BJP-JDS Alliance : ಜೆಡಿಎಸ್‌-ಬಿಜೆಪಿ ಮೈತ್ರಿಗೆ ಪ್ರೀತಂ ಗೌಡ ಕಡುವಿರೋಧ; ಡಿಕೆಶಿ ಹೊಗಳಿದ ಅವರೇನಾದ್ರೂ ಕಾಂಗ್ರೆಸ್‌ ಸೇರ್ತಾರಾ? - Vistara News

ಕರ್ನಾಟಕ

BJP-JDS Alliance : ಜೆಡಿಎಸ್‌-ಬಿಜೆಪಿ ಮೈತ್ರಿಗೆ ಪ್ರೀತಂ ಗೌಡ ಕಡುವಿರೋಧ; ಡಿಕೆಶಿ ಹೊಗಳಿದ ಅವರೇನಾದ್ರೂ ಕಾಂಗ್ರೆಸ್‌ ಸೇರ್ತಾರಾ?

BJP-JDS Alliance : ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ನಿಜಕ್ಕೂ ನಡೆಯುತ್ತದೆಯೇ ಎನ್ನುವುದು ಈಗ ಅಡ್ಡಗೋಡೆ ಮೇಲಿದೆ. ಆಗುವುದೇ ಆದರೆ ಬಿಜೆಪಿಯಲ್ಲಿ ತೀವ್ರ ವಿರೋಧ ಇರುವುದು ಕಂಡುಬರುತ್ತಿದೆ. ಪ್ರೀತಂ ಗೌಡ ಅವರ ಮೂಲಕ ಈ ಧ್ವನಿ ಹೊರಹೊಮ್ಮಿದಂತಿದೆ.

VISTARANEWS.COM


on

Preetham Gowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2024) ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ (BJP-JDS Alliance) ಮಾಡಿಕೊಳ್ಳಲಿವೆ ಎಂಬ ಸುದ್ದಿಗಳ ನಡುವೆ ಬಿಜೆಪಿಯ ಕೆಲವು ನಾಯಕರು ಸಿಡಿದೆದ್ದಿದ್ದಾರೆ. ಅವರ ಧ್ವನಿಯಾಗಿ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಕಾಣಿಸಿಕೊಂಡಿದ್ದಾರೆ. ಮಾಧ್ಯಮ ಗೋಷ್ಠಿ ನಡೆಸಿದ ಅವರು ಅತ್ಯಂತ ಮುಕ್ತವಾಗಿ ಈ ಮೈತ್ರಿಯ ಪ್ರಸ್ತಾಪವನ್ನು, ಅದನ್ನು ಮುಂದಿಟ್ಟ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ನಾನಂತೂ ಮೈತ್ರಿಯನ್ನು ಒಪ್ಪಲ್ಲ ಎಂದು ಸ್ಪಷ್ಟಪಡಿಸಿದ ಅವರು ಅದರ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಮತ್ತು ಡಿ.ಕೆ. ಸುರೇಶ್‌ (DK Suresh) ಅವರನ್ನು ಹೊಗಳಿದ್ದು ಅಚ್ಚರಿ ಮೂಡಿಸಿತು. ಹಾಗಿದ್ದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಖಚಿತವಾದರೆ ಅವರು ಕಾಂಗ್ರೆಸ್‌ ಸೇರುವ ಸೂಚನೆ ಇದು ಎಂಬಂತೆ ಭಾಸವೂ ಆಯಿತು.

ಪ್ರೀತಂ ಗೌಡ ಹಾಸನದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುತ್ತಿರುವ ನಾಯಕ. ಜೆಡಿಎಸ್‌ನ ಗಟ್ಟಿ ನೆಲದಲ್ಲಿ ಅವರು ಬಿಜೆಪಿಯ ಕಮಲ ಅರಳಲು ಭಾರಿ ಸಾಹಸವನ್ನೇ ನಡೆಸಿದ್ದಾರೆ. ಇಂಥ ಪ್ರೀತಂ ಗೌಡ ಅವರಿಗೆ ಮುಂದಿನ ಚುನಾವಣೆಯಲ್ಲಿ ತಾನು ಹೋಗಿ ಜೆಡಿಎಸ್‌ ಪರ ಮತ ಕೇಳಬಹುದಾದ ಸನ್ನಿವೇಶ ನಿರ್ಮಾಣವಾಗಲಿದೆ ಎಂಬುದನ್ನು ಕಲ್ಪನೆ ಮಾಡುವುದಕ್ಕೇ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸಿಡಿದುಬಿದ್ದಿದ್ದಾರೆ.

ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಜೆಡಿಎಸ್‌ ನಾಯಕರ ವಿರುದ್ಧ ದೊಡ್ಡ ಸಮರವನ್ನೇ ಸಾರಿ, ಅಂತಿಮವಾಗಿ ಸೋಲು ಕಂಡ ಪ್ರೀತಮ್‌ ಗೌಡ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪರ ಹಾಕಿ ಎಂದು ಕಾರ್ಯಕರ್ತರನ್ನು ಹೇಗೆ ಕೇಳಲಿ ಎಂಬ ಮೂಲ ಪ್ರಶ್ನೆಯನ್ನು ಎತ್ತಿದ್ದಾರೆ. ಹಾಸನದಲ್ಲಿ ಇದು ಬೇಕಾಗೇ ಇರಲಿಲ್ಲ ಎನ್ನುವುದು ಅವರ ಸ್ಪಷ್ಟ ನುಡಿ.

