World Hemophilia Day 2023 World Hemophilia Day: ಹಿಮೋಫಿಲಿಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಉಂಟೇ? - Vistara News World Hemophilia Day: ಹಿಮೋಫಿಲಿಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಉಂಟೇ?

ಆರೋಗ್ಯ

World Hemophilia Day: ಹಿಮೋಫಿಲಿಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಉಂಟೇ?

ವಿಶ್ವ ಹಿಮೋಫೀಲಿಯ (world hemophilia day) ಒಕ್ಕೂಟದ ಸಂಸ್ಥಾಪಕ ಫ್ರಾಂಕ್‌ ಶುನಬೆಲ್‌ ಅವರ ಜನ್ಮದಿನವಾದ ಎಪ್ರಿಲ್‌ 17ನ್ನು ವಿಶ್ವದೆಲ್ಲೆಡೆ ಕುಸುಮರೋಗ ಜಾಗೃತಿ ದಿನವೆಂದು ಗುರುತಿಸಲಾಗಿದೆ.

VISTARANEWS.COM


on

World Hemophilia Day 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ವಿಶ್ವ ಹಿಮೋಫಿಲಿಯ (world hemophilia day) ಜಾಗೃತಿ ದಿನ. ಇದನ್ನು ಕನ್ನಡದಲ್ಲಿ ಕುಸುಮರೋಗ ಎಂದು ಕರೆಯಲಾಗುತ್ತದೆ. ಸ್ರವಿಸುವ ರಕ್ತವು ತನ್ನ ಹೆಪ್ಪುಗಟ್ಟುವ ಗುಣವನ್ನು ಕಳೆದುಕೊಂಡಂಥ ಒಂದು ವಿಪರೀತ ಎನ್ನಬಹುದಾದ ಆನುವಂಶಿಕ ಕಾಯಿಲೆಯಿದು. ಅಂದರೆ ರಕ್ತದಲ್ಲಿರುವ ಹೆಪ್ಪುಗಟ್ಟುವ ಪ್ರೊಟೀನ್‌ಗಳ ಸಂಖ್ಯೆ ಇಂಥವರಲ್ಲಿ ಕಡಿಮೆಯಿರುತ್ತದೆ ಅಥವಾ ಅತಿ ಕಡಿಮೆ ಇರುತ್ತದೆ. ಇದರಿಂದ ತೀರಾ ಸಣ್ಣ ಗಾಯಗಳಾದಾಗಲೂ ರಕ್ತ ಸೋರುವುದು ತಂತಾನೆ ನಿಲ್ಲುವುದಿಲ್ಲ.

ವಿಶ್ವ ಹಿಮೋಫೀಲಿಯ ಒಕ್ಕೂಟದ ಸಂಸ್ಥಾಪಕ ಫ್ರಾಂಕ್‌ ಶುನಬೆಲ್‌ ಅವರ ಜನ್ಮದಿನವಾದ ಎಪ್ರಿಲ್‌ 17ವನ್ನು ವಿಶ್ವದೆಲ್ಲೆಡೆ ಕುಸುಮರೋಗ ಜಾಗೃತಿ ದಿನವೆಂದು ಗುರುತಿಸಲಾಗಿದೆ. 1989ರ ನಂತರದಿಂದ, ಈ ದಿನ ವಿಶ್ವದ ಪ್ರಮುಖ ತಾಣಗಳಲ್ಲಿ ಕೆಂಪು ದೀಪ ಬೆಳಗಿಸಿ, ರಕ್ತಸ್ರಾವ ಸಂಬಂಧಿತ ಈ ರೋಗದಿಂದ ನರಳುತ್ತಿರುವವ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲಾಗುತ್ತದೆ. ಈ ಬಾರಿಯ ಘೋಷ ವಾಕ್ಯ: “ರಕ್ತಸ್ರಾವ ಸ್ಥಗಿತಗೊಳಿಸುವುದೇ ಜಾಗತಿಕ ಕಾಳಜಿಯ ಮಾನದಂಡ”.

ಈ ಸಮಸ್ಯೆ ಹೆಚ್ಚಾಗಿ ಕಾಡುವುದು ಪುರುಷರನ್ನು. 19 ಮತ್ತು 20ನೇ ಶತಮಾನದಲ್ಲಿ ಇಂಗ್ಲೆಂಡ್‌, ಜರ್ಮನಿ, ರಷ್ಯಾ ಮತ್ತು ಸ್ಪೇನ್‌ನ ರಾಜಮನೆತನಗಳನ್ನು ಸತತವಾಗಿ ಕಾಡಿದ್ದ ಈ ರೋಗವನ್ನು ʻರಾಜರೋಗʼ ಎಂದು ಕರೆದಿದ್ದೂ ಉಂಟು. ಆದರೆ ಈ ಕಾಯಿಲೆ ಯಾರನ್ನೂ ಆನುವಂಶಿಕವಾಗಿ ಕಾಡಬಲ್ಲದು. ಆದರೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಇದು ಜನ್ಮಜಾತವಾಗದೆ, ಬದುಕಿನ ಯಾವುದೋ ಹಂತದಲ್ಲಿ ರಕ್ತ ತನ್ನ ಹೆಪ್ಪುಗಟ್ಟುವ ಗುಣವನ್ನು ಕಳೆದುಕೊಳ್ಳುತ್ತದೆ. ರಾಣಿ ವಿಕ್ಟೋರಿಯ ತನ್ನ ಒಂಬತ್ತು ಮಕ್ಕಳ ಪೈಕಿ, ಮೂವರಿಗೆ ಈ ರೋಗವನ್ನು ದಾಟಿಸಿದ್ದಳು ಎನ್ನಲಾಗುತ್ತದೆ.

ಹೆಚ್ಚಿನ ಜನ ಬಳಲುವುದು ಹಿಮೊಫಿಲಿಯ-ಎ ಕಾಯಿಲೆಯಿಂದ. ಇದರಲ್ಲಿ ರಕ್ತದಲ್ಲಿ ಇರಬೇಕಾದ ಹೆಪ್ಪುಗಟ್ಟುವ ಫ್ಯಾಕ್ಟರ್‌-8 ಎನ್ನುವ ಧಾತುವಿನ ಅಥವಾ ಪ್ರೊಟೀನ್‌ನ ಕೊರತೆಯಿರುತ್ತದೆ. ಹಿಮೋಫಿಲಿಯ-ಬಿ ಸಮಸ್ಯೆ ಇರುವವರಿಗೆ ರಕ್ತದಲ್ಲಿ ಫ್ಯಾಕ್ಟರ್‌-9 ಧಾತುವಿನ ಕೊರತೆ ಇರುತ್ತದೆ. ಆದರೆ ಈ ಸಮಸ್ಯೆ ಇದೆ ಎನ್ನುವುದು ತಿಳಿಯುವುದು ಹೇಗೆ?

ಕುಸುಮರೋಗದ ಲಕ್ಷಣಗಳೇನು?

ಅತಿ ಸಣ್ಣ ಗಾಯದಿಂದಲೂ ರಕ್ತ ಒಂದೇ ಸಮ ದೀರ್ಘ ಕಾಲದವರೆಗೆ ಹರಿಯುತ್ತದೆ. ಗಾಯಾಳು ಅಥವಾ ಇನ್ನಾರಾದರೂ ನಿಲ್ಲಿಸದಿದ್ದರೆ ರಕ್ತ ತಾನಾಗಿ ಹೆಪ್ಪುಗಟ್ಟುವುದೇ ಇಲ್ಲ. ಸ್ವಲ್ಪ ತಾಗಿದರೂ ಚರ್ಮದ ಮೇಲೆ ಗಾಯವಾಗಬಹುದು, ತರಚಿದಂತಾಗಿ ರಕ್ತ ಸೋರಬಹುದು. ದೊಡ್ಡ ಗಾಯಗಳು ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಾಗ ವೈದ್ಯರ ಕಾಳಜಿ ಅಗತ್ಯವಾಗಿ ಬೇಕಾಗುತ್ತದೆ.

