Lok Sabha Election 2024: ಕಲಬುರಗಿಯಲ್ಲಿ ನಡೆಯುತ್ತಾ ʼದೊಡ್ಡಮನಿʼ ಆಟ? ಸಂಸದ ಜಾದವ್‌ ಪ್ಲ್ಯಾನ್‌ ಏನು? - Vistara News

Lok Sabha Election 2024

Lok Sabha Election 2024: ಕಲಬುರಗಿಯಲ್ಲಿ ನಡೆಯುತ್ತಾ ʼದೊಡ್ಡಮನಿʼ ಆಟ? ಸಂಸದ ಜಾದವ್‌ ಪ್ಲ್ಯಾನ್‌ ಏನು?

Lok Sabha Election 2024: ರಾಧಾಕೃಷ್ಣ ದೊಡ್ಡಮನಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ. ಅಲ್ಲದೆ, ಪೀಪಲ್‌ ಆಫ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಮಾವ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ವ್ಯವಹಾರ ಸೇರಿದಂತೆ ಅವರ ಇನ್ನಿತರ ವಹಿವಾಟುಗಳ ನಿರ್ವಹಣೆಯನ್ನು ಮಾಡುತ್ತಿದ್ದರು. ಈಗ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಕ್ಷೇತ್ರದ ಜನರನ್ನು ಹೇಗೆ ಮ್ಯಾನೇಜ್‌ ಮಾಡುತ್ತಾರೆ ಎಂಬುದು ಕುತೂಹಲವಾಗಿದೆ. ಅತ್ತ ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾದವ್‌ ಸಹ ಟಕ್ಕರ್‌ ಕೊಡಲು ರೆಡಿಯಾಗಿದ್ದು, ರಾಜಕೀಯ ಹಣಾಹಣಿ ಕುತೂಹಲವನ್ನು ಮೂಡಿಸಿದೆ.

VISTARANEWS.COM


on

Lok Sabha Election 2024 and Fight between Radhakrishna Doddamani and Umesh Jadhav in Kalaburagi and Mallikarjuna Kharge strategy for election campaign
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವಕುಮಾರ್ ಭೋಗನಳ್ಳಿ, ಕಲಬುರಗಿ
ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ. ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಬಹಳ ಕಸರತ್ತು ನಡೆಸಿವೆ. ಯಾರನ್ನು ಕಣಕ್ಕಿಳಿಸಿದರೆ ಇಲ್ಲಿ ಗೆಲುವು ಸುಲಭ? ಜಾತಿ ಲೆಕ್ಕಾಚಾರವೇನು? ಎದುರಾಳಿಯನ್ನು ಕಟ್ಟಿಹಾಕುವುದು ಹೇಗೆ? ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಟಿಕೆಟ್‌ ನೀಡಲಾಗಿದೆ. ಅದೇ ರೀತಿಯಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ (Kalaburagi Lok Sabha constituency) ಕಾಂಗ್ರೆಸ್‌ ಅಭ್ಯರ್ಥಿಯ ಆಯ್ಕೆಯನ್ನು ಮಾಡಲಾಗಿದೆ. ಕುಟುಂಬ ರಾಜಕಾರಣದ ಅಪಖ್ಯಾತಿ ನಡುವೆಯೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ (Radhakrishna Doddamani) ಅವರನ್ನು ಕಣಕ್ಕಿಳಿಸಿದ್ದಾರೆ. ಆದರೆ, ಇಲ್ಲಿ ಕೈಪಡೆಗೆ ಪ್ರಚಾರದ ಸರಕಿನ ಕೊರತೆ ಇದೆಯೇ? ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಬಿಜೆಪಿ ಸಂಸದ, ಹಾಲಿ ಅಭ್ಯರ್ಥಿ ಉಮೇಶ್‌ ಜಾದವ್‌ ಸಹ ಟಕ್ಕರ್‌ ಕೊಡಲು ಸಿದ್ಧರಾಗಿದ್ದು, ಗೆಲುವಿನ ಗುರಿ ಮುಟ್ಟಲು ಅವರು ಸಾಕಷ್ಟು ಬೆವರು ಹರಿಸಬೇಕಿದೆ.

ಲೋಕಸಭಾ ಚುನಾವಣೆ ಕಾವು ಆರಂಭವಾದಾಗಿನಿಂದಲೂ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಬಹಳ ಚರ್ಚೆಗೆ ಬಂದಿದ್ದ ವಿಷಯವಾಗಿತ್ತು. ಇಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪರ್ಧೆ ಮಾಡಿದರೆ ಸೂಕ್ತ. ಅವರೇ ಹಾಲಿ ಸಂಸದ ಉಮೇಶ್‌ ಜಾದವ್‌ಗೆ ಟಕ್ಕರ್‌ ಕೊಡಲು ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ನಡೆದಿತ್ತು. ಆದರೆ, ಖರ್ಗೆ ಮಾತ್ರ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಟಿಕೆಟ್‌ ಆಯ್ಕೆ ವಿಷಯ ಬಂದಾಗ ತಮ್ಮ ಅಳಿಯನಿಗೆ ಟಿಕೆಟ್‌ ಕೊಟ್ಟಿದ್ದಾರೆ. ಹೀಗಾಗಿ ಮುಂದಿನ ರಾಜಕೀಯದಾಟ ಕುತೂಹಲವನ್ನು ಕೆರಳಿಸಿದೆ.

ಖರ್ಗೆ ಸ್ಪರ್ಧೆಗೆ ಹೆದರಿದರೇ?

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಗ್ಯಾರಂಟಿ ಯೋಜನೆಗಳು ಜಾರಿ ಮಾಡಿದ್ದು, ಜನಪ್ರಿಯತೆಯನ್ನು ಹೊಂದಿದೆ. ಇಷ್ಟಾದರೂ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದು ಏಕೆ? ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಆದರೆ, ಖರ್ಗೆ ಅವರು ಈಗ ಸಾಮಾನ್ಯ ಸ್ಥಾನದಲ್ಲಿಲ್ಲ. ಅವರೀಗ ಎಐಸಿಸಿ ಅಧ್ಯಕ್ಷರು. ಇಡೀ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುತ್ತಿರುವ ವ್ಯಕ್ತಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸ್ಪರ್ಧೆ ಮಾಡಿ ಒಂದು ವೇಳೆ ಸೋಲು ಕಂಡರೆ ಅದು ಅವರೊಬ್ಬರ ಸೋಲಾಗಿ ಉಳಿಯುವುದಿಲ್ಲ. ಇಡೀ ಕಾಂಗ್ರೆಸ್‌ನ ಸೋಲು ಎಂದೇ ಬಿಂಬಿಸಲಾಗುತ್ತದೆ. ಅಲ್ಲದೆ, ತಮಗೆ ಈಗಾಗಲೇ ಸಾಕಷ್ಟು ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಅಭ್ಯರ್ಥಿಯಾದರೆ ಪ್ರಚಾರ ಕಾರ್ಯಕ್ಕಾಗಿ ಕ್ಷೇತ್ರ ಸಂಚಾರವನ್ನು ಮಾಡಬೇಕು. ಜತೆಗೆ ಇಡೀ ದೇಶದ ಕಾಂಗ್ರೆಸ್‌ ಚುನಾವಣೆಗೆ ರಣತಂತ್ರ ರೂಪಿಸುವುದು, ಕಾರ್ಯತಂತ್ರವನ್ನು ಹೆಣೆಯುವುದು ಸೇರಿದಂತೆ ಇನ್ನಿತರ ಜವಾಬ್ದಾರಿಯನ್ನು ನಿಭಾಯಿಸಬೇಕು. ಹೀಗಾಗಿ ಸ್ಪರ್ಧೆಯ ಉಸಾಬರಿ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ.

