‌Congress Guarantee : ಬಿಜೆಪಿ – ಜೆಡಿಎಸ್‌ಗೆ ಮತ ಹಾಕಿದ್ರೆ ಗ್ಯಾರಂಟಿ ಯೋಜನೆಗಳು ರದ್ದು ಎಂದ ಡಿಕೆಶಿ! Vistara News

ಕರ್ನಾಟಕ

‌Congress Guarantee : ಬಿಜೆಪಿ – ಜೆಡಿಎಸ್‌ಗೆ ಮತ ಹಾಕಿದ್ರೆ ಗ್ಯಾರಂಟಿ ಯೋಜನೆಗಳು ರದ್ದು ಎಂದ ಡಿಕೆಶಿ!

‌Congress Guarantee : ನೀವೆಲ್ಲ ಬಿಜೆಪಿ ಅಥವಾ ಜೆಡಿಎಸ್‌ಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುತ್ತಾರೆ ಎಂದು ಜನರಿಗೆ ತಿಳಿಸಿ. ಆದರೆ, ಕಾಂಗ್ರೆಸ್ ಸರ್ಕಾರ ಇರುವವರೆಗೂ ಈ ಗ್ಯಾರಂಟಿಗಳನ್ನು ಹಿಂಪಡೆಯುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

VISTARANEWS.COM


on

DK Shivakumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಜೆಪಿ ಅಥವಾ ಜೆಡಿಎಸ್‌ಗೆ (BJP or JDS) ಮತ ಹಾಕಿದರೆ ಗ್ಯಾರಂಟಿ ಯೋಜನೆಗಳು (‌Congress Guarantee Scheme) ರದ್ದಾಗುತ್ತವೆ ಎಚ್ಚರ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಕಾರ್ಯಕರ್ತರಿಗೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಮ್ಮ ಗ್ಯಾರಂಟಿ ಯೋಜನೆಗಳು ಬಂದಾಗ ರಾಜ್ಯ ದಿವಾಳಿ ಆಗುತ್ತದೆ ಅಂತ ಬಿಜೆಪಿಯವರು ಬೊಬ್ಬೆ ಹೊಡೆದರು. ಈಗ ಅವರೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ ಎಂದು ಹೇಳಿದರು.

ಶಕ್ತಿ ಯೋಜನೆಯ ಪ್ರಭಾವದಿಂದ ಹಾಸನಾಂಬೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹದಿನಾಲ್ಕು ಕೋಟಿ ರೂಪಾಯಿ ಆದಾಯ ಬಂದಿದೆ. ಬಸ್ ಫ್ರೀ ಕೊಟ್ಟಿದ್ದರಿಂದಲೇ ಇಷ್ಟೊಂದು ಆದಾಯ ಜಾಸ್ತಿ ಆಗಿದೆ. ಗೃಹ ಲಕ್ಷ್ಮಿ ಯೋಜನೆಯು ಟೆಕ್ನಿಕಲ್ ಸಮಸ್ಯೆಯಿಂದ ಏಳು ಪರ್ಸೆಂಟ್ ಜನರಿಗೆ ತಲುಪಿಲ್ಲ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಯುವ ನಿಧಿ ಕೂಡಾ ಜಾರಿಗೆ ತರುತ್ತೇವೆ. ನೀವೆಲ್ಲ ಬಿಜೆಪಿ ಅಥವಾ ಜೆಡಿಎಸ್‌ಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುತ್ತಾರೆ ಎಂದು ಜನರಿಗೆ ತಿಳಿಸಿ. ಆದರೆ, ಕಾಂಗ್ರೆಸ್ ಸರ್ಕಾರ ಇರುವವರೆಗೂ ಈ ಗ್ಯಾರಂಟಿಗಳನ್ನು ಹಿಂಪಡೆಯುವುದಿಲ್ಲ, ಬದಲಾವಣೆ ಮಾಡುವುದಿಲ್ಲ. ಇದು ನಿಶ್ಚಿತ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್‌ ಕರೆ ನೀಡಿದರು.

ನಾನು ಡಿಸಿಎಂ ಆದಾಗ ‌ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಈ ವರ್ಷ ಎರಡು ಗ್ಯಾರಂಟಿ ಯೋಜನೆಗಳನ್ನು ತಂದರೆ ಸಾಕು ಎಂದು ಹೇಳಿದರು. ಆದರೆ, ನಾವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿದ್ದಾರೆ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ. ನಾನು ಇಂದಿರಾಗಾಂಧಿ ಅವರ ಹೆಸರಿನಲ್ಲಿ ಥಿಯೇಟರ್ ನಡೆಸುತ್ತಿದ್ದೆ. ಮೂರು ಥಿಯೇಟರ್‌ಗಳು ಇದ್ದಾವೆ. ಮಾಧ್ಯಮದವರು ಜನರ ಬಳಿ ಸಮೀಕ್ಷೆ ನಡೆಸಲಿ ಬೇಕಿದ್ದರೆ, ಜನರೇ ಉತ್ತರ ಕೊಡುತ್ತಾರೆ. ಅವರು ದೊಡ್ಡವರು, ಅವರ ಸಂಸ್ಕೃತಿ ಅದು. ಅವರು ಮಾತಾಡುತ್ತಾರೆ ಅಂತ ನಾನು ಮಾತನಾಡಲು ಆಗಲ್ಲ. ಅವರ ಸ್ಥಾನಕ್ಕೆ ಗೌರವ ಇದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಟೆಂಟಲ್ಲಿ ಬ್ಲೂಫಿಲಂ ತೋರಿಸುತ್ತಿದ್ದಾರೆ ಎಂಬ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.