ಕೀಲುಗಳಲ್ಲಿ ನೋವು ಮತ್ತು ಊತ ಕಂಡುಬರಬಹುದು. ಪದೇಪದೆ ಉಂಟಾಗುವ ರಕ್ತಸ್ರಾವದ ಅಡ್ಡಪರಿಣಾಮ ಎಂಬಂತೆ ಮಂಡಿ, ಮಣಿಕಟ್ಟಿನಂಥ ಕೀಲುಗಳಲ್ಲಿ ನೋವು, ಪೆಡಸುತನ ಕಾಣಿಸಿಕೊಳ್ಳುತ್ತದೆ.

ಮೂಗಿನಲ್ಲಿ ಅಕಾರಣವಾಗಿ ಪದೇಪದೆ ರಕ್ತಸ್ರಾವವಾಗುತ್ತಿದ್ದರೆ, ಒಮ್ಮೆ ಪ್ರಾರಂಭವಾದ ಸ್ರಾವ ದೀರ್ಘಕಾಲ ಮುಂದುವರಿದರೆ, ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದರೆ ವೈದ್ಯರಲ್ಲಿ ಅಗತ್ಯವಾಗಿ ತೋರಿಸಬೇಕಾಗುತ್ತದೆ. ಮಲ-ಮೂತ್ರಗಳಲ್ಲಿಯೂ ರಕ್ತ ಕಾಣಬಹುದು.

ಇದನ್ನೂ ಓದಿ: Surgery: ಯಂತ್ರಕ್ಕೆ ಸಿಲುಕಿ ಬಾಲಕನ ಎಡಗೈ ಕಟ್‌; ಶಾಶ್ವತ ಅಂಗವೈಕಲ್ಯತೆಯಿಂದ ಪಾರು ಮಾಡಿದ ಬೆಂಗಳೂರು ವೈದ್ಯರು

ಈ ರೋಗಿಗಳಲ್ಲಿಯೂ ರೋಗಲಕ್ಷಣಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ರೋಗ ತೀವ್ರತೆ ಎಷ್ಟು, ಅಂದರೆ, ರಕ್ತದಲ್ಲಿ ಖೋತಾ ಇರುವ ಧಾತುಗಳ ಪ್ರಮಾಣವೆಷ್ಟು ಎನ್ನುವುದ ಆಧಾರದ ಮೇಲೆ ರೋಗ ತೀವ್ರತೆ ಕಂಡುಬರುತ್ತದೆ. ಈ ರೋಗ ಪತ್ತೆ ಮಾಡುವುದಕ್ಕೆ ಲಕ್ಷಣಗಳು ದಿಕ್ಸೋಚಿಗಳಾಗಬಹುದೇ ಹೊರತು, ರಕ್ತ ಪರೀಕ್ಷೆಯಿಲ್ಲದೆ ನಿರ್ಣಯ ಸಾಧ್ಯವಿಲ್ಲ. ರಕ್ತದಲ್ಲಿ ಕಾಣೆಯಾಗಿರುವ ಪ್ರೊಟೀನ್‌ಗಳನ್ನು ಸೇರಿಸುವಂಥ ಚಿಕಿತ್ಸೆಗಳು ಲಭ್ಯವಿದ್ದು, ಶೀಘ್ರವೇ ಪರಿಣತ ವೈದ್ಯರನ್ನು ಕಾಣಬೇಕಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜಕೀಯ

Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

Mallikarjun Kharge: ಚುನಾವಣಾ ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಸ್ವಸ್ಥಗೊಂಡಿದ್ದಾರೆ.

VISTARANEWS.COM


on

By

Mallikarjun Kharge falls ill on stage while delivering his speech
Koo

ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ್‌ ಖರ್ಗೆ (Mallikarjun Kharge) ವೇದಿಕೆ ಮೇಲೆಯೇ ತೀವ್ರ ಅಸ್ವಸ್ಥಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಕಥುವಾನಲ್ಲಿ ಚುನಾವಣೆ ಪ್ರಚಾರದ ಭಾಗವಾಗಿ ಭಾಷಣ ಮಾಡುತ್ತಿದ್ದ ವೇಳೆ 83 ವರ್ಷದ ಮಲ್ಲಿಕಾರ್ಜುನ್‌ ಖರ್ಗೆ ಅಸ್ವಸ್ಥಗೊಂಡಿದ್ದರು. ಭಾಷಣ ಮಾಡಲಾಗದೆ ಕುಸಿಯುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್‌ ನಾಯಕರು ಖರ್ಗೆ ನೆರವಿಗೆ ಧಾವಿಸಿದ್ರು. ನೀರು ಕುಡಿದು ಸುಧಾರಿಸಿಕೊಂಡ ಮಲ್ಲಿಕಾರ್ಜುನ್‌ ಖರ್ಗೆ ತಮ್ಮ ಭಾಷಣವನ್ನು ಮುಂದುವರಿಸಿದರು. ವಿಶ್ರಾಂತಿ ಇಲ್ಲದೇ ನಿರಂತರವಾಗಿ ಪಕ್ಷದ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಆಯಾಸಗೊಂಡಿದ್ದರು ಎನ್ನಲಾಗಿದೆ. ಚುನಾವಣೆ ನಿಮಿತ್ತ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಹೀಗಾಗಿ ಅಸ್ವಸ್ಥಗೊಂಡಿದ್ದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಕೊನೆಯ ಹಂತದ ಚುನಾವಣೆಯ ಕಸರತ್ತು ನಡೆದಿದೆ. ಅಕ್ಟೋಬರ್‌ 1ರಂದು ಮೂರನೇ ಹಂತದ ಮತದಾನವು ನಡೆಯಲಿದೆ. ಈ ಕೊನೆ ಹಂತದ ಚುನಾವಣೆಯಲ್ಲಿ 40 ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ಇದ್ದು, ಮೂರನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ನಾಳೆಯಿಂದ ಪಕ್ಷಗಳು ಮನೆ ಮನೆ ಪ್ರಚಾರ ನಡೆಸಲಿವೆ. ಮೊದಲೆರಡು ಹಂತದ ಚುನವಾಣೆಗಳು ಶಾಂತಿಯುತವಾಗಿ ನಡೆದಿದೆ. ಹೀಗಾಗಿ ಕೊನೆಯ ಹಂತದ ಚುನಾವಣೆ ಕೂಡ ಶಾಂತಿಯುತವಾಗಿ ನಡೆಸಲು ಪೊಲೀಸರು, ಚುನಾವಣಾ ಆಯೋಗದಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Continue Reading

ಪ್ರಮುಖ ಸುದ್ದಿ

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

World Retinal Day 2024: ಕುರುಡುತನವನ್ನು ಶೇ. 90% ತಡೆಗಟ್ಟಬಹುದು ಅಥವಾ ಅದಕ್ಕೆ ಚಿಕಿತ್ಸೆಯನ್ನು ನೀಡಬಹುದು. ಆದರೂ ಜಾಗತಿಕವಾಗಿ 1 ಬಿಲಿಯನ್ ಜನರು ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ.

VISTARANEWS.COM


on

By

World Retinal Day 2024
Koo

ಬೆಂಗಳೂರು: ಪ್ರಪಂಚವು ತಾನು ಬೆಳೆಯುತ್ತಿರುವ ವೇಗದಲ್ಲಿ ತನ್ನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದೆ. ಅದಕ್ಕಾಗಿ ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ರೆಟಿನಾ ದಿನವನ್ನಾಗಿ (World Retinal Day 2024) ಆಚರಿಸಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕುರುಡುತನವನ್ನು ಶೇ. 90% ತಡೆಗಟ್ಟಬಹುದು ಅಥವಾ ಅದಕ್ಕೆ ಚಿಕಿತ್ಸೆಯನ್ನು ನೀಡಬಹುದು. ಆದರೂ ಜಾಗತಿಕವಾಗಿ 1 ಬಿಲಿಯನ್ ಜನರು ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. 2020ರಲ್ಲಿ ಮಾತ್ರವೇ ದೃಷ್ಟಿ ದೋಷವು ಜಾಗತಿಕವಾಗಿ 410.9 ಬಿಲಿಯನ್ ಅಷ್ಟು ಆರ್ಥಿಕ ಉತ್ಪಾದಕತೆಯನ್ನು ಕಡಿಮೆಗೊಳಿಸಿತು. DR, DME ಮತ್ತು NAMD ನಂತಹ ರೆಟಿನಾದ ಸಮಸ್ಯೆಗಳು ಶಾಶ್ವತ ಮತ್ತು ಬದಲಾಯಿಸಲಾಗದ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು.

