Lok Sabha Election 2024: ಕಣ್ಣೀರು ಹಾಕಿದ ನಿಖಿಲ್‌ ಕುಮಾರಸ್ವಾಮಿ; ಚನ್ನಪಟ್ಟಣದಿಂದ ಸ್ಪರ್ಧಿಸುವ ಸುಳಿವು? - Vistara News

Lok Sabha Election 2024

Lok Sabha Election 2024: ಕಣ್ಣೀರು ಹಾಕಿದ ನಿಖಿಲ್‌ ಕುಮಾರಸ್ವಾಮಿ; ಚನ್ನಪಟ್ಟಣದಿಂದ ಸ್ಪರ್ಧಿಸುವ ಸುಳಿವು?

Lok Sabha Election 2024: ರಾಮನಗರ ಜಿಲ್ಲೆಯ ಜನ ನಮ್ಮ ತಂದೆಯವರಿಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದಾರೆ. ಇದನ್ನು ನಾವು ಯಾವತ್ತೂ ಮರೆಯುವುದಿಲ್ಲ. ಸಿನಿಮಾ ನಿರ್ಮಾಪಕರಾಗಿ ದುಡಿಮೆ ಮಾಡಿದ ಹಣದಿಂದ ಕೇತಗಾನಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದ್ದರು. ನನ್ನ ತಂದೆಯವರು ಎಂದೂ ಹಣ ಮಾಡಲು ಹೋಗಿಲ್ಲ. ಅವರು ಏನಾದರೂ ಸಂಪಾದನೆ ಮಾಡಿದ್ದರೆ ಅದು ಈ ಜಿಲ್ಲೆಯ ಜನರಾಗಿದ್ದಾರೆ. ಮಂಡ್ಯದಲ್ಲಿ ಸ್ಥಳೀಯರನ್ನು ಅಭ್ಯರ್ಥಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ನನ್ನ ಹೆಗಲ ಮೇಲೆ ಜವಾಬ್ದಾರಿ ಹಾಕಿದ್ದರು. ಆದರೆ, ಅಲ್ಲಿನ ಜನರ ಒತ್ತಡದಿಂದಾಗಿ ಅವರು ಸ್ಪರ್ಧೆ ಮಾಡಬೇಕಾಯಿತು ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

VISTARANEWS.COM


on

Lok Sabha Election 2024 Nikhil Kumaraswamy breaks down in tears and Hint of contesting from Channapatna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ನನ್ನ ತಂದೆ ಎಚ್‌.ಡಿ. ಕುಮಾರಸ್ವಾಮಿ (HD Kumaraswamy), ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ಹೆಸರಿನಲ್ಲಿ ಬಹಳಷ್ಟು ಜನ ಶಾಸಕರಾಗಿ, ನಾಯಕರಾಗಿ ಹೊರಹೊಮ್ಮಿದ್ದಾರೆ. ನಾನು ರಾಮನಗರದಲ್ಲಿ ಸ್ಪರ್ಧೆ ಮಾಡಿದ್ದೆ. ಕ್ಷೇತ್ರದ ಜನ ನನ್ನ ಕೈ ಬಿಟ್ಟಿರಲಿಲ್ಲ. ಆದರೆ, ಕಾಂಗ್ರೆಸ್ ಮುಖಂಡರು ಮಧ್ಯರಾತ್ರಿ 2 ಗಂಟೆಗೆ ಐದು ಸಾವಿರ ರೂಪಾಯಿ ಟೋಕನ್ ಹಂಚಿ ನನಗೆ ಮೋಸ ಮಾಡಿದರು. ಎರಡು ಬಾರಿ ಸೋಲಾಗಿದೆ, ಒಪ್ಪಿಕೊಳ್ಳುತ್ತೇನೆ. ಇದರ ಬಗ್ಗೆ ನನಗೆ ನೋವಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಕಣ್ಣೀರು ಹಾಕಿದ್ದಾರೆ. ಅಲ್ಲದೆ, ತಾವು ಇನ್ನು ಚುನಾವಣೆಗೆ ಸ್ಪರ್ಧೆ ಮಾಡುವುದಿದ್ದರೆ ರಾಮನಗರದಲ್ಲಿಯೇ, ಈ ಜಿಲ್ಲೆಯನ್ನು ಬಿಟ್ಟು ಬೇರೆ ಎಲ್ಲಿಯೂ ಸ್ಪರ್ಧೆ ಮಾಡಲಾರೆ ಎಂದು ಹೇಳಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಗೆಲುವು ಸಾಧಿಸಿದರೆ, ಇಲ್ಲಿ ತೆರವಾಗುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.‌ ಮಂಜುನಾಥ್‌ ಪರ ಪ್ರಚಾರ ಭಾಷಣದ ವೇಳೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ರಾಜ್ಯದಲ್ಲಿ ತಂದೆಯವರ, ದೇವೇಗೌಡರ ಹೆಸರಿನಲ್ಲಿ ಬಹಳಷ್ಟು ಜನ ಶಾಸಕರಾಗಿ, ನಾಯಕರಾಗಿ ಹೊರ ಹೊಮ್ಮಿದ್ದಾರೆ. ನನ್ನ ನಡವಳಿಕೆಯಲ್ಲೇನಾದರೂ ಸಮಸ್ಯೆ ಇದೆಯೇ? ನಾನು ಚುನಾವಣೆಗೆ ಸ್ಪರ್ಧೆ ಮಾಡಿದರೆ ಅದು ರಾಮನಗರ ಜಿಲ್ಲೆಯಲ್ಲೇ, ಜಿಲ್ಲೆ ಬಿಟ್ಟು ಬೇರೆ ಎಲ್ಲೂ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ‌

