Oscars 2023
Oscars 2023: ಎಲ್ಲೇ ಹೋದರೂ ಸಣ್ಣ ದೇವಾಲಯ ಸ್ಥಾಪಿಸುವ ರಾಮ್ ಮತ್ತು ಪತ್ನಿ ಉಪಾಸನಾ!
Oscars 2023: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ ಗೆದ್ದ ಆರ್‌ಆರ್‌ಆರ್ (RRR Movie)ಚಿತ್ರದ ನಟ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಅವರ ಧಾರ್ಮಿಕ ಮನೋಭಾವನೆಗೆ ಮತ್ತೊಂದು ಸಾಕ್ಷ್ಯ ದೊರೆತಿದೆ.
ನವದೆಹಲಿ: ಸೋಮವಾರ ಆಸ್ಕರ್ ಘೋಷಣೆಯಾಗುವ ಸ್ಥಳಕ್ಕೆ ಹೋಗುವ ಮುನ್ನ ರಾಮ್ ಚರಣ್ (Ram Charan) ಮತ್ತು ಅವರ ಪತ್ನಿ ಉಪಾಸನಾ ಅವರು ತಮ್ಮ ಮನೆಯಲ್ಲಿರುವ ಚಿಕ್ಕ ದೇಗುಲದಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದರಂತೆ. ಈ ಜೋಡಿ ಎಲ್ಲೇ ಹೋದರೂ, ತಾವಿರುವಲ್ಲೇ ಚಿಕ್ಕ ದೇವಾಲಯವನ್ನು ರೆಡಿ ಮಾಡಿ, ಪೂಜಿಸುತ್ತಾರಂತೆ. ಇದು ಅವರಿಗೆ ಭಾರತದ ಜತೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದಂತೆ. ಈ ಮಾಹಿತಿಯನ್ನು ರಾಮ್ ಚರಣ್ ಅವರು ಹಂಚಿಕೊಂಡಿದ್ದು, ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ರೂಪಿಸಿದ ಚಿಕ್ಕ ದೇಗುಲದ ಫೋಟೋ ತೆಗೆಯಲು ಮಾಧ್ಯಮದವರಿಗೆ ಅವಕಾಶ ಮಾಡಿಕೊಟ್ಟರೆನ್ನಲಾಗಿದೆ(Oscars 2023:).
ಆಸ್ಕರ್‌ಗಾಗಿ ಡಾಲ್ಬಿ ಥಿಯೇಟರ್‌ಗೆ ಹೊರಡುವ ಮೊದಲು ದಂಪತಿಗಳು ಹೇಗೆ ತಯಾರಿ ನಡೆಸಿದ್ದಾರೆ ಎಂಬುದನ್ನು ನೋಡಲು ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ತಂಡವು ರಾಮ್ ಅವರ ಇರುವ ಮನೆಗೆ ಆಗಮಿಸಿತ್ತು. ಈ ತಂಡವನ್ನು ರಾಮ್ ಅವರು ಸ್ವಾಗತಿಸಿದರು. ಕ್ಯಾಮೆರಾಗಳಿಗೆ ತಮ್ಮ ಬಟ್ಟೆಗಳನ್ನು ತೋರಿಸುವುದರ ಜೊತೆಗೆ, ಅವರು ಪ್ರಪಂಚದ ಎಲ್ಲೇ ಇದ್ದರೂ ಅವರು ಅನುಸರಿಸುವ ಆಚರಣೆಯ ಮಾಹಿತಿಯನ್ನು ರಾಮ್ ಅವರು ಹಂಚಿಕೊಂಡರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಸ್ಕರ್ ಗೆಲುವು ಆರೋಗ್ಯಕರ ಸ್ಪರ್ಧೆಗೆ ನಾಂದಿಯಾಗಲಿ
ಈ ವೇಳೆ ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ಜತೆ ಮಾತನಾಡಿದ ರಾಮ್ ಚರಣ್ ಅವರು, ನಾನು ಎಲ್ಲಿಗೆ ಹೋದರೂ, ನನ್ನ ಹೆಂಡತಿ ಮತ್ತು ನಾನು ಈ ಸಣ್ಣ ದೇವಾಲಯವನ್ನು ಸ್ಥಾಪಿಸುತ್ತೇವೆ. ಈ ಆಚರಣೆಯು ನಮ್ಮ ಶಕ್ತಿಗಳು ಮತ್ತು ಭಾರತದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಇಲ್ಲಿರಲು ನಮಗೆ ಸಹಾಯ ಮಾಡಿದ ಎಲ್ಲದಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುವುದು ಮುಖ್ಯ ಎಂದು ಹೇಳಿದರು. ರಾಮ್ ಮತ್ತು ಉಪಾಸನಾ ಸಮಾರಂಭಕ್ಕೆ ಹೊರಡುವ ಮೊದಲು ಒಂದು ಸಣ್ಣ ಪ್ರಾರ್ಥನೆಯನ್ನು ಮಾಡಿದರು ಎಂದು ವರದಿಯಾಗಿದೆ.
