Karnataka Politics : ಡಿಕೆಶಿ 15 ಪರ್ಸೆಂಟ್‌ ಕೇಳೋಕೆ ಸಾಧ್ಯವೇ ಇಲ್ಲ; ಸರ್ಕಾರದ ಪರ ನಿಂತ ಕೆಂಪಣ್ಣ - Vistara News

ಕರ್ನಾಟಕ

Karnataka Politics : ಡಿಕೆಶಿ 15 ಪರ್ಸೆಂಟ್‌ ಕೇಳೋಕೆ ಸಾಧ್ಯವೇ ಇಲ್ಲ; ಸರ್ಕಾರದ ಪರ ನಿಂತ ಕೆಂಪಣ್ಣ

Karnataka Politics : ಬಿಬಿಎಂಪಿ ಬಿಲ್‌ ಪಾಸ್‌ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು 15 ಪರ್ಸೆಂಟ್‌ ಹಣ ಕೇಳಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಆರೋಪ ಮಾಡಿದ್ದರೆ, ಇದನ್ನು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅಲ್ಲಗಳೆದಿದ್ದಾರೆ.

VISTARANEWS.COM


on

Karnataka State Contractors Association precedent Kempanna and DCM DK Shivakumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು/ದೇವನಹಳ್ಳಿ: ನಮಗೆ ಇದುವರೆಗೂ ಯಾರೂ ಕೂಡ ದೂರು ನೀಡಿಲ್ಲ. ಬೆಂಗಳೂರಿನಲ್ಲಿ ಆಗಲೀ ಅಥವಾ ಬೇರೆ ಯಾವುದೇ ಜಿಲ್ಲೆಗಳಿಂದಲೂ ನಮಗೆ ಸರ್ಕಾರದಿಂದ ಕಾಮಗಾರಿ ಬಿಲ್‌ ಬಾಕಿ ಬಗ್ಗೆ ದೂರು ಬಂದಿಲ್ಲ. ಸರ್ಕಾರ ಬಂದು ಮೂರು ತಿಂಗಳು ಆಗಿದೆ ಅಷ್ಟೇ.‌ ಇನ್ನೂ ಏನೂ ಕೆಲಸ ಮಾಡಿಲ್ಲ. ಕೆಲಸ ಮಾಡದೆ ಹೇಗೆ ಆರೋಪ ಮಾಡುವುದು? ನಮ್ಮ‌ ಹೋರಾಟ ಮೂರು ವರ್ಷದ್ದು, ‌ಈ ಸರ್ಕಾರ ಬಂದು ಎರಡು ತಿಂಗಳು ಮಾತ್ರ ಆಗಿದೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹಾಗೆಲ್ಲ 15 ಪರ್ಸೆಂಟ್‌ ಕೇಳಲ್ಲ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಹೇಳುವ ಮೂಲಕ ಸರ್ಕಾರದ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಸಂಚಲನವನ್ನು ಉಂಟು ಮಾಡಿದ್ದ ಈ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್‌ ಸಿಕ್ಕಿದಂತೆ ಆಗಿದೆ.

ಬಿಬಿಎಂಪಿ ಗುತ್ತಿಗೆದಾರರ ಸಂಘವು ಡಿಸಿಎಂ ಡಿ.ಕೆ. ಶಿವಕುಮಾರ್‌ 15 ಪರ್ಸೆಂಟ್‌ ಕಮಿಷನ್‌ ಕೇಳಿದ್ದಾರೆಂದು ರಾಜ್ಯಪಾಲರಿಂದ ಹಿಡಿದು ಸಚಿವರು, ಬಿಜೆಪಿ ನಾಯಕರು ಸೇರಿ ಹಲವರಿಗೆ ಮನವಿ ಕೊಟ್ಟಿತ್ತು. ಆದರೆ, ಈ ಸಂಬಂಧ ತಮಗೆ ಈ ವರೆಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳುವ ಮೂಲಕ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬ ರೀತಿಯಲ್ಲಿ ಪರೋಕ್ಷ ಸಂದೇಶವನ್ನು ಕೆಂಪಣ್ಣ ರವಾನೆ ಮಾಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಬಳಿ ಮಾತನಾಡಿದ್ದೇನೆ. ಅವರು ಬೇರೆ ರೀತಿ ನಿಮಗೆ ಸೇರಬೇಕಾದ ಬಿಲ್ ವ್ಯವಸ್ಥೆ ಮಾಡಲು ನೋಡುತ್ತೇವೆ ಎಂದು ಹೇಳಿದ್ದಾರೆ. ಪ್ರತಿ ತಿಂಗಳು ಪೇಮೆಂಟ್ ಮಾಡುತ್ತೇವೆ ಎಂದು ಹೇಳಿದ್ದಾರೆ‌ ಎಂದು ಹೇಳಿದರು.

