Money Guide: ಎಟಿಎಂ ಬಳಸುತ್ತೀರಾ? ಹಾಗಾದರೆ ಈ ಅಂಶ ನಿಮಗೆ ತಿಳಿದಿರಲೇ ಬೇಕು - Vistara News

ಮನಿ-ಗೈಡ್

Money Guide: ಎಟಿಎಂ ಬಳಸುತ್ತೀರಾ? ಹಾಗಾದರೆ ಈ ಅಂಶ ನಿಮಗೆ ತಿಳಿದಿರಲೇ ಬೇಕು

Money Guide: ತಂತ್ರಜ್ಞಾನ ಮುಂದುವರಿದಂತೆ ವಂಚಕರ ಸಂಖ್ಯೆಯೂ ಹೆಚ್ಚುತ್ತಿದೆ. ಎಲ್ಲಿಯೋ ಕುಳಿತ ವಂಚಕರು ಇನ್ನೆಲ್ಲಿಯೋ ತಮ್ಮ ಬಲೆಯನ್ನು ಬೀಸುತ್ತಾರೆ. ಇದಕ್ಕೆ ಎಟಿಎಂ ಕೂಡ ಹೊರತಲ್ಲ. ಹೀಗಾಗಿ ಎಟಿಎಂ ಬಳಸುವಾಗ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

atm
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸದ್ಯ ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ (Digital Payment) ವಿಧಾನ ಜನಪ್ರಿಯಗೊಂಡಿದೆ. ಮಾಲ್‌ಗಳಿಂದ ಹಿಡಿದು ತಳ್ಳುಗಾಡಿಯವರೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಮೂಲಕ ವ್ಯವಹಾರ ನಡೆಸಲಾಗುತ್ತದೆ. ನಗರ, ಗ್ರಾಮಾಂತರ ಪ್ರದೇಶವೆಂಬ ಬೇಧವಿಲ್ಲದೆ ಬಹುತೇಕರು ಡಿಜಿಟಲ್‌ ಪೇಮೆಂಟ್‌ ಬಳಸುತ್ತಿದ್ದಾರೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಬಳಕೆಯನ್ನು ವ್ಯಾಪಕಗೊಳಿಸಿವೆ. ಅದಾಗ್ಯೂ ಕೆಲವೊಂದು ಕಡೆ ನಗದು ಬಳಕೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ನಾವು ಎಟಿಎಂ ಬಳಸುವಾಗ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವುದರ ವಿವರ ಇಲ್ಲಿದೆ (Money Guide).

ಎಟಿಎಂ ವಹಿವಾಟಿನ ಸಮಯದಲ್ಲಿನ ನಮ್ಮ ಅತೀ ಚಿಕ್ಕ ನಿರ್ಲಕ್ಷ್ಯ ಮುಂದೆ ಅತೀ ದೊಡ್ಡ ನಷ್ಟಕ್ಕೆ ಕಾರಣವಾಗಬಲ್ಲದು. ಅದರಲ್ಲೂ ಇತ್ತೀಚೆಗೆ ಸೈಬರ್‌ ಅಪರಾಧ ಹೆಚ್ಚಿಸುವ ಹಿನ್ನಲೆಯಲ್ಲಿ ಎಟಿಎಂ ಬಳಸುವಾಗ ಸುರಕ್ಷತೆ ಮತ್ತು ಭದ್ರತೆಯತ್ತ ಗಮನ ಹರಿಸುವುದು ಅತೀ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಜತೆಗೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಟಿಪ್ಸ್‌ ಅನ್ನೂ ನೀಡುತ್ತಾರೆ.

ಭಾರತದಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ನಗದು ವಹಿವಾಟಿಗಾಗಿ ಎಟಿಎಂ ಬಳಸುತ್ತಾರೆ. ಹೀಗಾಗಿ ಈ ಸಂಬಂಧಿತ ವಂಚನೆಯ ಅಪಾಯವು ಗಮನಾರ್ಹವಾಗಿ ಅಧಿಕ. ಕೆಲವು ಬಾರಿ ಹೀಗೆ ಕಳವಾದ ನಗದು ಮರಳಿ ಪಡೆಯಲು ಸಾಧ್ಯವಾಗುತ್ತದೆಯಾದರೂ ಇದರ ಪ್ರಕ್ರಿಯೆ ದೀರ್ಘ ಮತ್ತು ಸವಾಲಿನಿಂದ ಕೂಡಿರುತ್ತದೆ. ಇದು ಮತ್ತಷ್ಟು ಒತ್ತಡ ಮತ್ತು ಅನಾನುಕೂಲತೆಯನ್ನು ಉಂಟು ಮಾಡುತ್ತದೆ.