ಗ್ಯಾರಂಟಿ ಪರಿವೀಕ್ಷಣೆಗೆ ನ.28ಕ್ಕೆ ಸಮಿತಿ

ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಜಿಲ್ಲಾ ಮಂತ್ರಿಗಳಿಗೆ ಉಸ್ತುವಾರಿ ನೀಡಲಾಗಿದೆ. ಗ್ಯಾರಂಟಿಗಳು ಜನರನ್ನು ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಲು ಪಕ್ಷದಿಂದ ಇದೇ ನವೆಂಬರ್‌ 28ಕ್ಕೆ ಸಮಿತಿಯನ್ನು ರಚನೆ ಮಾಡುತ್ತೇನೆ. ಅಂದು ಕಾಂಗ್ರೆಸ್ ಸಂಸ್ಥಾಪಕರ ದಿನವಿದ್ದು, ಅಂದೇ ಸಮಿತಿಯನ್ನು ರಚನೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ: Congress Karnataka : ಬೆಂಗಳೂರು ಜಿಲ್ಲೆಯನ್ನು 5 ಭಾಗ ಮಾಡಿದ ಕಾಂಗ್ರೆಸ್‌; ಐವರು ಜಿಲ್ಲಾಧ್ಯಕ್ಷರ ನೇಮಕ

ಈ ಸಮಿತಿಯವರು ಪ್ರತಿ ಮನೆಗೆ ಹೋಗಿ ಗ್ಯಾರಂಟಿಗಳು ಸಮರ್ಪಕವಾಗಿ ತಲುಪಿದೆಯೇ? ಯಾವುದಾದರೂ ಬದಲಾವಣೆ ಮಾಡಬೇಕೇ ಎಂಬ ಮಾಹಿತಿಯನ್ನು ಕಲೆ ಹಾಕುತ್ತದೆ. ನಲವತ್ತು ವರ್ಷಗಳ ರಾಜಕಾರಣದಲ್ಲಿ ಯಾವ ಸರ್ಕಾರವೂ ಕಾರ್ಯಕರ್ತರಿಗೆ ಇಂತಹ ಶಕ್ತಿ ಕೊಟ್ಟಿರಲಿಲ್ಲ. ನ.17ರವರೆಗೆ ಲೆಕ್ಕ ಹಾಕಿದರೆ ಶಕ್ತಿ ಯೋಜನೆಯಡಿ ನೂರು ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ. ಜನವರಿ ವೇಳೆ ಯುವ ನಿಧಿಯನ್ನೂ ಜಾರಿಗೆ ತರುತ್ತೇವೆ ಎಂದು ಹೇಳಿದರು.

ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್‌ ಮೂಲಕ ತಿಳಿಸಿ. ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

Bengaluru News : ಬೆಂಗಳೂರಲ್ಲಿ ವ್ಯಕ್ತಿಯೊಬ್ಬನ ಬರ್ಬರ (Murder case) ಹತ್ಯೆಯಾಗಿದೆ. ಹತ್ಯೆಗೈದು ಮೃತದೇಹವನ್ನು ಮೋರಿಯಲ್ಲಿ ಬೀಸಾಡಿ ಹೋಗಿದ್ದಾರೆ.

VISTARANEWS.COM


on

By

Crime Sense Murder Case
Koo

ಬೆಂಗಳೂರು: ವ್ಯಕ್ತಿಯನ್ನು ಕೊಲೆಗೈದು ಶವವನ್ನು ಮೋರಿಗೆ ಬಿಸಾಡಿ ಹಂತಕರು (Murder Case) ಪರಾರಿ ಆಗಿದ್ದಾರೆ. ಬೆಂಗಳೂರಿನ ಜಾಲಹಳ್ಳಿಯ ಹೆಚ್ಎಂಟಿ ರೋಡ್‌ನ ಮೋರಿಯಲ್ಲಿ ಶವ ಪತ್ತೆಯಾಗಿದೆ.

ವ್ಯಕ್ತಿಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆಯಲಾಗಿದೆ. ಪರಿಣಾಮ ತಲೆ ಹಿಂಭಾಗ ಕಿತ್ತು ಬಂದಿದೆ. ಹತ್ಯೆ ಬಳಿಕ ಶವವನ್ನು ಮೋರಿಗೆ ಎಸೆದು ಹಂತಕರು ಕಾಲ್ಕಿತ್ತಿದ್ದಾರೆ. ಮೋರಿಯಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಯಾದವನ ಗುರುತು ಪತ್ತೆಯಾಗಿಲ್ಲ. ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತನ ಮಾಹಿತಿ ಪತ್ತೆ ಹಚ್ಚಲು ಮುಂದಾಗಿದ್ದು, ಹಂತಕರಿಗೆ ಹುಡುಕಾಟ ನಡೆಸಿದ್ದಾರೆ. ಇನ್ನೂ ಮೋರಿಯಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಗೆ ಬೀಸಾಕಿದ ಕಿಡಿಗೇಡಿಗಳು

ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್‌ ಮಾಡುವಾಗ ಯುವಕರ ನಡುವೆ ಜಗಳ ನಡೆದು, ಯುವಕನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಬೀದರ್‌ನ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ನಿವಾಸಿ ಬಸವರಾಜ ಜಮಾದಾರ (30) ಹತ್ಯೆಯಾದವ.

