Opposition Leader : ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನಕ್ಕೆ ಎಷ್ಟು ಫಿಕ್ಸ್ ಆಗಿದೆ?: ಪ್ರಿಯಾಂಕ್‌ ಖರ್ಗೆ - Vistara News

ಕರ್ನಾಟಕ

Opposition Leader : ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನಕ್ಕೆ ಎಷ್ಟು ಫಿಕ್ಸ್ ಆಗಿದೆ?: ಪ್ರಿಯಾಂಕ್‌ ಖರ್ಗೆ

Opposition Leader : ನಾನು ಮಾರಾಟಕ್ಕಿಲ್ಲ ಎಂದು ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ನಾಯಕರು ಅವರ ಪಕ್ಷದ ಶಾಸಕರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಿ ಕಾಂಗ್ರೆಸ್‌ಗೆ ಉತ್ತರ ಕೊಡುವುದು ಬೇಡ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಯನ್ನು ಕುಟುಕಿದ್ದಾರೆ.

VISTARANEWS.COM


on

Priyank Kharge R Ashok and BY Vijayendra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತಮ್ಮ ಬಳಿಗೆ ಒಬ್ಬ ಏಜೆಂಟ್ ಬಂದಿದ್ದರು ಎಂದು ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ (Basanagouda Patil Yatnal) ಹೇಳಿದ್ದಾರೆ.‌ ಹಿಂದೆ ಸಿಎಂ ಕುರ್ಚಿ ಖರೀದಿ ಬಗ್ಗೆ ಯತ್ನಾಳ್‌ ಮಾತನಾಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ (BJP state president) ಸ್ಥಾನಕ್ಕೆ, ವಿಪಕ್ಷ ಸ್ಥಾನಕ್ಕೆ (Opposition Leader) ಎಷ್ಟು ಫಿಕ್ಸ್ ಆಗಿದೆ? ‌ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ಮೇಲುಗೈ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಾದರೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ (BL Santhosh) ಅವರು ಏನು ಮಾಡಬೇಕು? ಎಲ್ಲದಕ್ಕೂ ಉತ್ತರ ಕೇಶವಕೃಪ, ಬಿಜೆಪಿ ಕಚೇರಿಯಲ್ಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Minister Priyank Kharge) ವ್ಯಂಗ್ಯವಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ನಾನು ಮಾರಾಟಕ್ಕಿಲ್ಲ ಎಂದು ನಿನ್ನೆ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ನಾಯಕರು ಅವರ ಪಕ್ಷದ ಶಾಸಕರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಿ ಕಾಂಗ್ರೆಸ್‌ಗೆ ಉತ್ತರ ಕೊಡುವುದು ಬೇಡ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಇದನ್ನೂ ಓದಿ: ‌Yathindra Siddaramaiah : ‘ಅಪ್ಪಾ ಜಿ’ ಪೋಸ್ಟರ್‌ ಬಿಟ್ಟು ಕಾಲೆಳೆದ ಬಿಜೆಪಿ!

ಬಿಜೆಪಿ ವರ್ಸಸ್ ಬಿಜೆಪಿ ಇನ್ನೂ ಮುಗಿದಿಲ್ಲ. ಇದು ಪಾರ್ಟ್ ಟೂ ಆಗಿದೆ. ಪಾರ್ಟ್ ಒನ್ ಬಿ.ಎಲ್. ಸಂತೋಷ ಅವರದ್ದು. ಪಾರ್ಟ್ ಟೂ ಇವರದ್ದಾಗಿದೆ. ಮಂಡ್ಯ ಉಸ್ತುವಾರಿ ಆಗಿದ್ದಾಗಾ ಗೋ ಬ್ಯಾಕ್ ಅಶೋಕ್ ಎಂದು ಪೋಸ್ಟರ್ ಅಂಟಿಸಿದ್ದರು. ಈಗ ಬಿಜೆಪಿ ಕಚೇರಿಯಲ್ಲಿ ಗೋ ಬ್ಯಾಕ್ ಎಂದು ಪೋಸ್ಟರ್ ಅಂಟಿಸಿದರೆ ಅಚ್ಚರಿ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಅಶೋಕ್‌ ಆಯ್ಕೆ ಬಿಜೆಪಿಯವರಿಗೇ ಖುಷಿಯಾಗಿಲ್ಲ

ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದಕ್ಕೆ ಆರ್. ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯವರು ಆರು ತಿಂಗಳ ಬಳಿಕ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದಾರೆ. ಆರ್. ಅಶೋಕ್‌ ಅವರು ಬಿಜೆಪಿಯಲ್ಲಿ ಬೆಳೆಯಬೇಕು, ವಿಪಕ್ಷ ನಾಯಕರಾಗಿಯೇ ಉಳಿಯಬೇಕು ಎಂಬುದು ನಮ್ಮ ಆಸೆ. ವರ್ಗಾವಣೆ ಅಂಗಡಿ ತೆಗೆದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ವಿಪಕ್ಷ ನಾಯಕ ಆಯ್ಕೆಯಿಂದ ಕಾಂಗ್ರೆಸ್‌ಗೆ ಖುಷಿಯಾಗಿದೆ‌. ಆದರೆ, ಬಿಜೆಪಿಯವರಿಗೇ ಖುಷಿಯಾಗಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

ದೇವೇಗೌಡರು ಪ್ರಧಾನಿ ಆಗಿದ್ದಾಗ ಕುಮಾರಸ್ವಾಮಿ ಮಾಡುತ್ತಾ ಇರಲಿಲ್ಲವಾ?

