Vitamin D | ನಮಗೇಕೆ ಅಗತ್ಯ ವಿಟಮಿನ್‌ ಡಿ? - Vistara News

ಆರೋಗ್ಯ

Vitamin D | ನಮಗೇಕೆ ಅಗತ್ಯ ವಿಟಮಿನ್‌ ಡಿ?

ವಿಟಮಿನ್‌ ಡಿ ಕೊರತೆ ಎಲ್ಲ ವಯೋಮಾನದವರನ್ನೂ ಬಾಧಿಸಬಹುದು. ಇದನ್ನು ಹೇಗೆ ಪಡೆಯಬಹುದು? ಇಲ್ಲಿದೆ ವಿಸ್ತೃತ ಮಾಹಿತಿ.

VISTARANEWS.COM


on

Vitamin D
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ದೇಹಕ್ಕೆ ಬೇಕಾದ ಅಗತ್ಯ ಜೀವಸತ್ವಗಳಲ್ಲಿ ಒಂದು ವಿಟಮಿನ್‌ ಡಿ. ದೇಹಕ್ಕೆ ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ ಹೀರಲು ಸಾಧ್ಯವಾಗುವುದು ಸೂಕ್ತ ಪ್ರಮಾಣದಲ್ಲಿ ವಿಟಮಿನ್‌ ಡಿ ದಾಸ್ತಾನು ಇದ್ದರೆ ಮಾತ್ರ. ಹಾಗಾಗಿಯೇ ಮೂಳೆಗಳು ಶಕ್ತಿಯುತವಾಗಿರಲು, ಸೋಂಕುಗಳು ಹಾಗೂ ಉರಿಯೂತ ಬಾಧಿಸದಿರಲು ಡಿ ಜೀವಸತ್ವ ಪ್ರಮುಖವಾಗಿ ಬೇಕು.

Vitamin D

ದೇಹಕ್ಕೆ ಬೇಕಾಗಿರುವುದು ಹೇಗೆ ದೊರೆಯುತ್ತದೆ ಮತ್ತು ದೊರೆಯದಿದ್ದರೆ ಏನಾಗುತ್ತದೆ ಎಂಬುದೀಗ ಪ್ರಶ್ನೆ. ವಿಟಮಿನ್‌ ಡಿ ಕೊರತೆ ಎಲ್ಲಾ ವಯೋಮಾನದವರನ್ನೂ ಬಾಧಿಸಬಹುದು. ಕಾರಣ, ಡಿ ಜೀವಸತ್ವ ದೊರೆಯುವ ಮೂಲಗಳ ಬಗ್ಗೆ ಇರುವ ಅರಿವಿನ ಕೊರತೆ. ಸೂರ್ಯನ ಬಿಸಿಲಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್‌ ಡಿ ದೊರೆಯುತ್ತದೆ, ನಿಜ. ಆದರೆ ದಿನದಲ್ಲಿ ಅದಷ್ಟು ಹೊತ್ತು ನಮ್ಮನ್ನು ನಾವು ಬಿಸಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಇಡೀ ದಿನ ಒಳಾಂಗಣದಲ್ಲೇ ವ್ಯವಹರಿಸಿ, ಮನೆಯಿಂದ ಹೊರಬಿದ್ದ ಕೂಡಲೆ ಬಸ್ಸು, ಕಾರು, ಆಟೋ ಹತ್ತಿಬಿಟ್ಟರೆ ಸೂರ್ಯನ ಬಿಸಿಲು ಮೈಗೆ ತಾಗುವುದಾದರೂ ಹೇಗೆ?

Vitamin D

ಆಹಾರಗಳೂ ಇವೆ
ವಿಟಮಿನ್‌ ಡಿ ನೀಡುವ ಆಹಾರಗಳೂ ಬೇಕಷ್ಟಿವೆ. ಮೀನು ಹಾಗೂ ಮೀನೆಣ್ಣೆಯ ವಸ್ತುಗಳಲ್ಲಿ ಡಿ ಜೀವಸತ್ವ ಸಮೃದ್ಧವಾಗಿದೆ. ಉತ್ತಮ ಕೊಬ್ಬಿನಾಂಶವಿರುವ ಟ್ರೌಟ್‌, ಸಾಲ್ಮನ್‌, ಟ್ಯೂನ್‌ ಮತ್ತು ಮ್ಯಾಕೆರೆಲ್‌ನಂಥ ಮೀನುಗಳಲ್ಲಿ ವಿಟಮಿನ್‌ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಇದಲ್ಲದೆ, ಮೀನೆಣ್ಣೆಯ ಮೂಲಕವೂ ನೈಸರ್ಗಿಕವಾಗಿ ವಿಟಮಿನ್‌ ಡಿ ಪಡೆಯಲು ಸಾಧ್ಯವಿದೆ.

Vitamin D

ಮೊಟ್ಟೆ
ಇದರ ಬಿಳಿ ಭಾಗದಲ್ಲಿ ಪ್ರೊಟೀನ್‌ ಸಾಂದ್ರವಾಗಿ ಇರುವಂತೆ, ಹಳದಿ ಭಾಗದಲ್ಲಿ ಕೊಬ್ಬು, ಖನಿಜಗಳು ಮತ್ತು ಡಿ, ಎ ಮತ್ತು ಬಿ ವಿಟಮಿನ್‌ಗಳು ದೊರೆಯುತ್ತವೆ.

