Money Guide: ತೆರಿಗೆ ಕಡಿತ ಇಲ್ಲದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ - Vistara News

ಮನಿ-ಗೈಡ್

Money Guide: ತೆರಿಗೆ ಕಡಿತ ಇಲ್ಲದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ಸಣ್ಣ ಉಳಿತಾಯ ಯೋಜನೆಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಯೋಜನೆ ಪಿಪಿಎಫ್‌. ಇದರಲ್ಲಿ ಹೂಡಿಕೆ ಮಾಡಿದರೆ ಯಾವುದೇ ತೆರಿಗೆ ಕಡಿತವಾಗುವುದಿಲ್ಲ ಎನ್ನುವುದೇ ಇದರ ಪ್ಲಸ್‌ ಪಾಯಿಂಟ್.

VISTARANEWS.COM


on

ppf
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಣ್ಣ ಉಳಿತಾಯ ಯೋಜನೆಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಯೋಜನೆ ಪಿಪಿಎಫ್‌. ಅಂದರೆ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (Public Provident Fund). ಇದು ಹಲವು ಹೂಡಿಕೆದಾರ ಸ್ನೇಹಿ ಫೀಚರ್‌ಗಳನ್ನು ಒಳಗೊಂಡಿದೆ. ದೀರ್ಘಕಾಲೀನ ಹೂಡಿಕೆಯ ಯೋಜನೆಯಾದ ಇದನ್ನು ಲಾಂಗ್‌ ಟರ್ಮ್‌ಗೆ ಸ್ಥಿರವಾದ ಸಂಪತ್ತು ಸೃಷ್ಟಿಸಿಕೊಳ್ಳಲು, ದೀರ್ಘಾವಧಿಯಲ್ಲಿ ಸಂಪತ್ತನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಪಿಪಿಎಫ್‌ ಕುರಿತದ ಹೆಚ್ಚಿನ ವಿವರ ಇಲ್ಲಿದೆ (Money Guide).

ಕಡಿಮೆ ರಿಸ್ಕ್‌ ಬಯಸುವ ಸಣ್ಣ ಹೂಡಿಕೆದಾರರಿಗೆ ಪಿಪಿಎಫ್‌ ಸೂಕ್ತ. ಸರ್ಕಾರವೇ ಇದನ್ನು ನಿರ್ವಹಿಸುತ್ತದೆ. ಖಾತರಿಯ ಆದಾಯ ನೀಡುತ್ತದೆ ಎನ್ನುವುದೇ ಇದರ ವಿಶೇಷತೆ. ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿದರಗಳನ್ನು ನಿರ್ಧರಿಸಲಾಗುತ್ತದೆ.

ವೈಶಿಷ್ಟ್ಯ

ನೀವು ಪಿಪಿಎಫ್ ಖಾತೆಗಳಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಮಾರ್ಗಸೂಚಿಗಳ ಪ್ರಕಾರ, ನೀವು ಹಣವನ್ನು ಪಿಪಿಎಫ್ ಖಾತೆಯಲ್ಲಿ ಸತತ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಒಂದು ವೇಳೆ 15 ವರ್ಷಗಳ ಕೊನೆಯಲ್ಲಿ ಹಣದ ಅಗತ್ಯವಿಲ್ಲದಿದ್ದರೆ ಪಿಪಿಎಫ್ ಖಾತೆಯ ಅವಧಿಯನ್ನು ಅಗತ್ಯವಿರುವಷ್ಟು ವರ್ಷಗಳವರೆಗೆ ವಿಸ್ತರಿಸಬಹುದಾದ ಆಯ್ಕೆಯೂ ಇದೆ. ಇದಕ್ಕಾಗಿ ಪಿಪಿಎಫ್ ಖಾತೆ ವಿಸ್ತರಣೆ ಫಾರ್ಮ್ ಸಲ್ಲಿಸಬೇಕಾಗುತ್ತದೆ. ಇದು ಸಂಪೂರ್ಣ ತೆರಿಗೆ ಮುಕ್ತ ಉಳಿತಾಯ ಯೋಜನೆ ಎನ್ನುವುದು ವಿಶೇಷ. ಅಂದರೆ ಅಸಲು, ಲಾಭ ಮತ್ತು ಹಿಂಪಡೆಯುವಾಗ ಸಂಗ್ರಹವಾದ ಮೊತ್ತದ ಮೇಲೆ ಯಾವುದೇ ತೆರಿಗೆ ಕಡಿತ ಇರುವುದಿಲ್ಲ.

ಯಾರೆಲ್ಲ ತೆರೆಯಬಹುದು?

ಯಾವುದೇ ಭಾರತೀಯ ನಾಗರಿಕ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. ಅಪ್ರಾಪ್ತ / ಮಾನಸಿಕ ಅಸ್ವಸ್ಥ ವ್ಯಕ್ತಿಯ ಪರವಾಗಿ ಪೋಷಕರು ಸಹ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ. ಬಡ್ಡಿಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈಗ 7.1% ಬಡ್ಡಿ ಇದೆ. 

ಪಿಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ?

ಮೊದಲೇ ಹೇಳಿದಂತೆ ಒಂದು ಪಿಪಿಎಫ್‌ ಅಕೌಂಟ್‌ಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್‌ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 15 ವರ್ಷಗಳ ನಂತರ, ಪಿಪಿಎಫ್ ಚಂದಾದಾರರು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ಖಾತೆ ಮುಕ್ತಾಯ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಮೆಚ್ಯೂರಿಟಿ ಪಾವತಿಯನ್ನು ಹಿಂಪಡೆಯಬಹುದು. ಸಂಬಂಧಿತ ಅಂಚೆ ಕಚೇರಿಯಲ್ಲಿ ನಿಗದಿತ ವಿಸ್ತರಣಾ ನಮೂನೆಯನ್ನು ಸಲ್ಲಿಸುವ ಮೂಲಕ ಚಂದಾದಾರರು ತಮ್ಮ ಖಾತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು (ಗಮನಿಸಿ ಇದನ್ನು ಮೆಚ್ಯೂರಿಟಿಯ ಒಂದು ವರ್ಷದೊಳಗೆ ಸಲ್ಲಿಸಬೇಕು).

ಇದನ್ನೂ ಓದಿ: Money Guide: ಆನ್‌ಲೈನ್‌ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು?

ಸಾಲ ಪಡೆಯಬಹುದು

ಪಿಪಿಎಫ್ ಹೂಡಿಕೆಯ ಮೇಲೆ ನೀವು ಸಾಲವನ್ನು ಪಡೆಯುವ ಸೌಲಭ್ಯವೂ ಇದೆ. ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು ಮಾತ್ರ. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೇಮ್‌ ಮಾಡಿಕೊಳ್ಳಬಹುದು.‌

ಇನ್ನಷ್ಟು ಮನಿಗೈಡ್‌ ಓದಲು ಇಲ್ಲಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಪರ್ಸನಲ್‌ ಲೋನ್‌ಗೆ ಅಪ್ಲೈ ಮಾಡುತ್ತೀರಾ? ಈ ಅಂಶ ನಿಮಗೆ ತಿಳಿದಿರಲೇ ಬೇಕು

Money Guide: ಪ್ರಸ್ತುತ ಪರ್ಸನಲ್‌ ಲೋನ್‌ ಅನಿವಾರ್ಯ ಎನಿಸಿಕೊಂಡಿದೆ. ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುವ ಮುನ್ನ ಯಾವೆಲ್ಲ ಅಂಶಗಳನ್ನು ತಿಳಿದಿರಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

loan
Koo

ಬೆಂಗಳೂರು: ಬದಲಾದ ಜೀವನ ಶೈಲಿ, ಬೆಲೆ ಏರಿಕೆಯಿಂದಾಗಿ ಪ್ರಸ್ತುತ ಪರ್ಸನಲ್‌ ಲೋನ್‌ (Personal loan) ಎನ್ನುವುದು ಅನಿವಾರ್ಯ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ದೇಶದಲ್ಲಿ ಗೃಹ ಸಾಲಗಳ ನಂತರ ಪರ್ಸನಲ್ ಲೋನ್ ಪಡೆಯುವವರ ಸಂಖ್ಯೆ ಹೆಚ್ಚಿದೆ. ಬೇಕಾಬಿಟ್ಟಿ ಸಾಲ ಪಡೆಯುವವರ ಸಂಖ್ಯೆ ಹೆಚ್ಚಿರುವುದರಿಂದ ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ತನ್ನ ನಿಯಗಳನ್ನು ತುಸು ಬಿಗಿಗೊಳಿಸಿದೆ. ಹೀಗಾಗಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿ(ಎನ್‌ಬಿಎಫ್‌ಸಿ) ಹೆಚ್ಚಿನ ಬಡ್ಡಿದರದಲ್ಲಿ ವೈಯಕ್ತಿಕ ಸಾಲ (Personal loan) ನೀಡಲು ಆರಂಭಿಸಿವೆ. ಹೀಗಾಗಿ ನೀವು ಪರ್ಸನಲ್‌ ಲೋನ್‌ಗೆ ಅಪ್ಲೈ ಮಾಡುವ ಮುನ್ನ ಕೆಲವೊಂದು ವಿಚಾರಗಳತ್ತ ಗಮನ ಹರಿಸಬೇಕಾಗುತ್ತದೆ. ಆ ಕುರಿತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಬಾಕಿ ಇರುವ ಸಾಲವನ್ನು ಸರಿಯಾಗಿ ಪಾವತಿಸಿ

