Lok Sabha Election 2024: 10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್ - Vistara News

Lok Sabha Election 2024

Lok Sabha Election 2024: 10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್

Lok Sabha Election 2024: ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನು ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳ ನೈಜ ಪ್ರಶ್ನೆಗಳಿಗೆ ಒಂದಕ್ಕೂ ಮೋದಿಯವರು ಉತ್ತರ ಕೊಟ್ಟಿಲ್ಲ. ನಾಳೆ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಅಮಿತ್ ಶಾ ಅವರಾದರೂ ಅಂಕಿ ಅಂಶಗಳ ಸಮೇತ ಉತ್ತರಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.

VISTARANEWS.COM


on

Lok Sabha Election 2024 Dinesh GunduRao attack on Central Government
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 10 ವರ್ಷಗಳಲ್ಲಿ ಅಚ್ಚೇ ದಿನಗಳನ್ನು ತರದೇ ಈಗ 2047ರ ವರೆಗೆ ಸಮಯ ಕೇಳುತ್ತಿರುವ ಮೋದಿಯವರಿಗೆ ಯಾವ ನೈತಿಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಆರೋಪ – ಪ್ರತ್ಯಾರೋಪಗಳು ನಡೆಯುತ್ತಿದ್ದು, ಬಿಜೆಪಿ ಆರೋಪಗಳಿಗೆ ಸಚಿವ ದಿನೇಶ್‌ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್, ಮೋದಿಯವರು ಮೊದಲು 5 ವರ್ಷ ಕೇಳಿದ್ದರು. ಆದರೆ ಅವರು ಅಧಿಕಾರಕ್ಕೇರಿ 10 ವರ್ಷಗಳೇ ಕಳೆದಿವೆ. ಈಗ ಮತ್ತೆ 23 ವರ್ಷ ಸಮಯ ಕೇಳ್ತಿದ್ದಾರೆ. ಅಂದರೆ 10 ವರ್ಷಗಳಲ್ಲಿ ಜನರ ಬದುಕಿನಲ್ಲಿ ಅಚ್ಚೇ ದಿನಗಳು ಬರಲಿಲ್ಲ ಎಂಬುದನ್ನ ಮೋದಿಯವರೇ ಒಪ್ಪಿಕೊಂಡಂತಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನು ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳ ನೈಜ ಪ್ರಶ್ನೆಗಳಿಗೆ ಒಂದಕ್ಕೂ ಮೋದಿಯವರು ಉತ್ತರ ಕೊಟ್ಟಿಲ್ಲ. ನಾಳೆ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಅಮಿತ್ ಶಾ ಅವರಾದರೂ ಅಂಕಿ ಅಂಶಗಳ ಸಮೇತ ಉತ್ತರಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.

ಶೇ. 70ರಷ್ಟು ಹಣವನ್ನು ನಾವೇ ಕೊಡುತ್ತಿದ್ದೇವೆ

ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮೋದಿಯವರು ಮಾತನಾಡುತ್ತಾರೆ. ನೈಜವಾಗಿ ಇದು ಆರೋಗ್ಯ ಕರ್ನಾಟಕ ಯೋಜನೆ. ಅದನ್ನೇ ಅವರು ಆಯುಷ್ಮಾನ್ ಭಾರತ್ ಎಂದು ನಾಮಕರಣ ಮಾಡಿಕೊಂಡರು.‌ ವಾಸ್ತವವಾಗಿ ನೋಡಿದರೆ ಆಯುಷ್ಮಾನ್ ಭಾರತ್ ಯೋಜನೆಗೆ ಶೇ. 70ರಷ್ಟು ಹಣ ಕೊಡುತ್ತಿರುವುದು ಕರ್ನಾಟಕ ಸರ್ಕಾರ. ಕೇಂದ್ರದಿಂದ ಬರುತ್ತಿರುವುದು ಕೇವಲ 30 ರಷ್ಟು ಮಾತ್ರ. ಇಲ್ಲಿಯವರೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 1920 ಕೋಟಿ ರೂಪಾಯಿ ಮಾತ್ರ ಕೇಂದ್ರದಿಂದ ಬಂದಿದೆ. ಆದರೆ, 4790 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರವೇ ಭರಿಸಿದೆ. ಶೇ. 70ರಷ್ಟು ಹಣವನ್ನು ನಾವೇ ಕೊಡುತ್ತಿರುವಾಗ ಕರ್ನಾಟಕಕ್ಕೆ ಮೋದಿಯವರ ಕೊಡುಗೆ ಏನು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಮೋದಿ ಕಡಿಮೆ ಮಾಡಿದ್ದು 3 ರೂಪಾಯಿ

