Dalit CM : ‌ ಮತ್ತೆ ದಲಿತ ಸಿಎಂ ಕೂಗು; ಮತ ನಮ್ದು, ಲೀಡರ್‌ ಯಾರ್ಯಾರೋ ಎಂದ ಮಹದೇವಪ್ಪ - Vistara News

ರಾಜಕೀಯ

Dalit CM : ‌ ಮತ್ತೆ ದಲಿತ ಸಿಎಂ ಕೂಗು; ಮತ ನಮ್ದು, ಲೀಡರ್‌ ಯಾರ್ಯಾರೋ ಎಂದ ಮಹದೇವಪ್ಪ

Dalit CM : ಡಿ.ಕೆ. ಶಿವಕುಮಾರ್‌ ಅವರು ಸುಪ್ರೀಂಕೋರ್ಟ್‌ ಕ್ಲೀನ್‌ ಚಿಟ್‌ ಪಡೆದ ಬೆನ್ನಿಗೇ ದಲಿತ ಸಿಎಂ ಕೂಗು ಎದ್ದಿದೆ. ಏನಿದು ರಾಜಕೀಯ?

VISTARANEWS.COM


on

Dalit CM HC Mahadevappa DK Shivakumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ದಲಿತ ಸಿಎಂ (Dalit CM) ಕೂಗೆದ್ದಿದೆ. ಮತ ನಾವು ಹಾಕಬೇಕು, ನಾಯಕರಾಗೋರು ಇನ್ಯಾರೋ ಎಂದು ಆಕ್ರೋಶ ಹೊರಹಾಕುವ ಮೂಲಕ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ (Dr HC Mahadevappa) ಅವರು ಹಕ್ಕೊತ್ತಾಯ ಮಂಡನೆ ಮಾಡಿದ್ದಾರೆ. ಇದು ನಿಜವಾಗಿಯೂ ಅವರ ಬೇಡಿಕೆಯೋ ರಾಜ್ಯ ರಾಜಕಾರಣದಲ್ಲಿ (Congress Politics) ನಡೆಬಹುದಾದ ಸಿಎಂ ಬದಲಾವಣೆ (CM Change Discussion) ಚರ್ಚೆಗೆ ತಿರುವು ನೀಡಲು ಮಾಡಿದ ಪ್ರಯತ್ನವೇ ಎನ್ನುವ ಸಂಶಯವೂ ಇದೆ.

ಹಾಗಿದ್ದರೆ ಡಾ. ಎಚ್‌.ಸಿ. ಮಹದೇವಪ್ಪ ಹೇಳಿದ್ದೇನು?

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಎಸ್‌ಸಿ,ಎಸ್ಟಿ ಸಮಾವೇಶದಲ್ಲಿ ಮಾತನಾಡಿದ ಎಚ್.ಸಿ. ಮಹದೇವಪ್ಪ ಅವರು ಇದುವರೆಗೂ ರಾಜ್ಯ ದಲಿತ ಮುಖ್ಯಮಂತ್ರಿಯನ್ನು ಕಂಡಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ದಲಿತರು ಒಗ್ಗಟಾಗಿ ಒಂದು ಪಕ್ಷಕ್ಕೆ ಮತ ನೀಡಿದ ಬಳಿಕವೂ ಪುನಃ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿ ನಮ್ಮದಾಗಿದೆ. ಮತ ನಮ್ಮದಿದೆ. ಲೀಡರ್‌ಷಿಪ್‌ ಇನ್ಯಾರ ಬಳಿಯೋ ಇದೆ ಎಂದು ಹೇಳಿದ ಅವರು, ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ ಎಂದು ಹೇಳಿಕೊಂಡರು.

ಡಾ.ಜಿ ಪರಮೇಶ್ವರ್, ಖರ್ಗೆ ಅವರಾಗಲಿ, ನಾನಾಗಲಿ ನೀತಿ ರೂಪಿಸುವ ಜಾಗದಲ್ಲಿಲ್ಲ. ನಾವು ಸಿಎಂ ಆಗಲಿಲ್ಲ, ಅಂಬೇಡ್ಕರ್ ಬಳಿಕ ಮತ್ತೊಬ್ಬ ದಲಿತ ನಾಯಕ ಸಿಗಲೇ ಇಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ ಎಂದು ಕೊರಗು ತೋಡಿಕೊಂಡರು.

ಅಂಬೇಡ್ಕರ್ ಹೋದ ಮೇಲೆ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ದಲಿತ ನಾಯಕರಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರು ಇದ್ದರೂ ಸಿಎಂ ಆಗುವ ಅವಕಾಶ ಸಿಗಲಿಲ್ಲ. ಇದು ಇವತ್ತಿನ ರಾಜ್ಯದ ದೇಶದ ರಾಜಕೀಯ ಸನ್ನಿವೇಶ ಎಂದು ಎಚ್. ಸಿ ಮಹಾದೇವಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ರಾಚಯ್ಯ ಸಿಎಂ ಆಗಲಿ ಎಂದು ಯಾರೂ ಹೇಳಲಿಲ್ಲ

1985ರಲ್ಲಿ ಜನತಾ ಪಕ್ಷದಲ್ಲಿ 27 ಜನ ದಲಿತ ಶಾಸಕರು ಇದ್ದರು. ಬಿ ರಾಚಯ್ಯನವರು ಮುಖ್ಯಮಂತ್ರಿ ಆಗಬೇಕು ಅಂತ ಎದ್ದು ಹೇಳಿದವನು ನಾನೊಬ್ಬನೇ ಶಾಸಕ. ಉಳಿದ 26 ಜನ ದಲಿತ ಶಾಸಕರು ತಲೆ ಮೇಲೆ ಸೆರಗು ಹಾಕಿಕೊಂಡು ಕೂತಿದ್ರು. ಕೊನೇ ಪಕ್ಷ 26 ಜನಾನೂ ಎದ್ದಿದ್ದರೆ ನಾಯಕತ್ವ ರಕ್ಷಣೆ ಮಾಡಬಹುದಿತ್ತು. ಆಗ ದೇವೇಗೌಡರು, ನಾನೇನಪ್ಪ ಮಾಡಲಿ, ಮಹದೇವಪ್ಪ ಬಿಟ್ಟರೆ ಯಾರೂ ಮತ್ತೊಬ್ಬರು ಹೇಳಲೇ ಇಲ್ಲ ಅಂದ್ರು. ಇದು ನಮ್ಮ ಹಣೆಬರಹ ಎಂದು ಅಸಮಾಧಾನ ಹೊರಹಾಕಿದರು ಸಚಿವ ಮಹದೇವಪ್ಪ.