ನೀವು ಮೊದಲೇ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರತ್ತ ಗಮನ ಹರಿಸಿ. ಯಾಕೆಂದರೆ ಬ್ಯಾಂಕ್‌ಗಳು ಸಿಬಿಲ್‌ ಸ್ಕೋರ್‌ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಆಧಾರದಲ್ಲಿ ಪರ್ಸನಲ್‌ ಲೋನ್‌ ಒದಗಿಸುತ್ತವೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಅದರಲ್ಲೂ ಸ್ಕೋರ್‌ 700ಕ್ಕಿಂತ ಅಧಿಕ ಇರುವುದು ಮುಖ್ಯ. ಕ್ರೆಡಿಟ್ ಕಾರ್ಡ್ ಬಿಲ್‌ ಮತ್ತು ಬಾಕಿ ಇರುವ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ಸಿಬಿಲ್‌ ಸ್ಕೋರ್‌ ಹೆಚ್ಚಿಸಬಹುದು. ಒಂದು ವೇಳೆ ನೀವು ಹಿಂದಿನ ಸಾಲವನ್ನು ಸಮರ್ಪಕವಾಗಿ ಪಾವತಿಸದಿದ್ದರೆ ಸಿಬಿಲ್‌ ಸ್ಕೋರ್‌ ಕಡಿಮೆಯಾಗಿ ಪರ್ಸನಲ್‌ ಲೋನ್‌ ಮಂಜೂರಾಗುವುದು ಕಷ್ಟವಾಗಬಹುದು.

ಮಾಸಿಕ ಆದಾಯದ ಪಾತ್ರವೂ ಮುಖ್ಯ

ಕ್ರೆಡಿಟ್ ಸ್ಕೋರ್ ಹೊರತಾಗಿ ಸಾಲ ಒದಗಿಸುವ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಅರ್ಜಿದಾರರ ಮಾಸಿಕ ಆದಾಯ, ಉದ್ಯೋಗ ಪ್ರೊಫೈಲ್‌ ಇತ್ಯಾದಿಗಳನ್ನೂ ಪರಿಗಣಿಸುತ್ತವೆ. ಸಾಲ ಒದಗಿಸುವವರು ಸ್ಥಿರ ಆದಾಯ ಹೊಂದಿರುವ ಸಾಲಗಾರರಿಗೆ ಆದ್ಯತೆ ನೀಡುತ್ತಾರೆ. ಸ್ಥಿರವಾದ ಉದ್ಯೋಗದ ಇತಿಹಾಸ ಆರ್ಥಿಕ ಸ್ಥಿರತೆಯನ್ನು ಸೂಚಿಸುತ್ತದೆ ಮತ್ತು ನಿಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

ವೈಯಕ್ತಿಕ ಸಾಲವನ್ನು ಪಡೆಯಲು ಸ್ಥಿರವಾದ ಆದಾಯದ ಮೂಲವು ನಿರ್ಣಾಯಕ ಘಟಕ. ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡಲು ಬ್ಯಾಂಕ್‌ಗಳು ಅರ್ಜಿದಾರರು ಕನಿಷ್ಠ 30,000 ರೂ.ಗಳ ಮಾಸಿಕ ವೇತನ ಹೊಂದಿದ್ದಾರೆಯೇ ಎನ್ನುವುದನ್ನು ಗಮನಿಸುತ್ತದೆ. ಇದೊಂದೇ ಅಲ್ಲ ನಿಮ್ಮಿಂದ ಸಾಲ ಮರುಪಾವತಿಸಲು ಸಾಧ್ಯವೇ ಎನ್ನುವುದನ್ನು ಸಾಕಷ್ಟು ಬಾರಿ ಲೆಕ್ಕಾಚಾರ ಹಾಕಿಯೇ ಮುಂದುವರಿಯಿರಿ. ಇಲ್ಲದಿದ್ದರೆ ಇದು ದೊಡ್ಡ ತಲೆನೋವಾಗಿ ಬದಲಾಗಬಹುದು.

ಅವಧಿ ಬಗ್ಗೆ ಮಾಹಿತಿ ಇರಲಿ

ವೈಯಕ್ತಿಕ ಸಾಲದ ಬಗ್ಗೆ ಯೋಚಿಸುವಾಗ ಸಾಲದ ಅವಧಿಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಸಾಮಾನ್ಯವಾಗಿ ಈ ಸಾಲದ ಅವಧಿ 12ರಿಂದ 60 ತಿಂಗಳವರೆಗೆ ಇರುತ್ತದೆ. ಕೆಲವೊಮ್ಮೆ 96 ತಿಂಗಳವರೆಗೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಮರುಪಾವತಿ ಸಾಮರ್ಥ್ಯ ನೋಡಿಕೊಂಡು ಸೂಕ್ತ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ. ಇನ್ನೊಂದು ಮುಖ್ಯ ವಿಚಾರ ಎಂದರೆ ಸಾಲ ನಿಜವಾಗಿಯೂ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ? ಅನಿವಾರ್ಯವೇ? ಎನ್ನುವುದನ್ನು ಪರಿಶೀಲಿಸಿಯೇ ಲೋನ್‌ಗೆ ಅಪ್ಲೈ ಮಾಡಿ.

