Lok Sabha Election 2024: ಕಾಂಗ್ರೆಸ್‌ನ 21 ಅಭ್ಯರ್ಥಿಗಳ ಪಟ್ಟಿ ಇಂದೇ ಫೈನಲ್;‌ 8 ಸಚಿವರು ಕಣಕ್ಕೆ? - Vistara News

Lok Sabha Election 2024

Lok Sabha Election 2024: ಕಾಂಗ್ರೆಸ್‌ನ 21 ಅಭ್ಯರ್ಥಿಗಳ ಪಟ್ಟಿ ಇಂದೇ ಫೈನಲ್;‌ 8 ಸಚಿವರು ಕಣಕ್ಕೆ?

Lok Sabha Election 2024: 28 ಕ್ಷೇತ್ರಕ್ಕೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಹಾಕಲಿದೆ. ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ನನಗೆ ಬೇಡ, ಮಗನಿಗೆ ಕೊಡಿ ಅಂದಿದ್ದಾರೆ. ಬೇಡ ಅಂತ ಮೇಲೆ ಒತ್ತಾಯ ಮಾಡಿಕೊಡಲು ಆಗೋದಿಲ್ಲ. ಹೈಕಮಾಂಡ್ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪರಮೇಶ್ವರ್‌ ಹೇಳಿದ್ದಾರೆ.

VISTARANEWS.COM


on

Complaint by BJP delegation to Election Commission office against Mallikarjuna Kharge statement
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಆಯಾ ರಾಜಕೀಯ ಪಕ್ಷಗಳು (Political Parties) ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಕಾಂಗ್ರೆಸ್‌ ಈಗಾಗಲೇ ಬಿಡುಗಡೆ ಮಾಡಿರುವ ತನ್ನ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಇಂದು ಅಥವಾ ನಾಳೆ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಮುಂದಾಗಲಿದ್ದು, ಅದರಲ್ಲಿ ಕರ್ನಾಟಕದವರ ಹೆಸರು ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್‌ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಕಸರತ್ತು ಮಾಡುತ್ತಿದ್ದು, ಕೆಲವು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕೆ ಈಗ ಸಚಿವರನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Dr G Parameshwar) ಪ್ರತಿಕ್ರಿಯೆ ನೀಡಿದ್ದು, ಇಂದು ಬಾಕಿ 21 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುತ್ತದೆ. 7-8 ಸಚಿವರಿಗೆ ಸ್ಪರ್ಧೆ ಮಾಡಲು ಹೈಕಮಾಂಡ್‌ ಹೇಳಿದೆ. ಆದರೆ, ಯಾವ ಸಚಿವರು ಒಪ್ಪಿಕೊಳ್ಳುತ್ತಾರೆ ಎಂಬುದು ಇಂದು (ಮಂಗಳವಾರ – ಮಾ. 12) ಸಂಜೆ ವೇಳೆಗೆ ಗೊತ್ತಾಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ್‌, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸಚಿವರು ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಳೆಂಟು ಸಚಿವರು ಸ್ಪರ್ಧಿಸಬೇಕು ಎಂದು ಹೇಳಲಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಯಾರು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಸಂಜೆ ವೇಳೆಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.

28 ಕ್ಷೇತ್ರಕ್ಕೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಹಾಕಲಿದೆ. ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ನನಗೆ ಬೇಡ, ಮಗನಿಗೆ ಕೊಡಿ ಅಂದಿದ್ದಾರೆ. ಬೇಡ ಅಂತ ಮೇಲೆ ಒತ್ತಾಯ ಮಾಡಿಕೊಡಲು ಆಗೋದಿಲ್ಲ. ಹೈಕಮಾಂಡ್ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪರಮೇಶ್ವರ್‌ ಹೇಳಿದರು.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುದ್ದಹನುಮೇಗೌಡ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಸ್ಥಳೀಯ ನಾಯಕರಲ್ಲಿ ಉಂಟಾಗಿರುವ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ಅಸಮಾಧಾನವನ್ನು ಸರಿಪಡಿಸುವ ಕೆಲಸ ಆಗುತ್ತಿದೆ. ಚುನಾವಣೆ ಅಂದಾಗ ಇದೆಲ್ಲ ಸಹಜ ಎಂದು ಹೇಳಿದರು.