21 ಮಿಲಿಯನ್ ಜನರು DME (Durable medical equipment) ಬಳಸುತ್ತಿದ್ದು, ಇದು ಕೆಲಸ ಮಾಡುವ ವಯಸ್ಸಿನ ವಯಸ್ಕರಲ್ಲಿ ದೃಷ್ಟಿ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. 20 ಮಿಲಿಯನ್ ಜನರು NAMD (Nanoscale Molecular Dynamics) ಇದು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ದೃಷ್ಟಿ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.
ವಿಶ್ವದ ಅಂಧ ಜನಸಂಖ್ಯೆಯ 1/3 ನೇ ಭಾಗವು ಭಾರತದಲ್ಲಿ ಕಂಡು ಬರುತ್ತಿದೆ. 11 + ಮಿಲಿಯನ್ ಜನರು ರೆಟಿನಾದ ಸಮಸ್ಯೆಗಳಿಂದ ಪ್ರಭಾವಿತರಾಗಿದ್ದಾರೆ ಹಾಗೂ 3.88 ಮಿಲಿಯನ್ ಜನರು DME ಮತ್ತು nAMD ಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಕುರುಡುತನಕ್ಕೆ ರೆಟಿನಾದ ಅಸ್ವಸ್ಥತೆಗಳ ಕೊಡುಗೆಯು 4.7% (2010) ರಿಂದ 8% (2019) ಕ್ಕೆ ಹೆಚ್ಚಾಗಿದೆ. 100 ಮಿಲಿಯನ್ ಮಧುಮೇಹಿಗಳು ಮತ್ತು ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ರೆಟಿನಾದ ಆರೋಗ್ಯಕ್ಕೆ ಆದ್ಯತೆಯನ್ನು ನೀಡಬೇಕಾಗುತ್ತದೆ.

ದೃಷ್ಟಿ ನಷ್ಟದಿಂದಾಗಿ ನಿರಂತರವಾಗಿ ಹೆಚ್ಚುತ್ತಿರುವ ಸಾಮಾಜಿಕ-ಆರ್ಥಿಕ ಹೊರೆಯು ಜಾಗತಿಕವಾಗಿ ಹಾಗೂ ಭಾರತದಲ್ಲಿ ಬೆಳೆಯುತ್ತಿರುವ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಜಾಗತಿಕವಾಗಿ ರಕ್ತಹೀನತೆ ಮತ್ತು ಶ್ರವಣ ನಷ್ಟದ ನಂತರ ದೃಷ್ಟಿ ನಷ್ಟವು ಮೂರನೇ ಅತಿದೊಡ್ಡ ದುರ್ಬಲತೆಯಾಗಿದೆ. ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ವಕ್ರೀಕಾರಕ ದೋಷಗಳಂತಹ ಕೆಲವು ರೀತಿಯ ದೃಷ್ಟಿಹೀನತೆಗಳ ಬಗ್ಗೆ ಸಾಮಾನ್ಯವಾಗಿ ಸಾರ್ವಜನಿಕರಿಗೆ ಅರಿವು ಇದ್ದರೂ ಸಹ, ರೆಟಿನಾದ ಅಸ್ವಸ್ಥತೆಗಳಿಂದ ಉಂಟಾಗುವ ದೃಷ್ಟಿ ಅಸಾಮರ್ಥ್ಯಗಳು ನಿರಂತರವಾಗಿ ಹೆಚ್ಚಾಗುತ್ತಿವೆ.

ಜಾಗತಿಕವಾಗಿ, ರೆಟಿನಾದ ಕಾಯಿಲೆಗಳು ಸುಮಾರು 6% ಕುರುಡುತನಕ್ಕೆ ಕಾರಣವಾಗಿವೆ. ರಕ್ತದಲ್ಲಿ ಇರುವ ಅನಿಯಂತ್ರಿತ ಸಕ್ಕರೆ ಮಟ್ಟಗಳು (DR ಮತ್ತು DME) ಹಾಗೂ ವಯಸ್ಸಿನ (nAMD) ಪರಿಣಾಮವಾಗಿ ಉಂಟಾಗಬಹುದಾದ ಕೆಲವು ರೆಟಿನಾದ ಅಸ್ವಸ್ಥತೆಗಳು ದೃಷ್ಟಿಯ ವಿಷಯದಲ್ಲಿ ಬೆದರಿಕೆಯನ್ನು ಉಂಟುಮಾಡುತ್ತವೆ, ಇದು ಸಕಾಲಿಕ ವಿಧಾನದಲ್ಲಿ ರೋಗನಿರ್ಣಯ ಮಾಡಿ ಹಾಗೂ ಚಿಕಿತ್ಸೆಯನ್ನು ನೀಡದಿದ್ದಲ್ಲಿ ಶಾಶ್ವತ ಮತ್ತು ಬದಲಾಯಿಸಲಾಗದ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ.

ಭಾರತದಲ್ಲಿ ಅಂಧತ್ವ ಮತ್ತು ದೃಷ್ಟಿಹೀನತೆಯ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (NPCBVI) ದಂತಹ ಉಪಕ್ರಮಗಳು ಕಣ್ಣಿನ ಪೊರೆ ಹಾಗೂ ಗ್ಲುಕೋಮಾ ಸಂಬಂಧಿತ ಕುರುಡುತನವನ್ನು (ಕಣ್ಣಿನ ಮುಂಭಾಗದ ಅಥವಾ ಮುಂಭಾಗ) ಕಡಿಮೆ ಮಾಡುವಲ್ಲಿ ಶ್ಲಾಘನೀಯ ಪ್ರಗತಿಯನ್ನು ಸಾಧಿಸಿವೆ. ಪ್ರಸ್ತುತ, ಅಕ್ಷಿಪಟಲದ ಆರೋಗ್ಯದ (ಕಣ್ಣಿನ ಹಿಂಭಾಗ ಅಥವಾ ಹಿಂದೆ) ಮೇಲೆ ಕೇಂದ್ರೀಕರಿಸುವ ತುರ್ತು ಅವಶ್ಯಕತೆಯಿದೆ. ರೆಟಿನಾದ ನರ ಕೋಶಗಳಿಗೆ ಉಂಟಾಗುವ ಹಾನಿಯನ್ನು ಬದಲಾಯಿಸಲು ಬರುವುದಿಲ್ಲ ಹಾಗೂ ಕೇಂದ್ರೀಕೃತ ನಷ್ಟವನ್ನು ಉಂಟು ಮಾಡಬಹುದು. ಇದು ದೃಷ್ಟಿಯನ್ನು ಹೆಚ್ಚು ದುರ್ಬಲಗೊಳಿಸುವ, ಗಾಯದ ಅಪಾಯ ಮತ್ತು ಜೀವನದಲ್ಲಿ ಕಳಪೆ ಗುಣಮಟ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ.