ಯಾರು ಈ ರಾಧಾಕೃಷ್ಣ ದೊಡ್ಡಮನಿ?

ರಾಧಾಕೃಷ್ಣ ದೊಡ್ಡಮನಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ. ಅಲ್ಲದೆ, ಪೀಪಲ್‌ ಆಫ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಮಾವ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ವ್ಯವಹಾರ ಸೇರಿದಂತೆ ಅವರ ಇನ್ನಿತರ ವಹಿವಾಟುಗಳ ನಿರ್ವಹಣೆಯನ್ನು ಮಾಡುತ್ತಿದ್ದರು. ಈ ಸಂಬಂಧ ಕಲಬುರಗಿಗೆ ಅವರು ಆಗಾಗ ಬಂದು ಹೋಗುತ್ತಿದ್ದರು. ಹೀಗಾಗಿ ಅವರಿಗೆ ಕಾಂಗ್ರೆಸ್‌ನ ಕೆಲವು ಮುಖಂಡರ ಪರಿಚಯವಿದೆಯೇ ವಿನಃ ಬೇರೆ ಜನಸಾಮಾನ್ಯರ ನಡುವೆ ಒಡನಾಟ ಇಲ್ಲ. ಹೀಗಾಗಿ ಈಗ ಜನಸಾಮಾನ್ಯರೊಂದಿಗೆ ಅವರು ಯಾವ ರೀತಿ ಬೆಸೆದುಕೊಳ್ಳಲಿದ್ದಾರೆ? ಏಕಾಏಕಿ ಜನರ ಮನಸ್ಸನ್ನು ಗೆಲ್ಲಲು ಯಾವ ರೀತಿ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ ಎಂಬುದು ಕುತೂಹಲವನ್ನು ಮೂಡಿಸಿದೆ.

ಗ್ಯಾರಂಟಿ ಮಾತ್ರವೇ ಪ್ರಚಾರದ ಸರಕು?

ರಾಧಾಕೃಷ್ಣ ದೊಡ್ಡಮನಿ ಅವರಿಗೆ ಪ್ರಚಾರ ಕಾರ್ಯವನ್ನೇನೋ ಶುರು ಮಾಡಿದ್ದಾರೆ. ಆದರೆ, ಅವರಿಗೆ ಈಗ ಪ್ರಚಾರದ ಸರಕು ಏನು ಎಂಬುದು ಪ್ರಶ್ನೆಯಾಗಿದೆ. ಕಾರಣ ಅವರ ಈ ಭಾಗದಲ್ಲಿ ಹಾಕಲಾದ ಬ್ಯಾನರ್‌ಗಳಲ್ಲಿ ಆರ್ಟಿಕಲ್‌ 371 (J) ಹಾಗೂ ಪಂಚ ಗ್ಯಾರಂಟಿಗಳ ಬಗ್ಗೆ ಮಾತ್ರವೇ ಹಾಕಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೇಳಿದರೆ ಸಾಲದು, ಜತೆಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ಅಂಶಗಳನ್ನೂ ತಿಳಿಸಿ ಮನಗೆಲ್ಲಬೇಕಿದೆ. ಇದರ ಹೊರತಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಮ್ಮ ಮುಂದಿನ ಪ್ಲ್ಯಾನ್‌ ಬಗ್ಗೆಯೂ ಹೇಳಬೇಕಿದೆ. ಇದರಲ್ಲಿ ಎಷ್ಟರಮಟ್ಟಿಗೆ ಯಶ ಕಾಣುತ್ತಾರೆ ಎಂಬುದು ಮುಖ್ಯವಾಗಿದೆ. ಆದರೆ, ತಮ್ಮ ಅಳಿಯ ಅಭ್ಯರ್ಥಿಯಾಗಿರುವುದರಿಂದ ಖರ್ಗೆ ಕುಟುಂಬಕ್ಕೆ ಸಹ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಸಂಬಂಧ ಈಗಾಗಲೇ ಖರ್ಗೆ ಅವರು ಕ್ಷೇತ್ರಕ್ಕೆ ಹಲವು ಸುತ್ತಿನ ಸಂಬಂಧಿಸಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್‌ ಬೇಕು ಎಂದು ಹಲವರಿಗೆ ಈಗಾಗಲೇ ಜವಾಬ್ದಾರಿ ವಹಿಸಿದ್ದಾರೆನ್ನಲಾಗಿದೆ. ಇನ್ನು ಪುತ್ರ ಪ್ರಿಯಾಂಕ್‌ ಖರ್ಗೆ ಸಹ ಅಖಾಡಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ: Lok Sabha Election 2024: ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ಆಕಾಶದಲ್ಲಿ ಹಾರಾಡೋಕೂ ಗೊತ್ತೆಂದ ಗಾಯತ್ರಿ

ಉಮೇಶ್‌ ಜಾದವ್‌ ಪ್ರತಿತಂತ್ರ

ಇತ್ತ ಬಿಜೆಪಿಯ ಹಾಲಿ ಸಂಸದ ಡಾ.ಉಮೇಶ್ ಜಾದವ್ ಸಹ ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ. ತಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ರಿಪೋರ್ಟ್‌ ಕಾರ್ಡ್‌ ಜತೆಗೆ ಮೋದಿ ಸರ್ಕಾರದ ಸಾಧನೆಯ ಪಟ್ಟಿಯನ್ನೂ ಹಿಡಿದು ಮತ ಕೇಳಲು ಹೊರಟಿದ್ದಾರೆ. ಇದಲ್ಲದೆ, ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ಆಗಾಗ ಕಿಡಿಕಾರುತ್ತಲೇ ಇರುವ ಅವರು ಪ್ರಿಯಾಂಕ್‌ ಖರ್ಗೆ ಮೇಲೆ ಹರಿಹಾಯುತ್ತಲೇ ಬರುತ್ತಿದ್ದಾರೆ. ತಾವು ಕಾಂಗ್ರೆಸ್‌ ಪಕ್ಷ ಬಿಡಲು ಪ್ರಿಯಾಂಕ್‌ ಖರ್ಗೆ ಅವರೇ ಕಾರಣ ಎಂದು ಸಾಕಷ್ಟು ಬಾರಿ ಹೇಳಿಕೊಂಡು ಬಂದಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿಲ್ಲ. ಕಲ್ಯಾಣ ಕರ್ನಾಟಕವೆಂದರೆ ಖರ್ಗೆ ಆ್ಯಂಡ್‌ ಕಂಪನಿಯಾಗಿದೆ. ಇದರಿಂದ ಈ ಭಾಗವನ್ನು ಹೊರಗೆ ತರುವುದೇ ತಮ್ಮ ಗುರಿ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ನಾಯಕರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದೂ ಸಹ ಜಾದವ್‌ ಆರೋಪ ಮಾಡಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ ಸಹಿತ ಹಲವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಜಾದವ್‌ಗೆ ಹಾದಿ ಸುಲಭ ಇದೆಯೇ?

ಹಾಗಂತ ಉಮೇಶ್‌ ಜಾದವ್‌ಗೆ ಹಾದಿ ಸುಲಭವೇನಿಲ್ಲ. ಈಗ ಆಡಳಿತರೂಢ ಕಾಂಗ್ರೆಸ್‌ ಪಕ್ಷವು ಕ್ಷೇತ್ರದಲ್ಲಿ ಒಂದು ಮಟ್ಟಿನ ಹಿಡಿತವನ್ನು ತೆಗೆದುಕೊಳ್ಳಲು ಮುಂದಾಗಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗೆ ಅನುಷ್ಠಾನ ಸಮಿತಿಯನ್ನು ರಚನೆ ಮಾಡಿದೆ. ಈ ತಂಡ ಸಹ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡುವುದು, ಈ ಯೋಜನೆಗಳನ್ನು ಕಾಂಗ್ರೆಸ್‌ ತಂದಿದೆ ಎಂದು ಮನದಟ್ಟು ಮಾಡುವುದರ ಜತೆಗೆ ಕೇಂದ್ರ ಸರ್ಕಾರದಿಂದ ಅನುದಾನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಅಂಶವನ್ನೂ ಹೇಳಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್‌ ರೂಪಿಸುವ ಚಕ್ರವ್ಯೂಹವನ್ನು ಉಮೇಶ್‌ ಜಾದವ್‌ ಹೇಗೆ ಭೇದಿಸುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Parliament Flashback: 1996ರಲ್ಲಿ ಬಿಜೆಪಿ ಮೊದಲ ಬಾರಿ ಕೇಂದ್ರದಲ್ಲಿ ಸರ್ಕಾರ ನಡೆಸಿದ್ದು ಹೇಗೆ?