ಬಾಕಿ 21 ಕ್ಷೇತ್ರದ ಅಭ್ಯರ್ಥಿಗಳು ಇಂದೇ ಫೈನಲ್

ಇಂದು‌ ನವದೆಹಲಿಯಲ್ಲಿ ನಡೆಯುವ ಕಾಂಗ್ರೆಸ್‌ ಸಿಇಸಿ ಸಭೆಯಲ್ಲಿ ಕರ್ನಾಟಕದ ಬಾಕಿ 21 ಕ್ಷೇತ್ರಕ್ಕೆ ಕೂಡ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಸ್ಕ್ರೀನಿಂಗ್‌ ಕಮಿಟಿ ಆದ ಮೇಲೆ ಚುನಾವಣಾ ಸಮಿತಿಗೆ ಪಟ್ಟಿಯನ್ನು ತೆಗೆದುಕೊಂಡು ಹೋಗಬೇಕು. ಫೋನ್‌ ಮುಖಾಂತರ ಕ್ಲಿಯರೆನ್ಸ್ ಕೊಟ್ಟರೆ ಈ ಹಂತದಲ್ಲೇ ಅಂತಿಮ ಆಗುತ್ತದೆ. ಇಂದು ಸಂಜೆ ಹೊತ್ತಿಗೆ ಅಂತಿಮವಾಗಿ ಎಲ್ಲವೂ ಗೊತ್ತಾಗುತ್ತದೆ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಸಂವಿಧಾನವನ್ನು ಬದಲಾವಣೆ ಮಾಡುವ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ್‌, ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ನಮ್ಮ ದೇಶಕ್ಕೆ ಸಂವಿಧಾನ ‌ಕೊಟ್ಟಿದ್ದನ್ನು ಶ್ಲಾಘನೆ ಮಾಡಿದ್ದಾರೆ. ಸಂವಿಧಾನವನ್ನು ‌ಕೊಡದೇ ಹೋಗಿದ್ದರೆ ತಾವು ಪ್ರಧಾನಿಯೇ ಆಗುತ್ತಿರಲಿಲ್ಲ ಎಂದು ಹೇಳಿದ್ದರು. ಆದರೆ, ಅವರ ಪಕ್ಷದ ಸಂಸದರೊಬ್ಬರು ಈಗ ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇಂಥ ಹೇಳಿಕೆ ಇದೇ ಮೊದಲಲ್ಲ. ಹಲವು ಭಾರಿ ಹೇಳಿದ್ದಾರೆ. ಅವರ ಪಕ್ಷದವರು ಇದರ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬೇಕು. ಇಂಥ ಪ್ರಕರಣಗಳು ಮರುಕಳಿಸಿದಾಗಲೆಲ್ಲ, ಆ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದರೆ ಸಾಲದು. ಆಗ ಅಂಥವರು ಮತ್ತೆ ಮತ್ತೆ ಹೇಳುತ್ತಾರೆ. ಭಾರತದ ಸಂವಿಧಾನವನ್ನು ‌ಬದಲಿಸುತ್ತೇವೆ ಎಂದು ಹೇಳುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾಗಿ ಅನಂತ್‌ ಕುಮಾರ್‌ ಹೆಗಡೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Irfan Pathan: ರಾಜಕೀಯ ಪ್ರವೇಶ ಮಾಡಿದ ಯೂಸುಫ್: ಭಾವುಕ ಪೋಸ್ಟ್​ ಮಾಡಿದ ಸಹೋದರ ಇರ್ಫಾನ್

ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಲೀಡ್‌ ಸಿಕ್ಕಿದೆ

ಬೆಂಗಳೂರಿನ ವೈಟ್‌ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ಗೆ ಸಂಬಂಧಪಟ್ಟಂತೆ ಒಳ್ಳೆಯ ಲೀಡ್‌ ಸಿಕ್ಕಿದೆ. ಆರೋಪಿಗಳ ಬಗ್ಗೆ ಒಂದು ಹಂತಕ್ಕೆ ಗುರುತು ಪತ್ತೆ ಹಚ್ಚಲಾಗಿದೆ. ನಾವೀಗ ಈ ಪ್ರಕರಣದಲ್ಲಿ ಬಹಳ ಹತ್ತಿರದಲ್ಲಿದ್ದೇವೆ. ಕೆಲವೊಂದು ವಿಚಾರಗಳು ದೃಢವಾಗಬೇಕು. ಅದನ್ನು ಸಿಸಿಬಿ, ಎನ್‌ಐಎ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

EVMs Damage:ಮತದಾನ ಪ್ರಕ್ರಿಯೆ ಮುಗಿದ ಬಳಿಕ ರಾತ್ರಿ 11ಗಂಟೆಗೆ ವಾಪಾಸಾಗುತ್ತಿದ್ದ ವೇಳೆ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಬಸ್‌ನಲ್ಲಿ ಆರು ಜನ ಸಿಬ್ಬಂದಿ ಮತ್ತು ಆರು ಇವಿಎಂ ಯಂತ್ರಗಳು ಇದ್ದವು. ಬೂತ್‌ ನಂಬರ್‌ 275, 276, 277, 278, 279 ಮತ್ತು 280 ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳು ಹಾನಿಗೊಳಗಾಗಿವೆ. ನಾಲ್ಕು ಇವಿಎಂ ಯಂತ್ರಗಳು ಹಾನಿಗೊಳಗಾಗಿದ್ದು, ಎರಡು ಇವಿಎಂಗಳು ಸುರಕ್ಷಿತವಾಗಿದೆ ಎಂದು ಜಿಲ್ಲಾಧಿಕಾರಿ ಸೂರ್ಯವಂಶಿ ಹೇಳಿದ್ದಾರೆ.

