Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ - Vistara News

ರಾಜಕೀಯ

Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

Mallikarjun Kharge: ಚುನಾವಣಾ ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಸ್ವಸ್ಥಗೊಂಡಿದ್ದಾರೆ.

VISTARANEWS.COM


on

Mallikarjun Kharge falls ill on stage while delivering his speech
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ್‌ ಖರ್ಗೆ (Mallikarjun Kharge) ವೇದಿಕೆ ಮೇಲೆಯೇ ತೀವ್ರ ಅಸ್ವಸ್ಥಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಕಥುವಾನಲ್ಲಿ ಚುನಾವಣೆ ಪ್ರಚಾರದ ಭಾಗವಾಗಿ ಭಾಷಣ ಮಾಡುತ್ತಿದ್ದ ವೇಳೆ 83 ವರ್ಷದ ಮಲ್ಲಿಕಾರ್ಜುನ್‌ ಖರ್ಗೆ ಅಸ್ವಸ್ಥಗೊಂಡಿದ್ದರು. ಭಾಷಣ ಮಾಡಲಾಗದೆ ಕುಸಿಯುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್‌ ನಾಯಕರು ಖರ್ಗೆ ನೆರವಿಗೆ ಧಾವಿಸಿದ್ರು. ನೀರು ಕುಡಿದು ಸುಧಾರಿಸಿಕೊಂಡ ಮಲ್ಲಿಕಾರ್ಜುನ್‌ ಖರ್ಗೆ ತಮ್ಮ ಭಾಷಣವನ್ನು ಮುಂದುವರಿಸಿದರು. ವಿಶ್ರಾಂತಿ ಇಲ್ಲದೇ ನಿರಂತರವಾಗಿ ಪಕ್ಷದ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಆಯಾಸಗೊಂಡಿದ್ದರು ಎನ್ನಲಾಗಿದೆ. ಚುನಾವಣೆ ನಿಮಿತ್ತ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಹೀಗಾಗಿ ಅಸ್ವಸ್ಥಗೊಂಡಿದ್ದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಕೊನೆಯ ಹಂತದ ಚುನಾವಣೆಯ ಕಸರತ್ತು ನಡೆದಿದೆ. ಅಕ್ಟೋಬರ್‌ 1ರಂದು ಮೂರನೇ ಹಂತದ ಮತದಾನವು ನಡೆಯಲಿದೆ. ಈ ಕೊನೆ ಹಂತದ ಚುನಾವಣೆಯಲ್ಲಿ 40 ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ಇದ್ದು, ಮೂರನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ನಾಳೆಯಿಂದ ಪಕ್ಷಗಳು ಮನೆ ಮನೆ ಪ್ರಚಾರ ನಡೆಸಲಿವೆ. ಮೊದಲೆರಡು ಹಂತದ ಚುನವಾಣೆಗಳು ಶಾಂತಿಯುತವಾಗಿ ನಡೆದಿದೆ. ಹೀಗಾಗಿ ಕೊನೆಯ ಹಂತದ ಚುನಾವಣೆ ಕೂಡ ಶಾಂತಿಯುತವಾಗಿ ನಡೆಸಲು ಪೊಲೀಸರು, ಚುನಾವಣಾ ಆಯೋಗದಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕರ್ನಾಟಕ

Pralhad Joshi : ಎಚ್‌ಡಿಕೆ ಬಗ್ಗೆ ಹಂದಿ ಪದ ಬಳಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗರಂ

Pralhad Joshi : ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಬಗ್ಗೆ ಹಂದಿ ಪದ ಬಳಸಿದ ಲೋಕಾಯುಕ್ತ ಎಡಿಜಿಪಿ ಕ್ಷಮಾಪಣೆ ಕೇಳದೆ ಇದ್ದರೆ, ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆ ಎಂದು ಜೋಶಿ ಕಿಡಿಕಾರಿದ್ದಾರೆ.