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಇದೆಲ್ಲ ಕರೆಂಟ್ ಕದ್ದ ವಿಚಾರವನ್ನು ಡೈವರ್ಟ್ ಮಾಡಲು ಮಾಡುತ್ತಾ ಇರೋದು. ಅವರಿಗೆ ಮುಜುಗರ ಆಗಿದೆ. ತಪ್ಪು ಆಗಿದೆ ಅಂತಾ ದಂಡ ಕಟ್ಟಿದ್ದಾರೆ. ಅದರ ಗಮನವನ್ನು ಬೇರೆಡೆ ತಿರುಗಿಸಲು ಈ ರೀತಿಯ ಆರೋಪಗಳನ್ನು ಮಾಡುತ್ತಾ ಇದ್ದಾರೆ. ಒಬ್ಬ ಮಾಜಿ ಶಾಸಕ ವರ್ಗಾವಣೆ ವಿಚಾರದಲ್ಲಿ ರೆಕಮಂಡ್ ಮಾಡಿದರೆ ತಪ್ಪೇನು? ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದಾಗ ಕುಮಾರಸ್ವಾಮಿ ಮಾಡುತ್ತಾ ಇರಲಿಲ್ಲವಾ? ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಖಿಲ್ ಮಾಡಿರಲಿಲ್ಲವಾ? ಯತೀಂದ್ರ ಅವರಾದರೂ ಒಬ್ಬ ಮಾಜಿ ಶಾಸಕರಾಗಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಇವರಿಬ್ಬರೂ ಏನೂ ಆಗಿರದೇ ಇದ್ದಾಗ ಈ ಕೆಲಸಗಳನ್ನು ಮಾಡಿರಲಿಲ್ಲವೇ? ಕುಮಾರಸ್ವಾಮಿ ಯತೀಂದ್ರ ಕಡೆ ಕೊಡುವಷ್ಟು ಗಮನವನ್ನು ತಮ್ಮ ಶಾಸಕರ ಕಡೆ ಕೊಡಲಿ. ಕಡೇ ಪಕ್ಷ ಅವರ ಶಾಸಕರಾದ್ರೂ ಜೆಡಿಎಸ್‌ನಲ್ಲಿ ಉಳಿದುಕೊಳ್ಳುತ್ತಾರೆ ಎಂದು ಹೇಳಿದರು.

ವಿವೇಕಾನಂದ ಅನ್ನೋ ಹೆಸರಿನವರು ಪೊಲೀಸ್‌ ಇಲಾಖೆಯಲ್ಲಿ ಮಾತ್ರ ಇರೋದಾ? ಶಿಕ್ಷಣ ಇಲಾಖೆಯಲ್ಲಿ ಕೂಡಾ ಅದೇ ಹೆಸರಿನವರು ಇದ್ದಾರೆ. ಕಾಕತಾಳೀಯ ಎಂಬಂತೆ ವಿವೇಕಾನಂದ ಎಂಬುವವರು ವರ್ಗಾವಣೆ ಆಗಿದ್ದಾರೆ. ಯತೀಂದ್ರ ಮಾತನಾಡಿದ್ದೇ ಇವರ ಬಗ್ಗೆ ಅಂದರೆ ಹೇಗೆ? ಕುಮಾರಸ್ವಾಮಿ ಅನ್ನೋ ಹೆಸರೂ ಬಹಳ ಕಾಮನ್. ಕುಮಾರಸ್ವಾಮಿ ಅನ್ನೋ ಹೆಸರಿನವರ ಬಗ್ಗೆ ಮಾತನಾಡಿದರೆ ಅದು ಇದೇ ಕುಮಾರಸ್ವಾಮಿ ಅಂತ ಅರ್ಥನಾ? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಮಾಡಿದರು.

ಆವಿಷ್ಕಾರ, ಸಂಶೋಧನೆ, ನವೋದ್ಯಮದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು

