Vastu Tips: ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದೀರಾ? ಈ ವಾಸ್ತು ಸಲಹೆ ಫಾಲೋ ಮಾಡಿ - Vistara News

ಲೈಫ್‌ಸ್ಟೈಲ್

Vastu Tips: ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದೀರಾ? ಈ ವಾಸ್ತು ಸಲಹೆ ಫಾಲೋ ಮಾಡಿ

Vastu Tips: ವರ್ಕ್‌ ಫ್ರಮ್‌ ಹೋಮ್‌ ಕಾರಣದಿಂದ ಮನೆಯಲ್ಲೇ ಉದ್ಯೋಗ ನಿರ್ವಹಿಸುತ್ತಿದ್ದೀರಾ? ಹಾಗಾದರೆ ಈ ವಾಸ್ತು ಸಲಹೆಗಳನ್ನು ಅನುಸರಿಸಿ.

VISTARANEWS.COM


on

home office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: 2020ರಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾದ ಬಳಿಕ ವರ್ಕ್‌ ಫ್ರಮ್‌ ಹೋಮ್‌ ಹೆಚ್ಚಿದೆ. ಅವಕಾಶ ಇರುವ ಕಡೆಗಳಲ್ಲಿ ವರ್ಕ್‌ ಫ್ರಮ್‌ ಹೋಮ್‌ ಒದಗಿಸಲಾಗುತ್ತದೆ. ಹೀಗಾಗಿ ಅನೇಕರು ಮನೆಯನ್ನೇ ಆಫೀಸ್‌ ಮಾಡಿಕೊಳ್ಳುತ್ತಿದ್ದಾರೆ. ಹೋಮ್‌ ಆಫೀಸ್‌ ಎನ್ನುವ ಕಾನ್ಸೆಪ್ಟ್‌ ಇದೀಗ ಜನಪ್ರಿಯವಾಗುತ್ತದೆ. ಕೆಲವರು ಬೆಡ್‌ ರೂಮ್‌, ಲಿವಿಂಗ್‌ ರೂಮ್‌ನ ಒಂದು ಬದಿಯನ್ನೇ ಇದಕ್ಕಾಗಿ ಆರಿಸಿದರೆ ಇನ್ನು ಕೆಲವರು ಪ್ರತ್ಯೇಕ ಕೋಣೆಯನ್ನು ಸಜ್ಜುಗೊಳಿಸುತ್ತಾರೆ. ಅದೇನೇ ಇರಲಿ ಹೋಮ್‌ ಆಫೀಸ್‌ (Home Office) ವಿಚಾರದಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸುವ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಈ ಕುರಿತಾದ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ಹೋಮ್‌ ಆಫೀಸ್‌ನ ದಿಕ್ಕು

ನಿಮ್ಮ ಗೃಹ ಕಚೇರಿಯ ದಿಕ್ಕು ಕೂಡ ಮುಖ್ಯವಾಗುತ್ತದೆ. ನೀವು ನಿರ್ವಹಿಸುತ್ತಿರುವ ಉದ್ಯೋಗದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಕಾನೂನು, ಮಾರಾಟ, ಆಸ್ತಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರೆ ದಕ್ಷಿಣ ದಿಕ್ಕು ನಿಮಗೆ ಸೂಕ್ತ. ಮತ್ತೊಂದೆಡೆ ಪಶ್ಚಿಮ ದಿಕ್ಕು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ವಿನ್ಯಾಸ, ಪತ್ರಿಕೋದ್ಯಮ ಮುಂತಾದ ಕ್ಷೇತ್ರದಲ್ಲಿರುವವರು ಈ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಹಣಕಾಸು, ಬ್ಯಾಂಕಿಂಗ್, ವಿಮೆ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮ ಕಚೇರಿಯನ್ನು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಸ್ಥಾಪಿಸಬಹುದು. ಸಾಮಾಜಿಕ ಕೆಲಸ, ಆಡಳಿತ ಮತ್ತು ಮಾರ್ಕೆಟಿಂಗ್‌ ಉದ್ಯೋಗದಲ್ಲಿರುವವರಿಗೆ ಪೂರ್ವ ದಿಕ್ಕು ಉತ್ತಮ ಆಯ್ಕೆ.

