Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ! - Vistara News

ಮನಿ-ಗೈಡ್

Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!

Money Guide: ಬ್ಯಾಂಕ್‌ನಿಂದ ಪರ್ಸನಲ್‌ ಲೋನ್‌ ಪಡೆದುಕೊಳ್ಳುವುದು ಸಾಹಸದ ಕೆಲಸವೇ ಸೈ. ಜತೆಗೆ ಬಡ್ಡಿದರವೂ ಹೆಚ್ಚಿರುತ್ತದೆ. ಅದರ ಬದಲು ತೆಗೆದುಕೊಳ್ಳಬಹುದಾದ ಸಾಲಗಳ ವಿವರ ಇಲ್ಲಿದೆ.

VISTARANEWS.COM


on

loan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಸ್ತುತ ಯಾವುದೇ ಸಾಲ ಮಾಡದೆ ಜೀವನ ಸಾಗಿಸುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಅದರಲ್ಲೂ ಮಧ್ಯಮ ವರ್ಗದ ಜನರು ಒಂದಲ್ಲ ಒಂದು ಕಾರಣಕ್ಕೆ ಸಾಲವನ್ನು ಮಾಡಲೇಬೇಕು ಎನ್ನುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಬ್ಯಾಂಕ್‌ನಿಂದ ಪರ್ಸನಲ್‌ ಲೋನ್‌ (Personal loan) ತೆಗೆದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಒಂದು ವೇಳೆ ಸಾಲ ಮಂಜೂರಾದರೂ ಅದಕ್ಕಿರುವ ಬಡ್ಡಿದರ ಹೆಚ್ಚಾಗಿರುತ್ತದೆ. ಹಾಗಾದರೆ ಇದಕ್ಕಿರುವ ಪರ್ಯಾಯ ಮಾರ್ಗಗಳೇನು? ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ಕುಳಿತು ಸಾಲ ಪಡೆದುಕೊಳ್ಳುವ ಸೌಲಭ್ಯವೂ ಈಗ ಲಭ್ಯ. ಮೊಬೈಲ್‌ ಸಹಾಯದಿಂದ ಆನ್‌ಲೈನ್‌ ಮೂಲಕವೇ ಲೋನ್‌ ಪಾಸ್‌ ಮಾಡಿಸಬಹುದು. ಅಂತಹ ವಿವಿಧ ಸಾಲ ಸೌಲಭ್ಯಗಳ ವಿವರ ಇಲ್ಲಿದೆ.

ಪಿಪಿಎಫ್‌

ನೀವು ಉದ್ಯೋಗದಲ್ಲಿದ್ದರೆ ಸಾರ್ವಜನಿಕ ಭವಿಷ್ಯ ನಿಧಿಯಿಂದ (PPF) ಸಾಲ ತೆಗೆದುಕೊಳ್ಳಬಹುದು. ನಿಮ್ಮ ಪಿಪಿಎಫ್‌ನಲ್ಲಿರುವ ಹಣದ ಮೇಲೆ ನೀವು ಸಾಲವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಕನಿಷ್ಠ ಒಂದು ವರ್ಷದವರೆಗೆ ಪಿಪಿಎಫ್ ಖಾತೆಯನ್ನು ಹೊಂದಿರುವುದು ಅಗತ್ಯ. ನಿಮ್ಮ ಪಿಪಿಎಫ್‌ ಖಾತೆಯಲ್ಲಿರುವ ಮೊತ್ತದ ಆಧಾರದ ಮೇಲೆ ಸಾಲ ದೊರೆಯುತ್ತದೆ. ಪರ್ಸನಲ್ ಲೋನ್‌ಗೆ ಹೋಲಿಸಿದರೆ ಇದರಲ್ಲಿ ಬಡ್ಡಿದರ ಕಡಿಮೆ.

ಚಿನ್ನದ ಮೇಲಿನ ಸಾಲ

ಆಭರಣವಾಗಿ ಮಾತ್ರವಲ್ಲದೆ ಚಿನ್ನ ಆದಾಯದ ಮೂಲವಾಗಿಯೂ ಕಷ್ಟಕಾಲದಲ್ಲಿ ನೆರವಾಗುತ್ತದೆ. ಚಿನ್ನದ ಮೇಲಿನ ಸಾಲ ದುಡ್ಡಿನ ಆವಶ್ಯಕತೆಯನ್ನು ನೆರವೇರಿಸುತ್ತದೆ. ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲ 2ರಿಂದ 3 ದಿನಗಳಲ್ಲಿ ದೊರೆಯುತ್ತದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ (Non-banking Financial Company)ಗಳು 1.5 ಕೋಟಿ ರೂ.ಗಳವರೆಗೆ ಚಿನ್ನದ ಸಾಲವನ್ನು ನೀಡುತ್ತವೆ. ಈ ಸಾಲವನ್ನು ಪಡೆಯಲು ನಿಮ್ಮ ಚಿನ್ನದ ಆಭರಣಗಳನ್ನು ಅಡ ಇಡವಿಟ್ಟರೆ ಸಾಕು. ಬ್ಯಾಂಕ್ ಅವುಗಳನ್ನು ಸುರಕ್ಷಿತವಾಗಿ ತೆಗೆದಿರಿಸುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ನೀವು ಅಡವಿಟ್ಟ ಚಿನ್ನವನ್ನು ಹಿಂಪಡೆಯಬಹುದು. ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಸಾಲವನ್ನು ಕಡಿಮೆ ಬಡ್ಡಿದರದೊಂದಿಗೆ ಒದಗಿಸಲಾಗುತ್ತದೆ. ಇದು ಸಾಮಾನ್ಯವಾಗಿ ಶೇ. 8ರಷ್ಟು ವಾರ್ಷಿಕ ದರದಲ್ಲಿ ಪ್ರಾರಂಭವಾಗುತ್ತದೆ. 

