Vastu Tips: ವಾಸ್ತು ಪ್ರಕಾರ ನಿಮ್ಮ ಅಡುಗೆ ಕೋಣೆ ಹೀಗಿರಲಿ... - Vistara News

ಲೈಫ್‌ಸ್ಟೈಲ್

Vastu Tips: ವಾಸ್ತು ಪ್ರಕಾರ ನಿಮ್ಮ ಅಡುಗೆ ಕೋಣೆ ಹೀಗಿರಲಿ…

Vastu Tips: ವಾಸ್ತು ಪ್ರಕಾರ ಅಡುಗೆ ಕೋಣೆಯ ವಿಚಾರದಲ್ಲಿ ಯಾವೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

kitchen room
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೆಮ್ಮದಿಯ ಜೀವನದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಪಟ್ಟಿ ಮಾಡುತ್ತ ಹೋದರೆ ಅದರಲ್ಲಿ ವಾಸ್ತು ಶಾಸ್ತ್ರ ಮುಖ್ಯವಾಗುತ್ತದೆ. ಪ್ರತಿ ಕೋಣೆ, ಮೂಲೆ ಹೀಗೆಯೇ ಇರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ವಿವರಿಸುತ್ತದೆ. ಸೂಕ್ತ ರೀತಿಯಲ್ಲಿ ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು. ಅದರಲ್ಲೂ ಮನೆಯ ಮುಖ್ಯ ಭಾಗ ಎಂದೇ ಪರಿಗಣಿಸಲ್ಪಡುವ ಅಡುಗೆ ಕೋಣೆಯನ್ನು ವ್ಯವಸ್ಥಿತವಾಗಿ ಜೋಡಿಸುವ ಮೂಲಕ ಅನೇಕ ಸಮಸ್ಯೆಗಳಿಂದ ಪಾರಾಗಬಹುದು (Vastu Tips).

ಅಡುಗೆ ಕೋಣೆಯ ದಿಕ್ಕು

ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಅಡುಗೆ ಕೋಣೆ ಇರಲಿ. ಅಗ್ನಿಗೆ ಸಂಬಂಧಿಸಿದ ಆಗ್ನೇಯ ದಿಕ್ಕು ಅಡುಗೆ ಕೋಣೆಗೆ ಬಹಳ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಇಲ್ಲಿ ಕಿಚನ್‌ ನಿರ್ಮಿಸಲು ಅನುಕೂಲ ಇಲ್ಲ ಎಂದಾದರೆ ಚಿಂತಿಸಬೇಡಿ. ವಾಯುವ್ಯ ದಿಕ್ಕನ್ನೂ ಅಡುಗೆ ಕೋಣೆಗಾಗಿ ಪರಿಗಣಿಸಬಹುದು ಎಂದು ತಜ್ಞರು ಪರಿಹಾರ ಸೂಚಿಸುತ್ತಾರೆ.

ಬಾಗಿಲು ಈ ದಿಕ್ಕಿಗಿರಲಿ

ಇನ್ನು ಅಡುಗೆ ಕೋಣೆಯ ಬಾಗಿಲು ಯಾವ ಕಡೆಗೆ ಮುಖ ಮಾಡಿರಬೇಕು ಎನ್ನುವದರ ಬಗ್ಗೆಯೂ ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಅಡುಗೆಮನೆಯ ಪ್ರವೇಶ ದ್ವಾರ ಅಥವಾ ಬಾಗಿಲು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಯಾವುದೇ ಮೂಲೆಯಲ್ಲಿ ಬಾಗಿಲು ನಿಲ್ಲುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ಸ್ಟೌ ಎಲ್ಲಿಡಬೇಕು?

ಕಿಚನ್ ಸಿಂಕ್ ಮತ್ತು ಒಲೆಗಳು ಇರಿಸುವ ದಿಕ್ಕು ಕೂಡ ಪ್ರಧಾನವಾಗುತ್ತದೆ. ಅಡುಗೆಮನೆಯ ವಿನ್ಯಾಸವನ್ನು ನಿರ್ಧರಿಸಿದ ನಂತರ ಒಲೆ, ಸ್ಟೌ ಸ್ಥಾನವನ್ನು ಆಯ್ಕೆ ಮಾಡುವುದು ಮುಖ್ಯ. ಮೊದಲೇ ಹೇಳಿದಂತೆ ಬೆಂಕಿಯ ಅಂಶವು ಆಗ್ನೇಯ ದಿಕ್ಕನ್ನು ನಿಯಂತ್ರಿಸುತ್ತದೆ. ಆದ್ದರಿಂದ ಒಲೆ ಯಾವಾಗಲೂ ಆ ದಿಕ್ಕಿನಲ್ಲೇ ಇರಲಿ.

ಸಿಂಕ್‌ ಇರಬೇಕಾದ ದಿಕ್ಕು

ಸಿಂಕ್‌ಗಳು ಮತ್ತು ನಲ್ಲಿಗಳು ಹರಿಯುವ ನೀರನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಸಿಂಕ್ ಈಶಾನ್ಯ ದಿಕ್ಕಿನಲ್ಲಿರಲಿ. ಜತೆಗೆ ಸಿಂಕ್ ಅನ್ನು ಒಲೆಯ ಬಳಿ ಯಾವುದೇ ಕಾರಣಕ್ಕೂ ಇರಿಸಬೇಡಿ. ನೀರು ಮತ್ತು ಬೆಂಕಿ ವಿರುದ್ಧ ಅಂಶಗಳಾಗಿರುವುದರಿಂದ ಇವನ್ನು ಎಂದಿಗೂ ಸಮೀಪ ಇರಿಸಬಾರದು.

ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ರೀತಿ

ಕಿಟಕಿಗಳು ನಕಾರಾತ್ಮಕತಕ ಶಕ್ತಿಯನ್ನು ಹೊರಹಾಕುವ ಅತ್ಯುತ್ತಮ ಮಾರ್ಗ. ಹೀಗಾಗಿ ಅಡುಗೆಮನೆಯಲ್ಲಿ ಒಂದೆರಡು ಕಿಟಕಿ ಇರಲೇಬೇಕು. ಎಲ್ಲ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಕಿಟಕಿ ಪೂರ್ವದಲ್ಲಿ ಇರಿಸುವುದು ಮುಖ್ಯ. ಅಡುಗೆಮನೆಯ ಸ್ಥಳವನ್ನು ನಿರ್ಧರಿಸುವಾಗ ಈ ಅಂಶ ನಿಮ್ಮ ಗಮನದಲ್ಲಿರಲಿ.

ಗೋಡೆಗಳಿಗೆ ಈ ಬಣ್ಣ ಬಳಿಯಿರಿ

ಅಡುಗೆ ಕೋಣೆಗೆ ಕಪ್ಪು ಬಣ್ಣವನ್ನು ಬಳಿಯುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಸುರು, ಕಿತ್ತಳೆ, ಕೆಂಪು ಮುಂತಾದ ಪ್ರಕಾಶಮಾನ ಬಣ್ಣಗಳನ್ನು ಗೋಡೆಗೆ ಬಳಸಿ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಜತೆಗೆ ರೆಫ್ರಿಜರೇಟರ್ ಅನ್ನು ನೈಋತ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ. ಮೈಕ್ರೋವೇವ್ ಓವನ್, ಹೀಟರ್, ಮಿಕ್ಸರ್ ಮತ್ತು ಗ್ರೈಂಡರ್‌ಗಳಂತಹ ವಿದ್ಯುತ್ ಉಪಕರಣಗಳನ್ನು ಅಡುಗೆಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಈಶಾನ್ಯ ದಿಕ್ಕಿನಲ್ಲಿ ವಿದ್ಯುತ್ ಉಪಕರಣ ಇಡಬೇಡಿ.

ಈ ತಪ್ಪುಗಳನ್ನು ಮಾಡಲೇಬೇಡಿ

  • ಸಿಂಕ್‌ ಮತ್ತು ಸ್ಟೌ ಸಮೀಪ ಇರಿಸಬೇಡಿ.
  • ಅಡುಗೆಮನೆಯನ್ನು ನೇರವಾಗಿ ಮಲಗುವ ಕೋಣೆ, ದೇವರ ಕೋಣೆ ಅಥವಾ ಸ್ನಾನಗೃಹದ ಕೆಳಗೆ ನಿರ್ಮಿಸಬೇಡಿ.
  • ಅಡುಗೆ ಕೋಣೆಯ ಬಾಗಿಲನ್ನು ಯಾವುದೇ ಮೂಲೆಯಲ್ಲಿ ಇರಿಸಬೇಡಿ.

ಇದನ್ನೂ ಓದಿ: Vastu Tips: ಅದೃಷ್ಟ, ಸಂಪತ್ತು ಹೊತ್ತು ತರುವ ಬಿದಿರನ್ನು ಹೀಗೆ ಬೆಳೆಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಹಳೆಯ ತಲೆಮಾರಿನವರು ಕಲ್ಲನ್ನಾದರೂ ತಿಂದು ಅರಗಿಸುತ್ತಿದ್ದರು. ನಮಗೆ ಅನ್ನವೇ ಅರಗುವುದಿಲ್ಲ ಎಂದು ಹಳಹಳಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೌದು, ನಮ್ಮ ಊಟದ ಅಭ್ಯಾಸಗಳೇ ಕೆಲವೊಮ್ಮೆ ನಮಗೆ ಶತ್ರುವಾಗುವುದಿದೆ. ಹಾಗಾದರೆ ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಲು ಏನು ಮಾಡಬಹುದು? ಇಲ್ಲಿದೆ (Digestion Tips) ಉಪಯುಕ್ತ ಮಾಹಿತಿ.

VISTARANEWS.COM


on

Digestion Tips
Koo

ನಮ್ಮ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವೇ? ತಿಂದಿದ್ದು ಅರಗುವುದೇ ಇಲ್ಲ ಎನ್ನುವ ದೂರು ಹೇಳುವವರು ಬಹಳ ಮಂದಿ ಇದ್ದಾರು ಲೋಕದಲ್ಲಿ. ಇದರಿಂದ ಅಜೀರ್ಣದ ಸಮಸ್ಯೆ ಮಾತ್ರವಲ್ಲ, ಸರಣಿ ಸಮಸ್ಯೆಗಳು ಬೆನ್ನು ಹತ್ತುತ್ತವೆ. ಹಸಿವಿಲ್ಲದಿರುವುದು, ವಾಯು ಪ್ರಕೋಪ, ಆಸಿಡಿಟಿ, ಮಲಬದ್ಧತೆ… ಇವೆಲ್ಲ ಸೇರಿ ಜೀವವನ್ನು ಹೈರಾಣಾಗಿಸುತ್ತವೆ. ಮಾತ್ರವಲ್ಲ, ಟಾಕ್ಸಿನ್‌ಗಳ ಗುಡಾಣವಾಗುತ್ತದೆ ದೇಹ. ಹಾಗಾದರೆ ಇವುಗಳನ್ನು ದೂರ ಮಾಡಲು ಇರುವ ದಾರಿ ಯಾವುದು? ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುವುದರಿಂದ ಇಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದೇ? ಹೌದಾದರೆ (Digestion Tips) ಏನು ಮಾಡಬೇಕು?

