World Malaria Day: ವಿಶ್ವ ಮಲೇರಿಯಾ ಜಾಗೃತಿ ದಿನ; ರೋಗ ತಡೆಗೆ ಸೊಳ್ಳೆ ನಿರ್ಮೂಲನೆ ಅಗತ್ಯ - Vistara News

ಆರೋಗ್ಯ

World Malaria Day: ವಿಶ್ವ ಮಲೇರಿಯಾ ಜಾಗೃತಿ ದಿನ; ರೋಗ ತಡೆಗೆ ಸೊಳ್ಳೆ ನಿರ್ಮೂಲನೆ ಅಗತ್ಯ

ವೃದ್ಧಿಯಾಗುವ ಸೊಳ್ಳೆಗಳನ್ನು ನಾಶ ಮಾಡಲೇಬೇಕು (World Malaria Day). ಎಲ್ಲೆಲ್ಲಿ ನೀರು ನಿಂತಿದೆ ಅವೆಲ್ಲಕ್ಕೂ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಪ್ರಸರಣ ನಿಲ್ಲಿಸಬೇಕು. ಸೊಳ್ಳೆಗಳ ಹೆಚ್ಚಳ ತಡೆಯುವುದು ಈ ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

VISTARANEWS.COM


on

World Malaria Day, Mosquito eradication is essential to prevent the disease
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತ್ತೀಚೆಗಷ್ಟೇ ಹೆಸರು ಕೇಳಿ ಬರುತ್ತಿರುವ ಕೋವಿಡ್‌ ಮತ್ತದರ ಸಂಬಂಧಿ ವೈರಸ್‌ಗಳ ವಿಷಯ ಬಿಡಿ, ಶತಮಾನಗಳಿಂದ ಮನುಕುಲವನ್ನು ಕಾಡಿಸುತ್ತಿರುವ ಮಲೇರಿಯಾ ವೈರಸ್‌ನಿಂದ ಮುಕ್ತವಾಗುವುದಕ್ಕೆ ನಾವಿನ್ನೂ ಹೆಣಗುತ್ತಲೇ ಇದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ೨೦೨೧ರಲ್ಲಿ ವಿಶ್ವದೆಲ್ಲೆಡೆಯಿಂದ ೨೧.೭ ಕೋಟಿ ಪ್ರಕರಣಗಳು ವರದಿಯಾಗಿವೆ ಮತ್ತು ೬ ಲಕ್ಷಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಆಫ್ರಿಕಾ ದೇಶಗಳಲ್ಲಿ ಸಂಭವಿಸಿದ್ದರೂ, ಭಾರತ ಈ ನಿಟ್ಟಿನಲ್ಲಿ ಪ್ರಬಲ ಸ್ಪರ್ಧೆಯನ್ನು ಒಡ್ಡುತ್ತಿದೆ. ವರ್ಷಂಪ್ರತಿ ೨೦ ಸಾವಿರ ಮಂದಿ ಮಲೇರಿಯಾ ರೋಗಕ್ಕೆ ಭಾರತದಲ್ಲಿ ಜೀವ ತೆರುತ್ತಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ಎಪ್ರಿಲ್‌ ೨೫ರಂದು ಆಚರಿಸಲಾಗುವ ವಿಶ್ವ ಮಲೇರಿಯಾ ಜಾಗೃತಿ ದಿನ (World Malaria Day) ಮಹತ್ವ ಪಡೆದಿದೆ.

ಮಲೇರಿಯಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದ, ಈ ರೋಗದ ಕುರಿತಾದ ತಿಳುವಳಿಕೆ, ಬಾರದಂತೆ ಜಾಗೃತಿ ಮತ್ತು ಬಂದಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶದಿಂದ- “ಮಲೇರಿಯಾವನ್ನು ಶೂನ್ಯಕ್ಕಿಳಿಸುವ ಸಮಯವಿದು: ಹೂಡಿ, ಆವಿಷ್ಕರಿಸಿ, ಅನುಷ್ಠಾನಗೊಳಿಸಿ” ಎಂಬ ಘೋಷವಾಕ್ಯವನ್ನು ಈ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ (World Malaria Day). ಹಾಗಾಗಿ ರೋಗದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಸಮಯವಿದು.

ಮಲೇರಿಯಾ ರೋಗಕ್ಕೆ ಕಾರಣವೇನು?

ಪ್ಲಾಸ್ಮೋರಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಈ ಜೀವಿಯ ಪ್ರಸರಣಕ್ಕೆ ಪೂರಕವಾಗಿ ಒದಗುವುದು ಅನಾಫಿಲಿಸ್‌ ಸೊಳ್ಳೆಗಳು. ಕಚ್ಚುವ ಸೊಳ್ಳೆಗಳ ಮೂಲಕ ಮಾನವದ ದೇಹವನ್ನು ಪ್ರವೇಶಿಸುವ ರೋಗಾಣು, ಯಕೃತ್‌ನಲ್ಲಿ ಸಂತಾನಾಭಿವೃದ್ಧಿ ನಡೆಸುತ್ತದೆ. ರೋಗಾಣುಗಳು ಸಾಕಷ್ಟು ವೃದ್ಧಿಯಾಗಿ, ಸೋಂಕು ಪಸರಿಸುವ ಹೊತ್ತಿನಲ್ಲಿ ರೋಗ ಲಕ್ಷಣಗಳು ಕಾಣಲು ಆರಂಭಿಸುತ್ತವೆ. ಇದಕ್ಕೆ ಸಾಮಾನ್ಯವಾಗಿ ಸೋಂಕು ತಗುಲಿದ ನಂತರ, ೧೦ ದಿನಗಳಿಂದ ನಾಲ್ಕು ವಾರಗಳವರೆಗೂ ಬೇಕಾಗುತ್ತದೆ.

ಮಲೇರಿಯಾ ಲಕ್ಷಣಗಳೇನು?