ಡಿಕೆ ಸುರೇಶ್‌ ಗೆಲ್ಲಲಿ ಬಿಡಿ, ಒಕ್ಕಲಿಗರಲ್ವಾ? ಯೋಗೇಶ್ವರ್‌ ಮೇಲೆ ವಾಗ್ದಾಳಿ

ಕೆಲವೇ ಕೆಲವು ವ್ಯಕ್ತಿಗಳ ಸ್ವಾರ್ಥಕ್ಕಾಗಿ ಈ ಮೈತ್ರಿಯ ಪ್ರಸ್ತಾಪ ಮುಂದೆ ಬಂದಿದೆ. ಈಗ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 135 ಸ್ಥಾನ ಬಂದಿದೆ. ಹೀಗಾಗಿ ಅವರ ಆಟ ನಡೆಯುವುದಿಲ್ಲ ಎಂದು ಬಿಜೆಪಿ ಜತೆ ಕೈಜೋಡಿಸಲು ಬಂದಿದ್ದಾರೆ. ಒಂದು ವೇಳೆ ಬಿಜೆಪಿಗೆ 100 ಸೀಟು ಬಂದಿದ್ದರೆ ಇವರ ಆಟ ಹೇಗಿರುತ್ತಿತ್ತು ಅಂತ ನಾವೇ ನೋಡಿದ್ದೀವಲ್ಲಾ.. ಇಂಥವರನ್ನು ನಂಬಿ ಮೈತ್ರಿ ಮಾಡಿಕೊಂಡರೆ ನಮ್ಮ ಕಾರ್ಯಕರ್ತರಿಗೆ ನಾವು ಏನು ಹೇಳೋಣ ಎಂದು ಪ್ರೀತಂ ಗೌಡ ಕೇಳಿದ್ದಾರೆ.

ʻʻಈ ಮೈತ್ರಿಯ ಮೂಲ ಉದ್ದೇಶ ಇರುವುದು ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಅವರನ್ನು ಸೋಲಿಸೋದಕ್ಕೆ. ನಾನು ಮತ್ತು ಕುಮಾರಸ್ವಾಮಿ ಅವರು ಒಂದಾಗ್ತೇವೆ ಅಂತಾ ಪಾಪ ನಮ್ಮ‌ ಪಕ್ಷದ ಲೀಡರೇ (ಸಿ.ಪಿ. ಯೋಗೇಶ್ವರ್‌) ಮಾತನಾಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಸ್ವಾಮಿ ನೀವು ಕುಮಾರಸ್ವಾಮಿ ವಿರುದ್ಧ ಚುನಾವಣೆ ಮಾಡಿದ್ರಿ. ನಿಮ್ಮನ್ನ ನಂಬಿಕೊಂಡು ಕಾರ್ಯಕರ್ತರಿದ್ದಾರೆ. ಆ ಕಾರ್ಯಕರ್ತರನ್ನ ಬಿಟ್ಟು, ಈಗ ಸುರೇಶ್ ಅವರನ್ನು ಸೋಲಿಸೋದಕ್ಕೆ ನಾನು ಕುಮಾರಸ್ವಾಮಿ ಒಂದಾಗ್ತೇವೆ ಅಂದ್ರೆ ಏನರ್ಥ? ಮುಂದಿನ ಚುನಾವಣೆಯಲ್ಲಿ ನಿಮ್ಮ ಜೊತೆ ಯಾರು ನಿಲ್ತಾರೆʼʼ ಎಂದು ಸ್ವಪಕ್ಷದ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಪ್ರೀತಂ ಗೌಡ.

ʻʻನಾನು‌ ಮಾತಾಡ್ತಾ ಇರೋದು ದೂರದೃಷ್ಟಿಯ ರಾಜಕಾರಣ. ಬಿಜೆಪಿಗೆ 2028ಕ್ಕೆ ಅಧಿಕಾರ ಸಿಗಲಿಲ್ಲ ಅಂದ್ರೆ ಬಿಡಿ 33 ಕ್ಕೆ ಕಾಯೋಣ. ಅರ್ಜೆಂಟ್ ಏನಿದೆ? ಯಾರನ್ನೋ ಒಬ್ಬರನ್ನು ಸೋಲಿಸೋದಕ್ಕೆ ನಾವು ಒಂದಾಗ್ತೀವಿ ಅನ್ನೋದು ತಪ್ಪು. ಬಿಜೆಪಿ ಗೆಲ್ಲಬೇಕು ಅನ್ನೋ‌ ಮಾನಸಿಕತೆ ಇಟ್ಕೊಂಡು ಚುನಾವಣೆ ಮಾಡಿದ್ರೆ ಬಿಜೆಪಿ ಗೆಲ್ಲುತ್ತೆ. 28ಕ್ಕೆ 28ನ್ನೂ ಗೆಲ್ತೀವಿ, ನನಗೆ ನಂಬಿಕೆ ಇದೆʼʼ ಎಂದು ಹೇಳಿರುವ ಪ್ರೀತಂ ಗೌಡ, ಡಿ.ಕೆ ಸುರೇಶ್‌ ಅವರು ಎಂಪಿ ಆಗಲಿ ಬಿಡಿ, ಹಿಂದೆ ಆಗಿದ್ರು, ಈಗ ಆದ್ರೆ ತಪ್ಪೇನು? ಡಿಕೆ ಸುರೇಶ್ ಒಕ್ಕಲಿಗರಲ್ವಾ?ʼʼ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ʻʻಅವರನ್ನು (ಡಿ.ಕೆ. ಸುರೇಶ್‌) ಸೋಲಿಸೋದಕ್ಕೆ ಬಿಜೆಪಿ ಜೆಡಿಎಸ್‌ ಜತೆಗೆ ಹೋಗಬೇಕು ಎಂಬ ಮಾನಸಿಕತೆ ಯಾಕೆ ನಮ್ಮ ಪಕ್ಷದ ಲೀಡರ್ ಗಳಿಗೆ? ಅ ಮಾನಸಿಕತೆಯಿಂದ ಹೊರಬರಲಿʼʼ ಎಂದರು.