Parliament Flashback: 1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 545ರಲ್ಲಿ 161 ಸ್ಥಾನ ಗೆದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 15 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್‌ ಕೇವಲ 140 ಸೀಟುಗಳಿಗೆ ಸೀಮಿತವಾಯಿತು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರಿಂದ ರಾಷ್ಟ್ರಪತಿಯವರು ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿದರು.

VISTARANEWS.COM


on

Parliament Flashback
Koo

ಬೆಂಗಳೂರು: 1991ರ ಚುನಾವಣೆಯಲ್ಲಿ (Parliament Flashback) ಬಹುಮತ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್‌, ಪಿ.ವಿ.ನರಸಿಂಹ ರಾವ್‌ ನೇತೃತ್ವದಲ್ಲಿ ಹಾಗೂ ಹೀಗೂ ಐದು ವರ್ಷ ಆಡಳಿತ ನಡೆಸಿತು. ಆದರೆ ರಾಜೀವ್‌ ಗಾಂಧಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಭ್ರಷ್ಟಾಚಾರ ಆರೋಪಗಳು ನರಸಿಂಹ ರಾವ್‌ ಸರ್ಕಾರದ ಅವಧಿಯಲ್ಲಿ ಇನ್ನೂ ಜೋರಾಗಿ ಕೇಳಿ ಬಂದವು. ನರಸಿಂಹ ರಾವ್‌ ಸಂಪುಟದ ಏಳು ಸಚಿವರು ನಾನಾ ಹಗರಣಗಳಲ್ಲಿ ಸಿಲುಕಿ ರಾಜೀನಾಮೆ ನೀಡಬೇಕಾಯಿತು. ಸ್ವತಃ ಪ್ರಧಾನಿ ನರಸಿಂಹ ರಾವ್‌ ವಿರುದ್ಧವೂ ಭ್ರಷ್ಟಾಚಾರ ಆರೋಪ ಕೇಳಿ ಬಂತು.
ಇದರ ಜತೆಗೆ ಕಾಶ್ಮೀರದಲ್ಲಿ ಭಯೋತ್ಪಾದನೆ ಭುಗಿಲೆದ್ದಿತು. ಕಾಂಗ್ರೆಸ್‌ ನ ತುಷ್ಟೀಕರಣ ರಾಜಕಾರಣದ ವಿರುದ್ಧ ಬಹುಸಂಖ್ಯಾತ ಹಿಂದೂಗಳು ದನಿ ಎತ್ತಲಾರಂಭಿಸಿದರು. ಇನ್ನೊಂದೆಡೆ ಕಾಂಗ್ರೆಸ್‌ ಪಕ್ಷದೊಳಗೆ ಬಂಡಾಯ ತೀವ್ರವಾಯಿತು. ಎನ್‌.ಡಿ.ತಿವಾರಿ, ಅರ್ಜುನ್‌ ಸಿಂಗ್‌ರಂಥ ಹಿರಿಯ ನಾಯಕರು ಕಾಂಗ್ರೆಸ್‌ನಿಂದ ಸಿಡಿದು ಆಲ್‌ ಇಂಡಿಯಾ ಇಂದಿರಾ ಕಾಂಗ್ರೆಸ್‌(ತಿವಾರಿ ಬಣ) ಸ್ಥಾಪಿಸಿದರು. ತಮಿಳುನಾಡಿನ ಜಿ.ಕೆ.ಮೂಪನಾರ್‌ ತಮಿಳ್‌ ಮಾನಿಲ ಕಾಂಗ್ರೆಸ್‌ ಕಟ್ಟಿದರು.

ದೊಡ್ಡ ಪಕ್ಷವಾದ ಬಿಜೆಪಿ

1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 545ರಲ್ಲಿ 161 ಸ್ಥಾನ ಗೆದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 15 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್‌ ಕೇವಲ 140 ಸೀಟುಗಳಿಗೆ ಸೀಮಿತವಾಯಿತು. ಕಾಂಗ್ರೆಸ್‌ ಬಂಡಾಯ ಪಕ್ಷವಾದ ತಮಿಳ್‌ ಮಾನಿಲ ಕಾಂಗ್ರೆಸ್‌ 20 ಮತ್ತು ಎನ್‌ ಡಿ ತಿವಾರಿ ಬಣ 4 ಸೀಟುಗಳನ್ನು ಗೆದ್ದುಕೊಂಡಿತು. ಜನತಾ ದಳ 46 ಸ್ಥಾನಗಳಲ್ಲಿ ಜಯ ಗಳಿಸಿತು. ಸಿಪಿಎಂ 32 ಸ್ಥಾನಗಳಲ್ಲಿ ಗೆದ್ದಿತು.
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರಿಂದ ರಾಷ್ಟ್ರಪತಿಯವರು ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿದರು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ- ಸುಷ್ಮಾ ಸ್ವರಾಜ್‌ ಮಧ್ಯೆ ಐತಿಹಾಸಿಕ ಕದನ!

1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಕಾಂಗ್ರೆಸ್‌ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿಯ ಫೈರ್‌ ಬ್ರಾಂಡ್‌ ನಾಯಕಿ, ದಿಲ್ಲಿಯ ಮುಖ್ಯಮಂತ್ರಿಯೂ ಆಗಿದ್ದ ಸುಷ್ಮಾ ಸ್ವರಾಜ್‌ ನಡುವಿನ ಮುಖಾಮುಖಿ.

ಆಗಷ್ಟೇ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಪಟ್ಟಕ್ಕೆ ಏರಿಸಲಾಗಿತ್ತು. ಅವರನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನವಾಗಿತ್ತು. ತಮ್ಮ ಪತಿ ರಾಜೀವ್‌ ಗಾಂಧಿ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಅಮೇಠಿ ಲೋಕಸಭೆ ಕ್ಷೇತ್ರ ಸೋನಿಯಾ ಅವರ ಮೊದಲ ಆಯ್ಕೆಯಾಗಿತ್ತು. ಅಲ್ಲಿ ಅವರು ನಾಮಪತ್ರ ಸಲ್ಲಿಸಿದರು. ಆದರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಮೇಠಿಯಲ್ಲಿ 1998ರ ಲೋಕಸಭೆ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿ ಕಾಂಗ್ರೆಸ್‌ಗೆ ಸೋಲಾಗಿತ್ತು. ರಾಜೀವ್‌ ಗಾಂಧಿ ಅವರ ಪರಮಾಪ್ತರಾಗಿದ್ದ ಕ್ಯಾಪ್ಟನ್‌ ಸತೀಶ್‌ ಶರ್ಮಾ ಅವರನ್ನು ಬಿಜೆಪಿ ಅಭ್ಯರ್ಥಿ ಡಾ. ಸಂಜಯ್‌ ಸಿಂಗ್‌ ಸೋಲಿಸಿದ್ದರು. ಹಾಗಾಗಿ ಅಲ್ಲಿ ಸುಲಭವಾಗಿ ಗೆಲ್ಲುವ ವಿಶ್ವಾಸ ಸೋನಿಯಾಗಿರಲಿಲ್ಲ. ಹಾಗಾಗಿ ಸೋನಿಯಾ ಗಾಂಧಿ ಹಿತೈಷಿಗಳೆಲ್ಲ ಸೇರಿ ಲೆಕ್ಕಾಚಾರ ಹಾಕಿ ಆರಿಸಿದ ಮತ್ತೊಂದು ಕ್ಷೇತ್ರವೇ ಬಳ್ಳಾರಿ. ಏಕೆಂದರೆ 1952ರಿಂದ 1999ರವರೆಗೆ ನಡೆದ 12 ಚುನಾವಣೆಗಳಲ್ಲೂ ಕಾಂಗ್ರೆಸ್‌ ಬಳ್ಳಾರಿಯಲ್ಲಿ ಜಯ ಸಾಧಿಸಿತ್ತು.
ಹೈದರಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಬಳ್ಳಾರಿಗೆ ಬಂದ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು.

