Oscars 2023: RRR ಸಿನಿಮಾದ ನಾಟು ನಾಟು... ಹಾಡಿಗೆ ಆಸ್ಕರ್ ಪ್ರಶಸ್ತಿ! - Vistara News

ದೇಶ

Oscars 2023: RRR ಸಿನಿಮಾದ ನಾಟು ನಾಟು… ಹಾಡಿಗೆ ಆಸ್ಕರ್ ಪ್ರಶಸ್ತಿ!

ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎಸ್ ‌ಎಸ್ ರಾಜಮೌಳಿ ನಿರ್ದೇಶನ ಹಾಗೂ ರಾಮ ಚರಣ್ ಮತ್ತು ಜೂ. ಎನ್‌ಟಿಆರ್ ಚಿತ್ರವು ಇತಿಹಾಸವನ್ನು ಸೃಷ್ಟಿಸಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಸಂಪೂರ್ಣವಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಆರ್‌ಆರ್‌ಆರ್(RRR) ಚಿತ್ರವು ಪಾತ್ರವಾಗಿದೆ.

VISTARANEWS.COM


on

Oscar 2023: When will the Oscars be announced? How to see Will RRR get an award?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾಸ್ ಏಂಜಲೀಸ್, ಅಮೆರಿಕ: ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎಸ್ ‌ಎಸ್ ರಾಜಮೌಳಿ ನಿರ್ದೇಶನ ಹಾಗೂ ರಾಮ ಚರಣ್ ಮತ್ತು ಜೂ. ಎನ್‌ಟಿಆರ್ ಚಿತ್ರವು ಇತಿಹಾಸವನ್ನು ಸೃಷ್ಟಿಸಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಸಂಪೂರ್ಣವಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಆರ್‌ಆರ್‌ಆರ್(RRR) ಚಿತ್ರವು ಪಾತ್ರವಾಗಿದೆ. ಬೆಸ್ಟ್ ಡ್ಯಾಕುಮೆಂಟರಿ ಶಾರ್ಟ್ ಫಿಲಮ್ ಕೆಟಗರಿಯಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್(the elephant whisperers) ಆಸ್ಕರ್ ಗೆದ್ದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

CWC Meeting: ಇಂದು ದೆಹಲಿಯಲ್ಲಿ CWC ಸಭೆ; ಇಂದೇ ನಿರ್ಧಾರ ಆಗುತ್ತಾ ವಿಪಕ್ಷ ನಾಯಕ ಸ್ಥಾನ?

CWC Meeting:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ CWC ಸದಸ್ಯರು ಭಾಗಿಯಾಗಲಿದ್ದಾರೆ. ಇನ್ನು ಈ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಿಕ್ಕ ಜಯ ಹಾಗೂ ಕೆಲ ರಾಜ್ಯದಲ್ಲಿ ಕಾಂಗ್ರೆಸ್ ಗೆ ಆದ ನಷ್ಟದ ಬಗ್ಗೆ ಅವಲೋಕನ ನಡೆಯಲಿದೆ. ಇಂಡಿಯಾ ಮೈತ್ರಿಕೂಟವನ್ನ ರಾಜ್ಯಗಳಲ್ಲಿ ಹೇಗೆ ಬಳಸಿಕೊಳ್ಳಬೇಕು. ರಾಜ್ಯವಾರು ಚುನಾವಣೆಗಳಲ್ಲಿ ಏನೆಲ್ಲಾ ಬದಲಾವಣೆ ಆಗಬೇಕು ಹಾಗೂ ರಾಜ್ಯವಾರು ಬಂದಿರುವ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚೆ ಇಂದು ನಡೆಯಲಿದೆ.