ವೃದ್ಧಾಪ್ಯ ವೇತನ, ಅಂಗವಿಕಲ ವೇತನಗಳನ್ನು ಮೋದಿಯವರು ಒಂದು ರೂಪಾಯಿ ಕೂಡ ಹೆಚ್ಚು ಮಾಡಿಲ್ಲ. ವೃದ್ಧಾಪ್ಯ ವೇತನದಲ್ಲಿ ರಾಜ್ಯ ಸರ್ಕಾರದ್ದು 400 ರೂಪಾಯಿ ಆಗಿದ್ದರೆ, ಕೇಂದ್ರದ್ದು 200 ರೂಪಾಯಿ ಮಾತ್ರ. ವಿಧವಾ ವೇತನ ಕೇಂದ್ರದ್ದು 500 ರಾಜ್ಯದ್ದು 700 ರೂಪಾಯಿ ಆಗಿದೆ. ವಿಕಲಚೇತನ ಕೇಂದ್ರದ್ದು 300 ರೂಪಾಯಿಯಾದರೆ, ರಾಜ್ಯದ್ದು 3900 ರೂಪಾಯಿ ಆಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಕೇಂದ್ರದ್ದು ಶೂನ್ಯ. ನಮ್ಮದು 1200 ರೂಪಾಯಿ ಆಗಿದೆ. ಮನಸ್ವಿನಿ ಕೇಂದ್ರದ್ದು ಶೂನ್ಯ. ನಮ್ಮದು 800 ರೂಪಾಯಿ ಆಗಿದೆ.‌ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ರಾಜ್ಯ ಸರ್ಕಾರ 2000 ರೂ. ನೀಡುತ್ತಿದೆ ಕೇಂದ್ರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಬಡವರಿಗೆ ಅಕ್ಕಿ ಯನ್ನ 30 ರೂಪಾಯಿಯಿಂದ 3 ರೂ. ಕೊಡುವ ತೀರ್ಮಾನವನ್ನು ಫುಡ್ ಸೆಕ್ಯುರಿಟಿ ಕಾಯ್ದೆ ತರುವ ಮೂಲಕ ಮಾಡಿದ್ದು ಕಾಂಗ್ರೆಸ್ ಯು.ಪಿ.ಎ ಸರ್ಕಾರ. 3 ರೂಪಾಯಿಯನ್ನು ಕಡಿಮೆ ಮಾಡಿ ಅದೇ ದೊಡ್ಡ ಯೋಜನೆ ಎಂದು ಮೋದಿಯವರು ಹೇಳಿಕೊಳ್ಳುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಮೋದಿಯವರು ಹೇಳಿಕೊಳ್ಳುತ್ತಿದ್ದಾರೆ. ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬಂದಿದ್ಧು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ. ಅದಕ್ಕೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್. ವಿಶೇಷವಾಗಿ ಕರ್ನಾಟಕಕ್ಕೆ ಶೇ 22 ರಷ್ಟು ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಕ್ಯಾಶ್‌ಲೆಸ್ ಮಾಡಲು ರೂಪಾಯಿ ಅಪಮೌಲ್ಯ ಮಾಡಿದ್ದೇನೆ ಎಂದು ಮೋದಿಯವರು ಹೇಳಿಕೊಂಡರು. ರೂಪಾಯಿ ಅಪಮೌಲ್ಯದಿಂದ ಕ್ಯಾಶ್ ವಹಿವಾಟನ್ನು ಕಡಿಮೆ ಮಾಡದಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಬಹಿರಂಗವಾಗಿ ಮೋದಿಯವರು ಮಾತನಾಡಿದ್ದರು. ಆದರೆ, ವಿಪರ್ಯಾಸ ಮೊದಲು 15 ಲಕ್ಷ ಕೋಟಿಯಷ್ಟಿದ್ದ ಕ್ಯಾಶ್ ವ್ಯವಹಾರ ಇಂದು 35 ಲಕ್ಷ ಕೋಟಿಯಷ್ಟು ಕ್ಯಾಶ್ ದೇಶದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Lok Sabha Election 2024: ಸಿದ್ದರಾಮಯ್ಯರಿಂದ ಬದುಕಿನ ಗ್ಯಾರಂಟಿಯೇ ಇಲ್ಲವಾಗಿದೆ: ಬಿ.ಎಸ್.‌ ಯಡಿಯೂರಪ್ಪ ವಾಗ್ದಾಳಿ

