Rajya Sabha Ticket: ನಾರಾಯಣಸಾ ಭಾಂಡಗೆ ಬಿಜೆಪಿ ರಾಜ್ಯಸಭಾ ಅಭ್ಯರ್ಥಿ; ಸೋಮಣ್ಣ ಲಾಬಿಗೆ ಮಣಿಯದ ಹೈಕಮಾಂಡ್! - Vistara News

ರಾಜಕೀಯ

Rajya Sabha Ticket: ನಾರಾಯಣಸಾ ಭಾಂಡಗೆ ಬಿಜೆಪಿ ರಾಜ್ಯಸಭಾ ಅಭ್ಯರ್ಥಿ; ಸೋಮಣ್ಣ ಲಾಬಿಗೆ ಮಣಿಯದ ಹೈಕಮಾಂಡ್!

Rajya Sabha Ticket: ಎಬಿವಿಪಿ ಹಾಗೂ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣಸಾ ಭಾಂಡಗೆ ಅವರಿಗೆ ರಾಜ್ಯಸಭೆ ಟಿಕೆಟ್‌ ಒಲಿದಿದೆ.‌ ಇದಕ್ಕಾಗಿ ಮಾಜಿ ಸಚಿವ ವಿ. ಸೋಮಣ್ಣ ದೆಹಲಿ ಮಟ್ಟದಲ್ಲಿ ಸಾಕಷ್ಟು ಲಾಬಿ ಮಾಡಿದ್ದರು. ಆದರೆ, ಲಾಬಿಗೆ ಮಣಿಯದ ಬಿಜೆಪಿ ಹೈಕಮಾಂಡ್‌ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್‌ ನೀಡಿದೆ.

VISTARANEWS.COM


on

Narayansa Banda get BJP Rajya Sabha Ticket and celebration
ನಾರಾಯಣಸಾ ಭಾಂಡಗೆ ಅವರಿಗೆ ಕುಟುಂಬಸ್ಥರು ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯಸಭಾ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಬಿರುಸಾಗಿತ್ತು. ಬಿಜೆಪಿಯಿಂದ ಸಹ ರಾಜ್ಯಸಭೆ ಟಿಕೆಟ್‌ಗೆ (Rajya Sabha Ticket) ಭಾರಿ ಲಾಬಿ ನಡೆದಿತ್ತು. ಈ ಸ್ಥಾನದ ಮೇಲೆ ಮಾಜಿ ಸಚಿವ ವಿ. ಸೋಮಣ್ಣ (V Somanna) ಕಣ್ಣಿಟ್ಟಿದ್ದರು. ಅದಕ್ಕಾಗಿ ದೆಹಲಿವರೆಗೆ ಹೋಗಿ ಲಾಬಿಯನ್ನೂ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ (BJP high command) ಯಾವುದೇ ಲಾಬಿಗೆ ಮಣಿಯದೆ ಕರ್ನಾಟಕದಿಂದ ನಾರಾಯಣಸಾ ಕೃಷ್ಣಸಾ ಭಾಂಡಗೆ (Narayansa Krishnasa Bhandage) ಅವರಿಗೆ ಟಿಕೆಟ್‌ ನೀಡಿದೆ.

Narayansa Banda get BJP Rajya Sabha Ticket

ಎಬಿವಿಪಿ ಹಾಗೂ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣಸಾ ಭಾಂಡಗೆ ಅವರಿಗೆ ರಾಜ್ಯಸಭೆ ಟಿಕೆಟ್‌ ಒಲಿದಿದೆ. ಭಾನುವಾರ ರಾತ್ರಿ ಬಿಜೆಪಿಯು ವಿವಿಧ ರಾಜ್ಯಗಳ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ ಅಭ್ಯರ್ಥಿಯ ಹೆಸರನ್ನೂ ಪ್ರಕಟಿಸಿದೆ.

ಇದನ್ನೂ ಓದಿ: Amit Shah: ಲೋಕಸಭೆಗೆ ಬಿಜೆಪಿ ಟಿಕೆಟ್‌; ಫೆ. 20-21ಕ್ಕೆ ಮಹತ್ವದ ಸಭೆ ನಡೆಸಲು ಅಮಿತ್‌ ಶಾ ನಿರ್ಧಾರ!

ಕರ್ನಾಟಕದಲ್ಲಿ ಒಟ್ಟು ನಾಲ್ಕು ರಾಜ್ಯಸಭಾ ಸ್ಥಾನಗಳು ಇದ್ದು, ಅದರಲ್ಲಿ ಒಂದು ಸ್ಥಾನಕ್ಕೆ ನಾರಾಯಣಸಾ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಅಂದರೆ, ಬಿಜೆಪಿಯ ಸಂಖ್ಯಾಬಲದ ಆಧಾರದಲ್ಲಿ ಬಾಂಡಗೆ ಅವರಿಗೆ ನಿರಾಯಾಸ ಗೆಲುವು ಲಭ್ಯವಾಗಲಿದೆ. ಹೀಗಾಗಿ ಈ ಬಾರಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್‌ ನೀಡಿದಂತಾಗಿದೆ.

ಯಾರು ಈ ನಾರಾಯಣಸಾ ಕೃಷ್ಣಸಾ ಭಾಂಡಗೆ?

ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರು ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆಯವರಾಗಿದ್ದಾರೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ನಾರಾಯಣ ಭಾಂಡಗೆ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಇವರು ಬಿಜೆಪಿಯ ಒಬಿಸಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಒಂದು ಬಾರಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಯಾಗಿಯೂ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ. 1990 ದಶಕದಲ್ಲಿ ಅಯೋಧ್ಯೆ ಮತ್ತು ಈದ್ಗಾ ಮೈದಾನ ಹೋರಾಟದಲ್ಲಿ ಇವರು ಭಾಗವಹಿಸಿದ್ದರು.

ಫಲಿಸದ ವಿ. ಸೋಮಣ್ಣ ಲಾಬಿ

ರಾಜ್ಯಸಭಾ ಸ್ಥಾನ ಪಡೆಯಲು ಮಾಜಿ ಸಚಿವ ವಿ.ಸೋಮಣ್ಣ ಲಾಬಿ ನಡೆಸಿದ್ದರು. ಇದಕ್ಕಾಗಿ ದೆಹಲಿವರೆಗೂ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೆ, ತಮಗೆ ರಾಜ್ಯಸಭಾ ಟಿಕೆಟ್‌ ನೀಡುವಂತೆ ಕೋರಿಕೆಯನ್ನು ಇಟ್ಟಿದ್ದಾಗಿಯೂ ಬಹಿರಂಗವಾಗಿ ಹೇಳಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಆದೇಶದಂತೆ ತಾವು ಸ್ಪರ್ಧೆ ಮಾಡುತ್ತಿದ್ದ ಗೋವಿಂರಾಜನಗರ ಕ್ಷೇತ್ರವನ್ನು ಬಿಟ್ಟು ವರುಣ ಮತ್ತು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ಹೀಗಾಗಿ ನನಗೆ ಈ ಬಾರಿ ರಾಜ್ಯಸಭಾ ಸ್ಥಾನವನ್ನು ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ, ಇದ್ಯಾವುದನ್ನೂ ಪರಿಗಣಿಸದ ಬಿಜೆಪಿ ಹೈಕಮಾಂಡ್‌, ಲಾಬಿ ಮತ್ತು ಪ್ರೆಶರ್ ಪಾಲಿಟಿಕ್ಸ್‌ಗೆ ಮಣೆ ಹಾಕದೆ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ನಾರಾಯಣ ಭಾಂಡಗೆ ಅವರಿಗೆ ಟಿಕೆಟ್‌ ನೀಡಿದೆ.

ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ: ಭಾಂಡಗೆ

ರಾಜ್ಯಸಭಾ ಟಿಕೆಟ್ ಘೋಷಣೆ ಹಿನ್ನೆಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಾರಾಯಣಸಾ ಭಾಂಡಗೆ, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಭಾ ಟಿಕೆಟ್ ನೀಡಿದ್ದು ಬಿಜೆಪಿಯಲ್ಲಿಯೇ ಸಾಧ್ಯ. ಬೇರೆ ಪಕ್ಷದಲ್ಲಿ ಇದನ್ನು ನಾವು ಅಪೇಕ್ಷೆ ಮಾಡಲೂ ಅಸಾಧ್ಯ. ಕಳೆದ ಅನೇಕ ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದನ್ನು ಪಕ್ಷ ಗುರುತಿಸಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಬೆಲೆ ಕೊಡುತ್ತದೆ ಅನ್ನೋದಕ್ಕೆ ನನ್ನನ್ನು ರಾಜ್ಯಸಭಾ ಸದಸ್ಯನಾಗಿ ನಿಯುಕ್ತಿ ಮಾಡಿರೋದು ಒಂದು ಉದಾಹರಣೆಯಾಗಿದೆ. ನನಗೆ ಕೆಲಸ ಮಾಡುವುದಕ್ಕೆ ಪಕ್ಷ ಹೆಚ್ಚು ಶಕ್ತಿ ನೀಡಿದೆ. ನನಗೆ ಖುಷಿ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರೂ ಸೇರಿ ಎಲ್ಲರನ್ನೂ ಅಭಿನಂದಿಸುತ್ತೇನೆ. ಪಕ್ಷದ ಸದಾ ಪಕ್ಷದ ಸಲುವಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಫೆಬ್ರವರಿ 27ರಂದು ಚುನಾವಣೆ

ರಾಜ್ಯಸಭೆ ಚುನಾವಣೆ (Rajya Sabha Election) ದಿನಾಂಕ ಘೋಷಿಸಿದ್ದು, ಕರ್ನಾಟಕದ 4 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಒಟ್ಟು 15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸಲು ಆಯೋಗವು (Election Commission Of India) ತೀರ್ಮಾನಿಸಿದೆ.