ತೀವ್ರ ಜ್ವರ, ಚಳಿನಡುಕ, ತಲೆನೋವು, ಮೈಕೈ ನೋವು, ವಾಂತಿ, ವಿಪರೀತ ಸುಸ್ತು- ಇವು ಸಾಮಾನ್ಯವಾಗಿ ಮಲೇರಿಯ ರೋಗಿಯಲ್ಲಿ ಕಂಡುಬರುವ ಲಕ್ಷಣಗಳು. ಮಕ್ಕಳಲ್ಲಿ ಇವಿಷ್ಟರ ಜೊತೆಗೆ ಕೆಮ್ಮು ಮತ್ತು ಡಯರಿಯ ಸಹ ಬರಬಹುದು. ಮಲೇರಿಯದಿಂದ ಕಾಮಾಲೆ (ಜಾಂಡೀಸ್)‌ ಮತ್ತು ರಕ್ತಹೀನತೆ (ಅನಿಮಿಯ) ಸಹ ಬರಬಹುದು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರಕ್ತಪರೀಕ್ಷೆ ಮಾಡಿಸಲು ವೈದ್ಯರು ಸೂಚಿಸುತ್ತಾರೆ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ಯಕೃತ್‌ ಸಮಸ್ಯೆ, ಶ್ವಾಸಕೋಶಗಳಲ್ಲಿ ನೀರು ತುಂಬುವುದು, ನ್ಯುಮೋನಿಯ, ದೃಷ್ಟಿಯ ತೊಂದರೆ, ಕಿಡ್ನಿ ವೈಫಲ್ಯ- ಹೀಗೆ ಹಲವು ರೀತಿಯಲ್ಲಿ ಆರೋಗ್ಯ ಕೈಕೊಟ್ಟು ಸಾವು ವಕ್ಕರಿಸಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಘೆ, ಮಲೇರಿಯಾ ಹೆಚ್ಚಳ: ಪಾರಾಗಲು ಇಲ್ಲಿದೆ ಉಪಾಯ

ಮಲೇರಿಯಾ ತಡೆ ಹೇಗೆ?

ಮೊದಲನೇದಾಗಿ, ವೃದ್ಧಿಯಾಗುವ ಸೊಳ್ಳೆಗಳನ್ನು ನಾಶ ಮಾಡಲೇಬೇಕು. ಎಲ್ಲೆಲ್ಲಿ ನೀರು ನಿಂತಿದೆ ಅವೆಲ್ಲಕ್ಕೂ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಪ್ರಸರಣ ನಿಲ್ಲಿಸಬೇಕು. ಸೊಳ್ಳೆಗಳ ಹೆಚ್ಚಳ ತಡೆಯುವುದು ಈ ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಾತ್ರವಲ್ಲ, ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ಮಲೇರಿಯ ನಿರೋಧಕತೆ ಉದ್ದೀಪಿಸುವಂಥ ಲಸಿಕೆಗಳು ಮಕ್ಕಳಿಗಾಗಿ ಲಭ್ಯವಿದೆ. ಈ ಬಗ್ಗೆ ವೈದ್ಯರಲ್ಲಿ ಮಾತಾಡುವುದು ಕ್ಷೇಮ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಗೇಮ್‌ ಆಡುವ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡುವುದು ಹೆಚ್ಚು ಎಂದು ವರದಿ ಹೇಳಿದೆ. ಗೇಮಿಂಗ್‌ ವ್ಯಸನಕ್ಕೆ ದಾಸರಾದ ಮಕ್ಕಳು ಜಂಕ್‌ ಫುಡ್‌ ದಾಸರಾಗುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಬೊಜ್ಜಿನ ಸಮಸ್ಯೆಯೂ ಇವರನ್ನೇ ಹೆಚ್ಚು ಕಾಡುತ್ತದೆ ಎನ್ನಲಾಗಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ, ಹದಿಹರೆಯದ ಮಕ್ಕಳು ಗೇಮಿಂಗ್‌ ಪ್ರಪಂಚದೊಳಕ್ಕೆ ಬೀಳುವುದರ ಜೊತೆಗೆ ಜಂಕ್‌ ಫುಡ್‌ ತಿನ್ನುವ ಅಭ್ಯಾಸವನ್ನೂ (Junk Food Side Effects) ಹೆಚ್ಚಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Junk Food Side Effects
Koo

ನಿಮ್ಮ ಮಕ್ಕಳು ಅತೀವವಾಗಿ ಗೇಮಿಂಗ್‌ಗೆ ದಾಸರಾಗಿದ್ದಾರೋ? ಮೊಬೈಲ್‌ಗಳಲ್ಲಿ, ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ಗಳಲ್ಲಿ ಗಂಟೆಗಟ್ಟಲೆ ಗೇಮ್‌ ಆಡುತ್ತಾರೋ? ಹಾಗಾದರೆ ಹುಷಾರು. ಗೇಮ್‌ ಆಡುವ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡುವುದು ಹೆಚ್ಚು ಎಂದು ವರದಿ ಹೇಳಿದೆ. ಗೇಮಿಂಗ್‌ ವ್ಯಸನಕ್ಕೆ ದಾಸರಾದ ಮಕ್ಕಳು ಜಂಕ್‌ ಫುಡ್‌ ದಾಸರಾಗುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಬೊಜ್ಜಿನ ಸಮಸ್ಯೆಯೂ ಇವರನ್ನೇ ಹೆಚ್ಚು (Junk Food Side Effects) ಕಾಡುತ್ತದೆ ಎನ್ನಲಾಗಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ, ಹದಿಹರೆಯದ ಮಕ್ಕಳು ಗೇಮಿಂಗ್‌ ಪ್ರಪಂಚದೊಳಕ್ಕೆ ಬೀಳುವುದರ ಜೊತೆಗೆ ಜಂಕ್‌ ಫುಡ್‌ ತಿನ್ನುವ ಅಭ್ಯಾಸವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೇಮಿಂಗ್‌ ಹಾಗೂ ಜಂಕ್‌ ಫುಡ್‌ ತಿನ್ನುವ ಚಟಕ್ಕೆ ಒಂದಕ್ಕೊಂದು ಸಂಬಂಧವಿದ್ದು ಮಕ್ಕಳು ಮತ್ತಷ್ಟು ಜಂಕ್‌ ಫುಡ್‌ ತಿನ್ನುವ ಬಯಕೆಯತ್ತ ಹೆಚ್ಚು ವಾಲುತ್ತಾರೆ. ಗೇಮಿಂಗ್‌ ಸಂದರ್ಭ ಅವರಿಗೆ ಅರಿವಿಲ್ಲದೆಯೇ ಹೆಚ್ಚು ಹೆಚ್ಚು ಜಂಕ್‌ ತಿನ್ನುತ್ತಾರೆ. ಇದರಿಂದ ಸಹಜವಾಗಿಯೇ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅದು ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಹದಿಹರೆಯದ, ಪುಟಾಣಿ ಮಕ್ಕಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬೊಜ್ಜಿನ ಸಮಸ್ಯೆಗಳು ಕಾಡುತ್ತಿವೆ. ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಚುರುಕಾಗಿರುವುದನ್ನು ಬಿಟ್ಟು, ಸರಿಯಾಗಿ ಮೈಬಗ್ಗಿಸಲಾರದೆ ಕಷ್ಟಪಡುವುದನ್ನು ನೀವು ನೋಡಿರಬಹುದು. ಇದಕ್ಕೆ ಇಂದಿನ ಗೇಮಿಂಗ್‌ ಪ್ರಪಂಚದಲ್ಲಿ ಮಕ್ಕಳು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು, ಗೇಮಿಂಗ್‌ ಲೈವ್‌ಸ್ಟ್ರೀಮ್‌ಗಳಲ್ಲಿ ಭಾಗವಹಿಸುವುದು, ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಗೇಮಿಂಗ್‌ನಲ್ಲಿ ಸಕ್ರಿಯರಾಗಿರುವುದು, ಗಂಟೆಗಟ್ಟ್ಲೆ, ಬೇರೆಯವರ ಜೊತೆ ಆನ್‌ಲೈನ್‌ ಗೇಮಿಂಗ್‌ನಲ್ಲಿ ಭಾಗವಹಿಸುವುದು ಇತ್ಯಾದಿಗಳೂ ಕೂಡಾ ಕಾರಣ ಎಂದಿದೆ.
ಮಕ್ಕಳಲ್ಲಿ ಈ ಮನಸ್ಥಿತಿಯನ್ನು ತರುವಲ್ಲಿ ಹಲವು ಖ್ಯಾತ ಬ್ರ್ಯಾಂಡ್‌ಗಳ ಪಾಲೂ ಇದೆ ಎಂದಿರುವ ಈ ಸಂಶೋಧನೆ, ಇಂತಹ ಪ್ಲಾಟ್‌ಫಾರಂಗಳಲ್ಲಿ ಮಕ್ಕಳ ಮನಸ್ಸಿಗೆ ನಾಟುವಂಥ, ಅರ ಆಸಕ್ತಿ ಕೆರಳಿಸುವಂತ ಜಾಹಿರಾತುಗಳು, ಮಾರಾಟಗಳು ಇತ್ಯಾದಿಗಳನ್ನು ಹಮ್ಮಿಕೊಳ್ಳುವುದೂ ಕೂಡಾ ಕಾರಣ ಎಂದಿದೆ.

