Lok Sabha Election 2024: ಮೊಯ್ಲಿ, ಶಿವಶಂಕರ್‌ ರೆಡ್ಡಿ, ಸುಬ್ಬಾರೆಡ್ಡಿ ಸಾರಥ್ಯದಲ್ಲಿ ಎಲೆಕ್ಷನ್‌; ಬಿ ಫಾರಂ ಪಡೆದ ರಕ್ಷಾ ರಾಮಯ್ಯ ಘೋಷಣೆ - Vistara News

Lok Sabha Election 2024

Lok Sabha Election 2024: ಮೊಯ್ಲಿ, ಶಿವಶಂಕರ್‌ ರೆಡ್ಡಿ, ಸುಬ್ಬಾರೆಡ್ಡಿ ಸಾರಥ್ಯದಲ್ಲಿ ಎಲೆಕ್ಷನ್‌; ಬಿ ಫಾರಂ ಪಡೆದ ರಕ್ಷಾ ರಾಮಯ್ಯ ಘೋಷಣೆ

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಎಂ.ಎಸ್.‌ ರಕ್ಷಾ ರಾಮಯ್ಯ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಟಿಕೆಟ್‌ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಶಿವಶಂಕರ್‌ ರೆಡ್ಡಿ, ಶಾಸಕ ಸುಬ್ಬಾರೆಡ್ಡಿ ಅವರ ಸಾರಥ್ಯದಲ್ಲಿ ಚುನಾವಣಾ ಪ್ರಚಾರ ಮಾಡುವುದಾಗಿ ರಕ್ಷಾ ರಾಮಯ್ಯ ಹೇಳಿದ್ದಾರೆ. ಎಲ್ಲರ ವಿಶ್ವಾಸವನ್ನು ಪಡೆದು ಚುನಾವಣೆಯಲ್ಲಿ ಮುನ್ನುಗ್ಗುವುದಾಗಿ ತಿಳಿಸಿದ್ದಾರೆ.

VISTARANEWS.COM


on

Lok Sabha Election 2024 Raksha Ramayya receives B form from DK Shivakumar and Seetharama presence
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapur Lok Sabha constituency) ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಸ್.‌ ರಕ್ಷಾ ರಾಮಯ್ಯ (MS Raksha Ramayya) ಅವರು ಇಂದು (ಶನಿವಾರ – ಮಾ.30) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar), ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ (M Veerappa Moily) ಅವರನ್ನು ಭೇಟಿ ಮಾಡಿದರು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರಿಂದ ಬಿ. ಫಾರಂ ಪಡೆದರು. ಇದೇ ವೇಳೆ ಜಿಲ್ಲೆಯ ಎಲ್ಲ ನಾಯಕರನ್ನೊಳಗೊಂಡು, ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ.

ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಕ್ಷಾ ರಾಮಯ್ಯ ಅವರಿಗೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವಂತೆ ಶುಭ ಹಾರೈಸಿದ್ದಾರೆ.

ಚುನಾವಣಾ ಕಾರ್ಯತಂತ್ರ ಬಗ್ಗೆ ಚರ್ಚೆ

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ರಕ್ಷಾ ರಾಮಯ್ಯ ಅವರಿಗೆ ಬಿ ಫಾರಂ ವಿತರಿಸಿದರು. ಅಲ್ಲದೆ, ಈ ಚುನಾವಣೆಯಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ಗೆದ್ದು ಬರುವಂತೆ ಶುಭ ಹಾರೈಸಿದರು. ಎಲ್ಲ ಸಂದರ್ಭದಲ್ಲಿಯೂ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದರು. ಈ ವೇಳೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಆರ್.‌ ಸೀತಾರಾಂ ಜತೆ ಈ ನಾಯಕರನ್ನು ಭೇಟಿ ಮಾಡಿ ಚುನಾವಣಾ ಕಾರ್ಯತಂತ್ರ ಕುರಿತು ರಕ್ಷಾ ರಾಮಯ್ಯ ಚರ್ಚಿಸಿದರು. ಚುನಾವಣೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಾಮೂಹಿಕ ಹೋರಾಟದ ಮೂಲಕ ಗೆಲುವು ಸಾಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಸಲಹೆ ನೀಡಿದರು.