ಸೋನಿಯಾ ನಾಮಪತ್ರದ ಬೆನ್ನಿಗೇ ಸುಷ್ಮಾ ಸ್ವರಾಜ್‌ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಬಿಜೆಪಿ ನಡುಕ ಹುಟ್ಟಿಸಿತು. ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್‌ ಅವರ ಚುನಾವಣಾ ಪ್ರಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ವಿದೇಶಿ ಸೊಸೆ ಮತ್ತು ಸ್ವದೇಶಿ ಮಗಳ ನಡುವಿನ ಸ್ಪರ್ಧೆ ಎಂದೇ ಮಾಧ್ಯಮಗಳು ಬಣ್ಣಿಸಿದವು. ಸುಷ್ಮಾ ಸ್ವರಾಜ್‌ ಅವರು ಕನ್ನಡದಲ್ಲೇ ಭಾಷಣ ಮಾಡಿ ಅಚ್ಚರಿ ಮೂಡಿಸಿದರು. ಕಾಂಗ್ರೆಸ್‌ ಮತ್ತು ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರು ಇಲ್ಲಿಗೆ ಬಂದು ಪ್ರಚಾರ ಮಾಡಿದರು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿ ಅವರು 56,100 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಇದನ್ನೂ ಓದಿ: Parliament Flashback: ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಎಫೆಕ್ಟ್‌; 1977ರಲ್ಲಿ ಧೂಳಿಪಟವಾಗಿದ್ದ ಕಾಂಗ್ರೆಸ್‌!

ಅತ್ತ ಅಮೇಠಿಯಲ್ಲಿ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆದ್ದ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರ ತೊರೆದರು. ಸುಷ್ಮಾ ಸ್ವರಾಜ್‌ ಇಲ್ಲಿ ಸೋತರು. ಆದರೆ ಪ್ರತಿವರ್ಷ ವರ ಮಹಾಲಕ್ಷ್ಮಿ ದಿನ ಬಳ್ಳಾರಿಗೆ ಬಂದು ಪೂಜೆಯಲ್ಲಿ ಭಾಗಿಯಾಗುತ್ತಿದ್ದರು. ಅವರ ಸ್ಪರ್ಧೆ ಬಳ್ಳಾರಿಯಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಿತು. ಮುಂದೆ 2004, 2009, 20014 ಮತ್ತು 20019ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಜಯ ದಾಖಲಿಸಿದ್ದೇ ಇದಕ್ಕೆ ಸಾಕ್ಷಿ.

Continue Reading

ಕರ್ನಾಟಕ

Lok Sabha Election 2024: ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಪ್ರಧಾನಿ ಮೋದಿ; ಕೊಟ್ಟ ಟಾಸ್ಕ್‌ ಏನು?

Lok Sabha Election 2024: ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರ ಬರೆದು, ಚುನಾವಣೆಯಲ್ಲಿ ಗೆದ್ದು ಬರುವಂತೆ ಶುಭ ಕೋರಿದ್ದಾರೆ. ನೀವು ಸಂಸದರಾಗಿ ನನ್ನ ತಂಡ ಸೇರುತ್ತಿರುವುದು ದೊಡ್ಡ ಆಸ್ತಿ ಎಂದು ತಿಳಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಹಾಗೂ ಇಂಡಿ ಒಕ್ಕೂಟದ ಸಮಾಜ ಒಡೆಯುವ ಮನಸ್ಥಿತಿ, ಎಸ್ಸಿ ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿಯನ್ನು ತಮ್ಮ ವೋಟ್ ಬ್ಯಾಂಕ್ ಸಮುದಾಯಕ್ಕೆ ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿಯಾದರೂ ಅವರಿಗೆ ಕೊಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಅವರು ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ವೋಟ್ ಬ್ಯಾಂಕ್ ಸಮುದಾಯಕ್ಕೆ ಹಂಚಿಕೆ ಮಾಡುವ ಅಪಾಯಕಾರಿ ತೀರ್ಮಾನ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಒಟ್ಟಾಗಿ ತಡೆಯಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.

VISTARANEWS.COM


on

Prime Minister Narendra Modi wrote a letter to former CM Basavaraj Bommai
Koo

ನವ ದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಪತ್ರ ಬರೆದು, ಚುನಾವಣೆಯಲ್ಲಿ (Lok Sabha Election 2024) ಗೆದ್ದು ಬರುವಂತೆ ಶುಭ ಕೋರಿದ್ದಾರೆ. ನೀವು ಸಂಸದರಾಗಿ ನನ್ನ ತಂಡ ಸೇರುತ್ತಿರುವುದು ದೊಡ್ಡ ಆಸ್ತಿ ಎಂದು ತಿಳಿಸಿದ್ದಾರೆ.

ಸುದೀರ್ಘ ಪತ್ರ ಬರೆದಿರುವ ಅವರು, ನೀವು ಮುಖ್ಯಮಂತ್ರಿಯಾಗಿ, ನೀರಾವರಿ ಸಚಿವರಾಗಿ, ಗೃಹ ಸಚಿವರಾಗಿ, ಕಾನೂನು ಸಚಿವರಾಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದೀರಿ, ನೀವು ಶಿಗ್ಗಾವಿಯಲ್ಲಿ ಸುಮಾರು 30 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಮಾಡಿದ್ದೀರಿ, ಕ್ಷೇತ್ರದಲ್ಲಿ ಸಿಮೆಂಟ್ ರಸ್ತೆಗಳು, ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದೀರಿ, ಕೋವಿಡ್ ಸಂದರ್ಭದಲ್ಲಿ ನಿಮ್ಮ ಸ್ವಂತ ಮನೆಯನ್ನು ಕೋವಿಡ್ ಕೇಂದ್ರವನ್ನಾಗಿ ಮಾಡಿ ಆಸ್ಪತ್ರೆಗಳ ಮೇಲಿನ ಭಾರ ಕಡಿಮೆ ಮಾಡಿದ್ದೀರಿ. ನೇಕಾರರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ, ಆಧುನಿಕ ತಂತ್ರಜ್ಞಾನ ಬಳಸಿ ಅವರ ಜೀವನ ಮಟ್ಟ ಸುಧಾರಣೆ ಮಾಡಿದ್ದೀರಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಿದ್ದೀರಿ, ನೀವು ಒಬ್ಬ ಕಾರ್ಯಕರ್ತರಾಗಿ ಪಡೆದ ಅನುಭವ ಜನ ಸೇವಕರಾಗಿ ಮಾಡಿದ ಸೇವೆ ಹಾವೇರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: RBI Guideline: ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಿದ ಆರ್‌ಬಿಐ; ಸಂಗ್ರಹಿಸಿದ ಹೆಚ್ಚುವರಿ ಶುಲ್ಕ ಮರುಪಾವತಿಗೆ ಸೂಚನೆ

