Lok Sabha Election 2024: ಇಂಡಿಯಾ ಒಕ್ಕೂಟದವರಿಂದ ಕುಟುಂಬ ರಾಜಕಾರಣ, ಉಳಿದವರು ಗಂಟೆ ಬಾರಿಸಬೇಕಾ? ಜೆ.ಪಿ. ನಡ್ಡಾ ಖಡಕ್‌ ಪ್ರಶ್ನೆ - Vistara News

Lok Sabha Election 2024

Lok Sabha Election 2024: ಇಂಡಿಯಾ ಒಕ್ಕೂಟದವರಿಂದ ಕುಟುಂಬ ರಾಜಕಾರಣ, ಉಳಿದವರು ಗಂಟೆ ಬಾರಿಸಬೇಕಾ? ಜೆ.ಪಿ. ನಡ್ಡಾ ಖಡಕ್‌ ಪ್ರಶ್ನೆ

Lok Sabha Election 2024: ಕರ್ನಾಟಕವು ಸಂಸ್ಕೃತಿಗಾಗಿ ಹೆಸರುವಾಸಿಯಾಗಿದೆ. ಇದರೊಂದಿಗೆ ತಾಂತ್ರಿಕತೆಗೂ ಹೆಸರು ಪಡೆದಿದೆ. ದೇಶಭಕ್ತಿ ಎಂಬುದು ಇಲ್ಲಿನ ಜನರ ಕಣಕಣದಲ್ಲಿಯೂ ಇದೆ. 70ಕ್ಕೂ ಹೆಚ್ಚು ಸಮುದಾಯದವರು ಇಲ್ಲಿಗೆ ಬಂದಿದ್ದೀರಿ. ನೀವೆಲ್ಲ ನಿಮ್ಮ ಅಕ್ಕಪಕ್ಕದವರಿಗೂ ಮತ ಹಾಕುವಂತೆ ಹೇಳಿ. ಇದು ಕೇವಲ ಪ್ರಲ್ಹಾದ್‌ ಜೋಶಿ ಚುನಾವಣೆ ಅಲ್ಲ. ಇದು ನರೇಂದ್ರ ಮೋದಿಯವರ ವಿಕಸಿತ ಭಾರತ್ ಸಂಕಲ್ಪದ ಚುನಾವಣೆಯಾಗಿದೆ. ಹೇಗೆ ದೇಶವನ್ನು ಅಭಿವೃದ್ಧಿ ಮಾಡಬೇಕೆಂದು ತಿಳಿಯುವ ಚುನಾವಣೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

VISTARANEWS.COM


on

Lok Sabha Election 2024 JP Nadda takes a dig at family politics of INIDI Alliance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಮತ್ತೆ ಕುಟುಂಬ ರಾಜಕಾರಣ (Family Politics) ಸದ್ದು ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ಇಂಡಿಯಾ ಒಕ್ಕೂಟದ (I.N.D.I.A.) ಕುರಿತು ವ್ಯಂಗ್ಯ ಮಾಡಿದ್ದಾರೆ. ಈ ಮೈತ್ರಿ ಒಕ್ಕೂಟದಲ್ಲಿ ಕುಟುಂಬ ರಾಜಕಾರಣವೇ ಇದ್ದು, ತಮ್ಮ ತಮ್ಮ ಕುಟುಂಬದವರಿಗೆ ಮಣೆ ಹಾಕುತ್ತಲೇ ಬರಲಾಗುತ್ತಿದೆ. ಎಲ್ಲವನ್ನೂ ಇವರ ಕುಟುಂಬದವರೇ ಪಡೆದುಕೊಂಡರೆ ಉಳಿದವರು ಏನು ಗಂಟೆ ಬಾರಿಸಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪರ ಮತಯಾಚನೆ ಸಮಾರಂಭದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, ಫಾರುಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಒಂದೇ ಕುಟುಂಬದವರು. ಅಖಿಲೇಶ್‌ ಯಾದವ್, ಮುಲಾಯಂ ಸಿಂಗ್‌ ಯಾದವ್‌ ಒಂದೇ ಕುಟುಂಬದವರು, ಕೆಸಿಆರ್, ಕೆಕೆಆರ್ ಒಂದೇ ಕುಟುಂಬ, ಶರದ್ ಪವಾರ್, ಸುಪ್ರಿಯಾ ಸುಳೆ ಒಂದೇ ಕುಟುಂಬ, ರಾಹುಲ್ ಗಾಂಧಿ,‌‌ ಪ್ರಿಯಾಂಕಾ ಗಾಂಧಿ ಒಂದೇ ಕುಟುಂಬದವರಾಗಿದ್ದಾರೆ. ಇದು ಇಂಡಿ ಅಲಯನ್ಸ್‌ ಆಗಿದ್ದು, ಅಧಿಕಾರ ಕುಟುಂಬದವರ ಕೈಯಲ್ಲೇ ಇದೆ. ಹಾಗಾದರೆ ಉಳಿದವರೇನು ಗಂಟೆ ಬಾರಿಸಬೇಕಾ? ಎಂದು ಪ್ರಶ್ನೆ ಮಾಡಿದರು.

ಭ್ರಷ್ಟಾಚಾರ, ಜೈಲು – ಬೇಲ್‌

ಕಾಂಗ್ರೆಸ್ ಕಾಮನ್‌ವೆಲ್ತ್‌ ಭ್ರಷ್ಟಾಚಾರ, ಕಲ್ಲಿದ್ದಲು ಭ್ರಷ್ಟಾಚಾರ, 2ಜಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಖಿಲೇಶ್ ಲ್ಯಾಪ್‌ಟಾಪ್ ಭ್ರಷ್ಟಾಚಾರ ಮಾಡಿದ್ದರು. ರಾಹುಲ್, ಸೋನಿಯಾ ಗಾಂಧಿ ಸೇರಿ ಹಲವರು ಬೇಲ್ ಮೇಲೆ‌‌ ಇದ್ದಾರೆ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ ಇದ್ದಾರೆ.‌ ಕೆಲವರು ಜೈಲಿನಲ್ಲಿ ಇದ್ದರೆ ಮತ್ತೆ ಕೆಲವರು ಬೇಲ್ ಮೇಲೆ‌ ಇದ್ದಾರೆ. ಇದೇ ಇಂಡಿಯಾ ಅಲೆಯನ್ಸ್‌ ಆಗಿದೆ ಎಂದು ಜೆ.ಪಿ. ನಡ್ಡಾ ಕುಟುಕಿದರು.