ಹಿರಿಯ ನಾಯಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ. ವೀರಪ್ಪ ಮೊಯ್ಲಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ಶಿವಶಂಕರ ರೆಡ್ಡಿ ಸೇರಿದಂತೆ ಎಲ್ಲರ ನಾಯಕತ್ವದಡಿ ಚುನಾವಣೆ ಎದುರಿಸುತ್ತಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. ಶಾಸಕರಾದ ಸುಬ್ಬಾರೆಡ್ಡಿ ಅವರು ಟಿಕೆಟ್‌ ಘೋಷಣೆಯಾದ ನಂತರ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿದ್ದು, ಎಲ್ಲಿಯೂ ಅಸಮಾಧಾನವಿಲ್ಲ. ಅಸಮಾಧಾನದ ಪ್ರಶ್ನೆ ಉದ್ಭವಾಗುವುದಿಲ್ಲ. ಹೈಕಮಾಂಡ್‌ ಟಿಕೆಟ್‌ ಹಂಚಿಕೆಮಾಡಿದ್ದು, ಪಕ್ಷದ ಪ್ರಮುಖ ನಾಯಕರು ಪ್ರಚಾರದ ಪ್ರತಿಯೊಂದು ಹಂತದಲ್ಲೂ ನಮ್ಮೊಂದಿಗೆ ಇರಲಿದ್ದಾರೆ ಎಂದು ಹೇಳಿದರು.

ಹಿರಿಯರ ಆಶೀರ್ವಾದ ಪಡೆದು ಪ್ರಚಾರ

ಕಾಂಗ್ರೆಸ್‌ ಪಕ್ಷ ಸಾಗರವಿದ್ದಂತೆ. ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಏನೇ ಆದರೂ ವೀರಪ್ಪ ಮೊಯ್ಲಿ ಮತ್ತು ಶಿವಶಂಕರ ರೆಡ್ಡಿ ಅವರ ಆಶೀರ್ವಾದ ಪಡೆದು ಪ್ರಚಾರ ನಡೆಸುತ್ತೇವೆ. ಕಾಂಗ್ರೆಸ್‌ ಪಕ್ಷಕ್ಕೆ ಸಕಾರಾತ್ಮಕವಾದ ಪ್ರತಿಕ್ರಿಯೆ ಇದೆ. ಯುವ ಸಮೂಹದವರು ಕೇಂದ್ರ ಸರ್ಕಾರದ ಬಗ್ಗೆ ಭ್ರಮನಿರಸನಗೊಂಡಿದ್ದು, ರೋಸಿ ಹೋಗಿದ್ದಾರೆ. ಯುವ ಕೇಂದ್ರಿತ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಬದಲಾವಣೆಗಾಗಿ ಯುವ ಸಮೂಹ ಕಾತರದಿಂದ ಕಾಯುತ್ತಿದ್ದು, ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ ಎಂದು ರಕ್ಷಾ ರಾಮಯ್ಯ ಹೇಳಿದರು.

ಕಾಂಗ್ರೆಸ್‌ನಿಂದ ಯುವ ಜನರಿಗೆ ಟಿಕೆಟ್‌

ಪ್ರತಿಸ್ಪರ್ಧಿ ಡಾ. ಕೆ. ಸುಧಾಕರ್‌ ಅವರ ವಿರುದ್ಧ ನಮ್ಮ ಹೋರಾಟ ಅತ್ಯಂತ ರಚನಾತ್ಮಕವಾಗಿರುತ್ತದೆ. ನಮ್ಮ ಒಳ್ಳೆಯತನ, ನಮ್ಮ ಕೆಲಸಗಳು, ನಮ್ಮ ಗುರಿ, ಪಕ್ಷದ ಸಿದ್ಧಾಂತ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್‌ ಪಕ್ಷ ಈ ಬಾರಿ ಯುವ ಸಮೂಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಇದು ತಮಗೆ ಸಂತಸ ತಂದಿದೆ. ಯುವ ಜನಾಂಗ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಕೈ ಹಿಡಿಯಲಿದೆ. ರಾಜ್ಯದಲ್ಲಿ ಶೇ. 32 ರಿಂದ 35 ರಷ್ಟು ಯುವ ಜನಾಂಗಕ್ಕೆ ಸ್ಪರ್ಧಿಸಲು ಟಿಕೆಟ್‌ ದೊರೆತಿದ್ದು, ಕರ್ನಾಟಕದಲ್ಲಿ ಇದು ಉತ್ತಮ ಬೆಳವಣಿಗೆ ಎಂದು ರಕ್ಷಾ ರಾಮಯ್ಯ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್;‌ ಮೋದಿ ಬಂದರೂ ಹೆದರಲ್ಲ!