ನಮ್ಮ ಇಲಾಖೆಯ ಯೋಜನೆಯನ್ನು ಘೋಷಣೆ ಮಾಡುತ್ತಾ ಇದ್ದೇವೆ. ಬೆಂಗಳೂರು, ಕರ್ನಾಟಕ ವಿಶ್ವದ ನಾಲ್ಕನೇ ಸ್ಥಾನವನ್ನು ಪಡೆದಿದೆ. ಆವಿಷ್ಕಾರ, ಸಂಶೋಧನೆಯಲ್ಲಿ 8ನೇ ಸ್ಥಾನ ಪಡೆದಿದ್ದೇವೆ. ನಮ್ಮ ರಾಜ್ಯದಲ್ಲಿ 15 ಸಾವಿರ ಸ್ಟಾರ್ಟ್ಅಪ್‌ಗಳು ಇವೆ. ಫಂಡಿಂಗ್‌ನಲ್ಲಿ 8 ಸ್ಥಾನದಲ್ಲಿ ಇದ್ದೇವೆ. ನೀತಿ ಆಯೋಗದ ಪ್ರಕಾರ ನಂಬರ್ ಒನ್ ಇದ್ದೇವೆ. ನವೋದ್ಯಮದ ಆವಿಷ್ಕಾರ ವ್ಯವಸ್ಥೆಯಲ್ಲಿ ಇದ್ದೇವೆ. ಕಾಲ್ ಸೆಂಟರ್‌ನಲ್ಲಿ ಆರಂಭ ಆಗಿ ಈ ಆವಿಷ್ಕಾರ, ಸಂಶೋಧನೆ, ನವೋದ್ಯಮದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು. ಸರ್ವಿಸ್, ಪ್ರಾಡಕ್ಟ್, ಮಾರುಕಟ್ಟೆ ವಿಷಯದಲ್ಲಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಲಾಗುವುದು. ಹೊಸ ಆವಿಷ್ಕಾರಕ್ಕೆ ಅನುದಾನ ನೀಡುತ್ತೇವೆ ಎಂದು ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಲಿವೇಟ್ ಯೋಜನೆಯಲ್ಲಿ 874 ನವೋದ್ಯಮಗಳಿಗೆ 200 ಕೋಟಿ ರೂ. ಅನುದಾನ ನೀಡಿದ್ದೇವೆ. ನವೋದ್ಯಮಗಳಿಗೆ ಉತ್ತೇಜನ ನೀಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಎರಡನೇ ಹಂತದ ನಗರಗಳಿಗೆ ಒತ್ತು ನೀಡಿದ್ದೇವೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಆರಂಭಕ್ಕೆ ಒತ್ತು ನೀಡಲಾಗುತ್ತದೆ. ಶೇ. 30% ಮಹಿಳಾ ಉದ್ಯಮಿಗಳು ಇದ್ದಾರೆ. ಎಲಿವೇಟ್ ಉನ್ನತಿ ಸಹ ಮಾಡಲಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಇದನ್ನೂ ಓದಿ: Yathindra Siddaramaiah : ʼಹಲೋ ಅಪ್ಪಾʼ ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ!

ಮೂರು ತಿಂಗಳಲ್ಲಿ ಹೊಸ ಉದ್ಯಮಿಗಳ ಸೃಷ್ಟಿ

ಎಲ್ಲರಿಗೂ ಬೆಂಗಳೂರಿಗೆ ಬರಲು ಆಗಲ್ಲ. ಮೂರು ತಿಂಗಳಲ್ಲಿ ಹೊಸ ಉದ್ಯಮಿಗಳನ್ನು ಸೃಷ್ಟಿ ಮಾಡುತ್ತೇವೆ. 20 ಕೋಟಿ ರೂ. ಮೀಸಲು ಇಟ್ಟಿದ್ದೇವೆ. ಹೊಸ ಆವಿಷ್ಕಾರದ ಜತೆ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಸಿಂಗಲ್ ವಿಂಡೋ ಯೋಜನೆ ಅಡಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

Karnataka Weather Forecast : ಮುಂಗಾರು ಮಳೆ ಅವಾಂತರವನ್ನೇ ಸೃಷ್ಟಿಸಿದ್ದು, ಚಿಕ್ಕಮಗಳೂರಲ್ಲಿ ಸ್ಕಿಡ್‌ ಆಗಿ ಕಾರೊಂದು ಹೇಮಾವತಿ ನದಿಗೆ ಹಾರಿದೆ. ಭಾನುವಾರವೂ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka weather Forecast
Koo

ಚಿಕ್ಕಮಗಳೂರು/ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ (karnataka Weather Forecast) ಅಬ್ಬರ ಮುಂದುವರಿದಿದ್ದು, ಹೇಮಾವತಿ ನದಿಗೆ ಮತ್ತೊಂದು ಕಾರು ಬಿದ್ದಿದೆ. ಭಾರಿ ಮಳೆಯಿಂದ (Rain News) ಚಾಲಕನ ನಿಯಂತ್ರಣ ತಪ್ಪಿ ನದಿಗೆ ಹಾರಿದೆ. ನಿನ್ನೆ ಶುಕ್ರವಾರ ಕೂಡ ಇದೇ ಜಾಗದಲ್ಲಿ, ಇದೇ ಶೈಲಿಯಲ್ಲಿ ಕಾರು ಬಿದ್ದಿತ್ತು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಘಟನೆ ನಡೆದಿದೆ.

ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿಯಿಂದ ಮೂಡಿಗೆರೆಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಹಾರಿ ನದಿಗೆ ಬಿದ್ದಿದೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಸಹಾಯದಿಂದ ಕಾರನ್ನು ಮೇಲೆ ಎತ್ತಲಾಗಿದೆ.