ಏಪ್ರಿಲ್‌ನಲ್ಲಿ ತೆರವಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಫೆ. 27ರಂದು ಮತದಾನ ನಡೆಯಲಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬ ಸದಸ್ಯರು ಇದ್ದಾರೆ. ಇವರ ಅವಧಿ ಈಗ ಮುಕ್ತಾಯವಾಗುತ್ತಿದೆ.

ಈ ನಾಲ್ವರ ಅವಧಿ ಮುಕ್ತಾಯ

  • ಜಿ ಸಿ ಚಂದ್ರಶೇಖರ್ – ಕಾಂಗ್ರೆಸ್
  • ನಾಸೀರ್ ಹುಸೇನ್ – ಕಾಂಗ್ರೆಸ್
  • ಎಲ್ ಹನುಮಂತಯ್ಯ – ಕಾಂಗ್ರೆಸ್
  • ರಾಜೀವ್ ಚಂದ್ರಶೇಖರ್ – ಬಿಜೆಪಿ

ಈ ನಾಲ್ವರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ತೆರವಾಗುವ ಈ ಸ್ಥಾನಗಳಿಗೆ ಇವರೇ ಅಭ್ಯರ್ಥಿಗಳಾಗಿರಲಿದ್ದಾರಾ? ಅಥವಾ ಬೇರೆಯವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

ಶುರುವಾಗಿದೆ ರಾಜಕೀಯ ಲೆಕ್ಕಾಚಾರ!

ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಸಂಬಂಧ ರಾಜ್ಯ ರಾಜಕೀಯದಲ್ಲಿ ಲೆಕ್ಕಾಚಾರಗಳು ಶುರುವಾಗಿದೆ. ಕಾಂಗ್ರೆಸ್‌ನಲ್ಲಿ 135 + 1 ಶಾಸಕರು ಇರುವುದರಿಂದ ರಾಜ್ಯಸಭೆಯ 3 ಸ್ಥಾನಗಳ ಗೆಲುವು ಪಕ್ಕಾ ಆಗಿದೆ. ಅಂದರೆ, ಯಾವುದೇ ರಾಜಕೀಯ ಬೆಳವಣಿಗೆಗಳು ನಡೆಯದೇ, ಕುದರೆ ವ್ಯಾಪಾರ ನಡೆಯದೇ ಇದ್ದರೆ ಕಾಂಗ್ರೆಸ್‌ಗೆ 3 ಸ್ಥಾನಗಳು ಆರಾಮವಾಗಿ ಒಲಿಯುತ್ತದೆ. ಇನ್ನು ಬಿಜೆಪಿಯಲ್ಲಿ 65 ಶಾಸಕರು ಇರುವುದರಿಂದ ಒಂದು ಸ್ಥಾನ ಆರಾಮವಾಗಿ ಗೆಲ್ಲಬಹುದು. ಇಷ್ಟಾಗಿ ಬಿಜೆಪಿ ಬಳಿ 20 ಶಾಸಕರ ಮತಗಳು ಹೆಚ್ಚುವರಿ ಇರುತ್ತದೆ. ಜೆಡಿಎಸ್ ಬಳಿ 19 ಶಾಸಕರು ಇರುವುದರಿಂದ 39 ಶಾಸಕರ ಮತಗಳು ಉಳಿದಂತೆ ಆಗುತ್ತದೆ. ಗೆಲ್ಲಲು 45 ಶಾಸಕರ ಮತಗಳು ಬೇಕಿರುವುದರಿಂದ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್‌ನಿಂದ ಸೆಳೆಯಬೇಕು. ಒಂದು ವೇಳೆ ಅಲ್ಲಿಂದ 6 ಮಂದಿಯನ್ನು ಸೆಳೆದರೆ ಕಾಂಗ್ರೆಸ್‌ಗೆ 2 ಸ್ಥಾನಗಳು ಮಾತ್ರವೇ ಉಳಿದು ಇನ್ನೊಂದು ಜೆಡಿಎಸ್‌ ಪಾಲಾಗಬಹುದು ಎಂಬ ಲೆಕ್ಕಾಚಾರವನ್ನೂ ಹಾಕಲಾಗಿದೆ. ಆದರೆ, ಜೆಡಿಎಸ್‌ನ ಮನವೊಲಿಸಿ ಬೆಂಬಲ ಪಡೆದು ಈ ಸ್ಥಾನಕ್ಕೆ ಬಿಜೆಪಿ ಏನಾದರೂ ಇನ್ನೊಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದರೆ ರಾಜಕೀಯ ಕಣ ಮತ್ತಷ್ಟು ರಂಗೇರಲಿದ್ದು, ಕಾಂಗ್ರೆಸ್‌ ಟೆನ್ಶನ್‌ ಅನ್ನು ಮತ್ತಷ್ಟು ಹೆಚ್ಚು ಮಾಡಲಿದೆ. ಆಗ “ಅಡ್ಡ ಮತ”ಗಳ “ಅಡ್ಡ ಪರಿಣಾಮ”ವನ್ನು ಎದುರಿಸುವ ಆತಂಕ ಕೈಪಡೆಗೆ ಎದುರಾಗುತ್ತದೆ.

ಇದನ್ನೂ ಓದಿ: Assembly Session: ನಾಳೆಯಿಂದ ಅಧಿವೇಶನ ಕದನ; 40 ಪರ್ಸೆಂಟ್‌ ಕಮಿಷನ್‌ ವರ್ಸಸ್‌ ಅನುದಾನ ತಾರತಮ್ಯ

ಯಾವ ಯಾವ ರಾಜ್ಯಗಳಲ್ಲಿ ಚುನಾವಣೆ?

ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Voting) ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಉಮೇದುವಾರಿಕೆ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 15 ರಾಜ್ಯಗಳ 56 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಫೆಬ್ರವರಿ 27ರಂದೇ ಫಲಿತಾಂಶ ಲಭ್ಯವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Prajwal Revanna Case: ಪೆನ್‌ಡ್ರೈವ್‌ ಕೇಸ್‌ ವೈಯಕ್ತಿಕ ಜಗಳ; ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಧಕ್ಕೆ ಇಲ್ಲ: ಆರ್.‌ ಅಶೋಕ್‌

Prajwal Revanna Case: ಪ್ರತಿ ದಿನ ಕಾಂಗ್ರೆಸ್ – ಜೆಡಿಎಸ್ ಪಕ್ಷದ ವಾರ್ ಟಾಕ್ ನಡೆಯುತ್ತಿದೆ. ಅದು ಏನು ಏನು ಆಗುತ್ತದೋ? ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ನನಗೂ ಗೊತ್ತಿಲ್ಲ. ಇದೊಂದು ವೈಯಕ್ತಿಕವಾಗಿ ಹೋಗಿಬಿಟ್ಟಿದೆ. ಜನಗಳ ಅಭಿವೃದ್ಧಿ ಕಾರ್ಯದ ಚರ್ಚೆ ನಡೆಯುತ್ತಿಲ್ಲ. ಬರಗಾಲ ಇದೆ, ಇಲ್ಲೇನಾಗಿದೆ ಅನ್ನೊದು ಮುಖ್ಯ, ಜನ ಅಭಿವೃದ್ಧಿಯನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ. ಇದೇ ನಡೆಯುತ್ತಿರಲಿ ಎಂದು ಅಂತ ಕಾಂಗ್ರೆಸ್ ಬಯಸುತ್ತಿದೆ. ನಮಗೆ ಈ ಸುದ್ದಿ ಬೇಡ, ರಾಜ್ಯದ ಜನರ ಒಳಿತು ಬೇಕು. ಡಿಕೆಶಿ ಮತ್ತು ಕುಮಾರಸ್ವಾಮಿ ಕುಟುಂಬದ ನಡುವಿನ ವೈಯಕ್ತಿಕ ಜಗಳ ಇದು. ಇಬ್ಬರ ಕೌಟುಂಬಿಕ, ವೈಯಕ್ತಿಕ ಜಗಳದಿಂದ ರಾಜ್ಯ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ಆರ್.‌ ಅಶೋಕ್‌ ಅಸಮಾಧಾನವನ್ನು ವ್ಯಕ್ತಪಡಿಸಿದರು.

VISTARANEWS.COM


on

Prajwal Revanna Case Pen drive case personal quarrel No threat to BJP and JDS alliance says R Ashoka
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಅಂತರ ಕಾಯ್ದುಕೊಂಡಿದ್ದಾರೆ. ಪೆನ್ ಡ್ರೈವ್ ಪ್ರಕರಣ ಎರಡು ಕುಟುಂಬಗಳ ನಡುವೆ ನಡೆಯುತ್ತಿದೆ. ಇದಕ್ಕೆ ರಾಜ್ಯದ ಜನರನ್ನು ಎಳೆದು ತರುವುದು ಬೇಡ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇದರಿಂದ ಮೈತ್ರಿಗೆ ಧಕ್ಕೆ ಆಗಲ್ಲ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ಅಭಿವೃದ್ಧಿ ವಿಚಾರ ಚರ್ಚೆ ಮಾಡುವುದನ್ನು ಬಿಟ್ಟು ಬರೀ ಇದನ್ನು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಯಾರೇ ಆಗಲಿ ಈ ಕೃತ್ಯದಲ್ಲಿ ಭಾಗವಹಿಸಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ. ಅವರವ ಡೋಂಕು ಅವರವರು ತಿದ್ದುಕೊಳ್ಳಲಿ ಎಂದು ಹೇಳಿದರು.