ಇದನ್ನೂ ಓದಿ: Karnataka Politics : ತಾರಕಕ್ಕೆ ರಾಜ್ಯ ಸರ್ಕಾರ- ಗುತ್ತಿಗೆದಾರರ ತಿಕ್ಕಾಟ; ರಾಷ್ಟ್ರ ಮಟ್ಟದಲ್ಲಿ ಕೈ ಮಾನ ತೆಗೆಯಲು ಬಿಜೆಪಿ ರೆಡಿ!

15% ವಿಚಾರ ನನಗೆ ಗೊತ್ತೇ ಇಲ್ಲ!

15% ವಿಚಾರ ನನಗೆ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರು ನನಗೆ ಗೊತ್ತಿರುವುದರಿಂದ ಅವರು ಆ ರೀತಿ ಮಾಡಲ್ಲ. 15 % ಕೊಡಿ ಎಂದು ಅವರು ಮಾತನಾಡುವುದೂ ಇಲ್ಲ. ಕೆಂಪಣ್ಣ ಕಾಂಗ್ರೆಸ್ ಪರ ಎಂದು ನನಗೆ ಹೇಳುತ್ತಿದ್ದರು. ಈಗ ಎಲ್ಲ ಮಾತನಾಡುತ್ತಿದ್ದಾರೆ, ಅವರು ಯಾರು? ಬಿಜೆಪಿಯವರು ಎತ್ತಿ ಕಟ್ಟುತ್ತಿದ್ದಾರೆ ಎಂಬುದು ನನ್ನ ಅನಿಸಿಕೆ. 15% ಬೇಡಿಕೆ ಇಟ್ಟಿದ್ದರೆ ತನಿಖೆ ಆಗಲಿ ಎಂದು ಕೆಂಪಣ್ಣ ಹೇಳಿದರು.

ಬಿಜೆಪಿ ಮನವಿ ನೀಡಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘ

ಈ ನಡುವೆ ಗುರುವಾರ ಬಿಜೆಪಿ ನಾಯಕರನ್ನು ಭೇಟಿಯಾಗಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘವು, ತಮ್ಮ ಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಆರ್.‌ ಅಶೋಕ್‌ಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಬಿಜೆಪಿ ಸಹ ಈ ವಿಚಾರವನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Krishna Water Dispute: ಕೃಷ್ಣಾ ನೀರಿನ ವಿಚಾರ ಮತ್ತೆ ಮಹಾ ಕ್ಯಾತೆ; ರಾಜ್ಯಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದ ಮಹಾರಾಷ್ಟ್ರ!

Krishna Water Dispute: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಕೃಷ್ಣಾ ನದಿ ನೀರನ್ನು ತಡೆ ಹಿಡಿಯಲಾಗಿದೆ.

VISTARANEWS.COM


on

Krishna Water Dispute
Koo

ಚಿಕ್ಕೋಡಿ: ಕೃಷ್ಣಾ ನದಿ ನೀರಿನ (Krishna Water Dispute) ವಿಚಾರವಾಗಿ ಮಹಾರಾಷ್ಟ್ರ ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕಕ್ಕೆ ಹರಿದು ಬರ್ತಿದ್ದ ನೀರನ್ನು ತಡೆ ಹಿಡಿದಿರುವ ಮಹಾರಾಷ್ಟ್ರ ಸರ್ಕಾರ, ನದಿ ನೀರಿನ ಹರಿವಿನ ಮೇಲೆ ನಿಗಾ ಇಡಲು ನಾಲ್ವರು ಸಿಬ್ಬಂದಿಯನ್ನು ನೇಮಿಸಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಕೃಷ್ಣಾ ನದಿ ನೀರನ್ನು ತಡೆ ಹಿಡಿಯಲಾಗಿದೆ. ಇಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ನೀರಾವರಿ ಇಲಾಖೆ ಸಿಬ್ಬಂದಿ ಸೇರಿ ಎರಡು ಗಸ್ತು ತಂಡಗಳನ್ನು ನೇಮಿಸಲಾಗಿದೆ.