ಕೋಣೆಯ ಬಣ್ಣ

ಬಣ್ಣಗಳು ಮೆದುಳಿನ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ನೀವು ಹೋಮ್‌ ಆಫೀಸ್‌ಗೆ ಕೆನೆ, ಬೀಜ್ ಮತ್ತು ಬಿಳಿಯಂತಹ ಲೈಟ್‌ ಬಣ್ಣ ಬಳಿಯಿರಿ. ಅಲ್ಲದೆ ನೀಲಿ, ಹಳದಿ ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಹಸುರು ಮತ್ತು ಚಿನ್ನದ ಬಣ್ಣ ಮನಸ್ಸನ್ನು ಸಮತೋಲನದಲ್ಲಿಡಲು ಮತ್ತು ಸಂಪತ್ತನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಕಪ್ಪು ಬಣ್ಣದಂತಹ ಗಾಢ ಬಣ್ಣಗಳನ್ನು ಯಾವುದೇ ಕಾರಣಕ್ಕೂ ಬಳಿಯಬೇಡಿ.

ಮೇಜು ಯಾವ ಕಡೆಗಿರಬೇಕು?

ಎಲ್ಲರಿಗೂ ಕಚೇರಿಯ ಕೆಲಸ ನಿರ್ವಹಿಸಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಇರುವುದಿಲ್ಲ. ಅದಕ್ಕಾಗಿ ಬೆಡ್‌ ರೂಮ್‌ ಅಥವಾ ಲಿವಿಂಗ್ ರೂಮ್‌ನಲ್ಲಿಯೇ ಟೇಬಲ್ ಮತ್ತು ಕುರ್ಚಿ ಅಳವಡಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಈಶಾನ್ಯಕ್ಕೆ ಮುಖ ಮಾಡಿ ಕೆಲಸ ನಿರ್ವಹಿಸುವಂತೆ ಡೆಸ್ಕ್ ಅನ್ನು ಅಣಿಗೊಳಿಸಿ. ಇದರಿಂದ ಸೂರ್ಯನ ಬೆಳಕು ಸರಾಗವಾಗಿ ಒಳಗೆ ಹರಿದು ಬಂದು ನಿಮ್ಮನ್ನು ಕ್ರಿಯಾಶೀಲವಾಗಿಡಲಿದೆ. ಅದೇ ರೀತಿ ಅತ್ಯುತ್ತಮ ಗುಣಮಟ್ಟದ ಕುರ್ಚಿಯನ್ನೇ ಬಳಸಿ. ಕದಲಿಸುವಾಗ ಕಿರ್‌ ಎಂದು ಶಬ್ದ ಹೊರಡಿಸುವ ಚೇರ್‌ ಬಳಸಬೇಡಿ. ಆರೋಗ್ಯದ ದೃಷ್ಟಿಯಿಂದಲೂ ಗುಣಮಟ್ಟದ ಚೇರ್‌ ಬಳಸುವುದು ಮುಖ್ಯ. ಬೆನ್ನು, ಸೋಂಟ, ಭುಜದ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳಿ.