ವಿವಿಧ ಕಡೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಡಿ

ಏಕಕಾಲಕ್ಕೆ ವಿವಿಧ ಕಡೆಗಳಲ್ಲಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಕೂಡ ನಿಮ್ಮ ಸಿಬಿಲ್‌ ಸ್ಕೋರ್‌ಗೆ ಹೊಡೆತ ನೀಡುತ್ತದೆ. ಆದ್ದರಿಂದ ಅಲ್ಪಾವಧಿಯಲ್ಲಿ ಅನೇಕ ಸಾಲದಾತರೊಂದಿಗೆ ನೇರ ಸಾಲದ ಅರ್ಜಿಗಳನ್ನು ಸಲ್ಲಿಸುವುದನ್ನು ತಪ್ಪಿಸಿ.

ಇದನ್ನೂ ಓದಿ: Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!

Continue Reading

ಮನಿ-ಗೈಡ್

Money Guide: EPF vs PPF; ಈ ಎರಡು ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ವಿವರ

Money Guide: ನಿವೃತ್ತಿಯ ನಂತರದ ಜೀವನ ಚೆನ್ನಾಗಿರಬೇಕು ಎಂದರೆ ಆರ್ಥಿಕವಾಗಿ ಸದೃಢರಾಗಿರಬೇಕು. ಅದಕ್ಕೆ ಈಗಿನಿಂದಲೇ ತಯಾರಿ ನಡೆಸುವುದು ಮುಖ್ಯ. ಹೀಗಾಗಿ ಉಳಿತಾಯ ಯೋಜನೆಗಳಾದ ಇಪಿಎಫ್‌ ಮತ್ತು ಪಿಪಿಎಫ್‌ಗಳ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

savings
Koo

ಬೆಂಗಳೂರು: ನಿವೃತ್ತಿಯ ನಂತರದ ಜೀವನ ಚೆನ್ನಾಗಿರಬೇಕು ಎಂದರೆ ಆರ್ಥಿಕವಾಗಿ ಸದೃಢರಾಗಿರಬೇಕು. ಸಣ್ಣ ಪುಟ್ಟ ವಿಚಾರಕ್ಕೂ ಇತರರ ಮುಂದೆ ಕೈ ಚಾಚುವಂತೆ ಇರಬಾರದು. ಇದಕ್ಕಾಗಿಯೇ ಆರ್ಥಿಕ ತಜ್ಞರು ಉದ್ಯೋಗಕ್ಕೆ ಸೇರಿದ ಆರಂಭದ ದಿನದಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ಹಾಕಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಸರ್ಕಾರ ಕೂಡ ನಿವೃತ್ತಿ ಯೋಜನೆಗಳಿಗೆ ಉತ್ತೇಜನ ನೀಡುತ್ತದೆ. ಈ ಪೈಕಿ ನೌಕರರ ಭವಿಷ್ಯ ನಿಧಿ (Employee Provident Fund-EPF) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಯೋಜನೆ ಪ್ರಮುಖವಾದುದು. ಈ ಎರಡು ಯೋಜನೆಗಳ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಸರ್ಕಾರದಿಂದ ನಿರ್ವಹಣೆ

ಇಪಿಎಫ್‌ ಮತ್ತು ಪಿಪಿಎಫ್‌-ಇವೆರಡೂ ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಗಳಾಗಿವೆ. ಅದಾಗ್ಯೂ ಬಡ್ಡಿ ದರಗಳು, ಅವಧಿ, ತೆರಿಗೆ ಪ್ರಯೋಜನಗಳು ಮತ್ತು ಇತರ ಅಂಶಗಳಲ್ಲಿ ವ್ಯತ್ಯಾಸಗಳಿವೆ. ಇಪಿಎಫ್ ಖಾಸಗಿ ವಲಯದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದ್ದರೆ ಪಿಪಿಎಫ್ ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರಿಗೆ ದೊರೆಯುತ್ತದೆ.

ಇಪಿಎಫ್‌

ಇಪಿಎಫ್ ಕಡ್ಡಾಯ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಕೊಡುಗೆಗಳನ್ನು ನೀಡುತ್ತಾರೆ. ಈ ಕೊಡುಗೆಗಳನ್ನು ವೇತನದ ಆಧಾರದ ಮೇಲೆ ಮೊದಲೇ ನಿರ್ಧರಿಸಲಾಗುತ್ತದೆ. ಇದರಲ್ಲಿನ ಉಳಿತಾಯದ ಹಣದಿಂದ ಭಾಗಶಃ ಹಿಂಪಡೆಯಲು ಅನುಮತಿ ನೀಡಲಾಗಿದೆ. ಸಂಪೂರ್ಣ ಮೊತ್ತವನ್ನು ಕೆಲವೊಂದು ಅನಿವಾರ್ಯ ಸಂದರ್ಭ ಹೊರತುಪಡಿಸಿದರೆ ನಿವೃತ್ತಿ ವಯಸ್ಸನ್ನು ತಲುಪಿದ ನಂತರವೇ ಹಿಂಪಡೆಯಬಹುದು. ಈ ಯೋಜನೆಯು ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ. ನಿವೃತ್ತಿ ಕೇಂದ್ರಿತ ಉಳಿತಾಯ ಮಾರ್ಗವನ್ನು ಬಯಸುವ, ಸಂಬಳ ಪಡೆಯುವ ವ್ಯಕ್ತಿಗಳಿಗೆ ಇಪಿಎಫ್ ಸೂಕ್ತ ಯೋಜನೆ ಎನ್ನುವುದರಲ್ಲಿ ಸಂಶಯವಿಲ್ಲ.