Raksharamaiah meet CM Siddaramaiah

ನಮ್ಮ ಹಿರಿಯ ನಾಯಕರು ತಮಗೆ ಆಶೀರ್ವಾದ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ 29 ದಿನಗಳು ಮಾತ್ರ ಬಾಕಿ ಉಳಿದಿವೆ. ಪ್ರತಿಯೊಂದು ಗಂಟೆಯೂ ಇಲ್ಲಿ ಮುಖ್ಯವಾಗಿದೆ. ಹೀಗಾಗಿ ಗಂಟೆ ಗಂಟೆಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ಯುವ ಸಮುದಾಯ, ಮಹಿಳೆಯರು ಒಳಗೊಂಡಂತೆ ಎಲ್ಲ ವರ್ಗದ ಜನರ ಜತೆಗೂಡಿ ಪ್ರಚಾರ ಹಮ್ಮಿಕೊಳ್ಳಲಾಗುವುದು. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಯಕ್ರಮಗಳು, ಪಕ್ಷದ ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ ಪ್ರಚಾರ ಹಮ್ಮಿಕೊಳ್ಳಲಾಗುವುದು ಎಂದು ರಕ್ಷಾ ರಾಮಯ್ಯ ತಿಳಿಸಿದರು.

ಮುಂದಿನ ಗುರಿ, ಯೋಜನೆಯನ್ನು ತೆರೆದಿಟ್ಟ ರಕ್ಷಾ ರಾಮಯ್ಯ

ಚಿಕ್ಕಬಳ್ಳಾಪುರ ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಆದ್ಯತೆಯಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಸ್ತುತ ಶೇ. 82 ರಿಂದ 85ರಷ್ಟು ಸಾರಕ್ಷತೆಯಿದೆ. ಬರುವ ದಿನಗಳಲ್ಲಿ ಶೇ. 100ರಷ್ಟು ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಲು ಒತ್ತು ನೀಡಲಾಗುವುದು. ಪ್ಲೋರೈಡ್‌ ಯುಕ್ತ ನೀರಿನಿಂದಾಗಿ ಕ್ಯಾನ್ಸರ್‌ ಮತ್ತಿತರೆ ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಂಡಿದ್ದು, ಈ ಸಮಸ್ಯೆ ನಿವಾರಣೆ ನಮ್ಮ ಗುರಿಯಾಗಿದೆ. ಯುವ ಸಬಲೀಕರಣಕ್ಕೆ ಒತ್ತು ನೀಡಲಾಗುವುದು ಎಂದು ರಕ್ಷಾ ರಾಮಯ್ಯ ಅವರು ತಮ್ಮ ಮುಂದಿನ ಗುರಿಯನ್ನು ತೆರೆದಿಟ್ಟರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Subramanian Swamy: ಸುಬ್ರಮಣಿಯನ್‌ ಸ್ವಾಮಿ ವೋಟ್‌ ಹಾಕಿದ್ದು ಯಾರಿಗೆ ಗೊತ್ತೆ? ಟ್ವೀಟ್‌ ಮಾಡಿ ಬಹಿರಂಗ

Subramanian Swamy:ನಿನ್ನೆ ದೆಹಲಿಯ ಎಲ್ಲಾ 7ಕ್ಷೇತ್ರಗಳಲ್ಲೂ ಮತದಾನ ನಡೆದಿತ್ತು. ನಿಜಾಮುದ್ದೀನ್‌ ಪ್ರದೇಶದಲ್ಲಿ ಸುಬ್ರಮಣಿಯನ್‌ ಸ್ವಾಮಿ ಮತ ಚಲಾಯಿಸಿದ್ದರು. ಮತದಾನದ ಬಳಿಕ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಸ್ವಾಮಿ, ಪೂರ್ವ ದೆಹಲಿಯ ಅಭ್ಯರ್ಥಿ, ಮಾಜಿ ಡೆಪ್ಯೂಟಿ ಮೇಯರ್‌ ಹರ್ಷ್‌ ಮಲ್ಹೋತ್ರ ಅವರಿಗೆ ನಾನು ವೋಟ್‌ ಮಾಡಿದ್ದೇನೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದು ಬಹಿರಂಗಪಡಿಸಿದ್ದಾರೆ.