ಕೃಷ್ಣಾ ನದಿ ನೀರು ತಡೆದ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ | Congress Karnataka: ಬದಲಾಗ್ತಾರಾ ಕೆಪಿಸಿಸಿ ಅಧ್ಯಕ್ಷರು?; ಡಿಕೆಶಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಶುರು!

ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

Monsoon 2024

ಬೆಂಗಳೂರು: ಮೇ 31ರಂದು ಪ್ರಸಕ್ತ ಸಾಲಿನ ಮುಂಗಾರು ಮಳೆಯು (Monsoon 2024) ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವ ಮಳೆಯಾಗಿದ್ದರಿಂದ ರೈತರಲ್ಲಿ ಸಹಜವಾಗಿಯೇ ಸಮಾಧಾನ ತಂದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಜೂನ್‌ ಮೊದಲ ವಾರ ನೈರುತ್ಯ ಮುಂಗಾರು ಮಳೆ ಕರ್ನಾಟಕವನ್ನು ಪ್ರವೇಶ (Karnataka Monsoon 2024) ಮಾಡಲಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹೊಂದಿದೆ.

ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮುಂಗಾರು ಆಗಮನವು ಮುಂದಕ್ಕೆ ಹೋಗಲಿದೆ. ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದೆ. ಮೇ 31ಕ್ಕೆ ನೈರುತ್ಯ ಮುಂಗಾರು ಕೇರಳ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಜೂನ್ 1 ಅಥವಾ 2ರಂದು ಪ್ರವೇಶಿಸಬಹುದು. ಕರಾವಳಿಯಿಂದ ಕ್ರಮೇಣ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಿಗೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡ ವಾಸ್ತವ್ಯ

ಮುಂಗಾರು ಪ್ರವೇಶಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರಕ್ಕೆ ಕೊಡಗು ಜಿಲ್ಲೆಗೆ ಮುಂಗಾರು ಎಂಟ್ರಿಯಾಗಲಿದೆ. ಕಳೆದ ಬಾರಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮಳೆಯಾಗಲಿದೆ ಎಂದು ಎಂದು ಹವಾಮಾನ ಇಲಾಖೆಯು ಕೊಡಗು ಜಿಲ್ಲಾಡಳಿತಕ್ಕೆ‌ ಮಾಹಿತಿ ರವಾನಿಸಿದೆ. ಈ ಬಾರಿಯ ಮಳೆಗಾಲಕ್ಕೆ ಕೊಡಗು ಜಿಲ್ಲಾಡಳಿತ ಕೂಡ ತಯಾರಿ ನಡೆಸಿಕೊಳ್ಳುತ್ತಿದೆ. ಮೇ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಎನ್.ಡಿ.ಆರ್ ಎಫ್ ತಂಡ ಆಗಮಿಸಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. 26 ಮಂದಿಯನ್ನು ಒಳಗೊಂಡ ಎನ್.ಡಿ.ಆರ್ ಎಫ್ ಟೀಮ್ ಈ ಬಾರಿ ಆಗಮಿಸಲಿದೆ. ಕಳೆದ ಬಾರಿ ಜಿಲ್ಲೆಗೆ ಬಂದಿದ್ದ ಎನ್.ಡಿ.ಆರ್.ಎಫ್‌ಗೆ ಬೆಟಾಲಿಯನ್ ಕಳುಹಿಸುವಂತೆ ಜಿಲ್ಲಾಡಳಿತ ಮ‌ನವಿ‌ ಮಾಡಿದೆ. ಕಳೆದ ಬಾರಿ ಬಂದ ತಂಡವೆ ಈ ಸಲವು ಆಗಮಿಸಲಿದೆ. ಕೊಡಗಿನಲ್ಲಿ ಮಳೆಗಾಲ ಮುಗಿಯುವವರೆಗೂ ವಿಪತ್ತು ನಿರ್ವಹಣಾ ತಂಡ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಲಿದೆ.

ಇದನ್ನೂ ಓದಿ: Monsoon 2024: ರೈತರಿಗೆ ಗುಡ್‌ ನ್ಯೂಸ್;‌ ಮುಂಗಾರು ಮಳೆ ಆಗಮನಕ್ಕೆ ಫಿಕ್ಸ್‌ ಆಯ್ತು ದಿನಾಂಕ!