 • ಸಂಬಳ ಪಡೆಯುವ ಉದ್ಯೋಗಿಗಳಿಗೆ ಕಡ್ಡಾಯ: ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಮೂಲ ವೇತನ + ತುಟ್ಟಿಭತ್ಯೆಯ 12% ಕೊಡುಗೆ ನೀಡುತ್ತಾರೆ.
 • ಪ್ರಸ್ತುತ ಬಡ್ಡಿ ದರ: 8.25% ಆದರೆ ಬದಲಾಗಬಹುದು.
 • ನಿವೃತ್ತಿಗೆ ಮುಂಚಿತವಾಗಿ ಸಂಪೂರ್ಣ ಹಣವನ್ನು ಹಿಂಪಡೆಯುವುದು ಕಷ್ಟ.
 • ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯ.
 • ಅನಿವಾರ್ಯ ಸಂದರ್ಭದಲ್ಲಿ ಒಂದಷ್ಟು ಮೊತ್ತ ಹಿಂಪಡೆಯಬಹುದು. ಇದಕ್ಕಾಗಿ ಆನ್‌ಲೈನ್‌ ಮೂಲ ಅರ್ಜಿ ಸಲ್ಲಿಸಿದರೆ ಸಾಕು.

ಪಿಪಿಎಫ್‌

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಯೋಜನೆಯು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್‌ ಆಗಿದ್ದು, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್‌ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ. ಪಿಪಿಎಫ್‌ ಖಾತೆ ತೆರೆಯುವವರಿಗೆ ವಾರ್ಷಿಕ ಶೇ. 7.1ರಷ್ಟು ಬಡ್ಡಿ ದೊರೆಯಲಿದೆ. ಆದರೆ ಈ ಯೋಜನೆಯು 15 ವರ್ಷ ಇರಲಿದೆ. ಮಗಳ ಮದುವೆ, ಮಕ್ಕಳ ಶಿಕ್ಷಣ ಸೇರಿ ಹಲವು ಮುಂದಾಲೋಚನೆ ಇರುವವರು 15 ವರ್ಷದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

 • ಸ್ವಯಂಪ್ರೇರಿತ ಯೋಜನೆ: ಎಲ್ಲ ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರಿಗೆ ಮುಕ್ತವಾಗಿದ್ದು, ಬೇಕಿದ್ದರೆ ಮಾತ್ರ ಹೂಡಿಕೆ ಮಾಡಬಹುದು.
 • ಪ್ರಸ್ತುತ ಬಡ್ಡಿದರ: 7.1% ಆದರೆ ಬದಲಾಗಬಹುದು.
 • 5 ವರ್ಷಗಳ ನಂತರ ಒಂದಷ್ಟು ಮೊತ್ತ ಹಿಂಪಡೆಯಬಹುದು. ಮುಕ್ತಾಯದ ಸಮಯದಲ್ಲಿ ಪೂರ್ಣ ಹಿಂಪಡೆಯುವಿಕೆ (15 ವರ್ಷ).
 • ತೆರಿಗೆ ಪ್ರಯೋಜನ ಲಭ್ಯ.
 • ಸರ್ಕಾರದಿಂದ ನೇರವಾಗಿ ನಿರ್ವಹಿಸಲ್ಪಡುವುದರಿಂದ ಇಪಿಎಫ್‌ಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ.