ಮೀಸಲಾತಿಗೆ ಸಂತೋಷಪಡಬೇಡಿ, ಪಾಲಿಸಿ ಮೇಕಿಂಗ್‌ ನಿಮ್ಮದಾಗಿರಬೇಕು

ಕೇವಲ ಮೀಸಲಾತಿಯಿಂದ ಸಂತೋಷಪಡಬೇಡಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ನನ್ನ ಜನರು ಅಧಿಕಾರದಲ್ಲಿ ಇರಬೇಕು, ಪಾಲಿಸಿ ಮೇಕಿಂಗ್ ಚೇರ್‌ನಲ್ಲಿ ಇರಬೇಕು ಅಂತ ಹೇಳಿದ್ದಾರೆ. ಅದಕ್ಕೆ ನಮ್ಮ ಜನರು ಒಗ್ಗಟ್ಟಾಗಬೇಕು ಅಂತ ಹೇಳಿದ್ದು ಎಂದು ಮಹದೇವಪ್ಪ ವಿವರಿಸಿದರು.

ಬೇರೆಯವರು ಮತ ಹಾಕ್ತಾರೆ. ಆಯಾ ಜಾತಿಯ ನಾಯಕನ ಹಿಂದೆ ಹೋಗ್ತಾರೆ. ನೀವು ಮತ ಹಾಕಿ ಸುಮ್ಮನಾಗಿ ಬಿಡ್ತೀರಾ.. ನಾವು ಮತ ಹಾಕಿ ಬೇರೆಯವರ ಮುಂದೆ ಕೈಜೊಡಿಸುತ್ತೇವೆ. ನಮ್ಮಿಂದ ಮತ ಪಡೆದವರು ನಮ್ಮ ಮೇಲೆ ಆಡಳಿತ ಮಾಡ್ತಾರೆ. ಅದಕ್ಕಾಗಿ ಒಗ್ಗಟ್ಟಾಗಿ ಅಂತ ಹೇಳಿದ್ದು ಎಂದು ಮಹದೇವಪ್ಪ ಹೇಳಿದರು.

ನಾನು ಕಾಂಗ್ರೆಸ್‌ ಬಗ್ಗೆ ಹೇಳಿದ್ದಲ್ಲ ಎಂದ ಮಹದೇವಪ್ಪ

ʻʻಬಹುಜನ ಸಮಾಜ ಒಂದಾಗಿದೆ. ನಿಮಗೆ ಕಣ್ಣು ಕಾಣಲ್ವಾ..? ಬಹುನರು ಒಂದಾಗಿದ್ದಕ್ಕೇ ಕಾಂಗ್ರೆಸ್ ಗೆಲ್ತಾ ಇರೋದುʼʼ ಎಂದು ಹೇಳಿದ ಅವರಿಗೆ ತಾವು ಮಾತನಾಡಿದ್ದು ವಿವಾದ ಆಗಬಹುದು ಎಂಬ ವಾಸನೆ ಬಡಿಯುತ್ತಿದ್ದಂತೆಯೇ ಬೇರೆ ಕಡೆಗೆ ತಿರುಗಿದರು.

ನಾನು ಸಮುದಾಯಗಳ ಬಗ್ಗೆ ಮಾತನಾಡಿದ್ದೇನೆ. ಪಕ್ಷಗಳ ಬಗ್ಗೆ ಹೇಳಿಕೆ ನೀಡಿಲ್ಲ. ನೀವು ವಿಷಯವನ್ನು ಕಾಂಪ್ಲಿಕೇಟ್‌ ಮಾಡಬೇಡಿ ಎಂದು ಹೇಳಿದರು ಮಹದೇವಪ್ಪ. ಕಾಂಗ್ರೆಸ್‌ ಹಲವಾರು ದಲಿತ ನಾಯಕರಿಗೆ ಸಿಎಂ ಸ್ಥಾನ ನೀಡಿದೆ. ಬೇರೆ ಪಾರ್ಟಿ ಕೂಡಾ ಸಿಎಂ ಮಾಡಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಮಾತ್ರ ನಾಲ್ಕಾರು ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿರೋದು, ಬೇರೆ ಯಾರು ಮಾಡಿದ್ದಾರೆ ಅಂತ ತೋರಿಸಿ ಎಂದರು.

ಕಾಂಗ್ರೆಸ್‌ ಯಾವ ಸಮುದಾಯವನ್ನೂ ನಿರ್ಲಕ್ಷಿಸಿಲ್ಲ ಎಂದ ಖಂಡ್ರೆ

ಈ ನಡುವೆ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ದಲಿತ ಸಿಎಂ ಬೇಡಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ನಮ್ಮ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ಕರ್ನಾಟಕದ ಕಾಂಗ್ರೆಸ್ ಗೆ ಅವರೇ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡ್ತಿದ್ದೇವೆ. ಕಾಂಗ್ರೆಸ್ ಯಾವ ಸಮುದಾಯವನ್ನೂ ನಿರ್ಲಕ್ಷ್ಯ ಮಾಡಿಲ್ಲ. ಎಲ್ಲ ಸಮುದಾಯಗಳಿಗೂ ಅವಕಾಶ ನೀಡಿದೆ ಎಂದರು.

ನಿಜವಾಗಿ ನಡೆಯುತ್ತಿರುವುದೇನು?

ನಿಜವೆಂದರೆ ಎಚ್.ಸಿ. ಮಹದೇವಪ್ಪ ಅವರ ದಲಿತ ಸಿಎಂ ಪ್ರಸ್ತಾಪದ ಹಿಂದೆ ಕಾಂಗ್ರೆಸ್‌ನ ರಾಜಕಾರಣವಿದೆ ಎಂದು ಹೇಳಲಾಗಿದೆ.

ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳಿದ ಬೆನ್ನಲ್ಲೇ ಹಿರಿಯ ಸಚಿವ ಮಹಾದೇವಪ್ಪ ಅವರಿಂದ ದಲಿತ ಸಿಎಂ ಪ್ರಸ್ತಾಪ ಬಂದಿರುವುದು ಚರ್ಚೆಗೆ ಕಾರಣವಾಗಿದೆ.

ಉಪಮುಖ್ಯಮಂತ್ರಿಯಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಇ.ಡಿ ಕ್ಲಿನ್ ಚಿಟ್ ಕೊಟ್ಟ ಬೆನ್ನಲ್ಲೇ ದಲಿತ ಸಿಎಂ ಕೂಗು ಹುಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ನನ್ನ ರಾಜಕೀಯದ ಮತ್ತೊಂದು ಹಂತಕ್ಕೆ ಹೋಗಲು ಅನುಕೂಲ ಅಂದಿದ್ದರು ಡಿ.ಕೆ ಶಿವಕುಮಾರ್‌.