VISTARANEWS.COM


on

CWC Meeting
Koo

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ(Election Results 2024) ಹೊರಬಿದ್ದ ನಂತರ ಕೇಂದ್ರದಲ್ಲಿ ಸರ್ಕಾರ ರಚಿಸುವ ಕಾಂಗ್ರೆಸ್‌ ಕನಸು ಮತ್ತೊಮ್ಮೆ ಭಗ್ನವಾಗಿದೆ. ಸರ್ಕಾರ ರಚಿಸುವ ಕನಸು ಸ್ವಲ್ಪದರಲ್ಲೇ ಮಿಸ್‌ ಆಗಿರುವುದರಿಂದ ಕಾಂಗ್ರೆಸ್(Congress) ಇದೀಗ ಫಲಿತಾಂಶ ಪರಾಮರ್ಶೆಗೆ ಮುಂದಾಗಿದೆ. ಹೀಗಾಗಿ ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ(CWC Meeting) ನಡೆಯಲಿದೆ. ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಬಗ್ಗೆ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ 11:00 ಗಂಟೆಗೆ ನಡೆಯಬೇಕಿದ್ದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯನ್ನು ಸಂಜೆ 5:30ಕ್ಕೆ ಮುಂದೂಡಲಾಗಿದೆ. ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಸಬೆ ನಡೆಯಲಿದ್ದು, ಬಳಿಕ ಅಶೋಕ ಹೊಟೇಲ್‌ನಲ್ಲಿ ಸಂಜೆ 7ಗಂಟೆಗೆ ರಾತ್ರಿ ಡಿನ್ನರ್‌ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ CWC ಸದಸ್ಯರು ಭಾಗಿಯಾಗಲಿದ್ದಾರೆ. ಇನ್ನು ಈ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಿಕ್ಕ ಜಯ ಹಾಗೂ ಕೆಲ ರಾಜ್ಯದಲ್ಲಿ ಕಾಂಗ್ರೆಸ್ ಗೆ ಆದ ನಷ್ಟದ ಬಗ್ಗೆ ಅವಲೋಕನ ನಡೆಯಲಿದೆ. ಇಂಡಿಯಾ ಮೈತ್ರಿಕೂಟವನ್ನ ರಾಜ್ಯಗಳಲ್ಲಿ ಹೇಗೆ ಬಳಸಿಕೊಳ್ಳಬೇಕು. ರಾಜ್ಯವಾರು ಚುನಾವಣೆಗಳಲ್ಲಿ ಏನೆಲ್ಲಾ ಬದಲಾವಣೆ ಆಗಬೇಕು ಹಾಗೂ ರಾಜ್ಯವಾರು ಬಂದಿರುವ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚೆ ಇಂದು ನಡೆಯಲಿದೆ.

ಇನ್ನು ರಾಜ್ಯದಿಂದ ಈ ಸಭೆಯಲ್ಲಿ ಕರ್ನಾಟಕ ದಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ರಾಜ್ಯ ಸಚಿವರ ಜೊತೆಗೆ ಪ್ರತ್ಯೇಕ ಸಭೆಯನ್ನು ನಡೆಸಿದ್ದರು. ಯಾವ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಮತದಾನ ಆಗಿದೆ. ಈ ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. ಸಚಿವರ ಕ್ಷೇತ್ರದಲ್ಲಿ ಲೀಡ್ ಕಡಿಮೆ ಬಂದಿರುವ ಬಗ್ಗೆಯೂ ಚರ್ಚೆ ನಡೆಸುತ್ತೇವೆ. ರಾಹುಲ್ ಗಾಂಧಿ ಈ ಬಗ್ಗೆ ವರದಿ ಕೇಳಿದ್ದಾರೆ. ಕ್ಷೇತ್ರವಾರು ವರದಿಯನ್ನು ನೀಡುತ್ತೇವೆ ಎಂದರು.

ಚನ್ನಪಟ್ಟಣದಲ್ಲಿ ಡಿಕೆ ಸುರೇಶ್ ಸ್ಪರ್ಧೆಗೆ ನಾವು ಆತುರದಲ್ಲಿ ಇಲ್ಲ. ಈ ಬಗ್ಗೆ ಇನ್ನೂ ಯೋಚನೆ ಮಾಡಲು ಹೋಗಿಲ್ಲ. ಸೋಲಿನ ದುಖಃದಿಂದ ಈಚೆಗೆ ಬಂದಿಲ್ಲ ಎಂದರು. ಚುನಾವಣೆ ಸೋಲಿಗೆ ಸಚಿವರನ್ನು ಕೈಬಿಡುವ ಬಗ್ಗೆ ಸದ್ಯಕ್ಕೆ ಚರ್ಚೆಯಾಗಿಲ್ಲ. ಮುಂದಿನ ದಿನಗಳಲ್ಲಿ ಹೈಕಮಾಂಡ ನಿರ್ಧಾರ ಮಾಡಿಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ:Niveditha Gowda : ಡಿವೋರ್ಸ್​ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡ ನಿವೇದಿತಾ ಗೌಡ, ಅವರ ಇನ್​ಸ್ಟಾಗ್ರಾಮ್ ಸಂದೇಶ ಇಲ್ಲಿದೆ

Continue Reading

ರಾಜಕೀಯ

Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ?