VISTARANEWS.COM


on

By

Union Minister Pralhad Joshi slams Lokayukta ADGP for using pig word against HD Kumaraswamy
Koo

ಹುಬ್ಬಳ್ಳಿ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ “ಹಂದಿ” ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಎಚ್ಚರಿಸಿದ್ದಾರೆ. ಈ ಲೋಕಾಯುಕ್ತ ಎಡಿಜಿಪಿಗೆ ಏನಾದರೂ ಸರ್ವೀಸ್ ಕಂಡಕ್ಟ್ ರೂಲ್ ಬಗ್ಗೆ ಜ್ಞಾನವಿದ್ದರೆ ತಕ್ಷಣ ಕ್ಷಮಾಪಣೆ ಕೇಳಲಿ ಎಂದು ಸೂಚಿಸಿದರು.

ಒಬ್ಬ ಜನಪ್ರತಿನಿಧಿ, ಅದರಲ್ಲೂ ಕೇಂದ್ರ ಸಚಿವರ ಬಗ್ಗೆ ಹೀಗೆ ಅಸಭ್ಯ ಭಾಷೆಯಲ್ಲಿ, ಕೆಟ್ಟ ಪದ ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೇಡರ್ ಕಂಟ್ರೋಲ್ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು. ಕುಮಾರಸ್ವಾಮಿ ಅವರು ಯಾವತ್ತೂ ಯಾರ ಬಗ್ಗೆಯೂ ಹೀಗೆ ಅಸಭ್ಯ ಭಾಷೆ ಬಳಸಿದವರಲ್ಲ. ಈ ಅಧಿಕಾರಿ ಬಗ್ಗೆಯೂ ಹಾಗೆಲ್ಲ ಏಕವಚನದಲ್ಲಿ ಮಾತನಾಡಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.

ಎಡಿಜಿಪಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ

ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪದದಲ್ಲಿ ಸಂಬೋಧನೆ ಮಾಡಿರುವುದು ಅಧಿಕಾರಿಯ ಅಹಂಕಾರದ ಪರಮಾವಧಿಯಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಜೋಶಿ ಎಚ್ಚರಿಸಿದರು. ಸರ್ಕಾರದ ಆದೇಶವಿದ್ದರೆ ತನಿಖೆ ನಡೆಸಲಿ. ಎಚ್ಡಿಕೆ ಆರೋಪ ಮಾಡಿದ್ದರೆ ಗೌರವಯುತ ಭಾಷೆಯಲ್ಲಿ, ಸಭ್ಯ ಪದಗಳಲ್ಲಿ ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಈ ರೀತಿ ಕೆಟ್ಟದಾಗಿ ಸಂಬೋಧಿಸುವುದು ಯಾವುದೇ ಅಧಿಕಾರಿಗಳಿಗೂ ಶೋಭೆ ತರುವುದಿಲ್ಲ ಎಂದು ಸಚಿವ ಜೋಶಿ ಹೇಳಿದರು.

ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ

ಒಬ್ಬ ಜನಪ್ರತಿನಿಧಿ ಬಗ್ಗೆ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದು ಕಾಂಗ್ರೆಸ್ಗೆ ಮುಳುವಾಗಲಿದೆ. ಕಾಂಗ್ರೆಸ್ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆಯಲ್ಲ! ಎಂದು ಕಿಡಿ ಕಾರಿದರು. ರಾಜ್ಯದಲ್ಲಿ ಈ ಸರ್ಕಾರವೇ ಶಾಶ್ವತವಾಗಿ ಇರೋದಿಲ್ಲ. ಸ್ವಲ್ಪ ಎಚ್ಚರ ವಹಿಸಿ ಮಾತನಾಡಿ, ಕೆಲಸ ಮಾಡಿ ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ಗೆ ಕೇಂದ್ರ ಸಚಿವ ಜೋಶಿ ಚಾಟಿ ಬೀಸಿದರು.

Continue Reading

ರಾಜಕೀಯ

CM Siddaramaiah : ಸಿದ್ದರಾಮಯ್ಯರಿಗೆ ಟೆನ್ಶನ್ ಶುರು; ಸ್ವಪಕ್ಷ- ವಿಪಕ್ಷ ನಾಯಕರ ನಡೆ- ನುಡಿಗಳ ಮೇಲೆ ಕಣ್ಣಿಡುವ ಸ್ಥಿತಿ

CM Siddaramaiah : ಸಿಎಂ ಸಿದ್ದರಾಮಯ್ಯರಿಗೆ ಟೆನ್ಶನ್ ಶುರುವಾಗಿದ್ದು, ಸ್ವಪಕ್ಷ- ವಿಪಕ್ಷ ನಾಯಕರ ನಡೆ- ನುಡಿಗಳ ಮೇಲೆ ಕಣ್ಣಿಡುವ ಸ್ಥಿತಿ ಎದುರಾಗಿದೆ.