ಕಿಟ್ಟಾ ಗ್ರಾಮದಲ್ಲಿ ಗೆಳೆಯನ ಮದುವೆ ಸಮಾರಂಭ ಇತ್ತು. ಈ ಮದುವೆಗೆ ಬಸವರಾಜ ಹೋಗಿದ್ದ. ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡಲೆಂದು ಈತ ಕಿಟ್ಟಾ ಗ್ರಾಮಕ್ಕೆ ತೆರಳಿದ್ದ. ಮೆರವಣಿಗೆಯಲ್ಲಿ ನೃತ್ಯ ಮಾಡುವಾಗ ಕಿಟ್ಟಾ ಗ್ರಾಮದ ಕೆಲ ಯುವಕರೊಂದಿಗೆ ಜಗಳ ನಡೆದಿದೆ. ಈ ನಡುವೆ ಸ್ಥಳೀಯರು ಮಧ್ಯ ಪ್ರವೇಶಿಸಿ ಎರಡು ಕಡೆಯವರನ್ನು ಸಮಾಧಾನಪಡಿಸಿ ಕಳಿಸಿದ್ದಾರೆ.

Youth killed in Bidar Vijayapura

ಇದನ್ನೂ ಓದಿ: Road Accident : ಪ್ರತ್ಯೇಕ ಕಡೆಗಳಲ್ಲಿ ಬಸ್‌ ಅಪಘಾತ; ನರಳಾಡಿದ ಪ್ರಯಾಣಿಕರು

ಆದರೆ ಅಷ್ಟಕ್ಕೆ ಸುಮ್ಮನಾಗದ ಕಿಟ್ಟಾ ಗ್ರಾಮದ ಯುವಕರು, ಬಸವರಾಜನನ್ನು ಮೆರವಣಿಗೆಯಿಂದ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಸಿಪಿಐ ಕೃಷ್ಣಕುಮಾರ ಪಾಟೀಲ, ಪಿಎಸ್ಐ ವಸೀಮ್ ಪಟೇಲ್ ನೇತೃತ್ವದ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆ ಮಾಡಿ ಪರಾರಿಯಾದ ಯುವಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ

ವಿಜಯಪುರ ನಗರದ ಕೆಎಚ್‌‌ಬಿ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಲಾಗಿದೆ. ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ದಂಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಲನಗರ ಪಿಎಸ್‌ಐ ಮತ್ತು ಡಿವೈಎಸ್‌ಪಿ ಯಲಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವ್ಯಕ್ತಿಯ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಹೋಂ ಗಾರ್ಡ್ ಬಟ್ಟೆಯಲ್ಲಿ ತುಂಡಾಗಿ ಬಿದ್ದಿರುವ ಶವ ಪತ್ತೆಯಾಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Police Protest : ಪೊಲೀಸರ ಅಮಾನತ್ತು ವಾಪಸ್ಸು ಪಡೆಯಲು ಸಮಯ ಕೇಳಿದ್ದಕ್ಕೆ ಪೊಲೀಸ್‌ ಸಿಬ್ಬಂದಿ ಹಾಗೂ ಕುಟುಂಬಸ್ಥರು ಅಹೋರಾತ್ರಿ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ. ಜತೆಗೆ ವಕೀಲರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

VISTARANEWS.COM


on

By

Police call off protest FIR against lawyer who slapped police
Koo

ಚಿಕ್ಕಮಗಳೂರು: ಹೆಲ್ಮೆಟ್‌ ಹಾಕದ ಕಾರಣಕ್ಕೆ ಪ್ರೀತಮ್‌ ಎಂಬ ಯುವ ವಕೀಲನ ಮೇಲೆ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಪ್ರಕರಣದಲ್ಲಿ ಪಿಎಸ್‌ಐ, ಎಎಸ್‌ಐ, ಮುಖ್ಯ ಪೇದೆ ಹಾಗೂ ಮೂವರು ಪೇದೆಗಳು ಸೇರಿ ಒಟ್ಟು ಆರು ಪೊಲೀಸರನ್ನು ಎಸ್‌ಪಿ ವಿಕ್ರಮ್‌ ಅಮಟೆ ಅಮಾನತು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಪೊಲೀಸ್‌ ಕುಟುಂಬಸ್ಥರು ಶನಿವಾರ (ಡಿ.2) ಅಹೋರಾತ್ರಿ ಪ್ರತಿಭಟನೆಯನ್ನು (Police Protest) ನಡೆಸಿದ್ದರು.

ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿಯೇ ಟಾರ್ಪಲ್ ಹಾಕಿ ಮಲಗಿ ಪ್ರತಿಭಟಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಂಗಳವಾರ ವರದಿ ನೀಡಲು ಸೂಚನೆ ನೀಡಿತ್ತು. ಹೀಗಾಗಿ ಆರು ಮಂದಿ ಪೊಲೀಸರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇತರೆ ಸಿಬ್ಬಂದಿ ಶನಿವಾರ ಅಹೋರಾತ್ರಿ ಪ್ರತಿಭಟನೆಗೆ ಮುಂದಾದರು.

