ಬಿಜೆಪಿಯ ಹಲವು ನಾಯಕರು ಕುಡಿದು ಮಾತನಾಡ್ತಾರೆ: ಪ್ರತ್ಯೇಕ ರಾಜ್ಯ ಹೇಳಿಕೆಗೆ ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಕಿಡಿ - Vistara News

ರಾಜಕೀಯ

ಬಿಜೆಪಿಯ ಹಲವು ನಾಯಕರು ಕುಡಿದು ಮಾತನಾಡ್ತಾರೆ: ಪ್ರತ್ಯೇಕ ರಾಜ್ಯ ಹೇಳಿಕೆಗೆ ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಕಿಡಿ

ಬಿಜೆಪಿ ನಾಯಕರು ಕೇವಲ ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಅಸ್ತಿತ್ವಕ್ಕಾಗಿ ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆಗಳನ್ನು ನೀಡುತ್ತಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಹೇಳಿದ್ದಾರೆ.

VISTARANEWS.COM


on

ರಮೇಶ ಬಾಬು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾವು ಸಿ.ಟಿ.ರವಿ ಅವರೇ ಕುಡಿದು ಮಾತನಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಬಿಜೆಪಿಯ ಹಲವು ನಾಯಕರಿಗೂ ಕುಡಿತದ ಚಟ ಇದೆ ಎಂಬುದು ಗೊತ್ತಾಗಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಗೇಲಿ ಮಾಡಿದ್ದಾರೆ. ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್‌ ಕತ್ತಿ ಅವರ ಪತ್ಯೇಕ ರಾಜ್ಯ ಹೇಳಿಕೆ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “”ಭಾರತೀಯ ಜನತಾ ಪಕ್ಷದ ನಾಯಕರು ಯಾವಾಗ ಏನು ಮಾತನಾಡುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಉಮೇಶ್ ಕತ್ತಿ ಅವರು 2024ರ ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಎರಡು ಭಾಗವಾಗಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯಾಗಲಿದೆ ಎಂದು ಹೇಳಿರುವುದಕ್ಕೆ ನಮ್ಮ ವಿರೋಧವಿದೆ. ಬಿಜೆಪಿ ನಾಯಕರು ಕೇವಲ ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಅಸ್ತಿತ್ವಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಬಿಜೆಪಿ ಅಥವಾ ಇನ್ಯಾವುದೇ ಪಕ್ಷದ ನಾಯಕರಾಗಲಿ ಇಂತಹ ಹೇಳಿಕೆಗಳನ್ನು ನೀಡಿದರೆ ಕಾಂಗ್ರೆಸ್‌ ಉಗ್ರವಾಗಿ ಖಂಡಿಸುತ್ತದೆ ಎಂದರು.

ಕತ್ತಿ ಅವರು ದಯಮಾಡಿ ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು. ನಿಮಗೆ ಕುಡಿಯುವ ಚಟ ಇದ್ದರೆ ಮನೆಯಲ್ಲೇ ಕುಡಿಯಿರಿ. ಅದನ್ನು ಬಿಟ್ಟು ಹೊರಗೆ ಈ ರೀತಿಯಾದ ಹೇಳಿಕೆ ನೀಡಬಾರದು. ಕರ್ನಾಟಕ ರಾಜ್ಯ ರಚನೆಯಾದ ನಂತರ ಎಲ್ಲ ಕನ್ನಡಿಗರು ಒಟ್ಟಾಗಿದ್ದಾರೆ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಬದ್ಧರಾಗಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ಉಮೇಶ್‌ ಕತ್ತಿ ಹಾಗೂ ಬಿಜೆಪಿ ನೀಡುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಉದಯಿಸಲಿದೆ: ಕತ್ತಿಯಿಂದ ಮತ್ತೆ ವಿಭಜನೆ ಮಾತು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Arvind Kejriwal : ಸೋಮವಾರ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ಪರೀಕ್ಷಿಸಿತ್ತು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅವರ ಹೇಳಿಕೆ ದಾಖಲಿಸಿತ್ತು. ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ನಾಳೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ಮದ್ಯ ನೀತಿ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಮಂಗಳವಾರ ತಿಹಾರ್ ಜೈಲಿನಿಂದ ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಒಂದು ದಿನ ಮೊದಲು ಈ ಬೆಳವಣಿಗೆ ನಡೆದಿದೆ.

