Money Guide: ನಿಮ್ಮ ಬಳಿ ಎಷ್ಟು ಬ್ಯಾಂಕ್‌ ಅಕೌಂಟ್‌ಗಳಿವೆ? ಒಂದಕ್ಕಿಂತ ಹೆಚ್ಚು ಅಕೌಂಟ್‌ಗಳಿದ್ದರೆ ಏನಾಗುತ್ತದೆ? Vistara News

ಮನಿ-ಗೈಡ್

Money Guide: ನಿಮ್ಮ ಬಳಿ ಎಷ್ಟು ಬ್ಯಾಂಕ್‌ ಅಕೌಂಟ್‌ಗಳಿವೆ? ಒಂದಕ್ಕಿಂತ ಹೆಚ್ಚು ಅಕೌಂಟ್‌ಗಳಿದ್ದರೆ ಏನಾಗುತ್ತದೆ?

Money Guide: ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್‌ ಅಕೌಂಟ್‌ ಹೊಂದಬಹುದು? ಒಂದಕ್ಕಿಂತ ಹೆಚ್ಚು ಖಾತೆ ಇದ್ದರೆ ಅದರಿಂದಾಗುವ ಪ್ರಯೋಜನಗಳೇನು? ಸಮಸ್ಯೆಗಳೇನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

bank
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಲವು ವರ್ಷಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ನಡೆದಿದೆ. ಹಿಂದೆಲ್ಲ ಬ್ಯಾಂಕ್‌ ಅಕೌಂಟ್‌ ಹೊಂದಿದವರ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಹಾಗಲ್ಲ ಪರಿಸ್ಥಿತಿ ಬದಲಾಗಿದೆ. ಅದರಲ್ಲೂ ಜನ ಧನ ಯೋಜನೆ ಬಂದ ಬಳಿಕ ಪ್ರತಿಯೊಬ್ಬರ ಬಳಿಯೂ ಬ್ಯಾಂಕ್‌ ಅಕೌಂಟ್‌ ಇದೆ. ಹಾಗಾದರೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್‌ ಅಕೌಂಟ್‌ ಹೊಂದಿರಬೇಕು? ಒಂದಕ್ಕಿಂತ ಹೆಚ್ಚು ಅಕೌಂಟ್‌ ಹೊಂದಿದರೆ ಇದರಿಂದಾಗುವ ಅನುಕೂಲಗಳೇನು, ಅನನುಕೂಲಗಳೇನು? ಮುಂತಾದ ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌. ಇಲ್ಲಿ ಉತ್ತರಿಸಿದ್ದಾರೆ. (Money Guide).

ಮೊದಲಿಗೆ ಹೇಗೆ ಬೇರೆ ಬೇರೆ ಅಕೌಂಟ್‌ ಕ್ರಿಯೇಟ್‌ ಆಗುತ್ತವೆ ಎನ್ನುವುದನ್ನು ನೋಡೋಣ. ಉದಾಹರಣೆಗೆ ಒಬ್ಬ ವ್ಯಕ್ತಿ XYZ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಆ ಕಂಪನಿ A ಎನ್ನುವ ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡಿಸಿರುತ್ತದೆ. ಆತ ಕಂಪನಿಯಿಂದ ಕೆಲಸ ಬಿಟ್ಟಾಗ ಆ ಬ್ಯಾಂಕ್‌ ಅಕೌಂಟ್‌ ಹಾಗೇ ಇರುತ್ತದೆ. ಆತ ಇನ್ನೊಂದು ಕಂಪನಿಗೆ ಸೇರಿಕೊಳ್ಳುತ್ತಾನೆ. ಅಲ್ಲಿ B ಎನ್ನುವ ಬ್ಯಾಂಕ್‌ನ ಅಕೌಂಟ್‌ ಓಪನ್‌ ಮಾಡಿಸಲಾಗುತ್ತದೆ. ಮತ್ತೆ ಆತ ಕೆಲಸ ಮಾಡುವ ಕಂಪನಿ ಬದಲಾಯಿಸುತ್ತಾನೆ. ಅಲ್ಲಿ ಬೇರೊಂದು ಬ್ಯಾಂಕ್‌ ಅಕೌಂಟ್‌ ತೆರೆಯಲಾಗುತ್ತದೆ. ಇತ್ತ ಆತನಿಗೆ ಹೋಮ್‌ ಲೋನ್‌ ಬೇಕಾಗುತ್ತದೆ. ಆಗ ಆತ ಉತ್ತಮ ಬಡ್ಡಿದರದಲ್ಲಿ ಲೋನ್‌ ಸಿಗುವ ಬ್ಯಾಂಕ್‌ಗೆ ಹೋಗಿ ಮತ್ತೆ ಅಕೌಂಟ್‌ ಕ್ರಿಯೇಟ್‌ ಮಾಡುತ್ತಾನೆ. ಹೀಗೆ ಕೆಲವರು ಗೊತ್ತಿದ್ದು ಹಲವು ಅಕೌಂಟ್‌ ಹೊಂದಿದ್ದರೆ ಇನ್ನು ಕೆಲವರು ಗೊತ್ತಿಲ್ಲದೆ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡುತ್ತಾರೆ. ಎಷ್ಟು ಬ್ಯಾಂಕ್‌ ಅಕೌಂಟ್‌ ಇದ್ದರೂ ಸಮಸ್ಯೆ ಇಲ್ಲ. ಆದರೆ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎನ್ನುತ್ತಾರೆ ಶರತ್‌.

ಹಲವು ಅಕೌಂಟ್‌ ಇರುವುದರಿಂದಾಗುವ ಪ್ರಯೋಜನಗಳು

ನಾವು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 5 ಲಕ್ಷ ರೂ.ಗಿಂತ ಅಧಿಕ ಹಣ ಇಟ್ಟಿದ್ದು, ಬ್ಯಾಂಕ್‌ ದಿವಾಳಿಯಾದರೆ ನಮಗೆ ಸಿಗುವುದು ಕೇವಲ 5 ಲಕ್ಷ ರೂ. ಮಾತ್ರ. ಅಂದರೆ ನೀವು 20 ಲಕ್ಷ ರೂ. ಇಟ್ಟಿದ್ದರೂ ಸರ್ಕಾರ ಅಥವಾ ಆರ್‌ಬಿಐ ವಾಗ್ದಾನ ಮಾಡುವ ಮೊತ್ತ 5 ಲಕ್ಷ ರೂ. ಮಾತ್ರ. ಅಂದರೆ ಉಳಿದ 15 ಲಕ್ಷ ರೂ. ಅನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ 4 ಬ್ಯಾಂಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ತಲಾ 5 ಲಕ್ಷ ರೂ.ನಂತೆ ಡೆಪಾಸಿಟ್‌ ಇಟ್ಟರೆ ಅಷ್ಟೂ ಹಣ ಸುರಕ್ಷಿತವಾಗಿರುತ್ತದೆ. ಇನ್ನೂ ಅಧಿಕ ಮೊತ್ತದ ಹಣ ಇದ್ದರೆ ಮನೆಯವರ ಹೆಸರಿನಲ್ಲಿ ಅಕೌಂಟ್‌ ಓಪನ್‌ ಮಾಡಿ ಅದರಲ್ಲಿ ಇಡಬಹುದು. ಹೀಗಾಗಿ ಒಂದಕ್ಕಿಂತ ಅಧಿಕ ಅಕೌಂಟ್‌ ಇದ್ದರೆ ಹಣಕ್ಕೆ ಸುರಕ್ಷತೆ ಹೆಚ್ಚು. ಒಂದೇ ಅಕೌಂಟ್‌ ಆದರೆ ಸ್ವಲ್ಪ ರಿಸ್ಕ್‌ ಜಾಸ್ತಿ ಎಂದು ಶರತ್‌ ತಿಳಿಸುತ್ತಾರೆ.

