Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ - Vistara News

ಮನಿ-ಗೈಡ್

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ

Money Guide: ಈ ಅಮ್ಮಂದಿರ ದಿನ ನಿಮ್ಮ ತಾಯಿಗೆ ಉಡುಗೊರೆ ಕೊಡಬೇಕೆಂಬ ಯೋಜನೆಯಲ್ಲಿದ್ದೀರಾ? ಹಾಗಾದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ. ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

Money Guide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಳೆ (ಮೇ 12) ವಿಶ್ವ ಅಮ್ಮಂದಿರ ದಿನ (Mother’s Day 2024). ಜೀವನಪೂರ್ತಿ ನಮಗಾಗಿ ನಿಸ್ವಾರ್ಥವಾಗಿ ಮಿಡಿಯುವ ಜೀವಕ್ಕೆ ಚಿಕ್ಕದೊಂದು ಧನ್ಯವಾದ ಹೇಳುವ ದಿನ ಇದು. ಅಮ್ಮಂದಿರ ಋಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಒಂದು ಚಿಕ್ಕ ಉಡುಗೊರೆ ಕೊಡುವ ಮೂಲಕ ಅವರ ಮೊಗದಲ್ಲಿ ನಗು ಅರಳಿಸಬಹುದು. ಈ ಅಮ್ಮಂದಿರ ದಿನದಲ್ಲಿ ನಿಮ್ಮ ಅಮ್ಮನಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯ ಪೈಕಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Saving Certificate Scheme)ವೂ ಒಂದು. ಏನಿದು ಯೋಜನೆ? ಈ ಯೋಜನೆ ಮಹಿಳೆಯರಿಗೆ ಹೇಗೆ ಪ್ರಯೋಜಕಾರಿ? ಮುಂತಾದ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ (Money Guide).

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಎಂದರೇನು?

ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ವಿಶೇಷ ಉಳಿತಾಯ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿದ್ದು, ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸುತ್ತದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಕೇಂದ್ರ ಬಜೆಟ್ ತನ್ನ 2023ರ ಬಜೆಟ್‌ನಲ್ಲಿ ಘೋಷಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ಮಾರ್ಚ್ 2025ರವರೆಗೆ ಲಭ್ಯವಿದೆ. ಇದು 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ.ವರೆಗೆ ಠೇವಣಿ ಇಡುವ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಕೇವಲ ಮಹಿಳೆಯರು ಹಾಗೂ ಯುವತಿಯರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಮಹಿಳೆಯರು ಸ್ವತಃ ತಾವೇ ಹಾಗೂ ಅಪ್ರಾಪ್ತ ಬಾಲಕಿಯರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ನಿರ್ವಹಿಸಬಹುದಾಗಿದೆ. ಹೀಗಾಗಿ ಈ ಬಾರಿ ನೀವು ತಾಯಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಿ.

ಅರ್ಹತೆ

  • ಯಾವುದೇ ಭಾರತೀಯ ಮಹಿಳೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ.
  • ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ವಾಭಾವಿಕ ಅಥವಾ ಕಾನೂನುಬದ್ಧ ಪೋಷಕರು ಖಾತೆ ತೆರೆಯಬಹುದು.
  • ಗಮನಿಸಿ ವೈಯಕ್ತಿಕ ಖಾತೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
  • ಹೂಡಿಕೆಯ ಕನಿಷ್ಠ ಮೊತ್ತ 1,000 ರೂ. ಮತ್ತು ಗರಿಷ್ಠ ಮೊತ್ತ 2,00,000.

ಬಡ್ಡಿ ದರ

ಈ ಖಾತೆಯನ್ನು ಹೊಂದಿರುವವರಿಗೆ ವಾರ್ಷಿಕ 7.5 ಪ್ರತಿಶತ ನಿಶ್ಚಿತ ಬಡ್ಡಿ ದರವನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಸ್ಥಿರ ಠೇವಣಿ ಹಾಗೂ ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಬಡ್ಡಿದರ ಸಿಗಲಿದೆ.

ಅವಧಿ

ಈ ಯೋಜನೆಯ ಮೆಚ್ಯೂರಿಟಿ ಅವಧಿ 2 ವರ್ಷ. ಈ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಖಾತೆದಾರರಿಗೆ ಮೆಚ್ಯೂರಿಟಿ ಮೊತ್ತ ಪಾವತಿಯಾಗುತ್ತದೆ. ಒಂದು ವೇಳೆ ಅವಧಿ ಮೀರುವ ಮುನ್ನ ಹಿಂಪಡೆಯಬೇಕೆಂದರೆ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ. 40ರಷ್ಟು ಹಿಂಪಡೆಯಬಹುದು. ಆದರೆ ಖಾತೆಯನ್ನು ತೆರೆದು ಒಂದು ವರ್ಷ ಆಗಿರಬೇಕು. ಜತೆಗೆ ಆಯ್ದ ಸಂದರ್ಭಗಳಲ್ಲಿ ಖಾತೆಗಳನ್ನು ಅಕಾಲಿಕವಾಗಿ ಬಂದ್ ಮಾಡಬಹುದು.

ಖಾತೆ ತೆರೆಯುವುದು ಹೇಗೆ?

ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕ್‌ಗಳಲ್ಲಿ ತೆರೆಯಬಹುದು. ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಿ, ಕೆವೈಸಿ ದಾಖಲೆಗಳನ್ನು ಒದಗಿಸಿ ಆರಂಭಿಕ ಠೇವಣಿ ಮೊತ್ತವನ್ನು ಇಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

UPI Payment: ಡಿಜಿಟಲ್ ಪಾವತಿಯಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆಯಾದರೆ ಏನು ಮಾಡಬೇಕು?

