Karnataka Politics : ಡಿಕೆಶಿ ತಿಹಾರ್‌ ಜೈಲು ಪಾಲು ಎಂದ ಎಚ್‌ಡಿಕೆ ವಿರುದ್ಧ ಗುಡುಗಿದ ಡಿ.ಕೆ. ಬ್ರದರ್ಸ್‌! - Vistara News

ಕರ್ನಾಟಕ

Karnataka Politics : ಡಿಕೆಶಿ ತಿಹಾರ್‌ ಜೈಲು ಪಾಲು ಎಂದ ಎಚ್‌ಡಿಕೆ ವಿರುದ್ಧ ಗುಡುಗಿದ ಡಿ.ಕೆ. ಬ್ರದರ್ಸ್‌!

Karnataka Politics :
ಡಿ.ಕೆ. ಶಿವಕುಮಾರ್‌ ಜತೆ ಇನ್ನೆಂದೂ ಕೈಜೋಡಿಸಲಾರೆ. ಅವರು ತಿಹಾರ್‌ ಜೈಲಿಗೆ ಹೋಗುವುದು ಖಚಿತ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಸಹೋದರರು ಕಿಡಿಕಾರಿದ್ದಾರೆ. ಬೆದರಿಕೆಗೆ ಬಗ್ಗಲ್ಲ ಎಂದು ಡಿ.ಕೆ. ಸುರೇಶ್‌ ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

DK Suresh DK Shivakumar and HD Kumaraswamy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ ಜೈಲು ವಾರ್‌ (Jail War) ಪ್ರಾರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (KPCC president and Deputy CM DK Shivakumar) ಮುಂದಿನ ದಿನಗಳಲ್ಲಿ ತಿಹಾರ್‌ ಜೈಲಿಗೆ (Tihar Jail) ಹೋಗಬಹುದು ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಹೇಳಿಕೆಗೆ ಡಿಕೆ ಬ್ರದರ್ಸ್‌ ತಿರುಗಿಬಿದ್ದಿದ್ದಾರೆ. ಡಿ.ಕೆ. ಶಿವಕುಮಾರ್‌ ಮಾತನಾಡಿ, “ಹಿಂದೆ ಏನೋ ಪಾಪ ಮಾಡಿದ್ದರಲ್ಲ. ನನ್ನ‌ ತಂಗಿ, ನನ್ನ ತಮ್ಮ, ನನ್ನ‌ ಹೆಂಡತಿ ಮೇಲೆ ಕೇಸ್ ಹಾಕಿದ್ದರು. ಈ ಹಿಂದೆ ಸಿಎಂ ಆಗಿದ್ದನ್ನು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ. ಸಂಸದ ಡಿ.ಕೆ. ಸುರೇಶ್‌ ಪ್ರತಿಕ್ರಿಯೆ ನೀಡಿ, “ದೆಹಲಿಗೆ ಹೋದಾಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Home Minister Amit Shah) ಅವರಿಗೆ ಮನವಿ ಮಾಡಿ ಬಂದಿರಬೇಕು. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ” ಎಂದು ಗುಡುಗಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದೇನು?

ನನ್ನ ಜೀವನದಲ್ಲಿ ಡಿ.ಕೆ. ಶಿವಕುಮಾರ್‌ ಅವರ ಜತೆ ಎಂದೂ ರಾಜಿ ಆಗಲ್ಲ. ಒಮ್ಮೆ ಅವರ ಜತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸುತ್ತಾ ಇದ್ದೇನೆ. ಅವರು ಒಮ್ಮೆ ತಿಹಾರ್ ನೋಡಿಕೊಂಡು ಬಂದಿದ್ದಾರೆ. ಅವರು ಮತ್ತೆ ಅಲ್ಲಿಗೆ ಪರ್ಮನೆಂಟಾಗಿ ಹೋದರೂ ಅಚ್ಚರಿ ಅಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್‌ಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ಈಗ ಡಿ.ಕೆ. ಬ್ರದರ್ಸ್‌ ಆಕ್ರೋಶ ಹೊರಹಾಕಿದ್ದಾರೆ.