ಯುಪಿಐ ಪಾವತಿಗೆ ಅನುಕೂಲ

ಈಗ ಯುಪಿಐ ಪಾವತಿ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ನಾವು ಈಗ ಪ್ರತಿಯೊಂದಕ್ಕೂ ಯುಪಿಐ ಬಳಸುತ್ತೇವೆ. ಬೆಂಗಳೂರಿನಂತಹ ಮಹಾನಗರದಿಂದ ಹಿಡಿದು ಚಿಕ್ಕ ಪುಟ್ಟ ನಗರಗಳಲ್ಲೂ ಈ ಡಿಜಿಟಲ್‌ ಪಾವತಿ ವೇಗವಾಗಿ ಬೆಳೆಯುತ್ತಿದೆ. ನಮ್ಮ ಬಳಿ ಒಂದೇ ಬ್ಯಾಂಕ್‌ ಅಕೌಂಟ್‌ ಇದೆ ಅಂದುಕೊಳ್ಳೋಣ. ಒಂದು ವೇಳೆ ನಮ್ಮ ಬ್ಯಾಂಕ್‌ ಸರ್ವರ್‌ ಡೌನ್‌ ಅಥವಾ ಇನ್ಯಾವುದೋ ತಾಂತ್ರಿಕ ಸಮಸ್ಯೆಯಿಂದ ಯುಪಿಐ ಪಾವತಿ ಸಾಧ್ಯವಾಗದಿದ್ದರೆ ಸಮಸ್ಯೆಯಾಗುತ್ತದೆ. ಮೊದಲೇ ಜೇಬಲ್ಲಿ ದುಡ್ಡು ಬೇರೆ ಇರುವುದಿಲ್ಲ. ಆಗ ಬೇರೆ ಬ್ಯಾಂಕ್‌ ಅಕೌಂಟ್‌ ಹೊಂದಿರುವುದು ಉತ್ತಮ. ಸಮಸ್ಯೆ ಇರುವ ಬ್ಯಾಂಕ್‌ ಬಿಟ್ಟು ಇನ್ನೊಂದು ಬ್ಯಾಂಕ್‌ನಿಂದ ಹಣ ಪಾವತಿಸಬಹುದು. ಒಟ್ಟಿನಲ್ಲಿ ಹಲವು ಖಾತೆ ಹೊಂದಿದ್ದರೆ ನಮ್ಮ ಡಿಜಿಟಲ್‌ ಟ್ರಾನ್ಸಾಕ್ಷನ್‌ ಸುಲಭವಾಗುತ್ತದೆ ಎಂದು ಶರತ್‌ ವಿವರಿಸುತ್ತಾರೆ.

ಒಂದೇ ಅಕೌಂಟ್‌ ಹೊಂದಿದ್ದರೆ ಈ ಅನುಕೂಲವೂ ಇದೆ

ಒಂದು ಬ್ಯಾಂಕ್‌ ಅಕೌಂಟ್‌ ಇದ್ದಾಗ ಐಟಿ ರಿಟರ್ನ್ಸ್‌ ಫೈಲ್‌ ಮಾಡುವುದು ಸುಲಭ. ಎಷ್ಟು ಆದಾಯ ಬಂದಿದೆ? ಯಾವ ಮೂಲದಿಂದ ಬಂದಿದೆ? ಎನ್ನುವುದನ್ನು ನಾವು ಆದಾಯ ತೆರಿಗೆ ವಿವರ ಸಲ್ಲಿಸುವಾಗ ತಿಳಿಸಬೇಕಾಗುತ್ತದೆ. ಒಂದೇ ಬ್ಯಾಂಕ್‌ ಅಕೌಂಟ್‌ ಇದ್ದಾಗ ಈ ಎಲ್ಲ ಮಾಹಿತಿ ಸುಲಭವಾಗಿ ಲಭಿಸುತ್ತದೆ. ಬೇರೆ ಬೇರೆ ಅಕೌಂಟ್‌ ಇದ್ದಾಗ ಎಲ್ಲವನ್ನೂ ತೆಗೆದು, ಒಟ್ಟುಗೂಡಿಸಿ ಲೆಕ್ಕಾಚಾರ ಹಾಕಬೇಕಾಗುತ್ತದೆ. ಇದನ್ನು ಸುಲಭವಾಗಿ ನಿಭಾಯಿಸಬಹುದು ಎನ್ನುವವರು ಹೆಚ್ಚು ಅಕೌಂಟ್‌ ಓಪನ್‌ ಮಾಡಬಹುದು. ಇನ್ನು ಒಂದೊಂದು ಬ್ಯಾಂಕ್‌ ಡೆಬಿಟ್‌ ಕಾರ್ಡ್‌ನಲ್ಲಿ ಬೇರೆ ಬೇರೆ ಕ್ಯಾಶ್‌ ಬ್ಯಾಕ್‌, ಡಿಸ್ಕೌಂಟ್‌ನಂತಹ ಪ್ರಯೋಜನ ದೊರೆಯುತ್ತದೆ. ಹೀಗಾಗಿ ಹೆಚ್ಚಿನ ಬ್ಯಾಂಕ್‌ ಅಕೌಂಟ್‌ ಹೊಂದಿದ್ದರೆ ಈ ರೀತಿಯ ಅನುಕೂಲಗಳನ್ನೂ ಪಡೆದುಕೊಳ್ಳಬಹುದು. ಇನ್ನೊಂದು ಸಮಸ್ಯೆ ಎಂದರೆ ಕೆಲವೊಮ್ಮೆ ನಾವು ಗೋಲ್ಡ್‌ ಡೆಬಿಟ್‌ ಕಾರ್ಡ್‌ ಪಡೆದುಕೊಳ್ಳುತ್ತೇವೆ. ಅದಕ್ಕೆ 800-900 ರೂ. ವಾರ್ಷಿಕ ಶುಲ್ಕವಿರುತ್ತದೆ. 3-4 ಅಕೌಂಟ್‌ ಇದ್ದರೆ 3-4 ಸಾವಿರ ರೂ. ಶುಲ್ಕಕ್ಕೆ ಕಟ್‌ ಆಗುತ್ತದೆ. ಹೀಗಾಗಿ ಡೆಬಿಟ್‌ ಕಾರ್ಡ್‌ನಿಂದ ಹೆಚ್ಚಿನ ಅನುಕೂಲ ಪಡೆಯುವವರಿಗೆ ಮಾತ್ರ ಕಾರ್ಡ್‌ ಹೆಚ್ಚು ಪ್ರಯೋಜನಕಾರಿ ಎಂದು ಶರತ್‌ ಸಲಹೆ ನೀಡುತ್ತಾರೆ.