VISTARANEWS.COM


on

subramanian swamy
Koo

ನವದೆಹಲಿ: ಸ್ವಪಕ್ಷ ನಾಯಕರು, ಪ್ರಧಾನಿ ಮೋದಿ(PM Narendra Modi) ವಿರುದ್ಧವೇ ಅಚ್ಚರಿಕೆಯ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ಮಾಜಿ ಕೇಂದ್ರ ಸಚಿವ ಹಿರಿಯ ಬಿಜೆಪಿ ನಾಯಕ(BJP Leader) ಸುಬ್ರಮಣಿಯನ್‌ ಸ್ವಾಮಿ(Subramanian Swamy) ಮತ್ತೆ ಸದ್ದು ಮಾಡಿದ್ದಾರೆ. ಲೋಕಸಭೆ ಚುನಾವಣೆ(Lok Sabha Elections 2024)ಯ ಆರನೇ ಹಂತದ ಮತದಾನದ ವೇಳೆ ತಾವು ಯಾವ ಅಭ್ಯರ್ಥಿಗೆ ವೋಟ್‌ ಮಾಡಿರೋದಾಗಿ ಬಹಿರಂಗಪಡಿಸಿದ್ದಾರೆ. ಮತದಾನ ಅನ್ನೋದು ಅತ್ಯಂತ ಗೌಪ್ಯ ವಿಚಾರ. ಅದಾಗ್ಯೂ ಸ್ವಾಮಿ ತಮ್ಮ ಎಕ್ಸ್‌ ಖಾತೆಯಲ್ಲಿ ತಾವು ಯಾರಿಗೆ ಮತ ಚಲಾಯಿಸಿದ್ದು ಮತ್ತು ಆ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ಭರವಸೆ ವ್ಯಕ್ತಪಡಿಸುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.

ಸ್ವಾಮಿಯ ಟ್ವೀಟ್‌ನಲ್ಲಿ ಏನಿದೆ?

ನಿನ್ನೆ ದೆಹಲಿಯ ಎಲ್ಲಾ 7ಕ್ಷೇತ್ರಗಳಲ್ಲೂ ಮತದಾನ ನಡೆದಿತ್ತು. ನಿಜಾಮುದ್ದೀನ್‌ ಪ್ರದೇಶದಲ್ಲಿ ಸುಬ್ರಮಣಿಯನ್‌ ಸ್ವಾಮಿ ಮತ ಚಲಾಯಿಸಿದ್ದರು. ಮತದಾನದ ಬಳಿಕ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಸ್ವಾಮಿ, ಪೂರ್ವ ದೆಹಲಿಯ ಅಭ್ಯರ್ಥಿ, ಮಾಜಿ ಡೆಪ್ಯೂಟಿ ಮೇಯರ್‌ ಹರ್ಷ್‌ ಮಲ್ಹೋತ್ರ ಅವರಿಗೆ ನಾನು ವೋಟ್‌ ಮಾಡಿದ್ದೇನೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದು ಬಹಿರಂಗಪಡಿಸಿದ್ದಾರೆ.

ಮತದಾನಕ್ಕೆ ಎರಡು ದಿನ ಮೊದಲೂ ಇಂತಹದ್ದೇ ಒಂದು ಪೋಸ್ಟ್‌ ಮಾಡಿದ್ದ ಅವರು ಹರ್ಷ್‌ ಮಲ್ಹೋತ್ರಾ ಅವರನ್ನು ಹೊಗಳಿದ್ದರು. “ಇದೇ ಬರುವ ಶನಿವಾರ ಬೆಳಗ್ಗೆ ನಾನು ಮತ ಚಲಾಯಿಸುತ್ತಿದ್ದೇನೆ. ನನ್ನ ಮತ ಪೂರ್ವ ದೆಹಲಿಯ ಅಭ್ಯರ್ಥಿ, ಮಾಜಿ ಡೆಪ್ಯೂಟಿ ಮೇಯರ್‌ ಹರ್ಷ್‌ ಮಲ್ಹೋತ್ರ ಅವರಿಗೆ. ಅವರೊಬ್ಬ ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ದಾಖಲೆ ಇದೆ. ಸಂಸದರಾಗುವ ಎಲ್ಲಾ ಅರ್ಹತೆ ಅವರಿಗೆ ಇದೆ. ನಾನು ಪೂರ್ವ ನಿಜಾಮುದ್ಧೀನ್‌ ಪ್ರದೇಶದಲ್ಲಿ ವಾಸವಾಗಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

