Ms/Mrs india Karnataka Audition: ಮಿಸ್‌&ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್‌ - Vistara News

ಫ್ಯಾಷನ್

Ms/Mrs india Karnataka Audition: ಮಿಸ್‌&ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್‌

Ms/Mrs india Karnataka Audition: ಮಿಸ್‌ ಮತ್ತು ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಯ ಆಡಿಷನ್‌ ಬೆಂಗಳೂರಿನ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಇದರಲ್ಲಿ, ವಯಸ್ಸಿನ ಭೇದ-ಭಾವವಿಲ್ಲದೇ ನಾನಾ ಯುವತಿಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Ms or Mrs india Karnataka Audition
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್‌/ಮಿಸೆಸ್‌ ಇಂಡಿಯಾ ಕರ್ನಾಟಕ (Ms/Mrs india Karnataka Audition) ಕೀರೀಟ ತಮ್ಮದಾಗಿಸಿಕೊಳ್ಳಲು ಯುವತಿಯರು ಹಾಗೂ ಮಹಿಳೆಯರು ಮುಂದಾಗಿದ್ದಾರೆ. ಹೌದು, ಫ್ಯಾಷನ್‌ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಕನಸು ಹೊಂದಿದ ಮಹಿಳೆಯರು ಇಂದು ಮಿಸ್‌ ಮತ್ತು ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಯ ಆಡಿಷನ್‌ನಲ್ಲಿ ಸಂತಸದಿಂದ ಪಾಲ್ಗೊಂಡರು. ಉದ್ಯಾನನಗರಿಯ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಬೆಳಗ್ಗೆಯಿಂದಲೇ ಆರಂಭಗೊಂಡ ಆಡಿಷನ್‌ನಲ್ಲಿ ನಾನಾ ವರ್ಗದ, ವಯಸ್ಸಿನ ಮಹಿಳೆಯರು ಅತ್ಯುತ್ಸಾಹದಿಂದ ಭಾಗವಹಿಸಿದರು.

Ms or Mrs india Karnataka Audition

ಪ್ರತಿಭಾ ಸಂಶಿಮಠ್‌ ನೇತೃತ್ವ

ಈ ಪೇಜೆಂಟ್‌ ಆಡಿಷನ್‌ನ ನೇತೃತ್ವವನ್ನು ಪೇಜೆಂಟ್‌ನ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸಂಶಿಮಠ್‌ ವಹಿಸಿದ್ದರು. ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Ms or Mrs india Karnataka Audition

ಮಹಿಳೆಯರಿಗೆ ಪ್ರೋತ್ಸಾಹ

ಪಾಲ್ಗೊಂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಾ, ಅವರ ಕ್ಷೇತ್ರ ಹಾಗೂ ಇತರೇ ವಿಷಯಗಳನ್ನು ಪ್ರಸ್ತಾಪಿಸುತ್ತಾ , ಎಲ್ಲರನ್ನೂ ಪರಿಚಯಿಸಿದರು. ರಾಜ್ಯದ ನಾನಾ ಕಡೆಯಿಂದ ಬಂದಂತಹ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು. ಒಬ್ಬೊಬ್ಬರಿಗೂ ಮುಂಬರುವ ಪೇಜೆಂಟ್‌ನ ಬಗ್ಗೆ ಸವಿವರವಾಗಿ ವಿವರಿಸಿದರು.

Ms or Mrs india Karnataka Audition

ಮಿಸ್‌ ಇಂಡಿಯಾ ಕರ್ನಾಟಕ ಟೈಟಲ್‌ಗೂ ನಡೆದ ಆಡಿಷನ್‌

ಹೊಸದಾಗಿ ಸೇರಿಸಲಾಗಿರುವ ಮಿಸ್‌ ಇಂಡಿಯಾ ಕರ್ನಾಟಕ ಟೈಟಲ್‌ ಅನ್ನು ಇದೇ ಮಿಸೆಸ್‌ ಪೇಜೆಂಟ್‌ನಲ್ಲಿ ಸೇರಿಸಲಾಗಿದ್ದು, 16 ವರ್ಷ ಪೂರ್ಣಗೊಳಿಸಿರುವ ಅವಿವಾಹಿತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರತಿಭಾ ಸಂಶಿಮಠ್‌ ವಿವರಿಸಿದರು.

Ms or Mrs india Karnataka Audition

ನಾನಾ ವಯೋಮಾನದವರ ಪಾಲ್ಗೊಳ್ಳುವಿಕೆ

ಇನ್ನು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಭಾಗವಹಿಸಲು ಇಚ್ಛಿಸುವ ನಾನಾ ವಯೋಮಾನದವರಿಗೆ ಪ್ರತ್ಯೇಕ ಗುಂಪುಗಳನ್ನು ರೂಪಿಸಲಾಗಿತ್ತು. 22-40 ರೊಳಗಿನ ವಯೋಮಾನದವರು, 41-60 ಹಾಗೂ 60ರ ಮೇಲ್ಪಟ್ಟವರು ಈ ಅಡಿಷನ್‌ನಲ್ಲಿ ಪಾಲ್ಗೊಂಡಿದ್ದರು.