ಇದನ್ನೂ ಓದಿ: Money Guide: ತುರ್ತು ಸಂದರ್ಭದಲ್ಲಿ ನೆರವಾಗುವ ಹೋಮ್‌ಲೋನ್‌ ಇನ್ಶೂರೆನ್ಸ್‌; ಏನಿದರ ಮಹತ್ವ?

ಎಲ್‌ಐಸಿ

ನಿಮ್ಮ ಬಳಿ ಎಲ್ಐಸಿ ಪಾಲಿಸಿ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಗೋಲ್ಡ್ ಲೋನ್‌ ಸಂದರ್ಭದಲ್ಲಿ ನೀವು ಸೆಕ್ಯೂರಿಟಿ ರೂಪದಲ್ಲಿ ಚಿನ್ನಾಭರಣ ಇಡುವಂತೆ ಇಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಇಡಬೇಕಾಗುತ್ತದೆ. ಒಂದು ವೇಳೆ ಸಾಲ ಕಟ್ಟಲು ಸಾಧ್ಯವಾಗದೇ ಇದ್ದಲ್ಲಿ ಸಂಸ್ಥೆ ಎಲ್ಐಸಿ ಪಾಲಿಸಿಯಲ್ಲಿರುವ ಹಣವನ್ನು ಕಡಿತಗೊಳಿಸುತ್ತದೆ. ಎಲ್‌ಐಸಿ ಸಾಲ ಪಡೆಯಲು ನೀವು ಕನಿಷ್ಠಪಕ್ಷ ಮೂರು ವರ್ಷಗಳ ಪ್ರೀಮಿಯಂ ಕಟ್ಟಿರಬೇಕು. ಎಲ್ಐಸಿ ಗ್ರಾಹಕರು ಮಾತ್ರ ಈ ಲೋನ್ ಪಡೆದುಕೊಳ್ಳಬಹುದಾಗಿದ್ದು, ಅವರ ಪಾಲಿಸಿ ಲೋನ್ ಅರ್ಹತೆಯನ್ನು ಹೊಂದಿರುವುದು ಮುಖ್ಯ. ಎಲ್ಐಸಿ ಮೂಲಕ ಲೋನ್ ಪಡೆದುಕೊಳ್ಳುವವರಿಗೆ ವಾರ್ಷಿಕ 9 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಜತೆಗೆ ಬಡ್ಡಿದರವನ್ನು ಎಲ್ಐಸಿ ಪಾಲಿಸಿಯ ಪ್ರೊಫೈಲ್ ಮೇಲೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ನಿಮ್ಮ ಪಾಲಿಸಿಯ ಮೌಲ್ಯದ 90 ಪ್ರತಿಶತ ಲೋನ್ ಹಣವನ್ನು ಪಡೆದುಕೊಳ್ಳಬಹುದು. ಸಾಲದ ಮರುಪಾವತಿಯ ಅವಧಿ ಕನಿಷ್ಠ ಆರು ತಿಂಗಳಿಂದ ಪ್ರಾರಂಭಿಸಿ ಗರಿಷ್ಠ ಐದು ವರ್ಷಗಳವರೆಗೆ ಇರುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

Money Guide: ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಂತದಲ್ಲಿದ್ದೇವೆ. ಹೀಗಾಗಿ ಸರ್ಕಾರ ಕೆಲವೊಂದು ಹಣಕಾಸು ನಿಯಮಗಳಲ್ಲಿ ಭಾರೀ ಬದಲಾವಣೆಗೆ ಮುಂದಾಗಿದೆ. ಅವು ಏನೇನು ಎನ್ನುವ ವಿವರ ಇಲ್ಲಿದೆ.

VISTARANEWS.COM


on

500 notes
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಂತದಲ್ಲಿದ್ದೇವೆ. ಹೀಗಾಗಿ ಸರ್ಕಾರ ಕೆಲವೊಂದು ಹಣಕಾಸು ನಿಯಮಗಳಲ್ಲಿ ಭಾರೀ (Financial Rules Change) ಬದಲಾವಣೆಗೆ ಮುಂದಾಗಿದೆ. ಒಂದಷ್ಟು ನಿಯಮಗಳು ಜನರಿಗೆ ಅನುಕೂಲವಾಗಿದ್ದರೆ, ಮತ್ತೊಂದಿಷ್ಟು ನಿಯಮಗಳು ನಾಗರಿಕರ ಜೇಬಿಗೆ ಭಾರವಾಗಲಿವೆ. ಇನ್ನೂ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳದಿದ್ದರೆ ನಮಗೇ ನಷ್ಟವಾಗುತ್ತದೆ. ಜತೆಗೆ ದಂಡವೂ ಬೀಳುತ್ತದೆ. ಹಾಗಾದರೆ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇವು ಹೇಗೆ ನಮ್ಮ ಮೇಲೆ ಬೀಳುತ್ತದೆ? ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಆಧಾರ್‌ ಕಾರ್ಡ್‌ ಉಚಿತ ಅಪ್‌ಡೇಟ್‌: ಮಾರ್ಚ್‌ 14

ಆಧಾರ್‌ ಕಾರ್ಡ್‌ನಲ್ಲಿ ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದಾದ ಅವಕಾಶ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India-UIDAI) ನೀಡಿದ್ದ ಅವಕಾಶ 2024ರ ಮಾರ್ಚ್‌ 14ಕ್ಕೆ ಮುಗಿಯಲಿದ್ದು, ಅದಕ್ಕಿಂತ ಮೊದಲೇ ಮಾಡಿಸಿಕೊಳ್ಳಬೇಕು. https://myaadhaar.uidai.gov.in/ ವೆಬ್‌ಸೈಟ್‌ ಭೇಟಿ ನೀಡಿ ಉಚಿತವಾಗಿ ನವೀಕರಿಸಿ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ: ಮಾರ್ಚ್‌ 31

