ಕ್ಯಾನ್ಸರ್‌, ಜ್ವರ ಸೇರಿ ಅಗತ್ಯ 19 ಔಷಧಗಳ ಬೆಲೆ ಇಳಿಸಿದ ಕೇಂದ್ರ; ದರ ಇಷ್ಟಿದೆ - Vistara News

ಆರೋಗ್ಯ

ಕ್ಯಾನ್ಸರ್‌, ಜ್ವರ ಸೇರಿ ಅಗತ್ಯ 19 ಔಷಧಗಳ ಬೆಲೆ ಇಳಿಸಿದ ಕೇಂದ್ರ; ದರ ಇಷ್ಟಿದೆ

ಕ್ಯಾನ್ಸರ್‌, ನೆಗಡಿ, ಕೆಮ್ಮು ಸೇರಿ ಹಲವು ಕಾಯಿಲೆಗಳಿಗೆ ಬೇಕಾಗುವ 19 ಅಗತ್ಯ ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಇಳಿಕೆ ಮಾಡಿದೆ. ಇದರಿಂದ ಬಡವರಿಗೆ ಭಾರಿ ಅನುಕೂಲವಾಗಲಿದೆ.

VISTARANEWS.COM


on

Tablets
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಸರ್ಕಾರ (Central Government) ಮಹತ್ವದ ಹೆಜ್ಜೆ ಇರಿಸಿದೆ. ಕ್ಯಾನ್ಸರ್‌, ಜ್ವರ, ನೆಗಡಿ ಸೇರಿ ಹಲವು ಕಾಯಿಲೆಗಳಿಗೆ ಬಳಸುವ 19 ಅತ್ಯವಶ್ಯಕ ಔಷಧಗಳ ಬೆಲೆಯನ್ನು (Drugs Price Cut) ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (NPPA) ಶೇ.50ರಷ್ಟು ಕಡಿತಗೊಳಿಸಿದೆ. ಇದರಿಂದಾಗಿ ಬಡವರು ಅತಿ ಕಡಿಮೆ ಬೆಲೆಗೆ ಅಗತ್ಯ ಔಷಧಗಳನ್ನು ಖರೀದಿಸಲು ಸಾಧ್ಯವಾಗಲಿದೆ. ಜನವರಿ 1ರಿಂದಲೇ ನೂತನ ದರವು ಜಾರಿಗೆ ಬಂದಿದೆ.

ಸ್ತನ ಹಾಗೂ ಹೊಟ್ಟೆಯ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಟ್ರಸ್ಟುಜುಮಾಬ್‌ (Trastuzumab) ಬೆಲೆಯನ್ನು ಶೇ.50ರಷ್ಟು ಇಳಿಕೆ ಮಾಡಿರುವುದು ಪ್ರಮುಖ ತೀರ್ಮಾನವಾಗಿದೆ. ಮ್ಯಾನ್‌ಕೈಂಡ್‌ ಫಾರ್ಮಾ ಲಿಮಿಟೆಡ್‌, ಹೆಟೆರೊ ಬಯೋಫಾರ್ಮಾ ಲಿಮಿಟೆಡ್‌ ಕಂಪನಿಗಳು ಟ್ರಸ್ಟುಜುಮಾಬ್‌ ಔಷಧವನ್ನು ಉತ್ಪಾದಿಸುತ್ತಾರೆ. ಈಗ ಈ ಟ್ರಸ್ಟುಜುಮಾಬ್‌ ಬೆಲೆಯು 15,817 ರೂ. ಆಗಿದೆ. ಇದರಿಂದ ಬಡ ರೋಗಿಗಳು ಕ್ಯಾನ್ಸರ್‌ ಔಷಧಿ ಖರೀದಿಸಲು ಭಾರಿ ನೆರವಾಗಲಿದೆ.

ರಕ್ತದೊತ್ತಡಕ್ಕೆ ಬಳಸುವ ಬೈಸೊಪ್ರೊಲೊಲ್‌ ಫುಮಾರೇಟ್‌ ಹಾಗೂ ಅಮ್ಲೋಡಿಪೈನ್‌ ಮಾತ್ರೆಗಳ ಬೆಲೆಯನ್ನು 6.74 ರೂ.ಗೆ ಇಳಿಸಲಾಗಿದೆ. ಹೈಪರ್‌ಟೆನ್ಶನ್‌ಗೆ ಬಳಸುವ ಮೆಟೊಪ್ರೊಲೊಲ್‌ ಸಕ್ಸಿನೇಟ್‌ ಎಕ್ಸ್‌ಟೆಂಡೆಡ್‌ ರಿಲೀಸ್‌ & ಸಿಲ್ನಿಡಿಪೈನ್‌ ಮಾತ್ರೆಗೆ 10 ರೂ. ನಿಗದಿಪಡಿಸಲಾಗಿದೆ. ಬ್ಯಾಕ್ಟೀರಿಯಾಗಳಿಂದ ಹರಡಿದ ಸೋಂಕು ನಿರ್ಮೂಲನೆಗೆ ಬಳಸುವ ಅಮೊಕ್ಸಿಸಿಲಿನ್‌ ಹಾಗೂ ಪೊಟ್ಯಾಸಿಯಂ ಕ್ಲವುಲನೇಟ್‌ ಮಾತ್ರೆಗಳ ಬೆಲೆಯನ್ನು 40 ರೂ.ಗೆ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: Fuel Price Cut: ಪೆಟ್ರೋಲ್‌, ಡೀಸೆಲ್ ಬೆಲೆ ಇಳಿಕೆ ಆಗುತ್ತಾ? ಕೇಂದ್ರದಿಂದ ಮಹತ್ವದ ಅಪ್‌ಡೇಟ್‌

ಭಾರತದ ಎಲ್ಲ ಔಷಧ ಮಳಿಗೆಗಳಲ್ಲಿ ಒಂದೇ ಬೆಲೆಯಲ್ಲಿ ಔಷಧಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಕಾನೂನು ರೂಪಿಸಿದೆ. “ನೂತನವಾಗಿ ನಿಗದಿಪಡಿಸಿರುವ ಬೆಲೆಗೇ ಮೆಡಿಕಲ್‌ ಶಾಪ್‌ಗಳು ಔಷಧಗಳನ್ನು ಮಾರಾಟ ಮಾಡಬೇಕು. ಚಿಲ್ಲರೆ ಮಾರುಕಟ್ಟೆ ಬೆಲೆಗೇ ಔಷಧಗಳನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ, ಉತ್ಪಾದಕ ಅಥವಾ ಮಾರ್ಕೆಟಿಂಗ್‌ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಔಷಧ ಬೆಲೆ ಇಳಿಕೆ ಕುರಿತಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

Pralhad Joshi: ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಅತ್ಯಾಧುನಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನವದೆಹಲಿ (NCDC) ಮತ್ತು ಕಿಮ್ಸ್‌ ನಿರ್ದೇಶಕರ ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.