VISTARANEWS.COM


on

By

CM Siddaramaiah eye on the actions leaders of the opposition
Koo

ಬೆಂಗಳೂರು: ಮೂಡಾ ಪ್ರಕರಣದಲ್ಲಿ ಸಿಎಂ ವಿರುದ್ಧದ ಪ್ರಾಥಮಿಕ ಹಂತದ ತ‌ನಿಖೆಗೆ ಹೈಕೋರ್ಟ್‌ ಅಸ್ತು ಎಂದಿತ್ತು. ಮುಡಾದ ಭೂಕಬಳಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ A1 ಆರೋಪಿ (CM Siddaramaiah) ಆಗಿದ್ದು, ಐಪಿಸಿ ಸೆಕ್ಷನ್ 420, 120B, 166, 403,126, 465,468, 340, 351 ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಇತ್ತ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಟೆನ್ಶನ್ ಹೆಚ್ಚಾಗಿದೆ. ಸ್ವಪಕ್ಷ- ವಿಪಕ್ಷ ನಾಯಕರ ನಡೆ- ನುಡಿಗಳ ಮೇಲೆ ಕಣ್ಣಿಡುವ ಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ಹಾಕಿಸುವಲ್ಲಿ ವಿಪಕ್ಷಗಳು ಒಂದು ಹಂತದ ಸಕ್ಸಸ್ ಆಗಿವೆ. ಇತ್ತ ರಾಜಕೀಯವಾಗಿ ಸಿಎಂ ಬೆನ್ನಿಗೆ ನಾವಿದ್ದೇವೆ ಎಂದು ಶಾಸಕರು, ಸಚಿವರು ಹೈಕಮಾಂಡ್ ನಾಯಕರಿಂದ ಸಂದೇಶ ರವಾನೆ ಆಗಿದೆ. ಆದರೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯೇ ಬೇರೆ. ರಾಜಕೀಯದಲ್ಲಿ ಯಾರು ಸಹ ಸನ್ಯಾಸಿಗಳಲ್ಲ ಎನ್ನುವ ಪರಿಸ್ಥಿತಿ ಇದೆ.

ನಾಯಕರು ದಿನಕ್ಕೊಂದು ಹೇಳಿಕೆಗಳ ಮೂಲಕ ಪರೋಕ್ಷವಾಗಿ ಮುನ್ಸೂಚನೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎನ್ನುವ ಚರ್ಚೆ ಇದೆ. ಪಕ್ಷಕ್ಕೆ ಮುಜುಗರ ತಪ್ಪಿಸಲು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ತನಿಖೆ ಬಳಿಕ ಮತ್ತೆ ಸಿಎಂ ಆಗಲಿ ಎಂದು ಕೆಬಿ ಕೋಳಿವಾಡ ಹೇಳಿದ್ದರು.

ಮತ್ತೊಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಇಂದು ಇರಬಹುದು, ನಾಳೆ ಇಲ್ಲದೆಯೂ ಇರಬಹುದು. ಪಕ್ಷ ಶಾಶ್ವತವಾಗಿ ಮುಂದುವರೆಯುತ್ತದೆ ಎಂದಿದ್ದರು. ಇತ್ತ ಡಿಸಿಎಂ ಡಿಕೆ ಶಿವಕುಮಾರ್‌ ಪರೋಕ್ಷವಾಗಿ ಸಿಎಂ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ. ನಾನು ರಾಜ್ಯದ ಸೇವೆ ಮಾಡಬೇಕೆಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ರಾಜ್ಯದ ಸೇವೆ ಮಾಡಲು ನನ್ನ ಹೋರಾಟ ನಡೆಯುತ್ತಿದೆ. ಹೀಗೆ ಹೇಳಿದರೆ ಮಾಧ್ಯಮದವರು ಬೇರೆ ರೀತಿ ಬಿಂಬಿಸುತ್ತಾರೆ. ಯಾರು ಏನು ಬೇಕಾದರೂ ಬಿಂಬಿಸಲಿ ಸೇವೆ ಮಾಡ್ತೇನೆ ಎಂದಿದ್ದರು.