VISTARANEWS.COM


on

EVMs damage
Koo

ಮಧ್ಯಪ್ರದೇಶ: ಚುನಾವಣಾ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಬಸ್ಸಿನಲ್ಲಿ ಬೆಂಕಿ ಅವಘಡ(Fire accident) ಸಂಭವಿಸಿದ್ದು, ಅನೇಕ ವಿದ್ಯುನ್ಮಾನ ಮತಯಂತ್ರ(EVMs damage)ಗಳು ಹಾನಿಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇನ್ನು ಬಸ್‌ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್‌ ಬಸ್‌ನಲ್ಲಿದ್ದ ಸಿಬ್ಬಂದಿ ಮತ್ತು ಚಾಲಕ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:

ಬೀತುಲ್‌ ಜಿಲ್ಲೆಯಾ ಗೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮತದಾನ ಪ್ರಕ್ರಿಯೆ ಮುಗಿದ ಬಳಿಕ ರಾತ್ರಿ 11ಗಂಟೆಗೆ ವಾಪಾಸಾಗುತ್ತಿದ್ದ ವೇಳೆ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಬಸ್‌ನಲ್ಲಿ ಆರು ಜನ ಸಿಬ್ಬಂದಿ ಮತ್ತು ಆರು ಇವಿಎಂ ಯಂತ್ರಗಳು ಇದ್ದವು. ಬೂತ್‌ ನಂಬರ್‌ 275, 276, 277, 278, 279 ಮತ್ತು 280 ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳು ಹಾನಿಗೊಳಗಾಗಿವೆ. ನಾಲ್ಕು ಇವಿಎಂ ಯಂತ್ರಗಳು ಹಾನಿಗೊಳಗಾಗಿದ್ದು, ಎರಡು ಇವಿಎಂಗಳು ಸುರಕ್ಷಿತವಾಗಿದೆ ಎಂದು ಜಿಲ್ಲಾಧಿಕಾರಿ ಸೂರ್ಯವಂಶಿ ಹೇಳಿದ್ದಾರೆ. ಇನ್ನು ಈ ಘಟನೆಯಿಂದ ಮತ ಎಣಿಕೆ ಮೇಲೆ ಏನಾದರೂ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಘಟನೆ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಅವರು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಮರು ಮತದಾನದ ಅವಶ್ಯಕತೆ ಇದಲ್ಲಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Uttarakhand Wild fire:5 ತಿಂಗಳು.. 910 ಕಾಡ್ಗಿಚ್ಚು ಪ್ರಕರಣ;ಸುಪ್ರೀಂಕೋರ್ಟ್‌ನಲ್ಲಿ ಇಂದು ತುರ್ತು ವಿಚಾರಣೆ

ಮಧ್ಯಪ್ರದೇಶದಲ್ಲಿ ಮೂರನೇ ಹಂತದ ಮತದಾನ

ನಿನ್ನೆ ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತನಾದನ ನಡೆದಿತ್ತು. ಬೀತುಲ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ. 72.65 ರಷ್ಟು ಮತದಾನ ನಡೆದಿತ್ತು. ಒಟ್ಟಾರೆ ಮಧ್ಯಪ್ರದೇಶದಲ್ಲಿ ಒಂಬತ್ತು ಕ್ಷೇತ್ರಗಳಲ್ಲಿ ಶೇ.66.05ರಷ್ಟು ಮತದಾನ ಆಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಕೇಂದ್ರ ಸಚಿವ ಜ್ಯೋತಿರಾದಿತ್ಯಾ ಸಿಂದಿಯಾ, ಮಾಜಿ ಸಿಎಂಗಳಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಒಟ್ಟು 127 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿನ್ನೆ ಮೊರೆನಾ, ಬಿಂದ್‌(ಎಸ್‌ಸಿ ಮೀಸಲು ಕ್ಷೇತ್ರ), ಗ್ವಾಲಿಯರ್‌, ಗುನಾ, ಸಾಗರ್‌, ವಿಧಿಶಾ, ಭೋಪಾಲ್‌, ರಾಜ್‌ಘರ್‌ ಮತ್ತು ಬೀತುಲ್‌(ಎಸ್‌ಟಿ ಮೀಸಲು ಕ್ಷೇತ್ರ)ನಲ್ಲಿ ಮತದಾನ ನಡೆದಿತ್ತು.

Continue Reading

ಕರ್ನಾಟಕ

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Lok Sabha Election 2024: ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೇ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಹಿಷ್ಕಾರ, ಪ್ರತಿಭಟನೆ ನಡುವೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.

VISTARANEWS.COM


on

Lok Sabha Election 2024
ಮತದಾನ ಪ್ರಕ್ರಿಯೆ ಮುಗಿದ ತಕ್ಷಣ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತಗಟ್ಟೆಯಲ್ಲಿ ಚುನಾವಣೆ ಇವಿಎಂ, ವಿವಿ ಪ್ಯಾಟ್‌ ಸೇರಿ ಇತರೆ ಸಾಮಗ್ರಿಗಳನ್ನು ಭದ್ರಪಡಿಸಿದರು.
Koo

ಬೆಂಗಳೂರು: ರಾಜ್ಯದ ಬೆಳಗಾವಿ, ಚಿಕ್ಕೋಡಿ ಸೇರಿ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ 2ನೇ ಹಂತದ ಮತದಾನ (Lok Sabha Election 2024) ಮಂಗಳವಾರ ಮುಕ್ತಾಯವಾಯಿತು. ಮತದಾನ ಬಹಿಷ್ಕಾರ, ಪ್ರತಿಭಟನೆ ನಡುವೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ನೆರವೇರಿದೆ. 2ನೇ ಹಂತದಲ್ಲಿ ಶೇ. 70.41 ಮತದಾನ (Voter Turnout) ದಾಖಲಾಗಿದ್ದು, ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೇ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿರುವುದು ಕಂಡುಬಂದಿದೆ.