ಎಚ್‌ಡಿಕೆ ಜಿಲ್ಲೆಯ ಜನರನ್ನು ಸಂಪಾದನೆ ಮಾಡಿದ್ದಾರೆ

ರಾಮನಗರ ಜಿಲ್ಲೆಯ ಜನ ನಮ್ಮ ತಂದೆಯವರಿಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದಾರೆ. ಇದನ್ನು ನಾವು ಯಾವತ್ತೂ ಮರೆಯುವುದಿಲ್ಲ. ಸಿನಿಮಾ ನಿರ್ಮಾಪಕರಾಗಿ ದುಡಿಮೆ ಮಾಡಿದ ಹಣದಿಂದ ಕೇತಗಾನಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದ್ದರು. ನನ್ನ ತಂದೆಯವರು ಎಂದೂ ಹಣ ಮಾಡಲು ಹೋಗಿಲ್ಲ. ಅವರು ಏನಾದರೂ ಸಂಪಾದನೆ ಮಾಡಿದ್ದರೆ ಅದು ಈ ಜಿಲ್ಲೆಯ ಜನರಾಗಿದ್ದಾರೆ. ಮಂಡ್ಯದಲ್ಲಿ ಸ್ಥಳೀಯರನ್ನು ಅಭ್ಯರ್ಥಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ನನ್ನ ಹೆಗಲ ಮೇಲೆ ಜವಾಬ್ದಾರಿ ಹಾಕಿದ್ದರು. ಮಂಡ್ಯದ ಸ್ಥಳೀಯ ನಾಯಕರ ಜತೆಗೆ ಸಭೆ ಮಾಡಿದ್ದೆ. ಅಲ್ಲಿ ನಮ್ಮ ಕುಟುಂಬದವರಿಂದಲೇ ಸ್ಪರ್ಧೆ ಮಾಡಬೇಕೆಂಬ ಒತ್ತಡ ಹೆಚ್ಚಿತ್ತು. ಈ ಸಂಬಂಧ ಬಂದು ವರದಿಯನ್ನು ನೀಡಿದ್ದೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್‌ ಮಣಿಸಲು ಬಿಜೆಪಿ ಹೈಕಮಾಂಡ್‌ ಪ್ಲ್ಯಾನ್;‌ ಟಾರ್ಗೆಟ್‌ ಡಿಕೆಶಿ!

ಕಳೆದ ಬಾರಿ ಸೋಲು ಕಂಡಿದ್ದ ನಿಖಿಲ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಈ ವೇಳೆ ಸೋಲು ಕಂಡಿದ್ದರು. ಇದಕ್ಕೆ ಕಾಂಗ್ರೆಸ್‌ನವರು ಕೊನೇ ದಿನ ಕೂಪನ್‌ ಹಂಚಿಕೆ ಮಾಡಿ ತಮ್ಮ ಸೋಲಿಗೆ ಕಾರಣರಾದರು ಎಂದು ನಿಖಿಲ್‌ ಆಗಾಗ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈಗ ತಮ್ಮ ಸ್ಪರ್ಧೆ ಬಗ್ಗೆ ಹೇಳಿರುವ ನಿಖಿಲ್‌, ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಾದರೆ ಅದು ರಾಮನಗರ ಜಿಲ್ಲೆಯಿಂದ ಮಾತ್ರವೇ” ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳಾ ಕುಸ್ತಿಪಟುಗಳು ಅವರನ್ನು ಮುಖ್ಯ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಅವರಿಗೆ ಬಿಜೆಪಿಯು ಟಿಕೆಟ್‌ ನಿರಾಕರಿಸಿದೆ.