ಜನರ ಆಶೀರ್ವಾದದಿಂದ ನೀವು ಸಂಸದರಾಗಿ ನಮ್ಮ ತಂಡದ ಸದಸ್ಯರಾಗಿ ಬರುವುದು ನನಗೆ ದೊಡ್ಡ ಆಸ್ತಿ ಸಿಕ್ಕಂತೆ. ನಮ್ಮ ತಂಡ ಹಾವೇರಿ ಕ್ಷೇತ್ರ ಹಾಗೂ ದೇಶದ ಅಭಿವೃದ್ಧಿಗೆ ಶ್ರಮವಹಿಸಲಿದೆ. ನಾನು ಈ ಪತ್ರದ ಮೂಲಕ ಕ್ಷೇತ್ರದ ಜನತೆಗೆ ಹೇಳುವುದೇನೆಂದರೆ, ಇದು ಸಾಮಾನ್ಯ ಚುನಾವಣೆಯಲ್ಲ ಇದು ದೇಶದ ಪ್ರತಿಯೊಂದು ಕುಟುಂಬದ ವಿಶೇಷವಾಗಿ ಹಿರಿಯ ನಾಗರಿಕರು ಕಳೆದು ಐದಾರು ದಶಕದಲ್ಲಿ ಅನುಭವಿಸಿದ ತೊಂದರೆಗಳು ಕಳೆದ ಒಂದು ದಶಕದಲ್ಲಿ ಸಾಕಷ್ಟು ಬೆಳವಣಿಗೆಗಳನ್ನು ಕಂಡಿದ್ದಾರೆ. ಅನೇಕ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಈ ಚುನಾವಣೆ ಜನರ ಜೀವನಮಟ್ಟವನ್ನು ಇನ್ನಷ್ಟು ಸುಧಾರಣೆಗೊಳಿಸಲು ಪ್ರೇರಣೆಯಾಗಲಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಪಡೆಯುವ ಪ್ರತಿಯೊಂದು ಮತವೂ 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತ ಮಾಡಲು ಮಹತ್ವದ್ದಾಗಿವೆ. ಮೊದಲ ಎರಡು ಹಂತದ ಮತದಾನದಲ್ಲಿ ಮತದಾರರು ತಮ್ಮ ಮತಗಳ ಮೂಲಕ ದೇಶದ ಅಭಿವೃದ್ಧಿ ಪರ ಇರುವ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: Fortis Hospital: ಪಾರ್ಕಿನ್ಸನ್‌ ಕಾಯಿಲೆ ಚಿಕಿತ್ಸೆಗೆ ಪ್ರತ್ಯೇಕ ಕ್ಲಿನಿಕ್‌ ಆರಂಭಿಸಿದ ಫೋರ್ಟಿಸ್‌ ಆಸ್ಪತ್ರೆ

ಮತದಾರರಿಗೆ ಕಾಂಗ್ರೆಸ್‌ ಹಾಗೂ ಇಂಡಿ ಒಕ್ಕೂಟದ ಸಮಾಜ ಒಡೆಯುವ ಮನಸ್ಥಿತಿ, ಎಸ್ಸಿ ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿಯನ್ನು ತಮ್ಮ ವೋಟ್ ಬ್ಯಾಂಕ್ ಸಮುದಾಯಕ್ಕೆ ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿಯಾದರೂ ಅವರಿಗೆ ಕೊಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಅವರು ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ವೋಟ್ ಬ್ಯಾಂಕ್ ಸಮುದಾಯಕ್ಕೆ ಹಂಚಿಕೆ ಮಾಡುವ ಅಪಾಯಕಾರಿ ತೀರ್ಮಾನ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಒಟ್ಟಾಗಿ ತಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಈಗ ಬೇಸಿಗೆ ಇರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದರೆ, ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಆದಷ್ಟು ಬೆಳಗಿನ ಸಮಯ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.

ಈ ಚುನಾವಣೆ ಸಂದರ್ಭದಲ್ಲಿ ನಮ್ಮ‌ ಕಾರ್ಯಕರ್ತರು ಮತದಾರರನ್ನು ಪ್ರೇರೇಪಿಸಿ ಹೆಚ್ಚಿನ ಮತದಾನವಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಬೂತ್ ಗೆಲ್ಲುವ‌ ಮೂಲಕ ಲೋಕಸಭಾ ಕ್ಷೇತ್ರ ಗೆಲ್ಲುವಂತೆ ನೋಡಿಕೊಳ್ಳಬೇಕು. ಇದೇ ವೇಳೆ ಕಾರ್ಯಕರ್ತರು ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ ಎಂದು ಪತ್ರದ ಮೂಲಕ ಪ್ರಧಾನಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Malpe Beach: ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ; ಸಿಂದಗಿಯಲ್ಲಿ ಸ್ನಾನಕ್ಕೆಂದು ಬಾವಿಗಿಳಿದಿದ್ದ ಬಾಲಕರಿಬ್ಬರ ಸಾವು

ನನ್ನ ಪ್ರತಿ ಕ್ಷಣವೂ ದೇಶದ ಜನರ ಶ್ರೇಯೋಭಿವೃದ್ಧಿಗೆ ಮೀಸಲಿದೆ ಎಂದು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಈ ಸಂದೇಶವನ್ನು ಎಲ್ಲ ಮತದಾರರಿಗೆ ತಲುಪಿಸಿ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Fact Check : ಕರ್ನಾಟಕದವರು ಪಾಪಿಗಳು ಅಂಥ ಹೇಳಿದ್ರಾ ಮೋದಿ; ಕಾಂಗ್ರೆಸ್ ಮಾಡಿದ ಪೋಸ್ಟ್​ ಸುಳ್ಳಾ? ಇಲ್ಲಿದೆ ನಿಜಾಂಶ

ಕ್ಲಿಪ್​ನಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲಿ ಹೇಳುತ್ತಿರುವುದು ಈ ರೀತಿ ಕೇಳಿಸುತ್ತದೆ, “ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ನೀವು ಕರ್ನಾಟಕದ ಜನರನ್ನು ಶಿಕ್ಷಿಸಬೇಕು. ಮುಂಬರುವ ವರ್ಷಗಳಲ್ಲಿ ಮೋದಿ ನಿಮಗೆ ಗ್ಯಾರಂಟಿ ನೀಡುತ್ತಾರೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಓಡಾಡಿದೆ. “ಕನ್ನಡಿಗರು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಮೋದಿ ಮಾತ್ರ ಕನ್ನಡಿಗರನ್ನು ಪಾಪಿಗಳು ಎಂದು ಕರೆಯುತ್ತಾರೆ, ಎಂದು ಉಲ್ಲೇಖಿಸಲಾಗಿದೆ.