ಪ್ರತಿ ದಿನ ಕಾಂಗ್ರೆಸ್ – ಜೆಡಿಎಸ್ ಪಕ್ಷದ ವಾರ್ ಟಾಕ್ ನಡೆಯುತ್ತಿದೆ. ಅದು ಏನು ಏನು ಆಗುತ್ತದೋ? ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ನನಗೂ ಗೊತ್ತಿಲ್ಲ. ಇದೊಂದು ವೈಯಕ್ತಿಕವಾಗಿ ಹೋಗಿಬಿಟ್ಟಿದೆ. ಜನಗಳ ಅಭಿವೃದ್ಧಿ ಕಾರ್ಯದ ಚರ್ಚೆ ನಡೆಯುತ್ತಿಲ್ಲ. ಬರಗಾಲ ಇದೆ, ಇಲ್ಲೇನಾಗಿದೆ ಅನ್ನೊದು ಮುಖ್ಯ, ಜನ ಅಭಿವೃದ್ಧಿಯನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ. ಇದೇ ನಡೆಯುತ್ತಿರಲಿ ಎಂದು ಅಂತ ಕಾಂಗ್ರೆಸ್ ಬಯಸುತ್ತಿದೆ. ನಮಗೆ ಈ ಸುದ್ದಿ ಬೇಡ, ರಾಜ್ಯದ ಜನರ ಒಳಿತು ಬೇಕು. ಡಿಕೆಶಿ ಮತ್ತು ಕುಮಾರಸ್ವಾಮಿ ಕುಟುಂಬದ ನಡುವಿನ ವೈಯಕ್ತಿಕ ಜಗಳ ಇದು. ಇಬ್ಬರ ಕೌಟುಂಬಿಕ, ವೈಯಕ್ತಿಕ ಜಗಳದಿಂದ ರಾಜ್ಯ ಜನರಿಗೆ ಅನ್ಯಾಯ ಆಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಇವರ ಕುಟುಂಬದ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ. ಪ್ರಜ್ವಲ್ ಪ್ರಕರಣದಿಂದ ಮೈತ್ರಿ ಮೇಲೆ ಪರಿಣಾಮ ಆಗಲ್ಲ. ಮೈತ್ರಿ ಮುಂದುವರಿದುಕೊಂಡು ಹೋಗುತ್ತದೆ. ಮುಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮತ್ತು ವರಿಷ್ಠರು ಚರ್ಚೆ ಮಾಡುತ್ತಾರೆ ಎಂದು ಆರ್.‌ ಅಶೋಕ್‌ ಹೇಳಿದರು.

ಕಾಂಗ್ರೆಸ್‌ ಸರ್ಕಾರ ಪತನ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯ ಇಲ್ಲ. ಇದು ಅಲುಗಾಡುತ್ತಿದೆ. ಇದನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶಾಸಕರು ಅಸಮಾಧಾನಗೊಂಡಿದ್ದಾರೆ. ಅಭಿವೃದ್ಧಿಗೆ ಅನುದಾನ ಕೊಡದಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ. ಚುನಾವಣೆ ಬಳಿಕ ಈ ಸರ್ಕಾರ ಪತನ ಗ್ಯಾರಂಟಿ. ಹೀಗಾಗಿ ಅಧಿಕಾರ ಇದೆ ಅಂತ ದರ್ಪ ಮಾಡಿ ಬಿಜೆಪಿ ಕಾರ್ಯಕರ್ತರನ್ನು ಎದುರಿಸುವುದು ಬೇಡ ಎಂದು ಹೇಳುವ ಮೂಲಕ, ಸಾಮಾಜಿಕ ಜಾಲತಾಣದ ಪ್ರಶಾಂತ್ ಬಂಧಿಸಿದ್ದಕ್ಕೆ ಆರ್.‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿ ಸಾಮಾನ್ಯ. ಬರೀ ಹಾರ ತೂರಾಯಿ ಹಾಕಿಸಿಕೊಳ್ಳುವುದಕ್ಕೆ ಅಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲೂ ನಮ್ಮನ್ನು ಟೀಕೆ ಮಾಡಿದ್ದಾರೆ. 40% ಕಮಿಷನ್ ಸರ್ಕಾರ ಅಂತ ಪ್ರಚಾರ ಮಾಡಿದಿರಿ. ನಾವು ಟಾರ್ಗೆಟ್ ಮಾಡುವ ಕೆಲಸ ಮಾಡಿದೆವಾ? ಮಹಾರಾಷ್ಟ್ರ ಸರ್ಕಾರದಂತೆ ಇಲ್ಲೂ ಸರ್ಕಾರ ಬೀಳೋದು ಪಕ್ಕಾ ಎಂದು ಆರ್.‌ ಅಶೋಕ್‌ ಕಿಡಿಕಾರಿದರು.

ಸುಳ್ಳು ಹೇಳುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು

ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಪ್ರಶಾಂತ್ ಮಾಕನೂರು ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್‌, ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಸಹ ನೂರಾರು ಟ್ವೀಟ್ ಮಾಡಿದ್ದಾರೆ. ಸಾಕಷ್ಟು ಆಪದಾನೆಗಳನ್ನು ಮಾಡಿದ್ದಾರೆ. 40% ಸರ್ಕಾರ ಅಂತೆಲ್ಲ ಆರೋಪ ಮಾಡಿದರು. ತನಿಖೆ ಮಾಡಿದ್ದೇವೆ ಅಂದರು. ಆದರೆ, ಏನೂ ಬರಲಿಲ್ಲ. ಕಾಂಗ್ರೆಸ್ ಅಂದ್ರೆ ಸುಳ್ಳು. ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ನಮ್ಮ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಪ್ರಶಾಂತರನ್ನು ಬಂಧಿಸಿ ವಿಚಾರಣೆಗೆ ಕರೆದಿರೋದು ತಪ್ಪು. ಇದನ್ನು ಮಾಡಬಾರದಿತ್ತು. ಅವರು ಸಾಕಷ್ಟು ಟ್ವೀಟ್, ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸರ್ಕಾರ ಇದೆ ಅಂತ ಕಾಂಗ್ರೆಸ್‌ನವರು ದುರಹಂಕಾರದಿಂದ ಮಾಡುತ್ತಿದ್ದಾರೆ. ಇದು ಅವರಿಗೆ ತಿರುಗುಬಾಣ ಆಗುತ್ತದೆ. ಬಹಳ ದಿನ ನೀವು ಇರೋದಿಲ್ಲ, ಬಹಳ ದಿನ ಉಳಿಯೋದಿಲ್ಲ. ನಿಮ್ಮ ಸರ್ಕಾರದ ಅವಧಿ ಮುಗಿಯುತ್ತಿದೆ. ಸರ್ಕಾರದ ಆಯುಷ್ಯ ಮುಗಿಯುತ್ತಿದೆ. ಇನ್ನೇನು ದಿನಗಳನ್ನು ಎಣಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಬಹಳಷ್ಟು ಶಾಸಕರು ಸಂಪರ್ಕದಲ್ಲಿದ್ದಾರೆ

ಬರಗಾಲ ಪರಿಹಾರವನ್ನು ನ್ಯಾಯವಾಗಿ ಬಿಡುಗಡೆ ಮಾಡಿಲ್ಲ. ಕೇಂದ್ರ ಕೊಟ್ಟಿದ್ದು ಬಿಟ್ಟರೆ ರಾಜ್ಯ ಸರ್ಕಾರದ ಒಂದೇ ಒಂದು ನಯಾ ಪೈಸೆಯನ್ನು ಕೊಟ್ಟಿಲ್ಲ. ಇವರ ಯೋಗ್ಯತೆ ಏನು? ಮಾನ ಮರ್ಯಾದೆ ಇದೆಯಾ? ಸರ್ಕಾರ ಬೀಳುವ ಹಂತಕ್ಕೆ ತಯಾರಾಗಿ ನಿಂತಿದ್ದಾರೆ. ಅವರ ಸರ್ಕಾರವನ್ನು ಅವರೇ ಬೀಳಿಸುತ್ತಾರೆ. ಮುಂದೆ ನೋಡಿ ಪಿಕ್ಚರ್ ಇದೆ. ಹೇಗಿರಲಿದೆ ಎಂದು ನೀವೇ ನೋಡಿ. ರಾಜಕಾರಣದಲ್ಲಿ ಏನಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ, ಮಧ್ಯ ಪ್ರದೇಶದಲ್ಲಿ ಅಷ್ಟೇ ಏಕೆ ನಮ್ಮ‌ ಕರ್ನಾಟಕದಲ್ಲೇ ಆಗಿದ್ದನ್ನು ನೋಡಿದ್ದೇವೆ. ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಇಲ್ಲ ಅಂತ ಯಾರು ಹೇಳುತ್ತಾರೆ. ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಗ್ಯಾರಂಟಿಯಾಗಿ ಬದಲಾವಣೆ ಆಗುತ್ತದೆ ಎಂದು ಜನರೇ ಹೇಳುತ್ತಿದ್ದಾರೆ.

Continue Reading

ಕ್ರೈಂ

Prajwal Revanna Case: ಭವಾನಿ ರೇವಣ್ಣಗೆ SIT 2ನೇ ನೋಟಿಸ್‌; ರೇವಣ್ಣ ಫ್ಯಾಮಿಲಿಗೆ ಭಾರಿ ಸಂಕಷ್ಟ!