ಜೂ 28ರಂದು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನೋಡ ನೋಡುತ್ತಿದ್ದಂತೆ ‌ಕಾರು ಹೇಮಾವತಿ ನದಿಗೆ ಹಾರಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಕಾರು ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಯಿಂದ ಜಿಗಿದು ನದಿಗೆ ಕಾರು ಬಿದ್ದಿತ್ತು. ಕಳೆದ ಎರಡು ತಿಂಗಳ ಹಿಂದೆ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಇದೆ ಸ್ಥಳದಲ್ಲೇ ಮತ್ತೆರಡು ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Road Accident : ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್‌ಗೆ ಗುದ್ದಿ ಹಳ್ಳಕ್ಕೆ ಜಿಗಿದ ಕೆಎಸ್‌ಆರ್‌ಟಿಸಿ; ಶಿರಾಡಿಘಾಟ್‌ನಲ್ಲಿ ಸರಣಿ ಅಪಘಾತ

ಕರಾವಳಿಯಲ್ಲಿ ವಿಪರೀತ ಮಳೆ

ಜೂನ್‌ 30ರಂದು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.‌ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ದಕ್ಷಿಣ ಒಳನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ

ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶ ಕ್ರಮವಾಗಿ 30-21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Road Accident: ಮುಧೋಳ ಬಳಿ ಶಾಲಾ ಬಸ್‌ ಹರಿದು 4 ವರ್ಷದ ಬಾಲಕ ಸಾವು

Road Accident: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬರಗಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಶಾಲೆಗೆ ಹೋಗಬೇಕಿದ್ದ ಪುಟ್ಟ ಕಂದಮ್ಮ, ಶಾಲಾ ಬಸ್‌ ಚಕ್ರಕ್ಕೆ ಸಿಲುಕಿ ದುರಂತ ಸಾವು ಕಂಡಿದೆ.

VISTARANEWS.COM


on

Road Accident
Koo

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಬರಗಿ ಕ್ರಾಸ್ ಬಳಿ ಶಾಲಾ ವಾಹನ ಹರಿದು 4 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಶಾಲೆಗೆ ಹೋಗಬೇಕಿದ್ದ ಪುಟ್ಟ ಕಂದಮ್ಮ, ಶಾಲಾ ಬಸ್‌ ಚಕ್ರಕ್ಕೆ ಸಿಲುಕಿ ದುರಂತ ಸಾವು ಕಂಡಿದೆ. ಸಂಗಪ್ಪ ಹೊಸೂರ್ ಎಂಬುವವರ ಪುತ್ರ ಅಭಿನಂದನ್ ಹೊಸೂರ್ (4) ಮೃತ ಬಾಲಕ.

ಶಾಲಾ ವಾಹನ ಹರಿದು ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದರಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಇದನ್ನೂ ಓದಿ | Prajwal Revanna Case: ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಬಂಧನ

ರಾಜಹಂಸ-ಐರಾವತ ಬಸ್ ಡಿಕ್ಕಿ; ಅಪಘಾತ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಟೆಂಪೋ

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿಘಾಟ್ ಶನಿವಾರ ಸರಣಿ ಅಪಘಾತ ನಡೆದಿದೆ. ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಈ ವೇಳೆ ಅಪಘಾತ ತಪ್ಪಿಸಲು ಹೋಗಿ ಟೆಂಪೋ ಚರಂಡಿಗೆ ಬಿದ್ದಿದೆ. ಹೀಗಾಗಿ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ. ಅಪಘಾತದಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಬಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಹೇಮಾವತಿ ನದಿಗೆ ಬಿದ್ದ ಮತ್ತೊಂದು ಕಾರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಈ ನಡುವೆ ಹೇಮಾವತಿ ನದಿಗೆ ಶನಿವಾರ ಮತ್ತೊಂದು ಕಾರು ಬಿದ್ದಿದೆ. ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರು ನದಿಗೆ ಬಿದ್ದಿದೆ. ನೆನ್ನೆ ಅದೇ ಜಾಗದಲ್ಲಿ ಅದೇ ಶೈಲಿಯಲ್ಲಿ ಸ್ವಿಫ್ಟ್ ಕಾರು ಬಿದ್ದಿತ್ತು.

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿಯಿಂದ ಮೂಡಿಗೆರೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಹಾರಿ ನದಿಗೆ ಬಿದ್ದಿದೆ.

ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್‌ಗೆ ಗುದ್ದಿ ಹಳ್ಳಕ್ಕೆ ಜಿಗಿದ ಕೆಎಸ್‌ಆರ್‌ಟಿಸಿ

Road Accident

ಮಂಡ್ಯ: ಶನಿವಾರ ಒಂದೇ ದಿನ ಹಲವೆಡೆ ರಸ್ತೆ ಅಪಘಾತಗಳು (Road Accident) ಸಂಭವಿಸಿದೆ. ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಡಿವೈಡರ್ ದಾಟಿ ಸರ್ವಿಸ್ ರಸ್ತೆಯ ಹಳ್ಳಕ್ಕೆ ಉರುಳಿದ ಘಟನೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್‌ ವೇಗವಾಗಿ ಬಂದು ನೋಡನೋಡುತ್ತಿದ್ದಂತೆ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಮೇಲೆ ಹತ್ತಿದೆ. ಬಳಿಕ ಸರ್ವಿಸ್ ರಸ್ತೆಗೆ ಬಂದು ಹಳ್ಳಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ.