ಸೋಮವಾರ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ಪರೀಕ್ಷಿಸಿತ್ತು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅವರ ಹೇಳಿಕೆ ದಾಖಲಿಸಿತ್ತು. ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ನಾಳೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.

ಸುದ್ದಿ ಸಂಸ್ಥೆಗಳ ಜತೆ ಮಾತನಾಡಿದ ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ “ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್​​ನಿಂದ ಜಾಮೀನು ಸಿಗುವ ನೂರಕ್ಕೆ ನೂರರಷ್ಟು ಸಾಧ್ಯತೆ ಇರುವ ಸಮಯದಲ್ಲಿ ದೆಹಲಿ ಸಿಬಿಐ ಮೂಲಕ ಕೇಂದ್ರ ಪಿತೂರಿ ನಡೆಸುತ್ತಿದೆ ಎಂದು ಮೂಲಗಳು ನನಗೆ ತಿಳಿಸಿವೆ. ಇಡೀ ದೇಶ ಇದನ್ನು ನೋಡುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ಒಗ್ಗಟ್ಟಾಗಿ ನಿಂತಿದೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

ಅಕ್ರಮನ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿತ್ತು. ಆದೇಶವನ್ನು ಪ್ರಕಟಿಸುವಾಗ, ದೆಹಲಿ ಹೈಕೋರ್ಟ್, “ವಿಚಾರಣಾ ನ್ಯಾಯಾಲಯವು ಹೈಕೋರ್ಟ್​​ನ ತೀರ್ಮಾನಕ್ಕೆ ವಿರುದ್ಧವಾದ ಯಾವುದೇ ತೀರ್ಪು ನೀಡಬಾರದಿತ್ತು. ದಾಖಲೆಗಳು ಮತ್ತು ವಾದಗಳನ್ನು ಸರಿಯಾಗಿ ಮಾಡಿಲ್ಲ ಎಂದು ಹೇಳಿದ್ದರು.

Continue Reading

ಪ್ರಮುಖ ಸುದ್ದಿ

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Lok Sabha Speaker : ವೈಎಸ್ಆರ್​ಪಿಯಂತೆ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದರು. ಆದಾಗ್ಯೂ, ವೈಎಸ್ಆರ್​​ಪಿಗಿಂತ ಭಿನ್ನವಾಗಿ ಬಿಜೆಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭಾ ಸಂಸದರನ್ನು ಹೊಂದಿಲ್ಲ.

VISTARANEWS.COM


on

Lok Sabha Speaker
Koo

ನವದೆಹಲಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಲೋಕಸಭಾ ಸ್ಪೀಕರ್ (Lok Sabha Speaker) ಹುದ್ದೆಗೆ ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು ಬೆಂಬಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವತ್ರಿಕ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಟಿಡಿಪಿಯಿಂದ ಸೋಲನುಭವಿಸಿದ ವೈಎಸ್ಆರ್​ಪಿ ಲೋಕಸಭೆಯಲ್ಲಿ ನಾಲ್ಕು ಸಂಸದರನ್ನು ಹೊಂದಿದೆ. 2019 ರ ಚುನಾವಣೆಯಲ್ಲಿ ಪಕ್ಷವು ದಕ್ಷಿಣ ರಾಜ್ಯವನ್ನು 25 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಈ ವರ್ಷ ನಿರಾಸೆಯಾಗಿತ್ತು. ಚಂದ್ರಬಾಬು ನಾಯ್ಡು ಅವರ ಟಿಡಿಪಿ 16 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಐದು ಸ್ಥಾನಗಳನ್ನು ಗೆದ್ದಿವೆ. ಸ್ಥಳೀಯವಾಗಿ ವಿರೋಧ ಇರುವ ಹೊರತಾಗಿಯೂ ಡೆಲ್ಲಿಯಲ್ಲಿ ಬಿರ್ಲಾ ಅವರನ್ನು ಬೆಂಬಲಿಸಲು ವೈಎಸ್​ಆರ್​ ನಿರ್ಧರಿಸಿದೆ.