ಅಡಿಷನ್‌ನಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳು

ಈ ಆಡಿಷನ್‌ನಲ್ಲಿ, ಮಿಸ್‌ ಕೆನಡಾ ಸೌತ್‌ ಏಷಿಯಾ 2019 & ಮಿಸ್‌ ಇಂಡಿಯಾ ಗ್ಲೋಬಲ್‌ 2019 ಪೂರ್ಣಿಮಾ ರಮೇಶ್‌ ವಿಶೇ‍ಷ ಅತಿಥಿಯಾಗಿ ಭಾಗವಹಿಸಿದ್ದರು. ಇವರೊಂದಿಗೆ ಬಿಗ್‌ ಬಾಸ್‌ ಸ್ಪರ್ಧಿ ಅವಿನಾಶ್‌ ಶೆಟ್ಟಿ, ಆಕ್ಸೀಸ್‌ ಬ್ಯಾಂಕ್‌ನ ಉಪಾಧ್ಯಕ್ಷೆ ಅನಿತಾ ಹರೀಶ್‌ ಹಾಗೂ ಪೇಜ್‌ ತ್ರೀ ಸೆಲೆಬ್ರೆಟಿ ಸತೀಶ್‌ ಕಡಾಬಮ್‌ ಅವರು ಕೂಡ ಪಾಲ್ಗೊಂಡಿದ್ದರು.

ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

ಆನ್‌ಲೈನ್‌ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ ಸೈಟ್‌ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. www.mrsindiakarnataka.com ಹಾಗೂ ವಾಟ್ಸಪ್‌ ಸಂಖ್ಯೆ: 9886761457

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Ashada Sale 2024: ಆಷಾಢ ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Ashada Sale 2024: ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಸೇಲ್‌ ಎಲ್ಲೆಡೆ ಆರಂಭವಾಗಿದೆ. ಈ ಸೇಲ್‌ನಲ್ಲಿ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಉತ್ತಮ ಖರೀದಿಯೊಂದಿಗೆ ಒಂದಿಷ್ಟು ಉಳಿತಾಯ ಕೂಡ ಮಾಡಬಹುದು ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ಸ್‌. ಆದರೆ, ಅದು ಹೇಗೆ? ಇಲ್ಲಿದೆ ಸಿಂಪಲ್‌ ಟಿಪ್ಸ್.

VISTARANEWS.COM


on

Ashada Sale 2024
ಚಿತ್ರಗಳು: ಮಿಂಚು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಆಷಾಢದಲ್ಲಿ ನಡೆಯುವ ಸೇಲ್‌ನಲ್ಲಿ (Ashada Sale 2024) ಶಾಪಿಂಗ್‌ ಮಾಡುತ್ತೀದ್ದೀರಾ! ಈ ಆಷಾಢದಲ್ಲಿ ಕಡಿಮೆ ಬೆಲೆಗೆ ಸಿಗುವುದೆಂದು ಖರೀದಿಗೆ ಮುಂದಾಗಿದ್ದೀರಾ? ಹಾಗಾದಲ್ಲಿ, ಒಂದಿಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಗಷ್ಟೇ! ನೀವು ಈ ಖರೀದಿಯ ಸದುಪಯೋಗದೊಂದಿಗೆ ಕೊಂಚ ಉಳಿತಾಯ ಕೂಡ ಮಾಡಬಹುದು ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ಸ್‌. “ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಸೇಲ್‌ ಎಲ್ಲೆಡೆ ಆರಂಭವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಸಾಕಷ್ಟು ಜ್ಯುವೆಲರಿ ಶಾಪ್‌ಗಳು ಹಾಗೂ ಬಟ್ಟೆ ಅಂಗಡಿಗಳು ಕೂಡ ಈ ಸೇಲ್‌ ಆಯೋಜಿಸುತ್ತಿವೆ. ಅಲ್ಲದೇ, ಸಾಕಷ್ಟು ಎಕ್ಸಿಬೀಷನ್‌ಗಳು ಕೂಡ ನಡೆಯುತ್ತಿವೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಮಂದಿ ಈ ಸೇಲ್ನಲ್ಲಿ ಶಾಪಿಂಗ್‌ ಮಾಡುವುದು ಕಂಡು ಬರುತ್ತಿದೆ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ ರಾಘವ್‌ ಹಾಗೂ ಧನ್ಯ ಶರ್ಮಾ.

Ashada Sale 2024

ಫೆಸ್ಟಿವ್‌ ಸೀಸನ್‌ಗೆ ಈಗಲೇ ಖರೀದಿಸಿ

ಮುಂಬರುವ ಫೆಸ್ಟಿವ್‌ ಸೀಸನ್‌ಗೆ ಈಗಲೇ ಖರೀದಿ ಆರಂಭಿಸಬಹುದು. ಹಾಗೆಂದು ಕಂಡಕಂಡದ್ದನ್ನೇಲ್ಲಾ ಖರೀದಿಸಿದಲ್ಲಿ, ಹಣ ವ್ಯಯವಾಗಬಹುದು. ಎಥ್ನಿಕ್‌ ಡಿಸೈನರ್‌ವೇರ್‌ಗಳು ಈ ಆಷಾಡ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕುತ್ತವೆ. ಅಂತಹವನ್ನು ಕೊಂಡಲ್ಲಿ, ಮುಂಬರುವ ಹಬ್ಬಗಳಿಗೆ ಖರೀದಿಸುವ ಜವಾಬ್ದಾರಿ ಕೊಂಚ ಕಡಿಮೆಯಾಗಬಹುದು.