Vitamin D

ಅಣಬೆ
ಸೂರ್ಯನ ಬೆಳಕಿಗೆ ಒಡ್ಡಿದಾಗ ವಿಟಮಿನ್‌ ಡಿ ಸಂಶ್ಲೇಷಿಸಿಕೊಳ್ಳುವ ಸಾಮರ್ಥ್ಯವನ್ನು ಅಣಬೆಗಳು ಸಹ ಹೊಂದಿವೆ. ನೈಸರ್ಗಿಕವಾಗಿ ಕಾಡುಗಳಲ್ಲಿ ಬೆಳೆದಿರುವ ಅಣಬೆಗಳಲ್ಲಿ ಡಿ ಜೀವಸತ್ವ ಹೆಚ್ಚು ಸಾಂದ್ರವಾಗಿರುತ್ತದೆ. ಆದರೆ ನೈಸರ್ಗಿಕವಾಗಿ ಬೆಳೆಯುವ ಅಣಬೆಗಳು ದುರ್ಲಭವಾಗಿರುವುದರಿಂದ, ಕೃಷಿಯ ಮೂಲಕ ಬೆಳೆಸಿರುವ ಅಣಬೆಗಳ ಮೂಲಕವೂ ಡಿ ಜೀವಸತ್ವವನ್ನು ಪಡೆಯಬಹುದು.

Vitamin D

ಡೇರಿ ಉತ್ಪನ್ನಗಳು
ಹಸುವಿನ ಹಾಲು ಸಹ ಡಿ ಜೀವಸತ್ವದ ಸ್ವಾಭಾವಿಕ ಮೂಲ. ಹಾಲು, ಮೊಸರು, ಬೆಣ್ಣೆ, ಚೀಸ್‌ಗಳ ಮೂಲಕ ವಿಟಮಿನ್‌ ಡಿ ಪಡೆಯಬಹುದು. ಮಾತ್ರವಲ್ಲ, ಹಾಲಿಗೆ ಪರ್ಯಾಯವಾಗಿ ಬಳಸುವ ಸೋಯಾ ಹಾಲು, ಅಕ್ಕಿ ಹಾಲು, ತೆಂಗಿನ ಹಾಲು, ಬಾದಾಮಿ ಹಾಲುಗಳಲ್ಲೂ ವಿಟಮಿನ್‌ ಡಿ ಸಾಕಷ್ಟು ಅಡಗಿದೆ.

ಕೊರತೆಯಾದರೆ ಏನಾಗುತ್ತದೆ?
ವಿಟಮಿನ್‌ ಡಿ ಕೊರತೆ ಇದೆ ಎಂಬುದು ಹೇಗೆ ತಿಳಿಯುತ್ತದೆ? ಕೆಲವು ನೋವುಗಳು ಮತ್ತೆ ಮತ್ತೆ ಕಾಡಬಹುದು. ನಿಮ್ಮದೇ ಔಷಧಿಯಲ್ಲಿ ಉಪಶಮನಗೊಂಡರೂ ತಿರುಗಿ ಬರಬಹುದು. ಅಂದರೆ, ಸ್ನಾಯು ನೋವು ಅಥವಾ ಸ್ನಾಯು ಸೆಳೆತಗಳು ಕೆಲಕಾಲ ಬಾಧಿಸಿ ಕಡಿಮೆಯಾದಂತೆನಿಸಿ, ಮತ್ತೆಮತ್ತೆ ಬರಬಹುದು. ಆರ್ಥರೈಟಿಸ್‌ನಂತೆ ಮೂಳೆಗಳಲ್ಲಿ ನೋವು ಕಾಣಬಹುದು. ಮೂಳೆ ಮುರಿತವೂ ಸಂಭವಿಸಬಹುದು. ಪದೇಪದೆ ಸೋಂಕುಗಳು ಬಾಧಿಸುತ್ತಿದ್ದರೆ ವಿಟಮಿನ್‌ ಡಿ ಕೊರತೆಯೂ ಕಾರಣವಿರಬಹುದು. ಊಟ ಮಾಡಿದ್ದರೂ, ನಿದ್ದೆ ಸಾಕಷ್ಟು ಮಾಡಿದ್ದರೂ ಸದಾ ಆಯಾಸ ಕಾಡುತ್ತಲೇ ಎಂದಾದರೆ ಡಿ ಜೀವಸತ್ವ ಕಡಿಮೆಯಿರಬಹುದು. ಮೂಡ್‌ ಏರುಪೇರಾಗುವುದು ಸಹ ವಿಟಮಿನ್‌ ಡಿ ಕೊರತೆಯ ಲಕ್ಷಣಗಳಲ್ಲಿ ಒಂದು.

ಇಂಥ ಸಮಸ್ಯೆಗಳು ಕಂಡರೆ ಅಂಗಡಿಗಳಲ್ಲಿ ದೊರೆಯುವ ವಿಟಮಿನ್‌ ಡಿ ಪೂರಕ ಮಾತ್ರೆಗಳನ್ನು ತಂದು ʻಗುಳುಂʼ ಮಾಡುವುದಲ್ಲ! ಈ ಲಕ್ಷಣಗಳು ಬೇರಾವ ಸಮಸ್ಯೆಯ ಸೂಚಕವಲ್ಲ ಎಂಬುದನ್ನು ಮೊದಲು ವೈದ್ಯರು ದೃಢಪಡಿಸಬೇಕು. ವಿಟಮಿನ್‌ ಡಿ ಮಟ್ಟ ಎಷ್ಟಿದೆ ಎಂಬುದು ಪತ್ತೆಯಾದ ನಂತರ, ಮುಂದೆ ಮಾಡಬೇಕಾದ್ದೇನು ಎಂಬುದನ್ನು ವೈದ್ಯರೇ ಸೂಚಿಸುತ್ತಾರೆ. ಆದರೆ ಮದ್ದು ಮಾಡುವುದಕ್ಕಿಂತ ಮೊದಲಿಗೆ ತಡೆಯವುದು ಜಾಣತನವಾದ್ದರಿಂದ ನಮ್ಮ ಆಹಾರದಲ್ಲಿ ವಿಟಮಿನ್‌ ಡಿ ಸಮೃದ್ಧವಾಗಿ ಇರುವಂತೆ ಗಮನಿಸಿವುದು ಜಾಣತನವಲ್ಲವೇ?