ಡಿ.ಕೆ. ಶಿವಕುಮಾರ್‌ಗೂ ಐದು ವರ್ಷ ಕೊಟ್ಟಿದ್ದಾರೆ.. ಮಾಡಲಿ ಬಿಡಿ

ʻʻರಾಜ್ಯದ ಜನರು ಎರಡು ಬಾರಿ ಕುಮಾರಸ್ವಾಮಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ರು. ಈಗ ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರೂ ಒಕ್ಕಲಿಗರು. ಇನ್ನು ಹತ್ತು ವರ್ಷ ಆದ್ಮೇಲೆ ಪ್ರೀತಂಗೌಡ ನಮ್ಮೋನು ಅಂತಾ ಬಿಜೆಪಿ ನಮ್ಮ‌ ಸಮಾಜ ಅಂತಾ ಶಕ್ತಿ ತುಂಬಬಹುದು. ಈಗ ಐದು ವರ್ಷ ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ ಮಾಡಲಿ ಬಿಡಿʼʼ ಎಂದು ಯೋಗೇಶ್ವರ್ ನಡೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ ಪ್ರೀತಂ ಗೌಡ.

ನಾವು ಅವರ ಪಕ್ಷ ಉಳಿಸೋಕೆ ಇರೋರಲ್ಲ ಎಂದ ಪ್ರೀತಂ

ʻʻಅವರ ಪಕ್ಷ (ಜೆಡಿಎಸ್‌) ಉಳಿಸಕೊಳ್ಳೋದಕ್ಕೆ ಮೈತ್ರಿ ಅವಶ್ಯಕ ಅಂತಾ ಹೇಳಿದ್ದಾರೆ. ನಾವು ಜೆಡಿಎಸ್ ಪಕ್ಷ ಉಳಿಸೋದಕ್ಕೆ ಇರೋ ಕಾರ್ಯಕರ್ತರಲ್ಲʼʼ ಎಂದು ಕಟುವಾಗಿ ಹೇಳಿದ್ದಾರೆ ಪ್ರೀತಂ.

ಹಳೆ ಮೈಸೂರು ಭಾಗದಲ್ಲಿ ಅಂತ ಪರಿಸ್ಥಿತಿ ಇಲ್ಲ

ನಮ್ಮ ಕೆಲವು ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಏನಾದರೂ ಕಷ್ಟ ಆಗಿಬಿಟ್ಟರೆ ಅಂತ ಅನಿಸಿರುತ್ತದೆ. ಜೆಡಿಎಸ್ ಜೊತೆ ಹೋದ್ರೆ ನಾವೂ ಹೆಂಗೋ ಒಂಚೂರ್ ತೂರ್ಕೊಂಡ್ ಹೋಗಿಬಿಡೋಣ ಅಂತ ಇರುತ್ತದೆ. ಅದರೆ, ಆ ಅವಶ್ಯಕತೆ ಹಳೇ ಮೈಸೂರು ಭಾಗದ ಬಿಜೆಪಿ ಕಾರ್ಯಕರ್ತರಿಗಿಲ್ಲ ಎಂದು ಪ್ರೀತಂ ಗೌಡ ಸ್ಪಷ್ಟವಾಗಿ ಹೇಳಿದರು.

ಮ್ಯಾಥ್ಸ್‌ ಹೇಳಿದರೆ ಆಗಲ್ಲ, ಅದಕ್ಕೆ ಬೇಸ್‌ ಕೂಡಾ ಬೇಕಲ್ವಾ?

ʻʻನಮಗೆ ಈ ರೀತಿ ಮಾಡುದ್ರೆ ಒಳ್ಳೆಯದಾಗುತ್ತೆ. ಹಿಂಗೆಲ್ಲಾ ಮಾಡಿದ್ರೆ ಜೆಡಿಎಸ್ ಗೆ ಸೀಟ್ ಬರುತ್ತೆ ಅಂತ ಎಲ್ಲೋ ಕೂತ್ಕೊಂಡು ಇವರು ಮ್ಯಾಥ್ಸ್‌ ಹೇಳ್ತಾರೆ. ನಿಮಗೆ ಸೀಟ್ ಬರುತ್ತೆ ಹಾಗಾಗಿ ಮೈತ್ರಿ‌‌ ಮಾಡಿಕೊಳ್ಳೋಣ ಅಂತಾ ಹೇಳಿದ್ರೆ ಕೇಳ್ಬೇಕಾ? ಆ ಮೈತ್ರಿಗೆ ಬೇಸ್ ಎಲ್ಲಿದೆ ಅಂತಾ ಯೋಚನೆ ಮಾಡಬೇಕಲ್ಲ. ಹೀಗೆ ಮಾಡಿದರೆ ಪ್ರತಿ ಊರಿನಲ್ಲಿರುವ ಕಾರ್ಯಕರ್ತರ ಸ್ಥಿತಿ ಏನಾಗಬೇಡ?ʼʼ ಎಂದು ಪ್ರಶ್ನಿಸಿದ್ದಾರೆ.

ಹಾಗಿದ್ದರೆ ಎಲ್ಲಾ ಸೀಟು ನಮಗೇ ಬಿಟ್ಟು ಕೊಡ್ತಾರಾ?

ಆಯ್ತು ಅವರಿಗೆ ಮೈತ್ರಿ ಬೇಕಲ್ವಾ? ಹಾಗಿದ್ದರೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿ ಅವರು ಬಿಜೆಪಿಗೇ ಬೆಂಬಲ ಕೊಡ್ತಾರಾ? ನಾವು ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ವಸ್ತು ಸ್ಥಿತಿ ಆಧರಿಸಿ ಬೆಂಬಲ ಕೊಡೋಣ. ಆ ಒಪ್ಪಂದಕ್ಕೆ ಬರ್ತಾರಾ? ಎಂದು ಕೇಳಿದರು ಪ್ರೀತಂ ಗೌಡ.