Ashada Sale 2024

ಆಭರಣಗಳ ಖರೀದಿ

ಬೆಳ್ಳಿ-ಬಂಗಾರದ ಆಭರಣಗಳನ್ನು ಮುಂಬರುವ ಶ್ರಾವಣದಲ್ಲಿ ಖರೀದಿ ಮಾಡುವ ಯೋಚನೆಯಿದ್ದಲ್ಲಿ, ಅದನ್ನು ಮುಂದೂಡದೇ ಈ ಸಮಯದಲ್ಲೆ ಜಾರಿಗೊಳಿಸಿ. ಹೌದು, ಕೆಲವು ಅಂಗಡಿಗಳಲ್ಲಿ ಆಷಾಡ ಸೇಲ್‌ನಲ್ಲಿ ಮೇಕಿಂಗ್‌ ಚಾರ್ಜ್‌, ವೇಸ್ಟೆಜ್‌ ಎಲ್ಲವನ್ನು ಕಡಿತಗೊಳಿಸಲಾಗಿರುತ್ತದೆ. ಇದರಿಂದ ನಿಮಗೆ ಕೊಂಚ ಲಾಭವಾದರೂ ಆಗಬಹುದು.

Ashada Sale 2024

ಆನ್‌ಲೈನ್‌ ಸೇಲ್‌ನ ಸದುಪಯೋಗ

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಎಚ್ಚರವಹಿಸಿ. ಆನ್‌ಲೈನ್‌ ಶಾಪಿಂಗ್‌ ಮಾಡಿ. ಕಣ್ಣಿಗೆ ಬೇಕಾದ ವಸ್ತುಗಳನ್ನು ಮನೆಯಲ್ಲೆ ಕುಳಿತು ಖರೀದಿಸಬಹುದು. ಫ್ಯಾಷನ್‌ವೇರ್ಸ್‌, ಬ್ಯೂಟಿ ಪ್ರಾಡಕ್ಟ್ಸ್, ಕಿಚನ್‌ ಸಾಮಗ್ರಿಗಳಿಂದ ಹಿಡಿದು ಸಾಕಷ್ಟು ವಸ್ತುಗಳಿಗೆ ಆಷಾಡ ಸೇಲ್‌ನಲ್ಲಿ ಆಫರ್‌ಗಳ ಸುರಿಮಳೆಯನ್ನೇ ಕಾಣಬಹುದು.

Ashada Sale 2024

ಎಕ್ಸ್‌ಚೇಗ್‌ಗೆ ಅವಕಾಶವಿರುವುದಿಲ್ಲ

ಯಾವುದೇ ಒಂದು ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ತೀರಾ ಅಗತ್ಯವಾಗಿರುವಂತವಕ್ಕೆ ಮಾತ್ರ ಆದ್ಯತೆ ನೀಡಬೇಕು. ಯಾಕೆಂದರೇ, ಅವಕ್ಕೆ ಎಕ್ಸ್ಚೇಂಜ್‌ ಸೌಲಭ್ಯ ಇರುವುದಿಲ್ಲ ಎಂಬುದು ನೆನಪಿರಲಿ.

ಇದನ್ನೂ ಓದಿ: Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

ಮಾಲ್‌ಗಳಲ್ಲಿ ಶಾಪಿಂಗ್‌

ಮಾಲ್‌ಗಳಲ್ಲಿ ಲಭ್ಯವಿರುವ ಆಷಾಡ ಸೇಲ್‌ನಲ್ಲಿ, ನೀವು ನಾನಾ ಪಾಪುಲರ್‌ ಬ್ರಾಂಡ್‌ನ ಗುಣ ಮಟ್ಟದ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Fashion: ಬ್ಲ್ಯಾಕ್‌ & ವೈಟ್‌ ಪ್ರಿಂಟೆಡ್‌ ಜಂಪ್‌ಸೂಟ್‌ನಲ್ಲಿ ನಟಿ ಆರೋಹಿ ನಾರಾಯಣ್‌ ಸ್ಟೈಲಿಶ್‌ ಲುಕ್‌!

Star Fashion: ಸ್ಯಾಂಡಲ್‌ವುಡ್‌ ನಟಿ ಆರೋಹಿ ನಾರಾಯಣ್‌, ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಬ್ಲ್ಯಾಕ್‌ & ವೈಟ್‌ ಜಂಪ್‌ಸೂಟ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಈ ಡ್ರೆಸ್‌ ವಿಶೇಷತೆಯೇನು? ಇವರಂತೆಯೇ ಕಾಣಿಸಲು ಸ್ಟೈಲಿಂಗ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ಆರೋಹಿ ನಾರಾಯಣ್‌, ನಟಿ, ಫೋಟೋ ಕೃಪೆ: ಸಂದೀಪ್‌ ಹೊಲ್ಲಾ, ಹೊಲ್ಲಾ ಫೋಟೋಗ್ರಾಫಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲ್ಯಾಕ್‌ & ವೈಟ್‌ ಪ್ರಿಂಟೆಡ್‌ ಜಂಪ್‌ಸೂಟ್‌ನಲ್ಲಿ ನಟಿ ಅರೋಹಿ ನಾರಾಯಣ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರ ಗಮನ ಸೆಳೆದಿದೆ.