ಮುಡಾ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ

ಮುಡಾ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ನಾನು ಕಾನೂನು, ರಾಜಕೀಯ ಹೋರಾಟ ಮಾಡ್ತೇನೆ. ಪ್ರತಿಪಕ್ಷಗಳಿಗೆ ಪ್ರತ್ಯುತ್ತರ ನೀವು ಕೊಡಿ ಎಂದು ಆಪ್ತ ಶಾಸಕರು, ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಸಿಎಂ ಸೂಚನೆ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ, ಜೆಡಿಎಸ್- ವಿರುದ್ಧ ಮುಗಿಬಿದ್ದಿದ್ದರುವ ನಾಯಕರು ಮೋದಿ, ಅಮಿತ್ ಶಾ , ಎಚ್‌ಡಿ ಕುಮಾರಸ್ವಾಮಿ ಆರೋಪಗಳು ಕೇಳಿ ಬಂದಾಗ ರಾಜೀನಾಮೆ ಕೊಟ್ರಾ ಎಂದು ಕೈ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.

ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಲೋಕಾಯುಕ್ತ ಪೊಲೀಸರು

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇಂದು ಭಾನುವಾರ ರಜೆ, ನಾಳೆ ಸೋಮವಾರ ಸಿಎಂ ಕಾನೂನು ನಡೆ ಬಹಿರಂಗವಾಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡಲು ಚಿಂತನೆ ನಡೆದಿದೆ. ಭಾನುವಾರದ ರಜೆ ದಿನವಾದ ಕಾರಣ ಕಚೇರಿಗೆ ಬೀಗ ಹಾಕಲಾಗಿದೆ. ಇಂದು ಅಧಿಕಾರಿಗಳು ಕಚೇರಿಗೆ ಬರೋದು ಅನುಮಾನವಾಗಿದೆ.

ಒಂದೆಡೆ ಲೋಕಾಯುಕ್ತ ತನಿಖೆ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಲಿದ್ದು, ತನಿಖೆಯನ್ನು ಸಿಬಿಐ ವಹಿಸುವಂತೆ ಕೋರ್ಟ್‌ಗೆ ಮನವಿ ಮಾಡಲಿದ್ದಾರೆ. ಮತ್ತೊಂದೆಡೆ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

Continue Reading

ಪ್ರಮುಖ ಸುದ್ದಿ

Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು

Actor Darshan : ದರ್ಶನ್ ಬಿಡುಗಡೆ ಬಗ್ಗೆ ಜ್ಯೋತಿಷ್ಯ ಹೇಳುತ್ತಿರುವಾಗಲೇ ತಾಯಿ ಮೂಕಾಂಬಿಕಾ ದೇವಿ ಬಲಗಡೆ ಹೂ ಪ್ರಸಾದ ಕೊಟ್ಟಿದೆ. ದೇವಿಯ ಹೂ ಪ್ರಸಾದದಿಂದ ದರ್ಶನ್ ಬಿಡುಗಡೆಯನ್ನು ಜ್ಯೋತಿಷಿ ಡಾ ಲಕ್ಷ್ಮೀಕಾಂತ ಆಚಾರ್ಯ ದೃಢೀಕರಿಸಿದ್ದಾರೆ.

VISTARANEWS.COM


on

By

Actor darshan
Koo

ತುಮಕೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ (Actor Darshan) ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ಬಿಡುಗಡೆ ಆಗುತ್ತಾರೆ ಎಂದು ಸ್ಫೋಟಕ ಭವಿಷ್ಯವನ್ನು ಜ್ಯೋತಿಷಿ ಡಾ.ಲಕ್ಷ್ಮಿಕಾಂತ ಆಚಾರ್ಯ ನುಡಿದಿದ್ದಾರೆ. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. ತುಮಕೂರು ಸನಿಹದ ಚಿನಗ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮೂಕಾಂಬಿಕಾ ದೇವಿ ಹೂ ಪ್ರಸಾದ ಕೊಡುವ ಮೂಲಕ ದರ್ಶನ್ ಬಿಡುಗಡೆಗೆ ಮುನ್ಸೂಚನೆ ಕೊಟ್ಟಿದ್ದಾಳೆ.