ಯುಪಿಐ ಮೂಲಕ (UPI Payment) ತಪ್ಪಾಗಿ ಬೇರೆಯವರಿಗೆ ಹಣ ಪಾವತಿಯಾದರೆ ಪರಿಹಾರಕ್ಕಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪೋರ್ಟಲ್‌ನಲ್ಲಿ ದೂರು ಸಲ್ಲಿಸಲು ಅವಕಾಶವಿದೆ. ಇಲ್ಲಿ ದೂರು ಸಲ್ಲಿಸುವುದು, ಹೇಗೆ, ಪರಿಹಾರ ಹೇಗೆ ಪಡೆದುಕೊಳ್ಳಬಹುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

UPI Payment
Koo

ಡಿಜಿಟಲ್ ಪಾವತಿ (UPI Payment) ಪದ್ಧತಿ ಇತ್ತೀಚೆಗೆ ಹೆಚ್ಚಾಗಿದೆ. ಇದರ ನಡುವೆ ಬಳಕೆದಾರರು ಅಜಾಗರೂಕತೆಯಿಂದ ತಪ್ಪು ವ್ಯಕ್ತಿಗೆ ಹಣವನ್ನು ವರ್ಗಾಯಿಸುವ ಅಪಾಯವೂ ಹೆಚ್ಚಿದೆ. ತಪ್ಪಿ ಬೇರೆ ಯಾರಿಗಾದರೂ ನಿಮ್ಮಿಂದ ಯುಪಿಐ (UPI) ಮೂಲಕ ಹಣ ಪಾವತಿಯಾದರೆ (money transfer) ಅಂತಹ ವಹಿವಾಟುಗಳನ್ನು ಹಿಂಪಡೆಯಲು ಹಲವು ದಾರಿಗಳಿವೆ.

ಯುಪಿಐ ಮೂಲಕ ನಿಮ್ಮಿಂದ ತಪ್ಪಾಗಿ ಹಣ ಪಾವತಿಯಾದರೆ ಪರಿಹಾರಕ್ಕಾಗಿ ಇಲ್ಲಿ ನೀಡಿರುವ ಕೆಲವು ಕ್ರಮಗಳನ್ನು ಅನುಸರಿಸಿ. ಮೊದಲು ಬಳಸಿರುವ ಪಾವತಿ ವ್ಯವಸ್ಥೆಗೆ ದೂರು ಸಲ್ಲಿಸಿ. ಯುಪಿಐ ವಹಿವಾಟುಗಳಿಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು.

ಎನ್‌ಪಿಸಿಐ ವೆಬ್‌ಸೈಟ್‌ಗೆ (npci.org.in) ಭೇಟಿ ನೀಡಿ ಮತ್ತು ‘ವಿವಾದ ಪರಿಹಾರ ಕಾರ್ಯವಿಧಾನ’ ವಿಭಾಗಕ್ಕೆ ಹೋಗಿ ಅಲ್ಲಿ, ‘ದೂರು’ ಟ್ಯಾಬ್ ಅಡಿಯಲ್ಲಿ ಅಗತ್ಯವಿರುವ ವಿವರಗಳನ್ನು ಹಾಕಿ ಆನ್‌ಲೈನ್ ಮೂಲಕ ದೂರು ಅರ್ಜಿ ಸಲ್ಲಿಸಿ.

ಇದರಲ್ಲಿ ಯುಪಿಐ ವಹಿವಾಟು ಐಡಿ, ವರ್ಚುವಲ್ ಪಾವತಿ ವಿಳಾಸ, ಎಷ್ಟು ಮೊತ್ತ ವರ್ಗಾಯಿಸಲಾಗಿದೆ, ವಹಿವಾಟಿನ ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಜೊತೆಗೆ ಕಡಿತವನ್ನು ತೋರಿಸುವ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.

ಫಾರ್ಮ್ ಅನ್ನು ಭರ್ತಿ ಮಾಡುವಾಗ ದೂರಿಗೆ ಕಾರಣವಾಗಿ ‘ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ’ ಎಂಬುದನ್ನು ಆಯ್ಕೆ ಮಾಡಬೇಕು.


ಎನ್‌ಪಿಸಿಐ ವೆಬ್‌ಸೈಟ್‌ನ ಪ್ರಕಾರ ದೂರುಗಳನ್ನು ಮೊದಲು ಪಿಎಸ್‌ಪಿ ಬ್ಯಾಂಕ್ ಅಥವಾ ಯುಪಿಐ ವಹಿವಾಟಿನ ಟಿಪಿಎಪಿ ಬೋರ್ಡ್‌ನಲ್ಲಿ ಮೊದಲು ದೂರನ್ನು ಸಲ್ಲಿಸಲಾಗುತ್ತದೆ. ಇಲ್ಲಿ ದೂರುಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಸಮಸ್ಯೆ ಪರಿಹಾರವಾಗದೇ ಇದ್ದರೆ ಪಿಎಸ್‌ಪಿ ಬ್ಯಾಂಕ್ ಇದನ್ನು ಪರಿಶೀಲಿಸಲಿದೆ.

ಕೊನೆಯ ಆಯ್ಕೆಯಾಗಿ ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್‌ಮನ್ ಅಥವಾ ಡಿಜಿಟಲ್ ದೂರುಗಳಿಗಾಗಿ ಒಂಬುಡ್ಸ್‌ಮನ್ ಅವರನ್ನು ಸಂಪರ್ಕಿಸಬಹುದು. ಇಲ್ಲಿ ಗ್ರಾಹಕರೊಂದಿಗೆ ನೇರವಾಗಿ ಮಾತುಕತೆ ನಡೆಸಲಾಗುತ್ತದೆ ಮತ್ತು ದೂರಿನ ಸ್ಥಿತಿಗತಿಯ ಬಗ್ಗೆ ಗ್ರಾಹಕರಿಗೆ ವಿವರಿಸಲಾಗುತ್ತದೆ.

ಆರ್‌ಬಿಐ ಒಂಬುಡ್ಸ್‌ಮನ್

ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ವಹಿವಾಟುಗಳಿಗಾಗಿ ಅಧಿಕಾರಿಯನ್ನು ನೇಮಿಸಿದ್ದು, ಇವರು ಡಿಜಿಟಲ್ ಪಾವತಿ ವ್ಯವಸ್ಥೆಯ ದೂರುಗಳನ್ನು ನಿರ್ವಹಿಸುತ್ತಾರೆ.

ಇದನ್ನೂ ಓದಿ: Money Guide: ಎಸ್‌ಐಪಿ-ಪಿಪಿಎಫ್; ಹಣ ಹೂಡಿಕೆಗೆ ಯಾವುದು ಬೆಸ್ಟ್?

ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ಯಾವಾಗ ದಾಖಲಿಸಬೇಕು?