Star Fashion

ಅಬ್‌ಸ್ಟ್ರಾಕ್ಟ್ ಪ್ರಿಂಟೆಡ್‌ ಜಂಪ್‌ಸೂಟ್‌

ಹಾಲ್ಟರ್‌ ನೆಕ್‌ಲೈನ್‌ನ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಬ್ಲ್ಯಾಕ್‌ & ವೈಟ್‌ ಬೋ, ಜಂಪ್‌ಸೂಟ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ನಟಿ ಆರೋಹಿ ನಾರಾಯಣ್‌, ಬ್ಯಾಕ್‌ ಟು ಬ್ಯಾಕ್‌ ಸೋಷಿಯಲ್‌ ಮೀಡಿಯಾದಲ್ಲಿ , ಅಪ್‌ಲೋಡ್‌ ಮಾಡಿದ್ದು, ಇದು ಫ್ಯಾಷನ್‌ ಪ್ರಿಯ ಅಭಿಮಾನಿಗಳನ್ನು ಆಕರ್ಷಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಜಂಪ್‌ ಸೂಟ್‌ ಇವರಿಗೆ ಬಾಲಿವುಡ್‌ ಸೆಲೆಬ್ರೆಟಿ ಲುಕ್‌ ನೀಡಿದೆ.

Star Fashion

ನಟಿ ಆರೋಹಿ ನಾರಾಯಣ್‌ ಸ್ಟೈಲಿಶ್‌ ಲುಕ್‌

ಸ್ಯಾಂಡಲ್‌ವುಡ್‌ ನಟಿಯಾಗಿರುವ ಆರೋಹಿ ನಾರಾಯಣ್‌ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಮಾಡೆಲಿಂಗ್‌ ಕೂಡ ಮಾಡಿದ್ದಾರೆ. ಆಗಾಗ್ಗೆ ಸಾಕಷ್ಟು ಫ್ಯಾಷೆನಬಲ್‌ ಲುಕ್‌ ಇರುವಂತಹ ಫೋಟೋಶೂಟ್‌ಗಳಲ್ಲಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಅವರ ಪ್ರತಿಯೊಂದು ಡ್ರೆಸ್‌ಗಳಲ್ಲೂ ಫ್ಯಾಷನ್‌ ಸೆನ್ಸ್ ಎದ್ದು ಕಾಣುತ್ತದೆ. ಅವರ ಸ್ಟೈಲಿಂಗ್‌ ಕೂಡ ಎಂತಹವರನ್ನು ಆಕರ್ಷಿಸುವಂತದ್ದಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅವರು ಹೇಳುವಂತೆ, ಆರೋಹಿಯ ಫ್ಯಾಷನ್‌ ಕೊಂಚ ವಿಭಿನ್ನವಾಗಿರುವುದು ಕಂಡು ಬರುತ್ತದೆ. ಅಲ್ಲದೇ, ಅವರ ಮುಖದ ಮೇಲಿನ ಮುಗುಳ್ನಗೆ ಹಾಗೂ ನಗು ಇಡೀ ಅವರ ಲುಕ್‌ಗೆ ಸಾಥ್‌ ನೀಡುತ್ತಿದೆ ಎಂದಿದ್ದಾರೆ.

Star Fashion

ಜಂಪ್‌ಸೂಟ್‌ ವಿನ್ಯಾಸ

ಸ್ಟೈಲಿಸ್ಟ್‌ಗಳು ಹೇಳುವಂತೆ, ಜಂಪ್‌ ಸೂಟ್‌ಗಳೆಂದಾಕ್ಷಣ ಎಲ್ಲವೂ ಒಂದೇ ಬಗೆಯದ್ದಾಗಿ ಇರುವುದಿಲ್ಲ! ನೋಡಲು ವಿನ್ಯಾಸ ಒಂದೇ ತರಹದ್ದಾಗಿದ್ದರೂ ಅವುಗಳ ಪ್ರಿಂಟ್ಸ್, ನೆಕ್‌ಲೈನ್‌, ವೇಸ್ಟ್‌ಲೇನ್‌ ಹಾಗೂ ಸ್ಲೀವ್‌ಗಳಿಂದ ಅವನ್ನು ವಿಂಗಡಿಸಬಹುದು. ಅವರವರ ಆಯ್ಕೆಗೆ ತಕ್ಕಂತೆ ಅವು ಹೈಲೈಟಾಗುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