ಅತ್ತ ಡಿಕೆಶಿ ಬಣದಲ್ಲಿ ಎರಡುವರೆ ವರ್ಷಗಳ ಬಳಿಕ ಡಿಕೆ ಸಾಬ್ ಸಿಎಂ ಅಂತಿದ್ದಾರೆ. ಅದರ ನಡುವೆ ದಲಿತ ಸಿಎಂ ಕೂಗು ಎದ್ದಿರುವುದು ಡಿಕೆಶಿ ಅವರನ್ನು ಸಿಎಂ ಆಗದಂತೆ ತಡೆಯಲು ಸೃಷ್ಟಿಸಿರುವ ಗೊಂದಲ ಎಂಬ ಮಾತೂ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Reservation Row: ಎಸ್‌ಸಿ / ಎಸ್‌ಟಿ ಮೀಸಲಾತಿಗೆ ನೆಹರೂ ವಿರೋಧ ವ್ಯಕ್ತಪಡಿಸಿದ್ದರು: ಸಾಕ್ಷಿ ಸಮೇತ ಬಹಿರಂಗಪಡಿಸಿದ ಬಿಜೆಪಿ

Reservation Row: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಹೊಂದಿದ್ದ ಮನೋಭಾವವನ್ನು ಎತ್ತಿ ತೋರಿಸುವ ಆರ್ಕೈವಲ್ ಪತ್ರಿಕೆಯ ಹಳೆಯ ತುಣುಕನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ʼʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉದ್ಯೋಗಗಳನ್ನು ಕಾಯ್ದಿರಿಸುವುದನ್ನು ವಿರೋಧಿಸುತ್ತೇನೆ. ಯಾಕೆಂದರೆ ಮೀಸಲಾತಿ ಅವರಲ್ಲಿ ಕೀಳರಿಮೆಯನ್ನು ಸೃಷ್ಟಿಸುತ್ತದೆʼʼ ಎಂದು ಹೇಳಿದ್ದ ನೆಹರೂ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

VISTARANEWS.COM


on

Reservation Row
Koo

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ (Reservation Row). ಈ ಮಧ್ಯೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ಅವರು ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಹೊಂದಿದ್ದ ಮನೋಭಾವವನ್ನು ಎತ್ತಿ ತೋರಿಸುವ ಆರ್ಕೈವಲ್ ಪತ್ರಿಕೆಯ ಹಳೆಯ ತುಣುಕನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ʼʼಈ ವರದಿಯು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಯ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತದೆʼʼ ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ್ದ ನೆಹರೂ, ʼʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉದ್ಯೋಗಗಳನ್ನು ಕಾಯ್ದಿರಿಸುವುದನ್ನು ವಿರೋಧಿಸುತ್ತೇನೆ. ಯಾಕೆಂದರೆ ಮೀಸಲಾತಿ ಅವರಲ್ಲಿ ಕೀಳರಿಮೆಯನ್ನು ಸೃಷ್ಟಿಸುತ್ತದೆʼʼ ಎಂದು ಹೇಳಿದ್ದರು ಎನ್ನುವುದನ್ನು ಆರ್ಕೈವಲ್ ಪತ್ರಿಕೆಯು ವರದಿ ಮಾಡಿತ್ತು. ಇದನ್ನು ಮಾಳವೀಯ ಉಲ್ಲೇಖಿಸಿದ್ದಾರೆ.

ಇದನ್ನು ಪೋಸ್ಟ್‌ ಮಾಡಿ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಸಬಲೀಕರಣವನ್ನು ಕಾಂಗ್ರೆಸ್ ಐತಿಹಾಸಿಕವಾಗಿ ವಿರೋಧಿಸಿದೆ ಎಂದು ಮಾಳವೀಯ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಪಾದಿಸಿದ್ದಾರೆ. “ಕಾಂಗ್ರೆಸ್ ಯಾವಾಗಲೂ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿಗಳ ಸಬಲೀಕರಣದ ವಿರುದ್ಧವಾಗಿದೆ. ಆದರೆ ಮೀಸಲಾತಿಯ ಸಾಂವಿಧಾನಿಕ ನಿಬಂಧನೆಗಳನ್ನು ಯಾರೂ ಹಾಳು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೋಡಿಕೊಳ್ಳುತ್ತದೆʼʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಬಹುದೊಡ್ಡ ಹಿನ್ನಡೆ ಎದುರಾದಂತಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಪ್ರಸ್ತುತ ಜಾರಿಯಲ್ಲಿರುವ ಶೇ. 50ರಷ್ಟು ಮೀಸಲಾತಿ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದರು. “ಇಂದು ಮೀಸಲಾತಿಗೆ ಶೇ. 50ರಷ್ಟು ಮಿತಿ ಇದೆ. ನಾವು ಈ ಮಿತಿಯನ್ನು ತೆಗೆದು ಹಾಕುತ್ತೇವೆ. ಬಡವರಿಗೆ ಮೀಸಲಾತಿ ಮಿತಿಯನ್ನು ಹೆಚ್ಚಿಸುತ್ತೇವೆ ” ಎಂದು ರಾಬರೇಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್‌ ಗಾಂಧಿ ಘೋಷಿಸಿದ್ದರು.

ಪ್ರಣಾಳಿಕೆಯಲ್ಲಿಯೂ ಘೋಷಣೆ

2024ರ ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ಎಸ್‌ಟಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯ ಶೇ. 50ರಷ್ಟು ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಇತ್ತ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಇರುವವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊನೆಗೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ʼನಾರಿ ಶಕ್ತಿ ವಂದನ್ ಅಧಿನಿಯಮ್ʼ ಅನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಕಲ್ಯಾಣ ಯೋಜನೆಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದೂ ಬಿಜೆಪಿ ಹೇಳಿದೆ.

ಇದನ್ನೂ ಓದಿ: ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

Continue Reading

ಉತ್ತರ ಕನ್ನಡ

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Bheemanna Naik: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ತೆರಳಿದ್ದಾಗ ಶಾಸಕ ಭೀಮಣ್ಣ ನಾಯ್ಕ್‌ ಸೇರಿ ಹಲವರ ಮೇಲೆ ಜೇನು ನೊಣಗಳು ದಾಳಿ ಮಾಡಿವೆ.

VISTARANEWS.COM


on

Koo

ಕಾರವಾರ: ಗೂಡಿನ ಜೇನು ನೊಣಗಳು ದಾಳಿ ನಡೆಸಿದ್ದರಿಂದ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್‌ ಅವರು (Bheemanna Naik) ಸೇರಿ ಹಲವರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ನಗರದ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ತೆರಳಿದ್ದ ವೇಳೆ ಜೇನು ನೋಣಗಳು ದಾಳಿ ನಡೆಸಿವೆ.

ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ನಗರಸಭೆ ಪೌರಾಯುಕ್ತ ಕಾಂತರಾಜ ಜತೆ ಶಾಸಕ ಬುಧವಾರ ತೆರಳಿದ್ದರು. ಈ ವೇಳೆ ಸಮೀಪದಲ್ಲಿದ್ದ ಗೂಡಿನ ಜೇನು ನೊಣಗಳು ದಾಳಿ ನಡೆಸಿದ್ದರಿಂದ ಶಾಸಕ ಭೀಮಣ್ಣ ನಾಯ್ಕ್‌, ಪೌರಾಯುಕ್ತ ಕಾಂತರಾಜ, ಸದಸ್ಯ ಖಾದರ್ ಆನವಟ್ಟಿ ಮತ್ತಿತರರು ಗಾಯಗೊಂಡಿದ್ದಾರೆ. ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಜೇನುದಾಳಿಯಿಂದ ಶಾಸಕ ಭೀಮಣ್ಣ ನಾಯ್ಕ್‌ ಅವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಮಾಹಿತಿ ನೀಡಿದ್ದಾರೆ.