ಭಾರಿ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್‌ ಘೋಷಣೆ

ಮೇ 26ರಂದು ರಾಜ್ಯಾದ್ಯಂತ ಹಗುರವಾದ ಮಳೆಯಾಗುವ (Rain News) ಸಾಧ್ಯತೆ ಇದ್ದು, ವಿವಿಧೆಡೆ ಗುಡುಗು ಸಹಿತ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ದಕ್ಷಿಣ ಒಳನಾಡಿನ ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ ಬದಲಿಗೆ ಒಣ ಹವೆ ಇರುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Basavanagudi News : ಪೂಜಾ ಸಾಮಾಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Basavanagudi News : ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಗಳಲ್ಲಿ ಪೂಜಾ ಸಾಮಾಗ್ರಿಗಳನ್ನು ಒನ್‌ ಟು ಡಬಲ್‌ ರೇಟ್‌ಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಭಕ್ತಾಧಿಗಳು ಹಾಗೂ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

VISTARANEWS.COM


on

By

Basavanagudi News
Koo

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ (Basavanagudi News) ಭಕ್ತಾದಿಗಳು ಹಾಗೂ ಮಳಿಗೆ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದೆ. ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಯಲ್ಲಿ ಪೂಜಾ ಸಾಮಾಗ್ರಿಗಳು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಕೆಲವು ತಿಂಗಳಿಂದ ಪೂಜಾ ಸಾಮಗ್ರಿಗಳ ಬೆಲೆ ಕೇಳಿ ಭಕ್ತಾದಿಗಳು ಶಾಕ್ ಆಗಿದ್ದರು. ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೂಡ ಕೇಳಿಬಂದಿತ್ತು. ಹೂವು, ಹಣ್ಣು, ಕಡ್ಡಿ, ಕರ್ಪೂರ ಸೇರಿದ 70-80 ರೂಪಾಯಿಯ ಒಂದು ಸಣ್ಣ ಕಿಟ್ ಅನ್ನು ಬರೋಬ್ಬರಿ 150 ರೂಪಾಯಿಗೆ ಸೇಲ್ ಮಾಡಲಾಗುತ್ತಿದೆ. ಇದೊಂಥರಾ ಹಗಲು ದರೋಡೆ ಅಂದರೆ ತಪ್ಪಾಗಲ್ಲ.

ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳು ಇದನ್ನೂ ಪ್ರಶ್ನಸಿದ್ದಾರೆ. ಈ ವೇಳೆ ಭಕ್ತರು ಹಾಗೂ ಮಳಿಗೆ ವ್ಯಾಪಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಟೆಂಟರ್‌ಗೆ ಹೆಚ್ಚು ಹಣವನ್ನು ಕೊಟ್ಟಿದ್ದೀವಿ, ಹೀಗಾಗಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿವಿ. ಮಾರುಕಟ್ಟೆಯಲ್ಲಿ ಹೂ-ತೆಂಗಿನಕಾಯಿ ದಿನಕ್ಕೊಂದು ದರ ಇರುತ್ತದೆ, ನಾವೇನು ಮಾಡೋಣ ಎಂದು ಮಳಿಗೆ ವ್ಯಾಪಾರಿಗಳು ವಾದವಾಗಿದೆ.

ಇತ್ತ 2 ಬಾಳೆಹಣ್ಣು, ತೆಂಗಿನಕಾಯಿ, ಅಗರಬತ್ತಿ, ಹೂವಿ ಇರುವು ಪೂಜಾ ಸಾಮಾಗ್ರಿಗೆ ಬರೋಬ್ಬರಿ 150-300 ರೂ. ವ್ಯಾಪಾರಿಗಳು ಭಕ್ತರಿಂದ ಪಡೆಯುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಭಕ್ತರು, ವ್ಯಾಪಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದನ್ನು ಕೇಳಬೇಕಿದ್ದ ಮುಜರಾಯಿ ಕಣ್ಮುಚ್ಚಿ ಕುಳಿತಿದೆ. ಇದರ ಪರಿಣಾಮ ಭಕ್ತರ ಜೇಬು ಖಾಲಿ ಆಗುತ್ತಿದ್ದು, ವಿಧಿಯಿಲ್ಲದೆ ದುಬಾರಿ ಹಣ ತೆರಬೇಕಾಗುತ್ತಿದೆ.