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ಎಸ್‌ಬಿಐ ವಿಕೇರ್‌ ಸೀನಿಯರ್‌ ಸಿಟಿಜನ್‌ ಎಫ್‌ಡಿ: ಮಾರ್ಚ್‌ 31

ಎಸ್‌ಬಿಐ ವಿಕೇರ್‌ (SBI WeCare) 7.50% ಬಡ್ಡಿ ಒದಗಿಸುತ್ತದೆ. ಹಿರಿಯ ನಾಗರಿಕರು ಹೂಡಿಕೆ ಮಾಡಲು ಮಾರ್ಚ್‌ 31 ಕೊನೆಯ ದಿನ.

ಎಸ್‌ಬಿಐ ಗೃಹ ಸಾಲದ ಬಡ್ಡಿದರ ರಿಯಾಯಿತಿ: ಮಾರ್ಚ್ 31

ಎಸ್‌ಬಿಐ ಗೃಹ ಸಾಲಗಳ ಮೇಲಿನ ವಿಶೇಷ ಅಭಿಯಾನದ ರಿಯಾಯಿತಿ ಮಾರ್ಚ್ 31, 2024ರ ವರೆಗೆ ಅನ್ವಯವಾಗುತ್ತದೆ. ಎಲ್ಲ ಗೃಹ ಸಾಲಗಳಿಗೆ ಈ ರಿಯಾಯಿತಿ ಮಾನ್ಯವಾಗಿರುತ್ತದೆ. ಸಿಬಿಲ್ ಸ್ಕೋರ್ ಅನ್ನು ಅವಲಂಬಿಸಿ ಗೃಹ ಸಾಲದ ಮೇಲಿನ ಬಡ್ಡಿದರವು ಬದಲಾಗುತ್ತದೆ.

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಗಡುವು: ಮಾರ್ಚ್‌ 15

ಮಾರ್ಚ್‌ 15ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ವಿಧಿಸಿದೆ. ಗ್ರಾಹಕರ ಖಾತೆಗಳಲ್ಲಿ ಠೇವಣಿ, ಸಾಲ ವಹಿವಾಟು ಮತ್ತು ಟಾಪ್-ಅಪ್​ಗಳನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನೀಡಿದ್ದ ಗಡುವನ್ನು ಮಾರ್ಚ್‌ 15ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಫೆಬ್ರವರಿ 29ರ ವರೆಗೆ ಗಡುವು ನೀಡಲಾಗಿತ್ತು.

ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿ: ಮಾರ್ಚ್‌ 31

ಐಡಿಬಿಐ ಬ್ಯಾಂಕ್ ಉತ್ಸವ್ ಕ್ಯಾಲಬಲ್ ಎಫ್‌ಡಿ 300 ದಿನಗಳು, 375 ದಿನಗಳು ಮತ್ತು 444 ದಿನಗಳ ವಿಶೇಷ ಅವಧಿಯ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಇದು ಕ್ರಮವಾಗಿ 7.05%, 7.10% ಮತ್ತು 7.25% ಬಡ್ಡಿದರಗಳನ್ನು ನೀಡುತ್ತದೆ. ಇದು ಮಾರ್ಚ್ 31, 2024ರ ವರೆಗೆ ಅನ್ವಯವಾಗುತ್ತದೆ.

ತೆರಿಗೆ ಉಳಿತಾಯ ಯೋಜನೆ: ಮಾರ್ಚ್‌ 31

2023-2024ರ ಹಣಕಾಸು ವರ್ಷದ ತೆರಿಗೆ ಉಳಿತಾಯ ಯೋಜನೆ ಪೂರ್ಣಗೊಳಿಸುವ ಗಡುವು ಮಾರ್ಚ್ 31. ಏಪ್ರಿಲ್ 1, 2023ರಲ್ಲಿ ಹೊಸ ತೆರಿಗೆ ನಿಯಮ ಜಾರಿಯಾಗಿತ್ತು. ಹೊಸ ತೆರಿಗೆ ವ್ಯವಸ್ಥೆಯು ಹಣಕಾಸು ವರ್ಷ 2023-2024ರಿಂದ ಡೀಫಾಲ್ಟ್ ಆಗಿದೆ. ಆದ್ದರಿಂದ ಉದ್ಯೋಗಿಗಳು ಏಪ್ರಿಲ್ 2023ಕ್ಕಿಂತ ಮೊದಲು ತೆರಿಗೆ ಆಡಳಿತವನ್ನು ಆಯ್ಕೆ ಮಾಡಬೇಕು.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ನ ಕನಿಷ್ಠ ಮೊತ್ತದ ನಿಯಮ: ಮಾರ್ಚ್‌ 15

ಎಸ್‌ಬಿಐ ಕ್ರೆಡಿಟ್ ಕಾರ್ಡ್ ದಿನಕ್ಕೆ ಕನಿಷ್ಠ ಬಿಲ್‌ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುತ್ತಿದೆ. ಹೊಸ ನಿಯಮಗಳು ಮಾರ್ಚ್ 15ರಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಕಾರ್ಡ್ ಹೊಂದಿರುವವರಿಗೆ ಮಾಹಿತಿ ನೀಡಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಮುಂಗಡ ತೆರಿಗೆ ಪಾವತಿಯ ನಾಲ್ಕನೇ ಕಂತು ಕೊನೆಯ ದಿನ: ಮಾರ್ಚ್ 15

2023-24ರ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆಯ ನಾಲ್ಕನೇ ಕಂತನ್ನು ಠೇವಣಿ ಮಾಡಲು 2024ರ ಮಾರ್ಚ್ 15 ಕೊನೆಯ ದಿನಾಂಕ. ಮುಂಗಡ ತೆರಿಗೆಯನ್ನು ಜಮಾ ಮಾಡುವಂತೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ನಿರಂತರ ಸಂದೇಶ ಕಳುಹಿಸುತ್ತಿದೆ.