Oscars 2023
ಜಪಾನ್‌ನಲ್ಲಿ 80 ಕೋಟಿ ರೂ. ಗಳಿಸಿದ RRR Movie; ದಾಖಲೆಗಳ ಮೇಲೆ ದಾಖಲೆಗಳ ಸೃಷ್ಟಿ
ಆರ್‌ಆರ್‌ಆರ್ ಸಿನಿಮಾ (RRR Movie) ಜಪಾನ್‌ನಲ್ಲಿ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿದೆ. ಜಪಾನ್ ದೇಶವೊಂದರಲ್ಲೇ ಬರೋಬ್ಬರಿ 80 ಕೋಟಿ ರೂ. ಗಳಿಕೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಹೈದರಾಬಾದ್: ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ (RRR Movie) ಜಪಾನ್‌ನಲ್ಲಿ ಕಳೆದ ವರ್ಷ ಅಕ್ಟೋಬರ್ 21ರಂದು ಬಿಡುಗಡೆಯಾಗಿತ್ತು. ಇದೀಗ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿರುವ ಸಿನಿಮಾ ಜಪಾನ್‌ನಲ್ಲಿ ಬರೋಬ್ಬರಿ 80 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಮೊನ್ನೆಯಷ್ಟೇ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ.
ಇದನ್ನೂ ಓದಿ: MM Keeravani : ಆಸ್ಕರ್ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ
ಆರ್‌ಆರ್‌ಆರ್ ಸಿನಿಮಾ ಜಪಾನ್‌ನ 44 ನಗರಗಳ 209 ಸಿನಿಮಾ ಮಂದಿರಗಳಲ್ಲಿ, 31 ಐಮ್ಯಾಕ್ಸ್ ತೆರೆಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ 80 ಕೋಟಿಗೂ ಅಧಿಕ ರೂ. ಸಂಪಾದನೆ ಮಾಡಿದ್ದು, ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಮೊದಲ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಸಿನಿಮಾದ ಅಧಿಕೃತ ಖಾತೆಯಾದ ʼಆರ್‌ಆರ್‌ಆರ್ʼನಿಂದ ಟ್ವೀಟ್ ಮಾಡಿ ಮಾಹಿತಿ ನೀಡಲಾಗಿದೆ. “ಆರ್‌ಆರ್‌ಆರ್ ಸಿನಿಮಾ ಕ್ರಮೇಣವಾಗಿ ಜಪಾನ್‌ನ ಬೇರುಗಳಲ್ಲಿ ತೂರಿಕೊಳ್ಳುತ್ತಿದೆ. ಚಿತ್ರವು ಅಸಾಧಾರಣ ಹೆಜ್ಜೆಗಳನ್ನು ಇಡುತ್ತಿದೆ. 20ನೇ ವಾರಕ್ಕೆ ಕಾಲಿಟ್ಟಿರುವ ಸಿನಿಮಾ 202 ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡುತ್ತಿದೆ” ಎಂದು ಸಿನಿತಂಡ ಹೇಳಿದೆ.