ಬೆಂಬಲದ ಪ್ರಸ್ತಾಪವು ಹೆಚ್ಚಿನ ಬದಲಾವಣೆ ಉಂಟು ಮಾಡದು. ಬಿರ್ಲಾ ಮತ್ತು ಬಿಜೆಪಿ ಈಗಾಗಲೇ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಖ್ಯಾಬಲ ಹೊಂದಿದೆ. ಆದಾಗ್ಯೂ ಜಗನ್ ಬಿಜೆಪಿ ಕಡೆಗೆ ಒಲವು ತೋರಿದೆ. ವೈಎಸ್ಆರ್​ಪಿ ಆಗಾಗ್ಗೆ ಸಂಸತ್ತಿನಲ್ಲಿ ವಿಶೇಷವಾಗಿ ರಾಜ್ಯಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ. ಸಂಖ್ಯಾಬಲದ ಕೊರತೆಯಿದ್ದಾಗ ಕಾನೂನುಗಳನ್ನು ಅಂಗೀಕರಿಸಲು ನೆರವಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೆಗೆದುಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರ ಮತ್ತು ಜಮ್ಮು ಮತ್ತು 370 ನೇ ವಿಧಿಯನ್ನು ರದ್ದುಪಡಿಸುವುದನ್ನು ರೆಡ್ಡಿ ಬೆಂಬಲಿಸಿದ್ದರು.

ವೈಎಸ್ಆರ್​ಪಿಯಂತೆ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದರು. ಆದಾಗ್ಯೂ, ವೈಎಸ್ಆರ್​​ಪಿಗಿಂತ ಭಿನ್ನವಾಗಿ ಬಿಜೆಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭಾ ಸಂಸದರನ್ನು ಹೊಂದಿಲ್ಲ.

ಇದನ್ನೂ ಓದಿ: Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

ವೈಎಸ್​ಆರ್​​ಪಿ ಹೆಚ್ಚುವರಿ ಮತಗಳು ಬಿರ್ಲಾ ಅವರಿಗೆ 297 ಮತಗಳ ಬೆಂಬಲವನ್ನು ನೀಡುತ್ತದೆ. ಇದು ಅವರಿಗೆ ಭರ್ಜರಿ ಮುನ್ನಡೆ ನೀಡುತ್ತದೆ. ಬಿಜೆಪಿ ಈಗಾಗಲೇ ತನ್ನದೇ ಸಂಸದರಿಂದ 240 ಮತಗಳನ್ನು ಮತ್ತು ಎನ್ಡಿಎ ಪಾಲುದಾರರಿಂದ 53 ಮತಗಳನ್ನು ಹೊಂದಿದೆ. ಇದರಲ್ಲಿ ವೈಎಸ್ಆರ್​ಪಿಯ ಪ್ರತಿಸ್ಪರ್ಧಿ – ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16 ಸಂಸದರೂ ಸೇರಿಕೊಂಡಿದ್ದಾರೆ. ಮತ್ತೊಂದೆಡೆ, ಪ್ರತಿಪಕ್ಷಗಳು 232 ಸಂಸದರನ್ನು ಹೊಂದಿವೆ.