ಹೀಗೆ ಮಾಡಿ

 • ಸುರಕ್ಷಿತ ಪ್ರದೇಶವನ್ನು ಆಯ್ದುಕೊಳ್ಳಿ: ಜನ ಸಂಚಾರ ಅಧಿಕವಿರುವ ಪ್ರದೇಶದಲ್ಲಿನ ಎಟಿಎಂಗಳನ್ನೇ ಆಯ್ದುಕೊಳ್ಳಿ. ಅದರಲ್ಲೂ ಸೆಕ್ಯುರಿಟಿ ಗಾರ್ಡ್‌ ಇರುವ ಎಟಿಎಂ ನಿಮ್ಮ ಆದ್ಯತೆಯಾಗಿರಲಿ. ಜನ ಸಂಚಾರ ಅಷ್ಟಾಗಿ ಇರದ, ಮಂದ ಬೆಳಕಿರುವ ಪ್ರದೇಶದ ಎಟಿಎಂಗೆ ಅದರಲ್ಲೂ ತಡರಾತ್ರಿಯಲ್ಲಿ ತೆರಳಲೇಬೇಡಿ.
 • ಪರಿಶೀಲಿಸಿ: ಎಟಿಎಂ ಯಂತ್ರವನ್ನು ಹ್ಯಾಕ್‌ ಮಾಡಿರುವ ಸಾಕಷ್ಟು ಉದಾಹರಣೆ ಈ ಹಿಂದೆ ವರದಿಯಾಗಿದೆ. ಹೀಗಾಗಿ ಎಟಿಎಂ ಬಳಸುವ ಮುನ್ನ ಯಂತ್ರದ ಬಳಿ ಅನುಮಾನಾಸ್ಪದ ವಸ್ತುಗಳಿವೆಯೇ ಎನ್ನುವುದು ಪರಿಶೀಲಿಸಿ. ಯಂತ್ರಕ್ಕೆ ಹಾನಿಯಾಗಿದ್ದರೆ ಬಳಸಲೇ ಬೇಡಿ. ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ.
 • ಪಿನ್‌ ಗೌಪ್ಯವಾಗಿರಲಿ: ಯಾವತ್ತೂ ಕೈಯಿಂದ ಮರೆಮಾಡಿ, ಯಾರಿಗೂ ಕಾಣಿಸದಂತೆ ಪಿನ್‌ ನಂಬರ್‌ ನಮೂದಿಸಿ. ಯಾವುದೇ ಕಾರಣಕ್ಕೂ, ಯಾರ ಬಳಿಯೂ ಪಿನ್‌ ನಂಬರ್‌ ಹಂಚಿಕೊಳ್ಳಬೇಡಿ.
 • ಸಮೀಪ ಯಾರೂ ಇರದಂತೆ ನೋಡಿಕೊಳ್ಳಿ: ನೀವು ನಗದು ಪಡೆಯಲು ತೆರೆಳುವಾಗ ನಿಮ್ಮ ತೀರಾ ಸಮೀಪದಲ್ಲಿ ಯಾರೂ ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ.
 • ವಹಿವಾಟು ವಿವರ ಗೌಪ್ಯವಾಗಿರಲಿ: ನಿಮ್ಮ ವಹಿವಾಟಿನ ವಿವರಗಳನ್ನು ಚರ್ಚಿಸುವುದನ್ನು ಅಥವಾ ಎಟಿಎಂನಿಂದ ಪಡೆದ ಹಣವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ತಪ್ಪಿಸಿ. ನಿಮ್ಮ ವಹಿವಾಟಿನ ರಸೀದಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿ.
 • ಕಾರ್ಡ್‌ ಮರೆಯದೇ ಕಲೆಕ್ಟ್‌ ಮಾಡಿ: ನಗದು ಪಡೆದ ಬಳಿಕ ಮರೆಯದೇ ಕಾರ್ಡ್‌ ಕಲೆಕ್ಟ್‌ ಮಾಡಿ.
 • ಬ್ಯಾಂಕ್‌ ಮೆಸೇಜ್‌ ನಿರ್ಲಕ್ಷಿಸಬೇಡಿ: ನಿಮಗೆ ಗೊತ್ತಿಲ್ಲದಂತೆ ನಗದು ವ್ಯವಹಾರ ನಡೆದಿರುವ ಬಗ್ಗೆ ಮೆಸೇಜ್‌ ಬಂದರೆ ಕೂಡಲೇ ಬ್ಯಾಂಕ್‌ನ ಗಮನಕ್ಕೆ ತನ್ನಿ.
 • ಅಲರ್ಟ್‌ ಸೌಲಭ್ಯ ಪಡೆದುಕೊಳ್ಳಿ: ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ನೀಡುವ ಎಸ್‌ಎಂಎಸ್‌, ಇಮೇಲ್‌ ಅಲರ್ಟ್‌ ಸೌಲಭ್ಯ ಪಡೆದುಕೊಳ್ಳಿ.
 • ಕಳೆದು ಹೋದರೆ ಬ್ಲಾಕ್‌ ಮಾಡಿ: ಒಂದು ವೇಳೆ ನಿಮ್ಮ ಡೆಬಿಟ್‌ ಕಾರ್ಡ್‌ ಕಳೆದು ಹೋದರೆ ಅಥವಾ ಕಳವಾದರೆ ಕೂಡಲೆ ಬ್ಯಾಂಕ್‌ನವರ ಗಮನಕ್ಕೆ ತಂದು ಬ್ಲಾಕ್‌ ಮಾಡಿ.

ಇದನ್ನೂ ಮರೆಯಬೇಡಿ

 • ನಿಯಮಿತವಾಗಿ ಪಿನ್‌ ನಂಬರ್‌ ಬದಲಾಯಿಸಿ.
 • ಡೆಬಿಟ್‌ ಕಾರ್ಡ್‌ ಅಥವಾ ಬೇರೆಲ್ಲೂ ಯಾವ ಕಾರಣಕ್ಕೂ ಪಿನ್‌ ನಂಬರ್‌ ಬರೆದಿಡಬೇಡಿ. ಪಿನ್‌ ನಂಬರ್‌ ನಿಮ್ಮ ನೆನಪಿನಲ್ಲಿರಲಿ.
 • ನೆನಪಿರಲಿ ಬ್ಯಾಂಕ್‌ / ಆರ್‌ಬಿಐ / ಸರ್ಕಾರ ಯಾವತ್ತೂ, ಯಾವ ಕಾರಣಕ್ಕೂ ನಿಮ್ಮ ಪಿನ್‌ ನಂಬರ್‌ ಕೇಳುವುದಿಲ್ಲ. ಸೈಬರ್‌ ವಂಚಕರು ಕರೆ ಮಾಡಿ ಪಿನ್‌ / ಒಟಿಪಿ ಕೇಳಿದರೆ ಯಾವ ಕಾರಣಕ್ಕೂ ನೀಡಬೇಡಿ.
 • ನಗದು ಎನ್‌ಕ್ಯಾಶ್‌ ಮಾಡಲು ತೆರಳಿದಾಗ ಅಪರಿಚಿತರು ಸಮೀಪ ಬರದಂತೆ ನೋಡಿಕೊಳ್ಳಿ.
 • ಮಾಲ್‌ / ಹೋಟೆಲ್‌ / ಅಂಗಡಿಗಳಲ್ಲಿ ನಿಮ್ಮ ಉಪಸ್ಥಿತಿಯಲ್ಲೇ ಕಾರ್ಡ್‌ ಸ್ಲೈಪ್‌ ಮಾಡುವಂತಿರಬೇಕು.

ಇದನ್ನೂ ಓದಿ: Money Guide: 436 ರೂ. ಪ್ರೀಮಿಯಂ ಮೊತ್ತಕ್ಕೆ 2 ಲಕ್ಷ ರೂ. ಕವರ್‌; ಏನಿದು ಪಿಎಂಜೆಜೆಬಿ ಯೋಜನೆ? ಯಾರಿಗೆಲ್ಲ ಅನುಕೂಲ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

Money Guide: ಹೂಡಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರೇ ಮ್ಯೂಚುವಲ್‌ ಫಂಡ್‌. ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸದವರಿಗೆ ಇದು ಸೂಕ್ತ. ಹಾಗಾದರೆ ಮ್ಯೂಚುವಲ್‌ ಫಂಡ್‌ ಎಂದರೇನು? ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ವಿಧಗಳು ಯಾವುವು? ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಅನೇಕ ಮಂದಿ ಮ್ಯೂಚುವಲ್‌ ಫಂಡ್‌ (Mutual Fund)ನಲ್ಲಿ ಹೂಡಿಕೆ ಮಾಡಬೇಕು ಎಂದುಕೊಳ್ಳುತ್ತಾರೆ. ಇನ್ನು ಕೆಲವು ಮಂದಿ ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಸ್ಟಾಕ್‌ಗಳು ಮತ್ತು ಬಾಂಡ್‌ಗಳಲ್ಲಿ ಲಾಭ ಇದೆ ಎಂದು ಗೊತ್ತಿದ್ದರೂ, ಅದು ಹೇಗೆ ಎಂಬುದು ಕರಗತವಾಗಿರುವುದಿಲ್ಲ. ಅವರಿಗೆ ಮಾರುಕಟ್ಟೆ ಮತ್ತು ಕಂಪೆನಿಗಳ ಫಂಡಮೆಂಟಲ್‌ ಅನಾಲಿಸಿಸ್‌ ನಡೆಸಲು ಸಮಯದ ಅಭಾವ ಇರುವುದೂ ಇದಕ್ಕೆ ಕಾರಣ ಇರಬಹುದು. ಅಂತಹ ಮಂದಿ ಮ್ಯೂಚುವಲ್‌ ಫಂಡ್‌ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಹಾಗಾದರೆ ಮ್ಯೂಚುವಲ್‌ ಫಂಡ್‌ ಎಂದರೇನು? ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ವಿಧಗಳು ಯಾವುವು? ಎನ್ನುವ ವಿವರ ಮನಿಗೈಡ್‌ (Money Guide)ನಲ್ಲಿದೆ.