VISTARANEWS.COM


on

Brij Bhushan Singh
Koo

ನವದೆಹಲಿ: ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ಗೆ (Brij Bhushan Sharan Singh) ಈ ಬಾರಿ ಬಿಜೆಪಿಯು ಟಿಕೆಟ್‌ ನಿರಾಕರಿಸಿದೆ. ಕೈಸರ್‌ಗಂಜ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯು ಬ್ರಿಜ್‌ಭೂಷಣ್‌ ಸಿಂಗ್‌ ಬದಲಿಗೆ ಅವರ ಕಿರಿಯ ಪುತ್ರ ಕರಣ್‌ ಭೂಷಣ್‌ ಸಿಂಗ್‌ (Karan Bhushan Singh) ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಇನ್ನು, ರಾಯ್‌ಬರೇಲಿ ಕ್ಷೇತ್ರದಲ್ಲಿ ಬಿಜೆಪಿಯು ದಿನೇಶ್‌ ಪ್ರತಾಪ್‌ ಸಿಂಗ್‌ (Dinesh Pratap Singh) ಅವರಿಗೆ ಟಿಕೆಟ್‌ ನೀಡಿದೆ.

ಕೈಸರ್‌ಗಂಜ್‌ ಲೋಕಸಭೆ ಕ್ಷೇತ್ರದಿಂದ ಕಳೆದ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬ್ರಿಜ್‌ ಭೂಷಣ್‌ ಸಿಂಗ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಿರುವ ಕಾರಣ ನಾಲ್ಕನೇ ಬಾರಿ ಟಿಕೆಟ್‌ ಘೋಷಿಸಿಲ್ಲ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲೇ, ಬ್ರಿಜ್‌ ಭೂಷಣ್‌ ಸಿಂಗ್‌ಗೆ ಟಿಕೆಟ್‌ ಸಿಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ, ಅವರ ಪುತ್ರನಿಗೆ ಬಿಜೆಪಿ ಮಣೆಹಾಕಿದೆ. ಕೈಸರ್‌ಗಂಜ್‌ನಲ್ಲಿ ಐದನೇ ಹಂತದಲ್ಲಿ ಅಂದರೆ ಮೇ 20ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ.

ರಾಯ್‌ಬರೇಲಿಯಲ್ಲಿ ದಿನೇಶ್‌ ಪ್ರತಾಪ್‌ ಸಿಂಗ್‌

2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಸೋಲನುಭವಿಸಿದ್ದ ದಿನೇಶ್‌ ಪ್ರತಾಪ್‌ ಸಿಂಗ್‌ ಅವರಿಗೆ ಬಿಜೆಪಿಯು ಮತ್ತೆ ಟಿಕೆಟ್‌ ನೀಡಿದೆ. ಈ ಬಾರಿ ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಿಲ್ಲ. ಪ್ರಿಯಾಂಕಾ ವಾದ್ರಾ ಅಥವಾ ಅವರ ಪತಿ ರಾಬರ್ಟ್‌ ವಾದ್ರಾಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ, ಮತ್ತೆ ದಿನೇಶ್‌ ಪ್ರತಾಪ್‌ ಸಿಂಗ್‌ ಅವರನ್ನು ಬಿಜೆಪಿಯು ರಾಯ್‌ಬರೇಲಿಯಲ್ಲಿ ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಮೇ 3 ಕೊನೆಯ ದಿನವಾದ ಕಾರಣ ಇಂದು (ಮೇ 2) ಅಥವಾ ನಾಳೆ ರಾಯ್‌ಬರೇಲಿ ಹಾಗೂ ಅಮೇಥಿ ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳಾ ಕುಸ್ತಿಪಟುಗಳು ಅವರನ್ನು ಮುಖ್ಯ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಭಾರತದ ಅಗ್ರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸಿದ್ದರು. ಹಲವು ಬೆಳವಣಿಗೆಗಳ ಬಳಿಕ ಜೂನ್​ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ (354, 354 ಎ ಮತ್ತು 354 ಡಿ) ಅಡಿ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು. ಪ್ರಕರಣದಲ್ಲಿ ಬ್ರಿಜ್‌ ಭೂಷಣ್‌ ಜಾಮೀನು ಪಡೆದಿದ್ದಾರೆ.

ಇದನ್ನೂ ಓದಿ: Ujjwal Nikam: ಪ್ರಮೋದ್‌ ಮಹಾಜನ್‌ ಪುತ್ರಿಗೆ ಕೊಕ್‌, ಮುಂಬೈ ದಾಳಿ ವಕೀಲನಿಗೆ ಬಿಜೆಪಿ ಟಿಕೆಟ್!

Continue Reading

Lok Sabha Election 2024

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Prajwal Revanna Case: ರೇಪಿಸ್ಟ್‌ಗೆ ಬೆಂಬಲ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜತೆ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಿದ್ದಾರೆ. ಇದು ಬಿಜೆಪಿಯವರ ಅಜೆಂಡಾವಾಗಿದೆ. ಇದು ಬಿಜೆಪಿಯವರ ನಡೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅತ್ಯಾಚಾರಿಯೊಬ್ಬನ ಪರ ಮತಯಾಚನೆ ನಡೆಸಲು ಬಂದಿದ್ದಾರೆ. ಮೋದಿಯವರ ಗ್ಯಾರಂಟಿ ಏನು? ಅತ್ಯಾಚಾರಿಗೆ ಸಪೋರ್ಟ್ ಮಾಡಿರೋದು. 400 ಅತ್ಯಾಚಾರ ಮಾಡಿರುವ ರೇಪಿಸ್ಟ್‌ನನ್ನು ಮೋದಿ ಬೆಂಬಲಿಸಿದ್ದಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Prajwal Revanna Case PM Modi defends MP accused of rape says Rahul Gandhi
Koo