Continue Reading

ಕರ್ನಾಟಕ

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

Vistara Gramadani: ಹಾಗೆ ನೋಡಿದರೆ, ಹೆಚ್ಚು ಓದಿದದವರು ನಾಗರಿಕತೆಯಲ್ಲಿ ಮುಂದಿದ್ದೇವೆ ಅಂತ ಭ್ರಮಿಸುವ ನಗರವಾಸಿಗಳು ಮತದಾನದಂತಹ ಕರ್ತವ್ಯದಲ್ಲಿ ಗ್ರಾಮೀಣ ಪ್ರದೇಶದವರಿಗಿಂತ ಪರ್ಸಂಟೇಜಿನಲ್ಲಿ ಮುಂದಿರಬೇಕಿತ್ತು. ಆದರೆ, ವಾಸ್ತವವಾಗಿ ಮತದಾನ ಇರಲಿ, PUC ಪಲಿತಾಂಶ ಇರಲಿ, ಒಟ್ಟಾರೆ ಆರೋಗ್ಯ ನೆಮ್ಮದಿಗಳ ವಿಚಾರವೇ ಇರಲಿ… ಗ್ರಾಮೀಣ ಪ್ರದೇಶದಲ್ಲೇ ಪರ್ಸಂಟೇಜ್ ಜಾಸ್ತಿ.

VISTARANEWS.COM


on

ವಿಸ್ತಾರ ಗ್ರಾಮದನಿ Vistara Gramadaani
ವಿಜಯಪುರ ಲೋಕಸಭಾ ಕ್ಷೇತ್ರದ ನಿಡಗುಂದಿ ತಾಲೂಕಿನ ಹೆಬ್ಬಾಳ, ಯಲಗೂರ, ಬೀರಲದಿನ್ನಿ ಹಾಗೂ ಬಳಬಟ್ಟಿ ಗ್ರಾಮದಲ್ಲಿ ಮಂಗಳವಾರ ನರೇಗಾ ಯೋಜನೆಯಡಿ ನೋಂದಾಯಿತ 256 ಕೂಲಿಕಾರರು ತಮ್ಮ ಹಕ್ಕು ಚಲಾಯಿಸಿ, ನರೇಗಾ ಕೆಲಸಕ್ಕೆ ಹಾಜರಾಗಿ ಇತರರಿಗೆ ಮಾದರಿ ಆಗಿದ್ದಾರೆ.
Koo
Aravind Sigadal

| ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರತೀ ವರ್ಷ ಬಹುತೇಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಮರುದಿನ ಪತ್ರಿಕೆಗಳಲ್ಲಿ ಕಾಣುವ ಸಾಮಾನ್ಯ ಹೆಡ್ಡಿಂಗ್‌: ‘ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ’ ಅಥವಾ ‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಮುಂದೆ’ ಅಥವಾ ‘ಹೆಣ್ಮಕ್ಳೇ ಸ್ಟ್ರಾಂಗು ಗುರು’ ಇತ್ಯಾದಿ. ಅದರಲ್ಲೂ ‘ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ’ ಎಂಬುದು ಒಂದು ವಿಶೇಷವಾದ ವಿಚಾರ. ಹಾಗೆಯೇ ಮತದಾನ ಸಂದರ್ಭಗಳಲ್ಲೂ ಇದೇ ವಿಶೇಷ ಕಾಣುತ್ತೇವೆ. ಗ್ರಾಮೀಣ ಪ್ರದೇಶಗಳಲ್ಲಿ ಯಾವಾಗಲೂ ಅತಿ ಹೆಚ್ಚು ಮತದಾನ ನಡೆಯುತ್ತದೆ. ಸ್ವೀಪ್ (SVEEP Systematic Voters’ Education and Electoral Participation) ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದವರನ್ನು (Vistara Gramadani) ತಲುಪದೇ ಇದ್ದರೂ ಮತದಾನ ಮಾತ್ರ ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲಿ ಹೆಚ್ಚು.

ನಗರಗಳಿಗಿಂತ ಹಳ್ಳಿ, ಪಟ್ಟಣಗಳಲ್ಲಿ ಶೇಕಡಾವಾರು ಓಟ್ ಜಾಸ್ತಿ ಕಾರಣವೇನು?

ಹೌದು, ಹಳ್ಳಿ ಪಟ್ಟಣಗಳಲ್ಲಿ ಮತದಾನ ಹೆಚ್ಚು. ಹಳ್ಳಿ ಪಟ್ಟಣಗಳ ಕೆಲವು ಬೂತ್‌ಗಳಲ್ಲಿ 100% ಮತದಾನ ಆಗಿದ್ದೂ ಇದೆ. ಸಾಮಾನ್ಯವಾಗಿ ಹಳ್ಳಿಗಳ ಬೂತ್‌ಗಳಲ್ಲಿ 80-90% ಮತದಾನ ‘ಗ್ಯಾರಂಟಿ’. ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಹೆಚ್ಚಾಗಲು ಹಲವರು ಕಾರಣಗಳಿವೆ.