ಒಬ್ಬ ಪ್ರಧಾನಿಯವರು ಹೀಗೆ ಮಾತನಾಡುವುದು ಸರಿಯಲ್ಲ

ಕರ್ನಾಟಕದಿಂದ ಹೆಚ್ಚು ಲಾಭ ಪಡೆಯುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದೇನು. ಮನೆಕಟ್ಟಲು ಕೊಡುವ ಹಣದಲ್ಲೂ ಶೇ. 18ರಷ್ಟು ಜಿಎಸ್‌ಟಿ ಪಡೆಯುತ್ತಾರೆ. ಬೆಂಗಳೂರಿನ ನೀರಿನ ಬವಣೆ ಬಗ್ಗೆ ಮಾತಾನಾಡುತ್ತಾರೆ. ಐಟಿ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂದು ಮೋದಿಯವರು ಹೇಳಿ ಹೋಗಿದ್ದಾರೆ. ಹಾಗೆ ಹೇಳಲು ಇವರಿಗೆ ಯಾವ ಅರ್ಹತೆ ಇದೆ. ಬೆಂಗಳೂರನ್ನು ಐಟಿ ಸಿಟಿಯನ್ನಾಗಿ ಮೋದಿಯವರು ಮಾಡಿದ್ರಾ? ಕರ್ನಾಟಕದಲ್ಲಿ ಬರ ಇರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ನಿರ್ವಹಿಸುತ್ತಿದೆ. ಬೆಂಗಳೂರಿನ ನೀರಿನ ಮೂಲಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಬೆಂಗಳೂರಿನಿಂದ ಹೆಚ್ಚು ತೆರಿಗೆ ಪಡೆದು ಈಗ ಬೆಂಗಳೂರನ್ನು ಟೀಕಿಸುತ್ತಿದ್ದಾರೆ. ಒಬ್ಬ ಪ್ರಧಾನಿಯವರು ಹೀಗೆ ಮಾತನಾಡುವುದು ಸರಿಯಲ್ಲ. ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶದಲ್ಲಿ ಬಿಜೆಪಿ 200 ಸ್ಥಾನ ಗಳಿಸುವುದು ಕಷ್ಟ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.‌

ಚೊಂಬನ್ನು ಅಕ್ಷಯ ಪಾತ್ರೆ ಎನ್ನುವ ದೇವೇಗೌಡರು ರಾಜ್ಯದ ಹಿತ ಮರೆತರೇ?

ಕರ್ನಾಟಕವನ್ನು ಮೋದಿಯವರು ಕಡೆಗಣಿಸಿರುವುದು ಸ್ಪಷ್ಟ. ತೆರಿಗೆಯಲ್ಲಾದ ಅನ್ಯಾಯ ಸೇರಿದಂತೆ ಯೋಜನೆಗಳಲ್ಲಿ ಕೇಂದ್ರ ನಮ್ಮ ರಾಜ್ಯಕ್ಕೆ ಅತಿ ಕಡಿಮೆ ಅನುದಾನ ಕೊಡುತ್ತಿರುವುದನ್ನು ಅಂಕಿ ಅಂಶಗಳ ಸಮೇತ ಕಾಂಗ್ರೆಸ್ ಜನರ ಮುಂದಿಟ್ಟಿದೆ. ಹೀಗಾಗಿಯೇ ಮೋದಿಯವರಿಗೆ ಕರ್ನಾಟಕದಲ್ಲಿ ಚೊಂಬು ತೋರಿಸಿದ್ದೇವೆ. ಆದರೆ ಚೊಂಬನ್ನು ದೇವೇಗೌಡರು ಅಕ್ಷಯ ಪಾತ್ರೆ ಎಂದು ಕರೆದಿದ್ದಾರೆ. ಅಕ್ಷಯ ಪಾತ್ರೆ ಗುಜರಾತ್ ಉತ್ತರ ಪ್ರದೇಶಕ್ಕಿರಬಹುದು. ಆದರೆ ಕರ್ನಾಟಕಕ್ಕೆ ಮೋದಿಯವರು ಕೊಟ್ಟಿದ್ದು ಚೊಂಬು. ದೇವೇಗೌಡರು ಕರ್ನಾಟಕದ ಹಿತವನ್ನ ಮರೆತು ಹೀಗೆ ಮಾತಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Terrorist Attack: “ಉಗ್ರರ ದಾಳಿ ಬಿಜೆಪಿ ಚುನಾವಣಾ ಪೂರ್ವ ಸ್ಟಂಟ್‌”; ನಾಲಿಗೆ ಹರಿಬಿಟ್ಟ ಪ್ರತಿಪಕ್ಷದ ಇಬ್ಬರು ನಾಯಕರು

Terrorist Attack: ಪೂಂಚ್‌ನಲ್ಲಿ ನಡೆದ ದಾಳಿ ಬಗ್ಗೆ ಜಲಂಧರ್‌ ಕ್ಷೇತ್ರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಚರಣ್‌ ಪ್ರಿತ್‌ ಸಿಂಗ್‌ ಚನ್ನಿ, ಚುನಾವಣೆ ಬಂದಾಗ ಬಿಜೆಪಿಯವರು ನಡೆಸುವ ಸ್ಟಂಟ್‌ ಇದು. ಇದು ಉದ್ದೇಶಪೂರ್ವವಾಗಿ ನಡೆಸುತ್ತಿರುವ ದಾಳಿ. ಬಿಜೆಪಿಯನ್ನು ಗೆಲ್ಲಿಸಲು ಮಾಡುತ್ತಿರುವ ಸ್ಟಂಟ್‌. ಇದರಲ್ಲಿ ಯಾವುದೇ ನಿಜಾಂಶ ಇಲ್ಲ. ಜನರ ಶವದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿಹಾರದಲ್ಲಿ ಆರ್‌ಜೆಡಿ ಮುಖಂಡ ತೇಜ್‌ ಪ್ರತಾಪ್‌ ಯಾದವ್‌ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದಾರೆ

VISTARANEWS.COM


on

Terrorist attack
Koo

ಚಂಡೀಗಡ: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಪೂಂಚ್‌ನಲ್ಲಿ ಎರಡು ದಿನಗಳ ಹಿಂದೆ ಭಾರತೀಯ ವಾಯುಪಡೆ(IAF) ಯೋಧರ ಮೇಲೆ ನಡೆದಿದ್ದ ಭಯೋತ್ಪಾದನಾ ದಾಳಿ(Terrorist Attack)ಯನ್ನು ಪ್ರತಿಪಕ್ಷದ ಇಬ್ಬರು ನಾಯಕರು ಇದೊಂದು ಬಿಜೆಪಿಯ ಚುನಾವಣಾ ಪೂರ್ವ ಸ್ಟಂಟ್‌(Poll Stunt) ಎಂದು ಕರೆಯುವ ಮೂಲಕ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡ ಚರಣ್‌ಪ್ರಿತ್‌ ಸಿಂಗ್‌ ಚನ್ನಿ(Charanprit Singh Channi) ಮತ್ತು ರಾಷ್ಟ್ರೀಯ ಜನತಾದಳದ ತೇಜ್‌ ಪ್ರತಾಪ್‌ ಯಾದವ್‌ ಈ ದಾಳಿ ಯನ್ನು 2019ರಲ್ಲಿ ನಡೆದಿದ್ದ ಪುಲ್ವಾಮಾ ಭಯೋತ್ಪಾದನಾ ದಾಳಿಯ ಜೊತೆ ಹೋಲಿಸಿ ಇದೊಂದು ಬಿಜೆಪಿ ನಡೆಸುತ್ತಿರುವ ಚುನಾವಣಾ ಪೂರ್ವ ಸ್ಟಂಟ್‌ ಆಗಿದ್ದು ಬಿಜೆಪಿ ಇದನ್ನು ತನ್ನ ಗೆಲುವಿಗಾಗಿ ಬಳಸಿಕೊಳ್ಳುತ್ತದೆ ಎಂದು ಟೀಕಿಸಿದ್ದಾರೆ.

ಪ್ರತಿಪಕ್ಷ ನಾಯಕರು ಹೇಳಿದ್ದೇನು?

ಪೂಂಚ್‌ನಲ್ಲಿ ನಡೆದ ದಾಳಿ ಬಗ್ಗೆ ಜಲಂಧರ್‌ ಕ್ಷೇತ್ರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಚರಣ್‌ ಪ್ರಿತ್‌ ಸಿಂಗ್‌ ಚನ್ನಿ, ಚುನಾವಣೆ ಬಂದಾಗ ಬಿಜೆಪಿಯವರು ನಡೆಸುವ ಸ್ಟಂಟ್‌ ಇದು. ಇದು ಉದ್ದೇಶಪೂರ್ವವಾಗಿ ನಡೆಸುತ್ತಿರುವ ದಾಳಿ. ಬಿಜೆಪಿಯನ್ನು ಗೆಲ್ಲಿಸಲು ಮಾಡುತ್ತಿರುವ ಸ್ಟಂಟ್‌. ಇದರಲ್ಲಿ ಯಾವುದೇ ನಿಜಾಂಶ ಇಲ್ಲ. ಜನರ ಶವದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿಹಾರದಲ್ಲಿ ಆರ್‌ಜೆಡಿ ಮುಖಂಡ ತೇಜ್‌ ಪ್ರತಾಪ್‌ ಯಾದವ್‌ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದು, ಪುಲ್ವಾಮಾ ದಾಳಿಯಯನ್ನೂ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ. ಚುನಾವಣೆ ಬಂದಾಗಲೆಲ್ಲಾ ಭಯೋತ್ಪಾದನಾ ದಾಳಿ ನಡೆದೇ ನಡೆಯುತ್ತದೆ

ಬಿಜೆಪಿ ನಾಯಕರು ಕಿಡಿ

ಪ್ರತಿಪಕ್ಷ ನಾಯಕರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಕೆಂಡಾಮಂಡಲವಾಗಿದ್ದು, ವಾಗ್ದಾಳಿ ನಡೆಸಿದೆ. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿದ್ದು, ಇದು ಕಾಂಗ್ರೆಸ್‌ ಮತ್ತು ಅದರ ಜೊತೆಗಿರುವ ಪಕ್ಷಗಳ ಮನಸ್ಥಿತಿಯನ್ನು ತೋರಿಸುತ್ತಿದೆ. ಕಳೆದ 70 ವರ್ಷಗಳಲ್ಲಿ ಸೇನೆಯನ್ನು ಬಲಪಡಿಸುವ ಬದಲು ಅದರ ಬಲವನ್ನು ಕುಗ್ಗಿಸುವ ಕೆಲಸವನ್ನೇ ಕಾಂಗ್ರೆಸ್‌ ಮಾಡಿತ್ತು. ನಾವು ಕಳೆದ 10ವರ್ಷಗಳಲ್ಲಿ ಸೇನೆಗೆ ಬಲ ತುಂಬಿದ್ದೇವೆ. ಪುಲ್ವಾಮಾದ ಬಳಿಕ ನಾವು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇವೆ. ಆದರೆ ಇವರು ಸಂಸತ್‌ ದಾಳಿಕೋರನ ಗಲ್ಲುಶಿಕ್ಷೆಯನ್ನು ತಪ್ಪಿಸಲು ಹಲವು ರೀತಿಯಲ್ಲಿ ಪ್ರಯತ್ನಿಸಿದವರು ಜನ ಇದನ್ನು ಎಂದಿಗೂ ಮರೆಯಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದರು.