ಮ್ಯೂಚುವಲ್‌ ಫಂಡ್‌ ಎಂದರೇನು?

ಪ್ರಸ್ತುತ ಅತ್ಯುತ್ತಮ ಹೂಡಿಕೆ ವಿಧಾನಗಳಲ್ಲಿ ಮ್ಯೂಚುವಲ್ ಫಂಡ್ ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ಮಾರುಕಟ್ಟೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ವೈಯಕ್ತಿಕವಾಗಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ನಿಮಗಿರುವ ಅತ್ಯುತ್ತಮ ಮಾರ್ಗ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಮ್ಯೂಚುವಲ್ ಫಂಡ್​ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪೆನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್​ನ ಹಣ ಹೂಡಿಕೆ ಆಗಿರುತ್ತದೆ. ಅಂದರೆ ನೀವು ಮ್ಯೂಚುವಲ್ ಫಂಡ್​ಗೆ ಹಾಕುವ ಹಣವನ್ನು ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಲಾಭದ ಉದ್ದೇಶಕ್ಕಾಗಿ ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಾಯಿಸುತ್ತಿರುತ್ತಾರೆ. ಗಮನಿಸಿ, ದೀರ್ಘಾವಧಿ ದೃಷ್ಟಿಯಿಂದ ಇವು ಬಹಳ ಲಾಭಕಾರಿ ಎನಿಸುತ್ತದೆ. ಅಲ್ಪಾವಧಿಗೆ ಅಲ್ಲ.

ಆದಾಗ್ಯೂ ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ಯೋಜನೆಯ ಮಾಹಿತಿ ದಾಖಲೆಯನ್ನು ಎಚ್ಚರಿಕೆಯಿಂದ ಓದಬೇಕು. ಅಲ್ಲದೆ ಯೋಜನೆಯ ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದ ಆದಾಯವನ್ನು ಸೂಚಿಸುವುದಿಲ್ಲ. ಯಾವುದೇ ಕನಿಷ್ಠ ಅಥವಾ ಗರಿಷ್ಠ ಆದಾಯದ ಭರವಸೆ ಅಥವಾ ಖಾತರಿ ಇರಲು ಸಾಧ್ಯವಿಲ್ಲ ಮುಂತಾದ ಅಂಶಗಳನ್ನು ಹೂಡಿಕೆ ಮೊದಲೇ ಗಮನಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಭಾರತದಲ್ಲಿ ಲಭ್ಯವಿರುವ ಮ್ಯೂಚುವಲ್‌ ಫಂಡ್‌ನ ವಿಧಗಳು

ಈಕ್ವಿಟಿ ಫಂಡ್‌ (Equity Funds): ಈ ಫಂಡ್‌ ಮುಖ್ಯವಾಗಿ ಕಂಪೆನಿಗಳ ಸ್ಟಾಕ್‌ಗಳು / ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ದೀರ್ಘಕಾಲೀನ ಹೂಡಿಕೆಗೆ ಸೂಕ್ತ ಮತ್ತು ಹೆಚ್ಚಿನ ಅಪಾಯವನ್ನು ಹೊಂದಿವೆ. ಇದರ ಮೂಲಕ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅವು ಹೆಚ್ಚಿನ ಆದಾಯವನ್ನು ನೀಡುವ ಜತೆಗೆ ಆದರೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಈಕ್ವಿಟಿ ಫಂಡ್‌ಗಳನ್ನು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಬ್ಯಾಂಕಿಂಗ್, ತಂತ್ರಜ್ಞಾನ, ಇತ್ಯಾದಿ ಆಧಾರದ ಮೇಲೆ ಮತ್ತಷ್ಟು ವರ್ಗೀಕರಿಸಬಹುದು.

ಡೆಬ್ಟ್ ಫಂಡ್ (Debt Fund): ಡೆಬ್ಟ್ ಫಂಡ್ ಪ್ರಾಥಮಿಕವಾಗಿ ಬಾಂಡ್‌ಗಳು, ಸರ್ಕಾರಿ ಸೆಕ್ಯುರಿಟಿಗಳಂತಹ ಸ್ಥಿರ-ಆದಾಯದ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ. ಈಕ್ವಿಟಿ ಫಂಡ್‌ಗೆ ಹೋಲಿಸಿದರೆ ನಿಯಮಿತ ಆದಾಯ ಮತ್ತು ಕಡಿಮೆ ಅಪಾಯವನ್ನು ಬಯಸುವ ಹೂಡಿಕೆದಾರರಿಗೆ ಇದು ಸೂಕ್ತ.

ಹೈಬ್ರಿಡ್ ಫಂಡ್ (Hybrid Funds): ಬ್ಯಾಲೆನ್ಸ್ಡ್ ಫಂಡ್ (Balanced funds) ಎಂದೂ ಕರೆಯಲ್ಪಡುವ ಇದರಲ್ಲಿ ಈಕ್ವಿಟಿ ಮತ್ತು ಡೆಬ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ತುಲನಾತ್ಮಕವಾಗಿ ಕಡಿಮೆ ಅಪಾಯದೊಂದಿಗೆ ಮಧ್ಯಮ ಆದಾಯವನ್ನು ಬಯಸುವ ಹೂಡಿಕೆದಾರರು ಇದನ್ನು ಆಯ್ಕೆ ಮಾಡಬಹುದು.

ಇಂಡಕ್ಸ್‌ ಫಂಡ್‌ (Index Funds): ಇದು ನಿರ್ದಿಷ್ಟ ಮಾರುಕಟ್ಟೆ ಸೂಚ್ಯಂಕದಂತೆ ಅದೇ ಪ್ರಮಾಣದಲ್ಲಿ ಅದೇ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವ ಯೋಜನೆ. ಸೂಚ್ಯಂಕಕ್ಕೆ ಹೋಲುವ ಆದಾಯವನ್ನು ನೀಡುವ ಗುರಿಯನ್ನು ಹೊಂದಿದೆ.

ಸೆಕ್ಟರಲ್‌ ಫಂಡ್‌ (Sectoral Funds): ಬ್ಯಾಂಕಿಂಗ್, ಐಟಿ, ಆರೋಗ್ಯ ರಕ್ಷಣೆ ಮುಂತಾದ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡುವ ವಿಧಾನ ಇದು. ಇದು ಹೆಚ್ಚಿನ ಅಪಾಯವನ್ನು ಹೊಂದಿದೆ.