ನಗರದ 6 ಠಾಣೆಗಳ 300ಕ್ಕೂ ಹೆಚ್ಚು ಪೊಲೀಸರು ಕೆಲಸ ನಿಲ್ಲಿಸಿ ಪ್ರತಿಭಟನೆಗೆ ಆಗಮಿಸಿ, ನಾವ್ಯಾರು ಕೆಲಸ ಮಾಡಲ್ಲ. ಪೊಲೀಸರಿಗೆ ರಕ್ಷಣೆ ಇಲ್ಲ, ಪೊಲೀಸ್ ಕುಟುಂಬಗಳಿಗೆ ಅನ್ಯಾಯ ಆಗಿದೆ‌. ಒಂದು ವೇಳೆ ಪ್ರಕರಣದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ಬಂಧಿಸಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಸ್‌ಪಿಗೆ ಎಚ್ಚರಿಕೆ ನೀಡಿದ್ದರು. ಸಿಬ್ಬಂದಿ ಹೋರಾಟಕ್ಕೆ ಮಣಿದ ಹಿರಿಯ ಅಧಿಕಾರಿಗಳು ವಕೀಲರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದರು. ಇದಾದ ಬಳಿಕ ಪೊಲೀಸರು ಹಾಗೂ ಅವರ ಕುಟುಂಬಸ್ಥರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿ, ಡಿಸಿಆರ್‌ಬಿ ಡಿವೈಎಸ್‌ಪಿ ಶಿವಪ್ರಸಾದ್ ನಾಯ್ಕ್, ಸೆನ್ ಪಿಎಸ್ಐ ಗವಿರಾಜ್ ಹಾಗೂ ಎಸ್‌ಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯು ಯಶಸ್ವಿಯಾಗಿದೆ. ಪೊಲೀಸ್‌ ಸಿಬ್ಬಂದಿ ಅಮಾನತ್ತು ವಾಪಸ್ಸು ಪಡೆಯಲು ಎಸ್‌ಪಿ ವಿಕ್ರಂ ಅಮಟೆ ಸಮಯ ಕೇಳಿದ್ದಕ್ಕೆ ಪ್ರತಿಭಟನೆಯನ್ನು ಕೈಬಿಟ್ಟರು. ಇದೇ ವೇಳೆ ವಶಕ್ಕೆ ಪಡೆದಿದ್ದ ಪೇದೆ ಗುರುಮೂರ್ತಿಯನ್ನು ಬಿಡುಗಡೆ ಮಾಡಲಾಯಿತು. ಜತೆಗೆ ವಕೀಲರ ಮೇಲೂ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಾಯಿತು.

ಇದನ್ನೂ ಓದಿ: Atrocity on Lawyer: ವಕೀಲರ ಮೇಲಿನ ಹಲ್ಲೆಗೆ ಹೈಕೋರ್ಟ್‌ ಗರಂ; 6 ಪೊಲೀಸರ ಅಮಾನತು

ಕಪ್ಪಾಳಕ್ಕೆ ಹೊಡೆದಿದ್ದ ಪ್ರೀತಮ್‌!

ಸಿಬ್ಬಂದಿ ಹೋರಾಟಕ್ಕೆ ಮಣಿದ ಹಿರಿಯ ಅಧಿಕಾರಿಗಳು ವಕೀಲರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದರು. ಪೇದೆ ಗುರುಪ್ರಸಾದ್ ನೀಡಿದ ದೂರಿನ ಮೇಲೆ ವಕೀಲ ಪ್ರೀತಮ್ ಮೇಲೂ ಎಫ್‌ಐಆರ್ ದಾಖಲಾಗಿದೆ. ವಕೀಲ ಪ್ರೀತಮ್ ಗುರುಪ್ರಸಾದ್‌ ಕಪ್ಪಾಳಕ್ಕೆ ಹೊಡಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂರು ಬೇಡಿಕೆ ಇಟ್ಟ ಪೊಲೀಸರು

  1. ಅಮಾನತು ಆದೇಶ ವಾಪಸ್ ಪಡೆಯಬೇಕು.
  2. ಪ್ರಕರಣ ‌ದಾಖಲಾದ ಸಿಬ್ಬಂದಿ ಬಂಧನ ಮಾಡುವಂತಿಲ್ಲ.
  3. ಪ್ರಕರಣ ದಾಖಲಾದ ವಕೀಲರ ಮೇಲೆ‌ ಸೂಕ್ತ ಕ್ರಮಕೈಗೊಳ್ಳಬೇಕು.

ಏನಿದು ಪ್ರಕರಣ?

ಹೆಲ್ಮೆಟ್ ಹಾಕದಿರುವ ವಿಚಾರಕ್ಕೆ ವಕೀಲರನ್ನು ಠಾಣೆಗೆ ಕರೆದೊಯ್ದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಪೊಲೀಸರ ವಿರುದ್ಧ ಸಿಡಿದೆದ್ದ ರಾಜ್ಯ ವಕೀಲರ ಸಂಘ ಬೀದಿಗಿಳಿದು ಪ್ರತಿಭಟನೆ ನಡೆಸಿ ಖಾಕಿ ವಿರುದ್ಧ ಕೆಂಡ ಕಾರಿದ್ದರು. ಕಾಫಿನಾಡಲ್ಲಿ ವಕೀಲರ ಪ್ರತಿಭಟನೆ ಕ್ಷಣ ಕ್ಷಣಕ್ಕೂ ಕಾವು ಪಡೆಯುತ್ತಿದ್ದು, ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸದಿದ್ದರೆ ಮುಂದೆ ಏನಾದರೂ ನಮಗೆ ಗೊತ್ತಿಲ್ಲ ಎಂದು ವಕೀಲರ ಪಡೆ ಖಡಕ್ ವಾರ್ನಿಂಗ್ ಕೊಟ್ಟಿತ್ತು.