  1. ಹಳ್ಳಿಗಳಲ್ಲಿ ಹೆಚ್ಚಿನ ಮತದಾರರು ಕೇವಲ ಮತದಾರರಾಗಿ ಇರುವುದಿಲ್ಲ. ಯಾವುದೋ ಪಕ್ಷಗಳ ವ್ಯಕ್ತಿಗಳ ಬೆಂಬಲಿತ ವ್ಯಕ್ತಿಗಳಾಗಿರುತ್ತಾರೆ.
  2. ಪಕ್ಷಗಳ ಬೂತ್ ಕಾರ್ಯಕರ್ತರೊಂದಿಗೆ ಎಲ್ಲಾ ಮತದಾರರ ಸಂಪರ್ಕ ಇರುತ್ತದೆ. ಮತ ಹಾಕಿಲ್ಲ ಅಂದರೆ, ಮತ ಹಾಕದಿರುವ ವಿಚಾರ ಇಡೀ ಹಳ್ಳಿಗೆ ಗೊತ್ತಾಗುತ್ತದೆ. ‘ಮತ ಹಾಕದೆ ಸುದ್ದಿ ಆಗುವುದು ಬೇಡ’ ಎಂಬ ಕಾರಣಕ್ಕೆ ಹಳ್ಳಿಗಳಲ್ಲಿ ಮತದಾನ ಮಾಡುವವರೂ ಇದ್ದಾರೆ.
  3. ಹಳ್ಳಿ ಪಟ್ಟಣಗಳಲ್ಲಿ ಮತದಾರರಿಗೆ ರಾಜಕೀಯದಾಟದಲ್ಲಿ ಆಸಕ್ತಿ ಜಾಸ್ತಿ. ದೊಡ್ಡ ನಗರಗಳಲ್ಲಿ ಹೆಚ್ಚಿನ ಜನರಿಗೆ, ಅದರಲ್ಲೂ ದೊಡ್ಡ ಸಂಬಳದ ದೊಡ್ಡ ಹುದ್ದೆಯಲ್ಲಿ ಇರುವವರಿಗೆ ರಾಜಕೀಯ ಆಸಕ್ತಿ ವಿಷಯ ಆಗಿರುವುದಿಲ್ಲ. ಒಂದು ರೀತಿಯಲ್ಲಿ ನಗರವಾಸಿಗಳಿಗೆ ರಾಜಕೀಯ ಒಂದು ಜಿಗುಪ್ಸೆ.
  4. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಜನರು ಸರ್ಕಾರಿ ಇಲಾಖೆಗಳಿಂದ ಫಲಾನುಭವಿ ಆಗಿರುತ್ತಾರೆ ಅಥವಾ ಯಾವುದಾದರೂ ಕೆಲಸಗಳು ಇಲಾಖೆಗಳಿಂದ ಬಾಕಿ ಉಳಿದಿರುತ್ತವೆ. ಆಗಿರುವ ಕೆಲಸ ಅಥವಾ ಆಗಬೇಕಿರುವ ಕೆಲಸದ ಹಿಂದೆ ಓಡಾಡುವವರು ಪಕ್ಷ ಪ್ರತಿನಿಧಿಗಳಾಗಿರುತ್ತಾರೆ ಮತ್ತು ಆ ಪ್ರತಿನಿಧಿಗಳು ಮತದಾನ ಸಂದರ್ಭದಲ್ಲಿ ಮತದಾರರನ್ನು ಮತದಾರ ಪ್ರಕ್ರಿಯೆಗೆ ತೊಡಗುವಂತೆ ಪ್ರಭಾವ ಬೀರಿರುತ್ತಾರೆ.
  5. ಜಾತ್ರೆ, ಊರಿನ ಹಬ್ಬಗಳಂತೆ ಎಲೆಕ್ಷನ್ ಕೂಡ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಒಂದು ಉತ್ಸವ ಇದ್ದಂತೆ, ಹೆಚ್ಚಿನವರು ಉತ್ಸಾಹದಿಂದಲೇ ಭಾಗವಹಿಸುತ್ತಾರೆ. ಹಳ್ಳಿಯ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯುವಾಗ, ಭೇಟಿಯಾದ ಸಂದರ್ಭಗಳಲ್ಲಿ ರಾಜಕೀಯ ವಿಚಾರಗಳು ಚರ್ಚೆಯ ಒಂದು ಸಬ್ಜೆಕ್ಟ್ ಆಗಿರುತ್ತದೆ. ಇದರ ಪ್ರಭಾವ, ಮತದಾನ ಹೆಚ್ಚಲು ಪರೋಕ್ವ ಕಾರಣಗಳಲ್ಲಿ ಒಂದಾಗಿರುತ್ತದೆ.
  6. ದೊಡ್ಡ ನಗರಗಳಲ್ಲಿ ವೃತ್ತಿಯಲ್ಲಿ ಇರುವವರು, ಚುನಾವಣೆಯ ರಜೆಯಲ್ಲಿ ಊರಿಗೆ ಬಂದಿರುವುದರಿಂದ ಮತ್ತು ಕುಟುಂಬದವರು ಮತದಾನ ಮಾಡುವಾಗ ಸಹಜವಾಗಿ ಪ್ರೇರಿತಗೊಂಡು ಮತದಾನಕ್ಕೆ ಮುಂದಾಗುತ್ತಾರೆ. ನಗರದಲ್ಲೇ ಹುಟ್ಟಿ ಬೆಳೆದವರು ರಜೆ ಸಿಕ್ಕಿದರೆ ಗಿರಿಧಾಮದ ತುದಿಗೆ ಜಾಲಿ ಪಿಕ್‌ನಿಕ್ ಹೋಗುವವರೇ ಹೆಚ್ಚು!
  7. ದೊಡ್ಡ ನಗರದ ಜನರು ಹಣ, ವೃತ್ತಿ, ಐಷಾರಾಮಿ ಜೀವನಕ್ಕೆ ಕೊಟ್ಟ ಪ್ರಾಧಾನ್ಯತೆಯನ್ನು ಜೀವನದ ಅಗತ್ಯದ ಪ್ರಮುಖ ವಿಚಾರಗಳಲ್ಲಿ ಕೊಡುವುದಿಲ್ಲ. ಅದು ಅಡುಗೆ ಮನೆಯ ಕೆಲಸವಿರಬಹುದು, ಸಾಮಾಜಿಕ ಚಟುವಟಿಕೆಗಳಿರಬಹುದು, ರಾಜಕೀಯವಿರಬಹುದು. ಹಳ್ಳಿಗಳಲ್ಲಿ ಆ ರೀತಿ ವಾತಾವರಣ ಇರುವುದಿಲ್ಲ.
  8. ಹಳ್ಳಿಗಳ ಜನಗಳ ಮಧ್ಯೆ ಒಂದು ಸ್ನೇಹ ಸಂಬಂಧ ಅಥವಾ ಬಾಂಧವ್ಯದ ಸಂಬಂಧ ಗಟ್ಟಿ ಇರುತ್ತದೆ. ಅದರ ಪರಿಣಾಮ, ಎಲ್ಲಾ ವಿಚಾರಗಳಂತೆ ರಾಜಕೀಯ ಸಂವಹನವೂ ನಡೆಯುತ್ತಿರುತ್ತದೆ. ಮತದಾನಕ್ಕೆ ಆ ಸಂವಹನ ಪ್ರೇರಣೆಯೂ ಆಗಿರುತ್ತದೆ.
  9. ಹಳ್ಳಿಗಳ ಜನರಲ್ಲಿ ರಾಜಕೀಯದ ಆಗುಹೋಗುಗಳ ಅರಿವು, ತಿಳಿವಳಿಕೆ ಹೆಚ್ಚು. ರಾಜಕಾರಣಿಗಳು/ಪಕ್ಷಗಳು ಮಾಡಿದ ಸಾಧನೆಗಳು ಅಥವಾ ನಿಷ್ಕ್ರಿಯತೆ ಬಗ್ಗೆ ಹಳ್ಳಿಯ ಸಾಮಾನ್ಯ ಪ್ರಜೆಗೆ ಇರುವ ಜ್ಞಾನ, ಪರಿಚಯ ದೊಡ್ಡ ನಗರವಾಸಿಗಳಿಗೆ ಇರುವುದಿಲ್ಲ. ನಗರ ನಿವಾಸಿಗಳಲ್ಲಿ ಅನೇಕರಿಗೆ ತಮ್ಮ MLA ಯಾರು? ಕಾರ್ಪೋರೇಟರ್ ಯಾರು ಅಂತಾನೇ ಗೊತ್ತಿರುವುದಿಲ್ಲ. ಹಳ್ಳಿಯ ಸಾಮಾನ್ಯರಿಗೂ MLA ಯಾರು ಅಂತ ಕೇಳಿದರೆ, ಕಳೆದ ಮೂರು ಬಾರಿಯ MLA ಗಳ ಪೂರ್ಣ ವಿವರ ಕೊಡುವಷ್ಟು ಮಾಹಿತಿ ಅವರ ಬಳಿ ಇರುತ್ತದೆ. ಇಂತಹ ಅರಿವು ಹಳ್ಳಿಗಳಲ್ಲಿ ಜನರನ್ನು ಮತಗಟ್ಟೆಗೆ ಬರುವಂತೆ ಮಾಡುತ್ತವೆ.
  10. ಹಳ್ಳಿಯ ಮತದಾರರು ನಗರದ ನಿವಾಸಿಗಳಷ್ಟು ಸೋಮಾರಿಗಳಲ್ಲ! ನಿರಾಶಾವಾದಿಗಳಲ್ಲ! ಸಾಮಾನ್ಯವಾಗಿ, ನಗರದವರಿಗಿಂತ ಹಳ್ಳಿಗರು ಹೆಚ್ಚು ಶ್ರಮಿಕರಾಗಿರುವುದರಿಂದ, ಮಾನಸಿಕ ಮತ್ತು ದೈಹಿಕ ಆರೋಗ್ಯದ ವಿಚಾರದಲ್ಲಿ, ಗಟ್ಟಿತನದಲ್ಲಿ ಹಳ್ಳಿಗರು ಒಂದು ಹೆಜ್ಜೆ ಮುಂದೆ ಇರ್ತಾರೆ. ಸರದಿಯಲ್ಲಿ ಅರ್ಧ ಗಂಟೆ ಮತದಾನಕ್ಕೆ ನಿಲ್ಲಬೇಕಾದರೆ, ಅದನ್ನೂ ಕೂಡ ಸಂಭ್ರಮಿಸುತ್ತಾರೆ. ನಗರದವರಂತೆ ಅಸಹನೆ, ಚಡಪಡಿಕೆ ಹಳ್ಳಿಗರಲ್ಲಿ ಕಡಿಮೆ.