Actor darshan
ದರ್ಶನ್‌ ಕುರಿತು ಜ್ಯೋತಿಷ್ಯ ಹೇಳುವಾಗಲೇ ಬಲಗಡೆಯಿಂದ ಹೂ ಪ್ರಸಾದ ಕೊಟ್ಟ ದೇವಿ

ಮೂಕಾಂಬಿಕಾ ದೇವಿ ಆರಾಧಕರು, ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರು ಈ ಬಗ್ಗೆ ಮಾತಾನಾಡಿದ್ದಾರೆ. ದರ್ಶನ್ ಬಿಡುಗಡೆ ಬಗ್ಗೆ ಜ್ಯೋತಿಷ್ಯ ಹೇಳುತ್ತಿರುವಾಗಲೇ ತಾಯಿ ಮೂಕಾಂಬಿಕಾ ದೇವಿ ಬಲಗಡೆ ಹೂ ಪ್ರಸಾದ ಕೊಟ್ಟಿದೆ. ದೇವಿಯ ಹೂ ಪ್ರಸಾದದಿಂದ ದರ್ಶನ್ ಬಿಡುಗಡೆ ದೃಢೀಕರಿಸಿದ್ದಾರೆ. ಕಾರ್ತಿಕ್ ಮಾಸದ ಅಂತ್ಯದೊಳಗೆ ನಟ ದರ್ಶನ್ ಬಿಡುಗಡೆ ಆಗುತ್ತಾರೆ. ದರ್ಶನ್ ಅವರ ಜನ್ಮ ಜಾತಕದ ಪ್ರಕಾರ ಶುಭ ಸಮಯ ಪ್ರಾರಂಭವಾಗಿದೆ. ದೇವಿಯ ಆಶೀರ್ವಾದ ಸಂಪೂರ್ಣ ಇದ್ದು, ಎಲ್ಲವೂ ಶುಭ ಆಗುತ್ತದೆ. ದರ್ಶನ್‌ರ ದಶಾಬುಕ್ತಿಗಳು ಅಂತ್ಯವಾಗಿ, ಶುಭ ದಶಾಬುಕ್ತಿಗಳು ಪ್ರಾರಂಭವಾಗಿವೆ. ಅಭಿಮಾನಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಪೂಜೆ-ಪುನಸ್ಕಾರ ಎಲ್ಲವನ್ನೂ ನಡೆಸಿಕೊಂಡು ಬಂದಿರುವುದರಿಂದ ಆ ದೇವಿಯ ಅನುಗ್ರಹ ಇರುತ್ತದೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಜ್ಯೋತಿಷಿ ಡಾ.ಲಕ್ಷ್ಮೀಕಾಂತ ಆಚಾರ್ಯ ತಿಳಿಸಿದ್ದಾರೆ.

Actor darshan
Actor Darshan

ಈ ದೇವಿ ಹೂ ಪ್ರಸಾದ ಕೊಟ್ಟರೆ ಇಲ್ಲಿವರೆಗೂ ಯಾವುದೂ ಕೂಡ ಸುಳ್ಳಾಗಿಲ್ಲ. ಸಾಕಷ್ಟು ರೀತಿಯಲ್ಲಿ ಒಳ್ಳೆಯದಾಗಿದೆ ಎಂದು ಭಕ್ತಾಧಿಗಳು ಹೇಳಿಕೊಂಡು ಬಂದಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆ ಕೂಡ ಇದೆ. ನಟ ದರ್ಶನ್‌ಗೆ ಇಷ್ಟು ದಿವಸ ಜನ್ಮ‌ ಜಾತಕದಲ್ಲಿ ಗುರುದಶಾಬುಕ್ತಿ ನಡೆಯುತ್ತಿತ್ತು. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದೆ. ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. 2027ರ ನಂತರ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಹಾಗಾಗಿ ಇದರಲ್ಲಿ ಯಾವುದೇ ಅನುಮಾನ ಬೇಡ. 2027ರ ನಂತರ ದರ್ಶನ್ ಜೀವನ ಶೈಲಿ ಬದಲಾಗಲಿದೆ. ಈಗ 2024ರ ಅಂತ್ಯದಲ್ಲಿ ಇದ್ದೇವೆ, 2025-2026ರ ನಂತರ 2027ರಿಂದ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ. ಒಳ್ಳೆಯ ರೀತಿಯ ಜೀವನ ಕಲ್ಪಿಸಿಕೊಡುತ್ತಾಳೆ. ರಾಜಕೀಯ ಪ್ರವೇಶದ ಯೋಗ ಕೂಡ ದರ್ಶನ್‌ಗೆ ಇದೆ. ದಶಾಬುಕ್ತಿಗಳು ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸಿ ಬಿಡುತ್ತದೆ.