ಅಂದಹಾಗೇ ಕಳೆದ ನವೆಂಬರ್‌ 30ರ ರಾತ್ರಿ 7 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿದೆ ಹೋಗುತ್ತಿದ್ದ ವಕೀಲ ಪ್ರೀತಮ್‌ನನ್ನು ತಡೆದ ಪೊಲೀಸರು ಬೈಕ್‌ನಿಂದ ಕೆಳಗಿಳಿಸಿ ಕೀ ಕಿತ್ತುಕೊಂಡಿದ್ದರು. ಈ ವಿಚಾರ ದೊಡ್ಡದಾಗಿ ಬೈಕ್ ಸವಾರನನ್ನು ಠಾಣೆಗೆ ಕರೆದು ಕರೆದೊಯ್ದು ಹಿಗ್ಗಾ ಮುಗ್ಗ ಹಲ್ಲೆ ನಡೆಸಿರುವ ವಿಚಾರ ಇತರೆ ವಕೀಲರು ಸಿಟ್ಟಿಗೆಳುವಂತೆ ಮಾಡಿತ್ತು.

ದಂಡ ಹಾಕುವ ಬದಲು ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಚಿಕ್ಕಮಗಳೂರು ನಗರ ಠಾಣೆಯ ಮುಂದೆ ರಾತ್ರಿ ಇಡೀ ಪ್ರತಿಭಟನೆ ನಡೆಸಿ ಸುಖಾ ಸುಮ್ಮನೆ ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸುವಂತೆ ವಕೀಲರು ಪಟ್ಟು ಹಿಡಿದಿದ್ದರು. ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಅಮಟೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು ಪಟ್ಟು ಬಿಡದ ನೂರಾರು ವಕೀಲರು ಪೊಲೀಸರನ್ನು ಬಂಧಿಸಿಲೇ ಬೇಕೆಂದು ಒತ್ತಾಯ ಮಾಡಿದರು. ಬಳಿಕ ವಕೀಲರ ಪ್ರತಿಭಟನೆಗೆ ಮಣಿದ ಎಸ್‌ಪಿ ವಿಕ್ರಂ, ಓರ್ವ ಪಿಎಸ್ಐ, ಎಎಸ್‌ಐ ಸೇರಿ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಕೋರ್ಟ್‌ ಕಲಾಪ ಬಹಿಷ್ಕರಿಸಿದ್ದ ವಕೀಲರು

ಇನ್ನೂ ಶುಕ್ರವಾರ ಜಿಲ್ಲಾ ನ್ಯಾಯಾಲಯದ ಮುಂದೆ ಪ್ರತಿಭಟನೆಗಳಿದ್ದ ನೂರಾರು ವಕೀಲರು, ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಟನೆಗೆ ಬಂದಿದ್ದ ವಕೀಲರು, ತಪ್ಪಿತಸ್ಥ ಪೊಲೀಸರನ್ನು ಬಂಧಿಸಬೇಕು, ಹಲ್ಲೆಗಳಾದ ವಕೀಲ ಪ್ರೀತಂಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Election Results 2023 : ತೆಲಂಗಾಣ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಸೇವೆ ಮಾಡಿದ್ರೆ ಉಗ್ರ ಪ್ರತಿಭಟನೆ; ಆರ್.‌ ಅಶೋಕ್

Election Results 2023 : ರಾಜ್ಯದಲ್ಲಿ ಅಧಿವೇಶನ ಇದ್ದರೂ ನಮ್ಮ ಸಚಿವರು ತೆಲಂಗಾಣಕ್ಕೆ ಹೋಗಿ ಅಲ್ಲಿ ಸೇವೆ ಮಾಡುತ್ತಿದ್ದಾರೆ. ಮುಂದೆ ಇವರಿಗೆ ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ. ಆದರೆ, ಇಲ್ಲಿ ಬರದ ಸ್ಥಿತಿಯನ್ನು ಇಟ್ಟುಕೊಂಡು ಈ ವೇಳೆ ರಾಜ್ಯದ ರೆಸಾರ್ಟ್‌ಗಳಿಗೆ ಅಲ್ಲಿನ ಶಾಸಕರನ್ನು ಕರೆತಂದು ನಮ್ಮ ಸಚಿವರು ಸೇವೆ ಮಾಡಲು ಮುಂದಾದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

VISTARANEWS.COM


on

R Ashok
Koo

ಬೆಂಗಳೂರು: ತೆಲಂಗಾಣ ಕಾಂಗ್ರೆಸ್‌ನವರಿಗೆ (Telangana Congress) ಧಮ್ ಇಲ್ಲ. ಬರಗಾಲ ಬಂದಾಗ ಸಿಎಂ ಸಿದ್ದರಾಮಯ್ಯ (CM Siddaramaiah) ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಇವಾಗ ಅವರದ್ದು ಬರೀ ಮೊಸಳೆ ಕಣ್ಣೀರು ಎಂಬುದು ಗೊತ್ತಾಗಿದೆ. ಅಧಿವೇಶನದಲ್ಲಿ ಬರದ ಬಗ್ಗೆ ಮಾತನಾಡೋದು ಬಿಟ್ಟು ಇಲ್ಲಿ ರೆಸಾರ್ಟ್‌ಗೆ ತೆಲಂಗಾಣದ ಶಾಸಕರನ್ನು ಕರೆತಂದು ಸಚಿವರು ಸೇವೆ ಮಾಡುತ್ತಾ ಕುಳಿತುಕೊಂಡರೆ ಪರಿಣಾಮ ನೆಟ್ಟಗಿರಲ್ಲ. ಅವರಿಗೆ ಹೋರಾಟ ಪ್ರತಿಭಟನೆಗಳ ಮೂಲಕ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಆರ್.‌ ಅಶೋಕ್ (R Ashok) ಹೇಳಿದರು. ಅಲ್ಲದೆ, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ (Election Results 2023) ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ರಾಜ್ಯದಲ್ಲಿ ಅಧಿವೇಶನ ಇದ್ದರೂ ನಮ್ಮ ಸಚಿವರು ತೆಲಂಗಾಣಕ್ಕೆ ಹೋಗಿ ಸೇವೆ ಮಾಡುತ್ತಿದ್ದಾರೆ. ಮುಂದೆ ಇವರಿಗೆ ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ. ಆದರೆ, ಇಲ್ಲಿ ಬರದ ಸ್ಥಿತಿಯನ್ನು ಇಟ್ಟುಕೊಂಡು ಈ ವೇಳೆ ರಾಜ್ಯದ ರೆಸಾರ್ಟ್‌ಗಳಿಗೆ ಅಲ್ಲಿನ ಶಾಸಕರನ್ನು ಕರೆತಂದು ನಮ್ಮ ಸಚಿವರು ಸೇವೆ ಮಾಡಲು ಮುಂದಾದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.

