‌Lok Sabha Election 2024: ಮುದ್ದಹನುಮೇಗೌಡ ಘರ್ ವಾಪ್ಸಿ ಪಾಲಿಟಿಕ್ಸ್; ತುಮಕೂರು ಲೋಕಸಭಾ ಟಿಕೆಟ್‌ ಫಿಕ್ಸ್? - Vistara News

ಕರ್ನಾಟಕ

‌Lok Sabha Election 2024: ಮುದ್ದಹನುಮೇಗೌಡ ಘರ್ ವಾಪ್ಸಿ ಪಾಲಿಟಿಕ್ಸ್; ತುಮಕೂರು ಲೋಕಸಭಾ ಟಿಕೆಟ್‌ ಫಿಕ್ಸ್?

‌Lok Sabha Election 2024: ರಾಜ್ಯ ಕಾಂಗ್ರೆಸ್‌ ನಾಯಕರ ಜತೆ ಮಾಜಿ ಸಂಸದ ಮುದ್ದಹನುಮೇಗೌಡ ಮಾತುಕತೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಮಾತುಕತೆಯನ್ನು ಮುಗಿಸಿದ್ದಾರೆ. ತುಮಕೂರು ಶಾಸಕರು ಮತ್ತು ಸಚಿವರಿಂದಲೇ ಮುದ್ದಹನುಮೇಗೌಡ ಕರೆ ತರುವ ಬಗ್ಗೆ ಆಸಕ್ತಿ ಇರುವುದರಿಂದ ಆಯ್ಕೆಯೂ ಇಲ್ಲಿ ಸುಲಭವಾಗಲಿದೆ ಎಂಬ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗಿದೆ.

VISTARANEWS.COM


on

Muddahanumegowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಲೋಕಸಭಾ ಚುನಾವಣೆಗೆ (‌Lok Sabha Election 2024) ಭರ್ಜರಿ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಒಂದು ಕಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಭಾರತ್‌ ಜೋಡೊ ನ್ಯಾಯ ಯಾತ್ರೆಯನ್ನು (Bharat Jodo Nyay Yatra) ಆರಂಭ ಮಾಡಿದ್ದಾರೆ. ಅಲ್ಲದೆ, ಕೈ ಹೈಕಮಾಂಡ್‌ (Congress High Command) ಈಗಾಗಲೇ ರಾಜ್ಯ ನಾಯಕರಿಗೆ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಟಾಸ್ಕ್‌ ನೀಡಿದೆ. ಈ ಸಂಬಂಧ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಕೈ ಪಾಳೆಯ ಇದೆ. ಈ ಮಧ್ಯೆ ತುಮಕೂರು ಕ್ಷೇತ್ರ ತೀವ್ರ ಕುತೂಹಲವನ್ನು ಕೆರಳಿಸಿದ್ದು, ಮಾಜಿ ಸಂಸದ, ಹಿರಿಯ ರಾಜಕಾರಣಿ ಮುದ್ದಹನುಮೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಲು ಪ್ಲ್ಯಾನ್‌ ನಡೆದಿದೆ ಎನ್ನಲಾಗಿದೆ.

ಈಗ ಮುದ್ದಹನುಮೇಗೌಡ ಅವರ ಘರ್‌ ವಾಪ್ಸಿ ಪಾಲಿಟಿಕ್ಸ್ ಶುರುವಾಗಿದ್ದು, ಅವರನ್ನೇ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್‌ ಉತ್ಸಾಹ ತೋರಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್‌ ನಾಯಕರು ಇದ್ದರು. ನಿಖೇತ್ ರಾಜ್, ಮುರಳಿಧರ ಹಾಲಪ್ಪ, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ, ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಅವರಿಂದ ಈಗಾಗಲೇ ಈ ಕ್ಷೇತ್ರಕ್ಕೆ ಟಿಕೆಟ್‌ ಲಾಬಿ ನಡೆದಿದೆ. ಆದರೆ, ಈ ನಾಲ್ವರೂ ಪ್ರಬಲ ಅಭ್ಯರ್ಥಿಗಳಲ್ಲ ಎಂಬುದು ತುಮಕೂರು ಜಿಲ್ಲೆಯ ನಾಯಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: HD Kumaraswamy: ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿದ ವೃದ್ಧೆ; ಕಾಂಗ್ರೆಸ್‌ ವಿರುದ್ಧ ಎಚ್‌ಡಿಕೆ ಕಿಡಿ

ಸ್ಪರ್ಧೆಗೆ ಸಚಿವರ ಹಿಂದೇಟು!