ಇದನ್ನೂ ಓದಿ: Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

ಚಿಕ್ಕಬಳ್ಳಾಪುರ: ಮದುವೆ ಮನೆಗೆ ಬಂದ ಕಳ್ಳನಿಗೆ (Theft Case ) ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಘಟನೆ ನಡೆದಿದೆ.

ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ. ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮಹಿಳೆ ಬಟ್ಟೆ ಬದಲಿಸುವ ವೇಳೆ ನರೇಶ್ ಚಿನ್ನದ ಸರ ಕದಿಯಲು ಯತ್ನಿಸಿದ್ದ. ಆದರೆ ಇದನ್ನೂ ಗಮನಿಸಿದ ಮಹಿಳೆ ಕೂಡಲೇ ಕಿರುಚಾಡಿದ್ದು, ತಪ್ಪಿಸಿಕೊಂಡು ಓಡಾಡುತ್ತಿದ್ದ ನರೇಶ್‌ನನ್ನು ಹಿಡಿದು ಥಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ಬೆಂಗಳೂರು: ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖರ್ತನಾಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಝ್ ಬಂಧಿತ ಆರೋಪಿಗಳು.

ಬೆಳಗಿನಿಂದ ಸಂಜೆ ತನಕ ಕೋಳಿ ಅಂಗಡಿಯಲ್ಲಿ ಕೋಳಿ ಕುಯ್ಯುವ ಕೆಲಸ ಮಾಡಿದರೆ, ರಾತ್ರಿಯಾದರೆ ಸಾಕು ಸುಲಿಗೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಇವರಿಬ್ಬರು, ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಅಮ್ಮೇಜಾನ್‌ ಅವರು ದೂರು ದಾಖಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Road Accident: ರಾಮನಗರ-ಕನಕಪುರ ರಸ್ತೆಯ ಅವೇರಹಳ್ಳಿ ಕೆರೆ ಏರಿ ಬಳಿ ಭಾನುವಾರ ಅಪಘಾತ ನಡೆದಿದೆ. ಘಟನೆಯಲ್ಲಿ ಮಹಿಳೆ ಮತ್ತು ಬೈಕ್‌ ಸವಾರ ಮೃತಪಟ್ಟಿದ್ದಾನೆ.

VISTARANEWS.COM


on

Road Accident
Koo

ರಾಮನಗರ: ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮತಪಟ್ಟ ಘಟನೆ ರಾಮನಗರ-ಕನಕಪುರ ರಸ್ತೆಯ ಅವೇರಹಳ್ಳಿ ಕೆರೆ ಏರಿ ಬಳಿ ಭಾನುವಾರ ನಡೆದಿದೆ. ಅಪಘಾತದಲ್ಲಿ ಮಾಗಡಿ ತಾಲೂಕಿನ ಹೊನ್ನಾಪುರ ಪಾಳ್ಯದ ನಿವಾಸಿಗಳಾದ ಮಹಿಳೆ ಮತ್ತು ಬೈಕ್ ಸವಾರ ಮೃತಪಟ್ಟಿದ್ದಾರೆ.

ಕನಕಪುರದಿಂದ ರಾಮನಗರ ಕಡೆ ತೆರಳುತ್ತಿದ್ದ ಬೈಕ್‌ ಹಾಗೂ ರಾಮನಗರದಿಂದ ಕನಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Theft case : ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಗೂಡ್ಸ್‌ ವಾಹನ ಚಾಲಕ ಸಾವು

ಬೆಂಗಳೂರು: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಗೂಡ್ಸ್‌ ವಾಹನ ಚಾಲಕ ಮೃತಪಟ್ಟಿರುವ ಘಟನೆ ನಗರ ಹೊರವಲಯದ ಬೆಳ್ಳಂದೂರು ಬಸ್ ನಿಲ್ದಾಣದ ಸಮೀಪ ನಡೆದಿದೆ. ಮುರುಗನ್ (40) ಮೃತ ಚಾಲಕ.

