Lok Sabha Election 2024: ಏಪ್ರಿಲ್‌ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್‌ ಶೋ - Vistara News

Lok Sabha Election 2024

Lok Sabha Election 2024: ಏಪ್ರಿಲ್‌ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್‌ ಶೋ

Lok Sabha Election 2024: ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶವನ್ನು ನಡೆಸಲಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬ್ಯಾಟರಾಯನಪುರ ಮತ್ತು ಹೆಬ್ಬಾಳ ಕ್ಷೇತ್ರ ಒಳಗೊಂಡಂತೆ ರೋಡ್ ಶೋವನ್ನು ಆಯೋಜನೆ ಮಾಡಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿಯು ಇಂದು ರೋಡ್ ಮ್ಯಾಪ್ ಅನ್ನು ಸಿದ್ಧಪಡಿಸಲಿದೆ.

VISTARANEWS.COM


on

Lok Sabha Election 2024 PM Narendra Modi to visit Karnataka on April 14 Roadshow in Bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಚಾರದ ಅಬ್ಬರ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಸಮಾವೇಶಗಳು, ಸಭೆಗಳು, ರ‍್ಯಾಲಿಗಳು ಹಾಗೂ ರೋಡ್‌ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈಗ ಲೋಕಸಭಾ ಎಲೆಕ್ಷನ್‌ ದಿನಾಂಕ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಒಂದು ದಿನದ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಅವರ ರೋಡ್‌ ಶೋ (Modi Road Show) ಸಹ ಇರಲಿದೆ.

ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶವನ್ನು ನಡೆಸಲಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬ್ಯಾಟರಾಯನಪುರ ಮತ್ತು ಹೆಬ್ಬಾಳ ಕ್ಷೇತ್ರ ಒಳಗೊಂಡಂತೆ ರೋಡ್ ಶೋವನ್ನು ಆಯೋಜನೆ ಮಾಡಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿಯು ಇಂದು ರೋಡ್ ಮ್ಯಾಪ್ ಅನ್ನು ಸಿದ್ಧಪಡಿಸಲಿದೆ.

ಚಾಮರಾಜನಗರ, ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಮಾಡು ಇಲ್ಲವೆ ಮಡಿ ಸ್ಥಿತಿ; ಮೈಸೂರಲ್ಲೇ ಮೊಕ್ಕಾಂ!

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕರ್ನಾಟಕ ಕಾಂಗ್ರೆಸ್‌ ನಾಯಕರು ತೊಡೆತಟ್ಟಿ ನಿಂತಿದ್ದರೆ, ರಾಜ್ಯಾದ್ಯಂತ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾತ್ರ ಮೈಸೂರು (Mysore) ಹಾಗೂ ಚಾಮರಾಜನಗರ (Chamarajanagar) ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ಅವರು ಮೈಸೂರು ಹಾಗೂ ಚಾಮರಾಜನಗರದಲ್ಲಿ ಎಡೆಬಿಡದೆ ಪ್ರಚಾರ ಕೈಗೊಳ್ಳುತ್ತಿದ್ದಾರೆ.

“ನಾನು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದರೆ ವರುಣಾದಲ್ಲಿ 60 ಸಾವಿರ ಮತಗಳ ಲೀಡ್ ಬೇಕು” ಎಂಬುದಾಗಿ ಹೇಳಿರುವ ಸಿದ್ದರಾಮಯ್ಯ ಅವರು ಈಗಾಗಲೇ ಮೈಸೂರು ಭಾಗದಲ್ಲಿ ಏಳು ದಿನ ಉಳಿದುಕೊಂಡು ಅಬ್ಬರ ಪ್ರಚಾರ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಅವರು ಏಪ್ರಿಲ್‌ 11 ಹಾಗೂ 12ರಂದು ಮೈಸೂರು ಹಾಗೂ ಚಾಮರಾಜನಗರ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ಸತತ ಪ್ರಚಾರದ ಮೂಲಕ ಕ್ಷೇತ್ರದ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಸಿದ್ದರಾಮಯ್ಯನವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಎಂ.ಲಕ್ಷ್ಮಣ್‌ ಹಾಗೂ ಚಾಮರಾಜನಗರದಲ್ಲಿ ಸುನೀಲ್‌ ಬೋಸ್‌ ಅವರನ್ನು ಗೆಲ್ಲಿಸಲು ಸಿದ್ದರಾಮಯ್ಯ ಅವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಕರ್ನಾಟಕದ ಬೇರೆ ಯಾವ ಕ್ಷೇತ್ರಗಳಿಗೂ ನೀಡದಷ್ಟು ಆದ್ಯತೆಯನ್ನು ಎರಡೇ ಕ್ಷೇತ್ರಗಳಿಗೆ ನೀಡುತ್ತಿದ್ದಾರೆ. ಎರಡೂ ಕ್ಷೇತ್ರಗಳು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದ್ದು, ಚುನಾವಣೆ ಬಳಿಕ ಅವರ ಭವಿಷ್ಯವನ್ನು ಈ ಎರಡು ಕ್ಷೇತ್ರಗಳೇ ನಿರ್ಧರಿಸಲಿವೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಹಾಸನದಲ್ಲಿ ಮೈತ್ರಿ ಸಮನ್ವಯ ಸಭೆ; ಪ್ರೀತಂಗೌಡ ಬೆಂಬಲಿಗರ ಮನವೊಲಿಸಲು ರಾಧಾಮೋಹನ್ ದಾಸ್ ಕಸರತ್ತು