ಶಿವಮೊಗ್ಗ: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ. ದೇಶದ ಮಹಾನ್‌ ರೇಪಿಸ್ಟ್‌ ಒಬ್ಬನನ್ನು ಮೋದಿ ರಕ್ಷಣೆ ಮಾಡಿದ್ದಾರೆ. ಇದು ಮಹಾ ಅಪರಾಧ ಎಂದು ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಪರ ಪ್ರಚಾರ ಭಾಷಣ ಮಾಡಿದ ರಾಹುಲ್‌ ಗಾಂಧಿ, ರೇಪಿಸ್ಟ್‌ಗೆ ಬೆಂಬಲ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜತೆ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಿದ್ದಾರೆ. ಇದು ಬಿಜೆಪಿಯವರ ಅಜೆಂಡಾವಾಗಿದೆ. ಇದು ಬಿಜೆಪಿಯವರ ನಡೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅತ್ಯಾಚಾರಿಯೊಬ್ಬನ ಪರ ಮತಯಾಚನೆ ನಡೆಸಲು ಬಂದಿದ್ದಾರೆ. ಮೋದಿಯವರ ಗ್ಯಾರಂಟಿ ಏನು? ಅತ್ಯಾಚಾರಿಗೆ ಸಪೋರ್ಟ್ ಮಾಡಿರೋದು. 400 ಅತ್ಯಾಚಾರ ಮಾಡಿರುವ ರೇಪಿಸ್ಟ್‌ನನ್ನು ಮೋದಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ 400 ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಾರೆ. ಇದು ಕೇವಲ ಸೆಕ್ಸ್ ಕ್ಯಾಂಡಲ್ ಅಲ್ಲ, ಅತ್ಯಾಚಾರವಾಗಿದೆ. ಇದನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಂತಿದ್ದಾರೆ. ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಅಂತ ಬಿಜೆಪಿ ನಾಯಕರಿಗೆ ಗೊತ್ತಿತ್ತು. ಆದರೆ, ಹಾಸನದಲ್ಲಿ ಟಿಕೆಟ್ ಕೊಟ್ಟರು. ಬಿಜೆಪಿಯವರಿಗೆ ಹಾಗೂ‌ ಮಹಿಳೆಯರಿಗೆ ಇದು ತಿಳಿಯಬೇಕು. ಮೋದಿ ಅವರು ಹಾಸನ ಹಾಗೂ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರು ದೇಶಕ್ಕೆ ತಲೆಬಾಗಿ ಕ್ಷಮೆ ಕೇಳಬೇಕು. ಇಡೀ ಪ್ರಪಂಚದಲ್ಲಿ ಇಂತಹ ಘಟನೆ ನೋಡಿಲ್ಲ, ನೋಡುವುದೂ ಇಲ್ಲ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು. ‌

ಕಾಂಗ್ರೆಸ್‌ನಿಂದ ಸೂಕ್ತ ತನಿಖೆ

ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆಸಿ ಸೂಕ್ತ ತನಿಖೆಯನ್ನು ನಮ್ಮ ಕಾಂಗ್ರೆಸ್‌ ಸರ್ಕಾರ ನಡೆಸುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು.

ಮೋದಿಗೆ ಭಯ ಶುರುವಾಗಿದೆ

ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟಿದ್ದೇವೆ. ಪ್ರತಿ ಮನೆ ಯಜಮಾನಿಗೆ ಮಾಸಿಕವಾಗಿ ತಲಾ 2000 ರೂಪಾಯಿಯಂತೆ ಒಂದು ವರ್ಷಕ್ಕೆ 24 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಇನ್ನು ಕಾಂಗ್ರೆಸ್‌ನಿಂದ ಈಗ ಗ್ಯಾರಂಟಿಯ ಭಾಗವಾಗಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದೇವೆ. ಇಡೀ ದೇಶದಲ್ಲಿ ಅಧಿಕಾರ ಬಂದರೆ ಮೊದಲು ಮಹಾಲಕ್ಷ್ಮಿ ಯೋಜನೆಯನ್ನು ತರುತ್ತೇವೆ. ಮೋದಿಯವರು ಜನರನ್ನು ಬಡವರನ್ನಾಗಿ ಮಾಡಿದ್ದಾರೆ. ಪ್ರತಿಯೊಂದು ಕುಟುಂಬದಿಂದ ಮಹಿಳೆಯರ ಹೆಸರನ್ನು ಸಂಗ್ರಹ ಮಾಡುತ್ತಾ ಇದ್ದಾರೆ. 1 ಲಕ್ಷ ರೂಪಾಯಿಯನ್ನು ಖಾತೆಗೆ ಹಾಕಲಾಗುವುದು. ಇದರಿಂದ ಮೋದಿಗೆ ಭಯ ಶುರುವಾಗಿದೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದರೆ ಉದ್ಯೋಗ ಭರ್ತಿ, ಸಾಲ ಮನ್ನಾ