14 ಕ್ಷೇತ್ರಗಳಿಂದ 227 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮತದಾನ ಮುಕ್ತಾಯವಾಗಿದ್ದರಿಂದ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಜೂನ್‌ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಎರಡನೇ ಹಂತದಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.76.99 ಮತದಾನವಾಗಿದ್ದು, ಕಲಬುರಗಿ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ 61.73 ಮತದಾನವಾಗಿದೆ. ಇನ್ನೂ ಈ ಬಾರಿ ದಕ್ಷಿಣ ಕರ್ನಾಟಕಕ್ಕೆ (ಶೇ.69.23) ಹೋಲಿಸಿದರೆ ಉತ್ತರ ಕರ್ನಾಟಕವೇ(ಶೇ.70.41) ಶೇಕಡಾವಾರು ಮತದಾನದಲ್ಲಿ ಮುಂದಿದೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಶೇ.69.23 ಮತದಾನ ದಾಖಲಾಗಿತ್ತು. ಮಂಗಳವಾರ ಮುಗಿದಿರುವ 2ನೇ ಹಂತದ ಚುನಾವಣೆಯಲ್ಲಿ ಶೇ. 70.41 ಮತದಾನ ದಾಖಲಾಗಿದೆ. ಇನ್ನು 2019 ಚುನಾವಣೆಯ ಮೊದಲ ಹಂತದಲ್ಲಿ ಶೇ. 68.96, ಎರಡನೇ ಹಂತದಲ್ಲಿ 68.66 ಮತದಾನವಾಗಿತ್ತು.

ಇದನ್ನೂ ಓದಿ | West Bengal: ಬಂಗಾಳದಲ್ಲಿ ಮತದಾನದ ವೇಳೆ ಹಿಂಸೆ; ಬಿಜೆಪಿ ಅಭ್ಯರ್ಥಿ ಮೇಲೆ ಟಿಎಂಸಿ ಕಾರ್ಯಕರ್ತರ ದಾಳಿ!

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಕ್ಷೇತ್ರ20242019
ಚಿಕ್ಕೋಡಿಶೇ. 76.99ಶೇ. 75.62
ಬೆಳಗಾವಿಶೇ. 71ಶೇ. 67.84
ಬಾಗಲಕೋಟೆ
ಶೇ.70.10ಶೇ. 70.70
ವಿಜಯಪುರ
ಶೇ. 64.71ಶೇ.61.89
ಕಲಬುರಗಿ
ಶೇ. 61.73ಶೇ. 61.18
ರಾಯಚೂರುಶೇ. 64.10ಶೇ. 58.34
ಬೀದರ್
ಶೇ. 63.55ಶೇ. 63
ಕೊಪ್ಪಳ
ಶೇ. 69.87ಶೇ. 68.56
ಬಳ್ಳಾರಿ
ಶೇ.72.35ಶೇ. 69.76
ಹಾವೇರಿ
ಶೇ.76.78ಶೇ. 74.21
ಧಾರವಾಡ
ಶೇ. 72.53ಶೇ. 70.29
ಉತ್ತರ ಕನ್ನಡ
ಶೇ. 73.52ಶೇ. 74.16
ದಾವಣಗೆರೆ
ಶೇ. 76.23ಶೇ. 73.19
ಶಿವಮೊಗ್ಗಶೇ. 76.05
ಶೇ. 76.58
ಒಟ್ಟು ಶೇ. ಮತದಾನ ಶೇ. 70.41

ಉತ್ಸಾಹದಿಂದ ಹಕ್ಕು ಚಲಾವಣೆ

ಯುವಕ-ಯುವತಿಯರು, ಮಹಿಳೆಯರು, ವೃದ್ಧರು ಸೇರಿ ಎಲ್ಲ ವಯೋಮಾನದ ಮತಾದಾರರು ಅತ್ಯಂತ ಉತ್ಸಾಹದಿಂದ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ಮತ ಚಲಾಯಿಸುವ ಮೂಲಕ ಸಂಭ್ರಮಿಸಿದರು. ಇನ್ನು ಹಲವೆಡೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷಚೇತನರು, ವೃದ್ಧರು, ಶತಾಯುಷಿ ಮತದಾರರು ಹಕ್ಕು ಚಲಾವಣೆ ಮಾಡುವ ಮೂಲಕ ಯುವ ಮತದಾರರಿಗೆ ಮಾದರಿಯಾದರು.

ಇದನ್ನೂ ಓದಿ | Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

ಗಮನ ಸೆಳೆದ ವಿಷಯಾಧಾರಿತ ಮತಗಟ್ಟೆಗಳು

ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಉಪ್ಪಾರಗೇರಿಯಲ್ಲಿ ಸಾಂಪ್ರದಾಯಿಕ ಮತಗಟ್ಟೆ ಮತದಾರರನ್ನು ಆಕರ್ಷಿಸಿತು.

ಎರಡನೇ ಹಂತದ ಮತದಾನದಲ್ಲಿ ವಿಭಿನ್ನ ವಿಷಯಾಧಾರಿತ ಮತಗಟ್ಟೆಗಳು ಗಮನಸೆಳೆದವು. ಮಹಿಳೆಯರಿಂದ ಕಾರ್ಯ ನಿರ್ವಹಿಸಲ್ಪಡುವ ಮಾದರಿ ಮತಗಟ್ಟೆಯಾದ ಸಖಿ ಮತಗಟ್ಟೆ, ಅದೇ ರೀತಿ ವಿಶೇಷ ಚೇತನರ ಮಾದರಿ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಗ್ರೀನ್ ಬೂತ್, ಯುವ ಮತಗಟ್ಟೆಗಳು ಮತದಾರರನ್ನು ಆಕರ್ಷಿಸಿದವು.