ಕಳೆದ ದಶಕ ಒಂದರಲ್ಲಿಯೇ ಭಾರತದಲ್ಲಿ, ಕುರುಡುತನಕ್ಕೆ ಕಾರಣವಾಗುವ ರೆಟಿನಾದ ಅಸ್ವಸ್ಥತೆಗಳ ಪಾಲಿನಲ್ಲಿ ಆತಂಕಕಾರಿ ಹೆಚ್ಚಳವು ಕಂಡುಬಂದಿದೆ. ನಮ್ಮ ಜನಸಂಖ್ಯೆಯು ಬೆಳೆದಂತೆ ಹಾಗೂ ಅವರಿಗೆ ವಯಸ್ಸಾದಂತೆ ಈ ಸಂಖ್ಯೆಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರ ಸಂಖ್ಯೆಯು ಹೆಚ್ಚಾಗುತ್ತಲೇ ಇರುತ್ತದೆ. ರೋಗನಿರ್ಣಯದಲ್ಲಿ ಪರಿಸರ ವ್ಯವಸ್ಥೆ ಒಡ್ಡುವ ಸವಾಲುಗಳು ಮತ್ತು ಅಡೆತಡೆಗಳು ಭಾರತದಲ್ಲಿ ಅಕ್ಷಿಪಟಲದ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಹೊರತಾಗಿಯೂ, ಪರಿಸರ ವ್ಯವಸ್ಥೆಯು ಒಡ್ಡುವ ಅಡೆತಡೆಗಳು, ನೀತಿ ಅಂತರಗಳು, ಜಾಗೃತಿ ಸವಾಲುಗಳು ಮತ್ತು ಚಿಕಿತ್ಸೆಯ ಅನುಸರಣೆಯ ಕೊರತೆಗಳು ಅಸ್ತಿತ್ವದಲ್ಲಿವೆ:
● ಸಾಮರ್ಥ್ಯದ ಬಗೆಗಿನ ನಿರ್ಬಂಧಗಳು ಮತ್ತು ತರಬೇತಿ ಪಡೆದ ರೆಟಿನಾ ತಜ್ಞರ ತೀವ್ರ ಕೊರತೆ: ಭಾರತದಲ್ಲಿ, ನೇತ್ರಶಾಸ್ತ್ರಜ್ಞರ ಪೂಲ್ ಕಣ್ಣಿನ ಮುಂಭಾಗದ ಭಾಗಕ್ಕೆ ಹೆಚ್ಚು ವಾಲುತ್ತಿದ್ದು ಸುಮಾರು 80% ರಷ್ಟು ಇದೆ, ಆದರಲ್ಲಿ ಕೇವಲ 5% ರಿಂದ 8% ರಷ್ಟು ಮಾತ್ರವೇ ರೆಟಿನಾದಲ್ಲಿ ಪರಿಣತಿಯನ್ನು ಹೊಂದಿರುವವರಿದ್ದು, ಅದೂ ಸಹ ಶ್ರೇಣಿ 1 ನಗರಗಳಲ್ಲಿ ಮಾತ್ರವೇ ಕೇಂದ್ರೀಕೃತವಾಗಿದೆ.
● ಪ್ರಮಾಣೀಕೃತ ಚಿಕಿತ್ಸಾ ಮಾರ್ಗಸೂಚಿಗಳ ಕೊರತೆ: ಭಾರತದಲ್ಲಿ, ರೋಗಿಗಳ ಫಲಿತಾಂಶಗಳ ಮೇಲೆ ತೀವ್ರ ಪರಿಣಾಮ ಬೀರುವ ಚಿಕಿತ್ಸಾ ಪ್ರೋಟೋಕಾಲ್‌ಗಳಲ್ಲಿ ಪ್ರಾದೇಶಿಕ ವ್ಯತ್ಯಾಸದ ಅಭ್ಯಾಸವಿದೆ. ಸ್ಟ್ಯಾಂಡರ್ಡ್ ಅಭ್ಯಾಸವೆಂದರೆ ‘ಸ್ಟೆಪ್ ಥೆರಪಿ’ ಇದರಲ್ಲಿ ಹೊಸ ಚಿಕಿತ್ಸಾ ಆಯ್ಕೆಗಳನ್ನು ಮರುಕಳಿಸುವ ರೋಗಿಗಳಿಗೆ ಕಾಯ್ದಿರಿಸಲಾಗಿದೆ, ಇದರಲ್ಲಿ ದೃಷ್ಟಿ ಎನ್ನುವುದು ಈಗಾಗಲೇ ಹದಗೆಟ್ಟಿದೆ, ಈ ನವೀನ ಚಿಕಿತ್ಸೆಗಳು ದೃಷ್ಟಿಯನ್ನು ಪುನಃಸ್ಥಾಪಿಸುವಲ್ಲಿ ಕಡಿಮೆ ಅಥವಾ ಯಾವುದೇ ಫಲಿತಾಂಶವನ್ನು ಪ್ರದರ್ಶಿಸುವುದಿಲ್ಲ.
● ರೋಗನಿರ್ಣಯ ಮತ್ತು ರೋಗಿಗಳ ಉಲ್ಲೇಖಗಳಿಗಾಗಿ ಕಳಪೆ ಸಮಗ್ರ ಆರೋಗ್ಯ ವ್ಯವಸ್ಥೆಗಳು: ವಿಶೇಷವಾಗಿ ಮಧುಮೇಹ ರೋಗಿಗಳಿಗೆ, ಉಲ್ಲೇಖಿತ ಮಾರ್ಗಗಳು ಮುಗಿದುಹೋಗಿವೆ. ಈ ಅಸ್ವಸ್ಥತೆಗಳು ಮುಂದುವರಿದ ಹಂತಗಳನ್ನು ತಲುಪಿದಾಗ ಮಾತ್ರವೇ ರೋಗಿಗಳು ತಮ್ಮನ್ನು ರೆಟಿನಾ ತಜ್ಞರಿಗೆ ತೋರಿಸುತ್ತಾರೆ.
● ಲಭ್ಯವಿರುವ ಚಿಕಿತ್ಸೆಗಳ ಮೇಲಿನ ಚಿಕಿತ್ಸಾ ಹೊರೆ: ಪ್ರಸ್ತುತ ಅಸ್ತಿತ್ವದಲ್ಲಿರುವ ಚಿಕಿತ್ಸೆಗಳು ಸಾಕಷ್ಟು ಹೊರೆಯನ್ನು ಉಂಟುಮಾಡುತ್ತವೆ, ಇದರಿಂದಾಗಿ ಆಗಾಗ್ಗೆ ಕಣ್ಣಿಗೆ ಚುಚ್ಚುಮದ್ದಿನ ಅಗತ್ಯವಿರುತ್ತದೆ. ಅಂಟಿಕೊಳ್ಳುವಿಕೆಯ ಅಂತರದಿಂದ ಉಂಟಾಗುವ ಇದು ಅಂಡರ್-ಟ್ರೀಟ್ಮೆಂಟ್ಗೆ ಕಾರಣವಾಗಬಹುದು, ಇದು ಮತ್ತಷ್ಟು ರೆಟಿನಾದ ಹಾನಿಗೆ ಕಾರಣವಾಗುತ್ತದೆ.
● ಸಾರ್ವಜನಿಕ ಅರಿವಿನ ಕೊರತೆ: ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಅಭ್ಯಾಸದ ಒಂದು ಭಾಗವಾಗಿ, ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತದೆ. ಕುಟುಂಬಗಳು, ಕಾರ್ಪೊರೇಟ್‌ಗಳು ಮತ್ತು ಸಂಸ್ಥೆಗಳು ವಾರ್ಷಿಕ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳಲ್ಲಿ ರೆಟಿನಾವನ್ನು ಸೇರಿಸುವುದಿಲ್ಲ. ಮಧುಮೇಹದಂತಹ ಸಮಸ್ಯೆಗಳು ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಸಾಮಾನ್ಯ ಜನರಿಗೆ ಸಂಪೂರ್ಣವಾಗಿ ತಿಳುವಳಿಕೆ ಇಲ್ಲ.