ಅವರ ಪ್ಲ್ಯಾನ್ ಏನಿದೆ ಎಂದು ಹೇಳುತ್ತಿದ್ದಾರೆ: ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಎಚ್‌.ಡಿ. ಕುಮಾರಸ್ವಾಮಿ ಅವರು‌ ಏನು ಹೇಳಿದ್ದಾರೆ ಎಂಬುದನ್ನು ಮೊದಲು ನೋಡುತ್ತೇನೆ. ಏನು‌ ಹೇಳಿದ್ದಾರೋ ಗೊತ್ತಿಲ್ಲ, ಅವರು ದೊಡ್ಡವರು. ಅವರ ನುಡಿಮುತ್ತುಗಳನ್ನು ನೋಡಿ ಉತ್ತರ ಕೊಡುತ್ತೇನೆ. ನನ್ನನ್ನು ಜೈಲಿಗೆ ಕಳುಹಿಸುವ ಬಗ್ಗೆ ಅವರ ಪ್ಲ್ಯಾನ್ ಏನಿದೆ ಎಂದು ಹೇಳುತ್ತಿದ್ದಾರೆ. ಏನೆಲ್ಲ ಮಾಡಲು‌ ಸಾಧ್ಯವೋ ಎಲ್ಲವನ್ನೂ ಹೇಳುತ್ತಿದ್ದಾರೆ. ಹಿಂದೆಯೂ ಪಾಪ ಮಾಡಿದ್ದರಲ್ಲ. ನನ್ನ‌ ತಂಗಿ, ನನ್ನ ತಮ್ಮ, ನನ್ನ‌ ಹೆಂಡತಿ ಮೇಲೆ ಕೇಸ್ ಹಾಕಿದ್ದರು. ಈ ಹಿಂದೆ ಸಿಎಂ ಆಗಿದ್ದನ್ನು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬೆದರಿಕೆಗೆ ನಾವು ಬಗ್ಗುವವರಲ್ಲ

ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ. ಶಿವಕುಮಾರ್‌ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿ ಅಂತ ದೆಹಲಿಗೆ ಹೋದಾಗ ಬಹುಶಃ ಇವರೇ ಅಮಿತ್ ಶಾಗೆ ರಿಕ್ವೆಸ್ಟ್ ಮಾಡಿಕೊಂಡು ಬಂದಿರಬೇಕು. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ. ಇವರ ದಾಖಲೆಗಳನ್ನು ಬಿಚ್ಚಿಡುವ ಸಮಯ ಬಂದರೆ ನಾವೂ ಸಿದ್ಧ. ಇವರ ಕನಸು ನನಸಾಗುವುದಿಲ್ಲ, ಕನಸು ಕನಸಾಗಿಯೇ ಉಳಿಯುತ್ತದೆ. ಜೆಡಿಎಸ್ ನಾಯಕರು ಎಲ್ಲೋ ಒಂದು ಕಡೆ ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಅವರ ಆಲೋಚನೆಗಳೆಲ್ಲ ಒಂದು ಕಡೆ ಕೇಂದ್ರಿಕೃತ ಆದಂತೆ ಕಾಣುತ್ತಿದೆ. ಕಾರ್ಯಕರ್ತರು ಇವರ ನಡೆ ನುಡಿ ನೋಡಿ ಅವರ ದಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಎಚ್‌ಡಿಕೆ ಹೇಳುವುದು ಸುಳ್ಳಿನ ಮಹಾ ಭಾಗ. ಸುಳ್ಳಿನಲ್ಲಿ ಎಚ್‌ಡಿಕೆ ಎಕ್ಸ್‌ಪರ್ಟ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: MLA Muniratna : ಶಾಸಕ ಮುನಿರತ್ನ ವಿರುದ್ಧ ಮಹಿಳೆಯಿಂದ ಹನಿಟ್ರ್ಯಾಪ್ ಬಾಂಬ್!

ಎಚ್‌.ಡಿ. ಕುಮಾರಸ್ವಾಮಿ ಅವರು ಯಾವ ಯಾವ ಸಂದರ್ಭದಲ್ಲಿ ಯಾರ ಜತೆಗೆ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವವರು ಅವರು. ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ವಿಚಾರ ಸುಳ್ಳು. ಮಂಡ್ಯದ ಜನರೇ ಅವರನ್ನು ತಿರಸ್ಕಾರ ಮಾಡಿದ್ದರು. ನಾವಲ್ಲ ತಿರಸ್ಕಾರ ಮಾಡಿದ್ದು. ಮಂಡ್ಯದಲ್ಲಿ ನಮ್ಮ ಕಾರ್ಯಕರ್ತರು ಏನು ಸಹಕಾರ ಕೊಡಬೇಕೋ ಅದನ್ನು ಕೊಟ್ಟಿದ್ದರು. ಮಂಡ್ಯದ ಜನರನ್ನೇ ಯಾಕೆ ಸೋಲಿಸಿದರು ಅಂತ ಕೇಳಬೇಕು. ಈಗ ಬಂದು ನಮ್ಮನ್ನು ಕೇಳಿದರೆ ಹೇಗೆ? ಎಂದು ಡಿ.ಕೆ. ಸುರೇಶ್‌ ಪ್ರಶ್ನೆ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಮಳೆ

Karnataka Rain : ನಿರಂತರ ಮಳೆಗೆ ಮನೆಗಳು ನೆಲಸಮ; ಕಾಲುವೆ ಒಡೆದು ಜಮೀನು ಜಲಾವೃತ

Karnataka Rain : ಭಾರಿ ವರ್ಷಧಾರೆಗೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಮನೆಗಳು ನೆಲಸಮವಾಗಿದ್ದು, ಕಾಲುವೆ ಒಡೆದು ಜಮೀನುಗಳು ಜಲಾವೃತಗೊಂಡಿದೆ.

