Congress Guarantee Scheme: ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ - Vistara News

ರಾಜಕೀಯ

Congress Guarantee Scheme: ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ

Congress Guarantee Scheme: ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಅವುಗಳನ್ನು ಖಂಡಿತ ಮುಂದುವರಿಸಲಾಗುವುದು. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

CM Siddaramaiah on Congress Guarantee Scheme
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು (Congress Guarantee Scheme) ಬಡವರ ಕಾರ್ಯಕ್ರಮಗಳಾಗಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಗಡಿ ಶಾಸಕರಾದ ಬಾಲಕೃಷ್ಣ ಅವರ ಹೇಳಿಕೆಯನ್ನು ನಿರಾಕರಿಸಿದರು. ಕಾಂಗ್ರೆಸ್ ಲೋಕಸಭೆಯಲ್ಲಿ ಗೆಲುವು ಸಾಧಿಸದಿದ್ದರೆ, ಗ್ಯಾರಂಟಿಗಳನ್ನು ರದ್ದುಗೊಳಿಸಲಾಗುವುದು ಎಂಬ ಬಾಲಕೃಷ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಅವುಗಳನ್ನು ಖಂಡಿತ ಮುಂದುವರಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಕೇಂದ್ರ ಬಜೆಟ್ ಮಂಡನೆ ನಂತರ ಪ್ರತಿಕ್ರಿಯೆ

ಕೇಂದ್ರ ಸರ್ಕಾರ ಫೆಬ್ರವರಿ 1 ರಂದು 2024–25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡಿಸಲಿದ್ದು, ಈ ಬಗ್ಗೆ ಪ್ರತಿಕ್ರಿಯೆಯನ್ನು ನಾಳೆ ನೀಡುತ್ತೇನೆ. ರಾಜ್ಯದ ಪ್ರತಿ ಜಿಲ್ಲೆಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದ್ದು, ಅವರ ಕಾರ್ಯಚಟುವಟಿಕೆಯನ್ನು ಪರಿಶೀಲನೆ ನಡೆಸಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಈ ಅಧಿಕಾರಗಳ ಸಲಹೆ ಸೂಚನೆ, ಕಾರ್ಯವೈಖರಿಗಳ ಬಗ್ಗೆ ವಿವರ ಪಡೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಬಳಕೆ ಕಡ್ಡಾಯ ಸುಗ್ರೀವಾಜ್ಞೆ

ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್‌ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕನ್ನಡ ಬಳಕೆ ಕಡ್ಡಾಯದ ಬಗ್ಗೆ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಮಾನ್ಯ ರಾಜ್ಯಪಾಲರಿಗೆ ಕಳಿಸಲಾಗಿತ್ತು. ಆದರೆ, ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮುಂಚೆಯೇ ಅಧಿವೇಶನ ಪ್ರಾರಂಭವಾದ ಕಾರಣ ವಾಪಸ್‌ ಕಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್‌ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲ; ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋತರೆ ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ರದ್ದುಪಡಿಸಲಾಗುವುದು ಎಂಬ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ (MLA Balakrishna) ಹೇಳಿಕೆಗೆ ಈಗ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಸೇರಿದಂತೆ ಇನ್ನಿತರ ನಾಯಕರು ಕಾಂಗ್ರೆಸ್‌ ಸರ್ಕಾರದ (Congress Government) ವಿರುದ್ಧ ಹರಿಹಾಯ್ದಿದ್ದಾರೆ. ನೇರವಾಗಿ ಜನರಿಗೆ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವು ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ‌ಕಿಡಿಕಾರಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಹೇಳುವುದನ್ನು ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಇದೀಗ ಚುನಾವಣಾ ಸಮಯದಲ್ಲಿ ಆಶ್ವಾಸನೆ ನೀಡಿದ ಗ್ಯಾರಂಟಿಗಳನ್ನೂ ಈಡೇರಿಸುತ್ತಿಲ್ಲ ಎಂದು ಪ್ರಲ್ಹಾದ್ ಜೋಶಿ ‌ಆಕ್ರೋಶವನ್ನು ಹೊರಹಾಕಿದ್ದಾರೆ.

ಪ್ರಲ್ಹಾದ್‌ ಜೋಶಿ ಪೋಸ್ಟ್‌ನಲ್ಲೇನಿದೆ?

“ಲೋಕಸಭೆ ಚುನಾವಣೆಯಲ್ಲಿ ಸೋತರೆ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸುವ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವು ಜನರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ.

2023ರ ವಿಧಾನಸಭಾ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿ ಮತದಾರರನ್ನು ಸೆಳೆದಿದ್ದ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ದರೆ ಗ್ಯಾರಂಟಿಗಳನ್ನು ರದ್ದುಪಡಿಸುವ ಬೆದರಿಕೆವೊಡ್ಡಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ನೋಡುತ್ತಿದೆ.

ಕರ್ನಾಟಕದಲ್ಲಿ ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಇದೀಗ ಸೋಲಿನ ಭಯ ಶುರುವಾಗಿದೆ. ಹಾಗಾಗಿ ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಶಾಸಕರು ಗ್ಯಾರಂಟಿಗಳನ್ನು ರದ್ದುಪಡಿಸುವ ಮಾತನಾಡುತ್ತಿದ್ದಾರೆ.