ಕಾಗವಾಡದಲ್ಲಿ ಶತಾಯುಷಿ ಮಹಿಳೆ ಮತದಾನ

ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ 103 ವಯಸ್ಸಿನ ಹಿರಿಯ ಮಹಿಳೆ ನೀಲವ್ವ ಶಿವಗೌಡ ಗಾಳಿ ಅವರು ಉತ್ಸಾಹದಿಂದ ಮತ ಚಲಾಯಿಸಿದರು. ಅದೇ ರೀತಿ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ತಮ್ಮ 96 ವರ್ಷದ ಇಳಿ ವಯಸ್ಸಿನಲ್ಲಿ ಸಿದ್ದವ್ವ ಡೊನೂರ ಅವರು ಮರಿಮೊಮ್ಮಗಳೊಡನೆ ಮಸಬಿನಾಳ ಗ್ರಾಮದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿ ಎಲ್ಲರಿಗೂ ಆದರ್ಶರಾದರು.

ಸವದತ್ತಿ ತಾಲೂಕಿನ ಆಲದಕಟ್ಟಿ ಕೆ.ಎಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಕಟ್ಟಿ ಕೆ.ಎಂ ಗ್ರಾಮದ ನಿವಾಸಿ ಅಂತಾರಾಷ್ಟ್ರೀಯ ಮಟ್ಟದ ವ್ಹೀಲ್‌ಚೇರ್‌ ಬಾಸ್ಕೆಟ್ ಬಾಲ್ ಕ್ರೀಡಾಪಟು ಕುಮಾರಿ ಲಕ್ಷ್ಮೀ ರಾಯಪ್ಪ ರಾಯಣ್ಣವರ ಅವರು ಸ್ವಗ್ರಾಮದಲ್ಲಿ ಮತ ಚಲಾಯಿಸಿ ಅನಿಸಿಕೆ ಹಂಚಿಕೊಂಡರು. ಇನ್ನು ಅಂತಾರಾಷ್ಟ್ರೀಯ ಈಜುಗಾರ ವಿಶೇಷ ಮತದಾರರಾದ ಮೊಯಿನ್ ಅವರು ಬೆಳಗಾವಿ ನಗರದಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು.

ಇದನ್ನೂ ಓದಿ | Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

ಹಲವೆಡೆ ಮತದಾನ ಬಹಿಷ್ಕಾರ

ವಿವಿಧ ಕಾರಣಗಳಿಗಾಗಿ ಹಲವೆಡೆ ಜನರು ಮತದಾನ ಬಹಿಷ್ಕಾರ ಮಾಡಿರುವುದು ಕಂಡುಬಂದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ 18ನೇ ವಾರ್ಡ್‌ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಪ್ರಕರಣ ಖಂಡಿಸಿ ಮತಗಟ್ಟೆ ಸಂಖ್ಯೆ 147 ರಲ್ಲಿ ಜನರು ಮತದಾನ ಬಹಿಷ್ಕಾರ ಮಾಡಿದರು. ಅದೇ ರೀತಿ ಕುಕನೂರು ತಾಲೂಕಿನ ಗುದ್ನೆಪ್ಪನಮಠ ಗ್ರಾಮದಲ್ಲಿ ಸೇವಾದಾರರ ಭೂಮಿಯನ್ನು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಒತ್ತುವರಿ ವಿರೋಧಿಸಿ ಮತದಾನ ಬಹಿಷ್ಕಾರವಾಗಿದೆ.

ರಾಯಚೂರಿನ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಮತಗಟ್ಟೆ ಸಂಖ್ಯೆ 254 ಹಾಗೂ 255 ರಲ್ಲಿ ಮತದಾನ ಸ್ಥಗಿತವಾಗಿತ್ತು. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಚಿಲಕನಹಟ್ಟಿ ಗ್ರಾಮದ ಮಾರುತಿ ನಗರದಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಮಾಡದ ಹಿನ್ನೆಲೆ ಮತದಾರರು ಮತ ಹಾಕಲಿಲ್ಲ. ಕಂದಾಯ ಗ್ರಾಮ ಮಾಡಿ ಮೂಲಭೂತ ಸೌಲಭ್ಯ ನೀಡಲು ಆಗ್ರಹಿಸಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಳವ ತರ್ಲಗಟ್ಟ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ.

ವೋಟರ್‌ ಲಿಸ್ಟ್‌ನಲ್ಲಿ ಹೆಸರು ಡಿಲೀಟ್; ಮತದಾರರ ಆಕ್ರೋಶ

ಹುಬ್ಬಳ್ಳಿ: ಮತಗಟ್ಟೆಯಲ್ಲಿ 200 ರಿಂದ 300 ಜನ ಮತದಾರರ ಹೆಸರುಗಳು ಡಿಲೀಟ್ ಆಗಿವೆ ಎಂದು ಮತಗಟ್ಟೆ ಮುಂದೆ ಮತದಾರರು ಆಕ್ರೋಶ ಹೊರಹಾಕಿದ ಘಟನೆ ಹುಬ್ಬಳ್ಳಿಯ ಪೆಂಡಾರಗಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆಯಿತು. ಪೆಂಡಾರಗಲ್ಲಿಯ ಮತಗಟ್ಟೆ ಸಂಖ್ಯೆ 26 ಹಾಗೂ 27 ರಲ್ಲಿ ಹಲವು ಹೆಸರು ನಾಪತ್ತೆಯಾಗಿವೆ ಎಂದು ಮತದಾರರು ಕಿಡಿಕಾರಿದರು.