ಹಾಗೆ ನೋಡಿದರೆ, ಹೆಚ್ಚು ಓದಿದದವರು ನಾಗರಿಕತೆಯಲ್ಲಿ ಮುಂದಿದ್ದೇವೆ ಅಂತ ಭ್ರಮಿಸುವ ನಗರವಾಸಿಗಳು ಮತದಾನದಂತಹ ಕರ್ತವ್ಯದಲ್ಲಿ ಗ್ರಾಮೀಣ ಪ್ರದೇಶದವರಿಗಿಂತ ಪರ್ಸಂಟೇಜಿನಲ್ಲಿ ಮುಂದಿರಬೇಕಿತ್ತು. ಆದರೆ, ವಾಸ್ತವವಾಗಿ ಮತದಾನ ಇರಲಿ, ಪಿಯುಸಿ ಪರೀಕ್ಷೆ ಫಲಿತಾಂಶ ಇರಲಿ, ಒಟ್ಟಾರೆ ಆರೋಗ್ಯ ನೆಮ್ಮದಿಗಳ ವಿಚಾರವೇ ಇರಲಿ… ಗ್ರಾಮೀಣ ಪ್ರದೇಶದಲ್ಲೇ ಪರ್ಸಂಟೇಜ್ ಜಾಸ್ತಿ.

ಇದನ್ನೂ ಓದಿ | Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

ನಗರದಲ್ಲಿ ಯಾವುದೇ ಕಾರಣವಿಲ್ಲದೆ ಮತದಾನದಿಂದ ತಪ್ಪಿಸಿಕೊಳ್ಳುವ, ವಿವೇಕ ರಹಿತರಾಗಿ ಮತದಾನ ಕರ್ತವ್ಯ ಮಾಡದ ನಾಗರಿಕರಿಗೆ ಧಿಕ್ಕಾರ ಹೇಳುವಾಗಲೇ, ಮತದಾನ ಪೂಜೆಯನ್ನು ಶ್ರದ್ಧೆಯಿಂದ ಮಾಡಿದ ಗ್ರಾಮೀಣವಾಸಿ ದೇಶ ಪ್ರೇಮಿಗಳಿಗೆ ಒಂದು ಜೈಕಾರ ಹೇಳೋಣ.

Continue Reading

ಕರ್ನಾಟಕ

Prajwal Revanna Case: ಎಸ್‌ಐಟಿ ಮೇಲೆ ಕೇಸ್‌ ಹಾಕ್ತೇನೆ, ಶೀಘ್ರವೇ ಪೆನ್‌ಡ್ರೈವ್‌ ಪ್ರೊಡ್ಯುಸರ್‌ ಹೆಸರು ಹೇಳ್ತೇನೆ ಎಂದ ದೇವರಾಜೇಗೌಡ

Prajwal Revanna Case: ರಾಜ್ಯಾದ್ಯಂತ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಹಳ ಚರ್ಚೆ ನಡೆಯುತ್ತಿದೆ. ಅಶ್ಲೀಲ ವಿಡಿಯೊ ಸೋರಿಕೆ ಮಾಡಿದವರ ರಕ್ಷಣೆಗೆ ನಾಲ್ವರು ಸಚಿವರು ಇದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಶೀಘ್ರದಲ್ಲೇ ಬಹಿರಂಗಪಡಿಸುವೆ ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Prajwal Revanna Case) ಎಚ್‌.ಡಿ.ರೇವಣ್ಣ ಅವರನ್ನು ಮಾತ್ರ ಬಂಧಿಸಿದ್ದಾರೆ. ಆದರೆ. ಪೆನ್‌ಡ್ರೈವ್‌ ಕೊಟ್ಟಿರುವ ಕಾರ್ತಿಕ್‌ ಗೌಡ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಒಬ್ಬ ಆರೋಪಿ ತಮ್ಮ‌ ಮುಂದೆ ಇದ್ದಾಗಲೇ ಬಂಧಿಸದ ಎಸ್‌ಐಟಿ ವಿರುದ್ಧ ನಾಳೆ ಕೋರ್ಟ್‌ನಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ. ಎಸ್‌ಐಟಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಖಾಸಗಿ ದೂರು ನೀಡುತ್ತೇವೆ ಎಂದು ವಕೀಲ ದೇವರಾಜೇಗೌಡ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯಾದ್ಯಂತ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಹಳ ಚರ್ಚೆ ನಡೆಯುತ್ತಿದೆ. ಯಾವಾಗ ಹೆಸರುಗಳು ಹೊರಗೆ ಬಂತೋ ರಕ್ಷಣೆ ಮಾಡಿಕೊಳ್ಳುವ ಕೆಲಸ ಆಗುತ್ತಿದೆ. ನನ್ನ ವಿರುದ್ಧವೂ ದೂರು ನೀಡಲು ಆರಂಭಿಸದ್ದಾರೆ‌. ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ನನ್ನ ಹಿಂದೆ ಸತ್ಯ, ನ್ಯಾಯ, ಧರ್ಮ ಇದೆ. ನಾನು ಯಾರಿಗೂ ಹೆದರಲ್ಲ ಎಂದು ತಿಳಿಸಿದರು.