Vinay Kulkarni: ವಿನಯ್‌ ಕುಲಕರ್ಣಿಗೆ ಧಾರವಾಡ ಜಿಲ್ಲೆ ಪ್ರವೇಶ ಮತ್ತೆ ನಿರಾಕರಿಸಿದ ಕೋರ್ಟ್‌

ಗಂಭೀರವಾಗಿ ಗಾಯಗೊಂಡವರನ್ನು ಮಂಡ್ಯ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಣ್ಣ-ಪುಟ್ಟ ಗಾಯಗೊಂಡವರು ಬೇರೆ ಬಸ್‌ ಮುಖಾಂತರ ತೆರಳಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಪ್ರಮುಖ ಸುದ್ದಿ

Dr HS Shetty: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ ಜುಲೈ 6ರಂದು 41 ಸಾವಿರ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ

Dr HS Shetty: ಜುಲೈ 6ರಂದು ಬೈಂದೂರು ತಾಲೂಕಿನಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಿರುವ ಜೆ.ಎನ್.ಆ‌ರ್. ಸಭಾ೦ಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮೃದ್ಧ ಜನಸೇವಾ ಚಾರಿಟೇಬಲ್‌ ಟ್ರಸ್ಟ್ (ರಿ) ಬೈ೦ದೂರು ಹಾಗೂ ಉಡುಪಿ ಜಿಲ್ಲೆಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಲಾಖೆ ಸಹಕಾರದೊಂದಿಗೆ ಈ ಬೃಹತ್​ ಸಮಾರಂಭವನ್ನು ಆಯೋಜಿಸಲಾಗಿದೆ.

VISTARANEWS.COM


on

Dr HS Shetty
Koo

ಬೆಂಗಳೂರು: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ನೋಂದಾಯಿತ) ಬೆಂಗಳೂರು ವತಿಯಿಂದ ಉಡುಪಿ ಜಿಲ್ಲೆಯ 350 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ 41,000 ಜೊತೆ ಶಾಲಾ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಜುಲೈ 6ರಂದು ಬೈಂದೂರು ತಾಲೂಕಿನಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಜೆ.ಎನ್.ಆ‌ರ್. ಸಭಾ೦ಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮೃದ್ಧ ಜನಸೇವಾ ಚಾರಿಟೇಬಲ್‌ ಟ್ರಸ್ಟ್ ಬೈಂದೂರು ಹಾಗೂ ಉಡುಪಿ ಜಿಲ್ಲೆಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಲಾಖೆ ಸಹಯೋಗದೊಂದಿಗೆ ಈ ಬೃಹತ್​ ಸಮಾರಂಭ ನಡೆಯಲಿದೆ.

ವಿಧಾನ ಸಭೆ ಸ್ಪೀಕರ್​ ಯು. ಟಿ ಖಾದರ್​ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್​​ನ ಅಧ್ಯಕ್ಷರಾದ ಡಾ. ಹೆಚ್.ಎಸ್.ಶೆಟ್ಟಿ (Dr HS Shetty ) ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಾಂಶಸನೆ ಮಾಡಲಿದ್ದಾರೆ. ಮಾಜಿ ಸಚಿವರಾದ ವಿನಯಕುಮಾ‌ರ್ ಸೊರಕೆ ಸಮವಸ್ತ್ರ ವಿತರಣೆ ಮಾಡಲಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆಯ ಉಪ ನಿರ್ದೇಶಕ ಬೈಂದೂರು ಶ್ರೀ ಕೆ. ಗಣಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭ

ಕಾರ್ಯಕ್ರಮದಲ್ಲಿ ‘ಹೆಗ್ಗು೦ಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್‌ ಪ್ರಶಸ್ತಿ’ ಪ್ರಧಾನ ಸಮಾರಂಭ ನಡೆಯಲಿದೆ. ಹಿರಿಯ ಶಿಕ್ಷಕರು ಹಾಗೂ ಯಕ್ಷಗಾನ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಈ ಬಾರಿ ಪ್ರಶಸ್ತಿ ಪ್ರದಾನವಾಗಲಿದ್ದು, ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್​​​ನ ಅಧ್ಯಕ್ಷರಾದ ಎಚ್​. ಎಸ್. ಶೆಟ್ಟಿ ,ಉಪಾಧ್ಯಕ್ಷರಾದ ಹಾಲಾಡಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಡಾ. ಸುಮನಾ ಶೆಟ್ಟಿ ಅವರು ಬೃಹತ್​ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದ್ದಾರೆ. ಮೈಸೂರು ಮರ್ಕಂಟೈಲ್ ಕಂಪನಿ ಲಿಮಿಟೆಡ್ ಬೆಂಗಳೂರು, ಮೈಸೂರು ಗ್ರೀನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮೈಸೂರು ಸೈನ್ಸ್ & ಟಿಕ್ನಾಲಜಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಕ್ರಮದ ಪೋಷಕ ಸಂಸ್ಥೆಗಳಾಗಿವೆ.