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇವೆ. ಕೇಂದ್ರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುತ್ತೇವೆ. ಆಶಾ ಕಾರ್ಯಕರ್ತರಿಗೆ ನಾವು ಸಹಾಯ ಮಾಡುತ್ತೇವೆ. ನರೇಂದ್ರ ಮೋದಿ ಅವರು ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ನಾವು ರೈತರ ಸಾಲ ಮನ್ನಾ ಮಾಡುತ್ತೇವೆ. ನಾವು ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುತ್ತೇವೆ ಎಂದು ರಾಹುಲ್‌ ಗಾಂಧಿ ಆಶ್ವಾಸನೆ ನೀಡಿದರು.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ವಿಡಿಯೊ

ಬಿಜೆಪಿ, ಆರ್‌ಎಸ್ಎಸ್‌ನವರಿಂದ ಸಂವಿಧಾನ ಬದಲಾವಣೆಗೆ ಮುಂದು

ವಿದ್ಯಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ನಾವು ಸಂವಿಧಾನದಲ್ಲಿ ರಕ್ಷಣೆ ಮಾಡಬೇಕಿದೆ. ಬಿಜೆಪಿಯವರು, ಆರ್‌ಎಸ್ಎಸ್‌ನವರು ಸಂವಿಧಾನ ಬದಲಾಯಿಸಲು ಮುಂದಾಗಿದ್ದಾರೆ. ಸಂವಿಧಾನದಿಂದ ದಲಿತರು ಆದಿವಾಸಿಗಳಿಗೆ ರಕ್ಷಣೆ ಸಿಗುತ್ತಿದೆ. ಇದನ್ನು ತಿರುಚಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿರುವ ಸಂಪತ್ತನ್ನು 22 ಮಂದಿಯ ಪ್ಯಾಕೆಟ್‌ಗೆ ಹಾಕಿದ್ದಾರೆ. ಅದಾನಿ, ಅಂಬಾನಿ ಕೈಯಲ್ಲಿ ದೇಶದ ಸಂಪತ್ತು ಇದೆ. ಕರ್ನಾಟಕಕ್ಕೆ ಮೋಸ ಮಾಡಿರುವ ಮೋದಿ 22 ಜನರಿಗೆ ಹಣ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾವು ಸಮಾನತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಒಬಿಸಿ ದಲಿತರು, ಆದಿವಾಸಿಗಳ ಬಗ್ಗೆ ಮಾತನಾಡಿದರೆ ನಾವು ನಕ್ಸಲರು ಅಂತಿದ್ದಾರೆ. ಆದರೆ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ನಾವು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.

Continue Reading

Lok Sabha Election 2024

School Jobs Scam: ಶಾಲಾ ನೇಮಕಾತಿ ಹಗರಣದ ಬಗ್ಗೆ ಟಿಎಂಸಿಗೆ ತಿಳಿದಿತ್ತು; ಹಿರಿಯ ನಾಯಕ ಕುನಾಲ್ ಘೋಷ್ ಆರೋಪ

School Jobs Scam: ಟಿಎಂಸಿಯ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡ ಕುನಾಲ್ ಘೋಷ್ ಇದೀಗ ಪಕ್ಷದ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಶಾಲಾ ನೇಮಕಾತಿ ಹಗರಣದ ಬಗ್ಗೆ ತೃಣಮೂಲ ಕಾಂಗ್ರೆಸ್‌ಗೆ ತಿಳಿದಿತ್ತು ಎಂದು ದೂರಿದ್ದಾರೆ. ಇತ್ತೀಚೆಗೆ (ಏಪ್ರಿಲ್ 22) ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ನಡೆಸಿದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ -2016ರ (State Level Selection Test-2016) ನೇಮಕಾತಿ ಪ್ರಕ್ರಿಯೆ ಅನೂರ್ಜಿತ ಎಂದು ಕೋಲ್ಕತ್ತಾ ಹೈಕೋರ್ಟ್ ಘೋಷಿಸಿತ್ತು.