ಪೆನ್‌ ಡ್ರೈವ್‌ ವಿಡಿಯೊ ಸೋರಿಕೆ ಮಾಡಿದವರ ರಕ್ಷಣೆಗೆ ನಾಲ್ವರು ಸಚಿವರು ಇದ್ದಾರೆ. ಪೆನ್ ಡ್ರೈವ್ ಪ್ರೊಡ್ಯುಸರ್ ಯಾರು? ಹಂಚಿಕೆದಾರರು ಯಾರು? ಎಂಬ ಮಾಹಿತಿ ಇದೆ. ಎಲ್ಲವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ | Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ದೂರು ನೀಡಿದ್ದರು. 2,867 ವೀಡಿಯೊ ಇದ್ದು, ಇದು ಪ್ರಪಂಚದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಆಗಿದೆ. ವಿಡಿಯೊ ಮಾಡಿದವರನ್ನು ಬಂಧಿಸಿ ಎಂದು ಸರ್ಕಾರಕ್ಕೆ‌ ಮನವಿ ಮಾಡಿದ್ದಾರೆ. ವಿಡಿಯೊ ಮಾಡಿದವರು ಮತ್ತು ಹಂಚಿದವರ ವಿರುದ್ಧ ಕ್ರಮ‌ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು. ಆದರೆ, ಪ್ರಕರಣದಲ್ಲಿ ಪೆನ್ ಡ್ರೈವ್ ಹರಿಬಿಟ್ಟವರ ವಿರುದ್ಧ ಕ್ರಮವಾಗಿಲ್ಲ. ನಾನು ಕೂಡ ಸಂತ್ರಸ್ತ, ನನಗೆ ವಿಡಿಯೊಕಾಲ್‌ ಮಾಡಿ ಹನಿ ಟ್ರ್ಯಾಪ್‌ ಮಾಡಲು ಯತ್ನಿಸಿ, ನನ್ನ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ ಮಾಡಲು ಮುಂದಾದರು. ಈ ರೀತಿ ನನ್ನ ಕಟ್ಟಿಹಾಕಬಹುದು ಎಂದು ನೋಡಿದರೆ, ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಎಂದರು.

ನಾನು ವಕೀಲನಾಗಿ ಹೋರಾಟ‌ ಮಾಡುತ್ತಿದ್ದೇನೆ. ನವೀನ್ ಗೌಡ, ಕಾರ್ತಿಕ್ ವಿರುದ್ಧ ಎಫ್‌ಐಆರ್‌ ಆಗಿದೆ. ಪೆನ್ ಡ್ರೈವ್ ಹಂಚಿಕೆ‌ ವಿಚಾರವಾಗಿ ಎಸ್‌ಐಟಿ ರಚನೆ ಮಾಡಿದ್ದಾರೆ. ಆದರೆ, ಹೊಳೆನರಸೀಪುರ ಪ್ರಕರಣ ಮಾತ್ರ ಎಸ್‌ಐಟಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಪೆನ್ ಡ್ರೈವ್ ಪ್ರಕರಣ ಮಾತ್ರ ವರ್ಗಾವಣೆ ಆಗಿಲ್ಲ. ಪೆನ್ ಡ್ರೈವ್ ವಿಚಾರವಾಗಿ ನನ್ನ ಸಾಕ್ಷಿಯಾಗಿ ಕರೆದಿದ್ದರು. ಆ ಕೇಸ್ ಪಡೆದಿಲ್ಲ ಅಂದ ಮೇಲೆ ನನ್ನನ್ನು ವಿಚಾರಣೆ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.

ಈ ಹಿಂದೆ ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದೆ, ಬೇರೆ ಇನ್ಯಾರಿಗೂ ಕೊಟ್ಟಿರಲಿಲ್ಲ. ಅವರೇ ಹಂಚಿದ್ದಾರೆ ಅಂತ ಕಾರ್ತಿಕ್‌ ಹೇಳಿದ್ದಾನೆ. ಮತ್ತೊಂದೆಡೆ ನಾನು ಕೊಟ್ಟಿರುವುದು ಪೆನ್ ಡ್ರೈವ್ ಅಲ್ಲ. ಮೆಮೊರಿ ಕಾರ್ಡ್ ಅಂತ ಹೇಳಿದ್ದಾನೆ. ಮತ್ತೊಂದೆಡೆ ನನ್ನ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ದೂರು ನಿಡೀದ್ದಾರೆ. ಕಕ್ಷಿದಾರರು ಕೊಟ್ಟಿರುವ ಮಾಹಿತಿ ಗೌಪ್ಯವಾಗಿದೆ. ಅವರಿಂದಲೇ ಸಹಿ ಮಾಡಿಸಿ ಮುಚ್ಚಿಡಲಾಗಿದೆ. ಅದನ್ನು ನ್ಯಾಯಾಧೀಶರ ಮುಂದೆಯೇ ಓಪನ್ ಮಾಡಲಾಗುವುದು ಎಂದು ತಿಳಿಸಿದರು.

ಎಸ್‌ಐಟಿ ತನಿಖೆಗೆ ಹಾಜರಾಗಿದ್ದೆ ಅಂತ‌ ಕಾರ್ತಿಕ್ ಹೇಳಿಕೆ ನೀಡಿದ್ದಾನೆ. ಸರ್ಕಾರ ಒನ್ ಸೈಡ್ ತನಿಖೆ ಮಾಡುತ್ತಿದೆ. ನಾನೂ ಕಾಂಗ್ರೆಸ್‌ನಲ್ಲಿ ಇದ್ದವನು. ಅಲ್ಲಿ ಅವರ ಆಟ ನೋಡಿದ್ದೇನೆ. ಅಶ್ಲೀಲ ವಿಡಿಯೊ ಮಾಡಿದವರು ಮತ್ತು ವಿಡಿಯೊ ಹಂಚಿಕೆ ಮಾಡಿದವರ ವಿರುದ್ಧವೂ ಬಗ್ಗೆ ತನಿಖೆ ಮಾಡಬೇಕು. ಇಂದು ಕಾರ್ತಿಕ್ ಗೌಡನ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿದೆ. ಈ ಪೆನ್ ಡ್ರೈವ್ ಹೊರಬರುತ್ತಿದ್ದಂತೆ ಸರ್ಕಾರ ತಲ್ಲಣ‌ ಆಗಿದೆ ಎಂದು ಹೇಳಿದರು.

ಅವನ ಬಳಿ ಹಣ ಇಲ್ಲ, ಅದಕ್ಕೆ ನಮ್ಮ‌ ಬಳಿ ಬಂದ ಅಂತ ಆ ಮಹಾನುಭಾವ ಕಾರ್ತಿಕ್ ಹೇಳಿಕೆ ನೀಡಿದ್ದಾನೆ. ನಾನು ಅವನಿಗೆ ಕರೆ ಮಾಡಿದ್ನಾ? ಅಥವಾ ಅವರು ಮಾಡಿದ್ರಾ ನೋಡಿ? ನನಗೆ ಶಿವರಾಮೇಗೌಡ ಯಾರು ಅಂತಲೇ ಗೊತ್ತಿರಲಿಲ್ಲ. ಅವರನ್ನ ಟಿವಿಯಲ್ಲಿ ನೋಡಿದ್ದೆ‌. ನನ್ನನ್ನ ಅವರೇ ಕರೆಸಿಕೊಂಡು ರೇವಣ್ಣ ಕುಟುಂಬದ ಬಗ್ಗೆ ಚರ್ಚೆ ಮಾಡಿದರು. ಒಂದು ಕುಟುಂಬ ಅವನತಿಗೆ ತರುವ ವಿಚಾರ ಗೊತ್ತಾದಾಗ ನಾನು ಕಾಲ್ ರೆಕಾರ್ಡ್ ಮಾಡಬೇಕಾಯಿತು ಎಂದು ತಿಳಿಸಿದರು.