ಇದು ವಿಕಸಿತ ಭಾರತ್ ಸಂಕಲ್ಪದ ಚುನಾವಣೆ

ಕರ್ನಾಟಕವು ಸಂಸ್ಕೃತಿಗಾಗಿ ಹೆಸರುವಾಸಿಯಾಗಿದೆ. ಇದರೊಂದಿಗೆ ತಾಂತ್ರಿಕತೆಗೂ ಹೆಸರು ಪಡೆದಿದೆ. ದೇಶಭಕ್ತಿ ಎಂಬುದು ಇಲ್ಲಿನ ಜನರ ಕಣಕಣದಲ್ಲಿಯೂ ಇದೆ. 70ಕ್ಕೂ ಹೆಚ್ಚು ಸಮುದಾಯದವರು ಇಲ್ಲಿಗೆ ಬಂದಿದ್ದೀರಿ. ನೀವೆಲ್ಲ ನಿಮ್ಮ ಅಕ್ಕಪಕ್ಕದವರಿಗೂ ಮತ ಹಾಕುವಂತೆ ಹೇಳಿ. ಇದು ಕೇವಲ ಪ್ರಲ್ಹಾದ್‌ ಜೋಶಿ ಚುನಾವಣೆ ಅಲ್ಲ. ಇದು ನರೇಂದ್ರ ಮೋದಿಯವರ ವಿಕಸಿತ ಭಾರತ್ ಸಂಕಲ್ಪದ ಚುನಾವಣೆಯಾಗಿದೆ. ಹೇಗೆ ದೇಶವನ್ನು ಅಭಿವೃದ್ಧಿ ಮಾಡಬೇಕೆಂದು ತಿಳಿಯುವ ಚುನಾವಣೆಯಾಗಿದೆ ಎಂದು ಜೆ.ಪಿ. ನಡ್ಡಾ ಹೇಳಿದರು.

ಮೋದಿ ಗ್ಯಾರಂಟಿ ಪೂರ್ಣಗೊಳ್ಳುತ್ತದೆ

ಕಳೆದ ಹತ್ತು ವರ್ಷಗಳಲ್ಲಿ ರಾಜಕೀಯ ನೀತಿ ಬದಲಾಗಿದೆ. ಇದಕ್ಕಿಂದ ಮುಂಚೆ ಏನೂ ಬದಲಾಗಿರಲಿಲ್ಲ. ಎಲ್ಲ ರಾಜಕಾರಣಿಗಳು ಭ್ರಷ್ಟರು ಅನ್ನುತ್ತಿದ್ದರು. ರಾಜಕಾರಣವನ್ನು ನೆಗೆಟಿವ್‌ ಶೇಡ್‌ನಲ್ಲಿ ನೋಡುತ್ತಿದ್ದರು. ಆದರೆ, ಈಗ ಈ ದೃಷ್ಟಿಕೋನ ಬದಲಾಗಿದೆ. ಮೋದಿಯವರ ಕಾಲದಲ್ಲಿ ಬದಲಾಗುತ್ತದೆ. ಬದಲಾಗುತ್ತಿದೆ ಎಂದು ಜನರೇ ಹೇಳುತ್ತಿದ್ದಾರೆ. ಮೋದಿಯವರ ಗ್ಯಾರಂಟಿ ಪೂರ್ಣಗೊಳ್ಳುತ್ತದೆ ಎನ್ನುವಂತಾಗಿದೆ. ರಾಜಕೀಯ ಎಂಬುದರ ಭಾಷ್ಯ ಬದಲಾಗಿದೆ. ಆಗುವುದಿಲ್ಲ ಎಂಬ ಶಬ್ದವೂ ಬದಲಾಗಿದೆ. ಈ ಮುಂಚೆ ಸಮುದಾಯ, ಜಾತಿಗಳ ನಡುವೆ ಜಗಳಗಳಾಗುತ್ತಿದ್ದವು. ಅವರವರ ನಡುವೆ ಜಗಳ ಹಚ್ಚಿ ಅಧಿಕಾರವನ್ನು ಪಡೆಯಲಾಗುತ್ತಿತ್ತು. ಆದರೆ, ನರೇಂದ್ರ ಮೋದಿಯವರ ಕಾಲದಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಸಿಕ್ಕಿದೆ. ಯಾವುದನ್ನು ಕೊಡುತ್ತೇನೆ ಅಂದಿದ್ದರೋ ಅದನ್ನು ಕೊಟ್ಟಿದ್ದಾರೆ ಎಂದು ಜೆ.ಪಿ. ನಡ್ಡಾ ಹೇಳಿದರು.

ರಾಹುಲ್‌ ಗಾಂಧಿ ಹೇಳಿದಂತೆ ಚಿಟಿಕೆಯಲ್ಲಿ ಆಗುತ್ತಾ?

ವಿರೋಧ ಪಕ್ಷಗಳ ಕೂಗಾಟ, ಚೀರಾಟ ಹೆಚ್ಚಾಗಿದೆ. ದೇಶವನ್ನು ಹೇಗೆ ಗಟ್ಟಿಗೊಳಿಸಬೇಕು ಅನ್ನೋದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿದ್ದಾರೆ. ಎಲ್ಲ ಬಗೆಯ ಜನರನ್ನು ಗಟ್ಟಿಗೊಳಿಸಬೇಕು. ಆಗಷ್ಟೇ ದೇಶ ಗಟ್ಟಿಯಾಗುತ್ತದೆ ಎಂಬುದು ಮೋದಿಯವರ ಲೆಕ್ಕಾಚಾರವಾಗಿದೆ. ಕಾಂಗ್ರೆಸ್‌ನವರು ಗರೀಬಿ ಹಠಾವೋ ಅಂದರು. 70 ವರ್ಷಗಳಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ, ರಾಹುಲ್ ಗಾಂಧಿ ಚಿಟಿಕೆ ಹೊಡೆಯುವುದರಲ್ಲೇ ಬಡತನ ನಿರ್ಮೂಲನ ಮಾಡುವುದಾಗಿ ಹೇಳುತ್ತಾರೆ. 70 ವರ್ಷದಲ್ಲಿ ಆಗದ್ದು ಚಿಟಿಕೆ ಹೊಡೆಯೋದೊರೊಳಗೆ ಹೇಗೆ ಆಗುತ್ತದೆ? ರಾಜ್ಯದಲ್ಲಿ 4 ಕೋಟಿ ಜನರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಜೆ.ಪಿ. ನಡ್ಡಾ ತಿಳಿಸಿದರು.