ಪ್ರಸ್ತುತ ಚಿಕಿತ್ಸಾ ಭೂದೃಶ್ಯದಲ್ಲಿ ಎದುರಿಸುತ್ತಿರುವ ಸವಾಲುಗಳು ಹಾಗೂ ನವೀನ ಚಿಕಿತ್ಸೆಗಳ ಅವಶ್ಯಕತೆ.
ರೋಗಿಯ ದೃಷ್ಟಿಕೋನದಿಂದ ನೋಡಿದಲ್ಲಿ, ಅವರು ತಮ್ಮ ಚಿಕಿತ್ಸೆಯ ಭಾಗವಾಗಿ ಕಣ್ಣಿನಲ್ಲಿ ಚುಚ್ಚುಮದ್ದು ಹಾಕಿಸಿಕೊಳ್ಳಲು ಭಯಪಡುತ್ತಾರೆ. ಕಳಪೆ ದೃಷ್ಟಿಯೊಂದಿಗೆ ವ್ಯವಹರಿಸುವಾಗ ಆಗಾಗ್ಗೆ ಚುಚ್ಚುಮದ್ದುಗಳನ್ನು ಪಡೆಯುವ ಸವಾಲು ಮತ್ತು ಕಣ್ಣಿನ ಆರೈಕೆ ಸೌಲಭ್ಯಗಳನ್ನು ಪಡೆಯಲು ಅನೇಕ ಭೇಟಿಗಳ ಕಷ್ಟವು ಕೂಡ ಅದರಲ್ಲಿ ಸೇರಿರುತ್ತದೆ. ಆಂಟಿ-VEGFಗಳಂತಹ ಹಳೆಯ ಚಿಕಿತ್ಸಾ ಆಯ್ಕೆಗಳನ್ನು ಸಾಮಾನ್ಯವಾಗಿ ಬಳಸಲಾಗಿದ್ದರೂ ಸಹ ಅನೇಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ.

ಹಿಂದೆ ಅನುಮೋದಿಸಲಾದ ಚಿಕಿತ್ಸೆಗಳು nAMD ಮತ್ತು DME ಗಳ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಹೆಚ್ಚಿಸುವ ಪ್ರಕ್ರಿಯೆಗಳನ್ನು – ಅಥವಾ ‘ಪಾತ್‌ವೇಸ್’ ಅನ್ನು ಮಾತ್ರವೇ ಭಾಗಶಃ ತಿಳಿಸಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಟ್ಯಾಂಡರ್ಡ್ IVT ಚಿಕಿತ್ಸೆಯನ್ನು ಕೂಡ ಮೀರಿ ನಾವೀನ್ಯತೆಯ ಅವಶ್ಯಕತೆಯಿದೆ. IVT ಚುಚ್ಚುಮದ್ದುಗಳು (ಕಣ್ಣಿನ ಚುಚ್ಚುಮದ್ದು) ರೋಗಿಗಳಿಗೆ ಭರವಸೆಯ ಹೊಸ ಆಯ್ಕೆಗಳನ್ನು ತಂದಿದ್ದರೂ ಸಹ, DME ಮತ್ತು nAMD ಚಿಕಿತ್ಸೆಯಲ್ಲಿ ಇನ್ನೂ ಪೂರೈಸದ ಅಗತ್ಯತೆಗಳು ಸಾಕಷ್ಟಿವೆ. ಪ್ರಸ್ತುತ ಚಿಕಿತ್ಸೆಗೆ ಪುನರಾವರ್ತಿತ ವೆಚ್ಚ, ಪ್ರಯಾಣದ ಅನಾನುಕೂಲತೆ ಮತ್ತು ಆರೈಕೆದಾರರ ಮೇಲೆ ಅವಲಂಬಿತರಾಗುವ ಅಗತ್ಯವನ್ನು ಹೊಂದಿರುವ ರೋಗಿಗೆ ಆಗಾಗ್ಗೆ ಚುಚ್ಚುಮದ್ದು ಅಗತ್ಯವಿರುತ್ತದೆ. ಹೊಸ ಉದಯೋನ್ಮುಖ ಚಿಕಿತ್ಸೆಗಳು ಚುಚ್ಚುಮದ್ದಿನ ಸಂಖ್ಯೆ ಮತ್ತು ಆವರ್ತನದ ವಿಷಯದಲ್ಲಿ ರೋಗಿಗಳ ಮೇಲೆ ಕಡಿಮೆ ಹೊರೆಯೊಂದಿಗೆ ಉತ್ತಮ ಫಲಿತಾಂಶಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.

ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯತೆ: ಪರಿಪೂರ್ಣ ದೃಷ್ಟಿಯನ್ನು ಹೊಂದಲು, ನಮ್ಮ ರೆಟಿನಾದಲ್ಲಿನ ನಾಳಗಳು ಸ್ಥಿರವಾಗಿರಬೇಕು ಹಾಗೂ ಬಲವಾಗಿರಬೇಕು. ಆದಾಗ್ಯೂ, ರೆಟಿನಾದ ಸಮಸ್ಯೆಗಳೊಂದಿಗೆ ವಾಸಿಸುವ ಜನರ ನಾಳಗಳು ಅಸ್ಥಿರವಾಗಿರುತ್ತವೆ, ಸೋರಿಕೆಯಾಗುತ್ತವೆ, ಉರಿಯುತ್ತವೆ ಮತ್ತು ಅಸಹಜವಾಗಿ ಬೆಳೆಯುತ್ತವೆ. VEGFಎನ್ನುವುದು ರೆಟಿನಾದ ಸಮಸ್ಯೆಗಳ ಅಭಿವೃದ್ಧಿ ಮತ್ತು ಪ್ರಗತಿಯನ್ನು ಒಳಗೊಂಡಿರುವ ಒಂದು ಪ್ರಮುಖ ಮಾರ್ಗವಾಗಿದೆ. VEGF ಮಾರ್ಗವನ್ನು ನಿರ್ಬಂಧಿಸುವುದರಿಂದ ರೆಟಿನಾದಲ್ಲಿನ ನಾಳಗಳು ರಕ್ತ ಮತ್ತು ದ್ರವ ಸೋರಿಕೆಯನ್ನು ಯಶಸ್ವಿಯಾಗಿ ನಿಲ್ಲಿಸುತ್ತದೆ ಹಾಗೂ ಹೊಸ ಅನಾರೋಗ್ಯಕರ ನಾಳಗಳು ಬೆಳೆಯುವುದನ್ನು ತಡೆಯುತ್ತದೆ. ಆದಾಗ್ಯೂ, VEGF ಮಾತ್ರವೇ ಏಕೈಕ ಮಾರ್ಗವಲ್ಲ. Ang-2 ಎನ್ನುವುದು ನಾಳೀಯ ಅಸ್ಥಿರತೆಗೆ ಕೊಡುಗೆ ನೀಡುತ್ತದೆ, ಉರಿಯೂತವನ್ನು ಉಂಟುಮಾಡುತ್ತದೆ ಹಾಗೂ ನಾಳಗಳ ಮೇಲೆ VEGF ನ ಕ್ರಿಯೆಗಳನ್ನು ಸುಗಮಗೊಳಿಸುತ್ತದೆ ಮತ್ತು ವರ್ಧಿಸುತ್ತದೆ, ಇದು ದೀರ್ಘಾವಧಿಯಲ್ಲಿ ಹೆಚ್ಚು ತೀವ್ರ ಸ್ಥಿತಿಗೆ ಕಾರಣವಾಗುತ್ತದೆ. VEGF ಅನ್ನು ಮಾತ್ರವೇ ಗುರಿಯಾಗಿಟ್ಟುಕೊಂಡು ನೀಡುವ ಚಿಕಿತ್ಸಾ ಆಯ್ಕೆಗಳು ರೋಗದ ಜೀವಶಾಸ್ತ್ರವನ್ನು ಭಾಗಶಃ ಮಾತ್ರವೇ ಪರಿಹರಿಸುತ್ತವೆ.