ಜಂಪ್ ಸೂಟ್‌ನಲ್ಲಿ ಆರೋಹಿಯಂತೆ ಸ್ಟೈಲಿಶ್‌ ಆಗಿ ಕಾಣಿಸಲು ಹೀಗೆ ಮಾಡಿ

  • ಟ್ರೆಂಡಿಯಾಗಿರುವ ಪ್ರಿಂಟೆಡ್‌ ಜಂಪ್‌ ಸೂಟ್‌ ಆಯ್ಕೆ ಮಾಡಿ
  • ಧರಿಸುವ ಜಂಪ್‌ಸೂಟ್‌ನ ನೆಕ್‌ಲೈನ್‌ಗೂ ಪ್ರಾಮುಖ್ಯತೆ ನೀಡಿ.
  • ವೆಸ್ಟರ್ನ್‌ ಲುಕ್‌ಗೆ ಹೊಂದುವಂತ ಮೇಕೋವರ್‌ಗೆ ಸೈ ಎನ್ನಿ.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Monsoon rain boots fashion: ಮಾನ್ಸೂನ್‌ ಆಗಮಿಸುತ್ತಿದ್ದಂತೆಯೇ ಮಕ್ಕಳ ಫುಟ್‌ವೇರ್‌ ಫ್ಯಾಷನ್‌ನಲ್ಲಿ ರೈನ್‌ ಬೂಟ್ಸ್‌ಗಳು ಸದ್ದು ಮಾಡಿವೆ. ಮಳೆಯಲ್ಲಿ ಬಿಂದಾಸ್‌ ಆಗಿ ಆಟವಾಡಲು ಅನುವು ಮಾಡಿಕೊಡುವಂತಹ ಸ್ಟೈಲಿಶ್‌ ಬೂಟ್ಸ್ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Monsoon Rain Boots Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿಡ್ಸ್ ರೈನ್‌ ಬೂಟ್ಸ್ ಇದೀಗ (Monsoon rain boots fashion) ಟ್ರೆಂಡಿಯಾಗಿವೆ. ಹೌದು, ಮಾನ್ಸೂನ್‌ ಆಗಮಿಸುತ್ತಿದ್ದಂತೆಯೇ ಮಕ್ಕಳ ಫುಟ್‌ವೇರ್‌ ಫ್ಯಾಷನ್‌ನಲ್ಲಿ ರೈನ್‌ ಬೂಟ್ಸ್‌ಗಳು ಸದ್ದು ಮಾಡತೊಡಗಿವೆ. ಬಿಂದಾಸ್‌ ಆಗಿ ಮಳೆಯಲ್ಲಿ ಚಿಣ್ಣರು ತೊಯ್ದು ಆಟವಾಡಲು, ಔಟಿಂಗ್‌ನಲ್ಲಿ ಓಡಾಡಲು ಸಾಥ್‌ ನೀಡುತ್ತಿವೆ.

Monsoon Rain Boots Fashion

ರೈನ್‌ ಬೂಟ್ಸ್ ಫ್ಯಾಷನ್‌

ಮಾನ್ಸೂನ್‌ನಲ್ಲಿ ಸ್ಟೈಲಿಶ್‌ ಆಗಿರುವ ಮಕ್ಕಳ ಫುಟ್‌ವೇರ್‌ಗಳನ್ನು ಹಾಕುವುದೇ ಪೋಷಕರಿಗೆ ಬೇಸರದ ಸಂಗತಿ. ಯಾಕೆಂದರೆ, ಮಳೆಗೆ ತೊಯ್ದ ಚಿಣ್ಣರ ರೆಗ್ಯುಲರ್‌ ಫುಟ್‌ವೇರ್‌ಗಳು ಎಷ್ಟೇ ಒಣಗಿಸಿದರೂ ಬಲುಬೇಗ ಒದ್ದೆಯಾಗುತ್ತವೆ. ಅಲ್ಲದೇ, ಇವುಗಳ ಕಲರ್‌ ಕೂಡ ಮಾಸುತ್ತವೆ. ಇನ್ನು ಡಿಸೈನ್‌ ಇರುವಂತವು ಬಲು ಬೇಗ ಕಿತ್ತು ಹೋಗುತ್ತವೆ. ಅಲ್ಲದೇ, ಹಳತರಂತೆ ಕಾಣಿಸಲಾರಂಭಿಸುತ್ತವೆ. ಹಾಗಾಗಿ ಈ ಸೀಸನ್‌ನಲ್ಲಿ ಮಳೆ ಬರುತ್ತಿದ್ದಲ್ಲಿ, ಆ ಸಂದರ್ಭಕ್ಕೆ ಹೊಂದುವಂತಹ ಫುಟ್‌ವೇರ್‌ ಅದರಲ್ಲೂ ಬೂಟ್ಸ್ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಮಕ್ಕಳ ಸ್ಟೈಲಿಸ್ಟ್ಸ್. ಇದಕ್ಕೆ ಪೂರಕ ಎಂಬಂತೆ, ಮಾನ್ಸೂನ್‌ನಲ್ಲಿ ಚಾಲ್ತಿಯಲ್ಲಿರುವ ಮೂರು ಬಗೆಯ ಕಿಡ್ಸ್ ರೈನ್‌ ಬೂಟ್‌ಗಳ ಮಾಹಿತಿ ಇಲ್ಲಿದೆ.