ಇದನ್ನೂ ಓದಿ | Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

ಬಿಜೆಪಿ ಪರ‌ ಮತ ಹಾಕಿ ಎಂದ ಅಧಿಕಾರಿ ವಿರುದ್ಧ ಆಕ್ರೋಶ

ಚಿಕ್ಕೋಡಿ: ಬಿಜೆಪಿ ಪರ‌ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ಎದುರು ಪ್ರತಿಭಟನೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋಟೆಬಾಗ ಶಾಲೆಯ ಬೂತ್ ನಂಬರ್ 162 ರಲ್ಲಿ ನಡೆಯಿತು. ಮಹಿಳೆಯರಿಗೆ ಬಿಜೆಪಿ ಪರ ಮತಚಲಾಯಿಸುವಂತೆ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ ಎಂದು ಮತಗಟ್ಟೆಗೆ ಕೈ ಕಾರ್ಯಕರ್ತರು ಆಗಮಿಸಿ ಆಕ್ರೋಶ ಹೊರಹಾಕಿದರು. ಇದರಿಂದ ಅವರನ್ನು ತಡೆಯಲು ಹೋದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಮೊದಲ ಹಂತದ ಚುನಾವಣೆಯಲ್ಲಿ ಶೇ.69.23 ಮತದಾನ

ರಾಜ್ಯದಲ್ಲಿ ಲೋಕಸಭಾ ಚುನಾವಣೆ 2024ರ (Lok Sabha Election 2024) ಮೊದಲ ಹಂತದ ಮತದಾನ ಏ.26ರಂದು ನಡೆದಿತ್ತು. ಬೆಂಗಳೂರು, ಮೈಸೂರು ಸೇರಿ 14 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಶೇ.69.23 ಮತದಾನ ದಾಖಲಾಗಿತ್ತು. ಮೊದಲ ಹಂತದಲ್ಲಿ ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿತ್ತು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿತ್ತು.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಕ್ಷೇತ್ರ20242019
ಉಡುಪಿ-ಚಿಕ್ಕಮಗಳೂರುಶೇ. 76.06ಶೇ. 76.07
ಹಾಸನಶೇ. 77.51ಶೇ. 77.35
ದಕ್ಷಿಣ ಕನ್ನಡ
ಶೇ. 77.43ಶೇ. 77.99
ಚಿತ್ರದುರ್ಗ
ಶೇ. 73.11ಶೇ. 70.80
ತುಮಕೂರು
ಶೇ. 77.70ಶೇ. 77.43
ಮಂಡ್ಯಶೇ. 81.48ಶೇ. 80.59
ಮೈಸೂರುಕೊಡಗು
ಶೇ. 70.45ಶೇ. 69.51
ಚಾಮರಾಜನಗರ
ಶೇ. 76.59ಶೇ. 75.35
ಬೆಂಗಳೂರು ಗ್ರಾಮಾಂತರ
ಶೇ.67.29ಶೇ. 64.98
ಬೆಂಗಳೂರು ಉತ್ತರ
ಶೇ.54.42ಶೇ. 54.76
ಬೆಂಗಳೂರು ಸೆಂಟ್ರಲ್‌
ಶೇ. 52.81ಶೇ. 54.32
ಬೆಂಗಳೂರು ದಕ್ಷಿಣ
ಶೇ. 53.15ಶೇ. 53.70
ಚಿಕ್ಕಬಳ್ಳಾಪುರ
ಶೇ. 76.82ಶೇ. 76.74
ಕೋಲಾರಶೇ. 78.07
ಶೇ. 77.25
ಒಟ್ಟು ಶೇಕಡಾವಾರು ಮತದಾನ 69.23

2019ರ ಲೋಕಸಭಾ ಚುನಾವಣೆಯ ಒಟ್ಟು ಮತದಾನ ಎಷ್ಟು?

2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಹಂತ ಸೇರಿ ಒಟ್ಟು ಶೇ. 68.96 ಮತದಾನ ನಡೆದಿತ್ತು. ಮಂಡ್ಯದಲ್ಲಿ ಅತಿಹೆಚ್ಚು ಶೇ. 80.59, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 53.70 ಮತದಾನ ದಾಖಲಾಗಿತ್ತು.

Continue Reading

ಪ್ರಮುಖ ಸುದ್ದಿ

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

Mayawati: ಮಾಯಾವತಿ ಅವರು 2019ರಲ್ಲಿ ಆಕಾಶ್‌ ಆನಂದ್‌ ಅವರನ್ನು ಬಿಎಸ್‌ಪಿ ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಿದ್ದರು. 2023ರ ಡಿಸೆಂಬರ್‌ನಲ್ಲಿ ಅವರು ಸೋದರಳಿಯನನ್ನೇ ಉತ್ತರಾಧಿಕಾರಿ ಎಂಬುದಾಗಿ ಘೋಷಿಸಿದ್ದರು. ಆದರೆ, ಈಗ ದಿಢೀರನೆ ಅವರನ್ನು ಎರಡೂ ಹುದ್ದೆಗಳಿಂದ ತೆರವುಗೊಳಿಸಲು ಏನು ಕಾರಣ ಎಂಬುದು ಸ್ಪಷ್ಟವಾಗಿಲ್ಲ.