Prajwal Revanna Case: ಈಗಾಗಲೇ ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದಾರೆ. ಜಾಮೀನು ಸಿಗುವವರೆಗೂ ರೇವಣ್ಣಗೆ ಬಿಡುಗಡೆ ಭಾಗ್ಯ ಇಲ್ಲ. ಆದರೆ, ಎಸ್‌ಐಟಿ ಪರ ವಕೀಲರು ಯಾವುದೇ ಕಾರಣಕ್ಕೂ ಎಚ್.ಡಿ. ರೇವಣ್ಣ ಅವರಿಗೆ ಬೇಲ್‌ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಇವರು ಪ್ರಭಾವಿ ರಾಜಕಾರಣಿಯಾಗಿದ್ದು, ಬೇಲ್ ಸಿಕ್ಕರೆ ಸಾಕ್ಷಿ ನಾಶ ಮಾಡುತ್ತಾರೆ ಎಂದು ವಾದ ಮಂಡಿಸಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಮೊದಲು ಎಚ್.ಡಿ. ರೇವಣ್ಣ ಅವರ ಬಿಡುಗಡೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈಗ ಭವಾನಿ ರೇವಣ್ಣ ಅವರಿಗೂ ಸಂಕಷ್ಟ ಎದುರಾಗಿದೆ.

VISTARANEWS.COM


on

Prajwal Revanna Case SIT issues 2nd notice to Bhavani Revanna Big trouble for Revanna family
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಗೂ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ ದಿನೇ ದಿನೆ ಜಟಿಲವಾಗುತ್ತಿದೆ. ಇನ್ನು ಈ ಪ್ರಕರಣಗಳ ಸಂಬಂಧ ಎಚ್‌.ಡಿ. ರೇವಣ್ಣ (HD Revanna) ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡನೇ ನೋಟಿಸ್ ನೀಡಿದೆ.

ಮೊದಲ ನೋಟಿಸ್ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕೇಸ್‌ನಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಈ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ಸಿದ್ಧವಾಗಿದೆ. ಆದರೆ, ಭವಾನಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಈಗಾಗಲೇ ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದಾರೆ. ಜಾಮೀನು ಸಿಗುವವರೆಗೂ ರೇವಣ್ಣಗೆ ಬಿಡುಗಡೆ ಭಾಗ್ಯ ಇಲ್ಲ. ಆದರೆ, ಎಸ್‌ಐಟಿ ಪರ ವಕೀಲರು ಯಾವುದೇ ಕಾರಣಕ್ಕೂ ಎಚ್.ಡಿ. ರೇವಣ್ಣ ಅವರಿಗೆ ಬೇಲ್‌ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಇವರು ಪ್ರಭಾವಿ ರಾಜಕಾರಣಿಯಾಗಿದ್ದು, ಬೇಲ್ ಸಿಕ್ಕರೆ ಸಾಕ್ಷಿ ನಾಶ ಮಾಡುತ್ತಾರೆ ಎಂದು ವಾದ ಮಂಡಿಸಿದ್ದಾರೆ.

ಇನ್ನು ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಮೊದಲು ಎಚ್.ಡಿ. ರೇವಣ್ಣ ಅವರ ಬಿಡುಗಡೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ಎಸ್ಐಟಿಗೆ ಸಿಗುವವರೆಗೂ ರೇವಣ್ಣ ಅವರಿಗೆ ಜಾಮೀನು ಅನುಮಾನವಾಗಿದೆ. ಇನ್ನು ಪ್ರಜ್ವಲ್ ಯಾವುದೇ ಕ್ಷಣದಲ್ಲಿ ದೇಶಕ್ಕೆ ಬಂದರೂ ಎಸ್ಐಟಿ ಬಂಧಿಸುವುದು ಪಕ್ಕಾ ಆಗಿದೆ.

ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ (HD Revanna) ಅವರಿಗೂ ಗುರುವಾರ ಸಹ ಜಾಮೀನು ಸಿಕ್ಕಿಲ್ಲ. ಸಾಕಷ್ಟು ವಾದ – ಪ್ರತಿವಾದದ ಬಳಿಕ ಜನಪ್ರತಿನಿಧಿಗಳ ಕೋರ್ಟ್, ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದಿದೆ.

ಎಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಸೋಮವಾರ ಬೆಳಗ್ಗೆ 11.30ಕ್ಕೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ಮುಂದೂಡಿದೆ. ಕೋರ್ಟ್‌ಗೆ ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಸೋಮವಾರ ಸಮಯ ವ್ಯರ್ಥ ಮಾಡದೆ ಮಾಹಿತಿ ನೀಡುತ್ತೇವೆ. ಸೋಮವಾರದವರೆಗೆ ವಿಚಾರಣೆ ಮುಂದೂಡಬೇಕೆಂದು ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ) ನ್ಯಾಯಾಧೀಶರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶವನ್ನು ನೀಡಿದ್ದಾರೆ.

ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆ ಮಾಡಿದ್ದು, ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಿಳಂಬದ ಉದ್ದೇಶವಿಲ್ಲ. ನಾವು ವಾದ ಮಂಡಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಕೋರ್ಟ್‌ ಮುಂದೆ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು ಇದ್ದೀರಿ, ವಿಳಂಬ ಮಾಡಬೇಡಿ
ಎಸ್‌ಐಟಿ ಪರ ವಕೀಲರಿಗೆ ಸೂಚಿಸಿದರು. ಅದಕ್ಕೆ ಒಪ್ಪಿದ ಜಯ್ನಾ ಕೊಠಾರಿ, ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಯಾವುದೇ ಕಾರಣಕ್ಕೂ ಸೋಮವಾರ ‌ಸಮಯ ವ್ಯರ್ಥ ಮಾಡಲ್ಲ ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ವಾದ ಮಂಡಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ನನ್ನ 56 ವರ್ಷಗಳ ವಕೀಲ ವೃತ್ತಿಯಲ್ಲಿ ತಪ್ಪು ಮಾಹಿತಿ ನೀಡಿಲ್ಲ. ಬೇಲ್ ಅರ್ಜಿ ಊರ್ಜಿತವಲ್ಲವೆಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ‘ಸುಪ್ರೀಂ’ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು. 2023ರ ತೀಸ್ತಾ ಸೆಟಲ್ ವಾಡ್‌ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ನಾಗೇಶ್‌, ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ನಿರಂಜನ್ ಸಿಂಗ್ ಕೇಸ್‌ನಲ್ಲಿಯೂ ಜಾಮೀನು ಉಲ್ಲೇಖವಿದೆ. 22 ತೀರ್ಪುಗಳಲ್ಲಿ ನಿರಂಜನ್ ಕೇಸ್‌ ಅನ್ನು ಅನುಸರಿಸಲಾಗಿದೆ. ಕಸ್ಟಡಿಯಲ್ಲಿದ್ದಾಗಲೂ ಜಾಮೀನು ನೀಡಿರುವ ಉಲ್ಲೇಖವಿದೆ. ಒಂದೊಂದು ದಿನ ಒಬ್ಬೊಬ್ಬರನ್ನು ಎಸ್‌ಪಿಪಿಯಾಗಿ ನೇಮಕ ಮಾಡಲಾಗುತ್ತಿದೆ. ಮೊದಲು ಜಗದೀಶ್ ಇದ್ದರು, ಈಗ ಜಯ್ನಾ ಕೊಠಾರಿ ಇದ್ದಾರೆ. ಎಸ್‌ಪಿಪಿ ನೇಮಕಕ್ಕೂ ಕಾನೂನಿನಲ್ಲಿ ಕೆಲ ಕ್ರಮಗಳಿವೆ ಎಂದು ವಾದಿಸಿದರು.

ಈ ವೇಳೆ ವಾದ ಮಂಡನೆಗೆ ಜಯ್ನಾ ಕೊಠಾರಿ ಕಾಲಾವಕಾಶ ಕೋರಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಡ್ಜ್‌, ಈಗಾಗಲೇ ಆಕ್ಷೇಪಣೆಗೆ 3 ಬಾರಿ ಸಮಯ ನೀಡಲಾಗಿದೆ. ಇನ್ನೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ

ಈ ವೇಳೆ ವಾದ ಮುಂದುವರಿಸಿದ ನಾಗೇಶ್‌, ಪ್ರಕರಣದಲ್ಲಿ ಹಾಕಿದ ಸೆಕ್ಷನ್‌ಗಳ ಬಗ್ಗೆ ಉಲ್ಲೇಖಿದರು. ಸಂತ್ರಸ್ತೆ ಎಲ್ಲಿದ್ದಾರೆ, ಸಂತ್ರಸ್ತೆಗೆ ಏನಾದರೂ ಗಾಯವಾಗಿದೆಯಾ? ಸಂತ್ರಸ್ತೆಯ ಪರಿಸ್ಥಿತಿಯ ಬಗ್ಗೆ ಎಸ್‌ಐಟಿ ಮಾತನಾಡುತ್ತಿಲ್ಲ. ಸಂತ್ರಸ್ತೆ ಪತ್ತೆಯಾಗದ ಕಾರಣ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿತ್ತು. ಮಹಿಳೆಯ ಸುರಕ್ಷತೆ ಸಂಬಂಧ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಲಾಗಿತ್ತು. 364(a), 365 ಅಡಿ ಕೇಸ್ ದಾಖಲಿಸುವ ಅಗತ್ಯವೇ ಇರಲಿಲ್ಲ ಎಂದು ವಕೀಲರಾದ ನಾಗೇಶ್‌ ಅವರು ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಮಾನ ಹೈಜಾಕ್ ಪ್ರಕರಣದ ಉಲ್ಲೇಖ