ಇದನ್ನೂ ಓದಿ: Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?

Continue Reading

ಮನಿ-ಗೈಡ್

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Money Guide: ಪ್ರಸ್ತುತ ಪ್ರತಿಯೊಬ್ಬರೂ ವಿಮೆಯನ್ನು ಹೊಂದಿರಲೇಬೇಕು ಎಂದು ಆರ್ಥಿಕ ತಜ್ಞರು ಕರೆ ನೀಡುತ್ತಾರೆ. ಹಾಗಾದರೆ ಸಾಮಾನ್ಯ ವಿಮೆ ಮತ್ತು ಜೀವ ವಿಮೆಗಳ ಪೈಕಿ ಯಾವುದು ಉತ್ತಮ? ಯಾವುದನ್ನು ಹೊಂದಿರಬೇಕು? ಎರಡೂ ಇದ್ದರೆ ಪ್ರಯೋಜನವೇನು? ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

VISTARANEWS.COM


on

insurance
Koo

ಬೆಂಗಳೂರು: ಆರ್ಥಿಕ ಸದೃಢತೆಗೆ ವಿಮೆ (Insurance) ಎನ್ನುವುದು ಬಹು ಮುಖ್ಯ. ಇದು ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ದೃಢತೆ ಮಾತ್ರವಲ್ಲದೆ ಮಾನಸಿಕ ನೆಮ್ಮದಿ ನೀಡುತ್ತದೆ, ಅನಿರೀಕ್ಷಿತ ಆರ್ಥಿಕ ಹೊರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ನಿಮ್ಮ ದೀರ್ಘ ಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ರೀತಿಯ ವಿಮೆ ಲಭ್ಯವಿದೆ. ಇವು ಪ್ರತಿಯೊಂದು ವ್ಯಕ್ತಿಯ ವಿಭಿನ್ನ ಆವಶ್ಯಕತೆಗಳು ಮತ್ತು ಅಗತ್ಯಗಳನ್ನು ಪೂರೈಸುತ್ತವೆ. ಇನ್ಶೂರೆನ್ಸ್‌ ಅನ್ನು ಸಾಮಾನ್ಯ ವಿಮೆ (General Insurance) ಮತ್ತು ಜೀವ ವಿಮೆ (Life Insurance) ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಎರಡು ವರ್ಗಗಳ ವಿಶೇಷತೆ, ಇವು ಹೇಗೆ ಪರಸ್ಪರ ಭಿನ್ನ ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಸಾಮಾನ್ಯ ವಿಮೆ (General Insurance)

 • ಸಾಮಾನ್ಯ ವಿಮೆಯು ನಮ್ಮ ಸ್ವತ್ತುಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಆರೋಗ್ಯ ವಿಮೆ, ಮೋಟಾರು ವಿಮೆ, ಗೃಹ ವಿಮೆ, ಪ್ರಯಾಣ ವಿಮೆಯಂತಹ ವಿವಿಧ ರೀತಿಗಳಿವೆ.
 • ಸಾಮಾನ್ಯ ವಿಮಾ ಪಾಲಿಸಿಗಳು ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳವು ಮತ್ತು ಚಿಕಿತ್ಸೆಯಂತಹ ಅನಿರೀಕ್ಷಿತ ವೆಚ್ಚಗಳಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
 • ಸಾಮಾನ್ಯ ವಿಮೆಯ ಅಡಿಯಲ್ಲಿ ಕವರೇಜ್ ಸಾಮಾನ್ಯವಾಗಿ ಒಂದು ನಿರ್ದಿಷ್ಟ ಅವಧಿಗೆ ಇರುತ್ತದೆ ಮತ್ತು ಪಾಲಿಸಿದಾರರು ನಿಯಮಿತ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ.
 • ಈ ವಿಮಾ ಪಾಲಿಸಿ ಯಾವುದೇ ಆದಾಯ ಅಥವಾ ಉಳಿತಾಯ ಪ್ರಯೋಜನಗಳನ್ನು ನೀಡುವುದಿಲ್ಲ. ಅಪಾಯ ಸಂಭವಿಸಿದಾಗ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಜನರಲ್‌ ಇನ್ಶೂರೆನ್ಸ್‌ನ ವಿಧಗಳು