ಥೀಮಾಟಿಕ್‌ ಫಂಡ್‌ (Thematic Funds): ಮೂಲಸೌಕರ್ಯ ಅಥವಾ ತಂತ್ರಜ್ಞಾನದಂತಹ ನಿರ್ದಿಷ್ಟ ವಿಷಯಗಳು ಅಥವಾ ಪ್ರವೃತ್ತಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿಯೂ ಅಪಾಯ ಸಾಧ್ಯತೆ ಅಧಿಕ.

ಟ್ಯಾಕ್ಸ್‌ ಸೇವಿಂಗ್‌ ಫಂಡ್‌ (Tax Saving Funds): ಈ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ (Equity Linked Savings Schemes) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಇದರಲ್ಲಿ ಈಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಮೂರು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ.

ಲಿಕ್ವಿಡ್ ಫಂಡ್ (Liquid Funds): ಲಿಕ್ವಿಡ್ ಫಂಡ್‌ 91 ದಿನಗಳಲ್ಲಿ ಮುಕ್ತಾಯಗೊಳ್ಳುವ ಅಲ್ಪಾವಧಿಯ ಹೂಡಿಕೆಯಾಗಿದೆ. ಅಲ್ಪಾವಧಿಯ ಹೂಡಿಕೆದಾರರಿಗೆ ಇದು ಸೂಕ್ತ.

ಗಿಲ್ಟ್‌ ಫಂಡ್‌ (Gilt Funds): ಇದು ಉಳಿದ ಎಲ್ಲ ಹೂಡಿಕೆಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತ ಎಂದೇ ಹೇಳಬಹುದು. ಹೂಡಿಕೆ ಮಾಡಿದ ಹೆಚ್ಚಿನ ಹಣಗಳು ಸರ್ಕಾರ ಅಭಯವಿರುವ ಕಡೆಯೇ ಇರುತ್ತವೆ. ಇಲ್ಲಿ ಹಣ ಕಳೆದುಕೊಳ್ಳುವ ಆತಂಕ ಇರುವುದಿಲ್ಲ.

ಇಂಟರ್‌ನ್ಯಾಷನಲ್‌ ಫಂಡ್‌ (International Funds): ಈ ಸ್ಕೀಮ್‌ ಮೂಲಕ ಭಾರತದ ಹೊರಗಿನ ಸ್ವತ್ತುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿನ ವೈವಿಧ್ಯತೆಯನ್ನು ನೀಡುತ್ತದೆ. ಸ್ಟಾಕ್, ಬಾಂಡ್ ಅಥವಾ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

Continue Reading

ಮನಿ-ಗೈಡ್

Money Guide: ವೈದ್ಯಕೀಯ ತುರ್ತು ಪರಿಸ್ಥಿತಿ ವೇಳೆ ಸಾಲದ ಸುಳಿಗೆ ಸಿಲುಕದಿರಲು ಹೀಗೆ ಮಾಡಿ…

Money Guide: ಪರಿಸ್ಥಿತಿ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎನ್ನುತ್ತಾರೆ ಹಿರಿಯರು. ಅದು ನಿಜ. ಕೆಲವೊಮ್ಮೆ ನಾವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಅದರಲ್ಲೂ ಆರೋಗ್ಯ ವಿಚಾರದಲ್ಲಿ ಈ ಮಾತು ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ಅಪ್ಪಳಿಸಬಹುದು. ಕೆಲವೊಮ್ಮೆ ಇದು ಆರ್ಥಿಕ ಸಂಕಷ್ಟಕ್ಕೂ ದೂಡಬಹುದು. ಆದರೆ ಇಂತಹ ಕಠಿಣ ಪರಿಸ್ಥಿತಿಯನ್ನು ನಾವು ಸಮರ್ಪಕ ಯೋಜನೆ ಮೂಲಕ ಸುಲಭವಾಗಿ ದಾಟಿ ಬಿಡಬಹುದು. ಅದು ಹೇಗೆ ಎನ್ನುವುದ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ಅಪ್ಪಳಿಸಬಹುದು. ಇದು ಅಪಾರ ಒತ್ತಡ ಮತ್ತು ಅನಿಶ್ಚಿತತೆಯನ್ನು ಉಂಟು ಮಾಡುತ್ತದೆ. ಈ ಸಂದರ್ಭದಲ್ಲಿ ಆರೋಗ್ಯದ ಚಿಂತೆ ಕಾಡುವ ಜತೆಗೆ ಆರ್ಥಿಕ ವಿಚಾರವೂ ನಿಮ್ಮನ್ನು ಕುಗ್ಗುವಂತೆ ಮಾಡುತ್ತದೆ. ಅಂತಹ ಸವಾಲಿನ ಸಮಯದಲ್ಲಿ ಹಣದ ಲಭ್ಯತೆಯು ಅತ್ಯಂತ ಮಹತ್ವದ್ದಾಗಿರುತ್ತದೆ. ಯಾವಾಗಲೂ ಅನಿರೀಕ್ಷಿತ ಆಸ್ಪತ್ರೆ ಬಿಲ್‌, ಶಸ್ತ್ರಚಿಕಿತ್ಸೆಯ ವೆಚ್ಚಗಳಿಗೆ ಆರ್ಥಿಕವಾಗಿ ಸಿದ್ಧರಾಗಿರುವುದು ಅಗತ್ಯ. ಇದಕ್ಕಾಗಿ ಅಮೂಲ್ಯವಾದ ಉಳಿತಾಯವನ್ನು ಖರ್ಚು ಮಾಡುವ ಬದಲು ಪರ್ಯಾಯ ಹಣಕಾಸು ಮಾರ್ಗಗಳತ್ತ ಗಮನ ಹರಿಸಬಹುದಾಗಿದೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Money Guide).

ಆರೋಗ್ಯ ವಿಮೆ (Health Insurance)

ಸಮಗ್ರ ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿರುವುದು ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವ ಅತ್ಯಂತ ಪರಿಣಾಮಕಾರಿ ಮಾರ್ಗಗಳ ಪೈಕಿ ಪ್ರಮುಖವಾದುದು. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಸಂರಕ್ಷಿಸಲು ಮತ್ತು ನಿಮ್ಮ ಉಳಿತಾಯದ ಹಣವನ್ನು ರಕ್ಷಿಸಲು, ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಇಡೀ ಕುಟುಂಬಕ್ಕೆ ಆರೋಗ್ಯ ವಿಮೆಯ ಕವರೇಜ್‌ ಅಗತ್ಯ. ಕುಟುಂಬದ ಪ್ರತಿ ಸದಸ್ಯರಿಗೂ ಸಮಗ್ರ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಮುಖ್ಯ. ವೈದ್ಯಕೀಯ ಸೌಲಭ್ಯಗಳು ಹೆಚ್ಚಾದಂತೆ ಹೆಲ್ತ್‌ ಕೇರ್‌ ಕುರಿತ ವೆಚ್ಚಗಳೂ ಹೆಚ್ಚುತ್ತವೆ. ಅಂಥ ಸಂದರ್ಭದಲ್ಲಿ ಹೆಲ್ತ್‌ ಇನ್ಶೂರೆನ್ಸ್‌ ಕೈ ಹಿಡಿಯುತ್ತದೆ. 