VISTARANEWS.COM


on

Mayawati
Koo

ಲಖನೌ: ಬಹುಜನ ಸಮಾಜ ಪಕ್ಷದ (BSP) ವರಿಷ್ಠ ನಾಯಕಿ ಮಾಯಾವತಿ (Mayawati) ಅವರು ಸೋದರಳಿಯ ಆಕಾಶ್‌ ಆನಂದ್‌ (Akash Anand) ಅವರನ್ನು ತಮ್ಮ ಉತ್ತರಾಧಿಕಾರಿ ಹುದ್ದೆಯಿಂದ ವಜಾಗೊಳಿಸಿದ್ದಾರೆ. ನೇಮಕ ಮಾಡಿದ ಐದೇ ತಿಂಗಳಲ್ಲಿ ಬಿಎಸ್‌ಪಿಯ ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದಲೂ ಮಾಯಾವತಿಯವರು ವಜಾಗೊಳಿಸಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಮಾಯಾವತಿಯವರು ಇಂತಹ ತೀರ್ಮಾನ ತೆಗೆದುಕೊಂಡಿರುವುದು ಭಾರಿ ಚರ್ಚೆಗೂ ಗ್ರಾಸವಾಗಿದೆ.

ಆಕಾಶ್‌ ಆನಂದ್‌ ಅವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಿರುವ ಕುರಿತು ಮಾಯಾವತಿಯವರೇ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. “ಆಕಾಶ್‌ ಆನಂದ್‌ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಗಳನ್ನು ನಿಯೋಜಿಸಲಾಗಿತ್ತು. ಆದರೆ, ಬದಲಾದ ಸಾಮಾಜಿಕ ವ್ಯವಸ್ಥೆ, ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಈಗಲೂ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಚಿಂತನೆಗಳನ್ನು ಪಾಲಿಸಲು ಕಟಿಬದ್ಧವಾಗಿದೆ” ಎಂದು ತಿಳಿಸಿದ್ದಾರೆ.

ಮಾಯಾವತಿ ಅವರು 2019ರಲ್ಲಿ ಆಕಾಶ್‌ ಆನಂದ್‌ ಅವರನ್ನು ಬಿಎಸ್‌ಪಿ ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಿದ್ದರು. 2023ರ ಡಿಸೆಂಬರ್‌ನಲ್ಲಿ ಅವರು ಸೋದರಳಿಯನನ್ನೇ ಉತ್ತರಾಧಿಕಾರಿ ಎಂಬುದಾಗಿ ಘೋಷಿಸಿದ್ದರು. ಆದರೆ, ಈಗ ದಿಢೀರನೆ ಅವರನ್ನು ಎರಡೂ ಹುದ್ದೆಗಳಿಂದ ತೆರವುಗೊಳಿಸಲು ಏನು ಕಾರಣ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಮೊದಲಿನಂತೆ ಸಹೋದರ, ಆಕಾಶ್‌ ಆನಂದ್‌ ಅವರ ತಂದೆ ಆನಂದ್‌ ಕುಮಾರ್‌ ಅವರು ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂಬುದಾಗಿ ಮಾಯಾವತಿ ಹೇಳೀದ್ದಾರೆ.

ಯಾರಿವರು ಆಕಾಶ್‌ ಆನಂದ್?

ಆಕಾಶ್ ಆನಂದ್ ತಮ್ಮ 22ನೇ ವಯಸ್ಸಿನಲ್ಲಿ 2017ರಲ್ಲಿ ರಾಜಕಾರಣವನ್ನು ಪ್ರವೇಶಿಸಿದರು. ಲಂಡನ್‌ನಲ್ಲಿ ಓದಿರುವ ಆಕಾಶ್ ಎಂಬಿಎ ಪದವೀಧರರು. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ಅವರ ರಾಜಕೀಯ ಚೊಚ್ಚಲ ಪ್ರವೇಶವಾಗಿತ್ತು, ಅಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ, ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಬಿಎಸ್‌ಪಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Politicians Scandals : ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಲೈಂಗಿಕ ಹಗರಣಗಳಿವು!

Continue Reading

ಪ್ರಮುಖ ಸುದ್ದಿ

PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

PM Modi: ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು. ಇದೇ ವೇಳೆ ಅವರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುವ ಜತೆಗೆ ತಾವು ಏಕೆ 400 ಸೀಟು ಬೇಕು ಎಂಬುದಾಗಿ ಮನವಿ ಮಾಡುತ್ತಿದ್ದೇನೆ ಎಂಬುದಕ್ಕೆ ಸ್ಪಷ್ಟನೆ ನೀಡಿದರು. 370ನೇ ವಿಧಿ, ರಾಮಮಂದಿರ ರಕ್ಷಣೆ ಸೇರಿ ಹಲವು ವಿಷಯಗಳಿಗಾಗಿ ಬಹುಮತ ನೀಡಿ ಎಂದು ಕೂಡ ಮನವಿ ಮಾಡಿದರು.