ಇವನ್ನೂ ಗಮನಿಸಿ

ಚೇರ್‌, ಡೆಸ್ಕ್‌ಗಳ ಸ್ಥಾನಗಳ ಜತೆಗೆ ಇನ್ನೂ ಕೆಲವು ಮುಖ್ಯ ವಿಚಾರಗಳನ್ನು ನೀವು ಗಮನಿಸಬೇಕು. ನಿಮ್ಮ ಗೃಹ ಕಚೇರಿ ಯಾವತ್ತೂ ಸ್ವಚ್ಛವಾಗಿರಬೇಕು ಮತ್ತು ಗೊಂದಲ ಮುಕ್ತವಾಗಿರಬೇಕು. ಪ್ರಮುಖ ದಾಖಲೆಗಳನ್ನು ಇಡಲು ಮತ್ತು ಅನಗತ್ಯ ಕಾಗದ, ತ್ಯಾಜ್ಯಗಳನ್ನು ಸಂಗ್ರಹಿಸಲು ಡಸ್ಟ್‌ ಬಿನ್‌ ಬಳಸಿ. ಎಲ್ಲ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಸಕಾರಾತ್ಮಕ ಶಕ್ತಿಗಾಗಿ ಈಶಾನ್ಯದಲ್ಲಿ ನೀರಿನ ಜಗ್ ಇರಿಸುವುದು ಅವಶ್ಯ. ಅಂತಾರಾಷ್ಟ್ರೀಯ ಕೆಲಸದ ಅವಕಾಶಗಳಿಗಾಗಿ ನಿಮ್ಮ ಕೆಲಸದ ಮೇಜಿನ ವಾಯುವ್ಯ ಭಾಗದಲ್ಲಿ ಗ್ಲೋಬ್ ಇರಿಸಬಹುದು. ಉತ್ಪಾದಕತೆಯ ಹೆಚ್ಚಳಕ್ಕಾಗಿ ಆಗ್ನೇಯದಲ್ಲಿ ದೀಪ ಇರಿಸಿ.

ಇದನ್ನೂ ಓದಿ: Vastu Tips: ಸುಖ, ಸಮೃದ್ಧಿ ಹೆಚ್ಚಲು ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ದೇಶ

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

VISTARANEWS.COM


on

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಚುರುಮುರಿ (ಝಲ್ಮುರಿ) ವ್ಯಾಪಾರ ಮಾಡುವ ವಿಕ್ರಮ್ ಶಾ ಅವರ ಬದುಕಿನಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದೆ. ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಅಚಾನಕ್ಕಾಗಿ ವಿಕ್ರಮ್ ಅವರ ಪುಟ್ಟ ಅಂಗಡಿಯ ಮುಂದೆ ಬಂದು ನಿಂತಿದ್ದರು. ದೇಶದ ಪ್ರಧಾನಿಯೇ ತಮ್ಮ ಅಂಗಡಿಗೆ ಬಂದಿದ್ದನ್ನು ಕಂಡು ವಿಕ್ರಮ್ ಮೊದಲು ಗಾಬರಿಯಾದರೂ, ಮೋದಿ ಅವರು ಅತ್ಯಂತ ಸರಳವಾಗಿ ಮಾತುಕತೆ ನಡೆಸಿ ವಿಕ್ರಮ್ ಕೈಯಾರೆ ಸಿದ್ಧಪಡಿಸಿದ ಚುರುಮುರಿಯನ್ನು ಇಷ್ಟಪಟ್ಟು ಸವಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೇವಲ ವಿಕ್ರಮ್ ಕೊಟ್ಟ ತಿಂಡಿ ತಿಂದಿದ್ದಲ್ಲದೇ ಅವರ ಕುಟುಂಬ ಮತ್ತು ಜೀವನದ ಬಗ್ಗೆಯೂ ವಿಚಾರಿಸಿದರು. ಬಡತನದ ಕಾರಣ 9ನೇ ತರಗತಿಗೆ ಓದು ಬಿಟ್ಟಿದ್ದ ವಿಕ್ರಮ್, ಪ್ರಧಾನಿಯವರ ಆತ್ಮೀಯತೆಗೆ ಮನಸೋತರು. ತಿಂಡಿ ತಿಂದ ನಂತರ ಮೋದಿ ಅವರು ಹಠ ಹಿಡಿದು ಹಣ ಪಾವತಿಸಿ ವಿಕ್ರಮ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡರು. ಪ್ರಧಾನಿಯವರ ಈ ಸರಳತೆಯನ್ನು ಕಂಡು ಅಲ್ಲಿದ್ದ ಜನಸಮೂಹ ಚಪ್ಪಾಳೆ ತಟ್ಟಿ ಸಂಭ್ರಮಿಸಿತು.