ಮಿನಿಮಮ್‌ ಬ್ಯಾಲೆನ್ಸ್‌

ಇನ್ನು ಒಂದೇ ಅಕೌಂಟ್‌ ಇದ್ದರೆ ಮಿನಿಮಮ್‌ ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿಸಿಕೊಳ್ಳುವದು ಸುಲಭ. ಕೆಲವು ಬ್ಯಾಂಕ್‌ಗಳಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ 10 ಸಾವಿರ ರೂ. ಇರುತ್ತದೆ. ಹಾಗಿದ್ದಾಗ ಹಲವು ಅಕೌಂಟ್‌ ಹೊಂದಿರುವುದು ಕಷ್ಟ. ಈ ಮಿನಿಮಮ್‌ ಬ್ಯಾಲೆನ್ಸ್‌ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಯಾಕೆಂದರೆ ಮಿನಿಮಮ್‌ ಬ್ಯಾಲೆನ್ಸ್‌ ಇಲ್ಲದಿದ್ದರೆ ಮತ್ತೆ ಅದಕ್ಕೆ ಶುಲ್ಕ ಕಟ್ಟಬೇಕಾಗುತ್ತದೆ ಎನ್ನುತ್ತಾರೆ ಶರತ್‌.

ಕೆಲವರು ಹಲವು ಬ್ಯಾಂಕ್‌ ಅಕೌಂಟ್‌ ಹೊಂದಿದ್ದರೂ ಅದರಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ಇಟ್ಟಿರುವುದಿಲ್ಲ. ಇದ್ದಕ್ಕಿದ್ದಂತೆ ಆ ಅಕೌಂಟ್‌ಗೆ ಯಾರಾದರೂ ದುಡ್ಡು ಹಾಕಿದರೆ ಮತ್ತೆ ಚಾಲೂ ಆಗುತ್ತದೆ. ಆಗ ಬ್ಯಾಂಕ್‌ ಪ್ರತಿ ತಿಂಗಳು 300-350 ರೂ. ಶುಲ್ಕ ವಿಧಿಸುತ್ತದೆ. ಹೀಗಾಗಿ ಬಳಸದೆ ಇರುವ ಬ್ಯಾಂಕ್‌ ಅಕೌಂಟ್‌ ಅನ್ನು ಕ್ಲೋಸ್‌ ಮಾಡುವುದು ಉತ್ತಮ ಅಥವಾ ಮಿನಿಮಮ್‌ ಬ್ಯಾಲೆನ್ಸ್‌ ಇಡುವುದು ಮುಖ್ಯ. ಹಲವರು ಸ್ಟಾಕ್‌ ಮಾರ್ಕೆಟ್‌ಗೆ ಅಂತಾನೇ ಪ್ರತ್ಯೇಕ ಬ್ಯಾಂಕ್‌ ಅಕೌಂಟ್‌ ಇಟ್ಟಿರುತ್ತಾರೆ. ಇದರಿಂದ ಸುಲಭವಾಗಿ ವ್ಯವಹರಿಸಬಹುದು. ಇನ್ನು ಕೆಲವರು ಸ್ಯಾಲರಿಗಾಗಿ ಪ್ರತ್ಯೇಕ ಖಾತೆ ಹೊಂದಿರುತ್ತಾರೆ. ಅದರಿಂದ ಬೇರೆ ಯಾವುದೇ ವ್ಯವಹಾರ ನಡೆಸುವುದಿಲ್ಲ. ಈ ಅಕೌಂಟ್‌ನಿಂದ ಇನ್ನೊಂದು ಅಕೌಂಟ್‌ಗೆ ದುಡ್ಡು ವರ್ಗಾಯಿಸಿ ಅಲ್ಲಿಂದ ಬಳಸುತ್ತಾರೆ. ಇನ್ನೊಂದು ಅಕೌಂಟ್‌ ಅನ್ನು ಉಳಿತಾಯಕ್ಕೆಂದೇ ಕ್ರಿಯೇಟ್‌ ಮಾಡುತ್ತಾರೆ. ಹೀಗಾಗಿ ಇಂತಿಷ್ಟೇ ಅಕೌಂಟ್‌ ಹೊಂದಿರಬೇಕು ಎನ್ನುವ ನಿಯಮಗಳೇನೂ ಇಲ್ಲ. ಆದರೆ ಅಕೌಂಟ್‌ನಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ಹೊಂದಿರುವುದು ಕಡ್ಡಾಯ ಎಂದು ಶರತ್‌ ವಿವರಿಸುತ್ತಾರೆ.

ಇದನ್ನೂ ಓದಿ: Money Guide: ಪಿಪಿಎಫ್‌, ಅಂಚೆ ಕಚೇರಿ; ಮಧ್ಯಮ ವರ್ಗದವರ ಹೂಡಿಕೆಗೆ ಇವು ಬೆಸ್ಟ್‌ ಪ್ಲಾನ್‌ಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

Money Guide: ಸುರಕ್ಷಿತ ಹೂಡಿಕೆ ಎಂದೇ ಕರೆಯಲ್ಪಡುವ ಪಿಪಿಎಫ್‌ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

ppf
Koo

ಬೆಂಗಳೂರು: ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಅನೇಕ ಕನಸುಗಳಿರುತ್ತವೆ. ಸ್ವಂತ ಮನೆ ಇರಬೇಕು, ವಾಹನ ಹೊಂದಬೇಕು, ವ್ಯಾಪಾರ ಮಾಡಬೇಕು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಹೀಗೆ… ಈ ಕನಸುಗಳನ್ನು ನನಸು ಮಾಡಲು ಅವರು ಕಷ್ಟಪಟ್ಟು ದುಡಿಯುತ್ತಾರೆ. ಇಂತಹ ಶ್ರಮದ ದುಡಿಮೆಯನ್ನು ಸುರಕ್ಷಿತವಾಗಿ ಇಡುವುದು ಕೂಡ ಮುಖ್ಯ. ಅದಕ್ಕೆ ಅತ್ಯುತ್ತಮ ಆಯ್ಕೆ ಸಾರ್ವಜನಿಕ ಭವಿಷ್ಯ ನಿಧಿ (Public Provident Fund–PPF) ಎಂದು ತಜ್ಞರು ಸಲಹೆ ನೀಡುತ್ತಾರೆ. ಪಿಪಿಎಫ್ ಮೂಲಕ ಹೂಡಿಕೆ ಮಾಡುವುದರಿಂದ ಸುರಕ್ಷತೆ ದೊರೆಯುವುದಷ್ಟೇ ಅಲ್ಲ ಉತ್ತಮ ಆದಾಯವೂ ಲಭ್ಯವಾಗುತ್ತದೆ. ಈ ಕುರಿತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ದೀರ್ಘಕಾಲೀನ ಹೂಡಿಕೆ

ಪಿಪಿಎಫ್‌ ದೀರ್ಘಕಾಲೀನ ಹೂಡಿಕೆದಾರರ ನೆಚ್ಚಿನ ಆಯ್ಕೆ ಎಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ತಿಂಗಳಿಗೆ 12,500 ರೂ. ಹೂಡಿಕೆ ಮಾಡಿದರೆ 2.27 ಕೋಟಿ ರೂ. ಆದಾಯ ಸಿಗಲಿದೆ. ಪಿಪಿಎಫ್‌ ಅನ್ನು ಹಣಕಾಸು ಸಚಿವಾಲಯದ ರಾಷ್ಟ್ರೀಯ ಉಳಿತಾಯ ಸಂಸ್ಥೆಯು 1968ರಲ್ಲಿ ಪರಿಚಯಿಸಿತ್ತು. ಇದು ಸರ್ಕಾರಿ ಬೆಂಬಲಿತ ಯೋಜನೆಯಾಗಿದ್ದು, ವಿಶೇಷವಾಗಿ ನಿವೃತ್ತಿಗಂತಲೇ ವಿನ್ಯಾಸಗೊಳಿಸಲಾಗಿದೆ.