ಇಪಿಎಫ್‌ vs ಪಿಪಿಎಫ್‌

 • ಹೂಡಿಕೆ ಮೊತ್ತ: ಪಿಪಿಎಫ್‌ನಲ್ಲಿ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂ.ಗಳಿಂದ ಹೂಡಿಕೆ ಪ್ರಾರಂಭಿಸಬಹುದು ಮತ್ತು ಗರಿಷ್ಠ ಮೊತ್ತ 1,50,000 ರೂ. ಇಪಿಎಫ್‌ಗೆ ಸಂಬಳದ 12%ವನ್ನು ಕಡ್ಡಾಯವಾಗಿ ಕಡಿತ ಮಾಡಲಾಗುತ್ತದೆ. ಬೇಕಿದ್ದರೆ ಈ ಮೊತ್ತವನ್ನು ಹೆಚ್ಚಿಸಬಹುದು.
 • ಅವಧಿ: ಪಿಪಿಎಫ್ 15 ವರ್ಷಗಳಾಗಿದ್ದು, ಅದರ ನಂತರ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. ಇಪಿಎಫ್ ಖಾತೆಯನ್ನು ನಿವೃತ್ತಿಯ ನಂತರ ಅಥವಾ ಚಂದಾದಾರರು ಎರಡು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಗಳಾಗಿದ್ದರೆ ಮಾತ್ರ ಎಲ್ಲ ಮೊತ್ತ ಹಿಂಪಡೆಯಬಹುದು.
 • ತೆರಿಗೆ ಪ್ರಯೋಜನ: ಪಿಪಿಎಫ್ ಹೂಡಿಕೆಗಳಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನ ಲಭ್ಯವಿದೆ. ಮೆಚ್ಯೂರಿಟಿ ಮೊತ್ತವನ್ನು ಸಹ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಇಪಿಎಫ್‌ಗೆ ನೀಡುವ ಕೊಡುಗೆಯು ತೆರಿಗೆ ಪ್ರಯೋಜನವನ್ನು ಆಕರ್ಷಿಸುತ್ತದೆ. ನಿವೃತ್ತಿಯ ನಂತರದ ಮೆಚ್ಯೂರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

ಎರಡೂ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದೆ?

ಖಂಡಿತವಾಗಿಯೂ ನೀವು ಏಕಕಾಲಕ್ಕೆ ಪಿಪಿಎಫ್ ಮತ್ತು ಇಪಿಎಫ್ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಎರಡರಲ್ಲೂ ಹೂಡಿಕೆ ಮಾಡಲು ಯಾವುದೇ ಮಿತಿಗಳಿಲ್ಲ. ಪ್ರತಿ ಯೋಜನೆಗೆ ಎಷ್ಟು ಕೊಡುಗೆ ನೀಡಬೇಕು ಎಂದು ನಿರ್ಧರಿಸುವಾಗ ನಿಮ್ಮ ಆದಾಯ ಮತ್ತು ಆರ್ಥಿಕ ಗುರಿಗಳನ್ನು ಪರಿಗಣಿಸಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹಿಂತೆಗೆದುಕೊಳ್ಳುವ ನಿಯಮಗಳು ಮತ್ತು ತೆರಿಗೆ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಇದನ್ನೂ ಓದಿ: Money Guide : ನಿವೃತ್ತಿಯ ಹಣಕಾಸು ಭದ್ರತೆಗೆ ಪ್ಲಾನ್‌ ಮಾಡೋದು ಹೇಗೆ?

Continue Reading

ವಾಣಿಜ್ಯ

Business Guide : ಕಡಿಮೆ ಬಂಡವಾಳದಲ್ಲಿ ಮಣ್ಣಿನ ಆಭರಣದ ಬಿಸಿನೆಸ್‌ ಮಾಡೋದು ಹೇಗೆ?

ಮನಸ್ಸಿದ್ದರೆ ಮಣ್ಣಿನ ಆಭರಣಗಳನ್ನು ತಯಾರಿಸಿ ಲಕ್ಷಾಂತರ ಆದಾಯ ( Business Guide) ಗಳಿಸಬಹುದು. ಹೇಗೆ ಎನ್ನುತ್ತೀರಾ? ಇಲ್ಲಿದೆ ವಿವರ.

VISTARANEWS.COM


on

Money
Koo

ಬೆಂಗಳೂರು: ಮನಸ್ಸಿದ್ದರೆ ಮಾರ್ಗ ಇದೆ ಎಂಬ ಮಾತಿದೆ. ನೀವು (Business Guide) ಯಾವುದಾದರೂ ಬಿಸಿನೆಸ್‌ ಮಾಡಬೇಕಿದ್ದರೆ ಎಷ್ಟು ಬಂಡವಾಳ ಬೇಕಾಗಬಹುದು ಎಂದು ಯೋಚಿಸುವುದು ಸಹಜ. ಆದರೆ ಒಂದು ಸಾವಿರ ರೂ. ಖರ್ಚಿನೊಳಗೆಯೇ ನೀವು ನಿಮ್ಮ ಮನೆ ಪಕ್ಕದ ಮಣ್ಣಿನಲ್ಲಿ ಆಭರಣಗಳನ್ನು ತಯಾರಿಸಿ ಮಾರಾಟ ಮಾಡಬಹುದು.