ಇನ್ನು ಸ್ವಾಮಿಯವರ ಟ್ವೀಟ್‌ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡಿದ್ದು, ಶಾಹಿ ಹಾಕಿರುವ ಬೆರಳಿನೊಂದಿಗೆ ಫೊಟೋ ತೆಗೆದು ಅಪ್‌ಲೋಡ್‌ ಮಾಡಿ ಎಂದು ಅನೇಕ ಮನವಿ ಮಾಡಿದ್ದಾರೆ.

ಈ ಹಿಂದೆ ಸುಬ್ರಮಣಿಯನ್‌ ಸ್ವಾಮಿ, ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿರುವವರು ಮೂರ್ಖರು. ನರೇಂದ್ರ ಮೋದಿ ಅವರು ನನ್ನನ್ನು ಸಂಸದನನ್ನಾಗಿ ಮಾಡುವುದಿಲ್ಲ ಎಂದು ಫಾಲೋವರ್‌ಗಳು ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ, ಮೂರ್ಖರಿಗೆ ಇದು ಗೊತ್ತಿಲ್ಲ. ನಾನು ಈಗಾಗಲೇ ಸಂಸತ್ತನ್ನು ಆರು ಬಾರಿ ಪ್ರವೇಶಿಸಿದ್ದೇನೆ. ಮೂರು ಬಾರಿ ಲೋಕಸಭೆ ಸದಸ್ಯನಾಗಿ, ಮೂರು ಬಾರಿ ರಾಜ್ಯಸಭೆ ಸದಸ್ಯನಾಗಿದ್ದೇನೆ. ನಾನು ಮನಸ್ಸು ಮಾಡಿದರೆ ವಾರಾಣಸಿಯಿಂದಲೇ ಸ್ಪರ್ಧಿಸಿ ಏಳನೇ ಬಾರಿ ಲೋಕಸಭೆ ಪ್ರವೇಶಿಸಬಲ್ಲೆ” ಎಂದು ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: IndiGo Flight: ಗಾಂಜಾ ಮತ್ತಿನಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಕಿಡಿಗೇಡಿ; ಮುಂದೇನಾಯ್ತು?

Continue Reading

ದೇಶ

Lok Sabha Election: 6ನೇ ಹಂತದಲ್ಲಿ 59% ಮತದಾನ ; ಬಂಗಾಳದಲ್ಲಿ ವೋಟಿಂಗ್‌ ಹೆಚ್ಚು, ಹಿಂಸೆಯ ಕಿಚ್ಚು

Lok Sabha Election: ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಕ್ರಿಕೆಟಿಗ ಗೌತಮ್‌ ಗಂಭೀರ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದರೊಂದಿಗೆ ಆರನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಲೋಕಸಭೆ ಚುನಾವಣೆಯು (Lok Sabha Election 2024) ಅಂತಿಮ ಹಂತಕ್ಕೆ ಬಂದಿದೆ. ಶನಿವಾರ ಆರನೇ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದ್ದು, ಸಂಜೆ 5 ಗಂಟೆ ಸುಮಾರಿಗೆ ಶೇ.59.05ರಷ್ಟು ಮತದಾನ (Voter Turnout) ನಡೆದಿದೆ. ದೆಹಲಿಯಲ್ಲಿ ಶೇ.54.48ರಷ್ಟು ಮತದಾನ ದಾಖಲಾದರೆ, ಪಶ್ಚಿಮ ಬಂಗಾಳದಲ್ಲಿ (West Bengal) 78.19ರಷ್ಟು ಮತದಾನ ದಾಖಲಾಗಿದೆ. ಆ ಮೂಲಕ ಆರನೇ ಹಂತದಲ್ಲಿ ಅತಿಹೆಚ್ಚು ಮತದಾನ ದಾಖಲಾದ ರಾಜ್ಯ ಎಂಬ ಖ್ಯಾತಿ ಪಶ್ಚಿಮ ಬಂಗಾಳದ್ದಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಕ್ರಿಕೆಟಿಗ ಗೌತಮ್‌ ಗಂಭೀರ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದರೊಂದಿಗೆ ಆರನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಸಾರ್ವತ್ರಿಕ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಮತದಾನ?