ಈ ವೇಳೆ ವಿಮಾನ ಹೈಜಾಕ್ ಪ್ರಕರಣವನ್ನು ಉಲ್ಲೆಖಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಈ ಹಿಂದೆ ವಿಮಾನ ಹೈಜಾಕ್ ಮಾಡಿ ಉಗ್ರನ ಬಿಡುಗಡೆಗೆ ಕೋರಿದ್ದರು. ವಿಮಾನ ಹೈಜಾಕ್ ಸಮಯದಲ್ಲಿ ಜಸ್ವಂತ್ ಸಿಂಗ್ ಮಂತ್ರಿ ಆಗಿದ್ದರು. ಆಗ ಉಗ್ರರನ್ನು ಬಿಟ್ಟು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬಿಡಿಸಿದ್ದರು. ಇದಾದ ಬಳಿಕವೇ ಸೆಕ್ಷನ್ 364(a) ಸೇರಿಸಲಾಯಿತು. ಇಲ್ಲಿ ಇಂತಹ ಘಟನೆ ನಡೆದಿಲ್ಲವಾದರೂ ಸೆಕ್ಷನ್ 364(a) ಸೇರಿಸಲಾಗಿದೆ. ನಮ್ಮ ಕಕ್ಷಿದಾರ ರೇವಣ್ಣ ವಿರುದ್ಧ 364(a) ದಾಖಲು ಮಾಡಿದ್ದಾರೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ 21 ವರ್ಷದ ಮಗ ದೂರು ನೀಡಿದ್ದಾನೆ ಎಂದು ವಾದ ಮಂಡಿಸಿದರು.

ಸಿಎಂ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಲು ‌ಸಾಧ್ಯವೇ?

ಮಹಿಳೆಯನ್ನು ಅಪಹರಿಸಿ ವಿದೇಶಕ್ಕೆ ಕರೆದೊಯ್ದರೆ ಈ ಸೆಕ್ಷನ್‌ಗಳು ಅಪ್ಲೇ ಆಗುತ್ತವೆ. ಪ್ರಕರಣದಲ್ಲಿ ರೇವಣ್ಣ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಸಾರಾಂಶ ಉಲ್ಲೇಖಿಸಿದ ನಾಗೇಶ್‌, ದೂರುದಾರ ಮಗನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದಾರೆಂದು ಹೇಳಿದ್ದಾರೆ. ದೂರುದಾರನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು. ದೂರಿನಲ್ಲಿ ಇರುವ ಸತೀಶ್ ಬಾಬು ಹೇಳಿಕೆಯನ್ನು ಗಮನಿಸೋಣ. ಅದರಲ್ಲಿ “ನಿನ್ನ ತಾಯಿ ಮೇಲೆ ಪೊಲೀಸ್ ಕೇಸ್ ಆಗುತ್ತದೆ. ರೇವಣ್ಣ ಕರೆದಿದ್ದಾರೆಂದು ಹೇಳಿ ಕರೆದುಕೊಂಡು ಹೋದರು” ಎಂದು ಆರೋಪ ಮಾಡಲಾಗಿದೆ. ಹಾಗಾದರೆ, ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಲು ‌ಸಾಧ್ಯವೇ? ರೇವಣ್ಣ ಸಾಹೇಬರು ಹೇಳಿದ್ದಾರೆ ಎಂದು ಕರೆದೊಯ್ದರೆ ಅದು ಅಪಹರಣವೇ? ಇದರಲ್ಲಿ ಮೋಸವಿದೆಯೇ? ಬಲ ಪ್ರಯೋಗವಿದೆಯೇ? ಹೀಗಾಗಿ ಇಲ್ಲಿ ಅಪಹರಣದ ಯಾವುದೇ ಅಂಶಗಳು ಅನ್ವಯವಾಗುವುದಿಲ್ಲ ಎಂದು ವಾದ ಮಂಡಿಸಿದರು.

ಪೊಲೀಸರು ಹಲ್ಲಿಲ್ಲದ ಹಾವುಗಳು

ಈ ಪ್ರಕರಣದಲ್ಲಿ ಅಪಹರಣಕ್ಕೊಳಗಾದವರೇ ಆಕ್ಷೇಪಣೆ ಸಲ್ಲಿಸಬೇಕು. ಬೇರೆ ಯಾರೂ ಆಕ್ಷೇಪಣೆ ಸಲ್ಲಿಸಲಾಗುವುದಿಲ್ಲ. 365 ಅಕ್ರಮ ಬಂಧನ‌ ಸೆಕ್ಷನ್ ಕೂಡ ಅನ್ವಯ ಆಗುವುದಿಲ್ಲ. ಇಲ್ಲಿ ಏನು ಡಿಮ್ಯಾಂಡ್ ಇದೆ? ಅಪಹರಣವೂ ಇಲ್ಲ,‌ ಅಕ್ರಮ ಬಂಧನವೂ ಇಲ್ಲ. ನಾಳೆ‌ ಯಾರಿಂದಲಾದರೂ ಹೇಳಿಕೆ ಪಡೆದು ಸಾಕ್ಷ್ಯ ಸೃಷ್ಟಿಸಬಹುದು. ಏಕೆಂದರೆ ಪೊಲೀಸರು ಹಲ್ಲಿಲ್ಲದ ಹಾವುಗಳು. ಪೊಲೀಸರಿಗೆ ಸೆಕ್ಷನ್ 161 ಹೇಳಿಕೆ ಎಂಬ ಅಸ್ತ್ರ ಇದೆ. ಇನ್ನು ಎಚ್.ಡಿ.ರೇವಣ್ಣ ರಾಜಕೀಯ ಪಕ್ಷದಲ್ಲಿದ್ದಾರೆ ಎಂದು ನಾಗೇಶ್‌ ವಾದಿಸಿದರು.

ಇದನ್ನೂ ಓದಿ: Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಪ್ರಚೋದನೆಯಿಂದ ಕೂಡಿದ ಕೇಸ್‌ ಇದು

ಏಪ್ರಿಲ್ 29ರಂದು ಕಿಡ್ನ್ಯಾಪ್ ಆಗುತ್ತೆ, 4 ದಿನ ಬಿಟ್ಟು ಎಫ್‌ಐಆರ್‌ ದಾಖಲು ಮಾಡಲಾಗುತ್ತದೆ. ಏ.29ಕ್ಕೆ ಘಟನೆ ನಡೆದಿದೆ ಎಂದು ಉಲ್ಲೇಖಿಸಿದ್ದು, ಮೇ 2ರಂದು ಕೇಸ್ ದಾಖಲು ಮಾಡಲಾಗಿದೆ. ಮೊದಲು ಹೊಳೆನರಸೀಪುರ ಠಾಣೆಯಲ್ಲಿ ‌ಕೇಸ್ ದಾಖಲಾಗಿತ್ತು. ಅಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಸೆಕ್ಷನ್‌ಗಳು ಇತ್ತು. ನಂತರ ಪೊಲೀಸರು 41A ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಮೇ 3ರಂದು ನೋಟಿಸ್ ನೀಡಿ ಮೇ 4ರಂದು ವಿಚಾರಣೆಗೆ ಬರಲು ಹೇಳಿದ್ದಾರೆ. ರೇವಣ್ಣ ವಿರುದ್ಧ ದಾಖಲಾದ ಕೇಸ್ ಪ್ರಚೋದನೆಯಿಂದ ಆಗಿದೆ. ಪ್ರಚೋದನೆಯಿಂದ ಕೇಸ್ ಹಾಕಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ರೇವಣ್ಣಗೆ ಜಾಮೀನು ನೀಡಬೇಕೆಂದು ಸಿ.ವಿ.ನಾಗೇಶ್ ಬಲವಾಗಿ ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್‌ ಏನು ಹೇಳಿದೆ?

ತನಿಖೆಗೆ ಸಹಕರಿಸುತ್ತಿಲ್ಲ ಅಂತಾರೆ, ಯಾವ ರೀತಿ ಸಹಕರಿಸಬೇಕು. ಎಚ್.ಡಿ. ರೇವಣ್ಣ ಅವರ ತನಿಖೆ ಬಹುತೇಕ ಮುಗಿದಿದೆ. ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಆದೇಶವನ್ನು ನೀಡಿದೆ. ಕಸ್ಟಡಿಯಲ್ಲಿದ್ದಾಗ ತನಿಖೆ ಮುಗಿದಿದ್ದರೆ ಬೇಲ್ ನೀಡಬಹುದೆಂದು ಹೇಳಿದೆ. ರೇವಣ್ಣರನ್ನು ಕಸ್ಟಡಿಗೆ ತೆಗೆದುಕೊಂಡು ಹೇಳಿಕೆ ಪಡೆದಿದ್ದಾರೆ. ಎಸ್‌ಐಟಿ ಏನೆಲ್ಲ ಸಾಕ್ಷಿ ಸಂಗ್ರಹಿಸಿದೆ ಎಂದು ಹೇಳಬೇಕು.

ಸಂತ್ರಸ್ತೆಯನ್ನು ಎಲ್ಲಿಂದ ಕರೆದುಕೊಂಡು ಬಂದರು? ಯಾವುದನ್ನು ನಂಬಬೇಕು?