18ನೇ ಲೋಕಸಭೆಗೆ (Lok Sabha Election 2024) ಈ ಬಾರಿ 74 ಮಹಿಳೆಯರು ಸಂಸದರಾಗಿ ಪ್ರವೇಶ ಪಡೆದಿದ್ದರೆ. ಇದರಲ್ಲಿ ಬಹುಪಾಲು ಬಿಜೆಪಿಯದ್ದಾಗಿದ್ದು, ಬಳಿಕ ಕಾಂಗ್ರೆಸ್ ನವರದ್ದಾಗಿದೆ. ಬಿಜೆಪಿ 31, ಕಾಂಗ್ರೆಸ್ 13, ಟಿಎಂಸಿ 11 ಮಹಿಳಾ ಸಂಸದರು ಸೇರಿದಂತೆ ಒಟ್ಟು 74 ಮಹಿಳೆಯರು ಲೋಕಸಭೆಯಲ್ಲಿ ತಮ್ಮ ಪಕ್ಷಗಳನ್ನು ಪ್ರತಿನಿಧಿಸಲಿದ್ದಾರೆ.

VISTARANEWS.COM


on

By

Lok Sabha Election 2024
Koo

ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಈ ಬಾರಿ 74 ಮಹಿಳೆಯರು ಸಂಸದರಾಗಿ (Women MPs) ಆಯ್ಕೆಯಾಗಿದ್ದಾರೆ. ಈ ಸಂಖ್ಯೆಯು 2019ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. 2019ರಲ್ಲಿ ಒಟ್ಟು 78 ಮಹಿಳೆಯರು ಸಂಸದರಾಗಿದ್ದರು. 1952ರ ಚುನಾವಣೆಗೆ (election) ಹೋಲಿಸಿದರೆ ಮಹಿಳಾ ಸಂಸದರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ (Women’s reservation) ಮಸೂದೆ ಅಂಗೀಕಾರವಾದ ಅನಂತರ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮೊದಲ ಚುನಾವಣೆ ಇದಾಗಿದೆ. ಈ ಕಾನೂನು ಇನ್ನೂ ಜಾರಿಗೆ ಬರಬೇಕಿದೆ.

ಮಹಿಳಾ ಸಂಸದರು ಸಂಖ್ಯೆ ಒಟ್ಟು ಚುನಾಯಿತ ಸದಸ್ಯರಲ್ಲಿ ಕೇವಲ ಶೇ. 13.63ರಷ್ಟಿದೆ. ಇದು ಮಹಿಳೆಯರಿಗೆ ಪ್ರಸ್ತಾಪಿಸಲಾಗಿರುವ ಶೇ. 33 ಮೀಸಲಾತಿಗಿಂತ ಕಡಿಮೆಯಾಗಿದೆ. ದೇಶಾದ್ಯಂತ ಕೆಳಮನೆಗೆ ಆಯ್ಕೆಯಾಗಿರುವ ಒಟ್ಟು ಮಹಿಳಾ ಸಂಸದರ ಪೈಕಿ 11 ಮಂದಿ ಪಶ್ಚಿಮ ಬಂಗಾಳದವರಾಗಿರುವುದು ವಿಶೇಷ.

ಯಾವ ಪಕ್ಷದಿಂದ ಎಷ್ಟು?