No Junk Food Concept

ಜಂಕ್‌ ಫುಡ್‌ ಆಕರ್ಷಣೆ

ಗೇಮಿಂಗ್‌ಗಳ ಮೂಲಕ ಮಕ್ಕಳು ಇಂತಹ ಜಾಹೀರಾತುಗಳು ಹೇಳುವ ಆಸಕ್ತಿ ಕೆರಳಿಸುವ ಕೊಲಾಬ್‌ಗಳಲ್ಲಿ ಭಾಗವಹಿಸಿ ಗಂಟೆಗಟ್ಟಲೆ ಗೇಮಿಂಗ್‌ ದುನಿಯಾದಲ್ಲಿ ತಮಗೇ ಅರಿವಿಲ್ಲದಂತೆ, ಅತಿ ಹೆಚ್ಚು ಸಕ್ಕರೆ, ಉಪ್ಪು ಹಾಗೂ ರಾಸಾಯನಿಕಗಳಿರುವ ಜಂಕ್‌ ಆಹಾರಗಳನ್ನು ಸೇವಿಸುವತ್ತ ಆಕರ್ಷಿತರಾಗುತ್ತಿದ್ದಾರೆ. ಇಂತಹ ಡಿಜಿಟಲ್‌ ಮಾರ್ಕೆಟಿಂಗ್‌ ಪ್ಲಾಟ್‌ ಫಾರಂಗಳ ಹಾವಳಿಯಿಂದಾಗಿಯೇ ಇಂದು ಮಕ್ಕಳು ಇವುಗಳ ದಾಸರಾಗುತ್ತಿದ್ದಾರೆ. ಅರಿವಿಲ್ಲದೇ ಅವುಗಳ ಬಲೆಯಲ್ಲಿ ಬೀಳುತ್ತಿದ್ದಾರೆ. ಮಕ್ಕಳ ಚಟುವಟಿಕೆಗಳಲ್ಲಿ ಗಮನವಿಡದೇ, ಗೇಮಿಂಗ್‌ ನೀಡಿದರೆ, ಇಂತಹ ಅಪಾಯದಲ್ಲಿ ಮಕ್ಕಳನ್ನು ಬೀಳಿಸುವ ತಪ್ಪಿನ ಹೊಣೆಗಾರಿಕೆಯನ್ನು ಪೋಷಕರೇ ಹೊರಬೇಕಾಗುತ್ತದೆ.

ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ

ಹೀಗಾಗಿ, ನಿಮ್ಮ ಮಕ್ಕಳ ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ. ಅವರ ಗೇಮಿಂಗ್‌ ಪ್ರಪಂಚದ ಬಗ್ಗೆ ನಿಮಗೆ ಅರಿವಿರಲಿ. ನಮಗೆ ತಿಳಿಯದು ಎಂಬ ಉಡಾಫೆ ಬೇಡ. ಅವರು ಏನು ಆಡುತ್ತಾರೆ, ಎಷ್ಟು ಆಡುತ್ತಾರೆ ಎಂಬುದು ನಿಮಗೆ ಗೊತ್ತಿರಲಿ. ಮಕ್ಕಳಲ್ಲಿ ಈ ಬಗ್ಗೆ ಸಹಜವಾಗಿ ಮಾತುಕತೆ ನಡೆಸುವ ಸ್ನೇಹದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಿ.

Woman Ordering Pizza at Home Online

ಹೊರಗಿನ ಆರ್ಡರ್‌ ನಿಲ್ಲಿಸಿ

ಮಕ್ಕಳು ಮೂರು ಹೊತ್ತು ಮನೆಯೂಟವನ್ನು ಚೆನ್ನಾಗಿ ತಿನ್ನಲಿ. ಹೊರಗಿನಿಂದ ಆರ್ಡರ್‌ ಮಾಡಿಕೊಳ್ಳುವುದು ಉತ್ಯಾದಿಗಳನ್ನು ಆದಷ್ಟೂ ನಿಮ್ಮ ಹತೋಟಿಯಲ್ಲಿಡಿ. ಮಕ್ಕಳ ಊಟದ ತಟ್ಟೆಯಲ್ಲಿ ಸಾಕಷ್ಟು ತರಕಾರಿಗಳು, ಮೊಳಕೆ ಕಾಳುಗಳು, ಧಾನ್ಯಗಳಿಂದ ಮಾಡಿದ ತಿಂಡಿಗಳು, ಪ್ರೊಟೀನ್‌ಯುಕ್ತ ಆಹಾರ ಇರಲಿ. ಹಣ್ಣು ಹಂಪಲುಗಳನ್ನೂ ಮಕ್ಕಳು ತಿನ್ನಲಿ. ಯಾವಾಗಲಾದರೊಮ್ಮೆ ಅಪರೂಪಕ್ಕೆ ಮಾತ್ರ ಜಂಕ್‌ ತಿಂದರೆ ಸಾಕು.