VISTARANEWS.COM


on

Fact check
Koo

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಳುಗಳ ಭರಾಟೆ ಜೋರಾಗಿದೆ. ಡೀಪ್​ಫೇಕ್​ ಸೇರಿದಂತೆ ಎಡಿಟಿಂಗ್​ ತಾಂತ್ರಿಕತೆ ಮಿತಿಮೀರಿ ಅಭಿವೃದ್ಧಿಯಾಗಿರುವ ಕಾರಣ ಸತ್ಯ ಯಾವುದು ಸುಳ್ಳು ಯಾವುದು ಎಂದು ಒಂದೇ ನೋಟಕ್ಕೆ ತಿಳಿದುಕೊಳ್ಳುವುದು ಕೂಡ ಕಷ್ಟವಾಗಿದೆ. ಇದೇ ಮಾದರಿಯಲ್ಲಿ ರೀತಿ ಪ್ರಧಾನಿ ಮೋದಿ (Narendra Modi) ಕರ್ನಾಟಕದ ಜನತೆಯನ್ನು ಪಾಪಿಗಳು ಎಂದು ಕರೆದಿದ್ದಾರೆ ಎಂಬ ವಿಡಿಯೊವೊಂದು ವೈರಲ್​ ಆಗಿದೆ. ಪ್ರಧಾನಿ ಆ ರೀತಿ ಹೇಳಿದ್ದಾರೆ ಎಂಬುದಾಗಿ ಕೇರಳ ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳ ಹಲವರ ಎಕ್ಸ್​ ಹ್ಯಾಂಡಲ್​ನಲ್ಲಿ ವಿಡಿಯೊ ಶೇರ್​ ಆಗಿದೆ. ಹಾಗಾದರೆ ಮೋದಿ ಕನ್ನಡದ ಮಂದಿಯನ್ನು ಪಾಪಿಗಳು ಅಂಥ ಹೇಳಿದ್ದು ಹೌದಾ? ಕಾಂಗ್ರೆಸ್​ ಪೋಸ್ಟ್​ ಮಾಡಿದ ವಿಡಿಯೊದ ಸಾಚಾತನವೇನು (Fact Check) ಎಂಬುದನ್ನು ಗಮನಿಸೋಣ.

2024 ರ ಲೋಕಸಭಾ ಚುನಾವಣೆಯ (Lok Sabha Election) ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29, 2024 ರಂದು ದಾವಣಗೆರೆ ಮತ್ತು ಬೆಳಗಾವಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. ಈ ಸಭೆಗಳಲ್ಲಿ ಅವರು ಮಾಡಿದ ಭಾಷಣದ ಕ್ಲಿಪ್​ಗಳೇ ಚರ್ಚೆಯ ವಿಷಯವಾಗಿರುವುದು. ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದ ಕರ್ನಾಟಕದ ಜನ ಪಾಪಿಗಳು. ಅವರನ್ನು ಶಿಕ್ಷಿಸಬೇಕು ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್​ ಆಗಿದೆ.

ಪ್ರತ್ಯೇಕ ಮಾಡಿ ಹಂಚಲಾದ ವಿಡಿಯೊದಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲಿ ಹೇಳುತ್ತಿರುವುದು ಈ ರೀತಿ ಕೇಳಿಸುತ್ತದೆ; “ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ನೀವು ಈ ಕರ್ನಾಟಕದ ಜನರನ್ನು ಶಿಕ್ಷಿಸಬೇಕು. ಮುಂಬರುವ ವರ್ಷಗಳಲ್ಲಿ ಮೋದಿ ನಿಮಗೆ ಗ್ಯಾರಂಟಿ ಕೊಡುತ್ತಾರೆ. ಇದನ್ನೇ ಎತ್ತಿಕೊಂಡು “ಕನ್ನಡಿಗರು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಮೋದಿ ಮಾತ್ರ ಕನ್ನಡಿಗರನ್ನು ಪಾಪಿಗಳು ಎಂದು ಕರೆಯುತ್ತಾರೆ, ಎಂದು ಉಲ್ಲೇಖಿಸಿ ಪ್ರತಿಪಕ್ಷಗಳು ಪೋಸ್ಟ್​ಹಾಕಿಕೊಂಡಿವೆ.

ಕೇರಳ ಕಾಂಗ್ರೆಸ್​ನ ಅಧಿಕೃತ ಎಕ್ಸ್ ಖಾತೆಯಲ್ಲೂ ಇದನ್ನು ಪೋಸ್ಟ್ ಮಾಡಲಾಗಿದೆ “ಮೋದಿ ಸರ್ವಸ್ಸ ಕಳೆದುಕೊಂಡಿದ್ದಾರೆ. ಅವರು ತಮ್ಮ ಸ್ವಯಂ ಗೋಲ್ ಹೊಡೆಯುತ್ತಿದ್ದಾರೆ. ಅವರು ಈಗ ಕರ್ನಾಟಕದ ಜನರನ್ನು ಪಾಪಿಗಳು ಎಂದು ಕರೆದಿದ್ದಾರೆ. ಇಂತಹ ಅವಮಾನಗಳಿಗೆ ಕರ್ನಾಟಕದ ಜನರು ಕಪಾಳಮೋಕ್ಷ ಮಾಡದೇ ಬಿಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಲಿದೆ’ ಎಂದು ಬರೆದುಕೊಂಡಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಸಂಯೋಜಕ ಗೌರವ್ ಪಾಂಧಿ ಅವರು ಈ ವೀಡಿಯೊಗೆ “ಕರ್ನಾಟಕದ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ ಮಾತ್ರಕ್ಕೆ, ಅವರು ಪಾಪಿಗಳು ಎಂದು ಪ್ರಧಾನಿ ಮೋದಿ ಭಾವಿಸುತ್ತಾರೆ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Manish Sisodia : ಕೇಜ್ರಿವಾಲ್ ಜತೆಗಾರ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ; ಜಾಮೀನು ಅರ್ಜಿ ವಜಾ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಪ್ರಧಾನಿ ಮೋದಿ ಅವರ ಈ ಹೇಳಿಕೆ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹತಾಶೆಯೇ? ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ ಎಂಬ ಭಯವೇ? ಎಂದು ಟ್ವೀಟ್​ ಮಾಡಿದ್ದಾರೆ.

ವಾಸ್ತವಾಂಶಗಳು ಯಾವುವು?

ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್​ ಪೇಜ್​ನಲ್ಲಿ ಭಾಷಣ ನೇರ ಪ್ರಸಾರ ವಿಡಿಯೊ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಸುಮಾರು 29:00 ರಿಂದ 31:04 ನಿಮಿಷ ತನಕ ಪಿಎಂ ಮೋದಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾರೆ. ಬಿಜೆಪಿ ಆಡಳಿತದಲ್ಲಿ ಭಾರತೀಯ ರೈತರು ಅನುಭವಿಸಿದ ವಿವಿಧ ಪ್ರಯೋಜನಗಳ ಬಗ್ಗೆ ಮಾತನಾಡಿದ ಮೋದಿ “ಕಾಂಗ್ರೆಸ್ ಇಲ್ಲಿನ ರೈತರಿಗೆ ಮಾಡಿದ ದ್ರೋಹವು ದೊಡ್ಡ ಪಾಪ” ಎಂದು ಹೇಳುತ್ತಾರೆ. ‘ಇಲ್ಲಿ’ ಎಂಬುದು ಕರ್ನಾಟಕ ಎಂಬರ್ಥವಾಗಿದೆ.

“ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಲಾಗುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ₹ 4,000 ನೀಡುವುದನ್ನು ನಿಲ್ಲಿಸಿತು. ಅವರು ತಮ್ಮ ಮತವನ್ನು ಪಡೆಯುವಲ್ಲಿ ಯಶಸ್ವಿಯಾದ ನಂತರ, ಅವರು ರೈತರು ಮತ್ತು ಅವರ ಕೆಲಸದ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದರು. ಉಳಿದ 6,000 ರೂ.ಗಳನ್ನು ಮೋದಿ ಸರ್ಕಾರ ಕಳುಹಿಸುತ್ತದೆ. ಅದನ್ನು ರೈತರು ಪಡೆಯುತ್ತಾರೆ. ಅವರು ಇಲ್ಲಿ ನೀಡಿದ ಹಣದ ಒಂದು ಭಾಗವನ್ನು ಕಡಿತಗೊಳಿಸಿದರು.” ಎಂದು ಟೀಕಿಸಿದ್ದಾರೆ.