ಗೆಲ್ಲುವ ರಾಜ್ಯಗಳಿಗೆ ಓಡಿ ಹೋಗುವ ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಗೆಲ್ಲುವ ರಾಜ್ಯಗಳಿಗೆಲ್ಲ ಓಡಿ ಹೋಗುತ್ತಾರೆ. ಮಧ್ಯಪ್ರದೇಶ ಗೆದ್ದರೂ ಅಲ್ಲಿಗೆ ಓಡಿ ಹೋಗುತ್ತಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಸಿಎಂ ಆಗಬೇಕು ಎಂಬ ಅವರ ಕನಸಿಗೆ ಇಲ್ಲಿರುವ ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಾರೆ ಎಂಬುದನ್ನು ನೋಡಬೇಕಲ್ಲವೇ? ಪಾಪ ಶಿವಕುಮಾರ್‌ಗೆ ಸಿದ್ದರಾಮಯ್ಯ ಬಿಟ್ಟು ಕೊಡಬೇಕಲ್ಲ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ವ್ಯಂಗ್ಯವಾಡಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಕಡೆ ಬಿಜೆಪಿ ಗೆಲುವಿನ ಹೊಸ್ತಿಲಿನಲ್ಲಿ ಇದೆ. ಗ್ಯಾರಂಟಿಗಳು ಎಲ್ಲ ಠುಸ್ ಪಟಾಕಿ ಎಂದು ಹೇಳಿದರು.

ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಸೋಲು ಕಂಡಿದ್ದೆವು. ತೆಲಂಗಾಣದಲ್ಲೂ ನಾವು ನಾಲ್ಕು ಸೀಟು ಪಡೆದಿದ್ದೇವೆ. ರಾಜಸ್ಥಾನ ಬಿಜೆಪಿ ಗೆಲ್ಲೋದು ನಿಶ್ಚಿತ. ತೆಲಂಗಾಣದಲ್ಲೂ ಬಿಜೆಪಿ ಹೆಚ್ಚು ಸೀಟುಗಳು ಬರುತ್ತಿದೆ. ಎಲ್ಲ ಕಡೆಯೂ ಬಿಜೆಪಿ ಜಯದ ಹೊಸ್ತಿಲಲ್ಲಿ ಇದೆ. ಇದೆಲ್ಲವೂ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಎಲ್ಲ ಕಡೆ ಟೋಪಿ ಹಾಕಿಕೊಂಡು‌ ಹೋಗಿ ಈ ನಮ್ಮ ಕಾಂಗ್ರೆಸ್ ನಾಯಕರು ತೆಲಂಗಾಣದ ರೆಸಾರ್ಟ್‌ನಲ್ಲಿ ಸರ್ವಿಸ್‌ ಕೊಡೋಕೆ ಹೋಗಿದ್ದಾರೆ. ಇದು ಒಂದು ನಾಚಿಕೆಗೇಡಿನ ಸಂಗತಿ ಎಂದು ಆರ್. ಅಶೋಕ್ ಕಿಡಿಕಾರಿದರು.

ಲೋಕಸಭಾ ಚುನಾವಣೆಯಲ್ಲಿ ಲಾಭ

ತೆಲಂಗಾಣದಲ್ಲಿ ಕೆಸಿಆರ್ ಕುಟುಂಬ ರಾಜಕಾರಣದಿಂದ ಹಿನ್ನಡೆ ಆಗಿದೆ. ಕಳೆದ ಚುನಾವಣೆಯಲ್ಲಿ ಈ ನಾಲ್ಕು ರಾಜ್ಯದಲ್ಲಿ ನಾವು ಸೋತ್ತಿದ್ದೆವು. ಆದರೆ, ಈ ಬಾರಿ ಎರಡು ರಾಜ್ಯದಲ್ಲಿ ಗೆಲುವು ಸಾಧಿಸಿದ್ದೇವೆ. ತೆಲಂಗಾಣದಲ್ಲಿ 11 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದೇವೆ. ಕಳೆದ ಬಾರಿ ತೆಲಂಗಾಣದಲ್ಲಿ ನಾಲ್ಕು ಸ್ಥಾನ ಇತ್ತು. ಈಗ 11 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದೇವೆ. ದೊಡ್ಡ ದೊಡ್ಡ ರಾಜ್ಯದಲ್ಲಿ ಬಿಜೆಪಿ ಮುನ್ನಡೆಯನ್ನು ಕಂಡುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರಬಹುದಾದ ರಾಜ್ಯದಲ್ಲಿ ನಾವು ಮುಂದೆ ಇದ್ದೇವೆ ಎಂದು ಆರ್.‌ ಅಶೋಕ್ ಹೇಳಿದರು.