ಇದನ್ನೂ ಓದಿ| Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

MDH, Everest Spices: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನಗಳನ್ನು ನೇಪಾಳ ನಿಷೇಧಿಸಿದೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

VISTARANEWS.COM


on

MDH, Everest Spices
Koo

ಕಾಠ್ಮಂಡುಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ನೇಪಾಳ ನಿಷೇಧಿಸಿದೆ. ಈ ಹಿಂದೆ ಇದೇ ಕಾರಣಕ್ಕೆ ಈ ಉತ್ಪನ್ನಗಳನ್ನು ಸಿಂಗಾಪುರ, ಹಾಂಕಾಂಗ್‌ ಮುಂತಾದೆಡೆ ಬ್ಯಾನ್‌ ಮಾಡಲಾಗಿತ್ತು. ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಎಥಿಲೀನ್ ಆಕ್ಸೈಡ್ (Ethylene Oxide) ಅಂಶ ಇದೆ ಎನ್ನುವ ದೂರು ಕೇಳಿ ಬಂದ ಕಾರಣಕ್ಕೆ ಈ ಉತ್ಪನ್ನಗಳ ಆಮದು, ಮಾರಾಟ ಮತ್ತು ಬಳಕೆಯನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ನಿರ್ದಿಷ್ಟ ಬ್ರ್ಯಾಂಡ್‌ಗಳ ಮಸಾಲೆಗಳಲ್ಲಿನ ರಾಸಾಯನಿಕಗಳ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

“ಹಾಂಗ್‌ಕಾಂಗ್ ಮತ್ತು ಸಿಂಗಾಪುರ್ ಈಗಾಗಲೇ ಈ ಉತ್ಪನ್ನಗಳಿಗೆ ನಿಷೇಧ ಹೇರಿವೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ನಾವು ಕೂಡ ಪರೀಕ್ಷೆ ನಡೆಸಲು ಮುಂದಾಗಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ. ಈ ಮಧ್ಯೆ ರಫ್ತಾಗುವ ಭಾರತೀಯ ಮಸಾಲೆಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸ್ಪೈಸ್ ಮಂಡಳಿ ಕ್ರಮ ಕೈಗೊಂಡಿದೆ. ಮಂಡಳಿ ಟೆಕ್ನೋ-ಸೈಂಟಿಫಿಕ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದಿದೆ. ಜತೆಗೆ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದೆ.

ಅಖಿಲ ಭಾರತ ಸಾಂಬಾರ ಪದಾರ್ಥಗಳ ರಫ್ತುದಾರರ ವೇದಿಕೆ ಮತ್ತು ಭಾರತೀಯ ಮಸಾಲೆ ಮತ್ತು ಆಹಾರ ಪದಾರ್ಥ ರಫ್ತುದಾರರ ಸಂಘದಂತಹ 130ಕ್ಕೂ ಹೆಚ್ಚು ಸಂಘಗಳೊಂದಿಗೆ ಭಾರತೀಯ ಸ್ಪೈಸ್ ಮಂಡಳಿ ಸಮಾಲೋಚನೆಯನ್ನೂ ನಡೆಸಿದೆ. ಮಂಡಳಿಯು ಎಲ್ಲ ರಫ್ತುದಾರರಿಗೆ ಎಥಿಲೀನ್ ಆಕ್ಸೈಡ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

Continue Reading

ಆರೋಗ್ಯ

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Health Tips in Kannada: ಹೊರಗಿನ ಉಷ್ಣತೆಯ ಜೊತೆಗೆ ದೇಹಕ್ಕೂ ನಾವು ಉಷ್ಣ ಪ್ರಕೃತಿಯ ಆಹಾರವನ್ನೇ ನೀಡಿದರೆ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ ನಿಜವಾದ ತಂಪು ಸಿಗುವುದಿಲ್ಲ. ದೇಹವನ್ನು ತಂಪಾಗಿರಿಸಬೇಕೆಂದರೆ, ನಾವು ಬೇಸಗೆಯಲ್ಲಿ ಕೆಲವು ಆಹಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ಸೇವಿಸಬೇಕು. ಬನ್ನಿ, ನಿಮ್ಮ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ್ದೇನು ಎಂಬುದನ್ನು ನೋಡೋಣ.