ಎಲ್ಲೆಲ್ಲಿ ಪ್ರಬಲ ಅಭ್ಯರ್ಥಿಗಳು ಇಲ್ಲವೋ ಅಂಥ ಕಡೆ ಸಚಿವರನ್ನೇ ಕಣಕ್ಕಿಳಿಸುವ ತೀರ್ಮಾನವನ್ನು ಕಾಂಗ್ರೆಸ್‌ ಹೈಕಮಾಂಡ್‌ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರನ್ನು ಕಣಕ್ಕಿಳಿಯುವಂತೆ ಮೊದಲು ಸೂಚನೆ ನೀಡಿತ್ತು. ಆದರೆ, ಈ ಆಫರ್‌ ಅನ್ನು ನಯವಾಗಿ ತಿರಸ್ಕರಿಸಿದ್ದ ಪರಮೇಶ್ವರ್‌, ಇದು ಸಾಮಾನ್ಯ ಕ್ಷೇತ್ರವಾಗಿದ್ದು, ಇಲ್ಲಿ ನಾನು ನಿಂತರೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಸಹಜವಾಗಿ ಕೆ.ಎನ್.‌ ರಾಜಣ್ಣ ಅವರತ್ತ ಹೈಕಮಾಂಡ್‌ ದೃಷ್ಟಿ ನೆಟ್ಟಿದೆ. ಇದರಿಂದ ದಿಗಿಲುಗೊಂಡ ರಾಜಣ್ಣ ಅವರು ಸೂಕ್ತ ಅಭ್ಯರ್ಥಿಯನ್ನು ತಾವು ಹುಡುಕಿ ತರುವುದಾಗಿ ವಾಗ್ದಾನ ನೀಡಿದ್ದಾರೆ. ಈ ಕಾರಣಕ್ಕಾಗಿ ಮುದ್ದಹನುಮೇಗೌಡ ಅವರ ಘರ್ ವಾಪ್ಸಿಗೆ ಮುಂದಾಗಿದ್ದಾರೆ. ಇವರಿಗೆ ಗುಬ್ಬಿ ವಾಸು ಹಾಗೂ ಷಡಕ್ಷರಿ ಸಾಥ್ ನೀಡಿದ್ದಾರೆ.

ಮುದ್ದಹನುಮೇಗೌಡ – ಕಾಂಗ್ರೆಸ್‌ಗೆ ಅನಿವಾರ್ಯ

ಮುದ್ದಹನುಮೇಗೌಡ ಅವರಿಗೂ ಕಾಂಗ್ರೆಸ್‌ ಸೇರ್ಪಡೆ ಅನಿವಾರ್ಯವಾಗಿದೆ. ಕಳೆದ ಬಾರಿ ಅವರು ಸಂಸದರಾಗಿದ್ದಾಗಲೇ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ. ಕಾರಣ, ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕಣಕ್ಕಿಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಮುದ್ದಹನುಮೇಗೌಡ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಆದರೆ, ಈ ಬಾರಿ ಅಲ್ಲಿಯೂ ಸಹ ಅವರಿಗೆ ಟಿಕೆಟ್‌ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಮಾಜಿ ಸಚಿವ ಜೆ.ಸಿ. ಮಧುಸ್ವಾಮಿಗೆ ಟಿಕೆಟ್ ಕೊಡುವ ಬಗ್ಗೆ ಕಮಲ ಪಕ್ಷದ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಸೇರ್ಪಡೆ ಆಗಿ ಟಿಕೆಟ್ ಪಡೆಯುವ ಲೆಕ್ಕಾಚಾರದಲ್ಲಿ ಮುದ್ದಹನುಮೇಗೌಡ ಇದ್ದಾರೆ. ಇತ್ತ ಕಾಂಗ್ರೆಸ್‌ಗೂ ಸಹ ಪ್ರಬಲ ಅಭ್ಯರ್ಥಿ ಬೇಕಾಗಿದ್ದರಿಂದ ಇವರು ಅನಿವಾರ್ಯವಾಗಿದ್ದಾರೆ ಎನ್ನಲಾಗಿದೆ.

ಒಂದು ಹಂತದ ಮಾತುಕತೆ ಪೂರ್ಣ

ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಜತೆ ಮಾಜಿ ಸಂಸದ ಮುದ್ದಹನುಮೇಗೌಡ ಮಾತುಕತೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಮಾತುಕತೆಯನ್ನು ಮುಗಿಸಿದ್ದಾರೆ. ತುಮಕೂರು ಶಾಸಕರು ಮತ್ತು ಸಚಿವರಿಂದಲೇ ಮುದ್ದಹನುಮೇಗೌಡ ಕರೆ ತರುವ ಬಗ್ಗೆ ಆಸಕ್ತಿ ಇರುವುದರಿಂದ ಆಯ್ಕೆಯೂ ಇಲ್ಲಿ ಸುಲಭವಾಗಲಿದೆ ಎಂಬ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗಿದೆ.