ಸಿಎಂ ಸ್ಥಾನ ಉಳಿಯಲು 60 ಸಾವಿರ ಲೀಡ್‌ ಬೇಕು

ಸಿಎಂ ಸ್ಥಾನದಲ್ಲಿ ಉಳಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್‌ ಕೊಡಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಹೇಳಿದ್ದರು. ವರುಣಾ ಕ್ಷೇತ್ರದ ಬಿಳಿಗೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೋ ಬೇಡವೋ? ನಾನು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್‌ ಕೊಟ್ಟು ಸುನೀಲ್‌ ಬೋಸ್‌ ಅವರನ್ನು ಗೆಲ್ಲಿಸಿ. ವರುಣಾ ನನ್ನ‌ ಅದೃಷ್ಟದ ಕ್ಷೇತ್ರ. ಇಲ್ಲಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಈಗಲೂ ವರುಣಾ ಕ್ಷೇತ್ರದಲ್ಲಿ ಸುನೀಲ್‌ ಬೋಸ್‌ ಅವರನ್ನು 60 ಸಾವಿರ ಲೀಡ್‌ ಕೊಟ್ಟು ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ” ಎಂಬುದಾಗಿ ಹೇಳಿದ್ದರು. ಅವರ ಮೇಲೆ ಎಷ್ಟು ಒತ್ತಡ ಇದೆ ಎಂಬುದಕ್ಕೆ ಅವರ ಹೇಳಿಕೆಯೇ ಸಾಕ್ಷಿಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Rahul Gandhi: ರಾಹುಲ್‌ ಗಾಂಧಿಗೆ ಸ್ವಂತ ಕಾರು, ಮನೆ ಇಲ್ಲ; ಇಲ್ಲಿದೆ ಕಾಂಗ್ರೆಸ್‌ ಮುಖಂಡ ಘೋಷಿಸಿದ ಆಸ್ತಿ ವಿವರ

Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೇ 3ರಂದು ಉತ್ತರ ಪ್ರದೇಶದ ರಾಯ್‌ ಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಬಳಿ ಎಷ್ಟು ಆಸ್ತಿ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅವರು 20.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಈ ಪೈಕಿ 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಸ್ಥಿರಾಸ್ತಿಯ ಮೌಲ್ಯ 11.15 ಕೋಟಿ ರೂ. ಅಚ್ಚರಿ ಎಂದರೆ ಅವರು ಒಂದು ಸ್ವಂತ ಮನೆ ಹೊಂದಿಲ್ಲ. ಅವರು ಕಾರು ಅಥವಾ ಇತರ ವಾಹನವನ್ನೂ ಖರೀದಿ ಮಾಡಿಲ್ಲ. 

VISTARANEWS.COM


on

Rahul Gandhi
Koo

ಲಕ್ನೋ: ಲೋಕಸಭೆ ಚುನಾವಣೆ (Lok Sabha Election)ಯಲ್ಲಿ ಈ ಹಿಂದೆ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮೇ 3ರಂದು ಉತ್ತರ ಪ್ರದೇಶದ ರಾಯ್‌ ಬರೇಲಿಯಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಬಳಿ ಎಷ್ಟು ಆಸ್ತಿ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅವರು 20.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.

ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ರಾಹುಲ್‌ ಗಾಂಧಿ ಒಟ್ಟು 20.04 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಪೈಕಿ 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಇದರಲ್ಲಿ 3 ಕೋಟಿ 81 ಲಕ್ಷದ 33 ಸಾವಿರ ರೂ. ಮೌಲ್ಯದ ಷೇರುಗಳು ಮತ್ತು 15 ಲಕ್ಷದ 21 ಸಾವಿರ ರೂ. ಮೌಲ್ಯದ ಚಿನ್ನದ ಬಾಂಡ್‌ಗಳು ಸೇರಿವೆ. ಸ್ಥಿರಾಸ್ತಿಯ ಮೌಲ್ಯ 11.15 ಕೋಟಿ ರೂ. ಇನ್ನು ರಾಹುಲ್‌ ಗಾಂಧಿ ಅವರ ಬಳಿ 55 ಸಾವಿರ ರೂ. ನಗದು ಇದೆ. ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ 26.25 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಸ್ಥಿರಾಸ್ತಿ ಪೈಕಿ 9 ಕೋಟಿ 4 ಲಕ್ಷ 89 ಸಾವಿರ ರೂ. ಮೌಲ್ಯದ ಸ್ವ-ಖರೀದಿ ಆಸ್ತಿ ಹಾಗೂ 2 ಕೋಟಿ 10 ಲಕ್ಷ 13 ಸಾವಿರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಸೇರಿದೆ.

ವಾಹನವಿಲ್ಲ

ಅಚ್ಚರಿ ಎಂದರೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಒಂದು ಸ್ವಂತ ಮನೆ ಹೊಂದಿಲ್ಲ. ಅವರು ಕಾರು ಅಥವಾ ಇತರ ವಾಹನವನ್ನೂ ಖರೀದಿ ಮಾಡಿಲ್ಲ. ಆದರೆ ಗುರುಗ್ರಾಮದಲ್ಲಿ 9.04 ಕೋಟಿ ರೂ. ಮೌಲ್ಯದ ಸ್ವಂತ ಕಚೇರಿಯೊಂದನ್ನು ಹೊಂದಿದ್ದಾರೆ. ಹೊಸದಿಲ್ಲಿಯ ಮೆಹ್ರೌಲಿಯ ಸುಲ್ತಾನ್‌ಪುರ ಗ್ರಾಮದಲ್ಲಿ ಸುಮಾರು 3.778 ಎಕರೆ ಕೃಷಿ ಭೂಮಿ ಇದ್ದು, ಇದು ರಾಹುಲ್‌ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿದೆ. ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಅಲ್ಲದೆ ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿರುವುದು ಅಫಿಡವಿಟ್‌ನ ವಿವರದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: Lok Sabha Election 2024: ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ, ಅಮೇಠಿಯಿಂದ ಕಿಶೋರಿಲಾಲ್‌ ಸ್ಪರ್ಧೆ

ರಾಯ್‌ ಬರೇಲಿಯಲ್ಲಿ ನಾಮ ಪತ್ರ

ಸುಮಾರು 20 ವರ್ಷಗಳ ಕಾಲ ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದ ಉತ್ತರ ಪ್ರದೇಶದ ರಾಯ್​ ಬರೇಲಿಯಲ್ಲಿ ಶುಕ್ರವಾರ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ಅವರ ಎದುರಾಳಿಯಾಗಿ ಬಿಜೆಪಿಯಿಂದ ದಿನೇಶ್ ಪ್ರತಾಪ್ ಸಿಂಗ್ ಸ್ಪರ್ಧಿಸಲಿದ್ದಾರೆ. ಇಲ್ಲಿ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ.

Continue Reading

ಕ್ರೀಡೆ

Brij Bhushan: ಮಗನ ನಾಮನಿರ್ದೇಶನದ ವೇಳೆ 10 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸಿದ ಬ್ರಿಜ್ ಭೂಷಣ್

Brij Bhushan: ಕರಣ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದಿಂದ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಬ್ರಿಜ್ ಭೂಷಣ್ ಸಿಂಗ್ ಅವರ ಕಿರಿಯ ಪುತ್ರ . 2019 ರ ಲೋಕಸಭಾ ಚುನಾವಣೆಯಲ್ಲಿ, ಬ್ರಿಜ್ ಭೂಷಣ್ ಅವರು ಕೈಸರ್‌ಗಂಜ್‌ನಿಂದ ಚುನಾವಣೆಯಲ್ಲಿ ಎರಡು ಲಕ್ಷ ಮತಗಳಿಂದ ಗೆದ್ದಿದ್ದರು. ಕರಣ್ ಭೂಷಣ್ ಸಿಂಗ್ ಉತ್ತರ ಪ್ರದೇಶದ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ.