ಇದನ್ನೂ ಓದಿ: Oscars 2023: ದಿ ಎಲಿಫೆಂಟ್ ವಿಸ್ಪರರ್ಸ್, ಆರ್‌ಆರ್‌ಆರ್ ತಂಡವನ್ನು ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಜಪಾನ್‌ನಲ್ಲಿ ಈಗಾಗಲೇ 80 ಕೋಟಿ ರೂ. ಗಳಿಸಿಕೊಂಡಿರುವ ಆರ್‌ಆರ್‌ಆರ್ ಸಿನಿಮಾ ಶೀಘ್ರವೇ 100 ಕೋಟಿ ರೂ. ಗಳಿಕೆ ದಾಟುವ ಸಾಧ್ಯತೆಯಿದೆ. ವಿಶ್ವಾದ್ಯಂತ ಸಿನಿಮಾ ಸಾವಿರ ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ.
Oscars 2023
Actor Jr NTR: ಆಸ್ಕರ್ ಕಾರ್ಯಕ್ರಮಕ್ಕೆ ದುಬಾರಿ ವಾಚ್ ತೊಟ್ಟಿದ್ದ ಜೂ. ಎನ್‌ಟಿಆರ್! ಆ ವಾಚ್ ಬೆಲೆ ಎಷ್ಟು?
ಟಾಲಿವುಡ್ ಹೀರೋ ಜೂ. ಎನ್‌ಟಿಆರ್ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದುಬಾರಿ ಬೆಲೆಯ ವಾಚ್ ಧರಿಸಿದ್ದರು. ಅದರ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ.
ಹೈದರಾಬಾದ್: ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಿನಿಮಾ ರಂಗದ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಸಂತಸದಲ್ಲಿ ಚಿತ್ರತಂಡವಿದೆ. ಅಂದ ಹಾಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜೂನಿಯರ್ ಎನ್‌ಟಿಆರ್ ಅವರು ತೊಟ್ಟಿದ್ದ ವಾಚ್ ಇದೀಗ ಭಾರೀ ಸುದ್ದಿಯಲ್ಲಿದೆ.
ಇದನ್ನೂ ಓದಿ: Jr NTR: ಆಸ್ಕರ್‌ನಿಂದ ಹಿಂತಿರುಗಿದ ಬಳಿಕ ಜ್ಯೂ. ಎನ್‌ಟಿಆರ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದ ಜೂ .ಎನ್‌ಟಿಆರ್ ಮತ್ತು ರಾಮ್ ಚರಣ್ ಅವರು ಸೆಮಿ ವೆಸ್ಟರ್ನ್ ಶೈಲಿಯ ಸೂಟ್‌ಗಳನ್ನು ಧರಿಸಿದ್ದರು. ಹಾಗೆಯೇ ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ಕುರ್ತಾ ಹಾಗೂ ಲೇಯರ್ಡ್ ಪ್ಯಾಂಟ್ ಧರಿಸಿ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದರು. ವಿಶೇಷವಾಗಿ ಜೂ. ಎನ್‌ಟಿಆರ್ ಅವರು ಪಟೇಕ್ ಫಿಲ್ಲಿಪೆ ನೌಟಿಲಸ್ ಟ್ರಾವೆಲ್ ಟೈಮ್ ಕಂಪನಿಯ ವಾಚ್ ಅನ್ನು ತೊಟ್ಟಿದ್ದರು. ಈ ವಾಚ್‌ನ ಬೆಲೆ ಬರೋಬ್ಬರಿ 1,90,000 ಡಾಲರ್ ಅಂದರೆ 1.56 ಕೋಟಿ ರೂಪಾಯಿ!
ಜೂ. ಎನ್‌ಟಿಆರ್ ಅವರು ತೊಟ್ಟಿದ್ದ ಈ ವಾಚ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಅಂದ ಹಾಗೆ ಜೂ. ಎನ್‌ಟಿಆರ್ ಅವರು ಬ್ರಾಂಡೆಡ್ ವಾಚ್‌ಗಳನ್ನು ಇಷ್ಟಪಡುವ ವ್ಯಕ್ತಿ. ಈ ಹಿಂದೆಯೂ ಕೂಡ ಅನೇಕ ಕಾರ್ಯಕ್ರಮಗಳಿಗೆ ಅವರು ಭಾರೀ ಬೆಲೆ ಬಾಳುವ ವಾಚ್‌ಗಳನ್ನು ತೊಟ್ಟು ಬಂದಿದ್ದರು. ಅವರ ವಾಚ್ ಕಲೆಕ್ಷನ್ ಬಗ್ಗೆಯೂ ಹಲವು ಬಾರಿ ಚರ್ಚೆಗಳು ನಡೆದಿವೆ.