ವಾಕಿಂಗ್‌ ಅಭ್ಯಾಸ ಬೆಳೆಸಿ

ಮಕ್ಕಳು ಚೆನ್ನಾಗಿ ಆಡಲಿ. ದೇಹ ಶ್ರಮವನ್ನು ಬೇಡುವ ಆಟವನ್ನು ಆಡಲಿ. ಮಕ್ಕಳ ಜೊತೆಗೆ ಒಂದು ವಾಕಿಂಗ್‌ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಿತ್ಯವೂ ನಿಮಗೆ ಸಾಧ್ಯವಾಗದಿದ್ದರೆ ವಾರಾಂತ್ಯದಲ್ಲಾದರೂ ಮಕ್ಕಳ ಜೊತೆ ಇದಕ್ಕಾಗಿ ಸಮಯ ಇಡಿ. ನಿಮ್ಮ ಹಾಗೂ ಅವರ ಪ್ರಪಂಚ ಬೇರೆ ಬೇರೆಯಾಗದಿರಲಿ.

fridge

ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ ತುಂಬಿಸಿಡಬೇಡಿ

ನಿಮ್ಮ ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ಗಳು, ಸಕ್ಕರೆಯುಕ್ಕ ತಿನಿಸುಗಳು, ಸಿಹಿತಿಂಡಿಗಳು ಇತ್ಯಾದಿಗಳಿಂದ ತುಂಬಿಸಬೇಡಿ. ಒಳ್ಳೆಯ ಆಹಾರಗಳೇ ಮಕ್ಕಳ ಕೈಗೆ ಸಿಗುವಂತಿರಲಿ. ಸಂಸ್ಕರಿಸಿದ ಆಹಾರಗಳು, ಪ್ಯಾಕೇಜ್ಡ್‌ ಡ್ರಿಂಕ್‌ಗಳನ್ನು ತಂದು ಇಟ್ಟುಕೊಳ್ಳಬೇಡಿ. ಆರೋಗ್ಯಕರ ಆಹಾರಗಳನ್ನು ಮಾಡುವ ಕ್ರಮ ಮಕ್ಕಳಿಗೆ ಕಲಿಸಿ. ಅವರಿಗೆ ಅವನ್ನೇ ತಿನ್ನಲು ಕೊಡಿ.

ಇದನ್ನೂ ಓದಿ: Health Tips Kannada: ನಮ್ಮ ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?

ಟಿವಿ ಮುಂದೆ ಉಣ್ಣುವ ಅಭ್ಯಾಸ ಬಿಡಿಸಿ

ಟಿವಿ ಮುಂದೆ ಕೂತು ಅಥವಾ ಫೋನ್‌ ನೋಡುತ್ತಾ ಅವರು ಉಣ್ಣುವ ಅಭ್ಯಾಸವಿದ್ದರೆ ಅದನ್ನು ಬಿಡಿಸಿ. ಎಲ್ಲರೂ ಒಟ್ಟಾಗಿ ಜೊತೆಯಾಗಿ ಒಂದೆಡೆ ಸೇರಿ ಕುಳಿತು ಉಣ್ಣುವ ಅಭ್ಯಾಸವನ್ನು ಮಕ್ಕಳೂ ರೂಢಿಸಿಕೊಳ್ಳಲಿ. ಮಕ್ಕಳು ಶಾಲೆಯಿಂದ ಬಂದ ಮೇಳೆ ಟಿವಿ ಮುಂದೆ ಕೂತು ಉಣ್ಣುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದರಿಂದ ಅವರನ್ನು ಮುಕ್ತರನ್ನಾಗಿಸಿ. ಟೇಬಲ್‌ ಮೇಲೆ ಕುಳಿತು ಕೇವಲ ಉಣ್ಣುವ ವಿಚಾರಕ್ಕೆ ಮಾತ್ರ ಗಮನ ಹರಿಸುವಂತೆ ಅವರನ್ನು ಬದಲಾಯಿಸಿ.

Continue Reading

ಆರೋಗ್ಯ

Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಹಗಲೆಲ್ಲ ದಣಿದು ರಾತ್ರಿ ಮಲಗುತ್ತಿದ್ದಂತೆ ಕಾಲಿನ ಸ್ನಾಯುಗಳಲ್ಲಿ ಹಿಂಡಿದಂತೆ ನೋವು ಪ್ರಾರಂಭವಾದರೆ? ನಿದ್ದೆಯಂತೂ ಹಾಳಾಗುತ್ತದೆ, ಆ ನೋವನ್ನು ಸಹಿಸುವುದು ಹೇಗೆ? ಯಾಕಾಗಿ ಬರುತ್ತದೆ ಇಂಥ ಸೆಳೆತ? ಇದಕ್ಕೆ ನಿಯಂತ್ರಣವಿಲ್ಲವೇ? ಇದಕ್ಕೆ ಪರಿಹಾರ ಏನು? ಈ ಎಲ್ಲ ಪ್ರಶ್ನೆಗಳಿಗೆ (Leg Cramps at Night) ಇಲ್ಲಿದೆ ಉತ್ತರ.

VISTARANEWS.COM


on

Leg Cramps At Night
Koo

ನಿದ್ದೆ ಮಾಡುವುದಕ್ಕೆ (Leg Cramps at Night?) ಎಷ್ಟೊಂದು ಸಮಸ್ಯೆಗಳು ನಮಗೆ! ಕಚೇರಿಯ ಕೆಲಸಗಳು ಮುಗಿಯುವುದಿಲ್ಲ, ಮೊಬೈಲ್‌ನಿಂದ ಬಿಡುವಾಗುವುದಿಲ್ಲ, ಲ್ಯಾಪ್‌ಟಾಪ್‌ ಕರೆಯುತ್ತಿರುತ್ತದೆ, ಮಲಗಿದರೂ ನಿದ್ದೆ ಬರುವುದಿಲ್ಲ… ಒಂದೆರಡೇ ಸಮಸ್ಯೆಗಳು? ನಿದ್ದೆಗೆ ಇರುವಷ್ಟು ತೊಂದರೆಗಳು ಸಾಲದು ಎಂಬಂತೆ ಕಾಲೂ ನೋವು ಕೊಡುತ್ತಿದ್ದರೆ, ದುರ್ಭಿಕ್ಷದಲ್ಲಿ ಅಧಿಕಮಾಸದ ಅವಸ್ಥೆ. ಹಗಲಿಡೀ ಸುಳಿವಿಲ್ಲದ ಕಾಲು ಸೆಳೆತ ರಾತ್ರಿಯಾಗುತ್ತಿದ್ದಂತೆ ಹಾಜರಾಗುತ್ತದೆ. ಯಾಕಾದರೂ ಹೀಗಾಗುತ್ತದೋ ಎಂದು ಗೊಣಗುತ್ತಾ ನರಳುವ ಬದಲು, ಈ ಅವಸ್ಥೆಯನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

The man's calf muscle cramped, massage of male leg at home

ಏನು ನೋವಿದು?