ಸ್ಪೀಕರ್ ಚುನಾವಣೆ ಸರಳ ಬಹುಮತದ ಮೇಲೆ ಆಧಾರಿತವಾಗಿದೆ. 17ನೇ ಲೋಕಸಭೆಯ ಸ್ಪೀಕರ್ ಆಗಿದ್ದ ಬಿರ್ಲಾ ಅವರು ಕೇರಳದ ಮಾವೆಲಿಕರದಿಂದ ಎಂಟು ಬಾರಿ ಸಂಸದರಾಗಿರುವ ಕೋಡಿಕುನ್ನಿಲ್ ಸುರೇಶ್ ಅವರನ್ನು ಎದುರಿಸುತ್ತಿದ್ದಾರೆ.

ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಬಿಜೆಪಿ ವಿರೋಧ ಪಕ್ಷಗಳನ್ನು ಸಂಪರ್ಕಿಸಿತ್ತು. ಬಿಜೆಪಿಯೇತರ ಸಂಸದರಿಗೆ ಉಪಸಭಾಪತಿ ಸ್ಥಾನ ನೀಡಿದರೆ ಮಾತ್ರ ಬಿರ್ಲಾ ಅವರನ್ನು ಬೆಂಬಲಿಸುವುದಾಗಿ ಪ್ರತಿಪಕ್ಷಗಳು ಸೂಚಿಸಿದ್ದವು.

Continue Reading

ಪ್ರಮುಖ ಸುದ್ದಿ

Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

VISTARANEWS.COM


on

Rahul Gandhi
Koo

ಬೆಂಗಳೂರು : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ಪ್ರತಿ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿ ಪಕ್ಷಗಳ ನಾಯಕರ ಸಭೆಯ ನಂತರ ಪ್ರಕಟಿಸಿದ್ದಾರೆ ಕಾಂಗ್ರೆಸ್​ ಸಂಸದೀಯ ಪಕ್ಷದ ಅಧ್ಯಕ್ಷರು ಸ್ಪೀಕರ್ ಭರ್ತೃಹರಿ ಮಹತಾಬ್ ಅವರಿಗೆ ಅವರಿಗೆ ಪತ್ರ ಬರೆದು ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವ ನಿರ್ಧಾರವನ್ನು ತಿಳಿಸಲಾಗಿದೆ. ಇತರ ಪದಾಧಿಕಾರಿಗಳನ್ನು ನಂತರ ನಿರ್ಧರಿಸಲಾಗುವುದು ಎಂದು ವೇಣುಗೋಪಾಲ್​ ಹೇಳಿದ್ದಾರೆ.

ಜೂನ್ 9 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ಪ್ರತಿ ಪಕ್ಷದ ನಾಯಕರನ್ನಾಗಿ ನೇಮಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ಸಿಡಬ್ಲ್ಯುಸಿ ಸಭೆಯ ನಂತರ, ರಾಹುಲ್ ಗಾಂಧಿ ಅವರು ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಲು ಸ್ವಲ್ಪ ಸಮಯ ಬೇಕು ಎಂದು ಕೋರಿದ್ದರು.

18 ನೇ ಲೋಕಸಭೆಯ ಸ್ಪೀಕರ್ ಹುದ್ದೆಗಾಗಿ ಮತ ದಾನ ನಡೆಯುವ ಕೆಲವೇ ಗಂಟೆಗಳ ಮೊದಲು ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಸಂಪ್ರದಾಯದಂತೆ ಪ್ರತಿ ಪಕ್ಷದ ಸದಸ್ಯರೊಬ್ಬರಿಗೆ ಉಪಸಭಾಪತಿ ಹುದ್ದೆ ನೀಡಲು ಬಿಜೆಪಿ ನಿರಾಕರಿಸಿದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಬಣದ ನಡುವೆ ಮತ ಸಮರ ಶುರುವಾಗಿದೆ. ಲೋಕಸಭೆಯಲ್ಲಿ ಸ್ಪೀಕರ್ ಆಗಿ ನೇಮಕ ಮಾಡಲು ಬಿಜೆಪಿ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡಿದ ತಕ್ಷಣ ಕೆ.ಸುರೇಶ್ ಅವರನ್ನು ಇಂಡಿಯಾ ಬ್ಲಾಕ್​ ಕಣಕ್ಕೆ ಇಳಿಸಿದೆ.