ಇಂದಿರಾ ಆವಾಸ್‌ ಅಡಿ 2 ಮನೆ ಮಂಜೂರಾಗಿತ್ತು!

ನಾನು 1993ರಲ್ಲಿ ಶಾಸಕನಾಗಿದ್ದೆ. ಆಗ ಅಧಿಕಾರಿಯೊಬ್ಬರು ಬಂದು ನಿಮ್ಮ ಕ್ಷೇತ್ರಕ್ಕೆ 2 ಇಂದಿರಾ ಆವಾಸ್‌ ಮನೆಗಳು ಮಂಜೂರಾಗಿವೆ ಎಂದು ಹೇಳಿದರು. ಒಂದು ಕ್ಷೇತ್ರಕ್ಕೆ ಎರಡೇ ಮನೆಗಳೇ? ಹಾಗಾದರೆ ನನಗೆ ಬೇಡ ಅವುಗಳನ್ನು ನೀನೇ ಇಟ್ಟುಕೋ ಎಂದು ಹೇಳಿದ್ದೆ. ಆದರೆ, ಇಂದು ಮೋದಿಯವರು ಕರ್ನಾಟಕ ರಾಜ್ಯವೊಂದಕ್ಕೇ 9 ಲಕ್ಷ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅವೂ ವಿಭಿನ್ನ ಮತ್ತು ವಿಶಾಲ‌ ಮನೆಗಳಾಗಿವೆ. ಆ ಮನೆಯಲ್ಲಿ ಎಲ್ಲ ವ್ಯವಸ್ಥೆಯೂ ಇದೆ. ಒಂದೊಂದು ವಾರ್ಡ್‌ಗೆ 400ಕ್ಕೂ ಹೆಚ್ಚು ಮನೆಗಳು ಸಿಕ್ಕಿವೆ ಎಂದು ಜೆ.ಪಿ. ನಡ್ಡಾ ವಿವರಿಸಿದರು.

ಇದನ್ನೂ ಓದಿ: Lok Sabha Election 2024: ಬಿಜೆಪಿಗೆ ಸೀಜ್‌ ಆದ ಹಣ ಕೊಟ್ಟಿದ್ದು ಏಕೆ? ಚುನಾವಣಾಧಿಕಾರಿಗಳ ವಿರುದ್ಧ ತನಿಖೆಗೆ ಸಚಿವ ಕೃಷ್ಣ ಬೈರೇಗೌಡ ಆಗ್ರಹ

ಮೋದಿ ಬಂದ ಬಳಿಕ ಎಲ್ಲವೂ ಬದಲು

ಭಾರತ ಇದೀಗ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಜಗತ್ತಿನಲ್ಲಿ ಯಾವತ್ತೂ ಇಂಡಿಯಾ ಜತೆ ಪಾಕಿಸ್ತಾನವನ್ನು ಜೋಡಿಸಿಯೇ ಮಾತನಾಡಲಾಗುತ್ತಿತ್ತು. ಆದರೆ, ಪ್ರಧಾನಿಯಾಗಿ ನರೇಂದ್ರ ಮೋದಿ ಬಂದ ಬಳಿಕ ಎಲ್ಲವೂ ಬದಲಾಯಿತು. ಇಂಡಿಯಾ ಒಕ್ಕೂಟವು ಇಂಡಿಯಾಗಿಯೇ ಉಳಿಯಿತು. ಪಾಕಿಸ್ತಾನ ಏನಾಯಿತು ಎಂಬುದು ನಿಮಗೇ ಗೊತ್ತು. ಮುಂಚೆ ಗಡಿಯಲ್ಲಿ ಗುಂಡು ಹಾರಿಸಲು‌ ಅನುಮತಿ ಬೇಕಿತ್ತು. ಆದರೆ, ಇಂದು ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ. ಇದು ಭಾರತದ ಶಕ್ತಿ. ಭ್ರಷ್ಟಾಚಾರಿ ಹಠಾವೋ ಎಂದು ಮೋದಿ ಹೇಳುತ್ತಾರೆ. ಆದರೆ, ಇಂಡಿಯಾ ಘಟಬಂಧನ್ ಭ್ರಷ್ಟಾಚಾರಿಗಳನ್ನು ರಕ್ಷಿಸಿ ಎಂಬುದಾಗಿ ಹೇಳುತ್ತದೆ ಎಂದು ಜೆ.ಪಿ. ನಡ್ಡಾ ತಿಳಿಸಿದರು.

ನಮ್ಮ ಎಲ್ಲ ಯೋಜನೆಗಳೂ ಮುಂದುವರಿಯಲಿವೆ. ನಾವು 3 ಕೋಟಿ‌ ಮಹಿಳೆಯರಿಗೆ ಲಕ್ ಪತಿ ದೀದಿ‌ ಮಾಡುವ‌ ಉದ್ದೇಶವನ್ನು ಹೊಂದಿದ್ದೇವೆ. ಜಗತ್ತಿನಲ್ಲಿ ಭಾರತ ಎಲ್ಲ ಪೋರಮ್‌ನಲ್ಲಿ ಇದೆ ಎಂದು ಜೆ.ಪಿ. ನಡ್ಡಾ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ; ಅಂತಹದ್ದೇನಿದೆ?

Lok Sabha Election 2024: ಬಿಜೆಪಿ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಷೇಪಾರ್ಹ ವಿಡಿಯೊ ಹಂಚಿಕೊಂಡಿದೆ ಎಂದು ಕಾಂಗ್ರೆಸ್‌ ದೂರು ನೀಡಿದೆ. ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಲ್ಲಿ ಭೀತಿ ಹುಟ್ಟಿಸುವಂತ ವಿಡಿಯೊ ಪೋಸ್ಟ್‌ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಐಟಿ ಮುಖ್ಯಸ್ಥ ಅಮಿತ್‌ ಮಾಳವಿಯಾ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರು ಕಾಂಗ್ರೆಸ್‌ ದಾಖಲಿಸಿದೆ. ದೂರಿನಲ್ಲಿ, ಕರ್ನಾಟಕ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನಿಮೇಟೆಡ್ ಪಾತ್ರಗಳನ್ನು ಚಿತ್ರಿಸುವ ವಿಡಿಯೊ ಇರುವುದನ್ನು ಉಲ್ಲೇಖಿಸಲಾಗಿದೆ.