ಆದರೆ, ಈ ಇಡೀ ಘಟನೆಯಲ್ಲಿ ವಿಕ್ರಮ್ ಶಾ ಅವರಿಗೆ ಒಂದು ಸಣ್ಣ ವಿಷಾದ ಉಳಿದುಬಿಟ್ಟಿದೆ. ಪ್ರಧಾನಿ ತಮ್ಮ ಮುಂದೆಯೇ ಅಷ್ಟು ಹೊತ್ತು ನಿಂತಿದ್ದರೂ, ಆತಂಕದ ನಡುವೆ ಅವರಿಂದ ಒಂದು ಹಸ್ತಾಕ್ಷರ (Autograph) ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. “ಒಂದು ವೇಳೆ ನಾನು ಅವರ ಸಹಿ ಕೇಳಿದ್ದರೆ ಅದು ನನ್ನ ಜೀವನದ ದೊಡ್ಡ ಆಸ್ತಿಯಾಗಿರುತ್ತಿತ್ತು” ಎಂದು ವಿಕ್ರಮ್ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ದೇಶದ ಪ್ರಧಾನಿ ತಮ್ಮ ಅಂಗಡಿಗೆ ಬಂದು ಚುರುಮುರಿ ತಿಂದ ಆ ಕ್ಷಣಗಳು ಮಾತ್ರ ವಿಕ್ರಮ್ ಅವರ ಬದುಕಿನ ಸುವರ್ಣ ನೆನಪಾಗಿ ಉಳಿದಿವೆ.

Continue Reading

ಬೆಂಗಳೂರು

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

ಐದು ವರ್ಷದಿಂದ ಹೊಟ್ಟೆಯಲ್ಲೇ ಇದ್ದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ

VISTARANEWS.COM


on

Doctors at Fortis Hospital remove fish bone from man's stomach for 5 years

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Continue Reading

ಬೆಂಗಳೂರು

Breast cancer: ಬೈಕಥಾನ್‌ ಮೂಲಕ ಗಲ್ಲಿ ಗಲ್ಲಿಯಲ್ಲೂ ಸ್ತನ ಕ್ಯಾನ್ಸರ್‌ ಜಾಗೃತಿ ಮೂಡಿಸಿದ ಬೈಕರ್ಸ್‌ಗಳು

Breast cancer : ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಬೈಕಥಾನ್‌ ಆಯೋಜನೆ ಮಾಡಲಾಗಿತ್ತು.

VISTARANEWS.COM


on

Breast Cancer Awareness Month celebrated through bikethon

ಬೆಂಗಳೂರು: ಸ್ತನಕ್ಯಾನ್ಸರ್‌ (Breast cancer) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಪಿಂಕ್‌ ವುಮೆನ್ಸ್‌ ಶೀರ್ಷಿಕೆಯಡಿ ಬೈಕಥಾನ್‌ ಆಯೋಜಿಸಿತ್ತು. ಸ್ತನಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ನಡೆದ ಈ ಬೈಕಥಾನ್‌ ಕೆ.ಆರ್‌. ರಸ್ತೆಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಿಂದ ಸೋಮವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡು, ಎಂ.ಜಿ. ರಸ್ತೆ, ಟ್ರಿನಿಟಿ ಸರ್ಕಲ್‌, ವಿಧಾನಸೌಧದ ಮುಂಭಾಗದಿಂದ ಹಾದು 10 ಕಿಲೋಮೀಟರ್ ದೂರದವರೆಗೆ ಸಾಗಿತು.