ಅರ್ಹತೆಗಳೇನು?

ಈ ಯೋಜನೆಯಲ್ಲಿ ಭಾರತೀಯ ನಾಗರಿಕರು ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಲು ಸಾಧ್ಯವಿದೆ. ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ ಅಸ್ವಸ್ಥರ ಪರವಾಗಿ ಗಾರ್ಡಿಯನ್‌ಗಳು ಕನಿಷ್ಠ 500 ರೂ. ಮತ್ತು ವಾರ್ಷಿಕ ಮಿತಿ ರೂ 1.5 ಲಕ್ಷ ರೂ.ಯೊಂದಿಗೆ ಪಿಪಿಎಫ್ ಖಾತೆಯನ್ನು ಪ್ರಾರಂಭಿಸಬಹುದು. ಅದಾಗ್ಯೂ ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ.

ಅವಧಿ

ಒಂದು ಪಿಪಿಎಫ್‌ ಅಕೌಂಟ್‌ಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್‌ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಲಾಕ್‌ ಇನ್‌ ಅವಧಿಯನ್ನು ಮತ್ತೆ 5 ವರ್ಷ ವಿಸ್ತರಿಸಬಹುದು. ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಲಂಪ್ಸಮ್‌ ಅಥವಾ ಕಂತುಗಳಲ್ಲಿ ಕಟ್ಟಬಹುದು. ಅಕೌಂಟ್‌ ಸಕ್ರಿಯವಾಗಲು ಪ್ರತಿ ವರ್ಷ ಕಟ್ಟಬೇಕು.

ಪಿಪಿಎಫ್ ಹೂಡಿಕೆಯ ಮೇಲೆ ಸಾಲ

ಇನ್ನೊಂದು ವಿಶೇಷ ಎಂದರೆ ಪಿಪಿಎಫ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್‌ ಮೇಲೆ ಸಾಲ ಪಡೆಯಬಹುದು. ಆದರೆ ಇದಕ್ಕೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಹಣಕ್ಕಾಗಿ ಮಾತ್ರ ಕ್ಲೇಮ್‌ ಮಾಡಿಕೊಳ್ಳಬಹುದು.‌

2.27 ಕೋಟಿ ರೂ. ಆದಾಯ ಪಡೆಯುವುದು ಹೇಗೆ?

ಈ ಮೊದಲು ಹೇಳಿದಂತೆ ಪಿಪಿಎಫ್‌ ಖಾತೆಯಿಂದ 2.27 ಕೋಟಿ ರೂ. ಆದಾಯ ಗಳಿಸಿಸುವುದು ಹೇಗೆ ಎನ್ನುವುದನ್ನು ನೋಡೋಣ. ಪಿಪಿಎಫ್ ಖಾತೆಯಲ್ಲಿ 35 ವರ್ಷಗಳವರೆಗೆ ತಿಂಗಳಿಗೆ ಕೇವಲ 12,500 ಅಥವಾ ವಾರ್ಷಿಕವಾಗಿ 1.50 ಲಕ್ಷ ರೂ. ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಪ್ರಸ್ತುತ ಪಿಪಿಎಫ್‌ ಬಡ್ಡಿ ದರ 7.10%. ಇದನ್ನು ಪರಿಗಣಿಸಿ ಮೆಚ್ಯುರಿಟಿ ಸಮಯದಲ್ಲಿ (35 ವರ್ಷ ಆದ ಮೇಲೆ) ಸುಮಾರು 2.27 ಕೋಟಿ ರೂ. ಆದಾಯವನ್ನು ಪಡೆಯಬಹುದು.

ಇದನ್ನೂ ಓದಿ: Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?

ಮುಂದುವರಿಸುವುದು ಹೇಗೆ?

ಪಿಪಿಎಫ್‌ ಖಾತೆಗಳ ಅವಧಿ 15 ವರ್ಷಗಳು. ಹಾಗಿದ್ದರೂ ಅದನ್ನು ಮತ್ತೆ ಮುಂದುವರಿಸುವ ಅವಕಾಶವಿದೆ. ಐದು ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. 20 ವರ್ಷಗಳ ನಂತರವೂ ಮುಂದುವರಿಯಲು ನೀವು ಫಾರ್ಮ್ 16-ಎಚ್‌ (16-H) ಅನ್ನು ಸಲ್ಲಿಸಬೇಕಾಗುತ್ತದೆ. ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಮೂಲ ಮೊತ್ತಕ್ಕೆ ಟ್ಯಾಕ್ಸ್‌ ಬೆನಿಫಿಟ್‌ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!

Money Guide: ಬ್ಯಾಂಕ್‌ನಿಂದ ಪರ್ಸನಲ್‌ ಲೋನ್‌ ಪಡೆದುಕೊಳ್ಳುವುದು ಸಾಹಸದ ಕೆಲಸವೇ ಸೈ. ಜತೆಗೆ ಬಡ್ಡಿದರವೂ ಹೆಚ್ಚಿರುತ್ತದೆ. ಅದರ ಬದಲು ತೆಗೆದುಕೊಳ್ಳಬಹುದಾದ ಸಾಲಗಳ ವಿವರ ಇಲ್ಲಿದೆ.

VISTARANEWS.COM


on

loan
Koo

ಬೆಂಗಳೂರು: ಪ್ರಸ್ತುತ ಯಾವುದೇ ಸಾಲ ಮಾಡದೆ ಜೀವನ ಸಾಗಿಸುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಅದರಲ್ಲೂ ಮಧ್ಯಮ ವರ್ಗದ ಜನರು ಒಂದಲ್ಲ ಒಂದು ಕಾರಣಕ್ಕೆ ಸಾಲವನ್ನು ಮಾಡಲೇಬೇಕು ಎನ್ನುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಬ್ಯಾಂಕ್‌ನಿಂದ ಪರ್ಸನಲ್‌ ಲೋನ್‌ (Personal loan) ತೆಗೆದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಒಂದು ವೇಳೆ ಸಾಲ ಮಂಜೂರಾದರೂ ಅದಕ್ಕಿರುವ ಬಡ್ಡಿದರ ಹೆಚ್ಚಾಗಿರುತ್ತದೆ. ಹಾಗಾದರೆ ಇದಕ್ಕಿರುವ ಪರ್ಯಾಯ ಮಾರ್ಗಗಳೇನು? ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ಕುಳಿತು ಸಾಲ ಪಡೆದುಕೊಳ್ಳುವ ಸೌಲಭ್ಯವೂ ಈಗ ಲಭ್ಯ. ಮೊಬೈಲ್‌ ಸಹಾಯದಿಂದ ಆನ್‌ಲೈನ್‌ ಮೂಲಕವೇ ಲೋನ್‌ ಪಾಸ್‌ ಮಾಡಿಸಬಹುದು. ಅಂತಹ ವಿವಿಧ ಸಾಲ ಸೌಲಭ್ಯಗಳ ವಿವರ ಇಲ್ಲಿದೆ.