VISTARANEWS.COM


on

Lok Sabha Election 2024
Koo

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಈಗಾಗಲೇ ಎರಡು ಹಂತದ ಮತದಾನ ಮುಗಿದಿದ್ದು, ಮೂರನೇ ಹಂತಕ್ಕೆ ಸಿದ್ಧತೆ ನಡೆಯುತ್ತಿದೆ. ಕರ್ನಾಟದ 14 ಕ್ಷೇತ್ರಗಳಲ್ಲಿ ಮೇ 7ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಮಧ್ಯೆ ಬಿಜೆಪಿ (BJP) ಸೋಷಿಯಲ್‌ ಮೀಡಿಯಾದಲ್ಲಿ ಆಕ್ಷೇಪಾರ್ಹ ವಿಡಿಯೊ ಹಂಚಿಕೊಂಡಿದೆ ಎಂದು ಕಾಂಗ್ರೆಸ್‌ (Congress) ದೂರು ನೀಡಿದೆ. ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಲ್ಲಿ ಭೀತಿ ಹುಟ್ಟಿಸುವಂತ ವಿಡಿಯೊ ಪೋಸ್ಟ್‌ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಐಟಿ ಮುಖ್ಯಸ್ಥ ಅಮಿತ್‌ ಮಾಳವಿಯಾ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರು ಕಾಂಗ್ರೆಸ್‌ ದಾಖಲಿಸಿದೆ.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಸಲ್ಲಿಸಿದ ದೂರಿನಲ್ಲಿ, ಕರ್ನಾಟಕ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನಿಮೇಟೆಡ್ ಪಾತ್ರಗಳನ್ನು ಚಿತ್ರಿಸುವ ವಿಡಿಯೊ ಇರುವುದನ್ನು ಉಲ್ಲೇಖಿಸಲಾಗಿದೆ.

ವಿಡಿಯೊದಲ್ಲಿ ಏನಿದೆ?

ಈ ವಿಡಿಯೊದ ಆರಂಭದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಮೀಸಲಾತಿಯ ಬುಟ್ಟಿಯಲ್ಲಿರುವ ಮೊಟ್ಟೆಗಳು ಎಂಬಂತೆ ಚಿತ್ರಿಸಲಾಗಿದೆ. ಬಳಿಕ ಈ ಮೀಸಲಾತಿ ಬುಟ್ಟಿಯಲ್ಲಿ ರಾಹುಲ್ ಗಾಂಧಿಯನ್ನು ಹೋಲುವ ಅನಿಮೇಟೆಡ್ ಪಾತ್ರ ಮುಸ್ಲಿಂ ಸಮುದಾಯದ ಮತ್ತೊಂದು ಮೊಟ್ಟೆಯನ್ನು ಇಡುವಂತೆ ತೋರಿಸಲಾಗಿದೆ. ಬಳಿಕ ಮೊಟ್ಟೆ ಬಿರಿದು ಪಕ್ಷಿಗಳು ಜೀವ ತಳೆಯುತ್ತವೆ. ಆಗ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರನ್ನು ಹೋಲುವ ಪಾತ್ರಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗಿಂತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತವೆ. ಬಳಿಕ ಬಲಿಷ್ಠವಾಗುವ ಮುಸ್ಲಿಮರನ್ನು ಹೋಲುವ ಹಕ್ಕಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಬುಟ್ಟಿಯಿಂದ ಹೊರದಬ್ಬುವುದು ವಿಡಿಯೊದಲ್ಲಿ ಕಂಡು ಬಂದಿದೆ.

“ಈ ವಿಡಿಯೊದಲ್ಲಿ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಹಣವನ್ನು ನೀಡುವಂತೆ ಮತ್ತು ಮುಸ್ಲಿಂ ಸಮುದಾಯವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯವನ್ನು ಹೊರ ಹಾಕುವಂತೆ ಬಿಂಬಿಸಲಾಗಿದೆ” ಎಂದು ರಮೇಶ್ ಬಾಬು ಆರೋಪಿಸಿದ್ದಾರೆ. ʼʼಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವಲ್ಲ 1989ರ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವೂ ಹೌದುʼʼ ಎಂದು ಹೇಳಿದ್ದಾರೆ. ಇಂತಹ ವಿಡಿಯೊಗಳು ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಸಾಧ್ಯತೆ ಇದೆ. 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದ ಸಂದರ್ಭದಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊವನ್ನು ಅನುಮೋದಿಸಿದ್ದಕ್ಕಾಗಿ ಅವರು ರಾಜ್ಯ ಮಟ್ಟದ ಮಾಧ್ಯಮ ಮೇಲ್ವಿಚಾರಣಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಅದರ ಪ್ರಸಾರದ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

Continue Reading

Lok Sabha Election 2024

Assault Case : ಕಾಂಗ್ರೆಸ್‌ಗೆ ಅಲ್ಲ.. ಬಿಜೆಪಿಗೆ ಮತ ಹಾಕುವೆ ಎಂದಿದ್ದಕ್ಕೆ ರಸ್ತೆಗೆ ಎಳೆದು ತಂದು ಕೈ-ಕಾಲು ಮುರಿದರು ದುರುಳರು

Assault Case : ಕಾಂಗ್ರೆಸ್‌ಗೆ ಮತ ಹಾಕಲ್ಲ, ಬಿಜೆಪಿಗೆ ಮತ ಹಾಕುವೆ ಎಂದಿದ್ದಕ್ಕೆ, ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಹಲ್ಲೆ ಮಾಡಿ, ಬಿಜೆಪಿ ಮುಖಂಡನ ಕೈ-ಕಾಲು ಮುರಿದಿದ್ದಾರೆ. ಗಾಯಾಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

By

assault case
Koo

ಕೊಪ್ಪಳ: ಕಾಂಗ್ರೆಸ್ ಮುಖಂಡರಿಂದ ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ದ್ಯಾಮಣ್ಣ ಬಾಲನಗೌಡರ್ ಹಲ್ಲೆಗೊಳಗಾದ ಬಿಜೆಪಿ ಮುಖಂಡರಾಗಿದ್ದಾರೆ. ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ನಿನ್ನೆ ಶನಿವಾರ ರಾತ್ರಿ ಘಟನೆ ನಡೆದಿದೆ.