ಈ ಬಾರಿ ಲೋಕಸಭೆಯಲ್ಲಿ 14 ರಾಜಕೀಯ ಪಕ್ಷಗಳ ಮಹಿಳಾ ಸಂಸದರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಬಿಜೆಪಿ 31 ಮಹಿಳಾ ಸಂಸದರನ್ನು ಹೊಂದಿದ್ದು, ಕಾಂಗ್ರೆಸ್ 13, ತೃಣಮೂಲ ಕಾಂಗ್ರೆಸ್ (ಟಿಎಂಸಿ) 11, ಸಮಾಜವಾದಿ ಪಕ್ಷ (ಎಸ್‌ಪಿ) 5, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 3 ಮಹಿಳಾ ಸಂಸದರನ್ನು ಹೊಂದಿದೆ.

ಮೊದಲ ಬಾರಿ ಸಂಸದರಾದವರು

74 ಮಹಿಳಾ ಸಂಸದರಲ್ಲಿ 43 ಮಂದಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಆಯ್ಕೆಯಾಗಿರುವ ಮಿಸಾ ಭಾರತಿ ಚೊಚ್ಚಲ ಲೋಕಸಭಾ ಸಂಸದರಾಗಿದ್ದಾರೆ.

ಕಣದಲ್ಲಿ ಇದದ್ದು ಎಷ್ಟು ಮಂದಿ ?

ಒಟ್ಟು 797 ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಬಿಜೆಪಿ ಗರಿಷ್ಠ 69 ಮತ್ತು ಕಾಂಗ್ರೆಸ್ 41 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಪಿಆರ್ ಎಸ್ ನ ವಿಶ್ಲೇಷಣೆಯ ಪ್ರಕಾರ ಮಹಿಳಾ ಸಂಸದರಲ್ಲಿ ಶೇ. 16ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಶೇ. 41ರಷ್ಟು ಮಂದಿ ಈ ಹಿಂದೆ ಲೋಕಸಭೆಯ ಸದಸ್ಯರಾಗಿದ್ದರು. ಉಳಿದವರಲ್ಲಿ ಒಬ್ಬ ಸಂಸದರು ಮಾತ್ರ ರಾಜ್ಯಸಭಾ ಸದಸ್ಯರಾಗಿದ್ದರು.

ಕಿರಿಯ ಮಹಿಳಾ ಸಂಸದರು

ಸಮಾಜವಾದಿ ಪಕ್ಷದ ಮಚ್ಲಿಶಹರ್‌ನ 25 ವರ್ಷದ ಪ್ರಿಯಾ ಸರೋಜ್ ಮತ್ತು ಕೈರಾನಾ ಕ್ಷೇತ್ರದ 29 ವರ್ಷದ ಇಕ್ರಾ ಚೌಧರಿ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

ಇದನ್ನೂ ಓದಿ: Rahul Gandhi: ರಾಯ್‌ ಬರೇಲಿ V/S ವಯನಾಡ್‌-ರಾಹುಲ್‌ ಆಯ್ಕೆ ಯಾವುದು?

ಮಹಿಳಾ ಮೀಸಲಾತಿ ಎಷ್ಟು?

ಗಮನಾರ್ಹ ಸಂಗತಿ ಎಂದರೆ ನಾಮ್ ತಮಿಲರ್ ಕಚ್ಚಿಯಂತಹ ಪಕ್ಷಗಳು ಶೇ. 50ರಷ್ಟು ಮಹಿಳಾ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿತ್ತು. ಮಹಿಳಾ ಪ್ರಾತಿನಿಧ್ಯವನ್ನು ಹೊಂದಿರುವ ಇತರ ಪಕ್ಷಗಳಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಕೂಡ ಸೇರಿದೆ. ಈ ಎರಡೂ ಪಕ್ಷಗಳು ಶೇ. 40ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಬಿಜು ಜನತಾ ದಳ (ಬಿಜೆಡಿ) ಶೇ. 33 ರಷ್ಟು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶೇ.29, ಸಮಾಜವಾದಿ ಪಕ್ಷವು ಶೇ. 20 ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶೇ. 25ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿತ್ತು.

Continue Reading

ವೈರಲ್ ನ್ಯೂಸ್

Viral Video: ಮೆಟ್ರೊ ರೈಲಿನೊಳಗೆ ʼವಿದ್ಯಾವಂತ ಮಹಿಳೆಯರʼ ಫೈಟ್‌ ಹೇಗಿದೆ ನೋಡಿ!

ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ವಿಡಿಯೋ ಎಕ್ಸ್ ನಲ್ಲಿ ವೈರಲ್ (Viral Video) ಆಗಿದೆ. ಇದರಲ್ಲಿ ಒಬ್ಬ ಮಹಿಳೆ ಮತ್ತೊಬ್ಬರು ಮೆಟ್ರೋದಲ್ಲಿ ಕುಡಿದಿದ್ದಾರೆ ಎಂದು ಆರೋಪಿಸಿದ್ದು ಹೊಡೆದಾಟಕ್ಕೆ ಕಾರಣವಾಗಿದೆ.

VISTARANEWS.COM


on

By

Viral Video
Koo

ದೆಹಲಿ ಮೆಟ್ರೋ (delhi metro) ಎಲ್ಲರಿಗೂ ಈಗ ಹಾಸ್ಯದ ಕೇಂದ್ರವಾಗಿದೆ ಎನ್ನಬಹುದು. ಯಾಕೆಂದರೆ ಒಂದಲ್ಲ ಒಂದು ಕಾರಣಕ್ಕೆ ದೆಹಲಿ (delhi) ಮೆಟ್ರೋ ನಿರಂತರ ಸುದ್ದಿಯಾಗುತ್ತಲೇ ಇದೆ. ಇದೀಗ ಮೆಟ್ರೋದಲ್ಲಿ ಮಹಿಳೆಯರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ದೆಹಲಿ ಮೆಟ್ರೋ ಬಗ್ಗೆ ಎಲ್ಲರೂ ಮತ್ತೊಮ್ಮೆ ತಮಾಷೆ ಮಾಡುವಂತಾಗಿದೆ.

ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ವಿಡಿಯೋ ಎಕ್ಸ್ (x) ನಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ಮಹಿಳೆ ಮತ್ತೊಬ್ಬರು ಮೆಟ್ರೋದಲ್ಲಿ ಕುಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಹೊಡೆದಾಟಕ್ಕೆ ಕಾರಣವಾಗಿದೆ. ಮಹಿಳೆಯರಿಬ್ಬರು ಪರಸ್ಪರ ಕೂದಲು ಎಳೆದುಕೊಂಡು ಹೊಡೆದಾಡುತ್ತಿದ್ದರೆ ಉಳಿದವರು ನೋಡಿ ನಗುತ್ತಾ ವಿಡಿಯೋ ಮಾಡುತ್ತಿದ್ದರು.

ಎಕ್ಸ್ ನಲ್ಲಿ ಈ ವಿಡಿಯೋವನ್ನು ರಾಹುಲ್ ಶೈನಿ ಎಂಬವರು ಹಂಚಿಕೊಂಡಿದ್ದು, “ದಯೆಯುಳ್ಳ ಜನರ ದೆಹಲಿ ಎಂದಾದರೂ ಸುಧಾರಿಸುತ್ತದೆಯೇ? ಅದೇ ಪ್ರಸಿದ್ಧ ಸ್ಥಳವಾದ ಮೆಟ್ರೋದಲ್ಲಿ ಮತ್ತೆ ಮಹಿಳೆಯರ ನಡುವೆ ಜಗಳವಾಯಿತು…!! ನಂತರ ಪರಸ್ಪರ ಕಪಾಳ ಮೋಕ್ಷ ಮತ್ತು ಜಗಳ ನಡೆಯಿತು. ಜಗಳದ ನಂತರ ಇಬ್ಬರು ಮಹಿಳೆಯರು.” ಎಂಬ ಶೀರ್ಷಿಕೆ ನೀಡಲಾಗಿದೆ.


ವೈರಲ್ ಆದ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕರು ದೆಹಲಿ ಮೆಟ್ರೋಗೆ ಇಂತಹ ಘಟನೆಗಳನ್ನು “ಸಾಮಾನ್ಯ” ಎಂದು ಹೇಳಿದ್ದಾರೆ. ಕೆಲವರು ಇದನ್ನು ಹಾಸ್ಯ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಹಂಚಿಕೊಂಡಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