VISTARANEWS.COM


on

regional Laboratory sanctioned to Kims Hubballi
Koo

ನವದೆಹಲಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ ಕೇಂದ್ರ ಸರ್ಕಾರ (Central Government) ಅತ್ಯಾಧುನಿಕ “ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ” ಕ್ಕೆ ಮಂಜೂರಾತಿ ನೀಡಿದೆ.

ಉತ್ತರ ಕರ್ನಾಟಕದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಹುಬ್ಬಳ್ಳಿಯ ‘ಕಿಮ್ಸ್‌’ ನಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಇದೀಗ ಅಸ್ತು ಎಂದಿದೆ.

ಇದನ್ನೂ ಓದಿ: KAS Exam: ಕೆಎಎಸ್‌ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಪರೀಕ್ಷೆ ಬರೆಯಲು ಒಂದು ಬಾರಿ ಹೆಚ್ಚುವರಿ ಅವಕಾಶ

ಕಿಮ್ಸ್‌ನಲ್ಲಿ ಅತ್ಯಾಧುನಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನವದೆಹಲಿ (NCDC) ಮತ್ತು ಕಿಮ್ಸ್‌ ನಿರ್ದೇಶಕರ ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.

ಸಚಿವ ಪ್ರಲ್ಹಾದ್‌ ಜೋಶಿ ಪ್ರಯತ್ನದ ಫಲ

ಹುಬ್ಬಳ್ಳಿಯಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕಾಗಿ ಜೆ.ಪಿ. ನಡ್ಡಾ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಧಾರವಾಡ ಸಂಸದರು ಆಗಿರುವ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಮನವಿ ಮಾಡಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಇಂದು ಪ್ರಯೋಗಾಲಯ ಸ್ಥಾಪನೆ ಸಾಕಾರಗೊಂಡಿದೆ.

ದೇಶದ 8 ಕಡೆ ಶಾಖೆ

ಪ್ರಸ್ತುತ, ದೇಶದ 8 ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಶೋಧನಾ ಮತ್ತು ರೋಗ ನಿಯಂತ್ರಣ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ಸ್ಥಾಪನೆಗೂ ಇದೀಗ ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ತಮ್ಮ ಪ್ರಸ್ತಾಪ, ಮನವಿಯನ್ನು ಪುರಸ್ಕರಿಸಿ ಪ್ರಧಾನಿ ಮೋದಿ ಅವರು ಪ್ರಸ್ತುತ ಪ್ರಾದೇಶಿಕ ಪ್ರಯೋಗಾಲಯವನ್ನು ಮಂಜೂರು ಮಾಡಿದ್ದಾರೆ. ಇದಕ್ಕಾಗಿ ಕಿಮ್ಸ್ ಅವರಣದಲ್ಲಿ 27 ಗುಂಟೆ ಪ್ರತ್ಯೇಕ ಜಾಗವನ್ನೂ ಮೀಸಲಿರಿಸಲಾಗಿದೆ. ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತವಾದ ಈ ಪ್ರಯೋಗಾಲಯದ ಶಾಖೆಗೆ ಅಂದಾಜು 16 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದೂ ಸಚಿವ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: T20 World Cup 2024 : ಭಾರತ- ಬಾಂಗ್ಲಾ ಸೂಪರ್​ 8 ಪಂದ್ಯಕ್ಕೆ ಮಳೆ ಅಡಚಣೆ ಇದೆಯೇ?

ಎಚ್ 1 ಎನ್ I (H1N1), ಕೊರೋನಾ, ಚಿಕನ್ ಗುನ್ಯಾ, ನಿಫಾದಂತಹ ಸಾಂಕ್ರಾಮಿಕ ರೋಗಗಳು ಬದಲಾದ ರೂಪದಲ್ಲಿ ಮತ್ತೆ ಮತ್ತೆ ಹರಡುತ್ತಿರುವ ಕಾರಣ ಉತ್ತರ ಕರ್ನಾಟಕ ಭಾಗದಲ್ಲಿ ಈ ಪ್ರಯೋಗಾಲಯದ ಅಗತ್ಯತೆ ಇತ್ತು ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.

ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯಕ್ಕಾಗಿ ದೂರದ ಪ್ರದೇಶಗಳಿಗೆ ಅಲೆಯುವುದರಿಂದ ರೋಗ ಪೀಡಿತರ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಅಲ್ಲದೇ, ಕೆಲವೊಮ್ಮೆ ಪ್ರಾಣ ಹಾನಿ ಸಂಭವವನ್ನೂ ತಳ್ಳಿ ಹಾಕುವಂತಿರಲಿಲ್ಲ. ಹೀಗಾಗಿ ಈ ಅಂಶಗಳನ್ನು ಆರೋಗ್ಯ ಸಚಿವರಾಗಿದ್ದ ನಡ್ಡಾ ಮತ್ತು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರ ಪರಿಣಾಮ ಇಂದು ಪ್ರಯೋಗಾಲಯ ಸ್ಥಾಪನೆ ಒಡಂಬಡಿಕೆ ಸಾಫಲ್ಯ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಸಾಸ್ಟಕ್ಟರ್ ಮಿಶನ್ ಅಡಿ BSL3 ಫೆಸಿಲಿಟಿಸ್ ಮಾದರಿಯ ಒಟ್ಟು 13 ಹೊಸ (4 ಮೊಬೈಲ್ ಮತ್ತು 9 ಸಾಂಸ್ಥಿಕ) ಪ್ರಯೋಗಾಲಯಗಳನ್ನು ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಪೈಕಿ ಹುಬ್ಬಳ್ಳಿಯ ಕಿಮ್ಸ್ ಕೂಡಾ ಸೇರಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

ಶೀಘ್ರ ಭೂಮಿಪೂಜೆ

ಹುಬ್ಬಳ್ಳಿಯಲ್ಲಿ ಶೀಘ್ರದಲ್ಲೇ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಶಾಖೆ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನೆರವೇರಲಿದೆ ಎಂದು ತಿಳಿಸಿರುವ ಅವರು, ಹುಬ್ಬಳ್ಳಿಗೆ ಈ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ, ಸಚಿವ ಪ್ರಲ್ಹಾದ್‌ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

Continue Reading

ಆರೋಗ್ಯ

International Yoga day 2024: ಎಚ್ಚರವಾಗಿದ್ದೇ ನಿದ್ದೆ ಮಾಡಬಹುದೆ? ಯೋಗನಿದ್ರೆ ತಂತ್ರ ಕಲಿಯಿರಿ!