ಕಾಂಗ್ರೆಸ್‌ ಕಾರ್ಯಕರ್ತರಾದ ಗವಿಸಿದ್ದ, ಬಾಳಪ್ಪ, ನೀಲಪ್ಪ, ಗಂಗಣ್ಣ ಎಂಬುವವರು ದ್ಯಾಮಣ್ಣನಿಗೆ ಹಲ್ಲೆ ನಡೆಸಿದ್ದಾರೆ. ನಿನ್ನೆ ಶನಿವಾರ ರಾತ್ರಿ ದ್ಯಾಮಣ್ಣ ಮನೆಗೆ ಕಾಂಗ್ರೆಸ್ ಮುಖಂಡರು ಬಂದಿದ್ದಾರೆ. ಈ ವೇಳೆ ದ್ಯಾಮಣ್ಣ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ, ಬಿಜೆಪಿ ಪಕ್ಷಕ್ಕೆ ಮತ ಹಾಕುತ್ತೇವೆ ಎಂದಿದ್ದಾರೆ.

ಇದರಿಂದ ಸಿಟ್ಟಾದ ಕೈ ಕಾರ್ಯಕರ್ತರು, ಕಾಂಗ್ರೆಸ್‌ಗೆ ಯಾಕೆ ಮತ ಹಾಕುವುದಿಲ್ಲ ಎಂದು ದ್ಯಾಮಣ್ಣನ ಮೇಲೆ ಎರಗಿದ್ದಾರೆ. ಬಳಿಕ ದ್ಯಾಮಣ್ಣನನ್ನು ರಸ್ತೆಗೆಳೆದು ತಂದು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ದ್ಯಾಮಣ್ಣನ ಕೈ-ಕಾಲು ಮುರಿದಿದ್ದಾರೆ. ಗಾಯಾಳನ್ನು ದ್ಯಾಮಣ್ಣನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ: 108 Ambulance : 3 ತಿಂಗಳ ವೇತನ ಬಾಕಿ; ನಾಳೆ ರಾತ್ರಿಯಿಂದಲೇ 108 ಆಂಬ್ಯುಲೆನ್ಸ್‌ ಸೇವೆ ಬಂದ್‌!

Kangana Ranaut: ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾನೆ ಎಂದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್! ವಿಡಿಯೊ ನೋಡಿ

ಹಿಮಾಚಲ ಪ್ರದೇಶ: ಲೋಕಸಭೆ ಚುನಾವಣೆ(Kangana Ranaut) ದೇಶದಲ್ಲಿ ದಿನೇ ದಿನೇ ರಂಗೇರಿದೆ. ಅಬ್ಬರದ ಪ್ರಚಾರ, ಪರ ವಿರೋಧ ವಾಗ್ದಾಳಿ ನಡೆಸಿದ್ದಾರೆ. ಎದುರಾಳಿ ನಾಯಕರನ್ನು ಟೀಕಿಸುವ ಭರದಲ್ಲಿ ಕೆಲವೊಮ್ಮೆ ತಮ್ಮದೇ ಪಕ್ಷಕ್ಕೆ ಮುಜುಗರ ತಂದಿರುವ ಘಟನೆಗಳೂ ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಹೇಳಿಕೆ ಮೂಲಕ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಅಭ್ಯರ್ಥಿ ಕಂಗನಾ ರಾಣಾವತ್‌ ಆಭಾಸಕ್ಕೀಡಾಗಿದ್ದಾರೆ. ಪ್ರಚಾರ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಬಿಹಾರದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌(Tejaswi Yadav) ಅವರನ್ನು ಟೀಕಿಸುವ ಭರದಲ್ಲಿ ತಮ್ಮದೇ ಪಕ್ಷ ಬಿಜೆಪಿ ಮುಖಂಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿತೇಜಸ್ವಿ ಸೂರ್ಯ(Tejaswi Surya) ಹೆಸರು ಪ್ರಸ್ತಾಪಿಸಿ ಮುಜುಗರಕ್ಕೀಡಾಗಿದ್ದಾರೆ. ಇದೀಗ ಈ ವಿಡಿಯೋ ವೈರಲ್‌(Viral Video) ಆಗಿದ್ದು, ಖುದ್ದು, ತೇಜಸ್ವಿ ಯಾದವ್‌ ಅವರೇ ಈ ವಿಡಿಯೋಗೆ ರಿಯಾಕ್ಟ್‌ ಮಾಡಿದ್ದಾರೆ.

ಕಂಗನಾ ಹೇಳಿದ್ದೇನು?

ಮಂಡಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಆರಂಭಿಸಿದ ಕಂಗನಾ ರಾಣಾವತ್‌, ತೇಜಸ್ವಿ ಯಾದವ್‌ ಅವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಲು ಹೊರಟಿದ್ದರು. ತೇಜಸ್ವಿ ಯದವ್‌ ಬದಲು ತೇಜಸ್ವಿ ಸೂರ್ಯ ಎಂದು ಹೇಳಿದ ಕಂಗನಾ, ಪ್ರತಿಪಕ್ಷ ನಾಯಕರಿಗೆ ಏನಾಗಿದೆ? ಒಬ್ಬರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುವ ಬಗ್ಗೆ ಮಾತನಾಡುತ್ತಾರೆ. ಅತ್ತ ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ:Prajwal Revanna Case: ದುಬೈ ವಿಮಾನದಲ್ಲೂ ರಾಜ್ಯಕ್ಕೆ ಬಾರದ ಸಂಸದ ಪ್ರಜ್ವಲ್ ರೇವಣ್ಣ

ಏ.9ರಂದು ನವರಾತ್ರಿಯ ದಿನ ತೇಜಸ್ವಿ ಯಾದವ್‌ ಮೀನು ತಿನ್ನುವ ಫೋಟೋವನ್ನು ಶೇರ್‌ ಮಾಡಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದರು. ಇದೇ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಕಂಗನಾ, ರಾಹುಲ್‌, ಅಖಿಲೇಶ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದರು. ಸಂಪೂರ್ಣವಾಗಿ ಹಾಳಾದ ರಾಜಕುಮಾರರನ್ನು ಹೊಂದಿರುವ ಪಕ್ಷಗಳಿವೆ. ಅಲ್ಲಿ ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯುವ ರಾಹುಲ್‌ ಗಾಂಧಿ, ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಮತ್ತು ಅಸಂಬದ್ದ ಹೇಳಿಕೆ ನೀಡುವ ಅಖಿಲೇಶ್‌ ಯಾದವ್‌ ಇದ್ದಾರೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವ ಇಂತಹ ನಾಯಕರು ಹೇಗೆ ತಾನೇ ದೇಶವನ್ನು ನಡೆಸಬಲ್ಲರು ಎಂದು ಅವರು ವ್ಯಂಗ್ಯವಾಡಿರುವ ವಿಡಿಯೋ ವೈರಲ್‌ ಆಗಿದೆ.