ಇದಕ್ಕೆ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರ, ಮೆಟ್ರೋ ಎಂದಿಗೂ ನಿರಾಶೆಗೊಳಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ದೆಹಲಿ ಮೆಟ್ರೋ ಮತ್ತೊಂದು ಹಾಸ್ಯ ಕುಚ್ ಭೀ ಹೋಥಾ ಕಭಿ ಭಿ (ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು)” ಎಂದು ಸೇರಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ, “ಅಸ್ಲಿ ರೆಸ್ಲಿಂಗ್ ಟು ಮೆಟ್ರೋ ಮತ್ತು ಇಂಡಿಯನ್ ರೈಲ್ವೇ ಮೈ ಹೋತಿ ಹೈ (ನಿಜವಾದ ಕುಸ್ತಿ ದೆಹಲಿ ಮೆಟ್ರೋದಲ್ಲಿ ನಡೆಯುತ್ತದೆ)” ಎಂದು ಸೇರಿಸಿದ್ದಾರೆ. ಮತ್ತೊಬ್ಬರು, ಈ ಸಮಸ್ಯೆಯು ಇಂದು ಚಿಕ್ಕದಾಗಿ ಕಾಣಿಸಬಹುದು, ಆದರೆ ನಾಳೆ ಇದು ಬಹಳ ಮಹತ್ವದ್ದಾಗಬಹುದು. ದೆಹಲಿ ಮೆಟ್ರೋ ನಲ್ಲಿ ಹೊಡೆದಾಡುವ ಜನರಿಗೆ ದಂಡ ವಿಧಿಸಬೇಕು. ಎಂದು ಹೇಳಿದ್ದಾರೆ.

Continue Reading

ದೇಶ

Ramoji Rao passed away: ಮಾಧ್ಯಮ ಲೋಕದ ದಿಗ್ಗಜ ಇನ್ನಿಲ್ಲ; ರಾಮೋಜಿ ರಾವ್ ವಿಧಿವಶ

Ramoji Rao passed away: ವೈದ್ಯಕೀಯ ಪರೀಕ್ಷೆಯ ನಂತರ ಹೃದಯ ಸ್ಟೆಂಟ್ ಹಾಕಲಾಯಿತು. ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ ಸಾವನ್ನಪ್ಪಿದ್ದಾರೆ. ಸದ್ಯ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ. ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

VISTARANEWS.COM


on

Ramoji Rao passed away
Koo

ಹೈದರಾಬಾದ್‌: ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್(Ramoji Rao passed away) ಅವರು ಇಂದು ವಿಧಿವಶರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌(Hyderabad)ನ ಸ್ಟಾರ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3:45ಕ್ಕೆ ಕೊನೆಯುಸಿರೆಳೆದರು. ಇದೇ ತಿಂಗಳ 5ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು.ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯಕೀಯ ಪರೀಕ್ಷೆಯ ನಂತರ ಹೃದಯ ಸ್ಟೆಂಟ್ ಹಾಕಲಾಯಿತು. ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ ಸಾವನ್ನಪ್ಪಿದ್ದಾರೆ. ಸದ್ಯ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ. ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ರಾಮೋಜಿ ರಾವ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ರಾಮೋಜಿ ರಾವ್ ಅವರು ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಬಳಿಕ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಕ್ಯಾನ್ಸರ್‌ಗಿಂತ ರಾಮೋಜಿ ರಾವ್ ಅವರು ಗುಣಮುಖರಾಗಿದ್ದರು ಎಂದು ಕುಟುಂಬ ವರ್ಗದ ಮೂಲಗಳು ಮಾಹಿತಿ ನೀಡಿವೆ. ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಅವರು, ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು. ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ರಾಮೋಜಿ ರಾವ್ ಒಡೆತನದ ಕಂಪನಿಗಳಾಗಿವೆ.