Actor darshan
Actor Darshan

ಒಳ್ಳೆಯದು ಪ್ರಾರಂಭ ಆಗಬೇಕು ಅಂದಾಗ ಕೆಟ್ಟದು ನಮ್ಮ‌ ಕಣ್ಣಿಗೆ ಯಾವುದು ಕಾಣಿಸಲ್ಲ. ದೇವಿಯು ಆಶೀರ್ವಾದ ಮಾಡಿರುವುದರಿಂದ ಅವರ ಜೀವನ ಸುಗಮವಾಗಿ ನಡೆಯುತ್ತದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಚಂಡಿಕಾ ಯಾಗ ಮಾಡಿಸಿದ್ದರು. ಆದಾದ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಕ್ಷೇತ್ರಕ್ಕೆ ಸಿರಾದ ದಿವಂಗತ ಸತ್ಯನಾರಾಯಣ್, ವಾಸು, ಬೆಮೆಲ್ ಕಾಂತರಾಜು, ಗೌರಿಶಂಕರ್, ಸುರೇಶ್‌ಗೌಡ ಹಾಗೂ ಪರಮೇಶ್ವರ, ಮುದ್ದಹನುಮೇಗೌಡ ಸಾಕಷ್ಟು ರೀತಿಯ ರಾಜಕೀಯ ವ್ಯಕ್ತಿಗಳು ದೇವಿಯ ಆಶೀರ್ವಾದ ಪಡೆದಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಿರುವ ನಿದರ್ಶನಗಳಿವೆ ಎಂದು ತುಮಕೂರಿನಲ್ಲಿ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ತಿಳಿಸಿದ್ದಾರೆ.

Actor Darshan
Actor Darshan

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

CM Siddaramaiah : ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಅಪೀಲು ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ

VISTARANEWS.COM


on

By

Cm Siddaramaiah
Koo

ಬೆಂಗಳೂರು: ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನೆ ಮಾಡಿ ದ್ವಿಸದಸ್ಯ ಪೀಠಕ್ಕೆ ಅಪೀಲು ಅರ್ಜಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತೀರ್ಮಾನ ಮಾಡಿದ್ದಾರೆ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ದೆಹಲಿಯಿಂದ ವಾಪಸ್‌ ಆಗಿದ್ದು, ಎರಡು ಪ್ರತ್ಯೇಕ ಅಪೀಲು ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಸಿಎಂ ಪರ ವಕೀಲರು ಸೋಮವಾರ ದ್ವಿಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಏಕಸದಸ್ಯ ಪೀಠದ ಆದೇಶದಲ್ಲಿ ಕೆಲ ವಿಚಾರಗಳ ಬಗ್ಗೆ ಅಪೀಲು ಸಲ್ಲಿಸಲಿದ್ದಾರೆ.