Detox

ಡಿಟಾಕ್ಸ್‌ ಮಾಡಿ

ದೇಹವನ್ನು ಕಾಲಕಾಲಕ್ಕೆ ವಿಷಮುಕ್ತ ಮಾಡುವುದು ಅಗತ್ಯ. ಬೇಡದ್ದನ್ನೇ ದೇಹದಲ್ಲಿ ತುಂಬಿಕೊಂಡಿದ್ದರೆ, ಲಿವರ್‌ ಅತಿಯಾಗಿ ಕೆಲಸ ಮಾಡುವುದು ಹೌದು. ಆದರೆ ಪ್ರಯೋಜನ ದೊರೆಯುವುದಿಲ್ಲ. ಇಂಥ ಸಂದರ್ಭದಲ್ಲಿ ಏಕಾದಶಿ ಅಥವಾ ಸಂಕಷ್ಟಿಯ ನೆವದಲ್ಲಿ ಉಪವಾಸ, ಇನ್ಯಾವುದೋ ವ್ರತದ ಹೆಸರಿನಲ್ಲಿ ದ್ರವಾಹಾರ ಮುಂತಾದ ಕ್ರಮಗಳು ಜೀರ್ಣಾಂಗಗಳಿಗೆ ಬೇಕಾದ ವಿಶ್ರಾಂತಿಯನ್ನು ನೀಡುತ್ತವೆ. ಒಂದೊಮ್ಮೆ ಉಪವಾಸ ಕಷ್ಟ ಎಂದೆನಿಸಿದರೆ ಜ್ಯೂಸ್‌ಫಾಸ್ಟ್‌ ನಿಯಮಗಳನ್ನೂ ಅನುಸರಿಸಬಹುದು. ಇದರಿಂದ ಶರೀರವನ್ನು ಡಿಟಾಕ್ಸ್‌ ಮಾಡಲ್ ಸಾಧ್ಯವಾಗುತ್ತದೆ.

Young Woman in the Lotus Position While Meditating Mindfulness Practice Well-Being and Self-Concept Brain Exercises To Improve Memory

ಧ್ಯಾನ

ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಯೋಚಿಸಬೇಡಿ. ಮಾನಸಿಕ ಒತ್ತಡವು ದೇಹದ ಜೀರ್ಣಾಂಗಗಳ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ ಎಂಬುದನ್ನು ಬಹಳಷ್ಟ್ ಅ‍ಧ್ಯಯನಗಳು ದೃಢಪಡಿಸಿವೆ. ಮನಸ್ಸನ್ನು ಒತ್ತಡ ಮುಕ್ತ ಮಾಡುವುದರಿಂದ, ಇಡೀ ಶರೀರದ ಮೇಲೆ ಧನಾತ್ಮಕ ಪರಿಣಾಮ ಬೀರುವುದನ್ನು ಕಾಣಬಹುದು ನಾವು. ಹಾಗಾಗಿ ಪ್ರತಿದಿನ 30 ನಿಮಿಷಗಳ ಧ್ಯಾನ ಮಾಡುವುದರಿಂದ ಜೀರ್ಣಾಂಗಗಳ ಆರೋಗ್ಯವನ್ನೂ ಸುಧಾರಿಸಬಹುದು.

Female runner doing stretching exercise, preparing for morni

ವ್ಯಾಯಾಮ

ಶಾರೀರಿಕ ಚಟುವಟಿಕೆಯು ಜೀರ್ಣಾಂಗಗಳನ್ನೂ ಚುರುಕಾಗಿಸುತ್ತದೆ. ಯಾವುದೇ ರೀತಿಯ ಏರೋಬಿಕ್‌ ಮಾದರಿಯ ವ್ಯಾಯಾಮಗಳು ದೇಹಕ್ಕೆ ಒಳ್ಳೆಯದು. ಚುರುಕು ನಡಿಗೆ, ಈಜು, ಸೈಕಲ್‌ ಹೊಡೆಯುವುದು, ನೃತ್ಯ, ಪಿಲಾಟೆ, ಯೋಗ ಮುಂತಾದ ಯಾವುದನ್ನಾದರೂ ಅಭ್ಯಾಸ ಮಾಡಬಹುದು. ಊಟದ ನಂತರ ಹತ್ತು ನಿಮಿಷಗಳ ನಡಿಗೆಯೂ ಆಹಾರವನ್ನು ಚೆನ್ನಾಗಿ ಪಚನ ಮಾಡುತ್ತದೆ. ಅದರಲ್ಲೂ ಮಧುಮೇಹ ಇರುವವರಲ್ಲಿ ಇಂಥ ಚಟುವಟಿಕೆಗಳು ಸಕ್ಕರೆಯಂಶದ ನಿಯಂತ್ರಣಕ್ಕೆ ಬಹಳಷ್ಟು ನೆರವು ನೀಡುತ್ತದೆ.

ಇದನ್ನೂ ಓದಿ: Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಅತಿಯಾಗಿ ತಿನ್ನುವುದಲ್ಲ

ಊಟ ಎಷ್ಟೇ ರುಚಿಯಾಗಿದ್ದರೂ, ಅದೇನು ಬದುಕಿನ ಕಡೆಯ ಊಟ ಎಂಬಂತೆ ಉಣ್ಣಬೇಕಿಲ್ಲ. ಅಲ್ಪತೃಪ್ತನಿಗೆ ರುಚಿ ಹೆಚ್ಚು ಎನ್ನುವ ಮಾತಿನಂತೆ, ಸ್ವಲ್ಪ ತಿಂದಿದ್ದನ್ನೂ ಪ್ರೀತಿಯಿಂದ ಹೊಟ್ಟೆ ಸೇರಿಸಿದರೆ, ಅದೇ ಪ್ರಿಯವಾಗುತ್ತದೆ. ಊಟಕ್ಕೆ ಕೂತಾಗ ಸಿಕ್ಕಾಪಟ್ಟೆ ತಿನ್ನುವುದು ಮಾತ್ರವಲ್ಲ, ಆಗಾಗ ತಿನ್ನುತ್ತಿರುವುದು, ಅನಾರೋಗ್ಯಕರ ತಿಂಡಿಗಳನ್ನೇ ತಿನ್ನುವುದು- ಇಂಥ ಆಹಾರಭ್ಯಾಸಗಳು ಜೀರ್ಣಾಂಗಗಳನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಬದಲಿಗೆ, ಸತ್ವಯುತವಾದ ಮಧ್ಯಮ ಗಾತ್ರದ ಊಟವನ್ನು ಅಳವಡಿಸಿಕೊಂಡರೆ ಒಳ್ಳೆಯದು