ಕಾಲು ನೋವುಗಳಲ್ಲಿ ಹಲವಾರು ರೀತಿಯಿದೆ. ಇದೆಂಥ ನೋವು ಎಂದು ಕೇಳಿದರೆ, ರಾತ್ರಿ ಅಡ್ಡಾಗುತ್ತಿದ್ದಂತೆ ಮೀನಖಂಡಗಳಲ್ಲಿ ಸೆಳೆತ ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದಂತೆ ಸ್ನಾಯುಗಳೆಲ್ಲ ಹಿಡಿದು ತಿರುಚಿದಂಥ ಅನುಭವ ತೀವ್ರ ವೇದನೆಯನ್ನು ನೀಡುತ್ತದೆ. ಕಾಲುಗಳಲ್ಲಿ ಒಂದೆಡೆ ಇಟ್ಟುಕೊಳ್ಳಲೂ ಕಷ್ಟ, ಹಾಗಂತ ಅಲ್ಲಾಡಿಸುವುದಕ್ಕೂ ಆಗದ ಸ್ಥಿತಿ. ಈ ಕಾಲು ಅಥವಾ ಮೀನಖಂಡದ ಸೆಳೆತ ಬಹಳಷ್ಟು ಜನರನ್ನು ಕಾಡಿಸುತ್ತದೆ.

ಏನು ಕಾರಣ?

ಇದಕ್ಕೆ ಕಾರಣಗಳು ಹಲವು. ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು, ವ್ಯಾಯಾಮವಿಲ್ಲದ ಜಡತೆ, ನೀರು ಸಾಕಷ್ಟು ಕುಡಿಯದಿರುವುದು, ಕೆಲವು ಸ್ನಾಯುಗಳನ್ನು ಅತಿಯಾಗಿ ಬಳಸಿದ್ದರಿಂದ ಕಾಡುವ ದುರ್ಬಲತೆ ಅಥವಾ ಮಧುಮೇಹದಂಥ ಯಾವುದೋ ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಇಂಥ ಕಾಲು ಸೆಳೆತದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗದಿದ್ದರೂ, ದಿನಾ ರಾತ್ರಿ ಇದೇ ಕತೆಯಾದರೆ ನಿದ್ದೆಗೆಟ್ಟೇ ಆರೋಗ್ಯ ಹಾಳಾದೀತು. ಹಾಗಾದರೆ ಏನು ಮಾಡಬೇಕು?

Outdoor Exercise

ವ್ಯಾಯಾಮ

ಮಲಗುವ ಸ್ವಲ್ಪ ಹೊತ್ತಿಗೆ ಮೊದಲು ಕೆಲವು ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ಕಾಲಿನ ಈ ಭಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಬಹುದು. ಈ ಕ್ರಮದಿಂದ ಸ್ನಾಯುಗಳ ಸೆಳೆತ, ನೋವು ಕಡಿಮೆಯಾಗುತ್ತದೆ. ಎಂಥ ವ್ಯಾಯಾಮಗಳವು?

ಸ್ಟ್ರೆಚ್‌

ಮೀನಖಂಡಗಳ ಸ್ನಾಯುಗಳನ್ನು ಎಳೆದು ಹಿಗ್ಗಿಸಿದಂತೆ ಸ್ಟ್ರೆಚ್‌ ಮಾಡುವುದು ನೆರವಾಗುತ್ತದೆ. ಇದಕ್ಕಾಗಿ ಗೋಡೆ ಮತ್ತು ನೆಲದ ನಡುವೆ ಪಾದವನ್ನು ಜಾರುಬಂಡೆಯಂತೆ ತಾಗಿಸಿ ನಿಲ್ಲಿಸಿ. ಇನ್ನೊಂದು ಕಾಲನ್ನು ಒಂದಡಿ ಹಿಂದಿಟ್ಟು, ಜಾರುಬಂಡೆಯಂತೆ ನಿಲ್ಲಿದ ಕಾಲನ್ನು ಮುಂದೆ ನೂಕಿ. ಇದಕ್ಕಾಗಿ ಕೈಯಲ್ಲಿ ಗೋಡೆಯನ್ನು ಆಧರಿಸಿ ಹಿಡಿಯಿರಿ. ಈ ವ್ಯಾಯಾಮವು ನಿಖರವಾಗಿ ಮೀನಖಂಡದ ಸ್ನಾಯುವನ್ನೇ ಗುರಿಯಾಗಿಸಿ ಕೊಂಡಂಥದ್ದು.

Benefits Of Walking Every Day

ನಡಿಗೆ

ಸಾಮಾನ್ಯ ನಡಿಗೆಯೂ ಕಾಲಿಗೆ ರಕ್ತ ಸಂಚಾರ ಹೆಚ್ಚಿಸುತ್ತದೆ. ಆದರೆ ಇದು ಒಮ್ಮೆ ಕಾಲಿನ ಬೆರಳುಗಳ ಮೇಲೆ ಮತ್ತೊಮ್ಮೆ ಹಿಮ್ಮಡಿಯ ಮೇಲೆ ನಡೆಯುವಂಥ ಕ್ರಮ. ಹೀಗೆ ಹಿಮ್ಮಡಿಯ ಮೇಲೊಂದು ಸುತ್ತು ಮತ್ತು ಕಾಲ್ಬೆರಳುಗಳ ಮೇಲೊಂದು ಸುತ್ತು ಹಾಕುತ್ತಾ ಮನೆಯಲ್ಲೇ ನಾಲ್ಕಾರು ಬಾರಿ ನಡೆಯಿರಿ. ಇದರಿಂದ ಕಾಲುಗಳ ಸ್ನಾಯುಗಳು ಬಲಗೊಳ್ಳುತ್ತವೆ.

ತಿರುಗಿಸಿ

ಪಾದದ ಕೀಲನ್ನು ವೃತ್ತಾಕಾರದಲ್ಲಿ ನಿಧಾನಕ್ಕೆ ತಿರುಗಿಸಿ. ನಾಲ್ಕು ಬಾರಿ ಪ್ರದಕ್ಷಿಣೆಯಂತೆ ಮತ್ತೆ ನಾಲ್ಕು ಬಾರಿ ಅಪ್ರದಕ್ಷಿಣೆಯಂತೆ ತಿರುಗಿಸಿ. ಇದರಿಂದ ಕೀಲುಗಳ ಆರೋಗ್ಯ ವೃದ್ಧಿಸಿ, ಕಾಲುಗಳಿಗೆ ರಕ್ತ ಸಂಚಾರ ಹೆಚ್ಚುತ್ತದೆ. ಈ ವ್ಯಾಯಾಮವನ್ನು ಕೂತಲ್ಲೇ ಮಾಡಬಹುದು.