ಮತ್ತೊಂದು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ವಿರುದ್ಧ ಅಪೀಲು ಅರ್ಜಿ ಅಲ್ಲಿಸಲಿದ್ದಾರೆ. ಜುಲೈ ಒಂದು 2024 ರಿಂದ ಹೊಸ ಕಾನೂನು ಬಂದಿದೆ. ಬಿಎನ್ಎಸ್ಎಸ್ ಅಡಿಯಲ್ಲಿ ವಿಚಾರಣೆ ಆಗಬೇಕು. ಹಳೆಯ ಸಿಪಿಆರ್ಪಿ ಐಪಿಸಿಯಲ್ಲಿ ಆರೋಪಿಗೆ ರಕ್ಷಣೆ ಕಡಿಮೆ ಇದೆ. ಹೀಗಾಗಿ ಬಿಎನ್ಎಸ್ಎಸ್ ಅಡಿಯಲ್ಲಿ ತನಿಖೆಗೆ ಆದೇಶ ಮಾಡಬೇಕಿತ್ತು. ಆದರೆ ನ್ಯಾಯಲಯದ ಹಳೆಯ ಕಾನೂನು ಪ್ರಕಾರ ಮಾಡಿರುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ವಕೀಲರು ಅಪೀಲು ಸಲ್ಲಿಕೆ ಮಾಡಲಿದ್ದಾರೆ. ಅರ್ಜಿ ತೀರ್ಮಾನ ಆಗುವವರೆಗೂ ಮುಡಾ ತನಿಖೆಗೆ ಸಿದ್ದರಾಮಯ್ಯ ತಡೆ ಕೋರಲಿದ್ದಾರೆ.

ಸಿಎಂ ವಿರುದ್ಧದ ತನಿಖೆಗೆ ನಾಲ್ಕು ತಂಡಗಳ ರಚನೆ

ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್ ದಾಖಲು‌ ಹಿನ್ನೆಲೆಯಲ್ಲಿ ತನಿಖೆಗೆ ನಾಲ್ಕು ತಂಡಗಳ ರಚನೆ ಮಾಡಲಾಗಿದೆ.
ಎಸ್‌ಪಿ ಉದೇಶ್, ಡಿವೈಎಸ್‌ಪಿ ಎಸ್.ಮಾಲತೀಶ್, ಚಾಮರಾಜನಗರ ಡಿವೈಎಸ್‌ಪಿ ಮ್ಯಾಥ್ಯೂ ಥಾಮಸ್ ಹಾಗೂ ಇನ್‌ಸ್ಪೆಕ್ಟರ್‌ ಒಳಗೊಂಡ ತನಿಖಾ ತಂಡ ಇದಾಗಿದೆ. ಎಲ್ಲಾ ಅಧಿಕಾರಿಗಳ ಜತೆ ಎಸ್‌ಪಿ ಸಭೆ ನಡೆಸಿದ್ದು, ಕೋರ್ಟ್‌ನಿಂದ ನೀಡಿರುವ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದೂರಿನಲ್ಲಿ ಅಡಕವಾಗಿರುವ ದಾಖಲೆಗಳನ್ನು ಇನ್ನು ಒಂದೆರಡು ದಿನಗಳ ಕಾಲ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಪ್ರತಿಯೊಬ್ಬ ಅಧಿಕಾರಿಗಳ ಕೆಲಸವನ್ನು ವಿಂಗಡಣೆ ಮಾಡಿಕೊಳ್ಳಲಿದ್ದಾರೆ. ಸದ್ಯಕ್ಕೆ ಎಲ್ಲ ದಾಖಲೆಗಳನ್ನು ಓದಿಕೊಂಡು ಪಾಯಿಂಟ್ಸ್ ಮಾಡಿಕೊಳ್ಳುತ್ತಿದ್ದಾರೆ.

ಏನಿದು ಮುಡಾ ಪ್ರಕರಣ?

ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೇ ದೂರು ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿತ್ತು. ಟಿ.ಜೆ. ಅಬ್ರಾಹಂ ನೀಡಿದ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿಮ್ಮ ವಿರುದ್ಧ ಯಾಕೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬಾರದು ಎಂದು ಸಿದ್ದರಾಮಯ್ಯಗೆ ಶೋಕಾಸ್​ ನೋಟಿಸ್ ನೀಡಿದ್ದರು. ಸಿದ್ದರಾಮಯ್ಯಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸಚಿವ ಸಂಪುಟ ನಿರ್ಣಯ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಧಿಕ್ಕರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪ್ರದೀಪ್ ಕುಮಾರ್ ಎಸ್.ಪಿ, ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅರ್ಜಿಗಳನ್ನು ಸಲ್ಲಿಸಿದ್ದರು.