ಪಿಪಿಎಫ್‌

ನೀವು ಉದ್ಯೋಗದಲ್ಲಿದ್ದರೆ ಸಾರ್ವಜನಿಕ ಭವಿಷ್ಯ ನಿಧಿಯಿಂದ (PPF) ಸಾಲ ತೆಗೆದುಕೊಳ್ಳಬಹುದು. ನಿಮ್ಮ ಪಿಪಿಎಫ್‌ನಲ್ಲಿರುವ ಹಣದ ಮೇಲೆ ನೀವು ಸಾಲವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಕನಿಷ್ಠ ಒಂದು ವರ್ಷದವರೆಗೆ ಪಿಪಿಎಫ್ ಖಾತೆಯನ್ನು ಹೊಂದಿರುವುದು ಅಗತ್ಯ. ನಿಮ್ಮ ಪಿಪಿಎಫ್‌ ಖಾತೆಯಲ್ಲಿರುವ ಮೊತ್ತದ ಆಧಾರದ ಮೇಲೆ ಸಾಲ ದೊರೆಯುತ್ತದೆ. ಪರ್ಸನಲ್ ಲೋನ್‌ಗೆ ಹೋಲಿಸಿದರೆ ಇದರಲ್ಲಿ ಬಡ್ಡಿದರ ಕಡಿಮೆ.

ಚಿನ್ನದ ಮೇಲಿನ ಸಾಲ

ಆಭರಣವಾಗಿ ಮಾತ್ರವಲ್ಲದೆ ಚಿನ್ನ ಆದಾಯದ ಮೂಲವಾಗಿಯೂ ಕಷ್ಟಕಾಲದಲ್ಲಿ ನೆರವಾಗುತ್ತದೆ. ಚಿನ್ನದ ಮೇಲಿನ ಸಾಲ ದುಡ್ಡಿನ ಆವಶ್ಯಕತೆಯನ್ನು ನೆರವೇರಿಸುತ್ತದೆ. ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲ 2ರಿಂದ 3 ದಿನಗಳಲ್ಲಿ ದೊರೆಯುತ್ತದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ (Non-banking Financial Company)ಗಳು 1.5 ಕೋಟಿ ರೂ.ಗಳವರೆಗೆ ಚಿನ್ನದ ಸಾಲವನ್ನು ನೀಡುತ್ತವೆ. ಈ ಸಾಲವನ್ನು ಪಡೆಯಲು ನಿಮ್ಮ ಚಿನ್ನದ ಆಭರಣಗಳನ್ನು ಅಡ ಇಡವಿಟ್ಟರೆ ಸಾಕು. ಬ್ಯಾಂಕ್ ಅವುಗಳನ್ನು ಸುರಕ್ಷಿತವಾಗಿ ತೆಗೆದಿರಿಸುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ನೀವು ಅಡವಿಟ್ಟ ಚಿನ್ನವನ್ನು ಹಿಂಪಡೆಯಬಹುದು. ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಸಾಲವನ್ನು ಕಡಿಮೆ ಬಡ್ಡಿದರದೊಂದಿಗೆ ಒದಗಿಸಲಾಗುತ್ತದೆ. ಇದು ಸಾಮಾನ್ಯವಾಗಿ ಶೇ. 8ರಷ್ಟು ವಾರ್ಷಿಕ ದರದಲ್ಲಿ ಪ್ರಾರಂಭವಾಗುತ್ತದೆ. 

ಇದನ್ನೂ ಓದಿ: Money Guide: ತುರ್ತು ಸಂದರ್ಭದಲ್ಲಿ ನೆರವಾಗುವ ಹೋಮ್‌ಲೋನ್‌ ಇನ್ಶೂರೆನ್ಸ್‌; ಏನಿದರ ಮಹತ್ವ?

ಎಲ್‌ಐಸಿ

ನಿಮ್ಮ ಬಳಿ ಎಲ್ಐಸಿ ಪಾಲಿಸಿ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಗೋಲ್ಡ್ ಲೋನ್‌ ಸಂದರ್ಭದಲ್ಲಿ ನೀವು ಸೆಕ್ಯೂರಿಟಿ ರೂಪದಲ್ಲಿ ಚಿನ್ನಾಭರಣ ಇಡುವಂತೆ ಇಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಇಡಬೇಕಾಗುತ್ತದೆ. ಒಂದು ವೇಳೆ ಸಾಲ ಕಟ್ಟಲು ಸಾಧ್ಯವಾಗದೇ ಇದ್ದಲ್ಲಿ ಸಂಸ್ಥೆ ಎಲ್ಐಸಿ ಪಾಲಿಸಿಯಲ್ಲಿರುವ ಹಣವನ್ನು ಕಡಿತಗೊಳಿಸುತ್ತದೆ. ಎಲ್‌ಐಸಿ ಸಾಲ ಪಡೆಯಲು ನೀವು ಕನಿಷ್ಠಪಕ್ಷ ಮೂರು ವರ್ಷಗಳ ಪ್ರೀಮಿಯಂ ಕಟ್ಟಿರಬೇಕು. ಎಲ್ಐಸಿ ಗ್ರಾಹಕರು ಮಾತ್ರ ಈ ಲೋನ್ ಪಡೆದುಕೊಳ್ಳಬಹುದಾಗಿದ್ದು, ಅವರ ಪಾಲಿಸಿ ಲೋನ್ ಅರ್ಹತೆಯನ್ನು ಹೊಂದಿರುವುದು ಮುಖ್ಯ. ಎಲ್ಐಸಿ ಮೂಲಕ ಲೋನ್ ಪಡೆದುಕೊಳ್ಳುವವರಿಗೆ ವಾರ್ಷಿಕ 9 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಜತೆಗೆ ಬಡ್ಡಿದರವನ್ನು ಎಲ್ಐಸಿ ಪಾಲಿಸಿಯ ಪ್ರೊಫೈಲ್ ಮೇಲೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ನಿಮ್ಮ ಪಾಲಿಸಿಯ ಮೌಲ್ಯದ 90 ಪ್ರತಿಶತ ಲೋನ್ ಹಣವನ್ನು ಪಡೆದುಕೊಳ್ಳಬಹುದು. ಸಾಲದ ಮರುಪಾವತಿಯ ಅವಧಿ ಕನಿಷ್ಠ ಆರು ತಿಂಗಳಿಂದ ಪ್ರಾರಂಭಿಸಿ ಗರಿಷ್ಠ ಐದು ವರ್ಷಗಳವರೆಗೆ ಇರುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?

Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಇಟ್ಟಿರುವ ಹಣಕ್ಕೆ ಏನಾಗುತ್ತದೆ? ಅದನ್ನು ಮರಳಿ ಪಡೆಯುವುದು ಹೇಗೆ? ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ ನಿಯಮ ಏನು ಹೇಳುತ್ತದೆ? ಮುಂತಾದ ಅನುಮಾನಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

bank account new
Koo

ಬೆಂಗಳೂರು: ಕೆಲವೊಮ್ಮೆ ಬ್ಯಾಂಕ್‌ಗಳು ದಿವಾಳಿಯಾಗುವ ಸುದ್ದಿಗಳನ್ನು ಕೇಳಿರುತ್ತೇವೆ. ಅಂತಹ ಸಂದರ್ಭದಲ್ಲಿ ಸಹಜವಾಗಿಯೇ ನಮಗೂ ಆತಂಕ ಕಾಡುತ್ತದೆ. ನಾವು ಠೇವಣಿ ಇಟ್ಟಿರುವ ಬ್ಯಾಂಕ್‌ ದಿವಾಳಿಯಾದರೆ ಏನಪ್ಪ ಗತಿ? ಎನ್ನುವ ಪ್ರಶ್ನೆ ಹಲವರ ನೆಮ್ಮದಿಯನ್ನೇ ಕಸಿದು ಬಿಡುತ್ತದೆ. ನಿಮಗೂ ಇಂತಹ ಅನುಮಾನ ಕಾಡ್ತಿದ್ಯಾ? ಹಾಗಾದರೆ ಇಂದಿನ ಮನಿಗೈಡ್‌ (Money Guide)ನಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ. ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಇಟ್ಟಿರುವ ಹಣಕ್ಕೆ ಏನಾಗುತ್ತದೆ? ಅದನ್ನು ಮರಳಿ ಪಡೆಯುವುದು ಹೇಗೆ? ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India)ನ ನಿಯಮ ಏನು ಹೇಳುತ್ತದೆ? ಮುಂತಾದ ಅನುಮಾನಗಳಿಗೆ ಇಲ್ಲಿದೆ ಉತ್ತರ.