VISTARANEWS.COM


on

School Jobs Scam
Koo

ಕೋಲ್ಕತ್ತಾ: ಟಿಎಂಸಿ (TMC)ಯ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡ ಕುನಾಲ್ ಘೋಷ್ (Kunal Ghosh) ಇದೀಗ ಪಕ್ಷದ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಶಾಲಾ ನೇಮಕಾತಿ ಹಗರಣ (School Jobs Scam)ದ ಬಗ್ಗೆ ತೃಣಮೂಲ ಕಾಂಗ್ರೆಸ್‌ಗೆ ತಿಳಿದಿತ್ತು ಎಂದು ದೂರಿದ್ದಾರೆ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಆಪ್ತರೆಂದು ಪರಿಗಣಿಸಲ್ಪಟ್ಟ ಕುನಾಲ್ ಘೋಷ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಮಾತ್ರವಲ್ಲ ಲೋಕಸಭಾ ಚುನಾವಣೆಯ ಮಧ್ಯೆ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ (ಏಪ್ರಿಲ್ 22) ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ನಡೆಸಿದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ -2016ರ (State Level Selection Test-2016) ನೇಮಕಾತಿ ಪ್ರಕ್ರಿಯೆ ಅನೂರ್ಜಿತ ಎಂದು ಕೋಲ್ಕತ್ತಾ ಹೈಕೋರ್ಟ್ ಘೋಷಿಸಿತ್ತು. ಇದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು.

ಬುಧವಾರ ಬಿಜೆಪಿ ಲೋಕಸಭಾ ಅಭ್ಯರ್ಥಿಯೊಂದಿಗೆ ವೇದಿಕೆ ಹಂಚಿಕೊಂಡ ಕುನಾಲ್ ಘೋಷ್ ಅವರನ್ನು ಟಿಎಂಸಿ ಹುದ್ದೆಯಿಂದ ವಜಾ ಮಾಡಿತ್ತು. ʼʼಶಾಲಾ ಶಿಕ್ಷಣ ಇಲಾಖೆಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ಮತ್ತು ಸುಲಿಗೆ ನಡೆಯುತ್ತಿದೆ ಎಂಬ ಅಂಶ ಪಕ್ಷಕ್ಕೆ ಚೆನ್ನಾಗಿ ತಿಳಿದಿತ್ತು. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಪಕ್ಷಕ್ಕೆ ಈ ಬಗ್ಗೆ ಅರಿವಿತ್ತು” ಎಂದು ಅವರು ಹೇಳಿದ್ದಾರೆ. “ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಹೊಂದಿದ್ದ ಕಾರಣಕ್ಕೆ 2021ರಲ್ಲಿ ಪಕ್ಷವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದ ನಂತರ ಪಾರ್ಥ ಚಟರ್ಜಿ ಅವರನ್ನು ಶಿಕ್ಷಣ ಸಚಿವಾಲಯದಿಂದ ಕೈಗಾರಿಕಾ ಇಲಾಖೆಗೆ ವರ್ಗಾಯಿಸಿತು” ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ರಾಜ್ಯ ಸರ್ಕಾರ 2016ರಲ್ಲಿ ಮಾಡಿದ್ದ 25,753 ಶಿಕ್ಷಕರ ನೇಮಕಾತಿಯನ್ನು ಹೈಕೋರ್ಟ್‌ ರದ್ದುಗೊಳಿಸಿದ್ದಲ್ಲದೆ ರದ್ದಾದವರು, 2016ರಿಂದ ತಾವು ಪಡೆದ ಸಂಬಳವನ್ನೂ ಬಡ್ಡಿ ಸಹಿತ ವಾಪಸ್‌ ನೀಡಬೇಕು ಎಂಬ ಆದೇಶ ಹೊರಡಿಸಿತ್ತು. ಅಂದು 24,640 ಖಾಲಿ ಹುದ್ದೆಗಳಿಗೆ 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016ಗೆ ಹಾಜರಾದ 25,753 ಮಂದಿಗೆ ನೇಮಕಾತಿ ಪತ್ರ ನೀಡಲಾಗಿತ್ತು. ಇದು 9, 10, 11 ಮತ್ತು 12ನೇ ತರಗತಿಗಳ ಶಿಕ್ಷಕರು ಮತ್ತು ಗುಂಪು-ಸಿ ಮತ್ತು ಡಿ ಸಿಬ್ಬಂದಿ ಹುದ್ದೆಗಳನ್ನು ಒಳಗೊಂಡಿತ್ತು.

ಎಸ್ಎಲ್ಎಸ್‌ಟಿ-2016ರಲ್ಲಿ ಹಾಜರಾಗಿ ಉದ್ಯೋಗ ಸಿಗದ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಅಕ್ರಮಗಳನ್ನು ಕಂಡುಕೊಂಡ ನಂತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಹಲವಾರು ಉದ್ಯೋಗಗಳನ್ನು ವಜಾಗೊಳಿಸಲು ಹೈಕೋರ್ಟ್ ತೀರ್ಪು ನೀಡಿತ್ತು.