International Yoga day 2024: ಯೋಗನಿದ್ರೆಯನ್ನು ಸರಿಯಾದ ರೀತಿಯಲ್ಲಿ (Benefits of Yoga Nidra) ಅಭ್ಯಾಸ ಮಾಡುವುದರಿಂದ ಮೆದುಳು ಗಾಢವಾದ ವಿಶ್ರಾಂತಿಗೆ ಜಾರುತ್ತದೆ ಮತ್ತು ಯೋಗನಿದ್ರೆಯ ನಂತರ, ಪ್ರಖರವಾದ ಜಾಗೃತ ಸ್ಥಿತಿಯಲ್ಲಿ ಇರುತ್ತದೆ ಎನ್ನುತ್ತವೆ ವೈಜ್ಞಾನಿಕವಾಗಿ ನಡೆಸಿದ ಅಧ್ಯಯನಗಳು. ಆದರೆ ಈ ಬಗ್ಗೆ ಪ್ರಾಚೀನ ಯೋಗಗ್ರಂಥಗಳು ಹೇಳುವುದು ಭಿನ್ನವಾಗಿದೆ. ಏನಿದು? ಈ ಲೇಖನ ಓದಿ.

VISTARANEWS.COM


on

International Yoga day 2024
Koo

ನಿದ್ದೆ ಎಂದರೆ ಮೈ-ಮೆದುಳಿಗೆಲ್ಲ (International Yoga day 2024) ಒಳ್ಳೆಯ ವಿಶ್ರಾಂತಿ ದೊರೆತಂತೆ. ಆದರೆ ಯೋಗ ನಿದ್ರೆ ಇದಕ್ಕಿಂತ ಸ್ವಲ್ಪ ಭಿನ್ನ. ಮೈಮರೆತು ನಿದ್ದೆ ಮಾಡದೆಯೇ, ಮೈ-ಮನಗಳಿಗೆ ಆಳವಾದ ವಿಶ್ರಾಂತಿಯನ್ನು ನೀಡುವಂಥ ಕ್ರಮವಿದು. ನರಗಳಿಗೆಲ್ಲ ಪುನಶ್ಚೇತನ ನೀಡಿ, ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಯೋಗನಿದ್ರೆಗಿದೆ ಎನ್ನುವುದು ವೈಜ್ಞಾನಿಕ ಪ್ರಯೋಗಗಳಿಂದ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಎಚ್ಚರ ಇದ್ದಂತೆಯೇ ನಿದ್ದೆಗೆ ಜಾರುವ ಇದೆಂಥ ಯೋಗ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ದೆಹೆಲಿಯ ಐಐಟಿ, ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಸಹಿತ ಕೆಲವು ವೈದ್ಯಕೀಯ ಸಂಸ್ಥೆಗಳು ಯೋಗ ನಿದ್ರೆಯಿಂದ ಮೆದುಳಿನ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿವೆ. ಈ ಅಧ್ಯಯನಗಳ ಪ್ರಕಾರ, ಯೋಗನಿದ್ರೆಯನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದರಿಂದ ಮೆದುಳು ಗಾಢವಾದ ವಿಶ್ರಾಂತಿಗೆ ಜಾರುತ್ತದೆ ಮತ್ತು ಯೋಗನಿದ್ರೆಯ ನಂತರ, ಪ್ರಖರವಾದ ಜಾಗೃತ ಸ್ಥಿತಿಯಲ್ಲಿ ಇರುತ್ತದೆ. “ಭಾವನೆಗಳನ್ನು ಸಂಸ್ಕರಿಸುವ ಮೆದುಳಿನ ಭಾಗವೇ ಜಾಗೃತಗೊಳ್ಳುವುದನ್ನು ಯೋಗನಿದ್ರೆ ಮಾಡುವಾಗ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಇಡೀ ಅಧ್ಯಯನ ಕುತೂಹಲ ಕೆರಳಿಸಿದೆ” ಎನ್ನುತ್ತಾರೆ ಅಧ್ಯಯನಕಾರರು. ಕೇವಲ ಇದೊಂದೇ ಅಲ್ಲ, ಈವರೆಗೆ ನಡೆಸಲಾದ ಬಹಳಷ್ಟು ವೈಜ್ಞಾನಿಕ ಅಧ್ಯಯನಗಳು ಯೋಗನಿದ್ರೆಯು ಮೆದುಳಿನ ಮೇಲೆ, ಭಾವನಾತ್ಮಕ ಆರೋಗ್ಯದ ಮೇಲೆ ಹಾಗೂ ಈ ಮೂಲಕ ದೇಹಾರೋಗ್ಯದ ಮೇಲೆ ಬೀರುವ ಧನಾತ್ಮಕ ಪರಿಣಾಮಗಳನ್ನು ಸ್ಪಷ್ಟವಾಗಿ ಗುರುತಿಸಿವೆ.

what is yoga nidra

ಏನಿದು ಯೋಗನಿದ್ರೆ?