ನಿಯಮಗಳ ಪ್ರಕಾರ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 5 ಲಕ್ಷ ರೂ.ಗಿಂತ ಅಧಿಕ ಹಣ ಇಟ್ಟಿದ್ದು, ಬ್ಯಾಂಕ್‌ ದಿವಾಳಿಯಾದರೆ ನಮಗೆ ಸಿಗುವುದು ಕೇವಲ 5 ಲಕ್ಷ ರೂ. ಮಾತ್ರ. ಉದಾಹರಣೆಗೆ ನಾವು 20 ಲಕ್ಷ ರೂ. ಇಟ್ಟಿದ್ದರೂ ಸರ್ಕಾರ ಅಥವಾ ಆರ್‌ಬಿಐ ವಾಗ್ದಾನ ಮಾಡುವ ಮೊತ್ತ 5 ಲಕ್ಷ ರೂ. ಮಾತ್ರ. ಅಂದರೆ ಉಳಿದ 15 ಲಕ್ಷ ರೂ. ಅನ್ನು ಕಳೆದುಕೊಳ್ಳಬೇಕಾಗುತ್ತದೆ. 

ಹಿಂದೆ 1 ಲಕ್ಷ ರೂ. ಸಿಗುತ್ತಿತ್ತು

ಈ ಹಿಂದೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (Deposit Insurance and Credit Guarantee Corporation-DICGC) ಕಾಯ್ದೆಯಡಿ ಬ್ಯಾಂಕ್‌ಗಳ ಠೇವಣಿಗಳ ಗ್ಯಾರಂಟಿ 1 ಲಕ್ಷ ರೂ.ಗಳಾಗಿತ್ತು. ಅಂದರೆ ಬ್ಯಾಂಕ್‌ ದಿವಾಳಿಯಾದರೆ ಖಾತೆ ಹೊಂದಿದವರಿಗೆ 1 ಲಕ್ಷ ರೂ. ಮಾತ್ರ ಸಿಗುತ್ತಿತ್ತು. 2020ರಲ್ಲಿ ಕೇಂದ್ರ ಸರ್ಕಾರವು ಈ ಕಾನೂನನ್ನು ಬದಲಾಯಿಸಿ ಅದರ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಿತು.

ಅದಾಗ್ಯೂ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಯಾವುದೇ ಬ್ಯಾಂಕ್ ಅನ್ನು ಮುಳುಗಲು ಸರ್ಕಾರ ಬಿಡುವುದಿಲ್ಲ. ಇದಕ್ಕಾಗಿ ದಿವಾಳಿಯಾಗುತ್ತಿರುವ ಬ್ಯಾಂಕ್ ಅನ್ನು ಬೇರೊಂದು ದೊಡ್ಡ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುತ್ತದೆ. ಬಳಿಕವೂ ಬ್ಯಾಂಕ್ ದಿವಾಳಿಯಾದರೆ ಎಲ್ಲ ಖಾತೆದಾರರಿಗೆ ಹಣ ಪಾವತಿ ಮಾಡುವ ಜವಾಬ್ದಾರಿ ಡಿಐಸಿಜಿಸಿ ಮೇಲಿರುತ್ತದೆ. ಈ ಮೊತ್ತವನ್ನು ಖಾತರಿಪಡಿಸಲು ಡಿಐಸಿಜಿಸಿ ಬ್ಯಾಂಕ್‌ಗಳಿಂದ ಮೊದಲೇ ಪ್ರೀಮಿಯಂ ಪಡೆದುಕೊಳ್ಳುತ್ತದೆ.

ನಿಯಮ ಏನು ಹೇಳುತ್ತದೆ?

ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ಕುಸಿತದ ಸಂದರ್ಭದಲ್ಲಿ ಎಲ್ಲ ಗ್ರಾಹಕರ ಠೇವಣಿಗಳು ಮತ್ತು ಸಾಲಗಳ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಬೇಕು. ಇದರ ನಂತರ ಡಿಐಸಿಜಿಸಿ ಗ್ರಾಹಕರ ಹಣವನ್ನು 90 ದಿನಗಳಲ್ಲಿ ಹಿಂದಿರುಗಿಸಬೇಕು. 2022ರ ಆಗಸ್ಟ್ ವೇಳೆಗೆ ದೇಶದಲ್ಲಿ ಒಟ್ಟು 2,035 ಬ್ಯಾಂಕ್‌ಗಳಿಗೆ ವಿಮೆ ಮಾಡಲಾಗಿದೆ ಎಂದು ಡಿಐಸಿಜಿಸಿ ತಿಳಿಸಿದೆ. ನಿಮ್ಮ ಬ್ಯಾಂಕ್ ವಿಮೆ ಹೊಂದಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಬಹುದು. ಅದಕ್ಕಾಗಿ ಅಧಿಕೃತ ವೆಬ್‌ಸೈಟ್‌ https://www.dicgc.org.in/FD_ListOfInsuredBanks.htmlಗೆ ಭೇಟಿ ನೀಡಬಹುದು.

15 ತಿಂಗಳ ಅವಧಿಯಲ್ಲಿ ದೇಶದ 35 ಬ್ಯಾಂಕ್‌ಗಳ 3 ಲಕ್ಷ ಗ್ರಾಹಕರು ಇಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ನಿಯಮ ಪ್ರಕಾರ ಸರ್ಕಾರವು ಸುಮಾರು 4 ಸಾವಿರ ಕೋಟಿ ರೂ.ಗಳನ್ನು ಜನರಿಗೆ ಹಿಂದಿರುಗಿಸಿದೆ. ಡಿಐಸಿಜಿಸಿ ಕಾಯ್ದೆಯಡಿ ದೇಶದ 35 ಬ್ಯಾಂಕ್‌ಗಳ ಸುಮಾರು 3,06,146 ಗ್ರಾಹಕರು ತಮ್ಮ ಹಣಕ್ಕೆ ಕ್ಲೈಮ್ ಮಾಡಿದ್ದಾರೆ ಎಂದು ಹಣಕಾಸು ರಾಜ್ಯ ಸಚಿವ ಡಾ.ಭಗವತ್ ಕಿಶನ್ ರಾವ್ ಕಳೆದ ವರ್ಷ ಲೋಕಸಭೆಗೆ ತಿಳಿಸಿದ್ದರು.

ಇದನ್ನೂ ಓದಿ: Money Guide: ಯಶಸ್ವಿ ಜೀವನಕ್ಕೆ 6 ಆರ್ಥಿಕ ಸೂತ್ರಗಳು, ಪಾಲಿಸಿ ನೋಡಿ!

ಏನು ಮಾಡಬೇಕು?