ಪ್ರೀತಮ್‌ ಗೌಡ ಆಕ್ರೋಶದ ಮಾತುಗಳ ಝಲಕ್‌ ಇಲ್ಲಿದೆ

  1. ಅವರು ಅದೇ ಅಜೆಂಡಾ ಇಟ್ಕೊಂಡು ಬಂದ್ರೆ ಅದನ್ನ ರಾಜ್ಯದ ಯಾವುದೇ ಬಿಜೆಪಿ ಕಾರ್ಯಕರ್ತ ಒಪ್ಪೋದಿಲ್ಲ. ಅದರಲ್ಲಿ ಪ್ರೀತಂಗೌಡ ಕೂಡಾ ಒಬ್ಬ, ಕಾರ್ಯಕರ್ತರ ಭಾವನೆಯನ್ನು ನಿಮ್ಮ ಜೊತೆ ತಿಳಿಸ್ತಾ ಇದ್ದೇನೆ.
  2. ನಮ್ಮ ಪಕ್ಷ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡ್ತಾ ಇದೆ. ಹಾಸನದಲ್ಲಿ ಯಾರು ಅಭ್ಯರ್ಥಿ ಆಗ್ತಾರೆ, ಅವರ ಕುಟುಬದವರು ಅಭ್ಯರ್ಥಿ ಆಗ್ತಾರೆ. ನಾವು ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಲು ಸಾಧ್ಯವೇ?
  3. ನಾಲ್ಕು ತಿಂಗಳ‌ ಹಿಂದೆ ಬಂದು ನಮ್ಮ‌ ವಿರುದ್ಧ ಚುನಾವಣೆ ಮಾಡಿದವರು ಅವರು. ಈಗ ನಮ್ಮ ಪಕ್ಷ ಉಳಿಸಿಕೊಳ್ಳಬೇಕು, ಬಿಜೆಪಿಯವರೆಲ್ಲಾ ನಮಗೆ ಓಟ್ ಹಾಕ್ತಾರೆ ಅಂತಾ ಯೋಚನೆ ಮಾಡಿದ್ರೆ ಆಗುತ್ತಾ?
  4. ನೆನಪಿರಲಿ, ರಾಜಕಾರಣ ಮ್ಯಾತ್ ಮೆಟಿಕ್ಸ್ ಅಲ್ಲ ಕೆಮಿಸ್ಟ್ರಿ ಅನ್ನೋದು ನನಗಿಂತ ಹೆಚ್ಚಾಗಿ ಅವರಿಗೆ ಗೊತ್ತಿದೆ. ಆ ಕೆಮಿಸ್ಟ್ರಿ ಯಾವುದೇ ಕಾರಣಕ್ಕೂ ಹಾಸನದಲ್ಲಿ ಮಾತ್ರ ನಡೆಯಲ್ಲ.
  5. ಪ್ರೀತಂ ಗೌಡನನ್ನು ಜಿಲ್ಲೆಯಿಂದ ಓಡಿಸಿ ಅಂತಾ ಹೇಳುದ್ರೋ, ಪ್ರೀತಂಗೌಡನನ್ನ ರಾಜಕೀಯವಾಗಿ‌ ಮುಗಿಸಿ ಅಂತಾ ಹೇಳಿದ್ರೋ ಒಂದು ಹೆಜ್ಜೆ ಮುಂದೆ ಹೋಗಿ ರಾಜಕಾರಣನೇ ಮಾಡಬಾರದು ಅನ್ನೋ ರೀತಿ ಹೇಳಿದ್ರೋ ಅಂತವರನ್ನು ಗೆಲ್ಲಿಸಿ ಅಂತ ಕೇಳೋ ಮನಸ್ಥಿತಿ ಹೇಗೆ ಬರುತ್ತದೆ. ಆ ಮನಸ್ಥಿತಿ‌ ಬರೋದಕ್ಕೆ ಸಾಧ್ಯವೇ ಇಲ್ಲ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Bear Attack : ವಿಜಯನಗರದ ಪಾರ್ಕ್‌, ಸ್ಟೇಡಿಯಂ‌ನಲ್ಲಿ ಸುತ್ತಾಡಿದ ಕರಡಿ; ದಿಕ್ಕಾಪಾಲಾಗಿ ಓಡಿದ ಜನರು

Bear Attack : ವಿಜಯನಗರದಲ್ಲಿ ಕರಡಿ ಹಾವಳಿ ಹೆಚ್ಚಾಗಿದೆ.ಪ್ರತ್ಯೇಕ ಕಡೆಗಳಲ್ಲಿ ಕರಡಿಯು ಪ್ರತ್ಯಕ್ಷಗೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಪಾರ್ಕ್‌, ಸ್ಟೇಡಿಯಂ ಅಂತ ಸುತ್ತಾಡಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

VISTARANEWS.COM


on

By

Bear Attack
Koo

ವಿಜಯನಗರ: ಇತ್ತೀಚೆಗಂತೂ ಕರಡಿ ಹಾವಳಿ (Bear Attack) ಹೆಚ್ಚಾಗಿದ್ದು, ಜನನಿಬಿಡ ಪ್ರದೇಶದಲ್ಲಿ ಪದೆಪದೇ ಕಾಣಿಸಿಕೊಂಡು ಆತಂಕವನ್ನು ಹೆಚ್ಚಿಸುತ್ತಿದೆ. ಕರಡಿಗಳು ಆಹಾರ ಅರಸಿ ನಾಡಿಗೆ ಬರುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿಯನ್ನೂ ಮಾಡುತ್ತಿವೆ. ಸದ್ಯ ಬೆಳ್ಳಂಬೆಳಗ್ಗೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಮೈಲಾರಲಿಂಗ ಕ್ರೀಡಾಂಗಣಕ್ಕೆ ಕರಡಿಯೊಂದು ಲಗ್ಗೆ ಇಟ್ಟಿತ್ತು.