Herbal Tea with Honey Late Night Snacks

ಹರ್ಬಲ್‌ ಚಹಾಗಳು

ನೈಸರ್ಗಿಕ ಹರ್ಬಲ್‌ ಚಹಾಗಳು ಹೊಟ್ಟೆಯ ಆರೋಗ್ಯವನ್ನು ವೃದ್ಧಿಸುತ್ತವೆ. ಶುಂಠಿ ಚಹಾ, ಚಕ್ಕೆಯ (ಸಿನ್ನಮನ್) ಚಹಾ, ಕ್ಯಾಮೊಮೈಲ್‌ ಚಹಾ ಮುಂತಾದವು ಆಹಾರ ಪಚನವಾಗಲು ನೆರವು ನೀಡುತ್ತವೆ. ಜೊತೆಗೆ ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀರ್ಣಾಂಗಗಳಲ್ಲಿನ ಉರಿಯೂತ ಕಡಿಮೆ ಮಾಡಲೂ ಸಹಾಯ ಮಾಡುತ್ತವೆ. ಕೊತ್ತಂಬರಿ ನೀರು, ಜೀರಿಗೆ ನೀರು ಇತ್ಯಾದಿಗಳು ಗ್ಯಾಸ್‌, ಆಸಿಡಿಟಿಗಳ ನಿಯಂತ್ರಣಕ್ಕೂ ನೆರವಾಗುತ್ತವೆ. ಇಂಥ ಯಾವುದೇ ಚಹಾಗಳ ಡಿಪ್‌ ಟೀ ಬ್ಯಾಗ್ ಬಳಸಿದರೆ‌ ತಯಾರಿಕೆ ಸುಲಭ. ಹಾಗಲ್ಲದೆ, ನೀವೆ ಮಾಡಿಕೊಳ್ಳುವ ಉದ್ದೇಶವಿದ್ದರೆ ತಯಾರಿಸುವ ಕ್ರಮ ಹೀಗಿದೆ- ಶುಂಠಿ ಅಥವಾ ಚಕ್ಕೆಯ ಚಹಾ ಮಾಡುವುದಿದ್ದರೆ, ಒಂದು ಕಪ್‌ ನೀರಿಗೆ ಒಂದಿಂಚು ಚಕ್ಕೆ ಅಥವಾ ಅರ್ಧ ಇಂಚು ಶುಂಠಿಯನ್ನು ಹಾಕಿ. ೫ ನಿಮಿಷಗಳ ಕಾಲ ಈ ನೀರು ಚೆನ್ನಾಗಿ ಕುದಿಯಲಿ. ನಂತರ ಇದನ್ನು ಬೇಕಾದ ಉಷ್ಣತೆಯಲ್ಲಿ ಸೇವಿಸಬಹುದು. ಊಟದ ಒಂದು ತಾಸಿನ ನಂತರ ಹರ್ಬಲ್‌ ಟೀ ಅಥವಾ ಗ್ರೀನ್‌ ಟೀಗಳ ಸೇವನೆ ಹೆಚ್ಚಿನ ಪರಿಣಾಮಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗೆಂದು ದಿನದ ಉಳಿದ ಸಮಯದಲ್ಲಿ ಇದನ್ನು ಸೇವಿಸಬಾರದೆಂದಲ್ಲ. ಆದರೆ ಹಸಿದ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವಿಸುವುದು ಸಮಸ್ಯೆಗಳನ್ನು ತರಬಹುದು.

Continue Reading

ಆರೋಗ್ಯ

Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ಬಹಳಷ್ಟು ಮಂದಿಗೆ ಬಾಯಿ ಸಿಹಿ ಆಗದಿದ್ದರೆ ಅಡುಗೆ ರುಚಿಸುವುದೇ ಇಲ್ಲ. ಹಾಗಂತ ಮಾಡುವ ಅಡಿಗೆಗೆಲ್ಲ ಸಕ್ಕರೆ ಹಾಕಿಕೊಂಡು ಕೂತಿರುವುದಕ್ಕಾಗದು. ಹಲವು ರೀತಿಯ ವಸ್ತುಗಳನ್ನು ಬಳಸಿ ಪಾಕ ತಯಾರಿಸುವುದು ವಾಡಿಕೆ. ಯಾವ ಸಿಹಿ ವಸ್ತುಗಳಿಂದ ಎಂಥ ಪರಿಣಾಮ ಆರೋಗ್ಯದ ಮೇಲಾಗುತ್ತದೆ ಎಂಬ (Which Sweetener Is Better) ಮಾಹಿತಿ ಇಲ್ಲಿದೆ.

VISTARANEWS.COM


on

Which Sweetener Is Better
Koo

ಅಡುಗೆ ಮಾಡುವಾಗ ಹಲವು ರೀತಿಯನ್ನು ಸಿಹಿಯನ್ನು ಬಳಸುತ್ತೇವೆ. ಕೆಲವು ಪಾಕಗಳಿಗೆ ಸಕ್ಕರೆಯನ್ನೇ ನೇರವಾಗಿ ಸೇರಿಸಿದರೆ, ಇನ್ನೂ ಕೆಲವು ಅಡುಗೆಗಳಿಗೆ ಬೆಲ್ಲ ಅಥವಾ ಇನ್ನಾವುದಾದರೂ ಸಿಹಿಯನ್ನು ಬಳಸಬಹುದು. ಕೆಲವೊಮ್ಮೆ ಸಿಹಿ ಹಣ್ಣುಗಳನ್ನು ಬಳಸುವ ಮೂಲಕ, ಅಡುಗೆಯೊಂದನ್ನು ಸಿಹಿಯಾಗಿರಬಹುದು. ಹಲವು ರೀತಿಯ ಸಿಹಿಗಳನ್ನು ಬಳಸುವ ಹಿನ್ನೆಲೆಯಲ್ಲಿ, ಸಕ್ಕರೆ, ಬೂರಾ ಸಕ್ಕರೆ, ಕಲ್ಲು ಸಕ್ಕರೆ ಮತ್ತು ಬೆಲ್ಲ- ಇವುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು (Which Sweetener Is Better) ಎಂಬ ಮಾಹಿತಿಯಿದು. ಮೊದಲಿಗೆ ಈ ವಸ್ತುಗಳು ಏನು ಎಂಬುದನ್ನು ಅರ್ಥ ಮಾಡಿಕೊಂಡರೆ, ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಸಹ ಅರ್ಥ ಮಾಡಿಕೊಳ್ಳಬಹುದು. ಮಾತ್ರವಲ್ಲ, ಎಲ್ಲಕ್ಕಿಂತ ಆರೋಗ್ಯಕರ ಯಾವುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಎಲ್ಲವೂ ಸಿಹಿ ವಸ್ತುಗಳು ಎಂಬಂತೆ ಕಂಡರೂ, ಪ್ರತಿಯೊಂದೂ ಭಿನ್ನವಾಗಿವೆ. ಕೆಲವು ಸಿಹಿಗಳು ಗ್ಲೈಸೆಮಿಕ್‌ ಸೂಚಿ, ಉಳಿದವುಗಳಿಗಿಂತ ಕಡಿಮೆ ಇರಬಹುದು. ಕೆಲವು ಸಿಹಿಗಳಲ್ಲಿ ಖನಿಜಗಳ ಪ್ರಮಾಣ ಹೆಚ್ಚಿರಬಹುದು. ಯಾವುದರಲ್ಲಿ ಏನೇನಿದೆ ಎಂಬುದನ್ನು ನೋಡೋಣ.