VISTARANEWS.COM


on

These foods are really what our body needs in summer
Koo

ಬೆಂಗಳೂರು: ಬೇಸಿಗೆಯ ಬಿಸಿಗೆ ದೇಹ ತಂಪಾಗಬೇಕು. ಆಗಷ್ಟೇ ಆರೋಗ್ಯ ಸರಿಯಾಗುತ್ತದೆ (Health Tips in Kannada). ಹೊರಗಿನ ಉಷ್ಣತೆಯ ಜೊತೆಗೆ ದೇಹಕ್ಕೂ ನಾವು ಉಷ್ಣ ಪ್ರಕೃತಿಯ ಆಹಾರವನ್ನೇ ನೀಡಿದರೆ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ ನಿಜವಾದ ತಂಪು ಸಿಗುವುದಿಲ್ಲ. ದೇಹವನ್ನು ತಂಪಾಗಿರಿಸಬೇಕೆಂದರೆ, ನಾವು ಬೇಸಗೆಯಲ್ಲಿ ಕೆಲವು ಆಹಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ಸೇವಿಸಬೇಕು. ಬನ್ನಿ, ನಿಮ್ಮ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ್ದೇನು ಎಂಬುದನ್ನು ನೋಡೋಣ.

ಹೆಚ್ಚು ನೀರು ಸೇವಿಸಿ

ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರು ಬೇಕು. ಬಾಯಾರಿದಾಗಲೆಲ್ಲ ದೇಹಕ್ಕೆ ನೀರು ಕೊಡಲೇಬೇಖು. ಬೇಸಿಗೆಯ ಧಗೆ ಬಾಯಾರುವುದೂ ಕೂಡಾ ಹೆಚ್ಚು. ಇಂಥ ಸಂದರ್ಭದಲ್ಲಿ ಸಕ್ಕರೆ ಹೆಚ್ಚಿರುವ ಜ್ಯೂಸ್‌ಗಳ ಮೊರೆ ಹೋಗುವ ಬದಲು ಹೆಚ್ಚಾಗಿ ನೀರನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ದಿನಕ್ಕೆ ಕಡಿಮೆಯೆಂದರೂ ಎಂಟರಿಂದ ಹತ್ತು ಗ್ಲಾಸ್‌ ನೀರನ್ನು ನಾವು ಸೇವಸಲೇಬೇಕು.

ನೀರಿನಂಶ ಹೆಚ್ಚಿರುವ ಹಣ್ಣು ಸೇವಿಸಿ

ಬೇಸಿಗೆಯಲ್ಲಿ ಹಣ್ಣು ತಂದು ಹಣ್ಣಿಗೆ ಒಂದಷ್ಟು ಸಕ್ಕರೆ ಸುರಿದು ಜ್ಯೂಸ್‌ ಮಾಡಿ ಕುಡಿಯುವ ಬದಲು ಹಣ್ಣನ್ನು ಹಾಗೆಯೇ ಸೇವಿಸಿ. ಅಥವಾ ಹಣ್ಣಿನ ರಸ ಹಿಂಡಿಯೂ ಸೇವಿಸಬಹುದು. ಆದರೆ, ಈ ಆಯ್ಕೆಯನ್ನು ಮಾಡುವಾಗ ರಸಭರಿತ, ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ, ಬೇಸಿಗೆ ಬಂದ ಕೂಡಲೇ ಮಾರುಕಟ್ಟೆಗೆ ಬರುವ ಕಲ್ಲಂಗಡಿ, ಖರ್ಬೂಜ, ಲಿಚಿ, ಮಾವು, ಹಲಸು, ನಿಂಬೆ ಮತ್ತಿತರ ಹಣ್ಣುಗಳು. ಜೊತೆಗೆ ಸೌತೆಕಾಯಿಯಂತಹ ತರಕಾರಿಗಳು. ಇವುಗಳಲ್ಲಿ ಹೆಚ್ಚು ನೀರಿನಂಶ ಇದ್ದು, ಇವು ದೇಹವನ್ನು ತಂಪಾಗಿರಿಸುತ್ತವೆ. ಜೊತೆಗೆ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುತ್ತವೆ.

ಇದನ್ನೂ ಓದಿ: Health Tips in Kannada: ಬೆಂಡೆಕಾಯಿ ನೀರನ್ನು ಕುಡಿಯೋದರಿಂದ ಏನೆಲ್ಲ ಲಾಭಗಳಿವೆ ತಿಳಿದುಕೊಳ್ಳಿ

ತಂಪಾಗಿರಿಸುವ ಮೂಲಿಕೆಗಳನ್ನು ಆಯ್ಕೆ ಮಾಡಿ

ದೇಹವನ್ನು ತಂಪಾಗಿರಿಸಲು, ಕೆಲವು ಮೂಲಿಕೆಗಳೂ ಸಹಾಯ ಮಾಡುತ್ತವೆ. ಉದಾಹರಣೆಗೆ ಪುದಿನ, ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು, ಬಡೇಸೋಂಪು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳಲ್ಲಿ ತಂಪುಕಾರಕ ಗುಣಗಳಿವೆ. ಇವುಗಳನ್ನು ಆಹಾರಗಳನ್ನು ಬಳಸಿ. ಚಹಾ ಮಾಡಿ ಕುಡಿಯಿರಿ. ಮಜ್ಜಿಗೆ ಅಥವಾ ಇತರ ತಂಪು ಪೇಯಗಳಿಗೆ ಹಾಕಿ.