ಶಾಸಕ ಟಿ.ಬಿ. ಜಯಚಂದ್ರ ವಿರೋಧ

ಈ ಹಂತದಲ್ಲಿ ಶಿರಾ ಶಾಸಕ ಟಿ.ಬಿ. ಜಯಚಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪುತ್ರ ಸಂತೋಷ್‌ ಜಯಚಂದ್ರ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ.ಎನ್. ರಾಜಣ್ಣ‌ ಅವರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಟಿ.ಬಿ. ಜಯಚಂದ್ರ ಅವರ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಅವರು ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಮಾತನಾಡುವುದು ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈಗೇನಿದ್ದರೂ ಮುದ್ದಹನುಮೇಗೌಡರಿಗೆ ಟಿಕೆಟ್‌ ಕೊಡುವ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದಕ್ಕೆ ಒಪ್ಪುತ್ತಾರೆಯೇ ಎಂಬುದಷ್ಟೇ ಮುಂದಿನ ಕುತೂಹಲವಾಗಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ನೆಲ ಸ್ಪರ್ಶಿಸಿದಲ್ಲೆಲ್ಲ ಕಾಂಗ್ರೆಸ್‌ ಅವನತಿ; ನ್ಯಾಯವಲ್ಲ, ಡೋಂಗಿ ಯಾತ್ರೆ ಎಂದ ಅಶೋಕ್

ದೇಶದ ಕಾಂಗ್ರೆಸ್‌ ಸಂಸದರ ಪೈಕಿ ಟಿಕೆಟ್‌ ತಪ್ಪಿದ್ದ ಏಕೈಕ ಸಂಸದ

2019ರ ಲೋಕಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಸಹ ಕೆಲವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮೊಮ್ಮಗನಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಗೆಲುವಿಗೆ ಸುಲಭವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ತುಮಕೂರಿನಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂಬ ತೀರ್ಮಾನವನ್ನು ಪ್ರಕಟಿಸಿತ್ತು. ಇದರಿಂದಾಗಿ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದ ಆಗಿನ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಸ್ಪರ್ಧೆಯಿಂದ ವಂಚಿತರಾಗಬೇಕಾಯಿತು. ಈ ಮೂಲಕ ಇಡೀ ದೇಶದಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‌ ಸಂಸದರ ಪೈಕಿ ಟಿಕೆಟ್‌ ತಪ್ಪಿದ ಏಕೈಕ ವ್ಯಕ್ತಿ ಎಂಬ ಅಪಖ್ಯಾತಿಗೂ ಮುದ್ದಹನುಮೇಗೌಡ ಗುರಿಯಾಗಬೇಕಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೈಂ

Road Accident: ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು

Road Accident: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಬಳ್ಳಾರಿ ಮೂಲದ ಗೋಪಿನಾಥ್ (52), ಲಲಿತಮ್ಮ (47) ಮೃತ ದುರ್ದೈವಿಗಳು. ಬೆಂಗಳೂರಿನಲ್ಲಿ ಉಪನಯನ ಕಾರ್ಯಕ್ರಮ ಮುಗಿಸಿ, ಬಳ್ಳಾರಿಗೆ ತೆರಳುವ ವೇಳೆ ಅಪಘಾತ ನಡೆದಿದೆ.

VISTARANEWS.COM


on

road accident chitradurga news
Koo

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ (Car Accident) ಡಿಕ್ಕಿಯಾದ ಪರಿಣಾಮ (Road accident) ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಿತ್ರದುರ್ಗದ (Chitradurga news) ತಳಕು ಹೈವೆ ಬ್ರೀಡ್ಜ್ ಸಮೀಪದಲ್ಲಿ ಅಪಘಾತ ಸಂಭವಿಸಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಬಳ್ಳಾರಿ ಮೂಲದ ಗೋಪಿನಾಥ್ (52), ಲಲಿತಮ್ಮ (47) ಮೃತ ದುರ್ದೈವಿಗಳು. ಬೆಂಗಳೂರಿನಲ್ಲಿ ಉಪನಯನ ಕಾರ್ಯಕ್ರಮ ಮುಗಿಸಿ, ಬಳ್ಳಾರಿಗೆ ತೆರಳುವ ವೇಳೆ ಅಪಘಾತ ನಡೆದಿದೆ. ನಿದ್ರೆಯ ಮಂಪರಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಶ್ರೇಯ, ಶ್ರೀನಿವಾಸ್ ಹಾಗೂ ಚಾಲಕ ಸುರೇಶ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆ ರವಾನಿಸಲಾಗಿದೆ. ಸ್ಥಳಕ್ಕೆ ತಳಕು ಪಿಎಸ್ಐ ಲೋಕೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ಬಾಲಕಿ