white sugar

ಬಿಳಿ ಸಕ್ಕರೆ

ಇದು ಅತ್ಯಂತ ಹೆಚ್ಚು ಸಂಸ್ಕರಣಗೊಳ್ಳುವ ಸಕ್ಕರೆ. ಪೌಷ್ಟಿಕಾಂಶಗಳು ಯಾವುದೂ ಇಲ್ಲದೆ ಕೇವಲ ಸಕ್ಕರೆಯ ಕ್ಯಾಲರಿಯನ್ನಷ್ಟೇ ಇದು ನೀಡುತ್ತದೆ. ಹಾಗಾಗಿ ಇದರಲ್ಲಿ ಗ್ಲೈಸೆಮಿಕ್‌ ಸೂಚಿ ಹೆಚ್ಚು. ಮಧುಮೇಹಿಗಳಿಗೆ ಇದು ಸೂಕ್ತವಲ್ಲದ್ದು. ಅಂದರೆ, 70ಕ್ಕಿಂತ ಹೆಚ್ಚಿನ ಜಿಐ ಇರುವ ವಸ್ತುಗಳ ಸಾಲಿಗೆ ಇದು ಸೇರುತ್ತದೆ. ೫೫ಕ್ಕಿಂತ ಕಡಿಮೆ ಜಿಐ ಇರುವ ತಿನಿಸುಗಳನ್ನು ಕಡಿಮೆ ಎಂತಲೂ, 56-69 ಜಿಐ ಇರುವ ವಸ್ತುಗಳಿಗೆ ಮಧ್ಯಮ ಪ್ರಮಾಣದ್ದೆಂತಲೂ, 70ಕ್ಕಿಂತ ಹೆಚ್ಚಿನ ಜಿಐ ಇರುವ ತಿನಿಸುಗಳು ಹೆಚ್ಚಿನ ಜಿಐ ಹೊಂದಿದವು ಎಂತಲೂ ಹೇಳಲಾಗುತ್ತದೆ. ಜಿಐ ಪ್ರಮಾಣ ಕಡಿಮೆ ಇದ್ದಷ್ಟೂ ರಕ್ತದಲ್ಲಿ ಸಕ್ಕರೆ ಅಂಶ ಸ್ಥಿರವಾಗಿರುತ್ತದೆ ಎನ್ನಬಹುದು.

Rock sugar

ಕಲ್ಲು ಸಕ್ಕರೆ

ಇದು ಆಕಾರದಲ್ಲಿ ಬಿಳಿಸಕ್ಕರೆಯಂತೆ ಕಾಣುವುದಿಲ್ಲ ಎನ್ನುವುದನ್ನು ಬಿಟ್ಟರೆ, ಸತ್ವದಲ್ಲಿ ಇದು ಸಹ ಖಾಲಿ. ಸಕ್ಕರೆಯ ಕ್ಯಾಲರಿಗಳನ್ನು ಬಿಟ್ಟರೆ ಬೇರೇನನ್ನೂ ನೀಡುವುದಿಲ್ಲ. ಹಾಗಾಗಿ ಇದರದ್ದೂ ಗ್ಲೈಸೆಮಿಕ್‌ ಸೂಚಿ ಅಧಿಕ. ಮಧುಮೇಹಿಗಳಿಗೆ ಕಲ್ಲುಸಕ್ಕರೆಯೂ ಸೂಕ್ತವಲ್ಲ. ಇದನ್ನು ಸೇವಿಸಿದ ಅಲ್ಪಕಾಲದಲ್ಲೇ ಹೆಚ್ಚಿನ ಗ್ಲೂಕೋಸನ್ನು ಇದು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ರುಚಿಯೂ ಸಹ ಬಿಳಿ ಸಕ್ಕರೆಗಿಂತ ಹೆಚ್ಚು ಭಿನ್ನವಲ್ಲ.

bura sugar

ಬೂರಾ ಸಕ್ಕರೆ

ಇದು ಸಹ ಸಕ್ಕರೆಯೆ. ಆದರೆ ಸಂಸ್ಕರಣಗೊಳ್ಳದ ಸಕ್ಕರೆ. ಬಿಳಿ ಸಕ್ಕರೆಗಿಂತ ಇದು ಬಳಕೆಗೆ ಸೂಕ್ತ. ಕಾರಣ, ಇದರ ಗ್ಲೈಸೆಮಿಕ್‌ ಸೂಚಿ ಉಳಿದೆಲ್ಲ ಸಕ್ಕರೆಗಳಿಗಿಂತ ಕಡಿಮೆ. ಅಷ್ಟಾದರೂ ಹೇಳುವಂಥ ಖನಿಜಾಂಶಗಳನ್ನೇನೂ ಇದು ಹೊಂದಿರುವುದಿಲ್ಲ. ಆದರೂ ಬಿಳಿ ಸಕ್ಕರೆ ಮತ್ತು ಕಲ್ಲು ಸಕ್ಕರೆಗಿಂತ ಮಧುಮೇಹಿಗಳು ಇದನ್ನು ಬಳಸಬಹುದು. ಹಾಗೆಂದು ಇದರ ಬಳಕೆಗಾದರೂ ಮಿತಿ ಬೇಕಾಗುತ್ತದೆ.