ಮಸಾಲೆಯುಕ್ತ ಆಹಾರಗಳಿಂದ ದೂರವಿರಿ

ಮಸಾಲೆಯುಕ್ತ ಆಹಾರಗಳು ದೇಹವನ್ನು ಬಿಸಿಯಾಗಿಸುತ್ತವೆ. ಆದರೂ ನಿಮಗೆ ಇಂತಹ ಆಹಾರಗಳು ಬೇಕೆನಿಸಿದರೆ, ಕೊಂಚ ಕಡಿಮೆ ಮಸಾಲೆಯ ಆಹಾರಗಳನ್ನು ಬಳಸಿ. ಆದರೆ, ಖಾರವಾದ ತಿನಿಸುಗಳು ಅಥವಾ ಅತಿಯಾದ ಮಸಾಲೆ ಹಾಕಿದ ಊಟ ಬೇಸಿಗೆಯಲ್ಲಿ ಒಳ್ಳೆಯದಲ್ಲ.

ಎಲೆಕ್ಟ್ರೋಲೈಟ್‌ಯುಕ್ತ ಆಹಾರ ಸೇವಿಸಿ

ಎಲೆಕ್ಟ್ರೋಲೈಟ್‌ಗಳಾದ ಸೋಡಿಯಂ, ಪೊಟಾಶಿಯಂ, ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳಾದ, ಬಾಳೆಹಣ್ಣು, ಎಳನೀರು, ಸೊಪ್ಪು, ಮೊಸರು, ಮಜ್ಜಿಗೆ ಮತ್ತಿತರ ಆಹಾರಗಳನ್ನು ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶದ ಜೊತೆಗೆ ಶಕ್ತಿ ಸಾಮರ್ಥ್ಯವೂ ಹೆಚ್ಚುತ್ತದೆ.

ಆಲ್ಕೋಹಾಲ್‌, ಕೆಫೀನ್ ಕಡಿಮೆ ಮಾಡಿ

ಬೇಸಿಗೆಯಲ್ಲಿ ಕೆಫೀನ್‌ಯುಕ್ತ ಪೇಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಆಲ್ಕೋಹಾಲ್‌ ಬಿಟ್ಟರೆ ಒಳ್ಳೆಯದು. ನೀರು, ಹರ್ಬಲ್‌ ಚಹಾಗಳು, ಕಷಾಯ, ಹಣ್ಣಿನ ಪಾನಕಗಳು ಇತ್ಯಾದಿಗಳನ್ನು ಸೇವಿಸಿ. ರಾಗಿ ಅಂಬಲಿ, ಬಾರ್ಲಿ ನೀರು, ಬಾದಾಮಿ ಹಾಲು, ಮಜ್ಜಿಗೆ ನೀರು ಇತ್ಯಾದಿಗಳು ದೇಹವನ್ನು ತಂಪು ಮಾಡುತ್ತವೆ.

ಸಾಮಾನ್ಯ ಉಷ್ಣತೆಯ ಅಥವಾ ತಂಪಾದ ಆಹಾರ ಸೇವಿಸಿ

ಕೋಣೆಯ ಉಷ್ಣತೆಯ ಆಹಾರಗಳನ್ನು ಹೆಚ್ಚು ತಿನ್ನಿ. ಸಲಾಡ್‌, ತಂಬುಳಿ, ತಣ್ಣಗೆ ಮಾಡಿದ ಸೂಪ್‌ಗಳು, ಫ್ರುಟ್‌ ಸಲಾಡ್‌ಗಳು ಇತ್ಯಾದಿಗಳು ಒಳ್ಳೆಯದು. ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು, ಅಥವಾ ಹದ ಬಿಸಿಯ ಆಹಾರಗಳಾದರೆ ಸರಿ. ಬಿಸಿ ಬಿಸಿಯಾಗಿ ತಿನ್ನಬೇಕಾದ ಅಗತ್ಯವಿಲ್ಲ. ತಂಪಾದ ಆಹಾರವೆಂದರೆ, ಐಸ್‌ಕ್ರೀಂ ಅಲ್ಲ ಎಂಬುದು ನೆನಪಿರಲಿ!

Continue Reading

ಆರೋಗ್ಯ

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

World Hypertension Day: ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬಂದರೆ, ರಕ್ತದೊತ್ತಡವನ್ನು ತಪ್ಪದೇ ಪರೀಕ್ಷಿಸಿಕೊಳ್ಳಿ. ಜನರಲ್ಲಿ ಬಿಪಿ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಮೇ 17ರಂದು ಜಾಗತಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ.