Breast Cancer Awareness Month celebrated through bikethon

180ಕ್ಕೂ ಹೆಚ್ಚು ಮಹಿಳಾ ಬೈಕರ್ಸ್‌ಗಳು ಈ ಬೈಕಥಾನ್‌ನಲ್ಲಿ ಪಾಲ್ಗೊಂಡು, ಸ್ತನಕ್ಯಾನ್ಸರ್‌ನ ಬಗ್ಗೆ ಹಾಗೂ ಆರಂಭಿಕ ತಪಾಸಣೆಗೆ ಆದ್ಯತೆ ನೀಡುವ ಕುರಿತು ಜಾಗೃತಿ ಮೂಡಿಸಿದರು. ಇದಷ್ಟೇ ಅಲ್ಲದೆ, ಬೈಕಥಾನ್‌ಗೂ ಮುನ್ನ, ಜುಂಬಾ ಸೆಷನ್‌, ಮೈಕಲ್‌ ಜಾಕ್ಸನ್‌ ಅವರ “ಡೇಂಜರಸ್‌” ಪ್ರೇರಿತಗೊಂಡ ಸ್ಟೆಪ್ಸ್‌ ಹಾಕುವ ಮೂಲಕ ಸ್ತನ ಕ್ಯಾನ್ಸರ್‌ ಆರಂಭಿಕ ಪತ್ತೆಯ ಬಗ್ಗೆ “ಬೀಟ್ ಇಟ್” ಶೀರ್ಷಿಕೆಯ ಫಲಕಗಳನ್ನು ಹಿಡಿದು ವಿಭಿನ್ನವಾಗಿ ಜಾಗೃತಿ ಮೂಡಿಸಿದರು.

ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಮೆಡಿಕಲ್‌ ಆಂಕೊಲಾಜಿಸ್ಟ್ ಡಾ. ರೋಶನಿ ದಾಸ್‌ಗುಪ್ತ, ಸರ್ಜಿಕಲ್ ಆಂಕೊಲಾಜಿಸ್ಟ್ ಡಾ ಮಹೇಶ್ ಬಂಡೇಮೆಗಲ್ ಈ ಬೈಕಥಾನ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮನೀಶಾ ಕುಮಾರ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನಕ್ಯಾನ್ಸರ್‌ ಕಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಆರಂಭದಲ್ಲಿಯೇ ಈ ಕ್ಯಾನ್ಸರ್‌ನನ್ನು ಪತ್ತೆ ಹಚ್ಚಿದರೆ ಸುಲಭವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ನಾವಷ್ಟೇ ಜಾಗೃತರಾದೆ ಸಾಲದು, ನಮ್ಮ ಸುತ್ತಮುತ್ತ ಹಾಗೂ ಗ್ರಾಮೀಣ ಭಾಗದ ಮಹಿಳೆಯರಿಗೂ ಕೂಡ ಈ ಬಗ್ಗೆ ಅರಿವು ಮೂಡಿಸಬೇಕು. ಆಗಷ್ಟೇ ಎಲ್ಲರಿಗೂ ಸ್ತನಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಲಿದೆ. ಮಹಿಳಾ ಬೈಕರ್ಸ್‌ಗಳು ವಿಶೇಷವಾಗಿ ಬೈಕ್‌ ಸವಾರಿ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿದ್ದು ಪ್ರಶಂಸನೀಯ ಎಂದರು.

ಮೆಡಿಕಲ್‌ ಆಂಕೊಲಾಜಿಸ್ಟ್ ಡಾ ರೋಶನಿ ದಾಸ್‌ಗುಪ್ತ ಮಾತನಾಡಿ, ಸ್ತನಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಿದಷ್ಟೂ ಈ ಬಗ್ಗೆ ಭಯಗೊಳ್ಳುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಜನರು ಈ ಕ್ಯಾನ್ಸರ್‌ನ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಈ ರೋಗದಿಂದ ಮುಕ್ತಿಗೊಂಡು ಎಂದಿನಂತೆ ಜೀವನ ನಡೆಸಬಹುದು, ಹೀಗಾಗಿ ಜನರು ಈ ಬಗ್ಗೆ ಹೆಚ್ಚು ಜಾಗೃತರಾಗುವುದು ಒಳಿತು ಎಂದು ಸಲಹೆ ನೀಡಿದರು.

ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಮಹೇಶ್ ಬಂಡೇಮೆಗಲ್ ಮಾತನಾಡಿ, “ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಂದು ಪಿಂಕ್ ಮಹಿಳಾ ಬೈಕ್‌ಥಾನ್ 2024 ನಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಇದರಿಂದಲಾದರೂ ಮಹಿಳೆಯರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದರು.

Continue Reading

ಬೆಂಗಳೂರು

Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Aplastic anemia : ಆಫ್ರಿಕಾ ಮೂಲದ ಬಾಲಕ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ. ಆತನಿಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದೆ.

VISTARANEWS.COM


on

African boy successfully undergoes surgery for rare aplastic anemia
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿದ್ದ ಕಾರಣ ಅತಿ ವಿರಳ ಕಾಯಿಲೆಯಾದ ಅಪ್ಲ್ಯಾಸ್ಟಿಕ್ ರಕ್ತ ಹೀನತೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನಿಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ (Aplastic anemia) ನೀಡಲಾಗಿದೆ.

ಫೋರ್ಟಿಸ್ ಆಸ್ಪತ್ರೆಯ ಮೆಡಿಕಲ್‌ ಮತ್ತು ಹೆಮಟೋ ಆಂಕೊಲಾಜಿಯ ಹಿರಿಯ ನಿರ್ದೇಶಕಿ ಡಾ. ನೀತಿ ರೈಜಾದಾ, ಹೆಮಟೋ ಆಂಕೊಲಾಜಿ ಸಮಾಲೋಚಕ ಡಾ ನಿಶಿತ್ ಓಜ್ಹಾ, ಪೀಡಿಯಾಟ್ರಿಕ್ ಹೆಮಟೋ ಆಂಕೊಲಾಜಿಯ ಸಲಹೆಗಾರರಾದ ಡಾ ತನುಶ್ರೀ ಪಾಲ್ ಅವರ ವೈದ್ಯ ತಂಡ ಈ ಬಾಲಕನಿಗೆ ಸಮಯೋಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಾಲಕನ ಜೀವ ಉಳಿಸಲಾಗಿದೆ.

ಈ ಕುರಿತು ಮಾತನಾಡಿದ ಡಾ. ನೀತಿ ರೈಜಾದಾ, ಆಫ್ರೀಕಾ ಮೂಲದ 16 ವರ್ಷದ ಮೈಕೆಲ್ ಎಂಬಾತನಿಗೆ ಕಳೆದ ಎರಡು ತಿಂಗಳಿನಿಂದ ತೀವ್ರವಾದ ಜ್ವರ, ಆಯಾಸ, ದೌರ್ಬಲ್ಯಗಳಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲದೆ, ಆತನ ಬಲ ಕಿವಿಯಿಂದ ರಕ್ತಸ್ತ್ರಾವವಾಗಲು ಪ್ರಾರಂಭಗೊಂಡಿತ್ತು. ಇದರಿಂದ ಭಯಭೀತಗೊಂಡ ಅವರ ಕುಟುಂಬ ಆಫ್ರಿಕಾದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ತೋರಿಸಿದರೂ, ಬಾಲಕನ ಆರೋಗ್ಯ ಸಮಸ್ಯೆ ಏನೆಂದು ತಿಳಿಯಲಿಲ್ಲ. ಹೀಗಾಗಿ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು.

African boy successfully undergoes surgery for rare aplastic anemia

ಬಾಲಕನ ಸಂಪೂರ್ಣ ತಪಾಸಣೆ ಬಳಿಕ, ಆ ಬಾಲಕನಿಗೆ ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆ ಆಗಿರುವುದು ತಿಳಿದುಬಂತು. ಇದು ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾದ ಕಾರಣ ಆ ಬಾಲಕ ರಕ್ತ ಹೀನತೆಗೆ ಒಳಗಾಗಿದ್ದ. ಹೀಗಾಗಿ ಆತನಿಗೆ ಹ್ಯಾಪ್ಲೋಡೆಂಟಿಕಲ್‌ ಸ್ಟೆಮ್‌ ಸೆಲ್‌ ಕಸಿ ಮಾಡುವ ಅವಶ್ಯಕತೆ ಅನಿವಾರ್ಯವಾಗಿತ್ತು. ಆದರೆ, ಬಾಲಕನ ರಕ್ತದ ಗುಂಪಿಗೆ ಹೊಂದುವಂತೆ ಸ್ಟೆಮ್‌ಸೆಲ್‌ ಸಿಗದೇ ಸಮಸ್ಯೆ ಎದುರಾಗಿತ್ತು.