ಬೆಂಗಳೂರು: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಲಕಿ ಮೃತದೇಹ ಪತ್ತೆ ಪ್ರಕರಣದಲ್ಲಿ (Murder Case) ಬಾಲಕಿಯ ಗುರುತನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಜುಲೈ 3ರಂದು ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್‌ ಸ್ಥಳದಲ್ಲಿ‌ ಶವವಾಗಿ ಪತ್ತೆಯಾಗಿದ್ದ ಬಾಲಕಿಯ ಹೆಸರು ಮರಿಯಮ್ (5) ಕೊಲೆಯಾದವಳು ಎಂದು ತಿಳಿದುಬಂದಿದೆ. ಮತ್ತೊಂದೆಡೆ ಬಾಲಕಿಯ ಕೊಲೆಯ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಸದ್ಯ ಬಾಲಕಿಯ ಪೋಷಕರು ಯಾರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಕೊಲೆಯಾದ ಮರಿಯಮ್ ತಾಯಿ ಹೀನಾ, ರಾಜು ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಗಂಡ ಶಿವು ಎಂಬಾತನನ್ನು ಬಿಟ್ಟು ರಾಜು ಜತೆ ಹೀನಾ ಭಿಕ್ಷಾಟನೆ ಮಾಡುತ್ತಿದ್ದಳು. ಇವರಿಬ್ಬರ ಜೊತೆಯೇ ಕೊಲೆಯಾದ ಮರಿಯಮ್ ಇರುತ್ತಿದ್ದಳು.

ಮಗಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ಹೀನಾ, ಪ್ರೇಮಿಯ ಜತೆ ಸೇರಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಮರಿಯಮ್ ಮೃತದೇಹ ದೊರೆತ ದಿನದಿಂದಲೂ ಹೀನಾ, ರಾಜು ನಾಪತ್ತೆಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಅವರ ಮೇಲೆ ಸಾಕಷ್ಟು ಅನುಮಾನ ಮೂಡಿದೆ. ಸದ್ಯ ಕೊಲೆಯಾದ ಮರಿಯಮ್ ತಾಯಿ ಹೀನಾ, ಪ್ರಿಯತಮ ರಾಜುಗಾಗಿ ರೈಲ್ವೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೀನಾ ಹಾಗೂ ರಾಜು ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ಇದನ್ನೂ ಓದಿ | Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

Continue Reading

ಮಳೆ

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain : ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆ ಇದ್ದು, ರೆಡ್‌ ಹಾಗೂ ಆರೆಂಜ್‌, ಯೆಲ್ಲೋ ಅಲರ್ಟ್‌ ಘೋಷಣೆ (Karnataka Weather Forecast) ಮಾಡಲಾಗಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ವ್ಯಾಪಕ ಮಳೆಯಾಗುವ (Heavy rain alert) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಕರ್ನಾಟಕ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾದರೆ, ಮಲೆನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣದೊಂದಿಗೆ ಭಾರಿ ಮಳೆಯಾಗುವ (Karnataka Rain) ನಿರೀಕ್ಷೆಯಿದೆ.

ಉಳಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯೊಂದಿಗೆ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಸುತ್ತಮುತ್ತ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ದಾವಣಗೆರೆ ಜಿಲ್ಲೆಯಾದ್ಯಂತ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಉಳಿದಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಬಳ್ಳಾರಿ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು ಸೇರಿದಂತೆ ವಿಜಯನಗರದಲ್ಲಿ ಮಧ್ಯಮ ಮಳೆಯಾಗಲಿದೆ.

ಉತ್ತರ ಒಳನಾಡಿನ ಬೀದರ್‌ನಲ್ಲಿ ವ್ಯಾಪಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯ ಸಿಂಚನವಾಗಲಿದೆ. ಕಲಬುರಗಿ, ಹಾವೇರಿ, ಗದಗ, ಕೊಪ್ಪಳ, ಯಾದಗಿರಿ, ಬಾಗಲಕೋಟೆಯಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.

ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆಯು ಅಬ್ಬರಿಸಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಬೆಂಗಳೂರಲ್ಲಿ ಗಾಳಿ ಜತೆಗೆ ಮಳೆಯ ಸಿಂಚನ

ರಾಜಧಾನಿ ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯ ವೇಗವು ನಿರಂತರವಾಗಿ ಇರಲಿದ್ದು, 30-40 ಕಿ.ಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 21 ಡಿಗ್ರಿ ಸೆಲಿಯಸ್‌ ಇರಲಿದೆ.