ಆರೋಗ್ಯ ವಿಮೆಯನ್ನು ಖರೀದಿಸಲು ಬಯಸುವವರು ಮೊದಲ ಹೆಜ್ಜೆಯಾಗಿ ತಮ್ಮ ಅಗತ್ಯಗಳನ್ನು ಅರಿತುಕೊಳ್ಳಬೇಕು. ಆರೋಗ್ಯ ವಿಮೆ ಬಗ್ಗೆ ಒಂದು ಸೂಕ್ತವಾದ ಪ್ಲಾನ್‌ ಮಾಡಿಕೊಳ್ಳಬೇಕು. ವ್ಯಕ್ತಿಗತವಾಗಿ ನಿಮಗೊಬ್ಬರಿಗೆ ಅಗತ್ಯವಿದೆಯೇ, ಇಡೀ ಕುಟುಂಬಕ್ಕೆ ಅಗತ್ಯ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗೂ ಎರಡೂ ಪರಿಸ್ಥಿತಿಗಳಲ್ಲಿ ಅದಕ್ಕೆ ತಗಲುವ ವೆಚ್ಚ, ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಬೇಕು.

ಆರೋಗ್ಯ ವಿಮಾ ಪಾಲಿಸಿ ನಿಮ್ಮ ಎಲ್ಲ ಅಗತ್ಯಗಳನ್ನು ಒಳಗೊಂಡಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಅಂದರೆ ನೀವು ಖರೀದಿಸಲು ಉದ್ದೇಶಿಸಿರುವ ಪಾಲಿಸಿ ಆಸ್ಪತ್ರೆ ವೆಚ್ಚಗಳು, ಹೊರರೋಗಿ ವೆಚ್ಚಗಳು ಮತ್ತು ರೋಗನಿರ್ಣಯ ಪರೀಕ್ಷೆಗಳಂತಹ ವಿಷಯಗಳನ್ನು ಒಳಗೊಂಡಿದೆಯೇ ಎನ್ನುವುದನ್ನು ಪರಿಶೀಲಿಸಿ. ನೀವು ಯಾವುದೇ ನಿರ್ದಿಷ್ಟ ವೈದ್ಯಕೀಯ ಅಗತ್ಯಗಳನ್ನು ಹೊಂದಿದ್ದರೆ ಅವುಗಳನ್ನು ಒಳಗೊಂಡಿರುವ ಪಾಲಿಸಿಯನ್ನು ಆಯ್ಕೆ ಮಾಡಿ.

ತುರ್ತು ಹೂಡಿಕೆ (Emergency Savings)

ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆರ್ಥಿಕವಾಗಿ ಸಿದ್ಧರಾಗಿರುವುದು ಅತ್ಯಗತ್ಯ. ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಅನಿರೀಕ್ಷಿತ ಘಟನೆಗಳು ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ನಿಮ್ಮ ತುರ್ತು ನಿಧಿಯ ಮೇಲೆ ಹೂಡಿಕೆ ಮಾಡಿ. ಅಂದರೆ ಕನಿಷ್ಠ ಮೂರರಿಂದ ಆರು ತಿಂಗಳ ಜೀವನ ವೆಚ್ಚಗಳನ್ನು ಭರಿಸಬಹುದಾದಷ್ಟು ಮೊತ್ತ ನಿಮ್ಮ ಅಕೌಂಟ್‌ನಲ್ಲಿರಲಿ. ಈ ಆರ್ಥಿಕ ಭದ್ರತೆ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ ಮತ್ತು ಅನಿರೀಕ್ಷಿತ ಸವಾಲುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎನ್ನುತ್ತಾರೆ ತಜ್ಞರು. ಗಮನಿಸಿ ಈ ಮೊತ್ತವನ್ನು ತುರ್ತು ಪರಿಸ್ಥಿಯಲ್ಲಿ ಮಾತ್ರವೇ ಬಳಸಿ.

ಸಮೀಕ್ಷೆ ಏನು ಹೇಳುತ್ತದೆ?

ಸಮೀಕ್ಷೆಯೊಂದರ ಪ್ರಕಾರ, ಶೇ. 28ರಷ್ಟು ವೈಯಕ್ತಿಕ ಸಾಲ (Personal loans)ಗಳನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ತೆಗೆದುಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳು ಜನಪ್ರಿಯತೆ ಗಳಿಸಿವೆ. ಕಡಿಮೆ ಅವಧಿಯಲ್ಲಿ ಸಾಲ ನೀಡಿವುದರಿಂದ ಇವುಗಳತ್ತ ಜನ ಸಾಮಾನ್ಯರು ವಾಲುತ್ತಿದ್ದಾರೆ. ಸಾಲ ನೀಡುವಾಗ ಪ್ರಮುಖ ಬ್ಯಾಂಕ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಕಾರ್ಯ ನಿರ್ವಹಿಸುವ ರೀತಿಗೆ ಹೋಲಿಸಿದರೆ ಇವುಗಳು ವಿಧಿಸುವ ಷರತ್ತುಗಳು ಸರಳ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಯ ವೆಚ್ಚಗಳು, ಔಷಧಗಳು ಅಥವಾ ಇತರ ಆರೋಗ್ಯ ಸಂಬಂಧಿತ ವೆಚ್ಚಗಳನ್ನು ಭರಿಸಲು ತಕ್ಷಣದ ಹಣವನ್ನು ಪಡೆಯಲು ಈ ಅಪ್ಲಿಕೇಶನ್‌ ಆಧಾರಿತ ಸಾಲಗಳು ನೆರವಾಗುತ್ತವೆ.

ಆದಾಗ್ಯೂ ಈ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆಯುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅಗತ್ಯದ ಸಮಯದಲ್ಲಿ ಅವು ನೆರವಾಗುತ್ತಾದರೂ ಮುಂದೊಂದು ದಿನ ಕೊರಳಿಗೆ ಉರುಳಾಗಿ ಪರಿಣಮಿಸದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಕಿವಿ ಮಾತು ಹೇಳುತ್ತಾರೆ.

ಸಾಲ ಪಡೆಯುವ ಮುನ್ನ…

ಕೆಲವೊಂದು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಸಾಲ ಪಡೆಯುವ ಮುನ್ನ ಈ ವಿಚಾರಗಳತ್ತ ನಿಮ್ಮ ಗಮನವಿರಲಿ.

ಆರ್ಥಿಕ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ: ಸಾಲ ಪಡೆಯುವ ಮೊದಲು ಉಳಿತಾಯ, ವಿಮಾ ರಕ್ಷಣೆ ಮತ್ತು ಖರ್ಚು ಮಾಡಬಹುದಾದ ಆದಾಯ ಸೇರಿದಂತೆ ನಿಮ್ಮ ಆರ್ಥಿಕ ಸಂಪನ್ಮೂಲಗಳನ್ನು ಮೌಲ್ಯಮಾಪನ ಮಾಡಿ.