ಒಂದು ತಿಂಗಳ ಅನಂತರವೂ ನಿಮ್ಮ ದೂರು ಇತ್ಯರ್ಥವಾಗದೇ ಉಳಿದಿದ್ದರೆ ಅಥವಾ ಪ್ರತಿಕ್ರಿಯೆಯಿಂದ ನೀವು ಅತೃಪ್ತರಾಗಿದ್ದರೆ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್‌ಗೆ ನೇರವಾಗಿ ದೂರು ಸಲ್ಲಿಸಬಹುದು. ಇದಕ್ಕಾಗಿ ಬ್ಯಾಂಕ್ ಶಾಖೆ ಅಥವಾ ಕಚೇರಿ ಇರುವ ನ್ಯಾಯ ವ್ಯಾಪ್ತಿಯಲ್ಲಿ ದೂರುಗಳನ್ನು ಸಲ್ಲಿಸಬೇಕು ಅಥವಾ ಕೇಂದ್ರೀಕೃತ ಕಾರ್ಯಾಚರಣೆಗಳಿಗಾಗಿ ಗ್ರಾಹಕರ ವಿಳಾಸವನ್ನು ನೋಂದಾಯಿಸಲಾಗುತ್ತದೆ.

ಈ ಹಂತಗಳನ್ನು ಅನುಸರಿಸುವ ಮೂಲಕ ಅನಪೇಕ್ಷಿತ ಡಿಜಿಟಲ್ ಪಾವತಿ ದೋಷಗಳಿಗೆ ಪರಿಹಾರವನ್ನು ಪಡೆಯಬಹುದು ಮತ್ತು ಅಂತಹ ತಪ್ಪುಗಳ ಮೂಲಕ ಕಳೆದುಹೋದ ಹಣವನ್ನು ಮರಳಿ ಪಡೆಯಬಹುದು.

Continue Reading

ವಾಣಿಜ್ಯ

Positive Pay System: ಏನಿದು ಪಾಸಿಟಿವ್‌ ಪೇ ಸಿಸ್ಟಮ್‌? ಚೆಕ್ ಪಾವತಿ ಸುರಕ್ಷಿತಗೊಳಿಸುವುದು ಹೇಗೆ?

ಧನಾತ್ಮಕ ಪಾವತಿ ವ್ಯವಸ್ಥೆಯು (Positive Pay System) ಬ್ಯಾಂಕಿಂಗ್ ವ್ಯವಸ್ಥೆಯ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಚೆಕ್ ವಹಿವಾಟಿನ ವಂಚನೆಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿರುವ ಹೊಸ ಕ್ರಮವಾಗಿದೆ. ಇದನ್ನು ದೇಶದ ಬಹುತೇಕ ಬ್ಯಾಂಕ್ ಗಳು ಅಳವಡಿಸಿಕೊಂಡಿದ್ದು, ಇದರ ನಿಯಮಗಳು, ಪ್ರಯೋಜನಗಳು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Positive Pay System
Koo

ಹೆಚ್ಚುತ್ತಿರುವ ಚೆಕ್ ವಂಚನೆಯ (Cheque Payments) ಪ್ರಕರಣಗಳನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) 2021ರಲ್ಲಿ ಪಾಸಿಟುವ್‌ ಪೇ ವ್ಯವಸ್ಥೆಯನ್ನು (Positive Pay System) ಪರಿಚಯಿಸಿತ್ತು. ಇದು ಎಲೆಕ್ಟ್ರಾನಿಕ್ ದೃಢೀಕರಣ ಪ್ರಕ್ರಿಯೆಯಾಗಿದ್ದು, ಹೆಚ್ಚಿನ ಮೌಲ್ಯದ ಚೆಕ್‌ನ ಪ್ರಮುಖ ವಿವರಗಳನ್ನು ಪಾವತಿಗಾಗಿ ಪ್ರಸ್ತುತಪಡಿಸುವ ಮೊದಲು ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬೇಕಿದೆ.

ಪಿಪಿಎಸ್ ಅಡಿಯಲ್ಲಿ ಚೆಕ್ ನೀಡುವವರು ಚೆಕ್ ವಿವರಗಳನ್ನು ಫಲಾನುಭವಿಗೆ ಹಸ್ತಾಂತರಿಸುವ ಮೊದಲು ತಮ್ಮ ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬೇಕು. ಈ ವಿವರಗಳು ಸಾಮಾನ್ಯವಾಗಿ ಚೆಕ್ ಸಂಖ್ಯೆ, ಚೆಕ್ ದಿನಾಂಕ, ಪಾವತಿಸುವವರ ಹೆಸರು, ಖಾತೆ ಸಂಖ್ಯೆ, ಮೊತ್ತ ಮತ್ತು ಇತರ ಸಂಬಂಧಿತ ವಿವರಗಳನ್ನು ಒಳಗೊಂಡಿರುತ್ತದೆ. ಪಾಸಿಟಿವ್‌ ಪೇ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಹೇಗೆ, ಇದು ಹೇಗೆ ಕೆಲಸ ಮಾಡುತ್ತದೆ, ಇದರ ಪ್ರಯೋಜನಗಳು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Positive Pay System
Positive Pay System


ಪಿಪಿಎಸ್ ಹೇಗೆ ಕೆಲಸ ಮಾಡುತ್ತದೆ?

ಫಲಾನುಭವಿಯು ನಗದಿಗಾಗಿ ಚೆಕ್ ಅನ್ನು ಬ್ಯಾಂಕ್‌ಗೆ ಹಾಜರುಪಡಿಸಿದಾಗ ಬ್ಯಾಂಕ್ ವಿವರಗಳನ್ನು ಪರಿಶೀಲಿಸುತ್ತದೆ. ಈ ವಿವರಗಳು ಹೊಂದಾಣಿಕೆಯಾದರೆ ಚೆಕ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ವ್ಯತ್ಯಾಸವಿದ್ದಲ್ಲಿ ಹೆಚ್ಚಿನ ಪರಿಶೀಲನೆಗಾಗಿ ಬ್ಯಾಂಕ್ ಚೆಕ್ ಅನ್ನು ಫ್ಲ್ಯಾಗ್ ಮಾಡುತ್ತದೆ.