Oscars 2023
Budget Session 2023: ಮೋದಿ, ಆರ್‌ಆರ್‌ಆರ್ ಆಸ್ಕರ್ ಗೆದ್ದಿರುವ ಕ್ರೆಡಿಟ್ ತೆಗೆದುಕೊಳ್ಳಬೇಡಿ! ಖರ್ಗೆ ವ್ಯಂಗ್ಯ
Budget Session 2023: ಪ್ರಧಾನಿ ನರೇಂದ್ರ ಮೋದಿ ಅವರೇ, ಆರ್ ಆರ್ ಆರ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದ್ದಿದ್ದು, ಅವುಗಳ ಕ್ರೆಡಿಟ್ ತೆಗೆದುಕೊಳ್ಳಲು ಹೋಗಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಸಿನಿಮಾ ಮತ್ತು ಡ್ಯಾಕುಮೆಂಟರಿ ಶಾರ್ಟ್ ಫಿಲ್ಮ್ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದಿದ್ದು, ಅದರ ಕ್ರೆಡಿಟ್ ಅನ್ನು ನರೇಂದ್ರ ಮೋದಿ ಅವರು ತೆಗೆದುಕೊಳ್ಳಬಾರದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯ ಮಾಡಿದ್ದಾರೆ(Budget Session 2023).
ಆರ್‌ಆರ್‌ಆರ್ ಸಿನಿಮಾ ತೆಲುಗು ಸಿನಿಮಾವಾದ್ರೆ, ಎಲಿಫೆಂಟ್ ವಿಸ್ಪರರ್ಸ್ ತಮಿಳು ಸಾಕ್ಷ್ಯ ಚಿತ್ರವಾಗಿದ್ದು, ಎರಡೂ ದೇಶದ ಸಿನಿಮಾ ಕ್ಷೇತ್ರಕ್ಕೆ ಕಾಣಿಕೆ ನೀಡಿವೆ ಎಂದು ಖರ್ಗೆ ಅವರು ಹೇಳಿದರು. ನಾವು (ಬಿಜೆಪಿ) ನಿರ್ದೇಶನ ಮಾಡಿದ್ದೇವೆ, ನಾವು (ಬಿಜೆಪಿ) ಹಾಡು ಬರೆದಿದ್ದೇವೆ ಎಂದೋ ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷವು ಕ್ರೆಡಿಟ್ ತೆಗೆದುಕೊಳ್ಳಬಾರದು. ಇದು ನನ್ನ ವಿನಂತಿ ಮಾತ್ರ. ಇವು ದೇಶದ ಕೊಡುಗೆಯಾಗಿದೆ ಎಂದು ಖರ್ಗೆ ಸಂಸತ್ತಿನಲ್ಲಿ ಹೇಳಿದರು.
ಇದನ್ನೂ ಓದಿ: Oscars 2023 : ಆರ್‌ಆರ್‌ಆರ್, ದಿ ಎಲಿಫೆಂಟ್ ವಿಸ್ಪರರ್ಸ್ ತಂಡಗಳಿಗೆ ಪಿಎಂ ಮೋದಿ, ರಾಹುಲ್ ಶುಭಾಶಯ
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಆರ್ ಆರ್ ಆರ್ ಚಿತ್ರದ ಕತೆ ಬರೆದವರು ವಿ ವಿಜಯೇಂದ್ರ ಪ್ರಸಾದರು. ಅವರನ್ನು ಮೋದಿ ನೇತೃತ್ವದ ಸರ್ಕಾರವೇ ಸಂಸತ್ತಿಗೆ ನಾಮನಿರ್ದೇಶನ ಮಾಡಿದೆ ಎಂಬುದು ವಾಸ್ತವಾಂಶ ಎಂದರು. ಗೋಯಲ್ ಅವರು ಈ ಮಾತಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರೆಲ್ಲರೂ ಆಸ್ಕರ್ ವಿಜೇತ ಆರ್ ಆರ್ ಆರ್ ಹಾಗೂ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರರ್ಸ್ ಚಿತ್ರ ತಂಡಗಳಿಗೆ ಶಭಾಶಯ ಕೋರಿದ್ದಾರೆ.