 • ಆರೋಗ್ಯ ವಿಮೆ (Health Insurance): ವೈದ್ಯಕೀಯ ವೆಚ್ಚಗಳಾದ ಕಾಯಿಲೆಗಳಿಗೆ ಚಿಕಿತ್ಸೆ, ಅಡ್ಮಿಟ್‌ ವೆಚ್ಚ ಮತ್ತು ಅಪಘಾತ ಮುಂತಾದ ಸಂದರ್ಭದಲ್ಲಿ ಆರೋಗ್ಯ ವಿಮೆ ನೆರವಾಗುತ್ತದೆ.
 • ಮೋಟಾರು ವಿಮೆ (Motor Insurance): ಇದು ನಿಮ್ಮ ವಾಹನಕ್ಕೆ ಆಗುವ ಹಾನಿ, ಅಪಘಾತಗಳ ಸಂದರ್ಭದಲ್ಲಿ ಮೂರನೇ ವ್ಯಕ್ತಿಗಳಿಗೆ ನೀಡಬೇಕಾದ ಪರಿಹಾರಗಳನ್ನು ಒಳಗೊಂಡಿದೆ. ಮಾತ್ರವಲ್ಲ ವಾಹನ ಕಳವಾದಾಗ ನೆರವಿಗೆ ಬರುತ್ತದೆ. ಭಾರತದಲ್ಲಿ ಮೋಟಾರು ವಿಮೆ ಕಡ್ಡಾಯ.
 • ಪ್ರಯಾಣ ವಿಮೆ (Travel Insurance): ಈ ವಿಮೆ ನಿಮ್ಮ ಪ್ರಯಾಣದ ಸಮಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಕಳೆದುಹೋದ ಬ್ಯಾಗ್‌, ಪ್ರವಾಸ ವಿಳಂಬ ಇತ್ಯಾದಿಗಳನ್ನು ಒಳಗೊಂಡಿದೆ.
 • ಗೃಹ ವಿಮೆ (Home Insurance): ಇದು ಬೆಂಕಿ, ನೈಸರ್ಗಿಕ ವಿಪತ್ತು, ಕಳವು ಇತ್ಯಾದಿಗಳಿಂದ ನಿಮ್ಮ ಮನೆಯನ್ನು ರಕ್ಷಿಸುತ್ತದೆ.

ಜೀವ ವಿಮೆ (Life Insurance)

 • ಜೀವ ವಿಮೆಯು ಪಾಲಿಸಿದಾರನ ಮರಣದ ನಂತರ ಕುಟುಂಬ ಅಥವಾ ಅವಲಂಬಿತರಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
 • ಜೀವ ವಿಮಾ ಪಾಲಿಸಿಗಳು ಜೀವ ವಿಮೆಯ ಜತೆಗೆ ಉಳಿತಾಯ ಮತ್ತು ಹೂಡಿಕೆ ಪ್ರಯೋಜನಗಳನ್ನು ಸಹ ನೀಡುತ್ತವೆ. ಈ ಪಾಲಿಸಿಗಳಲ್ಲಿ ಎಂಡೋಮೆಂಟ್ ಯೋಜನೆಗಳು, ಸಂಪೂರ್ಣ ಜೀವ ಯೋಜನೆಗಳು, ಟರ್ಮ್ ಇನ್ಶೂರೆನ್ಸ್ ಯೋಜನೆಗಳು ಮತ್ತು ಯುನಿಟ್-ಲಿಂಕ್ಡ್ ಇನ್ಶೂರೆನ್ಸ್ ಯೋಜನೆಗಳು (ಯುಲಿಪ್) ಸೇರಿವೆ.
 • ಜೀವ ವಿಮಾ ಪಾಲಿಸಿಯ ಪ್ರಕಾರವನ್ನು ಅವಲಂಬಿಸಿ ಇದು ಡೆತ್ ಬೆನಿಫಿಟ್ ಜತೆಗೆ ಮೆಚ್ಯೂರಿಟಿ ಪ್ರಯೋಜನ ಮತ್ತು ಬೋನಸ್‌ಗಳನ್ನು ನೀಡಡುತ್ತದೆ.
 • ಜೀವ ವಿಮಾ ಪಾಲಿಸಿಯ ನಿರ್ದಿಷ್ಟ ಅವಧಿಯವರೆಗೆ ಪಾಲಿಸಿದಾರರು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಲೈಫ್‌ ಇನ್ಶೂರೆನ್ಸ್‌ನ ವಿಧಗಳು

 • ಟರ್ಮ್ ಇನ್ಶೂರೆನ್ಸ್ (Term Insurance): ಇದು ಒಂದು ನಿರ್ದಿಷ್ಟ ಅವಧಿಗೆ (ಉದಾಹರಣೆ 20 ವರ್ಷಗಳು) ರಿಸ್ಕ್ ಕವರ್ ಅನ್ನು ಒಳಗೊಂಡಿದೆ.
 • ಎಂಡೋಮೆಂಟ್‌ ಪ್ಲ್ಯಾನ್ಸ್‌ (Endowment Plans): ವಿಮೆಯನ್ನು ಉಳಿತಾಯದೊಂದಿಗೆ ಸಂಯೋಜಿಸುತ್ತದೆ. ಪಾಲಿಸಿದಾರ ಪಾಲಿಸಿಯ ಅಂತ್ಯದವರೆಗೆ ಬದುಕುಳಿದರೆ ಅಥವಾ ಪಾಲಿಸಿ ಅವಧಿಯಲ್ಲಿ ಮರಣ ಹೊಂದಿದರೆ ಪಾವತಿಯನ್ನು ದೊರೆಯುತ್ತದೆ.
 • ಯುಲಿಪ್ (ULIPs): ಇವು ಕೂಡ ಇವು ಎಂಡೋಮೆಂಟ್ ಯೋಜನೆಗಳ ರೀತಿಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ನಿಮ್ಮ ಹಣದ ಒಂದು ಭಾಗವನ್ನು ಮಾರುಕಟ್ಟೆ-ಲಿಂಕ್ಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಯಾವುದು ಉತ್ತಮ?