50,000 ರೂ. ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಚೆಕ್ ಅನ್ನು ಬ್ಯಾಂಕ್‌ಗೆ ಸಲ್ಲಿಸುವ ಕುರಿತಂತೆ ಸ್ವಯಂಪ್ರೇರಣೆಯಿಂದ ಅದರ ವಿವರಗಳನ್ನು ಬ್ಯಾಂಕ್‌ಗೆ ಸಲ್ಲಿಸಬಹುದು. ಚೆಕ್ ಸಂಖ್ಯೆ, ದಿನಾಂಕ, ಮೊತ್ತ, ಪಾವತಿಸುವವರ ಹೆಸರು ಮತ್ತು ಖಾತೆ ಸಂಖ್ಯೆಯಂತಹ ಮಾಹಿತಿಯನ್ನು ವಿವಿಧ ಚಲನ್‌ಗಳ ಮೂಲಕ ಅಥವಾ ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್, ಎಸ್‌ಎಂಎಸ್, ಶಾಖೆ ಮೊದಲಾದ ವಿವರಗಳನ್ನು ಬ್ಯಾಂಕ್‌ಗೆ ಒದಗಿಸಬೇಕು.

ಪಾವತಿಗಾಗಿ ಚೆಕ್ ಅನ್ನು ಪ್ರಸ್ತುತಪಡಿಸಿದಾಗ ಬ್ಯಾಂಕ್ ಈ ವಿವರಗಳನ್ನು ಪರಿಶೀಲಿಸುತ್ತದೆ. ವಿವರಗಳು ಹೊಂದಾಣಿಕೆಯಾದರೆ ಮಾತ್ರ ಚೆಕ್ ಅನ್ನು ನಗದು ಮಾಡಲು ಅನುಮತಿ ನೀಡಲಾಗುತ್ತದೆ. ಯಾವುದೇ ವ್ಯತ್ಯಾಸಗಳಿದ್ದರೆ ಚೆಕ್ ಅನ್ನು ತಡೆ ಹಿಡಿಯಲಾಗುತ್ತದೆ. ಇದರಿಂದ ಚೆಕ್ ವಂಚನೆಯನ್ನು ತಡೆಯಲು ಸಾಧ್ಯ.

ಇದರಿಂದ ಪ್ರಯೋಜನವೇನು?

  • ಚೆಕ್ ವಿವರಗಳನ್ನು ಪರಿಶೀಲಿಸುವ ಮೂಲಕ ಬದಲಾದ ಅಥವಾ ನಕಲಿ ಚೆಕ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಚೆಕ್ ಪಾವತಿಗಳಿಗೆ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.
  • ವ್ಯತ್ಯಾಸಗಳಿಂದಾಗಿ ಚೆಕ್ ರಿಟರ್ನ್‌ಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
  • ಚೆಕ್ ವಹಿವಾಟುಗಳಲ್ಲಿ ಗ್ರಾಹಕರು ಹೆಚ್ಚು ವಿಶ್ವಾಸವಿಡಲು ಸಾಧ್ಯ ಮಾಡುತ್ತದೆ.


ನೆನಪಿನಲ್ಲಿ ಇರಿಸಬೇಕಾದ ಸಂಗತಿಗಳು

  • 50,000 ರೂ.ನಿಂದ 5 ಲಕ್ಷ ರೂ.ವರೆಗಿನ ಚೆಕ್‌ಗಳಿಗೆ ಪಾಸಿಟಿವ್‌ ಪೇ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿಲ್ಲ. ಆದರೆ 5 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚೆಕ್‌ಗಳಿಗೆ ಇದು ಕಡ್ಡಾಯವಾಗಿದೆ. ಒಮ್ಮೆ ಚೆಕ್ ವಿವರಗಳನ್ನು ಸಲ್ಲಿಸಿದ ಬಳಿಕ ಅವುಗಳನ್ನು ಬದಲಾಯಿಸಲು ಅಥವಾ ಅಳಿಸಲು ಸಾಧ್ಯವಿಲ್ಲ. ಚೆಕ್ ಅನ್ನು ಪ್ರಸ್ತುತಪಡಿಸುವ ಮೊದಲು ಪಾವತಿಯನ್ನು ತಡೆ ಹಿಡಿಯುವ ಅಧಿಕಾರ ಚೆಕ್ ನೀಡಿರುವವರಿಗೆ ಇರುತ್ತದೆ.

ಇದನ್ನೂ ಓದಿ: Money Guide: ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ತಿಳಿದಿರಲೇಬೇಕಾದ ಅಂಶಗಳಿವು

ಪಿಪಿಎಸ್ ಅನುಷ್ಠಾನ

ಭಾರತದ ಹೆಚ್ಚಿನ ಬ್ಯಾಂಕ್‌ಗಳು 50,000 ರೂ.ಗಿಂತ ಹೆಚ್ಚಿನ ಮೌಲ್ಯದ ಚೆಕ್‌ಗಳಿಗೆ ಪಿಪಿಎಸ್ ಅನ್ನು ಅಳವಡಿಸಿಕೊಂಡಿವೆ. ಧನಾತ್ಮಕ ಪಾವತಿ ವ್ಯವಸ್ಥೆ ಮತ್ತು ಅದರ ಮಿತಿಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ನಿರ್ದಿಷ್ಟ ವಿವರಗಳಿಗಾಗಿ ಗ್ರಾಹಕರು ತಮ್ಮ ಬ್ಯಾಂಕ್‌ಗಳೊಂದಿಗೆ ಪರಿಶೀಲಿಸಲು ಸಲಹೆ ನೀಡಲಾಗುತ್ತದೆ.

Continue Reading

ಮನಿ-ಗೈಡ್

Money Guide: ಎಸ್‌ಐಪಿ-ಪಿಪಿಎಫ್; ಹಣ ಹೂಡಿಕೆಗೆ ಯಾವುದು ಬೆಸ್ಟ್?