DME ಮತ್ತು nAMD ನಂತಹ ರೆಟಿನಾದ ಸಮಸ್ಯೆಗಳು ಶಾಶ್ವತ ಮತ್ತು ಬದಲಾಯಿಸಲಾಗದ ದೃಷ್ಟಿ ಹಾನಿಗೆ ಕಾರಣವಾಗಬಹುದು ಎಂದು ನಮಗೆ ತಿಳಿದಿದೆ; ಹಾಗೂ ಚಿಕಿತ್ಸೆಗಾಗಿ ಸಿಗುವ ಮೊದಲ ಅವಕಾಶವು ಚಿಕಿತ್ಸೆಯ ಅತ್ಯುತ್ತಮ ಅವಕಾಶವಾಗಿರುತ್ತದೆ. ಆದ್ದರಿಂದ ದೃಷ್ಟಿಯ ಸ್ಥಿತಿಯು ಕಾಲಾನಂತರದಲ್ಲಿ ಹದಗೆಟ್ಟ ರೋಗಿಗಳಿಗೆ ಅಂತಹ ಚಿಕಿತ್ಸೆಗಳನ್ನು ಕಾಯ್ದಿರಿಸುವ ಬದಲು ಮೊದಲ ಸಾಲಿನ ಸೆಟ್ಟಿಂಗ್‌ಗಳಲ್ಲಿ ಹೊಸ ನವೀನ ಚಿಕಿತ್ಸೆಗಳೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿರುತ್ತದೆ.

Ang-2 ಮತ್ತು VEGF-A ಒಳಗೊಂಡಿರುವ ಎರಡೂ ಮಾರ್ಗಗಳನ್ನು ನಿರ್ಬಂಧಿಸುವ ಸುಧಾರಿತ ಚಿಕಿತ್ಸಾ ಆಯ್ಕೆಗಳು, ರಕ್ತನಾಳಗಳನ್ನು ಸ್ಥಿರಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಉರಿಯೂತ, ಸೋರಿಕೆ ಮತ್ತು ಅಸಹಜ ನಾಳಗಳ ಬೆಳವಣಿಗೆಯನ್ನು ಕಡಿಮೆ ಮಾಡಬಹುದು, ಇದು ನಿರಂತರ ರೋಗ ನಿಯಂತ್ರಣವನ್ನು ಒದಗಿಸಲು ಹಾಗೂ ದೃಷ್ಟಿ ಫಲಿತಾಂಶಗಳನ್ನು ಕಾಪಾಡಿಕೊಳ್ಳಲು ಬಹಳ ಸಹಾಯವನ್ನು ಮಾಡುತ್ತದೆ.

HCP ಯಿಂದ ಉಲ್ಲೇಖ – ದೃಷ್ಟಿ ನಷ್ಟವನ್ನು ಹೊಂದಿರುವ ರೋಗಿಗಳು ಸಾಮಾಜಿಕ ಬಹಿಷ್ಕಾರ, ಆತಂಕ, ಖಿನ್ನತೆಯ ಲಕ್ಷಣಗಳು ಮತ್ತು ಅವರ ದೈನಂದಿನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸುತ್ತಾರೆ. ಸರಳವಾದ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವು ಸೀಮಿತಗೊಳ್ಳುತ್ತದೆ. ಬಹು ಕ್ಲಿನಿಕ್ ಭೇಟಿಗಳು ಮತ್ತು ಆಗಾಗ್ಗೆ ಕಣ್ಣಿನ ಚುಚ್ಚುಮದ್ದಿನ ಹೊರೆಯ ಚಿಕಿತ್ಸೆಯ ವೇಳಾಪಟ್ಟಿಯನ್ನು ಕೂಡ ಇದಕ್ಕೆ ಸೇರಿಸಿದಂತೆ. ವಿಸ್ತೃತ ಚಿಕಿತ್ಸೆಯ ಬಾಳಿಕೆಯೊಂದಿಗೆ ಬರುವ ಪರಿಣಾಮಕಾರಿ ವೈದ್ಯಕೀಯ ಪ್ರಯೋಜನಗಳನ್ನು ನೀಡುವ ಹೊಸ, ನವೀನ ಚಿಕಿತ್ಸಾ ಆಯ್ಕೆಗಳ ಅವಶ್ಯಕತೆಯಿದೆ. ಇಂತಹ ಚಿಕಿತ್ಸಾ ಆಯ್ಕೆಗಳು ರೋಗಿಗಳಿಗೆ ಅನುಕೂಲವನ್ನು ಒದಗಿಸುವುದಲ್ಲದೆ, ಉತ್ತಮ ಫಲಿತಾಂಶಗಳಿಗಾಗಿ ಚಿಕಿತ್ಸೆಯ ಅನುಸರಣೆಯನ್ನು ಖಾತ್ರಿಪಡಿಸುತ್ತದೆ, ಹಾಗೂ ನಮ್ಮ ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. – ಡಾ. ವಿವೇಕ್ ಎಂ ಭಾಸ್ಕರ್ – ಹಿರಿಯ ಸಲಹೆಗಾರ (ವಿಟ್ರಿಯೋ ರೆಟಿನಾಲ್) – ಶೇಖರ್ ಕಣ್ಣಿನ ಆಸ್ಪತ್ರೆ, ಬೆಂಗಳೂರು.

HCP ಯಿಂದ ಉಲ್ಲೇಖ – ಕಣ್ಣಿನ ಪೊರೆ ಮತ್ತು ಗ್ಲುಕೋಮಾ ಸಂಬಂಧಿತ ಕುರುಡುತನವನ್ನು ಕಡಿಮೆ ಮಾಡುವಲ್ಲಿ ಭಾರತವು ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಆದರೆ ದುರದೃಷ್ಟವಶಾತ್, ನಮ್ಮ ದೇಶದಲ್ಲಿ ರೆಟಿನಾ ಸಂಬಂಧಿತ ದೃಷ್ಟಿ ನಷ್ಟದ ಪಾಲು ಹೆಚ್ಚಾಗುತ್ತಲಿದೆ. ಹಲವಾರು ಅಂಶಗಳು ಇದಕ್ಕೆ ಕಾರಣವಾಗಿವೆ… ಅರಿವಿನ ಕೊರತೆ, ರೋಗನಿರ್ಣಯದಲ್ಲಿ ತಡ ಮಾಡುವಿಕೆ, ಕಳಪೆ ಜೀವನಶೈಲಿ, ಮಧುಮೇಹ ಜನಸಂಖ್ಯೆಯ ಹೆಚ್ಚಳ, ನಮ್ಮ ದೇಶದ ವಯಸ್ಸಾದ ಜನಸಂಖ್ಯೆ, ನಮ್ಮ ಆರೋಗ್ಯ ವ್ಯವಸ್ಥೆಗಳಲ್ಲಿನ ಸಾಮರ್ಥ್ಯದ ನಿರ್ಬಂಧಗಳು ಮತ್ತು ರೆಟಿನಾದ ಪರಿಸ್ಥಿತಿಗಳಿಗೆ ಆದ್ಯತೆ ನೀಡುವಲ್ಲಿ ದುರ್ಬಲವಾದ ನೀತಿ ಗಮನ ಮುಂತಾದವುಗಳು.

Continue Reading

ಆರೋಗ್ಯ

Cancer Treatment : ವೈದ್ಯಕೀಯ ಲೋಕದಲ್ಲಿ ಎಐ; ಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌!

Cancer Treatment: ವೈದ್ಯಕೀಯ ಲೋಕದಲ್ಲಿ ಎಐ ಕಾಲಿಟ್ಟಿದ್ದು, ಇದೀಗ ಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌ ಬಂದಿದೆ. ಇಷ್ಟಕ್ಕೂ ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Cancer Treatment AI
Koo

ಬೆಂಗಳೂರು: ವೈದ್ಯಕೀಯ ಲೋಕದಲ್ಲೂ ಎಐ ಪಾದಾರ್ಪಣೆ (Cancer Treatment) ಮಾಡಿದ್ದು, ಅದರ ಭಾಗವಾಗಿ ಇದೀಗ ಕ್ಯಾನ್ಸರ್‌ಕಾರ ಗಡ್ಡೆಯನ್ನು ನಿಖರವಾಗಿ ಪತ್ತೆ ಹಚ್ಚಲು ಸೈಬರ್‌ನೈಫ್‌-ಎಸ್7 ಎಂಬ ಎಐ ಚಾಲಿತ ಸಿಸ್ಟಮ್‌ನನ್ನು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ದೇಶದಲ್ಲೇ ಮೊದಲ ಬಾರಿಗೆ ಅನಾವರಣಗೊಳಿಸಿದೆ.