Continue Reading

ಪ್ರಮುಖ ಸುದ್ದಿ

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Rahul Gandhi: ಕಾಂಗ್ರೆಸ್‌ನ ಚುನಾವಣೆ ಪ್ರಚಾರ ಸಭೆಗಳಲ್ಲಿ ಈಗ ಪ್ರಜ್ವಲ್ ಲೈಂಗಿಕ ಹಗರಣ ಹಾಟ್ ಟಾಪಿಕ್ ಆಗಿದೆ. ಪ್ರಜ್ವಲ್ ವಿಚಾರವನ್ನೆ ಬಹುದೊಡ್ಡ ಅಸ್ತ್ರವಾಗಿ ಎಐಸಿಸಿ ಪ್ರಯೋಗಿಸುತ್ತಿದೆ. ರಾಹುಲ್ ಗಾಂಧಿ ಇಂದಿನ ಭಾಷಣದಲ್ಲಿಯೂ ಪ್ರಜ್ವಲ್ ದೌರ್ಜನ್ಯ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಕಳೆದ ಸೋಮವಾರವಷ್ಟೇ ಪ್ರಜ್ವಲ್ ರೇವಣ್ಣ ವಿಚಾರವನ್ನು ಪ್ರಿಯಾಂಕಾ ಗಾಂಧಿ ಪ್ರಸ್ತಾಪ ಮಾಡಿದ್ದರು.

VISTARANEWS.COM


on

Rahul Gandhi
Koo

ಶಿವಮೊಗ್ಗ: ಶಿವಮೊಗ್ಗ (Shivamogga) ನಗರಕ್ಕೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಿ ಲೋಕಸಭೆ ಚುನಾವಣೆ (Lok sabha Election 2024) ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಶಿವಮೊಗ್ಗದ ಕೈ ಅಭ್ಯರ್ಥಿ ಪರ ಮತಯಾಚನೆ ನಡೆಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರ (Prajwal revanna case) ಹಗರಣದ ವಿಚಾರವನ್ನು ನಿನ್ನೆ ಸೋಶಿಯಲ್‌ ಮೀಡಿಯಾದಲ್ಲಿ ಎತ್ತಿರುವ ರಾಹುಲ್‌ ಗಾಂಧಿ, ಇಂದು ಸಾರ್ವಜನಿಕ ಭಾಷಣದಲ್ಲಿಯೂ ಪ್ರಸ್ತಾಪಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ (congress candidate) ಗೀತಾ ಶಿವರಾಜ್ ಕುಮಾರ್ (Geetha Shiv rajkumar) ಪರ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದು, ಅವರ ಜೊತೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಭಾಗವಹಿಸಲಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಕ್ಷೇತ್ರ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕುಟುಂಬದ ಮಗಳನ್ನು ಕಣಕ್ಕಿಳಿಸಿದ್ದು, ಪ್ರಚಾರಕ್ಕೆ ಜನಪ್ರಿಯ ಸ್ಟಾರ್‌ ಶಿವರಾಜ್‌ಕುಮಾರ್‌ ಕೂಡ ಆಗಮಿಸಿ ಪತ್ನಿಯ ಪರ ಬಿರುಗಾಳಿಯಂತೆ ಪ್ರಚಾರ ನಡೆಸುತ್ತಿದ್ದಾರೆ. ಸ್ವತಃ ಸಚಿವ ಮಧು ಬಂಗಾರಪ್ಪ, ತಮ್ಮ ಸೋದರಿಯ ಗೆಲುವಿಗಾಗಿ ಟೊಂಕ ಕಟ್ಟಿ ನಿಂತುಬಿಟ್ಟಿದ್ದಾರೆ. ಇನ್ನೊಂದು ಕಡೆ ಬಿಜೆಪಿಯ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಈಶ್ವರಪ್ಪನವರ ಬಂಡಾಯದಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮತ್ತೊಂದು ಕಡೆ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದಿಂದಾಗಿ ಬಿಜೆಪಿ ಹಾಗೂ ಜೆಡಿಎಸ್‌ ಮುಜುಗರ ಅನುಭವಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಹೋದಲ್ಲಿ ಬಂದಲ್ಲಿ ಈ ವಿಚಾರ ಎತ್ತಿ ಅಣಕಿಸುತ್ತಿದ್ದಾರೆ. ರಾಹುಲ್ ರಾಜ್ಯಕ್ಕೆ ಬಂದಾಗ ಪ್ರಚಾರದ ಕಣದಲ್ಲಿ ಈ ವಿಚಾರವನ್ನು ಎತ್ತಿ ಟೀಕಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಕಾಂಗ್ರೆಸ್‌ನ ಚುನಾವಣೆ ಪ್ರಚಾರ ಸಭೆಗಳಲ್ಲಿ ಈಗ ಪ್ರಜ್ವಲ್ ಲೈಂಗಿಕ ಹಗರಣ ಹಾಟ್ ಟಾಪಿಕ್ ಆಗಿದೆ. ಪ್ರಜ್ವಲ್ ವಿಚಾರವನ್ನೆ ಬಹುದೊಡ್ಡ ಅಸ್ತ್ರವಾಗಿ ಎಐಸಿಸಿ ಪ್ರಯೋಗಿಸುತ್ತಿದೆ. ರಾಹುಲ್ ಗಾಂಧಿ ಇಂದಿನ ಭಾಷಣದಲ್ಲಿಯೂ ಪ್ರಜ್ವಲ್ ದೌರ್ಜನ್ಯ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಕಳೆದ ಸೋಮವಾರವಷ್ಟೇ ಪ್ರಜ್ವಲ್ ರೇವಣ್ಣ ವಿಚಾರವನ್ನು ಪ್ರಿಯಾಂಕಾ ಗಾಂಧಿ ಪ್ರಸ್ತಾಪ ಮಾಡಿದ್ದರು. ಪ್ರಜ್ವಲ್ ಪ್ರಕರಣ ಪ್ರಸ್ತಾಪ ‌ಮಾಡುವ ಮೂಲಕ ಪಿಎಂ ಮೋದಿಗೆ ಕುಟುಕಿದ್ದರು.