ಮುಂದುವರಿದ ಅವರು “ಈ ಚುನಾವಣೆಯಲ್ಲಿ ಅವರು ಮಾಡಿದ ಪಾಪಗಳಿಗಾಗಿ ನೀವು ಈ ಕರ್ನಾಟಕದ ಜನರು ಶಿಕ್ಷಿಸಬೇಕು. ದೆಹಲಿಯಿಂದ ಕಳುಹಿಸಿದ ಎಲ್ಲವೂ ಮುಂದಿನ ವರ್ಷಗಳಲ್ಲಿ ಮುಂದುವರಿಯುತ್ತದೆ ಎಂಬುದು ಮೋದಿಯ ಭರವಸೆ ” ಎಂದು ಅವರು ಹೇಳಿದ್ದಾರೆ. 31:00ರ ನಿಮಿಷದ ನಂತರ ನೋಡಿದಾಗ ಇದು ಕರ್ನಾಟಕ ಸರ್ಕಾರದ ವಿರುದ್ಧದ ಟೀಕೆ ಎಂಬುದು ಖಾತರಿಯಾಗುತ್ತದೆ.

ಪ್ರಧಾನಿ ಮೋದಿಯವರ ವೆಬೆ್​ಸೈಟ್​ನಲ್ಲಿ ಲಭ್ಯವಿರುವ ಭಾಷಣದ ಟ್ರಾನ್​ಸ್ಕ್ರಿಪ್ಟ್​​ ಈ ಮಾಹಿತಿಯನ್ನು ದೃಢಪಡಿಸುತ್ತದೆ. “ಈ ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ಈ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕು” ಎಂದು ಅಲ್ಲಿ ಬರೆಯಲಾಗಿದೆ.

ಬೆಳಗಾವಿಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ಈ ಕ್ಲಿಪ್ ಅನ್ನು ಆಯ್ದು ಎಡಿಟ್ ಮಾಡಲಾಗಿದೆ ಮತ್ತು ಹಿಂದೆ ಮುಂದೆ ಏನೂ ಇಲ್ಲದೆ ಪ್ರಸಾರ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತಿದೆ. ಪಿಎಂ ಮೋದಿ ನಿಖರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂಬುದಾಗಿ ಹೇಳಿದ್ದರೂ ಕರ್ನಾಟಕದ ಜನರು ಎಂದು ತಪ್ಪುದಾರಿಗೆಳೆಯುವ ವ್ಯಾಖ್ಯಾನ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

Continue Reading

Lok Sabha Election 2024

Lok Sabha Election 2024: ಬಿಜೆಪಿ ಅಭ್ಯರ್ಥಿಗಳಿಗೆ ಪತ್ರ ಬರೆದ ಮೋದಿ; ಕಾಂಗ್ರೆಸ್‌ನ ತುಷ್ಟೀಕರಣ ನೀತಿಯ ಬಗ್ಗೆ ಅರಿವು ಮೂಡಿಸಲು ಕರೆ

Lok Sabha Election 2024: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯ ಎಲ್ಲ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದು, ಕಾಂಗ್ರೆಸ್‌ ಮತ್ತು ವಿಪಕ್ಷಗಳ ʼಇಂಡಿಯಾʼ ಮೈತ್ರಿ ಒಕ್ಕೂಟದ ತುಷ್ಟೀಕರಣ ನೀತಿ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದ್ದಾರೆ. “ಈ ಚುನಾವಣೆ ನಮ್ಮ ವರ್ತಮಾನ ಮತ್ತು ಉಜ್ವಲ ಭವಿಷ್ಯವನ್ನು ನಿರ್ಮಿಸಲು ಎದುರಾಗಿರುವ ಸುವರ್ಣಾವಕಾಶ. ಐದಾರು ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಕುಟುಂಬ ಮತ್ತು ಕುಟುಂಬದ ಹಿರಿಯರು ಅನುಭವಿಸಿದ ಕಷ್ಟಗಳಿಂದ ಪರಿಹಾರ ಪಡೆಯಲು ಈ ಚುನಾವಣೆ ಒಂದು ಪ್ರಮುಖ ಅಸ್ತ್ರ ಎನಿಸಿಕೊಂಡಿದೆʼʼ ಎಂದು ಪತ್ರದಲ್ಲಿ ತಿಳಿಸಲಾಗಿದೆ.

VISTARANEWS.COM


on

Fact check
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಿಜೆಪಿಯ ಎಲ್ಲ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದು, ಎಸ್‌ಸಿ / ಎಸ್‌ಟಿ ಮತ್ತು ಒಬಿಸಿಯಿಂದ ಮುಸ್ಲಿಮರಿಗೆ ಮೀಸಲಾತಿ ನೀಡುವ ಕಾರ್ಯಸೂಚಿ, ಪಿತ್ರಾರ್ಜಿತ ಆಸ್ತಿ ತೆರಿಗೆಯ ಪ್ರಸ್ತಾವ ಸೇರಿದಂತೆ ಕಾಂಗ್ರೆಸ್‌ ಮತ್ತು ವಿಪಕ್ಷಗಳ ʼಇಂಡಿಯಾʼ ಒಕ್ಕೂಟಗಳ ಹಿಂಜರಿತ ರಾಜಕೀಯ ನೀತಿಯ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮತ್ತು ಗುಜರಾತ್‌ನ ಪೋರ್‌ ಬಂದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನ್ಸುಖ್ ಮಾಂಡವಿಯಾ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಬರೆದಿರುವ ಪತ್ರವನ್ನು ಹಂಚಿಕೊಂಡು ಪ್ರಧಾನಿ ಅವರ ಪ್ರೇರಕ ಮಾತುಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. “ಈ ಸ್ಫೂರ್ತಿದಾಯಕ ಮಾತುಗಳಿಗಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. 10 ವರ್ಷಗಳಲ್ಲಿ ನೀವು ಮಾಡಿದ ಕೆಲಸಗಳು ಬಡವರು, ಯುವಕರು, ರೈತರು ಮತ್ತು ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿವೆ. ನಾವೆಲ್ಲರೂ ನಿಮ್ಮ ಸಲಹೆಯಂತೆ ಕಾರ್ಯ ನಿರ್ವಹಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?

ʼʼಇದು ಸಾಮಾನ್ಯ ಚುನಾವಣೆಯಲ್ಲ ಮತ್ತು ಬಿಜೆಪಿಗೆ ನೀಡುವ ಪ್ರತಿಯೊಂದು ಮತವು ಬಲವಾದ ಸರ್ಕಾರವನ್ನು ರಚಿಸುವ ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ವೇಗಗೊಳಿಸುತ್ತದೆʼʼ ಎಂದು ಪತ್ರದಲ್ಲಿ ಮೋದಿ ಹೇಳಿದ್ದಾರೆ. “ಈ ಚುನಾವಣೆ ನಮ್ಮ ವರ್ತಮಾನ ಮತ್ತು ಉಜ್ವಲ ಭವಿಷ್ಯವನ್ನು ನಿರ್ಮಿಸಲು ಎದುರಾಗಿರುವ ಸುವರ್ಣಾವಕಾಶ. ಐದಾರು ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಕುಟುಂಬ ಮತ್ತು ಕುಟುಂಬದ ಹಿರಿಯರು ಅನುಭವಿಸಿದ ಕಷ್ಟಗಳಿಂದ ಪರಿಹಾರ ಪಡೆಯಲು ಈ ಚುನಾವಣೆ ಒಂದು ಪ್ರಮುಖ ಅಸ್ತ್ರ ಎನಿಸಿಕೊಂಡಿದೆ. ಕಳೆದ ದಶಕದಲ್ಲಿ ಸಮಾಜದ ಪ್ರತಿಯೊಂದು ವರ್ಗದವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಮೂಲಕ ದೇಶವಾಸಿಗಳ ಅನೇಕ ತೊಂದರೆಗಳನ್ನು ತೊಡೆದುಹಾಕಲಾಗಿದೆʼʼ ಎಂದು ಬರೆದಿದ್ದಾರೆ.