ಯೋಗನಿದ್ರೆ ಎಂದರೆ ನಿದ್ರೆ ಹಾಗೂ ಎಚ್ಚರಗಳ ನಡುವಿನ ಒಂದು ಸ್ಥಿತಿ. ಅಂದರೆ ಜಾಗೃತ ಕನಸಿನಂತೆ ಎಂದು ಭಾವಿಸಬೇಡಿ, ಹಾಗಲ್ಲ. ದೇಹ ಮತ್ತು ಮನಸ್ಸಿಗೆ ನಮ್ಮೊಳಗಿನದೇ ಪ್ರಜ್ಞೆಯೊಂದು ವಿಶ್ರಾಂತಿಯನ್ನು ಒದಗಿಸುತ್ತದೆ. ಸುಖನಿದ್ರೆಯ ಅನುಭವವನ್ನು ನೀಡಿದರೂ, ನಿದ್ರೆಗೆ ಜಾರಿರುವುದಿಲ್ಲ. ಪ್ರಪಂಚದ ವ್ಯವಹಾರಗಳಿಂದ ದೂರವಾಗಿ, ಮಾನಸಿಕ ಗೋಜಲುಗಳೆಲ್ಲ ಮಾಯವಾಗಿ, ಸುಪ್ತ ಚೈತನ್ಯವೊಂದು ಎಚ್ಚರಗೊಳ್ಳುವ ಸ್ಥಿತಿಯಿದು. ಅಭ್ಯಾಸದ ಮೂಲಕ ಈ ಅಂಶಗಳು ನಮ್ಮ ಅರಿವಿಗೆ ಬರುವುದಕ್ಕೆ ಸಾಧ್ಯ.
ಯೋಗನಿದ್ರೆಯ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ಹೇಳುವುದು ಹೀಗಾದರೆ, ಪ್ರಾಚೀನ ಯೋಗ ಗ್ರಂಥಗಳು ಹೇಳುವುದು ಬೇರೆ. ಯೋಗನಿದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ, ನಮ್ಮ ಸುಪ್ತ ಮನದಲ್ಲಿ ಹುದುಗಿ ಹೋದ ವಿಷಯಗಳನ್ನು ಮೇಲೆತ್ತಿ ತಂದು, ಅದರಲ್ಲಿ ಬೇಕಾದ್ದನ್ನು ಇರಿಸಿಕೊಂಡು ಬೇಡದ್ದನ್ನು ಹೊರಗೆಸೆಯಲು ಸಾಧ್ಯವಿದೆ. ಈ ಮೂಲಕ ಗಾಢವಾದ ಚಿಕಿತ್ಸಕ ಗುಣವನ್ನಿದು ಹೊಂದಿದೆ. ನಿದ್ರೆಗೆ ಜಾರದೆಯೇ ಗಾಢವಾದ ವಿಶ್ರಾಂತಿಗೆ ಜಾರುವುದು ಅಭ್ಯಾಸದಿಂದಲೇ ಸಿದ್ಧಿಸಬೇಕು. ಆದರೆ ಸೂಕ್ತ ಮಾರ್ಗದರ್ಶನದಿಂದ ಇದನ್ನು ಸುಲಭವಾಗಿಯೇ ಅಭ್ಯಾಸ ಮಾಡಬಹುದು.

ಇದನ್ನೂ ಓದಿ: International Yoga Day 2024: ಯೋಗ ಮಾಡುವ ಮ್ಯಾಟ್‌ ಹೇಗಿದ್ದರೆ ಅನುಕೂಲ?

ಹೇಗೆ ನಡೆಯಿತು?

ಈ ಅಧ್ಯಯನಕ್ಕಾಗಿ, ಎರಡು ಪ್ರತ್ಯೇಕ ಗುಂಪುಗಳನ್ನು ಇರಿಸಿಕೊಳ್ಳಲಾಗಿತ್ತು. ಒಂದು ಗುಂಪಿನಲ್ಲಿ ಧ್ಯಾನ ಮತ್ತು ಯೋಗನಿದ್ರೆಯಂಥ ಕ್ರಮಗಳ ಅಭ್ಯಾಸವೇ ಇಲ್ಲದವರಿದ್ದರು. ಇನ್ನೊಂದು ಗುಂಪಿನಲ್ಲಿ ಧ್ಯಾನ ಮತ್ತು ಯೋಗಾಭ್ಯಾಸದಲ್ಲಿ ಸುಮಾರು 3000 ತಾಸುಗಳಷ್ಟು ಸರಾಸರಿ ಅನುಭವ ಹೊಂದಿದವರಿದ್ದರು. ಇವರುಗಳ ಮೆದುಳು ಮತ್ತು ನರಮಂಡಲಗಳನ್ನು ಅಧ್ಯಯನ ನಡೆಸಿದಾಗ, ಯೋಗನಿದ್ರೆಯ ಅಭ್ಯಾಸದಿಂದ ದೇಹ ಮತ್ತು ಮೆದುಳಿನ ಮೇಲಾಗುವ ಪೂರಕ ಪರಿಣಾಮಗಳು ಸ್ಪಷ್ಟವಾದವು. ಯೋಗನಿದ್ರೆಯನ್ನು ಹೆಚ್ಚು ನಿಯಮಿತವಾಗಿ ಮತ್ತು ದೀರ್ಘವಾಗಿ ಅಭ್ಯಾಸ ಮಾಡುವವರಲ್ಲಿ, ಮೆದುಳಿನ ಹಿನ್ನೆಲೆಯ ಚಟುವಟಿಕೆಗಳು ಅಂದರೆ ಬೇಡದ ಯೋಚನೆಗಳು, ಚಿಂತೆಯ ಗೋಜಲುಗಳು- ಇಂಥವೆಲ್ಲ ಕಡಿಮೆಯಿದ್ದವು. ಮಾತ್ರವಲ್ಲ, ಮೆದುಳಿನೊಳಗೆ ಒಂದಕ್ಕೊಂದು ಭಾಗಗಳ ಸಂವಹನ ಉಳಿದವರಿಗಿಂತ ಚೆನ್ನಾಗಿತ್ತು.
ಯೋಗ ನಿದ್ರೆಗಾಗಿ ಈ ಎರಡೂ ಗುಂಪುಗಳ ಸದಸ್ಯರಿಗೆ ನಿರ್ದೇಶಿತ ಧ್ಯಾನ ಅಥವಾ ಯೋಗನಿದ್ರೆಯ ಆಡಿಯೊಗಳನ್ನು ಕೇಳಿಸಲಾಗುತ್ತಿತ್ತು. ಇವೆಲ್ಲ ಅಭ್ಯಾಸವಿಲ್ಲದ ಗುಂಪು ಕ್ರಮೇಣ ಇದಕ್ಕೆ ಹೊಂದಿಕೊಂಡು, ಕೆಲವು ಬದಲಾವಣೆಗಳಿಗೆ ಸ್ಪಂದಿಸುತಿತ್ತು. ಆದರೆ ಈ ಎರಡೂ ಗುಂಪುಗಳಲ್ಲಿ ಭಾಷೆ, ಸಂವಹನ ಮತ್ತು ಭಾವನೆಗಳಿಗೆ ಸಂಬಂಧಿಸಿದ ಮೆದುಳಿನ ಭಾಗಗಳು ಯೋಗನಿದ್ರೆಯ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇದ್ದಿದ್ದನ್ನು ಅಧ್ಯಯನ ದಾಖಲಿಸಿದೆ.

Continue Reading

ಆರೋಗ್ಯ

Health Tips: ನೀವು ಕುಡಿಯುವ ಹಾಲಿನಲ್ಲಿ ಕಲಬೆರಕೆಯೇ? ಹೀಗೆ ಸುಲಭವಾಗಿ ಪತ್ತೆ ಹಚ್ಚಿ!