ಕರಾವಳಿ-ಮಲೆನಾಡಿಗೆ ರೆಡ್‌ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಬೆಳಗಾವಿಯಲ್ಲೂ ಮಳೆಯು ಅಬ್ಬರಿಸಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಜತೆಗೆ ಬೀದರ್, ಗದಗ, ಕೊಪ್ಪಳ ಸೇರಿ ರಾಯಚೂರು, ಬಳ್ಳಾರಿ, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

MUDA Scam: ಮುಡಾ ಕೇಸ್ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ ರಾಜ್ಯ ಸರ್ಕಾರ; ಅಧಿವೇಶನಕ್ಕೂ ಮುನ್ನವೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನ

MUDA Scam: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರೇ ಪ್ರಮುಖವಾಗಿರುವ ಕಾರಣ ಬಿಜೆಪಿಯು ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದೆ. ಅದರಲ್ಲೂ, ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯೋಜನೆ ರೂಪಿಸಿಕೊಂಡಿದೆ. ಮಾಧ್ಯಮಗಳಲ್ಲೂ ಹಗರಣದ ಕುರಿತು ನಿರಂತರವಾಗಿ ವರದಿಯಾಗಿದೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ಏಕಸದಸ್ಯ ಆಯೋಗವನ್ನು ತನಿಖೆಗಾಗಿ ರಚಿಸಿದೆ.

VISTARANEWS.COM


on

MUDA Scam
Koo

ಬೆಂಗಳೂರು: ಮುಡಾ ನಿವೇಶನ ಹಗರಣ (MUDA Scam) ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. ನಕಲಿ‌ ದಾಖಲೆ ಸೃಷ್ಟಿಸಿ ಭೂಮಿ ಖರೀದಿಸಿದ್ದಾರೆಂದು ಆರೋಪಿಸಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಇದನ್ನೇ ಪ್ರತಿಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿವೆ. ಅದರಲ್ಲೂ, ಸೋಮವಾರದಿಂದ (ಜುಲೈ 15) ವಿಧಾನಸಭೆ ಅಧಿವೇಶನ ನಡೆಯಲಿದ್ದು, ಸದನದಲ್ಲಿ ಅಬ್ಬರಿಸಲು ಬಿಜೆಪಿ ಸಜ್ಜಾಗಿದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ (Karnataka Government) ಎಚ್ಚೆತ್ತುಕೊಂಡಿದ್ದು, ಮುಡಾ ಪ್ರಕರಣದ ತನಿಖೆಗೆ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.

ವಿಪಕ್ಷಗಳ ಹೋರಾಟದಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರವು ಮುಡಾ ಪ್ರಕರಣದ ತನಿಖೆಗಾಗಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿದೆ. ಆರು ತಿಂಗಳೊಳಗಾಗಿ ತನಿಖಾ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ತನಿಖೆಗೆ ಸಹಕರಿಸಲು ಸೂಚಿಸಿ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ‌

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರೇ ಪ್ರಮುಖವಾಗಿರುವ ಕಾರಣ ಬಿಜೆಪಿಯು ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದೆ. ಅದರಲ್ಲೂ, ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯೋಜನೆ ರೂಪಿಸಿಕೊಂಡಿದೆ. ಮಾಧ್ಯಮಗಳಲ್ಲೂ ಹಗರಣದ ಕುರಿತು ನಿರಂತರವಾಗಿ ವರದಿಯಾಗಿದೆ. ಇನ್ನು, ವಾಲ್ಮೀಕಿ ನಿಗಮದ ಭ್ರಷ್ಟಾಚಾರವೂ ಸರ್ಕಾರಕ್ಕೆ ಉರುಳಾಗಿದೆ. ಹಾಗಾಗಿ, ಮುಜುಗರದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರವು

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜೆ.ದೇವರಾಜು ಹಾಗೂ ಕುಟುಂಬದವರು, ಜಿಲ್ಲಾಧಿಕಾರಿ, ತಹಸೀಲ್ದಾರ್, ಮುಡಾ ಅಧ್ಯಕ್ಷರ ವಿರುದ್ಧ ದೂರು ಸಲ್ಲಿಸಿದ್ದಾರೆ.