ಇದನ್ನೂ ಓದಿ:Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಬಣದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಪ್ರತಿಪಕ್ಷದ ಹುದ್ದೆಗೆ ಹಕ್ಕು ಸಾಧಿಸಲು ಪಕ್ಷವು 55 ಸದಸ್ಯರ ಗಡಿಯನ್ನು ದಾಟಬೇಕಾಗಿತ್ತು.

ರಾಹುಲ್ ಗಾಂಧಿ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಗೆದ್ದಿದ್ದಾರೆ. ಅವರು ಕೇರಳದ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯ್ ಬರೇರಿಯಲ್ಲಿ ಚುನಾವಣೆಗೆ ನಿಂತು ಬೃಹತ್ ಅಂತರದಿಂದ ಗೆಲುವು ಸಾಧಿಸಿದ್ದರು. ಇದೀಗ ಅವರು ಕೇರಳದ ವಯನಾಡ್​ ತೊರೆಯಲು ನಿರ್ಧರಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಹಿನ್ನಡೆಗಳನ್ನು ಅನುಭವಿಸಿದ್ದ ರಾಹುಲ್ ಮತ್ತೆ ಒಂದೊಂದಾಗಿ ನಾಯಕತ್ವವನ್ನು ಗಳಿಸಿಕೊಳ್ಳುತ್ತಿದ್ದಾರೆ.

Continue Reading

ದೇಶ

Indira Gandhi’s Emergency: ತುರ್ತು ಪರಿಸ್ಥಿತಿಯಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ 10 ಹೋರಾಟಗಾರರಿವರು

ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ ಈಗ ಬರೋಬ್ಬರಿ 49 ವರ್ಷ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ (Indira Gandhi’s Emergency) ಘೋಷಣೆಯಿಂದಾಗಿ ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ನಾಯಕರನ್ನು ದೇಶವೇ ಗುರುತಿಸುವಂತೆ ಮಾಡಿತು. ತುರ್ತು ಪರಿಸ್ಥಿತಿ ಘೋಷಣೆಯನ್ನು ಬಲವಾಗಿ ಖಂಡಿಸಿದ ಇವರಲ್ಲಿ ಬಹುತೇಕ ಮಂದಿ ಮುಂದೆ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರು. ಈ ಹತ್ತು ಮಹಾನ್‌ ನಾಯಕರ ಪರಿಚಯ ಇಲ್ಲಿದೆ.

VISTARANEWS.COM


on

By

Indira Gandhi's Emergenc
Koo

1975 ಜೂನ್ 25ರಂದು ತಡರಾತ್ರಿ ಅಲ್ ಇಂಡಿಯಾ ರೇಡಿಯೋದಲ್ಲಿ (all india radio) ಭಾರತದ (india) ಪ್ರಧಾನಿ ಇಂದಿರಾ ಗಾಂಧಿಯವರು (indira gandhi) ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು (Indira Gandhi’s Emergency) ಘೋಷಿಸಿದ್ದಾರೆ ಎಂದು ದೇಶದ ಜನತೆಗೆ ತಿಳಿಸಿದರು. ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಅಕ್ರಮದ ಹಿನ್ನೆಲೆಯಲ್ಲಿ ನ್ಯಾಯಾಲಯ ರದ್ದುಪಡಿಸಿದ ಕೆಲವೇ ದಿನಗಳಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಸಂಸತ್ತಿನ ಕೆಳಮನೆಗೆ ಇಂದಿರಾ ಗಾಂಧಿಯವರ ಆಯ್ಕೆಯನ್ನು ಕೋರ್ಟ್‌ ಅನೂರ್ಜಿತಗೊಳಿಸಿತು. ಸಂಸತ್ತಿನ ಕಲಾಪದಿಂದ ದೂರವಿರುವಂತೆಯೂ ಇಂದಿರಾ ಗಾಂಧಿಯವರಿಗೆ ಕೋರ್ಟ್‌ ಸೂಚಿಸಿತು.