ಆಶ್ವಾಸನೆ ನೀಡಿದಂತೆ ಇನ್ನೂ ಸರಿಯಾಗಿ ಗ್ಯಾರಂಟಿಗಳನ್ನು ಎಲ್ಲರಿಗೂ ಪೂರೈಸಿಯೇ ಇಲ್ಲ. ಅದಾಗಲೇ ಮತದಾರರ ಮೇಲೆ ಗ್ಯಾರಂಟಿ ರದ್ದುಪಡಿಸುವ ಹೊಸ ಬೆದರಿಕೆ ತಂತ್ರ ಹೇರುತ್ತಿದೆ. ಜನರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡದೇ ಇದ್ದರೆ ಎಲ್ಲ ಗ್ಯಾರಂಟಿ ಭಾಗ್ಯಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೊಂಡಿರುವುದನ್ನ ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲದಂತಾಗಿದೆ.

ಇದನ್ನೂ ಓದಿ: Guarantee Scheme: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ. ಕೊಡಲೂ ಸರ್ಕಾರದಲ್ಲಿ ಹಣವಿಲ್ಲ?

ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಇದೀಗ ತನ್ನ ಚುನಾವಣಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿಲ್ಲ. ಖಂಡಿತವಾಗಿ ಮುಂದಿನ ಚುನಾವಣೆಯಲ್ಲಿ ಜನತೆ ಕೈಗೆ “ಕೈ” ಕೊಡಲಿದ್ದಾರೆ” ಎಂದು ಸಚಿವ ಪ್ರಲ್ಹಾದ್‌ ಜೋಶಿ ಖಂಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comments

 1. Sajjan

  31 January 2024, 4:25 PM at 4:25 pm

  So many eligible Families don’t have APL/BPL ration card,and they don’t get even basics like Ration/ Health card.
  So,please allow them to get Ration cards as early as possible,
  But congress people saying like any thing about Guarantee schemes.
  “”Hucchar market alli undavane Jana””

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

Karnataka Job Reservation : ಮೀಸಲಾತಿ ಕುರಿತು ಸರ್ಕಾರ ತನ್ನ ಪ್ರಕಟಣೆ ಹೊರಡಿಸಿದೆ. ಬಳಿಕ ಅದಕ್ಕೆ ತಡೆದಿದೆ. ಕರ್ನಾಟಕದಿಂದ ಖಾಸಗಿ ವಲಯದಲ್ಲಿ ಸಿ ಮತ್ತು ಡಿ ವಲಯದಿಂದ ಉದ್ಯೋಗ ಮೀಸಲಿಡಬೇಕು ಎಂಬುದರ ಕುರಿತು ಸಿಎಂ ತಮ್ಮ ನಿಲುವು ಪ್ರಕಟಿಸಬೇಕು. ನಿಮ್ಮ ಸರ್ಕಾರದ ಮೇಲೆ ಹಗರಣ ಸುತ್ತಿಕೊಂಡಿದೆ. ಅದಕ್ಕಾಗಿ ಈ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದಿರು

VISTARANEWS.COM


on

CT Ravi
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ನೀಡುವ ವಿಚಾರವನ್ನು (Karnataka Job Reservation) ಮುನ್ನೆಲೆಗೆ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ವಿಧಾನಸೌಧದ ಪಡಸಾಲೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರದ ಮೇಲೆ ಹಗರಣಗಳು ಸುತ್ತಿಕೊಂಡಿವೆ. ಅವುಗಳನ್ನು ವಿಷಯಾಂತರ ಮಾಡುವುದಕ್ಕೆ ಮೀಸಲಾತಿ ವಿಚಾರವನ್ನು ಎತ್ತಿದ್ದಾರೆ ಎಂದು ಹೇಳಿದ್ದಾರೆ.

ಮೀಸಲಾತಿ ಕುರಿತು ಸರ್ಕಾರ ತನ್ನ ಪ್ರಕಟಣೆ ಹೊರಡಿಸಿದೆ. ಬಳಿಕ ಅದಕ್ಕೆ ತಡೆದಿದೆ. ಕರ್ನಾಟಕದಿಂದ ಖಾಸಗಿ ವಲಯದಲ್ಲಿ ಸಿ ಮತ್ತು ಡಿ ವಲಯದಿಂದ ಉದ್ಯೋಗ ಮೀಸಲಿಡಬೇಕು ಎಂಬುದರ ಕುರಿತು ಸಿಎಂ ತಮ್ಮ ನಿಲುವು ಪ್ರಕಟಿಸಬೇಕು. ನಿಮ್ಮ ಸರ್ಕಾರದ ಮೇಲೆ ಹಗರಣ ಸುತ್ತಿಕೊಂಡಿದೆ. ಅದಕ್ಕಾಗಿ ಈ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದಿರು

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಣ ವರ್ಗಾವಣೆ ಮಾಡಿ ವಂಚನೆ ಮಾಡಿರೋದು ಸಿಎಂ ಗಮನಕ್ಕೂ ಬಂದಿದೆ. ಇದರಿಂದಾ ನಿಮ್ಮ ಸರ್ಕಾರದ ಘನತೆಗೆ ಚ್ಯುತಿ ತಂದಿದೆ. ಹೀಗಾಗಿ ಜನರನ್ನು ಭಾವನಾತ್ಮಕವಾಗಿ ಬದಲಾಯಿಸಲು ಮೀಸಲಾತಿ ವಿಚಾರವನ್ನು ಎತ್ತಲಾಗಿದೆ ಎಂದು ಸಿಟಿ ರವಿ ಆರೋಪಿಸಿದರು.