ಎಸ್‌ಐಪಿ ಮತ್ತು ಪಿಪಿಎಫ್ ಎರಡೂ ಯೋಜನೆಗಳು ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಉತ್ತಮವಾಗಿದ್ದರೂ ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಎರಡೂ ವಿಭಿನ್ನ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಹೂಡಿಕೆಗೆ (Money Guide) ಯಾವುದು ಉತ್ತಮ ಎಂದು ಯೋಚಿಸುತ್ತಿರುವವರು ಈ ಎರಡು ಯೋಜನೆಗಳ ಬಗ್ಗೆ ಮೊದಲು ಸಂಪೂರ್ಣವಾಗಿ ತಿಳಿದುಕೊಂಡು ಹೂಡಿಕೆ ಮಾಡುವುದು ಒಳ್ಳೆಯದು. ಇದಕ್ಕಾಗಿ ಈ ಎರಡೂ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Money Guide
Koo

ದೀರ್ಘಾವಧಿಯ ಹಣಕಾಸು ಯೋಜನೆಯಲ್ಲಿ (Money Guide) ವ್ಯವಸ್ಥಿತ ಹೂಡಿಕೆ ಯೋಜನೆ ( Systematic Investment Plan) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ಎರಡು ಅತ್ಯುತ್ತಮ ಆಯ್ಕೆಗಳಾಗಿವೆ. ಎರಡೂ ವಿಭಿನ್ನ ರೀತಿಯಲ್ಲಿ ಹಣಕಾಸಿನ ಗುರಿಯನ್ನು ತಲುಪಲು ಮತ್ತು ಅಪಾಯದ ಆತಂಕವನ್ನು ದೂರಮಾಡಲು ಸಹಾಯ ಮಾಡುತ್ತದೆ.

ಎಸ್‌ಐಪಿಯಲ್ಲಿ (SIP) ಹೂಡಿಕೆ ಮಾಡಬೇಕೆ ಅಥವಾ ಪಿಪಿಎಫ್ ನಲ್ಲಿ (PPF) ಹೂಡಿಕೆ ಮಾಡುವುದು ಉತ್ತಮವೇ ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದರ ಬಗ್ಗೆ ಮೊದಲು ಸಂಪೂರ್ಣ ತಿಳಿದುಕೊಳ್ಳಿ. ಇದು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ಎರಡೂ ಯೋಜನೆಗಳ ವಿಶಿಷ್ಟ ವೈಶಿಷ್ಟ್ಯಗಳು, ಪ್ರಯೋಜನಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ.


ವ್ಯವಸ್ಥಿತ ಹೂಡಿಕೆ ಯೋಜನೆಗಳು

ಎಸ್‌ಐಪಿಗಳು ಹೂಡಿಕೆದಾರರಿಗೆ ನಿಯಮಿತವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತವೆ. ಕಾಲಾನಂತರದಲ್ಲಿ ಶಿಸ್ತುಬದ್ಧ ಉಳಿತಾಯ ಮತ್ತು ಸಂಪತ್ತು ಕ್ರೋಡೀಕರಣವನ್ನು ಉತ್ತೇಜಿಸುತ್ತದೆ.
ಎಸ್ಐಪಿಗಳು ಈಕ್ವಿಟಿ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುತ್ತದೆ. ಹೆಚ್ಚಿನ ಆದಾಯದ ನಿರೀಕ್ಷೆ ಮಾಡಬಹುದು. ಆದರೂ ಇದು ಮಾರುಕಟ್ಟೆಯ ಅಪಾಯವನ್ನೂ ಒಳಗೊಂಡಿದೆ. ಇದು ಮೌಲ್ಯದಲ್ಲಿ ಏರಿಳಿತಗಳಿಗೆ ಕಾರಣವಾಗಬಹುದು.

ಎಸ್‌ಐಪಿಗಳ ಪ್ರಮುಖ ಅನುಕೂಲವೆಂದರೆ ಹೂಡಿಕೆದಾರರು ತಮ್ಮ ಹೂಡಿಕೆಯ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಬಹುದು. ತಮ್ಮ ಅನುಕೂಲಕ್ಕೆ ತಕ್ಕಂತೆ ಹೂಡಿಕೆಗಳನ್ನು ಮರು ಪರಿಶೀಲನೆ ನಡೆಸಬಹುದು.
ಉನ್ನತ ಶಿಕ್ಷಣ, ಮದುವೆ ಅಥವಾ ಸಂಪತ್ತು ಸೃಷ್ಟಿಸಲು ಬಯಸುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ.

ಎಸ್‌ಐಪಿಗಳಿಂದ ಆದಾಯವು ಮ್ಯೂಚುಯಲ್ ಫಂಡ್ ಪ್ರಕಾರ ಮತ್ತು ಹಿಡುವಳಿ ಅವಧಿಯನ್ನು ಅವಲಂಬಿಸಿರುತ್ತದೆ. ಈಕ್ವಿಟಿ-ಲಿಂಕ್ಡ್ ಉಳಿತಾಯ ಯೋಜನೆಗಳು (ELSS) ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ.

Money Guide
Money Guide

ಸಾರ್ವಜನಿಕ ಭವಿಷ್ಯ ನಿಧಿ

ಪಿಪಿಎಫ್ ಎನ್ನುವುದು ಸರ್ಕಾರದ ಬೆಂಬಲಿತ ಉಳಿತಾಯ ಯೋಜನೆಯಾಗಿದ್ದು, ದೀರ್ಘಾವಧಿಯ ಉಳಿತಾಯಕ್ಕಾಗಿ ಖಾತರಿಪಡಿಸಿದ ಆದಾಯದೊಂದಿಗೆ ಹೊಂದಿಕೊಂಡಿರುತ್ತದೆ. ಇದರಲ್ಲಿ ಅಪಾಯ ಕಡಿಮೆ. ಹೀಗಾಗಿ ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಪಿಪಿಎಫ್ ಸ್ಥಿರ ಬಡ್ಡಿ ದರವನ್ನು ಒದಗಿಸುತ್ತದೆ. ಸರ್ಕಾರವು ನಿಯತಕಾಲಿಕವಾಗಿ ಪರಿಷ್ಕರಿಸುತ್ತದೆ. ಹೂಡಿಕೆಯ ಮೇಲೆ ಸ್ಥಿರವಾದ ಲಾಭವನ್ನು ಖಾತ್ರಿಪಡಿಸುತ್ತದೆ.