ಇನ್ನೂ ಯಾವ ವಿಡಿಯೋ ಇದೆ ಗೊತ್ತಿಲ್ಲ. ಆದರೆ ಅವರ ಮರ್ಯಾದೆ ಹಾಳಾಗಬಾರದು. ವಕೀಲರ ಸಂಘ, ಬಿಜೆಪಿಯು ಸಂತ್ರಸ್ತ ಮಹಿಳೆಯರ ಪರ ಇರಲಿದೆ. ವಾದ ಮಂಡಿಸಲು ನಾವು ಇದ್ದೇವೆ. ಯಾರೂ ಪ್ರಾಣ ಕಳೆದುಕೊಳ್ಳುವುದು ಬೇಡ. ಪೆನ್ ಡ್ರೈವ್ ಹಂಚಿಕೆ ಮಾಡಿರುವುದು ಕಾರ್ತಿಕ್. ಪೆನ್ ಡ್ರೈವ್ ಸಿಕ್ಕವರು, ವಿಡಿಯೊ ನೋಡಿ, ಸಂತ್ರಸ್ತ ಮಹಿಳೆಯರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಎಸ್ಪಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.

ಕಾರ್ತಿಕ್ ಗೌಡ ಯಾವ ರೆಸಾರ್ಟ್‌ನಲ್ಲಿ ಇದ್ದಾನೆ ಎಂಬ ಮಾಹಿತಿ ಇದೆ. ಶೀಘ್ರದಲ್ಲೇ ಎಲ್ಲಾ ದಾಖಲೆ‌ ಬಿಡುಗಡೆ ಮಾಡುವೆ. ಇನ್ನು ಹಾಸನ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್, ನನಗೂ ಕಾರ್ತಿಕ್ ಗೌಡಗೂ ಸಂಬಂಧ ಇಲ್ಲ ಎನ್ನುತ್ತಾನೆ. ಆದರೆ ಒಂದು ಕಡೆ ಕಾರ್ತಿಕ್, ಮಧ್ಯದಲ್ಲಿ ಶ್ರೇಯಸ್ ಪಟೇಲ್, ಮತ್ತೊಂದು ಕಡೆ ಪುಟ್ಟರಾಜು ಇದ್ದಾರೆ ಎಂದು ಫೋಟೊ ತೋರಿಸಿದರು.

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ರಾಜಕೀಯದಲ್ಲಿ ನಾನಿಲ್ಲ ಎಂದು ಕಾರ್ತಿಕ್‌ ಹೇಳುತ್ತಾನೆ. ಆದರೆ, ಕಾರ್ತಿಕ್ ಮತ್ತು ಶ್ರೇಯಸ್ ಪಟೇಲ್ ರಾಜಕೀಯ ಸಭೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದಾರೆ. ಊಟಕ್ಕೆ ಕುಳಿತಿರುವ ಫೋಟೊ ಇದೆ. ನಿಮ್ಮ ತಾತ ನಮ್ಮ ಗುರುಗಳು, ಅವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡ, ಒಳ್ಳೆಯ ದಾರಿಯಲ್ಲಿ ಹೋಗು ಎಂದು ಶ್ರೇಯಸ್ ಪಟೇಲ್‌ಗೆ ಹೇಳಿದರು.

Continue Reading
Advertisement
Viral video
ವೈರಲ್ ನ್ಯೂಸ್4 mins ago

Viral Video: ಪರ್ಸ್‌ ಎಗರಿಸಿ ಖುಷಿಯಲ್ಲಿದ್ದ ಕಳ್ಳನಿಗೆ ಕಾದಿತ್ತು ಬಿಗ್‌ ಶಾಕ್‌! ವಿಡಿಯೋ ಫುಲ್‌ ವೈರಲ್‌

hd revanna jailed prajwal revanna case
ಕ್ರೈಂ8 mins ago

HD Revanna Case Jailed: ಎಚ್‌.ಡಿ ರೇವಣ್ಣ ಪರ ಸುದ್ದಿಗೋಷ್ಠಿ ನಡೆಸಿದ ನಾಲ್ವರ ಬಂಧನ; ಕಾರ್ತಿಕ್‌ ಬಂಧನಕ್ಕೂ ಕ್ಷಣಗಣನೆ

Crime News
ಕ್ರೈಂ28 mins ago

Crime News: ಮಕ್ಕಳನ್ನು ಕೊಂದ ಬಳಿಕ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ಏನಿದೆ?

gadag crime murder case
ಕ್ರೈಂ38 mins ago

Murder Case: ಪಾರ್ಟಿ ಮಾಡಿ ಮಲಗಿದ ಯುವಕನ ಕೊಲೆ, ಜೊತೆಗಿದ್ದ ಸ್ನೇಹಿತರಿಗೆ ಗೊತ್ತೇ ಆಗಲಿಲ್ಲ!

PBKS vs RCB
ಕ್ರೀಡೆ44 mins ago

PBKS vs RCB: ಮಳೆಯ ಕೈಯಲ್ಲಿದೆ ಆರ್​ಸಿಬಿ-ಪಂಜಾಬ್​ ಪ್ಲೇ ಆಫ್​ ಭವಿಷ್ಯ

Viral News
ವೈರಲ್ ನ್ಯೂಸ್1 hour ago

Viral News: ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ: ಹೊಸ ಕಾರಿನ ಪೂಜೆ ವೇಳೆ ನಡೆಯಿತು ಅವಘಡ; ಇಲ್ಲಿದೆ ವಿಡಿಯೊ

viral video
ಕ್ರಿಕೆಟ್1 hour ago

Viral Video: ಪಂದ್ಯ ಸೋತ ಸಿಟ್ಟಿನಲ್ಲಿ ರಾಹುಲ್​ಗೆ ಮೈದಾನದಲ್ಲೇ ಬೈದ ಲಕ್ನೋ ತಂಡದ ಮಾಲಿಕ

Cancer Causing Chemicals
ವಿದೇಶ1 hour ago

Cancer-Causing Chemicals: ಕಾರು ಪ್ರಿಯರೇ ಎಚ್ಚರ …ಎಚ್ಚರ..‌ ಕಾರಿನಲ್ಲಿ ಉತ್ಪತ್ತಿ ಆಗ್ತಿದೆ ಕ್ಯಾನ್ಸರ್‌ ಕಾರಕ ಕೆಮಿಕಲ್

hd revanna jailed 2
ಕ್ರೈಂ2 hours ago

HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

Jyothi Rai clarity For torturing on indecent videos
ಕಿರುತೆರೆ2 hours ago

Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಪಷ್ಟನೆ ಹೀಗಿದೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