VISTARANEWS.COM


on

World Hypertension Day Today is Global Blood Pressure Day
Koo

ಬೆಂಗಳೂರು: ಶೀತ, ಜ್ವರ, ಕೆಮ್ಮು ಮುಂತಾದ ಸೋಂಕು ರೋಗಗಳು ಇಂದಿಲ್ಲದಿದ್ದರೂ ನಾಳೆಗೆ ಬಂದುಬಿಡಬಹುದು. ಆದರೆ ಜೀವನಶೈಲಿಯಿಂದ ಬರುವ ರೋಗಗಳು (World Hypertension Day) ಹಾಗಲ್ಲ, ನಮಗೇ ತಿಳಿಯದಂತೆ ನಾವೆಂದೋ ಬಿತ್ತಿದ ಬೀಜ, ಆಳವಾದ ಬೇರುಗಳನ್ನು ಬಿಟ್ಟ ಮೇಲೆಯೇ ಮೊಳಕೆ ಕಾಣುವುದು. ಉದಾ, ರಕ್ತದೊತ್ತಡದಂಥ ಸಮಸ್ಯೆಯನ್ನೇ ಗಮನಿಸಿದರೆ, ಎಂದಿನಿಂದ ಪ್ರಾರಂಭವಾಯಿತು ಎನ್ನುವುದೇ ತಿಳಿಯುವುದಿಲ್ಲ. ಆದರೆ ದೀರ್ಘಕಾಲದಿಂದಲೇ ಒತ್ತಡದ ಬದುಕು, ವ್ಯಾಯಾಮ ರಹಿತ ಜೀವನ, ಅನಾರೋಗ್ಯಕರ ಆಹಾರ ಮುಂತಾದ ಕಾರಣಗಳು ಈ ಬೀಜಕ್ಕೆ ನೀರು, ಗೊಬ್ಬರ ಹಾಕುತ್ತಲೇ ಇರುತ್ತವೆ. ಇದರಿಂದಲೇ ಹೃದಯದ ಸಮಸ್ಯೆಗಳು ಹುಟ್ಟಿಕೊಳ್ಳುವುದು. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಮೇ ತಿಂಗಳ ಹದಿನೇಳನೇ ದಿನವನ್ನು ಜಾಗತಿಕ ರಕ್ತದೊತ್ತಡದ ದಿನವೆಂದು ಘೋಷಿಸಲಾಗಿದೆ. ರಕ್ತದೊತ್ತಡ ಅಥವಾ ಬಿಪಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬಿಪಿ ಎಂದರೆ?

ಬಿಪಿ ಏರಿಸಿಕೊಳ್ಳುವುದು ಎಂದು ಆಡು ಮಾತಿನಲ್ಲಿ ಹೇಳುವುದು ಸಾಮಾನ್ಯ. ಹಾಗೆಂದರೆ ಏನು? ರಕ್ತನಾಳಗಳಲ್ಲಿ ಪ್ರವಹಿಸುವ ರಕ್ತವು ನಿಗದಿತ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹರಿಯುತ್ತಿದ್ದರೆ ಅದನ್ನು ರಕ್ತದ ಏರೊತ್ತಡ ಅಥವಾ ಬಿಪಿ ಎಂದು ಕರೆಯಲಾಗುತ್ತದೆ. ಇಂದಿನ ಜೀವನಶೈಲಿಯಲ್ಲಿ ವಯಸ್ಸು, ಲಿಂಗ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಯಾರನ್ನೂ ಕಾಡಬಹುದಾದ ಸಮಸ್ಯೆಯಿದು. ಕೇವಲ ರಕ್ತದ ಏರೊತ್ತಡ ಎಂಬುದರಿಂದ ಆರಂಭವಾಗುವ ಸಮಸ್ಯೆಯು ಕ್ರಮೇಣ ಹೃದ್ರೋಗ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಮೊದಲಿಗೆ ತನ್ನ ಇರುವಿಕೆಯನ್ನು ಅಷ್ಟಾಗಿ ಪ್ರಕಟಿಸದ ಈ ಸಮಸ್ಯೆಯು, 180/120ರ ಆಜೂಬಾಜು ಬಿಪಿ ತಲುಪುತ್ತಿದ್ದಂತೆ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಸಾಮಾನ್ಯವಾಗಿ- ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಒಂದು ಅಂದಾಜಿನ ಪ್ರಕಾರ, ಸುಮಾರು ಶೇ. ೪೬ರಷ್ಟು ಮಂದಿಗೆ ತಮಗೆ ರಕ್ತದೊತ್ತಡ ಇರುವ ವಿಷಯವೇ ತಿಳಿದಿರುವುದಿಲ್ಲ. ಹಾಗಾಗಿ ಇಂಥ ಯಾವುದೇ ಲಕ್ಷಣಗಳು ಕಾಣುವವರೆಗೆ ಕಾಯದೆ, ನಿಯಮಮಿತವಾಗಿ ಬಿಪಿ ಪರೀಕ್ಷಿಸಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

ಕಡಿಮೆ ಮಾಡುವುದು ಹೇಗೆ?

ಇದನ್ನು ಸಂಪೂರ್ಣ ಹತೋಟಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ, ರಕ್ತದ ಏರೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಮೊದಲಿಗೆ ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ಉಪ್ಪು ಹೆಚ್ಚು ತಿನ್ನಬೇಡಿ. ಇದು ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಯಾವುದೇ ಸಂಸ್ಕರಿತ ಆಹಾರಗಳು ಬೇಡ. ಸಾಫ್ಟ್‌ ಡ್ರಿಂಕ್‌, ಚಿಪ್ಸ್‌, ಪ್ಯಾಕೆಟ್‌ ಅಥವಾ ಕ್ಯಾನ್ಡ್‌ ಆಹಾರಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುತ್ತದೆ. ಪ್ರಿಸರ್ವೇಟಿವ್‌ ಬಳಸಿದ ಬಹುತೇಕ ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚು. ಹಾಗಾಗಿ ತಾಜಾ ಆಹಾರಗಳು, ಸತ್ವಭರಿತ ಆಹಾರಗಳ ಸೇವನೆಯತ್ತ ಗಮನ ನೀಡಿ. ಆಹಾರದ ರುಚಿ ಹೆಚ್ಚಿಸುವುದಕ್ಕೆ ಉಪ್ಪು ಹೆಚ್ಚು ಉಪಯೋಗಿಸುವ ಬದಲು ಹರ್ಬ್‌ಗಳ ಬಳಕೆಯನ್ನು ಹೆಚ್ಚಿಸಿ.

ಎಂಥಾ ಕೊಬ್ಬು?