Monsoon Rain Boots Fashion

ಫ್ಯಾನ್ಸಿ ಕಲರ್‌ ಗಮ್‌ ಬೂಟ್ಸ್

ಮೊದಲೆಲ್ಲಾ ಗದ್ದೆ-ತೋಟದಲ್ಲಿ ಬಳಸಲಾಗುತ್ತಿದ್ದ, ಗಮ್‌ ಬೂಟ್‌ಗಳು ಇದೀಗ ಮಕ್ಕಳ ಫುಟ್‌ವೇರ್‌ ಲೋಕದಲ್ಲಿ ಹೊಸ ರೂಪ ಪಡೆದು ಬಿಡುಗಡೆಗೊಂಡಿವೆ. ಮಕ್ಕಳ ಇಷ್ಟಕ್ಕೆ ಅನುಸಾರವಾಗಿ ಅವರಿಗೆ ಪ್ರಿಯವಾಗುವಂತಹ ಎದ್ದು ಕಾಣುವಂತಹ ಫ್ಯಾನ್ಸಿ ಕಲರ್‌ಗಳಲ್ಲಿ ದೊರೆಯುತ್ತಿವೆ. ಬ್ಲ್ಯಾಕ್‌ ಬಣ್ಣ ಹೊರತುಪಡಿಸಿ, ಲೆಕ್ಕವಿಲ್ಲದಷ್ಟು ಬಗೆಯ ಶೇಡ್‌ನವು ಟ್ರೆಂಡ್‌ನಲ್ಲಿವೆ.

Monsoon Rain Boots Fashion

ಕಲರ್‌ಫುಲ್‌ ರಬ್ಬರ್‌ ರೈನ್‌ ಬೂಟ್ಸ್

ನಾನಾ ಬಗೆಯ ವಿನ್ಯಾಸ ಹಾಗೂ ಡಿಜಿಟಲ್‌ ಪ್ರಿಂಟ್‌ ಇರುವಂತಹ ರಬ್ಬರ್‌ ರೈನ್‌ ಬೂಟ್ಸ್ ಮಕ್ಕಳ ಫುಟ್‌ವೇರ್‌ ಲೋಕದಲ್ಲಿ ಲಗ್ಗೆ ಇಟ್ಟಿವೆ. ಹುಡುಗಿಯರಿಗೆ ಪಿಂಕ್‌, ರೆಡ್‌, ಯೆಲ್ಲೋ ಶೇಡ್‌ಗಳಲ್ಲಿ ಕಾಟೂರ್ನ್‌ ಚಿತ್ತಾರಗಳಲ್ಲಿ ಬಂದಿದ್ದರೇ, ಹುಡುಗರಿಗೆ ಇಷ್ಟವಾಗುವಂತಹ ಬ್ಲ್ಯೂ, ಬ್ಲ್ಯಾಕ್‌, ಗ್ರೇ ಹಾಗೂ ಮಿಕ್ಸ್ ಡಿಸೈನ್‌ಗಳಲ್ಲಿ ಕಲರ್‌ಗಳಲ್ಲಿ ಎಂಟ್ರಿ ನೀಡಿವೆ.

Monsoon Rain Boots Fashion

ಲೈಟ್‌ವೈಟ್‌ ವಾಟರ್‌ ಪ್ರೂಫ್‌ ಬೂಟ್ಸ್

ಇನ್ನು, ಪುಟ್ಟ ಕಂದಮ್ಮಗಳಿಗೆ ಪಾದಗಳಿಗೆ ಸಾಫ್ಟ್ ಎಂದೆನಿಸುವಂತಹ ಸಾಫ್ಟ್ ಫ್ಯಾಬ್ರಿಕ್‌ನ ಲೈಟ್‌ವೈಟ್‌ ಇರುವಂತಹ ವಾಟರ್‌ಪ್ರೂಫ್‌ ಬೂಟ್ಸ್‌ಗಳು ಶಾಪ್‌ಗಳಲ್ಲಿ ಲಭ್ಯ. ಕೆಲವು ಸ್ಟೈಲಿಶ್‌ ಲುಕ್‌ನಲ್ಲಿದ್ದರೇ, ಇನ್ನು ಕೆಲವು ಕಾರ್ಟೂನ್‌ ಕ್ಯಾರೆಕ್ಟರ್‌ ಅಥವಾ ಸ್ಟೋರಿ ಟೆಲ್ಲಿಂಗ್‌ ಚಿತ್ರಗಳನ್ನು ಒಳಗೊಂಡಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Balloon Denim Frock Fashion: ಹುಡುಗಿಯರ ಮಾನ್ಸೂನ್‌ ಫ್ಯಾಷನ್‌ಗೆ ಕಾಲಿಟ್ಟ ಬಲೂನ್‌ ಡೆನಿಮ್‌ ಡ್ರೆಸ್

Continue Reading

ಫ್ಯಾಷನ್

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Paris fashion week: ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪ್ಯಾರಿಸ್‌ ಹಾಟ್‌ ಕೌಚರ್‌ಫ್ಯಾಷನ್‌ ವೀಕ್‌ನಲ್ಲಿ, ಸೆಲೆಬ್ರೆಟಿಗಳ ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದವು. ಇದರೊಂದಿಗೆ ನಮ್ಮ ದೇಸಿ ಸ್ಟಾರ್‌ಗಳು ಹೇಗೆಲ್ಲಾ ಮೆರುಗು ಹೆಚ್ಚಿಸಿದರು? ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ಚಿಕ್ಕ ಚಿತ್ರಣ ನೀಡಿದ್ದಾರೆ.