Oscars 2023
Oscars 2023: ಆಂಧ್ರ ಸಿಎಂಗೆ ಬಾವಿಯಲ್ಲಿರುವ ಪ್ರಾದೇಶಿಕ ಕಪ್ಪೆ ಎಂದು ಗಾಯಕ ಅದ್ನಾನ್ ಸಾಮಿ ಹೇಳಿದ್ದೇಕೆ?
Oscars 2023: ಮೂಲತಃ ಪಾಕಿಸ್ತಾನದವರಾದ ಹಾಗೂ ಈಗ ಭಾರತೀಯ ಪ್ರಜೆಯಾಗಿರುವ ಗಾಯಕ ಅದ್ನಾನ್ ಸಾಮಿ ಅವರು ಆಂಧ್ರ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಬಾವಿಯೊಳಗೆ ಇರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಎಂದು ಕರೆದಿದ್ದಾರೆ. ಸಾಮಿ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರವು (RRR Movie) ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ (Oscars 2023) ಗೆಲ್ಲುತ್ತಿದ್ದಂತೆ, ಶುಭಾಶಯಗಳ ಸುರಿಮಳೆ ಸುರಿದಿದೆ. ಅದರಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ (Andhra Pradesh chief minister YS Jagan Mohan Reddy) ಅವರು ತೆಲುಗು ಧ್ವಜ ಎತ್ತರದಲ್ಲಿ ಹಾರಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮೂಲತಃ ಪಾಕಿಸ್ತಾನದವರಾದ ಮತ್ತು ಈಗ ಭಾರತೀಯ ಪ್ರಜೆಯಾಗಿರುವ ಗಾಯಕ ಅದ್ನಾನ್ ಸಾಮಿ (Adnan Sami) ಕೊಂಕು ತೆಗೆದಿದ್ದಾರೆ. ಅಲ್ಲದೇ, ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಬಾವಿಯೊಳಗಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಎಂದು ಜರಿದಿದ್ದಾರೆ. ಸಾಮಿಯ ಟ್ವೀಟ್‌ಗೆ ನೆಟ್ಟಿಗರು ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಂಧ್ರ ಸಿಎಂ ಏನೆಂದು ಟ್ವೀಟ್ ಮಾಡಿದ್ದರು?
ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದ ಆರ್‌ಆರ್‌ಆರ್ ತಂಡಕ್ಕೆ ಆಂಧ್ರ ಸಿಎಂ ವೈ ಎಸ್ ಜಗನ್‌ಮೋಹನ್ ರೆಡ್ಡಿ ಶುಭಾಶಯ ಕೋರಿದ್ದರು. ಟ್ವೀಟ್ ಮಾಡಿ, ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ! ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಕ್ಕ ಮನ್ನಣೆಯನ್ನು ನೀಡುತ್ತಿರುವ ನಮ್ಮ ಜಾನಪದ ಪರಂಪರೆಯನ್ನು ತುಂಬಾ ಸುಂದರವಾಗಿ ಆಚರಿಸುವ ತೆಲುಗು ಹಾಡಿನ ಬಗ್ಗೆ ನನಗೆ ಹೆಮ್ಮೆಯಿದೆ. @ssrajamouli, @tarak9999, @AlwaysRamCharan ಮತ್ತು @mmkeeravaani ಅವರು ನಿಜವಾಗಿಯೂ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದ್ದರು.
ಅದ್ನಾನಿ ಸಾಮಿ ಹೇಳಿದ್ದೇನು?