VISTARANEWS.COM


on

Brij Bhushan
Koo

ಉತ್ತರ ಪ್ರದೇಶ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಕೈಸರ್‌ಗಂಜ್‌ನ(Kaiserganj ) ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan) ಅವರನ್ನು ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಿಂದ(Lok Sabha polls) ಕೈಬಿಟ್ಟು, ಅವರ ಪುತ್ರ ಕರಣ್(Karan) ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮಗನ ನಾಮನಿರ್ದೇಶನ ಮಾಡುವ ಮೊದಲು ಕೈಸರ್‌ಗಂಜ್‌ನಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

500 ಅಧಿಕ 700 ಎಸ್‌ಯುವಿ ಕಾರುಗಳ ಮೂಲಕ ರ‍್ಯಾಲಿ ಮತ್ತು ನಾಮನಿರ್ದೇಶನ ಸಭೆಯಲ್ಲಿ 10,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಶಾಸಕರು, ಎಂಎಲ್‌ಸಿಗಳು, ಜಿಲ್ಲಾ ಪಂಚಾಯತ್ ಮುಖ್ಯಸ್ಥರು, ಹತ್ತಿರದ ಜಿಲ್ಲೆಗಳ ಬಿಜೆಪಿಯ ಸ್ಥಳೀಯ ನಾಯಕರು, ಅಯೋಧ್ಯೆಯ ಪ್ರಮುಖ ಧಾರ್ಮಿಕ ಮುಖಂಡರು ಸೇರಿದ್ದರು.

ಕರಣ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದಿಂದ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಬ್ರಿಜ್ ಭೂಷಣ್ ಸಿಂಗ್ ಅವರ ಕಿರಿಯ ಪುತ್ರ . 2019 ರ ಲೋಕಸಭಾ ಚುನಾವಣೆಯಲ್ಲಿ, ಬ್ರಿಜ್ ಭೂಷಣ್ ಅವರು ಕೈಸರ್‌ಗಂಜ್‌ನಿಂದ ಚುನಾವಣೆಯಲ್ಲಿ ಎರಡು ಲಕ್ಷ ಮತಗಳಿಂದ ಗೆದ್ದಿದ್ದರು. ಕರಣ್ ಭೂಷಣ್ ಸಿಂಗ್ ಉತ್ತರ ಪ್ರದೇಶದ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ. ಗೊಂಡಾದ ನವಾಬ್‌ಗಂಜ್‌ನಲ್ಲಿರುವ ಸಹಕಾರಿ ಗ್ರಾಮಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಜನ ಸಂಪರ್ಕ ಹೊಂದಿದ್ದಾರೆ. ಐದನೇ ಹಂತದಲ್ಲಿ ಮೇ 20 ರಂದು ಕೈಸರ್‌ಗಂಜ್‌ನಲ್ಲಿ ಮತದಾನ ನಡೆಯಲಿದೆ.

ಹಳದಿ ಕುರ್ತಾ, ಕಿತ್ತಳೆ ಬಣ್ಣದ ಸ್ಕಾರ್ಫ್ ಮತ್ತು ಧೋತಿ ಧರಿಸಿದ್ದ ಬ್ರಿಜ್ ಭೂಷಣ್, ಉತ್ಸಾಹಭರಿತ ಕಾರ್ಯಕರ್ತರ ನಡುವೆ ಕೈಯಲ್ಲಿ ಮೈಕ್ರೊಫೋನ್ನೊಂದಿಗೆ ಎಲ್ಲ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದರು. ತಾನು ಚುನಾವಣ ಕಣದಲ್ಲಿ ಇಲ್ಲದಿದ್ದರೂ ಕೂಡ ಈ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಇನ್ನೂ ಕೂಡ ಇದೆ ಎನ್ನುವುದನ್ನು ಈ ಶಕ್ತ ಪ್ರದರ್ಶನದ ಮೂಲಕ ತೋರಿಸಿಕೊಟ್ಟಿದ್ದಾರೆ. ಆದ್ಯಾಗೂ, ಬ್ರಿಜ್​ ಭೂಷಣ್​ ಕಾರ್ಯಕ್ರಮದ ಉದ್ದಕ್ಕೂ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅಥವಾ ಅವರ ಮಗನ ಬಳಿ ಹೋಗಲಿಲ್ಲ. ಗಣ್ಯರು ಮತ್ತು ಧಾರ್ಮಿಕ ಮುಖಂಡರನ್ನು ಭೇಟಿ ಮಾಡುವುದರಲ್ಲಿ ನಿರತರಾಗಿದ್ದರು. ಮಗನ ನಾಮಪತ್ರ ಸಲ್ಲಿಕೆಗೂ ಹೋಗಿರಲಿಲ್ಲ.