407 ಗೂಡ್ಸ್ ವಾಹನಕ್ಕೆ ಹತ್ತುತ್ತಿದ್ದ ಚಾಲಕನಿಗೆ ವಾಟರ್‌ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಚಾಲಕ ಮೃತಪಟ್ಟಿದ್ದಾನೆ. ವಾಟರ್ ಟ್ಯಾಂಕ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಅಪಘಾತ ನಡೆದಿದೆ. ಅಪಘಾತವೆಸಗಿದ ಬಳಿಕ ವಾಟರ್ ಟ್ಯಾಂಕರ್ ಚಾಲಕ ಎಸ್ಕೇಪ್ ಆಗಿದ್ದಾನೆ.

ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

Road Accident

ಕಾರವಾರ: ಬಸ್‌ಗೆ ಸ್ಕೂಟರ್‌ ಡಿಕ್ಕಿಯಾಗಿದ್ದು, ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಹಳದೀಪುರ ಗ್ರಾಮದ ಬಳಿ ಘಟನೆ (Road Accident) ನಡದಿದೆ. ಸವಾರ ಶಂಕರ ಹೆಗಡೆ (50) ಮೃತ ದುರ್ದೈವಿ.

ಕೆಎಸ್‌ಆರ್‌ಟಿಸಿ ಬಸ್‌ ಭಟ್ಕಳ ಭಾಗದಿಂದ ಕುಮಟಾದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್‌ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಶಂಕರ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬಸ್‌ ಮುಂಭಾಗ ಹಾನಿಯಾಗಿದ್ದು, ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Continue Reading

ಕರ್ನಾಟಕ

Lockup Death: ಚನ್ನಗಿರಿ ಆದಿಲ್ ಸಾವು ಪ್ರಕರಣ ಸಿಐಡಿಗೆ ವರ್ಗಾವಣೆ

Lockup Death: ಚನ್ನಗಿರಿ ಆದಿಲ್ ಸಾವು ಪ್ರಕರಣ ಖಂಡಿಸಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಸಂಬಂಧ 25 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

VISTARANEWS.COM


on

Lockup Death
Koo

ದಾವಣಗೆರೆ: ಚನ್ನಗಿರಿ ಆದಿಲ್ ಸಾವು ಪ್ರಕರಣ (Lockup Death) ಹಾಗೂ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದುವರೆಗೂ ಘಟನೆಗೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ. ಅವರೆಲ್ಲಾ ನ್ಯಾಯಾಂಗ ಬಂಧನದಲ್ಲಿದ್ದು, ಬಂಧಿತರ ಮೇಲೆ ಯಾವುದೇ ಹಳೇ ಕೇಸ್‌ಗಳಿಲ್ಲ. ಗುಂಪಿನಲ್ಲಿದ್ದ ಕೆಲ ಯುವಕರು ಠಾಣೆ ಮೇಲೆ ಕಲ್ಲೆಸೆದಿದ್ದಾರೆ. ಚನ್ನಗಿರಿ ಟೌನ್ ಮತ್ತು ತಾಲೂಕಿನ ಹೊನ್ನೇಬಾಗಿ ನಲ್ಲೂರು ಸೇರಿ ವಿವಿಧ ಹಳ್ಳಿಗಳಿಂದ ಬಂದ ಯುವಕರು ಗುಂಪಿನಲ್ಲಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಬಂಧಿತರ ಮೇಲೆ ಐಪಿಸಿ 353 ಮತ್ತು 307 ಅನ್ವಯ ಪ್ರಕರಣ ದಾಖಲಾಗಿದೆ. ಆದಿಲ್‌ ಮರಣೋತ್ತರ ಪರೀಕ್ಷೆ ನಡೆದಿದ್ದು, ಇನ್ನಷ್ಟೇ ವರದಿ‌ ನಮ್ಮ ಕೈಸೇರಬೇಕಿದೆ. ಇನ್ಮೆರೆಡು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ | Mob Attacks: ಕುರಾನ್ ಅಪವಿತ್ರ ನೆಪ; ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರ ಮೇಲೆ ಮುಸ್ಲಿಮರ ದಾಳಿ

ಯುವಕನ ಲಾಕಪ್‌ ಡೆತ್‌ ಆಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದರು. ಈ ಸಂಬಂಧ 25 ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವಕನ ಲಾಕಪ್‌ ಡೆತ್‌ ಪ್ರಕರಣದಿಂದ ಉದ್ವಿಗ್ನಗೊಂಡಿದ್ದ ಜಿಲ್ಲೆಯ ಚನ್ನಗಿರಿ ಪಟ್ಟಣ ಸಹಜ‌ ಸ್ಥಿತಿಯತ್ತ ಮರಳುತ್ತಿದೆ. ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಆಯ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.