VISTARANEWS.COM


on

By

karnataka Rain
Koo

ವಿಜಯನಗರ : ವಿಜಯನಗರದ ಹರಪನಹಳ್ಳಿ ತಾಲೂಕಿನಲ್ಲಿ ಮಳೆಯ ಅವಾಂತರ (Karnataka Rain ) ಮುಂದುವರಿದಿದೆ. ಮಳೆಯಿಂದಾಗಿ 10ಕ್ಕೂ ಹೆಚ್ಚು ಮನೆಗಳು ಕುಸಿದಿದೆ. ಬಂಡ್ರಿ ತಾಂಡದಲ್ಲಿ ಕೊಟ್ರಿಬಾಯಿ, ಚಿಗಟೇರಿಯಲ್ಲಿ ಉತ್ತಂಗಿ ದೀಪ, ಹಗರಿಗಜಾಪುರದಲ್ಲಿ ಶಂಭುಲಿಂಗಯ್ಯ ಎಂಬುವವರ ಮನೆಗೆ ಹಾನಿಯಾಗಿದೆ, ಕೂಲಹಳ್ಳಿ ಗುರುವಿನ ಬಸವರಾಜ, ಬಸವನಾಳು ಗ್ರಾಮ ಕೊಟ್ರೇಶ್‍, ಶ್ರೀಕಂಠಾಪುರದಲ್ಲಿ ಅಣ್ಣಪ್ಪ, ಕುಣೆಮಾದಿಹಳ್ಳಿ, ದಡಿಗಾರನಹಳ್ಳಿ, ಕೆಸರಹಳ್ಳಿ ಗ್ರಾಮದಲ್ಲಿ ತಲಾ ಒಂದು ಮನೆ, ಚಿಗಟೇರಿ ಹೋಬಳಿ 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಲಕ್ಷ್ಮಿಪುರದಲ್ಲಿ ಸಿಡಿಲು ಬಡಿದು ಹಸು ಮೃತಪಟ್ಟಿದೆ. ಮಾದಾಪುರ ಗ್ರಾಮದಲ್ಲಿನ ಕೆರೆ ಕೋಡಿ ಬಿದ್ದಿದೆ. ಕೂಲಹಳ್ಳಿ ಗ್ರಾಮದ ಐತಿಹಾಸಿಕ ಕೆರೆ ಭರ್ತಿಯಾಗುವ ಹಂತದಲ್ಲಿದೆ. ಹರಪನಹಳ್ಳಿ ಅಯ್ಯನಕೆರೆ, ಕಾಯಕದಹಳ್ಳಿ ರಸ್ತೆಯ ನಾಯಕನಕೆರೆಗೆ ಮಳೆ ನೀರಿಂದ ಭರ್ತಿ ಹಂತಕ್ಕೆ ತಲುಪಿದೆ.

ಮಂಡ್ಯದಲ್ಲೂ ಮಳೆ ಅವಾಂತರ

ಸತತವಾಗಿ ಸುರಿದ ಮಳೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಬಳಿ ಉಮರ್ ನಗರದ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡಿದೆ. ಮಳೆ ನೀರಿನಿಂದ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದೆ.
ಮೈಸೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ರಸ್ತೆ ಇದಾಗಿದೆ. ಅಂಡರ್ ಪಾಸ್ ರಸ್ತೆ ಜಲಾವೃತದಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಂಡರ್ ಪಾಸ್ ರಸ್ತೆ ದಾಟಲು ಬೈಕ್ ಸವಾರ ಪರದಾಡಿದರು. ಸಮಸ್ಯೆ ಸರಿಪಡಿಸಿದ ರೈಲ್ವೆ ಅಧಿಕಾರಿಗಳು ಹಾಗು ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೊಟ್ಟೂರು ಕೆರೆಯ ಕೋಡಿಯಲ್ಲಿ ಬಿರುಕು

ವಿಜಯನಗರದ ಕೊಟ್ಟೂರು ಕೆರೆಯ ಕೋಡಿಯಲ್ಲಿ ಬಿರುಕು ಬಿಟ್ಟಿದೆ. ನಿನ್ನೆ ರಾತ್ರಿ ಸಮೃದ್ಧ ಮಳೆಯಾಗಿ ಕೊಟ್ಟೂರು ಕೆರೆಗೆ ನೀರು ಬಂದಿದೆ. ಕೆರೆ ಕೋಡಿ ಬೀಳಲು ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿ ಇದೆ. ಇದೇ ರೀತಿ ಇನ್ನೆರಡು ಮಳೆಗಳು ಬಂದರೆ ಕೋಡಿ ಬೀಳಬಹುದು. ಈಗಾಗಲೇ ಕೊಡಿಯ ಗೋಡೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಹತ್ತಿದೆ. ಕೋಡಿ ತನ್ನ ಉದ್ದಕ್ಕೂ ಎಂಟು ಹತ್ತಿರ ಬಿರುಕು ಬಿಟ್ಟು ಇದರಿಂದ ನೀರು ಹೊರಗಡೆ ಹರಿಯುತ್ತಿದೆ. ಅದರಲ್ಲೂ ಕೋಡಿಯ ಪ್ರಮುಖ ಭಾಗದಲ್ಲಿ ನೀರು ಹೋಗುತ್ತದೆ. ಇದನ್ನು ಹೀಗೆ ಬಿಟ್ಟರೆ ಕೊಡಿಯೇ ಒಡೆದು ಹೋಗಿ ನೀರೆಲ್ಲಾ ಪೋಲಾಗುವುದು ಗ್ಯಾರಂಟಿ.