ಸಾಮಾನ್ಯ ವಿಮೆ: ನಿಮ್ಮ ಸ್ವತ್ತುಗಳನ್ನು ರಕ್ಷಿಸಲು ಮತ್ತು ಅನಿರೀಕ್ಷಿತ ಘಟನೆಗಳಿಗೆ ಸಂಬಂಧಿಸಿದ ಆರ್ಥಿಕ ಅಪಾಯಗಳನ್ನು ತಗ್ಗಿಸಲು ಸಾಮಾನ್ಯ ವಿಮೆಯನ್ನು ಹೊಂದಿರುವುದು ಅತ್ಯಗತ್ಯ. ಉದಾಹರಣೆಗೆ: ಆರೋಗ್ಯ ವಿಮೆಯು ವೈದ್ಯಕೀಯ ವೆಚ್ಚಗಳ ಸಂದರ್ಭದಲ್ಲಿ ನೆರವಾಗುತ್ತದೆ, ಮೋಟಾರು ವಿಮೆಯು ನಿಮ್ಮ ವಾಹನವನ್ನು ರಕ್ಷಿಸುತ್ತದೆ ಮತ್ತು ಗೃಹ ವಿಮೆಯು ನೈಸರ್ಗಿಕ ವಿಪತ್ತುಗಳು ಅಥವಾ ಇತರ ಅಪಾಯಗಳಿಂದ ಉಂಟಾಗುವ ಹಾನಿಗಳ ವಿರುದ್ಧ ನಿಮ್ಮ ಮನೆಯನ್ನು ರಕ್ಷಿಸುತ್ತದೆ.

ಜೀವ ವಿಮೆ: ಪಾಲಿಸಿದಾರನ ಆದಾಯವನ್ನು ಅವಲಂಬಿಸಿರುವ ಕುಟುಂಬ ಸದಸ್ಯರಿಗೆ ಪಾಲಿಸಿದಾರನ ಅಕಾಲಿಕ ಮರಣದ ನಂತರವೂ ನೆರವಾಗಬೇಕು ಎಂದಿದ್ದರೆ ಜೀವ ವಿಮೆ ಉತ್ತಮ ಆಯ್ಕೆ. ಜೀವ ವಿಮೆಯು ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ಒದಗಿಸುತ್ತದೆ. ಇದು ಅವರ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು, ಸಾಲಗಳನ್ನು ತೀರಿಸಲು ಅಥವಾ ಶಿಕ್ಷಣ ಮತ್ತು ಮದುವೆಯಂತಹ ಭವಿಷ್ಯದ ವೆಚ್ಚಗಳನ್ನು ಭರಿಸಲು ಅನುವು ಮಾಡಿಕೊಡುತ್ತದೆ.

ಒಟ್ಟಿನಲ್ಲಿ ಎರಡು ವಿಮೆಗಳೂ ಮುಖ್ಯ. ಸಾಮಾನ್ಯ ವಿಮೆ ಮತ್ತು ಜೀವ ವಿಮೆ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ. ಹೀಗಾಗಿ ಎರಡೂ ರೀತಿಯ ವಿಮೆಯನ್ನು ಹೊಂದಿರುವುದು ಉತ್ತಮ. ಇದು ಸಮಗ್ರ ಆರ್ಥಿಕ ರಕ್ಷಣೆ ಮತ್ತು ಮಾನಸಿಕ ನೆಮ್ಮದಿಯನ್ನು ಒದಗಿಸುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?

Continue Reading

ಮನಿ-ಗೈಡ್

Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?

Money Guide: ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಫಲಾನುಭವಿಗಳಿಗೆ ಇಲ್ಲಿದೆ ಗುಡ್‌ನ್ಯೂಸ್‌. ಯೋಜನೆಯ 16ನೇ ಕಂತನ್ನು ನಾಳೆ (ಫೆಬ್ರವರಿ 28) ಪ್ರಧಾನ ಮಂತ್ರಿ ನರೇಂದ್ರ ಮೋದಿ ರಿಲೀಸ್‌ ಮಾಡಲಿದ್ದಾರೆ.

VISTARANEWS.COM


on

farmer
Koo

ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Yojana)ಯನ್ನು 2೦19ರಲ್ಲಿ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 6,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಈ ಯೋಜನೆಯ 16ನೇ ಕಂತು ಬಿಡುಗಡೆ ದಿನ ನಿಗದಿ ಪಡಿಸಲಾಗಿದೆ. ಹಾಗಾದರೆ ಯಾವಾಗ ಹಣ ಜಮೆ ಆಗಲಿದೆ ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಸದ್ಯ ಫಲಾನುಭವಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತು ದೊರೆಯಬೇಕಿದೆ. ಮೂಲಗಳ ಪ್ರಕಾರ ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ 16ನೇ ಕಂತನ್ನು ನಾಳೆ (ಫೆಬ್ರವರಿ 28) ಪ್ರಧಾನ ಮಂತ್ರಿ ನರೇಂದ್ರ ಮೋದಿ ರಿಲೀಸ್‌ ಮಾಡಲಿದ್ದಾರೆ.

3 ಕಂತುಗಳಲ್ಲಿ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಯೋಜನೆ ಆರಂಭವಾಗಿ 4 ವರ್ಷಗಳಲ್ಲಿ ಕೇಂದ್ರ ಇಲ್ಲಿಯವರೆಗೆ ಸುಮಾರು 2.50 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಿದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಈ ಯೋಜನೆ ನೆರವಾಗುತ್ತಿದೆ.

ಹೀಗೆ ಚೆಕ್‌ ಮಾಡಿ

ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್‌ಲೈನ್‌ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದಕ್ಕಾಗಿ ಮಾಡಬೇಕಾದುದು ಇಷ್ಟೆ.

 • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
 • ಆಗ ಓಪನ್‌ ಆಗುವ ಪೇಜ್‌ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ
 • ರಿಜಿಸ್ಟ್ರೇಷನ್‌ ನಂಬರ್‌ ನಮೂದಿಸಿ, ಕ್ಯಾಪ್ಚ ಕೋಡ್‌ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ
 • ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್‌ ಮೇಲೆ ಮೂಡುತ್ತದೆ.