ರಾಮೋಜಿ ರಾವ್ ಅವರು 1984 ರ ಸೂಪರ್‌ ಹಿಟ್‌ ರೊಮ್ಯಾಂಟಿಕ್ ಸಿನಿಮಾ ಶ್ರೀವಾರಿಕಿ ಪ್ರೇಮಲೇಖ ಚಿತ್ರದೊಂದಿಗೆ ಚಲನಚಿತ್ರ ನಿರ್ಮಾಪಕರಾಗಿ ಸಿನಿರಂಗಕ್ಕೆ ಕಾಲಿಟ್ಟರು. ಅವರು ಮಯೂರಿ, ಪ್ರತಿಭಟನಾ, ಮೌನ ಪೋರಾಟಂ, ಮನಸು ಮಮತಾ, ಚಿತ್ರಂ, ಮತ್ತು ನುವ್ವೆ ಕಾವಲಿ ಮುಂತಾದ ಹಲವಾರು ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿದರು. ಅವರ ಚಲನಚಿತ್ರಗಳು ಪ್ರತಿಷ್ಠಿತ ನಂದಿ, ಫಿಲ್ಮ್‌ಫೇರ್ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹಲವಾರು ಬಾರಿ ಗೆದ್ದವು.

ಭಾರತ ಸರ್ಕಾರವು ರಾಮೋಜಿ ರಾವ್ ಅವರಿಗೆ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರ ಅಮೂಲ್ಯ ಕೊಡುಗೆಗಳಿಗಾಗಿ 2016 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ:Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

Continue Reading
Advertisement
CWC Meeting
ದೇಶ8 mins ago

CWC Meeting: ಇಂದು ದೆಹಲಿಯಲ್ಲಿ CWC ಸಭೆ; ಇಂದೇ ನಿರ್ಧಾರ ಆಗುತ್ತಾ ವಿಪಕ್ಷ ನಾಯಕ ಸ್ಥಾನ?

NDA 3.0
ಕರ್ನಾಟಕ17 mins ago

NDA 3.0: ರಾಜ್ಯಕ್ಕೆ ಸಿಗಲಿದ್ಯಾ 2+1 ಸಚಿವ ಸ್ಥಾನ? ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?

Lok Sabha Election 2024
ರಾಜಕೀಯ23 mins ago

Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ?

Kotee Movie Kannada Team Gives First Ticket To Kichcha Sudeep
ಸ್ಯಾಂಡಲ್ ವುಡ್27 mins ago

Kotee Movie Kannada: ಕಿಚ್ಚ ಸುದೀಪ್​ಗೆ ‘ಕೋಟಿ’ ಸಿನಿಮಾದ ಮೊದಲ ಟಿಕೆಟ್​!

Viral Video
ವೈರಲ್ ನ್ಯೂಸ್35 mins ago

Viral Video: ಮೆಟ್ರೊ ರೈಲಿನೊಳಗೆ ʼವಿದ್ಯಾವಂತ ಮಹಿಳೆಯರʼ ಫೈಟ್‌ ಹೇಗಿದೆ ನೋಡಿ!

crime news
ಕರ್ನಾಟಕ46 mins ago

ಸಂಬಂಧ ಕಡಿಯಲು ಸೆಂಟಿಮೆಂಟ್ ಬೇಕಿಲ್ಲ, ಕ್ಷುಲ್ಲಕ ಕಾರಣ ಸಾಕು; ಪತಿಯ ಪೊಸೇಸೀವ್‌ನೆಸ್‌ಗೆ ಬೇಸತ್ತ ಪತ್ನಿ ಪರಾರಿ

Viral Video
ವೈರಲ್ ನ್ಯೂಸ್53 mins ago

Viral Video: ಗ್ರಹಚಾರ ಕೆಟ್ಟಾಗ ಕಾರಿನ ಚಕ್ರ ಕಳಚಿ ತಲೆಗೆ ಅಪ್ಪಳಿಸಬಹುದು! ವಿಡಿಯೊ ನೋಡಿ

Ramoji Rao passed away
ದೇಶ1 hour ago

Ramoji Rao passed away: ಮಾಧ್ಯಮ ಲೋಕದ ದಿಗ್ಗಜ ಇನ್ನಿಲ್ಲ; ರಾಮೋಜಿ ರಾವ್ ವಿಧಿವಶ

Vastu Tips
ಧಾರ್ಮಿಕ1 hour ago

Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

Monsoon Tour
ದೇಶ1 hour ago

Monsoon Tour: ಮಳೆಗಾಲದ ಪ್ರವಾಸಕ್ಕೆ ಸೂಕ್ತ ಬೆಂಗಳೂರು ಸಮೀಪದ ಈ 8 ಅದ್ಭುತ ಸ್ಥಳಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ14 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ16 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು7 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