ಕಾರ್ಯಕ್ರಮದ ರೂವಾರಿ ಡಾ.ಎಚ್‌.ಎಸ್‌.ಶೆಟ್ಟಿ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಡಾ.ಎಚ್‌.ಎಸ್‌.ಶೆಟ್ಟಿ ಅವರು ಹೋಟೆಲ್‌ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಜತೆಗೆ ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ವಿದ್ಯುತ್‌ ಉತ್ಪಾದನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮೈಸೂರು ಮರ್ಕೆಂಟೈಲ್‌ ಕಂಪನಿ ಲಿಮಿಟೆಡ್‌ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್‌ ಎಕ್ಸ್‌ಪೋರ್ಟ್‌ ಅವಾರ್ಡ್‌ ಲಭಿಸಿದೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಿಸಿ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಡಾ. ಎಚ್‌.ಎಸ್‌. ಶೆಟ್ಟಿ (Dr HS Shetty) ಅವರಿಗೆ ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು.

Continue Reading

ಪ್ರಮುಖ ಸುದ್ದಿ

V Somanna: ಹೆಜ್ಜಾಲ- ಚಾಮರಾಜನಗರ ರೈಲ್ವೆ ಕಾರ್ಯ ಶೀಘ್ರದಲ್ಲಿ: ಸಚಿವ ಸೋಮಣ್ಣ

V Somanna: 1996-97ರಲ್ಲಿ ಈ ಯೋಜನೆ ಪ್ರಪೋಸಲ್ ಇತ್ತು. ಈಗ ನನಗೆ ಅವಕಾಶ ಸಿಕ್ಕಿದೆ. 697 ಎಕರೆ ಜಮೀನು ಬೇಕಾಗಬಹುದು. ಇದರಲ್ಲಿ ಅರಣ್ಯ ಜಮೀನು ಬರುವುದಿಲ್ಲ. ರೈತರ ಜಮೀನಿನ ಮೇಲೆ ಹೋಗುತ್ತದೆ. ಇನ್ನು ಹದಿನೈದು ದಿನಗಳಲ್ಲಿ ಇದಕ್ಕಾಗಿ ಸರ್ವೇ ಕಾರ್ಯ ಆರಂಭಿಸುತ್ತೇವೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

V Somanna
Koo

ಬೆಂಗಳೂರು: ಹೆಜ್ಜಾಲದಿಂದ ಆರಂಭಿಸಿ ಕನಕಪುರ, ಸಾತನೂರು, ಹಲಗೂರು , ಕೊಳ್ಳೇಗಾಲ- ಚಾಮರಾಜನಗರದವರೆಗೆ ಬರಲಿರುವ 142 km ರೈಲು ಮಾರ್ಗದ (Railway Line) ಸರ್ವೇ ಕಾರ್ಯ (Survey) ಮತ್ತೆ ಕೈಗೆತ್ತಿಕೊಳ್ಳಲಾಗುವುದು. 2019ರಲ್ಲೇ ಸರ್ವೆ ಆಗಿ ಸ್ಥಗಿತ ಆಗಿತ್ತು, ಈಗ ಮತ್ತೆ ಸರ್ವೇ ಮಾಡುತ್ತೇವೆ. ಈ ಯೋಜನೆಗೆ ರಾಜ್ಯ ಸರ್ಕಾರ (Karnataka Govt) ಜಾಗ ಕೊಡಬೇಕಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ (Central minister) ವಿ. ಸೋಮಣ್ಣ (V Somanna) ಹೇಳಿದ್ದಾರೆ.

ರೈಲ್ವೆ ಯೋಜನೆಗಳ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದ ಸಭೆ ಮುಕ್ತಾಯಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. 1996-97ರಲ್ಲಿ ಈ ಯೋಜನೆ ಪ್ರಪೋಸಲ್ ಇತ್ತು. ಈಗ ನನಗೆ ಅವಕಾಶ ಸಿಕ್ಕಿದೆ. 697 ಎಕರೆ ಜಮೀನು ಬೇಕಾಗಬಹುದು. ಇದರಲ್ಲಿ ಅರಣ್ಯ ಜಮೀನು ಬರುವುದಿಲ್ಲ. ರೈತರ ಜಮೀನಿನ ಮೇಲೆ ಹೋಗುತ್ತದೆ. ಇನ್ನು ಹದಿನೈದು ದಿನಗಳಲ್ಲಿ ಇದಕ್ಕಾಗಿ ಸರ್ವೇ ಕಾರ್ಯ ಆರಂಭಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಕಂಟೋನ್ಮೆಂಟ್ ಹಾಗೂ ಯಶವಂತಪುರ ಸ್ಟೇಷನ್‌ಗಳನ್ನು ವಿಶ್ವದರ್ಜೆಗೆ ಏರಿಸಲು 2022-23ರಲ್ಲಿ ಮಂಜೂರಾತಿ ನೀಡಲಾಗಿದೆ. ಇದರ ಯೋಜನೆಯ ಮೊತ್ತ ಬೆಂಗಳೂರು ಕಂಟೋನ್ಮೆಂಟ್ 485 ಕೋಟಿ ರೂ. ಹಾಗೂ ಯಶವಂತಪುರ ಸ್ಟೇಷನ್ 387 ಕೋಟಿ ರೂ. ಈ ಎರಡೂ ನಿಲ್ದಾಣ ಪುನರಾಭಿವೃದ್ಧಿ ಕಾರ್ಯವೂ 2025ರಲ್ಲಿ ಪೂರೈಸಲಾಗುವುದು. 2018-19ರ ಯಶವಂತಪುರ – ಚನ್ನಸಂದ್ರ 25 km ಹಾಗೂ ಬೈಯಪ್ಪನಹಳ್ಳಿ – ಹೊಸೂರು 48 km ಡಬಲಿಂಗ್ ಯೋಜನೆಗಳನ್ನು ಕ್ರಮವಾಗಿ ರೂ 314 ಕೋಟಿ ಹಾಗೂ ರೂ 500 ಕೋಟಿ ಮೊತ್ತದಲ್ಲಿ ಮಂಜೂರು ಮಾಡಲಾಗಿದ್ದು, ಕಾಮಗಾರಿ ಮುಂದುವರೆದಿದೆ ಎಂದಿದ್ದಾರೆ ಸೋಮಣ್ಣ.