ಕ್ರೀಡಾಂಗಣದ ಸುತ್ತಲೂ ವಾಕಿಂಗ್, ರನ್ನಿಂಗ್ ಮಾಡಿದ ಕರಡಿಯನ್ನು ಕಂಡು ವಾಕಿಂಗ್‌ ಬಂದಿದ್ದ ಜನರು ದಂಗಾಗಿ ಹೋಗಿದ್ದರು. ಕ್ರೀಡಾಂಗಣಕ್ಕೆ ಬಂದವರು ಕರಡಿ ಓಡಾಟದ ದೃಶ್ಯವನ್ನೆಲ್ಲ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಇತ್ತೀಚೆಗೆ ಕೂಡ್ಲಿಗಿ ಸುತ್ತಮುತ್ತ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಜನರು ಆತಂಕದಲ್ಲೇ ಓಡಾಡುವಂತಾಗಿದೆ. ಜನರನ್ನು ಕಂಡೊಡನೆ ಕರಡಿಯು ಮರವೇರಿ ಕುಳಿತಿತ್ತು.

ಇದನ್ನೂ ಓದಿ: Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

ಅತ್ತ ಕೂಡ್ಲಿಗಿ ತಾಲೂಕಿನಲ್ಲಿ ಕ್ರೀಡಾಂಗಣಕ್ಕೆ ನುಗ್ಗಿ ಕರಡಿ ದಾಂಧಲೆ ಮಾಡಿದ್ರೆ, ಇತ್ತ ಹೊಸಪೇಟೆಯಲ್ಲಿರುವ ಶ್ರೀರಾಮುಲು ಪಾರ್ಕ್‌ಗೆ ಕರಡಿ ಪ್ರತ್ಯಕ್ಷಗೊಂಡಿತ್ತು. ಹೊಸಪೇಟೆಯ ಸಿಟಿ ಮಧ್ಯದಲ್ಲಿರುವ ಶ್ರೀರಾಮುಲು ಪಾರ್ಕ್ ಪ್ರತಿಷ್ಠಿತ ಪಾರ್ಕ್‌ಗಳಲ್ಲಿ ಒಂದಾಗಿದ್ದು, ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಯೋಗ, ವಾಕಿಂಗ್‌ಗೆ ಬರುತ್ತಾರೆ.

ಕಳೆದ 15 ದಿನದ ಹಿಂದೆ ರಾಣಿಪೇಟೆ ಎಂಬ ಅದೇ ಏರಿಯಾಕ್ಕೆ ಕರಡಿ ನುಗ್ಗಿತ್ತು. ಇಡೀ ಓಣಿ ತುಂಬಾ ಓಡಾಟ ನಡೆಸಿ ಭಯ ಹುಟ್ಟಿಸಿತ್ತು. ಇದೀಗ ಶುಕ್ರವಾರ ಬೆಳಗ್ಗೆ ಜನರು ಬರುವುದಕ್ಕೂ ಮೊದಲೇ ಶ್ರೀರಾಮುಲು ಪಾರ್ಕ್‌ಗೆ ಕರಡಿಯೊಂದು ಬಂದು ಅವಿತು ಕುಳಿತ್ತಿತ್ತು. ಪಾರ್ಕ್‌ಗೆ ವಾಕಿಂಗ್‌ ಮಾಡಲು ಬಂದವರು ಕರಡಿ ಕಂಡು ದಿಕ್ಕಾಪಾಲಾ ಓಡಿದ್ದರು. ಜನರ ಚೀರಾಟ, ಕಿರುಚಾಟಕ್ಕೆ ಗಾಬರಿಗೊಂಡ ಕರಡಿ ಪಾರ್ಕ್‌ನಲ್ಲಿದ್ದ ಸಣ್ಣ ಮನೆಗೆ ಹೋಗಿ ಅವಿತುಕೊಂಡಿತ್ತು.

ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು. ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಸೆರೆ ಹಿಡಿದರು. ಅವಿತು ಕುಳಿತಿದ್ದ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದು, ಸ್ಥಳೀಯರಿಗಿದ್ದ ಆತಂಕ ದೂರ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ED Raid: ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ; ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ

ED Raid: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸತತ 7 ಗಂಟೆ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ಬಂಧನ ಮಾಡಿದೆ.

VISTARANEWS.COM


on

ED Raid
Koo

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸತತ 7 ಗಂಟೆ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ಬಂಧನ ಮಾಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮಾಜಿ ಸಚಿವರನ್ನು ಕೋರ್ಟ್‌ಗೆ ಹಾಜರುಪಡಿಸಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ (Valmiki Corporation Scam) ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರನ್ನು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು. ಮೊನ್ನೆ ಮುಂಜಾನೆಯಿಂದ ನಾಗೇಂದ್ರ ಮನೆ ಹಾಗೂ ಕಚೇರಿ ಮುಂತಾದೆಡೆ ಇಡಿ ದಾಳಿ (ED Raid) ನಡೆದಿತ್ತು.

40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.