ನಿತ್ಯ ತಿನ್ನುವ ಕೊಬ್ಬಿನ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆಯೂ ಗಮನ ಅಗತ್ಯ. ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಆಹಾರಗಳ ಬದಲಿಗೆ ಆರೋಗ್ಯಕರ ಕೊಬ್ಬಿರುವ ಎಣ್ಣೆ ಬೀಜಗಳು, ಅವಕಾಡೊ ಮುಂತಾದವು ದೇಹಕ್ಕೆ ಹಿತವಾಗುತ್ತವೆ. ಬಳಸುವ ಎಣ್ಣೆಯ ಬಗ್ಗೆಯೂ ಸರಿಯಾದ ಅರಿವು ಅಗತ್ಯ. ಕರಿದ ತಿಂಡಿಗಳನ್ನು ದೂರ ಮಾಡಿದಷ್ಟೂ ಒಳ್ಳೆಯದು. ಬದಲಿಗೆ, ಋತುಮಾನಕ್ಕೆ ದೊರೆಯುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ವ್ಯಾಯಾಮ

ಹಾಗೆನ್ನುತ್ತಿದ್ದಂತೆ ಜಿಮ್‌ನಲ್ಲಿ ಬೆವರಿಳಿಸುವುದು, ಉಸಿರುಗಟ್ಟಿ ರಸ್ತೆ ಮೇಲೆ ಓಡುವವರೇ ನೆನಪಾಗಬಹುದು. ಇಂಥವೆಲ್ಲ ಮಾತ್ರವೇ ವ್ಯಾಯಾಮವಲ್ಲ. ನಡಿಗೆ, ಸೈಕಲ್‌ ಹೊಡೆಯುವುದು, ಈಜು, ನೃತ್ಯ, ಯಾವುದೇ ಆಟಗಳು, ಯೋಗ, ಏರೋಬಿಕ್ಸ್‌ ಮುಂತಾದ ಯಾವುದೇ ದೈಹಿಕ ಚಟುವಟಿಕೆಗಳು ವಾರದಲ್ಲಿ ಕನಿಷ್ಟ ೫ ದಿನವಾದರೂ ಇರಲಿ. ದೇಹದ ತೂಕ ಹೆಚ್ಚಾಗಿದ್ದರೆ, ಅದನ್ನು ಆದ್ಯತೆಯ ಮೇರೆಗೆ ಇಳಿಸಿಕೊಳ್ಳಿ.

ತಪಾಸಣೆ

ಕಾಲಕಾಲಕ್ಕೆ ವೈದ್ಯರಲ್ಲಿ ಹೋಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ನಿಯಂತ್ರಣಕ್ಕೆ ಔಷಧಿ ಅಗತ್ಯವಾಗಿದ್ದರೆ, ಅದನ್ನು ಮರೆಯಬೇಡಿ. ಧೂಮಪಾನ, ಆಲ್ಕೊಹಾಲ್‌ನಂಥ ಚಟಗಳಿದ್ದರೆ, ಅವುಗಳ ಹೊರತಾಗಿ ಬದುಕುವ ಮಾರ್ಗವಿದೆ ಎಂಬುದನ್ನು ತಿಳಿಯಿರಿ. ಮಾನಸಿನ ಒತ್ತಡ ದೂರ ಮಾಡಲು ಆರೋಗ್ಯಕರ ಮಾರ್ಗಗಳತ್ತ ಗಮನ ಹರಿಸಿ.

Continue Reading

ದೇಶ

ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ.

VISTARANEWS.COM


on

Shah Rukh Khan
Koo

ನವದೆಹಲಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ ಹೀರೊಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು (Celebrities) ನೂರಾರು ಉತ್ಪನ್ನಗಳ ಜಾಹೀರಾತುಗಳಲ್ಲಿ (Advertisements) ಅಭಿನಯಿಸುವ ಮೂಲಕ, ಆ ಉತ್ಪನ್ನಗಳನ್ನೂ ತಾವೇ ಬಳಸಿದ್ದೇವೆ ಎಂದು ಹೇಳುವ ಮೂಲಕ ಅಥವಾ ನಟಿಸುವ ಮೂಲಕ ಕೋಟ್ಯಂತರ ಜನರನ್ನು ಸೆಳೆಯುತ್ತಾರೆ. ಇನ್ನು, ಅಭಿಮಾನಿಗಳು, ಅನುಯಾಯಿಗಳು ಕೂಡ ನೆಚ್ಚಿನ ನಟ, ಕ್ರಿಕೆಟಿಗನ ಜಾಹೀರಾತು ನೋಡಿ, ಆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಹೀಗೆ ನಟರು ಸೇರಿ ಸೆಲೆಬ್ರಿಟಿಗಳ ಜಾಹೀರಾತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೌದು, ಶಾರುಖ್‌ ಖಾನ್‌ ಅವರ ಪಾನ್‌ ಮಸಾಲ (Pan Masala) ಜಾಹೀರಾತಿನಿಂದ ಪ್ರಚೋದನೆಗೊಂಡು ಗುಟ್ಕಾ ಸೇವಿಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ. “ಶಾರುಖ್‌ ಖಾನ್‌ ಏಕೆ ಸಾಯುತ್ತಾರೆ” ಎಂಬ ಪ್ರಶ್ನೆಗೆ, “ಶಾರುಖ್‌ ಖಾನ್‌ ಗುಟ್ಕಾ ತಿಂತಾರಲ್ಲ, ಅವ್ರೇ ಸಾಯಲ್ಲ, ನಾವ್‌ ಹೇಗೆ ಸಾಯ್ತೀವಿ” ಎಂದಿದ್ದಾರೆ. ಅಷ್ಟೇ ಅಲ್ಲ, “ಶಾರುಖ್ ಖಾನ್‌ ಗುಟ್ಕಾ ತಿನ್ನೋದು ನಿಮಗೆ ಹೇಗೆ ಗೊತ್ತು” ಎಂದು ಕೇಳಿದ್ದಕ್ಕೆ, “ಜಾಹೀರಾತಿನಲ್ಲಿ ನೋಡಿದ್ದೀವಲ್ಲ” ಎಂದಿದ್ದಾರೆ.