jaggery

ಬೆಲ್ಲ

ಇದರ ಗ್ಲೈಸೆಮಿಕ್‌ ಸೂಚಿ ಮಧ್ಯಮ ಪ್ರಮಾಣದಲ್ಲಿದೆ. ಅಂದರೆ ಸಂಸ್ಕರಿತ ಸಕ್ಕರೆಗಳಿಗಿಂತ ಇದು ಬಳಕೆಗೆ ಸೂಕ್ತ. ಇದರಲ್ಲಿ ಮೊಲಾಸಿಸ್‌ ಅಂಶ ಉಳಿದಿರುವುದರಿಂದ ಕಬ್ಬಿಣ, ಪೊಟಾಶಿಯಂ, ಮೆಗ್ನೀಶಿಯಂ ಮತ್ತು ಹಲವು ರೀತಿಯ ಬಿ ವಿಟಮಿನ್‌ಗಳು ಬೆಲ್ಲದಲ್ಲಿ ಸೇರಿಸುತ್ತವೆ. ಜೊತೆಗೆ, ಉತ್ಕರ್ಷಣ ನಿರೋಧಕಗಳಿಂದಲೂ ಕೂಡಿದೆ. ಅಲ್ಪ ಪ್ರಮಾಣದಲ್ಲಿ ಮಧುಮೇಹಿಗಳು ಇದನ್ನು ಬಳಸಬಹುದು. ಹೆಚ್ಚಿನ ಜಿಐ ಇರುವಂಥ ವಸ್ತುಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇನ್‌ಸುಲಿನ್‌ ಉತ್ಪತ್ತಿಯಾಗುತ್ತದೆ. ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಗ್ಲೂಕೋಸ್‌ ದೇಹಕ್ಕೆ ದೊರೆತರೆ, ಅದನ್ನು ನಿರ್ವಹಿಸಲು ಶರೀರ ಯತ್ನಿಸುತ್ತದೆ. ಆಗ ರಕ್ತದಲ್ಲಿ ಸಕ್ಕರೆಯಂಶದ ಏರಿಳಿತ ಕಾಣುವುದು ಸಾಮಾನ್ಯ. ಇದರ ಬದಲಿಗೆ ಕಡಿಮೆ ಜಿಐ ಇರುವಂಥ ಆಹಾರ ಸೇವಿಸುವುದರಿಂದ, ರಕ್ತಕ್ಕೆ ಗ್ಲೂಕೋಸ್‌ ಬಿಡುಗಡೆ ಆಗುವ ಪ್ರಮಾಣವೂ ನಿಧಾನವೇ ಆಗುತ್ತದೆ. ಹಾಗಾಗಿ, ನಾರುಭರಿತ ಆಹಾರಗಳು, ಇಡೀ ಧಾನ್ಯಗಳು, ಹಣ್ಣು-ತರಕಾರಿಗಳು ಆಹಾರದಲ್ಲಿ ಸೇರಿಸಕೊಂಡಿರಬೇಕು.

ಇದನ್ನೂ ಓದಿ: Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

Continue Reading

ಬೆಂಗಳೂರು

Sri Sai Gold Palace: ಅಕ್ಷಯ ತೃತೀಯ; ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಶ್ರೀ ಬಾಲ ರಾಮನ ಬೆಳ್ಳಿ ವಿಗ್ರಹ ಉಡುಗೊರೆ

ಅಕ್ಷಯ ತೃತೀಯ ಅಂಗವಾಗಿ ಈ ಬಾರಿ ವಿಶೇಷವಾಗಿ ಬೆಂಗಳೂರಿನಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ 50 ಸಾವಿರ ರೂ. ಮೇಲ್ಪಟ್ಟು ಖರೀದಿಸುವ ಗ್ರಾಹಕರಿಗೆ ಅಯೋಧ್ಯೆಯ ಶ್ರೀ ಬಾಲರಾಮನ ಸನ್ನಿಧಾನದಲ್ಲಿ ಪೂಜಿಸಲ್ಪಟ್ಟ ಬಾಲ ರಾಮನ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದೆ.ಕಾರ್ಯಕ್ರಮಕ್ಕೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ರಾಯಬಾರಿ, ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ಆಗಮಿಸಲಿದ್ದಾರೆ.

VISTARANEWS.COM


on

Akshaya Tritiya Bala Rama Silver Idol gift from Sri Sai Gold Palace in bengaluru
Koo

ಬೆಂಗಳೂರು: ಅಕ್ಷಯ ತೃತೀಯ (Akshaya Tritiya 2024) ಅಂಗವಾಗಿ ಈ ಬಾರಿ ವಿಶೇಷವಾಗಿ ಬೆಂಗಳೂರಿನಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ (Sri Sai Gold Palace) 50 ಸಾವಿರ ರೂ. ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ ಅಯೋಧ್ಯೆಯ ಶ್ರೀ ಬಾಲರಾಮನ ಸನ್ನಿಧಾನದಲ್ಲಿ ಪೂಜಿಸಲ್ಪಟ್ಟ ಬಾಲ ರಾಮನ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದೆ.

ಇದನ್ನೂ ಓದಿ: Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

ಅಕ್ಷಯ ತೃತೀಯದಂದು ಬೆಂಗಳೂರಿನ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಎಲ್ಲಾ ಶಾಖೆಗಳು ಬೆಳಗ್ಗೆ 7 ರಿಂದ ರಾತ್ರಿ 11 ಗಂಟೆಯವರೆಗೂ ತೆರೆದಿರುತ್ತವೆ.