ಬೆಂಗಳೂರಿನ ಇಡಿ ಕಚೇರಿಯಲ್ಲಿ ಅಧಿಕಾರಿಗಳು ಅವರನ್ನು ಪ್ರಶ್ನಿಸಲಾಗಿತ್ತು. ನಾಗೇಂದ್ರ ಸಿಎ ಹರೀಶ್‌ ಕೂಡ ನಿನ್ನೆಯಿಂದ ಇಡಿ ವಶದಲ್ಲಿದ್ದಾರೆ. ಯೂನಿಯನ್‌ ಬ್ಯಾಂಕ್‌ನಲ್ಲಿ ಸುಳ್ಳು ದಾಖಲೆ ನೀಡಿ ಅಕ್ರಮ ಖಾತೆ ತೆರೆದು ಕೋಟ್ಯಂತರ ರೂಪಾಯಿ ನಿಗಮದ ಹಣವನ್ನು ಅಲ್ಲಿಗೆ ವರ್ಗಾಯಿಸಿದ ಕುರಿತು ಹರೀಶ್‌ ಹೇಳಿಕೆಯಲ್ಲಿ ಕೆಲವು ಸಾಕ್ಷಿಗಳು ದೊರೆತಿವೆ. ಬ್ಯಾಂಕ್‌ ಸಿಸಿಟಿವಿ ರೆಕಾರ್ಡ್‌ಗಳನ್ನು ಚೆಕ್‌ ಮಾಡಿದಾಗಲೂ, ನಾಗೇಂದ್ರ ಸಿಎ ಹಾಗೂ ಶಾಸಕ ದದ್ದಲ್‌ ಸಿಎ ಅಲ್ಲಿಗೆ ಬಂದು ಹೋದ ಕುರಿತು ದಾಖಲೆ ಲಭ್ಯವಾಗಿದೆ. 50 ಲಕ್ಷ ಡೀಲ್‌ ನಡೆಸಲಾಗಿರುವ ಕುರಿತು ಬಂಧಿತರಾಗಿರುವ ಬ್ಯಾಂಕ್‌ ಅಧಿಕಾರಿಗಳು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಈಗ ಹೆಚ್ಚಿನ ತನಿಖೆಯ ಉರುಳು ನಾಗೇಂದ್ರ ಕೊರಳಿಗೆ ಸುತ್ತಿಕೊಂಡಿದೆ.

ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ನಿವಾಸಗಳ ಜತೆಗೆ ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್‌ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಆರೋಪಿ ಸತ್ಯನಾರಾಯಣ್‌ನಿಂದ ವಾಲ್ಮೀಕಿ ನಿಗಮದ ಎಂ.ಡಿ. ಪದ್ಮನಾಭ್ ಹಣ ತಂದಿದ್ದರು ಎನ್ನಲಾಗಿದೆ. ಆ ಹಣದಲ್ಲಿ ನಾಗೇಂದ್ರ ಪಿಎ ಹರೀಶ್‌ 25 ಲಕ್ಷ ಹಣ ಪಡೆದಿದ್ದ. ದದ್ದಲ್ ಪಿಎ ಪಂಪಣ್ಣ ಕೂಡ 55 ಲಕ್ಷ ಹಣ ಪಡೆದಿದ್ದ. ಈ ಬಗ್ಗೆ ಪರಿಶೀಲನೆ ವೇಳೆ ಹರೀಶ್ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಇಡಿ ವಶಕ್ಕೆ ಪಡೆದಿದೆ. ಪ್ರಕರಣದಲ್ಲಿ ಸಚಿವ ನಾಗೇಂದ್ರ ಪರ 50ರಿಂದ 60 ಕೋಟಿ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆದಿದೆ.

ನಾಗೇಂದ್ರ ಅವರಿಗೆ ಸೇರಿದ ಡಾಲರ್ಸ್ ಕಾಲೋನಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಅವರ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿಗಳು ನಡೆದಿವೆ. ಬಳ್ಳಾರಿಯ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಯಚೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಮಧ್ಯೆ ಪ್ರವೇಶಿಸಬಹುದು ಎಂಬ ಮಾಹಿತಿ ದೊರೆತಿತ್ತು.

ಇದನ್ನೂ ಓದಿ | Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿದ್ದ ಎಸ್‌ಐಟಿ ಅರ್ಜಿ ವಿಚಾರಣೆ 3 ವಾರ ಮುಂದೂಡಿಕೆ

ವಾಲ್ಮೀಕಿ ನಿಗಮದ ಹಗರಣದಲ್ಲಿ 185 ಕೋಟಿ ರೂ. ಅವ್ಯವಹಾರ ನಡೆದಿತ್ತು. ಇದರ ವ್ಯಾಪ್ತಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರೆಗೂ ವ್ಯಾಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿಯೂ ಸಚಿವರ ಬಗ್ಗೆ ಉಲ್ಲೇಖ ಇದೆ.

Continue Reading

ಕರ್ನಾಟಕ

BS Yediyurappa: ಪೋಕ್ಸೊ ಕೇಸ್‌ನಲ್ಲಿ ಖುದ್ದು ಹಾಜರಿಯಿಂದ ಬಿಎಸ್‌ವೈಗೆ ವಿನಾಯ್ತಿ; ಕೇಸ್‌ ರದ್ದು ಕೋರಿದ್ದ ಅರ್ಜಿ ವಿಚಾರಣೆ ಜು.26ಕ್ಕೆ

BS Yediyurappa: ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ಆದೇಶ ನೀಡಿದ್ದು, ಬಿಎಸ್‌ವೈ ಸೇರಿ ಇತರೆ ಆರೋಪಿಗಳಿಗೂ ವಿಚಾರಣೆ ವೇಳೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಲಾಗಿದೆ.