Dieting concept. Healthy Food. Beautiful Young Asian Woman

ಆಹಾರದಲ್ಲಿ ಬದಲಾವಣೆ

ದೇಹಕ್ಕೆ ನೀರು ಸಾಕಾಗದೆ ಇರುವುದು ಸ್ನಾಯುಗಳಲ್ಲಿ ಸೆಳೆತ ಬರುವುದಕ್ಕೆ ಪ್ರಮುಖ ಕಾರಣ. ಹಾಗಾಗಿ ದಿನಕ್ಕೆ ಮೂರು ಲೀ. ನೀರಿನ ಪ್ರಮಾಣ ತಪ್ಪಿಸಬೇಡಿ. ಅತಿಯಾಗಿ ಕೆಫೇನ್‌ ಮತ್ತು ಆಲ್ಕೋಹಾಲ್‌ ದೂರ ಮಾಡಿ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಜೊತೆಗೆ ಎಲೆಕ್ಟ್ರೋಲೈಟ್‌ಗಳನ್ನು ಸೇರಿಸಿಕೊಳ್ಳಿ. ಇದರಿಂದ ಸ್ನಾಯುಗಳ ಕ್ಷಮತೆ ಹೆಚ್ಚುತ್ತದೆ. ಜೊತೆಗೆ ಬಾಳೆಹಣ್ಣು, ಪಾಲಕ್‌ ಸೊಪ್ಪು, ಕಾಯಿ-ಬೀಜಗಳು, ಡೇರಿ ಉತ್ಪನ್ನಗಳೆಲ್ಲ ಆಹಾರದಲ್ಲಿ ಇರಲಿ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಜೀವನಶೈಲಿಯ ಬದಲಾವಣೆ

ಜೀವನಶೈಲಿಯನ್ನು ಕೊಂಚ ಬದಲಾಯಿಸಿಕೊಂಡರೆ, ಇಂಥ ಕಿರಿಕಿರಿಗಳನ್ನು ದೂರ ಮಾಡಬಹುದು. ನಿತ್ಯವೂ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಇದರಿಂದ ಇಡೀ ಶರೀರದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಸ್ನಾಯುಗಳ ಆರೋಗ್ಯವೂ ವೃದ್ಧಿಸುತ್ತದೆ. ಸತ್ವಭರಿತ ಆಹಾರ ಸೇವನೆಯು ಸಹ ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪಾದರಕ್ಷೆಗಳ ಬಗ್ಗೆ ಗಮನ ಕೊಡಿ. ಆರಾಮದಾಯಕ ಎನಿಸುವ ಚಪ್ಪಲಿಗಳಿಗೇ ಆದ್ಯತೆ ನೀಡಿ. ಅತಿ ಎತ್ತರದ ಚಪ್ಪಲಿಗಳು, ಬಿಗಿಯಾದ ಶೂಗಳು ಕಾಲಿನ ರಕ್ತ ಸಂಚಾರಕ್ಕೆ ತೊಂದರೆ ನೀಡುತ್ತವೆ. ಮಲಗುವ ಮುನ್ನ ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಇರಿಸಿಕೊಂಡರೆ, ಇಂಥ ನೋವುಗಳು ಕಡಿಮೆಯಾಗಿ ಸುಖ ನಿದ್ದೆಗೆ ದಾರಿಯಾಗುತ್ತದೆ.

Continue Reading

ಕರ್ನಾಟಕ

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Namma Clinic: ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಹಾಗೂ ಸ್ಥಳ ಗುರುತಿಸುವ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಆದ್ಯತೆ ನೀಡುವಂತೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

VISTARANEWS.COM


on

Namma Clinic
Koo

ಬೆಂಗಳೂರು: ಬಸ್ ನಿಲ್ದಾಣಗಳು ಸೇರಿದಂತೆ (Namma Clinic) ಸಾರ್ವಜನಿಕ ಸ್ಥಳಗಳಲ್ಲಿ ʼನಮ್ಮ ಕ್ಲಿನಿಕ್‌ʼಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ವಿವಿಧ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ನೂತನ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 503 ನಮ್ಮ ಕ್ಲಿನಿಕ್‌ಗಳನ್ನು ಸದೃಢಗೊಳಿಸುವತ್ತ ಗಮನ ಹರಿಸಬೇಕು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಸ್ಥಳ ಗುರುತಿಸುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆದ್ಯತೆ ನೀಡುವಂತೆ ತಿಳಿಸಿದ ಸಚಿವರು, ವಿಶೇಷವಾಗಿ ಜೈಲುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ, ನಮ್ಮ ಕ್ಲಿನಿಕ್‌ಗಳನ್ನ ಆರಂಭಿಸುವ ಕುರಿತು ಸ್ಥಳ ಗುರುತಿಸುವ ಕಾರ್ಯ 15 ದಿನಗಳ ಒಳಗಾಗಿ ಪೂರ್ಣಗೊಳಿಸಿ ಕ್ಯಾಬಿನೆಟ್ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್ ಎನ್.ಎಚ್.ಎಂ ಎಂ.ಡಿ ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರಿಗೆ ಸೂಚಿಸಿದರು.

15 ನೇ ಹಣಕಾಸಿನಲ್ಲಿ ಆರೋಗ್ಯ ಯೋಜನೆಗಳ ಸ್ಥಿತಿಗತಿಗಳ ಕುರಿತು ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಯೋಜನೆಗಳ ಶೀಘ್ರ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ವಿಳಂಬ ನೀತಿಯನ್ನು ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ದುರಸ್ತಿ ಕಾರ್ಯಗಳು, ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 15ನೇ ಹಣಕಾಸಿನಲ್ಲಿ ಸಿಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Continue Reading

ಆರೋಗ್ಯ

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಕನ್ನಡಕ ಧರಿಸುವುದೋ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದೋ? ಈ ಪ್ರಶ್ನೆ ದೃಷ್ಟಿದೋಷ ಇರುವಂಥ ಹಲವರನ್ನು ಕಾಡಿರಬಹುದು. ಇವೆರಡಕ್ಕೂ ಅದರದ್ದೇ ಆದ ಇತಿ-ಮಿತಿಗಳಿವೆ. ನಿಮ್ಮ ಆದ್ಯತೆ ಯಾವುದು ಎನ್ನುವುದನ್ನು ನಿರ್ಧರಿಸುವುದಕ್ಕೆ ಬೇಕಾದ ಮಾಹಿತಿಗಳು (Glasses or Lenses) ಇಲ್ಲಿವೆ.