ಈ ಮಧ್ಯೆ ಬಾಲಕನ ಹಿರಿಯ ಸಹೋದರಿಯೇ ತನ್ನ ತಮ್ಮನಿಗೆ ಹ್ಯಾಪ್ಲೊಂಡೆಂಟಿಕಲ್‌ ದಾನ ಮಾಡಲು ಮುಂದಾದರು. ಆದರೆ, ಬಾಲಕನಿಗೆ ಬಲಕಿವಿ ಸೋಂಕಿನಿಂದ ಸೋರುತ್ತಿದ್ದ ಕಾರಣ, ಮೊದಲು ಕಿವಿ ಶಸ್ತ್ರಚಿಕಿತ್ಸೆ ಮುಂದಾಗಬೇಕಾಯಿತು. ಬಾಲಕನ ಬಲ ಕಾರ್ಟಿಕಲ್‌ ಮಾಸ್ಟೊಡೆಕ್ಟಮಿ (ಕಿವಿ ಸುತ್ತ ಇರುವ ಸೋಂಕಿನ ಅಂಗಾಂಶ) ತೆಗೆದು ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದಾದ ಬಳಿಕ ಬಾಲಕನಿಗೆ ಹ್ಯಾಪ್ಲೋಡೆಂಟಿಕಲ್‌ ಸ್ಟೆಮ್‌ ಸೆಲ್‌ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೀಗ ಬಾಲಕ ಗುಣಮುಖರಾಗುತ್ತಿದ್ದಾನೆ ಎಂದು ವಿವರಿಸಿದರು.

Continue Reading
Advertisement
Latest5 hours ago

ಪಶ್ಚಿಮ ಬಂಗಾಳದಲ್ಲಿ ಕೇಸರಿ ಪರ್ವ: ಯಾರಾಗಲಿದ್ದಾರೆ ʼಸಿಎಂʼ?

Latest5 hours ago

ದಳಪತಿʼ ಪಟ್ಟಾಭಿಷೇಕಕ್ಕೆ ಕ್ಷಣಗಣನೆ : ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ

Latest1 day ago

ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದೇಕೆ ಮಮತಾ ಬ್ಯಾನರ್ಜಿ?

Latest1 day ago

ಬಿಜೆಪಿ ಬಂಗಾಳ ಗೆದ್ದಾಯ್ತು, ಸಿಎಂ ರೇಸ್‌ನಲ್ಲಿ ಯಾರು?

Latest1 day ago

ತಮಿಳುನಾಡು: ಬಹುಮತ ಪಡೆಯಲು ದಳಪತಿ ಮುಂದಿರುವ ತಂತ್ರಗಳೇನು?

Latest2 days ago

ಪಶ್ಚಿಮ ಬಂಗಾಳದಲ್ಲಿ ಕೇಸರಿ, ತಮಿಳುನಾಡಲ್ಲಿ ದಳಪತಿ, ಕೇರಳಂನಲ್ಲಿ ಕಾಂಗ್ರೆಸ್‌ ದರ್ಬಾರ್‌

Latest2 days ago

ಕೇರಳಂ: ಯುಡಿಎಫ್‌ ಗೆಲುವಿನ ಹಿಂದಿನ ಏಳು ರಣತಂತ್ರ!

Latest2 days ago

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

Latest2 days ago

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

Latest2 days ago

ದ್ರಾವಿಡ ನಾಡಲ್ಲಿ ʼದಳಪತಿʼ ಯುಗಾರಂಭ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