ಇದನ್ನೂ ಓದಿ: Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು

ಉದ್ದಿಮೆಯಲ್ಲಿ ಎಷ್ಟು ಉದ್ಯೋಗ ಇದೆ. ಕನ್ನಡಿಗರಿಗೆ ಎಷ್ಟು, ಹೊರಗಿನವರಿಗೆ ಎಷ್ಟು ಅಂತ‌ಮಾಹಿತಿ ಪಡೆಯಬೇಕಿತ್ತು. ಯಾವ ಉದ್ಯೋಗಕ್ಕೆ ಕೌಶಲದ ಅವಶ್ಯಕತೆ ಇದೆ ಅಂತ ಮಾಹಿತಿ ಪಡೆಯಬೇಕಿತ್ತು. ಹಾಗಾದರೆ ಮಾತ್ರ ಅದು ಸರ್ಕಾರದ ಬದ್ಧತೆಯಾಗಲಿದೆ.

ಮೀಸಲಾತಿ ವಿಷಯದ ಕುರಿತು ಚರ್ಚಿಸಲು ಎಷ್ಟು ಸಭೆ ನಡೆಸಲಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗೆ ಬದ್ಧತೆ ಇದೆಯೇ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಬದಲಾಗಿದ್ದಾರೆ. ಈ ಹಗರಣಗಳೇ ಅದಕ್ಕೆ ಸ್ಪಷ್ಟ ಉದಾಹರಣೆ. ಚಾಮುಂಡೇಶ್ವರಿ ಉಪಚುನಾವಣೆ ಬಂದಾಗ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಆಗ ನಾನು ಹೋರಾಟಗಾರರು ಸೋಲಬಾರದು ಎಂದು ಹೇಳಿದ್ದೆ. ಅಹಿಂದ ನಾಯಕರು ಗೆಲ್ಲಬೇಕು ಎಂದಿದ್ದೆ ಎಂದು ಸಿಟಿ ರವಿ ಹೇಳಿದ್ದಾರೆ.

ನಿಗಮದ ಹಣ, ಎಸ್​ಸಿಪಿ ಮತ್ತು ಟಿಎಸ್​​ಪಿ ಹಣ ದುರ್ಬಳಕೆಗೆ ನಿಮ್ಮ ಸರ್ಕಾರವೇ ಹೊಣೆಯಾಗಿದೆ. ಅದರ ಲೂಟಿಯಲ್ಲಿ ಸಿಎಂ ಸಚಿವ ಸಂಪುಟ ಸಹೋದ್ಯೋಗಿ ಭಾಗಿಯಾಗಿದ್ದಾರೆ. ಹಿಂದಿನ ನಾಯಕ ಸಿದ್ದರಾಮಯ್ಯ ಇಂಥದ್ದನ್ನು ಸಹಿಸುತ್ತಿರಲಿಲ್ಲ. ಇದು ಕೇವಲ‌ ಆಷಾಢ ಭೂತಿತನ ಅಷ್ಟೆ ಎಂದು ಸಿಟಿ ರವಿ ಹೇಳಿದ್ದಾರೆ.

ಎಸ್​ಸಿಪಿ- ಟಿಎಸ್​​ಪಿ ಹಣ ದುರ್ಬಳಕೆ ಆಗಿದೆ. ಆ ಹಣ ಅವರಿಗೆ ಮಾತ್ರ ಬಳಕೆ‌ ಆಗಬೇಕು. ಸರ್ಕಾರದ ಗ್ಯಾರಂಟಿ ಉದ್ದೇಶಕ್ಕೆ ಅಲ್ಲ. ಹೀಗಾಗಿ ಹಣ ಬಳಕೆಯನ್ನು ಕೂಡಲೇ ನಿಲ್ಲಿಸಬೇಕು. ವಾಲ್ಮೀಕಿ ನಿಗಮ, ಮುಡಾ, ಪರಿಶಿಷ್ಟರ ಹಣದ ಬಳಕೆಯ ಹೊಣೆಯನ್ನು ಸಿಎಂ ಹೊರಬೇಕು ಎಂದು ಸಿಟಿ ರವಿ ನುಡಿದಿದ್ದಾರೆ.

ಅರ್ಕಾವತಿ ರೀಡು ಹಗರಣ ಸಿಎಂ ಮೇಲೆ ಬಂದಿತ್ತು. ರಿಯಲ್ ಎಸ್ಟೇಟ್ ಉದ್ಯಮಗಳಿಂದ ಕೋಟ್ಯಂತ ರೂಪಾಯಿ ಪಡೆದಿರೋ ಆರೋಪ ಬಂದಿತ್ತು. ವಿಚಾರಣೆಗೆ ಕೆಂಪಣ್ಣ ಆಯೋಗ ರಚನೆ ಮಾಡಿದ್ದೀರಿ. ಬಳಿಕ ದೇಸಾಯಿ ಆಯೋಗ ರಚನೆ ಮಾಡಿದ್ದೀರಿ. ಸದನದಲ್ಲಿ ಮೊದಲು ಕೆಂಪಣ್ಣ ಆಯೋಗದ ವರದಿ ತಂದು ಬಳಿಕ ಅನ್ನು ಮುಚ್ಚಿಟ್ರಿ. ಬಳಿಕ ಸಾಯಿ ಆಯೋಗ ಸಿದ್ದಪಡಿಸಿದ್ದೀರಿ. ಬಳಿಕ ತಪ್ಪನ್ನು ಮುಚ್ಚಿಟ್ಟಿರಿ ಎಂದು ರವಿ ಅವರು ಆರೋಪಿಸಿದರು.