“ಇದಲ್ಲದೆ ಕಾಂಗ್ರೆಸ್ ಮತ್ತು ಅದರ ʼಇಂಡಿಯಾʼ ಮೈತ್ರಿಕೂಟದ ವಿಭಜಕ ಮತ್ತು ತಾರತಮ್ಯದ ಉದ್ದೇಶಗಳ ವಿರುದ್ಧ ಮತದಾರರಿಗೆ ಮಾಹಿತಿ ನೀಡುವಂತೆ ನಾನು ಕೇಳಿಕೊಳ್ಳುತ್ತೇನೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಾಂವಿಧಾನಿಕವಾಗಿದ್ದರೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ʼಇಂಡಿಯಾʼ ಒಕ್ಕೂಟ ತಮ್ಮ ಮತ ಬ್ಯಾಂಕ್‌ ಆದ ಮುಸ್ಲಿಮರಿಗೆ ಮೀಸಲಾತಿ ನೀಡಲು ಮುಂದಾಗಿದೆ. ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಸಿದುಕೊಂಡು ಇವರಿಗೆ ನೀಡಲು ಮುಂದಾಗಿದೆ. ಜತೆಗೆ ಕಾಂಗ್ರೆಸ್‌ ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಪ್ರಸ್ತಾವಿಸಿದೆ. ಇದನ್ನು ತಡೆಯಲು ದೇಶವು ಒಂದಾಗಬೇಕಾಗಿದೆʼʼ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಪತ್ರವು ಆರೋಗ್ಯ ಸಲಹೆಯನ್ನೂ ಒಳಗೊಂಡಿದೆ. ʼʼಬೇಸಿಗೆಯ ಶಾಖವು ಎಲ್ಲರಿಗೂ ಸಮಸ್ಯೆಗಳನ್ನು ತಂದೊಡ್ಡಿದೆ. ಆದ್ದರಿಂದ ಮತದಾರರು ಬೆಳಗ್ಗೆಯೇ ಮತಗಟ್ಟೆಗೆ ತೆರಳಿ ಬಿಸಿಲಿನ ತಾಪ ಆರಂಭವಾಗುವ ಮುನ್ನ ಮತ ಚಲಾಯಿಸಬೇಕುʼʼ ಎಂದು ಮೋದಿ ಸಲಹೆ ನೀಡಿದ್ದಾರೆ. ಎಲ್ಲ ಪತ್ರಗಳು ವೈಯಕ್ತಿಕ ಉಲ್ಲೇಖವನ್ನೂ ಹೊಂದಿರುವುದು ವಿಶೇಷ. ಉದಾಹರಣೆಗೆ, ಮಾಂಡವಿಯಾ ಅವರನ್ನು ಉದ್ದೇಶಿಸಿ “ಸಣ್ಣ ಉದ್ಯಮಿಗಳಿಗಾಗಿ ಪಿಎಂ ಭಾರತೀಯ ಜನೌಷಧಿ ಕೇಂದ್ರವನ್ನು (PMBJAK) ಸ್ಥಾಪಿಸಲು ಮತ್ತು ಮೇಲ್ದರ್ಜೆಗೇರಿಸಲು ನೀವು ಮಾಡಿದ ಕೆಲಸ ಗಮನಾರ್ಹʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ನೀವು ಭಾರತೀಯ ಜನತಾ ಯುವ ಮೋರ್ಚಾದ ನಾಯಕರಾದಿರಿ ಮತ್ತು ವಿವಿಧ ಸ್ಥಾನಗಳಲ್ಲಿ ಸಂಘಟನೆಗಾಗಿ ಕೆಲಸ ಮಾಡಿದ್ದೀರಿ. ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದ ನೀವು ನಿಮ್ಮ ಮತದಾರರೊಂದಿಗೆ ಸಂಪರ್ಕ ಹೊಂದಿದ್ದೀರಿ. ನೀವು ಕೆಲವು ವರ್ಷಗಳ ಹಿಂದೆ ನಿಮ್ಮ ಡಾಕ್ಟರೇಟ್ ಪೂರ್ಣಗೊಳಿಸಿದ್ದೀರಿ, ಇದು ಅನೇಕ ಜನರಿಗೆ ಸ್ಫೂರ್ತಿಯ ಮೂಲವಾಗಿದೆ” ಎಂದು ಪತ್ರದಲ್ಲಿ ಕೇಂದ್ರ ಸಚಿವರನ್ನು ಶ್ಲಾಘಿಸಲಾಗಿದೆ.

ಇದನ್ನೂ ಓದಿ: PM Narendra Modi: ಡೀಪ್‌ ಫೇಕ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು? ವಿಡಿಯೊ ಕಂಡರೆ ನೀವೇನು ಮಾಡಬೇಕು?

Continue Reading
Advertisement
labour Day
ಪ್ರಮುಖ ಸುದ್ದಿ41 mins ago

Labour Day : ಮೇ 1ರಂದೇ ಕಾರ್ಮಿಕ ದಿನ ಆಚರಿಸುವುದು ಯಾಕೆ? ರಜೆ ಕೊಡಲು ಶುರು ಮಾಡಿದ್ದು ಯಾವಾಗ?

Parliament Flashback
Lok Sabha Election 202447 mins ago

Parliament Flashback: 1996ರಲ್ಲಿ ಬಿಜೆಪಿ ಮೊದಲ ಬಾರಿ ಕೇಂದ್ರದಲ್ಲಿ ಸರ್ಕಾರ ನಡೆಸಿದ್ದು ಹೇಗೆ?

Viral Video
ವೈರಲ್ ನ್ಯೂಸ್1 hour ago

Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

Prime Minister Narendra Modi wrote a letter to former CM Basavaraj Bommai
ಕರ್ನಾಟಕ1 hour ago

Lok Sabha Election 2024: ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಪ್ರಧಾನಿ ಮೋದಿ; ಕೊಟ್ಟ ಟಾಸ್ಕ್‌ ಏನು?

Labour Day 2024
ದೇಶ1 hour ago

Labour Day 2024: ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳಿವು

State government conspiracy behind Prajwal Hassan Pen Drive Case says HD Kumaraswamy
ಕ್ರೈಂ1 hour ago

Hassan Pen Drive Case: ಪ್ರಜ್ವಲ್‌ಗೆ ಕಾಂಗ್ರೆಸ್‌ ಸರ್ಕಾರದಿಂದಲೇ ಖೆಡ್ಡಾ? ಏನಿದು ಹಕೀಕತ್ತು? ಮಾಜಿ ಸಿಎಂ ಗರಂ ಆಗಿದ್ದೇಕೆ?

Karnataka Weather
ಕರ್ನಾಟಕ2 hours ago

Karnataka Weather: ರಾಜ್ಯದಲ್ಲಿ ಕಳೆದ 7 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು!

IPL 2024
ಪ್ರಮುಖ ಸುದ್ದಿ2 hours ago

IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

Rescue of a boy who drowned at Malpe beach Two boys die after taking bath in Sindagi
ಕ್ರೈಂ2 hours ago

Malpe Beach: ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ; ಸಿಂದಗಿಯಲ್ಲಿ ಸ್ನಾನಕ್ಕೆಂದು ಬಾವಿಗಿಳಿದಿದ್ದ ಬಾಲಕರಿಬ್ಬರ ಸಾವು

Fortis Hospital Launches Deep Brain Stimulation DBS Clinic to Treat Parkinson Disease
ಕರ್ನಾಟಕ2 hours ago

Fortis Hospital: ಪಾರ್ಕಿನ್ಸನ್‌ ಕಾಯಿಲೆ ಚಿಕಿತ್ಸೆಗೆ ಪ್ರತ್ಯೇಕ ಕ್ಲಿನಿಕ್‌ ಆರಂಭಿಸಿದ ಫೋರ್ಟಿಸ್‌ ಆಸ್ಪತ್ರೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ17 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