Health Tips: ಒಂದಿಲ್ಲೊಂದು ಬಗೆಯಲ್ಲಿ ದಿನವೂ ಚಹಾ, ಕಾಫಿ, ಡೆಸರ್ಟ್‌ಗಳು, ಪನೀರ್‌, ತುಪ್ಪ, ಬೆಣ್ಣೆ ಹೀಗೆ ಹಲವಾರು ಹಾಲಿನ ಉತ್ಪನ್ನಗಳು ನಮ್ಮ ಹೊಟ್ಟೆ ಸೇರುತ್ತಲೇ ಇರುತ್ತವೆ. ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಮೂಲಕ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸೇರುತ್ತಿವೆ ಅಂದುಕೊಂಡರೆ ಕೆಲವೊಮ್ಮೆ ನಮ್ಮ ಲೆಕ್ಕಾಚಾರ ತಪ್ಪಾಗಬಹುದು ಕಾರಣ ಇಂದು ಎಲ್ಲ ಆಹಾರ ವಸ್ತುಗಳಲ್ಲೂ ಇರುವ ಕಲಬೆರಕೆ ಸಾಮಾನ್ಯ. ನೀವು ಖರೀದಿ ಮಾಡುವ ಹಾಲು ಸರಿಯಾದ ಆರೋಗ್ಯಕರ ಮಾದರಿಯಲ್ಲಿ ಪ್ಯಾಕೇಜ್‌ ಮಾಡಿಲ್ಲವಾದರೆ, ಅದರಲ್ಲಿ ಕಲಬೆರೆಕೆಯಾಗಿರುವ ಸಾಧ್ಯತೆಗಳು ಹೆಚ್ಚು.

VISTARANEWS.COM


on

Health Tips
Koo

ಭಾರತದಲ್ಲಿ ನಾವು ಹೆಚ್ಚಿನ ಮಂದಿ (Health Tips) ನಿತ್ಯವೂ ಹಾಲು ಕುಡಿಯುವುದು ರೂಢಿ. ಮಕ್ಕಳಿಗೂ ಹಾಲು ನಿತ್ಯವೂ ಎರಡೆರಡು ಬಾರಿ ಕುಡಿಸುತ್ತೇವೆ. ಅಷ್ಟೇ ಅಲ್ಲ, ಹಾಲಿನ ಉಪಯೋಗವೂ ಜಾಸ್ತಿಯೇ. ನೇರವಾಗಿ ಹಾಲು ಕುಡಿಯದಿದ್ದರೂ ಒಂದಿಲ್ಲೊಂದು ಬಗೆಯಲ್ಲಿ ದಿನವೂ ಚಹಾ, ಕಾಫಿ, ಡೆಸರ್ಟ್‌ಗಳು, ಪನೀರ್‌, ತುಪ್ಪ, ಬೆಣ್ಣೆ ಹೀಗೆ ಹಲವಾರು ಹಾಲಿನ ಉತ್ಪನ್ನಗಳು ನಮ್ಮ ಹೊಟ್ಟೆ ಸೇರುತ್ತಲೇ ಇರುತ್ತವೆ. ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಮೂಲಕ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸೇರುತ್ತಿವೆ ಅಂದುಕೊಂಡರೆ ಕೆಲವೊಮ್ಮೆ ನಮ್ಮ ಲೆಕ್ಕಾಚಾರ ತಪ್ಪಾಗಬಹುದು ಕಾರಣ ಇಂದು ಎಲ್ಲ ಆಹಾರ ವಸ್ತುಗಳಲ್ಲೂ ಇರುವ ಕಲಬೆರಕೆ ಸಾಮಾನ್ಯ. ನೀವು ಖರೀದಿ ಮಾಡುವ ಹಾಲು ಸರಿಯಾದ ಆರೋಗ್ಯಕರ ಮಾದರಿಯಲ್ಲಿ ಪ್ಯಾಕೇಜ್‌ ಮಾಡಿಲ್ಲವಾದರೆ, ಅದರಲ್ಲಿ ಕಲಬೆರೆಕೆಯಾಗಿರುವ ಸಾಧ್ಯತೆಗಳು ಹೆಚ್ಚು. ಕೇವಲ ನೀರಷ್ಟೇ ಅಲ್ಲ, ಡಿಟರ್ಜೆಂಟ್‌ಗಳು, ಯೂರಿಯಾ, ಸ್ಟಾರ್ಚ್‌, ಗ್ಲೂಕೋಸ್‌ ಇತ್ಯಾದಿಗಳ ಕಲಬೆರಕೆಯೂ ಹಾಲಿನ ಜೊತೆಗೆ ಸೇರಿರುವ ಸಂಭವವಿದೆ.

glass of milk

ಪೋಷಕಾಂಶದಲ್ಲಿ ನಷ್ಟ

ಹಾಲಿಗೆ ನೀರು ಸೇರಿಸುವುದರಿಂದ ಪೋಷಕಾಂಶದಲ್ಲಿ ನಷ್ಟವಾಗುತ್ತದೆ. ಹಾಲಿಗೆ ಸೇರಿಸುವ ನೀರು ಉತ್ತಮ ಗುಣಮಟ್ಟದ್ದಲ್ಲವಾದರೆ, ಅಥವಾ ಕಲುಷಿತವಾಗಿದ್ದರೆ ಅದು ಇದು ಆರೋಗ್ಯಕ್ಕೂ ಅಪಾಯವೇ. ಇನ್ನಷ್ಟು ರೋಗಗಳನ್ನೂ ಆಹ್ವಾನಿಸುತ್ತದೆ. ಸಂಶೋಧನಾ ವರದಿಗಳ ಪ್ರಕಾರ, ಹಾಲಿಗೆ ನೀರು ಸೇರಿಸುವುದರಿಂದ ಹಾಲಿನಲ್ಲಿರುವ ಘನ ಅಂಶಗಳ ಕಡಿಮೆಯಾಗುವುದಷ್ಟೇ ಅಲ್ಲ, ಅದರ ನೊರೆ ಹಾಗೂ ಕ್ರೀಮೀ ಗುಣವೂ ಕಡಿಮೆಯಾಗುತ್ತದೆ. ತೆಳುವಾಗುತ್ತದೆ. ಹಾಗಾಗಿ ಇದಕ್ಕೆ ಯೂರಿಯಾದಂತಹ ರಾಸಾಯನಿಕಗಳನ್ನು ಹಾಕುವುದರಿಂದ ಮತ್ತೆ ಹಾಲು ದಪ್ಪವಾಗಿ ಕ್ರೀಮೀ ಗುಣವನ್ನು ಪಡೆಯುತ್ತದೆ. ಹೀಗೂ ಕಲಬೆರಕೆಯನ್ನು ಮಾಡುವ ಮೂಲಕ ಕಲಬೆರಕೆಯಾಗಿರುವುದೇ ತಿಳಿಯದಂತೆ ಮಾಡುತ್ತಾರೆ. ಹೀಗಾಗಿ, ಯೂರಿಯಾದಂತಹ ರಾಸಾಯನಿಕ ಬೆರಕೆಯಾದರೆ ಹಾಲು ಉತ್ತಮ ಹಾಲಿನಂತೆಯೇ ಮೇಲ್ನೋಟಕ್ಕೆ ಕಂಡುಬರುವುದರಿಂದ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಕಿಡ್ನಿ ಹಾಗೂ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿಕೊಂಡಂತೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚೆಗೆ ಎಫ್‌ಎಸ್‌ಎಸ್‌ಎಐ ಹಂಚಿಕೊಂಡ ಸರಳವಾದ ಹಾಗೂ ಸುಲಭವಾದ ಹಾಲಿನ ಪರೀಕ್ಷೆಯನ್ನು ನೀವೂ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದು. ನಿಮ್ಮ ಹಾಲಿಗೆ ನೀರು ಸೇರಿಸಲಾಗಿದೆಯೋ ಎಂಬುದನ್ನು ನೀವು ಈ ಮೂಲಕ ಪತ್ತೆ ಹಚ್ಚಬಹುದು ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.