ಕಿಡ್ನ್ಯಾಪ್ ಸಂತ್ರಸ್ತೆಗೆ ಏನಾದರೂ ಗಾಯಗಳಾಗಿವೆಯಾ? ಕಿಡ್ನ್ಯಾಪ್ ಸಂತ್ರಸ್ತೆಗೆ ಯಾವುದೇ ಚಿಕಿತ್ಸೆಯನ್ನು ಕೊಡಿಸಿಲ್ಲ. ಸಂತ್ರಸ್ತೆಯನ್ನು ನ್ಯಾಯಾಧೀಶರ ಮುಂದೆಯೂ ಹಾಜರುಪಡಿಸಿಲ್ಲ. 164 ಅಡಿಯಲ್ಲಿ ಹೇಳಿಕೆಯೂ ದಾಖಲಿಸಿಲ್ಲ. ಇಷ್ಟು ದಿನವಾದ್ರು ಯಾಕೆ 164 ಸ್ಟೇಟ್ಮೆಂಟ್ ಮಾಡಿಸಿಲ್ಲ. ಎಸ್‌ಐಟಿಯವರು ಕಳೆದ 6 ದಿನಗಳಿಂದ ಏನ್ ಮಾಡುತ್ತಿದ್ದಾರೆ? ಸಂತ್ರಸ್ತೆ ಪತ್ತೆಯಾದ ಸ್ಥಳದ ಕಂದಾಯ ದಾಖಲೆ ಪಡೆಯಬೇಕಂತಾರೆ. ಮುಂದಿನ ತನಿಖೆ ನಡೆಸಲಾಗುವುದು ಎಂದು ಹೇಳುತ್ತಾರೆ, ಇದರರ್ಥವೇನು? ಸಂತ್ರಸ್ತೆ ಕೂಡಿಹಾಕಿದ್ದ ಸ್ಥಳ ಪರಿಶೀಲಿಸಬೇಕು ಎಂದು ಹೇಳುತ್ತಾರೆ. ಹಾಗಾದರೆ ಇವರು ಸಂತ್ರಸ್ತೆಯನ್ನು ಎಲ್ಲಿಂದ ಕರೆದುಕೊಂಡು ಬಂದರು? ಸಂತ್ರಸ್ತೆಯನ್ನು ಕರೆದೊಯ್ದ ವಾಹನ ಪತ್ತೆ ಹಚ್ಚಬೇಕು ಎಂದು ಹೇಳುತ್ತಾರೆ. ವಾಹನ ಸೀಜ್ ಮಾಡಬೇಕಿದೆ ಎಂದು ಕೂಡ ಹೇಳಿದ್ದಾರೆ. ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಗಾಡಿ ಸೀಜ್ ಬಗ್ಗೆ ತಿಳಿಸಿದ್ದಾರೆ. ಇವರು ಎಷ್ಟು ವಾಹನಗಳನ್ನು ಸೀಜ್ ಮಾಡಬೇಕು? ಆರೋಪಿ ಕೃತ್ಯಕ್ಕೆ ಬಳಸಿದ ಬೈಕ್, ಮೊಬೈಲ್ ಸೀಜ್ ಆಗಿದೆ ಎಂದು ಎಸ್‌ಐಟಿಯವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಒಂದು ಕಡೆ ಸೀಜ್ ಮಾಡಬೇಕು ಎಂದು ಹೇಳಿಕೆ ಕೊಡುತ್ತಾರೆ. ಮತ್ತೊಂದು ಕಡೆ ವಾಹನ ಸೀಜ್ ಮಾಡಿರುವುದಾಗಿ ಅವರು ಹೇಳುತ್ತಾರೆ. ಯಾವುದನ್ನು ನಂಬಬೇಕು ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.

ಈ ವಿಷಯದಲ್ಲಿ ರೇವಣ್ಣ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅನ್ಯಾಯಕ್ಕೂ ಒಂದು ಮಿತಿ ಇರಬೇಕು. ತನಿಖಾಧಿಕಾರಿಗಳು ನಾಲ್ಕು ದಿನಗಳಿಂದ ಏನು ಮಾಡುತ್ತಿದ್ದಾರೆ. ಎಸ್‌ಐಟಿಯವರು ಸ್ಥಳ ಮಹಜರು ಮಾಡಬೇಕು ಎಂದು ಹೇಳುತ್ತಾರೆ. ಆರೋಪಿ ಸತೀಶ್ ಬಾಬಣ್ಣ ಸಂತ್ರಸ್ತೆಯನ್ನು ಕರೆದೊಯ್ದ ಸ್ಥಳ, ಸಂತ್ರಸ್ತೆಯನ್ನ ಕೂಡಿಹಾಕಿದ ಸ್ಥಳ ಮಹಜರು ಮಾಡಬೇಕಂತಾರೆ. ಹಾಗಾದರೆ ಸ್ಥಳೀಯ ಪೊಲೀಸರು ಏನು ಮಾಡುತ್ತಾರೆ? ಸ್ಥಳೀಯ ಪೊಲೀಸರಿಂದ ಒಂದು ಸಲ ಸ್ಥಳ ಮಹಜರು, ಎಸ್‌ಐಟಿ ಒಂದು ಸಲ ಸ್ಥಳ ಮಹಜರು ಮಾಡಬೇಕಾ? ಎಸ್ಐಟಿ ಯಾವ ಕಾರಣಕ್ಕೆ ಪೊಲೀಸ್ ಕಸ್ಟಡಿಗೆ ಕೇಳಿತ್ತು ಎಂದು ರಿಮ್ಯಾಂಡ್ ಅರ್ಜಿಯನ್ನು ವಕೀಲ ಸಿ.ವಿ.ನಾಗೇಶ್ ಓದಿ ಹೇಳಿದರು. ಪೊಲೀಸರು ನೀಡಿದ್ದ ಕಾರಣಗಳನ್ನು ಇದೇ ವೇಳೆ ಪ್ರಶ್ನಿಸಿದರು.

ಸಂತ್ರಸ್ತೆಯಿಂದ‌ 164 ಹೇಳಿಕೆ‌ ದಾಖಲಿಸಬೇಕಿದೆ ಎಂದು ಎಸ್ಐಟಿ ಹೇಳಿದೆ. ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ ಇಷ್ಟು ದಿನ ಏನು ಮಾಡುತ್ತಲಿದೆ? ಎಂದು ನಾಗೇಶ್‌ ಪ್ರಶ್ನೆ ಮಾಡಿದರು.

ಇಡೀ ಪ್ರಕರಣದ ಟೈಂ ಲೈನ್‌ ಹೇಳಿದ ಜಯ್ನಾ ಕೊಠಾರಿ

ಆಗ ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿ, ಎಚ್‌.ಡಿ. ರೇವಣ್ಣಗೆ ಜಾಮೀನು ನೀಡಲು ಎಸ್‌ಪಿಪಿಯಿಂದ ಆಕ್ಷೇಪವಿದೆ. ಸಂತ್ರಸ್ತೆ ಪುತ್ರನಿಗೆ ಮೊದಲು ಸಂತ್ರಸ್ತೆ ವಿಡಿಯೊ ಬಗ್ಗೆ ತಿಳಿಯುತ್ತದೆ. ಸಾಕಷ್ಟು ಮಹಿಳೆಯರೊಂದಿಗಿರುವ ಅಶ್ಲೀಲ ವಿಡಿಯೊಗಳೂ ಕಾಣುತ್ತದೆ. ಅದಾದ ಬಳಿಕ ‌ಮಹಿಳಾ ‌ಆಯೋಗಕ್ಕೆ ದೂರು ನೀಡುತ್ತಾರೆ. ಹೊಳೆನರಸೀಪುರ ಠಾಣೆಯಲ್ಲಿ ಒಂದು ‌ಪ್ರಕರಣ ದಾಖಲಾಗುತ್ತದೆ. ಬಳಿಕ ಸರ್ಕಾರದಿಂದ ಎಸ್‌ಐಟಿ ರಚನೆಯಾಗಿದೆ ಎಂದು ಇಡೀ ಪ್ರಕರಣದ ಟೈಂ ಲೈನ್‌ ಅನ್ನು ಹೇಳಿದರು.

ಸಂತ್ರಸ್ತೆಯ ಅಶ್ಲೀಲ ವಿಡಿಯೊ ಇದೆ

ಸಂತ್ರಸ್ತೆ ಆರೋಪಿ ಮನೆಯಲ್ಲಿ 6 ವರ್ಷದಿಂದ ಕೆಲಸ ಮಾಡುತ್ತಿದ್ದರು. ಏಪ್ರಿಲ್ 28ರ ರಾತ್ರಿ ಸಂತ್ರಸ್ತೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಅದಾದ ಬಳಿಕ ಆಕೆ ಪತ್ತೆಯಾಗಿರಲಿಲ್ಲ. ಸಂತ್ರಸ್ತೆ ಪುತ್ರ ಹಲವರಿಗೆ ಕರೆ ಮಾಡಿ ತಾಯಿ ಬಗ್ಗೆ ಮಾಹಿತಿ ಕೇಳಿದ್ದಾರೆ. ಬಳಿಕ‌ ತನ್ನ ತಾಯಿ‌ ‌ತೊಂದರೆಯಲ್ಲಿದ್ದಾಳೆಂದು ದೂರು ನೀಡಿದ್ದಾರೆ. ಅಶ್ಲೀಲ‌ ವಿಡಿಯೋಗಳಲ್ಲಿ ಸಂತ್ರಸ್ತೆ ಗುರುತು ಸಿಗುವಂತೆ ರೆಕಾರ್ಡ್ ಆಗಿದೆ. ಬಳಿಕ ತನಿಖೆ ಕೈಗೊಂಡ ಬಳಿಕ ಎಸ್‌ಐಟಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದೆ. ಸಂತ್ರಸ್ತೆಯನ್ನು ಅಪಹರಿಸಿ 40 ಕಿ.ಮೀ. ದೂರದಲ್ಲಿ ಕೂಡಿ ಹಾಕಲಾಗಿತ್ತು. ಸಂತ್ರಸ್ತೆಯನ್ನು ಕೂಡಿಹಾಕಿದ್ದ ಸ್ಥಳ ಆರೋಪಿ ಸಂಬಂಧಿಗೆ ಸೇರಿದ್ದಾಗಿದೆ. ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತೆಯ ಅಶ್ಲೀಲ ವಿಡಿಯೊ ಇದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು

ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಲಾಗಿದೆ. ಸಾಕ್ಷಿಗಳ ಹೇಳಿಕೆಯಲ್ಲೂ ರೇವಣ್ಣ ಹೆಸರು ಉಲ್ಲೇಖವಾಗಿದೆ. ಇದು ಸ್ಪಷ್ಟವಾಗಿ ಕಿಡ್ನ್ಯಾಪ್, ಒತ್ತೆಯಾಳಾಗಿಟ್ಟುಕೊಂಡ ಪ್ರಕರಣವಾಗಿದೆ. ಸಂತ್ರಸ್ತೆಯ ಪುತ್ರ ನೀಡಿರುವ ದೂರಿನಲ್ಲಿ ಹೇಳಿರೋದು ಸತ್ಯ. ಎಚ್.ಡಿ.ರೇವಣ್ಣ ವಿರುದ್ಧ ಸೆಕ್ಷನ್ 364(a) ಅನ್ವಯವಾಗುತ್ತದೆ. 364(a) ಅಡಿಯಲ್ಲಿ ದಾಖಲಾಗಿರೋ ಕೆಲ‌ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಹೀಗಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ತೀವ್ರತೆಯೂ ಜಾಸ್ತಿ ಇದೆ. ಆರೋಪಿಯ ತಪ್ಪು ಕಂಡುಬಂದಾಗ ಬಹುತೇಕ ಈ ಸೆಕ್ಷನ್‌ಗಳನ್ನೇ ಹಾಕಲಾಗುತ್ತದೆ ಎಂದು ಜಯಾ ಕೊಠಾರಿ ಹೇಳಿದರು.

ರೇವಣ್ಣ ನಾಪತ್ತೆಯಾದರೆ? ಸಂತ್ರಸ್ತೆಯರ ಕಿಡ್ನ್ಯಾಪ್‌ ಮಾಡಿಸಿದರೆ?

ಆರೋಪಿಯ ಪುತ್ರ ಪ್ರಜ್ವಲ್‌ ರೇವಣ್ಣ ನಾಪತ್ತೆಯಾಗಿದ್ದಾರೆ. ಆರೋಪಿ ಪುತ್ರನ ಪತ್ತೆಗೆ ಬ್ಲೂಕಾರ್ನರ್ ನೋಟಿಸ್ ನೀಡಲಾಗಿದೆ. ಆದರೂ ಇಲ್ಲಿಯವರೆಗೆ ಆರೋಪಿ ಪುತ್ರ ಎಲ್ಲಿದ್ದಾರೆಂದು ಪತ್ತೆಯಾಗಿಲ್ಲ. ಈವರೆಗೆ ವಾಪಸ್ ಕೂಡ ಬಂದಿಲ್ಲ. ಈ ಆರೋಪಿಯೂ ನಾಪತ್ತೆಯಾದರೆ ಏನು ಮಾಡುವುದು? ಅದಲ್ಲದೆ, ಆರೋಪಿ‌ ರೇವಣ್ಣ ತುಂಬಾನೇ ಪ್ರಭಾವಿಯಾಗಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಿದ್ರೆ ಸಾಕ್ಷ್ಯ ಹಾಳು‌ ಮಾಡುತ್ತಾರೆ. ಜಾಮೀನು‌ ನೀಡಿದರೆ ಸಂತ್ರಸ್ತೆ ಜೀವಕ್ಕೆ ಯಾರು ಗ್ಯಾರಂಟಿ ನೀಡ್ತಾರೆ? ಜಾಮೀನು ಪಡೆದು ಬೇರೆ ಮಹಿಳೆಯರನ್ನು ಕಿಡ್ನ್ಯಾಪ್‌ ಮಾಡಬಹುದು ಎಂದು ಜಯಾ ಕೊಠಾರಿ ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ತನ್ನ ತಾಯಿಯನ್ನು ಕಾಪಾಡುವಂತೆ ಸಂತ್ರಸ್ತೆ ಮಗ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಬಾರದು. ಎಚ್.ಡಿ.ರೇವಣ್ಣ ವಿರುದ್ದ ಎರುಡು ಎಫ್ಐಆರ್ ದಾಖಲಾಗಿವೆ. ರೇವಣ್ಣ ವಿರುದ್ಧ ಲೈಂಗಿಕ‌ ದೌರ್ಜನ್ಯವೆಸಗಿರುವ ಆರೋಪವೂ ಇದೆ. ಲೈಂಗಿಕ‌ ದೌರ್ಜನ್ಯವೆಸಗುವ ಆರೋಪಿಗಳಿಗೆ ಸಂದೇಶ ರವಾನೆಯಾಗಬೇಕು. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು. ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ಜಯಾ ಕೊಠಾರಿ ಮನವಿ ಮಾಡಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರ ವರದಿ ಸಲ್ಲಿಸಲು ಸೂಚಿಸಿದ್ದಲ್ಲದೆ, ಮತ್ತೆ ಸಮಯ ವ್ಯರ್ಥ ಮಾಡದಂತೆ ಸೂಚಿಸಿ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದರು

Continue Reading

ರಾಜಕೀಯ

Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

Lok Sabha Election 2024: 2024ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರುಸಿನ ಪ್ರಚಾರ ಮಾಡಿದ್ದರು. ಒಟ್ಟು 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಜನ‌ಸಮಾವೇಶಗಳನ್ನು ನಡೆಸಿದ್ದ ಅವರು, ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿಲೋ ಮೀಟರ್ ಸಂಚರಿಸಿದ್ದರು. ಸಿಎಂ ರೋಡ್ ಶೋ/ಸಭೆಗಳಲ್ಲಿ ಸರಾಸರಿ 15 ಸಾವಿರ ಮಂದಿ ಭಾಗಿಯಾಗಿದ್ದರು.

VISTARANEWS.COM


on

Lok Sabha Election 2024 26000 km travelled for Lok Sabha campaigning CM to campaign for 14 to 18 hours a day
Koo

ಬೆಂಗಳೂರು: ಈ ಭಾರಿ ಲೋಕಸಭಾ ಚುನಾವಣೆಯನ್ನು (Lok Sabha Election 2024) ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹಗಲು – ರಾತ್ರಿ ನಿರಂತರ ಪ್ರಚಾರ ಹಾಗೂ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಒಟ್ಟು 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಸಮಾವೇಶಗಳನ್ನು ನಡೆಸಿದ್ದಾರೆ. ಇದಕ್ಕಾಗಿ ರಾಜ್ಯಾದ್ಯಂತ ಸುಮಾರು 26 ಸಾವಿರ ಕಿಲೋ ಮೀಟರ್‌ವರೆಗೆ ಸಂಚಾರವನ್ನು ಮಾಡಿದ್ದಾರೆ. ಸಿಎಂ ರೋಡ್‌ ಶೋ (CM Road Show) ಹಾಗೂ ಸಭೆಗಳಲ್ಲಿ ಸರಾಸರಿ 15 ಸಾವಿರ ಮಂದಿ ಭಾಗಿಯಾಗಿದ್ದರು. ಅಲ್ಲದೆ, ದಿನಕ್ಕೆ ಸರಾಸರಿ 14-18 ಗಂಟೆಗಳ ಕಾಲ ಪ್ರಚಾರಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸರಾಸರಿ ದಿನಕ್ಕೆ 14-18 ಗಂಟೆ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ರಸ್ತೆ ಮಾರ್ಗ ಮತ್ತು ವಾಯು ಮಾರ್ಗಗಳು ಸೇರಿವೆ. ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ನಡೆಸಿದ್ದ ಸಿಎಂ, ಕೆಲವು ಕಡೆ ಆಯಾ ಭಾಗದ ಸಮುದಾಯ ಮುಖಂಡರ ಜತೆ ಸಂವಾದವನ್ನೂ ನಡೆಸಿದ್ದರು.

ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ “ಪ್ರಜಾಧ್ವನಿ-2” ಜನ ಸಮಾವೇಶಗಳ ನಡೆಸಿದ ಅವರು, ಕೇಂದ್ರ ಸರ್ಕಾರದಿಂದ ಅನುದಾನ ತಾರತಮ್ಯ ಹಾಗೂ ಜಿಎಸ್‌ಟಿ ಅನುದಾನ ಹಂಚಿಕೆ ವಿರುದ್ಧವಾಗಿ ಭಾಷಣ ಮಾಡುತ್ತಾ ಬಂದರು. ಜತೆಗೆ ಬಿಜೆಪಿ ಮೇಲೆಯೂ ಅಟ್ಯಾಕ್‌ ಹಾಗೂ ಕೌಂಟರ್‌ ಅಟ್ಯಾಕ್‌ಗಳನ್ನು ಮಾಡುತ್ತಾ ಬಂದರು.

ಮತ ಪ್ರಭುವ ಸೆಳೆಯಲು ಸಿಎಂ ಕಸರತ್ತಿನ ಮಾತುಗಳು ಮತ್ತು ಪ್ರಭಾವ

1) ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ!