Continue Reading

ದೇಶ

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

Narendra Modi: Narendra Modi: ರಾಮಲಲ್ಲಾ ದರ್ಶನ ಪಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ಕೈಗೊಳ್ಳುತ್ತಿದ್ದಾರೆ. ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಮೋದಿ ರೋಡ್‌ ಶೋ ಕೈಗೊಂಡರು. ನರೇಂದ್ರ ಮೋದಿ ಅವರು ಸಾಗುವ ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲೆಡೆ ಜೈಶ್ರೀರಾಮ್‌ ಎಂಬ ಘೋಷಣೆಗಳು ಮೊಳಗಿದವು.

VISTARANEWS.COM


on

Narendra Modi
Koo

ಅಯೋಧ್ಯೆ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಗೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಕಳೆದ ಜನವರಿ 22ರಂದು ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದ ನರೇಂದ್ರ ಮೋದಿ ಅವರೀಗ ಮತ್ತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅವರು ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ದೀರ್ಘದಂಡ ನಮಸ್ಕಾರ ಹಾಕಿದರು.

ಕಳೆದ ಜನವರಿ 22ರಂದು ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದ ಬಳಿಕ ಮಾಡಿದ ಬಳಿಕ ರಾಮಮಂದಿರಕ್ಕೆ ಮೊದಲ ಬಾರಿ ಭೇಟಿ ನೀಡಿದರು.

ರಾಮನಗರಿ ಅಯೋಧ್ಯೆಯಲ್ಲಿ ಭರ್ಜರಿ ರೋಡ್‌ ಶೋ ಕೈಗೊಳ್ಳುವ ಮೊದಲು ಮೋದಿ ಅವರು ರಾಮಲಲ್ಲಾನಿಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಮಮಂದಿರದ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಅಯೋಧ್ಯೆ ಭೇಟಿ ನೀಡುವ ಮೊದಲು ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ದೌರಾಹ್ರ ಲೋಕಸಭೆ ಕ್ಷೇತ್ರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡರು.

ರಾಮಲಲ್ಲಾ ದರ್ಶನದ ಬಳಿಕ ಮೋದಿ ಅವರು ಅಯೋಧ್ಯೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೆ ರೋಡ್‌ ಶೋ ನಡೆಸಿದರು. ಮಾರ್ಗದುದ್ದಕ್ಕೂ ನೆರೆದಿದ್ದ ಜನ ಹೂಮಳೆ ಸುರಿಸಿ ಅಭಿಮಾನ ಮೆರೆದರು.

ರೋಡ್‌ ಶೋಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೂಡ ಸಾಥ್‌ ನೀಡಿದ್ದಾರೆ. ಇನ್ನು, ರೋಡ್‌ ಶೋ ಉದ್ದಕ್ಕೂ ಜನ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು.

ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Continue Reading

ದೇಶ

Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Narendra Modi: ಉತ್ತರ ಪ್ರದೇಶದ ದೌರಾಹ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, “ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಜನರಿಗೆ ತಲುಪುತ್ತಿವೆ. ಮುಸ್ಲಿಂ ಸಹೋದರ-ಸಹೋದರಿಯರು ಕೂಡ ನೋಡುತ್ತಿದ್ದಾರೆ. ಪಿಎಂ ಆವಾಸ್‌ ಯೋಜನೆ, ಉಜ್ವಲ ಯೋಜನೆ ಸೇರಿ ಎಲ್ಲ ಯೋಜನೆಗಳ ಸೌಲಭ್ಯಗಳು ಮುಸ್ಲಿಮರಿಗೂ ತಲುಪುತ್ತಿವೆ” ಎಂದು ತಿಳಿಸಿದರು.

VISTARANEWS.COM


on

Narendra Modi
Koo

ಲಖನೌ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಮೇ 5) ಉತ್ತರ ಪ್ರದೇಶದಲ್ಲಿ (Uttar Pradesh) ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ದೌರಾಹ್ರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅದರಲ್ಲೂ, “ಮುಸ್ಲಿಮರು ಈಗ ಮತಬ್ಯಾಂಕ್‌ನ ಗುತ್ತಿಗೆದಾರರಿಂದ ಪ್ರತ್ಯೇಕವಾಗಿದ್ದಾರೆ. ಅವರು ಅಭಿವೃದ್ಧಿಯ ಪರವಾಗಿದ್ದಾರೆ” ಎಂದು ಕಾಂಗ್ರೆಸ್‌ಗೆ ಮೋದಿ ಟಾಂಗ್‌ ಕೊಟ್ಟರು.

“ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಜನರಿಗೆ ತಲುಪುತ್ತಿವೆ. ಮುಸ್ಲಿಂ ಸಹೋದರ-ಸಹೋದರಿಯರು ಕೂಡ ನೋಡುತ್ತಿದ್ದಾರೆ. ಪಿಎಂ ಆವಾಸ್‌ ಯೋಜನೆ, ಉಜ್ವಲ ಯೋಜನೆ ಸೇರಿ ಎಲ್ಲ ಯೋಜನೆಗಳ ಸೌಲಭ್ಯಗಳು ಮುಸ್ಲಿಮರಿಗೂ ತಲುಪುತ್ತಿವೆ. ಯಾವುದೇ ಭೇದ-ಭಾವ ಇಲ್ಲದೆ, ಪ್ರತಿಯೊಬ್ಬರಿಗೂ ಯೋಜನೆಗಳು ತಲುಪುತ್ತವೆ. ಹಾಗಾಗಿ, ಮುಸ್ಲಿಮರು ಕೂಡ ಮತಬ್ಯಾಂಕ್‌ನ ಗುತ್ತಿಗೆದಾರರ ಸಹವಾಸ ಬಿಟ್ಟಿದ್ದಾರೆ” ಎಂದು ಹೇಳಿದರು.

“ಮುಸ್ಲಿಮರನ್ನು ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಮತಬ್ಯಾಂಕ್‌ಗಾಗಿ ಬಳಸಿಕೊಂಡವು. ಆದರೆ, ಈಗ ಮುಸ್ಲಿಮರು ಅಂತ ತುಷ್ಟೀಕರಣದ ಕುತಂತ್ರದಿಂದ ಹೊರಬಂದಿದ್ದಾರೆ. ಆದರೆ, ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಮಾತ್ರ ಈಗಲೂ ಓಲೈಕೆಯಲ್ಲಿಯೇ ತೊಡಗಿವೆ. ಮುಸ್ಲಿಮರನ್ನು ಮತ ಬ್ಯಾಂಕ್‌ಗಾಗಿಯೇ ಬಳಸಿಕೊಳ್ಳಲು ಯತ್ನಿಸುತ್ತಿವೆ. ಇದೇ ಕಾರಣಕ್ಕಾಗಿಯೇ, ಮುಸ್ಲಿಂ ಲೀಗ್‌ನ ಪ್ರತಿರೂಪದಂತಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ” ಎಂಬುದಾಗಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

“2014ಕ್ಕಿಂತ ಮೊದಲು ದೇಶದಲ್ಲಿ ತುಷ್ಟೀಕರಣದ ಆಡಳಿತ ನಡೆಯುತ್ತಿತ್ತು. ಉಗ್ರವಾದದ ವಿರುದ್ಧ ಕ್ರಮ ತೆಗೆದುಕೊಳ್ಳಲು ತನಿಖಾ ಸಂಸ್ಥೆಗಳಿಗೆ ಅಧಿಕಾರವೇ ಇರಲಿಲ್ಲ. ಇನ್ನು, ಸಮಾಜವಾದಿ ಪಕ್ಷವಂತೂ ಉಗ್ರರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯುತ್ತಿತ್ತು. ಆದರೀಗ ಉಗ್ರರನ್ನು ಹೆಡೆಮುರಿ ಕಟ್ಟಲಾಗುತ್ತಿದೆ. ನನಗೆ ಕುಟುಂಬ ಇಲ್ಲ. ಆದರೆ, ದೇಶದ ಜನರೇ ನನ್ನ ಕುಟುಂಬ. ಜನರ ಏಳಿಗೆಗಾಗಿ, ವಿಕಸಿತ ಭಾರತದ ನಿರ್ಮಾಣಕ್ಕಾಗಿ ನಾನು ನಿರಂತರವಾಗಿ ಶ್ರಮಿಸುತ್ತೇನೆ” ಎಂದರು.

ಇದನ್ನೂ ಓದಿ: Pralhad Joshi: ಕಾಂಗ್ರೆಸ್‌ನಿಂದ ಮೋದಿ ಎಂಬ ಆಕಾಶಕ್ಕೆ ಉಗುಳೋ ಕೃತ್ಯ: ಪ್ರಲ್ಹಾದ್ ಜೋಶಿ

Continue Reading

Lok Sabha Election 2024

Lok Sabha Election 2024: ಮತ್ತೆ ಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಏಕೆ?