VISTARANEWS.COM


on

Paris Fashion Week
ಚಿತ್ರಗಳು: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ 2024 ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ 2024 ಎಂದಿನಂತೆ (Paris fashion week) ಹೊಸ ಪ್ರಯೋಗಾತ್ಮಕ ಡಿಸೈನರ್‌ವೇರ್‌, ವೇರಬಲ್‌-ನಾನ್‌ ವೇರಬಲ್‌ ಉಡುಗೆ-ತೊಡುಗೆಗಳಿಗೆ ಸಾಕ್ಷಿಯಾಯಿತು. ದೇಶ-ವಿದೇಶದಿಂದ ಆಗಮಿಸಿದ್ದ ಸೆಲೆಬ್ರೆಟಿ ಡಿಸೈನರ್‌ಗಳು, ಬ್ರಾಂಡ್‌ ಡಿಸೈನರ್‌ಗಳು ಈ ಫ್ಯಾಷನ್‌ ವೀಕ್‌ನಲ್ಲಿ ತಮ್ಮದೇ ಆದ ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಹೌದು, ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ವಾಕ್‌ ಮಾಡಿದ ಹಾಗೂ ಕಾಣಿಸಿಕೊಂಡ ಸೆಲೆಬ್ರೆಟಿಗಳ ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಜಗತ್ತಿನಾದಾದ್ಯಂತ ಕಾತುರದಿಂದ ಕಾಯುತ್ತಿದ್ದ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದವು. ಇದಕ್ಕೆ ನಾವೇನೂ ಕಡಿಮೆ ಇಲ್ಲ ಎಂಬಂತೆ, ನಮ್ಮ ದೇಸಿ ಸ್ಟಾರ್‌ಗಳು ಭಾಗವಹಿಸಿ ಹಿರಿಮೆ ಹೆಚ್ಚಿಸಿದರು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ದೇಸಿ ಸ್ಟಾರ್‌ಗಳ ಕಲರವ

ಡಿಸೈನರ್‌ ರಾಹುಲ್‌ ಮಿಶ್ರಾ ಅವರ ಡಿಸೈನರ್‌ವೇರ್‌ನಲ್ಲಿ, ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಮೊತ್ತ ಮೊದಲ ಬಾರಿಗೆ ಪ್ಯಾರೀಸ್‌ನ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿದರೇ, ನಟಿ ರಾಧಿಕಾ ಆಪ್ಟೆ ಕೂಡ ಅವರ ಡಿಸೈನರ್‌ವೇರ್‌ನಿಂದಲೇ ಎಲ್ಲರ ಗಮನಸೆಳೆದರು. ಇನ್ನು ನಟಿ ಪ್ರೀತಿ ಜಿಂಟಾ, ಐವರಿ ಒಂಬ್ರೆ ವಿನ್ಯಾಸದ ಶೋಲ್ಡರ್‌ಲೆಸ್‌ ಬಾಡಿಕಾನ್‌ ಗೌನ್‌ ಸೇರಿದಂತೆ ನಾನಾ ಡಿಸೈನರ್‌ವೇರ್‌ಗಳಲ್ಲಿ ಫ್ಯಾಷನ್‌ ವೀಕ್‌ನ ಮುಂದಿನ ಸಾಲಿನ ಅತಿಥಿಯಾಗಿ ಆಗಮಿಸಿ, ವೀಕ್ಷಿಸಿದರು. ನಟಿ ಸೋನಂ ಕಪೂರ್‌ ಕೂಡ ಇದೇ ಕೆಲಸವನ್ನು ಮಾಡಿದರು. ಒಟ್ಟಾರೆ, ಇವರೆಲ್ಲರೂ ಟ್ರೆಂಡಿ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ದೇಸಿ ಔಟ್‌ಫಿಟ್‌ಗಳನ್ನು ಧರಿಸದಿದ್ದರೂ, ನಾವೇನು ಕಡಿಮೆ ಇಲ್ಲ ಎಂಬಂತೆ, ಇಂಟರ್‌ನ್ಯಾಷನಲ್‌ ಶೋನಲ್ಲಿ ಭಾಗವಹಿಸಿದ್ದು, ಜಾಗತೀಕ ಮಟ್ಟದಲ್ಲಿ ಮತ್ತೊಮ್ಮೆ ಭಾರತವೂ ಫ್ಯಾಷನ್‌ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.