ನಾಮಪತ್ರ ಸಲ್ಲಿಕೆಗೆ ಮಗನ ಜತೆ ಏಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಿಜ್​ ಭೂಷಣ್​​, “ಐದು ಜನರಿಗೆ ಮಾತ್ರ ಹೋಗಲು ಅನುಮತಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಸಂದರ್ಭದಲ್ಲಿ ನಾನು ಇಲ್ಲಿನ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದೆ” ಎಂದು ಹೇಳಿದರು.

Continue Reading

Lok Sabha Election 2024

Lok Sabha Election 2024: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್‌ ಅಭ್ಯರ್ಥಿ; ವಿಡಿಯೊ ಇಲ್ಲಿದೆ

Lok Sabha Election 2024: ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರಿದೆ. ಈ ಮಧ್ಯೆ ಪ್ರಚಾರದ ವೇಳೆ ನಾಯಕರು ಎಡವಟ್ಟು ಮಾಡಿಕೊಂಡು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಕಾಂಗ್ರೆಸ್‌ ನಾಯಕ, ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಟಿ.ಜೀವನ್‌ ರೆಡ್ಡಿ. ಅರ್ಮೂರ್ ವಿಧಾನಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೀವನ್‌ ರೆಡ್ಡಿ ಇತರ ಕೆಲವು ನಾಯಕರೊಂದಿಗೆ ಪ್ರಚಾರ ನಡೆಸುತ್ತಿದ್ದಾಗ ಮಹಿಳೆಯ ಕೆನ್ನೆಗೆ ಹೊಡೆದಿದ್ದು, ವಿವಾದ ಹುಟ್ಟು ಹಾಕಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

VISTARANEWS.COM


on

Lok Sabha Election 2024
Koo

ಹೈದರಾಬಾದ್‌: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಎರಡು ಹಂತದ ಮತದಾನ ಮುಗಿದಿದ್ದು, ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಹೀಗಾಗಿ ರಾಜಕಾರಣಿಗಳು ಬಿರುಸಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಕೆಲವು ನಾಯಕರು ವಿವಾದವನ್ನೂ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ತೆಲಂಗಾಣದ ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಟಿ.ಜೀವನ್‌ ರೆಡ್ಡಿ (T. Jeevan Reddy). ಚುನಾವಣಾ ಪ್ರಚಾರದ ಮೇಲೆ ಮಹಿಳೆಯ ಕೆನ್ನೆಗೆ ಅವರು ಹೊಡೆದಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video). ಜತೆಗೆ ಅವರ ನಡೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ.

ಮಾಜಿ ಸಚಿವರೂ ಆದ ಜೀವನ್‌ ರೆಡ್ಡಿ ಪ್ರಚಾರದ ವೇಳೆ ಸಾರ್ವಜನಿಕವಾಗಿಯೇ ಮಹಿಳೆಯ ಕೆನ್ನೆಗೆ ಬಾರಿಸುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ. ಅರ್ಮೂರ್ ವಿಧಾನಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೀವನ್‌ ರೆಡ್ಡಿ ಇತರ ಕೆಲವು ನಾಯಕರೊಂದಿಗೆ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ವಿಡಿಯೊದಲ್ಲಿ ಏನಿದೆ?

ಜೀವನ್‌ ರೆಡ್ಡಿ ಮತ್ತು ಕಾಂಗ್ರೆಸ್‌ ನಾಯಕರು ಪ್ರಚಾರ ನಡೆಸುತ್ತ ಅರ್ಮೂರ್‌ನ ಗ್ರಾಮೀಣ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಬಳಿ, ಮೇ 13ರಂದು ನಡೆಯಲಿರುವ ಚುನಾವಣೆಯಲ್ಲಿ ತಮಗೆ ಮತ ಹಾಕಬೇಕೆಂದು ಜೀವನ್‌ ರೆಡ್ಡಿ ಹೇಳಿದ್ದರು. ಆದರೆ ಆ ಮಹಿಳೆ ತಾನು ‘ಹೂವು’ ಚಿಹ್ನೆಗೆ ವೋಟು ಮಾಡುವುದಾಗಿ ತಿಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಜೀವನ್‌ ರೆಡ್ಡಿ ಎಲ್ಲರೆದುರೆ ಮಹಿಳೆಗೆ ಕೆನ್ನೆಗೆ ಹೊಡೆದಿದ್ದಾರೆ. ಕಾಂಗ್ರೆಸ್‌ ಮುಖಂಡರು ನೋಡುತ್ತಿರುವಂತೆಯೇ ಈ ಘಟನೆ ನಡೆದಿದ್ದು, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆ ಹೇಳಿದ್ದೇನು?