ಗಾಜಿನ ತಟ್ಟೆಯ ಮೇಲೆ ಹಾಕಿ

ಒಂದು ಸ್ವಚ್ಛವಾದ ಗ್ಲಾಸ್‌ ಸ್ಲೈಡ್‌ ಅಥವಾ ಪ್ಲೇಟ್‌ ಅನ್ನು ತೆಗೆದುಕೊಳ್ಳಿ. ಒಂದೆರಡು ಎಂಎಲ್‌ ಹಾಲನ್ನು ಈ ಪ್ಲೇಟ್‌ ಅಥವಾ ಗಾಜಿನ ತಟ್ಟೆಯ ಮೇಲೆ ಹಾಕಿ. ಆ ಹಾಲಿನ ಬಿಂದು ಬಹಳ ನಿಧಾನವಾಗಿ ಹರಿದರೆ ಹಾಗೂ ಹರಿದ ಜಾಗದಲ್ಲಿ ಬಿಳಿಯ ಮಾರ್ಕ್‌ ಅನ್ನು ಉಳಿಸಿದೆ ಎಂದಾದಲ್ಲಿ ನಿಮ್ಮ ಹಾಲು ಶುದ್ಧವಾಗಿದೆ ಎಂದರ್ಥ. ಹಾಲು ತಕ್ಷಣ ಹರಿದು ಹೋದರೆ ಹಾಗೂ ಯಾವುದೇ ಮಾರ್ಕ್‌ ಅನ್ನು ಉಳಿಸಿಲ್ಲವಾದರೆ, ಖಂಡಿತವಾಗಿ ಆ ಹಾಲಿಗೆ ನೀರು ಸೇರಿಸಲಾಗಿದೆ ಎಂದರ್ಥ.

ಇದನ್ನೂ ಓದಿ: Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

ಯೂರಿಯಾ ಕಲಬರಕೆ ಪತ್ತೆ ಹೇಗೆ?

ಹಾಗಾದರೆ ನಿಮ್ಮ ಹಾಲಿಗೆ ಯೂರಿಯಾ ಸೇರಿಸಿ ಕಲಬರಕೆ ಮಾಡಿದ್ದಾರೆ ಎಂದರೆ ಅದನ್ನು ಕಂಡು ಹಿಡಿಯುವುದು ಹೇಗೆ ಅಂತೀರಾ? ಅದಕ್ಕೂ ಎಫ್‌ಎಸ್‌ಎಸ್‌ಎಐ ಸರಳ ಉಪಾಯವನ್ನು ಹೇಳಿದೆ. ಒಂದು ಟೆಸ್ಟ್‌ ಟ್ಯೂಬ್‌ನಲ್ಲಿ ಒಂದು ಚಮಚದಷ್ಟು ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚದಷ್ಟು ಸೋಯಾಬೀನ್‌ ಅಥವಾ ಗೊಗರಿ ಬೇಳೆಯ ಪುಡಿಯನ್ನು ಸೇರಿಸಿ. ಟೆಸ್ಟ್‌ ಟ್ಯೂಬ್‌ ಅನ್ನು ಚೆನ್ನಾಗಿ ಕುಲುಕಿಸುವ ಮೂಲಕ ಅವನ್ನು ಮಿಕ್ಸ್‌ ಮಾಡಿ. ನಂತರ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಕೆಂಪು ಲಿಟ್ಮಸ್‌ ಪೇಪರನ್ನು ಟೆಸ್ಟ್‌ ಟ್ಯೂಬ್‌ ಒಳಗೆ ಮುಳುಗಿಸಿ. ಒಂದರ್ಧ ನಿಮಿಷ ಕಾಯಿರಿ. ನಂತರ ಈ ಪೇಪರನ್ನು ಅದರಿಂದ ಹೊರಗೆ ತೆಗೆಯಿರಿ. ಯಾವುದೇ ಕಲಬೆರಕೆಯಾಗಿರದಿದ್ದರೆ ಈ ಲಿಟ್ಮಸ್‌ ಪೇಪರ ನತನ ಬಣ್ಣ ಬದಲಾಯಿಸದು. ಆದರೆ, ಕಲಬೆರಕೆಯ ಹಾಲು ನಿಮ್ಮದಾಗಿದ್ದರೆ ನಿಮ್ಮ ಈ ಕೆಂಪು ಲಿಟ್ಮಸ್‌ ಪೇಫರ್‌ ನೀಲಿಯಾಗಿ ಬದಲಾಗುತ್ತದೆ.

Continue Reading

ಆರೋಗ್ಯ

International Yoga Day 2024: ಈ 5 ಯೋಗ ಭಂಗಿಗಳು ಬೆನ್ನು ನೋವನ್ನು ನಿವಾರಿಸುತ್ತವೆ!