ಲೋಕಾಯುಕ್ತ ಪವರ್ ಕಡಿಮೆ ಮಾಡಿ, ಎಸಿಬಿ ರಚನೆ ಮಾಡಿದವರು ಸಿಎಂ ಸಿದ್ದರಾಮಯ್ಯ. ಎರಡೂ ಇಲಾಖೆ ದುರ್ಬಳಕೆ ಮಾಡಿಕೊಂಡವರು ನೀವೇ. ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಿಟಿ ರವಿ ಆಗ್ರಹಿಸಿದರು.

Continue Reading

ದೇಶ

Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು

Uttar Pradesh Politics:ತನ್ನ ಭದ್ರಕೋಟೆ ಅಯೋಧ್ಯೆ ಮತ್ತು ಅಮೇಥಿಯಂತಹ ಪ್ರಮುಖ ಕ್ಷೇತ್ರಗಳನ್ನೂ ಈ ಬಾರಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಬಿಜೆಪಿಗೆ ಬಹುದೊಡ್ಡ ಮಟ್ಟದಲ್ಲಿ ಮುಜುಗರವನ್ನುಂಟುಮಾಡಿತ್ತು. ಹೀಗಾಗಿ ಇಂತಹ ಹೀನಾಯ ಸೋಲಿಗೆ ಪ್ರಮುಖ ಕಾರಣ ಏನೆಂಬುದರ ಬಗ್ಗೆ ಬಗ್ಗೆ ಬಿಜೆಪಿ ಅಧ್ಯಯನಕ್ಕಿಳಿದಿದೆ. ಬಿಜೆಪಿ ರಾಜ್ಯ ಘಟಕದ ಅವಲೋಕನದ ಪ್ರಕಾರ ಈ ಬಾರಿಯ ಸೋಲಿಗೆ ಆರು ಪ್ರಮುಖ ಕಾರಣಗಳು ಕಂಡು ಬಂದಿವೆ.

VISTARANEWS.COM


on

Uttar pradesh Politics
Koo

ಲಕ್ನೋ: ಉತ್ತರಪ್ರದೇಶ(Uttar Pradesh Politics)ದಲ್ಲಿ ಈ ಬಾರಿ ಚುನಾವಣೆ(Lok Sabha Election 2024)ಯಲ್ಲಿ ಬಿಜೆಪಿಯ ಸಂಖ್ಯಾಬಲ 33ಕ್ಕೆ ಕುಸಿದಿರುವುದು ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಇದರ ಬೆನ್ನಲ್ಲೇ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಉತ್ತರ ಪ್ರದೇಶದ ಬಿಜೆಪಿ ಘಟಕವು ತನ್ನ ಲೋಕಸಭಾ ಚುನಾವಣೆಯ ಸೋಲಿಗೆ ಕಾರಣಗಳನ್ನು ವಿವರಿಸುವ ವಿಸ್ತೃತ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದೆ. ಪೇಪರ್ ಸೋರಿಕೆ, ಸರ್ಕಾರಿ ಉದ್ಯೋಗಗಳಿಗೆ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವುದು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಅತೃಪ್ತಿ ಮತ್ತು ಅಸಮಾಧಾನಕ್ಕೆ ಕಾರಣವಾದ ರಾಜ್ಯ ಆಡಳಿತದ ಆಪಾದಿತ ಉನ್ನತ ಕೈಗಾರಿಕೆಗಳಂತಹ ಕಳವಳಗಳನ್ನು ವರದಿಯು ಉಲ್ಲೇಖಿಸಿದೆ.

ತನ್ನ ಭದ್ರಕೋಟೆ ಅಯೋಧ್ಯೆ ಮತ್ತು ಅಮೇಥಿಯಂತಹ ಪ್ರಮುಖ ಕ್ಷೇತ್ರಗಳನ್ನೂ ಈ ಬಾರಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಬಿಜೆಪಿಗೆ ಬಹುದೊಡ್ಡ ಮಟ್ಟದಲ್ಲಿ ಮುಜುಗರವನ್ನುಂಟುಮಾಡಿತ್ತು. ಹೀಗಾಗಿ ಇಂತಹ ಹೀನಾಯ ಸೋಲಿಗೆ ಪ್ರಮುಖ ಕಾರಣ ಏನೆಂಬುದರ ಬಗ್ಗೆ ಬಗ್ಗೆ ಬಿಜೆಪಿ ಅಧ್ಯಯನಕ್ಕಿಳಿದಿದೆ. ಬಿಜೆಪಿ ರಾಜ್ಯ ಘಟಕದ ಅವಲೋಕನದ ಪ್ರಕಾರ ಈ ಬಾರಿಯ ಸೋಲಿಗೆ ಆರು ಪ್ರಮುಖ ಕಾರಣಗಳು ಕಂಡು ಬಂದಿವೆ.