21 ತಿಂಗಳುಗಳ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅನೇಕ ನಾಯಕರು ಇಂದಿರಾ ಗಾಂಧಿ ಮತ್ತು ಅವರ ಬೆಂಬಲಿಗರ ವಿರುದ್ಧ ಧ್ವನಿ ಎತ್ತಿದರು. ಅಂತಿಮವಾಗಿ 1977ರ ಮಾರ್ಚ್ ನಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದು ಹಾಕಲಾಯಿತು. ಕಷ್ಟಕರವಾದ ಈ ಅವಧಿಯಲ್ಲಿ ಎಲ್ಲವನ್ನೂ ಎದುರಿಸಿ ಬಲವಾಗಿ ಹೊರಹೊಮ್ಮಿದ 10 ಪ್ರಮುಖ ನಾಯಕರ ಕುರಿತು ಕಿರು ಮಾಹಿತಿ ಇಲ್ಲಿದೆ.


1. ಜಯಪ್ರಕಾಶ್ ನಾರಾಯಣ್

ಲೋಕನಾಯಕ ಅಥವಾ ಜನರ ನಾಯಕ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಜಯಪ್ರಕಾಶ್ ನಾರಾಯಣ್ ಅವರು ಚುನಾವಣಾ ದುಷ್ಕೃತ್ಯಗಳಲ್ಲಿ ಇಂದಿರಾಗಾಂಧಿ ತಪ್ಪಿತಸ್ಥರೆಂದು ಹೈಕೋರ್ಟ್ ತೀರ್ಪು ನೀಡಿದ ಅನಂತರ ರಾಜಕೀಯ ವ್ಯವಸ್ಥೆಯಲ್ಲಿ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದರು. ಅವರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಆದರೆ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವನ್ನು ಮುನ್ನಡೆಸಿದಾಗ ಜನರಿಂದ ಅಪಾರ ಬೆಂಬಲವನ್ನು ಪಡೆದರು. ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ನಡೆಸಿದ ಬೃಹತ್‌ ರ‍್ಯಾಲಿ ಇಂದಿರಾ ಗಾಂಧಿಯವರನ್ನು ಬೆಚ್ಚಿಬೀಳುವಂತೆ ಮಾಡಿತ್ತು.


2. ಮೊರಾರ್ಜಿ ದೇಸಾಯಿ

ತುರ್ತು ಪರಿಸ್ಥಿತಿಯ ಅನಂತರ 1977ರ ಚುನಾವಣೆಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ದೇಸಾಯಿ ಅವರು ಮುಂದಿನ ಪ್ರಧಾನಮಂತ್ರಿಯಾಗುತ್ತಿದ್ದಂತೆ, ಇಂದಿರಾ ಗಾಂಧಿಯವರು ಹೊರಡಿಸಿದ ಹಲವು ಆದೇಶಗಳನ್ನು ರದ್ದುಗೊಳಿಸಿದರು. ಭವಿಷ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಮತ್ತೊಮ್ಮೆ ಘೋಷಿಸಲು ಕಷ್ಟವಾಗುವಂತೆ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ತಂದರು.