Lok Sabha Election 2024: ಬಿಜೆಪಿ ಜಾತಿ – ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು, ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮುಸಲ್ಮಾನರ ವಿರುದ್ಧ ದಲಿತರನ್ನು, ಹಿಂದುಳಿದವರ ವಿರುದ್ಧ ದಲಿತರು, ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

VISTARANEWS.COM


on

Lok Sabha Election 2024 Narendra Modi cant become PM again says CM Siddaramaiah
Koo

ಹರಿಹರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಜೋರಾಗಿದೆ ಎನ್ನುವುದನ್ನು ಸ್ವತಃ ಬಿಜೆಪಿಯವರೇ ಗುರುತಿಸಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಹಾಗೂ ಆ ಪಕ್ಷದ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಜಾಧ್ವನಿ-02 ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರವಾಗಿ ಮತದಾರರಲ್ಲಿ ಮತಯಾಚಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯ 25 ಸಂಸದರು ರಾಜ್ಯಕ್ಕಾಗಿರುವ ಅನ್ಯಾಯವನ್ನು ಎಂದೂ ಪ್ರಶ್ನಿಸಲಿಲ್ಲ. ಅವರಲ್ಲಿ ಹಲವರನ್ನು ಈ ಬಾರಿ ಬಿಜೆಪಿಯವರೇ ಕೈಬಿಟ್ಟಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸಂಸದರು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ, ಬಿಜೆಪಿಯವರೇ ಈ ಬಾರಿ ಹಲವರನ್ನು ಕೈಬಿಟ್ಟಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ

ಹರಿಹರ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಏತ ನೀರಾವರಿ ಯೋಜನೆಗೆ ಚುನಾವಣೆ ನಂತರ ಚಾಲನೆ ನೀಡಲಾಗುವುದು. ನಾನು ನುಡಿದ ಮಾತಿನಂತೆ ನಡೆಯುವವನು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆಂದು ತಿಳಿಸಿದಂತೆ 8 ತಿಂಗಳ ಒಳಗೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಜನರ ಪ್ರಶಂಸೆಯನ್ನು ಗಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರೈತ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಶಾದಿ ಭಾಗ್ಯಗಳಂತಹ ಜನಪರ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ ಎಂದು ಹೇಳಿದರು.

ಯಪ್ಪಾ ಯಪ್ಪಾ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ

ಬಿಜೆಪಿ ಜಾತಿ – ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು, ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮುಸಲ್ಮಾನರ ವಿರುದ್ಧ ದಲಿತರನ್ನು, ಹಿಂದುಳಿದವರ ವಿರುದ್ಧ ದಲಿತರು, ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ. ಸಂವಿಧಾನದ ಮೀಸಲಾತಿ ಪ್ರಮಾಣದಲ್ಲಿ ಶೇ. 10ರಷ್ಟನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಸೃಷ್ಟಿಸಿದರು. ಆದರೆ, ಸಂವಿಧಾನದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿಯನ್ನು ಕೊಡಬಹುದಾಗಿದೆ. ಮೋದಿಯವರು ಸಂವಿಧಾನವನ್ನು ಪೂರ್ಣ ತಿಳಿದಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾವು ಅಧಿಕಾರಕ್ಕೆ ಬಂದರೆ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದೇವೆಯೇ ಹೊರತು. ಒಬ್ಬರ ಮೀಸಲಾತಿಯನ್ನು ಕಿತ್ತು ಮತ್ತೊಬ್ಬರಿಗೆ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೀಸಲಾತಿ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ

ಬಿಜೆಪಿ ಹಾಗೂ ಆರ್‌ಎಸ್ಎಸ್ ಮೀಸಲಾತಿಯನ್ನು ಬೆಂಬಲಿಸಲಿಲ್ಲ. ಆದ್ದರಿಂದ ಮೀಸಲಾತಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಮಂಡಲ್ ವರದಿಯಂತೆ ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಮೀಸಲಾತಿ ತರಲು ಬಿಜೆಪಿ ವಿರೋಧಿಸಿದರು. ಮಂಡಲ್ ಪಂಚಾಯಿತಿ, ನಗರ ಸಭೆಗಳಲ್ಲಿ ಮಹಿಳೆಯರು, ದಲಿತರು, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿ ವಿರೋಧಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಮೀಸಲಾತಿ ನೀಡಿಕೆಯನ್ನು ಎತ್ತಿಹಿಡಿಯಿತು. ಚುನಾವಣೆ ಬಂದಾಗ ಮಾತ್ರ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ ಎಂದು ಟೀಕಿಸಿದರು.