ಟಾಂಗ್‌ ಕೊಟ್ಟ ತೇಜಸ್ವಿ ಯಾದವ್‌

ಕಂಗನಾ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಪ್ರತಿಕ್ರಿಯಿಸಿದ್ದು, ರಾರು ಈ ಮಹಿಳೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಅವರು ಈ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿ ಯಾರು ಈ ಮಹಿಳೆ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು ಜೂ.1ರಂದು ಹಿಮಾಚಲಪ್ರದೇಶದಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಕಂಗನಾ ವಿರುದ್ಧ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಪುತ್ರ ವಿಕ್ರಮಾದಿತ್ಯ ಸಿಂಗ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Vijay Sankeshwar: 2014ರಲ್ಲಿ ಮೋದಿ ಕೈಗೆ ಮೌನಿ ಬಾಬಾ ಖಾಲಿ ಚೊಂಬು ಕೊಟ್ಟಿದ್ದರು; ಉದ್ಯಮಿ ವಿಜಯ ಸಂಕೇಶ್ವರ ವಾಗ್ದಾಳಿ

Vijay Sankeshwar: ಹುಬ್ಬಳ್ಳಿಯ ವರೂರಿನ ವಿಆರ್‌ಎಲ್ ಸಂಸ್ಥೆ ಆವರಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ, ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್‌ ವಿಜಯ ಸಂಕೇಶ್ವರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರ ಕೈಗೆ ಮೌನಿ ಬಾಬಾ (ಡಾ. ಮನಮೋಹನ ಸಿಂಗ್) ಖಾಲಿ ಚೊಂಬನ್ನೇ ಕೊಟ್ಟಿದ್ದರು ಎಂದು ಹೇಳಿದ್ದಾರೆ.

VISTARANEWS.COM


on

Vijay Sankeshwar
Koo

ಹುಬ್ಬಳ್ಳಿ: 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ (Narendra Modi) ಅವರ ಕೈಗೆ ಮೌನಿ ಬಾಬಾ (ಡಾ. ಮನಮೋಹನ ಸಿಂಗ್) ಖಾಲಿ ಚೊಂಬನ್ನೇ ಕೊಟ್ಟಿದ್ದರು ಎಂದು ಮಾಜಿ ಸಂಸದ, ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್‌ ವಿಜಯ ಸಂಕೇಶ್ವರ (Vijay Sankeshwar) ಟೀಕಿಸಿದರು.

ಹುಬ್ಬಳ್ಳಿಯ ವರೂರಿನ ವಿಆರ್‌ಎಲ್ ಸಂಸ್ಥೆ ಆವರಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, 2014ರಲ್ಲಿ ಇನ್ನೊಂದೇ ತಿಂಗಳು ಕಳೆದಿದ್ದರೂ ಯುಪಿಎ ಕೈಯಲ್ಲಿ ದೇಶ ಅಧೋಗತಿಗೆ ಹೋಗುತ್ತಿತ್ತು ಎಂದು ಹೇಳಿದರು.

ಯುಪಿಎ ಆಡಳಿತದ ಕೊನೇ ಗಳಿಗೆಯಲ್ಲಿ ದೇಶದ ತೈಲ ಸಂಗ್ರಹ ಮುಗಿದೇ ಹೋಗಿತ್ತು. ಸರ್ಕಾರದ ಮೇಲೆ ಸಾಲದ ಹೊರೆ ಬಿದ್ದಿತ್ತು. ಈ ರೀತಿ ನರೇಂದ್ರ ಮೋದಿ ಅವರ ಕೈಗೆ ಅಂದು ಕಾಂಗ್ರೆಸ್ ಖಾಲಿ ಚೊಂಬನ್ನೇ ಕೊಟ್ಟಿದ್ದು ಎಂದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ತೈಲ ರಾಷ್ಟ್ರಗಳಿಗೆ ದಯವಿಟ್ಟು ಪೆಟ್ರೋಲಿಯಂ ಉತ್ಪನ್ನ ನಿಲ್ಲಿಸಬೇಡಿ ಎಂದು ಮನವಿ ಮಾಡಿದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂಥ ದಯನೀಯ ಸ್ಥಿತಿ ದೇಶಕ್ಕಿಲ್ಲ ಎಂದು ಹೇಳಿದರು.

ಅನೇಕ ಸುಧಾರಣೆಗಳ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಮೋದಿ ಮಾಡಿದ್ದಾರೆ. ಆದರೆ ಯುಪಿಎ ಕಾಲದ ಇಟಲಿ ಮೇಡಂ, ಮೌನಿ ಬಾಬಾ ಆಡಳಿತದಲ್ಲಿ ಭಾರತದಲ್ಲಿ ಯಾವುದೇ ಸಾಧನೆ ಆಗಲಿಲ್ಲ ಎಂದರು. ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ಮೋದಿ ನಮ್ಮ ಪ್ರಧಾನಿ ಮಾತ್ರವಲ್ಲ, ಜಗತ್ತಿನ ನಾಯಕರಾಗಿ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಸಂಕೇಶ್ವರ ಬಣ್ಣಿಸಿದರು. ಈ ಲೋಕ ಕದನವನ್ನು ವಿಶ್ವದ ರಾಷ್ಟ್ರಗಳು ಬಹಳ ಕುತೂಹಲದಿಂದ ನೋಡುತ್ತಿವೆ. ಹಾಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಕರ್ತವ್ಯ ಪಾಲಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ಬದಲಾವಣೆ ಇಲ್ಲ