ಮೈಸೂರಿನ ಜ್ಯೋತಿ ಮಲ್ಲೇಶ್‌ ಎಂಬುವರು ತಮ್ಮ ಸೃಜನಶೀಲತೆ, ಆಸಕ್ತಿ ಮತ್ತು ಸಂಶೋಧನೆಯಿಂದ ಮಣ್ಣಿನ ಆಭರಣಗಳನ್ನು ತಯಾರಿಸಿ, ಮಾರಾಟ ಮಾಡಿ ಉತ್ತಮ ಆದಾಯವನ್ನೂ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತ್ಯಂತ ಕಡಿಮೆ ಬಂಡವಾಳದಲ್ಲಿ ಇದನ್ನು ಮಾಡಬಹುದು. ಲಾಭದಾಯಕ ಬಿಸಿನೆಸ್‌ ಮಾಡಬಹುದು. ನಿಮಗೆ ಇದರಲ್ಲಿ ಆಸಕ್ತಿ ಇರಬೇಕು. ಮಣ್ಣಿನ ಆಭರಣಗಳು ಒಂದು ಆಕರ್ಷಣೆಯನ್ನು ಉಳಿಸಿಕೊಳ್ಳುತ್ತದೆ. ಗ್ರಾಹಕರ ಮನ ಗೆಲ್ಲುತ್ತದೆ. ಈಗಿನ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ಸುಲಭವಾಗಿ ಪ್ರಚಾರ ಮಾಡಬಹುದು ಎನ್ನುತ್ತಾರೆ ಜ್ಯೋತಿ ಮಲ್ಲೇಶ್.

Continue Reading

ವಾಣಿಜ್ಯ

Money Guide : ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೀಗೆ ಹೂಡಿಕೆ ಮಾಡಿ

ಮಕ್ಕಳ ಭವಿಷ್ಯಕ್ಕಾಗಿ ದೊಡ್ಡ( Money Guide) ಮೊತ್ತದ ಉಳಿತಾಯ ಮತ್ತು ಹೂಡಿಕೆ ಅಗತ್ಯವಾಗುತ್ತದೆ. ಇಲ್ಲಿದೆ ವಿವರ,

VISTARANEWS.COM


on

cash count
Koo

ಪೋಷಕರ ಆದಾಯದಲ್ಲಿ ಮಕ್ಕಳ ಭವಿಷ್ಯದ ಅಗತ್ಯಗಳಿಗೆ ದೊಡ್ಡ ಪಾಲು ಹೋಗುತ್ತದೆ. ( Money Guide) ಉನ್ನತ ಶಿಕ್ಷಣದ ಜತೆಗೆ ಮಕ್ಕಳ ವಿವಾಹಕ್ಕೂ ಖರ್ಚು ವೆಚ್ಚವಾಗುತ್ತದೆ. ಹೀಗಾಗಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಣಕಾಸು ಪ್ಲಾನ್‌ ಮಾಡೋದು ಹೇಗೆ? ವಿಸ್ತಾರ ಮನಿಪ್ಲಸ್‌ನಲ್ಲಿ ಈ ಬಗ್ಗೆ ನಾಲೆಡ್ಜ್‌ ಬೆಲ್‌ ಸಿಇಒ ವಿನೋದ್‌ ತಂತ್ರಿ ಅವರು ವಿವರಿಸಿದ್ದಾರೆ.

ಮಕ್ಕಳ ಭವಿಷ್ಯದ ಅಗತ್ಯತೆಗಳು ಹಲವು ಆಯಾಮಗಳನ್ನು ಒಳಗೊಂಡಿವೆ. ಆದ್ದರಿಂದ ಆದ್ಯತೆಯನ್ನು ಮಾಡಿಕೊಳ್ಳುವುದು ಮುಖ್ಯ. ಮಕ್ಕಳಿಗೆ ಬೈಕ್‌ ಕೊಡಿಸುವುದು ಮುಖ್ಯವೇ, ಅವರ ಶಿಕ್ಷಣ ಮುಖ್ಯವೇ ಎಂದು ಯೋಚಿಸಬೇಕು. ಇವತ್ತಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಮೊತ್ತ ಹೋಗುತ್ತದೆ. ಆದ್ದರಿಂದ ಮೊದಲು ಆದ್ಯತೆ ಕೊಡಬೇಕು. ಬಳಿಕ ಹಣಕಾಸು ಪ್ಲಾನ್‌ ಮಾಡಬೇಕು. ಇವತ್ತು ಮಕ್ಕಳು ಹುಟ್ಟುವುದಕ್ಕಿಂತ ಮೊದಲೇ ಹಣಕಾಸು ಯೋಜನೆ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಆದಷ್ಟು ಬೇಗ ಪ್ಲಾನಿಂಗ್‌ ಮಾಡುವುದು ಉತ್ತಮ.