ಈಗ ಏನಿದ್ದರೂ ಹೆಚ್ಚು ಕಾಲ ಕುಳಿತು ಮಾಡುವ ಕೆಲಸಗಳೇ ಅಧಿಕ. ಹೀಗಾಗಿ ಬೆನ್ನು ನೋವು ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಯೋಗದಿಂದ ನಾವು ಬೆನ್ನು ನೋವನ್ನು ದೂರ ಮಾಡಲು ಸಾಧ್ಯವಿದೆ. ಅದಕ್ಕಾಗಿ ಪೂರಕ ಯೋಗ (International Yoga Day 2024) ಭಂಗಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮನೆಯಲ್ಲೇ ಇದ್ದು ನೀವು ಇದನ್ನು ಪ್ರಯತ್ನಿಸಬಹುದು.

VISTARANEWS.COM


on

By

International Yoga Day 2024
Koo

ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಬೆನ್ನುನೋವಿಗೆ (back pain) ಕಾರಣವಾಗಬಹುದು. ವಿಶೇಷವಾಗಿ ಕಳಪೆ ಭಂಗಿಯಲ್ಲಿ (posture) ಕುಳಿತುಕೊಳ್ಳುವುದು ಅಥವಾ ಆಸನ ವ್ಯವಸ್ಥೆ ( seating arrangement) ಸೂಕ್ತವಾಗಿ ಇಲ್ಲದೇ ಇದ್ದರೆ ಇದು ಬೆನ್ನು ಮೂಳೆಯ (Back bone) ಮೇಲೆ ಪರಿಣಾಮ ಬೀರುತ್ತದೆ. ಬೆನ್ನುಮೂಳೆಯನ್ನು ಬೆಂಬಲಿಸುವ ಸ್ನಾಯುಗಳನ್ನು ವಿಸ್ತರಿಸುವ ಮತ್ತು ಬಲಪಡಿಸುವ ಮೂಲಕ ಬೆನ್ನು ಮೂಳೆಯನ್ನು ಬಲ ಪಡಿಸಬಹುದು. ಬೆನ್ನು ನೋವನ್ನು ದೂರ ಮಾಡಬಹುದು.

ದೀರ್ಘಕಾಲ ಕುಳಿತುಕೊಳ್ಳುವ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ಯೋಗವು (International Yoga Day 2024) ಪರಿಣಾಮಕಾರಿ ಮಾರ್ಗವಾಗಿದೆ. ಇದಕ್ಕೆ ಸೂಕ್ತವಾದ ಭಂಗಿಗಳು ಹಂತ- ಹಂತವಾಗಿ ಇಲ್ಲಿ ವಿವರಿಸಲಾಗಿದೆ. ಈ ಆಸನಗಳನ್ನು ಮಾಡುವ ಮೂಲಕ ಬೆನ್ನು ನೋವನ್ನು ದೂರ ಮಾಡಬಹುದು.


ಬಾಲಾಸನ

ಕಾಲುಗಳನ್ನು ಮಡಚಿ ನೇರವಾಗಿ ಕುಳಿತುಕೊಳ್ಳಿ. ಈ ಹಂತದಲ್ಲಿ ಪಾದಗಳು ಮೇಲ್ಮುಖವಾಗಿ ಇರುತ್ತವೆ. ಬಳಿಕ ನಿಧಾನವಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಮುಂದಕ್ಕೆ ಬಾಗಿಸಿ. ಈ ಹಂತದಲ್ಲಿ ನಿಮ್ಮ ತೋಳುಗಳನ್ನು ಸಾಧ್ಯವಾದಷ್ಟು ಮುಂದಕ್ಕೆ ಚಾಚಬೇಕು. ಮುಖ ಮತ್ತು ಅಂಗೈ ನೇರವಾಗಿ ನೆಲಕ್ಕೆ ತಾಕಬೇಕು. ಇದು ವಿಶ್ರಾಂತಿ ಭಂಗಿಯಾಗಿರುವುದರಿಂದ ಆರಾಮ ಮತ್ತು ವಿಶ್ರಾಂತಿ ನೀಡುತ್ತದೆ. 10- 15 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ಪ್ರತಿದಿನ 4- 5 ಬಾರಿ ಇದನ್ನು ಮಾಡಿ.


ಅಧೋ ಮುಖ ಶ್ವಾನಾಸನ

ನೆಲಕ್ಕೆ ಮುಖಮಾಡಿ ನೆಲದ ಮೇಲೆ ಮಲಗಿಕೊಳ್ಳಿ. ಮುಂಡವನ್ನು ನಿಧಾನವಾಗಿ ಮೇಲಕ್ಕೆತ್ತಿ ಮತ್ತು ದೇಹವನ್ನು ಪರ್ವತದಂತಹ ರಚನೆಯನ್ನು ರೂಪಿಸಿ. ಭುಜಗಳಿಗೆ ಹೋಲಿಸಿದರೆ ಅಂಗೈಗಳು ಹೆಚ್ಚು ದೂರದಲ್ಲಿರಬೇಕು. ಪಾದಗಳನ್ನು ಪರಸ್ಪರ ಪಕ್ಕದಲ್ಲಿ ಇರಿಸಬೇಕು. ಈ ಹಂತದಲ್ಲಿ, ನೆಲವನ್ನು ಸ್ಪರ್ಶಿಸುವ ಏಕೈಕ ದೇಹದ ಭಾಗಗಳು ನಿಮ್ಮ ಅಂಗೈ ಮತ್ತು ಪಾದಗಳಾಗಿರಬೇಕು. ಮುಖವು ತೋಳು ಮಧ್ಯೆ ಒಳಮುಖವಾಗಿ ಮತ್ತು ಕೆಳಮುಖವಾಗಿರಬೇಕು. ದೇಹವನ್ನು ತ್ರಿಕೋನವನ್ನಾಗಿ ರೂಪಿಸಬೇಕು. ಕೈಗಳು, ಸೊಂಟ ಮತ್ತು ಪಾದಗಳು ಮೂಲೆಗಳಾಗಿವೆ. ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಇರಬೇಕು. ಕನಿಷ್ಠ 10 ಬಾರಿ ಪುನರಾವರ್ತಿಸಿ.


ಭುಜಂಗಾಸನ

ನೆಲದ ಮೇಲೆ ಮಲಗಿ, ನೆಲಕ್ಕೆ ಮುಖ ಮಾಡಿ. ಅಂಗೈಗಳನ್ನು ಬದಿಗಳಲ್ಲಿ ಇರಿಸಿ ಮತ್ತು ನಿಧಾನವಾಗಿ ಮುಂಡವನ್ನು ಮೇಲಕ್ಕೆತ್ತಿ. ಈ ಹಂತದಲ್ಲಿ ನೆಲವನ್ನು ಅಂಗೈಗಳು ಮತ್ತು ಸೊಂಟದ ಕೆಳಗಿನ ಭಾಗ ನೆಲವನ್ನು ಸ್ಪರ್ಶಿಸಲಿ. ಇದರಲ್ಲಿ 30 ಸೆಕೆಂಡುಗಳ ಇರಿ. ದಿನಕ್ಕೆ 3- 4 ಬಾರಿ ಇದನ್ನು ಪುನರಾವರ್ತಿಸಿ.