3. ಅಟಲ್ ಬಿಹಾರಿ ವಾಜಪೇಯಿ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಹುತೇಕ ವಿರೋಧ ಪಕ್ಷದ ನಾಯಕರು ಜೈಲು ಪಾಲಾಗಿದ್ದರು. ಅವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಹಲವಾರು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದರು. ಈ ಸಮಯದಲ್ಲಿ, ಅವರು ತಮ್ಮ ಕವಿತೆಗಳ ಮೂಲಕ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರವನ್ನು ಟೀಕಿಸಿದರು. ಜನತಾ ಪಕ್ಷದ ಸರ್ಕಾರದಲ್ಲಿ ಅನಂತರ ದೇಶದ ಪ್ರಧಾನಿಯಾದ ವಾಜಪೇಯಿ ಅವರು ಭಾರತದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.


4. ಎಲ್.ಕೆ. ಅಡ್ವಾಣಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಎಲ್‌.ಕೆ. ಅಡ್ವಾಣಿ ಕೂಡ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದಾರೆ. ಆ ಸಮಯದಲ್ಲಿನ ಭಯದ ವಾತಾವರಣವನ್ನು ಉದ್ದೇಶಿಸಿ ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸಿದವು ಎಂದು ಅಡ್ವಾಣಿ ಹೇಳಿರುವುದು ಹೀಗೆ: ಬಾಗಲು ಕೇಳಿದಾಗ ಅವರು ತೆವಳುವುದನ್ನು ಆಯ್ಕೆ ಮಾಡಿದರು ಎಂದು ಅವರು ಕೆಲವು ಮಾಧ್ಯಮಗಳನ್ನು ಟೀಕಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಡ್ವಾಣಿ ಅವರನ್ನು ಬೆಂಗಳೂರಿನ ಜೈಲಿನಲ್ಲಿ ಇರಿಸಲಾಗಿತ್ತು. ಮುಂದೆ ಅವರು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಭಾರತದ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.


5. ಜಾರ್ಜ್ ಫರ್ನಾಂಡಿಸ್

ಜಾರ್ಜ್ ಫೆರ್ನಾಂಡಿಸ್ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧನ ತಪ್ಪಿಸಲು ಸ್ಥಳೀಯ ಮೀನುಗಾರ, ಸಿಖ್ ಅಥವಾ ಸಾಧುವಿನಂತೆ ವೇಷ ಧರಿಸಿದ ಕಥೆಗಳು ಎಲ್ಲರಿಗೂ ತಿಳಿದಿವೆ. ಅವರು ಹಲವೆಡೆ ಪ್ರಯಾಣ ಬೆಳೆಸಿ ಇಂದಿರಾ ಗಾಂಧಿಯವರ ಆಡಳಿತದ ವಿರುದ್ಧ ಜನ ಬೆಂಬಲವನ್ನು ಪಡೆದರು. ಅಂತಿಮವಾಗಿ ಅವರನ್ನು ಬಂಧಿಸಲಾಯಿತಾದರೂ ಫರ್ನಾಂಡಿಸ್ ಅನಂತರ ಜೈಲಿನಿಂದಲೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಬಿಹಾರದ ಮುಜಾಫರ್‌ಪುರ ಕ್ಷೇತ್ರದಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದರು.


6. ಲಾಲು ಪ್ರಸಾದ್ ಯಾದವ್

ಯುವ ವಯಸ್ಸಿನಲ್ಲೇ ಲಾಲು ಪ್ರಸಾದ್ ಯಾದವ್ ಅವರು ಜೆಪಿ ಚಳವಳಿಯಲ್ಲಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯ ಅನಂತರದ ಕಾಲದಲ್ಲಿ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು. ಮುಂದೆ ಅವರು ಬಿಹಾರದ ಮುಖ್ಯಮಂತ್ರಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದರು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್‌ ಕಾಲದಲ್ಲಿ ರೈಲ್ವೆ ಸಚಿವರಾಗಿದ್ದರು.