ತೆಲುಗು ಬಾವುಟ ಎತ್ತರದಲ್ಲಿ ಹಾರಾಟ ನಡೆಸುತ್ತಿದೆ ಎಂದು ಟ್ವೀಟ್ ಮಾಡಿದ್ದಕ್ಕೆ ಕೊಂಕು ತೆಗೆದಿರುವ ಮೂಲತಃ ಪಾಕಿಸ್ತಾನದವರಾದ ಹಾಗೂ ಈಗ ಭಾರತೀಯ ಪ್ರಜೆಯಾಗಿರುವ ಅದ್ನಾನ್ ಸಾಮಿ, ಆಂಧ್ರ ಸಿಎಂ ಟ್ವೀಟ್ ಪ್ರಾದೇಶಿಕ ವಿಭಜನೆಯನ್ನು ಸೃಷ್ಟಿಸುತ್ತಿದೆ. ಅವರಿಗೆ ರಾಷ್ಟ್ರೀಯ ಹೆಮ್ಮೆಯನ್ನು ಅಳವಡಿಸಿಕೊಳ್ಳಲು ಅಥವಾ ಬೋಧಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಬಾವಿಯಲ್ಲಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಸಮುದ್ರದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಪ್ರಾದೇಶಿಕ ವಿಭಜನೆಗಳನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸ್ವೀಕರಿಸಲು ಅಥವಾ ಬೋಧಿಸಲು ಸಾಧ್ಯವಾಗದಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು ಎಂದು ಅದ್ನಾನ್ ಸಾಮಿ ಟ್ವೀಟ್ ಮಾಡಿದ್ದಾರೆ.
ಸಾಮಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ಅದ್ನಾನ್ ಸಾಮಿ ಟ್ವೀಟ್‌ಗೆ ನೆಟ್ಟಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರು(ವೈ ಎಸ್ ಜಗನ್ ಮೋಹನ್ ರೆಡ್ಡಿ) ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿ. ತಮ್ಮ ಭಾಷೆಯ ಬಗ್ಗೆ ಅವರು ಅಭಿಮಾನ ವ್ಯಕ್ತಪಡಿಸುವುದು ನ್ಯಾಯಸಮ್ಮತ. ನೀನು ಅಸುರಕ್ಷತೆಯನ್ನು ಅನುಭವಿಸಬೇಡ. ಕಾಳಜಿ ಮಾಡಬೇಡ, ಐಡೆಟಿಂಟಿಯಲ್ಲಿ ಭಾರತ ಬಹಳ ಗಟ್ಟಿಯಾಗಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ಆಸ್ಕರ್ ಪ್ರಶಸ್ತಿಯನ್ನು ಗೆದ್ದ ತೆಲುಗು ಹಾಡು. ಹೌದು, ರಾಷ್ಟ್ರವು ಎಂದಿಗೂ ಮೊದಲಾಗಿರುತ್ತದೆ. ಎಲ್ಲಾ ಸೆಲ್ಯೂಟ್‌ಗಳು ರಾಷ್ಟ್ರದ ಕಡೆಗೆ ಇರುತ್ತವೆ. ಆದರೆ, ತೆಲುಗು ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿಕೊಂಡಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ವಕ್ತಾರ ಎಸ್ ರಾಜೀವ್ ಕೃಷ್ಣ ಅವರು ಟ್ವೀಟ ಮಾಡಿ, ನೀವು ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದರಿಂದ ಮೊದಲು ಸೌಜನ್ಯದಿಂದ ಮಾತನಾಡಿ. ಎರಡನೆಯದು – ಹಾಡು ತೆಲುಗಿನಲ್ಲಿದೆ. ಈ ಹಾಡಿನ ಭಾಗವಾಗಿರುವ ಎಲ್ಲರೂ ತೆಲುಗಿನವರು. ಆದ್ದರಿಂದ ತೆಲುಗು ಎಂದು ಹೆಮ್ಮೆಪಡುತ್ತೇವೆ ಮತ್ತು ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಪರಸ್ಪರರು ಪ್ರತ್ಯೇಕವಲ್ಲ. ವಿವಾದ ಸೃಷ್ಟಿಸುವುದನ್ನು ಮೊದಲು ನಿಲ್ಲಿಸಿ ಎಂದು ಅದ್ನಾನ್ ಸಾಮಿಗೆ ಹೇಳಿದ್ದಾರೆ.
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ6 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ15 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್22 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ18 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