ರಾಜ್ಯಮತದಾನ ಪ್ರಮಾಣ
ಬಿಹಾರ53.30%
ಹರಿಯಾಣ58.37%
ಜಮ್ಮು-ಕಾಶ್ಮೀರ52.28%
ಜಾರ್ಖಂಡ್62.74%
ದೆಹಲಿ54.48%
ಒಡಿಶಾ60.07%
ಉತ್ತರ ಪ್ರದೇಶ54.03%
ಪಶ್ಚಿಮ ಬಂಗಾಳ78.19%

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಆರನೇ ಹಂತದಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದರು. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್‌ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್‌ ನಡೆದಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಪಶ್ಚಿಮ ಬಂಗಾಳದಲ್ಲಿ ಎಂದಿನಂತೆ ಕೆಲವೆಡೆ ಹಿಂಸಾಚಾರ ನಡೆದಿದೆ. ಅದರಲ್ಲೂ ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Continue Reading

ಪ್ರಮುಖ ಸುದ್ದಿ

West Bengal: ಬಂಗಾಳದಲ್ಲಿ ಎಲೆಕ್ಷನ್‌ ಹಿಂಸಾಚಾರ; ಬಿಜೆಪಿ ಅಭ್ಯರ್ಥಿಯನ್ನು ಕಲ್ಲೆಸೆದು ಓಡಿಸಿದ ಟಿಎಂಸಿ ಕಾರ್ಯಕರ್ತರು, Video ಇದೆ

West Bengal: ಪಶ್ಚಿಮ ಬಂಗಾಳದ ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

VISTARANEWS.COM


on

West Bengal
Koo

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ (West Bengal) ಚುನಾವಣೆ ಇರಲಿ, ಮತ ಎಣಿಕೆ ದಿನವೇ ಇರಲಿ, ಹಿಂಸಾಚಾರ ನಡೆದೇ ನಡೆಯುತ್ತವೆ. ಮತಯಂತ್ರಗಳನ್ನು ಧ್ವಂಸಗೊಳಿಸುವುದು, ಎದುರಾಳಿ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ನಡೆಸುವುದು ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಯುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯ (Lok Sabha Election 2024) ಆರನೇ ಹಂತದ ಮತದಾನದ ವೇಳೆ ಟಿಎಂಸಿ ಪಕ್ಷದ ದುಷ್ಕರ್ಮಿಗಳು ಬಿಜೆಪಿ ಅಭ್ಯರ್ಥಿಯ (BJP Candidate) ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಬಿಜೆಪಿ ಅಭ್ಯರ್ಥಿಯು ಗ್ರಾಮದಿಂದಲೇ ಓಡಿ ಹೋಗುವಂತಾಯಿತು.

ಹೌದು, ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದೆಲ್ಲ ಟಿಎಂಸಿ ಕೃತ್ಯ ಎಂದು ದೂರಿದೆ.

ಬಿಜೆಪಿ ನಾಯಕ ಅಮಿತ್‌ ಮಾಳವೀಯ ಅವರು ಕಲ್ಲುತೂರಾಟದ ವಿಡಿಯೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟಿಎಂಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ಟಿಎಂಸಿಯ ಗೂಂಡಾಗಳು ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜನರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ. ಇಷ್ಟಾದರೂ, ರಾಜ್ಯದಿಂದ ಟಿಎಂಸಿಯನ್ನು ಕಿತ್ತೆಸೆಯುವ ದಿಸೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನ ಮಾಡುತ್ತಿದ್ದಾರೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ.

ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರತಿಯೊಂದು ಹಂತದ ಮತದಾನದ ವೇಳೆಯೂ ಪಶ್ಚಿಮ ಬಂಗಾಳದಲ್ಲಿ ಭಾರಿ ಹಿಂಸಾಚಾರ ಸಂಭವಿಸಿದೆ. ಮತಗಟ್ಟೆಗಳ ಬಳಿ ಜನ ಶಾಂತಿಯಿಂದ ಮತದಾನ ಮಾಡಲೂ ಆಗದಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆದಿತ್ತು. ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜತೆಗೆ ತನಿಖೆಗೂ ಆದೇಶಿಸಿತ್ತು.