7. ಮುಲಾಯಂ ಸಿಂಗ್ ಯಾದವ್

ಪಕ್ಷದ ಕಾರ್ಯಕರ್ತರು ಮತ್ತು ಅನುಯಾಯಿಗಳಲ್ಲಿ ‘ನೇತಾಜಿ’ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲು ಪಾಲಾಗಿದ್ದರು. ಅನಂತರ, ಅವರು ಉತ್ತರ ಪ್ರದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾದರು. ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಕ್ಟೋಬರ್ 2022ರಲ್ಲಿ ಅವರ ನಿಧನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಲಾಯಂ ಸಿಂಗ್‌ ಯಾದವ್‌ ಅವರನ್ನು “ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೈನಿಕ” ಎಂದು ಬಣ್ಣಿಸಿದ್ದರು.

ಇದನ್ನೂ ಓದಿ: Kangana Ranaut: ʻಎಮರ್ಜೆನ್ಸಿʼ ಬಿಡುಗಡೆ ದಿನಾಂಕ ಘೋಷಿಸಿದ ಕಂಗನಾ ರಣಾವತ್​


8. ಶರದ್ ಯಾದವ್

ಏಳು ಬಾರಿ ಲೋಕಸಭೆ ಮತ್ತು ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಶರದ್ ಯಾದವ್ ಅವರು ಮಾಜಿ ಕೇಂದ್ರ ಸಚಿವರೂ ಆಗಿದ್ದರು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಘೋಷಣೆಯನ್ನು ವಿರೋಧಿಸಿದ ಪ್ರಮುಖ ನಾಯಕರಲ್ಲಿ ಅವರು ಕೂಡ ಒಬ್ಬರು. ಅವರು ಮೊದಲು 1974ರಲ್ಲಿ ಮಧ್ಯಪ್ರದೇಶದ ಜಬಲ್ಪುರದಿಂದ ಲೋಕಸಭೆಗೆ ಆಯ್ಕೆಯಾದರು. ಯಾದವ್ ಅವರು ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.


9. ರಾಮ್ ವಿಲಾಸ್ ಪಾಸ್ವಾನ್

ಬಿಹಾರ ರಾಜಕೀಯದಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ ರಾಮ್ ವಿಲಾಸ್ ಪಾಸ್ವಾನ್, 1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ಪಾಲಾದರು. ಎರಡು ವರ್ಷಗಳ ಅನಂತರ 1977ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪಾಸ್ವಾನ್ ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದರು. ಇವರು ಬಿಹಾರ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.


10. ರಾಜ್ ನಾರಾಯಣ್

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ದೊಡ್ಡ ಟೀಕಾಕಾರರಾಗಿದ್ದ ರಾಜ್ ನಾರಾಯಣ್ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದರು. 1971ರ ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಸೋತ ಅನಂತರ, ನಾರಾಯಣ್‌ ಅವರು ಚುನಾವಣಾ ದುಷ್ಕೃತ್ಯಗಳು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ, 1951ರ ಉಲ್ಲಂಘನೆಯ ಆರೋಪದ ಮೂಲಕ ಇಂದಿರಾ ಗಾಂಧಿ ಅವರಿಗೆ ನ್ಯಾಯಾಲಯದಲ್ಲಿ ಸವಾಲು ಹಾಕಿದರು. ತುರ್ತು ಪರಿಸ್ಥಿತಿಯ ಅನಂತರ 1977ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಇಂದಿರಾ ಗಾಂಧಿ ಅವರನ್ನು ಸೋಲಿಸಿದರು.

Continue Reading
Advertisement
Karnataka Weather
ಕರ್ನಾಟಕ16 mins ago

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

David Warner
ಪ್ರಮುಖ ಸುದ್ದಿ46 mins ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ46 mins ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ2 hours ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Women's Asia Cup
ಪ್ರಮುಖ ಸುದ್ದಿ7 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ7 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ8 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Kodagu News
ಕೊಡಗು8 hours ago

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Lok Sabha Speaker
ಪ್ರಮುಖ ಸುದ್ದಿ8 hours ago

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