ದಾಖಲೆಗಳಲ್ಲಿ ಜಮೀನು ಮಾರಪ್ಪ ಎಂಬವರ ಹೆಸರಲ್ಲಿದೆ. ಆದರೆ, ಅನಧಿಕೃತ ವ್ಯಕ್ತಿಗಳನ್ನು ಸೃಷ್ಟಿಸಿ ಕೋಟ್ಯಂತರ ರೂ ಮೌಲ್ಯದ ಆಸ್ತಿ ಲಪಟಾಯಿಸಿದ್ದಾರೆಂದು ದಾಖಲೆಗಳ ಸಮೇತ ವಿಜಯನಗರ ಠಾಣೆಗೆ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ. ಆದರೆ, ಈಗಾಗಲೇ ತನಿಖಾ ತಂಡದಿಂದ ತನಿಖೆ ನಡೆಯುತ್ತಿರುವ ಕಾರಣ ಮತ್ತೊಂದು ತನಿಖೆ ಸಾಧ್ಯವಿಲ್ಲ ಎಂದು ಪೊಲೀಸರು ಹಿಂಬರಹ ಬರೆದು ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: R Ashok: ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ: ಆರ್‌. ಅಶೋಕ್‌

Continue Reading

ಕರ್ನಾಟಕ

Appu Cup Season 2: ಅಪ್ಪು ಕಪ್‌ ಸೀಸನ್‌ 2ಗೆ ವಿಧ್ಯುಕ್ತ ಚಾಲನೆ; ಅಶ್ವಿನಿ ಪುನೀತ್‌ ಟ್ರೋಫಿ ಅನಾವರಣ

Appu Cup Season 2: ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶಟಲ್ ಆಟ, ಅಪ್ಪು ಅವರ ಮೆಚ್ಚಿನ ಆಟ. ಕಳೆದ ವರ್ಷದಿಂದ ಅಪ್ಪು ಕಪ್ ಟೂರ್ನಿಯನ್ನು ಚೇತನ್ ಅವರು ಚೆನ್ನಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹಾಗೂ ಭಾಗವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

VISTARANEWS.COM


on

Appu Cup Season 2
Koo

ಬೆಂಗಳೂರು: ಓರಾಯನ್ ಮಾಲ್‌ನ ಹೊರಾಂಗಣದಲ್ಲಿ ತಣ್ಣನೆ ಬೀಸುತ್ತಿದ್ದ ಗಾಳಿ. ಪಕ್ಕದಲ್ಲೊಂದು ಕೆರೆ. ಆ ಸುಂದರ ಪರಿಸರದಲ್ಲೊಂದು ವರ್ಣರಂಜಿತ ವೇದಿಕೆ. ಆ ವೇದಿಕೆಯಲ್ಲಿ ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ” ಅಪ್ಪು ಕಪ್ ಸೀಸನ್ 2″ (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಅಪ್ಪು ಸಂಭ್ರಮ ಸಮಾರಂಭ (Appu Cup Season 2) ಅದ್ಧೂರಿಯಾಗಿ ನಡೆಯಿತು. ಸಾಯಿ ಗೋಲ್ಡ್ ಪ್ಯಾಲೆಸ್‌ನ ಶರವಣ ಅವರು ನಿರ್ಮಿಸಿರುವ ಐದು ಕೆಜಿ ತೂಕದ ಅಪ್ಪು ಭಾವಚಿತ್ರವುಳ್ಳ ಬೆಳ್ಳಿ ಕಪ್ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಶ್ರೀಮುರಳಿ ಅವರಿಂದ ಅನಾವರಣವಾಯಿತು. ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಸಾ.ರಾ.ಗೋವಿಂದು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶಟಲ್ ಆಟ, ಅಪ್ಪು ಅವರ ಮೆಚ್ಚಿನ ಆಟ. ಕಳೆದ ವರ್ಷದಿಂದ ಅಪ್ಪು ಕಪ್ ಟೂರ್ನಿಯನ್ನು ಚೇತನ್ ಅವರು ಚೆನ್ನಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹಾಗೂ ಭಾಗವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ‘ಯಾವುದಾದರೂ ಆಟದ ನೆಪದಲ್ಲಿ ಕಲಾವಿದರನ್ನು ಒಟ್ಟಾಗಿ ಸೇರಿಸುವ ಆಸೆ ಅಪ್ಪು ಅವರಿಗಿತ್ತು. ಅದು ಹೊರದೇಶದಲ್ಲಿ ಅದನ್ನು ನಡೆಸಬೇಕೆಂಬುದು ಅವರ ಯೋಚನೆಯಾಗಿತ್ತು. ಸದಾ ಒಬ್ಬರಿಗೆ ಒಳೆಯದನ್ನೇ ಬಯಸುವ ಹೃದಯ ಅವರಿಗಿತ್ತು. ಅಂತಹ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಡೆಯುತ್ತಿರುವ “ಅಪ್ಪು ಕಪ್ ಸೀಸನ್ 2” ಯಶಸ್ವಿಯಾಗಲಿ’ ಎಂದು ಶ್ರೀಮುರಳಿ ಹಾರೈಸಿದರು.