ಶಾರುಖ್‌ ಖಾನ್‌ ಪಾನ್‌ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದನ್ನೇ ಈ ಮಕ್ಕಳು ನಿಜ ಎಂದು ಭಾವಿಸಿದ್ದಾರೆ. ಶಾರುಖ್‌ ಖಾನ್‌ ಗುಟ್ಕಾ ತಿಂತಾರೆ, ಅವರಿಗೇ ಏನೂ ಆಗಲ್ಲ. ಇನ್ನು ನಮಗೆ ಏನಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದು, ಚಿಕ್ಕ ವಯಸ್ಸಿನಲ್ಲೇ ಗುಟ್ಕಾ ತಿನ್ನೋದನ್ನು ಕಲಿತಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ನಟಿಸುವಾಗ, ಆ ಉತ್ಪನ್ನದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನು ಎಂಬುದನ್ನು ಈ ವಿಡಿಯೊ ನೋಡಿ ಕಲಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.

“ಸೆಲೆಬ್ರಿಟಿಗಳು ನಮ್ಮ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರಂತಹವರನ್ನು ನೋಡಿ ಕಲಿಯಬೇಕು. ಥೂ ನಿಮ್ಮ, ನಿಮಗೆಲ್ಲ ಇದನ್ನು ನೋಡಿ ನಾಚಿಕೆ ಆಗಬೇಕು. ಇಂತಹ ಜಾಹೀರಾತು ಕೊಟ್ಟು ಯುವ ಜನತೆಯ ದಾರಿ ತಪ್ಪಿಸುತಿರುವ ನಿಮಗೆ ಧಿಕ್ಕಾರವಿರಲಿ” ಎಂಬುದಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿದ್ದು, “ಈ ಗುಟ್ಕಾ ತಿಂದು ಮಕ್ಕಳು ಏನಾದರೂ ಮೃತಪಟ್ಟರೆ ಆಯಾ ಜಾಹೀರಾತು ಕಂಪನಿ ಹಾಗೂ ಜಾಹೀರಾತಿನಲ್ಲಿ ನಟಿಸುವ ಸೆಲೆಬ್ರಿಟಿಗಳು ಪರಿಹಾರ ನೀಡಬೇಕು ಎಂಬ ಕಾನೂನು ಬಂದರೆ ಮಾತ್ರ ಇದೆಲ್ಲ ಸರಿಯಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Continue Reading
Advertisement
Modi v/s Rahul
ರಾಜಕೀಯ5 mins ago

Modi v/s Rahul: ರಾಹುಲ್‌ ಗಾಂಧಿ ಆಸ್ತಿ ಪ್ರಧಾನಿ ಮೋದಿಗಿಂತ ಎಷ್ಟು ಪಟ್ಟು ಹೆಚ್ಚು ಗೊತ್ತೆ?

gold rate today adah
ಚಿನ್ನದ ದರ16 mins ago

Gold Rate Today: ಇಳಿಯಿತು ಚಿನ್ನದ ಬೆಲೆ; ಬಂಗಾರದ ಗ್ರಾಹಕರಿಗೆ ತುಸು ನಿಟ್ಟುಸಿರು; ದರ ಹೀಗಿದೆ

MDH, Everest Spices
ವಿದೇಶ22 mins ago

MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

Virat Kohli
ಕ್ರೀಡೆ25 mins ago

Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

dhruva sarja support C Cinema Kanda Kanda Video Song Release
ಸ್ಯಾಂಡಲ್ ವುಡ್34 mins ago

Dhruva Sarja: ‘ಸಿ’ ಅಂತಿದ್ದಾರೆ ಧ್ರುವ ಸರ್ಜಾ; ಇದು ಅಪ್ಪ-ಮಗಳ ಕಥೆ!

Pushpa 2 Allu Arjun anasuya bharadwaj poster look out
ಟಾಲಿವುಡ್36 mins ago

Pushpa 2: ʻಪುಷ್ಪ 2ʼ ಅನಸೂಯಾ ಭಾರದ್ವಾಜ್ ಪಾತ್ರದ ಫಸ್ಟ್ ಲುಕ್ ಔಟ್!

Viral News
ವೈರಲ್ ನ್ಯೂಸ್39 mins ago

Viral News: ತ್ರಿವಳಿ ತಲಾಖ್‌ನಿಂದ ಬೇಸತ್ತಿದ್ದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ; ದೇವಸ್ಥಾನದಲ್ಲಿ ಮರು ಮದುವೆ

Murder case In Bengaluru
ಬೆಂಗಳೂರು48 mins ago

Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

IPL Ticket Scam
ಕ್ರೀಡೆ1 hour ago

IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

Zakir Naik
ವಿದೇಶ1 hour ago

Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ6 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ20 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ22 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