VISTARANEWS.COM


on

BS Yediyurappa
Koo

ಬೆಂಗಳೂರು: ಪೋಕ್ಸೊ ಪ್ರಕರಣ ರದ್ದು ಕೋರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜುಲೈ 26ಕ್ಕೆ ನಡೆಸಲು ಹೈಕೋರ್ಟ್ ದಿನಾಂಕ ನಿಗದಿಪಡಿಸಿದೆ. ಅಲ್ಲಿಯವರೆಗೆ ಪ್ರಕರಣದಲ್ಲಿ ಖುದ್ದು ಹಾಜರಿಗೆ ಮಾಜಿ ಸಿಎಂಗೆ ಕೋರ್ಟ್‌ ವಿನಾಯಿತಿ ನೀಡಿದೆ.

ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ಆದೇಶ ನೀಡಿದ್ದು, ಇತರೆ ಆರೋಪಿಗಳಿಗೂ ಖುದ್ದು ಹಾಜರಿಯಿಂದ ವಿನಾಯಿತಿ ನೀಡಲಾಗಿದೆ. ಆರೋಪಿಗಳ ಬದಲಿಗೆ ವಕೀಲರು ಹಾಜರಾಗಿ ವಿನಾಯಿತಿ ಕೋರಲು ಅವಕಾಶ ನೀಡಲಾಗಿದೆ. ಜುಲೈ 15 ರಂದು ಖುದ್ದಾಗಿ ಹಾಜರಾಗುವಂತೆ ಬಿಎಸ್‌ವೈಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಖುದ್ದು ಹಾಜರಿಗೆ ಹೈಕೋರ್ಟ್ ವಿನಾಯಿತಿ ನೀಡಿದೆ.

ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 27ರಂದು ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. 75 ಸಾಕ್ಷಿಗಳ ಹೇಳಿಕೆ ಸೇರಿದಂತೆ 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು. ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್‌ 8, ಐಪಿಸಿ ಸೆಕ್ಷನ್‌ಗಳಾದ 354(ಎ), 204, 214 ಅಡಿ, 2ನೇ ಆರೋಪಿ ಅರುಣ್‌ ಎಂ.ವೈ, 3ನೇ ಆರೋಪಿ ಎಂ.ರುದ್ರೇಶ್‌ ಮತ್ತು 4ನೇ ಆರೋಪಿ ಜಿ.ಮರಿಸ್ವಾಮಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 204, 214ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.

ಏನಿದು ಪ್ರಕರಣ?

2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್‌ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್‌ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್‌ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್‌ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ರೇವಣ್ಣ ಜಾಮೀನು ರದ್ದು ಕೋರಿದ್ದ ಎಸ್‌ಐಟಿ ಅರ್ಜಿ ವಿಚಾರಣೆ 3 ವಾರ ಮುಂದೂಡಿಕೆ

Prajwal Revanna Case

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಕೆ.ಆರ್. ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಜಾಮೀನು ರದ್ದು ಕೋರಿ ಎಸ್‌ಐಟಿ ಅರ್ಜಿ ಸಲ್ಲಿಸಿತ್ತು. ಆದರೆ, ಅರ್ಜಿ ವಿಚಾರಣೆಯನ್ನು 3 ವಾರಗಳ ಕಾಲ ಹೈಕೋರ್ಟ್‌ ಮುಂದೂಡಿದೆ.

ಇದನ್ನೂ ಓದಿ | Fraud Case : ‌ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

ಇದೇ ವೇಳೆ ಪ್ರಕರಣ ರದ್ದು ಕೋರಿ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯೂ ಮುಂದೂಡಿಕೆಯಾಗಿದೆ. ಅಲ್ಲದೇ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಪ್ರಜ್ವಲ್ ರೇವಣ್ಣ ಹಿಂಪಡೆದಿದ್ದಾರೆ. ಸೆಷನ್ಸ್ ಕೋರ್ಟ್‌ನಲ್ಲೇ ಅರ್ಜಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಹೈಕೋರ್ಟ್‌ ಅವಕಾಶ ನೀಡಿದ್ದರಿಂದ ಅರ್ಜಿ ಹಿಂಪಡೆಯಲಾಗಿದೆ.

Continue Reading

ಬೆಂಗಳೂರು

KEA : ಜು.13,14ಕ್ಕೆ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ; ಅಕ್ರಮ ತಡೆಯಲು ಮೊದಲ ಬಾರಿಗೆ ವೆಬ್ ಕಾಸ್ಟಿಂಗ್

KEA : ವಾರಾಂತ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಹುದ್ದೆಗಳಿಗೆ ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಯು ನಡೆಯುತ್ತಿದೆ. ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್‌ನಲ್ಲಿ ಪರೀಕ್ಷೆ ನಡೆಯಲಿದೆ.

VISTARANEWS.COM


on

By

Koo

ಬೆಂಗಳೂರು: ಬಿಎಂಟಿಸಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ (Competitive Examination) ಶನಿವಾರ ಮತ್ತು ಭಾನುವಾರ (ಜುಲೈ 13, 14) ಕ್ಯಾಮೆರಾ ಕಣ್ಗಾವಲಿಯಲ್ಲಿ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಬೆಂಗಳೂರು, ಕಲಬುರಗಿ, ಧಾರವಾಡ ಮತ್ತು ಬಳ್ಳಾರಿ ನಗರಗಳ ಒಟ್ಟು 22 ಕೇಂದ್ರಗಳ, 377 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕ್ಯಾಮೆರಾ ಅಳವಡಿಸಿದ್ದು, ವೆಬ್ ಕ್ಯಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಮಾಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ನಾಳೆ ಶನಿವಾರ ಖುದ್ದು ಈ ಪ್ರಕ್ರಿಯೆಯನ್ನು ವೀಕ್ಷಿಸಲು ಕೆಇಎಗೆ ಬರಲಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: Fraud Case : ‌ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದ್ದು, ಬೆಂಗಳೂರಿನ ಕೆಇಎ ಕಚೇರಿಯಲ್ಲಿ ರಾಜ್ಯ ಮಟ್ಟದ ಕಮಾಂಡ್ ಸೆಂಟರ್ ಸ್ಥಾಪಿಸಿದ್ದು, ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸಲು ಟಿವಿಗಳನ್ನು ಅಳವಡಿಸಲಾಗಿದೆ. ಮೇಲ್ವಿಚಾರಣೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸ್ವೀಕಾರ ಮತ್ತು ಅದರ ಬಂಡಲ್ ತೆರೆಯುವ ಎಲ್ಲ ಪ್ರಕ್ರಿಯೆಯನ್ನೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಅವರ ಬೆರಳಚ್ಚು ಮತ್ತು ಭಾವಚಿತ್ರವನ್ನು ತೆಗೆದುಕೊಂಡು ಅಲ್ಲೇ ಅದನ್ನು ಅವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಿರುವ ಚಿತ್ರದ ಜತೆಗೂ ಆನ್ ಲೈನ್ ನಲ್ಲಿ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಯಾರದೊ ಹೆಸರಿನಲ್ಲಿ ಇನ್ಯಾರೊ ಪರೀಕ್ಷೆ ಬರೆಯುವುದನ್ನು ತಡೆಯಬಹುದು ಎಂದು ಹೇಳಿದರು.