ಈ ಕುರಿತು ಮಾತನಾಡಿದ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್‌. ಅಜಯ್‌ ಕುಮಾರ್, ವೈದ್ಯಕೀಯ ಲೋಕದಲ್ಲಿ ಎಐನ ಅವಶ್ಯಕತೆ ಇದೆ. ಹೀಗಾಗಿ ನಮ್ಮ ಸಂಸ್ಥೆ ಕ್ಯಾನ್ಸರ್‌ ಗಡ್ಡೆಯನ್ನು ಯಾವುದೇ ಅಂಗದಲ್ಲಿದ್ದರೂ ಅದನ್ನು ನಿಖರವಾಗಿ ಕಂಡು ಹಿಡಿಯಲು ಎಐನನ್ನು ಅಳವಡಿಸಿಕೊಂಡಿದೆ. ಕ್ಯಾನ್ಸರ್‌ ಗಡ್ಡೆಯನ್ನು ಪತ್ತೆಹಚ್ಚಲು ಸೈಬರ್‌ನೈಫ್‌ ಎಂಬ ತಂತ್ರಜ್ಞಾನ ಪ್ರಸ್ತುತ ಚಾಲ್ತಿಯಲ್ಲಿದೆ, ಇದರ ನವೀಕೃತ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಈ ನೂತನ ಎಐ ಚಾಲಿನ ಸೈಬರ್‌ನೈಫ್‌ -ಎಸ್ 7 ಕ್ಯಾನ್ಸರ್‌ಕಾರ ಗಡ್ಡೆ ಹಾಗೂ ಕ್ಯಾನ್ಸರ್‌ ಅಲ್ಲದ ಗಡ್ಡೆಗಳನ್ನು ಸಹ ನಿಖರವಾಗಿ ಗುರುತಿಸಿ ಅದನ್ನು ತೆಗೆದುಹಾಕುವಲ್ಲಿ ಹೆಚ್ಚು ಅತ್ಯಾಧುನಿಕವಾಗಿ ಸಹಕರಿಸಲಿದೆ. ಪ್ರಮುಖವಾಗಿ ಮೆದುಳು, ಶ್ವಾಸಕೋಶ, ಬೆನ್ನುಮೂಳೆ, ಪ್ರಾಸ್ಟೇಟ್ ಮತ್ತು ಹೊಟ್ಟೆ ಸೇರಿದಂತೆ ದೇಹದ ಯಾವುದೇ ಅಂಗದಲ್ಲಿ ಗೆಡ್ಡೆ ಬೆಳೆದಿದ್ದರೂ ಸುಲಭವಾಗಿ ಪತ್ತೆಹಚ್ಚಿ, ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಅಷ್ಟೇಅಲ್ಲದೆ, ಇದು ಮೊದಲ ಪ್ರಯತ್ನದಲ್ಲಿಯೇ ಫಲಿತಾಂಶ ಸಿಗಲಿದ್ದು, ಹೆಚ್ಚು ಸಮಯ ತೆಗೆದುಕೊಳ್ಳದೇ ಶಸ್ತ್ರಚಿಕಿತ್ಸೆ ನಡೆಸಬಹುದು. ಈ ಹಿಂದೆ ಚಾಲ್ತಿಯಲ್ಲಿದ್ದ ಸೈಬರ್‌ ನೈಫ್‌ನ ಮೂಲಕ 7,500ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

World Heart Day: ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ ರೋಗಿಗಳ ಪಾಲಿಗೆ ನವೀನ ತಂತ್ರಜ್ಞಾನಗಳು ವರದಾನ

World Heart Day : ನವೀನ ತಂತ್ರಜ್ಞಾನಗಳು ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ
ರೋಗಿಗಳ ಪಾಲಿಗೆ ಕ್ರಾಂತಿಕಾರಿ ಆಗಿದೆ ಎಂದು ʻನಾರಾಯಣ ಇನ್ಸ್‌ಟಿಟ್ಯೂಟ್‌ ಆಫ್ ಕಾರ್ಡಿಯಾಕ್ ಸೈನ್ಸಸ್‌ʼನ ಹಿರಿಯ ಸಲಹೆಗಾರರಾದ ಡಾ.ಸಂಜಯ್ ಮೆಹ್ರೋತ್ರ ತಿಳಿಸಿದ್ದಾರೆ.

VISTARANEWS.COM


on

By

Innovative technologies have revolutionized patients with heart valve disorder
Koo

ಬೆಂಗಳೂರು: ಭಾರತದಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸರ್ವರ ಹೃದಯ ಆರೋಗ್ಯ ಸುಧಾರಣೆಗಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಬೇಕಾದ ಪ್ರಾಮುಖ್ಯತೆ ಇತ್ತೀಚೆಗೆ ಹೆಚ್ಚುತ್ತಿದೆ. ಈ ವರ್ಷದ ವಿಶ್ವ ಹೃದಯ ದಿನವನ್ನು (World Heart Day) – “ಕ್ರಿಯಾಶೀಲರಾಗಿ ಹೃದಯವನ್ನು ಬಳಸಿ” ಎಂಬ ವಿಷಯಾಧಾರಿತವಾಗಿ ಆಚರಿಸಲಾಗುತ್ತಿದೆ. ಇದು ತಮ್ಮ ಹೃದಯದ ಆರೋಗ್ಯ ಮೇಲ್ವಿಚಾರಣೆಗಾಗಿ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತದೆ. ʻನಾರಾಯಣ ಇನ್ಸ್‌ಟಿಟ್ಯೂಟ್‌ ಆಫ್ ಕಾರ್ಡಿಯಾಕ್ ಸೈನ್ಸಸ್‌ʼನ ಹಿರಿಯ ಸಲಹೆಗಾರರಾದ ಡಾ.ಸಂಜಯ್ ಮೆಹ್ರೋತ್ರ ಅವರು ಸಹ ತಮ್ಮ ಮಾತುಗಳಲ್ಲಿ ಇದನ್ನೇ ಒತ್ತಿ ಹೇಳಿದರು.

ಹೃದಯರಕ್ತನಾಳದ ಕಾಯಿಲೆಗಳು ಹೃದಯ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಹಲವಾರು ಪರಿಸ್ಥಿತಿಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ʻಕರೋನರಿ ಆರ್ಟಿಲರಿ ಡಿಸೀಜ್‌ʼ(ಹೃದಯದ ಧಮನಿಗಳಲ್ಲಿ ಕೊಬ್ಬು ಶೇಖರಣೆಯಿಂದ ಅಡಚಣೆ), ಹೃದಯ ವೈಫಲ್ಯ, ʻಅರಿಥ್ಮಿಯಾಸ್ʼ (ಅನಿಯಮಿತ ಹೃದಯಬಡಿತ) ಮತ್ತು ʻಅಯೋರ್ಟಿಕ್ ಸ್ಟೆನೋಸಿಸ್‌ʼನಂತಹ ಹೃದಯ ಕವಾಟ ಕಾಯಿಲೆಗಳು ಸೇರಿವೆ. ಇವುಗಳ ಪ್ರತಿ ಕಾಯಿಲೆಯ ವಿಧವೂ ಎದೆ ನೋವು, ಉಸಿರಾಟದ ತೊಂದರೆ ಮತ್ತು ಆಯಾಸದಂತಹ ತನ್ನದೇ ಆದ ಸವಾಲುಗಳು ಮತ್ತು ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ. ಈ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಯೋಚಿತ ರೋಗಪತ್ತೆ ಮತ್ತು ಚಿಕಿತ್ಸೆ ನಿರ್ಣಾಯಕವಾಗಿದೆ.