VISTARANEWS.COM


on

Glasses or Lenses
Koo

ಕಣ್ಣಿಗೆ ಪವರ್‌ ಇದ್ದರೆ ಆಗಾಗ ಕಾಡುವ ಪ್ರಶ್ನೆ- ಕನ್ನಡಕ ಹಾಕಬೇಕೆ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಹಾಕಬೇಕೆ? ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ದೃಷ್ಟಿದೋಪ ಸರಿಪಡಿಸುವುದು ಇದರ ಪ್ರಧಾನ ಉದ್ದೇಶವೆಂಬುದು ನಿಜ. ಆದರೆ ಜೊತೆಗೊಂದಿಷ್ಟು ಇದೆಯಲ್ಲ… ಕೊಸರು! ಇವೆರಡಕ್ಕೂ ಅವುಗಳದ್ದೇ ಆದ ಇತಿ-ಮಿತಿಗಳಿವೆ. ಅದರಲ್ಲೂ ಜೇಬಿಗೆಷ್ಟು ಭಾರ, ಯಾವುದು ಆರಾಮದಾಯಕ, ಧರಿಸುವವರ ಆದ್ಯತೆಗಳೇನು, ಜೀವನಶೈಲಿಗೆ ಹೊಂದುತ್ತದೆಯೇ ಎಂಬ ಹಲವು ವಿಷಯಗಳನ್ನು ಆಧರಿಸಿಯೇ ಆಯ್ಕೆ ಮಾಡುವುದಲ್ಲವೇ? ಇವೆಲ್ಲವುಗಳ ಜೊತೆಗೆ, ಕಣ್ಣಿನ ಆರೋಗ್ಯಕ್ಕೆ ಯಾವುದು ಹಿತ ಎನ್ನುವ ಪ್ರಶ್ನೆ ಮಹತ್ವದ್ದಾಗುತ್ತದೆ. ಯಾವುದು ಹಿತ ಈ (Glasses or Lenses) ಎರಡರೊಳಗೆ?

Glasses

ಕನ್ನಡಕ

ಶತಮಾನಗಳಿಂದ ಎಲ್ಲರ ದೃಷ್ಟಿದೋಷವನ್ನು ಸರಿಪಡಿಸುತ್ತ ಬಂದಿರುವ ಕನ್ನಡಕಗಳು ಯಾವುದೇ ತಲೆಬಿಸಿ ನೀಡದಂಥವು. ನಿಯಮಿತವಾಗಿ ನೇತ್ರವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಂಡು, ಕಣ್ಣಿನ ಪವರ್‌ ಎಷ್ಟಿದೆ ಎಂಬುದನ್ನು ನೋಡಿಕೊಂಡರಾಯಿತು. ಇರುವ ಕನ್ನಡಕವನ್ನು ಬದಲಾಯಿಸಬೇಕು ಎಂದಿದ್ದರೆ ವೈದ್ಯರೇ ಅದನ್ನು ಸೂಚಿಸುತ್ತಾರೆ. ಅದರಂತೆ ಕನ್ನಡದ ಬದಲಾಯಿಸಿದರೆ, ಮತ್ತಿನ್ನೇನೂ ಮಾಡಬೇಕಿಲ್ಲ. ಕನ್ನಡದ ಗಾಜನ್ನು ಒರೆಸಿ ಸ್ವಚ್ಛ ಮಾಡುವುದಕ್ಕಿಂತ ಹೆಚ್ಚಿನ ನಿರ್ವಹಣೆಯನ್ನು ಅದು ಬೇಡುವುದಿಲ್ಲ. ಇದು ದೃಷ್ಟಿ ದೋಷಕ್ಕೆ ಮದ್ದಷ್ಟೇ ಅಲ್ಲ, ಧೂಳು, ಬಿಸಿಲು, ಹಾನಿಕಾರಕ ಕಿರಣಗಳಿಂದಲೂ ರಕ್ಷಣೆಯನ್ನು ನೀಡಬಲ್ಲದು. ಅದರಲ್ಲೂ ಕೆಲವು ಸುಧಾರಿತ ಫೋಟೋಕ್ರೋಮಿಕ್‌ ಕನ್ನಡಕಗಳು ನೂರು ಪ್ರತಿಶತ ಅತಿನೇರಳೆ ಕಿರಣಗಳನ್ನು ತಡೆಗಟ್ಟಬಲ್ಲವು. ಈ ಕೆಲಸವನ್ನು ಯಾವುದೇ ಲೆನ್ಸ್‌ಗಳೂ ಮಾಡಲಾರವು. ಅವರವರ ಮುಖಮಂಡಲಕ್ಕೆ ಕಳೆಗಟ್ಟಿಸುವಂಥ ಸುಂದರ ಫ್ರೇಮ್‌ಗಳನ್ನು ಆಯ್ದುಕೊಂಡರೆ, ಕನ್ನಡಕವೂ ಫ್ಯಾಷನ್‌ ಘೋಷಣೆಯನ್ನು ಹೊರಡಿಸಬಲ್ಲದು. ಆದರೊಂದು, ಕನ್ನಡಕವನ್ನು ಹಾಕುವುದು ಅನಿವಾರ್ಯ ಎಂದಾಗ, ಕೆಲವೊಮ್ಮೆ ಅದು ಸಮಸ್ಯೆಯನ್ನೂ ಸೃಷ್ಟಿಸಬಲ್ಲದು. ಉದಾ, ಆಡುವುದು, ಓಡುವುದು ಮುಂತಾದ ದೈಹಿಕ ಚಟುವಟಿಕೆಗಳು ಮುಖ್ಯವಾಗಿದ್ದಾಗ ಕನ್ನಡಕ ತೊಡಕೆನಿಸುತ್ತದೆ. ನೃತ್ಯ, ನಟನೆಯಂಥ ಕಲೆಗಳಲ್ಲಿ ಕನ್ನಡಕ ಅಡಚಣೆ ಕೊಡುತ್ತದೆ. ಹೀಗೆ ಬಳಕೆದಾರರ ಮಿತ್ರ ಎನಿಸುವ ಕನ್ನಡಕವೂ ಕೆಲವೊಮ್ಮೆ ಕಣ್‌ ಕಣ್‌ ಬಿಡಿಸುತ್ತದೆ.