ಕಾರ್ಯಕರ್ತರ ಕಡೆಗಣನೆ

ಯೋಗಿ ಅಧಿಕಾರಕ್ಕೆ ಬಂದ ನಂತರ ಶಾಸಕರಿಗೆ ಅಧಿಕಾರವಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಅಧಿಕಾರಿಗಳು ಅಧಿಕಾರ ಮಾಡುತ್ತಾರೆ ಎಂಬ ನೀತಿ ಬಲವಾಗಿ ಜಾರಿಗೆ ಬಂದಿತ್ತು. ಈ ನೀತಿಯ ಬಗ್ಗೆ ಕಾರ್ಯಕರ್ತರಿಗೆ ಬಹಳ ಅಸಮಾಧಾನ ಇತ್ತು. ವರ್ಷಗಳಿಂದ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಒಟ್ಟಾಗಿ ಕೆಲಸ ಮಾಡಿದ್ದು, ಸಮಾಜದಲ್ಲಿ ಬಲವಾದ ಸಂಪರ್ಕವನ್ನು ನಿರ್ಮಿಸಿವೆ. ಪಕ್ಷದ ಕಾರ್ಯಕರ್ತರನ್ನು ಅಧಿಕಾರಿಗಳು ಬದಲಿಸಲು ಸಾಧ್ಯವಿಲ್ಲ,” ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು. ಆರ್‌ಎಸ್‌ಎಸ್ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಮತ್ತು ತಳಮಟ್ಟದಿಂದ ಪಕ್ಷದ ನೆಲೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರವಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ 15 ಪೇಪರ್ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಪ್ರತಿಪಕ್ಷಗಳು, ಬಿಜೆಪಿಯು ಮೀಸಲಾತಿಯನ್ನು ಸ್ಥಗಿತಗೊಳಿಸಲು ಬಯಸಿದೆ. ಸರ್ಕಾರಿ ಉದ್ಯೋಗಗಳನ್ನು ಗುತ್ತಿಗೆ ಕಾರ್ಮಿಕರಿಂದ ತುಂಬಿಸಲಾಗುತ್ತಿದೆ ಎಂದು ಜನರ ತಲೆಗೆ ತುಂಬಲು ಶುರು ಮಾಡಿದ್ದವು. ಇದು ಚುನಾವಣೆ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು.

ಬಿಎಸ್‌ಪಿ ಕಡೆಗೆ ಮತದಾರರ ಒಲವು

ಮಾಯಾವತಿಯವರ ಬಿಎಸ್‌ಪಿ ಪಕ್ಷ ದಲಿತ, ಕಿರ್ಮಿ ಮತ್ತು ಮೌರ್ಯ ಸಮುದಾಯಗಳ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದ ಹಿನ್ನೆಲೆ ಮತ ವಿಭಜನೆ ಕೂಡ ಬಿಜೆಪಿ ಸೋಲಿಗೆ ಕಾರಣವಾಯಿತು. ಇದು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ಗೆ ಲಾಭವಾಗಿ ಪರಿಣಮಿಸಿತು.

ಮೇಲ್ವರ್ಗ v/s ಕೆಳವರ್ಗಗಳ ಸಂಘರ್ಷ

ರಾಜ್ಯ ಘಟಕವು ತನ್ನ ಭಿನ್ನಾಭಿಪ್ರಾಯಗಳನ್ನು ತ್ವರಿತವಾಗಿ ಪರಿಹರಿಸಬೇಕು ಮತ್ತು ಮೇಲ್ಜಾತಿ ಹಾಗೂ ಹಿಂದುಳಿದ ಜಾತಿಗಳು ನಡುವಿನ ಭಿನ್ನಾಭಿಪ್ರಾಯ ಸಂಘರ್ಷವಾಗಿ ಬೆಳೆಯುವುನ್ನು ತಡೆಯಲು ತಳಮಟ್ಟದ ಕೆಲಸವನ್ನು ಪ್ರಾರಂಭಿಸಬೇಕು ಎಂದು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಯಕರು ಯುಪಿಯ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಕಾರ್ಯಕರ್ತರಲ್ಲಿ ನೈತಿಕತೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಬೇಕು ಎಂದು ಪಕ್ಷದ ಇನ್ನೊಬ್ಬ ಮುಖಂಡ ಹೇಳಿದ್ದಾರೆ.

ಬಿಜೆಪಿ ಕೈ ಹಿಡಿಯದ ಹಿಂದುಳಿದ ವರ್ಗ

ಕುರ್ಮಿ ​​ಮತ್ತು ಮೌರ್ಯ ಜಾತಿಗಳು ಈ ಬಾರಿ ಬಿಜೆಪಿಯಿಂದ ದೂರ ಸರಿದಿದ್ದು, ದಲಿತ ಮತಗಳಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ ಪಕ್ಷವು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ಸೂಚಿಸುತ್ತದೆ. ಒಟ್ಟಾರೆ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಮೂಲಕ ಯುಪಿಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಸುಧಾರಿಸಿಕೊಂಡರೆ, ಬಿಎಸ್‌ಪಿಯ ಮತ ಹಂಚಿಕೆಯು ಶೇಕಡಾ 10 ರಷ್ಟು ಕಡಿಮೆಯಾಗಿದೆ.