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದೆ. ಆದರೆ ಪಿಂಚಣಿ ಸಿಗುತ್ತಿಲ್ಲ ಎಂದು ಮಹಿಳೆ ಕಾರಣ ನೀಡಿ ಈ ಬಾರಿ ಬಿಜೆಪಿಗೆ ವೋಟು ಹಾಕಲಿದ್ದೇನೆ ಎಂದು ಹೇಳಿದ್ದರೆಂದು ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ವಿನಯ್ ಕುಮಾರ್ ರೆಡ್ಡಿ ಅವರು ಅರ್ಮೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಮೂರ್ ಕೂಡ ಒಂದು. ಪ್ರಸ್ತು ಇಲ್ಲಿ ಬಿಜೆಪಿಯ ಡಿ.ಅರವಿಂದ್‌ ಸಂಸದರಾಗಿದ್ದು, ಅವರ ವಿರುದ್ಧ ಜೀವನ್‌ ರೆಡ್ಡಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: Narendra Modi: ಅಮೇಥಿ ಬದಲು ರಾಯ್‌ ಬರೇಲಿಯಿಂದ ರಾಹುಲ್‌ ಗಾಂಧಿ ಸ್ಪರ್ಧೆ; ಓಡಬೇಡಿ ಎಂದು ವ್ಯಂಗ್ಯವಾಡಿದ ಮೋದಿ

ನೆಟ್ಟಿಗರಿಂದ ತರಾಟೆ

ಜೀವನ್‌ ರೆಡ್ಡಿ ಅವರ ನಡೆಗೆ ನೆಟ್ಟಿಗರು ಕೆಂಡ ಕಾರಿದ್ದಾರೆ. ʼʼನಾಚಿಕೆ ಇಲ್ಲದ ವ್ಯಕ್ತಿ. ಈ ಬಾರಿ ಹೀನಾಯವಾಗಿ ಸೋಲುತ್ತಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಏನು ನಡೆಯುತ್ತಿದೆ?ʼʼ ಎಂದು ಇನ್ನೊಬ್ಬರು ಆಘಾತ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೆಲವರು ಜೀವನ್‌ ರೆಡ್ಡಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ತಮಾಷೆಗಾಗಿ ಮಾಡಿದ್ದಾರೆ. ನಿಜವಾಗಿಯೂ ಅವರು ಹೊಡೆದಿಲ್ಲ ಎಂದು ಹೇಳಿದ್ದಾರೆ. ಏನೇ ಇರಲಿ ಸಾರ್ವಜನಿಕವಾಗಿ ಹೀಗೆ ವರ್ತಿಸಿದ್ದು ತಪ್ಪು ಎನ್ನವುದು ಇನ್ನು ಹಲವರ ವಾದ. ಒಟ್ಟಿನಲ್ಲಿ ಈ ಘಟನೆ ಭಾರೀ ಸದ್ದು ಮಾಡುತ್ತಿದೆ.

Continue Reading

ಪ್ರಮುಖ ಸುದ್ದಿ

Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Rahul Gandhi : ನೀವು ಬೇಕಾರೆ ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಮುಂದಿನ ಮಹಾತ್ಮ ಗಾಂಧಿಯಾಗಿ ಹೊರಹೊಮ್ಮಲಿದ್ದಾರೆ. ಗಾಂಧೀಜಿ ಸ್ವಲ್ಪ ಕುತಂತ್ರಿಯಾಗಿದ್ದರು. ಆದರೆ, ರಾಹುಲ್ ಸಂಪೂರ್ಣವಾಗಿ ಮುಕ್ತ ಮತ್ತು ಶುದ್ಧ ಹೃದಯದವರು” ಎಂದು ರಾಜ್​​ಗುರು ಮೇ 1 ರಂದು ರಾಜ್​ಕೋಟ್​ನಲ್ಲಿ ನಡೆದ ಕಾಂಗ್ರೆಸ್​​ ಸಭೆಯಲ್ಲಿ ಹೇಳಿದರು.