ತಮ್ಮ ಜೀವಿತಾವಧಿಯಲ್ಲಿ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಸ್ವತಃ ಮೋದಿ ಅವರೇ ಹೇಳಿದ್ದಾರೆ. ಆದರೂ ಚುನಾವಣೆ ಬಂದಾಗ ರಾಹುಲ್​ ಗಾಂಧಿಯಂತವರು ಅಪಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ ಎಂದು ವಿಜಯ ಸಂಕೇಶ್ವರ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಕಾಂಗ್ರೆಸ್ ಸಂವಿಧಾನದ ವಿರುದ್ಧವಾಗಿ ಬರೋಬ್ಬರಿ 82 ಸರ್ಕಾರಗಳನ್ನು ಕೆಡವಿದೆ. ಆದರೆ ಅಟಲ್​ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಒಂದೇ ಒಂದು ಸರ್ಕಾರವನ್ನು ಉರುಳಿಸುವ ಕೆಲಸ ಮಾಡಿಲ್ಲ ಎಂದರು. ದೇಶದ ಹಲವು ರಾಜ್ಯಗಳಲ್ಲಿ ಈಗಲೂ ಅರಾಜಕತೆ ಇದೆ. ಹಾಗಿದ್ದರೂ ಮೋದಿ ಅವರು ಚುನಾಯಿತ ಸರ್ಕಾರ ಕೆಡವದೇ ಸಂವಿಧಾನಕ್ಕೆ ಗೌರವ ತೋರುವ ಔದಾರ್ಯ ತೋರಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

49 ವರ್ಷಗಳ ಕಾಲ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್​ ಆಡಳಿತವೇ ಇತ್ತು. 3 ಬಾರಿ ಜನ ನನಗೆ ಆಶೀರ್ವಾದ ಮಾಡಿದರು. 4ನೇ ಬಾರಿ ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸಿದ್ದಾರೆ. ಈ ಬಾರಿಯೂ ಗೆಲುವು ಅವರದ್ದೇ ಆಗಬೇಕು ಎಂದು ಕೋರಿದರು.

ಸರಳ ವ್ಯಕ್ತಿ ಜೋಶಿ

ಪ್ರಲ್ಹಾದ ಜೋಶಿ ಕೇಂದ್ರದಲ್ಲಿ ದೊಡ್ಡ ಮಂತ್ರಿಯಾಗಿದ್ದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದ ಸರಳ ವ್ಯಕ್ತಿ ಆಗಿದ್ದಾರೆ. ಎಲ್ಲ ಕಾರ್ಯಕರ್ತರು ಮತ್ತು ಜನರೊಂದಿಗೆ ಬೆರೆಯುವ ವ್ಯಕ್ತಿತ್ವದವರು ಎಂದು ಹೊಗಳಿದರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಕಣಕ್ಕಿಳಿದ ಬಿಜೆಪಿಯ ಈ ನಿಷ್ಠಾವಂತ ನಾಯಕ ಪ್ರಲ್ಹಾದ ಜೋಶಿ ಅವರನ್ನು ಈ ಬಾರಿ 3.5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಡಾ. ಸಂಕೇಶ್ವರ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಜಿಪಂ ಮಾಜಿ ಅಧ್ಯಕ್ಷ ಟಿ.ಜಿ. ಬಾಳಣ್ಣವರ, ಶಾಸಕ ಎಂ.ಆರ್​.ಪಾಟೀಲ, ವಿಆರ್​ಎಲ್​ ಸಂಸ್ಥೆ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.

Continue Reading

ರಾಜಕೀಯ

Kangana Ranaut: ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾನೆ ಎಂದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್! ವಿಡಿಯೊ ನೋಡಿ

Kangana Ranaut: ಮಂಡಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಆರಂಭಿಸಿದ ಕಂಗನಾ ರಾಣಾವತ್‌, ತೇಜಸ್ವಿ ಯಾದವ್‌ ಅವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಲು ಹೊರಟಿದ್ದರು. ತೇಜಸ್ವಿ ಯದವ್‌ ಬದಲು ತೇಜಸ್ವಿ ಸೂರ್ಯ ಎಂದು ಹೇಳಿದ ಕಂಗನಾ, ಪ್ರತಿಪಕ್ಷ ನಾಯಕರಿಗೆ ಏನಾಗಿದೆ? ಒಬ್ಬರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುವ ಬಗ್ಗೆ ಮಾತನಾಡುತ್ತಾರೆ. ಅತ್ತ ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

VISTARANEWS.COM


on

Kangana Ranaut
Koo

ಹಿಮಾಚಲ ಪ್ರದೇಶ: ಲೋಕಸಭೆ ಚುನಾವಣೆ(Kangana Ranaut) ದೇಶದಲ್ಲಿ ದಿನೇ ದಿನೇ ರಂಗೇರಿದೆ. ಅಬ್ಬರದ ಪ್ರಚಾರ, ಪರ ವಿರೋಧ ವಾಗ್ದಾಳಿ ನಡೆಸಿದ್ದಾರೆ. ಎದುರಾಳಿ ನಾಯಕರನ್ನು ಟೀಕಿಸುವ ಭರದಲ್ಲಿ ಕೆಲವೊಮ್ಮೆ ತಮ್ಮದೇ ಪಕ್ಷಕ್ಕೆ ಮುಜುಗರ ತಂದಿರುವ ಘಟನೆಗಳೂ ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಹೇಳಿಕೆ ಮೂಲಕ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಅಭ್ಯರ್ಥಿ ಕಂಗನಾ ರಾಣಾವತ್‌ ಆಭಾಸಕ್ಕೀಡಾಗಿದ್ದಾರೆ. ಪ್ರಚಾರ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಬಿಹಾರದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌(Tejaswi Yadav) ಅವರನ್ನು ಟೀಕಿಸುವ ಭರದಲ್ಲಿ ತಮ್ಮದೇ ಪಕ್ಷ ಬಿಜೆಪಿ ಮುಖಂಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿತೇಜಸ್ವಿ ಸೂರ್ಯ(Tejaswi Surya) ಹೆಸರು ಪ್ರಸ್ತಾಪಿಸಿ ಮುಜುಗರಕ್ಕೀಡಾಗಿದ್ದಾರೆ. ಇದೀಗ ಈ ವಿಡಿಯೋ ವೈರಲ್‌(Viral Video) ಆಗಿದ್ದು, ಖುದ್ದು, ತೇಜಸ್ವಿ ಯಾದವ್‌ ಅವರೇ ಈ ವಿಡಿಯೋಗೆ ರಿಯಾಕ್ಟ್‌ ಮಾಡಿದ್ದಾರೆ.