ಕನಿಷ್ಠ 15 ವರ್ಷಗಳ ಅವಧಿಯೊಂದಿಗೆ, ನಿವೃತ್ತಿ ಅಥವಾ ಮಗುವಿನ ಶಿಕ್ಷಣದಂತಹ ಗಣನೀಯ ದೀರ್ಘಾವಧಿಯ ಗುರಿಗಳಿಗಾಗಿ ಪಿಪಿಎಫ್ ಶಿಸ್ತಿನ ಉಳಿತಾಯವನ್ನು ಪ್ರೋತ್ಸಾಹಿಸುತ್ತದೆ. ಈ ದೀರ್ಘ ಲಾಕ್-ಇನ್ ಅವಧಿಯು ಉಳಿತಾಯದ ಬದ್ಧತೆಯನ್ನು ಬಲಪಡಿಸುತ್ತದೆ.

ಏಳನೇ ವರ್ಷದ ಅನಂತರ ಮಾತ್ರ ಭಾಗಶಃ ಹಿಂಪಡೆಯುವಿಕೆಯನ್ನು ಅನುಮತಿ ಇದೆ. ಪಿಪಿಎಫ್ ಹೂಡಿಕೆಗಳು ಸೆಕ್ಷನ್ 80ಸಿ ಅಡಿಯಲ್ಲಿ ಕಡಿತಗಳಿಗೆ ಅರ್ಹವಾಗಿವೆ ಮತ್ತು ಗಳಿಸಿದ ಅಸಲು ಮತ್ತು ಬಡ್ಡಿ ಎರಡೂ ತೆರಿಗೆ ಮುಕ್ತವಾಗಿರುತ್ತವೆ.


ಎಸ್‌ಐಪಿ ಮತ್ತು ಪಿಪಿಎಫ್ ನಡುವಿನ ವ್ಯತ್ಯಾಸ

ಎಸ್‌ಐಪಿ ಮಾರುಕಟ್ಟೆಯ ಕಾರ್ಯಕ್ಷಮತೆಗೆ ಲಿಂಕ್ ಮಾಡಲಾದ ಸಂಭಾವ್ಯ ಹೆಚ್ಚಿನ ಆದಾಯವನ್ನು ನೀಡುತ್ತದೆ. ಆದರೆ ಮಾರುಕಟ್ಟೆಯ ಚಂಚಲತೆಯ ಕಾರಣದಿಂದಾಗಿ ಅಪಾಯವನ್ನೂ ಹೊಂದಿರುತ್ತದೆ.

ಪಿಪಿಎಫ್ ಸುರಕ್ಷಿತ, ಪೂರ್ವನಿರ್ಧರಿತ ಆದಾಯವನ್ನು ಒದಗಿಸುತ್ತದೆ. ಸ್ಥಿರತೆ ಮತ್ತು ಕನಿಷ್ಠ ಅಪಾಯದ ಮಾನ್ಯತೆ ಬಯಸುವವರಿಗೆ ಸೂಕ್ತ ಆಯ್ಕೆಯಾಗಿರುತ್ತದೆ.

ಎಸ್‌ಐಪಿ ವೈಯಕ್ತಿಕ ಹಣಕಾಸಿನ ಗುರಿಗಳೊಂದಿಗೆ ಹೊಂದಿಕೊಳ್ಳುವ ಹೂಡಿಕೆ ಅವಧಿಗಳನ್ನು ಅನುಮತಿಸುತ್ತದೆ. ಅಗತ್ಯವಿರುವಂತೆ ಹೊಂದಾಣಿಕೆಗಳನ್ನು ಸರಿಹೊಂದಿಸಬಹುದು.

ಪಿಪಿಎಫ್ ಕನಿಷ್ಠ 15 ವರ್ಷಗಳ ದೀರ್ಘಾವಧಿಯ ಬದ್ಧತೆಯನ್ನು ಬಯಸುತ್ತದೆ. ಭವಿಷ್ಯದ ಮಹತ್ವದ ಮೈಲಿಗಲ್ಲುಗಳಿಗಾಗಿ ಶಿಸ್ತುಬದ್ಧ ಉಳಿತಾಯದ ಅಭ್ಯಾಸವನ್ನು ಬೆಳೆಸುತ್ತದೆ.

ಎಸ್‌ಐಪಿ ಹೆಚ್ಚು ದ್ರವ, ನಿಧಿಗಳಿಗೆ ಸುಲಭ ಪ್ರವೇಶವನ್ನು ಅನುಮತಿಸುತ್ತದೆ. ಅಗತ್ಯವಿರುವ ಅಥವಾ ಹೂಡಿಕೆಯಲ್ಲಿ ನಮ್ಯತೆಯನ್ನು ಆದ್ಯತೆ ನೀಡುವ ಹೂಡಿಕೆದಾರರಿಗೆ ಸೂಕ್ತವಾಗಿದೆ.

ಪಿಪಿಎಫ್ ಆರಂಭಿಕ ಹಿಂಪಡೆಯುವಿಕೆಗಳನ್ನು ನಿರ್ಬಂಧಿಸುತ್ತದೆ. ದೀರ್ಘಾವಧಿಯ ಗುರಿಗಳಿಗಾಗಿ ಹೂಡಿಕೆಯನ್ನು ಸಂರಕ್ಷಿಸುತ್ತದೆ. ಆದರೆ ದ್ರವ್ಯತೆ ಸೀಮಿತಗೊಳಿಸುತ್ತದೆ.


ಎಸ್‌ಐಪಿ ಅನ್ನು ಯಾರು ಆಯ್ಕೆ ಮಾಡಬಹುದು?

ಸ್ಥಿರವಾದ ಆದಾಯವನ್ನು ಹೊಂದಿರುವ ಹೂಡಿಕೆದಾರರಿಗೆ ಎಸ್‌ಐಪಿಗಳು ಸೂಕ್ತವಾಗಿವೆ ಮತ್ತು ಸಂಭಾವ್ಯ ಹೆಚ್ಚಿನ ಆದಾಯಕ್ಕಾಗಿ ಮಾರುಕಟ್ಟೆ ಅಪಾಯಗಳನ್ನು ನ್ಯಾವಿಗೇಟ್ ಮಾಡಲು ಆರಾಮದಾಯಕವಾಗಿದೆ. ಶಿಕ್ಷಣ, ಮದುವೆ ಅಥವಾ ಕಾಲಾನಂತರದಲ್ಲಿ ಸಂಪತ್ತನ್ನು ನಿರ್ಮಿಸುವಂತಹ ಮಧ್ಯದಿಂದ ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಗುರಿಯಾಗಿಸಿಕೊಂಡವರಿಗೆ ಅವು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: Bank FD Rates: ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಎಫ್‌ಡಿ ಬಡ್ಡಿ ದರ ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ?