ಇದನ್ನೂ ಓದಿ: Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Continue Reading

ದೇಶ

Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Narendra Modi: 10 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಅವರು 60 ವರ್ಷ ದೇಶವನ್ನು ಆಳಿದ್ದರು. ನಾನು ಅವರ ಸಲಹೆ-ಸೂಚನೆಗಳನ್ನು ಕೇಳಲು ಬಯಸಿದ್ದೆ. ಪ್ರಣಬ್‌ ಮುಖರ್ಜಿ ಅವರು ಇರುವವರೆಗೆ ನನಗೆ ಅವರ ಅನುಭವದ ಉಪಯೋಗ ಆಯಿತು. ಅವರ ನಂತರ ಬೇರೆ ನಾಯಕರಿಂದ ಉತ್ತಮ ಸಹಕಾರ ಸಿಗಲಿಲ್ಲ ಎಂಬುದಾಗಿ ನರೇಂದ್ರ ಮೋದಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಾಲು ಸಾಲು ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದೇ ರೀತಿ, ನ್ಯೂಸ್‌ 18ಗೆ ಸಂದರ್ಶನ ನೀಡಿದ ಮೋದಿ, “ಕಳೆದ 10 ವರ್ಷಗಳಲ್ಲಿ ಬಲಿಷ್ಠ ಪ್ರತಿಪಕ್ಷವೇ ಇರಲಿಲ್ಲ. ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸವಾಲು ಒಡ್ಡಲಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೂಡ ಆಳುವ ಸರ್ಕಾರಕ್ಕೆ ಸವಾಲು ಹಾಕಲಿಲ್ಲ. ಇದು ನನಗೆ ಅಪಾರ ನೋವು ತಂದಿದೆ” ಎಂಬುದಾಗಿ ಹೇಳಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಪ್ರತಿಪಕ್ಷ ಇರುವುದು ಅತ್ಯವಶ್ಯಕ. ಪ್ರಬಲ ಪ್ರತಿಪಕ್ಷ ಇದರೆ ಸರ್ಕಾರವು ಎಚ್ಚರದಿಂದ, ಪ್ರತಿಪಕ್ಷಗಳ ತೂಗುಗತ್ತಿಯ ಭೀತಿಯಲ್ಲಿ ಸರಿಯಾದ ರೀತಿ ಕೆಲಸ ಮಾಡುತ್ತದೆ. ಹಾಗಂತ, ದೇಶದಲ್ಲಿ ಪ್ರಬಲ ಪ್ರತಿಪಕ್ಷ ನಾಯಕರಾಗುವ ಅರ್ಹತೆ ಇಲ್ಲ ಎಂದಲ್ಲ. ತುಂಬ ನಾಯಕರು ಅದಕ್ಕೆ ಅರ್ಹರಾಗಿದ್ದಾರೆ. 2014ರಿಂದ 2024ರ ಅವಧಿಯಲ್ಲಿ ನಮಗೆ ಬಲಿಷ್ಠ ಪ್ರತಿಪಕ್ಷ ಸಿಗಬೇಕಿತ್ತು. ಆದರೆ, ನನಗೆ ಅಂತಹ ಪ್ರತಿಪಕ್ಷ ಸಿಗಲಿಲ್ಲ. ಸರ್ಕಾರಕ್ಕೆ ಸವಾಲು ಒಡ್ಡಲಿಲ್ಲ ಎಂಬುದೇ ನನಗೆ ನೋವು ತಂದಿದೆ” ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸಹಕಾರ ನೀಡಲಿಲ್ಲ

“10 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಅವರು 60 ವರ್ಷ ದೇಶವನ್ನು ಆಳಿದ್ದರು. ನಾನು ಅವರ ಸಲಹೆ-ಸೂಚನೆಗಳನ್ನು ಕೇಳಲು ಬಯಸಿದ್ದೆ. ಪ್ರಣಬ್‌ ಮುಖರ್ಜಿ ಅವರು ಇರುವವರೆಗೆ ನನಗೆ ಅವರ ಅನುಭವದ ಉಪಯೋಗ ಆಯಿತು. ಆದರೆ, ಬೇರೆ ನಾಯಕರಿಂದ ನಮ್ಮ ಆಡಳಿತಕ್ಕೆ ಸಲಹೆ-ಸೂಚನೆ ಸಿಗಲಿಲ್ಲ. ನಾನು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗಿನ ಅನುಭವ ಹಾಗೂ ನನ್ನ ಪಕ್ಷದ ನಾಯಕರಿಂದ ಮಾತ್ರ ಸಲಹೆ ಸಿಕ್ಕಿತು” ಎಂದು ತಿಳಿಸಿದರು.