ಒಂದು ವೇಳೆ ಹೆಚ್ಚಿನ ಮೊತ್ತ ಇದ್ದರೆ ಅದನ್ನು ಹೇಗೆ ಕಾಪಾಡಿಕೊಳ್ಳಬಹುದು? ಎನ್ನುವ ಪ್ರಶ್ನೆಗೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆದು ಅಲ್ಲಿ ಹಣವನ್ನು ಹಂಚಿಕೊಂಡು ಠೇವಣಿ ಇಡುವುದು ಇದಕ್ಕಿರುವ ಪರಿಹಾರ ಮಾರ್ಗ. ಉದಾಹರಣೆಗೆ ನಿಮ್ಮ ಬಳಿ 20 ಲಕ್ಷ ರೂ. ಇದೆ ಎಂದಿಟ್ಟುಕೊಳ್ಳೋಣ. ನೀವು 4 ಬ್ಯಾಂಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ತಲಾ 5 ಲಕ್ಷ ರೂ.ನಂತೆ ಡೆಪಾಸಿಟ್‌ ಇಟ್ಟರೆ ಅಷ್ಟೂ ಹಣ ಸುರಕ್ಷಿತವಾಗಿರುತ್ತದೆ. ಇನ್ನೂ ಅಧಿಕ ಮೊತ್ತದ ಹಣ ಇದ್ದರೆ ಮನೆಯವರ ಹೆಸರಿನಲ್ಲಿ ಅಕೌಂಟ್‌ ಓಪನ್‌ ಮಾಡಿ ಅದರಲ್ಲಿ ಇಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading

ಮನಿ-ಗೈಡ್

Money Guide: ತುರ್ತು ಸಂದರ್ಭದಲ್ಲಿ ನೆರವಾಗುವ ಹೋಮ್‌ಲೋನ್‌ ಇನ್ಶೂರೆನ್ಸ್‌; ಏನಿದರ ಮಹತ್ವ?

Money Guide: ಗೃಹಸಾಲ ತೆಗೆದುಕೊಳ್ಳುವಾಗ ಹೋಮ್‌ಲೋನ್‌ ಇನ್ಶೂರೆನ್ಸ್‌ ಮಾಡಿಸುವುದು ಕೂಡ ಅಗತ್ಯ ಎನ್ನುತ್ತಾರೆ ತಜ್ಞರು. ಹೋಮ್‌ಲೋನ್‌ ಇನ್ಶೂರೆನ್ಸ್‌ ಎಂದರೇನು? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

home loan
Koo

ಬೆಂಗಳೂರು: ಹೊಸ ಮನೆ ನಿರ್ಮಿಸಬೇಕು ಅಥವಾ ಕೊಂಡುಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಕನಸು. ಆದರೆ ಈ ದುಬಾರಿ ಜಗತ್ತಿನಲ್ಲಿ ಇದು ಸುಲಭದ ಮಾತಲ್ಲ. ಇದಕ್ಕಾಗಿ ಅನೇಕರು ಗೃಹಸಾಲ(Home loan)ದ ಮೊರೆ ಹೋಗುತ್ತಾರೆ. ಆದರೆ ಈ ಸಾಲಗಳ ಬಡ್ಡಿದರವೂ ದುಬಾರಿಯಾಗಿರುತ್ತದೆ. ಈ ಮಧ್ಯೆ ಸಾಲ ಪಡೆದುಕೊಂಡವರು ಆಕಸ್ಮಿಕವಾಗಿ ಮರಣ ಹೊಂದಿದರೆ ಏನು ಮಾಡಬೇಕು? ಆಗ ಬ್ಯಾಂಕ್‌ಗಳು ಯಾವ ಕ್ರಮ ಕೈಗೊಳ್ಳುತ್ತವೆ? ಹೋಮ್‌ಲೋನ್‌ ಇನ್ಶೂರೆನ್ಸ್‌ (Home Loan Insurance) ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಪ್ರಾಧಾನ್ಯತೆ ಏನು? ಮುಂತಾದ ನಿಮ್ಮನ್ನು ಕಾಡುವ ಪ್ರಶ್ನೆಗಳಿಗೆ ಉತ್ತರ ಇಂದಿನ ಮನಿಗೈಡ್‌ ಮನಿಗೈಡ್‌ (Money Guide)ನಲ್ಲಿದೆ.

ಸಾಲದಾತ ಮರಣ ಹೊಂದಿದರೆ ಬ್ಯಾಂಕ್‌ ಏನು ಮಾಡುತ್ತದೆ?

ಒಂದು ವೇಳೆ ಗೃಹಸಾಲ ಪಡೆದುಕೊಂಡಾತ ಸಾಲ ಮುಗಿಯುವ ಮೊದಲೇ ಮರಣ ಹೊಂದಿದರೆ ಬ್ಯಾಂಕ್‌ಗಳು 2 ರೀತಿಯಲ್ಲಿ ಕ್ರಮ ಕೈಗೊಳ್ಳುತ್ತವೆ. ಸಾಲವನ್ನು ಮರುಪಾವತಿಸಲು ಕುಟುಂಬದ ಮೇಲೆ ಒತ್ತಡ ಹೇರಬಹುದು ಅಥವಾ ಗೃಹ ಸಾಲವನ್ನು ತೆಗೆದುಕೊಂಡ ಆಸ್ತಿಯನ್ನು ಮಾರಾಟ ಮಾಡಬಹುದು. ಆ ಕುಟುಂಬ ಸಾಲ ಮರು ಪಾವತಿಸಲು ಶಕ್ತವಾಗಿರುವುದಿಲ್ಲ. ಜತೆಗೆ ಆ ಆಸ್ತಿಯನ್ನೂ ಉಳಿಸಿಕೊಳ್ಳಬೇಕು ಎಂದಿದ್ದರೆ ಏನು ಮಾಡಬೇಕು? ಆಗ ನೆರವಿಗೆ ಬರುತ್ತದೆ ಹೋಮ್‌ಲೋನ್ ಇ‍ನ್ಶೂರೆನ್ಸ್‌.

ಏನಿದು ಹೋಮ್‌ಲೋನ್ ಇ‍ನ್ಶೂರೆನ್ಸ್‌?

ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್ (Home Loan Protection Plan-HLPP) ಎಂದೂ ಕರೆಯಲ್ಪಡುವ ಹೋಮ್ ಲೋನ್ ಇನ್ಶೂರೆನ್ಸ್ ಒಂದು ವಿಮಾ ಪಾಲಿಸಿಯಾಗಿದ್ದು, ಸಾಲ ಹೊಂದಿದಾತ ಆಕಸ್ಮಿಕವಾಗಿ ಮರಣ ಹೊಂದಿದರೆ ಗೃಹ ಸಾಲವನ್ನು ಮರುಪಾವತಿಸಲು ಆತನ ಕುಟುಂಬಕ್ಕೆ ಸಹಾಯ ಮಾಡುತ್ತದೆ. ʼʼಗೃಹ ಸಾಲವನ್ನು ಪಾವತಿಸುವ ವ್ಯಕ್ತಿಯು ದುರದೃಷ್ಟವಶಾತ್‌ ಮೃತಪಟ್ಟರೆ ಬಾಕಿ ಇರುವ ಇಎಂಐಯನ್ನು ವಿಮೆ ನೋಡಿಕೊಳ್ಳುತ್ತದೆ. ಇದರಿಂದ ಮನೆ ಸುರಕ್ಷಿತವಾಗಿರುತ್ತದೆʼʼ ಎಂದು ತಜ್ಞರು ಹೇಳುತ್ತಾರೆ.