ಪಿಪಿಎಫ್ ಅನ್ನು ಯಾರು ಆಯ್ಕೆ ಮಾಡಬಹುದು?

ಸುರಕ್ಷತೆ ಮತ್ತು ಖಾತರಿಯ ಆದಾಯಕ್ಕೆ ಆದ್ಯತೆ ನೀಡುವ ಸಂಪ್ರದಾಯವಾದಿ ಹೂಡಿಕೆದಾರರಿಗೆ ಪಿಪಿಎಫ್ ಸೂಕ್ತವಾಗಿರುತ್ತದೆ. ನಿವೃತ್ತಿ ಯೋಜನೆ ಅಥವಾ ದೀರ್ಘಾವಧಿಯ ಆರ್ಥಿಕ ಭದ್ರತೆಗಾಗಿ ಇದು ಅತ್ಯುತ್ತಮ ಆಯ್ಕೆಯಾಗಿದೆ. ತೆರಿಗೆ ಮುಕ್ತ ಆದಾಯವನ್ನು ನೀಡುತ್ತದೆ ಮತ್ತು ವಿಸ್ತೃತ ಅವಧಿಯಲ್ಲಿ ಶಿಸ್ತುಬದ್ಧ ಉಳಿತಾಯವನ್ನು ಬಲಪಡಿಸುತ್ತದೆ.

Continue Reading

ಮನಿ-ಗೈಡ್

Bank FD Rates: ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಎಫ್‌ಡಿ ಬಡ್ಡಿ ದರ ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ?

ಎಫ್ ಡಿಯಲ್ಲಿ (Bank FD Rates) ಎಷ್ಟು ಸಮಯದವರೆಗೆ ಹೂಡಿಕೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಬ್ಯಾಂಕ್ ಗಳು ಸಾಮಾನ್ಯವಾಗಿ ಶೇ. 3 ರಿಂದ ಶೇ 7.50 ನಡುವಿನ ಬಡ್ಡಿ ದರಗಳನ್ನು ನೀಡುತ್ತವೆ. ಎಫ್ ಡಿಯಲ್ಲಿ ಎಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸುವ ಮೊದಲು ವಿವಿಧ ಬ್ಯಾಂಕ್‌ಗಳು ನೀಡುವ ಬಡ್ಡಿ ದರಗಳನ್ನು ಹೋಲಿಸುವುದು ಮುಖ್ಯವಾಗಿದೆ. ದೇಶದ ಪ್ರಮುಖ ನಾಲ್ಕು ಬ್ಯಾಂಕ್ ಗಳು ಎಫ್ ಡಿಗಳಿಗೆ ನೀಡುವ ಬಡ್ಡಿ ದರಗಳ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Bank FD Rates
Koo

ಹೆಚ್ಚಿನ ಮಂದಿ ಎಫ್‌ಡಿಯಲ್ಲಿ (Bank FD Rates) ಹೂಡಿಕೆ ಮಾಡಲು ಆಸಕ್ತಿ ಹೊಂದಿರುತ್ತಾರೆ. ಸಮಯ ಅಥವಾ ಅವಧಿಯ ಠೇವಣಿ ಎಂದೂ ಕರೆಯಲ್ಪಡುವ ಸ್ಥಿರ ಠೇವಣಿಗಳು (Fixed deposits) ಅಂದರೆ ಎಫ್‌ಡಿಗಳು ಕಡಿಮೆ ರಿಸ್ಕ್‌ ಹೊಂದಿರುವುದರಿಂದ ಹೆಚ್ಚು ಜನಪ್ರಿಯವಾಗಿವೆ. ಎಫ್‌ಡಿಯಲ್ಲಿ ನಿಗದಿತ ಅವಧಿಗೆ ನಿರ್ದಿಷ್ಟ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಬಹುದು ಮತ್ತು ನಿಯಮಿತ ಅಥವಾ ಠೇವಣಿ ಪಕ್ವವಾದಾಗ ಸ್ಥಿರ ಬಡ್ಡಿಯನ್ನು ಪಡೆಯಬಹುದು.

ಎಫ್‌ಡಿಯಲ್ಲಿ ಎಷ್ಟು ಸಮಯದವರೆಗೆ ಹೂಡಿಕೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಬ್ಯಾಂಕ್‌ಗಳು ಸಾಮಾನ್ಯವಾಗಿ ಶೇ. 3ರಿಂದ ಶೇ 7.50 ನಡುವಿನ ಬಡ್ಡಿ ದರಗಳನ್ನು ನೀಡುತ್ತವೆ. ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ಹೆಚ್ಚುವರಿ ಶೇ. 0.5 ಬಡ್ಡಿ ದರವನ್ನು ಪಡೆಯುತ್ತಾರೆ. ಎಫ್ ಡಿಯಲ್ಲಿ ಎಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸುವ ಮೊದಲು ವಿವಿಧ ಬ್ಯಾಂಕ್‌ಗಳ ಬಡ್ಡಿ ದರಗಳನ್ನು ಹೋಲಿಸುವುದು ಮುಖ್ಯವಾಗಿದೆ. ದೇಶದ ಪ್ರಮುಖ ನಾಲ್ಕು ಬ್ಯಾಂಕ್ ಗಳು ಎಫ್‌ಡಿಗಳಿಗೆ ನೀಡುವ ಬಡ್ಡಿ ದರಗಳು ಇಂತಿವೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ (ಎಫ್‌ಡಿ) ಹೂಡಿಕೆ ಮಾಡಿದರೆ ಶೇ. 3 ಮತ್ತು ಶೇ. 7 ನಡುವಿನ ಬಡ್ಡಿ ದರಗಳನ್ನು ನಿರೀಕ್ಷಿಸಬಹುದು. ಹಿರಿಯ ನಾಗರಿಕರು ಹೆಚ್ಚುವರಿಯಾಗಿ ಶೇ. 0.50 ಬಡ್ಡಿ ದರವನ್ನು ಪಡೆಯುತ್ತಾರೆ. ಒಂದು ವರ್ಷ ಪೂರ್ಣಗೊಂಡ ಬಳಿಕ ಬ್ಯಾಂಕ್ ಎಫ್ ಡಿಗಳಿಗೆ ಶೇ. 6.80 ಬಡ್ಡಿ ದರವನ್ನು ಮತ್ತು ಎರಡು ವರ್ಷಗಳಿಂದ ಕೇವಲ ಮೂರು ವರ್ಷಗಳವರೆಗಿನ ಅವಧಿಗೆ ಶೇ. 7 ಬಡ್ಡಿ ದರವನ್ನು ನೀಡಲಾಗುತ್ತದೆ.


ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 3.50ರಿಂದ ಶೇ. 7.50ವರೆಗಿನ ಸ್ಥಿರ ಠೇವಣಿ ಬಡ್ಡಿ ದರಗಳನ್ನು ನೀಡುತ್ತದೆ. ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಹೂಡಿಕೆದಾರರು ಶೇ. 6.75 ಬಡ್ಡಿ ಗಳಿಸುತ್ತಾರೆ. ಆದರೆ ಹಿರಿಯ ನಾಗರಿಕರು ಶೇ. 7.25ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.


ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ತನ್ನ ನಿಶ್ಚಿತ ಠೇವಣಿ ಯೋಜನೆಗಳಿಗೆ ಶೇ. 3 ಮತ್ತು ಶೇ. 7.50ರ ನಡುವಿನ ಬಡ್ಡಿ ದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಶೇ. 3.50ರಿಂದ ಶೇ. 7.50ರವರೆಗೆ ಹೆಚ್ಚುವರಿ ಶೇ.0.5 ಬಡ್ಡಿ ದರವನ್ನು ಪಡೆಯುತ್ತಾರೆ. ಒಂದು ವರ್ಷದ ನಿಶ್ಚಿತ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರಿಗೆ ಶೇ. 6.70 ಬಡ್ಡಿ ದರವನ್ನು ನೀಡಲಾಗುತ್ತದೆ.


ಇದನ್ನೂ ಓದಿ: Rent Agreement: ಬಾಡಿಗೆ ಒಪ್ಪಂದ 11 ತಿಂಗಳ ಅವಧಿಗೆ ಮಾತ್ರ ಯಾಕೆ ಅನ್ನೋದು ಗೊತ್ತಾ?

ಹೆಚ್‌ಡಿಎಫ್‌ಸಿ

ಹೆಚ್‌ಡಿಎಫ್‌ಸಿ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ನೀಡುತ್ತದೆ. ಸಾಮಾನ್ಯ ಹೂಡಿಕೆದಾರರು ಶೇ. 6.60 ಬಡ್ಡಿ ದರವನ್ನು ಗಳಿಸುತ್ತಾರೆ ಮತ್ತು ಹಿರಿಯ ನಾಗರಿಕರು ಶೇ. 7.10ಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತಾರೆ. ಮೆಚ್ಯೂರಿಟಿ ಅವಧಿಗೆ ಅನುಗುಣವಾಗಿ ಸಾಮಾನ್ಯ ಗ್ರಾಹಕರಿಗೆ ಶೇ. 3ರಿಂದ ಶೇ. 7.75ವರೆಗಿನ ಬಡ್ಡಿ ದರಗಳನ್ನು ಬ್ಯಾಂಕ್ ಒದಗಿಸುತ್ತದೆ.

Continue Reading
Advertisement
ಕ್ರೀಡೆ12 seconds ago

Youth Olympic 2030: ಯೂತ್​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಐಸಿಸಿ ಪ್ರಯತ್ನ; ಆತಿಥ್ಯಕ್ಕೆ ಭಾರತ ಸಿದ್ಧತೆ

Air India Hostess
ವಿದೇಶ15 mins ago

Air India Hostess: ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಗಗನಸಖಿ ಮೇಲೆ ಹಲ್ಲೆ; ನೆಲಕ್ಕೆ ಕೆಡವಿ ಎಳೆದಾಡಿದ ದುಷ್ಕರ್ಮಿ

70th National Film Awards Nithya Menen REACTS For 1st Time
ಕಾಲಿವುಡ್18 mins ago

70th National Film Awards : ರಾಷ್ಟ್ರ ಪ್ರಶಸ್ತಿ ಗೆದ್ದ ಬಳಿಕ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ಹೀಗೆ!

Accident News:
ಪ್ರಮುಖ ಸುದ್ದಿ41 mins ago

Accident News : ನರಗುಂದಲ್ಲಿ ಭೀಕರ ಅಫಘಾತ; ಸಾರಿಗೆ ಬಸ್​ ಗುದ್ದಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ

Neeraj Chopra
ಕ್ರೀಡೆ43 mins ago

Neeraj Chopra: ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ; ಆಗಸ್ಟ್​ 22ಕ್ಕೆ ಟೂರ್ನಿ

Liquor theft:
ಪ್ರಮುಖ ಸುದ್ದಿ1 hour ago

Liquor Theft : ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

Thalapathy Vijay plays both father and son in this time travel saga.
ಕಾಲಿವುಡ್1 hour ago

Thalapathy Vijay: ದಳಪತಿ ವಿಜಯ್‌ ಕೊನೆ ಚಿತ್ರದ ಟ್ರೈಲರ್‌ ಔಟ್‌;  ಅಬ್ಬರಿಸಿದ ನಟ!

Kolkata Doctor Murder Case
ದೇಶ1 hour ago

Kolkata Doctor Murder Case: ಜನರಲ್ಲಿ ಗೊಂದಲ ಮೂಡಿಸುವ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ; ನಿರ್ಭಯಾ ತಾಯಿ

virat kohli
ಕ್ರೀಡೆ1 hour ago

Virat Kohli: ಕೊಹ್ಲಿಯ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ತುಂಬಿತು 16 ವರ್ಷ

Chikkodi News
ಪ್ರಮುಖ ಸುದ್ದಿ2 hours ago

Chikkodi News : ಒಮ್ಮೆ ಶಾಸಕರಿಂದ ಮತ್ತೊಮ್ಮೆ ಸಂಸದರಿಂದ; ಒಂದೇ ಗ್ರಾಮ ಪಂಚಾಯಿತಿ ಕಟ್ಟಡ ಎರಡೆರಡು ಬಾರಿ ಉದ್ಘಾಟನೆ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