಲಾಸ್‌ರೂಂ ಗೋಡೆ; ಒಳಗಿದ್ದ ಮಕ್ಕಳ ಕತೆ ಏನಾಯ್ತು ಗೊತ್ತಾ? ವಿಡಿಯೋ ಇದೆ

karnataka Rain
ಮಳೆ36 mins ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

First Drug Testing Olympics
ಕ್ರೀಡೆ41 mins ago

First Drug Testing Olympics: ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು ಯಾವಾಗ?

Actor Darshan Renuka Swamy assault scene recorded on iPhone
ಸಿನಿಮಾ49 mins ago

Actor Darshan: ರೇಣುಕಾ ಸ್ವಾಮಿ ಹಲ್ಲೆ ದೃಶ್ಯ ಐಫೋನ್‌ನಲ್ಲಿ ರೆಕಾರ್ಡ್‌; ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೃತ್ಯ!

Doda Encounter
ದೇಶ1 hour ago

Doda Encounter: ಜಮ್ಮು ದಾಳಿ ಹಿಂದೆ ಇದ್ಯಾ ಪಾಕ್‌ ಮಾಜಿ ಸೈನಿಕರ ಕೈವಾಡ? ಉಗ್ರರಿಗಿದ್ಯಾ ಸೇನಾ ತರಬೇತಿ?

Rajakaluve Encroachment
ಬೆಂಗಳೂರು1 hour ago

Rajakaluve Encroachment: ರಾಜಕಾಲುವೆ ಒತ್ತುವರಿದಾರರಿಗೆ ಮತ್ತೆ ನಡುಕ, ತೆರವಿಗೆ ಬಿಬಿಎಂಪಿ ಸಿದ್ಧತೆ

Paris Olympics
ಕ್ರೀಡೆ2 hours ago

Paris Olympics: ಟ್ರ್ಯಾಕ್‌ & ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದರೆ ಅಥ್ಲೀಟ್​ಗಳಿಗೆ ಸಿಗಲಿದೆ ಭಾರೀ ಮೊತ್ತದ ನಗದು ಬಹುಮಾನ

Murder case
ಕೊಡಗು2 hours ago

Murder Case : ಪತ್ನಿಗೆ ಗುಂಡು ಹಾರಿಸಿ ಕೊಂದು ಪೊಲೀಸರಿಗೆ ಶರಣಾದ ಪತಿ!

Shraddha Kapoor On Rumours Of Wedding To Rahul Mody
ಬಾಲಿವುಡ್2 hours ago

Shraddha Kapoor: ಮದುವೆ ಬಗ್ಗೆ ಶ್ರದ್ಧಾ ಕಪೂರ್ ಹೇಳಿದ್ದೇನು? ಹುಡುಗ ಯಾರು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ36 mins ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ24 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

ಟ್ರೆಂಡಿಂಗ್‌