ಎಚ್ಎಲ್‌ಪಿಪಿಯನ್ನು ನಿರ್ದಿಷ್ಟವಾಗಿ ಗೃಹ ವಿಮಾ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದ್ದರೂ ಅದನ್ನು ಟರ್ಮ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿಯೂ ಕೊಂಡುಕೊಳ್ಳಬಹುದು. ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಹೆಚ್ಚುವರಿ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ ಗೃಹ ವಿಮೆಯನ್ನು ಸಹ ಕವರ್ ಮಾಡಬಹುದು. ಅದಾಗ್ಯೂ ಹೋಮ್‌ಲೋನ್‌ ಇನ್ಶೂರೆನ್ಸ್‌ನ ನಿಯಮಗಳು ಮತ್ತು ಷರತ್ತುಗಳು ನೀವು ತೆಗೆದುಕೊಂಡ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಗೃಹ ವಿಮೆ ಮತ್ತು ಗೃಹ ಸಾಲ ವಿಮೆ ಎರಡು ಬೇರೆ ಬೇರೆ. ಗೃಹ ವಿಮೆ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಮನೆಯನ್ನು ರಕ್ಷಿಸಿದರೆ, ಕೆಲವು ಆಕಸ್ಮಿಕ ಘಟನೆಗಳಿಂದ ಮರುಪಾವತಿ ಸಾಧ್ಯವಾಗದಿದ್ದರೆ ಅದರ ಜವಾಬ್ದಾರಿಯನ್ನು ಗೃಹ ಸಾಲ ವಿಮೆ ನೋಡಿಕೊಳ್ಳುತ್ತದೆ. ಆಸ್ತಿ ಮಾಲಕರು ಗೃಹ ಸಾಲದ ಇನ್ಶೂರೆನ್ಸ್‌ ಪಾಲಿಸಿಯನ್ನು ಖರೀದಿಸಲು ಅರ್ಹರು.

ಕಡ್ಡಾಯವಲ್ಲ

ಎಚ್ಎಲ್‌ಪಿಪಿಯಲ್ಲಿ ಹೆಚ್ಚುವರಿ ಪ್ಲ್ಯಾನ್‌ ಖರೀದಿಸಿದರೆ ಅಂಗವೈಕಲ್ಯಗಳು, ಮಾರಣಾಂತಿಕ ಕಾಯಿಲೆಗಳು, ಬೆಂಕಿ ಅಪಘಾತಗಳು ಮತ್ತು ಮಾನವ ನಿರ್ಮಿತ ಅಪಾಯಗಳನ್ನು ಸಹ ಕವರ್‌ ಮಾಡಬಹುದು. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಗೃಹ ಸಾಲದೊಂದಿಗೆ ಗೃಹ ಸಾಲ ವಿಮಾ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಲ್ಲ.

ಸಾಲವನ್ನು ಸಂಪೂರ್ಣವಾಗಿ ಪಾವತಿಸಿದ ನಂತರ ವಿಮೆಯ ಅವಧಿ ಕೊನೆಗೊಳ್ಳುತ್ತದೆ. ಗೃಹ ಸಾಲವನ್ನು ಮರುಪಾವತಿಸಿದಂತೆ ಹೋಮ್ ಲೋನ್ ಇನ್ಶೂರೆನ್ಸ್ ಪ್ಲಾನ್ ಕವರೇಜ್ ಕಡಿಮೆಯಾಗುತ್ತದೆ. ಉದಾಹರಣೆಗೆ ಈಗಾಗಲೇ 30 ಲಕ್ಷ ರೂ.ಗಳ ಗೃಹ ಸಾಲದಲ್ಲಿ 10 ಲಕ್ಷ ರೂ.ಗಳನ್ನು ಪಾವತಿಸಿದಾಗ ಅಪಘಾತ ಸಂಭವಿಸಿದಲ್ಲಿ ರಕ್ಷಣಾ ಯೋಜನೆಯು ಕೇವಲ 20 ಲಕ್ಷ ರೂ. ಅನ್ನು ಒಳಗೊಳ್ಳುತ್ತದೆ.

ಪ್ರೀಮಿಯಂ ಪಾವತಿ ವಿಧಾನ

ಹೆಚ್ಚಿನ ಇನ್ಶೂರೆನ್ಸ್‌ ಪಾಲಿಸಿಗಳಲ್ಲಿ ವಿಮಾ ಕಂಪನಿಗೆ ಒಂದು ಬಾರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದಾಗ್ಯೂ ಕೆಲವು ಕಂತುಗಳಲ್ಲಿ ಪಾಲಿಸಿ ಪ್ರೀಮಿಯಂ ಅನ್ನು ಪಾವತಿಸಬಹುದಾದ ಯೋಜನೆಗಳೂ ಇವೆ. ವಯಸ್ಸು ಮತ್ತು ವೈದ್ಯಕೀಯ ದಾಖಲೆಗಳು ಗೃಹ ಸಾಲದ ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತದ ಮೇಲೆ ಪರಿಣಾಮ ಬೀರುತ್ತವೆ. ವಯಸ್ಸಾದವರಿಗೆ ಪ್ರೀಮಿಯಂ ಮೊತ್ತ ಹೆಚ್ಚಾಗಿರುತ್ತದೆ ಮತ್ತು ದೈಹಿಕವಾಗಿ ಸದೃಢರಾಗಿದ್ದವರಿಗೆ ಪ್ರೀಮಿಯಂ ಕಡಿಮೆಯಾಗಿರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಇದನ್ನೂ ಓದಿ: Money Guide: ಆಪತ್ಕಾಲದಲ್ಲಿ ನೆರವಾಗುವ ಆಪ್ತಮಿತ್ರ ಟರ್ಮ್‌ ಇನ್ಶೂರೆನ್ಸ್‌; ಏನಿದರ ವೈಶಿಷ್ಟ್ಯ?

ಒಟ್ಟಿನಲ್ಲಿ ನಿಮ್ಮ ಹೋಮ್ ಲೋನ್ ಅನ್ನು ಕವರ್ ಮಾಡಲು ಎಚ್ಎಲ್‌ಪಿಪಿ ಮತ್ತು ಟರ್ಮ್ ಇನ್ಶೂರೆನ್ಸ್ ಎಂಬ ಎರಡು ಆಯ್ಕೆಗಳಾಗಿವೆ. ಎರಡೂ ತಮ್ಮದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಆದರೆ ನಿಮ್ಮ ಹೋಮ್ ಲೋನ್ ಅನ್ನು ವಿಮೆ ಮಾಡಿಸುವುದನ್ನು ಮಾತ್ರ ಮರೆಯಬೇಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
Fashion Show
ದೇಶ26 mins ago

Fashion Show : ಏಕತೆಗೆ ಧಕ್ಕೆ; ಫ್ಯಾಶನ್​ ಶೋದಲ್ಲಿ ಬುರ್ಖಾ ಹಾಕಿದ್ದಕ್ಕೆ ಮುಸ್ಲಿಂ ನಾಯಕನ ಆಕ್ಷೇಪ!

kalpamrutha cold pressed oil production unit inaugurated
ಕರ್ನಾಟಕ26 mins ago

ಕಲ್ಪಾಮೃತ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕಕ್ಕೆ ಚಾಲನೆ

Gadaga accident two bike riders dead
ಕರ್ನಾಟಕ26 mins ago

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Anju who went to Pakistan for to marry her lover, returns to India
ದೇಶ29 mins ago

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

vijaypura accident
ಕರ್ನಾಟಕ42 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ53 mins ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ58 mins ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್1 hour ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ1 hour ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ2 hours ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