ಪ್ರತಿಪಕ್ಷಗಳ ಅಪಪ್ರಚಾರ

ಆರನೇ ಮತ್ತು ಏಳನೇ ಹಂತಗಳ ಚುನಾವಣೆ ಹೊತ್ತಿಗೆ, ಕಾರ್ಯಕರ್ತರಲ್ಲಿ ಆಯಾಸ ಪ್ರಾರಂಭವಾಯಿತು. ಮೀಸಲಾತಿ ನೀತಿಗಳ ವಿರುದ್ಧ ಪಕ್ಷದ ನಾಯಕರ ಹೇಳಿಕೆಗಳು ಪಕ್ಷದ ಕ್ಷೀಣಿಸುತ್ತಿರುವ ಬೆಂಬಲವನ್ನು ಇನ್ನಷ್ಟು ಉಲ್ಬಣಗೊಳಿಸಿತು. “ಹಳೆಯ ಪಿಂಚಣಿ ಯೋಜನೆಯಂತಹ ಸಮಸ್ಯೆಗಳು ಹಿರಿಯ ನಾಗರಿಕರ ಮೇಲೆ ಪರಿಣಾಮ ಬೀರಿದರೆ, ಅಗ್ನಿವೀರ್ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳು ಯುವಕರನ್ನು ಬಿಜೆಪಿಯಿಂದ ಹಿಂದೆ ಸರಿಯುವಂತೆ ಮಾಡಿತ್ತು. ಇದೇ ವಿಚಾರವನ್ನು ಇಟ್ಟುಕೊಂಡು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸಿವೆ. ಇದಕ್ಕೆ ಸ್ಪಷ್ಟನೆ ಕೊಡಲು ಬಿಜೆಪಿ ನಾಯಕರು ಹೋಗಲೇ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

Continue Reading

ಪ್ರಮುಖ ಸುದ್ದಿ

Karnataka Assembly Live: ವಾಲ್ಮೀಕಿ ಹಗರಣದ ಆರೋಪಗಳಿಗೆ ಇಂದು ಸಿಎಂ ಉತ್ತರ; ವಿಧಾನಮಂಡಲ ಕಲಾಪ ಲೈವ್‌ ಇಲ್ಲಿದೆ

Karnataka Assembly Live: ವಾಲ್ಮೀಕಿ ನಿಗಮ ಹಗರಣ (Valmiki Corporation Live) ಕುರಿತು ಪ್ರತಿಪಕ್ಷದ ಆರೋಪಗಳಿಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡಲಿದ್ದಾರೆ. ಇದರ ಜೊತೆಗೆ, ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಮೀಸಲು ವಿಧೇಯಕದ (Karnataka jobs reservation) ಕುರಿತು ಸರ್ಕಾರ ನಿಲುವು ಹಾಗೂ ನಡೆ ಚರ್ಚೆಗೆ ಗ್ರಾಸವಾಗಲಿದೆ.

VISTARANEWS.COM


on

vidhana sabha karnataka assembly live
Koo

ಬೆಂಗಳೂರು: ಸೋಮವಾರ ಆರಂಭವಾಗಿದ್ದ ವಿಧಾನಮಂಡಲ ಅಧಿವೇಶನ (Karnataka Assembly Live) ಇಂದು ಮತ್ತೆ ಮುಂದುವರಿಯಲಿದೆ. ಬುಧವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಕಲಾಪಗಳಿಗೆ (Assembly Session) ವಿರಾಮ ನೀಡಲಾಗಿತ್ತು. ಇಂದು ಬೆಳಗ್ಗೆ ಅಧಿವೇಶನ ಮತ್ತೆ ಆರಂಭವಾಗಲಿದ್ದು, ವಾಲ್ಮೀಕಿ ನಿಗಮ ಹಗರಣ (Valmiki Corporation Live) ಕುರಿತು ಪ್ರತಿಪಕ್ಷದ ಆರೋಪಗಳಿಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡಲಿದ್ದಾರೆ. ಇದರ ಜೊತೆಗೆ, ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಮೀಸಲು ವಿಧೇಯಕದ (Karnataka jobs reservation) ಕುರಿತು ಸರ್ಕಾರ ನಿಲುವು ಹಾಗೂ ನಡೆ ಚರ್ಚೆಗೆ ಗ್ರಾಸವಾಗಲಿದೆ.

ಸೋಮವಾರ ಸಂವಿಧಾನದ ಪೀಠಿಕೆ ಓದು ಹಾಗೂ ಈ ನಡುವೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯೊಂದಿಗೆ ಕಲಾಪ ಆರಂಭವಾಗಿತ್ತು. ನಂತರ ಪ್ರತಿಪಕ್ಷಗಳ ಬೇಡಿಕೆಯಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಕುರಿತು ಚರ್ಚೆಗೆ ಸ್ಪೀಕರ್‌ ಅವಕಾಶ ನೀಡಿದ್ದರು. ಇದರ ನಂತರ ಸೋಮವಾರ ಹಾಗೂ ಮಂಗಳವಾರ ವಿಧಾನಸಭೆ ಕಲಾಪ ಗದ್ದಲದ ಗೂಡಾಗಿತ್ತು. ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ಈ ಬಗ್ಗೆ ಸುದೀರ್ಘವಾಗಿ ಮಾತನಾಡಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಜೋರಾದ ಮಾತಿನ ಚಕಮಕಿ ನಡೆದಿತ್ತು. ಸ್ಪೀಕರ್‌ ಹಲವು ಬಾರಿ ಕಲಾಪವನ್ನು ಮುಂದೂಡಿದ್ದರು. ʼಮುಖ್ಯಮಂತ್ರಿಗಳು ನೈತಿಕ ಹೊನೆ ಹೊತ್ತು ರಾಜೀನಾಮೆ ನೀಡಬೇಕುʼ ಎಂದು ಅಶೋಕ್‌ ಆಗ್ರಹಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್‌, ಎಂಬಿ ಪಾಟೀಲ್‌ ಮುಂತಾದವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದರು. ಅಶೋಕ್‌ ಅವರ ಮಾತು ಹಾಗೂ ಚಕಮಕಿಯ ಬಳಿಕ ಕಲಾಪದ ಅವಧಿ ಮುಗಿದದ್ದರಿಂದ ಸಿಎಂ ಇಂದು ಸದನದಲ್ಲಿ ಉತ್ತರ ನೀಡಬೇಕಾಗಿದೆ.