ಗಮನಿಸಿ: ಪಿಎಂ ಕಿಸಾನ್ ಸಮ್ಮಾನ್‌ ಯೋಜನೆಯ ಪ್ರಯೋಜನವನ್ನು ಪಡೆಯಲು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಹೆಸರು ನೋಂದಾಯಿಸುವ ವಿಧಾನ

 • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
 •  ‘New Farmer Registration’ ಆಯ್ಕೆ ಮೇಲೆ ಕಲಿಕ್‌ ಮಾಡಿ ಮತ್ತು ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಕ್ಯಾಪ್ಚ ಕೋಡ್‌ ಭರ್ತಿ ಮಾಡಿ
 • ಅಗತ್ಯ ಮಾಹಿತಿ ತುಂಬಿ ‘Yes’ ಬಟನ್‌ ಕ್ಲಿಕ್‌ ಮಾಡಿ
 • ಅರ್ಜಿ ಫಾರಂ ತುಂಬಿ, ಸೇವ್‌ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್‌ ಔಟ್‌ ತೆಗೆದಿಡಿ.

ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

 • ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ
 • ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
 • ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
 • ‘Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

ಇದನ್ನೂ ಓದಿ: Money Guide: ಮನೆ ಖರೀದಿಗೆ ಮುಂದಾಗಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇ ಬೇಕು

Continue Reading

ಮನಿ-ಗೈಡ್

Money Guide : ಸೈಬರ್‌ ವಂಚಕರಿಂದ ನಿಮ್ಮ ಹಣ ರಕ್ಷಿಸಿಕೊಳ್ಳೋದು ಹೇಗೆ?

ಸೈಬರ್‌ ವಂಚನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಮ್ಮ ಹಣವನ್ನು ರಕ್ಷಿಸುವುದು ಹೇಗೆ ( Money Guide) ಎಂಬುದನ್ನು ವಿವರಿಸಿದ್ದಾರೆ ಸೈಬರ್‌ ತಜ್ಞ ಸತೀಶ್‌ ವೆಂಕಟಸುಬ್ಬು

VISTARANEWS.COM


on

Cyber fraud cases on the rise in Bengaluru
Koo

ಸೈಬರ್‌ ವಂಚನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಂತೂ ( Money Guide) ದಿನೇದಿನೆ ಸೈಬರ್‌ ವಂಚನೆಯ ಪ್ರಕರಣಗಳು ನಡೆಯುತ್ತಿವೆ. ಖ್ಯಾತ ಸೈಬರ್‌ ತಜ್ಞ ಸತೀಶ್‌ ವೆಂಕಟಸುಬ್ಬು ಅವರು ಸೈಬರ್‌ ಕ್ರೈಮ್‌ ಎಂಬ ಪುಸ್ತಕವನ್ನು ಬರೆದಿದ್ದಾರೆ. ವಿಸ್ತಾರ ಮನಿಪ್ಲಸ್‌ನಲ್ಲಿ ಸೈಬರ್‌ ವಂಚನೆಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಸತೀಶ್‌ ವೆಂಕಟಸುಬ್ಬು ಅವರು ನೀಡಿದ್ದಾರೆ.

ಸೈಬರ್‌ ಕ್ರೈಮ್‌ ಪುಸ್ತಕದಲ್ಲಿ 26 ಸೈಬರ್‌ ಕ್ರೈಮ್‌ಗಳ ಬಗ್ಗೆ ನಾನು ಬರೆದಿದ್ದೇನೆ. ಈ ಪ್ರತಿಯೊಂದು ಪ್ರಕರಣದಲ್ಲೂ ಅದರದ್ದೇ ಆದ ವಿಧಾನಗಳಿವೆ. ಆದರೆ ಎಲ್ಲ ಡಿಜಿಟಲ್‌ ಟ್ರಾನ್ಸಕ್ಷನ್‌ಗಳ ಸಂದರ್ಭ ಅಪರಿಚಿತ ಸಂದೇಶಗಳಿಗೆ ಮಾರು ಹೋಗಬಾರದು ಎನ್ನುವ ಸೂತ್ರ ಎಲ್ಲ ಪ್ರಕರಣಗಳಿಗೂ ಅನ್ವಯ. ಸಂದೇಶಗಳು ಎಲ್ಲಿಂದ ಬಂದಿವೆ ಎಂಬುದನ್ನು ತಾಳ್ಮೆಯಿಂದ ತಿಳಿದುಕೊಳ್ಳಬೇಕು. ದೃಢೀಕರಣವಾದ ಬಳಿಕವಷ್ಟೇ ಸಂದೇಶಗಳಿಗೆ ಸ್ಪಂದಿಸಬೇಕು. ಯಾವುದೇ ಅಪರಿಚಿತ ಕರೆ ಅಥವಾ ಮೆಸೇಜ್‌ ಬಂದರೆ ಎಚ್ಚೆತ್ತುಕೊಳ್ಳಬೇಕು. ಅವುಗಳಿಗೆ ಒಟಿಪಿ ನೀಡಬಾರದು. ಇಷ್ಟು ಮಾಡಿದರೆ 70-80% ಸೈಬರ್‌ ಕ್ರೈಮ್‌ ನಿಂದ ಪಾರಾಗಬಹುದು.

ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ ಅನ್ನು ಅನವಶ್ಯಕವಾಗಿ ಯಾರಿಗೂ ಕೊಡಬೇಡಿ. ಭಾರತ ಈಗ ಡಿಜಿಟಲ್‌ ವರ್ಗಾವಣೆಗಳಿಗೆ ಮುಂಚೂಣಿಯಲ್ಲಿದೆ. ಹೀಗಾಗಿ ವ್ಯವಹರಿಸುವಾಗ ಸಾಕಷ್ಟು ಜಾಗರೂಕತೆಯಿಂದಿರಿ. ನಿಮ್ಮ ಪರ್ಸಲ್ಲಿ ನೀವು ನಿಮ್ಮೆಲ್ಲ ಹಣ ಇಡುವುದಿಲ್ಲ ಅಲ್ಲವೇ. ಅದೇ ರೀತಿ ಮುಖ್ಯವಾದ ಬ್ಯಾಂಕ್‌ ಅಕೌಂಟ್‌ ಅನ್ನು ಪ್ರತ್ಯೇಕವಾಗಿಟ್ಟು ಇಡಿ. ಡಿಜಿಟಲ್‌ ಟ್ರಾನ್ಸಕ್ಷನ್‌ಗಳಿಗೆ ಬೇರೆ ಬ್ಯಾಂಕ್‌ ಅಕೌಂಟ್‌ ಇಡಿ. ಇದರಿಂದ ಒಂದು ವೇಳೇ ಸೈಬರ್‌ ದಾಳಿಗೆ ಗುರಿಯಾದರೂ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ.

ನಿಮಗೆ ಅಪರಿಚಿತರಿಂದ ಸಾಮಾಜಿಕ ಜಾಲತಾಣಗಳಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದ್ದರೆ, ಹುಷಾರಾಗಿರಿ. ಮ್ಯೂಚುವಲ್‌ ಫ್ರೆಂಡ್ಸ್‌ ಇರದಿದ್ದರೆ ಸ್ವೀಕರಿಸದಿರಿ. ಸ್ಮಾರ್ಟ್‌ ಫೋನ್‌ ಒಂದು ರೀತಿಯಲ್ಲಿ ಕಂಪ್ಯೂಟರ್‌ ಇದ್ದ ಹಾಗೆ ಇರುತ್ತದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಫೋಟೊಗಳನ್ನು ಯಾರಾದರೂ ತೆಗೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದಾದರೂ ಅಪ್ಲಿಕೇಶನ್‌ ಅನ್ನು ಡೌನ್‌ ಲೋಡ್‌ ಮಾಡುವುದಿದ್ದರೆ ಎಚ್ಚರಿಕೆ ಇರಲಿ.

Continue Reading
Advertisement
Paytm
ದೇಶ5 mins ago

Paytm Fine: ನಿಷೇಧದ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಶಾಕ್‌, ಬಿತ್ತು 5.49 ಕೋಟಿ ರೂ. ದಂಡ

Ishan Kishan
ಕ್ರೀಡೆ13 mins ago

Ishan Kishan: ರಣಜಿ ಟೂರ್ನಿಗೆ ಚಕ್ಕರ್​, ಅನಂತ್ ಅಂಬಾನಿ ವಿವಾಹ ಪೂರ್ವ ಸಂಭ್ರಮಕ್ಕೆ ಹಾಜರ್!

Ranil Wickremesinghe And Narendra Modi
ದೇಶ36 mins ago

ಚೀನಾವನ್ನು ಕೈಬಿಟ್ಟು ಭಾರತಕ್ಕೆ ಮಹತ್ವದ ಗುತ್ತಿಗೆ ಕೊಟ್ಟ ಶ್ರೀಲಂಕಾ; ರಾಜತಾಂತ್ರಿಕ ಮುನ್ನಡೆ

Gadinada Chetana State Award announced
ಕರ್ನಾಟಕ37 mins ago

Gadinada Chetana Award: ಕೇರಳದ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಸೇರಿ ಮೂವರಿಗೆ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ

BCCI
ಕ್ರೀಡೆ49 mins ago

BCCI: ವನಿತೆಯರ ರೆಡ್‌ ಬಾಲ್ ಕ್ರಿಕೆಟ್‌ ಟೂರ್ನಿ ನಡೆಸಲು ಮುಂದಾದ ಬಿಸಿಸಿಐ

Blast in Bengaluru Rameswaram Cafe BY Vijayendra demands NIA investigation
ರಾಜಕೀಯ59 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್;‌ NIA ತನಿಖೆಗೆ ಈಗಲೇ ಕೊಡಿ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

Blast in Bangalore Siddaramaiah
ಬೆಂಗಳೂರು1 hour ago

Blast in Bengaluru : ಬ್ಯಾಗ್‌ನಲ್ಲಿ ತಂದಿಟ್ಟ ಸ್ಫೋಟಕ ಬ್ಲಾಸ್ಟ್‌; ಸಣ್ಣದಾದರೂ ಡೇಂಜರಸ್‌ ಎಂದ ಸಿಎಂ ಸಿದ್ದರಾಮಯ್ಯ

Matrimony Couple
ದೇಶ1 hour ago

Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!

supreme
ದೇಶ2 hours ago

Gyanvapi Case: ಜ್ಞಾನವಾಪಿ ಮಸೀದಿ ವಿವಾದ: ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ವಿಚಾರಣೆಗೆ ಸುಪ್ರೀಂ ಸಮ್ಮತಿ

Blast-in-Bangalore-Rameshwaram-Cafe-cc-tv
ಬೆಂಗಳೂರು2 hours ago

Blast in Bengaluru : ರಾಮೇಶ್ವರಂ ಕೆಫೆಯಲ್ಲಿ ನಿಜಕ್ಕೂ ಆಗಿದ್ದೇನು?; ಸ್ಫೋಟದ EXCLUSIVE ಸಿಸಿ ಟಿವಿ ಫೂಟೇಜ್‌ ಇದು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 hours ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ5 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ15 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ4 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

ಟ್ರೆಂಡಿಂಗ್‌