Paris Fashion Week

500 ಅಡಿ ಉದ್ದದ ಡ್ರೆಸ್‌ ಟೇಲ್‌

ತಮ್ಮ ಆಲ್ಬಂನ ಪ್ರಮೋಷನ್‌ ಮಾಡಲು ವಿದೇಶಿ ಸ್ಟಾರ್‌ ಕೆಟಿ ಪೆರಿ ಆಯ್ಕೆ ಮಾಡಿಕೊಂಡದ್ದು ತಾನು ಧರಿಸಿದ ಮಿನಿ ವೆಲ್ವೆಟ್‌ ರೆಡ್‌ ಡ್ರೆಸ್‌. ಅದರ ಬಾಲದಂತಿರುವ ಟೇಲ್‌ ನ 500 ಅಡಿ ಉದ್ದದ ಡಿಸೈನ್‌ನಲ್ಲಿ ಹಾಡಿನ ಸಾಲುಗಳನ್ನು ಪ್ರಿಂಟ್‌ ಮಾಡಲಾಗಿತ್ತು. ಈ ಔಟ್‌ಫಿಟ್‌ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವುದರೊಂದಿಗೆ ಹೀಗೂ ಉಂಟಾ ಎಂದೆನಿತು! ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕ ಜಾನ್‌.

Paris Fashion Week

ಜಡೆ ಸೂಟ್‌ನ ಟೈ ಆದಾಗ

ಇನ್ನು, ನಟಿ ಸಲ್ಮಾ ಬ್ಲೈರ್‌ ತಾವು ಧರಿಸಿದ್ದ ಸೂಟ್‌ಗೆ ಟೈ ಧರಿಸುವ ಬದಲು ಆರ್ಟಿಫಿಶಿಯಲ್‌ ಹೇರ್‌ನ ಟೈ ಧರಿಸಿದ್ದು ಎಲ್ಲರ ಹುಬ್ಬೇರಿಸಿತು. ಒಟ್ಟಾರೆ, ಡಿಯೋರ್‌ ಬ್ರಾಂಡ್‌ನಿಂದಿಡಿದು ಶಾಪೊರೆಲಿಯಂತಹ ನಾನಾ ಹೈ ಫ್ಯಾಷನ್‌ ಬ್ರಾಂಡ್‌ಗಳು ಈ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿ, ಮುಂಬರುವ ಡಿಸೈನರ್‌ವೇರ್‌ಗಳ ಪ್ರದರ್ಶನ ಮಾಡಿದವು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ನಲ್ಲಿ ಮೊದಲ ಬಾರಿ ಹೆಜ್ಜೆ ಹಾಕಿದ ಜಾನ್ವಿ ಕಪೂರ್‌!

Continue Reading
Advertisement
Actor Darshan special appeal to the fans
ಸ್ಯಾಂಡಲ್ ವುಡ್3 mins ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

D. K. Shivakumar
ಕ್ರೀಡೆ8 mins ago

D. K. Shivakumar: ಫೈನಲ್​ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿದ ಡಿಸಿಎಂ ಶಿವಕುಮಾರ್‌

Self Harming
ಕ್ರೈಂ10 mins ago

Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್

Gold Rate Today
ವಾಣಿಜ್ಯ19 mins ago

Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ದರ?

Sonu Srinivas Gowda harassed by darshan fans
ಸ್ಯಾಂಡಲ್ ವುಡ್23 mins ago

Sonu Srinivas Gowda: ದರ್ಶನ್‌ ಬಗ್ಗೆ ಮಾತನಾಡಿಲ್ಲ ಎಂದು ಸೋನು ಶ್ರೀನಿವಾಸ್ ಗೌಡಗೆ ಕಿರುಕುಳ ಕೊಟ್ಟ ದಚ್ಚು ಫ್ಯಾನ್ಸ್‌!

Paris Olympics 2024
ಕ್ರೀಡೆ43 mins ago

Paris Olympics 2024: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಆ್ಯತ್ಲೀಟ್‌ಗಳಿಗೆ ಶುಭ ಕೋರಿದ ರಾಷ್ಟ್ರಪತಿ ಮುರ್ಮು

haveri accident tt
ಪ್ರಮುಖ ಸುದ್ದಿ1 hour ago

Haveri Accident: ಪೂಜೆ ಮಾಡಿಸಿಕೊಂಡು ಬಂದ ಹೊಸ ವಾಹನ 13 ಜನರ ಬಲಿ ಪಡೆಯಿತು!

Rohit Sharma
ಕ್ರೀಡೆ1 hour ago

Rohit Sharma: ಕೊಹ್ಲಿ, ಧೋನಿ ಬಳಿಕ ನಾಯಕನಾಗಿ ವಿಶೇಷ ದಾಖಲೆ ಬರೆದ ರೋಹಿತ್​

Payal Ghosh says she did not had physical relationship with anyone in past 9 years
ಬಾಲಿವುಡ್2 hours ago

Payal Ghosh: 9 ವರ್ಷ ಆಯ್ತು ಯಾರ ಜತೆಗೂ ಮಲಗಿಲ್ಲ, ಇರ್ಫಾನ್‌ ಪಠಾಣ್‌ನೇ ಕೊನೆ ಎಂದ ನಟಿ ಪಾಯಲ್‌ ಘೋಷ್‌ !

Delhi Rain
ದೇಶ2 hours ago

Delhi Rain: ಕುಸಿದು ಬಿದ್ದ ದಿಲ್ಲಿ ಏರ್‌ಪೋರ್ಟ್‌ ಛಾವಣಿ- ಒಬ್ಬ ಬಲಿ, 5 ಮಂದಿಗೆ ಗಂಭೀರ ಗಾಯ; ಕಾರುಗಳು ನಜ್ಜುಗುಜ್ಜು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು19 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