ಕಂಗನಾ ಹೇಳಿದ್ದೇನು?

ಮಂಡಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಆರಂಭಿಸಿದ ಕಂಗನಾ ರಾಣಾವತ್‌, ತೇಜಸ್ವಿ ಯಾದವ್‌ ಅವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಲು ಹೊರಟಿದ್ದರು. ತೇಜಸ್ವಿ ಯದವ್‌ ಬದಲು ತೇಜಸ್ವಿ ಸೂರ್ಯ ಎಂದು ಹೇಳಿದ ಕಂಗನಾ, ಪ್ರತಿಪಕ್ಷ ನಾಯಕರಿಗೆ ಏನಾಗಿದೆ? ಒಬ್ಬರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುವ ಬಗ್ಗೆ ಮಾತನಾಡುತ್ತಾರೆ. ಅತ್ತ ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಏ.9ರಂದು ನವರಾತ್ರಿಯ ದಿನ ತೇಜಸ್ವಿ ಯಾದವ್‌ ಮೀನು ತಿನ್ನುವ ಫೋಟೋವನ್ನು ಶೇರ್‌ ಮಾಡಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದರು. ಇದೇ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಕಂಗನಾ, ರಾಹುಲ್‌, ಅಖಿಲೇಶ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದರು. ಸಂಪೂರ್ಣವಾಗಿ ಹಾಳಾದ ರಾಜಕುಮಾರರನ್ನು ಹೊಂದಿರುವ ಪಕ್ಷಗಳಿವೆ. ಅಲ್ಲಿ ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯುವ ರಾಹುಲ್‌ ಗಾಂಧಿ, ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಮತ್ತು ಅಸಂಬದ್ದ ಹೇಳಿಕೆ ನೀಡುವ ಅಖಿಲೇಶ್‌ ಯಾದವ್‌ ಇದ್ದಾರೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವ ಇಂತಹ ನಾಯಕರು ಹೇಗೆ ತಾನೇ ದೇಶವನ್ನು ನಡೆಸಬಲ್ಲರು ಎಂದು ಅವರು ವ್ಯಂಗ್ಯವಾಡಿರುವ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ:Prajwal Revanna Case: ದುಬೈ ವಿಮಾನದಲ್ಲೂ ರಾಜ್ಯಕ್ಕೆ ಬಾರದ ಸಂಸದ ಪ್ರಜ್ವಲ್ ರೇವಣ್ಣ

ಟಾಂಗ್‌ ಕೊಟ್ಟ ತೇಜಸ್ವಿ ಯಾದವ್‌

ಕಂಗನಾ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಪ್ರತಿಕ್ರಿಯಿಸಿದ್ದು, ರಾರು ಈ ಮಹಿಳೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಅವರು ಈ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿ ಯಾರು ಈ ಮಹಿಳೆ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು ಜೂ.1ರಂದು ಹಿಮಾಚಲಪ್ರದೇಶದಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಕಂಗನಾ ವಿರುದ್ಧ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಪುತ್ರ ವಿಕ್ರಮಾದಿತ್ಯ ಸಿಂಗ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದಾರೆ.

Continue Reading
Advertisement
Pakistan
ವಿದೇಶ14 mins ago

Pakistan: ಪಾಕಿಸ್ತಾನಕ್ಕೂ ಕಾಲಿಟ್ಟ ಯೋಗ; ಅಧಿಕೃತವಾಗಿ ತರಗತಿ ಆರಂಭ

Prajwal Revanna Case HD Revanna arrest is correct says R Ashok
ರಾಜಕೀಯ1 hour ago

Prajwal Revanna Case: ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಕೇಸ್‌; ರೇವಣ್ಣ ಬಂಧನ ಕ್ರಮ ಸರಿ ಇದೆ ಎಂದ ಆರ್.‌ ಅಶೋಕ್‌!

Vicky Pedia New reels about heat in Karnataka
ವೈರಲ್ ನ್ಯೂಸ್1 hour ago

Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

Lok Sabha Election 2024
Lok Sabha Election 20241 hour ago

Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ; ಅಂತಹದ್ದೇನಿದೆ?

Prajwal Revanna Case Siddaramaiah tweets vote for Prajwal Full class from BJP!
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ಗೆ ವೋಟ್‌ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್‌; ಬಿಜೆಪಿಯಿಂದ ಫುಲ್‌ ಕ್ಲಾಸ್‌!

bajrang punia Suspended
ಕ್ರೀಡೆ1 hour ago

Bajrang Punia: ಬಜರಂಗ್​ಗೆ ಅಮಾನತು ಶಿಕ್ಷೆ ವಿಧಿಸಿದ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ; ಪ್ಯಾರಿಸ್ ಒಲಿಂಪಿಕ್ಸ್​ಗೆ ಹಿನ್ನಡೆ

Kannada New Movie Adhipatra audio rights
ಸಿನಿಮಾ2 hours ago

Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ರೂಪೇಶ್ ಶೆಟ್ಟಿ-ಜಾಹ್ನವಿ ಸಿನಿಮಾ ಆಡಿಯೊ ರೈಟ್ಸ್!

assault case
Lok Sabha Election 20242 hours ago

Assault Case : ಕಾಂಗ್ರೆಸ್‌ಗೆ ಅಲ್ಲ.. ಬಿಜೆಪಿಗೆ ಮತ ಹಾಕುವೆ ಎಂದಿದ್ದಕ್ಕೆ ರಸ್ತೆಗೆ ಎಳೆದು ತಂದು ಕೈ-ಕಾಲು ಮುರಿದರು ದುರುಳರು

Viral News
ವೈರಲ್ ನ್ಯೂಸ್2 hours ago

Viral News: ಅಣ್ಣನ ಕತ್ತು ಸೀಳಿದ ತಂಗಿ; ಮೊಬೈಲ್‌ಗಾಗಿ ನಡೀತು ಘೋರ ಕೃತ್ಯ

FIFA World Cup qualifiers
ಕ್ರೀಡೆ2 hours ago

FIFA World Cup qualifiers: ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ; ಬಲಿಷ್ಠ ಸಂಭಾವ್ಯ ತಂಡ ಪ್ರಕಟಿಸಿದ ಭಾರತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