‘ನಾಡು ಕಂಡ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ “ಅಪ್ಪು ಕಪ್” ಶಟಲ್ ಬ್ಯಾಡ್ಮಿಂಟನ್ ಟೂರ್ನಿಯ ಬಗ್ಗೆ ಚೇತನ್ ಸೂರ್ಯ ಅವರು ಹೇಳಿದಾಗ ಬಹಳ ಸಂತೋಷವಾಯಿತು. ನಾನು ಮೊದಲೇ ತಿಳಿಸಿದಂತೆ ಈ ಟೂರ್ನಿಯ ಮೊದಲ ವಿಜೇತರಿಗೆ 100 ಗ್ರಾಂ ಬಂಗಾರ, ದ್ವಿತೀಯ ವಿಜೇತರಿಗೆ 50 ಗ್ರಾಂ ಬಂಗಾರ ಹಾಗೂ ಮೂರನೇ ವಿಜೇತರಿಗೆ 25 ಗ್ರಾಂ ಬಂಗಾರವನ್ನು ಬಹುಮಾನ ನೀಡುವುದಾಗಿ ಸಾಯಿ ಗೋಲ್ಡ್ ಪ್ಯಾಲೆಸ್‌ನ ಶರವಣ ತಿಳಿಸಿದರು.

ನಾವು ಕಳೆದ ವರ್ಷದಿಂದ ಆಯೋಜಿಸುತ್ತಿರುವ “ಅಪ್ಪು ಕಪ್” ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಸಹಕಾರ ನೀಡಿರುವುದು ಬಹಳ ಖುಷಿಯಾಗಿದೆ‌. ಶ್ರೀಮುರಳಿ ಅವರು ಹೇಳಿದಂತೆ ಮುಂದಿನ ವರ್ಷ ಹೊರದೇಶದಲ್ಲಿ ಈ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಆಯೋಜಿಸಲು ಪ್ರಯತ್ನ ಪಡುತ್ತೇನೆ‌. ಈ ಬಾರಿ ಟೂರ್ನಿಯಲ್ಲಿ ಹತ್ತು ತಂಡಗಳಿದೆ. ಹತ್ತು ತಂಡಗಳ ಮಾಲೀಕರಿಗೆ, ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಅವರಿಗೆ ಹಾಗೂ ಎಲ್ಲಾ ತಂಡಗಳ ಮಾಲೀಕರಿಗೆ, ಆಟಗಾರರಿಗೆ ಧನ್ಯವಾದ ತಿಳಿಸಿದ “ಅಪ್ಪು ಕಪ್”ನ ರೂವಾರಿ ಚೇತನ್ ಸೂರ್ಯ, ಜುಲೈ 26, 27, 28 ಬೆಂಗಳೂರಿನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಹತ್ತು ತಂಡಗಳ ಲೋಗೊ, ಜರ್ಸಿ ಅನಾವರಣ ಮಾಡಿ, ತಂಡದ ಮಾಲೀಕರ ಹಾಗೂ ಆಟಗಾರರ ಪರಿಚಯ ಮಾಡಿಕೊಡಲಾಯಿತು. ALL OK (ಅಲೋಕ್), ಸಮರ್ಜಿತ್ ಲಂಕೇಶ್, ಐಶ್ವರ್ಯ ಸಿಂದೋಗಿ, ಅಭಿಲಾಶ್ ದಳಪತಿ, ಕಾವ್ಯ ಶಾ, ಶರತ್ ಕ್ಷತ್ರಿಯ, ದಿಲೀಪ್ ಕೆಂಪೇಗೌಡ, ಸಿರಿ ರಾಜು, ರಾಮ್ ಪವನ್, ಐಶಾನ, ಲಾವಣ್ಯ, ದೇವನ್, ರಾಘವ್ ನಾಗ್, ಸುನಾಮಿ ಕಿಟ್ಟಿ, ವಿಜಯ್ ಸಿದ್ದರಾಜ್, ವ್ಯಾಸರಾಜ ಸೋಸಲೆ, ಜ್ಯೋತಿ ವ್ಯಾಸರಾಜ್ ಸೇರಿದಂತೆ ಹೆಸರಾಂತ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. “ಅಪ್ಪು ಕಪ್” ನಲ್ಲಿ ಆಡುತ್ತಿರುವ ತಂಡಗಳು ಹೀಗಿದೆ.