ವಿಜಯನಗರ ಜಿಲ್ಲೆಯಾದ್ಯಂತ‌ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಭಾರೀ‌‌ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ನೀರು ನುಗ್ಗಿ ಇಡೀ ಬಡಾವಣೆ ಕೆರೆಯಂತಾಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನರ ಪರದಾಡಿದರು. ದಿನಸಿ, ಕಿರಾಣಿ ವಸ್ತುಗಳು, ಸಂಪೂರ್ಣ ನೀರುಮಯವಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ವಿದ್ಯಾ ನಗರದಲ್ಲಿ ಘಟನೆ ನಡೆದಿದೆ. ಸಣ್ಣ ಕಾಲುವೆ ಮೂಲಕ ದೊಡ್ಡ ಕಾಲುವೆಗೆ ಸೇರಬೇಕಿದ್ದ ಮಳೆ‌ ನೀರು ಅವೈಜ್ಞಾನಿಕವಾಗಿ ಸಣ್ಣ ಕಾಲುವೆ ನಿರ್ಮಾಣ ಮಾಡಿದ ಹಿನ್ನೆಲೆ ಬಡಾವಣೆಗೆ ರಭಸವಾಗಿ ಹರಿದು ಬಂದು ಮನೆಗಳಿಗೆ ನುಗ್ಗಿ ಅವಾಂತರ‌ ಸೃಷ್ಟಿಯಾಗಿದೆ.

ಬೆಣ್ಣಿ ಹಳ್ಳದ ತೀರದಲ್ಲಿ ಭಾರಿ ಮಳೆ

ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕುರುಗೋವಿನಕೊಪ್ಪ ಗ್ರಾಮದಲ್ಲಿ 10 ಕುಟುಂಬದ 50 ಕ್ಕೂ ಹೆಚ್ಚು ಜನ ಸಿಲುಕಿ ಪರದಾಟ ಅನುಭವಿಸಿದರು. ಕುರುಗೋವಿನಕೊಪ್ಪ ಗ್ರಾಮ ಸುತ್ತುವರಿದ ಮಲಪ್ರಭಾ ನದಿ ನಡುಗಡ್ಡೆಯಾಗಿದೆ. ಬೆಣ್ಣಿಹಳ್ಳ ಉಕ್ಕಿ ಹರಿದು ಮಲಪ್ರಭಾ ನದಿ ಸೇರಿ ಅವಾಂತರವೇ ಸೃಷ್ಟಿಯಾಗಿದೆ. ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 50ಕ್ಕೂ ಹೆಚ್ಚು ಜನರು ಗ್ರಾಮದಲ್ಲಿ ಸಿಲುಕಿ ಪರದಾಡಿದ್ದರು. ಎಮ್ಮೆ, ಆಕಳು ಸೇರಿದಂತೆ ಮೂಕ ಪ್ರಾಣಿಗಳು ಗ್ರಾಮದಲ್ಲಿ ಸಿಲುಕಿಕೊಂಡಿವೆ. ಕ್ಷಣ ಕ್ಷಣಕ್ಕೂ ಮಲಪ್ರಭಾ ನದಿ ನೀರು ಏರುತ್ತಿದೆ. ಗ್ರಾಮದಲ್ಲಿ ಸಿಲುಕಿದ ಜನರಲ್ಲಿ ಆತಂಕ ಹೆಚ್ಚಿದೆ.