 Lenses

ಕಾಂಟ್ಯಾಕ್ಟ್‌ ಲೆನ್ಸ್‌

ಶತಮಾನಗಳ ಇತಿಹಾಸವಿಲ್ಲದ ಇದು, ಆಧುನಿಕ ಕಾಲದ್ದು. ಇಂದಿನ ಹಲವು ರೀತಿಯ ಅಗತ್ಯಗಳು ಮತ್ತು ಬದಲಾವಣೆಗಳಿಗೆ ಹೇಳಿ ಮಾಡಿಸಿದಂತದ್ದು. ಕನ್ನಡಕದ ಭಾರದಿಂದ ಮುಕ್ತಿ ನೀಡುವ ಇದು, ಮುಖದ ಸೌಂದರ್ಯವನ್ನು ಇದ್ದಂತೆಯೇ ಉಳಿಸುತ್ತದೆ. ಮದುವೆ, ನಾಮಕರಣದಂಥ ಸಾಮಾಜಿಕ ಕಾರ್ಯಕ್ರಮಗಳಿರಲಿ, ಆಟ, ಓಟದಂಥ ದೈಹಿಕ ಚಟುವಟಿಕೆಗಳಿರಲಿ, ನೃತ್ಯ-ನಟನೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ- ಸಂದರ್ಭ ಯಾವುದೇ ಆದರೂ ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಸೂಕ್ತವಾದದ್ದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಅಥವಾ ಮಾಸ್ಕ್‌ ಧರಿಸಿದಾಗ ಕನ್ನಡಕದ ಗಾಜಿನಂತೆ ಲೆನ್ಸ್‌ ಮಸುಕಾಗುವುದಿಲ್ಲ. ಹಾಗಾಗಿ ಕ್ರಿಯಾತ್ಮಕ ದೃಷ್ಟಿಯಿಂದಲೂ ಇದು ಕನ್ನಡಕಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತದೆ. ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದರಲ್ಲಿ ಇನ್ನೂ ಕೆಲವು ಲಾಭಗಳಿವೆ. ದೃಷ್ಟಿಯ ವ್ಯಾಪ್ತಿ ಕನ್ನಡಕ ಹಾಕಿದ ಸಂದರ್ಭಕ್ಕಿಂತ ಹೆಚ್ಚು ವಿಶಾಲವಾಗಿರುತ್ತದೆ ಲೆನ್ಸ್‌ನಲ್ಲಿ. ಜೊತೆಗೆ ನಿಖರತೆ ಮತ್ತು ಸ್ಪಷ್ಟತೆಯೂ ಅಧಿಕ. ಅದರಲ್ಲೂ ತೀವ್ರ ಅಸ್ಟಿಗ್ಮ್ಯಾಟಿಸಂ ಇರುವವರಲ್ಲಿ ದೃಷ್ಟಿಯ ನಿಖರತೆಯನ್ನು ಕನ್ನಡಕಕ್ಕಿಂತ ಸಾಕಷ್ಟು ಹೆಚ್ಚಿಸಬಲ್ಲದು ಕಾಂಟ್ಯಾಕ್ಟ್‌ ಲೆನ್ಸ್‌. ಎಲ್ಲಕ್ಕಿಂತ ಮುಖ್ಯವಾಗಿ ದೃಷ್ಟಿ ದೋಷ ಇರುವುದನ್ನು ಜಗಜ್ಜಾಹೀರು ಮಾಡದೆಯೇ, ಇದನ್ನು ಬಳಸಬಹುದು.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಜಾಗ್ರತೆ ಅಗತ್ಯ

ಕಾಂಟ್ಯಾಕ್ಟ್‌ ಲೆನ್ಸ್‌ಗಳು ತುಟ್ಟಿ. ಕನ್ನಡಕಗಳಂತೆ ಕಿಸೆಗೆ ಹಗುರವಲ್ಲ ಇವು. ಜೊತೆಗೆ ಇವುಗಳನ್ನು ಸದಾ ಬಳಸುತಿದ್ದರೆ ಕಣ್ಣುಗಳು ತೇವ ಕಳೆದುಕೊಂಡು ಶುಷ್ಕವಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಬಳಸುವಾಗ ಕೈಗಳ ಸ್ವಚ್ಛತೆಯ ಬಗ್ಗೆ ಜಾಗ್ರತೆ ಅಗತ್ಯ. ಹಾಗಿಲ್ಲದಿದ್ದರೆ ಕಣ್ಣಿಗೆ ಸೋಂಕು ಉಂಟಾಗಬಹುದು. ಈ ಕಾರಣದಿಂದಲೇ ಕನ್ನಡಕಗಳಿಗೆ ಹೋಲಿಸಿದರೆ, ಲೆನ್ಸ್‌ ಬಳಕೆದಾರರಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಲೆನ್ಸ್‌ಗಳು ಮತ್ತು ಅವುಗಳ ಡ್ರಾಪ್ಸ್‌ ವ್ಯಾಲಿಡಿಟಿಯನ್ನು ಆಗಾಗ ಪರಿಶೀಲಿಸುವುದು ಬಹುಮುಖ್ಯ. ಲೆನ್ಸ್‌ ಧರಿಸಿ ಈಜುವುದು, ರಾತ್ರಿ ನಿದ್ದೆ ಮಾಡುವುದು ಮುಂತಾದವು ಸಲ್ಲದು.

Continue Reading
Advertisement
Self Harming
ಮೈಸೂರು5 mins ago

Self Harming : 6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಶವವಾಗಿ ಪತ್ತೆ; ಕೊಂದವರು ಯಾರು?

Italian Parliament
ವೈರಲ್ ನ್ಯೂಸ್11 mins ago

Italian Parliament: ಇಟಲಿ ಪಾರ್ಲಿಮೆಂಟ್‌ನಲ್ಲಿ ಸಂಸದರ ಮಾರಾಮಾರಿ! ವಿಡಿಯೊ ನೋಡಿ

Kotee Movie release today dolly dhananjay
ಸ್ಯಾಂಡಲ್ ವುಡ್14 mins ago

Kotee Movie: ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

T20 World Cup 2024
ಕ್ರೀಡೆ17 mins ago

T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನವೇ ತವರಿಗೆ ಮರಳಲು ಸಿದ್ಧರಾದ ಟೀಮ್​ ಇಂಡಿಯಾದ ಇಬ್ಬರು ಆಟಗಾರರು​

Actor Darshan case comparision to serial troll
ಕಿರುತೆರೆ17 mins ago

Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

CM Award
ಪ್ರಮುಖ ಸುದ್ದಿ27 mins ago

CM Award : ಕಳಂಕಿತ ಡಿವೈಎಸ್ಪಿಜಾವೀದ್​ಗೆ ಸಿಎಂ ಪದಕ ನೀಡುವಂತೆ ಶಿಫಾರಸು; ಶಾಸಕ ಕಂದಕೂರ ವಿರೋಧ

Ajay Devgn Singham Again postponed release on Diwali 2024
ಬಾಲಿವುಡ್31 mins ago

Ajay Devgn: ʻಪುಷ್ಪ’ನಿಗೆ ಹೆದರಿದ ‘ಸಿಂಗಂ’; ಅಜಯ್ ದೇವಗನ್ ಸಿನಿಮಾ ರಿಲೀಸ್​ ಪೋಸ್ಟ್‌ಪೋನ್‌?

Priyanka Gandhi
ದೇಶ57 mins ago

Priyanka Gandhi: ರಾಹುಲ್ ಗಾಂಧಿ ತೆರವು ಮಾಡುವ ವಯನಾಡ್‌ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

Bakrid; CM Yogi gives warning to Muslims
Latest59 mins ago

Yogi Adityanath: ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್! ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಯೋಗಿ ವಾರ್ನಿಂಗ್!

Wimbledon 2024
ಕ್ರೀಡೆ1 hour ago

Wimbledon 2024: ವಿಂಬಲ್ಡನ್ ಟೂರ್ನಿಯಿಂದ ಹಿಂದೆ ಸರಿದ ಟೆನಿಸ್ ದಿಗ್ಗಜ ರಫೆಲ್‌ ನಡಾಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