ಇದನ್ನೂ ಓದಿ: SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

ಮೇ 10 ರಂದು ಶುಕ್ರವಾರ ಆಚರಿಸುವ ಅಕ್ಷಯ ತೃತೀಯ ಕಾರ್ಯಕ್ರಮಕ್ಕೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ರಾಯಭಾರಿ ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಆರೋಗ್ಯ

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

2022ರ ಏಪ್ರಿಲ್‌ನಲ್ಲಿ ‘ವಿಷಕಾರಿ’ ಶವರ್ಮಾ ಸೇವಿಸಿ 52ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರ್‌ನಲ್ಲಿ ಯುವಕ, ಕಳೆದ ವರ್ಷ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಹಾಗಾದರೆ ಶವರ್ಮಾ ಆಹಾರ ಪ್ರಿಯರಿಗೆ ವಿಷಕಾರಿವಾಗುತ್ತಿರುವುದು (Toxic Shawarma) ಯಾಕೆ? ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Toxic Shawarma
Koo

ಮುಂಬಯಿನ (mumbai) ಮಂಖುರ್ದ್ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬ ರಸ್ತೆ ಬದಿಯ ವ್ಯಾಪಾರಿಯಿಂದ ಚಿಕನ್‌ ಶವರ್ಮಾ ಸೇವಿಸಿದ (Toxic Shawarma) ಬಳಿಕ ಹೊಟ್ಟೆನೋವು (stomach pain), ವಾಂತಿ (vomiting) ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿತ್ತು. ಶವರ್ಮಾಗೆ ಬಳಸಿದ ಚಿಕನ್ ಕೆಟ್ಟುಹೋಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಥಮೇಶ್ ಭೋಕ್ಸೆ ಮೃತ ಯುವಕ. ಆತ ಸೇವಿಸಿದ ಆಹಾರ ವಿಷಪೂರಿತವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡ ಬಳಿಕ ಭೋಕ್ಸೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಬಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮೂರನೇ ಬಾರಿಗೆ ಮತ್ತೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇಬ್ಬರು ಆಹಾರ ಮಾರಾಟಗಾರರನ್ನು ಬಂಧಿಸಿದ್ದಾರೆ. ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಬಂಧಿತರು. ಇವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ಮೊದಲಲ್ಲ

ಶವರ್ಮಾದಿಂದ ಸಾವು ಸಂಭವಿಸಿರುವುದು ಇದೇ ಮೊದಲ ಘಟನೆಯಲ್ಲ. 2022ರ ಏಪ್ರಿಲ್‌ನಲ್ಲಿ 52ಕ್ಕೂ ಹೆಚ್ಚು ಮಂದಿ ಶವರ್ಮಾ ಸೇವಿಸಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರಿನಲ್ಲಿ ಶವರ್ಮಾವನ್ನು ತಿಂದು ಒಬ್ಬರು ಮೃತಪಟ್ಟಿದ್ದರು. 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಖಾದ್ಯವನ್ನು ಸೇವಿಸಿದ ಬಳಿಕ ಪ್ರಾಣ ಕಳೆದುಕೊಂಡಿದ್ದಳು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ನ ರೆಸ್ಟೋರೆಂಟ್‌ನಲ್ಲಿ ಚಿಕನ್ ಶವರ್ಮಾ ಸೇವಿಸಿದ 14 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದಲ್ಲದೆ, ಖಾದ್ಯವನ್ನು ಸೇವಿಸಿದ ಅನಂತರ ಸಂತ್ರಸ್ತೆಯ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 43 ಮಂದಿ ತೀವ್ರ ಜ್ವರ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

2023ರ ಅಕ್ಟೋಬರ್‌ನಲ್ಲಿ ಕೊಚ್ಚಿಯ ಯುವಕ ಕೇರಳದ ಮಾವೇಲಿಪುರಂನಲ್ಲಿರುವ ರೆಸ್ಟೋರೆಂಟ್‌ನಿಂದ ಶವರ್ಮಾ ಸೇವಿಸಿದ ಅನಂತರ ಸಾವನ್ನಪ್ಪಿದರು. 22 ವರ್ಷದ ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ಅವನ ಸಾವಿಗೆ ಕಾರಣವನ್ನು ಸೆಪ್ಟಿಸೆಮಿಯಾ ಎಂದು ಉಲ್ಲೇಖಿಸಿದೆ. ಇದು ಗಂಭೀರ ರಕ್ತಪ್ರವಾಹದ ಸೋಂಕಾಗಿದೆ.


ಶವರ್ಮಾ ಏಕೆ ಸಾವಿಗೆ ಕಾರಣ?

ಶವರ್ಮಾ ಭಕ್ಷ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಅದರಲ್ಲಿ ಬಳಸುವ ಪದಾರ್ಥಗಳು ಇದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೋಳಿಮಾಂಸವನ್ನು ತಯಾರಿಸುವ, ನಿರ್ವಹಿಸುವ ಮತ್ತು ಸಂಗ್ರಹಿಸುವ ವಿಧಾನ ಸರಿಯಾಗಿ ಇಲ್ಲದೇ ಇದ್ದುದರಿಂದ ಶವರ್ಮಾವನ್ನು ತಿಂದ ಬಳಿಕ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕಡಿಮೆ ಬೇಯಿಸಿದ ಮಾಂಸ ಅಥವಾ ಮಾಂಸದ ಅಸಮರ್ಪಕ ಶೈತ್ಯೀಕರಣದ ಕಾರಣದಿಂದಾಗಿ ಆಹಾರ ವಿಷವಾಗಿದೆ.