ಅಲ್ಲದೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮೋದಿಯವರನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. “ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರಧಾನಿ ಉತ್ತರಿಸಬೇಕು. ಎಲ್ಲ ಗೊತ್ತಿದ್ದರೂ ಕೇವಲ ಮತಕ್ಕಾಗಿ ನೂರಾರು ಹೆಣ್ಣು ಮಕ್ಕಳನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ, ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಹೇಗೆ ಸುಲಭವಾಗಿ ಹೇಗೆ ತಪ್ಪಿಸಿಕೊಂಡ? ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ, ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣು ಮಕ್ಕಳ ಪೀಡಕರಿಗೆ ಬೆಂಬಲ ನೀಡಲಾಗುತ್ತಿದೆ. ಪ್ರಧಾನಿ ಮೌನ ಬೆಂಬಲ ನೀಡುತ್ತಿರುವುದು ದೇಶಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬಿದಂತಾಗುತ್ತಿದೆ. ಮೋದಿಯವರ ʼರಾಜಕೀಯ ಕುಟುಂಬದ’ ಭಾಗವಾಗುವುದು ಅಪರಾಧಿಗಳಿಗೆ ʼಭದ್ರತೆಯ ಖಾತರಿ’ ಆಗಿದೆಯೇ?” ಎಂದು ರಾಗಾ ಪ್ರಶ್ನಿಸಿದ್ದರು.

ಇಂದು ನಗರದ ಪ್ರೀಡಂ ಪಾರ್ಕ್‌ನ ಅಲ್ಲಮಪ್ರಭು ಮೈದಾನದಲ್ಲಿ ಕಾಂಗ್ರೆಸ್‌ನ ಬೃಹತ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಸಚಿವ ಮಧು ಬಂಗಾರಪ್ಪ ಉಸ್ತುವಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಶಿವಮೊಗ್ಗ ನಗರದಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಲಿದೆ. ಗೀತಾರನ್ನು ಗೆಲ್ಲಿಸಲು ಪಣ ತೊಟ್ಟಿರುವ ನಟ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಕ್ಷೇತ್ರದ ತುಂಬಾ ಓಡಾಡಿ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಇಂದು ರಾಹುಲ್‌ ಗಾಂಧಿ ಭಾಗವಹಿಸಲಿರುವ ಪ್ರಜಾ ಧ್ವನಿ ಯಾತ್ರೆ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಬೆಳಿಗ್ಗೆ 11:30ರಿಂದ ಶುರುವಾಗಲಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೃಹತ್ ವೇದಿಕೆ ನಿರ್ಮಾಣ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Continue Reading
Advertisement
Covaxin
ದೇಶ18 mins ago

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ20 mins ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

KL Rahul
ಕ್ರೀಡೆ34 mins ago

KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

T20 World Cup
ಕ್ರೀಡೆ58 mins ago

T20 World Cup : ವಿಶ್ವ ಕಪ್​ ಗೆಲ್ಲುವುದು ಭಾರತ; ವಿಶ್ವ ಕಪ್​ ವಿಜೇತ ಲಂಕಾ ಆಟಗಾರನ ಸ್ಪಷ್ಟ ನುಡಿ

Shine Shetty Summer Fashion
ಫ್ಯಾಷನ್1 hour ago

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

IPL 2024
ಕ್ರೀಡೆ1 hour ago

IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

assault Case
ಬೆಂಗಳೂರು1 hour ago

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Prajwal Revanna Case Centre says it has no power to revoke Prajwal diplomatic passport Big relief for MP
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

Virat kohli
ಪ್ರಮುಖ ಸುದ್ದಿ2 hours ago

Virat Kohli : ಅಂಕಿ, ಅಂಶ ಪಂಡಿತರೇ ಬಾಯ್ಮುಚ್ಚಿ; ಕೊಹ್ಲಿಯನ್ನು ಟೀಕಿಸಿದವರ ಬೆಂಡೆತ್ತಿದ ಡಿ’ವಿಲಿಯರ್ಸ್​​

Brij Bhushan Singh
ದೇಶ2 hours ago

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ20 mins ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ14 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