VISTARANEWS.COM


on

Rahul Gandhi
Koo

ನವದೆಹಲಿ: ರಾಹುಲ್ ಗಾಂಧಿ (Rahul Gandhi) ಭಾರತ ದೇಶದ ಮುಂದಿನ ‘ಮಹಾತ್ಮ’ ಆಗಲು ಸಜ್ಜಾಗಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಇಂದ್ರನಿಲ್ ರಾಜ್​ಗುರು ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ರಾಹುಲ್ ಮಹಾತ್ಮ ಗಾಂಧಿಗಿಂತಲೂ ಗುಣದಲ್ಲಿ ಒಂದು ಹೆಜ್ಜೆ ಮುಂದು. ರಾಹುಲ್ “ಮುಕ್ತ” ಮತ್ತು “ಶುದ್ಧ ಹೃದಯದವರು”. ಆದರೆ ಗಾಂಧೀಜಿ ಸ್ವಲ್ಪ “ಕುತಂತ್ರಿ” ಯಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ನೀವು ಬೇಕಾದರೆ ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಮುಂದಿನ ಮಹಾತ್ಮ ನಾಗಿ ಹೊರಹೊಮ್ಮಲಿದ್ದಾರೆ. ಗಾಂಧೀಜಿ ಸ್ವಲ್ಪ ಕುತಂತ್ರಿಯಾಗಿದ್ದರು. ಆದರೆ, ರಾಹುಲ್ ಸಂಪೂರ್ಣವಾಗಿ ಮುಕ್ತ ಮತ್ತು ಶುದ್ಧ ಹೃದಯದವರಾಗಿದ್ದಾರೆ ಎಂದು ರಾಜ್​​ಗುರು ಮೇ 1 ರಂದು ರಾಜ್​ಕೋಟ್​ನಲ್ಲಿ ನಡೆದ ಕಾಂಗ್ರೆಸ್​​ ಸಭೆಯಲ್ಲಿ ಹೇಳಿದ್ದರೆ. ಮಾಜಿ ಶಾಸಕರಾಗಿರುವ ರಾಜ್​ಗುರ್​, ರಾಹುಲ್ ಗಾಂಧಿ ದೇಶದ ಮಹಾನ್​ “ನಾಯಕ” ಎಂಬುದಾಗಿ ಬಣ್ಣಿಸಿದ್ದಾರೆ.

ಕೆಲವು ಜನರು ಅವರನ್ನು ಪಪ್ಪು (ಪೆದ್ದ) ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ ದೇಶವು ಈಗ ಅವರನ್ನು ತನ್ನ ನಾಯಕನಾಗಿ ಸ್ವೀಕರಿಸಿದೆ ಎಂದು ರಾಜ್​ಗುರು ಹೇಳಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ ಏನು?

ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಮೂಲಕ ಜನರು ಮಹಾತ್ಮ ಗಾಂಧಿ ವಿರುದ್ಧದ ಹೇಳಿಕೆ ಪ್ರತಿಕಾರ ತೀರಿಸಬೇಕು ಎಂದು ಕರೆ ಕೊಟ್ಟಿದೆ.

ಇದನ್ನೂ ಓದಿ: 2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

“ಗಾಂಧೀಜಿ ನಮ್ಮ ರಾಷ್ಟ್ರದ ಪಿತಾಮಹ ಮತ್ತು ನಮ್ಮನ್ನು ಸ್ವಾತಂತ್ರ್ಯದ ಕಡೆಗೆ ನಮ್ಮನ್ನು ಕರೆದೊಯ್ದವರು. ಇಂತಹ ಹೇಳಿಕೆಗಳಿಗಾಗಿ ಭಾರತ ಮತ್ತು ಗುಜರಾತ್ ಜನರು ಕಾಂಗ್ರೆಸ್ ಅನ್ನು ಕ್ಷಮಿಸುವುದಿಲ್ಲ. ಈ ಕೋಪವು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸುತ್ತದೆ” ಎಂದು ಗುಜರಾತ್ ಬಿಜೆಪಿ ಘಟಕದ ಉಪಾಧ್ಯಕ್ಷ ಭರತ್ ಬೋಘರಾ ಹೇಳಿದ್ದಾರೆ.

ರಾಜ್​ಗುರು ಸ್ಪಷ್ಟನೆ ಏನು?

ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್​ಗುರು, ಅವರು ಇತಿಹಾಸ ಪುಸ್ತಕದಲ್ಲಿ “ಕುತಂತ್ರ” ಎಂಬ ಪದವನ್ನು ಮಹಾತ್ಮರಿಗೆ ಬಳಸಲಾಗಿದೆ ಎಂದು ಹೇಳಿದೆ. “ಕುತಂತ್ರ” ಎಂದರೆ ಅವರು ನಿಜವಾಗಿಯೂ “ಬುದ್ಧಿವಂತರು” ಎಂದು ನಾನು ಹೇಳಿಕೆ ನೀಡಿದ್ದೆ ಎಂಬುದಾಗಿ ರಾಜ್​ಗುರು ಹೇಳಿದ್ದಾರೆ.