ತನ್ನ ತಪ್ಪಿನಿಂದಲೇ ಬಿಆರ್‌ಎಸ್ ತೆಲಂಗಾಣವನ್ನು ಕಳೆದುಕೊಂಡಿದೆ

ಬಿಆರ್‌ಎಸ್ ತೆಲಂಗಾಣದಲ್ಲಿ ಕುಟುಂಬ ರಾಜಕೀಯ ಮಾಡಿದೆ. ತನ್ನ ತಪ್ಪಿನಿಂದಲೇ ಬಿಆರ್‌ಎಸ್ ತೆಲಂಗಾಣವನ್ನು ಕಳೆದುಕೊಂಡಿದೆ. ಕಳೆದ ಬಾರಿ ಮಧ್ಯಪ್ರದೇಶ, ಛತ್ತಿಸ್‌ಗಡ, ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಆದರೆ, ಈ ವರ್ಷ ಬಿಜೆಪಿ ಮುಂದಿದೆ. ಕರ್ನಾಟಕದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗುವ ವಿಚಾರ. ಈಗಿನ ಫಲಿತಾಂಶ ನೋಡಿದರೆ ಕಾಂಗ್ರೆಸ್‌ನವರೆ ಬಿಜೆಪಿಗೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲೇ ಭಿನ್ನಮತೀಯ ಚಟುವಟಿಕೆ ಹೆಚ್ಚಾಗಿದೆ. ಬೆಳಗಾವಿ, ದಾವಣಗೆರೆ, ರಾಯಚೂರಿನಲ್ಲಿ ಕಾಂಗ್ರೆಸ್ ಭಿನ್ನಮತ ಶುರುವಾಗಿದೆ. ಕಾಂಗ್ರೆಸ್‌ನವರು ಅವರ ಕಾಲಿನ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಾರೆ ಎಂದು ಆರ್.‌ ಅಶೋಕ್‌ ಹೇಳಿದರು.

ನಾಳೆ ಅಧಿವೇಶನ ಇದ್ದರೂ ಡಿ.ಕೆ. ಶಿವಕುಮಾರ್‌ ಹಾಗೂ ಕೆಲವು ಸಚಿವರು ತೆಲಂಗಾಣಕ್ಕೆ ಹೋಗಿರುವ ವಿಚಾರ‌ದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.‌ ಅಶೋಕ್‌, ರಾಜ್ಯದಲ್ಲಿ ಬರ ಇದೆ‌. ಇಲ್ಲಿನ ರೈತರು ಬರಗಾಲದಲ್ಲಿ ಸಂಕಷ್ಟದಲ್ಲಿದ್ದರೂ ತೆಲಂಗಾಣಕ್ಕೆ ಹೋಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Election Results 2023: ಚುನಾವಣೆ ಗೆಲುವು; ಬಿಜೆಪಿ ಕಚೇರಿಯಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ; ಸಂಭ್ರಮ

ಲೋಕಸಭೆಯಲ್ಲೂ ಗ್ಯಾರಂಟಿ ಅಬ್ಬರ; ಜನ ತೀರ್ಮಾನ ಮಾಡ್ತಾರೆ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗ್ಯಾರಂಟಿ ಯೋಜನೆಗಳ ಅಬ್ಬರ ಬರಲಿದೆ. ಆದರೆ, ಜನ ತೀರ್ಮಾನ ಮಾಡುತ್ತಾರೆ. ಮೋದಿ ಸರ್ಕಾರ ಬೇಕಾ ಅಥವಾ ಮಮತಾ ಬ್ಯಾನರ್ಜಿ, ರಾಹುಲ್‌ನಂಥವರ ಸರ್ಕಾರ ಬೇಕಾ ಅಂತಾ ಜನ ತೀರ್ಮಾನ ಮಾಡಲಿ ಎಂದು ಆರ್.‌ ಅಶೋಕ್‌ ಹೇಳಿದರು.

Continue Reading

ಕರ್ನಾಟಕ

Telangana Results 2023 : ತೆಲಂಗಾಣದಲ್ಲಿ ಗೆದ್ದ‌ ಕೈ ಶಾಸಕರೆಲ್ಲರೂ ಹೈದರಾಬಾದ್‌ಗೆ ಶಿಫ್ಟ್

Telangana Results 2023 : ತೆಲಂಗಾಣದಲ್ಲಿ ಕಾಂಗ್ರೆಸ್‌ ವಿಜಯದ ಸನಿಹದಲ್ಲಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕರನ್ನು ಹೈದರಾಬಾದ್‌ ಗೆ ಬರುವಂತೆ ಸೂಚಿಸಲಾಗಿದೆ.

VISTARANEWS.COM


on

DK Shivakumar Telangana congress
ಹೈದರಾಬಾದ್‌ನ ಹೋಟೆಲ್‌ ಮುಂದೆ ಸಿದ್ಧವಾಗಿರುವ ಬಸ್‌ ಗಳು
Koo

ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana Results 2023) ಕಾಂಗ್ರೆಸ್‌ ಗೆಲುವಿನ ನಾಗಾಲೋಟದಲ್ಲಿದೆ. 119 ಕ್ಷೇತ್ರಗಳ ಪೈಕಿ 70ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಆಡಳಿತವನ್ನು ಕಳೆdದಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ಈ ಹಂತದಲ್ಲಿ ಕಾಂಗ್ರೆಸ್‌ ತನ್ನೆಲ್ಲ ಸಂಭಾವ್ಯ ಶಾಸಕರನ್ನು ಹೈದರಾಬಾದ್‌ ಗೆ ಕರೆಸಿಕೊಳ್ಳಲಾಗಿದೆ. ಒಂದು ವೇಳೆ ಇನ್ನು ಫಲಿತಾಂಶದಲ್ಲಿ ಏನಾದರೂ ಏರುಪೇರು ಉಂಟಾದರೆ ಪರಿಸ್ಥಿತಿಯನ್ನು ಎದುರಿಸಲು ಈ ತಂತ್ರಗಾರಿಕೆ ಮಾಡಲಾಗಿದೆ. ಗೆಲುವು ಸನಿಹದಲ್ಲೇ ಇದ್ದರೂ ನಿರ್ಲಕ್ಷ್ಯ ಮಾಡುವುದು ಬೇಡ ಎಂಬ ಕಾರಣಕ್ಕಾಗಿ ಎಲ್ಲರನ್ನು ಒಂದೇ ಕಡೆ ಸೇರಿಸುವ ಪ್ಲ್ಯಾನ್‌ ಮಾಡಲಾಗಿದೆ.

ಅತಂತ್ರ ಪರಿಸ್ಥಿತಿ ಅಥವಾ ಸರಳ ಬಹುಮತ ಬಂದರೆ ಚೆಸ್ ಗೇಮ್ ಆಡಲು ಕಳುಹಿಸಿಕೊಟ್ಟಿರುವ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವ ಕರ್ನಾಟಕ ಕಾಂಗ್ರೆಸ್ ಟೀಮ್ ಸಜ್ಜಾಗಿ ನಿಂತಿದೆ. ಒಂದು ವೇಳೆ ಅವಶ್ಯ ಬಿದ್ದರೆ ಕಾಂಗ್ರೆಸ್‌ ನ ಎಲ್ಲ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲು ಮೂರು ಬಸ್‌ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಡಿ.ಕೆ ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್, ನಾಗೇಂದ್ರ, ಬೋಸರಾಜು. ಕೆ ಜೆ ಜಾರ್ಜ್ , ಎಂ.ಸಿ ಸುಧಾಕರ್, ಶಾಸಕರಾದ ರಿಜ್ವಾನ್ ಅರ್ಷದ್, ಪ್ರಿಯಾಕೃಷ್ಣ, ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಸೇರಿ ಹಲವು ನಾಯಕರು ಈಗ ಹೈದರಾಬಾದ್‌ನಲ್ಲೇ ಬೀಡುಬಿಟ್ಟಿದ್ದಾರೆ.

ಒಂದೊಮ್ಮೆ ಅಗತ್ಯಬಿದ್ದರೆ ರೆಸಾರ್ಟ್‌ ಗೆ ಕರೆದುಕೊಂಡು ಹೋಗಲು ಕೂಡಾ ವ್ಯವಸ್ಥೆ ಮಾಡಲಾಗಿದೆ. ಹೈದರಾಬಾದ್‌ ನ ಹೋಟೆಲ್‌ ಮುಂದೆ ನಿಂತಿರುವ ಬಸ್‌ಗಳನ್ನು ಈ ಕಾರಣಕ್ಕಾಗಿಯೇ ಸಿದ್ಧಪಡಿಸಿ ಇಡಲಾಗಿದೆ.

ತೆಲಂಗಾಣದ ಈಗಿನ ಮುನ್ನಡೆ ಪ್ರವೃತ್ತಿ ಹೇಗಿದೆ?

119 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 70 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಬಿ.ಆರ್‌ಎಸ್‌ 37ರಲ್ಲಿ, ಬಿಜೆಪಿ ಎಂಟು ಮತ್ತು ಎಐಎಂಐಎಂ ನಾಲ್ಕರಲ್ಲಿ ಮುನ್ನಡೆ ಸಾಧಿಸಿದೆ.

Continue Reading
Advertisement
Crime Sense Murder Case
ಕರ್ನಾಟಕ5 mins ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ10 mins ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ24 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ26 mins ago

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Bobby Deol cries after paparazzi praise him as Animal
ಬಾಲಿವುಡ್29 mins ago

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

R Ashok
ಕರ್ನಾಟಕ42 mins ago

Election Results 2023 : ತೆಲಂಗಾಣ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಸೇವೆ ಮಾಡಿದ್ರೆ ಉಗ್ರ ಪ್ರತಿಭಟನೆ; ಆರ್.‌ ಅಶೋಕ್

Snehit Gowda and Namratha Gowda
ಬಿಗ್ ಬಾಸ್56 mins ago

BBK SEASON 10: ನಮ್ರತಾ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ ಎಂದ ಸ್ನೇಹಿತ್‌!

Narendra Modi
ದೇಶ1 hour ago

Election Results 2023: ಚುನಾವಣೆ ಗೆಲುವು; ಬಿಜೆಪಿ ಕಚೇರಿಯಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ; ಸಂಭ್ರಮ

DK Shivakumar Telangana congress
ಕರ್ನಾಟಕ1 hour ago

Telangana Results 2023 : ತೆಲಂಗಾಣದಲ್ಲಿ ಗೆದ್ದ‌ ಕೈ ಶಾಸಕರೆಲ್ಲರೂ ಹೈದರಾಬಾದ್‌ಗೆ ಶಿಫ್ಟ್

MLA T.B.Jayachandra spoke at the inauguration program of the new Para Medical College at Shira
ತುಮಕೂರು1 hour ago

Tumkur News: ಪ್ಯಾರಾ ಮೆಡಿಕಲ್ ಓದಿದವರಿಗೆ ವಿಫುಲ ಅವಕಾಶ: ಶಾಸಕ ಟಿ.ಬಿ.ಜಯಚಂದ್ರ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ24 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ7 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ19 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