ಸಾಲದ ನಿಯಮಗಳನ್ನು ಅರ್ಥ ಮಾಡಿಕೊಳ್ಳಿ: ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಬಡ್ಡಿ ದರಗಳು, ಶುಲ್ಕಗಳು ಮತ್ತು ಮರು ಪಾವತಿ ಅವಧಿ ಸೇರಿದಂತೆ ಸಂಪೂರ್ಣ ನಿಯಮಗಳು ಮತ್ತು ಷರತ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ.

ಬೇಕಾದಷ್ಟು ಮೊತ್ತ ಮಾತ್ರ ಪಡೆಯಿರಿ: ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ಅಗತ್ಯವಿರುವಷ್ಟು ಮೊತ್ತವನ್ನು ಮಾತ್ರ ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ಮೊತ್ತ ಪಡೆಯಬೇಡಿ. ಅತಿಯಾಗಿ ಸಾಲ ಪಡೆಯುವುದು ದೀರ್ಘಾವಧಿಯಲ್ಲಿ ಆರ್ಥಿಕ ಒತ್ತಡಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Money Guide: ಪಿಪಿಎಫ್‌, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್‌ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ

ಮರುಪಾವತಿ ಸಮರ್ಪಕವಾಗಿರಲಿ: ಸಾಲ ಪಡೆಯುವುದರ ಜತೆಗೆ ಅದನ್ನು ಮರು ಪಾವತಿ ಮಾಡುವುದು ಕೂಡ ಅಷ್ಟೇ ಮುಖ್ಯ. ಸಾಲ ಪಡೆಯುವ ಮೊದಲೇ ಅದನ್ನು ಮರು ಪಾವತಿ ಮಾಡುವ ಬಗ್ಗೆ ಯೋಜನೆ ರೂಪಿಸಿ. ನಿಮ್ಮ ಬಜೆಟ್‌ಗೆ ಸರಿಹೊಂದುವಂತಹ ವಾಸ್ತವಿಕ ಮರುಪಾವತಿ ಯೋಜನೆಯನ್ನು ಕೈಗೊಳ್ಳಿ. ಸರ್ಕಾರದ ರಿಯಾಯಿತಿಯಂತಹ ಸೌಲಭ್ಯ ಅನ್ವಯವಾಗುತ್ತದೆಯೇ ಎನ್ನುವುದನ್ನು ಪರಿಶೀಲಿಸಿ.

Continue Reading

ಮನಿ-ಗೈಡ್

Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

Money Guide: ಕೆಲವೊಮ್ಮೆ ಹಣಕಾಸಿನ ತುರ್ತು ಅಗತ್ಯವಿರುತ್ತದೆ. ಈ ವೇಳೆ ಬ್ಯಾಂಕ್‌ನಿಂದ ಸಾಲ ಮಂಜೂರಾಗದೆ ಇರಬಹುದು. ಹಾಗಂತ ಅಧಿಕ ಬಡ್ಡಿ ದರ ವಿಧಿಸುವ ಖಾಸಗಿ ವ್ಯಕ್ತಿಗಳ ಮೊರೆ ಹೋಗಬೇಡಿ. ಇದು ಮುಂದೊಂದು ದಿನ ನಿಮ್ಮ ಕುತ್ತಿಗೆಗೆ ಬರುವ ಅಪಾಯವಿದೆ. ಅದರ ಬದಲು ಏನು ಮಾಡಬೇಕು ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ. ನಿಮ್ಮ ಬಳಿ ಷೇರು ಇದ್ದರೆ ಅದರಿಂದ ಸಾಲ ಪಡೆದುಕೊಳ್ಳಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಬದಲಾದ ಜೀವನ ಶೈಲಿ, ಬೆಲೆ ಹೆಚ್ಚಳ ಇತ್ಯಾದಿ ಕಾರಣಗಳಿಂದ ಪ್ರತಿಯೊಬ್ಬರು ಒಂದಲ್ಲ ಒಂದು ಸಲ ಸಾಲದ ಮೊರೆ ಹೋಗಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಬ್ಯಾಂಕ್‌ಗಳೂ ವಿವಿಧ ರೂಪದಲ್ಲಿ ಸಾಲ ಒದಗಿಸುತ್ತವೆ. ಆದರೆ ಕೆಲವೊಂದು ಸಂದರ್ಭದಲ್ಲಿ ಬ್ಯಾಂಕ್‌ನಿಂದ ಸಾಲ ದೊರೆಯಲು ತಡವಾಗಬಹುದು ಅಥವಾ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಬಹುದು. ಈ ವೇಳೆ ಖಾಸಗಿ ವ್ಯಕ್ತಿಗಳ ಬಳಿಯಿಂದ ಲೋನ್‌ ಪಡೆಯುವುದು ಸುರಕ್ಷಿತವಲ್ಲ. ಇದರಲ್ಲಿನ ಅತಿಯಾದ ಬಡ್ಡಿ ಮುಂದೊಂದು ದಿನ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಹಾಗಾದರೆ ಏನು ಮಾಡಬೇಕು? ಚಿನ್ನ ಅಡವಿಡಬಹುದು, ನಿಮ್ಮ ಎಲ್‌ಐಸಿ ಪಾಲಿಸಿ ಮೇಲೆ ಸಾಲ ಪಡೆಯಬಹುದು, ಇಪಿಎಫ್‌ ಅಕೌಂಟ್‌ ಇದ್ದರೆ ಅದರಿಂದಲೂ ಹಣ ವಿತ್‌ಡ್ರಾ ಮಾಡಬಹುದು. ಇದ್ಯಾವುದೂ ಬೇಡ ಎಂದರೆ ನೀವು ಷೇರು ಹೊಂದಿದ್ದರೆ ಅದರ ಆಧಾರದಲ್ಲಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಹಣ ಪಡೆದುಕೊಳ್ಳಹುದು. ಅದು ಹೇಗೆ ಎನ್ನುವುದರ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಷೇರುಗಳ ಮೇಲಿನ ಸಾಲ (Loan against shares)ವನ್ನು ಲೋನ್‌ ಅಗೈಸ್ಟ್‌ ಸೆಕ್ಯುರಿಟೀಸ್(LAS) ಎಂದೂ ಕರೆಯಲಾಗುತ್ತದೆ. ನಿಮ್ಮ ಷೇರುಗಳನ್ನು ಆಧಾರವಾಗಿ ಬಳಸಿಕೊಂಡು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಹಣವನ್ನು ಪಡೆಯುವ ವಿಧಾನ ಇದು. ಸಾಲ ಪಡೆಯಲು ನೀವು ಸೆಕ್ಯುರಿಟಿಗಳನ್ನು (ಸ್ಟಾಕ್‌, ಮ್ಯೂಚುವಲ್ ಫಂಡ್, ಬಾಂಡ್ ಇತ್ಯಾದಿ) ಅಡವಿಡಬೇಕಾಗುತ್ತದೆ.