VISTARANEWS.COM


on

PM Modi
Koo

ಭೋಪಾಲ್:‌ ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭಾಷಣಗಳು ಚುರುಕು ಪಡೆದಿವೆ. ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ ಮಧ್ಯಪ್ರದೇಶದ (Madhya Pradesh) ಧಾರ್‌ನಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, “ಕಾಂಗ್ರೆಸ್‌ ಮತ್ತೆ ರಾಮಮಂದಿರ ತಂಟೆಗೆ ಹೋಗಬಾರದು ಎಂದರೆ ಎನ್‌ಡಿಎಗೆ 400 ಕ್ಷೇತ್ರಗಳನ್ನು ಕೊಡಿ” ಎಂಬುದಾಗಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

“ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂಬುದಾಗಿ ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಿದೆವು. ಹಾಗಾಗಿ, ಕಾಂಗ್ರೆಸ್‌ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದು ಎಂಬ ಕಾರಣಕ್ಕಾಗಿ ಬಿಜೆಪಿಗೆ ಬಹುಮತ ನೀಡಿ” ಎಂಬುದಾಗಿ ಮನವಿ ಮಾಡಿದರು.

ಸಂವಿಧಾನ, ಅಂಬೇಡ್ಕರ್‌ ವಿಷಯ ಪ್ರಸ್ತಾಪ

ಭಾರತದ ಸಂವಿಧಾನ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ ಪರಿವಾರಕ್ಕೆ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ಆಗಿಬರುವುದಿಲ್ಲ. ಅವರು ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ವಿರೋಧಿಸುತ್ತಾರೆ. ಇದೇ ಕಾರಣಕ್ಕಾಗಿಯೇ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಪಾತ್ರವು ತುಂಬ ಕಡಿಮೆ ಇದೆ ಎಂಬುದಾಗಿ ಕಾಂಗ್ರೆಸ್‌ ಹೇಳುತ್ತದೆ. ಕಾಂಗ್ರೆಸ್‌ಗೆ ಸಂವಿಧಾನಕ್ಕಿಂತ ಕುಟುಂಬದ ಮೇಲೆಯೇ ಹೆಚ್ಚು ಪ್ರೀತಿ” ಎಂದು ವಾಗ್ದಾಳಿ ನಡೆಸಿದರು.

“ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲ ನಮಗೆ ಬಹುಮತದ ಸರ್ಕಾರ ನೀಡಿದ ಕಾರಣ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು. ಇದೇ ಕಾರಣಕ್ಕಾಗಿ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಸಾಧ್ಯವಾಯಿತು” ಎಂದರು. “ಕಾಂಗ್ರೆಸ್‌ನವರು ಒಬಿಸಿ, ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಮತಬ್ಯಾಂಕ್‌ಗೆ ನೀಡುವುದಿಲ್ಲ ಎಂಬುದಾಗಿ ಬರೆದುಕೊಂಡಿ ಎಂದು ಕೂಡ ಸವಾಲು ಹಾಕಿದ್ದೇನೆ” ಎಂಬುದಾಗಿ ತಿಳಿಸಿದರು.

ಇದನ್ನೂ ಓದಿ: ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

Continue Reading
Advertisement
prajwal revanna case puttaraj shreyas patel karthik
ಪ್ರಮುಖ ಸುದ್ದಿ21 mins ago

Prajwal Revanna Case: ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕ್ಲೋಸ್;‌ ʼಕೈʼವಾಡಕ್ಕೆ ಸಾಕ್ಷಿ ಫೋಟೋಗಳು ಇಲ್ಲಿವೆ!

Actor Sathyaraj throwback picture of with veteran actor
ಮಾಲಿವುಡ್29 mins ago

Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

Alia Bhatt Deep Fake Wamiqa Gabbi face replaced
ಬಾಲಿವುಡ್29 mins ago

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Sindhuri Vs Roopa
ಕರ್ನಾಟಕ33 mins ago

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Puttakkana Makkalu umashree acting praised
ಕಿರುತೆರೆ34 mins ago

Puttakkana Makkalu: ʻಪುಟ್ಟಕ್ಕʼನ ನಟನೆಗೆ ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

hanuman flag keragodu mandya
ಕ್ರೈಂ1 hour ago

Hanuman Flag: ಕೆರಗೋಡು ಹನುಮಧ್ವಜ ಪ್ರಕರಣದ 3 ಹೋರಾಟಗಾರರ ಮೇಲೆ ರೌಡಿಶೀಟ್

Human trafficking
ದೇಶ1 hour ago

Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

Kanakalatha Passes Away Film serial actor Mollywood
ಮಾಲಿವುಡ್1 hour ago

Kanakalatha Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

Prajwal Revanna Case
ಕ್ರೈಂ2 hours ago

Prajwal Revanna Case: ಗಡುವು ಮುಗೀತು, ಬೆಂಗಳೂರಿಗೆ ಹೊರಟರಾ ಪ್ರಜ್ವಲ್‌ ರೇವಣ್ಣ?

Laapataa Ladies Phool At Met Gala At Photoshop
ಬಾಲಿವುಡ್2 hours ago

Laapataa Ladies: ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ‘ಲಾಪತಾ ಲೇಡೀಸ್’ನಟಿ! ಅಸಲಿ ಸಂಗತಿ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ15 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ18 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ20 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