2) ಅಂಬಾನಿ, ಅದಾನಿ ಬಗ್ಗೆ ನೇರವಾದ ಟೀಕೆ ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಳೆದ ಹತ್ತು ವರ್ಷಗಳ ಆಡಳಿತದ ಬಗ್ಗೆ ಟೀಕೆ.

3) ಸೋಷಿಯಲ್‌ ಮೀಡಿಯಾ ಸಹಿತ ಸಮಾವೇಶಗಳಲ್ಲಿ “ಖಾಲಿ ಚೊಂಬು” ಪ್ರಸ್ತಾಪ.

4) ಅನ್ನ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳ ಬಗ್ಗೆ ಅಂಕಿ – ಅಂಶಗಳ ಸಹಿತ ವಿವರಣೆ

5) ಪ್ರಧಾನಿ ನರೇಂದ್ರ ಮೋದಿಯವರ “ಅಚ್ಛೇ ದಿನ್ ಆಯೇಂಗೆ” ಎನ್ನುವ ಪದಗಳನ್ನು ಬಳಕೆ ಮಾಡಿ ಲೇವಡಿ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ

6) ಐದೂ ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪ. ಜತೆಗೆ ದೇಶದಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿಗಳ ಬಗ್ಗೆ ಜನರಿಗೆ ಮನದಟ್ಟಾಗುವ ರೀತಿ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

ಇದನ್ನೂ ಓದಿ: Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

7) ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದು ಅಂದಾಜು 26 ಸಾವಿರ ಕಿಲೋ ಮೀಟರ್ ಆಗಿದೆ. ಈ 90 ಸಭೆಗಳು/ರೋಡ್ ಶೋಗಳಲ್ಲಿ 7 ಸಾವಿರದಿಂದ 60 ಸಾವಿರದವರೆಗೂ ಜನ ಸೇರಿದ್ದರು.

8) ರೋಡ್ ಶೋ/ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಮಾಣ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರಾ ನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ.

Continue Reading

ದೇಶ

Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

Mani Shankar Aiyar: ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಣಿಶಂಕರ್‌ ಅಯ್ಯರ್‌, ಭಾರತ ಪಾಕಿಸ್ತಾನಕ್ಕೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ ಎಂದರು.

VISTARANEWS.COM


on

mani shankar iyer
Koo

ನವದೆಹಲಿ: ಕಾಂಗ್ರೆಸ್‌ ಪಾಕಿಸ್ತಾನದ ಫಾಲೋವರ್‌ ಪಕ್ಷ ಎಂದು ಪದೇ ಪದೇ ಬಿಜೆಪಿ ಜಡಿಯುತ್ತಿದ್ದರೂ ಒಂದಿಲ್ಲೊಂದು ಒಂದು ಪಾಕ್‌(Pakistan) ಪರ ಹೇಳಿಕೆ ನೀಡಿ ಕಾಂಗ್ರೆಸ್‌ ನಾಯಕರು ಪಕ್ಷಕ್ಕೆ ಮುಜುಗರ ತರುತ್ತಲೇ ಇದ್ದಾರೆ. ಅಲ್ಲದೇ ಬಿಜೆಪಿ ಆರೋಪಕ್ಕೆ ಆಹಾರವಾಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ನಾಯಕರು ಪಾಕ್‌ ಪರವಾಗಿ ಬ್ಯಾಟಿಂಗ್‌ ಬೀಸಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಕಾಂಗ್ರೆಸ್ (Congress) ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) ಅವರು ಪಾಕ್‌ ಪರ ಹೇಳಿಕೆ ನೀಡಿ ವಿವಾದಕ್ಕಿಡಾಗಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಿಜೆಪಿ ತೀವ್ರವಾಗಿ ಖಂಡಿಸಿದೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಣಿಶಂಕರ್‌ ಅಯ್ಯರ್‌, ಭಾರತ ಪಾಕಿಸ್ತಾನಕ್ಕೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜೊತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ.. ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಒಂದು ವೇಳೆ ಅವರನ್ನು ದ್ವೇಷಿಸಿದರೆ ಹುಚ್ಚನೊಬ್ಬ ಬಂದು ಬಾಂಬ್‌ ಸ್ಫೋಟಿಸುತ್ತಾನೆ ಎಂದು ಹೇಳಿದರು. ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ.

ಈ ಹಿಂದೆಯೂ ಒಮ್ಮೆ ಮಣಿಶಂಕರ್‌ ಅಯ್ಯರ್‌ ಪಾಕ್‌ ಪರ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಪಾಕಿಸ್ತಾನೀಯರನ್ನು ಅವರು “ಭಾರತದ ಅತಿದೊಡ್ಡ ಆಸ್ತಿ” ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. “ನನ್ನ ಅನುಭವದ ಪ್ರಕಾರ, ಪಾಕಿಸ್ತಾನಿಯರು ಬಹುಶಃ ಎದುರಿನವರಿಗೆ ಅತಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುವ ಜನರು. ನಾವು ಸ್ನೇಹಪರರಾಗಿದ್ದರೆ ಅವರು ಅತಿಯಾದ ಸ್ನೇಹಪರರಾಗಿರುತ್ತಾರೆ ಮತ್ತು ನಾವು ದ್ವೇಷಿಸಿದರೆ ಅವರು ತುಂಬಾ ದ್ವೇಷಿಸಬಲ್ಲರು. ಪಾಕಿಸ್ತಾನದಂತೆ ನನ್ನನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ ಇನ್ನೊಂದು ದೇಶಕ್ಕೆ ನಾನು ಯಾವತ್ತೂ ಹೋಗಿಲ್ಲ” ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದರು.

ಇದನ್ನೂ ಓದಿ: Murder Case : ಕೊಡಗಿನಲ್ಲಿ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯ ರುಂಡ ಕತ್ತರಿಸಿ ಕೊಂದ ಪ್ರೇಮಿ

ಎರಡು ದಿನಗಳ ಹಿಂದೆ ಹರಿಯಾಣದ ಫರಿದಾಬಾದ್‌ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಮಹೇಂದರ್‌ ಪ್ರತಾಪ್‌ ಸಿಂಗ್‌(Mahender Pratap Singh) 2019ರಲ್ಲಿ ನಡೆದ ಪುಲ್ವಾಮಾ ದಾಳಿ(Pulwama attack) ಪಾಕಿಸ್ತಾನ ನಡೆಸಿರುವುದಲ್ಲ, ಬದಲಿಗೆ ಭಾರತ ಸರ್ಕಾರ ನಡೆಸಿರುವುದು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿದ್ದರು.

Continue Reading
Advertisement
Aravind Kejriwal
ಪ್ರಮುಖ ಸುದ್ದಿ4 mins ago

Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

KIA bengaluru terminal 2
ಪ್ರಮುಖ ಸುದ್ದಿ22 mins ago

Terminal 2: ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ; ವಿಮಾನ ಹಾರಾಟ ಅಸ್ತವ್ಯಸ್ತ

Prajwal Revanna Case Pen drive case personal quarrel No threat to BJP and JDS alliance says R Ashoka
ರಾಜಕೀಯ22 mins ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ ವೈಯಕ್ತಿಕ ಜಗಳ; ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಧಕ್ಕೆ ಇಲ್ಲ: ಆರ್.‌ ಅಶೋಕ್‌

Physical Abuse The public prosecutor called the client woman to the lodge
ಕ್ರೈಂ23 mins ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

Roopa Iyer
ಕ್ರೈಂ44 mins ago

Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

Viral video
ಕ್ರೈಂ51 mins ago

Viral Video:ಛೀ.. ಎಂಥಾ ಹೇಯ ಕೃತ್ಯ! ಶಾಲಾ ಬಾಲಕಿ ಮೇಲೆ ಆಟೋ ಚಾಲಕನ ನೀಚ ಕೃತ್ಯ; ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case SIT issues 2nd notice to Bhavani Revanna Big trouble for Revanna family
ಕ್ರೈಂ54 mins ago

Prajwal Revanna Case: ಭವಾನಿ ರೇವಣ್ಣಗೆ SIT 2ನೇ ನೋಟಿಸ್‌; ರೇವಣ್ಣ ಫ್ಯಾಮಿಲಿಗೆ ಭಾರಿ ಸಂಕಷ್ಟ!

Murder case
ಬೆಳಗಾವಿ1 hour ago

Murder Case: ಆಸ್ತಿಗಾಗಿ ದಾಯಾದಿಗಳ ಕಲಹ; ತಲೆ ಮೇಲೆ ರುಬ್ಬುವ ಕಲ್ಲು ಎತ್ತಿಹಾಕಿ ಕೊಲೆ

mustafa paichar praveen nettar ಪ್ರವೀಣ್‌ ನೆಟ್ಟಾರು
ಪ್ರಮುಖ ಸುದ್ದಿ1 hour ago

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ; ಈತನನ್ನು ಹಿಡಿದುಕೊಟ್ಟವರಿಗಿತ್ತು 5 ಲಕ್ಷ ಬಹುಮಾನ!

Narendra Dabholkar
ದೇಶ2 hours ago

Narendra Dabholkar Case: ವಿಚಾರವಾದಿ ದಾಭೋಲ್ಕರ್ ಹತ್ಯೆ ಪ್ರಕರಣ; ಹಂತಕರಿಗೆ ಜೀವಾವಧಿ ಶಿಕ್ಷೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect In karnataka
ಮಳೆ3 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ10 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ17 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ18 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ19 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು1 day ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ1 day ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಟ್ರೆಂಡಿಂಗ್‌