ಸಾಲದ ಮೊತ್ತ

ಸಾಲದ ಮೊತ್ತವು ಸಾಮಾನ್ಯವಾಗಿ ಅಡವಿಟ್ಟ ಸೆಕ್ಯುರಿಟಿಗಳ ಮಾರುಕಟ್ಟೆ ಮೌಲ್ಯದ ಮೇಲೆ ನಿರ್ಧರಿಸಲಾಗುತ್ತದೆ. ಗಮನಿಸಬೇಕಾದ ಅಂಶ ಎಂದರೆ ಇದು ಸಾಲ ನೀಡುವ ಸಂಸ್ಥೆಯ ಷರತ್ತುಗಳನ್ನು ಅವಲಂಬಿಸಿ ಬದಲಾಗುತ್ತದೆ. ಸಾಮಾನ್ಯವಾಗಿ ನೀವು ಅಡವಿಟ್ಟ ಸೆಕ್ಯುರಿಟಿಗಳ ಮಾರುಕಟ್ಟೆ ಮೌಲ್ಯದ ಶೇ. 50ರಿಂದ ಶೇ. 70ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಸಾಲವಾಗಿ ನಿಮ್ಮ ಕೈ ಸೇರುತ್ತದೆ. ಉದಾಹರಣೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮ್ಮ ಷೇರುಗಳ ಮೇಲೆ 20 ಲಕ್ಷ ರೂ.ಗಳವರೆಗೆ ಸಾಲವನ್ನು ನೀಡುತ್ತದೆ. ಡಿಮ್ಯಾಟ್ ಖಾತೆಯಲ್ಲಿ ಷೇರುಗಳನ್ನು ಹೊಂದಿರುವ ವ್ಯಕ್ತಿಗಳು ಈ ರೀತಿಯ ಸಾಲಕ್ಕೆ ಅರ್ಹರಾಗಿರುತ್ತಾರೆ.

ಇದನ್ನು ಗಮನಿಸಿ

 • ಕನಿಷ್ಠ ಸಾಲದ ಮೊತ್ತ: 50 ಸಾವಿರ ರೂ.
 • ಗರಿಷ್ಠ ಸಾಲದ ಮೊತ್ತ: 20 ಲಕ್ಷ ರೂ.
 • ಓವರ್‌ ಡ್ರಾಫ್ಟ್‌ ರೂಪದಲ್ಲಿ ಸಾಲ ದೊರೆಯುತ್ತದೆ.
 • ಡಿಮ್ಯಾಟ್ ಷೇರುಗಳನ್ನು ಅಡವಿಟ್ಟು ಸಾಲ ಪಡೆದುಕೊಳ್ಳಬಹುದು.
 • ಪ್ರೊಸೆಸೆಂಗ್‌ ಶುಲ್ಕ: ಸಾಲದ ಮೊತ್ತದ 0.75% + ಅನ್ವಯವಾಗುವ ಜಿಎಸ್ಟಿ (ಇದನ್ನು ಮರುಪಾವತಿಸಲಾಗುವುದಿಲ್ಲ).

ಸಾಲ ಪಡೆಯುವ ವಿಧಾನ

 • ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ ಮತ್ತು ನೀವು ಅಡವಿಡಲು ಬಯಸುವ ಸೆಕ್ಯುರಿಟಿಗಳನ್ನು ಆಯ್ಕೆ ಮಾಡಿ.
 • ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿ.
 • ಒಟಿಪಿಯನ್ನು ದೃಢೀಕರಿಸುವ ಮೂಲಕ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಆನ್‌ಲೈನ್‌ನಲ್ಲಿ ಅಡವಿಡಿ. ತಕ್ಷಣ ನಿಮಗೆ ಹಣ ಲಭಿಸುತ್ತದೆ.

ಗಮನಿಸಿ, ಷೇರುಗಳ ಮೇಲಿನ ಸಾಲವನ್ನು ಆಯ್ಕೆ ಮಾಡುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿ, ಸಾಲದ ನಿಯಮಗಳು ಮತ್ತು ಸಂಬಂಧಿತ ಅಪಾಯಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ. ಇದಕ್ಕಾಗಿ ಹಣಕಾಸು ಸಲಹೆಗಾರರಿಂದ ಸಲಹೆ ಪಡೆಯುವುದು ಸೂಕ್ತ.

ಇದನ್ನೂ ಓದಿ: EPFO Pension: ಇಪಿಎಫ್ ಒ ಪಿಂಚಣಿ ಮೊತ್ತ ಹೆಚ್ಚು ಸಿಗಲು ಏನು ಮಾಡಬೇಕು?

Continue Reading

ಮನಿ-ಗೈಡ್

Money Guide: ಸಿಬಿಲ್‌ ಸ್ಕೋರ್‌ ಕಡಿಮೆ ಇದ್ದರೆ ಚಿಂತೆ ಬೇಡ; ಈ ಟಿಪ್ಸ್‌ ಫಾಲೋ ಮಾಡಿ ಹೆಚ್ಚಿಸಿಕೊಳ್ಳಿ

Money Guide: ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯಲು ಸಿಬಿಲ್‌ ಸ್ಕೋರ್‌ ಮುಖ್ಯವಾಗುತ್ತದೆ. ಆದರೆ ಕೆಲವೊಂದು ನಾನಾ ಕಾರಣಗಳಿಂದ ಸಿಬಿಲ್‌ ಸ್ಕೋರ್‌ ಕೆಇಮೆ ಇರುತ್ತದೆ. ಇದರಿಂದ ನಿಮ್ಮ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ. ಹೀಗಾಗದಂತೆ ನೋಡಿಕೊಳ್ಳಲು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯಲು ಸಿಬಿಲ್‌ ಸ್ಕೋರ್‌ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಮುಖ್ಯವಾಗುತ್ತದೆ. ಅಂದರೆ ಉತ್ತಮ ಸಿಬಿಲ್ ಸ್ಕೋರ್ ಅನ್ನು ನೀವು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಹೀಗಾಗಿ ನಿಮ್ಮ ಸಿಬಿಲ್ ಸ್ಕೋರ್‌ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ಸಿಬಿಲ್ ಸ್ಕೋರ್ ಇಲ್ಲದಿದ್ದರೆ ನಿಮ್ಮ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಹೀಗಾಗಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಯಾವತ್ತೂ ಉತ್ತಮ ಸ್ಥಿತಿಯಲ್ಲಿಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಅದನ್ನು ಹೇಗೆ ಸುಧಾರಿಸಬಹುದು? ಅದಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ (Money Guide).

ಹೀಗೆ ಸ್ಕೋರ್‌ ಹೆಚ್ಚಿಸಿ

ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ: ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಧರಿಸುವಲ್ಲಿ ಪಾವತಿ ಇತಿಹಾಸವು ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸಿ; ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಮತ್ತು ವಿಳಂಬ ಮಾಡಬೇಡಿ.