ಮ್ಯೂಚುವಲ್‌ ಫಂಡ್‌ಗಳಲ್ಲಿ ಚಿಲ್ಡ್ರೆನ್ಸ್‌ ಪ್ಲಾನ್‌ ಇದೆ. ವಿಮೆಯಲ್ಲೂ ಚಿಲ್ಡ್ರೆನ್ಸ್‌ ಪ್ಲಾನ್‌ ಇದೆ. ಸುಕನ್ಯಾ ಸಮೃದ್ಧಿ ಯೋಜನೆ ಇದೆ. ಆದರೆ ಚಿಲ್ಡ್ರೆನ್ಸ್‌ ಪ್ಲಾನ್‌ ಎಂಬ ಹೆಸರಿದ್ದ ತಕ್ಷಣ ವಿಮೆ ಉತ್ಪನ್ನದಲ್ಲಿ ಹೂಡಿಕೆ ಮಾಡಬೇಕೆಂದಿಲ್ಲ. ಪೋಷಕರಿಗೆ ಟರ್ಮ್‌ ವಿಮೆ ಸೂಕ್ತ. ಮಕ್ಕಳಿಗೆ ಇತರ ಆಯ್ಕೆಯನ್ನು ಪರಿಗಣಿಸಬಹುದು.

ಮಕ್ಕಳ ಭವಿಷ್ಯಕ್ಕಾಗಿ ದೀರ್ಘಕಾಲೀನ ಹೂಡಿಕೆ ಮಾಡುವುದರಿಂದ ಸಾಕಷ್ಟು ಟೈಮ್‌ ಸಿಗುತ್ತದೆ. ಈಕ್ವಿಟಿ ಮ್ಯೂಚುವಲ್‌ ಫಂಡ್‌ ಈ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎನ್ನುತ್ತಾರೆ ವಿನೋದ್‌ ತಂತ್ರಿ. ಪೋಷಕರಿಗೆ ಟರ್ಮ್‌ ಪ್ಲಾನ್‌ ಪಾಕೆಟ್‌ ಫ್ರೆಂಡ್ಲಿಯಾಗಿರುತ್ತದೆ. ವರ್ಷಕ್ಕೆ 30-40 ಸಾವಿರ ವೆಚ್ಚದಲ್ಲಿ ಒಂದು ಕೋಟಿ ರೂ. ಟರ್ಮ್‌ ಇನ್ಷೂರೆನ್ಸ್‌ ಸಿಗುತ್ತದೆ. ಆರೋಗ್ಯ ವಿಮೆಯನ್ನೂ ಹೊಂದಿರಬೇಕು. ಏಕೆಂದರೆ ಮಕ್ಕಳ ಭವಿಷ್ಯಕ್ಕೆ ನೀವು ಇಡುವ ಹಣದ ರಕ್ಷಣೆಗೆ ಹೆಲ್ತ್‌ ಇನ್ಷೂರೆನ್ಸ್‌ ಅಗತ್ಯ. ಇಲ್ಲದಿದ್ದರೆ ಯಾರಿಗಾದರೂ ಅನಾರೋಗ್ಯವಾದಾಗ ಮಕ್ಕಳ ಭವಿಷ್ಯಕ್ಕೆ ಇಟ್ಟಿದ್ದ ಹಣವನ್ನು ತೆಗೆಯುವ ಸಾಧ್ಯತೆ ಇರುತ್ತದೆ.

ಮಕ್ಕಳ ಫೈನಾನ್ಸ್‌ ಪ್ಲಾನ್‌ ಸಲುವಾಗಿ ಸೈಟಿನಲ್ಲಿ ಹೂಡಿಕೆ ಉತ್ತಮವೇ? ಸಾಂಪ್ರದಾಯಿಕವಾಗಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಸಹಜ. ಮೊದಲು ಹೆಚ್ಚು ಆಯ್ಕೆ ಇಲ್ಲದಿದ್ದರಿಂದ ರಿಯಾಲ್ಟಿಯಲ್ಲಿ ಜನ ಹೂಡಿಕೆ ಮಾಡುತ್ತಿದ್ದರು. ಆದರೆ ಈಗ ಹಲವಾರು ಆಯ್ಕೆಗಳು ಇರುವುದರಿಂದ ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸುವುದು ಉತ್ತಮ.

Continue Reading
Advertisement
Crowd mistakes Arabic words as Quran Verses on the kurta and Pak Women mobbed
ವಿದೇಶ7 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

aadhar update
ಪ್ರಮುಖ ಸುದ್ದಿ17 mins ago

Aadhaar Card: ಗಮನಿಸಿ; ಆಧಾರ್‌ ಕಾರ್ಡ್‌ ಉಚಿತ ತಿದ್ದುಪಡಿಗೆ ಇನ್ನು ಕೆಲವು ದಿನ ಮಾತ್ರ ಅವಕಾಶ

Nitasha Kaul
ದೇಶ26 mins ago

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Namma Metro Farmer dismiss
ಬೆಂಗಳೂರು35 mins ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

Rajya Sabha Elections Yogendra appointed as KRPP agent Reddy supports to Congress
ರಾಜಕೀಯ39 mins ago

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

Actor Darshan rally police deny permission
ಸ್ಯಾಂಡಲ್ ವುಡ್52 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು58 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ1 hour ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ1 hour ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ1 hour ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Crowd mistakes Arabic words as Quran Verses on the kurta and Pak Women mobbed
ವಿದೇಶ7 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ9 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

ಟ್ರೆಂಡಿಂಗ್‌