ಪಶ್ಚಿಮೋತ್ತನಾಸನ

ಕಾಲುಗಳಲ್ಲಿ ನೇರವಾಗಿ ಚಾಚಿ ಕುಳಿತುಕೊಳ್ಳಿ ಪಾದಗಳ ಅಡಿಭಾಗವು ಮುಂಭಾಗದಲ್ಲಿ ಇರಬೇಕು. ಮುಂಡವನ್ನು ಕಾಲುಗಳಿಗೆ ಮತ್ತು ಸಾಧ್ಯವಾದಷ್ಟು ಹತ್ತಿರಕ್ಕೆ ತನ್ನಿ. ಪಾದಗಳನ್ನು ಹಿಡಿದಿಡಲು ಕೈಗಳನ್ನು ಬಳಸಬಹುದು.ಹೊಟ್ಟೆ ಮತ್ತು ಎದೆಯು ತೊಡೆಯನ್ನು ಸ್ಪರ್ಶಿಸುತ್ತಿರಬೇಕು. ಮುಖವು ಮುಂಭಾಗದಲ್ಲಿ ಅಥವಾ ಕಾಲುಗಳ ಕಡೆಗೆ ಮುಖ ಮಾಡಬಹುದು. ಈ ಭಂಗಿಯಲ್ಲಿ 10- 20 ಸೆಕೆಂಡುಗಳ ಕಾಲ ಇರಿ. ಮತ್ತೆ ಕುಳಿತುಕೊಳ್ಳಿ. ಇದನ್ನು ಅನುಕೂಲಕ್ಕೆ ತಕ್ಕಂತೆ ಕೆಲವು ಬಾರಿ ಪುನರಾವರ್ತಿಸಬಹುದು.

ಇದನ್ನೂ ಓದಿ: International Yoga Day 2024: ನಗುವುದೂ ಒಂದು ಯೋಗ; ನಕ್ಕರೆ ಅದೇ ಸ್ವರ್ಗ!


ಸೇತು ಬಂಧಾಸನ

ಬೆನ್ನಿನ ಮೇಲೆ ಮಲಗಿ ಮೊಣಕಾಲುಗಳನ್ನು ಬಾಗಿಸಿ. ಪಾದಗಳನ್ನು ನೆಲದ ಮೇಲೆ ದೃಢವಾಗಿ ಇರಿಸಿ. ಅಂಗೈಗಳು ಕೆಳಮುಖವಾಗಿ ಬದಿಗಳಲ್ಲಿ ಇರಿಸಿ. ಉಸಿರನ್ನು ತೆಗೆದುಕೊಂಡು ಸೊಂಟದಿಂದ ಬೆನ್ನನ್ನು ಮೇಲಕ್ಕೆ ಎತ್ತಿ. ಸೊಂಟವನ್ನು ಎತ್ತರಕ್ಕೆ ಹೆಚ್ಚಿಸಲು ಪ್ರಯತ್ನಿಸಿ. 4- 8 ಬಾರಿ ಇದನ್ನು ಮಾಡಿ.

ಯೋಗ ಮಾಡುವಾಗ ಪ್ರತಿ ಭಂಗಿಯಲ್ಲೂ ಹಾಯಾಗಿ ಇರುವಂತೆ ಕಾಳಜಿ ವಹಿಸಿ. ಒಂದು ವೇಳೆ ಬೆನ್ನಿನ ಸಮಸ್ಯೆ ಕಾಣಿಸಿಕೊಂಡರೆ, ಹೆಚ್ಚಾದರೆ ಯೋಗ ಬೋಧಕ ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಯಾವಾಗಲೂ ಒಳ್ಳೆಯದು.

Continue Reading
Advertisement
Kalki 2898 AD Final Trailer Released
ಕರ್ನಾಟಕ2 hours ago

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Sonakshi Sinha
ಬಾಲಿವುಡ್2 hours ago

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

Suryakumar Yadav
ಪ್ರಮುಖ ಸುದ್ದಿ3 hours ago

Suryakumar Yadav : ವಿಶ್ವದ ಬೆಸ್ಟ್​ ಟಿ20 ಆಟಗಾರ ಸೂರ್ಯಕುಮಾರ್​ ಯಾದವ್​ ಎಂದ ಅಂಬಾಟಿ ರಾಯುಡು

Central Government monitoring wheat price stability: Union Minister Pralhad Joshi
ಕರ್ನಾಟಕ3 hours ago

Pralhad Joshi: ಗೋಧಿ ಬೆಲೆ ಸ್ಥಿರತೆಗೆ ಕೇಂದ್ರ ಸರ್ಕಾರದ ಕ್ರಮ; ಪ್ರಲ್ಹಾದ್‌ ಜೋಶಿ

regional Laboratory sanctioned to Kims Hubballi
ಕರ್ನಾಟಕ3 hours ago

Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

Hinduja Family
ವಿದೇಶ3 hours ago

Hinduja Family: ಮನೆಗೆಲಸದವರ ಮೇಲೆ ದೌರ್ಜನ್ಯ; ಹಿಂದುಜಾ ಕುಟುಂಬದ ನಾಲ್ವರಿಗೆ 4.5 ವರ್ಷ ಜೈಲು!

Gautam Gambhir
ಪ್ರಮುಖ ಸುದ್ದಿ3 hours ago

Gautam Gambhir : ಕೋಚ್​ ಹುದ್ದೆ ಅಂತಿಮವಾಗಿಲ್ಲ; ವರದಿಗಳಿಗೆ ವ್ಯತಿರಿಕ್ತ ಹೇಳಿಕೆ ನೀಡಿದ ಗಂಭೀರ್​!

Rishabh Pant
ಪ್ರಮುಖ ಸುದ್ದಿ4 hours ago

Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

Parking Complex
ಬೆಂಗಳೂರು4 hours ago

Parking Complex: ಬೆಂಗಳೂರಿನಲ್ಲಿ ಸುಸಜ್ಜಿತ ಪಾರ್ಕಿಂಗ್‌ ಕಾಂಪ್ಲೆಕ್ಸ್;‌ ಶುಲ್ಕದ ಕುರಿತ ಮಾಹಿತಿ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ7 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ13 hours ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 day ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ7 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