ಮಿತಿಯನ್ನು ಹೆಚ್ಚು ಬಳಸಬೇಡಿ: ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚು ಬಳಸಬೇಡಿ ಮತ್ತು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು (ಸಿಯುಆರ್) 30% ಒಳಗೆ ಇರಿಸಿಕೊಳ್ಳಲು ಪ್ರಯತ್ನಿಸಿ.

ಆಗಾಗ ಪರಿಶೀಲಿಸಿ: ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆಗಾಗ ಪರಿಶೀಲಿಸಿ. ಇದರಿಂದ ನೀವು ಯಾವ ಮಟ್ಟದಲ್ಲಿದ್ದೀರಿ ಎಂಬುದು ತಿಳಿಯುತ್ತದೆ.

ಬೇರೆ ಬೇರೆ ಸಾಲಗಳಿಗೆ ಅರ್ಜಿ ಸಲ್ಲಿಸಬೇಡಿ: ಕಡಿಮೆ ಅವಧಿಯಲ್ಲಿ ಬೇರೆ ಬೇರೆ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬೇಡಿ.

ಚೆಕ್‌ ಬೌನ್ಸ್‌ ಆಗದಿರಲಿ: ಯಾವುದೇ ಕಾರಣಕ್ಕೂ ನಿಮ್ಮ ಚೆಕ್‌ ಬೌನ್ಸ್‌ ಆಗದಂತೆ ನೋಡಿಕೊಳ್ಳಿ.

ಪ್ರಯೋಜನಗಳು

ಹೆಚ್ಚಿನ ಸ್ಕೋರ್‌ ಇದ್ದಾಗ ನೀವು ಬ್ಯಾಂಕ್‌ ಜತೆಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆಯಲು ಚೌಕಾಸಿ ಮಾಡಬಹುದು. ಬ್ಯಾಂಕ್‌ಗಳೂ ಹೆಚ್ಚಿನ ಸ್ಕೋರ್‌ ಇರುವವರಿಗೆ ಸಾಲ ಕೊಡಲು ಮುಂದಾಗುತ್ತವೆ. ಬ್ಯಾಂಕ್‌ ಬಾಜಾರ್‌ ಪ್ರಕಾರ, ಗೃಹ ಸಾಲ ಮತ್ತು ಕಾರು ಸಾಲಗಳ ಬಡ್ಡಿ ದರಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿದ್ದರೂ, ಗರಿಷ್ಠ ಸಿಬಿಲ್‌ ಸ್ಕೋರ್‌ ಇದ್ದರೆ ನೀವು ಬಡ್ಡಿ ದರದಲ್ಲಿ ರಿಯಾಯಿತಿ ಪಡೆಯುವ ಸಾಧ್ಯತೆ ಇದೆ. ಉತ್ತಮ ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಉತ್ತಮ ಕ್ರೆಡಿಟ್‌ ಕಾರ್ಡ್‌ ಆಫರ್‌ಗಳೂ ಲಭಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕ್‌ಗಳು ನೀವು ಈ ಹಿಂದೆ ಯಾವುದಾದರೂ ಸಾಲವನ್ನು ಮರು ಪಾವತಿಸದೆ ಸುಸ್ತಿ ಸಾಲಗಾರರಾಗಿದ್ದೀರಾ ಎಂಬುದನ್ನು ಸಿಬಿಲ್‌ ಮೂಲಕ ತಿಳಿದುಕೊಳ್ಳುತ್ತವೆ. ಆದ್ದರಿಂದ ಸಿಬಿಲ್‌ ಸ್ಕೋರ್‌ ಚೆನ್ನಾಗಿರುವಂತೆ ನೋಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಜತೆಗೆ ಈ ಕೆಳಗಿನ ಅನುಕೂಲಗಳು ಸಿಗುತ್ತವೆ.

 • ಸಾಲಗಳ ಮೇಲಿನ ಕಡಿಮೆ ಬಡ್ಡಿ ದರಗಳು
 • ಹೆಚ್ಚಿನ ಸಾಲದ ಮೊತ್ತಗಳು
 • ದೀರ್ಘ ಅಥವಾ ಹೆಚ್ಚು ಹೊಂದಿಕೊಳ್ಳುವ ಮರುಪಾವತಿ ಅವಧಿಯಂತಹ ನಿಯಮಗಳು
 • ತ್ವರಿತ ಸಾಲ ಮಂಜೂರಾತಿ ಪ್ರಕ್ರಿಯೆ
 • ಸಾಲ ನೀಡುವ ಸಂಸ್ಥೆಗಳ ಹೆಚ್ಚಿನ ಆಯ್ಕೆ

ಪರಿಶೀಲಿಸುವ ವಿಧಾನ

 • ಅಧಿಕೃತ ಸಿಬಿಲ್ ವೆಬ್‌ಸೈಟ್‌ https://www.cibil.com/ಗೆ ಭೇಟಿ ನೀಡಿ
 • ‘Get your CIBIL Score’ ಆಯ್ಕೆ ಮೇಲಿ ಕ್ಲಿಕ್‌ ಮಾಡಿ
 • ‘Click here’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ
 • ನಿಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ. ಗುರುತಿನ ಪುರಾವೆಯನ್ನು ಲಗತ್ತಿಸಿ (ಪಾಸ್‌ಪೋರ್ಟ್‌ / ಪ್ಯಾನ್ ಕಾರ್ಡ್ / ಆಧಾರ್ ಅಥವಾ ಮತದಾರರ ಐಡಿ ನಂಬರ್‌). ನಂತರ ನಿಮ್ಮ ಪಿನ್ ಕೋಡ್, ಹುಟ್ಟಿದ ದಿನಾಂಕ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ
 • ʼAccept and continue’ ಆಪ್ಶನ್‌ ಆಯ್ಕೆ ಮಾಡಿ
 • ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿ.
 • ‘Go to dashboard’ ಮೇಲೆ ಕ್ಲಿಕ್‌ ಮಾಡಿ.

ಇದನ್ನೂ ಓದಿ: EPF Accounts: ಇಪಿಎಫ್ ಖಾತೆಗಳ ಸ್ವಯಂಚಾಲಿತ ವರ್ಗಾವಣೆಗೂ ಇದೆ ಅವಕಾಶ; ಹೀಗೆ ಮಾಡಿ

Continue Reading
Advertisement
DK Suresh
ಬೆಂಗಳೂರು2 mins ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ9 mins ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ31 mins ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Bulldozer Justice
ದೇಶ58 mins ago

Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

ಕರ್ನಾಟಕ59 mins ago

Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

Car Crash
ಕ್ರೀಡೆ1 hour ago

Car Accident : ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು; 7 ಮಂದಿ ಸಾವು; ವಿಡಿಯೊ ಇದೆ

Yuva Rajkumar
ಸಿನಿಮಾ2 hours ago

Yuva Rajkumar: ಯುವ ಅಭಿಮಾನಿಗಳಿಗೆ ನಿರಾಸೆ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌

Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces
Lok Sabha Election 20242 hours ago

Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

JP Nadda
ಕರ್ನಾಟಕ2 hours ago

Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

IPL 2024
ಪ್ರಮುಖ ಸುದ್ದಿ3 hours ago

IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20241 day ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ1 day ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ1 day ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