ವಿರೋಧ ಪಕ್ಷದವರ ಎಂಟತ್ತು ಗಂಟೆಗಳ ಆರೋಪ, ದಾಳಿ, ಆಕ್ರೋಶದ ನುಡಿಗಳನ್ನು ಬಹುತೇಕ ಎಲ್ಲವನ್ನೂ ಅಡ್ಡಿ ಪಡಿಸದೆ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಆಲಿಸಿದರು. ವಾಲ್ಮೀಕಿ ನಿಗಮ ಪ್ರಕರಣದ ವಿರೋಧ ಪಕ್ಷದವರ ಎಲ್ಲಾ ಆರೋಪ ಮತ್ತು ಮಾತುಗಳಿಗೆ ಮುಖ್ಯಮಂತ್ರಿಗಳು ಗುರುವಾರ ಉತ್ತರ ನೀಡಲಿದ್ದಾರೆ.

ಈ ನಡುವೆ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲು ಒಸಗಿಸುವ ಬಗ್ಗೆ ವಿಧೇಯಕ ರೂಪಿಸಲು ಸರ್ಕಾರ ಮುಂದಾಗಿತ್ತು. ಶೇ. 100 ಉದ್ಯೋಗ ಮೀಸಲು ಇಡಬೇಕು ಎಂದು ಕ್ಯಾಬಿನೆಟ್‌ನಲ್ಲಿ ನಿರ್ಣಯವಾಗಿದೆ ಎಂದು ಸಿಎಂ ಟ್ವೀಟ್‌ ಮಾಡಿದ್ದರು. ಇದಕ್ಕೆ ಖಾಸಗಿ ಉದ್ಯಮಿಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ನಂತರ ಟ್ವೀಟ್‌ ಡಿಲೀಟ್‌ ಮಾಡಿದ್ದ ಸಿಎಂ, ಬಳಿಕ ʼಶೇ.75 ಉದ್ಯೋಗ ಮೀಸಲುʼ ಎಂದಿದ್ದರು. ಇದಕ್ಕೂ ವಿರೋಧ ಬಂದಿತ್ತು. ಇದಾದ ಬಳಿಕ ʼಸದ್ಯ ಈ ವಿಧೇಯಕವನ್ನು ತಡೆಹಿಡಿಯಲಾಗಿದೆʼ ಎಂದು ಸರಕಾರ ಹೇಳಿದೆ.

ಸರಕಾರದ ಈ ಯುಟರ್ನ್‌ ಅನ್ನು ವಿಪಕ್ಷ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ಬಗ್ಗೆ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ʼವಾಲ್ಮೀಕಿ ಹಗರಣ ವಿಚಾರದಲ್ಲಿ ಸರಕಾರಕ್ಕೆ ಆಗುತ್ತಿರುವ ಮುಖಭಂಗ ತಪ್ಪಿಸಲು, ಗಮನವನ್ನು ಬೇರೆಡೆಗೆ ಸೆಳೆಯಲು ಇದನ್ನು ಮಾಡಲಾಗಿದೆ. ಆದರೆ ಸಿಎಂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲʼ ಎಂದು ವಿಪಕ್ಷ ನಾಯಕ ಅಶೋಕ್‌ ಗುಡುಗಿದ್ದಾರೆ. ಹೀಗಾಗಿ, ಕಲಾಪದಲ್ಲಿ ಈ ವಿಚಾರವನ್ನು ಬಿಜೆಪಿ ಎತ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆಯಾ ಎಂಬ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: Karnataka Assembly Live: ವಾಲ್ಮೀಕಿ ಹಗರಣ ಚರ್ಚೆಯ ನಡುವೆ ಗದ್ದಲ ಸೃಷ್ಟಿಸಿದ ರೇವಣ್ಣ ಪ್ರಕರಣ; ರೊಚ್ಚಿಗೆದ್ದ ರೇವಣ್ಣ

Continue Reading

ರಾಜಕೀಯ

Narendra Modi: ಇಂದು ಮೋದಿ ನೇತೃತ್ವದಲ್ಲಿ ಬಿಜೆಪಿ ಸಭೆ: ಮಹತ್ವದ ತೀರ್ಮಾನ ಸಾಧ್ಯತೆ; ಏನೆಲ್ಲ ಚರ್ಚೆಯಾಗಲಿದೆ?