Innovative technologies have revolutionized patients with heart valve disorder
Innovative technologies have revolutionized patients with heart valve disorder

“ಇತ್ತೀಚೆಗೆ, ನಾನು ಅನಿಲ್ (ಹೆಸರು ಬದಲಾಯಿಸಲಾಗಿದೆ) ಎಂಬ ಹಿರಿಯ ವ್ಯಕ್ತಿಗೆ ಚಿಕಿತ್ಸೆ ನೀಡಿದೆ. ಅವರು ಈ ಹಿಂದೆ ತುಂಬಾ ಸಕ್ರಿಯರಾಗಿದ್ದರು, ಉತ್ತಮ ಆರೋಗ್ಯವನ್ನು ಹೊಂದಿದ್ದರು. ಆದಾಗ್ಯೂ, ತೋಟಗಾರಿಕೆ ಮತ್ತು ಮನೆಯ ಸುತ್ತಲೂ ನಡೆಯುವಂತಹ ಸರಳ ಚಟುವಟಿಕೆಗಳ ಸಮಯದಲ್ಲೂ ಅವರಿಗೆ ಉಸಿರಾಟದ ತೊಂದರೆ ಆರಂಭವಾಯಿತು. ಮಲಗಿರುವಾಗ ಉಸಿರಾಟದ ತೊಂದರೆಯಿಂದಾಗಿ ನಿದ್ರೆ ಮಾಡಲು ಹೆಣಗಾಡುವ ಮಟ್ಟಕ್ಕೆ ಅವರ ಸ್ಥಿತಿ ಹದಗೆಟ್ಟಿತು. ಒಂದು ದಿನ, ಅವರು ಮೆಟ್ಟಿಲುಗಳನ್ನು ಇಳಿಯುವಾಗ ಕುಸಿದುಬಿದ್ದರು. ಆಸ್ಪತ್ರೆಗೆ ದಾಖಲಿಸಿದ ನಂತರ, ಅನಿಲ್ ಅವರಿಗೆ ʻಅಯೋರ್ಟಿಕ್ ಸ್ಟೆನೋಸಿಸ್ʼ ಇರುವುದು ಪತ್ತೆಯಾಯಿತು.

ಇದು ಹೃದಯದ ಕವಾಟಗಳ ಪೈಕಿ ಒಂದು ಕವಾಟವು ಕಿರಿದಾಗುವ ಸ್ಥಿತಿ. ಹೃದಯದ ಕಾರ್ಯವನ್ನು ಪೂರ್ವ ಸ್ಥಿತಿಗೆ ಪುನಃಸ್ಥಾಪಿಸಲು, ಅನಿಲ್ ಅವರು ʻಟ್ರಾನ್ಸ್ ಕ್ಯಾಥೆಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ʼ(ಟಿಎವಿಐ) ಎಂಬ ಕಾರ್ಯವಿಧಾನಕ್ಕೆ ಒಳಗಾದರು. ಗಮನಾರ್ಹ ವಿಷಯವೆಂದರೆ, ಮರುದಿನವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಶೀಘ್ರದಲ್ಲೇ ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿದರು,” ಎಂದು ನಾರಾಯಣ ಇನ್ಸ್‌ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್‌ʼನ ಹಿರಿಯ ಸಲಹೆಗಾರ ಡಾ.ಸಂಜಯ್ ಮೆಹ್ರೋತ್ರ ವಿವರಿಸಿದರು.

ʻಅಯೋರ್ಟಿಕ್ ಸ್ಟೆನೋಸಿಸ್ʼ(ಎಎಸ್) ಸಮಸ್ಯೆಗೆ ಚಿಕಿತ್ಸೆಯು ಅದರ ತೀವ್ರತೆ ಮತ್ತು ರೋಗಲಕ್ಷಣಗಳನ್ನು ಅವಲಂಬಿಸಿರುತ್ತದೆ. ಲಕ್ಷಣರಹಿತ ಅಥವಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ, ತೊಡಕುಗಳ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಔಷಧ ಅಥವಾ ಜೀವನಶೈಲಿ ಬದಲಾವಣೆಗಳನ್ನು ಶಿಫಾರಸು ಮಾಡಬಹುದು. ಆಗಾಗ್ಗೆ ವೈದ್ಯರ ಭೇಟಿ ಮತ್ತು ಪರೀಕ್ಷೆಗಳ ಮೂಲಕ ನಿಯಮಿತ ಮೇಲ್ವಿಚಾರಣೆಗೆ ಸಲಹೆ ನೀಡಬಹುದು.

ಇದನ್ನೂ ಓದಿ: Breast cancer : ಸ್ತನ ಕ್ಯಾನ್ಸರ್‌ ರೋಗಿಗೆ ರೊಬೋಟ್‌ ನೆರವಿನಿಂದ ತನ್ನದೆ ದೇಹದ ಮತ್ತೊಂದು ಭಾಗ ಬಳಸಿ ಸ್ತನ ಪುನರ್‌ ನಿರ್ಮಾಣ; ಫೋರ್ಟಿಸ್‌ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

ಆದಾಗ್ಯೂ, ತೀವ್ರವಾದ ʻಎಎಸ್ʼ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ತಾಂತ್ರಿಕ ಪ್ರಗತಿಗಳು ಕಳೆದ ದಶಕದಲ್ಲಿ ʻಟಿಎವಿಐʼ ಅನ್ನು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಿವೆ. ಕಡಿಮೆ ಸಮಯ ಆಸ್ಪತ್ರೆಯಲ್ಲಿ ಉಳಿಯುವುದು, ಕಡಿಮೆ ನೋವು, ಕಡಿಮೆ ರಕ್ತ ನಷ್ಟ, ಕಡಿಮೆ ಸೋಂಕುಗಳು ಮತ್ತು ಕ್ಷಿಪ್ರ ಚೇತರಿಕೆಯಂತಹ ಪ್ರಯೋಜನಗಳನ್ನು ನೀಡುತ್ತವೆ. ಕಾರ್ಯವಿಧಾನದ ಮರುದಿನ ರೋಗಿಗಳು ಸಾಮಾನ್ಯವಾಗಿ ತಮ್ಮ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ಸಂಶೋಧಕರು ಕವಾಟಗಳನ್ನು ಹೆಚ್ಚು ಕಾಲ ಉಳಿಯುವಂತೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಿರಿಯ ವ್ಯಕ್ತಿಗಳು ಸೇರಿದಂತೆ ಹೆಚ್ಚಿನ ರೋಗಿಗಳಿಗೆ ʻಟಿಎವಿಐʼ ಆಯ್ಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ.

ವೈದ್ಯಕೀಯ ಆರೈಕೆಯಲ್ಲಿ ಎಷ್ಟೆಲ್ಲಾ ಪ್ರಗತಿಯ ಹೊರತಾಗಿಯೂ, ಯುವ ಜನರಲ್ಲಿ ಹೃದಯರಕ್ತನಾಳದ ಕಾಯಿಲೆಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಈ ಹೆಚ್ಚುತ್ತಿರುವ ಹೃದ್ರೋಗದ ವ್ಯಾಪ್ತಿಯು ನಿರಂತರ ಜಾಗರೂಕತೆ ಮತ್ತು ತಡೆಗಟ್ಟುವ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತದೆ. ಹೃದಯರಕ್ತನಾಳದ ಕಾಯಿಲೆಗಳು ಮತ್ತು ಆರಂಭಿಕ ಮಧ್ಯಸ್ಥಿಕೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ವಿಶೇಷವಾಗಿ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಅಪಾಯದ ಅಂಶಗಳನ್ನು ಹೊಂದಿರುವವರಿಗೆ ನಿಯಮಿತ ಪರೀಕ್ಷೆ ಮತ್ತು ತಪಾಸಣೆಗಳು ಅತ್ಯಗತ್ಯ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
navaratri
ಬೆಂಗಳೂರು9 ಗಂಟೆಗಳು ago

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Mysuru News
ಮೈಸೂರು9 ಗಂಟೆಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು9 ಗಂಟೆಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು10 ಗಂಟೆಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು10 ಗಂಟೆಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು11 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ12 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು13 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು13 ಗಂಟೆಗಳು ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು14 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ದಿನ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