1) ಅರಸು ಹಂಟರ್ಸ್ ಮಾಲೀಕರು ಆನಂದ್(PRO Win management) . ನಾಯಕ ಹರೀಶ್ ನಾಗರಾಜ್. 2) ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ(Oirgin Ventures), ನಾಯಕ ರವಿ ಚೇತನ್. 3) ಪವರ್ ಪೈತಾನ್ಸ್ ಮಾಲೀಕರು ಐಶ್ವರ್ಯ (SN Jals Events), ‌ನಾಯಕ ಸದಾಶಿವ ಶೆಣೈ. 4) ದೊಡ್ಮನೆ ಡ್ರಾಗನ್ಸ್ ಮಾಲೀಕರು ಮಹೇಶ್ ಗೌಡ,(MKJ Group), ನಾಯಕ ಪ್ರಮೋದ್ ಶೆಟ್ಟಿ. 5) ಜಾಕಿ ರೈಡರ್ಸ್ ಮಾಲೀಕರು ಶ್ರೀಹರ್ಷ(Sri Entertainments), ನಾಯಕ ಮನು ರವಿಚಂದ್ರನ್, 6) ರಾಜಕುಮಾರ ಕಿಂಗ್ಸ್ (Kings Club), ಮಾಲೀಕರು ವಿ.ರವಿಕುಮಾರ್ & ಶಂಶುದ್ದೀನ್, ನಾಯಕ ವಿಕ್ರಮ್ ರವಿಚಂದ್ರನ್, 7) ಗಂಧದಗುಡಿ ವಾರಿಯರ್ಸ್ ಮಾಲೀಕರು ಡಾ.ಚೇತನ ಆರ್ ಎಸ್,(Kalaluha), ನಾಯಕ ಭುವನ್ ಗೌಡ, 8)ವೀರ ಕನ್ನಡಿಗ ಬುಲ್ಸ್ ಮಾಲೀಕರು ಮೋನೀಶ್ ಸಿ.‌(Builder), ನಾಯಕ ದಿಲೀಪ್ ರಾಜ್. 9)ಯುವರತ್ನ ಚಾಂಪಿಯನ್ಸ್ ಮಾಲೀಕರು ಬಿ.ಎಂ.ಶ್ರೀರಾಮ್ ಕೋಲಾರ್(Deepa Films), ನಾಯಕ ಪ್ರವೀಣ್ ತೇಜ್, 10) ಮೌರ್ಯ ವೈಟ್ ಗೋಲ್ಡ್, ಮಾಲೀಕರು ಬಾಬು ಸಿ.ಜೆ(White Gold), ನಾಯಕ ನಿರಂಜನ್ ದೇಶಪಾಂಡೆ.

ಇದನ್ನೂ ಓದಿ: Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

Continue Reading
Advertisement
road accident chitradurga news
ಕ್ರೈಂ7 mins ago

Road Accident: ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು

Shikakai For Hair
ಆರೋಗ್ಯ18 mins ago

Shikakai For Hair: ಕೂದಲಿನ ಪೋಷಣೆಗೆ ಶ್ಯಾಂಪು ಒಳ್ಳೆಯದೋ ಸೀಗೆಕಾಯಿ ಒಳ್ಳೆಯದೋ?

Terrorist Attack
ಪ್ರಮುಖ ಸುದ್ದಿ41 mins ago

Terrorist Attack: ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದ ಸೇನೆ

karnataka weather Forecast
ಮಳೆ48 mins ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Noodles Side Effect
ಆರೋಗ್ಯ1 hour ago

Noodles Side Effect: ಇನ್‌ಸ್ಟಂಟ್‌ ನೂಡಲ್‌‌ಗಳನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದಿರಿ

NSUI
ದೇಶ7 hours ago

NSUI: ದೆಹಲಿ ವಿವಿಯಲ್ಲಿ ಗಲಾಟೆ ಮಾಡಿ, ರಾಮನ ಮೂರ್ತಿ ಒಡೆದ ಕಾಂಗ್ರೆಸ್‌ ವಿದ್ಯಾರ್ಥಿ ಘಟಕದ ಸದಸ್ಯರು; ಭಾರಿ ವಿವಾದ!

Yashasvi Jaiswal
ಕ್ರಿಕೆಟ್7 hours ago

Yashasvi Jaiswal : ಇನಿಂಗ್ಸ್​​ನ ಮೊದಲ ಎಸೆತಕ್ಕ 13 ರನ್​, ವಿನೂತನ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

MUDA Scam
ಕರ್ನಾಟಕ8 hours ago

MUDA Scam: ಮುಡಾ ಕೇಸ್ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ ರಾಜ್ಯ ಸರ್ಕಾರ; ಅಧಿವೇಶನಕ್ಕೂ ಮುನ್ನವೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನ

Hardik Pandya
ಕ್ರೀಡೆ8 hours ago

Hardik Pandya : ಪತ್ನಿ ಜತೆ ವಿಚ್ಛೇದನ ಸುದ್ದಿ ನಡುವೆ ರಷ್ಯನ್ ಮಾಡೆಲ್​ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಯಾರವರು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ48 mins ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ13 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ15 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ18 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ20 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