Narendra Modi: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಆಘಾತದಿಂದ ಬಿಜೆಪಿ ಇನ್ನೂ ಹೊರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಮತ್ತೆ ಮುಂದಾಗಿದೆ. ಅದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆ (Lok Sabha Election)ಯ ಫಲಿತಾಂಶದ ಆಘಾತದಿಂದ ಬಿಜೆಪಿ (BJP) ಇನ್ನೂ ಹೊರ ಬಂದಿಲ್ಲ. ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೂ ಬಿಜೆಪಿಗೆ ಬಹುಮತ ಲಭಿಸದೇ ಇರುವುದು ಪಕ್ಷದ ಒಳಗೆ ತಳಮಳ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಮತ್ತೆ ಮುಂದಾಗಿದೆ. ಅದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಜುಲೈ 18) ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಮೋದಿ ಸಂಜೆ 6 ಗಂಟೆಗೆ ಪಕ್ಷದ ಪ್ರಧಾನ ಕಚೇರಿಗೆ ತಲುಪಲಿದ್ದು, ಅಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳ ಕುರಿತು ಅವರು ಚರ್ಚೆ ನಡೆಸಲಿದ್ದಾರೆ. 

ಉತ್ತರ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು?

2027ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಲೇ ಪಕ್ಷ ಸಂಘಟನೆಗೆ ಬಿಜೆಪಿ ಮುಂದಾಗಿದೆ. ಅದರ ಜತೆಗೆ ಪಕ್ಷಕ್ಕೆ ತಕ್ಷಣದ ಸವಾಲು ಎಂಬಂತೆ ರಾಜ್ಯದ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಾಗಿದೆ. ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆಯಲ್ಲಿ ಪಕ್ಷ ತನ್ನ ಸಾಮರ್ಥ್ಯ ತೋರಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಚುನಾವಣಾ ಆಯೋಗ ಇನ್ನೂ ದಿನಾಂಕ ಘೋಷಿಸಿಲ್ಲ. ಅದಾಗ್ಯೂ ಬಿಜೆಪಿ ತಲೆಕೆಡಿಸಿಕೊಂಡಿದೆ. ಈ ಮಧ್ಯೆ ಈ ಉಪಚುನಾವಣೆಯಲ್ಲೂ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಗಳೂ ಹರಡಿದೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ 37 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 33 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ. ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ರಾಜ್ಯದಲ್ಲಿ ಆರು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.

ಯೋಗಿ ಆದಿತ್ಯನಾಥ್‌ ತಲೆದಂಡ?

ಇದರ ಜತೆಗೆ ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಿಎಂ ಯೋಗಿ ಆದಿತ್ಯಾನಾಥ್‌ ಮತ್ತು ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇಬ್ಬರ ನಡುವಿನ ಭಾರಿ ಭಿನ್ನಮತದ ಬೆನ್ನಲ್ಲೇ ಕೇಶವ್ ಪ್ರಸಾದ್ ಮೌರ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಅದೂ ಅಲ್ಲದೇ ಚುನಾವಣೆಯಲ್ಲಿನ ಹಿನ್ನಡೆ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ತಲೆದಂಡವಾಗಲಿದೆ ಎಂಬ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದಿನ ಸಭೆ ಕುತೂಹಲ ಮೂಡಿಸಿದೆ.

ಜುಲೈ 14ರಂದು, ಉತ್ತರ ಪ್ರದೇಶ ಬಿಜೆಪಿ ಘಟಕವು ತನ್ನ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಲಖನೌ ಡಾ.ರಾಮ್ ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ನಡೆಸಿತ್ತು. ಈ ಸಭೆಯಲ್ಲಿ 2024ರ ಲೋಕಸಭೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಚರ್ಚಿಸಲಾಗಿತ್ತು. ಆ ಸಭೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಬ್ರಜೇಶ್ ಪಾಠಕ್ ಮತ್ತು ಕೆಪಿ ಮೌರ್ಯ ಮತ್ತು ಇತರ ಸಚಿವರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

ವಿಶೇಷವೆಂದರೆ ಜುಲೈ ಅಂತ್ಯದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿರಲಿದ್ದಾರೆ. ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಸರ್ಕಾರ ಮತ್ತು ಸಂಘಟನೆಯ ನಡುವಿನ ಸಮನ್ವಯತೆ ಕುರಿತು ಚರ್ಚೆ ನಡೆಯಲಿದೆ.

Continue Reading
Advertisement
Rain News;
ಪ್ರಮುಖ ಸುದ್ದಿ11 mins ago

Rain News : ಪ್ರಯಾಣಿಕರೇ ಗಮನಿಸಿ; ಗುಡ್ಡ ಕುಸಿತದ ಭೀತಿ, ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​​

Sexual Assault case
ಕ್ರೈಂ24 mins ago

Sexual Assualt Case: ಅಶ್ಲೀಲ ವಿಡಿಯೊ ವೀಕ್ಷಿಸಿ ಉದ್ರೇಕಗೊಂಡ ಮೂವರು ಶಾಲಾ ಬಾಲಕರಿಂದ ಬಾಲಕಿಯ ಅತ್ಯಾಚಾರ, ಕೊಲೆ

International Cricket Council
ಕ್ರಿಕೆಟ್39 mins ago

International Cricket Council : ಟಿ20 ವಿಶ್ವಕಪ್ ಆಯೋಜನೆಯಲ್ಲಿ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟ

Team India Srilanka Tour
ಪ್ರಮುಖ ಸುದ್ದಿ48 mins ago

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Viral Video
Latest1 hour ago

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Train Accident
ದೇಶ1 hour ago

Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Crime News
ಪ್ರಮುಖ ಸುದ್ದಿ1 hour ago

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Lady Police Officer
Latest2 hours ago

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

kiccha sudeep‌ Fans
ಸಿನಿಮಾ2 hours ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ2 hours ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