ಮೋದಿಯವರು ನೀಡಿದ ಭರವಸೆ ಈಡೇರಿಸಲಿಲ್ಲ

ಮೋದಿಯವರು ಹತ್ತು ವರ್ಷಗಳ ಕಾಲ ಜನರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ರೈತರ ಸಾಲ ಮನ್ನಾ ಮಾಡದೇ ಅದಾನಿ ಹಾಗೂ ಅಂಬಾನಿ ಕೈಗಾರಿಕೋದ್ಯಮಿಗಳಿಗೆ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರು ಶ್ರೀಮಂತರ ಪರವಾಗಿರುವವರು. ಆದರೆ, ಇವರು ಬಡವರ ಪರವಾಗಿ ಇರುವವರು ಎಂದು ಮೋಸ ಹೋಗಿದ್ದಾಯ್ತು. ನಂಬಿಕೆ ದ್ರೋಹ ಎಸಗಿದ ಮೋದಿಯವರಿಗೆ ಮತ ಹಾಕಬೇಕೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ

ನಮ್ಮ ಸರ್ಕಾರ ಇರುವವರೆಗೆ ಜನತೆಯ ಆಶೋತ್ತರಗಳನ್ನು ಈಡೇರಿಸಲಾಗುವುದು. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ. ನಮಗೆ ತೊಂದರೆ ಕೊಡಲು ವಿನಯ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಅವರು ಗೆಲ್ಲುವುದಿಲ್ಲ. ಏಕೆಂದರೆ ಬಿಜೆಪಿ ಜತೆಗೆ ಶಾಮೀಲಾಗಿದ್ದಾರೆ. ಕನಕ ಗುರುಪೀಠದ ನಿರಂಜನಾನಂದಾಪುರಿ ಸ್ವಾಮಿಗಳು ಮತ್ತು ನಾನು ವಿನಯ್ ಕುಮಾರ್ ಅವರೊಂದಿಗೆ ಮಾತನಾಡಿ, ನಿಲ್ಲುವುದು ಬೇಡ ಸಲಹೆ ನೀಡಿದಾಗ ಒಪ್ಪಿಕೊಂಡು ಈಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಾನು ಬೇಕೋ, ವಿನಯ್ ಕುಮಾರ್ ಬೇಕೋ ನಿರ್ಧರಿಸಿ ಎಂದು ಸಿಎಂ ಸಿದ್ದರಾಮಯ್ಯ ಕೇಳಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ವಿಡಿಯೊ ಕೇಸ್‌; ವಿಡಿಯೊದಲ್ಲಿರುವ ಮಹಿಳಾ ಅಧಿಕಾರಿಗಳಿಗೆ SIT ನೋಟಿಸ್‌: ‘ನಾನವಳಲ್ಲ’ ಎಂದು ಹೇಳಿಕೆ!

ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ತಿಳಿಯಬೇಕು. ಕಾಂಗ್ರೆಸ್ ಅಭ್ಯರ್ಥಿಗೆ ಕೊಡುವ ಮತ ಸಿದ್ದರಾಮಯ್ಯಗೆ ಕೊಡುವ ಮತ. ನನಗೆ ಶಕ್ತಿ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಮ್ಮ ಅಭ್ಯರ್ಥಿ ವಿದ್ಯಾವಂತೆ. ಸಂಸತ್ತಿನಲ್ಲಿ ನಿಮ್ಮ ಪರವಾಗಿ ಮಾತನಾಡುವ ಶಕ್ತಿ ಇದೆ. ಅದಕ್ಕಾಗಿ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಿ. ಅವರು ಗೆದ್ದರೆ, ನಾನೇ ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Continue Reading
Advertisement
Rohit Sharma
ಕ್ರೀಡೆ14 mins ago

Rohit Sharma: ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ ರೋಹಿತ್​ ಶರ್ಮ!

Karan Johar upset with Kettan Singh's poor mimicry of him
ಸಿನಿಮಾ20 mins ago

Karan Johar: ‘ಕಳಪೆ’ ಮಿಮಿಕ್ರಿ ಕಂಡು ಕರಣ್ ಜೋಹರ್ ಗರಂ; ಕ್ಷಮೆಯಾಚಿಸಿದ ಹಾಸ್ಯನಟ!

Drowned in water mysuru
ಮೈಸೂರು22 mins ago

Drowned In water : ಈಜಲು 20 ಅಡಿ ಎತ್ತರದಿಂದ ನೀರಿನ ಬುಗ್ಗೆಗೆ ಜಿಗಿದವನು ಮತ್ತೆ ಏಳಲೇ ಇಲ್ಲ!

Drowned in water
ದಕ್ಷಿಣ ಕನ್ನಡ44 mins ago

Drowned In water : ಹೆತ್ತವರ ಕಣ್ಣೇದುರಿಗೆ ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದರು ಪುತ್ರಿಯರು

ED Raid
ದೇಶ57 mins ago

ED Raid: ಇಡಿ ಭರ್ಜರಿ ಬೇಟೆ; ಕಾಂಗ್ರೆಸ್‌ ಮುಖಂಡನ ಆಪ್ತ ಕಾರ್ಯದರ್ಶಿ ಮನೆಯಿಂದ 25 ಕೋಟಿ ರೂ. ವಶ

Mahanati Show Gagana Comedy About Rishi actor
ಕಿರುತೆರೆ1 hour ago

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

amethi unrest
ದೇಶ1 hour ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ2 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ2 hours ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್2 hours ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ16 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ18 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ18 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