ಹಾವೇರಿಯಲ್ಲಿ ವರುಣ ಆರ್ಭಟ

ಹಾವೇರಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಮಳೆಯ ರೌದ್ರನರ್ತನಕ್ಕೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ಹೋಗಿದೆ. ಕಾಲುವೆ ಒಡೆದು ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಕಾಲುವೆ ಒಡೆದು ಎರಡು ದಿನ ಕಳೆದರು ದುರಸ್ತಿ ಕಾರ್ಯ ಆರಂಭವಾಗಿಲ್ಲ. ಕಾಲುವೆ ಸರಿಪಡಿಸಲು ಮುಂದಾಗದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕೊಚ್ಚಿ ಹೋದ ಸೇತುವೆ

ಕಳೆದ ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಗ್ರಾಮಸ್ಥರು ಹಗ್ಗದ ಸಹಾಯದಿಂದ ಕೊಚ್ಚಿ ಹೋದ ಸೇತುವೆಯನ್ನು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆಯ ಆಳ್ನಾವರ ತಾಲೂಕಿನ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಮಧ್ಯ ಇರುವ ಸೇತುವೆ ಇದಾಗಿದೆ. ಸದ್ಯ ಸೇತುವೆ ಕೊಚ್ಚಿಹೋಗಿರೋದರಿಂದ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಸಂಪರ್ಕ ಸ್ಥಗಿತಗೊಂಡಿದೆ. ಕಳೆದ 2019ರ ಪ್ರವಾಹದಲ್ಲಿ‌ ಸೇತುವೆ ಅರ್ಧ ಕೊಚ್ಚಿ ಹೋಗಿತ್ತು. ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಸಚಿವ ಸಂತೋಷ ಲಾಡ್ಗೆ‌ ಮನವಿ ಸಲ್ಲಿಸಿದ್ದರು. ಕಳೆದ 4 ದಿನಗಳಿಂದ ಸುರಿದ ಮಳೆಗೆ ಪೂರ್ತಿಯಾಗಿ ಸೇತುವೆ ಕೊಚ್ಚಿಹೋಗಿದೆ.

Continue Reading

ರಾಯಚೂರು

Road Accident : ರಾಯಚೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಸವಾರರಿಬ್ಬರು ಸಾವು

Road Accident : ರಾಯಚೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಸವಾರರಿಬ್ಬರು ಮೃತಪಟ್ಟಿದ್ದಾರೆ. ಮೈಸೂರು-ಮಂಡ್ಯದಲ್ಲೂ ಅಪಘಾತ ಸಂಭವಿಸಿದೆ.

VISTARANEWS.COM


on

By

Road Accident
Koo

ರಾಯಚೂರಿನ ಹೊರವಲಯದ ವೈಟಿಪಿಎಸ್ ವಿದ್ಯುತ್ ಕೇಂದ್ರದ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ. ಜನಾರ್ದನ (27) ಮೃತ ಬೈಕ್ ಸವಾರ, ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ರಾಯಚೂರು – ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಅವಘಡ

ವಿಜಯನಗರ: ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಎರಡು ಅವಘಡಗಳು ತಪ್ಪಿದೆ. ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಯುವಕ ಪಾರಾಗಿದ್ದಾನೆ. ರಭಸವಾಗಿ ಓಡೋ ಎತ್ತಿನ ಬಂಡಿಯಿಂದ ಕೆಳಗೆ ಬಿದ್ದ ಯುವಕ ರಸ್ತೆ ಮೇಲೆ ಜಾರಿಕೊಂಡು ಹೋಗಿದ್ದಾನೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತಗಳು ತಪ್ಪಿದೆ. ವಿಜಯದಶಮಿ ಹಬ್ಬದ ನಿಮಿತ್ತ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಬೆಲ್ಲದ ಬಂಡಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಬಂಡಿ ಓಡಿಸುವ ಸ್ಪರ್ಧೆ ವೇಳೆ ಎತ್ತುಗಳು ರಭಸವಾಗಿ ಓಡುತ್ತಿದ್ದಾಗ ರಸ್ತೆಯ ಬಂಡಿ ತಿವುದು ಮಾರುದ್ದ ಹಾರಿ ಯುವಕ ಬಿದ್ದಿದ್ದ. ಕೂದಲೆಳೆ ಅಂತರದಲ್ಲಿ ಎತ್ತಿನ ಬಂಡಿಯ ಚಕ್ರದಡಿಯಿಂದ ಪಾರಾಗಿದ್ದಾನೆ.

ಮೈಸೂರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ

ಮೈಸೂರಿನ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆ ಪೂರ್ಣಚಂದ್ರ ತೇಜಸ್ವಿ ವೃತ್ತದಲ್ಲಿ ಅಪಘಾತ ನಡೆದಿದೆ. ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಸವಾರರಿಗೆ ಗಂಭೀರ ಗಾಯವಾಗಿದೆ. ಭಾನುವಾರ ಮುಂಜಾನೆ ಇದೇ ವೃತ್ತದಲ್ಲಿ ಮತ್ತೊಂದು ಅಪಘಾತ ನಡೆದಿತ್ತು. ಇದೀಗ ಮತ್ತೊಂದು ಅಪಘಾತ ಸಂಭವಿಸಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂಬದಿ ಕುಳಿತ್ತಿದ್ದ ಸವಾರರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ. ಅವೈಜ್ಞಾನಿಕವಾಗಿ ಹಾಕಲಾಗಿರುವ ಡಿವೈಡರ್ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೈಕ್‌-ಕಾರು ಅಪಘಾತದಲ್ಲಿ ಕಾಲು ಮುರಿದುಕೊಂಡ ಸವಾರ

ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ಅಂಡರ್ ಪಾಸ್ ಬಳಿ ಅಪಘಾತ ನಡೆದಿದೆ. ಕಾರು-ಬೈಕ್ ನಡುವೆ ಅಪಘಾತದಿಂದ ಬೈಕ್ ಸವಾರನಿಗೆ ಕಾಲು ಮುರಿದಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ. ಹಂಪ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Continue Reading

ಶಿವಮೊಗ್ಗ

Road Accident: ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪಲ್ಟಿ; ಯುವಕ ಸಾವು, ಹಲವರು ಗಂಭೀರ

Road Accident: ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪಲ್ಟಿಯಾಗಿ ಯುವಕನೊಬ್ಬ ಮೃತಪಟ್ಟರೆ, ಹಲವರು ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Road Accident
Koo

ಶಿವಮೊಗ್ಗ: ಶಿವಮೊಗ್ಗದ ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು (Road Accident) ಪಲ್ಟಿಯಾಗಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಯುವಕ ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಭತ್ತದ ಗದ್ದೆಗೆ ಪಲ್ಟಿಯಾಗಿದೆ. ಪರಿಣಾಮ ಬೆಂಗಳೂರಿನ ನೆಲಮಂಗಲ ಮೂಲಕ ಚಂದನ್‌ (26) ಎಂಬಾತ ಮೃತಪಟ್ಟಿದ್ದಾನೆ.

ಕೊಡುಗು ಮೂಲದ ನಂದನ್‌, ಕೋಲಾರದ ಕೋದಂಡ, ಹಾಸನದ ಭರತ್‌, ಮಂಡ್ಯ ಜಿಲ್ಲೆಯ ಯೋಗೇಶ್‌ ಎಂಬುವವರಿಗೆ ಗಂಭೀರ ಗಾಯವಾಗಿದೆ. ಯುವಕರ ತಂಡ ಬೆಂಗಳೂರಿನಿಂದ ಸಿಗಂದೂರಿಗೆ ಪ್ರವಾಸಕ್ಕೆ ಬಂದಿದ್ದರು. ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟರೆ, ಉಳಿದವರಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕ ಬಲಿ

ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ಬಲಿಯಾಗಿದ್ದಾನೆ. ನಿಲ್ಲಿಸಿದ ಸ್ಕೂಟಿಗೆ ಬಾಲಕನ ಕೈ ಟಚ್ ಆಗಿ ರಸ್ತೆಗೆ ಬಿದ್ದವನ ಮೇಲೆ ಟೆಂಪೋ ಹರಿದಿದೆ. ಚಾಮರಾಜಪೇಟೆಯ ಗುಡ್ಡಳ್ಳಿಯಲ್ಲಿ ಅಪಘಾತ ಸಂಭವಿಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಳು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

ಧಾರವಾಡದಲ್ಲಿ ಹೊತ್ತಿ ಉರಿದ ಕಾರು

ಧಾರವಾಡದ ಸತ್ತೂರು ಬಳಿ ಹುಂಡೈ ಟಿ20 ಕಾರೊಂದು ಬೆಂಕಿಗೆ ಆಹುತಿ ಆಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿರುವ ಶಂಕೆ ಇದೆ. ಧಾರವಾಡ ಮೂಲದವರ ಕಾರು ಎಂದು ತಿಳಿದು ಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕಾರಿನಿಂದ ಹೊರಬಂದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಯುವತಿ ಸಾವು

ವಿಜಯದಶಮಿ ದಿನ ತಾತನಿಗೆ ಬನ್ನಿ ಕೊಡಲು ತೆರಳಿದ್ದ ಮೊಮ್ಮಕ್ಕಳ ಬಾಳಲ್ಲಿ ದುರಂತ ನಡೆದಿದೆ. ರಾಯಚೂರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಓರ್ವ ಯುವತಿ ಮೃತಪಟ್ಟರೆ, ಮತ್ತೋರ್ವ ಯುವತಿಗೆ ಗಂಭೀರ ಗಾಯವಾಗಿದೆ. ರಾಯಚೂರು ನಗರದ ಡಿಸಿ ಬಂಗಲೆ ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಸಾಕ್ಷಿ (20) ಎಂಬಾಕೆ ಮೃತಪಟ್ಟರೆ, ಸಂಜನಾ ಎಂಬಾಕೆಗೆ ಗಂಭೀರ ಗಾಯವಾಗಿದೆ.