ಇದಕ್ಕೂ ಮೊದಲು ಎನ್‌ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಮಮತಾ ಬ್ಯಾನರ್ಜಿ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದ್ದರು. “ಮಮತಾ ಬ್ಯಾನರ್ಜಿ ಅವರು ಹೇಳಿದ್ದು ನಿಜ. ಜೂನ್‌ 4ರಂದು ಲೋಕಸಭೆ ಅವಧಿ ಮುಗಿಯಲಿದೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಸರ್ಕಾರ ರಚಿಸಲಿದೆ. ನಾನು ಕಾಶಿಯವ (ಅವರ ಲೋಕಸಭೆ ಕ್ಷೇತ್ರ), ನಾನು ಅವಿನಾಶಿ. ಕಾಶಿಯನ್ನು ಹೇಗೆ ನಾಶಪಡಿಸಲು ಆಗುವುದಿಲ್ಲವೋ, ಹಾಗೆಯೇ, ನನ್ನನ್ನು ಕೂಡ ಯಾರಿಂದಲೂ ನಾಶಪಡಿಸಲು ಆಗುವುದಿಲ್ಲ” ಎಂಬುದಾಗಿ ಹೇಳಿದ್ದರು.

ಇದನ್ನೂ ಓದಿ: PM Narendra Modi: ಇಂಡಿಯಾ ಮೈತ್ರಿಕೂಟ ಮತ ಬ್ಯಾಂಕ್‌ಗಾಗಿ ಅಶ್ಲೀಲ ಡ್ಯಾನ್ಸ್‌ ಮಾಡುತ್ತಿದೆ: ಮೋದಿ

Continue Reading
Advertisement
Mother Sentiment
ಅಂಕಣ21 mins ago

Mother Sentiment: ವ್ಯಾಸಂಗಕ್ಕಾಗಿ ಊರು ತೊರೆದು ಪಟ್ಟಣದ ಹಾಸ್ಟೆಲ್‌ ಸೇರುತ್ತಿರುವ ಮಗಳಿಗೆ ತಾಯಿ ಕರುಳಿನ ಭಾವುಕ ಪತ್ರ ಇದು…

subramanian swamy
ದೇಶ27 mins ago

Subramanian Swamy: ಸುಬ್ರಮಣಿಯನ್‌ ಸ್ವಾಮಿ ವೋಟ್‌ ಹಾಕಿದ್ದು ಯಾರಿಗೆ ಗೊತ್ತೆ? ಟ್ವೀಟ್‌ ಮಾಡಿ ಬಹಿರಂಗ

Mint Leaf Water
ಆರೋಗ್ಯ1 hour ago

Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

Karnataka weather Forecast
ಮಳೆ2 hours ago

Karnataka Weather : ದಕ್ಷಿಣ ಒಳನಾಡಲ್ಲಿ ಮಳೆ ಸೈಲೆಂಟ್‌; ಕರಾವಳಿ, ಉತ್ತರ ಒಳನಾಡಿನಲ್ಲಿ ಸಿಕ್ಕಾಪಟ್ಟೆ ವೈಲೆಂಟ್

Protein Powder
ಆರೋಗ್ಯ2 hours ago

Protein Powder: ಫಿಟ್‌ನೆಸ್‌ಗಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುತ್ತೀರಾ? ಹಾಗಿದ್ದರೆ ಎಚ್ಚರ!

Dina Bhavishya
ಭವಿಷ್ಯ3 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು

Fire Accident
ಸಂಪಾದಕೀಯ8 hours ago

ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ

election commission
ಪ್ರಮುಖ ಸುದ್ದಿ8 hours ago

Election Commission : ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ; ಚುನಾವಣಾ ಆಯೋಗ

Fire Accident
ಪ್ರಮುಖ ಸುದ್ದಿ8 hours ago

Fire Accident: 9 ಮಕ್ಕಳು ಸೇರಿ 27 ಜನರ ಸಾವಿಗೆ ಕಾರಣವಾದ ಗೇಮಿಂಗ್‌ ಜೋನ್‌ಗೆ NOCಯೇ ಇರ್ಲಿಲ್ಲ!

Virat kohli
ಪ್ರಮುಖ ಸುದ್ದಿ9 hours ago

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ16 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