ಬೇಯಿಸದ ಮಾಂಸ ಕಾರಣ

ಶವರ್ಮಾಕ್ಕೆ ಬಳಸಲಾಗುವ ಮಾಂಸವನ್ನು ಆಳವಾಗಿ ಭೇದಿಸದ ಜ್ವಾಲೆಯನ್ನು ಬಳಸಿ ಗಂಟೆಗಳ ಕಾಲ ನಿಧಾನವಾಗಿ ಹುರಿಯಲಾಗುತ್ತದೆ. ಇದರಿಂದ ಹೆಚ್ಚಿನ ಗ್ರಾಹಕರು ಹಲವು ಸಂದರ್ಭದಲ್ಲಿ ಸರಿಯಾಗಿ ಬೇಯಿಸದ ಮಾಂಸವನ್ನು ಪಡೆಯುತ್ತಾರೆ. ಶವರ್ಮಾದಿಂದ ಆಹಾರ ವಿಷಕ್ಕೆ ಮಾಂಸದ ಅಸಮರ್ಪಕ ಶೈತ್ಯೀಕರಣ, ಮಾಲಿನ್ಯ, ಅಥವಾ ಸಾಲ್ಮೊನೆಲ್ಲಾ ಅಥವಾ ಇ. ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಕ್ಕೆ ಕಾರಣವಾಗುತ್ತದೆ. ಇದು ಆಹಾರವನ್ನು ವಿಷಗೊಳಿಸುವುದು ಮಾತ್ರವಲ್ಲ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಅನೈರ್ಮಲ್ಯ, ಸರಿಯಾಗಿ ಬೇಯಿಸದ ಅಥವಾ ಕಲುಷಿತ ಆಹಾರ ಕರುಳಿನ ಸೋಂಕನ್ನು ಉಂಟುಮಾಡಬಹುದು. ಅದು ತುಂಬಾ ಸಾಂಕ್ರಾಮಿಕವಾಗಿರುತ್ತದೆ. ಅಲ್ಲದೇ ಕಲುಷಿತ ಪಾತ್ರೆಗಳು, ಅಸಮರ್ಪಕ ಸಾಸ್ ಅಥವಾ ಪದಾರ್ಥಗಳ ಬಳಕೆ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಫ್ರಿಡ್ಜ್‌ ನಲ್ಲಿ ಮಾಂಸವನ್ನು ದೀರ್ಘಕಾಲದವರೆಗೆ ಬಿಟ್ಟರೂ ಅದು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಸುರಕ್ಷಿತ ಶವರ್ಮಾ ಸೇವಿಸಿ

ಶವರ್ಮಾ ತಿನ್ನಬೇಕಿದ್ದರೆ ಉತ್ತಮ ಆಹಾರ ಸುರಕ್ಷತಾ ಅಭ್ಯಾಸಗಳ ಇತಿಹಾಸ ಹೊಂದಿರುವ ಆರೋಗ್ಯಕರ ಮತ್ತು ಪ್ರತಿಷ್ಠಿತ ಆಹಾರ ಮಳಿಗೆಗಳು ಮತ್ತು ಮಾರಾಟಗಾರರನ್ನು ಆಯ್ಕೆ ಮಾಡಿ. ಹೊಟೇಲ್‌ನಲ್ಲಿನ ಶುಚಿತ್ವ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಗಮನ ಕೊಡಿ. ಮಾಂಸದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ಅದು ಕಚ್ಚಾ ಅಥವಾ ಕಡಿಮೆ ಬೇಯಿಸಿರುವುದನ್ನು ತಿನ್ನಬೇಡಿ.

Continue Reading
Advertisement
prajwal revanna case women
ಪ್ರಮುಖ ಸುದ್ದಿ2 mins ago

Prajwal Revanna Case: “ಟ್ರಾನ್ಸ್‌ಫರ್‌ಗಾಗಿ ಪೀಡಿಸಿ ತಿಂದ…” ಪ್ರಜ್ವಲ್‌ ವಿಡಿಯೋದಲ್ಲಿದ್ದ ಸರ್ಕಾರಿ ಅಧಿಕಾರಿಣಿಯರಿಂದಲೂ ಈಗ ದೂರು!

Dog Bite in Belgavi
ಬೆಳಗಾವಿ21 mins ago

Dog Bite : ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ಅಟ್ಯಾಕ್‌

Indian Sailors Released
ವಿದೇಶ35 mins ago

Indian Sailors Released: ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು; ಐವರು ಭಾರತೀಯ ನಾವಿಕರು ರಿಲೀಸ್‌

Sanjiv Goenka
ಪ್ರಮುಖ ಸುದ್ದಿ41 mins ago

Sanjiv Goenka: ರಾಹುಲ್‌ಗೆ ಬೈದ ಗೋಯೆಂಕಾ; ಈ ಹಿಂದೆ ಧೋನಿಯನ್ನೇ ಕ್ಯಾಪ್ಟನ್ಸಿಯಿಂದ ತೆಗೆದಿದ್ದರು!

Solar Power
ದೇಶ44 mins ago

Solar Power: ಜಾಗತಿಕವಾಗಿ ಮತ್ತೊಮ್ಮೆ ಬೆಳಗಿದ ಭಾರತ; ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಜಪಾನ್‌ನನ್ನೂ ಮೀರಿದ ಸಾಧನೆ

sslc result 2024 vaishnavi self harming
ಕ್ರೈಂ1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಫೇಲ್‌, ಸರಣಿ ಸಾವಿಗೆ ಮತ್ತೊಂದು ಸೇರ್ಪಡೆ

Job News
ಉದ್ಯೋಗ2 hours ago

Job News: ಗುಡ್‌ನ್ಯೂಸ್‌; ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಶೀಘ್ರ 12,000 ಉದ್ಯೋಗಿಗಳ ನೇಮಕ

Char Dham Yatra
ದೇಶ2 hours ago

Char Dham Yatra: ಇಂದಿನಿಂದ ಪವಿತ್ರ ಚಾರ್‌ಧಾಮ್‌ ಯಾತ್ರೆ ಆರಂಭ

hd revanna jailed 2
ಕ್ರೈಂ2 hours ago

HD Revanna Jailed: ಇನ್ನು ಮೂರು ದಿನ ಎಚ್‌ಡಿ ರೇವಣ್ಣ ಭೇಟಿ ಯಾರಿಗೂ ಇಲ್ಲ

Aravind Kejriwal
ದೇಶ2 hours ago

Arvind Kejriwal: ಕೇಜ್ರಿವಾಲ್‌ ಜಾಮೀನು ಅರ್ಜಿ ಇಂದು ವಿಚಾರಣೆ; ದಿಲ್ಲಿ ಸಿಎಂಗೆ ಜೈಲಾ…? ಬೇಲಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ13 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ14 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ15 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ22 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ22 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ22 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು23 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ23 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು1 day ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಟ್ರೆಂಡಿಂಗ್‌