ಸಂಜನಾ ಮತ್ತು ಸಾಕ್ಷಿ ತಡರಾತ್ರಿ ತಾತನ ಮನೆಗೆ ಬನ್ನಿ ಕೊಡಲು ತೆರಳಿದ್ದರು. ಬನ್ನಿ ಕೊಟ್ಟು ವಾಪಸ್ ಸ್ಕೂಟರ್‌ ಬರುವ ವೇಳೆ ರೋಡ್ ಕ್ರಾಸ್ ಮಾಡುವಾಗ ಬಸವೇಶ್ವರ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಸ್ವಿಪ್ಟ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ನ ಹಿಂದೆ ಕುಳಿತಿದ್ದ ಸಾಕ್ಷಿ, ಕಾರಿನ ಮೇಲೆ ಬಿದ್ದು ಮೃತಪಟ್ಟಿದ್ದಾಳೆ. ಅಪಘಾತದ ಬಳಿಕ ಕಾರು ಬಿಟ್ಟು ಎಸ್ಕೇಪ್ ಕಾರು ಚಾಲಕ ಎಸ್ಕೇಪ್‌ ಆಗಿದ್ದಾನೆ. ರಾಯಚೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಬೆಂಗಳೂರು

MLA Muniratna: ಮುನಿರತ್ನ ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್; ತನಿಖೆಯಲ್ಲಿ ಬಯಲಾಯ್ತು ಪ್ರಭಾವಿ ನಾಯಕರ ಹೆಸರು

MLA Muniratna: ಮುನಿರತ್ನ ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ತನಿಖೆಯಲ್ಲಿ ಪ್ರಭಾವಿ ನಾಯಕರ ಹೆಸರುಗಳು ಬಯಲಾಗಿವೆ.

VISTARANEWS.COM


on

By

Munirathnas honeytrap case gets a twist Names of influential leaders revealed in probe
Koo

ಬೆಂಗಳೂರು: ಶಾಸಕ ಮುನಿರತ್ನ (MLA Muniratna) ಹನಿ ಟ್ರ್ಯಾಪ್ ಕೇಸ್ ದಿನೆದಿನೇ ತಿರುವು ಪಡೆದುಕೊಳ್ಳುತ್ತಾ ಹೋಗುತ್ತಿದೆ. ಮುನಿರತ್ನ ಸದ್ಯ ಎಸ್ಐಟಿ ಕಸ್ಟಡಿಯಲ್ಲಿದ್ದರೆ, ಅತ್ತ ವಿಚಾರಣೆ ವಿಭಿನ್ನ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಸಂತ್ರಸ್ತೆಯ ಹೇಳಿಕೆ ದಾಖಲಿಸಿರುವ ಅಧಿಕಾರಿಗಳು ಆ ಹೇಳಿಕೆ ಮೇರೆಗೆ ಹಲವು ಗಣ್ಯರಿಗೆ ನೋಟಿಸ್ ನೀಡಲಿದ್ದಾರೆ. ಹಾಗಾದರೆ ಈ ಪ್ರಕರಣದಲ್ಲಿ ಮುನಿರತ್ನ ಜತೆ ಕೈಜೋಡಿಸಿದ ಆ ರಾಜಕಾರಣಿಗಳು ಯಾರು?

ಎಸ್ಐಟಿ ಅಧಿಕಾರಿಗಳಿಂದ ಹನಿಟ್ರ್ಯಾಪ್ ಕೇಸ್ ತನಿಖೆ ಚುರುಕುಗೊಂಡಿದೆ. ಪ್ರಕರಣ ಸಂಬಂಧ ಶಾಸಕ ಮುನಿರತ್ನ ವಿಚಾರಣೆ ಅನುಭವಿಸುತ್ತಿದ್ದರೆ, ಅತ್ತ ಸಂತ್ರಸ್ತೆ ವಿಚಾರಣೆಯಲ್ಲಿ ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದು, ಪ್ರಕರಣದಲ್ಲಿ ಮುನಿರತ್ನ ಜತೆಗೆ ಇನ್ನು ಹಲವರು ಭಾಗಿಯಾಗಿದ್ದರು. ಅದರಲ್ಲಿ ಹಲವು ಅಧಿಕಾರಿಗಳು, ಮಾಜಿ ಕಾರ್ಪೋರೇಟರ್‌ಗಳು, ರಾಜಕಾರಣಿಗಳು ಈ ಹನಿ ಟ್ರ್ಯಾಪ್‌ನಲ್ಲಿ ಶಾಮಿಲಾಗಿದ್ದಾರೆ ಎಂದಿದ್ದಾಳೆ. ಸದ್ಯ ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಆ ಪ್ರಬಲ ವ್ಯಕ್ತಿಗಳಿಗೆ ನೋಟಿಸ್ ನೀಡಲಿದ್ದಾರೆ.