ನಾನು ಗಾಂಧೀಜಿಗೆ ಸಂಬಂಧಿಸಿದ ಅನೇಕ ಇತಿಹಾಸ ಪುಸ್ತಕಗಳನ್ನು ಓದಿದ್ದೇನೆ ಮತ್ತು ಅಂತಹ ಒಂದು ಪುಸ್ತಕದಲ್ಲಿ ಕುತಂತ್ರ ಎಂಬ ಉಲ್ಲೇಖವಿದೆ. ನಾನು ನನ್ನ ಸ್ವಂತ ಪದಗಳನ್ನು ಸೇರಿಸಿಲ್ಲ. ನಾನು ರಾಹುಲ್ ಗಾಂಧಿಯನ್ನು ‘ಮುಂದಿನ ಮಹಾತ್ಮ’ ಎಂದು ಕರೆದಿದ್ದೇನೆ. ಏಕೆಂದರೆ ಇಂದು, ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ಹೋರಾಡಿದಂತೆಯೇ ಅವರು ಮಾತ್ರ ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ. ಬಿಜೆಪಿ ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ” ಎಂದು ಮಾಜಿ ಹೇಳಿದರು.

Continue Reading
Advertisement
Amrutha Ramamoorthi has been rejected fifteen times
ಕಿರುತೆರೆ58 seconds ago

Amrutha Ramamoorthi: ಆಡಿಷನ್‌ನಲ್ಲಿ ಬರೋಬ್ಬರಿ 15 ಬಾರಿ ರಿಜೆಕ್ಟ್ ಆಗಿದ್ದರಂತೆ ಈ ಖ್ಯಾತ ನಟಿ!

Viral Video
ವೈರಲ್ ನ್ಯೂಸ್8 mins ago

Viral Video:ʼವಡಾಪಾವ್‌ ಗರ್ಲ್‌ʼನ ಬೀದಿ ರಂಪಾಟ; ಸೋಶಿಯಲ್ ಮೀಡಿಯಾ ಸ್ಟಾರ್‌ನ ವಿಡಿಯೋ ಫುಲ್‌ ವೈರಲ್‌

IPL 2024
ಬೆಂಗಳೂರು25 mins ago

Traffic Restrictions: ಐಪಿಎಲ್‌ ಕ್ರಿಕೆಟ್‌; ಈ ರೋಡ್‌ನಲ್ಲಿ ಅಪ್ಪಿತಪ್ಪಿಯೂ ಪಾರ್ಕಿಂಗ್ ಮಾಡಬೇಡಿ

Rahul Gandhi
Lok Sabha Election 202425 mins ago

Rahul Gandhi: ರಾಹುಲ್‌ ಗಾಂಧಿಗೆ ಸ್ವಂತ ಕಾರು, ಮನೆ ಇಲ್ಲ; ಇಲ್ಲಿದೆ ಕಾಂಗ್ರೆಸ್‌ ಮುಖಂಡ ಘೋಷಿಸಿದ ಆಸ್ತಿ ವಿವರ

IPL 2024
ಕ್ರೀಡೆ48 mins ago

IPL 2024: ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

Amith Shah
ದೇಶ57 mins ago

Amit Shah: ಕಾಂಗ್ರೆಸ್ ಹಿಂದುಳಿದ, ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿದೆ; ನಾವು ತೆಗೆದುಹಾಕುತ್ತೇವೆ: ಅಮಿತ್ ಶಾ

Bribery Case in Bengaluru news
ಬೆಂಗಳೂರು59 mins ago

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

HD Deve gowda prajwal revanna case
ಬೆಂಗಳೂರು1 hour ago

Prajwal Revanna Case: ಮೊಮ್ಮಗನ ದೆಸೆಯಿಂದ ದೇವೇಗೌಡರ ಆರೋಗ್ಯ ಏರುಪೇರು, ಕುಟುಂಬದಿಂದ ತೀವ್ರ ನಿಗಾ

MP High Court
ದೇಶ1 hour ago

MP High Court: ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಮಹತ್ವದ ತೀರ್ಪು ಪ್ರಕಟಿಸಿದ ಕೋರ್ಟ್‌

Aishwarya Rajinikanth new house priceless reaction Rajinikanth
ಕಾಲಿವುಡ್1 hour ago

Aishwarya Rajinikanth: ಮಗಳ ಹೊಸ ಮನೆ ಕಂಡು ಹುಬ್ಬೇರಿಸಿದ ರಜನಿಕಾಂತ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ21 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