ಯಶವಂತಪುರ – ಚನ್ನಸಂದ್ರ ಯೋಜನೆಯಲ್ಲಿ ಈಗಾಗಲೇ ಯಶವಂತಪುರ ಹೆಬ್ಬಾಳ 10.3 km ಗಳನ್ನೂ ಪೂರ್ಣಗೊಳಿಸಲಾಗಿದೆ. ಮೇ 2025ರಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ. 1997-98 ರಲ್ಲಿ ಮಂಜೂರಾದ, ನೆನೆನಗುದಿಗೆ ಬಿದ್ದಿದ್ದ ಮಹತ್ವದ ಬೆಂಗಳೂರು – ವೈಟ್‌ಫೀಲ್ಡ್ 38 km ಕ್ವಾಡ್ರುಪ್ಲಿಂಗ್ ಯೋಜನೆಗಳನ್ನು ಈಗ ಕೈಗೆತ್ತಿಗೊಂಡು ಕಾಮಗಾರಿಗೆ ವೇಗ ನೀಡಲಾಗಿದ್ದು, ಬೆಂಗಳೂರು ದಂಡು – ಬೈಯಪ್ಪನಹಳ್ಳಿ ನಡುವೆ 13 ಕಾಮಗಾರಿ ನಡೆಯುತ್ತಿದೆ. ಇದರ ಯೋಜನೆ ಮೊತ್ತ ರೂ. 492 ಕೋಟಿ. ಜೂನ್ 2025ರಲ್ಲಿ ಈ ಯೋಜನೆಯನ್ನು ಪೂರ್ಣ ಮಾಡುವ ಗುರಿಯಿದೆ. ನನ್ನ ಮತ ಕ್ಷೇತ್ರದ ವಿಜಯನಗರ, ನಾಯಂಡಹಳ್ಳಿ, ಯೂನಿವರ್ಸಿಟಿಯಲ್ಲಿ ಕಾಮಗಾರಿಗಳನ್ನು ಸರಿಪಡಿಸುತ್ತೇವೆ ಎಂದು ಸೋಮಣ್ಣ ತಿಳಿಸಿದರು.

11ರಂದು ಖಾತೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಅಧಿಕಾರಿಗಳ ಜೊತ ಚರ್ಚೆ ಮಾಡಿದ್ದೇನೆ. ಇಲಾಖೆಯ ಸಾಧಕ ಭಾದಕಗಳ ಅರಿಯುವ ಕೆಲಸ ಮಾಡ್ತಿದ್ದೇನೆ. ರೈಲ್ವೆ ಇಲಾಖೆಗೆ ರಾಜ್ಯದಿಂದ ಅತಿರಥ ಮಹಾರಥರು ಮಂತ್ರಿಗಳಾಗಿ ಕೊಡುಗೆ ಕೊಟ್ಟಿದ್ದಾರೆ. ಅಶ್ವಿನಿ ವೈಷ್ಣವ್ ಹಾಗೂ ಜಲಶಕ್ತಿ ಸಚಿವ ಸಿ. ಆರ್ ಪಾಟೀಲ್ ನನಗೆ ಹೆಚ್ಚಿನ ಹುಮ್ಮಸ್ಸು ಕೊಟ್ಟಿದ್ದಾರೆ. ಐವತ್ತು ವರ್ಷಗಳಲ್ಲಿ ಆಗದಿರುವುದನ್ನು ಹತ್ತು ವರ್ಷಗಳಲ್ಲಿ ರೈಲ್ವೆ ಇಲಾಖೆ ಮಾಡಿ ತೋರಿಸಿದೆ. ರೈಲ್ವೆ ಇಲಾಖೆಯ ಕಾರ್ಯವೈಖರಿ ಒಂದು ರೀತಿ ಮಿಲಿಟರಿ ಇದ್ದಂತೆ. ಇನ್ನೂ ಎರಡು ವರ್ಷಗಳಲ್ಲಿ ಕರ್ನಾಟಕ, ವಿಭಿನ್ನ ರೀತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಬದಲಾವಣೆ ಆಗುತ್ತದೆ. ನನ್ನ ನಲವತ್ತು ವರ್ಷಗಳ ಅನುಭವದೊಂದಿಗೆ ಬದಲಾವಣೆ ಆಗುತ್ತದೆ. ರೈಲ್ವೆ ಮೇಲ್ಸುತುವೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅರ್ಧ ಅರ್ಧ ಹಣ ಕೊಡಬೇಕು. ಜಾಗವನ್ನು ರಾಜ್ಯ ಸರ್ಕಾರ ಕೊಡಬೇಕು ಎಂದಿದ್ದಾರೆ ಸೋಮಣ್ಣ.

ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ಮಾಹಿತಿ ಅವರು ನೀಡಿದರು.
ಹಾಸನ – ಬೆಂಗಳೂರು ಹೊಸ ಲೈನ್ : 166 km ರೂ 2010 ಕೋಟಿ ವೆಚ್ಚದಲ್ಲಿ 2017 ರಲ್ಲಿ ನಿರ್ಮಾಣಗೊಂಡಿದೆ
ಯಲಹಂಕ – ದೇವರಪಲ್ಲಿ ಡಬಲಿಂಗ್ : 72 km ರೂ 882 ಕೋಟಿ ವೆಚ್ಚದಲ್ಲಿ 2021ರಲ್ಲಿ ಪೂರ್ಣ ಗೊಂಡಿದೆ
2016 ರಲ್ಲಿ ರೂ 167 ಕೋಟಿ ವೆಚ್ಚದಲ್ಲಿ ಯಲಹಂಕ – ಚನ್ನಸಂದ್ರ 13km ಡಬಲಿಂಗ್
95 ಕೋಟೆ ವೆಚ್ಚದಲ್ಲಿ ಯಲಹಂಕ – ಯಶವಂತಪುರ 7km ಡಬಲಿಂಗ್ ಪೂರ್ಣಗೊಂಡಿದೆ
ಪ್ರಧಾನಿ ಮೋದಿಯವರ ಸಂಕಲ್ಪದಂತೆ ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ಉತ್ತಮ್ಮ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬೈಯಪ್ಪನಹಳ್ಳಿಯಲ್ಲಿ ರೂ 314 ಕೋಟಿ ವೆಚ್ಚದಲ್ಲಿ 2022ರಲ್ಲಿ ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣಗೊಂಡಿದೆ.
ರೂ 280 ಕೋಟಿ ವೆಚ್ಚದಲ್ಲಿ 11 RUB ಗಳ ಹಾಗೂ ರೂ 285 ಕೋಟಿ ವೆಚ್ಚದಲ್ಲಿ 12 ROB ಗಳ ನಿರ್ಮಾಣಗೊಂಡಿದೆ.

ಇದನ್ನೂ ಓದಿ: V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ

Continue Reading
Advertisement
IND vs SA Final
ಕ್ರೀಡೆ7 mins ago

IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

karnataka weather Forecast
ಮಳೆ7 mins ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

Road Accident
ಕರ್ನಾಟಕ10 mins ago

Road Accident: ಮುಧೋಳ ಬಳಿ ಶಾಲಾ ಬಸ್‌ ಹರಿದು 4 ವರ್ಷದ ಬಾಲಕ ಸಾವು

T20 World Cup Final
ಪ್ರಮುಖ ಸುದ್ದಿ14 mins ago

T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

Manvita Kamath One and Half cinema song out
ಸ್ಯಾಂಡಲ್ ವುಡ್17 mins ago

Manvita Kamath: ಮದುವೆ ಆದ ಒಂದು ತಿಂಗಳ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ʻಟಗರು ಪುಟ್ಟಿʼ!

Viral Video
Latest19 mins ago

Viral Video: ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

Dr HS Shetty
ಪ್ರಮುಖ ಸುದ್ದಿ21 mins ago

Dr HS Shetty: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ ಜುಲೈ 6ರಂದು 41 ಸಾವಿರ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ

V Somanna
ಪ್ರಮುಖ ಸುದ್ದಿ26 mins ago

V Somanna: ಹೆಜ್ಜಾಲ- ಚಾಮರಾಜನಗರ ರೈಲ್ವೆ ಕಾರ್ಯ ಶೀಘ್ರದಲ್ಲಿ: ಸಚಿವ ಸೋಮಣ್ಣ

Actor Darshan Renuka swamy case chitral support by vinay gowda
ಸ್ಯಾಂಡಲ್ ವುಡ್31 mins ago

Actor Darshan: ʻಚಿತ್ರಾಲ್ʼ ಬಿಕಿನಿ ಮಾಡೆಲ್‌, ಕೆಟ್ಟ ಕಮೆಂಟ್‌ ಮಾಡಬೇಡಿ ಎಂದ ವಿನಯ್ ಗೌಡ !

Opposition party leader r ashok latest statement in chikkaballapur
ಕರ್ನಾಟಕ32 mins ago

R Ashok: ಪ್ರತಿ ಕುಟುಂಬದಿಂದ 8-10 ಸಾವಿರ ರೂ. ದರೋಡೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್ ಆರೋಪ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ7 mins ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ6 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ23 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