ಪೊಲೀಸ್ ವಶದಲ್ಲಿದ್ದ ಆದಿಲ್ (32) ಎಂಬ ವ್ಯಕ್ತಿ ಸಾವಿಗೀಡಾದ ಹಿನ್ನೆಲೆಯಲ್ಲಿ ಲಾಕಪ್ ಡೆತ್ ಆರೋಪ ಕೇಳಿಬಂದಿತ್ತು. ಇದರಿಂದ ರೊಚ್ಚಿಗೆದ್ದ ಕೆಲ ಕಿಡಿಗೇಡಿಗಳು ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ವೇಳೆ ಐದು ಪೊಲೀಸ್ ವಾಹನ‌‌ ಜಖಂಗೊಂಡು, ಹನ್ನೊಂದು ಪೊಲೀಸರಿಗೆ ಗಾಯಗಳಾಗಿದ್ದವು. 200ಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ದಾಳಿಯಾದ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ಇದನ್ನೂ ಓದಿ | Swati Maliwal case: “ರೇಪ್‌, ಕೊಲೆ ಮಾಡೋದಾಗಿ ಬೆದರಿಕೆ ಬರ್ತಿದೆ”- ಸ್ವಾತಿ ಮಲಿವಾಲ್‌ ಮತ್ತೊಂದು ಆರೋಪ

ಈಗ ಶವ ಪರೀಕ್ಷೆ ವರದಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದಿಲ್‌ ಪೊಲೀಸ್ ಠಾಣೆಯಲ್ಲಿದ್ದದ್ದು ಕೇವಲ‌ ಏಳು ನಿಮಿಷ. ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವೈದ್ಯರು ಪ್ರಾಥಮಿಕ ವರದಿ ನೀಡಿದ ಮೇಲೆ ಸತ್ಯಾಸತ್ಯತೆ ತಿಳಿಯಲಿದೆ.

Continue Reading
Advertisement
Krishna Water Dispute
ಕರ್ನಾಟಕ6 mins ago

Krishna Water Dispute: ಕೃಷ್ಣಾ ನೀರಿನ ವಿಚಾರ ಮತ್ತೆ ಮಹಾ ಕ್ಯಾತೆ; ರಾಜ್ಯಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದ ಮಹಾರಾಷ್ಟ್ರ!

Latest18 mins ago

Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

Actor Darshan fans against forest officials Construction of Arjuna tomb
ಸ್ಯಾಂಡಲ್ ವುಡ್19 mins ago

Actor Darshan: ಅರ್ಜುನನ ಸಮಾಧಿ ನಿರ್ಮಾಣ: ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ!

Mango Nail Art
ಫ್ಯಾಷನ್21 mins ago

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Viral News
ವೈರಲ್ ನ್ಯೂಸ್22 mins ago

Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

Basavanagudi News
ಬೆಂಗಳೂರು35 mins ago

Basavanagudi News : ಪೂಜಾ ಸಾಮಾಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Road Accident
ಕರ್ನಾಟಕ45 mins ago

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Porsche Car Crash
ದೇಶ46 mins ago

Porsche Crash: ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಬಾಲಕನಿಗೆ ಪೋರ್ಶೆ ಕಾರು ಸಿಕ್ಕಿದ್ದು ʼಬರ್ತ್‌ಡೇ ಗಿಫ್ಟ್‌ʼ!

Electric Scooters
ಪ್ರಮುಖ ಸುದ್ದಿ46 mins ago

Electric Scooters : ದೊಡ್ಡ ಬೂಟ್​ ಸ್ಪೇಸ್ ಇರುವಂಥ 5 ಎಲೆಕ್ಟ್ರಿಕ್​ ಸ್ಕೂಟರ್​ಗಳು ಇವು

Shreyanka Patil
ಕ್ರೀಡೆ53 mins ago

Shreyanka Patil: ನಟ ಸಮರ್ಜಿತ್ ಲಂಕೇಶ್ ಜತೆ ಮಸ್ತ್​ ಸ್ಟೆಪ್ಸ್ ಹಾಕಿದ ಆರ್​ಸಿಬಿ ಆಟಗಾರ್ತಿ ಶ್ರೇಯಾಂಕಾ; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 week ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 week ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