ಮೈಸೂರಿನ ಸ್ನೇಹಮಯಿ ಕೃಷ್ಣ, ಸಿಎಂ ವಿರುದ್ಧ ಮತ್ತೂಂದು ದೂರು ಸಲ್ಲಿಸಿದ್ದರು. ಅಕ್ರಮ ಭೂ ಡಿನೋಟಿಫಿಕೇಶನ್‌ಗೆ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿದ್ದರು. ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, 1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Mallikarjun Kharge falls ill on stage while delivering his speech
ರಾಜಕೀಯ1 ಗಂಟೆ ago

Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

Actor Darshan who spent 100 days in jail will get bail tomorrow
ಬೆಂಗಳೂರು3 ಗಂಟೆಗಳು ago

Actor Darshan :‌ ಜೈಲಿನಲ್ಲಿ ನೂರು ದಿನ ಕಳೆದ ನಟ ದರ್ಶನ್‌ಗೆ ನಾಳೆ‌ ಸಿಗುತ್ತಾ ಜಾಮೀನು

Union Minister Pralhad Joshi slams Lokayukta ADGP for using pig word against HD Kumaraswamy
ಕರ್ನಾಟಕ3 ಗಂಟೆಗಳು ago

Pralhad Joshi : ಎಚ್‌ಡಿಕೆ ಬಗ್ಗೆ ಹಂದಿ ಪದ ಬಳಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗರಂ

Accident case
ರಾಯಚೂರು5 ಗಂಟೆಗಳು ago

Accident Case : ಪಂಪ್‌ ಸೆಟ್‌ ದುರಸ್ತಿ ವೇಳೆ ಕರೆಂಟ್‌ ಶಾಕ್‌ಗೆ ವ್ಯಕ್ತಿ ಸಾವು; ಕೆಲಸ ಮಾಡುತ್ತಿದ್ದಾಗಲೇ ನೌಕರನ ಹೃದಯ ಸ್ತಬ್ಧ

Mysuru Rave Party 50 arrested for organising rave party at Meenakshipura farm
ಮೈಸೂರು6 ಗಂಟೆಗಳು ago

Mysuru Rave Party: ಮೈಸೂರಿನ ಮೀನಾಕ್ಷಿಪುರದ ಜಮೀನಿನಲ್ಲಿ ರೇವ್‌ ಪಾರ್ಟಿ ನಡೆಸುತ್ತಿದ್ದ 50 ಮಂದಿ ಅರೆಸ್ಟ್‌

Road Accident
ತುಮಕೂರು7 ಗಂಟೆಗಳು ago

Road Accident : ಕಳ್ಳನನ್ನ ಹಿಡಿಯಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಪೊಲೀಸರು; ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದ ಕಾರು

theft case
ತುಮಕೂರು7 ಗಂಟೆಗಳು ago

Theft Case : ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 1 ಕೋಟಿ ರೂ. ಜತೆಗೆ ಚಿನ್ನಾಭರಣ ದೋಚಿದ ಕಳ್ಳರು!

CM Siddaramaiah eye on the actions leaders of the opposition
ರಾಜಕೀಯ8 ಗಂಟೆಗಳು ago

CM Siddaramaiah : ಸಿದ್ದರಾಮಯ್ಯರಿಗೆ ಟೆನ್ಶನ್ ಶುರು; ಸ್ವಪಕ್ಷ- ವಿಪಕ್ಷ ನಾಯಕರ ನಡೆ- ನುಡಿಗಳ ಮೇಲೆ ಕಣ್ಣಿಡುವ ಸ್ಥಿತಿ

karnataka weather Forecast
ಪ್ರಮುಖ ಸುದ್ದಿ13 ಗಂಟೆಗಳು ago

Karnataka Weather : ರಾಜ್ಯಾದ್ಯಂತ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ

Dina Bhavishya
ಭವಿಷ್ಯ14 ಗಂಟೆಗಳು ago

Dina Bhavishya : ಆತ್ಮೀಯರೊಂದಿಗೆ ಕಾಲ ಕಳೆಯುವಿರಿ; ಉದ್ಯೋಗಿಗಳಿಗೆ ಕೆಲಸದಲ್ಲಿ ನಿರಾಳತೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