ಇತ್ತೀಚೆಗೆ ನಡೆಸಿದ ಡಿಸಿಇಟಿ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಪ್ರಾಂಶುಪಾಲರ ಕಚೇರಿಯಲ್ಲಿನ ಬೆಳವಣಿಗೆಗಳನ್ನು ವೆಬ್ ಕಾಸ್ಟಿಂಗ್ ಮಾಡಿದ್ದು ಯಶಸ್ವಿಯಾದ ನಂತರ ಪರೀಕ್ಷೆ ನಡೆಯುವ ಕೊಠಡಿಯಿಂದಲೂ ವೆಬ್ ಕಾಸ್ಟಿಂಗ್ ಮಾಡಲು ತೀರ್ಮಾನಿಸಲಾಗಿದೆ. ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಯೂ ಒಂದೊಂದು ಉಪ ಕಮಾಂಡಿಂಗ್ ಸೆಂಟರ್ ಇದ್ದು, ಅಲ್ಲಿಯೂ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಬೇರೆ ಜಿಲ್ಲೆಗಳ ವಿಶೇಷ ವೀಕ್ಷಕರನ್ನೂ ನಿಯೋಜಿಸಿದ್ದು, ಅವರು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಿದ್ದಾರೆ ಎಂದು ಅವರು ಪ್ರಸನ್ನ ವಿವರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Anant Radhika Wedding
ವಾಣಿಜ್ಯ55 seconds ago

Anant Radhika Wedding: ಅನಂತ್‌ ಅಂಬಾನಿ ಮದುವೆ ಖರ್ಚು 5000 ಕೋಟಿ ರೂ! ಅವರ ಸಂಪತ್ತಿಗೆ ಹೋಲಿಸಿದರೆ ಇದು ಸಣ್ಣ ಮೊತ್ತ!

James Anderson
ಕ್ರೀಡೆ20 mins ago

James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

Bear Attack
ವಿಜಯನಗರ41 mins ago

Bear Attack : ವಿಜಯನಗರದ ಪಾರ್ಕ್‌, ಸ್ಟೇಡಿಯಂ‌ನಲ್ಲಿ ಸುತ್ತಾಡಿದ ಕರಡಿ; ದಿಕ್ಕಾಪಾಲಾಗಿ ಓಡಿದ ಜನರು

ED Raid
ಕರ್ನಾಟಕ46 mins ago

ED Raid: ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ; ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ

Emergency
ದೇಶ51 mins ago

Emergency: ತುರ್ತು ಪರಿಸ್ಥಿತಿ ಕರಾಳ ನೆನಪು; ಜೂನ್‌ 25ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಕೇಂದ್ರ

Shiva Rajkumar karataka damanaka In ott
ಸ್ಯಾಂಡಲ್ ವುಡ್55 mins ago

Shiva Rajkumar: ಶಿವಣ್ಣನ ಬರ್ತ್‌ಡೇ ದಿನ, ಬರೋಬ್ಬರಿ 4 ತಿಂಗಳ ಬಳಿಕ ಒಟಿಟಿಗೆ ʻಕರಟಕ ದಮನಕʼ ಎಂಟ್ರಿ!

Champions Trophy 2025
ಕ್ರೀಡೆ57 mins ago

Champions Trophy 2025: ಚಾಂಪಿಯನ್ಸ್‌ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?

BS Yediyurappa
ಕರ್ನಾಟಕ1 hour ago

BS Yediyurappa: ಪೋಕ್ಸೊ ಕೇಸ್‌ನಲ್ಲಿ ಖುದ್ದು ಹಾಜರಿಯಿಂದ ಬಿಎಸ್‌ವೈಗೆ ವಿನಾಯ್ತಿ; ಕೇಸ್‌ ರದ್ದು ಕೋರಿದ್ದ ಅರ್ಜಿ ವಿಚಾರಣೆ ಜು.26ಕ್ಕೆ

Earthquake
ದೇಶ1 hour ago

Earthquake: ಜಮ್ಮು-ಕಾಶ್ಮೀರದಲ್ಲಿ 4.1 ತೀವ್ರತೆಯ ಭೂಕಂಪ; ಮನೆಯಿಂದ ಓಡಿಬಂದ ಜನ

ಬೆಂಗಳೂರು2 hours ago

KEA : ಜು.13,14ಕ್ಕೆ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ; ಅಕ್ರಮ ತಡೆಯಲು ಮೊದಲ ಬಾರಿಗೆ ವೆಬ್ ಕಾಸ್ಟಿಂಗ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effect
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ3 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ3 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ3 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ4 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 days ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ5 days ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