ಇನ್ನು ಮುನಿರತ್ನ ಸಂಬಂಧ ಹೇಳಿಕೆ ದಾಖಲಿಸುವಾಗ ಖುದ್ದು ಸಂತ್ರಸ್ಥ ಮಹಿಳೆಯಿಂದಲೇ ಹೆಸರು ಉಲ್ಲೇಖ ಆಗಿದೆ. ಈ ಟ್ರ್ಯಾಪ್‌ನಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂದು ಪ್ರಭಾವಿಗಳ ಹೆಸರನ್ನು ಹೇಳಿದ್ದಾರೆ. ಸದ್ಯ ಈ ಬಗ್ಗೆ ಎಸ್ಐಟಿ ಕೆಲ ಮಾಜಿ ಕಾರ್ಪೋರೇಟರ್‌ಗಳಿಗೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚನೆ ನೀಡುವ ಸಾಧ್ಯತೆ ಇದೆ. ಕಾರ್ಪೋರೇಟರ್‌ ಜತೆಗೆ ಅಧಿಕಾರಿಗಳಲ್ಲದೆ ಪ್ರಭಾವಿ ರಾಜಕಾರಣಿಗಳು ಸಹ ಈ ಕೇಸ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದು, ಈ ಬಗ್ಗೆ ಎಸ್ಐಟಿ ಆ ರಾಜಕಾರಣಿಗಳಿಗೆ ನೋಟಿಸ್ ನೀಡುವ ಮುನ್ನ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ.

ಇದೆಲ್ಲ ಒಂದು ಕಡೆಯಾದರೆ ಅತ್ಯಾಚಾರ ಕೇಸ್‌ನ ತನಿಖೆ ಜತೆಗೆ ಹನಿಟ್ರ್ಯಾಪ್ ಕೇಸ್‌ನ ಮೂಲಕ್ಕೆ ಕೈ ಹಾಕಿರುವ ಎಸ್ಐಟಿ ಅಧಿಕಾರಿಗಳು ಮುನಿರತ್ನರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಸಂತ್ರಸ್ತೆ ಹೇಳಿಕೆ‌ ಸಂಚಲನಕ್ಕೆ ಕಾರಣವಾಗಿದ್ದು, ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಯುತ್ತಿದೆ.

Continue Reading
Advertisement
karnataka Rain
ಮಳೆ6 ಗಂಟೆಗಳು ago

Karnataka Rain : ನಿರಂತರ ಮಳೆಗೆ ಮನೆಗಳು ನೆಲಸಮ; ಕಾಲುವೆ ಒಡೆದು ಜಮೀನು ಜಲಾವೃತ

Road Accident
ರಾಯಚೂರು7 ಗಂಟೆಗಳು ago

Road Accident : ರಾಯಚೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಸವಾರರಿಬ್ಬರು ಸಾವು

Road Accident
ಶಿವಮೊಗ್ಗ8 ಗಂಟೆಗಳು ago

Road Accident: ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪಲ್ಟಿ; ಯುವಕ ಸಾವು, ಹಲವರು ಗಂಭೀರ

Munirathnas honeytrap case gets a twist Names of influential leaders revealed in probe
ಬೆಂಗಳೂರು10 ಗಂಟೆಗಳು ago

MLA Muniratna: ಮುನಿರತ್ನ ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್; ತನಿಖೆಯಲ್ಲಿ ಬಯಲಾಯ್ತು ಪ್ರಭಾವಿ ನಾಯಕರ ಹೆಸರು

Murder case
ಬೆಂಗಳೂರು ಗ್ರಾಮಾಂತರ10 ಗಂಟೆಗಳು ago

Murder Case : ಬನ್ನೇರುಘಟ್ಟದಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ

Actor Darshan suffers from back pain
ಬೆಂಗಳೂರು10 ಗಂಟೆಗಳು ago

Actor Darshan : ನಟ ದರ್ಶನ್‌ಗೆ ಬಿಟ್ಟು ಬಿಡದೆ ಕಾಡುತ್ತಿದೆ ಬೆನ್ನು ನೋವು; ನಾಳೆ ಆರು ಮಂದಿಯ ಬೇಲ್‌ ಭವಿಷ್ಯ

Spider detection A new species of spider found on the banks of Jayamangali river
ತುಮಕೂರು11 ಗಂಟೆಗಳು ago

Spider detection : ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆ

Dina Bhavishya
ಭವಿಷ್ಯ18 ಗಂಟೆಗಳು ago

Dina Bhavishya : ಈ ದಿನ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ

BSA motorcycles
ಆಟೋಮೊಬೈಲ್1 ದಿನ ago

BSA motorcycles : ‌ಬೆಂಗಳೂರಿಗೆ ಲಗ್ಗೆ ಇಟ್ಟ ಬಿಎಸ್ಎ ಗೋಲ್ಡ್‌ ಸ್ಟಾರ್

bwssb
ಬೆಂಗಳೂರು1 ದಿನ ago

BWSSB : ಬೆಂಗಳೂರಿಗರ ಬಹು ದಿನಗಳ ಕನಸು- ನನಸು; ಅಕ್ಟೋಬರ್ 16ರಂದು ಕಾವೇರಿ ಐದನೇ ಹಂತ ಲೋಕಾರ್ಪಣೆ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